Tag: ಓಂ ಬಿರ್ಲಾ

  • ನ್ಯಾ.ವರ್ಮಾ ವಾಗ್ದಂಡನೆ ಕೇಸ್ – ಸಲಹೆಗಾಗಿ ಇಬ್ಬರು ವಕೀಲರ ನೇಮಿಸಿಕೊಂಡ ಲೋಕಸಭಾ ಸ್ಪೀಕರ್

    ನ್ಯಾ.ವರ್ಮಾ ವಾಗ್ದಂಡನೆ ಕೇಸ್ – ಸಲಹೆಗಾಗಿ ಇಬ್ಬರು ವಕೀಲರ ನೇಮಿಸಿಕೊಂಡ ಲೋಕಸಭಾ ಸ್ಪೀಕರ್

    ನವದೆಹಲಿ: ಅಲಹಾಬಾದ್ ಹೈಕೋರ್ಟ್ (Allahabad High Court) ನ್ಯಾ.ಯಶವಂತ್ ವರ್ಮಾ (Justice Yashwant Varma) ಅವರ ದೆಹಲಿ (Delhi) ನಿವಾಸದಲ್ಲಿ ಅಪಾರ ಪ್ರಮಾಣದ ನಗದು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗಾಗಿ ರಚಿಸಲಾದ ಸಮಿತಿಯ ಸಲಹೆಗೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ (Om Birla) ಅವರು ಇಬ್ಬರು ವಕೀಲರನ್ನು ನೇಮಿಸಿಕೊಂಡಿದ್ದಾರೆ.

    ಈ ಬಗ್ಗೆ ತನಿಖೆ ನಡೆಸಲು ಆ.12ರಂದು ಸಮಿತಿ ರಚಿಸುವ ಮೂಲಕ ಸ್ಪೀಕರ್ ಅವರು ನ್ಯಾ.ವರ್ಮಾ ಅವರನ್ನು ಹುದ್ದೆಯಿಂದ ತೆಗೆದುಹಾಕುವ ಪ್ರಕ್ರಿಯೆ ಆರಂಭಿಸಿದ್ದರು. ಇದೀಗ ತನಿಖೆಗಾಗಿ ರಚಿಸಲಾದ ಸಮಿತಿಗೆ ಸಹಾಯ ಮಾಡುವುದಕ್ಕಾಗಿ ವಕೀಲರಾದ ರೋಹನ್ ಸಿಂಗ್ ಮತ್ತು ಸಮೀಕ್ಷಾ ದುವಾ ಅವರನ್ನು ಸಲಹೆಗಾರರನ್ನಾಗಿ ಔಪಚಾರಿಕವಾಗಿ ನೇಮಿಸಿಕೊಂಡಿದ್ದಾರೆ.ಇದನ್ನೂ ಓದಿ: ಆಂತರಿಕ ತನಿಖಾ ಸಮಿತಿ ವರದಿ ಅಸಿಂಧುಗೊಳಿಸುವಂತೆ ನ್ಯಾ.ವರ್ಮಾ ಅರ್ಜಿ – ವಿಶೇಷ ಪೀಠ ರಚಿಸುವ ಭರವಸೆ ನೀಡಿದ ಸಿಜೆಐ

    ಸುಪ್ರೀಂಕೋರ್ಟ್ ರಚಿಸಿದ ಆಂತರಿಕ ಸಮಿತಿ ಈ ಹಿಂದೆ ನ್ಯಾ.ವರ್ಮಾ ಅವರ ವಿರುದ್ಧ ದೋಷಾರೋಪ ವರದಿ ಮಾಡಿ ಅವರನ್ನು ಪದಚ್ಯುತಗೊಳಿಸಲು ಶಿಫಾರಸು ಮಾಡಿತ್ತು. ಹಾಲಿ ನ್ಯಾಯಮೂರ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸುಪ್ರೀಂ ಕೋರ್ಟ್ ಶಿಫಾರಸು ಮಾಡಬಹುದಾದರೂ ಅವರಿಗೆ ವಾಗ್ದಂಡನೆ ವಿಧಿಸುವ ಅಧಿಕಾರ ಸಂಸತ್ತಿಗೆ ಮಾತ್ರವೇ ಇರುತ್ತದೆ.

    ನಂತರ ಕೇಂದ್ರ ಸರ್ಕಾರ ಪ್ರಸ್ತುತ ಅಲಹಾಬಾದ್ ಹೈಕೋರ್ಟ್ನಲ್ಲಿ ಸೇವೆ ಸಲ್ಲಿಸುತ್ತಿರುವ ನ್ಯಾ.ವರ್ಮಾ ಅವರಿಗೆ ವಾಗ್ದಂಡನೆ ವಿಧಿಸುವುದಕ್ಕಾಗಿ ಸಂಸತ್ತಿನಲ್ಲಿ ಪ್ರಸ್ತಾವನೆ ಮಂಡಿಸಿತ್ತು. 146 ಸಂಸತ್ ಸದಸ್ಯರು ಸಹಿ ಮಾಡಿದ ನಿರ್ಣಯವನ್ನು ಸ್ಪೀಕರ್ ಅಂಗೀಕರಿಸಿದ್ದರು. ನ್ಯಾಯಾಧೀಶರ (ವಿಚಾರಣಾ) ಕಾಯಿದೆಯಡಿ, ಲೋಕಸಭಾ ಸ್ಪೀಕರ್ ಅವರು ತನಿಖೆಗಾಗಿ ಸಮಿತಿ ರಚಿಸಿದ್ದರು. ಕರ್ನಾಟಕ ಮೂಲದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರವಿಂದ್ ಕುಮಾರ್, ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮಣೀಂದ್ರ ಮೋಹನ್ ಶ್ರೀವಾಸ್ತವ ಮತ್ತು ಕರ್ನಾಟಕ ಮೂಲದ ಹಿರಿಯ ವಕೀಲ ಬಿ.ವಾಸುದೇವ ಆಚಾರ್ಯ ಸಮಿತಿಯಲ್ಲಿದ್ದಾರೆ.

    ಲೋಕಸಭಾ ಸಚಿವಾಲಯ ಸೆ.19ರಂದು ಹೊರಡಿಸಿದ ಆದೇಶದ ಪ್ರಕಾರ, ನ್ಯಾಯಮೂರ್ತಿ ವರ್ಮಾ ಅವರನ್ನು ಹುದ್ದೆಯಿಂದ ತೆಗೆದುಹಾಕುವ ಬಗ್ಗೆ ಚಿಂತನೆ ನಡೆಸುತ್ತಿರುವ ಆಧಾರದ ಮೇಲೆ ಸಮಿತಿಗೆ ಸಹಾಯ ಮಾಡಲು ವಕೀಲರಾದ ರೋಹನ್ ಸಿಂಗ್ ಮತ್ತು ಸಮೀಕ್ಷಾ ದುವಾ ಅವರನ್ನು ನೇಮಿಸಲಾಗಿದೆ.ಇದನ್ನೂ ಓದಿ: ನ್ಯಾ.ವರ್ಮಾ ವಾಗ್ದಂಡನೆ ಪ್ರಕ್ರಿಯೆಗೆ 200 ಹೆಚ್ಚು ಸಂಸದರ ಸಹಿ – ವಜಾ ಹೇಗೆ ಮಾಡಲಾಗುತ್ತೆ?

  • ಗದ್ದಲದ ನಡುವೆ ಮುಂಗಾರು ಅಧಿವೇಶನ ಅಂತ್ಯ – ಲೋಕಸಭೆ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

    ಗದ್ದಲದ ನಡುವೆ ಮುಂಗಾರು ಅಧಿವೇಶನ ಅಂತ್ಯ – ಲೋಕಸಭೆ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

    – ಲೋಕಸಭೆಯಲ್ಲಿ 14 ಮಸೂದೆ ಮಂಡನೆ, 12 ಮಸೂದೆಗಳ ಅಂಗೀಕಾರ
    – ಕಲಾಪ ಅಡ್ಡಿಪಡಿಸುವವರಿಗೆ ಸ್ಪೀಕರ ಓಂ ಬಿರ್ಲಾ ಪಾಠ
    – 419 ಪ್ರಶ್ನೆಗಳಲ್ಲಿ 55 ಪ್ರಶ್ನೆಗಳಿಗಷ್ಟೇ ಮೌಖಿಕ ಉತ್ತರ

    ನವದೆಹಲಿ: ವಿಪಕ್ಷಗಳ ಪ್ರತಿಭಟನೆ, ಕಲಾಪಕ್ಕೆ ಅಡ್ಡಿ, ಸಭಾತ್ಯಾಗಗಳ ನಡುವೆಯೇ ಮುಂಗಾರು ಅಧಿವೇಶನ (Monsoon Session) ಅಂತ್ಯಗೊಂಡಿದ್ದು, ಲೋಕಸಭೆ ಕಲಾಪವನ್ನು (Lok Sabha Session) ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.

