Tag: ಓಂ ಪ್ರಕಾಶ್‌

  • ಮಾಜಿ ಐಜಿಪಿ ಓಂ ಪ್ರಕಾಶ್ ಹತ್ಯೆಯಲ್ಲಿ ಮಗಳ ಪಾತ್ರವಿಲ್ಲ – ಕೋರ್ಟ್‌ಗೆ ಚಾರ್ಜ್‌ಶೀಟ್‌ ಸಲ್ಲಿಕೆ

    ಮಾಜಿ ಐಜಿಪಿ ಓಂ ಪ್ರಕಾಶ್ ಹತ್ಯೆಯಲ್ಲಿ ಮಗಳ ಪಾತ್ರವಿಲ್ಲ – ಕೋರ್ಟ್‌ಗೆ ಚಾರ್ಜ್‌ಶೀಟ್‌ ಸಲ್ಲಿಕೆ

    ಬೆಂಗಳೂರು: ಮಾಜಿ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ (Om Prakash) ಹತ್ಯೆ ಕೇಸ್ ತನಿಖೆ ಮಾಡಿ ಸಿಸಿಬಿ, ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದೆ.

    ಕೊಲೆಯಾದ ಓಂಪ್ರಕಾಶ್ ಮಗಳ ಹೆಸರನ್ನ ಕೈಬಿಟ್ಟು ಚಾರ್ಜ್‌ಶೀಟ್ ಮಾಡಲಾಗಿದೆ. ಓಂಪ್ರಕಾಶ್ ಕೊಲೆಯಾದ ಬಳಿಕ ಹೆಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಓಂಪ್ರಕಾಶ್ ಪತ್ನಿ ಪಲ್ಲವಿ ಹಾಗೂ ಮಗಳ ವಿರುದ್ಧ ದೂರು ದಾಖಲಿಸಲಾಗಿದೆ. ಇದನ್ನೂ ಓದಿ: ಓಂ ಪ್ರಕಾಶ್‌ ಹತ್ಯೆಗೆ 1 ವಾರದಿಂದ ಸ್ಕೆಚ್‌ ಹಾಕಿದ್ದ ಪತ್ನಿ, ಪುತ್ರಿ!

    ಎಫ್‌ಐಆರ್‌ನಲ್ಲಿ ಓಂಪ್ರಕಾಶ್ ಪತ್ನಿ ಪಲ್ಲವಿಯನ್ನ ಎ1 ಆರೋಪಿ, ಮಗಳನ್ನ ಎ2 ಆರೋಪಿಯನ್ನಾಗಿ ಮಾಡಲಾಗಿತ್ತು. ತನಿಖೆಯ ವೇಳೆ ಓಂಪ್ರಕಾಶ್ ಹತ್ಯೆಯಲ್ಲಿ ಮಗಳ ಪಾತ್ರ ಇಲ್ಲ ಅನ್ನೋದು ಕಂಡು ಬಂದಿದೆ. ಹೀಗಾಗಿ, ತಂದೆಯ ಮರ್ಡರ್ ಕೇಸ್‌ನಲ್ಲಿ ಎ2 ಆರೋಪಿಯಾಗಿದ್ದ ಮಗಳನ್ನ ಚಾರ್ಜ್‌ಶೀಟ್‌ನಿಂದ ಕೈಬಿಡಲಾಗಿದೆ.

    ಸಾವಿರಕ್ಕೂ ಅಧಿಕ ಪುಟಗಳ ಚಾರ್ಜ್‌ಶೀಟ್ ಸಿಸಿಬಿ ಸಲ್ಲಿಕೆ ಮಾಡಿದ್ದು, ಕೊಲೆಗೆ ಪ್ರಮುಖವಾದ ಕಾರಣ ಕೋಟ್ಯಂತರ ರೂಪಾಯಿ ಬೆಲೆಬಾಳುವ ಆಸ್ತಿಯ ವಿಚಾರ ಎಂದು ಉಲ್ಲೇಖ ಮಾಡಿದೆ. ಪ್ರಕರಣದ ತನಿಖೆ ಮುಂದುವರೆಸಲು ಕೊಲೆಯಾದ ಡಿಜಿ-ಐಜಿಪಿ ಮಗ ಕಾರ್ತಿಕೇಶ್, ಪ್ರಕರಣದ ತನಿಖೆ ಮುಂದುವರೆಸಲು ಸರ್ಕಾರದಿಂದ ಅನುಮತಿ ಪಡೆದು ಸ್ವಂತ ಖರ್ಚಿನಲ್ಲಿ ಎಸ್‌ಪಿಪಿಯನ್ನ ನೇಮಕ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ. ಇದನ್ನೂ ಓದಿ: ಒಂದು ವಾರದಿಂದ ಬೆದರಿಕೆ – ಪುತ್ರನಿಂದ ದೂರು, ಓಂ ಪ್ರಕಾಶ್‌ ಪತ್ನಿ ಅರೆಸ್ಟ್‌

  • ನಿವೃತ್ತ ಡಿಜಿ ಓಂ ಪ್ರಕಾಶ್ ಪುತ್ರಿಯಿಂದ ದಾಂಧಲೆ – ನಂದಿನಿ ಪಾರ್ಲರ್‌ಗೆ ನುಗ್ಗಿ ವಸ್ತುಗಳು ಪೀಸ್ ಪೀಸ್

    ನಿವೃತ್ತ ಡಿಜಿ ಓಂ ಪ್ರಕಾಶ್ ಪುತ್ರಿಯಿಂದ ದಾಂಧಲೆ – ನಂದಿನಿ ಪಾರ್ಲರ್‌ಗೆ ನುಗ್ಗಿ ವಸ್ತುಗಳು ಪೀಸ್ ಪೀಸ್

    – ಪತ್ನಿಯಿಂದಲೇ ಬರ್ಬರವಾಗಿ ಹತ್ಯೆಯಾಗಿದ್ದ ನಿವೃತ್ತ ಐಪಿಎಸ್ ಅಧಿಕಾರಿ

    ಬೆಂಗಳೂರು: ಪತ್ನಿಯಿಂದಲೇ ಬರ್ಬರವಾಗಿ ಹತ್ಯೆಯಾಗಿದ್ದ ನಿವೃತ್ತ ಡಿಜಿ ಓಂ ಪ್ರಕಾಶ್ (Om Prakash) ಅವರ ಪುತ್ರಿ ದಾಂಧಲೆ ಮಾಡಿಕೊಂಡಿದ್ದಾರೆ. ನಂದಿನಿ ಪಾರ್ಲರ್‌ಗೆ ನುಗ್ಗಿ ವಸ್ತುಗಳನ್ನು ಪೀಸ್ ಪೀಸ್ ಮಾಡಿದ್ದಾರೆ.

    ಸಿಬ್ಬಂದಿಗೆ ಕೂಡ ಕೃತಿಕಾ ಥಳಿಸಿದ್ದಾರೆ. ಅವರ ವರ್ತನೆಗೆ ಸ್ಥಳೀಯರು ಶಾಕ್ ಆಗಿದ್ದಾರೆ. ನಿವೃತ್ತ ಡಿಜಿ ಓಂ ಪ್ರಕಾಶ್ ಕೊಲೆಯಾದ ನಂತರ ಸಹೋದರ ಬೇರೆ ಕಡೆಗೆ ಶಿಫ್ಟ್ ಆಗಿದ್ದಾರೆ. ಇಡೀ ಮನೆಯಲ್ಲಿ ಮಗಳು ಕೃತಿಕಾ ಒಂಟಿಯಾಗಿ ವಾಸವಾಗಿದ್ದಾರೆ. ಇದನ್ನೂ ಓದಿ: ಓಂ ಪ್ರಕಾಶ್‌ ಹತ್ಯೆಗೆ 1 ವಾರದಿಂದ ಸ್ಕೆಚ್‌ ಹಾಕಿದ್ದ ಪತ್ನಿ, ಪುತ್ರಿ!

