Tag: ಒಲಂಪಿಕ್ಸ್

  • ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ನಟ ಚಿರಂಜೀವಿ

    ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ನಟ ಚಿರಂಜೀವಿ

    ತೆಲುಗಿನ ಖ್ಯಾತ ನಟ ಚಿರಂಜೀವಿ (Chiranjeevi) ಪ್ಯಾರಿಸ್ ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್‌ ಉದ್ಘಾಟನಾ ಕಾರ್ಯಕ್ರಮದಲ್ಲಿ ಪತ್ನಿಯೊಂದಿಗೆ ಪಾಲ್ಗೊಂಡಿದ್ದಾರೆ. ಭಾಗವಹಿಸಿದ ಕ್ಷಣಗಳನ್ನು ಅವರು ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿದ್ದಕ್ಕೆ ಹೆಮ್ಮೆ ಆಗುತ್ತಿದೆ ಎಂದು ಅವರು ಫೋಟೋ ಕೂಡ ಶೇರ್ ಮಾಡಿದ್ದಾರೆ.

    2024ರ ಪ್ಯಾರಿಸ್‌ ಒಲಿಂಪಿಕ್ಸ್‌ (Paris Olympics 2024) ಕ್ರೀಡಾಕೂಟ ಅದ್ಧೂರಿಯಾಗಿ ಆರಂಭವಾಗಿದ್ದು, ಮೊದಲ ದಿನವೇ ಚೀನಾ ಚಿನ್ನದ ಪದಕ ಗೆಲ್ಲುವ ಮೂಲಕ ಗಮನ ಸೆಳೆದಿದೆ. ಶನಿವಾರ (ಜು.27) ನಡೆದ 10 ಮೀಟರ್‌ ಏರ್‌ ರೈಫಲ್‌ ಮಿಶ್ರ ತಂಡಗಳ ಸ್ಪರ್ಧೆಯಲ್ಲಿ ಚೀನಾದ ಶೂಟರ್‌ಗಳಾದ (Chinese Shooters) ಹುವಾಂಗ್‌ ಯುಟಿಂಗ್‌ ಮತ್ತು ಶೆಂಗ್‌ ಲಿಹಾವೊ ಜೋಡಿ ಪ್ರಥಮ ಸ್ಥಾನ ಪಡೆಯುವ ಮೂಲಕ ಚೀನಾಗೆ ಮೊದಲ ಚಿನ್ನದ ಪದಕ ತಂದುಕೊಟ್ಟರು. ಇದು ಪ್ರಸಕ್ತ ಕ್ರೀಡಾಕೂಟದಲ್ಲಿ ಗೆದ್ದ ಮೊದಲ ಚಿನ್ನದ ಪದಕವೂ ಆಗಿದೆ.

    ಏರ್‌ ರೈಫಲ್‌ ಸ್ಪರ್ಧೆಯ ಫೈನಲ್‌ ರೌಂಡ್‌ನಲ್ಲಿ ದಕ್ಷಿಣ ಕೊರಿಯಾದ ಲಿಹಾವೊ ಶೆಂಗ್‌ನ ಜಿಹ್ಯೆನ್ ಕೆಯುಮ್ – ಹಜುನ್ ಪಾರ್ಕ್ ಜೋಡಿಯನ್ನು 16-12 ಅಂತರದಲ್ಲಿ ಸೋಲಿಸುವ ಮೂಲಕ ಹುವಾಂಗ್‌ ಮತ್ತು ಶೆಂಗ್‌ ಜೋಡಿ ಚಿನ್ನದ ಪದಕಕ್ಕೆ ಕೊರಳೊಡ್ಡಿತು. ಇದಕ್ಕೂ ಮುನ್ನ 10 ಮೀಟರ್‌ ಮಿಶ್ರ ತಂಡಗಳ ಏರ್‌ ರೈಫಲ್‌ ಸ್ಪರ್ಧೆಯಲ್ಲಿ ಕಝಕಿಸ್ತಾನದ ಅಲೆಕ್ಸಾಂಡ್ರಾಲೆ ಮತ್ತು ಇಸ್ಲಾಂ ಸತ್ಪಯೇವ್‌ ಜೋಡಿ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದರು. ಇದು ಈ ಟೂರ್ನಿಯ ಮೊದಲ ಪದಕವಾಗಿದೆ.

