Tag: ಓಂ

  • `ಭಾಷಾ’ಗಿಂತ `ಓಂ’ ಸಿನಿಮಾ ಹತ್ತು ಪಟ್ಟು ಬೆಟರ್- ಉಪ್ಪಿ ಹೊಗಳಿದ ರಜನಿಕಾಂತ್

    `ಭಾಷಾ’ಗಿಂತ `ಓಂ’ ಸಿನಿಮಾ ಹತ್ತು ಪಟ್ಟು ಬೆಟರ್- ಉಪ್ಪಿ ಹೊಗಳಿದ ರಜನಿಕಾಂತ್

    ಭಾರತದ ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಕನ್ನಡದ ಸೂಪರ್ ಸ್ಟಾರ್ ಉಪೇಂದ್ರರನ್ನ (Upendra) ಹಾಡಿ ಹೊಗಳಿದ್ದಾರೆ. ಮುಕ್ತ ವೇದಿಕೆಯಲ್ಲಿ ತಲೈವಾ ಕನ್ನಡದ ಬುದ್ಧಿವಂಥನ್ನ ಕೊಂಡಾಡಿದ್ದಾರೆ. ಈ ಘಟನೆ ನಡೆದಿದ್ದು ಕೂಲಿ (Coolie Movie) ಸಿನಿಮಾ ಪ್ರಿರಿಲೀಸ್ ಇವೆಂಟ್‌ನಲ್ಲಿ. ಚೆನೈನಲ್ಲಿ ನಡೆದ ಇವೆಂಟ್‌ನಲ್ಲಿ ಅದೇ ನೆಲದಲ್ಲೇ ಕನ್ನಡದ ಓಂ ಸಿನಿಮಾ ಕುರಿತಾಗಿ ಒಳ್ಳೆಯ ಮಾತನಾಡಿದ್ದಾರೆ. ಕಾರಣ ಕೂಲಿ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸುತ್ತಿದ್ದಾರೆ. ಪ್ರಿರಿಲೀಸ್ ಇವೆಂಟ್‌ನಲ್ಲಿ ಪಾಲ್ಗೊಂಡ ಉಪೇಂದ್ರ ಕುರಿತು ತಲೈವಾ ಹೊಗಳಿಕೆಯ ಮಾತನ್ನಾಡಿದ್ದಾರೆ.

    ನಟನೆ ನಿರ್ದೇಶನದಲ್ಲಿ ಸೈ ಅನ್ನಿಸಿಕೊಂಡ ಉಪೇಂದ್ರ ವಿಶ್ವಾದ್ಯಂತ ಛಾಪು ಮೂಡಿಸಿರುವ ಕನ್ನಡದ ಪ್ರತಿಭೆ. ವಿವಿಧ ಭಾಷೆಯಲ್ಲಿ ಉಪೇಂದ್ರ ನಟಿಸುತ್ತಾ ಬಂದಿದ್ದಾರೆ. ಇದೀಗ ಉಪೇಂದ್ರ ಜೊತೆ ಕೂಲಿ ಚಿತ್ರದಲ್ಲಿ ತೆರೆಹಂಚಿಕೊಂಡಿರುವ ರಜನಿಕಾಂತ್ ಉಪ್ಪಿ ಗುಣಗಾನ ಮಾಡಿರುವ ಮಾತುಗಳು ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದೆ. ತಾವು ನಟಿಸಿದ್ದ `ಭಾಷಾ ಸಿನಿಮಾಗಿಂತ ಉಪೇಂದ್ರ ನಿರ್ದೇಶಿಸಿದ್ದ ಸಿನಿಮಾ ಹತ್ತು ಪಟ್ಟು ಉತ್ತಮ ಸಿನಿಮಾ’ ಎಂದಿರುವ ರಜನಿಕಾಂತ್ ಮಾತು ಗಮನಾರ್ಹ. ಇದನ್ನೂ ಓದಿ: ರಾಯರ ಮಧ್ಯಾರಾಧನೆಯಲ್ಲಿ ನಟ ಜಗ್ಗೇಶ್ ಭಾಗಿ

    ಉಪೇಂದ್ರ ಕುರಿತು ರಜನಿಕಾಂತ್ ಮಾತುಗಳೇನು?
    ಭಾರತದಲ್ಲಿರುವ ಮೋಸ್ಟ್ ಇಂಟಲೆಕ್ಚುವಲ್ ಡೈರೆಕ್ಟರ್‌ಗಳಿಗೆ ಇನ್ಸಿರೇಷನ್ ಅಂದ್ರೆ ಅದು ಉಪೇಂದ್ರ, ಕನ್ನಡ ಚಿತ್ರರಂಗ ಅಷ್ಟೇ ಅಲ್ಲ ಹಿಂದಿ, ತೆಲುಗು ಮಲಯಾಳಂ, ತಮಿಳು ಎಲ್ಲರೂ ಉಪೇಂದ್ರರಿಂದ ಸಾಕಷ್ಟು ಕಲಿತಿದ್ದಾರೆ. ಉಪೇಂದ್ರ ನಟರಾಗಿ ಅಲ್ಲ ನಿರ್ದೇಶಕರಾಗಿ ಚಿತ್ರರಂಗಕ್ಕೆ ಬಂದವರು, ಕನ್ನಡದಲ್ಲಿ ಶಿವರಾಜ್‌ಕುಮಾರ್ ಆಕ್ಟ್ ಮಾಡಿದ್ದ ಓಂ ಸಿನಿಮಾವನ್ನ ಅವರೇ ನಿರ್ದೇಶನ ಮಾಡಿದ್ರು , ಈ ಸಿನಿಮಾ ಭಾಷಾ ಚಿತ್ರಕ್ಕಿಂತ ಹತ್ತುಪಟ್ಟು ಬೆಟರ್ ಸಿನಿಮಾ, ನನಗೆ ಆಕ್ಟರ್ ಉಪೇಂದ್ರಗಿಂತ ಡೈರೆಕ್ಟರ್ ಉಪೇಂದ್ರ ಇಷ್ಟ. ಈಗ ಲೋಕೇಶ್ ಕನಕರಾಜ್ ನಾನ್‌ಲೀನಿಯರ್ ಸಿನಿಮಾ ಮಾಡ್ತಿದ್ದಾರೆ, ನಾನ್‌ಲೀನಿಯರ್ ಸಿನಿಮಾಗಳನ್ನ ಆಗಲೇ ಮಾಡುತ್ತಿದ್ದವರು ಡೈರೆಕ್ಟರ್ ಉಪೆಂದ್ರ.

  • ಮಿಲನಾ ನಾಗರಾಜ್ ನಟನೆಯ ‘ಓ’ ಸಿನಿಮಾಗಾಗಿ ಹಾಡಿದ ಪುನೀತ್ ರಾಜ್ ಕುಮಾರ್

    ಮಿಲನಾ ನಾಗರಾಜ್ ನಟನೆಯ ‘ಓ’ ಸಿನಿಮಾಗಾಗಿ ಹಾಡಿದ ಪುನೀತ್ ರಾಜ್ ಕುಮಾರ್

    ವ್ ಮಾಕ್ಟೇಲ್  ಚಿತದ ನಂತರ ಮಿಲನಾ ನಾಗರಾಜ್ (Milana Nagaraj) ಹಾಗೂ ಅಮೃತಾ ಅಯ್ಯಂಗಾರ್ (Amrita Iyengar) ಒಟ್ಟಿಗೇ ನಟಿಸಿರುವ ವಿಭಿನ್ನ ಪ್ರೇಮಕಥಾಹಂದರ ಇರುವ ವಾಮಾಚಾರ ಹಾಗೂ ಹಾರರ್ ಹಿನ್ನೆಲೆಯಲ್ಲಿ ಮೂಡಿಬಂದಿರುವ  ಚಿತ್ರ ಓ (O). ಮಹೇಶ್ ಸಿ.ಅಮ್ಮಲ್ಲಿದೊಡ್ಡಿ (Mahesh Ammallidoddy) ಅವರ ಚಿತ್ರಕಥೆ ಹಾಗೂ ನಿರ್ದೇಶನವಿರುವ ಈ ಚಿತ್ರದ ಟ್ರೈಲರ್ (Trailer) ಬಿಡುಗಡೆ ಕಾರ್ಯಕ್ರಮ ವಿಜಯದಶಮಿಯ ಶುಭ ಸಂದರ್ಭದಲ್ಲಿ ನೆರವೇರಿತು. ಕಿರಣ್ ತಲಕಾಡು ಅವರು ಕಥೆ ಬರೆದು ಏಕಾಕ್ಷರ ಫಿಲಂಸ್ ಬ್ಯಾನರ್ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