    ಅಧಿವೇಶನದ ಕೊನೆಯ ದಿನವಾದ ಇಂದು ಮತದಾರರ ಪಟ್ಟಿ ಪರಿಷ್ಕರಣೆ ವಿಷಯ ಕುರಿತು ವಿಪಕ್ಷಗಳ ಗದ್ದಲ ಮುಂದುವರಿದಿದ್ದರಿಂದ ಕಲಾಪ ನಡೆಸಲು ಸಾಧ್ಯವಾಗದೇ ಸ್ಪೀಕರ್‌ ಅವರು ಮಧ್ಯಾಹ್ನ 12 ಗಂಟೆವರೆಗೆ ಕಲಾಪ ಮುಂದೂಡಿದ್ದರು. ನಂತರ ಅನಿರ್ದಿಷ್ಟಾವಧಿಗೆ ಕಲಾಪ ಮುಂದೂಡಿದರು. ಈ ಮೂಲಕ ಕಲಾಪಕ್ಕೆ ಅಡ್ಡಿಪಡಿಸುವವರಿಗೆ ಸ್ಪೀಕರ ಓಂ ಬಿರ್ಲಾ (Om Birla) ತಕ್ಕ ಪಾಠ ಕಲಿಸಿದರು. ಇದನ್ನೂ ಓದಿ: ಆನ್‌ಲೈನ್‌ ಗೇಮಿಂಗ್‌ ಮಸೂದೆ ಪಾಸ್‌ – ಪ್ರಚಾರ ಮಾಡಿದ್ರೂ ಜೈಲು ಶಿಕ್ಷೆ ಫಿಕ್ಸ್‌!

    ಗದ್ದಲ, ವಿಪಕ್ಷಗಳ ಪ್ರತಿಭಟನೆ ನಡುವೆಯೇ ಹಲವಾರು ಪ್ರಮುಖ ಮಸೂದೆಗಳು ಅಂಗೀಕಾರಗೊಂಡವು. ಲೋಕಸಭೆಯಲ್ಲಿ 14 ಮಸೂದೆಗಳು ಮಂಡನೆಯಾಗಿದ್ದು, ಈ ಪೈಕಿ 12 ಮಸೂದೆಗಳನ್ನು ಅಂಗೀಕರಿಸಲಾಗಿದೆ ಎಂದು ಸ್ಪೀಕರ್ ತಿಳಿಸಿದರು. ಇದನ್ನೂ ಓದಿ: ಉತ್ತರ ಪ್ರದೇಶದ ಜಲಾಲಾಬಾದ್ ಪಟ್ಟಣಕ್ಕೆ ಪರಶುರಾಮಪುರಿ ಎಂದು ಮರುನಾಮಕರಣ

    12 ಮಸೂದೆಗಳ ಅಂಗೀಕಾರ: ಸ್ಪೀಕರ್
    ಅಧಿವೇಶನದ ವಿವರ ಮಂಡಿಸಿದ ಸ್ಪೀಕರ್‌ ಓಂ ಬಿರ್ಲಾ, ಒಟ್ಟು 14 ಸರ್ಕಾರಿ ಮಸೂದೆಗಳನ್ನ ಮಂಡಿಸಲಾಗಿದ್ದು, ಅವುಗಳಲ್ಲಿ 12 ಮಸೂದೆಗಳನ್ನು ಅಂಗೀಕರಿಸಲಾಗಿದೆ. ಜುಲೈ 28 ಮತ್ತು 29 ರಂದು ವಿಶೇಷ ಚರ್ಚೆಗಳು ನಡೆದವು, ಇದು ಪ್ರಧಾನ ಮಂತ್ರಿಯವರ ಉತ್ತರದೊಂದಿಗೆ ಮುಕ್ತಾಯವಾಯಿತು. ಆಗಸ್ಟ್ 18ರಂದು ಬಾಹ್ಯಾಕಾಶ ಕಾರ್ಯಕ್ರಮದ ಸಾಧನೆಗಳ ಕುರಿತು ವಿಶೇಷ ಚರ್ಚೆಯನ್ನೂ ಸಹ ನಡೆಸಲಾಯಿತು ಎಂದು ತಿಳಿಸಿದರು.

    120 ಗಂಟೆಗಳ ಪೈಕಿ ಕೇವಲ 37 ಗಂಟೆ ಚರ್ಚೆ
    ಮುಂದುವರಿದು.. ಒಟ್ಟು 419 ಪ್ರಶ್ನೆಗಳನ್ನು ಕೇಳಲಾಗಿದ್ದು, ಕೇವಲ 55 ಪ್ರಶ್ನೆಗಳಿಗಷ್ಟೇ ಮೌಖಿಕವಾಗಿ ಉತ್ತರಿಸಲಾಯಿತು. ಎಲ್ಲರೂ ಆರಂಭದಲ್ಲಿ 120 ಗಂಟೆಗಳ ಕಾಲ ಚರ್ಚಿಸುವುದಾಗಿ ನಿರ್ಧರಿಸಿದ್ದರು. ಆದ್ರೆ ನಿರಂತರ ಕಲಾಪ ಮುಂದೂಡಿಕೆ, ಸಭಾತ್ಯಾಗ, ಪ್ರತಿಭಟನೆಯ ಕಾರಣಗಳಿಂದಾಗಿ ಕೇಲವ 37 ಗಂಟೆಗಳ ಕಾಲವಷ್ಟೇ ಚರ್ಚಿಸಲಾಯಿತು ಎಂದು ಸ್ಪೀಕರ್‌ ವಿವರ ಕೊಟ್ಟರು. ಇದನ್ನೂ ಓದಿ: ಕ್ರಿಮಿನಲ್ ಕೇಸಲ್ಲಿ ಜನಪ್ರತಿನಿಧಿಗಳ ಬಂಧನವಾದ್ರೆ ಹುದ್ದೆಯಿಂದ ವಜಾ – ಮಸೂದೆ ಮಂಡನೆ, ಲೋಕಸಭೆಯಲ್ಲಿ ಕೋಲಾಹಲ

    ಸಭ್ಯತೆಯ ಪಾಠ ಹೇಳಿದ ಸ್ಪೀಕರ್‌
    ಇಡೀ ದೇಶ ನಮ್ಮ ನಡವಳಿಕೆಗಳನ್ನು ಗಮನಿಸುತ್ತದೆ. ಜನ ನಮ್ಮ ಮೇಲೆ ಬಹಳಷ್ಟು ನಿರೀಕ್ಷೆಯಿಟ್ಟು ಆಯ್ಕೆ ಮಾಡಿ ಕಳಿಸಿರುತ್ತಾರೆ. ಹಾಗಾಗಿ ನಾವು ಗೌರವಯುತ ಚರ್ಚೆ ನಡೆಸಬೇಕು. ಆದ್ರೆ ಕೆಲ ದಿನಗಳಿಂದ ಸಹನ ಸರಿಯಾಗಿ ನಡೆಯುತ್ತಿಲ್ಲ. ಗದ್ದಲದಿಂದಲೇ ಕೂಡಿರುತ್ತದೆ. ಇದು ನಮ್ಮ ಸಂಸತ್ತಿನ ಸಂಪ್ರದಾಯವೂ ಅಲ್ಲ. ಈ ಅಧಿವೇಶನದಲ್ಲಿ ಬಳಸಿದ ಭಾಷೆ, ಘೋಷಣೆಗಳನ್ನು ಎತ್ತುವ ರೀತಿ, ಅದು ಸಭ್ಯತೆಯೂ ಅಲ್ಲ. ಇನ್ನು ಮುಂದಾದರೂ ಘೋಷಣೆ, ಪ್ರತಿಭಟನೆಗಳನ್ನು ತಪ್ಪಿಸಿ ಗೌರವಯುತ ಚರ್ಚೆ ನಡೆಸಬೇಕೆಂದು ಬಯಸುತ್ತೇನೆ ಎಂಬುದಾಗಿ ಜನಪ್ರತಿನಿಧಿಗಳಿಗೆ ಕಿವಿಮಾತು ಹೇಳಿದರು. ಇದನ್ನೂ ಓದಿ: ಮುಂದಿನ ಬಾರಿ ರಾಹುಲ್ ಗಾಂಧಿಯನ್ನ ಪ್ರಧಾನಿ ಮಾಡುತ್ತೇವೆ – ಮತದಾರ ಅಧಿಕಾರ್ ರ‍್ಯಾಲಿಯಲ್ಲಿ ತೇಜಸ್ವಿ ಯಾದವ್ ಘೋಷಣೆ

