Tag: ಒಸಾಮಾ ಬಿನ್ ಲಾಡೆನ್

  • ಭಾರತ-ಪಾಕ್ ಸಂಘರ್ಷ – ಬಿನ್ ಲಾಡೆನ್ ಆಪ್ತನ ಮಗ ಈಗ ಪಾಕ್ ಸೇನಾ ವಕ್ತಾರ

    ಭಾರತ-ಪಾಕ್ ಸಂಘರ್ಷ – ಬಿನ್ ಲಾಡೆನ್ ಆಪ್ತನ ಮಗ ಈಗ ಪಾಕ್ ಸೇನಾ ವಕ್ತಾರ

    ಇಸ್ಲಾಮಾಬಾದ್: ಭಾರತ-ಪಾಕ್ (India-Pakistan) ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ವೇಳೆ ಪಾಕ್ ಸೇನೆಗೆ ಸಂಬಂಧಿಸಿದ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಉಗ್ರ ಒಸಾಮಾ ಬಿನ್ ಲಾಡೆನ್‌ (Osama Bin Laden) ಆಪ್ತನ ಮಗನೇ ಈಗ ಪಾಕ್ ಸೇನಾ ವಕ್ತಾರ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿದುಬಂದಿದೆ.

    ಭಾರತದ ವಿರುದ್ಧ ಪಾಕಿಸ್ತಾನದ ಅಘೋಷಿತ ಕದನ ಸಾಗಿರುವ ನಡುವೆಯೇ ಪಾಕಿಸ್ತಾನ ಸೇನಾ ಪಡೆಗಳ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ಐಎಸ್‌ಪಿಆರ್) ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ ಅವರು ಒಸಾಮಾ ಬಿನ್ ಲ್ಯಾಡೆನ್ ಆಪ್ತನ ಮಗ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಇದನ್ನೂ ಓದಿ: ಆಪರೇಷನ್‌ ಸಿಂಧೂರ ಮುಂದುವರಿಯುತ್ತದೆ – ಭಾರತೀಯ ವಾಯುಸೇನೆ ಅಧಿಕೃತ ಘೋಷಣೆ

    ಅಲ್‌ಖೈದಾ ಸಂಸ್ಥಾಪಕ ಉಗ್ರ ಒಸಾಮಾ ಬಿನ್ ಲಾಡೆನ್ ಆಪ್ತ ಪಾಕಿಸ್ತಾನದ ಪರಮಾಣು ವಿಜ್ಞಾನಿ ಸುಲ್ತಾನ್ ಬಶೀರುದ್ದೀನ್ ಮಹಮೂದ್ ಅವರ ಮಗ ಅಹ್ಮದ್ ಷರೀಫ್ ಚೌಧರಿ ಈಗಿನ ಪಾಕ್ ಸಾರ್ವಜನಿಕ ಸಂಪರ್ಕಾಧಿಕಾರಿಯೆಂದು ತಿಳಿದುಬಂದಿದೆ.

    ಈ ಮೊದಲು ಲಾಡೆನ್ ಆಪ್ತ ಉಗ್ರರಿಗೆ ಪರಮಾಣು ಶಸ್ತ್ರಾಸ್ತ್ರ ತಂತ್ರಜ್ಞಾನ ಹಸ್ತಾಂತರಿಸಲು ಯತ್ನಿಸಿದ್ದರು ಹಾಗೂ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದರು ಎಂದು ಆರೋಪ ಹೊತ್ತಿದ್ದರು. ಬಳಿಕ ಅವರನ್ನು ವಿಶ್ವಸಂಸ್ಥೆ ನಿರ್ಬಂಧಿಸಿತ್ತು.ಇದನ್ನೂ ಓದಿ: 6 ವರ್ಷಗಳ ಬಳಿಕ ಪುಲ್ವಾಮಾ ದಾಳಿಯಲ್ಲಿ ತನ್ನ ಪಾತ್ರ ಒಪ್ಪಿಕೊಂಡ ಕುತಂತ್ರಿ ಪಾಕ್‌