    ಕಳೆದ ಸೋಮವಾರ ಸಂಜೆ ಮನೆಯ ಪಕ್ಕದ ನಂದಿನಿ ಪಾರ್ಲರ್‌ಗೆ ಕೃತಿಕಾ ಬಂದಿದ್ದರು. ಅಂಗಡಿ ಮುಂದೆ ಸ್ವಲ್ಪ ಹೊತ್ತು ಹಾಗೇ ನಿಂತು ಅಲ್ಲಿನ ಮಾಲೀಕನನ್ನು ದಿಟ್ಟಿಸಿ ನೋಡಿದ್ರು. ಇದನ್ನು ನೋಡಿದ ಮಾಲೀಕ, ‘ಯಾಕೆ ಮೇಡಂ ಏನಾಯ್ತು’ ಅಂತಾ ಕೇಳಿದ್ದ. ಈ ವೇಳೆ ಕೋಪಗೊಂಡ ಕೃತಿಕಾ ಏಕಾಏಕಿ ಅಂಗಡಿಗಳಲ್ಲಿದ್ದ ಎಲ್ಲಾ ವಸ್ತುಗಳನ್ನು ಹೊಡೆದು ಪೀಸ್ ಪೀಸ್ ಮಾಡಿದ್ದಾರೆ.

    ಅಷ್ಟೇ ಅಲ್ಲದೇ, ತಡೆಯೋಕೆ ಬಂದ ಮಾಲೀಕನ ಮೇಲೆ ಹಲ್ಲೆ ಮಾಡಿ ಗಾಯಗೊಳಿಸಿದ್ದಾರೆ. ಆಕೆಯ ವರ್ತನೆಯಿಂದ ಭಯಗೊಂಡ ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರನ್ನು ನೋಡಿ ಏನೂ ಆಗೇ ಇಲ್ಲ ಎಂಬಂತೆ ಕೃತಿಕಾ ಮನೆಗೆ ಹೋಗಿದ್ದಾರೆ. ಇದನ್ನೂ ಓದಿ: ಪತಿಗೆ ಉಗ್ರರ ಸಂಪರ್ಕ ಇದೆ, ನನ್ನ ಮೇಲೆ ವಿಷಪ್ರಾಶನ ಮಾಡಲಾಗಿದೆ: ಓಂ ಪ್ರಕಾಶ್‌ ಪತ್ನಿ

    ತಂದೆ ಕೊಲೆಯಾಗಿದ್ದಾರೆ, ತಾಯಿ ಜೈಲು ಸೇರಿದ್ದಾರೆ. ಸಹೋದರ ಮನೆ ಬಿಟ್ಟು ಬೇರೆ ಕಡೆಗೆ ಶಿಫ್ಟ್ ಆಗಿದ್ದಾರೆ. ಸದ್ಯ ಇಡೀ ಮನೆಯಲ್ಲಿ ಏಕಾಂಗಿಯಾಗಿ ಕೃತಿಕಾ ವಾಸವಾಗಿದ್ದಾರೆ.

  • ಓಂ ಪ್ರಕಾಶ್‌ ಹತ್ಯೆಗೆ 1 ವಾರದಿಂದ ಸ್ಕೆಚ್‌ ಹಾಕಿದ್ದ ಪತ್ನಿ, ಪುತ್ರಿ!

    ಓಂ ಪ್ರಕಾಶ್‌ ಹತ್ಯೆಗೆ 1 ವಾರದಿಂದ ಸ್ಕೆಚ್‌ ಹಾಕಿದ್ದ ಪತ್ನಿ, ಪುತ್ರಿ!

    ಬೆಂಗಳೂರು: ನಿವೃತ್ತ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್‌ (Om Prakash) ಹತ್ಯೆಗೆ ಪತ್ನಿ ಪಲ್ಲವಿ ಮತ್ತು ಮಗಳು ಕೃತಿ ಒಂದು ವಾರದಿಂದ ಪ್ಲ್ಯಾನ್‌ ಮಾಡಿದ ಸ್ಫೋಟಕ ವಿಚಾರ ಈಗ ಬೆಳಕಿಗೆ ಬಂದಿದೆ.

    ಓಂ ಪ್ರಕಾಶ್‌ ಒಂದಷ್ಟು ದಿನ ಬೇರೆ ಕಡೆ ಇದ್ದರು. ನಂತರ ಬಲವಂತವಾಗಿ ಅವರನ್ನು ಮನೆಗೆ ಕರೆದುಕೊಂಡು ಬರಲಾಗಿತ್ತು. ಮನೆಗೆ ಕರೆದುಕೊಂಡು ಬಂದ ನಂತರವೂ ಗಲಾಟೆ ನಡೆದಿತ್ತು. ಗಲಾಟೆ ಜೋರಾದ ಕಾರಣ ಓಂ ಪ್ರಕಾಶ್‌ ಅವರು ಸಹೋದರಿ ಸರಿತಾ ಮನೆಗೆ ತಂದೆ ಹೋಗಿದ್ದರು. ಶುಕ್ರವಾರ ಪುತ್ರಿ ಕೃತಿ ಸರಿತಾ ಅವರ ಮನೆಗೆ ಹೋಗಿ ಪೀಡಿಸಿ ಕರೆ ತಂದಿದ್ದಳು.

    ಮನೆಗೆ ಕರೆ ತಂದ ಬಳಿಕ ಮತ್ತೆ ಗಲಾಟೆ ನಡೆದಿದೆ. ಗಲಾಟೆ ನಡೆಯುತ್ತಿದ್ದಂತೆ ಈ ಮನುಷ್ಯನನ್ನು ಹೇಗಾದರೂ ಮಾಡಿ ಮುಗಿಸಿಬಿಡಬೇಕು ಎಂದು ಪ್ಲ್ಯಾನ್‌ ಮಾಡಿದ್ದಾರೆ. ಈ ಪ್ಲ್ಯಾನ್‌ನಂತೆ ಭಾನುವಾರ ಮಧ್ಯಾಹ್ನ ಮತ್ತೆ ಗಲಾಟೆ ಮಾಡಿದ್ದಾರೆ.

    ಗಲಾಟೆಯ ಬಳಿಕ ಓಂ ಪ್ರಕಾಶ್‌ ಅವರು ಊಟಕ್ಕೆ ಎರಡು ಮೀನು ತರಿಸಿದ್ದರು. ಮಧ್ಯಾಹ್ನ ಮೀನಿನ ಊಟ ಮಾಡುತ್ತಿದ್ದಾಗ ಪಲ್ಲವಿ (Pallavi) ಮತ್ತು ಕೃತಿ ದಾಳಿ ನಡೆಸಿ ಓಂ ಪ್ರಕಾಶ್‌ ಅವರನ್ನು ಹತ್ಯೆ ಮಾಡಿರುವ ವಿಚಾರ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಓಂ ಪ್ರಕಾಶ್ ಹತ್ಯೆ ಕೇಸ್‌ – ಸ್ಕಿಜೋಫ್ರೇನಿಯಾದಿಂದ ಬಳಲುತ್ತಿದ್ದಾರಾ ಪತ್ನಿ ಪಲ್ಲವಿ?

