Tag: ಒಲಿಂಪಿಕ್

  • ಬ್ರಿಜ್ ಭೂಷಣ್ ವಿರುದ್ಧದ ಕುಸ್ತಿಪಟುಗಳ ಹೋರಾಟಕ್ಕೆ ಬಿಜೆಪಿ ಸಂಸದೆ ಬೆಂಬಲ

    ಬ್ರಿಜ್ ಭೂಷಣ್ ವಿರುದ್ಧದ ಕುಸ್ತಿಪಟುಗಳ ಹೋರಾಟಕ್ಕೆ ಬಿಜೆಪಿ ಸಂಸದೆ ಬೆಂಬಲ

    ನವದೆಹಲಿ: ಬಿಜೆಪಿ (BJP) ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Sharan Singh) ಬಂಧಿಸುವಂತೆ ಒತ್ತಾಯಿಸಿ ನಡೆಯುತ್ತಿರುವ ಕುಸ್ತಿಪಟುಗಳ (Wrestlers) ಹೋರಾಟಕ್ಕೆ ಮಹಾರಾಷ್ಟ್ರ (Maharashtra) ಬಿಜೆಪಿ ಸಂಸದೆ ಪ್ರೀತಮ್ ಮುಂಡೆ (Pritam Munde) ಬೆಂಬಲ ಸೂಚಿಸಿದ್ದಾರೆ.

    ದೂರಿನ ಪರಿಶೀಲನೆಯ ನಂತರ ಅಧಿಕಾರಿಗಳು ಇದು ಸರಿಯಾಗಿದೆಯೇ? ಇಲ್ಲವೆ ಎಂಬುದನ್ನು ನಿರ್ಧರಿಸಬೇಕು. ನಾನು ಈ ಸರ್ಕಾರದ ಭಾಗವಾಗಿದ್ದೇನೆ. ಆದರೂ ಕುಸ್ತಿಪಟುಗಳೊಂದಿಗೆ ಸರ್ಕಾರ ಸಂವಹನ ನಡೆಸಬೇಕಾದ ರೀತಿಯಲ್ಲಿ ನಡೆದುಕೊಂಡಿಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಯಾರೇ ದೂರು ನೀಡಿದರೂ ಕ್ರಮ ತೆಗೆದುಕೊಳ್ಳಬೇಕು. ಪ್ರಸ್ತುತ ಪ್ರಕರಣದಲ್ಲಿ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ ಎಂದು ಪ್ರೀತಮ್ ಮುಂಡೆ ಹೇಳಿದ್ದಾರೆ. ಇದನ್ನೂ ಓದಿ: 180 ದಿನಗಳಾದರೂ ಕೆಲಸ ಸಿಗದ ನಿರುದ್ಯೋಗಿಗಳಿಗೆ ಯುವ ನಿಧಿ

    ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಬ್ರಿಜ್ ಭೂಷಣ್ ಅವರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಗಳ ಬಗ್ಗೆ ಬಿಜೆಪಿ ಮೌನ ವಹಿಸಿದೆ. ಇದರ ನಡವೆ ಪ್ರೀತಮ್ ಮುಂಡೆ ಹಾಗೂ ಹರಿಯಾಣದ ಬಿಜೆಪಿ ಸಂಸದ ಬ್ರಿಜೇಂದ್ರ ಸಿಂಗ್ ಪ್ರತಿಭಟನಕಾರರ ಪರ ದ್ವನಿ ಎತ್ತಿದ್ದಾರೆ.

    ಇತ್ತೀಚೆಗೆ ಕುಸ್ತಿಪಟುಗಳು ತಾವು ಗೆದ್ದ ಪದಕಗಳನ್ನು ಗಂಗಾ ನದಿಗೆ (Ganga River) ಎಸೆಯುವುದಾಗಿ ಘೋಷಿಸಿದ್ದರು. ಈ ವೇಳೆ ಹರಿಯಾಣದ (Haryana) ಬಿಜೆಪಿ ಸಂಸದ ಬ್ರಿಜೇಂದ್ರ ಸಿಂಗ್ ಪ್ರತಿಭಟನೆ ಹೃದಯವಿದ್ರಾವಕವಾಗಿದೆ ಎಂದು ಹೇಳಿದ್ದರು. ರೈತ ಸಂಘದ ಮುಖಂಡ ನರೇಶ್ ಟಿಕಾಯತ್ ಅವರು ಎಸೆಯದಂತೆ ತಡೆದಿದ್ದರು.

