Tag: ಓಂಪ್ರಕಾಶ್ ರಾವ್

  • ಓಂಪ್ರಕಾಶ್ ರಾವ್ ನಿರ್ದೇಶನದ 50ನೇ ಚಿತ್ರಕ್ಕೆ ಹಂಸಲೇಖ ಸಂಗೀತ

    ಓಂಪ್ರಕಾಶ್ ರಾವ್ ನಿರ್ದೇಶನದ 50ನೇ ಚಿತ್ರಕ್ಕೆ ಹಂಸಲೇಖ ಸಂಗೀತ

    ಕನ್ನಡ ಚಿತ್ರರಂಗದ ಲೆಜೆಂಡ್ ಸಂಗೀತ ನಿರ್ದೇಶಕ ಹಂಸಲೇಖ (Hamsalekha) ಅವರು ಓಂಪ್ರಕಾಶ್ ರಾವ್ ನಿರ್ದೇಶನದ ಫೀನಿಕ್ಸ್ ಹಾಗೂ ಗೆರಿಲ್ಲಾ ವಾರ್ (Guerilla War) ಚಿತ್ರಗಳಿಗೆ ಸಂಗೀತ ನೀಡಲಿದ್ದಾರೆ. ಇದು ಓಂಪ್ರಕಾಶ್ ರಾವ್ ನಿರ್ದೇಶನದ 49 ಹಾಗೂ 50ನೇ ಚಿತ್ರಗಳಾಗಿದೆ.

    ಕನ್ನಡ ಚಿತ್ರರಂಗದ ಸಂಗೀತ ಕ್ಷೇತ್ರಕ್ಕೆ ಹಂಸಲೇಖ ಅವರ ಕೊಡುಗೆ ಅಪಾರ. ಅವರಿಗೆ ಅವರೆ ಸಾಟಿ. ನನ್ನ ನಿರ್ದೇಶನದ ಲಾಕಪ್ ಡೆತ್, ಸಿಂಹದ ಮರಿ, AK 47, ಪಾಳೆಗಾರ ಹೀಗೆ ಒಂದಕ್ಕಿಂತ ಒಂದು ಸೂಪರ್ ಹಿಟ್ ಚಿತ್ರಗಳಿಗೆ ಸೂಪರ್ ಹಿಟ್ ಹಾಡುಗಳನ್ನು ಕೊಟ್ಟವರು ಗುರುಗಳಾದ ಹಂಸಲೇಖ ಅವರು. ಈಗ ನನ್ನ ನಿರ್ದೇಶನದ ಫೀನಿಕ್ಸ್ (Phoenix) ಹಾಗೂ ಗೆರಿಲ್ಲಾ ವಾರ್ ಚಿತ್ರಗಳಿಗೂ ಹಂಸಲೇಖ ಅವರು ಸಂಗೀತ ಸಂಯೋಜಿಸಲು ಒಪ್ಪಿಕೊಂಡಿರುವುದು ನನಗೆ ಬಹಳ ಸಂತೋಷವಾಗಿದೆ ಎಂದು ನಿರ್ದೇಶಕ ಓಂಪ್ರಕಾಶ್ ರಾವ್ (Om Prakash Ra) ತಿಳಿಸಿದ್ದಾರೆ.

    ಈ ಪೈಕಿ ಚಿತ್ರೀಕರಣ ಮುಕ್ತಾಯ ಹಂತದಲ್ಲಿರುವ ಫೀನಿಕ್ಸ್ ಚಿತ್ರವನ್ನು ಗುರು ಚಿತ್ರಾಲಯ ಲಾಂಛನದಲ್ಲಿ ತ್ರಿಶಾ ಪ್ರಕಾಶ್ ನಿರ್ಮಿಸುತ್ತಿದ್ದಾರೆ. ನಿಮಿಕಾ ರತ್ನಾಕರ್, ಭಾಸ್ಕರ್ ಶೆಟ್ಟಿ ಮುಂತಾದವರು ತಾರಾಬಳಗದಲ್ಲಿದ್ದಾರೆ.

