Tag: ಒಳಚರಂಡಿ

  • ಬಾಗಲಕೋಟೆ| ರಸ್ತೆಗಳಲ್ಲಿ ಶೌಚಗುಂಡಿ, ಒಳಚರಂಡಿ ತುಂಬಿ ಮನೆಗೆ ನುಗ್ಗುತ್ತಿವೆ ಕೊಳಚೆ ನೀರು

    ಬಾಗಲಕೋಟೆ| ರಸ್ತೆಗಳಲ್ಲಿ ಶೌಚಗುಂಡಿ, ಒಳಚರಂಡಿ ತುಂಬಿ ಮನೆಗೆ ನುಗ್ಗುತ್ತಿವೆ ಕೊಳಚೆ ನೀರು

    ಬಾಗಲಕೋಟೆ: ವಿದ್ಯಾಗಿರಿಯಲ್ಲಿ ಒಳಚರಂಡಿ ನಿರ್ವಹಣೆಯನ್ನು ಬಾಗಲಕೋಟೆ (Bagalkote) ಪಟ್ಟಣ ಅಭಿವೃದ್ಧಿ ಪ್ರಾಧಿಕಾರ (BTDA) ಬಿಟಿಡಿಎ ಕೈ ಬಿಟ್ಟಿದೆ. ಪರಿಣಾಮ ರಸ್ತೆಗಳಲ್ಲಿ ಶೌಚಗುಂಡಿಗಳು, ಒಳಚರಂಡಿ ತುಂಬಿ ಹರಿಯುತ್ತಿದ್ದು ಕೊಳಚೆ ನೀರು ಮನೆಗಳಿಗೆ ನುಗ್ಗುತ್ತಿದೆ.

    ದಿಢೀರ್‌ ನಿರ್ಮಾಣವಾಗಿರುವ ಈ ಸ್ಥಿತಿಯಿಂದ ನಗರಸಭೆ ಸಿಬ್ಬಂದಿಯೂ ಅಸಹಾಯಕರಾಗಿದ್ದಾರೆ. ವಿದ್ಯಾಗಿರಿ ನಗರಸಭೆ ನಿರ್ವಹಣೆಗೆ ಒಳಪಟ್ಟರೂ ಈವರೆಗೆ ಇಲ್ಲಿನ ಒಳಚರಂಡಿಯನ್ನು (Drainage) ಬಿಟಿಡಿಎಯಿಂದ ನಿರ್ವಹಿಸಲಾಗುತ್ತಿತ್ತು. ಆದರೆ ಲೆಕ್ಕಪರಿಶೋಧಕರಿಂದ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಇನ್ನು ಮುಂದೆ ನಿರ್ವಹಣೆ ಸಾಧ್ಯವಿಲ್ಲ ಎಂದು ಬಿಟಿಡಿಎ ಕೈ ತೊಳೆದುಕೊಂಡಿದೆ.

    ವಿದ್ಯಾಗಿರಿಯ ತೆಗ್ಗಿಲೇಔಟ್, ರೂಪ್‌ಲ್ಯಾಂಡ್, ಕುದರಿಕನ್ನೂರ ಲೇಔಟ್, ರೋಣ ಲೇಔಟ್, ಫುಡ್‌ಸ್ಟೇಶನ್ ಮುಂಭಾಗ ರಸ್ತೆಗಳಲ್ಲೇ ನೀರು ಉಕ್ಕಿ ಹರಿಯುತ್ತಿದೆ. ತೆಗ್ಗಿ ಲೇಔಟ್‌ನಲ್ಲಿ ನೀರು ಮನೆಗೆ ನುಗ್ಗಿದ್ದು, ನಮ್ಮ ಕಷ್ಟ ಕೇಳುವವರು ಯಾರು ಎಂಬ ಸ್ಥಿತಿ ನಿರ್ಮಾಣವಾಗಿದೆ ಎಂದು ಜನ ಗೋಳಾಡುತ್ತಿದ್ದಾರೆ. ಇದನ್ನೂ ಓದಿ: ಲಾರೆನ್ಸ್ ಬಿಷ್ಣೋಯ್‌ನನ್ನು ಎನ್‌ಕೌಂಟರ್‌ ಮಾಡಿದ್ರೆ 1,11,11,111 ರೂ. ಬಹುಮಾನ – ಕರ್ಣಿ ಸೇನೆಯಿಂದ ಘೋಷಣೆ

    ಈ ಕುರಿತು ಮಾತನಾಡಿದ ನಗರಸಭೆ ಸದಸ್ಯ ವೀರಪ್ಪ ಶಿರಗಣ್ಣವರ ಪ್ರತಿಕ್ರಿಯಿಸಿ, ನಗರಸಭೆ ಬಳಿ ಇರುವ ಒಂದು ವಾಹನದಿಂದಲೇ ಎಲ್ಲವನ್ನು ಸ್ವಚ್ಛಗೊಳಿಸುವ ಪ್ರಯತ್ನ ನಡೆದಿದೆ. ಸಿಬ್ಬಂದಿ ಸಹಕಾರಿಯಾಗಿದ್ದಾರೆ ಎಂಬ ಕಾರಣಕ್ಕೆ ಎಷ್ಟೇ ಕೆಲಸ ಬಂದರೂ ಅವರು ಗೊಣಗದೇ ಕೆಲಸ ಮಾಡುತ್ತಿದ್ದಾರೆ. ಬಾಗಲಕೋಟೆಯ ಶಾಸಕರು ಬಿಟಿಡಿಎಗೆ ಸಭಾಪತಿಯಾಗಿದ್ದು, ಇಂಥ ಸಂದರ್ಭದಲ್ಲಿ ಜನಕ್ಕೆ ನೆರವಾಗುವ ಕೆಲಸ ಮಾಡಬೇಕಿದೆ ಎಂದರು.