    ನಮ್ಮ ಕುಸ್ತಿಪಟುಗಳ ನೋವು ಮತ್ತು ಅಸಹಾಯಕತೆಯ ನೊವಿನಲ್ಲಿ ನಾನು ಭಾಗಿಯಾಗುತ್ತೇನೆ. ಅವರ ಜೀವಮಾನದ ಕಠಿಣ ಪರಿಶ್ರಮವನ್ನು ನದಿಗೆ ಎಸೆಯುವ ಅಂಚಿಗೆ ಅವರು ತಲುಪಿದ್ದಾರೆ. ಇದು ಹೃದಯ ಹಿಂಡುವ ಘಟನೆಯಾಗಿ ಕಾಣುತ್ತಿದೆ ಎಂದು ಅವರು ಟ್ವೀಟ್ ಮಾಡಿದ್ದರು.

    ಪ್ರತಿಭಟನಾ ಮೆರವಣಿಗೆಯಲ್ಲಿ ಭಾರತೀಯ ಕುಸ್ತಿಪಟುಗಳನ್ನು ದೆಹಲಿ ಪೊಲೀಸರು ನಡೆಸಿಕೊಂಡ ರೀತಿ ಗೊಂದಲಕ್ಕೆ ಕಾರಣವಾಗಿದೆ. ಕುಸ್ತಿಪಟುಗಳ ಆರೋಪಗಳನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು ಎಂದು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (IOC) ಹೇಳಿದೆ.

    ತನ್ನ ವಿರುದ್ಧದ ಒಂದೇ ಒಂದು ಆರೋಪ ಸಾಬೀತಾದರೂ ನೇಣು ಹಾಕಿಕೊಳ್ಳುವುದಾಗಿ ಬ್ರಿಜ್ ಭೂಷಣ್ ಸಿಂಗ್ ಇತ್ತೀಚೆಗೆ ಹೇಳಿದ್ದಾರೆ. ಇದನ್ನೂ ಓದಿ: ಲಗೇಜ್‍ಗೆ ಹೆಚ್ಚುವರಿ ಹಣ ಪಾವತಿಸಿ ಎಂದಿದ್ದಕ್ಕೆ ಬ್ಯಾಗ್‍ನಲ್ಲಿ ಬಾಂಬ್ ಇದೆ ಅಂತ ಏರ್‌ಪೋರ್ಟ್‌ನಲ್ಲಿ ಮಹಿಳೆ ಡ್ರಾಮಾ

  • ಭಾರತೀಯ ಒಲಿಂಪಿಕ್ ಸಂಸ್ಥೆಗೆ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಪಿಟಿ ಉಷಾ ಆಯ್ಕೆ

    ಭಾರತೀಯ ಒಲಿಂಪಿಕ್ ಸಂಸ್ಥೆಗೆ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಪಿಟಿ ಉಷಾ ಆಯ್ಕೆ

    ನವದೆಹಲಿ: ಭಾರತೀಯ ಒಲಿಂಪಿಕ್ ಅಸೋಸಿಯೇಷನ್‌ಗೆ (IOA) ಇದೇ ಮೊದಲ ಬಾರಿ ಮಹಿಳಾ ಅಧ್ಯಕ್ಷರಾಗಿ ಕ್ರೀಡಾ ದಿಗ್ಗಜೆ ಪಿಟಿ ಉಷಾ (PT Usha) ಆಯ್ಕೆಯಾಗಿದ್ದಾರೆ. ಈ ಮೂಲಕ ಉಷಾ ದೇಶದ ಕ್ರೀಡಾ ಆಡಳಿತದಲ್ಲಿ ಹೊಸ ಯುಗಕ್ಕೆ ನಾಂದಿಹಾಡಿದ್ದಾರೆ.

    58 ವಯಸ್ಸಿನ ಪಿಟಿ ಉಷಾ ಐಒಎಗೆ ಶನಿವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ 95 ವರ್ಷಗಳ ಇತಿಹಾಸದಲ್ಲೇ ಈ ಸ್ಥಾನಕ್ಕೇರಿದ ಮೊದಲ ಒಲಂಪಿಯನ್ ಹಾಗೂ ಅಂತಾರಾಷ್ಟ್ರೀಯ ಪದಕ ವಿಜೇತೆಯಾಗಿದ್ದಾರೆ.

    ಪಿಟಿ ಉಷಾಯ ಆಯ್ಕೆಯಿಂದ ಐಒಎಯಲ್ಲಿ ದೀರ್ಘಕಾಲದಿಂದಿದ್ದ ಬಿಕ್ಕಟ್ಟು ಅಂತ್ಯವಾಗಿದೆ. ಇದಕ್ಕೂ ಮೊದಲು ಈ ತಿಂಗಳ ಒಳಗಾಗಿ ಅಧ್ಯಕ್ಷರ ನೇಮಕವಾಗದೇ ಹೋದಲ್ಲಿ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯನ್ನೇ ಅಮಾನತುಗೊಳಿಸುವ ಸಾಧ್ಯತೆಯಿತ್ತು.