    ಗೆರಿಲ್ಲಾ ವಾರ್ ಚಿತ್ರವನ್ನು ಎಂ.ಆರ್ ಟಾಕೀಸ್ ಲಾಂಛನದಲ್ಲಿ ನಯನ ಗೌಡ ಅವರು ನಿರ್ಮಿಸುತ್ತಿದ್ದು, ಮಂಡ್ಯ ಲೋಕಿ ನಾಯಕನಾಗಿ ಹಾಗೂ ನಿಮಿಕ ರತ್ನಾಕರ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದು ಓಂಪ್ರಕಾಶ್ ರಾವ್ ನಿರ್ದೇಶನದ 50 ನೇ ಚಿತ್ರವಾಗಿದ್ದು, ಆಗಸ್ಟ್‌ನಲ್ಲಿ ಆರಂಭವಾಗಲಿದೆ.

  • `ಚಂದ್ರಲೇಖ ರಿಟರ್ನ್ಸ್’ ಅಂತಿದ್ದಾರೆ ನಿರ್ದೇಶಕ ಓಂಪ್ರಕಾಶ್ ರಾವ್

    `ಚಂದ್ರಲೇಖ ರಿಟರ್ನ್ಸ್’ ಅಂತಿದ್ದಾರೆ ನಿರ್ದೇಶಕ ಓಂಪ್ರಕಾಶ್ ರಾವ್

    ಸ್ಯಾಂಡಲ್‌ವುಡ್‌ಗೆ ಸಾಕಷ್ಟು ಯಶಸ್ವಿ ಚಿತ್ರಗಳನ್ನ ನಿರ್ದೇಶನ ಮಾಡಿರೋ ಓಂಪ್ರಕಾಶ್ ರಾವ್  `ಚಂದ್ರಲೇಖ ರಿಟರ್ನ್ಸ್’ ಚಿತ್ರದ ಮೂಲಕ ಮತ್ತೆ ಕಂಬ್ಯಾಕ್ ಆಗಿದ್ದಾರೆ. ಈ ಹಿಂದೆ ಚಿರಂಜೀವಿ ಸರ್ಜಾ ಮತ್ತು ಶಾನ್ವಿ ನಟನೆಯ `ಚಂದ್ರಲೇಖ’ ಚಿತ್ರಕ್ಕೆ ನಿರ್ದೇಶನ ಮಾಡುವುದರ ಮೂಲಕ ಸೌಂಡ್ ಮಾಡಿದ್ದರು. ಈಗ `ಚಂದ್ರಲೇಖ ರಿಟರ್ನ್ಸ್’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.

    ಓಂಪ್ರಕಾಶ್ ರಾವ್ ಅವರ ನಿರ್ದೇಶನದ 48ನೇ ಚಿತ್ರ `ಚಂದ್ರಲೇಖ ರಿಟರ್ನ್ಸ್’ ಇದೇ ಮೇ 25 ರಂದು ಸೆಟ್ಟೇರಲಿದೆ. `ಲವ್ ಮಾಕ್ಟೇಲ್’ ಚಿತ್ರದ ಮೂಲಕ ಮನೆಮಾತಾಗಿರೋ ನಟ ಅಭಿ ಈ ಚಿತ್ರದ ನಾಯಕನಾಗಿ ನಟಿಸುತ್ತಿದ್ದಾರೆ. ಹೊಸ ಪ್ರತಿಭೆ ಭೂಮಿಕಾ ನಾಯಕಿಯಾಗಿ ಬಣ್ಣ ಹಚ್ಚಲಿದ್ದಾರೆ. ಚಿತ್ರದಲ್ಲಿ ಅನನ್ಯ ಪಂಡಿತ್, ರಂಗಾಯಣ ರಘು, ಅಚ್ಯುತಕುಮಾರ್, ಸುಧಾ ಬೆಳವಾಡಿ, ಅವಿನಾಶ್, ಚಿತ್ರಾ ಶೆಣೈ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ:ಪ್ರಣೀತಾ ಸುಭಾಷ್ ಹೊಸ ಬೇಬಿ ಬಂಪ್ ಫೋಟೋಶೂಟ್ ವೈರಲ್

