Tag: ಓಂ ರಾವುತ್

  • ಮತ್ತೆ ಟಿಕೆಟ್ ದರ ಇಳಿಸಿದ ಆದಿಪುರುಷ: ಹಾಕಿದ ಬಂಡವಾಳ ವಾಪಸ್ಸಿಗೆ ಕಸರತ್ತು

    ಮತ್ತೆ ಟಿಕೆಟ್ ದರ ಇಳಿಸಿದ ಆದಿಪುರುಷ: ಹಾಕಿದ ಬಂಡವಾಳ ವಾಪಸ್ಸಿಗೆ ಕಸರತ್ತು

    ಪ್ರಭಾಸ್ ನಟನೆಯ ಆದಿಪುರುಷ ಸಿನಿಮಾ ಟೀಮ್ ಮತ್ತೆ ಟಿಕೆಟ್ (Ticket) ದರವನ್ನು ಇಳಿಸಿದೆ. ಹಾಕಿದ ಬಂಡವಾಳವನ್ನು ವಾಪಸ್ಸು ಪಡೆಯಲು ಏನೆಲ್ಲ ಹರಸಾಹಸ ಮಾಡುತ್ತಿದೆ. 500 ಕೋಟಿ ರೂಪಾಯಿಗೂ ಅಧಿಕ ಬಂಡವಾಳ ಹೂಡಿ ಮಾಡಿರುವ ಸಿನಿಮಾಗೆ ಈವರೆಗೂ ಬಂದ ಕಲೆಕ್ಷನ್ ಕೇವಲ 450 ಕೋಟಿ ರೂಪಾಯಿ. ಇದರಲ್ಲಿ ನಿರ್ಮಾಪಕರಿಗೆ ಸೇರೋದು ಅರ್ಧಕರ್ಧ. ಹಾಗಾಗಿ ಹಾಕಿದ ಬಂಡವಾಳ ವಾಪಸ್ಸು ಪಡೆಯುವುದಕ್ಕೆ ಏನೆಲ್ಲ ತಾಲೀಮು ಮಾಡಬೇಕಾಗಿದೆ.

    ದಿನದಿಂದ ದಿನಕ್ಕೆ ಕಲೆಕ್ಷನ್‌ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಟಿಕೆಟ್ ದರವನ್ನು ಕಡಿಮೆ ಮಾಡಿದೆ ಚಿತ್ರತಂಡ. 112 ರೂಪಾಯಿ ಇದೀಗ ನೀವು ಆದಿಪುರುಷ ಸಿನಿಮಾವನ್ನು ನೋಡಬಹುದಾಗಿದೆ. ಅಲ್ಲದೇ, ವಿವಾದಿತ ಸಂಭಾಷಣೆ ಸೇರಿದಂತೆ ಹಲವು ಬದಲಾವಣೆಗಳನ್ನು ಚಿತ್ರತಂಡ ಮಾಡಿದೆ. ಈ ಮಾಹಿತಿಯನ್ನು ಸ್ವತಃ ಚಿತ್ರತಂಡವೇ ಘೋಷಣೆ ಮಾಡಿದೆ. ಇದನ್ನೂ ಓದಿ: ಹೃದಯ ಕಿತ್ತು ಎದೆಗೆ ಹಚ್ಚಿಕೊಂಡು ಪಾರ್ಟಿಗೆ ಬಂದ ಉರ್ಫಿ ಜಾವೇದ್

    ಆದಿಪುರುಷ (Adipurush) ಸಿನಿಮಾಗೆ ನಿರೀಕ್ಷೆ ಫಲಿತಾಂಶ ಬಾರದೇ ಇದ್ದರೂ, ಪ್ರಭಾಸ್ ಅವರ ಡಿಮ್ಯಾಂಡ್‌ಗೆ ಯಾವುದೇ ಧಕ್ಕೆ ಬಂದಿಲ್ಲ ಎಂದೇ ಹೇಳಬಹುದು. ಸದ್ಯ ಅವರ ಕೈಯಲ್ಲಿ ಎರಡು ಚಿತ್ರಗಳು ಇದ್ದರೂ, ಮತ್ತೊಂದು ಚಿತ್ರಕ್ಕೆ ಅವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಿನಿಮಾವನ್ನು ಕನ್ನಡದ ಸಂಸ್ಥೆಯೇ ನಿರ್ಮಾಣ ಮಾಡಲಿದೆ ಎನ್ನುವುದು ವಿಶೇಷ.