    ನ್ಯಾಷನಲ್ ರೈಫಲ್ ಅಸೋಸಿಯೇಷನ್ ಆಫ್ ಇಂಡಿಯಾದ (NRAI) ಅಜಯ್ ಪಟೇಲ್ ಅವರು ಹಿರಿಯ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಒಲಿಂಪಿಕ್ ಪದಕ ವಿಜೇತ ಶೂಟರ್ ಗಗನ್ ನಾರಂಗ್ ಮತ್ತು ರೋಯಿಂಗ್ ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷೆ ರಾಜಲಕ್ಷ್ಮಿ ಸಿಂಗ್ ದೇವ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

    ಭಾರತೀಯ ವೇಟ್‌ಲಿಫ್ಟಿಂಗ್ ಫೆಡರೇಶನ್ (IWF) ಅಧ್ಯಕ್ಷ ಸಹದೇವ್ ಯಾದವ್ ಕೋಶಾಧಿಕಾರಿಯಾಗಿ ಆಯ್ಕೆಯಾಗಿದ್ದಾರೆ. ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (AIFF) ಅಧ್ಯಕ್ಷ ಮತ್ತು ಮಾಜಿ ಗೋಪರ್ ಕಲ್ಯಾಣ್ ಚೌಬೆ ಜಂಟಿ ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದನ್ನೂ ಓದಿ: India vs Bangladesh 3rd ODI – ಭಾರತಕ್ಕೆ 227 ರನ್‌ಗಳ ಭರ್ಜರಿ ಜಯ

    ಭಾರತೀಯ ಬ್ಯಾಡ್ಮಿಂಟನ್ ಅಸೋಸಿಯೇಷನ್‌ನ (BAI) ಅಲಕಾನಂದ ಅಶೋಕ್ ಅವರು ಶಾಲಿನಿ ಠಾಕೂರ್ ಚಾವ್ಹಾ ಮತ್ತು ಸುಮನ್ ಕೌಶಿಕ್ ಅವರನ್ನು ಹಿಂದಿಕ್ಕಿ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.

    ಒಲಂಪಿಕ್ ಪದಕ ವಿಜೇತ ಕುಸ್ತಿಪಟು ಯೋಗೇಶ್ವರ್ ದತ್ ಮತ್ತು ಬಿಲ್ಲುಗಾರ್ತಿ ಡೋಲಾ ಬ್ಯಾನರ್ಜಿ ಅವರು ಎಕ್ಸಿಕ್ಯೂಟಿವ್ ಕೌನ್ಸಿಲ್‌ನಲ್ಲಿ ಪುರುಷ ಮತ್ತು ಮಹಿಳಾ ಪ್ರತಿನಿಧಿಗಳಾಗಿದ್ದಾರೆ. ಲೆಜೆಂಡರಿ ಬಾಕ್ಸರ್ ಎಂಸಿ ಮೇರಿ ಕೋಮ್ ಮತ್ತು ಹಿರಿಯ ಟೇಬಲ್ ಟೆನ್ನಿಸ್ ಆಟಗಾರ ಅಚಂತಾ ಶರತ್ ಕಮಲ್ ಅವರು ಅಥ್ಲೀಟ್ ಆಯೋಗದ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿರುವ ಕಾರಣದಿಂದ ಕಾರ್ಯಕಾರಿ ಮಂಡಳಿಯ ಭಾಗವಾಗಿದ್ದಾರೆ.

    ಭೂಪೇಂದರ್ ಸಿಂಗ್ ಬಾಜ್ವಾ, ಅಮಿತಾಭ್ ಶರ್ಮಾ, ಹರ್ಪಾಲ್ ಸಿಂಗ್ ಮತ್ತು ರೋಹಿತ್ ರಾಜ್‌ಪಾಲ್ ಕೂಡ ಕಾರ್ಯಕಾರಿ ಮಂಡಳಿಗೆ ಆಯ್ಕೆಯಾಗಿದ್ದಾರೆ. ಇದನ್ನೂ ಓದಿ: ಮಾಜಿ ಸಚಿವ ವಿಶ್ವನಾಥ್ ಕಾಂಗ್ರೆಸ್ ಸೇರದಂತೆ ಮನವೊಲಿಸಲು ನಾನು ಮುಂದಾಳತ್ವ ವಹಿಸಲ್ಲ: ಹೆಬ್ಬಾರ್