    ಓಂಪ್ರಕಾಶ್ ರಾವ್ ನಿರ್ದೇಶನದಲ್ಲಿ ಮೂಡಿ ಬರಲಿರುವ ಭಿನ್ನ ಹಾರಾರ್ ಕಥೆಗೆ ಎಂ.ಎಸ್ ರಮೇಶ್ ಸಂಭಾಷಣೆ ಬರೆದಿದ್ದಾರೆ. ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನಿರ್ದೇಶವಿರಲಿದ್ದು, ರವಿವರ್ಮ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕೆ ಇರಲಿದೆ. ಓಂಪ್ರೊಡಕ್ಷನ್ ಲಾಂಛನದಲ್ಲಿ ಓಂಪ್ರಕಾಶ್ ರಾವ್ ಅವರೆ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಹಿಂದೆ `ಚಂದ್ರಲೇಖ’ ಚಿತ್ರದ ಮೂಲಕ ಸೌಂಡ್ ಮಾಡಿದ್ದ ನಿರ್ದೇಶಕ ಮತ್ತೆ `ಚಂದ್ರಲೇಖ ರಿಟರ್ನ್ಸ್’ ಸಿನಿಮಾದ ಮೂಲಕ ಕಮಾಲ್ ಮಾಡಲು ರೆಡಿಯಾಗಿದ್ದಾರೆ. ಒಟ್ನಲ್ಲಿ ಈ ಸುದ್ದಿ ಕೇಳಿ ಸಿನಿಪ್ರಿಯರು ಥ್ರಿಲ್ ಆಗಿದ್ದಾರೆ.

  • ನಟಭಯಂಕರ ಸೆಟ್‍ಗೆ ಸರ್‌ಪ್ರೈಸ್‌ ವಿಸಿಟ್ ಕೊಟ್ಟ ಯಂಗ್ ರೆಬೆಲ್ ಸ್ಟಾರ್!

    ನಟಭಯಂಕರ ಸೆಟ್‍ಗೆ ಸರ್‌ಪ್ರೈಸ್‌ ವಿಸಿಟ್ ಕೊಟ್ಟ ಯಂಗ್ ರೆಬೆಲ್ ಸ್ಟಾರ್!

    ಬೆಂಗಳೂರು: ಸದಾ ಚಿತ್ರರಂಗದ ಇತರರ ಕೆಲಸ ಕಾರ್ಯಗಳತ್ತಲೂ ಒಂದು ಕಣ್ಣಿಟ್ಟು ಬೆನ್ತಟ್ಟಿ ಪ್ರೋತ್ಸಾಹಿಸುತ್ತಿದ್ದ ಸ್ನೇಹಶೀಲ ವ್ಯಕ್ತಿತ್ವ ರೆಬೆಲ್ ಸ್ಟಾರ್ ಅಂಬರೀಶ್ ಅವರದ್ದು. ಅವರ ಪುತ್ರ ಅಭಿಷೇಕ್ ಕೂಡಾ ಅಂಥಾದ್ದೇ ಗುಣಗಳಿಂದಲೇ ಎಲ್ಲರ ಪ್ರೀತಿ ಪಾತ್ರರಾಗಿದ್ದಾರೆ. ಸ್ನೇಹಕ್ಕೆ ಸೋಲುವ ಸ್ವಭಾವದ ಅಭಿಷೇಕ್ ಇದ್ದಕ್ಕಿದ್ದಂತೆ ನಟಭಯಂಕರ ಶೂಟಿಂಗ್ ಸ್ಪಾಟಿಗೆ ಭೇಟಿ ನೀಡಿ ನಿರ್ದೇಶಕ ಕಂ ನಾಯಕ ಪ್ರಥಮ್‍ಗೆ ಸರ್‌ಪ್ರೈಸ್‌ ಕೊಟ್ಟಿದ್ದಾರೆ.