    ಈಗಾಗಲೇ ಪ್ರಭಾಸ್ (Prabhas) ನಟನೆಯ ಸಲಾರ್ ಚಿತ್ರಕ್ಕೆ ಹೊಂಬಾಳೆ ಫಿಲ್ಮ್ಸ್ ಹಣ ಹೂಡಿಕೆ ಮಾಡಿದೆ. ಕನ್ನಡದ ನಿರ್ದೇಶಕರೇ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಸಲಾರ್ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈ ಸಿನಿಮಾದ ನಂತರ ಪ್ರಭಾಸ್ ಪ್ರಾಜೆಕ್ಟ್ ಕೆ ಚಿತ್ರದಲ್ಲೂ ತೊಡಗಿಕೊಂಡಿದ್ದಾರೆ. ಈ ನಡುವೆ ಮತ್ತೊಂದು ಚಿತ್ರಕ್ಕೆ ಗ್ನಿನ್ ಸಿಗ್ನಲ್ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

    ಕೆಡಿ ಸೇರಿದಂತೆ ಹಲವು ಸಿನಿಮಾಗಳನ್ನು ಕನ್ನಡದಲ್ಲಿ ಮಾಡುತ್ತಿರುವ ಕೆವಿಎನ್ ಪ್ರೊಡಕ್ಷನ್ (KVN Production) ಸಂಸ್ಥೆಯು ಪ್ರಭಾಸ್ ಅವರ ಹೊಸ ಸಿನಿಮಾವನ್ನು ನಿರ್ಮಾಣ ಮಾಡಲಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಪ್ರಭಾಸ್ ಜೊತೆ ಸಂಸ್ಥೆಯ ಮುಖ್ಯಸ್ಥರು ಒಂದು ಸುತ್ತಿನ ಮಾತುಕತೆ ಕೂಡ ಮಾಡಿದ್ದಾರೆ. ಪ್ರಭಾಸ್ ಕೂಡ ಒಪ್ಪಿಕೊಂಡಿದ್ದಾರೆ ಎನ್ನುವ ಮಾಹಿತಿ ಹರಿದಾಡುತ್ತಿದೆ.

     

    ಕೇವಲ ಪ್ರಭಾಸ್ ಒಪ್ಪಿದ್ದಷ್ಟೇ ಅಲ್ಲ, ಈ ಸಿನಿಮಾದ ನಿರ್ದೇಶಕರು ಯಾರು ಎನ್ನುವ ಮಾಹಿತಿಯೂ ಸೋರಿಕೆಯಾಗಿದೆ. ಗಬ್ಬರ್ ಸಿಂಗ್ ಸೇರಿದಂತೆ ಅನೇಕ ಹಿಟ್ ಚಿತ್ರಗಳನ್ನು ನೀಡಿರುವ ಹರೀಶ್ ಶಂಕರ್ (Harish Shankar) ಈ ಸಿನಿಮಾಗೆ ನಿರ್ದೇಶಕರು ಎಂದು ಹೇಳಲಾಗುತ್ತಿದೆ. ಈ ಎಲ್ಲ ವಿಷಯಗಳು ಹರಿದಾಡುತ್ತಿದ್ದರೂ, ಯಾರೂ ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿಲ್ಲ.

     

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • ಕೆ.ಆರ್.ಜಿ ಸ್ಟುಡಿಯೋದಿಂದ ಆದಿಪುರುಷ ರಿಲೀಸ್

    ಕೆ.ಆರ್.ಜಿ ಸ್ಟುಡಿಯೋದಿಂದ ಆದಿಪುರುಷ ರಿಲೀಸ್

    ಭಾರತೀಯ ಸಿನಿಮಾ ರಂಗದಲ್ಲಿ ದಾಖಲೆ ಬರೆದ ಕೆ.ಜಿ.ಎಫ್ 1,  ಕೆ.ಜಿ.ಎಫ್ 2, ಕಾಂತಾರ, ಚಾರ್ಲಿ 777, ಗಂಧದಗುಡಿ, ವಕೀಲ್ ಸಾಬ್ ಮತ್ತು ದಸರಾ ಮುಂತಾದ ಚಿತ್ರಗಳನ್ನು ಬಿಡುಗಡೆ ಮಾಡಿದ ಕೆ.ಆರ್.ಜಿ ಸ್ಟುಡಿಯೋಸ್ ಸಂಸ್ಥೆ ಇದೀಗ ಆದಿಪುರುಷ (Adipurusha) ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಮುಂದಾಗಿದೆ.

    ಕರ್ನಾಟಕದಲ್ಲಿ ಕೆ.ಆರ್.ಜಿ ಸ್ಟುಡಿಯೋಸ್ (KRG Studios) ಸಂಸ್ಥೆ ಇದುವರೆಗೂ ಬಹಳ ಶ್ರದ್ದೆಯಿಂದ ಚಿತ್ರಗಳನ್ನು ಬಿಡುಗಡೆ ಮಾಡಿಕೊಂಡು ಬರುತ್ತಿರುವುದು ಕರ್ನಾಟಕದ ಜನತೆಗೆ ತಿಳಿದಿರುವ ವಿಷಯ. ಸದಭಿರುಚಿಯ ಚಿತ್ರಗಳನ್ನು ಸಿನಿಮಾ ಪ್ರೇಕ್ಷಕರಿಗೆ ತಲುಪಿಸುವ ಕೈಂಕರ್ಯದಲ್ಲಿ ಕೆ.ಆರ್.ಜಿ.ಸ್ಟುಡಿಯೋಸ್ ಸಂಸ್ಥೆ ತೊಡಗಿದೆ. ಈ ಸಂಸ್ಥೆಯ ಕಿರೀಟಕ್ಕೆ ಮತ್ತೊಂದು ಗರಿ ಆದಿಪುರುಷ ಆಗಲಿದೆ ಅನ್ನುವುದು ಸಂಸ್ಥೆಯ ನಂಬಿಕೆ.

    ನಮ್ಮ ಹಿಂದೂ ಸಂಸ್ಕೃತಿಯ ಮಹಾಕಾವ್ಯ ಎಂದೇ ಹೇಳಲ್ಪಡುವ ಪವಿತ್ರ ಗ್ರಂಥ ರಾಮಾಯಣದ ಎಳೆಯನ್ನು ಆಧಿರಿಸಿ ತಯಾರಿಸಿರುವ ಚಿತ್ರ ಆದಿಪುರುಷ. ಟಿ. ಸೀರೀಸ್ ಮತ್ತು ರೆಟ್ರೋ ಫಿಲ್ಮಸ್ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಕಥೆ ಹೆಣೆದು ನಿರ್ದೇಶನ ಮಾಡುತ್ತಿರುವುದು ಓಂ ರಾವತ್ (Om Raut) ಅವರು. ಆದಿಪುರುಷ ಚಿತ್ರವು ಏಕಕಾಲಕ್ಕೆ ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ತಯಾರಾಗಿದೆ. ಚಿತ್ರದ ತಾರಾಗಣದಲ್ಲಿ ಪ್ರಭಾಸ್ (Prabhas), ಕೃತಿ ಸನೋನ್ (Kriti Sanon),  ಸೈಫ್ ಅಲಿ ಖಾನ್, ಸನ್ನಿ ಸಿಂಗ್, ದೇವದತ್ತ ನಾಗೇ ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ:ಸಿನಿಮಾ ಪ್ರಚಾರಕ್ಕಾಗಿ ಗಿಮಿಕ್‌ ಮಾಡಿದ ಕಾಜೋಲ್‌ಗೆ ನೆಟ್ಟಿಗರಿಂದ ತರಾಟೆ