     

    ಪ್ಯಾರಿಸ್‌ನ ಸೆನ್ ನದಿಯ ಮೇಲೆ ಭಾರತೀಯ ಕಾಲಮಾನ ಶುಕ್ರವಾರ ರಾತ್ರಿ 11 ಗಂಟೆಗೆ 2024ರ ಒಲಿಂಪಿಕ್ಸ್‌ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿತ್ತು. ಕೆಲ ತಂಡಗಳಿಗೆ ಪ್ರತ್ಯೇಕ ಬೋಟ್ ಸಿಕ್ಕರೆ, 3-4 ತಂಡಗಳನ್ನು ಒಟ್ಟಿಗೆ ಸೇರಿಸಿ ಬೋಟ್‌ನಲ್ಲಿ ಪಥ ಸಂಚಲನ ನಡೆಸಿದರು. ಪಥ ಸಂಚಲನದ ವೇಳೆ ತುಂತುರು ಮಳೆ ಬಂದರೂ ಸ್ಪರ್ಧಿಗಳು ಉತ್ಸಾಹದಿಂದ ಅಭಿಮಾನಿಗಳತ್ತ ಕೈ ಬೀಸುತ್ತಿದ್ದರು. ಸೀನ್‌ ನದಿಯ ಆಸ್ಟರ್‌ಲಿಟ್ಜ್‌ ಬ್ರಿಡ್ಜ್‌ನ ಬಳಿ ಆರಂಭಗೊಂಡ ಪಥ ಸಂಚಲನ 6 ಕಿ.ಮೀ ದೂರದಲ್ಲಿರುವ ಐಫಲ್‌ ಟವರ್‌ ಬಳಿ ಮುಕ್ತಾಯಗೊಂಡಿತು.

  • ಒಲಿಂಪಿಕ್ಸ್‌ ಆಯ್ಕೆಯಾಗುವ ಕರ್ನಾಟಕದ ಕ್ರೀಡಾಪಟುಗಳಿಗೆ ತಲಾ ರೂ. 10 ಲಕ್ಷ ಪ್ರೋತ್ಸಾಹಧನ: ಡಾ. ನಾರಾಯಣಗೌಡ

    ಒಲಿಂಪಿಕ್ಸ್‌ ಆಯ್ಕೆಯಾಗುವ ಕರ್ನಾಟಕದ ಕ್ರೀಡಾಪಟುಗಳಿಗೆ ತಲಾ ರೂ. 10 ಲಕ್ಷ ಪ್ರೋತ್ಸಾಹಧನ: ಡಾ. ನಾರಾಯಣಗೌಡ

    ಬೆಂಗಳೂರು: ಟೋಕಿಯೋ ಒಲಿಂಪಿಕ್ಸ್‌ಗೆ ರಾಜ್ಯದ ಐವರು ಕ್ರೀಡಾಪಟುಗಳು ಸಂಭವನೀಯ ಪಟ್ಟಿಯಲ್ಲಿ ಸ್ಥಾನಪಡೆದಿದ್ದು, ಆಯ್ಕೆಯಾಗುವ ಕ್ರೀಡಾಪಟುಗಳಿಗೆ ತಲಾ 10ಲಕ್ಷ ರೂಪಾಯಿ ಪ್ರೋತ್ಸಾಹ ಧನ ಘೋಷಿಸಿ ಆದೇಶ ಹೊರಡಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ನಾರಾಯಣಗೌಡ ಹೇಳಿದ್ದಾರೆ. ಇದನ್ನೂ ಓದಿ:  67ನೇ ವಯಸ್ಸಿನಲ್ಲಿ ಪಿಹೆಚ್‍ಡಿ ಪಡೆದ ವೃದ್ಧೆ