    ಕೋವಿಡ್‌ಗೂ ಮುನ್ನವೇ ಪ್ರಾರಂಭವಾಗಿದ್ದ ಈ ಚಿತ್ರ ಎಲ್ಲಾ ಅಡೆತಡೆಗಳನ್ನು ದಾಟಿ ಈಗ ಬಿಡುಗಡೆಯ ಹಂತ ತಲುಪಿದೆ. ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಮಹೇಶ್ ಈವರೆಗೆ ನಾನೇನು ಹಾರರ್ ಸಿನಿಮಾಗಳನ್ನು ನೋಡಿದ್ದೇನೋ, ಅದೆಲ್ಲಕ್ಕಿಂತ ವಿಭಿನ್ನವಾಗಿರಬೇಕು ಎಂದು ಮಾಡಿದ ಚಿತ್ರ. ಒಂದು ಕುಟುಂಬದಲ್ಲಿ ಅಕ್ಕತಂಗಿಯ ಮೇಲೆ ನಡೆಯುವ ಕಥೆಯಿದು. ಓ ಎಂಬ ಪದಕ್ಕೆ ಅರ್ಥವನ್ನು ಚಿತ್ರದಲ್ಲಿ ಹೇಳಿದ್ದೇವೆ. ಅಲ್ಲದೆ ವಾಮಾಚಾರ ಮಾಡುವುದು ತಪ್ಪು ಅಂತಲೇ ತೋರಿಸಿದ್ದೇವೆ. ಈಗಾಗಲೇ ಚಿತ್ರದ ಫಸ್ಟ್ ಕಾಪಿ ಬಂದಿದ್ದು, ನ.೧೧ಕ್ಕೆ  ಬಿಡುಗಡೆಯಾಗುತ್ತಿದೆ. ನನ್ನ ಜೊತೆ ಕೆಲಸ ಮಾಡಿರುವ ರಿತೇಶ್, ಚೇತನ್ ಮೂಲಕ ನಿರ್ಮಾಪಕ ಕಿರಣ್ ಅವರು ಪರಿಚಯವಾದರು ಎಂದು ವಿವರಿಸಿದರು. ಇದನ್ನೂ ಓದಿ:ಮಣಿರತ್ನಂ ನಿರ್ದೇಶನದ ‘ಪೊನ್ನಿಯಿನ್ ಸೆಲ್ವನ್’ ಮೂರು ದಿನದ ಗಳಿಕೆ 230 ಕೋಟಿಗೂ ಅಧಿಕ

    ನಿರ್ಮಾಪಕ ಕಿರಣ್ ತಲಕಾಡು ಮಾತನಾಡುತ್ತ ನನಗೆ ಚಿಕ್ಕವನಿದ್ದಾಗಲೇ ನನಗೆ ಏಕಾಕ್ಷರ ಶೀರ್ಷಿಕೆಯಿಟ್ಟುಕೊಂಡು ಸಿನಿಮಾ ಮಾಡಬೇಕೆಂಬ ಆಸೆಯಿತ್ತು. ಸೆನ್ಸಾರ್ ಮಂಡಳಿಯವರು ಸಿನಿಮಾ ನೋಡಿ ತುಂಬಾ ಚೆನ್ನಾಗಿ ಮೂಡಿಬಂದಿದೆ ಎಂದು ಪ್ರಶಂಸಿಸಿದರು. ನಮ್ಮ ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರು ಒಂದು ಹಾಡನ್ನು ಹಾಡಿದ್ದಾರೆ. ಆ ಹಾಡಿನ ಬಿಡುಗಡೆಯನ್ನು ದೊಡ್ಡ ಇವೆಂಟ್ ಮೂಲಕ ಮಾಡಬೇಕೆಂಬ ಯೋಚನೆಯಿದೆ. ಆಡಿಯೋ ಬಿಡುಗಡೆಗೆ ನಾನು ಬರುತ್ತೇನೆ ಎಂದೂ ಪುನೀತ್ ಅವರು ಹೇಳಿದ್ದರು.ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಚಿತ್ರವನ್ನು ಜನರಿಗೆ ಹೇಗೆಲ್ಲಾ ತಲುಪಿಸಬೇಕೆಂದು ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡಿದ್ದೇವೆ ಎಂದು ಹೇಳಿದರು.

    ನಾಯಕಿ ಮಿಲನಾ ನಾಗರಾಜ್ ಮಾತನಾಡಿ ಹಬ್ಬದ ಶುಭ ದಿನದಂದು ನಮ್ಮ ಚಿತ್ರದ ಟ್ರೇಲರ್ ಬಿಡುಗಡೆಯಾಗುತ್ತಿದೆ. ಲಾಕ್‌ಡೌನ್‌ಗೂ ಮುನ್ನವೇ ಈ ಸಿನಿಮಾ ಪ್ರಾರಂಭವಾಗಿತ್ತು. ಬೇರೆಯದೇ ರೀತಿಯ ಅನುಭವ ಕೊಡುವಂಥ ಚಿತ್ರವಿದು. ಈ ಥರದ ಚಿತ್ರಗಳನ್ನು ಮಾಡುವಾಗ ತುಂಬಾ ಸಹನೆ ಇರಬೇಕು, ಅದು ಈ ನಿರ್ದೇಶಕರಲ್ಲಿತ್ತು. ಅಮೃತ ನನ್ನ ಸಹೋದರಿ ಪಾತ್ರ ಮಾಡಿದ್ದಾರೆ. ಸಿದ್ದು ಕೂಡ ಒಂದೊಳ್ಳೇ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಬ್ಲಾಕ್ ಮ್ಯಾಜಿಕ್, ಹಾರರ್ ಹೀಗೆ ತುಂಬಾ ವಿಷಯಗಳಿವೆ. ಇದನ್ನು ನಾರ್ಮಲ್ ಸಿನಿಮಾ ರೀತಿ ಶೂಟ್ ಮಾಡಲು ಸಾಧ್ಯವಿಲ್ಲ, ಬೇರೆಥರದ ಶಾಟ್ ಇಡಬೇಕು ಎಂದು ಚಿತ್ರದ ಬಗ್ಗೆ ಸಾಕಷ್ಟು ಮಾಹಿತಿ ಹಂಚಿಕೊಂಡರು. ನಂತರ ಅಮೃತ ಅಯ್ಯಂಗಾರ್ ಮಾತನಾಡಿ ಚಿತ್ರದಲ್ಲಿ ಹಾರರ್ ಎಫೆಕ್ಟ್ ತುಂಬಾ ಚೆನ್ನಾಗಿ ಮೂಡಿಬಂದಿದೆ. ನನ್ನದು  ಎಲ್ಲ ಥರದ ಎಮೋಷನ್ ಕ್ಯಾರಿ ಮಾಡುವಂಥ ಪಾತ್ರ. ಜನರಿಗೆ ಹೆದರಿಸೋದು ತುಂಬಾ ಕಷ್ಟದ ಕೆಲಸ, ಕೆಲವು ಸೀನ್‌ಗಲ್ಲಿ ಆಕ್ಟ್  ಮಾಡುವಾಗ ತುಂಬಾ ಭಯವಾಗಿತ್ತು. ಆಲಾಪ್ ನನ್ನ ತಮ್ಮನ ಪಾತ್ರ ಮಾಡಿದ್ದಾನೆ. ಅವನ ಜೊತೆಗೇ ನನಗೆ ಹೆಚ್ಚು ಸೀನ್‌ಗಳಿವೆ ಎಂದರು. ನಾಯಕ ಸಿದ್ದು ಮೂಲಿಮನಿ ಮಾತನಾಡಿ ನಾನು ಅಭಿನಯಿಸಿದ ಮೊದಲ ಚಿತ್ರವಿದು. ಆಗ ನಾನು ಬೇರೊಂದು ಸಿನಿಮಾಗೆ ಆಡಿಷನ್ ಕೊಟ್ಟಿದ್ದೆ, ಸ್ನೇಹಿತ ಮಹೇಶ್ ನಾನೊಂದು ಸಿನಿಮಾ ಮಾಡುತ್ತಿದ್ದೇನೆ. ಅದರಲ್ಲಿ ನೀನೇ ಹೀರೋ ಅಂದಿದ್ದರು. ಹೇಳಿದ ಹಾಗೇ ಕರೆದು ಹೀರೋ ಮಾಡಿದ್ದಾರೆ ಎಂದು ಹೇಳಿಕೊಂಡರು.

    ನಾಯಕಿಯರ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಹಿರಿಯನಟಿ ಸಂಗೀತಾ ಮಾತನಾಡಿ ನಿರ್ಮಾಪಕ ಕಿರಣ್ ನನಗೆ ಫ್ಯಾಮಿಲಿ ಫ್ರೆಂಡ್. ಅವರಿಗೆ ಸಿನಿಮಾ ಬಗ್ಗೆ ತುಂಬಾ ಆಸಕ್ತಿಯಿದೆ. ಇನ್ನೂ ಒಳ್ಳೊಳ್ಳೇ ಚಿತ್ರಗಳನ್ನು ಮಾಡುವಂತಾಗಲಿ, ನಾನೀ ಚಿತ್ರದಲ್ಲಿ ಮಾ.ಆಲಾಪ್, ಅಮೃತಾ ಹಾಗೂ ಮಿಲನಾರ ತಾಯಿಯಾಗಿ ನಟಿಸಿದ್ದೇನೆ ಎಂದು ಹೇಳಿದರು. ಚಿತ್ರಕ್ಕೆ ಛಾಯಾಗ್ರಾಹಕರಾಗಿ ದಿಲೀಪ್ ಚಕ್ರವರ್ತಿ ಕೆಲಸ ಮಾಡಿದ್ದಾರೆ. ಕಿರಣ್ ರವೀಂದ್ರನಾಥ್ ಅವರ ಸಂಗೀತ ಸತೀಶ್ ಬಾಬು ಅವರ ಹಿನ್ನೆಲೆ ಸಂಗೀತ ಈ ಚಿತ್ರಕ್ಕಿದೆ. ಉಗ್ರಂ, ಕೆಜಿಎಫ್ ಖ್ಯಾತಿಯ ಶ್ರೀಕಾಂತ್ ಸಂಕಲನಕಾರರಾಗಿ ಕೆಲಸ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಾಲನಟ ಮಾಸ್ಟರ್ ಓಂಗೆ ‘ಕರ್ನಾಟಕ ಸೂಪರ್ ಟೀನ್ ಮಾಡೆಲ್’ ರಾಜ್ಯ ಬಾಲ ಪ್ರಶಸ್ತಿ