    “ಆದಿಪುರುಷ ಚಿತ್ರದ ಕರ್ನಾಟಕದ ವಿತರಣೆ ನಮಗೆ ಸಿಕ್ಕಿರುವುದು ಬಹಳ ಹೆಮ್ಮೆಯ ಸಂಗತಿ” ಎಂದು ಹೊಂಬಾಳೆ ಸಂಸ್ಥೆಯ ಕಾರ್ಯಕಾರಿ ನಿರ್ಮಾಪಕರು ಮತ್ತು ಕೆ.ಆರ್.ಜಿ. ಸ್ಟುಡಿಯೋಸ್ ಸಂಸ್ಥೆಯ ಸಂಸ್ಥಾಪಕರು ಆಗಿರುವ ಕಾರ್ತಿಕ್ ಗೌಡ ಸಂತಸ ವ್ಯಕ್ತ ಪಡಿಸಿದ್ದಾರೆ. ನಮ್ಮ ಪೌರಾಣಿಕ ಮಹಾಕಾವ್ಯವಾದ ರಾಮಾಯಣದಲ್ಲಿರುವ ಸಾರವನ್ನು ಇಂದಿನ ಕಾಲಘಟ್ಟಕ್ಕೆ ಮತ್ತು ಇಂದಿನ ಪೀಳಿಗೆಗೆ ಅನುಗುಣವಾಗಿ ಆದಿಪುರುಷ ಚಿತ್ರ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

     

    ಈ ಚಿತ್ರವು ಪ್ರಭಾಸ್ ಮತ್ತು ಯು. ವಿ ಕ್ರಿಯೇಷನ್ಸ್ ಜೊತೆಗಿನ ಕೆ.ಆರ್.ಜಿ ಸ್ಟುಡಿಯೋಸ್ ಒಡನಾಟಕ್ಕೂ ಸಾಕ್ಷಿಯಾಗಲಿದೆ.  ಆದಿಪುರುಷ ಚಿತ್ರ ಜೂನ್ 16 ರಂದು ತೆಲುಗು, ಹಿಂದಿ, ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಪ್ರಪಂಚದಾದ್ಯಂತ ಬಿಡುಗಡೆ ಆಗಲಿದೆ.

  • ತಿರುಪತಿ ದೇವಸ್ಥಾನದಲ್ಲಿ ನಟಿ ಕೃತಿಗೆ ನಿರ್ದೇಶಕ ಕಿಸ್: ರೂಮ್ ಬುಕ್ ಮಾಡ್ಕೊಳ್ಳಿ ಎಂದ ಅರ್ಚಕ

    ತಿರುಪತಿ ದೇವಸ್ಥಾನದಲ್ಲಿ ನಟಿ ಕೃತಿಗೆ ನಿರ್ದೇಶಕ ಕಿಸ್: ರೂಮ್ ಬುಕ್ ಮಾಡ್ಕೊಳ್ಳಿ ಎಂದ ಅರ್ಚಕ

    ತಿರುಪತಿ ತಿಮ್ಮಪ್ಪನ ಸನ್ನಿಧಾನದಲ್ಲಿ ಬಾಲಿವುಡ್ ನಟಿ ಕೃತಿ ಸನೋನ್ ಗೆ ನಿರ್ದೇಶಕ ಓಂ ರಾವತ್ ಕಿಸ್ ಕೊಟ್ಟ ಪ್ರಕರಣ ಭಾರೀ ಸಂಚಲನ ಸೃಷ್ಟಿ ಮಾಡಿದೆ. ಕಿಸ್ ಮಾಡಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ತಿಮ್ಮಪ್ಪನ ಭಕ್ತರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ತಿಮ್ಮಪ್ಪನ ಪ್ರಧಾನ ಅರ್ಚಕರು ಸಿಡಿಮಿಡಿಗೊಂಡಿದ್ದು, ಈ ರೀತಿ ಮಾಡಲು ಹೋಟೆಲ್ ರೂಮ್ ಬುಕ್ ಮಾಡಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

    ದೇವರ ಸನ್ನಿಧಾನದಲ್ಲಿ ಹೇಗಿರಬೇಕು ಎನ್ನುವ ಕಾಮನ್ ಸೆನ್ಸ್ ಇಲ್ಲ ಅವರಿಗೆ. ದೇವಸ್ಥಾನಕ್ಕೆ ಬರುವವರು ಈ ರೀತಿ ನಡೆದುಕೊಳ್ಳಬಾರದು. ಈ ಘಟನೆ ಭಕ್ತರಿಗೆ ಅಪಾರ ನೋವನ್ನುಂಟು ಮಾಡಿದೆ. ಸಿನಿಮಾದವರು ಅಂದ ಮಾತ್ರಕ್ಕೆ ಏನೂ ಬೇಕಾದರೂ ಮಾಡಬಹುದಾ? ಎಂದು ಅವರು ಪ್ರಶ್ನೆ ಮಾಡಿದ್ದಾರೆ.