    ಬಿಟಿಡಿಎ-ನಗರಸಭೆ ಸಿಬ್ಬಂದಿಯನ್ನು ಕರೆದು ಬಗೆಹರಿಸುವ ಕೆಲಸವನ್ನಾದರೂ ಮಾಡಬೇಕು. ನಾವು ಸಾಧ್ಯವಾದಷ್ಟು ಜನರ ತೊಂದರೆಯನ್ನು ನಿವಾರಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

    ವಿದ್ಯಾಗಿರಿಯಲ್ಲಿನ ಒಳಚರಂಡಿ ನಿರ್ವಹಣೆ ಸಂಬಂಧ ನಗರಸಭೆಯಿಂದ ಟೆಂಡರ್ ಕರೆಯಬೇಕಿದ್ದು, ಅಲ್ಲಿಯವರೆಗೂ ಜನರ ಕಷ್ಟ ತಪ್ಪಿದಲ್ಲ ಎಂಬ ಮಾತು ಕೇಳಿ ಬಂದಿದೆ. ಇದನ್ನೂ ಓದಿ: ತುಂಗಾ ಮೇಲ್ದಂಡೆ ಕಾಲುವೆ ಒಡೆದು ಅಪಾರ ಪ್ರಮಾಣದ ಬೆಳೆಹಾನಿ

    ಈ ನಡುವೆ ವಿದ್ಯಾಗಿರಿಯ 20ನೇ ಕ್ರಾಸ್ ನಲ್ಲಿ ಹೊಸದಾಗಿ ರಸ್ತೆ ಡಾಂಬರೀಕರಣ ಮಾಡಲಾಗಿದ್ದು, ರಸ್ತೆ ಕೆಳಭಾಗದ ಪೈಪ್‌ಗಳು ಒಡೆದು ನಿರಂತರವಾಗಿ ನೀರು ಪೋಲಾಗುತ್ತಿದೆ. ಈ ಬಗ್ಗೆಯೂ ಸಾರ್ವಜನಿಕರು ದೂರು ನೀಡಿದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ.

  • ಬೆಂಗಳೂರಿನಲ್ಲಿ ಡ್ರೈನೇಜ್ ಬ್ಲಾಕ್ ದಂಧೆ – ಹಣಕ್ಕಾಗಿ ಮಿಡ್‌ನೈಟ್‌ ಆಪರೇಷನ್‌

    ಬೆಂಗಳೂರಿನಲ್ಲಿ ಡ್ರೈನೇಜ್ ಬ್ಲಾಕ್ ದಂಧೆ – ಹಣಕ್ಕಾಗಿ ಮಿಡ್‌ನೈಟ್‌ ಆಪರೇಷನ್‌

    ಬೆಂಗಳೂರು: ರಾಜಧಾನಿಯಲ್ಲಿ ಎಂತೆಂಥಾ ದಂಧೆಗಳು ನಡೆಯುತ್ತದೆ ಅಂದರೆ ಎಂತವರು ಶಾಕ್ ಆಗಲೇಬೇಕು. ಬೆಂಗಳೂರಿನಲ್ಲಿ(Bengaluru) ಸಣ್ಣ ಮಳೆಗೂ(Rain) ಮುಳುಗುವ ಮನೆ, ರಸ್ತೆ ಅಂಗಡಿಗಳ ಹಿಂದೆ ದೊಡ್ಡದೊಂದು ಮಾಫಿಯಾ ಕೆಲಸ ಮಾಡುತ್ತಿರುವುದು ಈಗ ಸಾಕ್ಷ್ಯ ಸಮೇತ ದೃಢಪಟ್ಟಿದೆ.

    ಅನಾಮಿಕ ವ್ಯಕ್ತಿಗಳು ರಸ್ತೆಯ ಬದಿಯಲ್ಲಿರುವ ಡ್ರೈನೇಜ್ ಬ್ಲಾಕ್‍ಗೆ(Drainage Block) ಇಳಿದು ಮರಳಿನ ಮೂಟೆ, ಅಕ್ಕ-ಪಕ್ಕದ ರಸ್ತೆಯ ದೊಡ್ಡ ದೊಡ್ಡ ಸೈಜುಗಲ್ಲನ್ನು ಡ್ರೈನೇಜ್‍ನೊಳಗೆ ಹಾಕುತ್ತಿರುವ ಸ್ಫೋಟಕ ವಿಚಾರ ಈಗ ಬೆಳಕಿಗೆ ಬಂದಿದೆ.

     

    ಈ ಸ್ಪೋಟಕ ಘಟನೆ ಸೆರೆಯಾಗಿದ್ದು ಬೆಂಗಳೂರಿನ ಪ್ರತಿಷ್ಠಿತ ಇಂದಿರಾ ನಗರದಲ್ಲಿ. ಇತ್ತೀಚೆಗೆ ಸಣ್ಣ ಮಳೆ ಬಂದಾಗಲೂ ಬಡಾವಣೆಗಳು ಅಂಗಡಿಗಳು ಜಲಾವೃತಗೊಂಡಿತ್ತು. ಭಾರೀ ಮಳೆ ಸುರಿದರೂ ಜಲಾವೃತವಾಗದೇ ಇದ್ದ ಬಡಾವಣೆ ಸಣ್ಣ ಮಳೆಗೆ ಹೇಗೆ ಜಲಾವೃತವಾಯಿತು ಎಂಬುದೇ ಇವರ ತಲೆನೋವಿಗೆ ಕಾರಣವಾಗಿತ್ತು. ಹೀಗಾಗಿ ಜನ ಕಳೆದ ತಾವು ಪಟ್ಟ ಬವಣೆಯ ದೃಶ್ಯಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ತೋರಿಸಲು ಅಂಗಡಿಗಳಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದ ದೃಶ್ಯ ಕಲೆಹಾಕಲು ಮುಂದಾಗಿದ್ದಾರೆ. ಆಗ ಅಪರಿಚಿತ ವ್ಯಕ್ತಿಗಳು ಬಂದು ಒಳ ಚರಂಡಿ ವ್ಯವಸ್ಥೆಯನ್ನು ಬ್ಲಾಕ್‌ ಮಾಡುತ್ತಿರುವ ದೃಶ್ಯ ನೋಡಿ ಶಾಕ್‌ ಆಗಿದ್ದಾರೆ. ಇದನ್ನೂ ಓದಿ: ಕರ್ನಾಟಕದಿಂದ 1 ಟ್ರಿಲಿಯನ್ ಡಾಲರ್ ಆರ್ಥಿಕ ಕೊಡುಗೆ ಗುರಿ – ಮೇಲ್ವಿಚಾರಣೆಗೆ ವಿಶೇಷ ತಂಡ ರಚನೆ