    ಬಾಲನಟ ಮಾಸ್ಟರ್ ಓಂಗೆ ‘ಕರ್ನಾಟಕ ಸೂಪರ್ ಟೀನ್ ಮಾಡೆಲ್’ ರಾಜ್ಯ ಬಾಲ ಪ್ರಶಸ್ತಿ

    ಗ್ಗೇಶ್ ನಟನೆಯ ಕಾಳಿದಾಸ ಕನ್ನಡ ಮೇಷ್ಟ್ರು ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಬಾಲನಟನಾಗಿ ನಟಿಸಿರುವ, ಸಾಕಷ್ಟು ಜಾಹೀರಾತು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಹಾಗೂ ರೂಪದರ್ಶಿ ಆಗಿಯೂ ಸಾಕಷ್ಟು ಹೆಸರು ಮಾಡಿರುವ ಮಾಸ್ಟರ್ ಓಂ (Om) ಅವರಿಗೆ ಪ್ರತಿಷ್ಠಿತ ವೆಲೋಝ್ ಈವ್ ಸಂಸ್ಥೆಯ ಆಶ್ರಯದಲ್ಲಿ ನಡೆದ ಗ್ಲಾಮರಸ್ ಸೂಪರ್  ಮಾಡೆಲ್ (Model) ಪೇಜೆಂಟ್ನಲ್ಲಿ ಕರ್ನಾಟಕ (Karnataka) ಸೂಪರ್ ಟೀನ್ ಮಾಡೆಲ್ ಟೈಟಲ್ ತನ್ನದಾಗಿಸಿಕೊಂಡಿದ್ದಾನೆ. ಜತೆಜತೆಗೆ  ಫ್ಯಾಷನ್, ಮಾಡೆಲಿಂಗ್ ಹಾಗೂ ಸಿನಿಮಾ ಕ್ಷೇತ್ರದಲ್ಲಿನ  ಸೇವೆಯನ್ನು ಗುರುತಿಸಿ ನೀಡಲಾಗುವ  ರಾಜ್ಯ ಬಾಲ ಪ್ರಶಸ್ತಿ (Award) ಕೂಡ ಮಾಸ್ಟರ್ ಓಂ ಪಾಲಾಗಿದೆ.

    ಬಸವನಗುಡಿ ಆಚಾರ್ಯ ಪಾಠಶಾಲಾ 9 ನೇ ತರಗತಿಯ ವಿದ್ಯಾರ್ಥಿಯಾಗಿರುವ ಓಂ, ಚಿಕ್ಕ ಮಗುವವಾಗಿರುವಾಗಿನಿಂದಲೇ ಮಾಡೆಲಿಂಗ್ ಹಾಗೂ ಸಿನಿಮಾ ಕ್ಷೇತ್ರದಲ್ಲಿ (Sandalwood)  ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾನೆ.  ಕೊವೀಡ್ಗೂ  ಮುನ್ನ ಇಂಟರ್ನ್ಯಾಷನಲ್ ಕಿಡ್ಸ್ ಫ್ಯಾಷನ್ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯಲ್ಲಿ , ಸಿನಿಮಾ ಹಾಗೂ  ಫ್ಯಾಷನ್ ಕ್ಷೇತ್ರ  ಎರಡರಲ್ಲೂ ದಶಕಗಳಿಂದ ಗುರುತಿಸಿಕೊಂಡಿರುವ ಏಕೈಕ ಸೌತ್ ಇಂಡಿಯನ್ ಸೂಪರ್ ಕಿಡ್ ಮಾಡೆಲ್ ಎಂಬ ಗೌರವಕ್ಕೂ ಪಾತ್ರನಾಗಿದ್ದಾನೆ.  “ನನ್ನ ಸಾಧನೆಗೆ ಅಮ್ಮನ ಹಾಗೂ ಆಚಾರ್ಯ ಪಾಠ ಶಾಲೆಯ ಪ್ರೋತ್ಸಾಹ ಜತೆಗಿದೆ” ಎಂದು ಹೇಳುತ್ತಾನೆ. ಇದನ್ನೂ ಓದಿ:ನಾಗಚೈತನ್ಯ- ಸಮಂತಾ ಬ್ರೇಕಪ್ ಬಗ್ಗೆ ಕೊನೆಗೂ ಮೌನ ಮುರಿದ ನಟ ನಾಗಾರ್ಜುನ್

    ಕಾಳಿದಾಸ ಕನ್ನಡ ಮೇಷ್ಟ್ರು ಹಾಗೂ ತಮಿಳಿನ ಕಾಫಿ ಚಿತ್ರ ಸೇರಿದಂತೆ ಈಗಾಗಲೇ ಮಾಸ್ಟರ್ ಓಂ ಸುಮಾರು 10 ಕ್ಕೂ ಚಲನಚಿತ್ರಗಳಲ್ಲಿ ನಟಿಸಿದ್ದಾನೆ. ಓದಿನ ಜತೆಜತೆಯೇ ಮಾಡೆಲಿಂಗ್ನಲ್ಲೂ ಬಿಝಿಯಾಗಿದ್ದು 35 ಕ್ಕೂ ಹೆಚ್ಚು ಜಾಹೀರಾತುಗಳಲ್ಲಿ ನಟಿಸಿದ್ದು,  ಸುಮಾರು 30 ಕ್ಕೂ ಹೆಚ್ಚು ಫ್ಯಾಷನ್ ಶೋಗಳಲ್ಲಿ ಸೆಲೆಬ್ರಿಟಿ ಶೋ ಸ್ಟಾಪರ್ ಆಗಿ ವಾಕ್ ಮಾಡಿದ್ದಾನೆ.

    Live Tv
    [brid partner=56869869 player=32851 video=960834 autoplay=true]

  • ಓಂ: ಉಪ್ಪಿ ಮತ್ತು ರಾಜ್ ಫ್ಯಾಮಿಲಿಗೆ ಕೊಂಡಿಯಾದದ್ದು ಹೊನ್ನವಳ್ಳಿ!

    ಓಂ: ಉಪ್ಪಿ ಮತ್ತು ರಾಜ್ ಫ್ಯಾಮಿಲಿಗೆ ಕೊಂಡಿಯಾದದ್ದು ಹೊನ್ನವಳ್ಳಿ!

    ಒಂದು ಗೆದ್ದ ಸಿನಿಮಾದ ಸುತ್ತ ಹತ್ತು ಹಲವು ಕಥೆ, ರೋಚಕ ಸಂಗತಿಗಳ ಪಕಳೆಗಳು ಚೆದುರಿಕೊಂಡಿರುತ್ತವೆ. ಅವುಗಳನ್ನು ಕಾಲ ಕಾಲಕ್ಕೆ ಬೊಗಸೆಗಿಟ್ಟುಕೊಂಡು ಸಂಭ್ರಮಿಸೋದಕ್ಕಿಂತಲೂ ಬೇರೆ ಖುಷಿಗಳು ಸಿನಿಮಾ ಪ್ರೇಮಿಗಳ ಪಾಲಿಗೆ ಸಿಗಲಿಕ್ಕಿಲ್ಲ. ಅದರಲ್ಲಿಯೂ ಅಂತಹ ಸಿನಿಮಾಗಳು ಸಿಲ್ವರ್ ಜ್ಯುಬಿಲಿಯಂಥ ಮೈಲಿಗಲ್ಲು ದಾಟಿಕೊಳ್ಳುವಂತಹ ಸಂದರ್ಭವಂತೂ ಅಂತಹ ಭಾವಗಳನ್ನು ಮತ್ತಷ್ಟು ತೀವ್ರವಾಗಿಸುತ್ತೆ. ಸದ್ಯ 1995ರಲ್ಲಿ ತೆರೆ ಕಂಡು ಕನ್ನಡ ಸಿನಿಮಾ ರಂಗದ ದಿಕ್ಕು ದೆಸೆಗಳನ್ನು ಬದಲಿಸಿದ್ದ ಓಂ ಚಿತ್ರ ಕೂಡ ಕನ್ನಡದ ಸಿನಿಮಾಸಕ್ತರ ಪಾಲಿಗೆ ಅಂಥದ್ದೊಂದು ಸಂಭ್ರಮವನ್ನು ಕೊಡಮಾಡಿದೆ.