     

    ಕೊಲೆ ಹೇಗಾಯ್ತು?
    ಹೆಚ್‌ಎಸ್‌ಆರ್‌ ಲೇಔಟ್‌ನಲ್ಲಿರುವ (ಹೊಸೂರು ಸರ್ಜಾಪುರ ಲೇಔಟ್‌) ನಿವಾಸದಲ್ಲಿ ಮಧ್ಯಾಹ್ನ ಊಟಕ್ಕೆ ಓಂ ಪ್ರಕಾಶ್‌ ಎರಡು ಮೀನು ತರಿಸಿಕೊಂಡಿದ್ದರು. ಡೈನಿಂಗ್‌ ಟೇಬಲ್‌ನಲ್ಲಿ ಊಟ ಮಾಡುತ್ತಿದ್ದಾಗ ಜಗಳ ನಡೆದಿದೆ.

    ಜಗಳ ವಿಕೋಪಕ್ಕೆ ಹೋದಾಗ ಕಣ್ಣಿಗೆ ಖಾರದ ಪುಡಿ ಹಾಕಿ ಕೊಲೆ ಮಾಡಿದ್ದಾರೆ. ಕೊಲೆ (Murder)‌ ಮಾಡಿದ ನಂತರ ಮೇಲಿನ ಮಹಡಿಯ ಕೋಣೆಗಳಿಗೆ ಹೋಗಿದ್ದ ತಾಯಿ, ಮಗಳು ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾರೆ.

    ಪೊಲೀಸರು (Police) ಮೊದಲು ಕೊಲೆಯಾದ ಜಾಗಕ್ಕೆ ಬಂದಾಗ ಕೃತಿ ರಂಪಾಟ ಮಾಡಿದ್ದಾಳೆ. ಪೊಲೀಸರು ಬಂದಾಗ ಬಾಗಿಲು ತೆಗೆಯದೇ ಲಾಕ್‌ ಮಾಡಿದ್ದಳು. ಕೊಲೆ ಮಾಡಿದವರು ಯಾರು ಎಂದು ಪ್ರಶ್ನೆ ಮಾಡಿದಾಗ ಪತ್ನಿ ಪಲ್ಲವಿ ನಾನೇ ಕೊಲೆ ಮಾಡಿದ್ದೇನೆ ಎಂದು ಹೇಳಿದ್ದಾಳೆ. ಮನೆಯ ಮೇಲಿದ್ದ ಕೃತಿ ಹೊರಗಡೆ ಬಾರದೇ ಇದ್ದಾಗ ಪೊಲೀಸರು ಬಾಗಿಲು ಒಡೆದು ಆಕೆಯನ್ನು ವಶಕ್ಕೆ ಪಡೆದಿದ್ದಾರೆ.

    ಕ್ರೈಂ ಸೀನ್ ಪರಿಶೀಲನೆ ವೇಳೆ ಊಟದ ತಟ್ಟೆ ಟೇಬಲ್ ಬಳಿ ಪತ್ತೆಯಾಗಿದ್ದು ಡೈನಿಂಗ್ ಹಾಲ್‌ನಲ್ಲಿ ರಕ್ತಸಿಕ್ತವಾಗಿ ಓಂ ಪ್ರಕಾಶ್ ಅವರ ಶವ ಪತ್ತೆಯಾಗಿದೆ. ಖಾರದಪುಡಿ ಎರಚಿ ಕೊಲೆ ಮಾಡಿರುವ ಕುರುಹುಗಳು ಪತ್ತೆಯಾಗಿವೆ. ಕೇವಲ ಚಾಕು ಅಷ್ಟೇ ಅಲ್ಲದೇ ಬಿಯರ್ ಬಾಟಲ್‌ನಿಂದ ಚುಚ್ಚಿರುವ ಸಾಧ್ಯತೆಯಿದೆ. ಯಾಕೆಂದರೆ ಓಂ ಪ್ರಕಾಶ್ ಮೃತದೇಹದ ಪಕ್ಕದಲಲ್ಲೇ ಒಡೆದ ಬಿಯರ್ ಬಾಟಲ್ ಕೂಡ ಪತ್ತೆಯಾಗಿದೆ.

  • ನಿವೃತ್ತ ಡಿಜಿಪಿ ಕೊಲೆ ಕೇಸ್‌ – ಆರೋಪಿ ಪತ್ನಿಗೆ 14 ದಿನ ನ್ಯಾಯಾಂಗ ಬಂಧನ

    ನಿವೃತ್ತ ಡಿಜಿಪಿ ಕೊಲೆ ಕೇಸ್‌ – ಆರೋಪಿ ಪತ್ನಿಗೆ 14 ದಿನ ನ್ಯಾಯಾಂಗ ಬಂಧನ

    – ಪರಪ್ಪನ ಅಗ್ರಹಾರ ಜೈಲಿಗೆ ಆರೋಪಿ ಕರೆದೊಯ್ದ ಪೊಲೀಸರು

    ಬೆಂಗಳೂರು: ರಾಜ್ಯದ ನಿವೃತ್ತ ಡಿಜಿಪಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಪಲ್ಲವಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್‌ ಆದೇಶ ಹೊರಡಿಸಿದೆ.

    ಕೊಲೆ ಆರೋಪಿ ಪಲ್ಲವಿ ಅವರನ್ನು ಸೋಮವಾರ ನ್ಯಾಯಧೀಶರ ಮುಂದೆ ಪೊಲೀಸರು ಹಾಜರುಪಡಿಸಿದ್ದರು. ಜರ್ಡ್ಜ್ ಜಿ.ಎ.ಲತಾದೇವಿ ಅವರು ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದ್ದಾರೆ.

    ಮೇ 3ರ ವರೆಗೆ ಕೊಲೆ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆರೋಪಿ ಪಲ್ಲವಿ ಅವರನ್ನು ಪರಪ್ಪನ ಅಗ್ರಹಾರ ಜೈಲಿನ ಕಡೆಗೆ ಪೊಲೀಸರು ಕರೆದೊಯ್ದಿದ್ದಾರೆ.

  • ಓಂ ಪ್ರಕಾಶ್ ಹತ್ಯೆ ಬಗ್ಗೆ ಸಮಗ್ರ ತನಿಖೆ: ಪರಮೇಶ್ವರ್

    ಓಂ ಪ್ರಕಾಶ್ ಹತ್ಯೆ ಬಗ್ಗೆ ಸಮಗ್ರ ತನಿಖೆ: ಪರಮೇಶ್ವರ್

    – ಜಾತಿಗಣತಿ: ಬಿಜೆಪಿಯವರ ಆರೋಪಗಳ ಬಗ್ಗೆ ಕ್ಯಾಬಿನೆಟ್‌ನಲ್ಲಿ ಚರ್ಚೆ ಎಂದ ಗೃಹ ಸಚಿವ

    ಬೆಂಗಳೂರು: ನಿವೃತ್ತ ಡಿಜಿಪಿ ಓಂ ಪ್ರಕಾಶ್ (Om Prakash) ಹತ್ಯೆ ಪ್ರಕರಣದ ಸಮಗ್ರ ತನಿಖೆ ಆಗುವವರೆಗೂ ಯಾವುದನ್ನೂ ಹೇಳಲು ಆಗುವುದಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್‌ (G.Parameshwar) ತಿಳಿಸಿದರು.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿವೃತ್ತ ಡಿಜಿಪಿ ಓಂ ಪ್ರಕಾಶ್‌ ಹತ್ಯೆ ಪ್ರಕರಣ ತನಿಖೆ ನಡೆಸಲಾಗುತ್ತಿದೆ. ತನಿಖೆಯಲ್ಲಿ ಏನೆಲ್ಲ ಮಾಹಿತಿ ಸಿಗುತ್ತದೆ ಎಂಬುದನ್ನು ನೋಡಬೇಕಿದೆ. 2025 ರಲ್ಲಿ ನಾನು ಗೃಹ ಸಚಿವನಾಗಿದ್ದ ವೇಳೆ ಓಂ ಪ್ರಕಾಶ್ ಅವರು ಡಿಜಿಪಿಯಾಗಿ ಕೆಲಸ ಮಾಡಿದ್ದರು. ಒಳ್ಳೆಯ ಅಧಿಕಾರಿ, ಒಳ್ಳೆಯ ವ್ಯಕ್ತಿ. ಈ ರೀತಿಯಾಗಬಾರದಿತ್ತು ಎಂದು ವಿಷಾದ ವ್ಯಕ್ತಪಡಿಸಿದರು. ಇದನ್ನೂ ಓದಿ: ಮೀನಿನ ಊಟ ಮಾಡುತ್ತಿರುವಾಗಲೇ ಕಣ್ಣಿಗೆ ಖಾರದ ಪುಡಿ ಹಾಕಿ ಕೊಲೆ!