    2020 ರ ಒಲಿಂಪಿಕ್ಸ್ ಕ್ರೀಡಾಕೂಟವು ಜಪಾನ್ ಟೋಕಿಯೋದಲ್ಲಿ ಜುಲೈ 23 ರಿಂದ ಸೆಪ್ಟಂಬರ್ 5ರ ವರೆಗೆ ನಡೆಯಲಿದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ. ನಾರಾಯಣ ಗೌಡ ಈ ಸಂಬಂಧ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ಕ್ರೀಡಾಪಟುಗಳಿಗೆ ಅಗತ್ಯ ನೆರವು ನೀಡುವುದು ಸರ್ಕಾರದ ಕರ್ತವ್ಯವಾಗಿದೆ. ಮೂಲಭೂತ ಸೌಕರ್ಯದ ಜೊತೆಗೆ ಆರ್ಥಿಕ ಸಹಾಯ ನೀಡುವುದು ಅತ್ಯಗತ್ಯ. ಭಾರತ ಸರ್ಕಾರ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿರುವ ನಮ್ಮ ದೇಶದ ಅರ್ಹ ಕ್ರೀಡಾಪಟುಗಳ ಸಂಭವನೀಯ ಪಟ್ಟಿಯನ್ನು ಸಿದ್ಧಪಡಿಸಿದೆ ಎಂದಿದ್ದಾರೆ.

    ರಾಜ್ಯದ ಈಕ್ವೆಸ್ಟ್ರಿಯನ್ ಕ್ರೀಡಾಪಟು ಒಲಿಂಪಿಕ್ಸ್‌ಗೆ ಆಯ್ಕೆಯಾಗಿದ್ದಾರೆ. ರಾಜ್ಯದ ಇನ್ನೂ ನಾಲ್ವರು ಕ್ರೀಡಾಪಟುಗಳು ಸಂಭವನೀಯ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಹೀಗಾಗಿ ಅವರಿಗೆ ಪ್ರೋತ್ಸಾಹ ಧನ ನೀಡಿ ಬೆಂಬಲಿಸಬೇಕಾಗಿದೆ. ಐವರೂ ಕ್ರೀಡಾಪಟುಗಳು ರಾಜ್ಯದ, ರಾಷ್ಟ್ರದ ಕೀರ್ತಿಪತಾಕೆಯನ್ನು ಜಪಾನ್‍ನ ಟೋಕಿಯೋದಲ್ಲಿ ಹಾರಿಸಲಿ. ಮತ್ತಷ್ಟು ಕಠಿಣ ಶ್ರಮವಹಿಸಿ ಒಲಿಂಪಿಕ್ಸ್ ನಲ್ಲಿ ಪಾಲ್ಗೊಳ್ಳಬೇಕು. ಆದ್ದರಿಂದ ತಲಾ ರೂ. 10 ಲಕ್ಷ ನೀಡಿ ಪ್ರೋತ್ಸಾಹಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅಂತೆಯೆ ರಾಜ್ಯ ಸರ್ಕಾರ ಕರ್ನಾಟಕದಕ್ರೀಡಾ ಪ್ರೋತ್ಸಾಹ ಧನ ಘೋಷಿಸಿ ಆದೇಶಿಸಿ ಶುಭಹಾರೈಸಿದ್ದಾರೆ.

    ಸಂಭವನೀಯ ಪಟ್ಟಿಯಲ್ಲಿರುವ ಕ್ರೀಡಾಪಟುಗಳು:
    ಪೌವಾದ್ ಮಿರ್ಜಾ – ಈಕ್ವೆಸ್ಟ್ರಿಯನ್ – ಆಯ್ಕೆಯಾಗಿದ್ದಾರೆ.
    ಎಸ್.ವಿ. ಸುನೀಲ್ – ಹಾಕಿ – ಸಂಭವನೀಯ
    ರೋಹನ್ ಬೋಪಣ್ಣ – ಟೆನ್ನಿಸ್ – ಸಂಭವನೀಯ
    ಶ್ರೀಹರಿ ನಟರಾಜ್ – ಈಜು – ಸಂಭವನೀಯ
    ಕುಮಾರಿ ಅದಿತಿ ಅಶೋಕ್ – ಗಾಲ್ಫ್ -ಸಂಭವನೀಯ