    ಮೊನ್ನೆಯಷ್ಟೇ ಪ್ರಭಾಸ್ (Prabhas) ನಟನೆಯ ಆದಿಪುರುಷ ಸಿನಿಮಾ ಪ್ರಿ ರಿಲೀಸ್ ಇವೆಂಟ್ ತಿರುಪತಿಯಲ್ಲಿ (Tirupati)  ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ನಿರ್ದೇಶಕ ಓಂ ರಾವತ್ (Om Rawat), ನಾಯಕಿ ಕೃತಿ ಸನೂನ್ ಸೇರಿದಂತೆ ಹಲವರು ತಿರುಪತಿಗೆ ಆಗಮಿಸಿದ್ದರು. ಈ ವೇಳೆ ತಿರುಪತಿ ತಿಮ್ಮಪ್ಪನ ದರ್ಶನಕ್ಕೂ ಸಿನಿಮಾ ಟೀಮ್ ಬಂದಿತ್ತು. ಈ ಸಂದರ್ಭದಲ್ಲಿ ನಟಿ ಕೃತಿ ಸನೂನ್ (Kriti Sanoon) ಮತ್ತು ನಿರ್ದೇಶಕ ಓಂ ರಾವತ್ ನಡೆದುಕೊಂಡ ರೀತಿಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

    ತಿಮ್ಮಪ್ಪನ (Thimmappa) ದರ್ಶನದ ನಂತರ ಕೃತಿ ಸನೂನ್ ಕಾರಿನತ್ತ ಬರುತ್ತಾರೆ. ಆಮೇಲೆ ಬೀಳ್ಕೊಡುವುದಕ್ಕಾಗಿ ಕಾರಿನಿಂದ ಸ್ವಲ್ಪವೇ ದೂರದಲ್ಲಿದ್ದ ನಿರ್ದೇಶಕ ಓಂ ರಾವತ್ ಹತ್ತಿರಕ್ಕೆ ಬರುತ್ತಾರೆ. ಆಗ ಕೃತಿ ಸನೂನ್ ನನ್ನು ತಬ್ಬಿಕೊಳ್ಳುವ ನಿರ್ದೇಶಕ ಓಂ, ನಟಿಗೆ ಮುತ್ತಿಟ್ಟು (Kiss) ಬೀಳ್ಕೊಡುತ್ತಾರೆ. ದೇವಸ್ಥಾನದ ಆವರಣದಲ್ಲಿ ಈ ಘಟನೆ ನಡೆದದ್ದು, ವಿಡಿಯೋ ವೈರಲ್ ಆಗಿದೆ. ಇದನ್ನು ಕಂಡ ತಿಮ್ಮಪ್ಪನ ಭಕ್ತರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

    ದೇವಸ್ಥಾನದ ಆವರಣದಲ್ಲಿ ಹೇಗೆ ನಡೆದುಕೊಳ್ಳಬೇಕು, ಹೇಗೆ ನಡೆದುಕೊಳ್ಳಬಾರದು ಎನ್ನುವ ಅರಿವು ಇರಬೇಕು. ಅಂಥವರು ಮಾತ್ರ ದೇವಸ್ಥಾನಕ್ಕೆ ಬರಬೇಕು ಎಂದು ಭಕ್ತರು ಕಾಮೆಂಟ್ ಮಾಡಿದ್ದಾರೆ. ಬಹಿರಂಗವಾಗಿ, ಅದರಲ್ಲೂ ದೇವಸ್ಥಾನದ ಆವರಣದಲ್ಲೇ ನಟಿಗೆ ಮುತ್ತಿಟ್ಟು ಬೀಳ್ಕೊಡುವುದು ಸರಿಯಾದ ಕ್ರಮವಲ್ಲ. ಇದಕ್ಕೆ ಇಬ್ಬರೂ ಕ್ಷಮೆ ಕೇಳಬೇಕು ಎಂದು ಭಕ್ತರು ಆಗ್ರಹಿಸಿದ್ದಾರೆ.