    ಪ್ರಕರಣದ ತನಿಖೆಯಾಗುವವರೆಗೂ ಘಟನೆಗೆ ಇದೇ ಕಾರಣ ಎಂದು ಹೇಳಲು ಆಗುವುದಿಲ್ಲ. ನಿರ್ದಿಷ್ಟವಾಗಿ ಹೇಳಲು ಬರುವುದಿಲ್ಲ. ಕೌಟುಂಬಿಕ ಕಾರಣದ ಬಗ್ಗೆ ಹಿಂದೆ ದೂರು ಕೊಟ್ಟಿರುವುದನ್ನು ತನಿಖೆಯಲ್ಲಿ ಪರಿಶೀಲಿಸುತ್ತಾರೆ ಎಂದರು.

    ಎಲ್ಲವನ್ನು ಸಮಗ್ರವಾಗಿ ತನಿಖೆ ಮಾಡುವವರೆಗೂ ಯಾವುದನ್ನು ಹೇಳಲು ಆಗುವುದಿಲ್ಲ‌. ಓಂ ಪ್ರಕಾಶ್ ಅವರ ಪತ್ನಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ಪತ್ನಿಗೆ ಕಾಯಿಲೆ ಇತ್ತು ಎಂಬುದನ್ನು ಈಗಲೇ ಹೇಳಲಾಗುವುದಿಲ್ಲ‌ ಎಂದು ಹೇಳಿದರು. ಇದನ್ನೂ ಓದಿ: ಓಂ ಪ್ರಕಾಶ್ ಸಾವಿಗೆ ಉತ್ತರ ಕನ್ನಡದಲ್ಲಿದ್ದ ಆಸ್ತಿಯ ಕಲಹ ಕಾರಣವಾಯ್ತೇ?

    ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಗುಂಡಿನ ದಾಳಿ ಪ್ರಕರಣದ ಕುರಿತು ಪ್ರತಿಕ್ರಿಯಿಸಿ, ದಾಳಿಗೆ ಯಾವ ಶಸ್ತ್ರವನ್ನು ಬಳಸಿದ್ದರು? ಅದಕ್ಕೆ ಏನಾದರು ಕುರುಹು ಸಿಗುತ್ತದೆಯೇ ಎಂಬುದನ್ನು ಪರಿಶೀಲಿಸುತ್ತಿದ್ದಾರೆ. ಗಂಭೀರವಾಗಿ ತನಿಖೆ ನಡೆಸುವಂತೆ ಸೂಚಿಸಿದ್ದೇನೆ. ಇಂತಹ ಘಟನೆಗಳನ್ನು ನಿಯಂತ್ರಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

    ಜಾತಿಗಣತಿ ವರದಿ ಮೂಲಪ್ರತಿ ನಾಪತ್ತೆ ಬಗ್ಗೆ ಬಿಜೆಪಿಯವರ ಆರೋಪದ ಕುರಿತು ಪ್ರತಿಕ್ರಿಯಿಸಿ, ಬಿಜೆಪಿಯವರು ಎಲ್ಲ ವಿಷಯದಲ್ಲಿ ಆರೋಪಗಳನ್ನು ಮಾಡುತ್ತಾರೆ. ಸರ್ಕಾರದ ಬಗ್ಗೆ ಸಕಾರಾತ್ಮಕ ಟೀಕೆಗಳನ್ನು ಮಾಡುವಂತೆ ಹೇಳುತ್ತೇವೆ. ಆದರೆ, ಅನವಶ್ಯಕ ಆರೋಪಗಳನ್ನು ಮಾಡುವುದರಿಂದ ಪ್ರಯೋಜನವಿಲ್ಲ. ಮೂಲ ಪ್ರತಿ ಇಲ್ಲದೇ ವರದಿ ಸಿದ್ಧಪಡಿಸಲು ಹೇಗೆ ಸಾಧ್ಯ. ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡುವಾಗ ವಿಪಕ್ಷದವರ ಆರೋಪಗಳನ್ನು ಗಮನಿಸುತ್ತೇವೆ. ಗಂಭೀರವಾದ ಆರೋಪಗಳಾಗಿರುವುದರಿಂದ ನಾವು ಚರ್ಚೆ ಮಾಡುತ್ತೇವೆ‌ ಎಂದರು‌.

    ಹಿಂದುಳಿದ ಸಮುದಾಯಗಳಿಗೆ ನ್ಯಾಯ ಒದಗಿಸಬೇಕು ಎಂಬ ನಿಟ್ಟಿನಲ್ಲಿ ಈವರೆಗೆ ಹತ್ತು ಸಮಿತಿಗಳಾಗಿವೆ. ಕೆಲವು ಸಮಿತಿಗಳು ಸಮೀಕ್ಷೆ ಮಾಡಿವೆ. ಕೆಲವು ಸ್ಯಾಂಪಲ್ ಡೇಟಾ ಸಂಗ್ರಹಿಸಿ ವರದಿ ಮಾಡಿದ್ದಾರೆ‌. ಇದೇ ಮೊದಲನೇ ಬಾರಿಗೆ ಸಂಪೂರ್ಣ ಡೇಟಾ ಸಂಗ್ರಹಿಸಿ ವರದಿ ನೀಡಿದ್ದಾರೆ. ಇದಕ್ಕೆ ಹೆಚ್ಚು ಮಹತ್ವ ಬರುತ್ತದೆಯೇ ವಿನಃ, ಬೇರೆ ಯಾವುದಕ್ಕೂ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಒಂದು ವಾರದಿಂದ ಬೆದರಿಕೆ – ಪುತ್ರನಿಂದ ದೂರು, ಓಂ ಪ್ರಕಾಶ್‌ ಪತ್ನಿ ಅರೆಸ್ಟ್‌