    ಇದೇ ತಿಂಗಳ 18ರಂದು ಓಂ ಬಿಡುಗಡೆಯಾಗಿ 25 ವರ್ಷ ತುಂಬುತ್ತಿರೋದು ಅದಕ್ಕೆ ಕಾರಣ. ಈ ಹೊತ್ತಿನಲ್ಲಿ ಹಿದಿರುಗಿ ನೋಡಿದರೆ, ಮಾರುಕಟ್ಟೆ, ತಾಂತ್ರಿಕತೆ ಸೇರಿದಂತೆ ಎಲ್ಲದರಲ್ಲಿಯೂ ಹಿಂದುಳಿದ ಕಾಲದಲ್ಲಿ ಈ ಸಿನಿಮಾ ಮಾಡಿದ್ದ ದಾಖಲೆಗಳ ಬಗ್ಗೆ ಯಾರಿಗಾದರೂ ಅಚ್ಚರಿ ಮತ್ತು ಹೆಮ್ಮೆಯ ಭಾವ ಮೂಡಿಕೊಳ್ಳದಿರಲು ಸಾಧ್ಯವೇ ಇಲ್ಲ. ಇಂತಹದ್ದೊಂದು ಸಿನಿಮಾ ಸಿದ್ಧಗೊಂಡಿದ್ದರ ಹಿಂದೆ ನಾನಾ ಕಥೆಗಳಿದ್ದಾವೆ. ಅದರಲ್ಲಿ ಒಂದೊಳ್ಳೆ ಕಥೆ ರೆಡಿ ಮಾಡಿಕೊಂಡು, ಅದಕ್ಕೆ ಶಿವಣ್ಣನನ್ನೇ ನಾಯಕನಾಗಿಯೂ ನಿಕ್ಕಿ ಮಾಡಿಕೊಂಡಿದ್ದ ಉಪ್ಪಿ ರಾಜ್ ಕುಟುಂಬದ ಸಂಪರ್ಕ ಸಾಧಿಸಿದ್ದು ಮತ್ತೊಂದು ರೋಚಕ ಕಥೆ!

    ಅದು ಶಿವಣ್ಣ ಗೆಲುವಿನ ಓಟದಲ್ಲಿದ್ದ ಕಾಲ. ಆರಂಭದಲ್ಲಿ ಈ ಕಥೆಗೆ ನಾಯಕ ಯಾರಾಗಬೇಕೆಂಬ ಬಗ್ಗೆ ಉಪ್ಪಿ ನಾನಾ ನಿಟ್ಟಿನಲ್ಲಿ ಆಲೋಚಿಸಿದ್ದರು. ಅವರ ಮನಸಲ್ಲಿ ಒಂದಷ್ಟು ನಟರ ಚಿತ್ರಗಳೂ ಕೂಡ ಕದಲಿ ಹೋಗಿದ್ದವು. ಆದರೆ ಆ ಪಾತ್ರಕ್ಕೆ ಅವರೇ ಆಗಬೇಕೆಂಬಂತೆ ಸ್ಥಿರವಾಗಿದ್ದ ಚಿತ್ರ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರದ್ದು. ಆದರೆ ಅದಕ್ಕಾಗಿ ಡಾ ರಾಜ್ ಫ್ಯಾಮಿಲಿಯನ್ನು ಭೇಟಿಯಾಗಿ ಕಥೆ ಹೇಳಿ ಒಪ್ಪಿಸುವ ಬಗೆ ಯಾವುದೆಂಬುದು ಮಾತ್ರ ಉಪ್ಪಿ ಪಾಲಿಗೆ ಯಕ್ಷಪ್ರಶ್ನೆಯಾಗುಳಿದಿತ್ತು.

    ಅದಕ್ಕೆ ಯಾವ ದಾರಿಯೆಂಬ ಹುಡುಕಾಟದಲ್ಲಿದ್ದಾಗ ಉಪೇಂದ್ರ ಅವರಿಗೆ ನೆನಪಾದದ್ದು ಹಿರಿಯ ನಟ ಹೊನ್ನವಳ್ಳಿ ಕೃಷ್ಣ. ರಾಜ್ ಪಾಲಿಗೆ ಆಪ್ತ ವಲಯದಲ್ಲಿದ್ದ ಹೊನ್ನವಳ್ಳಿ ಕೃಷ್ಣರನ್ನು ಮಾತಾಡಿಸಿದರೆ ತನ್ನ ಹಾದಿ ಸುಗಮವಾದೀತೆಂಬ ಇರಾದೆಯಿಂದ ಉಪ್ಪಿ ಅವರನ್ನು ಸಂಧಿಸಿದ್ದರು. ಉಪ್ಪಿಯ ಉತ್ಸಾಹ, ಆ ಕಥೆಯ ಹೊಸತನಗಳನ್ನೆಲ್ಲ ಕಂಡ ಹೊನ್ನವಳ್ಳಿ ಕೃಷ್ಣ ಕಡೆಗೂ ಅದೊಂದು ದಿನ ಉಪ್ಪಿಯನ್ನು ಡಾ.ರಾಜ್ ಮನೆಗೆ ಕರೆದೊಯ್ದಿದ್ದರಂತೆ.

    ಹಾಗೆ ಹೋದವರೇ ಹೊನ್ನವಳ್ಳಿ ಕೃಷ್ಣ ವರದಪ್ಪನವರನ್ನು ಭೇಟಿಯಾಗಿ ವಿಚಾರವನ್ನೆಲ್ಲ ತಿಳಿಸಿ ರಾಜ್‍ಕುಮಾರ್ ಅವರೊಂದಿಗೆ ಭೇಟಿಗೆ ಅವಕಾಶ ಕಲ್ಪಿಸುವಂತೆ ಕೇಳಿಕೊಂಡಿದ್ದರಂತೆ. ಕೆಲವೇ ಸಮಯದಲ್ಲಿ ಆ ಸಂದರ್ಭವೂ ಕೂಡಿ ಬಂದಿತ್ತು. ಸಾವಧಾನದಿಂದ ಕಥೆ ಕೇಳಿದ ಅಣ್ಣಾವ್ರು ಬಲು ಖುಷಿಯಿಂದ ಒಪ್ಪಿಕೊಂಡಿದ್ದರಂತೆ. ಅದರ ಬಲದಿಂದಲೇ ಉಪ್ಪಿಗೆ ಸಲೀಸಾಗಿ ಶಿವಣ್ಣನ ಕಾಲ್‍ಶೀಟ್ ಸಿಗುವಂತಾಗಿತ್ತು. ಆ ಕಥೆ ರಾಜ್‍ಕುಮಾರ್ ಅವರಿಗೆ ಅದೆಷ್ಟು ಇಷ್ಟವಾಗಿತ್ತೆಂದರೆ, ಓಂ ಆರಂಭವಾಗಿ ಕಡೇಯವರೆಗೂ ಅವರು ಅದರಲ್ಲಿ ಒಂದಲ್ಲ ಒಂದು ರೀತಿಯಲ್ಲಿ ತೊಡಗಿಸಿಕೊಂಡಿದ್ದರು. ಕಡೆಗೂ ರಾಜಣ್ಣ ಆ ಕಥೆಯ ಮೇಲಿಟ್ಟಿದ್ದ ನಂಬಿಕೆ ಸುಳ್ಳಾಗಲಿಲ್ಲ.

  • ಪರಭಾಷೆಗಳಲ್ಲಿ ಮಿನುಗಿದ ಮೊದಲ ಚಿತ್ರ ‘ಓಂ’!

    ಪರಭಾಷೆಗಳಲ್ಲಿ ಮಿನುಗಿದ ಮೊದಲ ಚಿತ್ರ ‘ಓಂ’!

    ಶಕಗಳಿಂದೀಚೆಗೆ ಕನ್ನಡ ಸಿನಿಮಾಗಳ ಬಗ್ಗೆ ಪರಭಾಷಾ ನೆಲದಲ್ಲಿ ಅದೆಂತಹ ತಾತ್ಸಾರದ ಭಾವವಿತ್ತೆಂಬುದನ್ನು ಒಮ್ಮೆ ನೆನಪಿಸಿಕೊಳ್ಳಿ. ಇಲ್ಲಿ ಬರೀ ರಿಮೇಕ್ ಮಾಡ್ತಾರೆಂಬುದರಿಂದ ಮೊದಲ್ಗೊಂಡು, ಗುಣಮಟ್ಟದವರೆಗೂ ಕನ್ನಡ ಸಿನಿಮಾಗಳ ಬಗ್ಗೆ ಕಂಪ್ಲೇಂಟುಗಳ ಸರಮಾಲೆಗಳೇ ಇದ್ದವು. ಅದಕ್ಕೆ ಕಾರಣ ಸೀಮಿತ ಮಾರುಕಟ್ಟೆ ಎಂಬಂಥ ಸಮಜಾಯಿಷಿಗಳೂ ಈ ದಿಕ್ಕಿನಿಂದ ಕೇಳಿ ಬರುತ್ತಿದ್ದವು. ಅಂತಹ ಕಾಲಘಟ್ಟದಲ್ಲಿ ಎಲ್ಲ ಇಲ್ಲಗಳನ್ನು ಮೀರಿಕೊಂಡು ಪರಭಾಷೆಗಳಲ್ಲಿಯೂ ಅಚ್ಚರಿ ಮೂಡುವಂಥ ಸಿನಿಮಾ ಮಾಡೋದೆಂದರೆ ಅದೊಂದು ಸಾಹಸ. ಅದನ್ನು ಸಾಧ್ಯವಾಗಿಸಿದ್ದು ಉಪ್ಪಿ ನಿರ್ದೇಶನದ `ಓಂ’ ಚಿತ್ರ!