    ಪ್ರತಿಷ್ಕೃತ ಕ್ರೀಡಾಕೂಟದಲ್ಲಿ ಭಾರತ ತಂಡದ ಪರವಾಗಿ ಭಾಗವಹಿಸುವ ಕ್ರೀಡಾಪಟುಗಳಿಗೆ ಪೂರ್ವ ತಯಾರಿ ಮತ್ತು ಬೆಂಬಲದ ದ್ಯೋತಕವಾಗಿ ತಮಿಳುನಾಡು ಮತ್ತು ಮಧ್ಯಪ್ರದೇಶ ರಾಜ್ಯಗಳು ತಲಾ ರೂ.10.00 ಲಕ್ಷ ಪ್ರೋತ್ಸಾಹ ಧನ ನೀಡಿವೆ. ಅದೇ ರೀತಿ ಕರ್ನಾಟಕ ಸಹ ಕ್ರೀಡಾಪಟುಗಳಿಗೆ ನಗದು ನೀಡಲಾಗುತ್ತಿದೆ. ಇದನ್ನೂ ಓದಿ:  ಸಿಎಂಗೆ ರೆಬೆಲ್ ಶಾಸಕ ಯತ್ನಾಳ್ ಮತ್ತೆ ಟಾಂಗ್

    ಪ್ರೋತ್ಸಾಹಧನ ನೀಡುವ ಸಂಬಂಧ ಇತ್ತೀಚೆಗೆ ನಡೆದ ಸಭೆಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಪರಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಆಯುಕ್ತ ಡಾ. ಗೋಪಾಲಕೃಷ್ಣ ಹಾಗೂ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.

  • ರಾಜ್ಯಕ್ಕೆ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾ ಮೂಲಸೌಕರ್ಯ ಒದಗಿಸಲು ಬದ್ಧ: ಕಿರಣ್ ರಿಜಿಜು

    ರಾಜ್ಯಕ್ಕೆ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾ ಮೂಲಸೌಕರ್ಯ ಒದಗಿಸಲು ಬದ್ಧ: ಕಿರಣ್ ರಿಜಿಜು

    ಶಿವಮೊಗ್ಗ: ಭವಿಷ್ಯದ ಕ್ರೀಡಾಪಟುಗಳನ್ನು ಸಜ್ಜುಗೊಳಿಸಲು ಕರ್ನಾಟಕ ರಾಜ್ಯಕ್ಕೆ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾ ಮೂಲ ಸೌಕರ್ಯಗಳನ್ನು ಒದಗಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಹೇಳಿದರು.

    ಸಹ್ಯಾದ್ರಿ ಕಾಲೇಜಿನಲ್ಲಿ ಸುಮಾರು 5 ಕೋಟಿ ರೂ. ವೆಚ್ಚದ ಒಳಾಂಗಣ ಕ್ರೀಡಾಂಗಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಕಿರಣ್ ರಿಜಿಜು, ರಾಜ್ಯದಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಪೂರಕವಾದ ಉತ್ತಮ ವಾತಾವರಣವಿದೆ. ಕ್ರೀಡಾ ಚಟುವಟಿಕೆಗಳ ಉತ್ತೇಜನಕ್ಕಾಗಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮುಂದಿಟ್ಟಿರುವ ಎಲ್ಲಾ ಬೇಡಿಕೆಗಳನ್ನು ಒಂದೊಂದಾಗಿ ಈಡೇರಿಸಲಾಗುತ್ತಿದೆ. ಶಿವಮೊಗ್ಗ ಜಿಲ್ಲೆಯನ್ನು ಕರ್ನಾಟಕದಲ್ಲಿ ಮಾತ್ರವಲ್ಲದೆ ದೇಶದಲ್ಲೇ ಉತ್ತಮ ಕ್ರೀಡಾ ಕೇಂದ್ರವಾಗಿ ರೂಪಿಸಲು ಎಲ್ಲಾ ನೆರವು ಒದಗಿಸಲಾಗುವುದು. ಮುಂದಿನ ಒಲಂಪಿಕ್ಸ್ ನಲ್ಲಿ ಕರ್ನಾಟಕದಿಂದ ಹೆಚ್ಚಿನ ಚಿನ್ನದ ಪದಕದ ನಿರೀಕ್ಷೆ ಹೊಂದಿರುವುದಾಗಿ ತಿಳಿಸಿದರು.