    ಅಭಿಷೇಕ್ ಈಗ ತಮ್ಮ ಬಣ್ಣದ ಬದುಕಿನ ಜೊತೆ ಜೊತೆಗೇ ಸಂಸದೆಯಾಗಿರೋ ಅಮ್ಮ ಸುಮಲತಾರ ಒಂದಷ್ಟು ಜವಾಬ್ದಾರಿಗಳನ್ನೂ ವಹಿಸಿಕೊಂಡಿದ್ದಾರೆ. ಅಮ್ಮನನ್ನು ಗೆಲ್ಲಿಸಿದ ಮಂಡ್ಯದ ಜನರಿಗಾಗಿಯೇ ಹೆಚ್ಚಿನ ಸಮಯವನ್ನು ಮೀಸಲಿಟ್ಟಿದ್ದಾರೆ. ಹೀಗೆ ಮಂಡ್ಯದತ್ತ ಹೊರಟಿದ್ದ ಅಭಿಷೇಕ್ ಆ ಅರ್ಜೆಂಟಿನ ನಡುವೆಯೂ ನಟಭಯಂಕರ ಸೆಟ್ಟಿಗೆ ಭೇಟಿ ಕೊಟ್ಟಿದ್ದಾರೆ. ಕೇವಲ ಭೇಟಿ ಕೊಟ್ಟು ಔಪಚಾರಿಕ ಮಾತುಕಥೆ ನಡೆಸಿ ಹೊರಟಿಲ್ಲ. ಬದಲಾಗಿ ಇಡೀ ಚಿತ್ರದ ಆಗು ಹೋಗುಗಳನ್ನು ತಿಳಿದುಕೊಂಡಿದ್ದಾರೆ. 4 ಗಂಟೆಗೂ ಹೆಚ್ಚು ಕಾಲ ಪ್ರಥಮ್ ಅವರ ಜೊತೆಗೇ ಇದ್ದು ಎಲ್ಲವನ್ನೂ ಗಮನಿಸಿದ್ದಾರೆ.

    ಇಷ್ಟು ಕಾಲ ಪ್ರಥಮ್ ಕಾರ್ಯವೈಖರಿಗಳನ್ನು ಗಮನಿಸಿದ ಅಭಿಷೇಕ್ ಪ್ರಥಮ್ ನಿರ್ದೇಶನದ ಶೈಲಿಯನ್ನು ಡೈಲಾಗ್ ಮತ್ತು ಆಕ್ಷನ್ ಗಳನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರಂತೆ. ಇಷ್ಟೇ ಅಲ್ಲದೇ ಒಂದಷ್ಟು ಸೀನ್‍ಗಳನ್ನು ತಾವೇ ಖುದ್ದಾಗಿ ಅಭಿ ನಿರ್ದೇಶನವನ್ನೂ ಮಾಡಿದ್ದಾರಂತೆ. ಇಷ್ಟೆಲ್ಲ ಮಾಡಿ, ಚಿತ್ರತಂಡದೊಂದಿಗೆ ಕಲೆತು ಖುಷಿ ಪಟ್ಟ ಅಭಿ ಆದಷ್ಟು ಬೇಗ ಸಿನಿಮಾ ತಮಗೆ ಸಿನಿಮಾ ತೋರಿಸುವಂತೆಯೂ ಪ್ರಥಮ್ ಅವರಿಗೆ ತಾಕೀತು ಮಾಡಿದ್ದಾರಂತೆ.

    ಹೀಗೆ ಜ್ಯೂನಿಯರ್ ರೆಬೆಲ್ ಸ್ಟಾರ್ ಅನಿರೀಕ್ಷಿತವಾಗಿ ಭೇಟಿ ನೀಡಿ ತುಂಬಾ ಸಮಯ ತಮಗಾಗಿ ಮೀಸಲಿಟ್ಟಿದ್ದರಿಂದ ಪ್ರಥಮ್ ಕೂಡಾ ಥ್ರಿಲ್ ಆಗಿದ್ದಾರೆ. ಅಭಿಷೇಕ್ ಭೇಟಿ ನೀಡಿದ ಸಂದರ್ಭದಲ್ಲಿ ನಟಭಯಂಕರ ಚಿತ್ರದ ನಾಯಕಿ ನಿಹಾರಿಕಾ ಶೆಣೈ, ಓಂಪ್ರಕಾಶ್ ರಾವ್, ಮಜಾ ಟಾಕೀಸ್ ಪವನ್ ಮತ್ತು ಉದಯ್ ಮೆಹ್ತಾ ಮುಂತಾದವರು ಉಪಸ್ಥಿತರಿದ್ದರು.