    ನಾವು ಮೂಲವಾಗಿ ನೋಡಬೇಕಿರುವುದು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿ ವರದಿ ಕೊಡಬೇಕು ಎನ್ನುವುದು. ಆ ದೃಷ್ಟಿನಲ್ಲಿ ಸ್ವಾಭಾವಿಕವಾಗಿ ಜನಗಣತಿಯು ಆಗಬೇಕಾಗುತ್ತದೆ. ಸಮುದಾಯಗಳು ಹಿಂದುಳಿದಿದ್ದಾವೆಯೇ ಅಥವಾ ಮುಂದುವರಿದಿವೆಯೇ ಎಂಬುದನ್ನು ಅಧ್ಯಯನ ಮಾಡಿ ಹೇಳಬೇಕಾದರೆ, ಆ ಜಾತಿಯ ಸಂಖ್ಯೆಗಳನ್ನು ನೋಡಬೇಕಾಗುತ್ತದೆ. ಆ ಆಧಾರದ ಮೇಲೆ ವಿಶ್ಲೇಷಣೆಗಳಾಗುತ್ತಿವೆ. ಕೆಲವರು ಸರಿ ಇದೆ ಎನ್ನುತ್ತಾರೆ. ಕೆಲವರು ಸರಿ ಇಲ್ಲ ಎನ್ನುತ್ತಾರೆ. ಚರ್ಚೆ, ವಿಶ್ಲೇಷಣೆ, ತಪ್ಪು-ಒಪ್ಪುಗಳನ್ನು ಅಧ್ಯಯನ ಮಾಡಿ ಆನಂತರ ಸರ್ಕಾರ ಅಂತಿಮ ತೀರ್ಮಾನಕ್ಕೆ ಬರಬೇಕಾಗುತ್ತದೆ. ಆ ಪ್ರಕ್ರಿಯೆ ಪ್ರಾರಂಭವಾಗಿದೆ. ಕ್ಯಾಬಿನೆಟ್‌ಗೆ ತಂದು ಚರ್ಚೆಯಾಗಿದೆ. ಸಂಪೂರ್ಣವಾಗಿ ಚರ್ಚೆಯಾಗಿಲ್ಲ ಎಂಬ ಕಾರಣದಿಂದ ಮುಂದಕ್ಕೆ ಹಾಕಲಾಗಿದೆ. ಮುಂದೆ ಮತ್ತೊಂದು ದಿನ ಚರ್ಚೆ ಮಾಡುತ್ತೇವೆ. ಬಹಳಷ್ಟು ಮಂತ್ರಿಗಳು ತಮ್ಮ ಸಮುದಾಯಗಳ ಬಗ್ಗೆ ಮಾತನಾಡಿದ್ದಾರೆ. ಅದನ್ನು ಗಮನದಲ್ಲಿಟ್ಟು ಸರ್ಕಾರ ಅಂತಿಮವಾಗಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಹೇಳಿದರು.

  • ಮೀನಿನ ಊಟ ಮಾಡುತ್ತಿರುವಾಗಲೇ ಕಣ್ಣಿಗೆ ಖಾರದ ಪುಡಿ ಹಾಕಿ ಕೊಲೆ!

    ಮೀನಿನ ಊಟ ಮಾಡುತ್ತಿರುವಾಗಲೇ ಕಣ್ಣಿಗೆ ಖಾರದ ಪುಡಿ ಹಾಕಿ ಕೊಲೆ!

    ಬೆಂಗಳೂರು: ನಿವೃತ್ತ ಪೊಲೀಸ್‌ ಮಹಾನಿರ್ದೇಶಕ ಓಂ ಪ್ರಕಾಶ್‌ (Om Prakash) ಮೀನಿನ ಊಟ ಮಾಡುತ್ತಿದ್ದಾಗಲೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

    ಹೌದು. ಹೆಚ್‌ಎಸ್‌ಆರ್‌ ಲೇಔಟ್‌ನಲ್ಲಿರುವ (ಹೊಸೂರು ಸರ್ಜಾಪುರ ಲೇಔಟ್‌) ನಿವಾಸದಲ್ಲಿ ಮಧ್ಯಾಹ್ನ ಊಟಕ್ಕೆ ಎರಡು ಮೀನು ತರಿಸಿಕೊಂಡಿದ್ದರು. ಡೈನಿಂಗ್‌ ಟೇಬಲ್‌ನಲ್ಲಿ ಊಟ ಮಾಡುತ್ತಿದ್ದಾಗ ಜಗಳ ನಡೆದಿದೆ.

    ಜಗಳ ವಿಕೋಪಕ್ಕೆ ಹೋದಾಗ ಕಣ್ಣಿಗೆ ಖಾರದ ಪುಡಿ ಹಾಕಿ ಕೊಲೆ ಮಾಡಿದ್ದಾರೆ. ಕೊಲೆ (Murder)‌ ಮಾಡಿದ ನಂತರ ಮೇಲಿನ ಮಹಡಿಯ ಕೋಣೆಗಳಿಗೆ ಹೋಗಿದ್ದ ತಾಯಿ, ಮಗಳು ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾರೆ.

    ಪೊಲೀಸರು (Police) ಮೊದಲು ಕೊಲೆಯಾದ ಜಾಗಕ್ಕೆ ಬಂದಾಗ ಕೃತಿ ರಂಪಾಟ ಮಾಡಿದ್ದಾಳೆ. ಪೊಲೀಸರು ಬಂದಾಗ ಬಾಗಿಲು ತೆಗೆಯದೇ ಲಾಕ್‌ ಮಾಡಿದ್ದಳು. ಕೊಲೆ ಮಾಡಿದವರು ಯಾರು ಎಂದು ಪ್ರಶ್ನೆ ಮಾಡಿದಾಗ ಪತ್ನಿ ಪಲ್ಲವಿ ನಾನೇ ಕೊಲೆ ಮಾಡಿದ್ದೇನೆ ಎಂದು ಹೇಳಿದ್ದಾಳೆ. ಮನೆಯ ಮೇಲಿದ್ದ ಕೃತಿ ಹೊರಗಡೆ ಬಾರದೇ ಇದ್ದಾಗ ಪೊಲೀಸರು ಬಾಗಿಲು ಒಡೆದು ಆಕೆಯನ್ನು ವಶಕ್ಕೆ ಪಡೆದಿದ್ದಾರೆ.

     

    ಕ್ರೈಂ ಸೀನ್ ಪರಿಶೀಲನೆ ವೇಳೆ ಊಟದ ತಟ್ಟೆ ಟೇಬಲ್ ಬಳಿ ಪತ್ತೆಯಾಗಿದ್ದು ಡೈನಿಂಗ್ ಹಾಲ್‌ನಲ್ಲಿ ರಕ್ತಸಿಕ್ತವಾಗಿ ಓಂ ಪ್ರಕಾಶ್ ಅವರ ಶವ ಪತ್ತೆಯಾಗಿದೆ. ಖಾರದಪುಡಿ ಎರಚಿ ಕೊಲೆ ಮಾಡಿರುವ ಕುರುಹುಗಳು ಪತ್ತೆಯಾಗಿವೆ. ಕೇವಲ ಚಾಕು ಅಷ್ಟೇ ಅಲ್ಲದೇ ಬಿಯರ್ ಬಾಟಲ್‌ನಿಂದ ಚುಚ್ಚಿರುವ ಸಾಧ್ಯತೆಯಿದೆ. ಯಾಕೆಂದರೆ ಓಂ ಪ್ರಕಾಶ್ ಮೃತದೇಹದ ಪಕ್ಕದಲಲ್ಲೇ ಒಡೆದ ಬಿಯರ್ ಬಾಟಲ್ ಕೂಡ ಪತ್ತೆಯಾಗಿದೆ.

  • ಓಂ ಪ್ರಕಾಶ್ ಸಾವಿಗೆ ಉತ್ತರ ಕನ್ನಡದಲ್ಲಿದ್ದ ಆಸ್ತಿಯ ಕಲಹ ಕಾರಣವಾಯ್ತೇ?

    ಓಂ ಪ್ರಕಾಶ್ ಸಾವಿಗೆ ಉತ್ತರ ಕನ್ನಡದಲ್ಲಿದ್ದ ಆಸ್ತಿಯ ಕಲಹ ಕಾರಣವಾಯ್ತೇ?

    ಕಾರವಾರ: ನಿವೃತ್ತ ಡಿಜಿಪಿ ಓಂ ಪ್ರಕಾಶ್ (Om Prakash) ಬರ್ಬರ ಹತ್ಯೆ ಪ್ರಕರಣ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಓಂ ಪ್ರಕಾಶ್ ಸಾವಿಗೆ ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ಮಾಡಿದ ಆಸ್ತಿಯೂ ಕಾರಣವಾಯ್ತ ಎಂಬ ಅನುಮಾನ ಇದೀಗ ದಟ್ಟವಾಗಿದೆ.