    Live Tv
    [brid partner=56869869 player=32851 video=960834 autoplay=true]

  • 9 ವರ್ಷದ ಬಾಲಕನಾಗಿದ್ದಾಗ ನನ್ನನ್ನು ಕಳ್ಳಸಾಗಣೆ ಮಾಡಲಾಗಿತ್ತು: ಒಲಿಂಪಿಕ್, ವಿಶ್ವ ಚಾಂಪಿಯನ್‌ನ ಸ್ಫೋಟಕ ಹೇಳಿಕೆ

    9 ವರ್ಷದ ಬಾಲಕನಾಗಿದ್ದಾಗ ನನ್ನನ್ನು ಕಳ್ಳಸಾಗಣೆ ಮಾಡಲಾಗಿತ್ತು: ಒಲಿಂಪಿಕ್, ವಿಶ್ವ ಚಾಂಪಿಯನ್‌ನ ಸ್ಫೋಟಕ ಹೇಳಿಕೆ

    ಲಂಡನ್: ಒಲಿಂಪಿಕ್ ಹಾಗೂ ವಿಶ್ವ ಚಾಂಪಿಯನ್ ಆಗಿರುವ ಓಟಗಾರ ಮೊ ಫರಾ ತಮ್ಮ 9ನೇ ವಯಸ್ಸಿನಲ್ಲಿ ಜಿಬೌಟಿಯಿಂದ ಬ್ರಿಟನ್‌ಗೆ ಕಳ್ಳಸಾಗಣೆ ಮಾಡಲಾಗಿತ್ತು ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.

    ತಾನು ಹಿಂದೆಂದೂ ಭೇಟಿಯಾಗದ ಮಹಿಳೆ ತನ್ನ ನಕಲಿ ಪ್ರಯಾಣದ ದಾಖಲೆಗಳನ್ನು ಸೃಷ್ಟಿಸಿ ಬ್ರಿಟನ್‌ಗೆ ಕರೆದೊಯ್ದಿದ್ದಳು. ತನ್ನ ಹೊಟ್ಟೆಪಾಡಿಗಾಗಿ ಅಲ್ಲಿ ಮನೆಕೆಲಸ ಹಾಗೂ ಮಕ್ಕಳನ್ನು ಆರೈಕೆ ಮಾಡಲು ಒತ್ತಾಯಿಸಲಾಗಿತ್ತು. ಮಾತ್ರವಲ್ಲದೇ ತನ್ನ ನಿಜ ಹೆಸರು ಹುಸೇನ್ ಅಬ್ದಿ ಕಹಿನ್‌ನಿಂದ ಮೊಹಮ್ಮದ್ ಫರಾ ಎಂದು ಬದಲಿಸಲಾಗಿತ್ತು ಎಂದು ಬಹಿರಂಗಪಡಿಸಿದ್ದಾರೆ.

    ತಾನು ಬ್ರಿಟನ್‌ಗೆ ಬಂದ ಬಳಿಕ ಮಹಿಳೆ ಪಶ್ಚಿಮ ಲಂಡನ್‌ನ ಹೌನ್ಸ್ಲೋನಲ್ಲಿರುವ ಆಕೆಯ ಮನೆಗೆ ಕರೆದುಕೊಂಡು ಹೋಗಿದ್ದಳು. ತನ್ನ ಸಂಬಂಧಿಕರ ಸಂಪರ್ಕದ ದಾಖಲೆಗಳನ್ನು ಆಕೆ ಹರಿದು ಹಾಕಿದ್ದಳು. ತನಗೆ 12 ವರ್ಷಗಳ ವರೆಗೂ ಆಕೆ ಶಾಲೆಗೆ ಹೋಗಲು ಬಿಟ್ಟಿರಲಿಲ್ಲ ಎಂದು ಹಿಂದಿನ ಘಟನೆಯನ್ನು ತಿಳಿಸಿದ್ದಾರೆ. ಇದನ್ನೂ ಓದಿ: ಐಪಿಎಲ್‌ ನೋಡಿ ಕಲಿಯಬೇಕು – ಐಸಿಸಿ ವಿರುದ್ಧ ಕ್ರೀಡಾ ವಾಹಿನಿಗಳು ಕಿಡಿ