    ಈ ಹಿಂದೆ ನಟಭಯಂಕರ ಸಿನಿಮಾ ಸೆಟ್‍ಗೆ ಗೋಲ್ಡನ್ ಸ್ಟಾರ್ ಗಣೇಶ್ ಕೂಡಾ ಭೇಟಿ ನೀಡಿದ್ದರು. ಈಗ ಅಭಿಷೇಕ್ ಅಂಬರೀಷ್ ಭೇಟಿ ನೀಡಿದ್ದಾರೆ. ಅಂತೂ ಈ ಚಿತ್ರದ ಮೂಲಕ ಪ್ರಥಮ್ ನಿರ್ದೇಶಕನಾಗಿಯೂ ತಮ್ಮದೇ ಛಾಪು ಮೂಡಿಸುವತ್ತ ನಿರ್ಣಾಯಕ ಹೆಜ್ಜೆಯಿಟ್ಟಿದ್ದಾರೆ. ಇದಕ್ಕಾಗಿ ವಿಶಿಷ್ಟವಾದ ಕಥೆಯನ್ನು ಉದಯ್ ಮೆಹ್ತಾ ರಚಿಸಿದ್ದಾರೆ. ಈ ಚಿತ್ರದ ಚಿತ್ರೀಕರಣವೀಗ ಬಿಡುವಿಲ್ಲದಂತೆ ನಡೆಯುತ್ತಿದೆ.

  • ರವಿಚಂದ್ರನ್ ರೌಡಿಸಂಗೆ ಹಾರರ್ ಫ್ರೇಮ್?

    ರವಿಚಂದ್ರನ್ ರೌಡಿಸಂಗೆ ಹಾರರ್ ಫ್ರೇಮ್?

    ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ರಿಯಲ್ ಸ್ಟಾರ್ ಉಪೇಂದ್ರ ಒಂದಾಗಿದ್ದಾರೆ. ಓಂಪ್ರಕಾಶ್ ರಾವ್ ನಿರ್ದೇಶನದ ರವಿಚಂದ್ರ ಚಿತ್ರದಲ್ಲಿ ಅವರಿಬ್ಬರೂ ಒಟ್ಟಾಗಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಅದ್ಧೂರಿಯಾಗಿಯೇ ಮುಹೂರ್ತ ಸಮಾರಂಭವೂ ನಡೆದಿದೆ.

    ಕನ್ನಡದ ಮಟ್ಟಿಗೆ ಮಲ್ಟಿ ಸ್ಟಾರರ್ ಚಿತ್ರಗಳು ಅಪರೂಪ. ಈ ಹಿಂದೆ ಮುಕುಂದ ಮುರಾರಿ ಚಿತ್ರದಲ್ಲಿ ಉಪೇಂದ್ರ ಸುದೀಪ್ ಜೊತೆ ನಟಿಸಿದ್ದರಲ್ಲಾ. ಇದೀಗ ಉಪ್ಪಿ ಕ್ರೇಜಿಸ್ಟಾರ್ ಜೊತೆ ನಟಿಸಲು ಮುಂದಾಗಿದ್ದಾರೆ. ಹೀಗಿದ್ದ ಮೇಲೆ ಈ ಚಿತ್ರದ ಕಥೆಯ ಬಗ್ಗೆ, ಉಪ್ಪಿ ಮತ್ತು ರವಿಚಂದ್ರನ್ ಅವರ ಪಾತ್ರದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಮೂಡದಿರುತ್ತಾ?

    ಈ ಚಿತ್ರ ಭಯಾನಕ ಡಾನ್ ಗಳಿಬ್ಬರ ಕಥೆ ಹೊಂದಿದೆಯಂತೆ. ಉಪೇಂದ್ರ ಮತ್ತು ರವಿಚಂದ್ರನ್ ಇಬ್ಬರೂ ಡಾನ್‍ಗಳಾಗಿ ಕಾಣಿಸಿಕೊಳ್ಳಲಿದ್ದಾರೆ. ಕಥೆ ಹೀಗಿರೋವಾಗ ಇದು ಪಕ್ಕಾ ಆಕ್ಷನ್ ಸಿನಿಮಾ ಎಂಬುದರಲ್ಲಿ ಯಾವುದೇ ಸಂದೇಹಗಳಿಲ್ಲ. ಆದರೆ ನಿರ್ದೇಶಕ ಓಂಪ್ರಕಾಶ್ ರಾವ್ ಈ ಮಾಸ್ ಕಥೆಯಲ್ಲಿಯೇ ಮೈ ನಡುಗಿಸುವಂಥಾ ಹಾರರ್ ಕಥಾನಕವನ್ನೂ ಸೇರಿಸಿದ್ದಾರಂತೆ. ಅದುವೇ ಈ ಚಿತ್ರದ ಅಸಲೀ ಸ್ಪೆಷಾಲಿಟಿ!

    ಪ್ರೇಮ ಕಥಾನಕಗಳಿಗೇ ಬ್ರ್ಯಾಂಡ್ ಆಗಿರುವವರು ಕ್ರೇಜಿಸ್ಟಾರ್ ರವಿಚಂದ್ರನ್. ಇತ್ತೀಚೆಗೆ ಅದರಾಚೆಗಿನ ಪಾತ್ರಗಳಲ್ಲಿ ನಟಿಸಿದ್ದರೂ ರವಿಚಂದ್ರನ್ ಅವರಿಗೆ ಹಳೇ ಇಮೇಜು ಇದ್ದೇ ಇದೆ. ಅಂಥಾ ರವಿಮಾಮ ಈ ಚಿತ್ರದಲ್ಲಿ ಡಾನ್ ಆಗಿ ಅಬ್ಬರಿಸಲಿದ್ದಾರೆಂದ ಮೇಲೆ ಯಾರಿಗಾದರೂ ಅಚ್ಚರಿದಾಯಕ ಕೌತುಕ ಕಾಡಿಯೇ ಕಾಡುತ್ತದೆ. ಇಂಥಾ ಸೂಕ್ಷ್ಮ ವಿಚಾರಗಳ ಮೂಲಕವೇ ಪ್ರೇಕ್ಷಕರನ್ನು ಸೆಳೆಯೋ ಕಲೆ ಅರಿತುಕೊಂಡಿರುವ ನಿರ್ದೇಶಕ ಓಂಪ್ರಕಾಶ್ ರಾವ್, ಈ ಚಿತ್ರದ ಮೂಲಕ ಮತ್ತೊಂದು ಗೆಲುವಿನ ಪರ್ವಕ್ಕೆ ನಾಂದಿ ಹಾಡೋ ಉತ್ಸಾಹದಿಂದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹೊಯ್ಸಳರಿಗೆ ಜೊತೆಯಾದ ಶಾನ್ವಿ ಶ್ರೀವಾಸ್ತವ!

    ಹೊಯ್ಸಳರಿಗೆ ಜೊತೆಯಾದ ಶಾನ್ವಿ ಶ್ರೀವಾಸ್ತವ!