    ಅದಾಗಲೇ ‘ತರ್ಲೆ ನನ್ಮಗ’ ಮತ್ತು ‘ಶ್’ ಎಂಬೆರಡು ಸಿನಿಮಾ ನಿರ್ದೇಶನದ ಬಳಿಕ ಉಪೇಂದ್ರ ಅವರ ಮೂರನೇ ಸಿನಿಮಾ ಓಂ. ಅದೆಷ್ಟೋ ವರ್ಷಗಳಿಂದ ಈ ಕಥೆಯನ್ನು ಹದಗೊಳಿಸಿಕೊಂಡು ಕಾಯುತ್ತಿದ್ದ ಉಪೇಂದ್ರ, ಭೂಗತ ಜಗತ್ತಿನ ಕಥೆ ಹೇಳುತ್ತಿದ್ದಾರೆಂಬ ಸುಳಿವು ಸಿಕ್ಕಾಗ ಅದೆಷ್ಟು ಮಂದಿ ಅಚ್ಚರಿಗೊಂಡಿದ್ದರೋ ಗೊತ್ತಿಲ್ಲ. ಆದರೆ ತುಂಬಾ ಜನ ಇದು ವರ್ಕೌಟ್ ಆಗೋ ಸಂಗತಿ ಅಲ್ಲ ಎಂಬರ್ಥದಲ್ಲಿ ಮೂಗು ಮುರಿದಿದ್ದದ್ದಂತೂ ಸತ್ಯ. ಆದರೆ ಅದು ಬಿಡುಗಡೆಯಾದ ನಂತರದಲ್ಲಿ ಎಲ್ಲ ಚಿತ್ರಣವೂ ಬದಲಾಗಿ ಹೋಗಿತ್ತು.

    ಇದರಲ್ಲಿನ ಕಥೆ, ನಿರೂಪಣಾ ಶೈಲಿಗೆ ಕನ್ನಡದ ಪ್ರೇಕ್ಷಕರೆಲ್ಲ ಫಿದಾ ಆಗಿದ್ದರು. ಆ ಕಾಲಕ್ಕೆ ಮಾಧ್ಯಮಗಳು ಈ ಪಾಟಿ ಬೆಳೆದಿಲ್ಲವಾದರೂ ಕೂಡ ತಾನೇ ತಾನಾಗಿ ‘ಓಂ’ ಪ್ರಭೆ ಕನ್ನಡದ ಗಡಿ ದಾಟಿ ಪರಭಾಷೆಗಳತ್ತಲೂ ಹಬ್ಬಿಕೊಂಡಿತ್ತು. ಯಾವ ಜನ ಕನ್ನಡ ಚಿತ್ರಗಳೆಂದರೆ ಅಸಡ್ಡೆ ತೋರುತ್ತಿದ್ದರೋ ಅದೇ ಜನ ‘ಓಂ’ ಅನ್ನು ನೋಡಬೇಕೆಂದು ಕಾತರರಾಗಿದ್ದರು. ನಂತರದಲ್ಲಿ ಅದರ ರಿಮೇಕ್ ಹಕ್ಕುಗಳಿಗಾಗಿ ಪರಭಾಷಾ ನಿರ್ಮಾಪಕರ ಕಡೆಯಿಂದ ಪೈಪೋಟಿಯೂ ಆರಂಭವಾಗಿತ್ತು.

    ‘ಓಂ’ 1997ರಲ್ಲಿ ಓಂಕಾರಂ ಎಂಬ ಹೆಸರಲ್ಲಿ ರಿಮೇಕ್ ಆಗಿತ್ತು. ಅದರಲ್ಲಿ ರಾಜಶೇಖರ್ ಮತ್ತು ಕನ್ನಡದ ಪ್ರೇಮಾ ನಾಯಕ ನಾಯಕಿಯರಾಗಿ ನಟಿಸಿದ್ದರು. ವಿಶೇಷವೆಂದರೆ, ತೆಲುಗಿನಲ್ಲಿಯೂ ಉಪೇಂದ್ರ ಅವರೇ ನಿರ್ದೇಶನ ಮಾಡಿದ್ದರು. ಅದು ಅಲ್ಲಿಯೂ ದಾಖಲೆಯ ಪ್ರದರ್ಶನವನ್ನೇ ಕಂಡಿತ್ತು. ಇದರಿಂದಾಗಿಯೇ ಬೇರೆ ಭಾಷೆಗಳಲ್ಲಿಯೂ ಕನ್ನಡ ಸಿನಿಮಾದತ್ತ ಬೆರಗಿನ ಮಾತುಗಳು ಕೇಳಿ ಬರಲು ಕಾರಣವಾಗಿತ್ತು. ಆ ನಂತರದಲ್ಲಿ ಓಂ ಅರ್ಜುನ್ ಪಂಡಿತ್ ಎಂಬ ಶೀರ್ಷಿಕೆಯಲ್ಲಿ ಹಿಂದಿಗೂ ರೀಮೇಕ್ ಆಗಿ ತೆರೆಗಂಡಿತ್ತು.

    ಆ ಬಳಿಕ ‘ಓಂ’ನ ಸ್ಫೂರ್ತಿಯಿಂದಲೇ ಪರಭಾಷೆಗಳಲ್ಲಿ ಒಂದಷ್ಟು ಸಿನಿಮಾಗಳು ತಯಾರುಗೊಂಡಿದ್ದವು. ಸೂಪರ್ ಹಿಟ್ ಚಿತ್ರಗಳೇ ಕನ್ನಡದ ‘ಓಂ’ನಿಂದ ಸ್ಫೂರ್ತಿಗೊಂಡಂತೆ ಅಣಿಗೊಳ್ಳಲಾರಂಭಿಸಿದವು. ಹಾಗೆ ಮೊದಲ ಸಲ ದೊಡ್ಡ ಮಟ್ಟದಲ್ಲಿ ಕನ್ನಡದ ಘನತೆಯನ್ನು ಪರಭಾಷಾ ಚಿತ್ರರಂಗಗಳಲ್ಲಿಯೂ ಹಬ್ಬಿಕೊಳ್ಳುವಂತೆ ಮಾಡಿದ ಹೆಗ್ಗಳಿಕೆ ನಿಸ್ಸಂದೇಹವಾಗಿ ‘ಓಂ’ಗೆ ಸಲ್ಲುತ್ತದೆ. ಹೀಗೆ ಕೆದಕುತ್ತಾ ಹೋದರೆ, ‘ಓಂ’ನ ದಾಖಲೆಗಳು ದಂಡಿ ದಂಡಿಯಾಗಿಯೇ ಕಾಣಸಿಗುತ್ತವೆ. ಇಂದಿಗೆ ಆ ಸಿನಿಮಾ ಬಿಡುಗಡೆಯಾಗಿ 25 ವರ್ಷ ತುಂಬುತ್ತಿರೋದರ ಹಿನ್ನೆಲೆಯಲ್ಲಿ ಚಿತ್ರರಂಗದಲ್ಲೊಂದು ಸಂಭ್ರಮ ಮಡುಗಟ್ಟಿದೆಯಲ್ಲಾ? ಅದು ಸಿನಿಮಾ ಸೃಷ್ಟಿಕರ್ತರ ಆಲೋಚನಾ ಕ್ರಮವನ್ನೇ ಬದಲಾಯಿಸಿಬಿಟ್ಟ `ಓಂ’ಕಾರದ ಅಸಲೀ ಖದರ್ ಅನ್ನಲಡ್ಡಿಯಿಲ್ಲ!.

  • ಮತ್ತೆ ಮತ್ತೆ ಮೊಳಗಿ ಮರಳು ಮಾಡಿದ ಉಪ್ಪಿಯ ‘ಓಂ’ಕಾರ!

    ಮತ್ತೆ ಮತ್ತೆ ಮೊಳಗಿ ಮರಳು ಮಾಡಿದ ಉಪ್ಪಿಯ ‘ಓಂ’ಕಾರ!

    ದೇ ತಿಂಗಳ 18ರಂದು ‘ಓಂ’ ಚಿತ್ರ ತೆರೆಗಂಡು 25 ವರ್ಷವಾಗುತ್ತದೆ. ಈ ಸಂಭ್ರಮವನ್ನು ಅರ್ಥವತ್ತಾಗಿ ಆಚರಿಸಲು ಶಿವರಾಜ್‍ಕುಮಾರ್ ಅಭಿಮಾನಿ ಬಳಗ ಶಿವಸೈನ್ಯ ಸನ್ನದ್ಧಗೊಂಡಿದೆ. ಕೊರೊನಾ ಕಾಟದ ನಡುವೆಯೂ ಅಭಿಮಾನಿಗಳು ಮಾತ್ರವಲ್ಲದೇ ಇಡೀ ಚಿತ್ರರಂಗವೇ ಇದನ್ನೊಂದು ಹೊಸ ಹುಟ್ಟಿನ ನೆನಪನ್ನು ಮತ್ತೆ ಸ್ಮರಿಸುವಂತಹ ಪುಳಕದೊಂದಿಗೆ ಒಂದಿಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದೇ ಹೊತ್ತಿನಲ್ಲಿ ಓಂ ಚಿತ್ರದ ಬಗ್ಗೆ ಒಂದಷ್ಟು ದಾಖಲಾರ್ಹವಾದ ವಿಚಾರಗಳನ್ನು ಮತ್ತೆ ಮನನ ಮಾಡಿಕೊಳ್ಳುವ ಕಾರ್ಯವೂ ವ್ಯಾಪಕವಾಗಿಯೇ ನಡೆಯುತ್ತಿದೆ.