     

    ಇದೊಂದು ಸ್ನೇಹಪೂರ್ವಕವಾದ ಕಿಸ್ ಆಗಿದ್ದರೂ, ಅದು ಸಹಜವಾಗಿದ್ದರೂ ಭಕ್ತರು ಅದನ್ನು ಹಾಗೆ ನೋಡಿಲ್ಲ. ಹಾಗಾಗಿ ವಿವಾದಕ್ಕೆ ಆ ವಿಡಿಯೋ ನಾಂದಿ ಹಾಡಿದೆ. ಅಂದಹಾಗೆ ನಿನ್ನೆ ಆದಿ ಪುರುಷ (Adi Purush) ಸಿನಿಮಾದ ಪ್ರಿ ರಿಲೀಸ್ ಇವೆಂಟ್ ಅದ್ಧೂರಿಗಾಗಿ ತಿರುಪತಿಯಲ್ಲಿ ನಡೆದಿದೆ. ಲಕ್ಷಾಂತರ ಅಭಿಮಾನಿಗಳು ಈ ಕಾರ್ಯಕ್ರವನ್ನು ಕಣ್ತುಂಬಿಕೊಂಡಿದ್ದಾರೆ. ಈಗಾಗಲೇ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿದೆ.

  • ಪ್ರತಿಷ್ಠಿತ  ಟ್ರಿಬೆಕಾ ಉತ್ಸವದಲ್ಲಿ ‘ಆದಿಪುರುಷ್’ ಪ್ರೀಮಿಯರ್ ಶೋ

    ಪ್ರತಿಷ್ಠಿತ ಟ್ರಿಬೆಕಾ ಉತ್ಸವದಲ್ಲಿ ‘ಆದಿಪುರುಷ್’ ಪ್ರೀಮಿಯರ್ ಶೋ

    ಸಿನಿಮಾ ಶುರುವಾದಾಗಿನಿಂದ ಸದ್ದು ಮಾಡುತ್ತಾ ಸುದ್ದಿಯಾಗುತ್ತಿರುವ ಅದ್ದೂರಿ ಚಿತ್ರ ’ಆದಿಪುರುಷ್’ (Adi Purush) ಈಗ ಪ್ರತಿಷ್ಠಿತ ಟ್ರಿಬೆಕಾ ಉತ್ಸವದಲ್ಲಿ (Tribeca Festival) ಪ್ರೀಮಿಯರ್ ಶೋ ನಡೆಸುವುದರೊಂದಿಗೆ ಮತ್ತೊಂದು ಮೈಲಿಗಲ್ಲು ಸಾಧಿಸುತ್ತಿದೆ. ನ್ಯೂಯಾರ್ಕ್‌ದಲ್ಲಿ (New York)  ಜೂನ್ 7 ರಿಂದ 18ರವರೆಗೆ ನಡೆಯುವ ಪ್ರದರ್ಶನದಲ್ಲಿ ’ಆದಿಪುರುಷ್’ ಜೂನ್ 13ರಂದು ವಿಶ್ವ ಪ್ರಥಮ ಪ್ರದರ್ಶನ ನಡೆಸಲು ಗೌರವಾನ್ವಿತ ತೀರ್ಪುಗಾರರು ಇದನ್ನು ಆಯ್ಕೆ ಮಾಡಿರುತ್ತಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ಓಂ ರಾವುತ್  (Om Raut)ನಿರ್ದೇಶನದಲ್ಲಿ ಮೂಡಿ ಬರುತ್ತಿದ್ದು, ಟಿ ಸೀರೀಸ್‌ನ ಭೂಷಣ್‌ಕುಮಾರ್ ನಿರ್ಮಾಣ ಮಾಡಿದ್ದಾರೆ. ವಾಲ್ಮೀಕಿ ಬರೆದ ರಾಮಾಯಣದ ಅಂಶಗಳನ್ನು ಚಿತ್ರದಲ್ಲಿ ಬಳಸಲಾಗಿದೆ.