    ಬೆಂಗಳೂರು: ಕನ್ನಡದಲ್ಲಿ ಮತ್ತೊಮ್ಮೆ ಮಲ್ಟಿ ಸ್ಟಾರ್ ಚಿತ್ರಗಳ ಜಮಾನ ಮರುಕಳಿಸಿದೆ. ಈ ಹಿಂದೆ ಉಪೇಂದ್ರ ಮುಕುಂದ ಮುರಾರಿ ಚಿತ್ರದ ಮೂಲಕ ಕಿಚ್ಚ ಸುದೀಪ್ ಅವರಿಗೆ ಜೊತೆಯಾಗಿ ನಟಿಸಿದ್ದರು. ಇದೀಗ ಅದೇ ಉಪೇಂದ್ರ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಜೊತೆ ನಟಿಸುತ್ತಿದ್ದಾರೆ. ಓಂಪ್ರಕಾಶ್ ರಾವ್ ನಿರ್ದೇಶನ ಮಾಡಲಿರೋ ಈ ಚಿತ್ರಕ್ಕೆ ‘ಹೊಯ್ಸಳ’ ಎಂಬ ಹೆಸರಿಡಲಾಗಿದೆ.

    ಹೊಸಾ ವಿಚಾರವೆಂದರೆ, ಇದೀಗ ಈ ಹೊಯ್ಸಳರಿಗೆ ನಾಯಕಿಯರು ಸಿಕ್ಕಿದ್ದಾರೆ. ಮಾಸ್ಟರ್ ಪೀಸ್ ಖ್ಯಾತಿಯ ನಟಿ ಶಾನ್ವಿ ಶ್ರೀವಾಸ್ತವ ಮತ್ತು ಮಂಗಳೂರು ಮೂಲದ ಮಾಡೆಲಿಂಗ್ ಬೆಡಗಿ ನಮಿತಾ ರತ್ನಾಕರ್ ಈ ಚಿತ್ರಕ್ಕೆ ನಾಯಕಿಯರಾಗಿ ಸೆಲೆಕ್ಟಾಗಿದ್ದಾರೆ.

    ರವಿಚಂದ್ರನ್ ಮತ್ತು ಉಪ್ಪಿ ಕಾಂಬಿನೇಷನ್ನಿನ ಮೂಲಕ ಒಂದು ಗ್ಯಾಪಿನ ನಂತರ ಓಂಪ್ರಕಾಶ್ ರಾವ್ ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ. ಒಂದಷ್ಟು ಕಾಲದಿಂದ ಈ ಚಿತ್ರಕ್ಕೆ ನಾಯಕಿಯರ ಹುಡುಕಾಟದಲ್ಲಿದ್ದ ಓಂಪ್ರಕಾಶ್ ರಾವ್ ಕಡೆಗೂ ಆ ಆಯ್ಕೆ ನಡೆಸಿ ಈ ವಿಚಾರವನ್ನು ಬಿಟ್ಟುಕೊಟ್ಟಿದ್ದಾರೆ. ಆದರೆ ಶಾನ್ವಿ ಮತ್ತು ನಮಿತಾ ಯಾರಿಗೆ ಜೋಡಿಯಾಗಿ ನಟಿಸಲಿದ್ದಾರೆಂಬುದನ್ನು ಮಾತ್ರ ಸಸ್ಪೆನ್ಸ್ ಆಗಿಡಲಾಗಿದೆ!

    ಹೊಯ್ಸಳ ಚಿತ್ರಕ್ಕೆ ನಾಯಕಿಯರ ಆಯ್ಕೆಯ ಮೂಲಕ ತಾರಾಗಣದ ಆಯ್ಕೆ ಕಾರ್ಯವೆಲ್ಲವೂ ಸಮಾಪ್ತಿಗೊಂಡಿದೆ. ಇನ್ನೊಂದಷ್ಟು ದಿನಗಳಲ್ಲಿ ಈ ಬಗೆಗಿನ ಮಾಹಿತಿಯನ್ನು ಓಂಪ್ರಕಾಶ್ ಕೊಡಲಿದ್ದಾರಂತೆ. ಇದೇ ಆಗಸ್ಟ್ ತಿಂಗಳಲ್ಲಿ ಫೋಟೋ ಶೂಟ್ ಮುಗಿಸಿಕೊಂಡು, 20ನೇ ತಾರೀಕಿನಿಂದ ಚಿತ್ರೀಕರಣಕ್ಕೆ ಚಾಲನೆ ನೀಡಲು ಓಂಪ್ರಕಾಶ್ ರಾವ್ ನಿರ್ಧರಿಸಿದ್ದಾರಂತೆ.