Tag: ಒವೈಸ್ ಶಾ

  • ಟಗರು ಸಿನಿಮಾ ವೀಕ್ಷಿಸಿದ ಇಂಗ್ಲೆಂಡ್ ಕ್ರಿಕೆಟ್ ಆಟಗಾರ!

    ಟಗರು ಸಿನಿಮಾ ವೀಕ್ಷಿಸಿದ ಇಂಗ್ಲೆಂಡ್ ಕ್ರಿಕೆಟ್ ಆಟಗಾರ!

    ಬೆಂಗಳೂರು: ಟಗರು ಸಿನಿಮಾ ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾವನ್ನು ಸ್ಯಾಂಡಲ್‍ವುಡ್ ನಟರು ನೋಡಿ ಮೆಚ್ಚಿಕೊಂಡಿದ್ದಾರೆ. ಆದರೆ ಈಗ ಇಂಗ್ಲೆಂಡ್ ತಂಡದ ಆಟಗಾರ ಒವೈಸ್ ಶಾ ಟಗರು ಸಿನಿಮಾವನ್ನು ವೀಕ್ಷಿಸಿದ್ದಾರೆ.

    ಇಂಗ್ಲೆಂಡ್ ಆಟಗಾರ ಒವೈಸ್ ಶಾ ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾವನ್ನು ನೋಡಿದ್ದಾರೆ. ಟಗರು ಸಿನಿಮಾ ವೀಕ್ಷಿಸಿದ ಅವರು ಶಿವರಾಜ್‍ಕುಮಾರ್ ಅಭಿನಯವನ್ನು ಮೆಚ್ಚಿಕೊಂಡಿದ್ದಾರೆ. ಶಾ ಟಗರು ಸಿನಿಮಾವನ್ನು ನೋಡಿ ಮಚ್ಚಿಕೊಂಡು ಸ್ವತಃ ಶಿವರಾಜ್‍ಕುಮಾರ್ ಶೂಟಿಂಗ್ ಸೆಟ್‍ಗೆ ಭೇಟಿ ನೀಡಿ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

    ಟಗರು ಸಿನಿಮಾವನ್ನು ನೋಡಿ ಟ್ವಿಟ್ಟರಿನಲ್ಲಿ ತಮ್ಮ ಸಂತಸವನ್ನು ವ್ಯಕ್ತಪಡಿಸಿರುವ ಓವೈಸ್, ನಾನು ಮೊಟ್ಟ ಮೊದಲ ಕನ್ನಡದ ಟಗರು ಸಿನಿಮಾವನ್ನು ವೀಕ್ಷಿಸಿದ್ದೇನೆ. ಗ್ರೇಟ್ ಶಿವಣ್ಣ ಎಂದು ಶಿವರಾಜ್‍ಕುಮಾರ್ ಜೊತೆಗಿರುವ ಫೋಟೋವನ್ನು ಟ್ವಿಟ್ಟರಿನಲ್ಲಿ ಹಾಕಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಟಗರು ಸಿನಿಮಾ ವೀಕ್ಷಿಸಿ ಮಾನ್ವಿತಾರನ್ನು ಬುಕ್ ಮಾಡಿದ ರಾಮ್ ಗೋಪಾಲ್‍ವರ್ಮ!