    ಈ ಸಂದರ್ಭ ನನಗೆ ಅಲ್ಲಿಂದ ಹೊರ ಬರಬೇಕಿತ್ತು. ಆಗಾಗ ನಾನು ಬಾತ್‌ರೂಮ್‌ನಲ್ಲಿ ಬೀಗ ಹಾಕಿಕೊಂಡು ಅಳುತ್ತಿದ್ದೆ. ಬಳಿಕ ನಾನು ಈ ಪರಿಸ್ಥಿತಿಯಿಂದ ಓಡಿ ಹೋಗುವ ನಿರ್ಧಾರ ಮಾಡಿದೆ. ನನಗೆ ಆಗ ದೈಹಿಕ ಶಿಕ್ಷಕ ಅಲನ್ ವಾಟ್ಕಿನ್ಸನ್ ಅವರ ಪರಿಚಯವಾಗಿ, ಅವರು ನನಗಾಗಿ ಸಾಮಾಜಿಕ ಸೇವಾ ಕೇಂದ್ರವನ್ನು ಸಮಪರ್ಕಿಸಿದರು. ನನ್ನನ್ನು ಸಾಕಲು ಸೋಮಾಲಿ ಸಮುದಾಯದ ಕುಟುಂಬವನ್ನು ಹುಡುಕಲು ಸಹಾಯ ಮಾಡಿದರು ಎಂದರು.

    ಅವರ ಸಹಾಯದಿಂದ ನನಗೆ ನನ್ನ ಭುಜದಿಂದ ಒಂದು ದೊಡ್ಡ ಹೊರೆ ಇಳಿದಂತಾಗಿತ್ತು. ನನ್ನಂತಹ ಅದೆಷ್ಟೋ ಮಕ್ಕಳು ಇದೇ ರೀತಿ ಕಳ್ಳಸಾಗಣೆಗೊಳಪಟ್ಟಿದ್ದಾರೆ. ಆದರೆ ನಾನೊಬ್ಬ ಅದೃಷ್ಟಶಾಲಿಯಾಗಿದ್ದೆ. ಇದರಿಂದ ನಾನು ಉಳಿದುಕೊಂಡೆ, ಇತರರಿಗಿಂತ ಭಿನ್ನವಾದೆ ಎಂದು ಹೇಳಿದರು. ಇದನ್ನೂ ಓದಿ: ವಿಂಬಲ್ಡನ್‌ ಟೆನ್ನಿಸ್‌ ಟೂರ್ನಿಯಲ್ಲೂ ಕೆಜಿಎಫ್‌ ಹವಾ

    2012 ಹಾಗೂ 2016ರ ಒಲಿಂಪಿಕ್‌ನಲ್ಲಿ 5,000 ಹಾಗೂ 10,000 ಮೀ.ನ ಓಟದಲ್ಲಿ ಗೆದ್ದಿರುವ ಫರಾ ಈ ಬಾರಿ ಅಕ್ಟೋಬರ್‌ನಲ್ಲಿ ಲಂಡನ್ ಮ್ಯಾರಥಾನ್‌ನಲ್ಲಿ ಭಾಗವಹಿಸಲಿದ್ದಾರೆ. ಕಳೆದ ಬಾರಿ ಲಂಡನ್‌ನ 10,000 ಮೀ. ಓಟದಲ್ಲಿ ರನ್ನರ್ ಅಪ್ ಆದ ಫರಾ ಈ ತಿಂಗಳ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವುದನ್ನು ತಳ್ಳಿಹಾಕಿದ್ದಾರೆ. ಮೇ ತಿಂಗಳಿನಲ್ಲಿ ತಮ್ಮ ವೃತ್ತಿ ಜೀವನಕ್ಕೆ ಶೀಘ್ರವೇ ವಿದಾಯ ಹೇಳುವ ಸುಳಿವನ್ನು ನೀಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ಶಿವಮೊಗ್ಗದಲ್ಲಿ ಪ್ರಪ್ರಥಮ ಬಾರಿಗೆ ರಾಜ್ಯಮಟ್ಟದ ಒಲಿಂಪಿಕ್ ಕ್ರೀಡಾಕೂಟ ಆಯೋಜನೆ

    ಶಿವಮೊಗ್ಗದಲ್ಲಿ ಪ್ರಪ್ರಥಮ ಬಾರಿಗೆ ರಾಜ್ಯಮಟ್ಟದ ಒಲಿಂಪಿಕ್ ಕ್ರೀಡಾಕೂಟ ಆಯೋಜನೆ

    ಶಿವಮೊಗ್ಗ: ಇದೇ ಮೊದಲ ಬಾರಿಗೆ ಶಿವಮೊಗ್ಗದಲ್ಲಿ ನವೆಂಬರ್ 23 ರಿಂದ 30 ರವರೆಗೆ ರಾಜ್ಯಮಟ್ಟದ ಒಲಿಂಪಿಕ್ ಕ್ರೀಡಾಕೂಟ ನಡೆಸಲು ನಿರ್ಧರಿಸಲಾಗಿದೆ.