    ಭೂಗತ ಜೀವಿಗಳ ಕಥೆಯನ್ನು, ಪ್ರೇಮವೂ ಸೇರಿದಂತೆ ನಾನಾ ಅಂಶಗಳೊಂದಿಗೆ ನಿರೂಪಿಸಿದ್ದ ಚಿತ್ರ ಓಂ. ಆ ಕಾಲದ ಮಟ್ಟಿಗೆ ಮಾತ್ರವಲ್ಲ, ಈ ಕ್ಷಣಕ್ಕೂ ಓಂ ವಿಶೇಷ ಚಿತ್ರವಾಗಿಯೇ ಈ ತಲೆಮಾರಿನ ಸಮುದಾಯವನ್ನೂ ಆವರಿಸಿಕೊಂಡಿದೆ. 90ರ ದಶಕದಲ್ಲಿ ಬೆಂಗಳೂರು ಭೂಗತವನ್ನಾಳುತ್ತಿದ್ದ ನಿಜವಾದ ರೌಡಿಗಳ ಕಥೆಯಾಧಾರಿತವಾದ ಈ ಚಿತ್ರದಲ್ಲಿ ರಿಯಲ್ ರೌಡಿಗಳ ದಂಡೇ ನಟಿಸಿತ್ತು. ಉಪ್ಪಿ ಅಂದರೆ, ಸಿನಿಮಾದಲ್ಲಿಯೂ ಕಟು ವಾಸ್ತವವನ್ನು ಒರೆಗೆ ಹಚ್ಚಬಲ್ಲ ವ್ಯಕ್ತಿತ್ವದವರು. ಅದೇ ಮನಸ್ಥಿತಿಯಲ್ಲಿ ರೂಪುಗೊಂಡಿದ್ದ ಓಂ ಮತ್ತೆ ಮತ್ತೆ ಬಿಡುಗಡೆಯಾಗುತ್ತಾ, ಅದೇ ಖದರ್‍ನಲ್ಲಿ ಪ್ರದರ್ಶನಗೊಳ್ಳುತ್ತಾ ಐತಿಹಾಸಿಕ ದಾಖಲೆಯನ್ನೇ ಸೃಷ್ಟಿಸಿದೆ.

    ಉಪೇಂದ್ರ ನಿರ್ದೇಶನದ, ಶಿವರಾಜ್ ಕುಮಾರ್ ಮತ್ತು ಪ್ರೇಮಾ ನಟನೆಯ ಓಂ ಹಲವಾರು ದಾಖಲೆಗಳಿಗೆ ಓಂಕಾರ ಬರೆದ ಮಾಸ್ಟರ್ ಪೀಸ್‍ನಂತಹ ಚಿತ್ರ. ಕಥೆ, ಚಿತ್ರಕಥೆಗಳಿಂದ ಮೊದಲ್ಗೊಂಡು ಸಂಗೀತ, ಹಿನ್ನೆಲೆ ಸಂಗೀತದ ವರೆಗೆ ಪ್ರತಿಯೊಂದು ವಿಚಾರದಲ್ಲಿಯೂ ಅದು ಪಕ್ಕಾ ಮಾಸ್ಟರ್ ಪೀಸ್. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ 600ಕ್ಕೂ ಹೆಚ್ಚು ಬಾರಿ ಮರು ಬಿಡುಗಡೆಯಾದ ದಾಖಲೆ ಹೊಂದಿರೋ ಚಿತ್ರ ಯಾವುದಾದರೂ ಇದ್ದೀತೆಂದರೆ ಅದು ಓಂ ಮಾತ್ರ. ಹಾಗೆ ಪದೇ ಪದೆ ಬಿಡುಗಡೆಯಾಗೋದು, ಹೌಸ್‍ಫುಲ್ ಪ್ರದರ್ಶನಗೊಳ್ಳೋದಂದರೇನು ಸಾಮಾನ್ಯದ ಸಂಗತಿಯಲ್ಲ. ಓಂ ವಿಚಾರದಲ್ಲಿ ಸಲೀಸಾಗಿಯೇ ಸಾಧ್ಯವಾಗುತ್ತಾ ಬಂದಿದೆ.

    ಮಾರ್ಚ್ 2015 ರಂದು ಓಂ ಅತ್ಯಾಧುನಿಕ ಡಿಟಿಎಸ್ ತಂತ್ರಜ್ಞಾನದಿಂದ ಲಕಲಕಿಸುತ್ತಾ ಮತ್ತೆ ಬಿಡುಗಡೆಯಾಗಿತ್ತು. ಅದು ಬಹುಶಃ ಈ ಚಿತ್ರದ 632ನೇ ಯಶಸ್ವೀ ಪ್ರದರ್ಶನ. ಪ್ರತೀ ಸಲ ಮರು ಬಿಡುಗಡೆಯಾದಾಗಲೂ ಓಂ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ದಾಖಲೆ ಮಾಡುತ್ತಲೇ ಬಂದಿದೆ. ವಿಶೇಷವೆಂದರೆ ಈ ತಲೆಮಾರಿನ ಹುಡುಗರೂ ಕೂಡ ಅತ್ಯುತ್ಸಾಹದಿಂದ ಓಂ ಅನ್ನು ನೋಡಿ ಬೆಂಬಲಿಸುತ್ತಿದ್ದಾರೆ. ಅದು ಈ ಸಿನಿಮಾ ಅದೆಷ್ಟು ಮುಂದಾಲೋಚನೆಯಿಂದ ತಯಾರುಗೊಂಡಿದೆ ಅನ್ನೋದಕ್ಕೆ ಸೂಕ್ತ ಸಾಕ್ಷಿಯಂತಹ ಬೆಳವಣಿಗೆ. ಅಂದಹಾಗೆ, ಡಿಟಿಎಸ್ ತಂತ್ರಜ್ಞಾನದಿಂದ ಹೊಸ ಸ್ವರೂಪ ಪಡೆದುಕೊಂಡಿದ್ದ ಓಂ ನಾನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಯಶಸ್ವೀ ಪ್ರದರ್ಶನ ಕಂಡಿತ್ತು. ಇಂತಹ ದಾಖಲೆಗಳ ಹಾದಿಗೆ ಇದೇ ತಿಂಗಳ 18ರಂದು ಭರ್ತಿ 15 ವರ್ಷ ತುಂಬುತ್ತದೆ.

  • ‘ಓಂ’ ಶೀರ್ಷಿಕೆಯ ಹಿಂದಿದೆ ರಾಜಣ್ಣನ ಪ್ರೇರಣೆ!

    ‘ಓಂ’ ಶೀರ್ಷಿಕೆಯ ಹಿಂದಿದೆ ರಾಜಣ್ಣನ ಪ್ರೇರಣೆ!

    ಯಾವುದೇ ಒಂದು ಯಶಸ್ವೀ ದೃಶ್ಯಕಾವ್ಯದ ಹಿಂದೆಯೂ ಮೈ ನವಿರೇಳಿಸುವಂಥಾ ನೈಜ ಘಟನಾವಳಿಗಳಿರುತ್ತವೆ. ಸಕಾರಾತ್ಮಕವಾದ ಅಂಶಗಳೆಲ್ಲವೂ ಹಾಗೆ ಒಗ್ಗೂಡದೇ ಹೋದರೆ ಹೊಸತನದ ಸಿನಿಮಾಗಳು ಹುಟ್ಟು ಪಡೆಯೋದು ಕಷ್ಟಸಾಧ್ಯ. ಹಾಗಿದ್ದ ಮೇಲೆ ಕನ್ನಡ ಚಿತ್ರರಂಗದ ಪಾಲಿಗೆ ಹೊಸತನದ ಬಿರುಗಾಳಿ ಬೀಸುವಂತೆ ಮಾಡಿದ್ದ ‘ಓಂ’ ಚಿತ್ರದ ಹಿಂದೆ ಇಂಥಾ ಕಥೆಗಳು ಇಲ್ಲದಿರಲು ಸಾಧ್ಯವೇ? ಈ ಸಿನಿಮಾಗೆ ಸಿಲ್ವರ್ ಜ್ಯುಬಿಲಿ ಸಂಭ್ರಮ ಎದುರುಗೊಂಡಿರೋ ಈ ಘಳಿಗೆಯಲ್ಲಿ ಹುಡುಕುತ್ತಾ ಹೋದರೆ ಅದರ ಕಥೆಯಂಥಾದ್ದೇ ವಿಶಿಷ್ಟ ಕಥಾನಕಗಳು ಎದುರುಗೊಳ್ಳುತ್ತವೆ.

    ಇದು ರಿಯಲ್ ಸ್ಟಾರ್ ಉಪೇಂದ್ರ ಸೃಷ್ಟಿಸಿದ ದೃಶ್ಯವೈಭವ. ಕೌಟುಂಬಿಕ ಕಥಾನಕಗಳು, ಒಂದಷ್ಟು ಸಸ್ಪೆನ್ಸ್ ಥ್ರಿಲ್ಲರ್ ಪಥದತ್ತ ಹೊರಳಿಕೊಂಡಿದ್ದ ಕಾಲವದು. ಅಂಥಾ ಸಮಯದಲ್ಲಿ ಹೊರಜಗತ್ತಿನಲ್ಲಿ ಗುಟುರು ಹಾಕುತ್ತಿದ್ದ ಭೂಗತದ ಕಥೆಯನ್ನು ಸಿನಿಮಾ ಚೌಕಟ್ಟಿಗೆ ಒಗ್ಗಿಸುವಂಥಾ ಸಾಹಸವನ್ನು ಉಪ್ಪಿ ತಣ್ಣಗೆ ಮಾಡಿ ಮುಗಿಸಿದ್ದರು. ಇಂಥಾ ಬದಲಾವಣೆಗಳಿವೆಯಲ್ಲಾ? ಅದಕ್ಕೆ ಮುಂದಾಗುವಾಗ ಎಲ್ಲದಕ್ಕೂ ಎದೆಗೊಡುವಂಥಾ ಗಟ್ಟಿತನ ಮತ್ತು ಬಂದದ್ದನ್ನು ಬಂದಂತೆ ಸ್ವೀಕರಿಸುವ ಅಚಲ ಮನೋಧರ್ಮವೂ ಇರಬೇಕಾಗುತ್ತದೆ.