    ಅಂಗೀಕಾರಗೊಂಡ ಪ್ರಮುಖ ಮಸೂದೆಗಳು
    * ವ್ಯಾಪಾರಿ ಸಾಗಣೆ, ಬಂದರುಗಳು, ಗಣಿ ಮತ್ತು ಖನಿಜ ಮಸೂದೆಗಳು
    * ಕ್ರೀಡಾ ಆಡಳಿತ ಮತ್ತು ಡೋಪಿಂಗ್ ವಿರೋಧಿ ಸುಧಾರಣೆ ಮಸೂದೆ
    * ಆದಾಯ ತೆರಿಗೆ ಪರಿಷ್ಕರಣೆ ಮತ್ತು GST ತಿದ್ದುಪಡಿ ಮಸೂದೆ
    * ಕಡಲ ಸುಧಾರಣೆಗಳು: ಸರಕು ಸಾಗಣೆ, ಸಮುದ್ರ ಮತ್ತು ಕರಾವಳಿ ಸಾಗಣೆ ಮಸೂದೆ
    * ಗೋವಾದಲ್ಲಿ ಟ್ರಿಸ್ತಾನ್ ಸೀಟುಗಳನ್ನು ಮರುಹೊಂದಿಕೆ
    * ಆನ್‌ಲೈನ್ ಗೇಮಿಂಗ್ ನಿಯಂತ್ರಣ ಮಸೂದೆಗಳನ್ನು ಅಂಗೀಕರಿಸಲಾಗಿದೆ.

  • ಲೋಕಸಭಾಧ್ಯಕ್ಷ ಓಂ ಬಿರ್ಲಾರನ್ನು ಭೇಟಿ ಮಾಡಿದ ಯು.ಟಿ.ಖಾದರ್

    ಲೋಕಸಭಾಧ್ಯಕ್ಷ ಓಂ ಬಿರ್ಲಾರನ್ನು ಭೇಟಿ ಮಾಡಿದ ಯು.ಟಿ.ಖಾದರ್

    ನವದೆಹಲಿ: ಕರ್ನಾಟಕ ವಿಧಾನಸಭಾಧ್ಯಕ್ಷ ಯುಟಿ ಖಾದರ್ (UT Khader) ಫರೀದ್ ಲೋಕಸಭಾಧ್ಯಕ್ಷ ಓಂ ಬಿರ್ಲಾ (Om Birla) ಅವರನ್ನು ಇಂದು ದೆಹಲಿಯಲ್ಲಿ (New Delhi) ಭೇಟಿ ಮಾಡಿ 11ನೇ ಕಾಮನ್ ವೆಲ್ತ್ ಸಂಸದೀಯ ಸಂಘ ಭಾರತ ವಲಯದ ಸಮ್ಮೇಳನವನ್ನು 2025ರ ಸೆಪ್ಟೆಂಬರ್ 9 ಮತ್ತು 10ರಂದು ನಡೆಸಲು ಕರ್ನಾಟಕವನ್ನು ಆಯ್ಕೆ ಮಾಡಿದಕ್ಕಾಗಿ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

    ಸಮ್ಮೇಳನದಲ್ಲಿ ಭಾರತದ ಎಲ್ಲಾ ರಾಜ್ಯಗಳ ಪೀಠಾಸೀನ ಅಧಿಕಾರಗಳು ಭಾಗವಹಿಸುವುದಲ್ಲದೇ ಪ್ರಪ್ರಥಮ ಬಾರಿಗೆ ಅಂತರಾಷ್ಟ್ರೀಯ ಮಟ್ಟದ ಕಾಮನ್ ವೆಲ್ತ್ ದೇಶಗಳ ಪೀಠಾಸೀನಾಧಿಕಾರಿಗಳನ್ನು ಆಹ್ವಾನಿಸುವ ಕುರಿತು ಮತ್ತು ಸಮ್ಮೇಳನದಲ್ಲಿ ಚರ್ಚಿಸಬೇಕಾದ ವಿಷಯಗಳ ಕುರಿತು ಸಹ ಸಮಾಲೋಚನೆ ನಡೆಸಿದರು. ಇದನ್ನೂ ಓದಿ: Rain Alert | ಹಾಸನ ಜಿಲ್ಲೆಯ 3, ಉತ್ತರ ಕನ್ನಡ ಜಿಲ್ಲೆಯ 2 ತಾಲೂಕಿನ ಶಾಲೆಗಳಿಗೆ ಗುರುವಾರ ರಜೆ

    ಸಮ್ಮೇಳನದ ಉದ್ಘಾಟನಾ ಸಮಾರಂಭವನ್ನು 2025ರ ಸೆಪ್ಟೆಂಬರ್ 8ರಂದು ವಿಧಾನಸೌಧದ ಬೃಹತ್ ಮೆಟ್ಟಿಲುಗಳ ಮೇಲೆ ಹಮ್ಮಿಕೊಳ್ಳುವ ಬಗ್ಗೆ ಹಾಗೂ ಕರ್ನಾಟಕ ವಿಧಾನಸಭೆಯಲ್ಲಿ ಇತ್ತೀಚೆಗೆ ಜಾರಿಗೆ ತಂದಿರುವ ಅನೇಕ ಪ್ರಗತಿ ಪರ ಬದಲಾವಣೆಗಳನ್ನು ಸಹ ಲೋಕಸಭಾಧ್ಯಕ್ಷರ ಗಮನಕ್ಕೆ ತಂದಿದ್ದಾರೆ. ಬೆಂಗಳೂರು, ಅಂತರಾಷ್ಟ್ರೀಯವಾಗಿ ಸಿಲಿಕಾನ್ ಸಿಟಿಯಾಗಿರುವುದರಿಂದ ಇಂತಹ ಸಮ್ಮೇಳನಗಳನ್ನು ನಡೆಸುತ್ತಿರುವುದು ಅತ್ಯಂತ ಸೂಕ್ತ ಎಂದು ಲೋಕಸಭಾಧ್ಯಕ್ಷ ಓಂ ಬಿರ್ಲಾ ಹೇಳಿದ್ದಾರೆ. ಇದನ್ನೂ ಓದಿ: ಇರಾನ್‌ ಮೇಲೆ ಅಮೆರಿಕ ದಾಳಿ ಸಂಪೂರ್ಣ ಯಶಸ್ವಿಯಾಗಿಲ್ಲ – ಟ್ರಂಪ್ ಮುಜುಗರಕ್ಕೆ ಕಾರಣವಾದ ಗುಪ್ತಚರ ವರದಿ

    ಈ ಸಂದರ್ಭದಲ್ಲಿ ಕರ್ನಾಟಕ ವಿಧಾನ ಸಭೆಯ ಕಾರ್ಯದರ್ಶಿ ಎಂಕೆ ವಿಶಾಲಾಕ್ಷಿ, ಲೋಕಸಭಾ ಸಚಿವಾಲಯದ ಅಧಿಕಾರಿಗಳು ಹಾಜರಿದ್ದರು. ಇದನ್ನೂ ಓದಿ: Honeymoon Murder | ಕೊನೆಗೂ ತಮ್ಮಿಬ್ಬರ ಸಂಬಂಧ ಒಪ್ಪಿಕೊಂಡ ಸೋನಂ ರಘುವಂಶಿ – ರಾಜ್

  • ಲೋಕಸಭೆಯಲ್ಲಿ ಡಿಎಂಕೆ ಸಂಸದರ ಟಿ-ಶರ್ಟ್ ಪ್ರತಿಭಟನೆ: ಸದನದಲ್ಲಿ ಗದ್ದಲ

    ಲೋಕಸಭೆಯಲ್ಲಿ ಡಿಎಂಕೆ ಸಂಸದರ ಟಿ-ಶರ್ಟ್ ಪ್ರತಿಭಟನೆ: ಸದನದಲ್ಲಿ ಗದ್ದಲ

    ನವದೆಹಲಿ: ಡೀಲಿಮಿಟೇಷನ್ (Delimitation) ವಿರುದ್ಧ ಪ್ರತಿಭಟನಾ ಸಂದೇಶ ಒಳಗೊಂಡ ಟಿ-ಶರ್ಟ್ಗಳನ್ನು ಧರಿಸಿ ಡಿಎಂಕೆ ಸಂಸದರು ಸದನಕ್ಕೆ ಬಂದ ಹಿನ್ನೆಲೆ ಗೊಂದಲದ ವಾತಾವರಣ ಸೃಷ್ಟಿಯಾಯಿತು. ಈ ಕಾರಣದಿಂದಾಗಿ ಸ್ಪೀಕರ್ ಓಂ ಬಿರ್ಲಾ (Om Birla)  ಹಲವು ಬಾರಿ ಸದನ ಮೊಟಕುಗೊಳಿಸಿದರು.

