Tag: ಒರು ಅಡಾರ್ ಲವ್

  • ಕೊಡಗಿಗೆ ಬಂದಿಳಿದ ಕಣ್ಸನ್ನೆ ಬೆಡಗಿ!

    ಕೊಡಗಿಗೆ ಬಂದಿಳಿದ ಕಣ್ಸನ್ನೆ ಬೆಡಗಿ!

    ಕೊಡಗು: ಒರು ಅಡಾರ್ ಲವ್ ಎಂಬ ಮಲೆಯಾಳಂ ಚಿತ್ರದ ಒಂದು ದೃಶ್ಯದ ಮೂಲಕ ರಾತ್ರೋರಾತ್ರಿ ನ್ಯಾಷನಲ್ ಕ್ರಶ್ ಆಗಿ ಫೇಮಸ್ ಆದಾಕೆ ಪ್ರಿಯಾ ಪ್ರಕಾಶ್ ವಾರಿಯರ್. ಆ ಚಿತ್ರ ತೆರೆ ಕಂಡು ಅದು ಕಿರಿಕ್ ಲವ್ ಸ್ಟೋರಿ ಎಂಬ ಹೆಸರಿನಲ್ಲಿ ಕನ್ನಡದಲ್ಲಿಯೂ ಬಿಡುಗಡೆಯಾಗಿ ಹೋಗಿದೆ. ಆ ಚಿತ್ರ ಹೇಳಿಕೊಳ್ಳುವಂಥಾ ಗೆಲುವು ದಾಖಲಿಸದಿದ್ದರೂ ಪ್ರಿಯಾಗೆ ನಟಿಯಾಗಿ ಇರೋ ಬೇಡಿಕೆ, ಆಕೆಯೆಡೆಗಿರೋ ಕ್ರೇಜ್ ಮಾತ್ರ ಒಂದಿನಿತೂ ಕಡಿಮೆಯಾಗಿಲ್ಲ. ಪ್ರಿಯಾ ವಿಷ್ಣುಪ್ರಿಯಾ ಎಂಬ ಚಿತ್ರದ ಮೂಲಕ ಕನ್ನಡಕ್ಕೆ ಆಗಮಿಸುತ್ತಿದ್ದಾರೆಂಬ ಸುದ್ದಿ ಹೊರಬಿದ್ದ ಬೆನ್ನಲ್ಲಿಯೇ ಅವರೀಗ ಏಕಾಏಕಿ ಕೊಡಗಿನಲ್ಲಿ ಕಾಣಿಸಿಕೊಂಡಿದ್ದಾರೆ!

    ಹಾಗಂತ ವಿಷ್ಣುಪ್ರಿಯಾ ಚಿತ್ರದ ಚಿತ್ರೀಕರಣ ಆರಂಭವಾಗಿದೆ, ಪ್ರಿಯಾ ಆ ಕಾರಣದಿಂದಲೇ ಕೊಡಗಿಗೆ ಬಂದಿದ್ದಾರೆ ಅಂದುಕೊಳ್ಳಬೇಕಿಲ್ಲ. ಪ್ರಿಯಾ ಬಂದಿರೋದು ವಿಹಾರಕ್ಕಾಗಿಯಷ್ಟೇ. ಹೀಗೆ ಕಣ್ಣೇಟಿನ ಸುಂದರಿ ಕೊಡಗಿನ ಸುಂದರ ತಾಣಗಳಲ್ಲಿ ಓಡಾಡುತ್ತಾ ಶಾಪಿಂಗ್ ಮಾಡಲಾರಂಭಿಸಿದ್ದೇ ಜನರೆಲ್ಲ ಗುರುತು ಹಿಡಿದು ಮುಗಿಬಿದ್ದಿದ್ದಾರೆ. ಪ್ರಿಯಾ ಎಲ್ಲರೊಂದಿಗೂ ಚೆಂದಗೆ ಮಾತಾಡಿ, ಅಭಿಮಾನಿಗಳ ಸೆಲ್ಫಿ ಸಂಭ್ರಮಕ್ಕೆ ಮನಸಾರೆ ಸಹಕರಿಸಿ ಖುಷಿಗೊಂಡಿದ್ದಾರೆ.