    ಮಳೆ ಬರುವ ಸಂದರ್ಭದಲ್ಲಿ ಈ ರೀತಿ ಡ್ರೈನೇಜ್ ಬ್ಲಾಕ್ ಮಾಡಿದಾಗ ಸಣ್ಣ ಮಳೆಗೂ ಇಡೀ ಮನೆ ಅಕ್ಕಪಕ್ಕದ ಅಂಗಡಿ ರಸ್ತೆ ಮುಳುಗಡೆಯಾಗುತ್ತದೆ. ಕೂಡಲೇ ಬಿಬಿಎಂಪಿ(BBMP) ಎಮರ್ಜೆನ್ಸಿ ದುರಸ್ತಿ ಮಾಡಲು ಕೆಲ ಗುತ್ತಿಗೆದಾರರಿಗೆ ಕೆಲಸ ನೀಡುತ್ತದೆ. ದುಡ್ಡು ಮಾಡುವ ದಂಧೆಗಾಗಿ ಈ ಕೃತ್ಯ ಎಸಗಲಾಗುತ್ತಿದೆ ಎಂದು ಇಂದಿರಾನಗರದ ಜನ ಆರೋಪ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಿರ್ಮಾಣ ಹಂತದ ಗೋಡೆ ಕುಸಿತ- ನಾಲ್ವರು ಸಾವು, 9 ಮಂದಿಗೆ ಗಾಯ

    ನಿರ್ಮಾಣ ಹಂತದ ಗೋಡೆ ಕುಸಿತ- ನಾಲ್ವರು ಸಾವು, 9 ಮಂದಿಗೆ ಗಾಯ

    ಲಕ್ನೋ: ನಿರ್ಮಾಣ ಹಂತದ ಗೋಡೆ (Wall) ಕುಸಿದು ನಾಲ್ವರು ಸಾವನ್ನಪ್ಪಿದ್ದು, 9 ಮಂದಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ (Noida) ನಡೆದಿದೆ.

    ನೋಯ್ಡಾ ಸೆಕ್ಟರ್ -21ರ ಜಲವಾಯು ವಿಹಾರ್ ಬಳಿ ಈ ಘಟನೆ ನಡೆದಿದೆ. ಸೆಕ್ಟರ್ 21ರಲ್ಲಿ ಜಲ ವಾಯು ವಿಹಾರ್ ಬಳಿ ಒಳಚರಂಡಿ ದುರಸ್ತಿ ಕಾಮಗಾರಿಗೆ ನೋಯ್ಡಾ ಪ್ರಾಧಿಕಾರವು ಗುತ್ತಿಗೆ ನೀಡಿತ್ತು. ಕಾರ್ಮಿಕರು (Worker) ಇಟ್ಟಿಗೆಗಳನ್ನು ಹೊರ ತೆಗೆಯುವಾಗ, ಗೋಡೆ ಕುಸಿದಿದೆ. ಈ ವೇಳೆ ನಾಲ್ವರು ಸಾವನ್ನಪ್ಪಿದ್ದು, ಅನೇಕರಿಗೆ ಗಾಯಗಳಾಗಿವೆ ಎಂದರು.

    crime

    ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಇನ್ನೂ ಘಟನೆಯಲ್ಲಿ ಹಲವರು ಅವಶೇಷದಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ. ಜಿಲ್ಲಾ ಆಸ್ಪತ್ರೆ ಮತ್ತು ಕೈಲಾಶ್ ಆಸ್ಪತ್ರೆಯಲ್ಲಿ ತಲಾ ಇಬ್ಬರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಮಾತಾ ಅಮೃತಾನಂದಮಯಿ ಅವರ ತಾಯಿ ವಿಧಿವಶ

    ಘಟನೆಗೆ ಸಂಬಂಧಿಸಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು. ಇದನ್ನೂ ಓದಿ: ಸುಮ್ಮನಹಳ್ಳಿ ಬ್ರಿಡ್ಜ್‌ ಮತ್ತೆ ಕುಸಿತದ ಭೀತಿ – ನೆಲ ಕಾಣುವ ಮಟ್ಟಕ್ಕೆ ಕಿತ್ತು ಹೋದ ಕಾಂಕ್ರಿಟ್ ಸ್ಲ್ಯಾಬ್

    Live Tv
    [brid partner=56869869 player=32851 video=960834 autoplay=true]

  • ಒಳಚರಂಡಿಗೆ ಬಿದ್ದ ಬಾಲಕ – ರಕ್ಷಿಸಲು ಹೋದ ಅಪ್ಪ, ಚಿಕ್ಕಪ್ಪ ಕೂಡ ಬಾಲಕನೊಂದಿಗೆ ಸಾವು

    ಒಳಚರಂಡಿಗೆ ಬಿದ್ದ ಬಾಲಕ – ರಕ್ಷಿಸಲು ಹೋದ ಅಪ್ಪ, ಚಿಕ್ಕಪ್ಪ ಕೂಡ ಬಾಲಕನೊಂದಿಗೆ ಸಾವು

    ಚಂಡೀಗಢ: ಒಳಚರಂಡಿಯೊಳಗೆ ಬಿದ್ದು ಎಂಟು ವರ್ಷದ ಬಾಲಕ ಸೇರಿದಂತೆ ಮೂವರು ಸಾವನ್ನಪ್ಪಿರುವ ಘಟನೆ ಹರಿಯಾಣದ ನುಹ್ ಜಿಲ್ಲೆಯಲ್ಲಿ ನಡೆದಿದೆ.