    ಡಿಎಂಕೆ (DMK) ಸಂಸದರು ‘ನ್ಯಾಯಯುತ ಡೀಲಿಮಿಟೇಷನ್’, ‘ತಮಿಳುನಾಡು ಹೋರಾಡುತ್ತದೆ, ತಮಿಳುನಾಡು ಗೆಲ್ಲುತ್ತದೆ’ ಎಂಬ ಘೋಷಣೆಗಳು ಬರೆದ ಟಿ-ಶರ್ಟ್‌ಗಳನ್ನು ಧರಿಸಿ ಸದನಕ್ಕೆ ಆಗಮಿಸಿದರು. ಇದು ಸಂಸದೀಯ ನಿಯಮಗಳು ಮತ್ತು ಮರ್ಯಾದೆಗೆ ವಿರುದ್ಧವಾಗಿದೆ ಎಂದು ಓಂ ಬಿರ್ಲಾ ಆಕ್ಷೇಪ ವ್ಯಕ್ತಪಡಿಸಿದರು. ಇದನ್ನೂ ಓದಿ: ಮೈಸೂರು ಪೊಲೀಸರೇ ದಂಧೆ ನಡೆಸುತ್ತಿದ್ದಾರೆ, ಇದಕ್ಕೆ ಕಡಿವಾಣ ಹಾಕಿ: ಗೃಹ ಇಲಾಖೆಗೆ ಹೆಚ್.ವಿಶ್ವನಾಥ್ ಒತ್ತಾಯ

    ಸದನವು ನಿಯಮಗಳು ಮತ್ತು ಪದ್ಧತಿಗಳೊಂದಿಗೆ ಕಾರ್ಯನಿರ್ವಹಿಸುತ್ತದೆ. ಸಂಸದರು ಸದನದ ಘನತೆ ಮತ್ತು ಗೌರವವನ್ನು ಕಾಪಾಡಬೇಕು. ಆದರೆ ಕೆಲವು ಸಂಸದರು ನಿಯಮಗಳನ್ನು ಪಾಲಿಸದೆ ಘನತೆಗೆ ಧಕ್ಕೆ ತರುತ್ತಿದ್ದಾರೆ, ಇದು ಸ್ವೀಕಾರಾರ್ಹವಲ್ಲ ಎಂದು ಓಂ ಬಿರ್ಲಾ ಹೇಳಿದರು. ಇದನ್ನೂ ಓದಿ: ವಿದ್ಯುತ್ ದರ ಹೆಚ್ಚಳ – ಬೆಲೆ ಏರಿಕೆಯ ಗ್ಯಾರಂಟಿ ಕೊಟ್ಟ ಕಾಂಗ್ರೆಸ್: ವಿಜಯೇಂದ್ರ

    ಪ್ರತಿಭಟನೆಯ ಭಾಗವಾಗಿ, ಡಿಎಂಕೆ ಸಂಸದರು ಕ್ಷೇತ್ರ ಪುನರ್ ವಿಂಗಡನೆ ವಿಷಯವನ್ನು ಲೋಕಸಭೆಯಲ್ಲಿ ಚರ್ಚೆಗೆ ಒತ್ತಾಯಿಸಿದರು. ಆದರೆ, ಜನಗಣತಿ ಇನ್ನೂ ನಡೆದಿಲ್ಲದ ಕಾರಣ ಈ ವಿಷಯ ಸರ್ಕಾರದ ವ್ಯಾಪ್ತಿಯಲ್ಲಿಲ್ಲ ಎಂದು ಸ್ಪೀಕರ್ ತಿರಸ್ಕರಿಸಿದರು. ಈ ಘಟನೆಯಿಂದ ಸದನದಲ್ಲಿ ಗೊಂದಲ ಉಂಟಾಗಿ, ಮೊದಲು ಮಧ್ಯಾಹ್ನ 12 ಗಂಟೆವರೆಗೆ ಮತ್ತು ನಂತರ 2 ಗಂಟೆವರೆಗೆ ಸದನವನ್ನು ಮೊಟಕುಗೊಳಿಸಲಾಯಿತು. ಇದನ್ನೂ ಓದಿ: 8 ವಿದ್ಯಾರ್ಥಿನಿಯರ ಮೇಲೆ ರೇಪ್‌ ಆರೋಪ – ಬಂಧಿತ ಪ್ರಾಧ್ಯಾಪಕನ ಕಂಪ್ಯೂಟರ್‌ನಲ್ಲಿತ್ತು 65 ಸೆಕ್ಸ್‌ ವಿಡಿಯೋ

    ರಾಜ್ಯಸಭೆಯಲ್ಲಿಯೂ ಇದೇ ರೀತಿಯ ದೃಶ್ಯಗಳು ಕಂಡುಬಂದವು. ಡಿಎಂಕೆ ಸಂಸದರ ಟಿ-ಶರ್ಟ್ ಪ್ರತಿಭಟನೆಗೆ ಆಕ್ಷೇಪ ವ್ಯಕ್ತವಾದ ಕಾರಣ ಮಧ್ಯಾಹ್ನದ ವೇಳೆಗೆ ಮೂರು ಬಾರಿ ಸದನವನ್ನು ಮೊಟಕುಗೊಳಿಸಲಾಯಿತು. ಅಧ್ಯಕ್ಷ ಜಗದೀಪ್ ಧನ್‌ಖರ್ ಅವರು ವಿಷಯವನ್ನು ಪಕ್ಷದ ಮುಖಂಡರೊಂದಿಗೆ ಚರ್ಚಿಸಿದರೂ ಗೊಂದಲ ಮುಂದುವರಿಯಿತು. ಇದನ್ನೂ ಓದಿ: ಐಪಿಎಲ್ 2025: ಮೊದಲ 3 ಪಂದ್ಯಗಳಿಗೆ ರಾಜಸ್ಥಾನ ರಾಯಲ್ಸ್‌ಗೆ ರಿಯಾನ್ ಪರಾಗ್ ಕ್ಯಾಪ್ಟನ್

    ಜನಸಂಖ್ಯೆ ಆಧಾರಿತ ಕ್ಷೇತ್ರ ಪುನರ್ ವಿಂಗಡನೆಯಿಂದ ತಮಿಳುನಾಡು ಮತ್ತು ಇತರ ದಕ್ಷಿಣ ರಾಜ್ಯಗಳಿಗೆ ಸಂಸದೀಯ ಸ್ಥಾನಗಳ ಕಡಿತಕ್ಕೆ ಕಾರಣವಾಗಲಿದೆ ಎಂದು ಡಿಎಂಕೆ ವಾದಿಸುತ್ತಿದೆ. ಈ ವಿಷಯದಲ್ಲಿ ಕೇಂದ್ರ ಸರ್ಕಾರ ಸ್ಪಷ್ಟ ಉತ್ತರ ನೀಡಿಲ್ಲ ಎಂದು ಆರೋಪಿಸಿ ಪ್ರತಿಭಟನೆಯನ್ನು ತೀವ್ರಗೊಳಿಸಿದೆ. ಇದನ್ನೂ ಓದಿ: ಸಚಿವರ ಮೇಲೆ 2 ಸಲ ಹನಿಟ್ರ್ಯಾಪ್ ಯತ್ನ – ಸತೀಶ್ ಜಾರಕಿಹೊಳಿ ಬಾಂಬ್

  • ಜನರು ಅವರನ್ನು ಘೋಷಣೆ ಕೂಗಲು ಕಳುಹಿಸಿದ್ದರೆ ಕೂಗಲು ಬಿಡಿ – ವಿಪಕ್ಷಗಳ ವಿರುದ್ಧ ಸ್ಪೀಕರ್ ಗರಂ

    ಜನರು ಅವರನ್ನು ಘೋಷಣೆ ಕೂಗಲು ಕಳುಹಿಸಿದ್ದರೆ ಕೂಗಲು ಬಿಡಿ – ವಿಪಕ್ಷಗಳ ವಿರುದ್ಧ ಸ್ಪೀಕರ್ ಗರಂ

    – ಕುಂಭಮೇಳ ಕಾಲ್ತುಳಿತ ಚರ್ಚೆಗೆ ಆಗ್ರಹಿಸಿದ ಸಂಸದರ ನಡೆಗೆ ಓಂ ಬಿರ್ಲಾ ಅಸಮಾಧಾನ

    ನವದೆಹಲಿ: ಮಹಾ ಕುಂಭಮೇಳದಲ್ಲಿ (Maha Kumbh Mela) ಕಾಲ್ತುಳಿತ ಸಂಭವಿಸಿ 30 ಜನರು ಸಾವನ್ನಪ್ಪಿ, 90ಕ್ಕೂ ಅಧಿಕ ಮಂದಿ ಗಾಯಗೊಂಡ ಪ್ರಕರಣದ ಬಗ್ಗೆ ಸರ್ಕಾರ ಉತ್ತರ ನೀಡಬೇಕು ಎಂದು ಒತ್ತಾಯಿಸಿ ಘೋಷಣೆ ಕೂಗುತ್ತಿದ್ದ ವಿಪಕ್ಷಗಳ ಸಂಸದರ ವಿರುದ್ಧ ಸ್ಪೀಕರ್ ಓಂ ಬಿರ್ಲಾ (Om Birla) ಹರಿಹಾಯ್ದಿದ್ದಾರೆ.