    ಯುವಜನ ಸೇವಾ ಮತ್ತು ಕ್ರೀಡಾ ಸಚಿವರಾಗಿ ಈಶ್ವರಪ್ಪ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಶಿವಮೊಗ್ಗದಲ್ಲಿ ಈ ರೀತಿಯ ರಾಜ್ಯಮಟ್ಟದ ಕ್ರೀಡಾಕೂಟ ನಡೆಸಲು ನಿರ್ಧರಿಸಲಾಗಿದ್ದು ಇದು ಜಿಲ್ಲೆಯ ಅಭಿವೃದ್ಧಿ ಜೊತೆಗೆ ಕ್ರೀಡಾಪಟುಗಳ ಉತ್ತೇಜನಕ್ಕೆ ಸಹಕಾರಿಯಾಗಿದೆ. ಈ ಕ್ರೀಡಾಕೂಟವು ಶಿವಮೊಗ್ಗದ ನೆಹರೂ ಕ್ರೀಡಾಂಗಣ, ಒಳಾಂಗಣ ಕ್ರೀಡಾಂಗಣ ಸೇರಿದಂತೆ, ನಗರದ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ನಡೆಸಲು ಭರ್ಜರಿ ತಯಾರಿ ಮಾಡಿಕೊಳ್ಳಲಾಗುತ್ತಿದೆ.

    ಕ್ರೀಡಾಕೂಟದ ಯಶಸ್ವಿ ಅಯೋಜನೆಗೆ ಸಾರ್ವಜನಿಕ ಸಂಘ-ಸಂಸ್ಥೆಗಳಿಗೆ ಕೈ ಜೋಡಿಸಲು ಮನವಿ ಕೂಡ ಮಾಡಿಕೊಳ್ಳಲಾಗಿದೆ. ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳ ವಸತಿ ಊಟ ಉಪಹಾರ ಮತ್ತು ಸಾರಿಗೆ ವ್ಯವಸ್ಥೆಗೆ ಕ್ರಮ ಕೈಗೊಳ್ಳಬೇಕು ಹಾಗು ಎಲ್ಲಾ ಕ್ರೀಡಾ ಸಂಸ್ಥೆಗಳು ಸಕ್ರಿಯವಾಗಿ ಜವಾಬ್ದಾರಿಯನ್ನು ವಹಿಸಿಕೊಳ್ಳುವಂತೆ ಕ್ರೀಡಾ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ. ಈ ಬಗ್ಗೆ ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿದ ಸಚಿವರು ಕ್ರೀಡಾಕೂಟವನ್ನು ಯಶಸ್ವಿಗೊಳಿಸಲು ಕೈ ಜೋಡಿಸಿ ಎಂದು ಮನವಿ ಕೂಡ ಮಾಡಿಕೊಂಡಿದ್ದಾರೆ.

    ಇದೇ ಪ್ರಥಮ ಬಾರಿಗೆ ಶಿವಮೊಗ್ಗದಲ್ಲಿ ಈ ಒಲಿಂಪಿಕ್ ಕ್ರೀಡಾಕೂಟ ಆಯೋಜಿಸಲಾಗಿದ್ದು ಈ ಕ್ರೀಡಾಕೂಟದಲ್ಲಿ, ಒಟ್ಟು 25 ವಿವಿಧ ಕ್ರೀಡಾಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ಸುಮಾರು 4 ಸಾವಿರ ಕ್ರೀಡಾಪಟುಗಳು ಕ್ರೀಡಾಕೂಟದಲ್ಲಿ ಭಾಗವಹಿಸುವ ನಿರೀಕ್ಷೆ ಇದ್ದು, ಶಿವಮೊಗ್ಗ ಸೇರಿದಂತೆ ತಾಲೂಕು ಕೇಂದ್ರಗಳಲ್ಲಿ ಕೆಲವು ಸ್ಪರ್ಧೆಗಳನ್ನು ಆಯೋಜಿಸಲು ಕೂಡ ಉದ್ದೇಶಿಸಲಾಗಿದೆ.