  • ಎಂದಿಗೂ ಲಾಡೆನ್ ಭೇಟಿಯಾಗಿಲ್ಲ: ಭಾರತದಿಂದ ತಪ್ಪು ಮಾಹಿತಿ ಎಂದ ಜಾಗತಿಕ ಉಗ್ರ

    ಎಂದಿಗೂ ಲಾಡೆನ್ ಭೇಟಿಯಾಗಿಲ್ಲ: ಭಾರತದಿಂದ ತಪ್ಪು ಮಾಹಿತಿ ಎಂದ ಜಾಗತಿಕ ಉಗ್ರ

    ಇಸ್ಲಾಮಾಬಾದ್: ವಿಶ್ವಸಂಸ್ಥೆಯಿಂದ (United Nations) ಜಾಗತಿಕ ಭಯೋತ್ಪಾದಕ (Global Terrorist) ಎಂದು ಹೆಸರಿಸಲಾದ ಲಷ್ಕರ್-ಎ-ತೈಬಾ (LeT) ಭಯೋತ್ಪಾದಕ ಅಬ್ದುಲ್ ರೆಹಮಾನ್ ಮಕ್ಕಿ (Abdul Rehman Makki) ತಾನು ಅಲ್-ಖೈದಾ ಹಾಗೂ ಇಸ್ಲಾಮಿಕ್ ಜೊತೆಗೆ ಸಂಪರ್ಕ ಹೊಂದಿರುವ ಆರೋಪವನ್ನು ನಿರಾಕರಿಸುವ ಹೊಸ ವೀಡಿಯೋವನ್ನು ಬಿಡುಗಡೆ ಮಾಡಿದ್ದಾನೆ.

    ಭಾರತ (India) ಸರ್ಕಾರ ನನ್ನ ವಿರುದ್ಧ ತಪ್ಪು ಮಾಹಿತಿ ನೀಡಿದೆ. ಇದರ ಆಧಾರದ ಮೇಲೆ ನನ್ನನ್ನು ಜಾಗತಿಕ ಭಯೋತ್ಪಾದಕರ ಪಟ್ಟಿಗೆ ಸೇರಿಸಲಾಗಿದೆ. ಕೆಲ ವರದಿಗಳಂತೆ ನಾನು ಒಸಾಮಾ ಬಿನ್ ಲಾಡೆನ್ (Osama Bin Laden), ಅಯ್ಮನ್ ಅಲ್-ಜವಾಹಿರಿ ಅಥವಾ ಅಬ್ದುಲ್ಲಾ ಅಜಮ್ ಅವರನ್ನು ಭೇಟಿಯಾಗಿಲ್ಲ ಎಂದು ಮಕ್ಕಿ ಹೇಳಿದ್ದಾನೆ. ಇದನ್ನೂ ಓದಿ: ಉಗ್ರರ ಜೊತೆ ಸಂಪರ್ಕ, ಭಾರತದಲ್ಲಿ ಶಾಂತಿ ಕದಡಲು ಸಂಚು- ಬೆಂಗಳೂರಿನ ಇಬ್ಬರ ವಿರುದ್ಧ NIA ಚಾರ್ಜ್‌ಶೀಟ್‌ ಸಲ್ಲಿಕೆ

    ಭಾರತ ಹಾಗೂ ಅಮೆರಿಕದ ಪ್ರಸ್ತಾವನೆಯನ್ನು ಒಪ್ಪಿರುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿ 1267 ಅಲ್ ಖೈದಾ ನಿರ್ಬಂಧಗಳ ಸಮಿತಿಯು ಸೋಮವಾರ ಜಾಗತಿಕ ಭಯೋತ್ಪಾದಕರ ಪಟ್ಟಿಗೆ ಮಕ್ಕಿಯನ್ನು ಸೇರಿಸಿದೆ. ಇದರ ಅನ್ವಯ ಮಕ್ಕಿಯ ಆಸ್ತಿಗಳ ಸ್ಥಗಿತ, ಪ್ರಯಾಣ ನಿಷೇಧ ಹಾಗೂ ಶಸ್ತ್ರಾಸ್ತ್ರ ಬಳಕೆಗೆ ನಿರ್ಬಂಧ ಹೇರಲಾಗುತ್ತದೆ.

    ಹಫೀಜ್ ಸಯೀದ್ ಹಾಗೂ ಇತರ ಕೆಲವು ಎಲ್‌ಇಟಿ ಹಾಗೂ ಜೆಯುಡಿಯ ನಾಯಕರಿಗೆ ಭಯೋತ್ಪಾದನೆಗೆ ಹಣಕಾಸು ನೆರವು ನೀಡಿರುವ ಆರೋಪದ ಮೇಲೆ 2019ರಿಂದ ಮಕ್ಕಿ ಲಾಹೋರ್‌ನ ಜೈಲಿನಲ್ಲಿದ್ದಾನೆ (Lahore Jail). ಇದನ್ನೂ ಓದಿ: ಮೂರು ವರ್ಷದ ಮಗಳನ್ನು ಕೊಂದು ಚಲಿಸುತ್ತಿರುವ ರೈಲಿನಿಂದ ಎಸೆದ ಕ್ರೂರಿ ತಾಯಿ!