    ಉತ್ಸವದಲ್ಲಿ ’ಮಿಡ್ ನೈಟ್ ಆಫರಿಂಗ್’ ಆಗಿ 3D ಸ್ವರೂಪದಲ್ಲಿ ದೃಶ್ಯ ಹಬ್ಬದಂತೆ ತೋರಿಸುತ್ತಿರುವುದು ವಿಶೇಷ. ಇದರಿಂದ ಭಾರತೀಯ ಚಿತ್ರರಂಗಕ್ಕೆ ಹೆಮ್ಮೆಯ ಕ್ಷಣವಾಗುತ್ತಿದೆ. ಇದರ ಕುರಿತಂತೆ ಮಾತನಾಡಿರುವ ನಾಯಕ ಪ್ರಭಾಸ್ (Prabhas) ‘ಇದು ನನಗಲ್ಲದೆ ಭಾರತೀಯ ಸಿನಿಮಾಗೆ ಸಂದ ಗೌರವವಾಗಿದೆ. ಅದರಲ್ಲೂ ನಮ್ಮ ಚಿತ್ರವು ವಿದೇಶದಲ್ಲಿ ಪ್ರದರ್ಶನವಾಗುತ್ತಿರುವುದು ಸಂತಸ ತಂದಿದೆ. ಒಬ್ಬ ಭಾರತೀಯನಾಗಿ ಅಲ್ಲಿನ ಪ್ರೇಕ್ಷಕರೊಂದಿಗೆ ಕುಳಿತು ನೋಡಲು ಕಾತುರನಾಗಿದ್ದೇನೆ’ ಎನ್ನುತ್ತಾರೆ. ಇದನ್ನೂ ಓದಿ: ಜನಾರ್ದನ ರೆಡ್ಡಿಗೆ ಶಾಕ್ – ಬಳ್ಳಾರಿ ಪ್ರವೇಶಕ್ಕೆ ಅನುಮತಿ ನೀಡದ ಸುಪ್ರೀಂ

    ತಾರಗಣದಲ್ಲಿ ಕೃತಿ ಸನೂನ್, ಸೈಫ್‌ ಆಲಿಖಾನ್ ಮತ್ತು ಸನ್ನಿ ಸಿಂಗ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇವರೊಂದಿಗೆ ದೇವದತ್ತ ನಾಗೆ, ವತ್ಸಲ್‌ ಸೇತ್, ಸೋನಾಲ್‌ ಚೌಹಾಣ್ ಮುಂತಾದವರು ಬಣ್ಣ ಹಚ್ಚಿದ್ದಾರೆ. ಸಂಗೀತ ಅಜಯ್-ಅತುಲ್, ಛಾಯಾಗ್ರಹಣ ಕಾರ್ತಿಕ್‌ಪಳನಿ, ಸಂಕಲನ ಅಪೂರ್ವ ಮೋತಿವಾಲೆ, ಸಹಾಯ- ಆಶಿಷ್‌ ಮಾತ್ರ. ಅಂದಹಾಗೆ ಸಿನಿಮಾ ಜೂನ್ 16ರಂದು ವಿಶ್ವದಾದ್ಯಂತ ಹಿಂದಿ, ತೆಲುಗು, ಕನ್ನಡ, ತಮಿಳು ಹಾಗೂ ಮಲೆಯಾಳಂ ಭಾಷೆಗಳಲ್ಲಿ 3D ಮಾದರಿಯಲ್ಲಿ ಬಿಡುಗಡೆಯಾಗಲಿದೆ.

  • ‘ಆದಿಪುರುಷ್’ ಸಿನಿಮಾದ ನಿರ್ದೇಶಕನನ್ನು ರೂಮ್ ಗೆ ಕರೆದ ಪ್ರಭಾಸ್: ವಿಡಿಯೋ ವೈರಲ್

    ‘ಆದಿಪುರುಷ್’ ಸಿನಿಮಾದ ನಿರ್ದೇಶಕನನ್ನು ರೂಮ್ ಗೆ ಕರೆದ ಪ್ರಭಾಸ್: ವಿಡಿಯೋ ವೈರಲ್

    ವಿವಾರವಷ್ಟೇ ‘ಆದಿಪುರುಷ್’ (Adipurush) ಸಿನಿಮಾದ ಟೀಸರ್ (Teaser) ಬಿಡುಗಡೆಯಾಗಿದೆ. ಟೀಸರ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, 100 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಅಯೋಧ್ಯೆಯಲ್ಲಿ ನಡೆದ ಟೀಸರ್ ಬಿಡುಗಡೆ ಸಮಾರಂಭದ ನಂತರ ಪ್ರಭಾಸ್ ಗರಂ ಆಗಿದ್ದು, ಚಿತ್ರದ ನಿರ್ದೇಶಕ ಓಂ ರಾವುತ್ (Om Raut) ಮೇಲೆ ಕೋಪ ಮಾಡಿಕೊಂಡ ವಿಡಿಯೋವೊಂದು ಸಖತ್ ವೈರಲ್ ಆಗಿದೆ.