    ಒರು ಅಡಾರ್ ಲವ್ ಎಂಬ ಚಿತ್ರದ ನಂತರ ಪ್ರಿಯಾ ವಾರಿಯರ್ ಬಾಲಿವುಡ್‍ಗೂ ಎಂಟ್ರಿ ಕೊಟ್ಟಿದ್ದರು. ಶ್ರೀದೇವಿ ಬಂಗ್ಲೊ ಎಂಬ ಚಿತ್ರದಲ್ಲಿ ಪ್ರಿಯಾ ನಟಿಸಲು ತಯಾರಾಗಿದ್ದರಾದರೂ ಆರಂಭದಲ್ಲಿಯೇ ವಿವಾದವೆದ್ದು ಆ ಚಿತ್ರ ತಾತ್ಕಾಲಿಕವಾಗಿ ನಿಂತು ಹೋಗಿದೆ. ಇದೀಗ ಅವರು ಕನ್ನಡದತ್ತ ಮುಖ ಮಾಡಿದ್ದಾರೆ. ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ಅವರ ಎರಡನೇ ಚಿತ್ರ ವಿಷ್ಣುಪ್ರಿಯದಲ್ಲಿ ಅವರು ನಾಯಕಿಯಾಗಿ ನಟಿಸೋದು ಬಹುತೇಕ ಖಚಿತಗೊಂಡಿದೆ. ಅದಕ್ಕೂ ಮುಂಚೆಯೇ ಪ್ರಿಯಾ ವಾರಿಯರ್ ಕೊಡಗಿನ ಸುಂದರ ತಾಣಗಳಲ್ಲಿ ಒಂದು ರೌಂಡು ಹಾಯಾಗಿ ವಿಹಾರ ನಡೆಸಿದ್ದಾರೆ. ಜೊತೆಗೆ ತನ್ನ ಬ್ರ್ಯಾಂಡ್ ಆಗಿರೋ ಕಣ್ಸನ್ನೆಯನ್ನೂ ಅಭಿಮಾನಿಗಳಿಗೆ ತೋರಿಸಿದ್ದಾರೆ.

  • ಕಣ್ಸನ್ನೆ ಬೆಡಗಿ ಪ್ರಿಯಾಗೆ ಬಾಲಿವುಡ್ ನಿಂದ ಆಫರ್ ಗಳ ಸುರಿಮಳೆ!

    ಕಣ್ಸನ್ನೆ ಬೆಡಗಿ ಪ್ರಿಯಾಗೆ ಬಾಲಿವುಡ್ ನಿಂದ ಆಫರ್ ಗಳ ಸುರಿಮಳೆ!

    ಮುಂಬೈ: ತನ್ನ ಕೇವಲ ಒಂದು ಕಣ್ಣ ಸನ್ನೆಯಿಂದ ನ್ಯಾಷನಲ್ ಕ್ರಷ್ ಆಗಿರೋ ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್‍ಗೆ ಬಾಲಿವುಡ್ ಅಂಗಳದಿಂದ ಆಫರ್ ಗಳು ಹರಿದು ಬರುತ್ತಿವೆ ಎಂದು ವರದಿಯಾಗಿದೆ.

    ಪ್ರಿಯಾ ಮಲಯಾಳಂನ ‘ಓರು ಅಡಾರ್ ಲವ್’ ಸಿನಿಮಾದಲ್ಲಿ ನಟಿಸಿದ್ದು, ಚಿತ್ರ ಭಾರೀ ಕುತೂಹಲವನ್ನು ಹುಟ್ಟುಹಾಕಿದೆ. ಓರು ಅಡಾರ್ ಲವ್ ಚಿತ್ರವನ್ನು ಪ್ರಿಯಾರಿಗಾಗಿಯೇ ನೋಡಲು ಚಿತ್ರಮಂದಿರಗಳಿಗೆ ತೆರಳಲು ಜನರು ಕಾತುರರಾಗಿದ್ದಾರೆ. ಈ ಮೊದಲು ಸಾಮನ್ಯ ನಟಿಯಾಗಿದ್ದ ಪ್ರಿಯಾ ಒಂದು ಕಣ್ಣ ಸನ್ನೆಯ ಮೂಲಕ ಅಂತರಾಷ್ಟ್ರೀಯ ಖ್ಯಾತಿಯನ್ನು ಪಡೆದುಕೊಳ್ಳುವ ಮೂಲಕ ಸಂಚಲನ ಮೂಡಿಸಿದ್ದಾರೆ.