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಿನ್ ಲಾಡೆನ್ ಕುಟುಂಬದಿಂದ ಪ್ರಿನ್ಸ್ ಚಾರ್ಲ್ಸ್ ಚಾರಿಟಿಗೆ ಭಾರೀ ಮೊತ್ತದ ದೇಣಿಗೆ

    ಬಿನ್ ಲಾಡೆನ್ ಕುಟುಂಬದಿಂದ ಪ್ರಿನ್ಸ್ ಚಾರ್ಲ್ಸ್ ಚಾರಿಟಿಗೆ ಭಾರೀ ಮೊತ್ತದ ದೇಣಿಗೆ

    ಲಂಡನ್: ಬ್ರಿಟನ್ ರಾಜಮನೆತನದ ಉತ್ತರಾಧಿಕಾರಿ ಪ್ರಿನ್ಸ್ ಚಾರ್ಲ್ಸ್ ಅವರ ದತ್ತಿ ಟ್ರಸ್ಟ್‌ಗೆ ಇಸ್ಲಾಮಿಕ್ ಉಗ್ರ ಸಂಘಟನೆ ಅಲ್-ಖೈದಾ ಸ್ಥಾಪಕ ಒಸಾಮಾ ಬಿನ್ ಲಾಡೆನ್‌ನ ಕುಟುಂಬ ಭಾರೀ ಮೊತ್ತದ ದೇಣಿಗೆ ನೀಡಿದೆ. ಪ್ರಿನ್ಸ್ ಚಾರ್ಲ್ಸ್‌ನ ಚಾರಿಟೆಬಲ್ ಟ್ರಸ್ಟ್ 1 ಮಿಲಿಯನ್ ಪೌಂಡ್(ಸುಮಾರು 9 ಕೋಟಿ ರೂ.) ದೇಣಿಗೆಯನ್ನು ಪಡೆದಿದೆ ಎಂದು ವರದಿಯಾಗಿದೆ.

    ಬಿನ್ ಲಾಡೆನ್ ಕುಟುಂಬದ ಸದಸ್ಯರು ಯಾವುದೇ ತಪ್ಪು ಮಾಡಿಲ್ಲ ಎಂಬ ಸಲಹೆ ಇಲ್ಲದಿದ್ದರೂ ಇದೀಗ 73 ವರ್ಷಗಳ ಪ್ರಿನ್ಸ್ ಚಾರಿಟಿ ಸಂಸ್ಥೆ ದೇಣಿಗೆಯನ್ನು ಪಡೆದು, ಕ್ರಿಮಿನಲ್ ಅಪರಾಧಗಳ ಆರೋಪದ ಮೇಲೆ ಪರಿಶೀಲನೆಗೆ ಒಳಗಾಗಿದೆ. ಪ್ರಿನ್ಸ್ ಚಾರ್ಲ್ಸ್‌ನ ಸಲಹೆಗಾರರು, ಒಸಾಮಾ ಬಿನ್ ಲಾಡೆನ್‌ಗೆ ಸಂಬಂಧಿಸಿದ ಯಾರಿಂದಲೂ ಹಣ ಪಡೆಯದಂತೆ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ನರೇಂದ್ರ ಮೋದಿಯಿಂದಾಗಿ ನೀವೆಲ್ಲರೂ ಬದುಕಿದ್ದೀರಿ – ಲಸಿಕೆ ಪಡೆದ ಜನತೆಗೆ ಬಿಹಾರ ಸಚಿವ ಮಾತು

    2013ರಲ್ಲಿ ಚಾರ್ಲ್ಸ್ ಒಸಾಮಾಗೆ ಸಂಬಂಧಿಸಿದವರನ್ನು ಭೇಟಿಯಾಗಿದ್ದಾಗ ಪ್ರಿನ್ಸ್ ಆಫ್ ವ್ಹೇಲ್ಸ್ ಚಾರಿಟೆಬಲ್ ಫಂಡ್(ಪಿಡಬ್ಲ್ಯುಸಿಎಫ್)ಗೆ ಹಣ ಸ್ವೀಕರಿಸಲು ಒಪ್ಪಿಗೆ ಸೂಚಿಸಿದ್ದರು. ಆಗಿನ 5 ಟ್ರಸ್ಟಿಗಳು ದತ್ತಿ ಸ್ವೀಕರಿಸುವುದಕ್ಕೆ ಒಪ್ಪಿಗೆ ನೀಡಿದ್ದರು ಎಂದು ಪಿಡಬ್ಲ್ಯುಸಿಎಫ್ ಅಧ್ಯಕ್ಷರು ತಿಳಿಸಿದ್ದಾರೆ. ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ನಿರ್ಬಂಧ ಇನ್ನೆರಡು ದಿನ ವಿಸ್ತರಣೆ