    ಓಂ ಪ್ರಕಾಶ್ ಅವರು 1996ರಲ್ಲಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಇದಲ್ಲದೇ ಇವರ ಸಹೋದರಿ ಜೋಯಿಡಾದ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಹಿಂದಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಇಲ್ಲಿನ ಪರಿಸರಕ್ಕೆ ಮನಸೋತಿದ್ದ ಅವರು 2011-12ರ ನಡುವೆ ಸಾಮಜೋಯಿಡಾದಲ್ಲಿ 2 ಎಕ್ರೆ 17 ಗುಂಟೆ ಜಮೀನು ಖರೀದಿಸಿದ್ದರು. ಇದನ್ನೂ ಓದಿ: ಒಂದು ವಾರದಿಂದ ಬೆದರಿಕೆ – ಪುತ್ರನಿಂದ ದೂರು, ಓಂ ಪ್ರಕಾಶ್‌ ಪತ್ನಿ ಅರೆಸ್ಟ್‌

    ಜೊತೆಗೆ ಜೋಯಿಡಾ (Joida) ತಾಲೂಕಿನ ಗಣೇಶ ಗುಡಿಯ ಬಾಡಗುಂದ (Badagunda) ಗ್ರಾಮದಲ್ಲಿ 17 ಎಕ್ರೆ ಜಮೀನು ಖರೀದಿ ಮಾಡಿದ್ದು, ಈ 2 ಜಮೀನನ್ನು ಮಗ ಕಾರ್ತೀಕೇಶ್ ಹೆಸರಲ್ಲಿ ನೋಂದಣಿ ಮಾಡಿಸಿದ್ದರು. ಗಣೇಶ ಗುಡಿಯ ಬಾಡಗುಂದ ಗ್ರಾಮದ 17 ಎಕ್ರೆಯಲ್ಲಿ 10 ಎಕ್ರೆ ಬೇರೆಯವರ ಹೆಸರಲ್ಲಿ ಇಡಲಾಗಿತ್ತು. ಇದನ್ನೂ ಓದಿ: ಪತಿಗೆ ಉಗ್ರರ ಸಂಪರ್ಕ ಇದೆ, ನನ್ನ ಮೇಲೆ ವಿಷಪ್ರಾಶನ ಮಾಡಲಾಗಿದೆ: ಓಂ ಪ್ರಕಾಶ್‌ ಪತ್ನಿ

    ಸಾಮಜೋಯಿಡಾದಲ್ಲಿ ಗಂಧ, ಸಾಗುವಾನಿ ಸೇರಿದಂತೆ ವಾಣಿಜ್ಯ ಬೆಳೆಯನ್ನು ಬೆಳೆದಿದ್ದು, ಇಲ್ಲಿಯೇ ಗೆಸ್ಟ್ ಹೌಸ್ ನಿರ್ಮಿಸಿದ್ದರು. ಗಣೇಶ ಗುಡಿಯ ಬಾಡಗುಂದ ಗ್ರಾಮದಲ್ಲಿದ್ದ 5 ಎಕ್ರೆ ಜಮೀನನ್ನು ರಿವರ್ ರಾಫ್ಟಿಂಗ್ ಮಾಡಲು ಲೀಸ್‌ಗೆ ನೀಡಿದ್ದರು. ಉಳಿದ 10 ಎಕ್ರೆ ಜಮೀನನ್ನು ಬೇನಾಮಿ ಇಟ್ಟಿದ್ದು, ಈ ಜಮೀನನ್ನು ತನ್ನ ಸಹೋದರಿಯ ಹೆಸರಿಗೆ ಮಾಡಲು ಸಿದ್ಧರಾಗಿದ್ದರು. ಈ ವಿಚಾರಕ್ಕೆ ಪತ್ನಿ ಹಾಗೂ ಮಗಳ ಮಧ್ಯೆ ಜಗಳ ನಡೆಯುತ್ತಿತ್ತು ಎನ್ನಲಾಗುತ್ತಿದೆ. ಇದನ್ನೂ ಓದಿ: ಕೇವಿಯರ್ ಡಿಸ್ಟ್ರಿಬ್ಯೂಷನ್‌ನಲ್ಲಿ ವಿಶ್ವದಲ್ಲೇ ಮುಂಚೂಣಿ – ರಿಕ್ಕಿ ರೈ ಆಸ್ತಿ ಎಷ್ಟಿದೆ?

    ಮನೆಯಲ್ಲಿ ಕಿತ್ತಾಟ ಜಾಸ್ತಿಯಾದಾಗ ಜೋಯಿಡಾದ ಗೆಸ್ಟ್ ಹೌಸ್‌ಗೆ ಬಂದು ಇಲ್ಲಿನ ಗೆಳೆಯರು ಜೊತೆ ಸಮಯ ಕಳೆಯುತ್ತಿದ್ದರು. ಓಂ ಪ್ರಕಾಶ್ ಅವರು ಬಹುತೇಕ ಎಲ್ಲೇ ಹೋದರೂ ಪತ್ನಿಯನ್ನು ಬಿಟ್ಟು ಬರುತಿದ್ದರು. ಅಷ್ಟೇ ಅಲ್ಲದೇ ಅವರು ಮಾನಸಿಕವಾಗಿ ನೊಂದಿದ್ದರು ಬಗ್ಗೆ ಅವರ ಸಹವರ್ತಿಗಳು ಹೇಳಿದ್ದಾರೆ.

  • ಒಂದು ವಾರದಿಂದ ಬೆದರಿಕೆ  – ಪುತ್ರನಿಂದ ದೂರು, ಓಂ ಪ್ರಕಾಶ್‌ ಪತ್ನಿ ಅರೆಸ್ಟ್‌

    ಒಂದು ವಾರದಿಂದ ಬೆದರಿಕೆ – ಪುತ್ರನಿಂದ ದೂರು, ಓಂ ಪ್ರಕಾಶ್‌ ಪತ್ನಿ ಅರೆಸ್ಟ್‌

    – ತಾಯಿ, ತಂಗಿಯ ವಿರುದ್ಧ ಪುತ್ರ ಕಾರ್ತಿಕೇಶ್‌ ದೂರು

    ಬೆಂಗಳೂರು: ನಿವೃತ್ತ ಪೊಲೀಸ್‌ ಮಹಾನಿರ್ದೇಶಕ ಓಂ ಪ್ರಕಾಶ್‌ (Om Prakash) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಮತ್ತು ಪುತ್ರಿಯ ಮೇಲೆ ಎಫ್‌ಐಆರ್‌ ದಾಖಲಾಗಿದೆ.

    ಪುತ್ರ ಕಾರ್ತಿಕೇಶ್‌ ನೀಡಿದ ದೂರಿನ ಮೇರೆಗೆ ತಾಯಿ ಪಲ್ಲವಿ (Pallavi), ಸಹೋದರಿ ಕೃತಿ (Kruthi) ವಿರುದ್ಧ ಹೆಚ್‌ಎಸ್‌ಆರ್‌ ಲೇಔಟ್‌ ಠಾಣೆಯಲ್ಲಿ ಬಿಎನ್‌ಎಸ್‌ ಸೆಕ್ಷನ್‌ 103(ಕೊಲೆ) 3(ಒಂದೇ ಉದ್ದೇಶಕ್ಕಾಗಿ ಒಟ್ಟಾಗಿ ಎಸಗಿದ ಅಪರಾಧ) ಅಡಿ ಪ್ರಕರಣ ದಾಖಲಾಗಿದೆ.  ಎಫ್‌ಐಆರ್‌ ದಾಖಲಾದ ಬೆನ್ನಲ್ಲೇ ಪತ್ನಿ ಪಲ್ಲವಿ ಮತ್ತು ಕೃತಿಯನ್ನು  ಪೊಲೀಸರು ಬಂಧಿಸಿದ್ದಾರೆ.