    ಈ ಒಲಿಂಪಿಕ್ ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್, ಸ್ವಿಮ್ಮಿಂಗ್, ರೆಸ್ಲಿಂಗ್, ಆರ್ಚರಿ, ಫೆನ್ಸಿಂಗ್, ಸೈಕ್ಲಿಂಗ್, ಜೂಡೋ, ಹಾಕಿ, ಬಾಲ್ ಬ್ಯಾಡ್ಮಿಂಟನ್, ನೆಟ್ಬಾಲ್ ಬ್ಯಾಡ್ಮಿಂಟನ್ ಸೇರಿದಂತೆ 25 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ನಗರದ ನೆಹರು ಕ್ರೀಡಾಂಗಣ, ಒಳಾಂಗಣ ಕ್ರೀಡಾಂಗಣ, ಕ್ರೀಡಾ ಸಂಕೀರ್ಣ, ಸೇರಿದಂತೆ ವಿವಿಧ ಕಾಲೇಜುಗಳ ಕ್ರೀಡಾಂಗಣಗಳಲ್ಲಿ ಹಲವು ಸ್ಪರ್ಧೆಗಳನ್ನ ಆಯೋಜಿಸಲು ತೀರ್ಮಾನಿಸಲಾಗಿದೆ.

  • 62 ಲಕ್ಷ  ಫೋನ್‍ಗಳಿಂದ ಒಲಿಂಪಿಕ್ಸ್ ಪದಕ ತಯಾರಿ

    62 ಲಕ್ಷ ಫೋನ್‍ಗಳಿಂದ ಒಲಿಂಪಿಕ್ಸ್ ಪದಕ ತಯಾರಿ

    ಟೋಕಿಯೋ: ಮುಂದಿನ ವರ್ಷ ಜಪಾನಿನಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾಕೂಟದ ಪರಿಸರ ಸ್ನೇಹಿ ಪದಕಗಳನ್ನು ಅನಾವರಣಗೊಳಿಸಲಾಗಿದೆ. 1976ರಲ್ಲಿ ಒಲಿಂಪಿಕ್ ಕೂಟದ  ಕತ್ತಿವರಸೆ(ಫೆನ್ಸಿಂಗ್​) ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದ್ದ ಜರ್ಮನಿಯ ಕ್ರೀಡಾಪಟು ಹಾಗೂ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಅಧ್ಯಕ್ಷ ಥಾಮಸ್ ಬಚ್ ಪದಕಗಳನ್ನು ಅನಾವರಣಗೊಳಿಸಿದರು.

    ಎಲೆಕ್ಟ್ರಾನಿಕ್ಸ್ ತ್ಯಾಜ್ಯಗಳನ್ನು ಬಳಸಿ ಪದಕಗಳನ್ನು ತಯಾರಿಸಿದ್ದು ಟೋಕಿಯೋ ಒಲಿಂಪಿಕ್ಸ್  ವಿಶೇಷತೆಗಳಲ್ಲಿ ಒಂದು. 1 ವರ್ಷದ ಮೊದಲೇ ಪಂದ್ಯದ ಆಯೋಜಕರ ಸಮಿತಿ ಪದಕಗಳ ವಿನ್ಯಾಸವನ್ನು ಬಿಡುಗಡೆಗೊಳಿಸಿತ್ತು. ಅದೇ ವಿನ್ಯಾಸದಲ್ಲಿ ಪದಕಗಳನ್ನು 62 ಲಕ್ಷದ  ಹಳೆಯ ಎಲೆಕ್ಟ್ರಾನಿಕ್ಸ್ ವಸ್ತುಗಳಿಂದ (ಮೊಬೈಲ್ ಮತ್ತು ಟ್ಯಾಬ್ಲೆಟ್ಸ್) ತಯಾರಿಸಲಾಗಿದೆ.

    2017 ಏಪ್ರಿಲ್ ನಲ್ಲಿ ಟೋಕಿಯೋ ಒಲಿಂಪಿಕ್ ಆಯೋಜಕ ಸಮಿತಿ ಹಳೆಯ ಇಲೆಕ್ಟ್ರಾನಿಕ್ ಉತ್ಪನ್ನಗಳ ಸಂಗ್ರಹಣೆಯ ಅಭಿಯಾನವನ್ನು ಆರಂಭಿಸಿತ್ತು. ಈ ವಿಶೇಷ ಅಭಿಯಾನದಲ್ಲಿ ಸಮಿತಿಗೆ 78,895 ಟನ್ ಹಳೆಯ ಎಲೆಕ್ಟ್ರಾನಿಕ್ಸ್ ತ್ಯಾಜ್ಯಗಳು  ಸಿಕ್ಕಿತ್ತು. ಇವುಗಳಲ್ಲಿ 62.1 ಲಕ್ಷ ಮೊಬೈಲ್ ಫೋನ್ ಒಳಗೊಂಡಿದ್ದವು. ವಿಶೇಷ ಅಭಿಯಾನದಲ್ಲಿ ಲಭ್ಯವಾದ ಲೋಹಗಳಿಂದಲೇ ಒಲಿಂಪಿಕ್ ಪಂದ್ಯದಲ್ಲಿ ವಿಜೇತರಿಗೆ ನೀಡಲಾಗುವ ಪದಕಗಳ ತಯಾರಿಕೆಗೆ ಸಮಿತಿ ಸೂಚಿಸಿತ್ತು.