    ಯಾಕೆಂದರೆ, ಒಂದು ಬಗೆಯ ಸಿನಿಮಾಗಳಿಗೆ ಒಗ್ಗಿಕೊಂಡ ಪ್ರೇಕ್ಷಕರನ್ನು, ಅದರಲ್ಲಿಯೂ ಕೌಟುಂಬಿಕ ಪ್ರೇಕ್ಷಕರನ್ನು ರೌಡಿಸಂನಂಥಾ ರಾ ಸಬ್ಜೆಕ್ಟಿನಲ್ಲಿಯೂ ತೃಪ್ತಗೊಳಿಸೋದೆಂದರೆ ಸಾಮಾನ್ಯದ ಸಂಗತಿಯೇನಲ್ಲ. ಅದನ್ನು ಸಲೀಸಾಗಿಯೇ ಉಪ್ಪಿ ಸಾಧ್ಯವಾಗಿಸಿದ್ದರು. ಈ ಎಲ್ಲದಕ್ಕಿಂತಲೂ ಮಿಗಿಲಾಗಿ ಸದರಿ ಸಿನಿಮಾದ ಸುತ್ತಾ ವರನಟ ಡಾ ರಾಜ್‍ಕುಮಾರ್ ಅವರ ಇರುವಿಕೆ ಇರೋದು ನಿಜಕ್ಕೂ ದಾಖಲಾರ್ಹವಾದ ವಿಚಾರ. ಈ ಸಿನಿಮಾಗೆ ಶಿವರಾಜ್‍ಕುಮಾರ್ ನಾಯಕ ಅಂತ ನಿಕ್ಕಿಯಾಗಿ, ಅದನ್ನು ಖುದ್ದು ಪಾರ್ವತಮ್ಮ ರಾಜ್‍ಕುಮಾರ್ ಅವರೇ ನಿರ್ಮಾಣ ಮಾಡಲು ಒಪ್ಪಿಕೊಂಡ ನಂತರದಲ್ಲಿ ಎಂದಿನಂತೆ ರಾಜ್ ಅವರು ಎಲ್ಲದರ ಬಗ್ಗೆಯೂ ವಿಶೇಷವಾದ ಆಸ್ಥೆ ವಹಿಸಿ ಗಮನಿಸಲಾರಂಭಿಸಿದ್ದರು.

    ಈ ಕಥೆಯನ್ನು ಉಪ್ಪಿ, ರಾಜ್ ಅವರ ಕೈಗಿಟ್ಟಾಗ ಅದರ ಪುಟವೊಂದರಲ್ಲಿ ಅವರು ‘ಓಂ’ ಎಂದು ಬರೆದಿದ್ದರಂತೆ. ಆ ಘಳಿಗೆಯವರೆಗೂ ಉಪ್ಪಿ ಈ ಸಿನಿಮಾಗೆ `ಸತ್ಯ’ ಎಂಬ ಶೀರ್ಷಿಕೆಯನ್ನೇ ನಿಗದಿ ಮಾಡಿಕೊಂಡಿದ್ದರು. ಯಾವಾಗ ರಾಜಣ್ಣ ‘ಓಂ’ ಎಂದು ಬರೆದರೋ ಆ ಘಳಿಗೆಯಲ್ಲಿಯೇ ಉಪ್ಪಿ ಅದನ್ನೇ ಶೀರ್ಷಿಕೆಯಾಗಿಟ್ಟರೆ ಚೆನ್ನಾಗಿರುತ್ತದೆಂಬ ಗುಂಗೀಹುಳವನ್ನು ಮನಸಿಗೆ ಬಿಟ್ಟುಕೊಂಡಿದ್ದರಂತೆ. ಕಡೆಗೂ ಅದರಿಂದ ತಪ್ಪಿಸಿಕೊಳ್ಳಲಾಗದೆ ಅದನ್ನೇ ಶೀರ್ಷಿಕೆಯಾಗಿ ನಿಕ್ಕಿ ಮಾಡಿದ್ದರು. ಆ ನಂತರದಲ್ಲಿ ರಾಜ್‍ಕುಮಾರ್ ಅವರು ಈ ಚಿತ್ರಕ್ಕೆ ಎರಡು ಹಾಡುಗಳನ್ನು ಹಾಡಿದ್ದು, ಅವೆರಡೂ ಕೂಡಾ ಹಂಸಲೇಖಾರ ಮಾಂತ್ರಿಕ ಸಂಗೀತ ಸ್ಪರ್ಶದೊಂದಿಗೆ ಅಜರಾಮರವಾಗುಳಿದಿದ್ದೆಲ್ಲವೂ ಈಗ ಇತಿಹಾಸ.

  • ಓಂ ಶೀರ್ಷಿಕೆಯ ಹಿಂದಿದೆ ರಾಜಣ್ಣನ ಪ್ರೇರಣೆ!

    ಓಂ ಶೀರ್ಷಿಕೆಯ ಹಿಂದಿದೆ ರಾಜಣ್ಣನ ಪ್ರೇರಣೆ!

    ಯಾವುದೇ ಒಂದು ಯಶಸ್ವೀ ದೃಷ್ಯಕಾವ್ಯದ ಹಿಂದೆಯೂ ಮೈ ನವಿರೇಳಿಸುವಂತಹ ನೈಜ ಘಟನಾವಳಿಗಳಿರುತ್ತವೆ. ಸಕಾರಾತ್ಮಕವಾದ ಅಂಶಗಳೆಲ್ಲವೂ ಹಾಗೆ ಒಗ್ಗೂಡದೇ ಹೋದರೆ ಹೊಸತನದ ಸಿನಿಮಾಗಳು ಹುಟ್ಟು ಪಡೆಯೋದು ಕಷ್ಟಸಾಧ್ಯ. ಹಾಗಿದ್ದ ಮೇಲೆ ಕನ್ನಡ ಚಿತ್ರರಂಗದ ಪಾಲಿಗೆ ಹೊಸತನದ ಬಿರುಗಾಳಿ ಬೀಸುವಂತೆ ಮಾಡಿದ್ದ `ಓಂ’ ಚಿತ್ರದ ಹಿಂದೆ ಇಂತಹ ಕಥೆಗಳು ಇಲ್ಲದಿರಲು ಸಾಧ್ಯವೇ? ಈ ಸಿನಿಮಾಗೆ ಸಿಲ್ವರ್ ಜ್ಯುಬಿಲಿ ಸಂಭ್ರಮ ಎದುರುಗೊಂಡಿರೋ ಈ ಘಳಿಗೆಯಲ್ಲಿ ಹುಡುಕುತ್ತಾ ಹೋದರೆ ಅದರ ಕಥೆಯಂತದ್ದೇ ವಿಶಿಷ್ಟ ಕಥಾನಕಗಳು ಎದುರುಗೊಳ್ಳುತ್ತವೆ.

    ಇದು ರಿಯಲ್ ಸ್ಟಾರ್ ಉಪೇಂದ್ರ ಸೃಷ್ಟಿಸಿದ ದೃಶ್ಯವೈಭವ. ಕೌಟುಂಬಿಕ ಕಥಾನಕಗಳು, ಒಂದಷ್ಟು ಸಸ್ಪೆನ್ಸ್ ಥ್ರಿಲ್ಲರ್ ಪಥದತ್ತ ಹೊರಳಿಕೊಂಡಿದ್ದ ಕಾಲವದು. ಅಂತಹ ಸಮಯದಲ್ಲಿ ಹೊರಜಗತ್ತಿನಲ್ಲಿ ಗುಟುರು ಹಾಕುತ್ತಿದ್ದ ಭೂಗತದ ಕಥೆಯನ್ನು ಸಿನಿಮಾ ಚೌಕಟ್ಟಿಗೆ ಒಗ್ಗಿಸುವಂತಹ ಸಾಹಸವನ್ನು ಉಪ್ಪಿ ತಣ್ಣಗೆ ಮಾಡಿ ಮುಗಿಸಿದ್ದರು. ಇಂತಹ ಬದಲಾವಣೆಗಳಿವೆಯಲ್ಲಾ? ಅದಕ್ಕೆ ಮುಂದಾಗುವಾಗ ಎಲ್ಲದಕ್ಕೂ ಎದೆಗೊಡುವಂತಹ ಗಟ್ಟಿತನ ಮತ್ತು ಬಂದದ್ದನ್ನು ಬಂದಂತೆ ಸ್ವೀಕರಿಸುವ ಅಚಲ ಮನೋಧರ್ಮವೂ ಇರಬೇಕಾಗುತ್ತದೆ.