    ಮೂಲಗಳ ಪ್ರಕಾರ, ಈಗಾಗಲೇ ಬಾಲಿವುಡ್‍ನ ಹಲವು ನಿರ್ಮಾಪಕರು ಪ್ರಿಯಾರನ್ನು ಸಂಪರ್ಕಿಸುತ್ತಿದ್ದಾರೆ ಎನ್ನಲಾಗಿದೆ. ಪ್ರಿಯಾ ಮಲಯಾಳಂ ಜೊತೆ ಹಿಂದಿಯನ್ನು ಸ್ಪಷ್ಟವಾಗಿ ಮಾತನಾಡಬಲ್ಲವರಾಗಿದ್ದು, ಬಾಲಿವುಡ್ ನ ನಿರ್ಮಾಪಕರು ಪ್ರಿಯಾರನ್ನ ಸಂಪರ್ಕ ಮಾಡಿದ್ದಾರೆ ಎಂದು ಹೇಳಲಾಗ್ತಿದೆ.

    ಚಿತ್ರತಂಡ 1.32 ಸೆಕೆಂಡ್ ನ ಹಾಡಿನ ವಿಡಿಯೋ ಬಿಡುಗಡೆ ಮಾಡಿದ್ದು, ಪ್ರಿಯಾ ಅವರ ಕಣ್ಣಿನ ನೋಟ ಎಂಥವರನ್ನು ಕ್ಷಣಕಾಲ ಮಗ್ನಗೊಳಿಸುವಂತೆ ಮಾಡುತ್ತದೆ. ಚಿತ್ರದಲ್ಲಿ ಈ ಹಾಡನ್ನು ತನ್ನ ಹಳೆಯ ಪ್ರೀತಿಯನ್ನು ನೆನಪು ಮಾಡಿಕೊಳ್ಳುವ ಸನ್ನಿವೇಶದಲ್ಲಿ ಮೂಡಿಬಂದಿದೆ. ಹೈಸ್ಕೂಲ್ ನಲ್ಲಿ ಉಂಟಾದ ಮೊದಲ ಲವ್ ಕುರಿತಾಗಿ ಮುಗ್ಧವಾಗಿ ಹಾಡನ್ನು ಚಿತ್ರೀಕರಿಸಲಾಗಿದೆ. ಚಿತ್ರದ ಹಾಡಿಗೆ ಸಿಕ್ಕ ಪ್ರತಿಕ್ರಿಯೆ ಕಂಡ ಚಿತ್ರದ ನಿರ್ದೇಶಕರು, ಚಿತ್ರ ತಂಡ ಮತ್ತು ಅಭಿಮಾನಿಗಳಿಗೆ ಟ್ವೀಟ್ ಮಾಡಿ ಧನ್ಯವಾದ ತಿಳಿಸಿದ್ದರು.

    ಒಂದು ಹಾಡಿನ ವಿಡಿಯೋ ಮೂಲಕ ನ್ಯಾಷನಲ್ ಸೆನ್ಸೇಷನ್ ಸೃಷ್ಟಿಸಿರೋ ಮಲೆಯಾಳಂ ನಟಿ ಪ್ರಿಯಾ ಪ್ರಕಾಶ್ ಸಾಮಾಜಿಕ ಜಾಲತಾಣದಲ್ಲಿ ದಾಖಲೆ ಬರೆದಿದ್ದಾರೆ. ಇನ್  ಸ್ಟಾಗ್ರಾಮ್ ನಲ್ಲಿ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಅವರನ್ನು ಹಿಂದಿಕ್ಕಿ ಮುಂದೆ ಸಾಗಿದ್ದಾರೆ. ಪ್ರಿಯಾ ಅವರ ಇನ್ ಸ್ಟಾಗ್ರಾಮ್ ಖಾತೆಯನ್ನ ಕೇವಲ ಒಂದೇ ದಿನದಲ್ಲಿ ಸುಮಾರು 6 ಲಕ್ಷಕ್ಕೂ ಹೆಚ್ಚಿನ ಅಭಿಮಾನಿಗಳು ಫಾಲೋ ಮಾಡಿದ್ದರು. ಈ ಮೂಲಕ ಒಂದೇ ದಿನದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಫಾಲೋ ಆಗಿರುವ ವಿಶ್ವದ ಮೂರನೇ ಸೆಲೆಬ್ರಿಟಿ ಎನ್ನುವ ಹೆಗ್ಗಳಿಕೆಗೆ ಪ್ರಿಯಾ ಪಾತ್ರರಾಗಿದ್ದರು.