    ಲೋಕಸಭೆಯಲ್ಲಿ (Lok Sabha) ಮೂರನೇ ದಿನದ ಕಲಾಪ ಆರಂಭವಾಗುತ್ತಿದ್ದಂತೆ ವಿರೋಧ ಪಕ್ಷದ ಸಂಸದರು ಒಟ್ಟಾಗಿ ಪ್ರಕರಣಕ್ಕೆ ಸಂಬಧಿಸಿದಂತೆ ಸರ್ಕಾರ ಉತ್ತರ ನೀಡಬೇಕು ಎಂದು ಘೋಷಣೆ ಕೂಗಲು ಆರಂಭಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸ್ಪೀಕರ್ ಓಂ ಬಿರ್ಲಾ, ಜನರು ಅವರನ್ನು ಘೋಷಣೆ ಕೂಗಲು ಕಳುಹಿಸಿದ್ದರೆ ಕೂಗಲು ಬಿಡಿ, ಸದನ ಮುಂದುವರಿಯಲಿ ಎಂದು ಹೇಳಿದರು. ಇದನ್ನೂ ಓದಿ: ರೈಲು ನಿಲ್ಲೋದಕ್ಕೂ ಮುನ್ನ ಇಳಿಯಲು ಹೋಗಿ ಅವಘಡ – ಹಳಿಗೆ ಸಿಲುಕಿ 2 ಕಾಲು ಕಟ್, ಯುವಕ ಸಾವು

    ಪ್ರಶ್ನೋತ್ತರ ಅವಧಿಯು ಸರ್ಕಾರದ ಹೊಣೆಗಾರಿಕೆಯನ್ನು ಸರಿಪಡಿಸುವ ಮಹತ್ವದ ಸಮಯವಾಗಿದೆ. ಸದನ ನಡೆಯಲು ಅವಕಾಶ ನೀಡುವಂತೆ ಓಂ ಬಿರ್ಲಾ ಮೊದಲು ವಿರೋಧ ಪಕ್ಷದ ಸದಸ್ಯರಿಗೆ ಮನವಿ ಮಾಡಿದರು. ಸಮಾಜವಾದಿ ಪಕ್ಷದ ಕೆಲವು ಸದಸ್ಯರು ವೇದಿಕೆಯ ಬಳಿ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದಾಗ, ಓಂ ಬಿರ್ಲಾ, ಸಾರ್ವಜನಿಕರು ನಿಮ್ಮನ್ನು ಟೇಬಲ್ ಒಡೆಯಲು ಕಳುಹಿಸಿಲ್ಲ, ಪ್ರಶ್ನೆಗಳನ್ನು ಕೇಳಲು ಕಳುಹಿಸಲಾಗಿದೆ. ದೇಶದ ಜನರು ನಿಮ್ಮನ್ನು ಘೋಷಣೆಗಳನ್ನು ಕೂಗಲು ಕಳುಹಿಸಿದ್ದರೆ, ಅದೇ ಕೆಲಸವನ್ನು ಮಾಡಿ ಎಂದು ಹೇಳಿದರು. ಇದನ್ನೂ ಓದಿ: ಅರ್ಧ ಎಂಜಿನ್‌ ಆಪ್‌ ಸರ್ಕಾರದಿಂದ ದೆಹಲಿ ಹಾಳಾಗಿದೆ: ಚಂದ್ರಬಾಬು ನಾಯ್ಡು

    ನೀವು ಸದನವನ್ನು ನಡೆಸಲು ಬಯಸಿದರೆ ಹೋಗಿ ನಿಮ್ಮ ಆಸನದಲ್ಲಿ ಕುಳಿತುಕೊಳ್ಳಿ. ಪ್ರಶ್ನೋತ್ತರ ಅವಧಿಯ ನಂತರ ಪ್ರತಿಪಕ್ಷದ ಸದಸ್ಯರಿಗೆ ಮಾತನಾಡಲು ಹಾಗೂ ನಿಮಗೆ ಸಾಕಷ್ಟು ಸಮಯ ಮತ್ತು ಅವಕಾಶವನ್ನು ನೀಡಲಾಗುವುದು ಎಂದರು. ಇದೇ ವಿಚಾರಕ್ಕೆ ರಾಜ್ಯಸಭೆಯಲ್ಲಿ ಗದ್ದಲ ನಡೆಯಿತು. ವಿರೋಧ ಪಕ್ಷಗಳ ಎಲ್ಲ ಸಂಸದರು ರಾಜ್ಯಸಭೆಯಿಂದ ಹೊರನಡೆದರು. ಇದನ್ನೂ ಓದಿ: ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಪಕ್ಷಿ ಗಣತಿ- 253 ಪ್ರಬೇಧ ಪತ್ತೆ

  • ಪ್ರಧಾನಿ ಭಾಷಣದ ವೇಳೆ ವಿಪಕ್ಷ ನಾಯಕರ ಗದ್ದಲ- ಸ್ಪೀಕರ್‌ ತರಾಟೆ

    ಪ್ರಧಾನಿ ಭಾಷಣದ ವೇಳೆ ವಿಪಕ್ಷ ನಾಯಕರ ಗದ್ದಲ- ಸ್ಪೀಕರ್‌ ತರಾಟೆ

    ನವದೆಹಲಿ: ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ (Om Birla) ಮಂಗಳವಾರ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಅವರನ್ನು ತರಾಟೆಗೆ ತೆಗೆದುಕೊಂಡರು.

    ಇಂದು ಸಂಸತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ರಾಷ್ಟ್ರಪತಿಗಳಿಗೆ ವಂದನಾ ನಿರ್ಣಯದ ಮೇಲೆ ಮಾತನಾಡಿದರು. ಪ್ರದಾನಿಯವರು ಭಾಷಣ ಪ್ರಾರಂಭ ಮಾಡುತ್ತಿದ್ದಂತೆಯೇ ವಿಪಕ್ಷ ನಾಯಕರು ಸಿಡಿದೆದ್ದರು. ಅಲ್ಲದೇ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುವಂತೆ ರಾಹುಲ್ ಗಾಂಧಿಯವರು ತಮ್ಮ ನಾಯಕರಿಗೆ ಸೂಚಿಸಿದ್ದಾರೆ. ಈ ಮೂಲಕ ಪ್ರಧಾನಿ ಭಾಷಣಕ್ಕೆ ತಡೆಯೊಡ್ಡಲು ಮುಂದಾದರು.