    ಅಯೋಧ್ಯೆಯಲ್ಲಿ(Ayodhya) ನಡೆದ ವರ್ಣ ರಂಜಿತ ಸಮಾರಂಭದಲ್ಲಿ ಪ್ರಭಾಸ್, ಸೈಫ್ ಅಲಿಖಾನ್, ಕೃತಿ ಸನೂನ್, ಸನ್ನಿ ಸಿಂಗ್ ಸೇರಿದಂತೆ ಸಾಕಷ್ಟು ಕಲಾವಿದರು ಭಾಗಿಯಾಗಿದ್ದರು. ಈ ಸಮಾರಂಭದ ನಂತರ ತಾವು ತಂಗಿದ್ದ ಹೋಟೆಲ್ ಗೆ ತೆರಳಿರುವ ಪ್ರಭಾಸ್, ಕಾರಿಡಾರ್ ನಲ್ಲೇ ‘ಏ ಓಂ.. ನನ್ನ ರೂಮ್ ಗೆ ಬಾರೋ, ಬಾರೋ ನನ್ ರೂಮ್ ಗೆ’ ಎಂದು ಕೋಪದಲ್ಲಿಯೇ ಹೇಳುತ್ತಾರೆ. ಅವರನ್ನು ಸಮಾಧಾನಿಸಲು ಹಲವರು ಪ್ರಯತ್ನಿಸ್ತಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ:ರಚಿತಾ ರಾಮ್ @30: ಹ್ಯಾಪಿ ಬರ್ತ್‌ಡೇ ರಚ್ಚು ಅಂದ್ರು ಫ್ಯಾನ್ಸ್

    ಟೀಸರ್ ಬಗ್ಗೆ ಪ್ರಭಾಸ್ (Prabhas) ಅಭಿಮಾನಿಗಳು ಬೇಸರಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಅತ್ಯಂತ ಕಳಪೆ ಮಟ್ಟದ ಗ್ರಾಫಿಕ್ಸ್ ಬಳಸಿದ್ದಾರೆ ಎನ್ನುವ ಆರೋಪ ಕೂಡ ಇದೆ. ಅತೀ ನಿರೀಕ್ಷೆ ಮಾಡಿದ್ದ ಸಿನಿಮಾಗೆ ಕಳಪೆ ಮಟ್ಟದ ಕೆಲಸ ಮಾಡಿದ್ದಾರೆ ಎಂದು ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ. ಈ ಕಾರಣಕ್ಕಾಗಿಯೇ ನಿರ್ದೇಶಕರ ಮೇಲೆ ಪ್ರಭಾಸ್ ಗರಂ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.

    ಆದರೆ ಈ ಕುರಿತು ಪ್ರಭಾಸ್ ಯಾವುದೇ ಪ್ರತಿಕ್ರಿಯೆ ಆಗಲಿ, ವೈರಲ್ ಆಗಿರುವ ವಿಡಿಯೋ ಕುರಿತಾದ ಸ್ಪಷ್ಟನೆ ಆಗಲಿ ನೀಡಿಲ್ಲ. ಆದರೆ, ವಿಡಿಯೋ ಮಾತ್ರ ಹಲವು ಅನುಮಾನಗಳಿಗೆ ಕಾರಣವಾಗಿದೆ. ಪ್ರಭಾಸ್ ಅವರನ್ನು ನಾವು ಈ ರೀತಿಯಾಗಿ ಯಾವತ್ತೂ ನೋಡಿಲ್ಲ, ನಿರ್ದೇಶಕರಿಗೆ ಇದೆ ಮಾರಿಹಬ್ಬ ಅಂತೆಲ್ಲ ಅಭಿಮಾನಿಗಳು ಕಾಮೆಂಟ್ ಹಾಕುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]