  • ಪ್ರಿಯಾ ಕಣ್ ಸನ್ನೆಗೆ ಸೋತ ರೋಶನ್ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ

    ಪ್ರಿಯಾ ಕಣ್ ಸನ್ನೆಗೆ ಸೋತ ರೋಶನ್ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ

    ತಿರುವನಂತಪುರಂ: ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಕಣ್ ಸನ್ನೆ ಮಾಡಿದ ವಿಡಿಯೋ ರಾತ್ರೋರಾತ್ರಿ ನ್ಯಾಷನಲ್ ಸನ್ಸೆಷನ್ ಆಗಿದೆ.

    ಒರು ಅಡಾರ್ ಲವ್ ಚಿತ್ರದ ಈ ವಿಡಿಯೋ ಆಗಿದ್ದು, ಇದರಲ್ಲಿ ನಟಿ ಪ್ರಿಯಾ ಹಾಗೂ ನಟ ರೋಶನ್ ಅಬ್ದುಲ್ ರಹೂಫ್ ತಮ್ಮ ಕಣ್ಣಸನ್ನೆ ಮೂಲಕವೇ ಸಾಮಾಜಿಕ ಜಾಲತಾಣದಲ್ಲಿ ಹೊಸ ಸೆನ್ಸೆಷನ್ ಹುಟ್ಟಿಸಿದ್ದಾರೆ.

    19 ವರ್ಷದ ರೋಶನ್, ತ್ರಿಶ್ಯೂರ್ ನಗರದ ವಿಮಲ ಕಾಲೇಜಿನಲ್ಲಿ ಬಿಸಿಎ ವ್ಯಾಸಂಗ ಮಾಡುತ್ತಿದ್ದಾರೆ. ರೋಶನ್ ಕೇರಳದ ಪೆರುವಂತನಮ್ ನಿವಾಸಿಯಾಗಿದ್ದಾರೆ. ಈ ಹಿಂದೆ ಖಾಸಗಿ ವಾಹಿನಿಯೊಂದರ ರಿಯಾಲಿಟಿ ಶೋದಲ್ಲಿ ಸ್ಪರ್ಧಿಸಿದ್ದ ರೋಶನ್ ತೀರ್ಪುಗಾರರಾಗಿದ್ದ ನಟಿ ಪ್ರಿಯಾಮಣಿ ಅವರಿಂದ ಮೆಚ್ಚುಗೆಯನ್ನು ಪಡೆದುಕೊಂಡಿದ್ದರು.

    ರೋಶನ್ ಒರು ಅಡಾರ್ ಲವ್ ಎರಡನೇ ಸಿನಿಮಾ ಆಗಿದ್ದು, ಮೊದಲ ಸಿನಿಮಾ ‘ನಾನ್ ಸೆನ್ಸ್’ ಫೆಬ್ರವರಿ 16ರಂದು ತೆರೆಕಾಣಲಿದೆ. ನಾನ್ ಸೆನ್ಸ್ ಸಿನಿಮಾದಲ್ಲಿ ವಿನಯ್ ಪೋರ್ಟ್ ಮತ್ತು ಶೃತಿ ರಾಮಚಂದ್ರನ್ ಲೀಡ್ ರೋಲ್‍ನಲ್ಲಿ ನಟಿಸಿದ್ದಾರೆ. ಪದವಿ ವ್ಯಾಸಂಗ ಮಾಡುತ್ತಿರುವ ರೋಶನ್ ಸ್ನಾತಕೋತ್ತರ ಪದವಿಯನ್ನು ಪಡೆಯುವ ಇಚ್ಛೆಯನ್ನು ಹೊಂದಿದ್ದಾರೆ.