    ಈ ವೇಳೆ ಸ್ಪೀಕರ್‌ ಓಂ ಬಿರ್ಲಾ ಅವರು, ರಾಹುಲ್ ಗಾಂಧಿ ಅವರನ್ನು ತರಾಟೆಗೆ ತೆಗೆದುಕೊಂಡರು. ಸದನದಲ್ಲಿ ಮಾತನಾಡಲು ಸಾಕಷ್ಟು ಅವಕಾಶ ಮತ್ತು ಸಮಯವನ್ನು ನೀಡಲಾಗಿದೆ ಎಂದು ಹೇಳಿದರು. ಅಲ್ಲದೇ ಸಂಸತ್ತಿನ ಘನತೆಯನ್ನು ಕಾಪಾಡಿಕೊಳ್ಳುವಂತೆ ರಾಗಾಗೆ ಸ್ಪೀಕರ್‌ ತಿಳಿಸಿದರು. ಇದನ್ನೂ ಓದಿ: ಚುನಾವಣೆಯಲ್ಲಿ 3ನೇ ಬಾರಿಯೂ ಸೋತಿದ್ದಕ್ಕೆ ಕೆಲವರಿಗೆ ನೋವಾಗಿದೆ: ವಿಪಕ್ಷಗಳಿಗೆ ಮೋದಿ ತಿರುಗೇಟು

    ಸ್ಪೀಕರ್‌ ಹೇಳಿದ್ದೇನು..?: ಆತ್ಮೀಯ ವಿರೋಧ ಪಕ್ಷದ ನಾಯಕರೇ, ಇದು ನಿಮಗೆ ಸರಿಹೊಂದುವುದಿಲ್ಲ. ನಿಮಗೆ ಸಾಕಷ್ಟು ಅವಕಾಶಗಳು ಮತ್ತು ಸಮಯವನ್ನು ನೀಡಲಾಗಿದೆ. ಸಭಾನಾಯಕರು ಮಾತನಾಡುವಾಗ ಸದನದಲ್ಲಿ ನಿರ್ದೇಶನ ನೀಡುತ್ತಿರುವುದು ನಿಮಗೆ ಶೋಭೆ ತರಲ್ಲ. ಸಂಸತ್ತಿನ ಸಂಪ್ರದಾಯಗಳ ಪ್ರಕಾರ ಇದು ಸೂಕ್ತವಲ್ಲ. ಸಂಸತ್ತಿನ ಘನತೆ ಕಾಪಾಡಿ. ಸದಸ್ಯರನ್ನು ಸದನದ ಬಾವಿಗೆ ಬರುವಂತೆ ನಿರ್ದೇಶಿಸುತ್ತಿದ್ದೀರಾ? ಇದಕ್ಕಾಗಿ ನೀವು ವಿರೋಧ ಪಕ್ಷದ ನಾಯಕರಾಗಿದ್ದೀರೇ? ಬಿರ್ಲಾ ಅವರು ರಾಹುಲ್ ಗಾಂಧಿಗೆ ಛೀಮಾರಿ ಹಾಕಿದರು. ‌

  • ಸ್ಪೀಕರ್‌ಗೆ ಪತ್ರ ಬರೆದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ

    ಸ್ಪೀಕರ್‌ಗೆ ಪತ್ರ ಬರೆದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ

    ನವದೆಹಲಿ: ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿಯವರು (Rahul Gandhi) ಸ್ಪೀಕರ್‌ ಓಂ ಬಿರ್ಲಾ (OM Birla) ಅವರಿಗೆ ಪತ್ರ ಬರೆದಿದ್ದಾರೆ. 2024 ಜುಲೈ 1 ರಂದು ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಮೇಲಿನ ಟೀಕೆಗಳ ಸಂಬಂಧ ರಾಗಾ ಅವರು ಈ ಪತ್ರ ಬರೆದಿದ್ದಾರೆ.

    ಪತ್ರದಲ್ಲಿ ಏನಿದೆ..?: 2024 ಜುಲೈ 1 ರಂದು ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಮೇಲೆ ಮಾತನಾಡಿದೆ. ಈ ಚರ್ಚೆಯ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ. ಈ ಟೀಕೆಗಳ ಸಂಬಂಧವೇ ನಾನು ಈ ಪತ್ರ ಬರೆಯುತ್ತಿದ್ದೇನೆ ಎಂದಿದ್ದಾರೆ.

    ಸದನದ ನಡಾವಳಿಗಳಿಂದ ಕೆಲವು ಟೀಕೆಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸುವ ಅಧಿಕಾರ ಅಧ್ಯಕ್ಷರಿಗೆ ಮಾತ್ರ ಇರುವಂತದ್ದು. ಇವುಗಳ ಸ್ವರೂಪವನ್ನು ಲೋಕಸಭೆಯಲ್ಲಿನ ಕಾರ್ಯವಿಧಾನ ಮತ್ತು ನಡವಳಿಕೆ, ನಿಯಮ 380 ರಲ್ಲಿ ನಿರ್ದಿಷ್ಟಪಡಿಸಲಾಗಿದೆ. ನನ್ನ ಭಾಷಣದ ಗಣನೀಯ ಹಾಗೂ ಮುಖ್ಯ ಭಾಗವನ್ನ ತೆಗೆದುಹಾಕಿರುವುದನ್ನ ತಿಳಿದು ಆಘಾತಕ್ಕೊಳಗಾಗಿದ್ದೇನೆ ಎಂದರು.

    ನಾನು ಸದನದಲ್ಲಿ ಜನರಿಗೆ ತಿಳಿಸಲು ಬಯಸಿದ್ದು, ನೆಲದ ವಾಸ್ತವತೆ ಹಾಗೂ ವಾಸ್ತವಿಕ ನಿಲುವು. ಭಾರತದ ಸಂವಿಧಾನದ 105(1)ನೇ ಪರಿಚ್ಛೇದದಲ್ಲಿ ಪ್ರತಿಪಾದಿಸಿರುವಂತೆ ಜನರ ಸಾಮೂಹಿಕ ಧ್ವನಿಯನ್ನು ವ್ಯಕ್ತಪಡಿಸುವುದು ಸದನದ ಪ್ರತಿಯೊಬ್ಬ ಸದಸ್ಯರ ವಾಕ್ ಸ್ವಾತಂತ್ರ್ಯ. ಈ ಸ್ವಾತಂತ್ರ್ಯವನ್ನು ಎಲ್ಲಾ ಜನಪ್ರತಿನಿಧಿಗಳು ಹೊಂದಿದ್ದಾರೆ. ಸದನದಲ್ಲಿ ಜನರ ಸಮಸ್ಯೆಗಳನ್ನ ಪ್ರತಿಪಾದಿಸುವುದು ಪ್ರತಿಯೊಬ್ಬ ಸದಸ್ಯರ ಹಕ್ಕು. ಆ ಹಕ್ಕನ್ನು ನಾನು ನಿನ್ನೆ ಚಲಾಯಿಸಿದ್ದೇನೆ ಎಂದು ತಿಳಿಸಿದ್ದಾರೆ.

    ನನ್ನ ಹೇಳಿಕೆಗಳನ್ನು ತೆಗೆದುಹಾಕುವುದು ಸಂಸದೀಯ ಪ್ರಜಾಪ್ರಭುತ್ವದ ತತ್ವಗಳಿಗೆ ವಿರುದ್ಧವಾಗಿದೆ. ಈ ಸಂದರ್ಭದಲ್ಲಿ ನಾನು ಅನುರಾಗ್ ಠಾಕೂರ್ ಅವರ ಭಾಷಣದ ಬಗ್ಗೆ ಉಲ್ಲೇಖ ಮಾಡಲು ಬಯಸುತ್ತೇನೆ. ಅನುರಾಗ್ ರ ಭಾಷಣ, ಕೇವಲ ಆರೋಪಗಳಿಂದ ತುಂಬಿತ್ತು ಎಂದು ಪತ್ರದ ಮೂಲಕ ರಾಹುಲ್‌ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದರು.

  • ಮೋದಿಗೆ ತಲೆಬಾಗಿ ನಮಿಸಿದ್ದು ಸರಿಯಲ್ಲ- ಸ್ಪೀಕರ್‌ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

    ಮೋದಿಗೆ ತಲೆಬಾಗಿ ನಮಿಸಿದ್ದು ಸರಿಯಲ್ಲ- ಸ್ಪೀಕರ್‌ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

    – ರಾಗಾ ಹೇಳಿಕೆಗೆ ಓಂ ಬಿರ್ಲಾ ಸ್ಪಷ್ಟನೆ

    ನವದೆಹಲಿ: ಸ್ಪೀಕರ್ ಓಂ ಬಿರ್ಲಾ ಅವರು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಭೇಟಿಯಾದಾಗ ತಲೆಬಾಗಿ ನಮಸ್ಕರಿಸಿದ್ದರು. ಆದರೆ ರಾಹುಲ್‌ ಗಾಂಧಿ ಮುಂದೆ ನೇರವಾಗಿ ನಿಂತು ಕೈ ಕುಲುಕಿದ್ದರು. ಈ ವಿಚಾರವನ್ನು ವಿರೋಧ ಪಕ್ಷದ ನಾಯಕ ರಾಗಾ ಅವರು ಇಂದು ಸಂಸತ್ತಿನಲ್ಲಿ ಪ್ರಸ್ತಾಪಿಸಿ ವಾಗ್ದಾಳಿ ನಡೆಸಿದರು.

    ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ರಾಹುಲ್ ಗಾಂಧಿ (Rahul Gandhi), ಲೋಕಸಭಾ ಸ್ಪೀಕರ್ ಆಯ್ಕೆ ದಿನವನ್ನು ಉಲ್ಲೇಖಿಸಿ, ನಾನು ನಿಮ್ಮೊಂದಿಗೆ ಕೈಕುಲುಕಿದಾಗ ನೀವು ನೇರವಾಗಿ ನಿಂತು ನನ್ನ ಕೈಕುಲುಕಿದ್ದೀರಿ. ಆದರೆ ಮೋದಿಜಿ ಕೈಕುಲುಕಿದಾಗ ತಲೆಬಾಗಿ ನಮಸ್ಕರಿಸಿ ಕೈಕುಲುಕಿದ್ದೀರಿ ಎಂದು ಹೇಳಿದರು. ಈ ವೇಳೆ ಆಡಳಿತ ಪಕ್ಷದ ಸದಸ್ಯರು ರಾಹುಲ್‌ ಗಾಂಧಿ ವಿರುದ್ಧ ಕಿಡಿಕಾರಿದ್ದು, ಇದು ಪೀಠಕ್ಕೆ ಮಾಡಿದ ಅವಮಾನ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ರಾಹುಲ್ ಗಾಂಧಿ ಇಡೀ ಹಿಂದೂ ಸಮಾಜ ಅವಮಾನಿಸಿದ್ದಾರೆ: ಅಶ್ವಿನಿ ವೈಷ್ಣವ್

    ರಾಹುಲ್‌ ಗಾಂಧಿಗೆ ಹೇಳಿಕೆಗೆ ಪ್ರತಿಕ್ರಿಯಿಸಿದ ಸ್ಪೀಕರ್‌ ಓಂ ಬಿರ್ಲಾ (Om Birla) ಅವರು, ಪ್ರಧಾನಿಯವರು ಸದನದ ನಾಯಕ. ಸಾರ್ವಜನಿಕ ಜೀವನದಲ್ಲಿ ಮತ್ತು ವೈಯಕ್ತಿಕ ಜೀವನದಲ್ಲಿ ನಮಗಿಂತ ಹಿರಿಯರನ್ನು ಭೇಟಿಯಾದಾಗ ಅವರಿಗೆ ತಲೆಬಾಗಿ ನಮಸ್ಕರಿಸಿ ಗೌರವ ನೀಡುವುದು ನಮ್ಮ ಸಂಸ್ಕೃತಿಯಾಗಿದೆ. ನಾನು ಈ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಅನುಸರಿಸುತ್ತೇನೆ. ಹಿರಿಯರಿಗೆ ನಮಸ್ಕರಿಸುವುದು ಮತ್ತು ಅಗತ್ಯವಿದ್ದರೆ ಅವರ ಪಾದಗಳನ್ನು ಮುಟ್ಟುವುದು ಕೂಡ ನಮ್ಮ ಸಂಸ್ಕೃತಿಯ ಭಾಗವಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

    ಬಿರ್ಲಾ ಮಾತಿಗೆ ಮತ್ತೆ ಪ್ರತಿಕ್ರಿಯಿಸಿದ ರಾಗಾ, ಸ್ಪೀಕರ್‌ ಅವರ ಮಾತನ್ನು ಗೌರವಿಸುತ್ತೇನೆ. ಆದರೆ ಈ ಸದನದಲ್ಲಿ ನಿಮಗಿಂತ ದೊಡ್ಡವರು ಯಾರೂ ಇಲ್ಲ. ಇಲ್ಲಿ ನಿಮ್ಮ ಮಾತೇ ಕೊನೆಯದು. ಎಲ್ಲರೂ ನಿಮ್ಮನ್ನು ಗೌರವಿಸಬೇಕು. ನಾನು ನಿಮ್ಮ ಮುಂದೆ ತಲೆಬಾಗುತ್ತೇನೆ ಮತ್ತು ಇಡೀ ಪ್ರತಿಪಕ್ಷಗಳು ನಿಮ್ಮ ಮುಂದೆ ತಲೆಬಾಗುತ್ತವೆ. ಲೋಕಸಭಾ ಸದಸ್ಯರಾದ ನಾವು ಸ್ಪೀಕರ್‌ಗೆ ಅಧೀನರಾಗಿದ್ದೇವೆ. ನೀವು ಏನು ಹೇಳಿದರೂ ನಾವು ಕೇಳುತ್ತೇವೆ. ಆದರೆ ಸದನದಲ್ಲಿ ನಿಷ್ಪಕ್ಷಪಾತವಾಗಿರುವುದು ಮುಖ್ಯ ಎಂದು ಹೇಳಿದರು.

  • ಲೋಕಸಭೆಯ ಸ್ಪೀಕರ್‌ ಆಗಿ 2 ನೇ ಬಾರಿಗೆ ಓಂ ಬಿರ್ಲಾ ಆಯ್ಕೆ

    ಲೋಕಸಭೆಯ ಸ್ಪೀಕರ್‌ ಆಗಿ 2 ನೇ ಬಾರಿಗೆ ಓಂ ಬಿರ್ಲಾ ಆಯ್ಕೆ

    ನವದೆಹಲಿ: 18ನೇ ಲೋಕಸಭೆಯ ಸ್ಪೀಕರ್‌ ಆಗಿ 2 ನೇ ಬಾರಿಗೆ ಓಂ ಬಿರ್ಲಾ (Om Birla) ಆಯ್ಕೆಯಾಗಿದ್ದಾರೆ. ಧ್ವನಿ ಮತದ ಮೂಲಕ ಲೋಕಸಭೆ ಸ್ಪೀಕರ್ ಆಗಿ ಓಂ ಬಿರ್ಲಾ ಆಯ್ಕೆಯಾಗಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರು ಓಂ ಬಿರ್ಲಾ ಹೆಸರನ್ನು ಪ್ರಸ್ತಾಪಿಸಿದರು. ನಂತರ ಪ್ರಧಾನಿ ಮೋದಿ (Narendra Modi) ಮತ್ತು ರಾಹುಲ್ ಗಾಂಧಿ (Rahul Gandhi) ಅವರನ್ನು ಸ್ಪೀಕರ್‌ ಕುಳಿತುಕೊಳ್ಳುವ ಆಸನಕ್ಕೆ ಕರೆದೊಯ್ದರು.  ಈ ವೇಳೆ ಮೋದಿಯವರು, ನೀವು ಎರಡನೇ ಬಾರಿಗೆ ಈ ಸ್ಥಾನವನ್ನು ಅಲಂಕರಿಸಿರುವುದು ಸದನದ ಸೌಭಾಗ್ಯ. ನಾನು ನಿಮ್ಮನ್ನು ಮತ್ತು ಇಡೀ ಸದನವನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು.

    ಪ್ರತಿಪಕ್ಷಗಳಿಗೆ ಉಪಸಭಾಪತಿ ಸ್ಥಾನ ನೀಡುವಂತೆ ಷರತ್ತು ಹಾಕಿದ್ದರು. ಈ ಬಗ್ಗೆ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವೆ ಒಮ್ಮತ ಮೂಡಿರಲಿಲ್ಲ. ಎನ್‌ಡಿಎಯಿಂದ ಓಂ ಬಿರ್ಲಾ ಮತ್ತು ವಿರೋಧ ಪಕ್ಷದಿಂದ ಕೆ. ಸುರೇಶ್ ಅಭ್ಯರ್ಥಿಯಾಗಿದ್ದರು. ಇದನ್ನೂ ಓದಿ: ಲೋಕಸಭೆಯ ಸ್ಪೀಕರ್‌ ಚುನಾವಣೆ – ಎನ್‌ಡಿಎ ಓಂ ಬಿರ್ಲಾ v/s ಇಂಡಿಯಾ ಒಕ್ಕೂಟದ ಸುರೇಶ್‌ ಮಧ್ಯೆ ಫೈಟ್‌

    ಸ್ವಾತಂತ್ರ್ಯದ ನಂತರ, ಲೋಕಸಭೆಯ ಸ್ಪೀಕರ್ (Lok Sabha Speaker Election) ಮತ್ತು ಉಪಸಭಾಪತಿಯನ್ನು ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವಿನ ಒಮ್ಮತದ ಮೂಲಕ ಆಯ್ಕೆ ಮಾಡಲಾಗುತಿತ್ತು. ಆದರೆ ಈ ಬಾರಿ ಇಂಡಿಯಾ ಬಣ ಅಭ್ಯರ್ಥಿ ಘೋಷಣೆಯ ನಂತರ ಚುನಾವಣೆ ನಡೆದಿದೆ. ಈ ಹಿಂದೆ 1952 ಮತ್ತು 1976ರಲ್ಲಿ ಲೋಕಸಭಾ ಸ್ಪೀಕರ್ ಹುದ್ದೆಗೆ ಚುನಾವಣೆ ನಡೆದಿತ್ತು.