    ಮಂಗಳವಾರ ಜಿಲ್ಲೆಯ ಬಿಚೋರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ ಬಾಲಕ ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಒಳಚರಂಡಿಯೊಳಗೆ ಬಿದ್ದಿದ್ದಾನೆ. ನಂತರ ಬಾಲಕನನ್ನು ರಕ್ಷಿಸಲು ಆತನ ತಂದೆ ಮತ್ತು ಮತ್ತೋರ್ವ ವ್ಯಕ್ತಿ ಪ್ರಯತ್ನಿಸಿದ್ದು, ಮೂವರು ಕೂಡ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಗ್ರಾಮದ ನಿವಾಸಿ ದಿನು ಅವರ ಮನೆಯ ಹೊರಗೆ 20 ಅಡಿ ಆಳದ ಒಳಚರಂಡಿಯನ್ನು ನಿರ್ಮಿಸಲಾಗಿತ್ತು. ಒಳಚರಂಡಿಯನ್ನು ಕಲ್ಲಿನ ಚಪ್ಪಡಿಯಿಂದ ಮುಚ್ಚಲಾಗಿತ್ತು. ಆದರೆ ದಿನು ಅವರ ಮೊಮ್ಮಗ ಆರಿಜ್ ಆಟವಾಡುತ್ತಿದ್ದ ವೇಳೆ ಒಳಚರಂಡಿ ಮೇಲೆ ಮುಚ್ಚಲಾಗಿದ್ದ ಕಲ್ಲು ಮುರಿದು ಹೋಗಿದ್ದರಿಂದ ಬಾಲಕ ಬಿದ್ದಿದ್ದಾನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹಾಸನ ಕಟ್ಟಿನಕೆರೆ ಮಾರುಕಟ್ಟೆ ಬಂದ್ – 500ಕ್ಕೂ ಹೆಚ್ಚು ಪೊಲೀಸರಿಂದ ಬಂದೋಬಸ್ತ್

    ಇದೇ ವೇಳೆ ಬಾಲಕನನ್ನು ರಕ್ಷಿಸಲು ಒಳಚರಂಡಿಗೆ ಇಳಿದ ಬಾಲಕನ ತಂದೆ ಸಿರಾಜು (30) ಮತ್ತು ಆತನ ಚಿಕ್ಕಪ್ಪ ಸಲಾಮು (35) ಕೂಡ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ನಂತರ ಒಳಗೆ ಹೋದವರು ಹೊರಗೆ ಬರದೇ ಇದ್ದದ್ದನ್ನು ಕಂಡು ಕುಟುಂಬಸ್ಥರು ಕೂಗಾಡಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಚಿನ್ನಿದಾಂಡು ಆಟದಿಂದ ಶುರುವಾದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯ

  • ಒಳಚರಂಡಿಯಲ್ಲಿ ಅನಿಲ ಸ್ಫೋಟ 14 ಮಂದಿ ಸಾವು

    ಒಳಚರಂಡಿಯಲ್ಲಿ ಅನಿಲ ಸ್ಫೋಟ 14 ಮಂದಿ ಸಾವು

    ಇಸ್ಲಾಮಾಬಾದ್: ಚರಂಡಿಯಲ್ಲಿ ಅನಿಲ ಸ್ಫೋಟ 14 ಮಂದಿ ಸಾವನ್ನಪ್ಪಿ, 12 ಮಂದಿ ಗಾಯಗೊಂಡಿರುವ ಘಟನೆ ಕರಾಚಿಯಲ್ಲಿ ನಡೆದಿದೆ.

    ಕರಾಚಿ ನಗರದ ಒಳಚರಂಡಿಯಲ್ಲಿ ಅನಿಲ ಸ್ಫೋಟ ಸಂಭವಿಸಿದ ಕಾರಣ, ಕನಿಷ್ಠ 14 ಮಂದಿ ಸಾವಿಗೀಡಾಗಿದ್ದಾರೆ. ಇತರ 12 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕರಾಚಿಯ ಶೇರ್‍ಶಾ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ಇದನ್ನೂ ಓದಿ: BJP ಅವಧಿಯಲ್ಲಿ ಅಭಿವೃದ್ಧಿಯಾಗಿದ್ದು ಮೋದಿ ಸ್ನೇಹಿತರಷ್ಟೇ: ಪ್ರಿಯಾಂಕಾ ಗಾಂಧಿ

    ಒಳಚರಂಡಿ ಮೇಲೆ ಬ್ಯಾಂಕೊಂದರ ಕಟ್ಟಡ ನಿರ್ಮಿಸಲಾಗಿದೆ. ಒಳಚರಂಡಿಯಲ್ಲಿ ಶೇಖರಣೆಯಾಗಿದ್ದ ಅನಿಲಕ್ಕೆ ಬೆಂಕಿ ಹೊತ್ತಿಕೊಂಡ ಪರಿಣಾಮ ಭಾರಿ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಕಟ್ಟಡ ಕುಸಿದಿದೆ. ತನಿಖೆ ಬಳಿಕದ ಸ್ಫೋಟಕ್ಕೆ ಏನು ಕಾರಣ ಎಂಬುದು ತಿಳಿಯಲಿದೆ ಎಂದು ಕರಾಚಿ ಆಡಳಿ ತಾಧಿಕಾರಿ ಮುರ್ತಜಾ ವಹಾಬ್ ಹೇಳಿದ್ದಾರೆ. ಇದನ್ನೂ ಓದಿ: 7 ವರ್ಷದಲ್ಲಿ ಅವರೇನು ಮಾಡಿದ್ದಾರೆ? – ಮೋದಿ ವಿರುದ್ಧ ಪ್ರಿಯಾಂಕಾ ಗಾಂಧಿ ವಾಗ್ದಾಳಿ

  • ಡ್ರೈನೇಜ್ ಕ್ಲೀನ್‍ಗೆ ತೆರಳಿದ್ದ ಮೂವರಲ್ಲಿ ಇಬ್ಬರ ಸಾವು – ಓರ್ವ ಗಂಭೀರ

    ಡ್ರೈನೇಜ್ ಕ್ಲೀನ್‍ಗೆ ತೆರಳಿದ್ದ ಮೂವರಲ್ಲಿ ಇಬ್ಬರ ಸಾವು – ಓರ್ವ ಗಂಭೀರ

    ಕಲಬುರಗಿ: ಜಲ ಮಂಡಳಿ ನಿರ್ಲಕ್ಷಕ್ಕೆ ಇಬ್ಬರು ಬಲಿಯಾಗಿದ್ದು, ಓರ್ವ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾರೆ.