    Live Tv
    [brid partner=56869869 player=32851 video=960834 autoplay=true]

  • ಭಯೋತ್ಪಾದಕ ಒಸಾಮಾನನ್ನು ʼಜೀʼ ಎನ್ನುತ್ತಿದ್ದರು: ಕಾಂಗ್ರೆಸ್‌, ಎಸ್‌ಪಿ ವಿರುದ್ಧ ಮೋದಿ ಆರೋಪ

    ಭಯೋತ್ಪಾದಕ ಒಸಾಮಾನನ್ನು ʼಜೀʼ ಎನ್ನುತ್ತಿದ್ದರು: ಕಾಂಗ್ರೆಸ್‌, ಎಸ್‌ಪಿ ವಿರುದ್ಧ ಮೋದಿ ಆರೋಪ

    ಲಕ್ನೋ: ಸಮಾಜವಾದಿ ಪಾರ್ಟಿ ಹಾಗೂ ಕಾಂಗ್ರೆಸ್‌ ಪಕ್ಷದ ನಾಯಕರು, ಉಗ್ರರ ಮೇಲೆ ಮೃದು ಧೋರಣೆ ಹೊಂದಿವೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.

    ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆ ಹಿನ್ನೆಲೆ ಹಾರ್ಡೋಯಿಯಲ್ಲಿ ಆಯೋಜಿಸಿದ್ದ ರ‍್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ, ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್‌ ನಾಯಕರ ವರ್ತನೆ ಇನ್ನಷ್ಟು ಆತಂಕಕಾರಿಯಾಗಿದೆ. ಇವರು ಒಸಾಮಾ ಅವರಂತಹ ಭಯೋತ್ಪಾದಕರನ್ನು ʼಜೀʼ ಎಂದು ಸಂಬೋಧಿಸುತ್ತಾರೆ. ಬಾಟ್ಲಾ ಹೌಸ್‌ ಎನ್‌ಕೌಂಟರ್‌ನಲ್ಲಿ ಭಯೋತ್ಪಾದಕರ ನಿರ್ಮೂಲನೆಗಾಗಿ ಇವರು ಕಣ್ಣೀರು ಹಾಕಿದರು ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಚುನಾವಣೆ ನಂತರ ಪಂಜಾಬ್‌ನಲ್ಲಿ ಕಾಂಗ್ರೆಸ್ ನಿರ್ನಾಮ: ಅಮರಿಂದರ್ ಸಿಂಗ್

    2008ರ ಅಹಮದಾಬಾದ್‌ ಸರಣಿ ಸ್ಫೋಟದಲ್ಲಿ 56 ಮಂದಿ ಸಾವನ್ನಪ್ಪಿದ್ದು, 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ನೆನಪಿಸಿಕೊಂಡ ಮೋದಿ, ಕೆಲವು ಪಕ್ಷಗಳು ಭಯೋತ್ಪಾಕರ ಬಗ್ಗೆ ಸಹಾನುಭೂತಿ ಹೊಂದಿವೆ ಎಂದು ಕುಟುಕಿದ್ದಾರೆ.

    ಉತ್ತರ ಪ್ರದೇಶದಲ್ಲಿ ನಡೆದಿದ್ದ 14 ಭಯೋತ್ಪಾದಕ ದಾಳಿ ಪ್ರಕರಣಗಳಲ್ಲಿ ಆಗಿನ ಸಮಾಜವಾದಿ ಸರ್ಕಾರ ಹಲವು ಭಯೋತ್ಪಾದಕರ ಮೇಲಿನ ಪ್ರಕರಣಗಳನ್ನು ಹಿಂಪಡೆಯಲು ಆದೇಶ ನೀಡಿತ್ತು. ಈ ಭಯೋತ್ಪಾದಕರು ಸ್ಫೋಟದ ಮೇಲೆ ಸ್ಫೋಟಗಳನ್ನು ನಡೆಸುತ್ತಿದ್ದಾರೆ. ಅಂತಹವರ ಮೇಲೆ ಕ್ರಮ ಜರುಗಿಸಲು ಸಮಾಜವಾದಿ ಪಕ್ಷ ಬಿಡುತ್ತಿಲ್ಲ ಎಂದು ದೂರಿದ್ದಾರೆ. ಇದನ್ನೂ ಓದಿ:  ಪಂಜಾಬ್ ರಾಜ್ಯವನ್ನು ಇಷ್ಟ ಪಡುವವರು, ಮಾಫಿಯಾ ನಡುವಿನ ಚುನಾವಣೆ ಸ್ಪರ್ಧೆಯಾಗಿದೆ: ಸಿಧು