    ಯಾಕೆಂದರೆ, ಒಂದು ಬಗೆಯ ಸಿನಿಮಾಗಳಿಗೆ ಒಗ್ಗಿಕೊಂಡ ಪ್ರೇಕ್ಷಕರನ್ನು, ಅದರಲ್ಲಿಯೂ ಕೌಟುಂಬಿಕ ಪ್ರೇಕ್ಷಕರನ್ನು ರೌಡಿಸಂನಂತಹ ರಾ ಸಬ್ಜೆಕ್ಟಿನಲ್ಲಿಯೂ ತೃಪ್ತಗೊಳಿಸೋದೆಂದರೆ ಸಾಮಾನ್ಯದ ಸಂಗತಿಯೇನಲ್ಲ. ಅದನ್ನು ಸಲೀಸಾಗಿಯೇ ಉಪ್ಪಿ ಸಾಧ್ಯವಾಗಿಸಿದ್ದರು. ಈ ಎಲ್ಲದಕ್ಕಿಂತಲೂ ಮಿಗಿಲಾಗಿ ಸದರಿ ಸಿನಿಮಾದ ಸುತ್ತಾ ವರನಟ ಡಾ.ರಾಜ್‍ಕುಮಾರ್ ಅವರ ಇರುವಿಕೆ ಇರೋದು ನಿಜಕ್ಕೂ ದಾಖಲಾರ್ಹವಾದ ವಿಚಾರ. ಈ ಸಿನಿಮಾಗೆ ಶಿವರಾಜ್‍ಕುಮಾರ್ ನಾಯಕ ಅಂತ ನಿಕ್ಕಿಯಾಗಿ, ಅದನ್ನು ಖುದ್ದು ಪಾರ್ವತಮ್ಮ ರಾಜ್‍ಕುಮಾರ್ ಅವರೇ ನಿರ್ಮಾಣ ಮಾಡಲು ಒಪ್ಪಿಕೊಂಡ ನಂತರದಲ್ಲಿ ಎಂದಿನಂತೆ ರಾಜ್ ಅವರು ಎಲ್ಲದರ ಬಗ್ಗೆಯೂ ವಿಶೇಷವಾದ ಆಸ್ಥೆ ವಹಿಸಿ ಗಮನಿಸಲಾರಂಭಿಸಿದ್ದರು.

    ಈ ಕಥೆಯನ್ನು ಉಪ್ಪಿ ರಾಜ್ ಅವರ ಕೈಗಿಟ್ಟಾಗ ಅದರ ಪುಟವೊಂದರಲ್ಲಿ ಅವರು ಓಂ ಎಂದು ಬರೆದಿದ್ದರಂತೆ. ಆ ಘಳಿಗೆಯವರೆಗೂ ಉಪ್ಪಿ ಈ ಸಿನಿಮಾಗೆ `ಸತ್ಯ’ ಎಂಬ ಶೀರ್ಷಿಕೆಯನ್ನೇ ನಿಗಧಿ ಮಾಡಿಕೊಂಡಿದ್ದರು. ಯಾವಾಗ ರಾಜಣ್ಣ ಓಂ ಎಂದು ಬರೆದರೋ ಆ ಘಳಿಗೆಯಲ್ಲಿಯೇ ಉಪ್ಪಿ ಅದನ್ನೇ ಶೀರ್ಷಿಕೆಯಾಗಿಟ್ಟರೆ ಚೆನ್ನಾಗಿರುತ್ತದೆಂಬ ಗುಂಗೀಹುಳವನ್ನು ಮನಸಿಗೆ ಬಿಟ್ಟುಕೊಂಡಿದ್ದರಂತೆ. ಕಡೆಗೂ ಅದರಿಂದ ತಪ್ಪಿಸಿಕೊಳ್ಳಲಾಗದೆ ಅದನ್ನೇ ಶೀರ್ಷಿಕೆಯಾಗಿ ನಿಕ್ಕಿ ಮಾಡಿದ್ದರು. ಆ ನಂತರದಲ್ಲಿ ರಾಜ್‍ಕುಮಾರ್ ಅವರು ಈ ಚಿತ್ರಕ್ಕೆ ಎರಡು ಹಾಡುಗಳನ್ನು ಹಾಡಿದ್ದು, ಅವೆರಡೂ ಕೂಡ ಹಂಸಲೇಖಾರ ಮಾಂತ್ರಿಕ ಸಂಗೀತ ಸ್ಪರ್ಶದೊಂದಿಗೆ ಅಜರಾಮರವಾಗುಳಿದಿದ್ದೆಲ್ಲವೂ ಈಗ ಇತಿಹಾಸ.

  • ‘ಓಂ’ಕಾರ ಪಠಿಸಿ ಅಳುತ್ತಿದ್ದ ಮಗುವನ್ನ ಕೆಲವೇ ಸೆಕೆಂಡ್‍ನಲ್ಲಿ ಮಲಗಿಸಿದ ತಂದೆ- ವಿಡಿಯೋ ವೈರಲ್

    ‘ಓಂ’ಕಾರ ಪಠಿಸಿ ಅಳುತ್ತಿದ್ದ ಮಗುವನ್ನ ಕೆಲವೇ ಸೆಕೆಂಡ್‍ನಲ್ಲಿ ಮಲಗಿಸಿದ ತಂದೆ- ವಿಡಿಯೋ ವೈರಲ್

    ವಾಷಿಂಗ್ಟನ್: ಋಷಿಮುನಿಗಳು, ತಪಸ್ವಿಗಳು ಓಂಕಾರ ಪಠಿಸುತ್ತಾ ವರ್ಷಾನುಗಟ್ಟಲೆ ಜಪ ಮಾಡುತ್ತಿದ್ದರು ಎಂಬ ಬಗ್ಗೆ ಕೇಳಿದ್ದೀವಿ. ಆದ್ರೆ ಮಗುವಿನ ಅಳುವನ್ನ ನಿಲ್ಲಿಸೋಕೆ ಓಂ ಅಂತ ಹೇಳಿದ್ರೆ ಅದು ಕೇಳುತ್ತಾ? ಹೌದು, ಕೇಳುತ್ತೆ. ಅದಕ್ಕೆ ಉದಾಹರಣೆ ಈ ವಿಡಿಯೋ. ವ್ಯಕ್ತಿಯೊಬ್ಬರು ಅಳುತ್ತಿದ್ದ ಪುಟ್ಟ ಕಂದನ ಕಿವಿಯಲ್ಲಿ ‘ಓಂ’ ಎಂದು ಪಠಿಸಿದ ನಂತರ ಅದು ಮಂತ್ರಮುಗ್ಧವಾದಂತೆ ನಿದ್ರೆಗೆ ಜಾರುತ್ತದೆ. ಆಚ್ಚರಿಯಾದ್ರೂ ಇದನ್ನ ನಂಬಲೇಬೇಕು.

    ಅಲ್ಲದೆ ಇದು ನಡೆದಿರೋದು ಭಾರತದಲ್ಲಲ್ಲ. ಕ್ಯಾಲಿಫೋರ್ನಿಯಾದ ಸ್ಯಾನ್ ಡೀಗೋ ನಿವಾಸಿಯಾದ ಡೇನಿಯಲ್ ಐಸೆನ್‍ಮ್ಯಾನ್, ಫೇಸ್‍ಬುಕ್ ಲೈವ್ ವಿಡಿಯೋ ಮಾಡ್ತಿದ್ರು. ಈ ವೇಳೆ ಅಳೋಕೆ ಶುರು ಮಾಡಿದ್ದ ಮಗುವನ್ನ ಸಿಂಪಲ್ ಟ್ರಿಕ್ ಬಳಸಿ ಮಲಗಿಸಿದ್ರು. ಓಂ ಎಂದು ಪಠಿಸುತ್ತಲೇ ಮಗು ನಿದ್ರೆಗೆ ಜಾರಿತು. ವಿಡಿಯೋದ ಈ ಭಾಗವನ್ನ ಡೇನಿಯಲ್ ಏಪ್ರಿಲ್ 22 ರಂದು ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

    ಡೇನಿಯಲ್ ಅವರ ಈ ಟ್ರಿಕ್ ನೋಡಿದವರು ಬರೆಗಾಗಿದ್ದಾರೆ. ಈ ವಿಡಿಯೋ ಈವರೆಗೆ 3.5 ಕೋಟಿಗೂ ಹೆಚ್ಚು ಬಾರಿ ವೀಕ್ಷಣೆಯಾಗಿದ್ದು 3.6 ಲಕ್ಷಕ್ಕೂ ಹೆಚ್ಚು ಬಾರಿ ಶೇರ್ ಆಗಿದೆ. ಅಲ್ಲದೆ 2.4 ಲಕ್ಷಕ್ಕೂ ಹೆಚ್ಚು ರಿಯಾಕ್ಷನ್ಸ್, 92 ಲಕ್ಷಕ್ಕೂ ಹೆಚ್ಚು ಕಮೆಂಟ್ಸ್ ಗಳಿಸಿದೆ.

    ‘ಓಂ’ ಎಂದು ಪಠಿಸುವಾಗ ಅದರ ವೈಬ್ರೇಷನ್‍ನಿಂದ ಮಗು ನಿದ್ರೆಗೆ ಜಾರುತ್ತದೆ. ತಂದೆ ಓಂ ಎಂದು ಹೇಳುವ ಗತಿಯನ್ನ ನಿಧಾನವಾಗಿ ಬದಲಿಸುತ್ತಾರೆ. ಇದು ನಿಜಕ್ಕೂ ಸುಂದರ ಎಂದು ವ್ಯಕ್ತಿಯೊಬ್ಬರು ಕಮೆಂಟ್ ಮಾಡಿದ್ದಾರೆ. ಅಲ್ಲದೆ ಮಗುವನ್ನ ಸುಮ್ಮನಿರಿಸಲು ನಾವೂ ಕೂಡ ಈ ಟ್ರಿಕ್ ಪ್ರಯೋಗ ಮಾಡಿದ್ವಿ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

    https://www.facebook.com/DanielEisenman/videos/1524632837547223/