    ನಮ್ಮ ದೇಶದಲ್ಲಿ ವಿಶ್ವದಲ್ಲೇ ಅತಿ ಹೆಚ್ಚಿನ ಸಂಖ್ಯೆಯ ಯುವ ಜನಸಂಖ್ಯೆಯಿದೆ. ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗಳನ್ನು ಮಾಡಲು ನಮಗೆ ಉತ್ತಮ ಅವಕಾಶಗಳಿವೆ. ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಹಲವಾರು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಖೇಲೋ ಇಂಡಿಯಾ ಯೋಜನೆಯಡಿ ಕರ್ನಾಟಕ ರಾಜ್ಯಕ್ಕೆ ಹೆಚ್ಚಿನ ನೆರವು ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಇದರ ಗರಿಷ್ಟ ಪ್ರಯೋಜನವನ್ನು ಯುವ ಜನಾಂಗ ಪಡೆದುಕೊಳ್ಳಬೇಕು ಎಂದರು.

    2028ರ ಒಲಿಂಪಿಕ್ಸ್ ನಲ್ಲಿ ಪದಕ ಪಟ್ಟಿಯಲ್ಲಿ ನಮ್ಮ ದೇಶ ಟಾಪ್ 10ರ ಒಳಗೆ ಇರುವುದು ನಮ್ಮ ಗುರಿ. ಮುಂದಿನ ವರ್ಷಗಳಲ್ಲಿ ಭಾರತದಲ್ಲಿ ಒಲಂಪಿಕ್ಸ್ ಆಯೋಜನೆ ಮಾಡುವ ಕುರಿತು ಈಗಾಗಲೇ ಸಿದ್ಧತೆಗಳನ್ನು ವಿವಿಧ ಹಂತಗಳಲ್ಲಿ ಪ್ರಾರಂಭಿಸಲಾಗಿದೆ. ದೇಶದ ಸುಮಾರು ಶೇ.70ರಷ್ಟು ಮಂದಿ ಯಾವುದೇ ರೀತಿಯ ದೈಹಿಕ ವ್ಯಾಯಾಮಗಳನ್ನು ನಡೆಸುತ್ತಿಲ್ಲ. ಆರೋಗ್ಯ ಪೂರ್ಣರಾಗಿದ್ದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಈ ಹಿನ್ನೆಲೆಯಲ್ಲಿ ಫಿಟ್ ಇಂಡಿಯಾ ಯೋಜನೆ ಜಾರಿಗೊಳಿಸಲಾಗಿದೆ ಎಂದರು.

    ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಮಾತನಾಡಿ, ಸಹ್ಯಾದ್ರಿ ಕಾಲೇಜಿಗೆ ಅಗತ್ಯವಾದ ಕ್ರೀಡಾ ಮೂಲಸೌಕರ್ಯಗಳನ್ನು ಒದಗಿಸಲು ಮುಂದಿನ ದಿನಗಳಲ್ಲಿ ಪ್ರಯತ್ನಿಸಲಾಗುವುದು ಎಂದು ನುಡಿದರು.

    ಯುವಜನ ಸೇವಾ ಮತ್ತು ಕ್ರೀಡಾ ಸಚಿವ ನಾರಾಯಣ ಗೌಡ, ಲೋಕಸಭಾ ಸದಸ್ಯ ಬಿ.ವೈ ರಾಘವೇಂದ್ರ, ಕುವೆಂಪು ವಿಶ್ವವಿದ್ಯಾಲಯ ಕುಲಪತಿ ವೀರಭದ್ರಪ್ಪ, ಹೆಚ್ಚುವರಿ ಅಪರ ಕಾರ್ಯದರ್ಶಿ ಶಾಲಿನಿ ರಜನೀಶ್ ಮತ್ತಿತರರು ಉಪಸ್ಥಿತರಿದ್ದರು.