    ದೂರಿನಲ್ಲಿ ಏನಿದೆ?
    ಕಳೆದ ಒಂದು ವಾರದಿಂದ ತಾಯಿ ಪಲ್ಲವಿ ಕೊಲೆ ಬೆದರಿಕೆ ಹಾಕುತ್ತಿದ್ದರು. ಕೊಲೆ ಬೆದರಿಕೆ ಹಾಕುತ್ತಿದ್ದರಿಂದ ಅವರ ಸಹೋದರಿ ಸರಿತಾ ಮನೆಗೆ ತಂದೆ ಹೋಗಿದ್ದರು. ಎರಡು ದಿನಗಳ ಹಿಂದೆ ಕೃತಿ  ಸರಿತಾ ಅವರ ಮನೆಗ ಹೋಗಿ ಪೀಡಿಸಿ ಕರೆ ತಂದಿದ್ದಳು.

    ಏ.20ರ ಸಂಜೆ 5 ಗಂಟೆಯ ವೇಳೆ ನಾನು ದೊಮ್ಮಲೂರಿನಲ್ಲಿರುವ ಗಾಲ್ಫ್‌ ಅಸೋಸಿಯೇಷನ್‌ನಲ್ಲಿ ಇದ್ದಾಗ ನಮ್ಮ ಮನೆಯೆ ಪಕ್ಕದ ಮನೆಯವರು ಕರೆ ಮಾಡಿ ನಿಮ್ಮ ತಂದೆಯ ದೇಹ ಕೆಳಗಡೆ ಬಿದ್ದಿರುತ್ತದೆ ಎಂದು ತಿಳಿಸಿದರು.

    ಕೂಡಲೇ ದೊಮ್ಮಲೂರಿನಿಂದ ಹೊರಟು ಸಂಜೆ 5:45ಕ್ಕೆ ಮನೆಗೆ ಆಗಮಿಸಿದೆ. ಈ ವೇಳೆ ಸ್ಥಳದಲ್ಲಿ ಪೊಲೀಸರು ಮತ್ತು ಸಾರ್ವಜನಿಕರು ಇದ್ದರು. ತಂದೆಯ ತಲೆಯಿಂದ ರಕ್ತ ಬರುತ್ತಿತ್ತು. ದೇಹದ ಪಕ್ಕದಲ್ಲಿ ಬಾಟಲ್‌ ಮತ್ತು ಚಾಕು ಇತ್ತು. ನನ್ನ ತಾಯಿ ಪಲ್ಲವಿ ಮತ್ತು ತಂಗಿ ಕೃತಿ ಖಿನ್ನತೆಯಿಂದ ಬಳಲುತ್ತಿದ್ದು ಅವರೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು ಅವರ ವಿರುದ್ಧ ಕಾನೂ ಕ್ರಮಗಳನ್ನು ಕೈಗೊಳ್ಳಬೇಕು.

  • ಪತಿಗೆ ಉಗ್ರರ ಸಂಪರ್ಕ ಇದೆ, ನನ್ನ ಮೇಲೆ ವಿಷಪ್ರಾಶನ ಮಾಡಲಾಗಿದೆ: ಓಂ ಪ್ರಕಾಶ್‌ ಪತ್ನಿ

    ಪತಿಗೆ ಉಗ್ರರ ಸಂಪರ್ಕ ಇದೆ, ನನ್ನ ಮೇಲೆ ವಿಷಪ್ರಾಶನ ಮಾಡಲಾಗಿದೆ: ಓಂ ಪ್ರಕಾಶ್‌ ಪತ್ನಿ

    – ವಾರದ ಹಿಂದೆ ವಾಟ್ಸಪ್‌ನಲ್ಲಿ ಪಲ್ಲವಿ ಮೆಸೇಜ್‌
    – ಪತಿ ವಿರುದ್ಧ ಗ್ರೂಪಿನಲ್ಲಿ ಗಂಭೀರ ಆರೋಪ

    ಬೆಂಗಳೂರು: ಓಂ ಪ್ರಕಾಶ್‌ (Om Prakash) ಅವರಿಗೆ ಉಗ್ರರ ಸಂಪರ್ಕ ಇದ್ದು, ಅವರ ಮೇಲೆ ರಾಷ್ಟ್ರೀಯ ತನಿಖಾ ದಳ (NIA) ಕೇಸ್‌ ದಾಖಲಿಸಬೇಕು. ನಮಗೆ ಕೇಂದ್ರ ಸರ್ಕಾರದಿಂದ ಸಹಾಯ ಬೇಕಿದೆ ಎಂದು ಪತ್ನಿ ಪಲ್ಲವಿ (Pallavi) ಅವರು ಈ ಹಿಂದೆ ವಾಟ್ಸಪ್‌ನಲ್ಲಿ ಮೆಸೇಜ್‌ ಮಾಡಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ.

    ನಿವೃತ್ತ ಪೊಲೀಸ್‌ ಮಹಾನಿರ್ದೇಶಕ ಓಂ ಪ್ರಕಾಶ್ ಪತ್ನಿ ಪಲ್ಲವಿ ಒಂದು ವಾರದ ಹಿಂದಿನ ವಾಟ್ಸಪ್‌ ಚಾಟ್ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಪೊಲೀಸ್ ಆಫೀಸರ್ಸ್ ವೈಫ್ ಅಸೋಸಿಯೇಷನ್ ಗ್ರೂಪ್‌ನಲ್ಲಿ ಪತಿ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಆರೋಪ ಮಾಡಿದ ಬಳಿಕ ಆ ಗ್ರೂಪ್‌ನಿಂದ ಪಲ್ಲವಿ ಹೊರ ನಡೆದಿದ್ದರು. ಇದನ್ನೂ ಓದಿ: ಚೀನಾದಲ್ಲಿ ಬಂತು 10ಜಿ – ಜಸ್ಟ್ 1 ನಿಮಿಷದಲ್ಲಿ 2 ಗಂಟೆ ಫಿಲ್ಮ್ ಡೌನ್‌ಲೋಡ್

     

    ಪಲ್ಲವಿ ಆರೋಪ ಏನು?
    ನನ್ನ ಗಂಡನ ಡಿಜಿಪಿ ಹುದ್ದೆಯ ಕೊನೆಯ ಕೆಲವು ತಿಂಗಳುಗಳಲ್ಲಿ ಹತ್ತು ಹದಿನೈದು ದಿನಗಳಿಗೊಮ್ಮೆ ಅಧಿಕಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಎಲ್ಲಾ ಪ್ರಕರಣಗಳನ್ನು ಮಾನಸಿಕ ಅಸ್ಥಿರತೆಯ ಕಾರಣಗಳನ್ನು ನೀಡಲಾಗುತ್ತಿತ್ತು.