    ಕಲಬುರಗಿ ನಗರದ ಕೈಲಾಸ ನಗರ ಬಡಾವಣೆಯಲ್ಲಿ ಡ್ರೈನೇಜ್ ಸ್ವಚ್ಛಗೊಳಿಸಲು ಜಲಮಂಡಳಿ ಸಿಬ್ಬಂದಿ ತೆರಳಿದ್ದರು. ಸುಮಾರು 20 ಅಡಿ ಆಳದ ಡ್ರೈನೇಜ್‍ನಲ್ಲಿ ಯಂತ್ರದ ಸಹಾಯದಿಂದ ಸ್ವಚ್ಛತೆ ಮಾಡಬಹುದು ಅಂತಾ ಸಿಬ್ಬಂದಿ ಜಲಮಂಡಳಿ ಅಧಿಕಾರಿಗಳಿಗೆ ತಿಳಿಸಿದ್ದಾರೆ.

    ಸದ್ಯ ಯಂತ್ರಗಳು ಇಲ್ಲ. ಹಾಗೆ ಕೆಲಸ ಮಾಡಿ ಅಂತಾ ಅಧಿಕಾರಿಗಳ ಒತ್ತಡಕ್ಕೆ ಹಾಕಿದ್ದಾರೆ. ಅಧಿಕಾರಿಗಳ ಒತ್ತಡಕ್ಕೆ ಒಳಚರಂಡಿಗೆ ಇಳಿದ ಲಾಲ್ ಅಹ್ಮದ್(25), ರಶೀದ್ (30) ಉಸಿರುಗಟ್ಟಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇಬ್ಬರ ರಕ್ಷಣೆಗೆ ತೆರಳಿದ ರಾಜು ಸ್ಥಿತಿ ಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಇನ್ನು ಘಟನೆ ಖಂಡಿಸಿ ಜಿಲ್ಲಾ ಆಸ್ಪತ್ರೆ ಎದುರು ರಸ್ತೆ ತಡೆ ಜಲ ಮಂಡಳಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಯಂತ್ರಗಳ ಮೂಲಕ ಮಾಡಬೇಕಿದ್ದ ಕೆಲಸವನ್ನು ಮನುಷ್ಯರ ಮೂಲಕ ಮಾಡಿಸಲಾಗಿದೆ. ತಕ್ಷಣ ಅಧಿಕಾರಿಗಳ ಎಚ್ಚೆತ್ತಿದ್ದರೂ ಈ ಘಟನೆ ನಡೆಯುತ್ತಿರಲಿಲ್ಲ. ಮೃತರ ಕುಟುಂಬಗಳಿಗೆ ಸೂಕ್ತ ನ್ಯಾಯ ಒದಗಿಸಬೇಕು. ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಸದ್ಯ ಪ್ರಕರಣ ಕುರಿತು ಆರ್.ಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮಡಿಕೇರಿ ನಗರದ ಜನತೆಗೆ ಟಾಯ್ಲೆಟ್ ನೀರು ಕುಡಿಸಿದ ನಗರಸಭೆ

    ಮಡಿಕೇರಿ ನಗರದ ಜನತೆಗೆ ಟಾಯ್ಲೆಟ್ ನೀರು ಕುಡಿಸಿದ ನಗರಸಭೆ

    ಮಡಿಕೇರಿ: ಪ್ರತಿ ಜನರಿಗೂ ಶುದ್ಧ ಕುಡಿಯುವ ನೀರನ್ನು ಪೂರೈಸಬೇಕೆಂದು ಎಲ್ಲೆಡೆ ಸರ್ಕಾರವೇ ಕುಡಿಯುವ ನೀರಿನ ಘಟಕಗಳನ್ನು ಮಾಡುತ್ತಿದೆ. ಆದರೆ ಮಡಿಕೇರಿ ನಗರ ಸಭೆ ಮಾತ್ರ ನಗರದ ಜನರಿಗೆ ಕುಡಿಯುವ ನೀರಿನ ಬದಲಿಗೆ ಟಾಯ್ಲೆಟ್ ನೀರು ಪೂರೈಕೆ ಮಾಡುತ್ತಿದೆ.

    ಹೌದು ಮಡಿಕೇರಿ ನಗರದ ಹೊಸಬಡಾವಣೆಯ 50 ಕ್ಕೂ ಹೆಚ್ಚು ಮನೆಗಳಿಗೆ ಟಾಯ್ಲೆಟ್ ಮಿಶ್ರಿತ ನೀರು ಪೂರೈಕೆಯಾಗುತ್ತಿದೆ. ಕಳೆದ ಹಲವು ದಿನಗಳಿಂದ ಕಲುಷಿತ ನೀರು ಪೂರೈಕೆಯಾಗುತ್ತಿತ್ತು. ಇದನ್ನು ನಗರಸಭೆಯ ಗಮನಕ್ಕೂ ತರಲಾಗಿತ್ತು. ಇದರಿಂದ ನಗರಸಭೆ ಅಧಿಕಾರಿಗಳೇನು ಹೆಚ್ಚೆತ್ತುಕೊಂಡಂತೆ ಕಂಡಿಲ್ಲ.