    ಅಖಿಲೇಶ್‌ ಯಾದವ್‌ ಅವರ ಪಕ್ಷವು ಪಾಕಿಸ್ತಾನ ಮತ್ತು ಮಹಮ್ಮದ್‌ ಅಲಿ ಜಿನ್ನಾ ಅವರ ಬೆಂಬಲಿಗರು ಎಂದು ಚುನಾವಣಾ ಪ್ರಚಾರದ ಪೂರ್ವದಲ್ಲಿ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಆರೋಪಿಸಿದ್ದರು. ಎಸ್‌ಪಿ ಮುಖ್ಯಸ್ಥ ಮುಲಾಯಂ ಸಿಂಗ್‌ ಯಾದವ್‌ ಅವರನ್ನು ʼಮೌಲಾನಾ ಮುಲಾಯಂʼ ಎಂದು ಬಿಜೆಪಿ ನಾಯಕರು ಕರೆದಿದ್ದರು. ಇದನ್ನೂ ಓದಿ: ತೃಣಮೂಲ ಕಾಂಗ್ರೆಸ್ ಹಿರಿಯ ನಾಯಕ ಸಾಧನ್ ಪಾಂಡೆ ಇನ್ನಿಲ್ಲ

  • ಉಗ್ರ ಒಸಾಮಾ ಬಿನ್ ಲಾಡೆನ್‍ನನ್ನು ಹುತಾತ್ಮ ಎಂದ ಇಮ್ರಾನ್ ಖಾನ್

    ಉಗ್ರ ಒಸಾಮಾ ಬಿನ್ ಲಾಡೆನ್‍ನನ್ನು ಹುತಾತ್ಮ ಎಂದ ಇಮ್ರಾನ್ ಖಾನ್

    ನವದೆಹಲಿ: ಪಾಕಿಸ್ತಾನಿಗಳು ಉಗ್ರರನ್ನು ಎಷ್ಟು ಗೌರವಿಸುತ್ತಾರೆ ಎಂಬುದಕ್ಕೆ ಮತ್ತೊಂದು ಉದಾಹರಣೆ ಲಭ್ಯವಾಗಿದ್ದು, ಸ್ವತಃ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸಂಸತ್‍ನಲ್ಲೇ ಅಮೆರಿಕ ಸೈನಿಕರು ಹತ್ಯೆ ಮಾಡಿದ ಅಲ್ ಖೈದಾ ಮುಖ್ಯಸ್ಥ, ಉಗ್ರ ಒಸಾಮಾ ಬಿನ್ ಲಾಡೆನ್‍ಗೆ ಹುತಾತ್ಮ ಪಟ್ಟವನ್ನು ನೀಡಿ ಗೌರವಿಸಿದ್ದಾರೆ.

    ಇಮ್ರಾನ್ ಖಾನ್ ಪಾಕಿಸ್ತಾನದ ಪಾರ್ಲಿಮೆಂಟ್‍ನಲ್ಲಿ ಮಾತನಾಡಿರುವ ವಿಡಿಯೋ ಇದೀಗ ವೈರಲ್ ಆಗಿದ್ದು, ಈ ಮೂಲಕ ಪಾಕಿಸ್ತಾನ ಉಗ್ರರಿಗೆ ಎಷ್ಟು ಗೌರವ ಕೊಡುತ್ತದೆ ಎಂಬುದು ಬಯಲಾಗಿದೆ. ಪಾಕಿಸ್ತಾನಕ್ಕೆ ಯಾವುದೇ ಮಾಹಿತಿ ನೀಡದೆ ಅಮೆರಿಕ ಸೈನಿಕರು ಪಾಕಿಸ್ತಾನಕ್ಕೆ ನುಗ್ಗಿ ಒಸಾಮಾ ಬಿನ್ ಲಾಡೆನ್‍ನನ್ನು ಹತ್ಯೆ ಮಾಡಿದರು. ಬಳಿಕ ವಿಶ್ವದ ಪ್ರತಿಯೊಬ್ಬರೂ ಪಾಕಿಸ್ತಾನವನ್ನು ನಿಂದಿಸಲು ಪ್ರಾರಂಭಿಸಿದರು. ಈ ಮೂಲಕ ಮುಜುಗರಕ್ಕೀಡು ಮಾಡಿದರು ಎಂದು ದೂರಿದ್ದಾರೆ.