    ಓಂಪ್ರಕಾಶ್ ರಿವಾಲ್ವರ್ ಹೊಂದಿದ್ದು ಅದನ್ನು ತಕ್ಷಣವೇ ವಶಪಡಿಸಿಕೊಳ್ಳಬೇಕು. ನಮ್ಮ ಮೊಬೈಲ್‌ ಹ್ಯಾಕ್‌ ಆಗುವ ಮೊದಲು ಈ ಸಂದೇಶವನ್ನು ಉಳಿಸಿಕೊಳ್ಳಿ. ನನ್ನನ್ನು ಒತ್ತೆಯಾಳುವಿನಂತೆ ನೋಡಲಾಗುತ್ತಿದೆ. ನಾನು ಎಲ್ಲಿಗೆ ಹೋದರೂ ಓಂಪ್ರಕಾಶ್ ಅವರ ಏಜೆಂಟ್‌ಗಳ ಕಣ್ಗಾವಲಿನಲ್ಲಿರುತ್ತೇನೆ. ಇದನ್ನೂ ಓದಿ: ಕರುನಾಡಲ್ಲಿ ಮುಂದಿನ ಒಂದು ವಾರ ಮಳೆ ಮುನ್ಸೂಚನೆ

    ನಾನು ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸಲು ಕೇಳುತ್ತಾ ಬಂದಿದ್ದೇನೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ನನ್ನ ಮೇಲೆ ಮತ್ತು ಮಗಳ ಮೇಲೆ ವಿಷಪ್ರಾಶನ ಮಾಡಲಾಗಿದ್ದು ನಾವಿಬ್ಬರೂ ಅನಾರೋಗ್ಯದಿಂದ ಬಳಲುತ್ತಿದ್ದೇವೆ.

     

    ಓಂಪ್ರಕಾಶ್ ಗೆ ಮಸ್ತಾನ್ ಎಂಬ ಉಗ್ರನ ಸಂಪರ್ಕ ಇದ್ದು, ಪತಿ ಎನ್‌ಐಎ ಪ್ರಕರಣವನ್ನು ದಾಖಲಿಸಿಕೊಳ್ಳಬೇಕು. ಓಂ ಪ್ರಕಾಶ್‌ಗೆ ಹಣ ಬರುತ್ತಿದೆ. ರನ್ಯಾ ರಾವ್‌ಗಿಂತಲೂ ದೊಡ್ಡ ಪ್ರಕರಣ ಇದಾಗಿದ್ದು ಮುಂದೆ ನಾನು ಅಜಿತ್ ದೋವಲ್ ಅವರ ಗಮನಕ್ಕೆ ತರುತ್ತೇನೆ. ನನ್ನ ಮಗಳು ಮತ್ತು ನನಗೆ ಏನಾದರೂ ಸಂಭವಿಸಿದರೆ ಅದಕ್ಕೆ ಪತಿಯೇ ಹೊಣೆಯಾಗುತ್ತಾರೆ.

    ಈ ಗುಂಪಿನಲ್ಲಿರುವ ಅಧಿಕಾರಿಗಳು ಮತ್ತು ಇತರರು ದಯವಿಟ್ಟು ಈ ಸಂದೇಶವನ್ನು ಸಾಧ್ಯವಾದಷ್ಟು ಎಲ್ಲರಿಗೆ ಕಳುಹಿಸಿ. ನಾನು ನನ್ನ ಪತಿಯ ಬಗ್ಗೆ ಹೇಳಿದ ಎಲ್ಲಾ ವಿಚಾರಗಳು ಸರಿಯಾಗಿದೆ.

  • ನಿವೃತ್ತ ಡಿಜಿಪಿ ಬರ್ಬರ ಹತ್ಯೆ – ತಂಗಿಯರಿಗೆ ಆಸ್ತಿ ಕೊಟ್ಟಿದ್ದಕ್ಕೆ ನಡೀತಾ ಕೊಲೆ?

    ನಿವೃತ್ತ ಡಿಜಿಪಿ ಬರ್ಬರ ಹತ್ಯೆ – ತಂಗಿಯರಿಗೆ ಆಸ್ತಿ ಕೊಟ್ಟಿದ್ದಕ್ಕೆ ನಡೀತಾ ಕೊಲೆ?

    – ತಂಗಿಯರ ವಿಚಾರಕ್ಕೆ ಬರಬೇಡ ಎಂದು ಪತ್ನಿಗೆ ಎಚ್ಚರಿಕೆ ಕೊಟ್ಟಿದ್ರಾ ಓಂ ಪ್ರಕಾಶ್?

    ಬೆಂಗಳೂರು: ನಿವೃತ್ತ ಡಿಜಿಪಿ ಓಂ ಪ್ರಕಾಶ್ ಬರ್ಬರ ಹತ್ಯೆ ಪ್ರಕರಣ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ತಂಗಿಯರಿಗೆ ಆಸ್ತಿ ಕೊಟ್ಟಿದ್ದಕ್ಕೆ ಕೊಲೆ ನಡೆಯಿತೆ ಎಂಬ ಅನುಮಾನ ಮೂಡಿದೆ.

    ಓಂ ಪ್ರಕಾಶ್ ಅವರಿಗೆ ಸೇರಿದ ಎರಡು ಮನೆ ಬೆಂಗಳೂರಿನಲ್ಲಿ ಇದೆ. ಕಾವೇರಿ ಜಂಕ್ಷನ್‌ನ ಪ್ರೆಸ್ಟೀಜ್ ಅಪಾರ್ಟ್ಮೆಂಟ್‌ನಲ್ಲಿ ಫ್ಲಾಟ್ ಇದೆ. ಹೆಚ್‌ಎಸ್‌ಆರ್ ಲೇಔಟ್‌ನ ಐಪಿಎಸ್ ಕ್ವಾಟ್ರಸ್‌ನಲ್ಲಿ ಮನೆ ಇವೆ. ಮನೆಯಲ್ಲಿ ಗಲಾಟೆ ಆದಾಗ ಪ್ರೆಸ್ಟೀಜ್ ಅಪಾರ್ಟ್ಮೆಂಟ್‌ನಲ್ಲಿ ಓಂ ಪ್ರಕಾಶ್ ವಾಸ ಇರುತ್ತಿದ್ದರು.

    ದಾಂಡೇಲಿಯ ಆಸ್ತಿ ವಿಚಾರಕ್ಕೆ ಐಪಿಎಸ್ ಅಧಿಕಾರಿಯ ಹತ್ಯೆ ಆಗಿದೆಯಾ ಎಂಬ ಅನುಮಾನ ಪೊಲೀಸರಲ್ಲಿ ಮೂಡಿದೆ. ತಂಗಿಯರ ಹೆಸರಿಗೆ ಓಂ ಪ್ರಕಾಶ್ ಪ್ರಾಪರ್ಟಿ ಮಾಡಿದ್ದರು. ತಂಗಿಯರ ಹೆಸರಿಗೆ ಯಾಕೆ ಆಸ್ತಿ ಮಾಡಿದ್ದೀರಾ ಅನ್ನೋ ವಿಚಾರಕ್ಕೆ ಹಲವು ದಿನಗಳಿಂದ ಗಲಾಟೆ ನಡೆದಿತ್ತು ಎನ್ನಲಾಗಿದೆ. ತಂಗಿಯರ ವಿಚಾರ ಮಾತಾಡಬೇಡ ಎಂದು ಈ ಹಿಂದೆ ಪತ್ನಿಗೆ ಎಚ್ಚರಿಕೆ ಕೊಟ್ಟಿದ್ದರು ಎನ್ನಲಾಗಿದೆ.

    ಆಸ್ತಿ ವಿಚಾರಕ್ಕೆ ಪತ್ನಿ ಜೊತೆ ಪದೇ ಪದೆ ಜಗಳ ಆಗುತ್ತಿತ್ತಾ ಎಂಬ ಪ್ರಶ್ನೆ ಮೂಡಿದೆ. ಕೊಲೆ ಪ್ರಕರಣ ಸಂಬಂಧ ಓಂ ಪ್ರಕಾಶ್ ಪತ್ನಿ ಹಾಗೂ ಪುತ್ರಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.