    ಡ್ಯಾನ್ಸರ್ ಆಗಿರುವ ರೋಶನ್ ಮುಂದಿನ ದಿನಗಳಲ್ಲಿ ಸಕ್ರೀಯವಾಗಿ ಸಿನಿಮಾದಲ್ಲಿ ತೊಡಗಿಕೊಳ್ಳಲಿದ್ದೇನೆ ಎಂದು ತಿಳಿಸಿದ್ದಾರೆ. ಒರು ಅಡಾರ್ ಲವ್ ಚಿತ್ರದಲ್ಲಿ ಪ್ರಿಯಾ ವಾರಿಯರ್, ರೋಶನ್ ಅಬ್ದುಲ್, ನುರೀನ್ ಶರೀಫ್, ಸಿಯಾದ್ ಶಹಜಾನ್ ಸೇರಿದಂತೆ ನವಕಲಾವಿದರನ್ನು ಚಿತ್ರತಂಡ ಹೊಂದಿದೆ. ಒರು ಅಡಾರ್ ಲವ್ ಇದೇ ವರ್ಷ ಏಪ್ರಿಲ್ ನಲ್ಲಿ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ತಿಳಿಸಿದೆ.

     

  • ಕಣ್ಸನ್ನೆ ಚೆಲುವೆಗೆ ಪ್ರೇಮಿಗಳ ದಿನದಂದೇ ಸಂಕಷ್ಟ – ಪ್ರಿಯಾ ವಾರಿಯರ್ ಹಾಡಿನ ವಿರುದ್ಧ ಕೇಸ್

    ಕಣ್ಸನ್ನೆ ಚೆಲುವೆಗೆ ಪ್ರೇಮಿಗಳ ದಿನದಂದೇ ಸಂಕಷ್ಟ – ಪ್ರಿಯಾ ವಾರಿಯರ್ ಹಾಡಿನ ವಿರುದ್ಧ ಕೇಸ್

    ಹೈದರಾಬಾದ್: ಒಂದೇ ಒಂದು ನೋಟದಿಂದಲೇ ಜಗತ್ತಿನಾದ್ಯಂತ ಸೆನ್ಸೇಶನ್ ಆಗಿರುವ ಪ್ರಿಯಾ ಪ್ರಕಾಶ್ ವಾರಿಯರ್ ಅಭಿನಯದ ‘ಒರು ಅಡಾರ್ ಲವ್’ ಚಿತ್ರಕ್ಕೆ ಸಂಕಷ್ಟ ಎದುರಾಗಿದೆ.

    ಚಿತ್ರದ ಹಾಡಿನಲ್ಲಿರುವ ಸಾಲುಗಳು ಮುಸ್ಲಿಮರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟುಮಾಡಿದೆ ಎಂದು ಆರೋಪಿಸಿ ಹೈದ್ರಾಬಾದ್‍ನ ಫಲಕನಾಮಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮೊಹಮ್ಮದ್ ಅಬ್ದುಲ್ ಖಾನ್ ತನ್ನ ಸ್ನೇಹಿತರ ಜೊತೆ ದೂರು ದಾಖಲಿಸಿದ್ದು, ಪ್ರವಾದಿ ಕೀರ್ತನೆಗಳನ್ನು ಸಿನಿಮಾ ಹಾಡಿಗೆ ಬಳಸಿರುವುದು ಸರಿಯಲ್ಲ ಎಂದು ದೂರಿನಲ್ಲಿ ಹೇಳಿದ್ದಾರೆ.

    ಚಿತ್ರಕ್ಕೆ ಯಾವುದೇ ರೀತಿಯಲ್ಲಿ ನಮ್ಮ ವಿರೋಧವಿಲ್ಲ. ಸಿನಿಮಾದಲ್ಲಿ ಬರುವ ‘ಮಾಣಿಕ್ಯಾ ಮಲರಾಯಾ ಪೂವಿ’ ಎಂಬ ಸಾಲುಗಳನ್ನು ಆಂಗ್ಲ ಭಾಷೆಯಲ್ಲಿ ಭಾಷಾಂತರ ಮಾಡುವ ವೇಳೆಯಲ್ಲಿ ಪ್ರವಾದಿಗಳನ್ನು ಅವಮಾನಿಸಲಾಗಿದೆ ಎಂದು ಪತ್ರಿಕೆಗಳು ವರದಿ ಮಾಡಿವೆ. ಈ ಗೀತೆ ರಚನೆಕಾರ ಶಾನ್ ರೆಹಮಾನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ. ಇದನ್ನೂ ಓದಿ: ಇನ್ ಸ್ಟಾಗ್ರಾಮ್ ನಲ್ಲಿ ಹೊಸ ದಾಖಲೆ ಬರೆದ ಪ್ರಿಯಾ ವಾರಿಯರ್!