    ಭಯೋತ್ಪಾದನೆ ವಿರುದ್ಧ ಯುಎಸ್ ನಡೆಸಿದ ಯುದ್ಧದಲ್ಲಿ 70 ಸಾವಿರ ಪಾಕಿಸ್ತಾನಿಗಳು ಸಾವನ್ನಪ್ಪಿದರು ಎಂದು ಖಾನ್ ಹೇಳಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಒಸಾಮಾ ಬಿನ್ ಲಾಡೆನ್ ಹುತಾತ್ಮನೇ ಎಂದು ಜನ ಪ್ರಶ್ನಿಸುತ್ತಿದ್ದಾರೆ.

    ವಿಶ್ವ ವಾಣಿಜ್ಯ ಕೇಂದ್ರದ ದಾಳಿಯ ರೂವಾರಿ, ಆಲ್ ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್‍ನನ್ನು 2011ರ ಮೇ 2 ರಂದು ಅಮೆರಿಕ ನೌಕಾಪಡೆ ಹತ್ಯೆ ಮಾಡಿದೆ. ಒಸಾಮಾ ತಂಗಿದ್ದ ಪಾಕಿಸ್ತಾನದ ಅಬೋಟಾಬಾದ್ ನಿವಾಸದ ಮೇಲೆ ಅಮೆರಿಕ ನೌಕಾಪಡೆಯ ಸೀಲ್ ಕಮಾಂಡೊಗಳು ದಾಳಿ ನಡೆಸಿ ಹತ್ಯೆ ಮಾಡಿತ್ತು. ನಂತರ ಈ ಕುರಿತು ಸಾಕಷ್ಟು ಚರ್ಚೆ ನಡೆದಿತ್ತು. ಈತ ಉಗ್ರ ಎಂಬುದು ವಿಶ್ವಕ್ಕೆ ತಿಳಿದಿದ್ದರಿಂದ ಈತನ ಹತ್ಯೆಯಾದರೂ ಪಾಕಿಸ್ತಾನ ತುಟಿ ಬಿಚ್ಚಿರಲಿಲ್ಲ. ಇದೀಗ ಇಮ್ರಾನ್ ಖಾನ್ ಒಸಾಮಾ ಹುತಾತ್ಮ ಎಂದು ಹೇಳಿದ್ದಾರೆ.

  • ಒಸಾಮಾ ಮಗ ಹಮ್ಜಾ ಬಿನ್ ಲಾಡೆನ್ ಹತ

    ಒಸಾಮಾ ಮಗ ಹಮ್ಜಾ ಬಿನ್ ಲಾಡೆನ್ ಹತ

    ವಾಶಿಂಗ್ಟನ್: ಅಲ್ ಖೈದಾ ಸಂಸ್ಥಾಪಕ ಒಸಾಮಾ ಬಿನ್ ಲಾಡೆನ್ ಪುತ್ರ ಹಾಗೂ ಉಗ್ರ ಸಂಘಟನೆಗೆ ಮುಂದಿನ ಉತ್ತರಾಧಿಕಾರಿ ಎಂದೇ ಬಿಂಬಿತವಾಗಿದ್ದ ಹಮ್ಜಾ ಬಿನ್ ಲಾಡೆನ್ ಸಾವನ್ನಪ್ಪಿರುವುದು ಅಧಿಕೃತವಾಗಿ ಘೋಷಣೆಯಾಗಿದೆ.

    ಈ ಕುರಿತು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಚಿತಪಡಿಸಿದ್ದು, ಅಫ್ಘಾನಿಸ್ತಾನ-ಪಾಕಿಸ್ತಾನ ಗಡಿಯಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ವೇಳೆ ಅಲ್ ಖೈದಾ ಸಂಸ್ಥಾಪಕ ಒಸಾಮಾ ಬಿನ್ ಲಾಡೆನ್ ಪುತ್ರ ಹಮ್ಜಾ ಬಿನ್ ಲಾಡೆನ್ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದ್ದಾರೆ.

    ಹಮ್ಜಾ ಬಿನ್ ಲಾಡೆನ್ ಸಾವು ಅಲ್ ಖೈದಾ ಸಂಘಟನೆಗೆ ಭಾರೀ ನಷ್ಟವನ್ನುಂಟುಮಾಡಿದ್ದು, ಸಂಘಟನೆಯ ಪ್ರಮುಖ ನಾಯಕತ್ವದ ಕೌಶಲ್ಯ ಹಾಗೂ ತಂದೆಯೊಂದಿಗಿನ ಸಾಂಕೇತಿಕ ಸಂಪರ್ಕವನ್ನು ಕಳೆದುಕೊಂಡಂತಾಗಿದೆ. ಅಲ್ಲದೆ, ಗುಂಪಿನ ಪ್ರಮುಖ ಕಾರ್ಯ ಚಟುವಟಿಕೆಗಳಿಗೆ ತೀವ್ರ ಹೊಡೆತ ಬೀಳಲಿದೆ ಎಂದು ಶ್ವೇತ ಭವನ ಹೊರಡಿಸಿದ ಹೇಳಿಕೆಯಲ್ಲಿ ಟ್ರಂಪ್ ತಿಳಿಸಿದ್ದಾರೆ.