    ಈ ಹಳೆಯ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳಲ್ಲಿ 32 ಕೆಜಿ ಬಂಗಾರ, 3,500 ಕೆಜಿ ಬೆಳ್ಳಿ ಮತ್ತು 2,200 ಕೆಜಿ ಕಂಚು ಲಭ್ಯವಾಗಿತ್ತು. ಶುದ್ಧ ಬೆಳ್ಳಿಗೆ 6 ಗ್ರಾಂಗಿಂತ ಹೆಚ್ಚಿನ ಚಿನ್ನದ ಲೇಪನವನ್ನು ಬಳಸಿ ಚಿನ್ನದ ಪದಕವನ್ನು ತಯಾರಿಸಲಾಗಿದ್ದರೆ, ಬೆಳ್ಳಿ ಪದಕವನ್ನು ಶುದ್ಧ ಬೆಳ್ಳಿಯಿಂದ ತಯಾರಿಸಲಾಗಿದೆ. ಶೇ.95ರಷ್ಟು ತಾಮ್ರ ಹಾಗೂ ಶೇ.5ರಷ್ಟು ಸತುವನ್ನು ಬಳಸಿ ಕಂಚಿನ ಪದಕ ತಯಾರಿಸಲಾಗಿದೆ.

    ಪದಕದ ವಿನ್ಯಾಸ:
    ಅಂತರರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿ(ಐಒಸಿ) ನಿಯಮಾವಳಿಯಲ್ಲಿ ಇರುವಂತೆ ಪದಕದ ಮುಂಭಾಗದಲ್ಲಿ ಒಲಿಂಪಿಕ್ ಲಾಂಛನವಾದ ಐದು ರಿಂಗ್​ಗಳು, ಗೇಮ್ಸ್​ನ ಅಧಿಕೃತ ಹೆಸರು ಹಾಗೂ ಪಂಥಾನಿಯಕ್ ಸ್ಟೇಡಿಯಂನ ಮುಂಭಾಗದಲ್ಲಿರುವ ಗ್ರೀಕ್ ವಿಜಯ ದೇವತೆ, ಪದಕದ ಹಿಂಭಾಗದಲ್ಲಿ ಟೋಕಿಯೊ ಒಲಿಂಪಿಕ್ಸ್​ನ ಲಾಂಛನವಿದೆ. ಹೊಸ ವಿನ್ಯಾಸಕ್ಕಾಗಿ ಕರೆದ ಸ್ಪರ್ಧೆಯಲ್ಲಿ 400 ವೃತ್ತಿಪರರು ಮತ್ತು ವಿದ್ಯಾರ್ಥಿಗಳು ಹೊಸ ಹೊಸ ಡಿಸೈನ್ ಸಮಿತಿಗೆ ನೀಡಿದ್ದರು. ಇವುಗಳಲ್ಲಿ ಜುನಿಚಿ ಕಾವಾನಿಶಿ ಅವರ ವಿನ್ಯಾಸವನ್ನು ಪಂದ್ಯದ ಆಯೋಜಕ ಸಮಿತಿ ಅಂತಿಮಗೊಳಿಸಿದೆ.

     85 ಎಂಎಂ ಸುತ್ತಳತೆಯಲ್ಲಿರುವ ಪದಕದ ಅತ್ಯಂತ ತೆಳವಾದ ಭಾಗ 7.7ಎಂಎಂ ಇದ್ದು, ಗರಿಷ್ಠ ದಪ್ಪ 12.1 ಎಂಎಂ ಇದೆ. ಬ್ರೆಜಿಲ್ ದೇಶದ ರಿಯೋ ಡಿ ಜನೈರೋದಲ್ಲಿ ಕಳೆದ ಬಾರಿ ನಡೆದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲೂ  ಮರು ಬಳಕೆಯಾದ ಲೋಹವನ್ನು ಬಳಸಿ ಪದಕಗಳನ್ನು ತಯಾರಿಸಲಾಗಿತ್ತು. ಟೋಕಿಯೋ ಒಲಿಂಪಿಕ್ ಕ್ರೀಡಾಕೂಟ 2020ರ ಜುಲೈ 24 ರಿಂದ ಆರಂಭವಾಗಿ ಆಗಸ್ಟ್ 9 ರವರೆಗೆ ನಡೆಯಲಿವೆ.