    ಚಿತ್ರದ 1.32 ಸೆಕೆಂಡ್ ನ ಹಾಡಿನ ವಿಡಿಯೋದಲ್ಲಿ ಪ್ರಿಯಾ ಅವರ ಕಣ್ಣಿನ ನೋಟ ಎಂಥವರನ್ನು ಕ್ಷಣಕಾಲ ಮಗ್ನಗೊಳಿಸುವಂತೆ ಮಾಡುತ್ತದೆ. ಚಿತ್ರದಲ್ಲಿ ಈ ಹಾಡು ತನ್ನ ಹಳೆಯ ಪ್ರೀತಿಯನ್ನು ನೆನಪು ಮಾಡಿಕೊಳ್ಳುವ ಸನ್ನಿವೇಶದಲ್ಲಿ ಮೂಡಿಬಂದಿದೆ. ಹೈಸ್ಕೂಲ್ ನಲ್ಲಿ ಉಂಟಾದ ಮೊದಲ ಲವ್ ಕುರಿತಾಗಿ ಮುಗ್ಧವಾಗಿ ಹಾಡನ್ನು ಚಿತ್ರೀಕರಿಸಲಾಗಿದೆ. ಇದನ್ನೂ ಓದಿ: ಜಸ್ಟ್ 1 ವಿಡಿಯೋದಲ್ಲೇ ಇಂಟರ್ ನ್ಯಾಷನಲ್ ಸೆನ್ಸೇಷನ್! – ಕಣ್ಣೋಟದಿಂದಲೇ ಹುಡುಗರ ಮನಗೆದ್ದ ನಟಿ!  

    18 ವರ್ಷದ ಪ್ರಿಯಾ ಪ್ರಕಾಶ್ ವಾರಿಯಾರ್ ಈಗ ಹಾಲಿವುಡ್ ನ ಸ್ಟಾರ್ ಗಳಾದ ಅಮೆರಿಕ ಮಾಡೆಲ್, ಟಿವಿ ನಿರೂಪಕಿ ಕೈಲೀ ಜೆನ್ನರ್ ಮತ್ತು ಪ್ರಸಿದ್ಧ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಸಾಲಿನಲ್ಲಿ ಬಂದು ನಿಂತಿದ್ದಾರೆ. ಈ ಹಿಂದೆ ಒಂದೇ ದಿನದಲ್ಲಿ ಕೈಲೀ ಜೆನ್ನರ್ 8 ಲಕ್ಷ, ರೊನಾಲ್ಡೊ ಅವರನ್ನು 6.50 ಲಕ್ಷ ಮಂದಿ ಫಾಲೋ ಮಾಡಿದ್ದರು. ಪ್ರಸ್ತುತ 17 ಲಕ್ಷ ಇನ್ ಸ್ಟಾಗ್ರಾಮ್ ಫಾಲೋವರ್ಸ್ ಗಳನ್ನು ಹೊಂದುವ ಮೂಲಕ ಪ್ರಿಯಾ ಸೆನ್ಸೇಷನ್ ಸೃಷ್ಟಿಸಿದ್ದಾರೆ. ಪ್ರಸ್ತುತ ಇವರ ಇನ್ ಸ್ಟಾಗ್ರಾಮ್ ಖಾತೆಗೆ ಬ್ಲೂ ಟಿಕ್ ಮಾರ್ಕ್ ಲಭಿಸಿದೆ.

    https://twitter.com/ppriyavarrier/status/962751427394248705

    https://twitter.com/ppriyavarrier/status/963256171703382017

    https://www.instagram.com/p/Be-0hR9jBqT/?utm_source=ig_embed