    ಕಳೆದ ಎರಡು ದಿನಗಳಿಂದ ಟಾಯ್ಲೆಟ್ ನೀರು ಮನೆಯ ನಲ್ಲಿಗಳಲ್ಲಿ ಪೂರೈಕೆಯಾಗುತ್ತಿದೆ. ಇದಕ್ಕೆ ಮುಖ್ಯಕಾರಣ ನಗರದಲ್ಲಿ 60 ವರ್ಷಗಳ ಹಿಂದೆ ಅಳವಡಿಸಿರುವ ನೀರು ಪೂರೈಕೆ ಪೈಪುಗಳು ಹೊಡೆದು ಹೋಗಿರುವುದು. ಇತ್ತೀಚಿನ ವರ್ಷಗಳಲ್ಲಿ ಒಳಚರಂಡಿ ನಿರ್ಮಾಣದ ಸಂದರ್ಭ ಪೈಪುಗಳು ಡ್ಯಾಮೇಜ್ ಆಗಿ ಇದೀಗ ಟಾಯ್ಲೆಟ್ ಮಿಶ್ರಿತ ನೀರು ಮನೆಗಳಿಗೆ ಪೂರೈಕೆಯಾಗುತ್ತಿದೆ. ಕೂಡಲೇ ಅಧಿಕಾರಿಗಳು ಪರಿಶೀಲನೆ ನಡೆಸಿ ಸರಿಪಡಿಸಬೇಕು. ಇಲ್ಲದಿದ್ದರೆ ಬೀದಿಗೆ ಇಳಿದು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಜನರು ಆಕ್ರೋಶ ಹೊರಹಾಕುತ್ತಿದ್ದಾರೆ.

    ಮಡಿಕೇರಿ ನಗರಕ್ಕೆ ಕೂಟ್ಟು ಹೊಳೆಯಿಂದ ನೀರು ಪೂರೈಕೆ ಮಾಡಲಾಗುತ್ತದೆ. ನಗರದ ಸ್ಟೋನ್ ಹಿಲ್‍ನಲ್ಲಿ ಇರುವ ನೀರು ಶುದ್ಧೀಕರಣ ಘಟಕದಲ್ಲಿ ಶುದ್ಧೀಕರಣ ಮಾಡಿ, ಬಳಿಕ ಪೂರೈಕೆ ಮಾಡಲಾಗುತ್ತದೆ. ಆದರೆ ಅಲ್ಲಿಂದ ಸ್ವಲ್ಪ ದೂರದಲ್ಲೇ ಇರುವ ಹೊಸಬಡಾವಣೆಯ ಕ್ರಿಶ್ಚಿಯನ್ ಸ್ಮಶಾನದ ರಸ್ತೆಯ 50 ಕ್ಕೂ ಹೆಚ್ಚು ಮನೆಗಳಿಗೆ ಕಲುಷಿತ ನೀರು ಪೂರೈಕೆಯಾಗುತ್ತಿದೆ. ಈಗಾಗಲೇ ನಗರಸಭೆ ಸಿಬ್ಬಂದಿಗಳು ಎಲ್ಲಿಂದ ಟಾಯ್ಲೆಟ್ ನೀರು ಮನೆಗಳಿಗೆ ಪೂರೈಕೆ ಆಗುತ್ತಿದೆ ಎಂದು ಹುಡುಕಾಡುತ್ತಿದ್ದಾರೆ. ಹಲವೆಡೆ ಅಗೆದು, ಹೊಸದಾಗಿ ಪೈಪುಗಳನ್ನು ಜೋಡಿಸಲಾಗುತ್ತಿದೆ. ಆದರೂ ಇಂದಿಗೂ ಎಲ್ಲಿಂದ ಈ ಕಲುಷಿತ ನೀರು ಪೂರೈಕೆಯಾಗುತ್ತಿದೆ ಎನ್ನೋದು ಗೊತ್ತಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • ಮುಗಿಯದ ಇಂದಿರಾ ಕ್ಯಾಂಟೀನ್ ಗೋಳು – ಬಿಲ್ ಕಟ್ಟಿಲ್ಲವೆಂದು ಲಾಕ್ ಆಯ್ತು ಶೌಚಾಲಯ

    ಮುಗಿಯದ ಇಂದಿರಾ ಕ್ಯಾಂಟೀನ್ ಗೋಳು – ಬಿಲ್ ಕಟ್ಟಿಲ್ಲವೆಂದು ಲಾಕ್ ಆಯ್ತು ಶೌಚಾಲಯ

    ಬೆಂಗಳೂರು: ಏನೇ ಮಾಡಿದರು ಇಂದಿರಾ ಕ್ಯಾಂಟೀನ್ ಗೋಳು ಮಾತ್ರ ಮುಗಿಯುತ್ತಲೇ ಇಲ್ಲ. ಒಳಚರಂಡಿ ಬಿಲ್ ಬಾಕಿ ಹಿನ್ನೆಲೆಯಲ್ಲಿ ಇಂದಿರಾ ಕ್ಯಾಂಟೀನ್ ಶೌಚಾಲಯದ ಸೌಲಭ್ಯ ಸ್ಥಗಿತಗೊಳಿಸಲಾಗಿದೆ. ಈ ಕ್ರಮ ಕ್ಯಾಂಟೀನ್‍ಗೆ ಬರುವ ಗ್ರಾಹಕರಿಗೆ ಕಿರಿಕಿರಿ ಉಂಟು ಮಾಡಿದೆ.

    ಬೆಂಗಳೂರಿನ ವಸಂತ ನಗರ, ಟಿ.ಸಿ ಪಾಳ್ಯ, ರಾಧಾಕೃಷ್ಣ ವಾರ್ಡ್‍ನಲ್ಲಿರುವ ಇಂದಿರಾ ಕ್ಯಾಂಟೀನ್‍ಗಳಲ್ಲಿ ಶೌಚಾಲಯ ಬಂದ್ ಗೋಳು ತಲೆ ಕೆಡಿಸಿದೆ. ರಿಯಾಯಿತಿ ದರದಲ್ಲಿ ಊಟ ಮಾಡಲು ಬರುವ ಗ್ರಾಹಕರಿಗೆ ಮೂಲಭೂತ ಸೌಕರ್ಯವೇ ಇಲ್ಲದಂತೆ ಆಗಿದೆ. ಬಿಲ್ ಬಾಕಿ ಹಿನ್ನೆಲೆಯಲ್ಲಿ ಒಳಚರಂಡಿ ಮೇಲ್ವಿಚಾರಣ ಸಿಬ್ಬಂದಿ ಸ್ಯಾನಿಟರಿ ಲೈನ್ ಬ್ಲಾಕ್ ಮಾಡಿದ್ದಾರೆ. ಈ ನಿರ್ಧಾರದಿಂದ ಇಂದಿರಾ ಕ್ಯಾಂಟೀನ್ ಗಬ್ಬು ನಾರುತ್ತಿದೆ.