  • ಲೋಕಸಭೆಯ ಸ್ಪೀಕರ್‌ ಚುನಾವಣೆ – ಎನ್‌ಡಿಎ ಓಂ ಬಿರ್ಲಾ v/s ಇಂಡಿಯಾ ಒಕ್ಕೂಟದ ಸುರೇಶ್‌ ಮಧ್ಯೆ ಫೈಟ್‌

    ಲೋಕಸಭೆಯ ಸ್ಪೀಕರ್‌ ಚುನಾವಣೆ – ಎನ್‌ಡಿಎ ಓಂ ಬಿರ್ಲಾ v/s ಇಂಡಿಯಾ ಒಕ್ಕೂಟದ ಸುರೇಶ್‌ ಮಧ್ಯೆ ಫೈಟ್‌

    ನವದೆಹಲಿ: 18 ನೇ ಲೋಕಸಭೆಯ ಸ್ಪೀಕರ್‌ಗಾಗಿ ಓಂ ಬಿರ್ಲಾ (Om Birla) ಪರವಾಗಿ ಎನ್‌ಡಿಎ ನಾಯಕರು ಸಹಿ ಹಾಕಿದರು. ಮಂಗಳವಾರ 18ನೇ ಲೋಕಸಭೆಯ ಸ್ಪೀಕರ್ ಹುದ್ದೆಗೆ ಎನ್‌ಡಿಎ ಅಭ್ಯರ್ಥಿ ಓಂ ಬಿರ್ಲಾ ಮತ್ತು ಇಂಡಿಯಾ ಬ್ಲಾಕ್‌ನ ಕೋಡಿಕುನ್ನಿಲ್ ಸುರೇಶ್ (K.Suresh) ನಾಮಪತ್ರ ಸಲ್ಲಿಸಿದ್ದಾರೆ.

    ಸ್ವಾತಂತ್ರ್ಯದ ನಂತರ, ಲೋಕಸಭೆಯ ಸ್ಪೀಕರ್ (Lok Sabha Speaker Election) ಮತ್ತು ಉಪಸಭಾಪತಿಯನ್ನು ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವಿನ ಒಮ್ಮತದ ಮೂಲಕ ಆಯ್ಕೆ ಮಾಡಲಾಗುತಿತ್ತು. ಆದರೆ ಈ ಬಾರಿ ಇಂಡಿಯಾ ಬಣ ಅಭ್ಯರ್ಥಿ ಘೋಷಣೆಯ ನಂತರ ಚುನಾವಣೆ ನಡೆಯಲಿದೆ. ಇದನ್ನೂ ಓದಿ: ತುರ್ತು ಪರಿಸ್ಥಿತಿ ಹೇರಿದ್ದ ಕಾಂಗ್ರೆಸ್ ಸಂವಿಧಾನದ ಪ್ರತಿ ಹಿಡಿದು ಪ್ರತಿಭಟಿಸುತ್ತಿರುವುದು ವಿಪರ್ಯಾಸ: ಬಸವರಾಜ ಬೊಮ್ಮಾಯಿ

    ಜೂನ್ 26 ರಂದು ಲೋಕಸಭೆಯ ಸ್ಪೀಕರ್ ಆಯ್ಕೆ ಚುನಾವಣೆ ನಡೆಯಲಿದೆ. ಜೂನ್ 27 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂಸತ್ತಿನ ಉಭಯ ಸದನಗಳ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

    ಕೃಷಿಕ ಮತ್ತು ಸಮಾಜ ಸೇವಕ ಬಿರ್ಲಾ ಅವರು ತಮ್ಮ ವಿದ್ಯಾರ್ಥಿ ದಿನಗಳಿಂದಲೇ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. 1991 ರಲ್ಲಿ ಭಾರತೀಯ ಯುವ ಮೋರ್ಚಾದ ರಾಜ್ಯ ಘಟಕದ ಅಧ್ಯಕ್ಷರಾಗಿ ಮತ್ತು ರಾಷ್ಟ್ರಮಟ್ಟದಲ್ಲಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ತುರ್ತು ಪರಿಸ್ಥಿತಿ ನೆನಪಿಸಿದ ಪ್ರಧಾನಿ ಮೋದಿಗೆ ಖರ್ಗೆ ತಿರುಗೇಟು

    ಬಿರ್ಲಾ ಅವರು ಕೋಟಾ ಕ್ಷೇತ್ರದಿಂದ 17 ನೇ ಲೋಕಸಭೆಗೆ ಆಯ್ಕೆಯಾಗಿದ್ದರು. ಅಲ್ಲಿ ಅವರು ಕಾಂಗ್ರೆಸ್‌ನ ರಾಮನಾರಾಯಣ್ ಮೀನಾ ಅವರನ್ನು 2.5 ಲಕ್ಷ ಮತಗಳಿಂದ ಸೋಲಿಸಿದ್ದರು. ಕಳೆದ ಲೋಕಸಭೆಗೆ ಇದೇ ಕ್ಷೇತ್ರದಿಂದ ಆಯ್ಕೆಯಾಗಿದ್ದರು.

    17ನೇ ಲೋಕಸಭೆಯ ಸ್ಪೀಕರ್ ಆಗಿ ಎನ್‌ಡಿಎ ಅಭ್ಯರ್ಥಿ ಬಿರ್ಲಾ ಅವಿರೋಧವಾಗಿ ಆಯ್ಕೆಯಾಗಿದ್ದರು. ಆಗ ಬಿರ್ಲಾ ಅವರ ಹೆಸರನ್ನು ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿದ್ದರು. ಇದಕ್ಕೆ ಕಾಂಗ್ರೆಸ್, ಟಿಎಂಸಿ, ಡಿಎಂಕೆ ಮತ್ತು ಬಿಜೆಡಿ ಸೇರಿದಂತೆ ಎಲ್ಲಾ ಪ್ರಮುಖ ವಿರೋಧ ಪಕ್ಷಗಳು ಬೆಂಬಲ ವ್ಯಕ್ತಪಡಿಸಿದ್ದವು. ವೈಎಸ್‌ಆರ್‌ಸಿಪಿ ಮತ್ತು ಟಿಡಿಪಿ ಕೂಡ ಬಿರ್ಲಾ ಅವರ ಉಮೇದುವಾರಿಕೆಯನ್ನು ಬೆಂಬಲಿಸಿದ್ದವು. ಇದನ್ನೂ ಓದಿ: ತುರ್ತು ಪರಿಸ್ಥಿತಿಗೆ 50 ವರ್ಷ – ಕರಾಳ ದಿನಗಳನ್ನು ನೆನೆದ ಪ್ರಧಾನಿ

    ಇಂಡಿಯಾ ಬ್ಲಾಕ್ ಅಭ್ಯರ್ಥಿ ಕೆ.ಸುರೇಶ್ ಅವರು 29 ವರ್ಷಗಳ ಕಾಲ ಸಂಸದರಾಗಿ ಸೇವೆ ಸಲ್ಲಿಸಿದ್ದಾರೆ. ಹೆಚ್ಚು ಕಾಲ ಲೋಕಸಭಾ ಸಂಸದರಾಗಿ ಆಯ್ಕೆಯಾದವರ ಪೈಕಿ ಸುರೇಶ್‌ ಕೂಡ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಸುರೇಶ್ ಮೊದಲ ಬಾರಿಗೆ 1989 ರಲ್ಲಿ ಲೋಕಸಭೆಗೆ ಚುನಾಯಿತರಾದರು. ನಂತರ ಅವರು 1991, 1996 ಮತ್ತು 1999 ರ ಸಾರ್ವತ್ರಿಕ ಚುನಾವಣೆಗಳಲ್ಲಿ ಅಡೂರ್ ಕ್ಷೇತ್ರದಿಂದ ಲೋಕಸಭೆಗೆ ಸತತ ನಾಲ್ಕು ಅವಧಿಗೆ ಗೆದ್ದರು.

    2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಮಾವೆಲಿಕ್ಕಾರ (ಕೇರಳ)ದಿಂದ ಎಂಟನೇ ಲೋಕಸಭಾ ಚುನಾವಣೆಯಲ್ಲಿ ಸುರೇಶ್ ಗೆದ್ದರು. ಈ ಹಿಂದೆ ನಾಲ್ಕು ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಅವರು ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ಕಾರ್ಯಾಧ್ಯಕ್ಷರಾಗಿದ್ದಾರೆ. 17 ನೇ ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ಮುಖ್ಯ ಸಚೇತಕರಾಗಿದ್ದರು.