    ಹಮ್ಜಾ ಬಿನ್ ಲಾಡೆನ್ ಸಾವನ್ನಪ್ಪಿದ್ದಾನೆ ಎಂದು ಗುಪ್ತಚರ ಅಧಿಕಾರಿಗಳ ಮಾಹಿತಿಯನ್ನಾಧರಿಸಿ ಯುಎಸ್ ಮಾಧ್ಯಮಗಳು ಆಗಸ್ಟ್ ನಲ್ಲಿ ವರದಿ ಮಾಡಿತ್ತು.

    ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್ ಸಹ ಕಳೆದ ತಿಂಗಳಲ್ಲಿ ಹಮ್ಜಾ ಬಿನ್ ಲಾಡೆನ್ ಸಾವನ್ನು ದೃಢಪಡಿಸಿದ್ದರು. ಆದರೆ, ನೇರವಾಗಿ ಹೇಳಿರಲಿಲ್ಲ. ಬಿನ್ ಲಾಡೆನ್ ಸಾವನ್ನಪ್ಪಿದ್ದಾನೆ ಎಂಬುದು ನನ್ನ ಅನಿಸಿಕೆ ಎಂದು ಪರೋಕ್ಷವಾಗಿ ಹೇಳಿದ್ದರು. ಈ ಕುರಿತು ಡೊನಾಲ್ಡ್ ಟ್ರಂಪ್ ಹಾಗೂ ಇತರ ಹಿರಿಯ ಅಧಿಕಾರಿಗಳು ಈ ಸುದ್ದಿಯನ್ನು ಸಾರ್ವಜನಿಕವಾಗಿ ದೃಢಪಡಿಸಿರಲಿಲ್ಲ.

    ಒಸಾಮಾ ಬಿನ್ ಲಾಡೆನ್‍ನ 20 ಮಕ್ಕಳಲ್ಲಿ ಈತ 15ನೇಯವನಾಗಿದ್ದು, ಮೂರನೇ ಹೆಂಡತಿ ಮಗನಾಗಿದ್ದಾನೆ. ಈತನ ವಯಸ್ಸು ಸುಮಾರು 30 ವರ್ಷ ಎಂದು ಭಾವಿಸಲಾಗಿದೆ. ಅಲ್ ಖೈದಾ ಸಂಘಟನೆಯಲ್ಲಿ ನಾಯಕನಾಗಿ ಹೊರಮ್ಮುತ್ತಿದ್ದ. ಈತನನ್ನು ಪತ್ತೆಹಚ್ಚಿದರೆ 1 ಮಿಲಿಯನ್ ಡಾಲರ್(7.10 ಕೋಟಿ ರೂ.) ನೀಡುವುದಾಗಿ ಅಮೆರಿಕ ಫೆಬ್ರವರಿಯಲ್ಲಿ ಘೋಷಿಸಿತ್ತು.

  • ಉಗ್ರ ಮಸೂದ್ ಸಾವನ್ನಪ್ಪಿಲ್ಲ – ಪಾಕ್ ಮಾಧ್ಯಮ

    ಉಗ್ರ ಮಸೂದ್ ಸಾವನ್ನಪ್ಪಿಲ್ಲ – ಪಾಕ್ ಮಾಧ್ಯಮ

    ಶ್ರೀನಗರ: ಹಲವಾರು ವಿಧ್ವಂಸಕ ಕೃತ್ಯಗಳ ರೂವಾರಿ ಜೈಷ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಸಾವನ್ನಪ್ಪಿದ್ದಾನೆ ಎನ್ನುವ ಸುದ್ದಿ ಭಾನುವಾರ ಸಂಜೆ ಭಾರತದ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ ರಾತ್ರಿ ಅಜರ್ ಮೃತಪಟ್ಟಿಲ್ಲ ಆತ ಜೀವಂತವಾಗಿದ್ದಾನೆ ಎಂದು ಪಾಕ್ ಮಾಧ್ಯಮವೊಂದು ಹೇಳಿದೆ.