    ಸ್ಯಾನಿಟರಿ ಬ್ಲಾಕ್ ಆದರೆ ಫುಡ್ ಪಾಯ್ಸನ್ ಹಾಗೂ ಸ್ವಚ್ಚತೆ ಸಮಸ್ಯೆ ಆಗಲಿದೆ ಎಂದು ಇಂದಿರಾ ಕ್ಯಾಂಟೀನ್ ಮ್ಯಾನೇಜರ್ ಮಹ್ಮದ್ ಹೇಳಿದ್ದಾರೆ. ಈ ಬಿಲ್ ಬಾಕಿ ಕಥೆ ತಿಳಿಯದ ಗ್ರಾಹಕ ಮಾತ್ರ ಶೌಚಾಲಯ ಸೇವೆ ಸ್ಥಗಿತ ಮಾಡಿರುವುದು ಸರಿ ಇಲ್ಲ. ಬೇಗ ಶೌಚಾಲಯ ವ್ಯವಸ್ಥೆ ಕೊಡಿ ಎಂದು ಆಗ್ರಹಿಸಿದ್ದಾರೆ.

    ಸುಪ್ರೀಂ ಕೋರ್ಟ್ ಆದೇಶದಂತೆ ಸ್ಟಾರ್ ಹೋಟೆಲ್, ಕೆಫೆ ಸೆಂಟರ್ ಹೀಗೆ ಯಾವ ಹೋಟೆಲ್‌ನಲ್ಲೂ ಗ್ರಾಹಕರು ಶೌಚಾಲಯ ಬಳಸುವುದನ್ನ ತಡೆಯುವಂತಿಲ್ಲ. ಆದರೆ ಇಂದಿರಾ ಕ್ಯಾಂಟೀನ್‍ನಲ್ಲಿ ಮಾತ್ರ 25 ಲಕ್ಷ ರೂ. ಬಿಲ್ ಬಾಕಿ ಹಿನ್ನೆಲೆ ಸ್ಯಾನಿಟರಿ ಲೈನ್ ಬ್ಲಾಕ್ ಮಾಡಲಾಗಿದ್ದು, ಇದೇ ನೆಪವೊಡ್ಡಿ ಗ್ರಾಹಕರಿಗೆ ಶೌಚಾಲಯ ಸೇವೆ ಸ್ಥಗಿತಗೊಳಿಸಿರುವುದು ಗ್ರಾಹಕರಿಗೆ ಬೇಸರ ತಂದಿದೆ.

  • ರಸ್ತೆ ಆಯ್ತು ಮೋರಿ – ಜನರ ಗೋಳಿಗೆ ಕ್ಯಾರೇ ಅಂತಿಲ್ಲ ಬಿಬಿಎಂಪಿ

    ರಸ್ತೆ ಆಯ್ತು ಮೋರಿ – ಜನರ ಗೋಳಿಗೆ ಕ್ಯಾರೇ ಅಂತಿಲ್ಲ ಬಿಬಿಎಂಪಿ

    ಬೆಂಗಳೂರು: ಸಿಲಿಕಾನ್ ಸಿಟಿಯ ಜೆಪಿ ನಗರ ಅಂದರೆ ಆಫೀಷಿಯಲ್ ಏರಿಯಾ, ಅಲ್ಲೇಲ್ಲಾ ದೊಡ್ಡ ದೊಡ್ಡ ಮನೆಗಳೇ ಇರೋದು ಎಂದು ಜನ ಹೇಳುತ್ತಾರೆ. ಆದರೆ ಇಂತಹ ಏರಿಯಾದಲ್ಲೇ ರಸ್ತೆ ಮೇಲೆ ಮೋರಿ ನೀರು ಬಂದು ನಿಲ್ಲುತ್ತಿದ್ದು, ಈ ಬಗ್ಗೆ ದೂರು ನೀಡಿದರೂ ಬಿಬಿಎಂಪಿ, ಕಾರ್ಪೊರೇಟರ್‌ಗಳು ಮಾತ್ರ ಕ್ಯಾರೇ ಅಂತಿಲ್ಲ.

    ಹೌದು. ಜೆಪಿ ನಗರದಲ್ಲಿ ಕಳೆದ ಒಂದು ತಿಂಗಳಿಂದ ರಸ್ತೆನಲ್ಲೇ ಒಳಚರಂಡಿ ನೀರು ಸರಾಗವಾಗಿ ಹರಿಯುತ್ತಿದೆ. ಒಳಚರಂಡಿ ಬ್ಲಾಕ್ ಆಗಿದ್ದು, ಅದರ ಕೊಳಚೆ ನೀರೆಲ್ಲಾ ರಸ್ತೆ ಮೇಲೆ ಹರಿಯುತ್ತಿದೆ. ಇದರಿಂದ ಅಲ್ಲಿರುವ ನಿವಾಸಿಗಳು ಮನೆಯಿಂದ ಹೊರಬರಲು ಆಗದಂತ ಸ್ಥಿತಿ ನಿರ್ಮಾಣವಾಗಿದೆ. ಸ್ಥಳೀಯ ಕಾರ್ಪೊರೇಟರ್ ಹಾಗೂ ಬಿಬಿಎಂಪಿ, ಜಲಮಂಡಳಿಯವರಿಗೆ ಅಷ್ಟೇ ದೂರು ನೀಡಿದರು ಯಾರೂ ತಲೆ ಕೆಡಿಸಿಕೊಂಡಿಲ್ಲ. ಅಧಿಕಾರಿಗಳು, ಕಾರ್ಪೊರೇಟರ್‌ಗಳ ಬೇಜವಾಬ್ದಾರಿಗೆ ಅಲ್ಲಿನ ಜನ ಬೇಸತ್ತು ಹೋಗಿದ್ದಾರೆ.

    ಕೆಟ್ಟ ವಾಸನೆ, ಕ್ರೀಮಿಕೀಟಗಳ ಜೊತೆಗೆ ಸೊಳ್ಳೆಗಳ ಸಂಖ್ಯೆಯೂ ಪ್ರದೇಶದಲ್ಲಿ ಹೆಚ್ಚಾಗಿದೆ. ಇದು ಸ್ಥಳೀಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಇಷ್ಟೆಲ್ಲಾ ಆದರೂ ಯಾರೂ ನಮ್ಮ ಸಮಸ್ಯೆಯನ್ನ ಸರಿಪಡಿಸೋ ಕೆಲಸಕ್ಕೆ ಮುಂದಾಗಿಲ್ಲ ಎಂದು ಸ್ಥಳೀಯರು ಆಕ್ರೋಶಗೊಂಡಿದ್ದಾರೆ.

  • ಒಳಚರಂಡಿಯಲ್ಲಿ ಸಿಕ್ತು ಮನುಷ್ಯನ ಅಸ್ಥಿಪಂಜರ

    ಒಳಚರಂಡಿಯಲ್ಲಿ ಸಿಕ್ತು ಮನುಷ್ಯನ ಅಸ್ಥಿಪಂಜರ

    ದಾವಣಗೆರೆ: ಹೊಸದಾಗಿ ನಿರ್ಮಾಣವಾಗಿರುವ ಖಾಸಗಿ ಲೇಔಟ್ ಒಂದರ ಒಳಚರಂಡಿ ಛೇಂಬರ್ ನಲ್ಲಿ ಪುರಷನದ್ದು ಎಂದು ಶಂಕಿಸಲಾದ ಅಸ್ಥಿಪಂಜರ ದೊರೆತ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ.

    ನಗರದ ಶಿವಮೊಗ್ಗ ರಸ್ತೆಯ ಶ್ರೀ ಹರಿಹರರೇಶ್ವರ ಲೇಔಟ್ ಹಿಂಭಾಗದಲ್ಲಿನ ಹೊಸ ಲೇಔಟ್ ನಲ್ಲಿ ಕೆಲಸಗಾರರು ಯುಜಿಡಿ ಛೇಂಬರ್ ಸಂಪರ್ಕ ಕಲ್ಪಿಸಲು ಮುಂಜಾನೆ ಛೇಂಬರ್‍ನ ಮುಚ್ಚಳ ತೆರೆದಾಗ ಅಸ್ಥಿಪಂಜರ ಇರುವುದನ್ನು ನೋಡಿ ಭಯಗೊಂಡು ಕೂಡಲೇ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕೆ ಬಂದ ಉನ್ನತ ಪೊಲೀಸ್ ಅಧಿಕಾರಿಗಳು ಮತ್ತು ವಿಧಿವಿಜ್ಞಾನದ ಪ್ರಯೋಗಾಲಯದ ಅಧಿಕಾರಿಗಳು ನಗರಸಭೆಯ ಪೌರ ಕಾರ್ಮಿಕರಿಂದ ಅಸ್ಥಿ ಪಂಜರವನ್ನು ಛೇಂಬರ್ ನಿಂದ ಮೇಲೆತ್ತಿ, ಪರೀಕ್ಷಿಸಲಾಯಿತು.

    ಪ್ರಾಥಮಿಕ ಪರೀಕ್ಷೆಯನ್ನು ದಾವಣಗೆರೆ ಸಿ.ಜಿ ಆಸ್ಪತ್ರೆಯ ಡಾ. ಮೋಹನ್ ಕುಮಾರ್ ಗುರುತಿಸಿದಂತೆ ಮೃತ ವ್ಯಕ್ತಿಯು ಅಂದಾಜು 5.4 ಅಡಿ ಎತ್ತರ, ಸುಮಾರು 25 ರಿಂದ 30 ವರ್ಷದ ಒಳಗೆ ಇದ್ದಾನೆ. ಸುಮಾರು ಆರು ತಿಂಗಳ ಹಿಂದೆ ಈ ಘಟನೆ ನೆಡೆದಿರಬಹುದು ಎಂದು ಊಹಿಸಿದರು. ವ್ಯಕ್ತಿಯ ಉಡುದಾರ, ಮೆಟಲ್ ಕೈ ಬಳೆ, ಕೊರಳು ದಾರ ಸಿಕ್ಕಿದ್ದು ಪುರುಷನೆಂದು ತಿಳಿದು ಬಂದಿದೆ. ನಂತರ ಅಸ್ಥಿ ಪಂಜರವನ್ನು ವಿಧಿವಿಜ್ಞಾನದ ಪ್ರಯೋಗಾಲಯದ ಅಧಿಕಾರಿಗಳು ಹೆಚ್ಚಿನ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ತೆಗೆದುಕೊಂಡು ಹೋಗಿದ್ದಾರೆ. ವರದಿ ಬಂದ ನಂತರ ಈ ವ್ಯಕ್ತಿ ಯಾರು ಮತ್ತು ಸಾವಿನ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಗ್ರಾಮಾಂತರ ಡಿವೈಎಸ್‍ಪಿ ಮಂಜುನಾಥ್ ಕೆ.ಗಂಗಲ ತಿಳಿಸಿದರು.

    ಸ್ಥಳಕ್ಕೆ ಆಗಮಿಸಿದ ಸಿಪಿಐ ಶಿವಪ್ರಸಾದ್ ಅವರ ನೇತೃತ್ವದ ತಂಡ ಪರಿಶೀಲನೆ ನಡೆಸಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ವೇಳೆ ಪ್ರಾದೇಶಿಕ ವಿಧಿ ವಿಜ್ಞಾನ ಪ್ರಯೋಗಾಲಯದ ಸಹಾಯಕ ನಿರ್ದೇಶಕಿ ಡಾ. ಭಾರ್ಗವಿ ಮತ್ತಿತರು ಇದ್ದರು.