    ಜಿಯೋ ಉರ್ದು ವಾಹಿನಿ ಅಜರ್ ಕುಟುಂಬಸ್ಥರನ್ನು ಸಂಪರ್ಕಿಸಿ ಈ ವರದಿ ಮಾಡಿದೆ. ಆದರೆ ಆತನ ಆರೋಗ್ಯ ಮಾಹಿತಿ ಹೇಗಿದೆ ಎನ್ನುವುದು ತಿಳಿದು ಬಂದಿಲ್ಲ. ಪಾಕಿಸ್ತಾನದ ಸಚಿವ ಫಾವದ್ ಚೌಧರಿ ಅವರಲ್ಲಿ ಈ ವಿಚಾರದ ಬಗ್ಗೆ ಕೇಳಿದಾಗ, ನನಗೆ ಈ ಕ್ಷಣದಲ್ಲಿ ಏನು ತಿಳಿದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

    50 ವರ್ಷದ ಅಜರ್ ಮೃತಪಟ್ಟ ಬಗ್ಗೆ ಎರಡು ಸುದ್ದಿಗಳು ಹರಿದಾಡಿತ್ತು. ಭಾರತದ ಏರ್ ಸ್ಟ್ರೈಕ್ ನಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಆತ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ ಎಂದು ಒಂದು ಸುದ್ದಿಯಾಗಿದ್ದರೆ ಇನ್ನೊಂದು ರಾವಲ್ಪಿಂಡಿ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಸೂದ್ ಅಜರ್ ಲಿವರ್ ಕ್ಯಾನ್ಸರ್ ನಿಂದ ಮೃತಪಟ್ಟಿದ್ದಾನೆ ಎನ್ನುವ ಸುದ್ದಿ ಹರಿದಾಡಿತ್ತು.

    ಸದ್ಯ ಆತನ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಪಾಕ್ ವಿದೇಶಾಂಗ ಸಚಿವರೇ ಹೇಳಿದ್ದರು. ಅಜರ್ ಸಾವನ್ನಪ್ಪಿದ್ದಾನೆ ಅಥವಾ ಜೀವಂತವಾಗಿದ್ದಾನೆ ಎನ್ನುವ ಬಗ್ಗೆ ಪಾಕಿಸ್ತಾನ ಸರ್ಕಾರ ಯಾವುದೇ ಅಧಿಕೃತ ಮಾಹಿತಿಯನ್ನು ತಿಳಿಸಿಲ್ಲ.

    ಬಾಲಕೋಟ್ ಏರ್ ಸ್ಟ್ರೈಕ್ ನಡೆದ ಬಳಿಕ ಹಣಕಾಸು ಸಚಿವ ಅರುಣ್ ಜೇಟ್ಲಿ ಪ್ರತಿಕ್ರಿಯಿಸಿ, ಈಗಿನ ಕಾಲದಲ್ಲಿ ಯಾವುದು ಅಸಾಧ್ಯವಲ್ಲ. ದೂರದ ಅಮೇರಿಕವೇ ಪಾಕ್‍ಗೆ ನುಗ್ಗಿ ಅಲ್ ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್‍ನನ್ನು ಹೊಸಕಿ ಹಾಕಿದೆ. ಇಂತಹ ಕೆಲಸ ನಮ್ಮಿಂದ ಆಗುವುದಿಲ್ಲವೇ? ನೆರೆಯ ದೇಶಕ್ಕೆ ನುಗ್ಗಿ ಉಗ್ರರನ್ನು ಮಟ್ಟ ಹಾಕುವ ತಾಕತ್ತು ಭಾರತಕ್ಕೂ ಇದೆ ಎಂದು ಹೇಳಿ ಸರ್ಜಿಕಲ್ ಸ್ಟ್ರೈಕ್ ಅನ್ನು ಸಮರ್ಥಿಸಿಕೊಂಡಿದ್ದರು. ಅಷ್ಟೇ ಅಲ್ಲದೇ ನಾವು ಏನು ಮಾಡಬೇಕು ಎಂದು ಪ್ಲಾನ್ ಮಾಡಿದ್ದೇವೋ ಅವು ಎಲ್ಲ ಯಶಸ್ವಿಯಾಗಿದೆ ಎಂದು ಹೇಳಿದ್ದರು. ಇದನ್ನೂ ಓದಿ: ಬಾಲಕೋಟ್ ಉಗ್ರರ ಕ್ಯಾಂಪ್‍ನಿಂದ ಸಾಗಿಸಲಾಗಿತ್ತು 35 ಶವ: ಪ್ರತ್ಯಕ್ಷದರ್ಶಿಗಳಿಂದ ಬಯಲಾಯ್ತು ಪಾಕ್ ಬಣ್ಣ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv