Tag: ಒಬಿಸಿ

  • ಮತಗಳಿಗೆ ಮಾತ್ರ ಸೀಮಿತವಾಗಿದ್ದೇವೆ, ನಮಗೂ ಅವಕಾಶ ಕೊಡಿ – BJPಗೆ ಒಬಿಸಿ ನಾಯಕರ ಮನವಿ

    ಮತಗಳಿಗೆ ಮಾತ್ರ ಸೀಮಿತವಾಗಿದ್ದೇವೆ, ನಮಗೂ ಅವಕಾಶ ಕೊಡಿ – BJPಗೆ ಒಬಿಸಿ ನಾಯಕರ ಮನವಿ

    ನವದೆಹಲಿ: ಮುಂಬರುವ ವಿಧಾನಸಭೆ (Assembly Election) ಮತ್ತು ಲೋಕಸಭೆ ಚುನಾವಣೆಯಲ್ಲಿ (Parliamentary Election) ಒಬಿಸಿಯಲ್ಲಿರುವ (OBC) ಸಮುದಾಯಗಳಿಗೆ ಕ್ಷೇತ್ರಗಳ ಸಂಖ್ಯೆ ಹೆಚ್ಚಿಸುವಂತೆ 40ಕ್ಕೂ ಅಧಿಕ ಹಿಂದುಳಿದ ವರ್ಗಗಳ ನಾಯಕರ ನಿಯೋಗ ಬಿಜೆಪಿ (BJP) ಹೈಕಮಾಂಡ್ ನಾಯಕರನ್ನ ಮನವಿ ಮಾಡಿದೆ.

    ದೆಹಲಿಯಲ್ಲಿ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi), ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (CT Ravi) ಸೇರಿ ಹಲವು ನಾಯಕರನ್ನು ಭೇಟಿ ಮಾಡಿದ ಒಬಿಸಿ ನಾಯಕರ ನಿಯೋಗ, ಸಣ್ಣ ಸಣ್ಣ ಸಮುದಾಯಗಳ ನಾಯಕರನ್ನ ಗುರುತಿಸಿ ಚುನಾವಣೆಯಲ್ಲಿ ಟಿಕೆಟ್ ನೀಡಬೇಕು ಎಂದು ಒಬಿಸಿ ನಾಯಕರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: `ಏಕರೂಪ ನಾಗರಿಕ ಸಂಹಿತೆ’ ಕುರಿತು ಚರ್ಚಿಸಲು ಫೆ.12ರಂದು ಮುಸ್ಲಿಮರ ಬೃಹತ್ ಸಮಾವೇಶ

    ಈ ಬಗ್ಗೆ ಮಾತನಾಡಿದ ಮರಾಠ ಸಂಘದ ರಾಜ್ಯಾಧ್ಯಕ್ಷ ಶಾಮಸುಂದರ್ ಗಾಯಕವಾಡ್, ಲೋಕಸಭೆ ವಿಧಾನಸಭೆ ಚುನಾವಣೆಯಲ್ಲಿ ಒಬಿಸಿ ಅಭ್ಯರ್ಥಿಗಳನ್ನ ಕಡೆಗಣಿಸಲಾಗುತ್ತಿದೆ. ರಾಜ್ಯದಲ್ಲಿ ಶೇ.35 ಒಬಿಸಿ, ಎಸ್ಸಿ – ಎಸ್ಟಿ ಮತಗಳು (SCST Community Vote) ಶೇ.23, ಲಿಂಗಾಯತ ಶೇ.16, ಒಕ್ಕಲಿಗ ಶೇ.11, ಬ್ರಾಹ್ಮಣರು ಶೇ.4 ರಷ್ಟಿದ್ದಾರೆ. ಈ ಪೈಕಿ ಒಬಿಸಿ ಶೇ.20ಕ್ಕೂ ಅಧಿಕ ಜನರು ಬಿಜೆಪಿಗೆ (BJP) ಮತ ಚಲಾಯಿಸುತ್ತಿದ್ದಾರೆ. ಎಸ್ಸಿ ಎಸ್ಟಿ ಶೇ.15, ಒಕ್ಕಲಿಗ ಮತ್ತು ಲಿಂಗಾಯತ ಸೇರಿ ಶೇ.17 ಜನರು ಬಿಜೆಪಿಗೆ ಮತ ಹಾಕಿದ್ದಾರೆ. ಮತ ಪ್ರಮಾಣದಲ್ಲಿ ಒಬಿಸಿ ಜನರೇ ಹೆಚ್ಚು ಬಿಜೆಪಿಗೆ ಮತ ಚಲಾಯಿಸಿದ್ದಾರೆ. ಅದಾಗ್ಯೂ ನಮ್ಮನ್ನ ನಿರ್ಲಕ್ಷಿಸಿ ಕೇವಲ ವೀರಶೈವ ಲಿಂಗಾಯತ, ಒಕ್ಕಲಿಗರು, ಬ್ರಾಹ್ಮಣರಿಗೆ ಹೆಚ್ಚಿನ ಮಣೆ ಹಾಕಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ಹಿಂದುಳಿದ ವರ್ಗಗಳಲ್ಲಿರುವ ಸಮುದಾಯಗಳನ್ನ ಕೇವಲ ಮತಕ್ಕಾಗಿ ಸೀಮಿತಗೊಳಿಸಲಾಗಿದೆ. ನಮಗೆ ಹೆಚ್ಚಿನ ಸ್ಥಾನಮಾನ ಸಿಗುತ್ತಿಲ್ಲ ಹೀಗಾಗಿ ವಿಧಾನಸಭೆ ಚುನಾವಣೆಯಲ್ಲಿ 15ರ ಬದಲು 75 ಕ್ಷೇತ್ರಗಳಲ್ಲಿ ಒಬಿಸಿಯಲ್ಲಿರುವ ಚಿಕ್ಕ ಪುಟ್ಟ ಸಮುದಾಯಗಳ ಅಭ್ಯರ್ಥಿಗಳಿಗೆ ಟಿಕೆಟ್ ನೀಡಬೇಕು ಅವರು ಒತ್ತಾಯಿಸಿದರು. ಇದನ್ನೂ ಓದಿ: Earthquakeː ಟರ್ಕಿಯಲ್ಲಿ ಸಿಲುಕಿರೋದು ಬೆಂಗಳೂರು ಟೆಕ್ಕಿಯಲ್ಲ- ಕನ್ನಡಿಗರ ರಕ್ಷಣೆಗೆ ಮುಂದಾದ ಸರ್ಕಾರ

    ಕರ್ನಾಟಕ ರಾಜ್ಯ ವಿಶ್ವಕರ್ಮ ಮಹಾಮಂಡಲ ರಾಜ್ಯಧ್ಯಕ್ಷ ಎಲ್. ನಾಗರಾಜ್ ಆಚಾರ್ ಮಾತನಾಡಿ, ಬಹಳಷ್ಟು ವರ್ಷಗಳಿಂದ ಬಿಜೆಪಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ಪಕ್ಷಕ್ಕಾಗಿ ದುಡಿದ್ದೇವೆ, ಹಿಂದುಳಿದ ವರ್ಗದಲ್ಲಿರುವ ಬಹುತೇಕ ಸಮುದಾಯಗಳು ಪ್ರಧಾನಿ ನರೇಂದ್ರ ಮೋದಿ ಅವರನ್ನ ದೊಡ್ಡ ಪ್ರಮಾಣದಲ್ಲಿ ಬೆಂಬಲಿಸುತ್ತಿವೆ. ಈ ಹಿನ್ನಲೆ ಆ ವರ್ಗಗಳಿಗೆ ಆದ್ಯತೆ ನೀಡಬೇಕು. ಬೇರೆ ಬೇರೆ ವಿಭಾಗಗಳಲ್ಲಿ ಆದ್ಯತೆ ನೀಡಬೇಕು ಎಂದು ಕೋರಿದರು.

    ವಿಶ್ವಕರ್ಮ ಮುಖಂಡ ಹಾಗೂ 2018ರ ಚುನಾವಣೆ ಮಂಡ್ಯ ಪರಾರ್ಜಿತ ಅಭ್ಯರ್ಥಿ ಡಿ.ವೆಂಕಟೇಶ ಮಾತನಾಡಿ, ನಮ್ಮ ಒಬಿಸಿಯಲ್ಲಿರುವ ಸಣ್ಣ ಸಣ್ಣ ಸಮುದಾಯಗಳು ಎಲ್ಲ ದೊಡ್ಡ ಪ್ರಮಾಣದಲ್ಲಿಲ್ಲ. ಯಾವ ಕ್ಷೇತ್ರದಲ್ಲೂ ನಿರ್ಣಾಯಕವಾಗಿಲ್ಲ. ಆದ್ದರಿಂದ ನಮ್ಮ ಸಮುದಾಯದ ನಾಯಕರಿಗೆ ಅವಕಾಶ ನಿರಾಕರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮನವಿ ಸಲ್ಲಿಸಿದ್ದೇವೆ ಎಂದು ಹೇಳಿದರು.

    ನಿಯೋಗದಲ್ಲಿ ಮರಾಠ, ಗಾಣಿಗ, ಕುರುಬ, ಗೊಲ್ಲ, ವಿಶ್ವಕರ್ಮ, ಕಂಬಾರ, ಬಲಿಜ, ಈಡಿಗ, ನೇಕಾರ, ಸೇರಿ ಇನ್ನು ಹಲವು ಸಮುದಾಯದ ನಾಯಕರು ಇದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಎಸ್ಟಿಗೆ ತಳವಾರ, ಪರಿವಾರ ಜಾತಿಗಳ ಸೇರ್ಪಡೆ – ಒಬಿಸಿ ಮೀಸಲಾತಿ ಪಟ್ಟಿಯಿಂದ ತೆಗೆದು ಸರ್ಕಾರ ಆದೇಶ

    ಎಸ್ಟಿಗೆ ತಳವಾರ, ಪರಿವಾರ ಜಾತಿಗಳ ಸೇರ್ಪಡೆ – ಒಬಿಸಿ ಮೀಸಲಾತಿ ಪಟ್ಟಿಯಿಂದ ತೆಗೆದು ಸರ್ಕಾರ ಆದೇಶ

    ಬೆಂಗಳೂರು: ತಳವಾರ (Talawara) ಮತ್ತು ಪರಿವಾರ ನಾಯಕ (Parivara Nayaka) ಜಾತಿಗಳನ್ನು ಹಿಂದುಳಿದ ವರ್ಗಗಳ (OBC) ಮೀಸಲಾತಿ ಜಾತಿ ಪಟ್ಟಿಯಿಂದ ತೆಗೆದುಹಾಕಿ ರಾಜ್ಯ ಸರ್ಕಾರ (Karnataka Government) ಆದೇಶ ಹೊರಡಿಸಿದೆ.

    ತಳವಾರ ಮತ್ತು ಪರಿವಾರ ಜಾತಿಗಳನ್ನು ಎಸ್ಟಿ ವರ್ಗಕ್ಕೆ ಸೇರ್ಪಡೆ ಮಾಡಿದ ಹಿನ್ನೆಲೆ, ಒಬಿಸಿ ಮೀಸಲಾತಿ ಜಾತಿ ಪಟ್ಟಿಯಿಂದ ಈ ಜಾತಿಗಳನ್ನು ರಾಜ್ಯ ಸರ್ಕಾರ ತೆಗೆದುಹಾಕಿದೆ. ಇದನ್ನೂ ಓದಿ: SSLC ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ – ಏಪ್ರಿಲ್‌ 1ರಿಂದ ಪರೀಕ್ಷೆ ಆರಂಭ

    ಈ ಜಾತಿಗಳನ್ನು ಒಬಿಸಿ ಮೀಸಲಾತಿ ಜಾತಿ ಪಟ್ಟಿಯಿಂದ ತೆಗೆದುಹಾಕುವ ಸಂಬಂಧ ಸರ್ಕಾರದ ಪ್ರಸ್ತಾವನೆಗೆ ರಾಜ್ಯಪಾಲರು ಅಂಗೀಕಾರ ಮಾಡಿದ್ದಾರೆ. ಹೀಗಾಗಿ ಸರ್ಕಾರ ಇಂದು ಅಧಿಕೃತ ಆದೇಶ ಹೊರಡಿಸಿದೆ.

    ಎಸ್ಟಿ ವರ್ಗಕ್ಕೆ ಪರಿವಾರ ಮತ್ತು ತಳವಾರ ಜಾತಿಗಳನ್ನು ಸೇರಿಸಿರುವ ಹಿನ್ನೆಲೆಯಲ್ಲಿ ಸದರಿ ಜಾತಿಗಳಿಗೆ ಸರ್ಕಾರವು ಪರಿಶಿಷ್ಟ ಪಂಗಡದ ಪ್ರಮಾಣಪತ್ರಗಳನ್ನು ವಿತರಿಸಲು ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರರಿಗೆ ನಿರ್ದೇಶನ ನೀಡಿದೆ. ಇದನ್ನೂ ಓದಿ: ಇನ್ಸ್‌ಪೆಕ್ಟರ್‌ ನಂದೀಶ್ ತೆಗೆದುಕೊಂಡ ತೀರ್ಮಾನ ರಾಂಗ್ – ತಮ್ಮ ಹೇಳಿಕೆ ಸಮರ್ಥಿಸಿಕೊಂಡ ಎಂಟಿಬಿ

    Live Tv
    [brid partner=56869869 player=32851 video=960834 autoplay=true]

  • ಕುಂಚಿಟಿಗ ಸಮುದಾಯಕ್ಕೆ ಕೇಂದ್ರ ಒಬಿಸಿ ಮೀಸಲಾತಿ ಕಲ್ಪಿಸುವಂತೆ ಟಿ.ಬಿ ಜಯಚಂದ್ರ ಮನವಿ

    ಕುಂಚಿಟಿಗ ಸಮುದಾಯಕ್ಕೆ ಕೇಂದ್ರ ಒಬಿಸಿ ಮೀಸಲಾತಿ ಕಲ್ಪಿಸುವಂತೆ ಟಿ.ಬಿ ಜಯಚಂದ್ರ ಮನವಿ

    ನವದೆಹಲಿ: ಕರ್ನಾಟಕದ ಕುಂಚಿಟಿಗ ಸಮುದಾಯಕ್ಕೆ (Kunchitiga community) ಒಬಿಸಿ (OBC) ಮೀಸಲಾತಿ ಕಲ್ಪಿಸುವಂತೆ ಮಾಜಿ ಸಚಿವ ಟಿ.ಬಿ ಜಯಚಂದ್ರ (TB Jayachandra) ಮನವಿ ಮಾಡಿದ್ದಾರೆ. ಕೇಂದ್ರ ಹಿಂದುಳಿದ ವರ್ಗಗಳ ಉಪ ಪಂಗಡಗಳ ‘ರೋಹಿಣಿ’ ನಿಯೋಗದ ಅಧ್ಯಕ್ಷೆ, ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಾಧೀಶೆ ಜಿ. ರೋಹಿಣಿ ಅವರನ್ನು ಭೇಟಿ ಮಾಡಿದ ಅವರು ಈ ಬಗ್ಗೆ ಚರ್ಚೆ ನಡೆಸಿದರು.

    ಭೇಟಿ ವೇಳೆ ಮನವಿಗೆ ಪೂರಕವಾಗಿ ಹಿಂದಿನಿಂದಲೂ ಕೇಂದ್ರ ಸರ್ಕಾರದ ಜೊತೆ ನಡೆದಿರುವ ಪತ್ರ ವ್ಯವಹಾರಗಳ ದಾಖಲೆ, ಕುಂಚಿಟಿಗ ಸಮುದಾಯಕ್ಕೆ ಒಬಿಸಿ ಮೀಸಲಾತಿ ಕಲ್ಪಿಸಲು ಅಗತ್ಯವಿರುವ ಹಲವಾರು ದಾಖಲೆಗಳನ್ನು ನೀಡಿ ಈ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದರು. ಇದನ್ನೂ ಓದಿ: ಮುಂದಿನ 18 ತಿಂಗಳಲ್ಲಿ ರಾಜ್ಯದಲ್ಲಿ ಐದು ಏರ್‌ಪೋರ್ಟ್‌ ನಿರ್ಮಾಣ: ಮುರುಗೇಶ್ ನಿರಾಣಿ

    ಮನವಿ ಬಳಿಕ ಮಾತನಾಡಿದ ಅವರು, ಇತ್ತೀಚೆಗೆ ತುಮಕೂರು, ಹಿರಿಯೂರು, ಶಿಕಾರಿಪುರ, ಚಿಕ್ಕಹುಲಿಕುಂಟೆಯಲ್ಲಿ ಕುಂಚಿಟಿಗರ ಸಮಾವೇಶ ನಡೆದಿತ್ತು. ಈ ಸಮುದಾಯದ ಬಹುದಿನಗಳ ಬೇಡಿಕೆಯಾದ ಕೇಂದ್ರ ಒಬಿಸಿ ಮೀಸಲಾತಿ ಕಲ್ಪಿಸಲು ಅಗತ್ಯವಿರುವ ಹೋರಾಟ ಮಾಡಲು ಒಮ್ಮತದಿಂದ ತಿರ್ಮಾನ ಮಾಡಿ ಈ ಕುರಿತು ನಿರ್ಣಯವನ್ನು ತೆಗೆದುಕೊಳ್ಳಲಾಗಿತ್ತು ಎಂದು ತಿಳಿಸಿದರು. ಇದನ್ನೂ ಓದಿ: ಕೋಟಿ ಕಂಠ ಗಾಯನದಲ್ಲಿ ಕನ್ನಡ ಹಾಡಿಗೆ ಹೆಜ್ಜೆ ಹಾಕಿದ ಪ್ರಹ್ಲಾದ್‌ ಜೋಶಿ

    ಸುಮಾರು 2 ದಶಕಗಳ ಕಾಲ ಸಮುದಾಯಕ್ಕೆ ಒಬಿಸಿ ಮೀಸಲಾತಿ ಕಲ್ಪಿಸಲು ಹೋರಾಟ ಮಾಡಲಾಗಿದೆ. ಈ ನಿಟ್ಟಿನಲ್ಲಿ ಇದ್ದಂತಹ ಅನೇಕ ಕಾನೂನು ತೊಡಕುಗಳನ್ನು ನಿವಾರಣೆ ಮಾಡಿ, ತಾವು ಕಾನೂನು ಸಚಿವರಾಗಿದ್ದ ಸಂದರ್ಭದಲ್ಲಿ ಮೈಸೂರು ವಿಶ್ವವಿದ್ಯಾಲಯದ ಮಾನವಶಾಸ್ತ್ರ ಅಧ್ಯಯನ ವಿಭಾಗದ ಮೂಲಕ ಸಮುದಾಯದ ಕುಲಶಾಸ್ತ್ರ ಅಧ್ಯಯನ ಮಾಡಿಸಿದ್ದೇವೆ. ಈಗಾಗಲೇ 2019ರಲ್ಲಿ ಈ ವರದಿಯನ್ನು ರಾಜ್ಯ ಸಚಿವ ಸಂಪುಟ ಸಭೆ ಅಂಗೀಕರಿಸಿ ಕುಂಚಿಟಿಗ ಸಮುದಾಯಕ್ಕೆ ಕೇಂದ್ರ ಒಬಿಸಿ ಮೀಸಲಾತಿ ಕಲ್ಪಿಸಲು ರಾಜ್ಯ ಸರ್ಕಾರದ ಮುಖೇನ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದನ್ನು ಆಧರಿಸಿ ಕ್ರಮ ವಹಿಸಲು ಮನವಿ ಮಾಡಿದೆ ಎಂದರು.

    Live Tv
    [brid partner=56869869 player=32851 video=960834 autoplay=true]

  • ಮಧ್ಯಪ್ರದೇಶ ಸ್ಥಳೀಯ ಸಂಸ್ಥೆ ಎಲೆಕ್ಷನ್- ಒಬಿಸಿ ಕೋಟಾಕ್ಕೆ ಸುಪ್ರೀಂ ಸಮ್ಮತಿ

    ಮಧ್ಯಪ್ರದೇಶ ಸ್ಥಳೀಯ ಸಂಸ್ಥೆ ಎಲೆಕ್ಷನ್- ಒಬಿಸಿ ಕೋಟಾಕ್ಕೆ ಸುಪ್ರೀಂ ಸಮ್ಮತಿ

    ಭೋಪಾಲ್: ಹಿಂದುಳಿದ ವರ್ಗ (OBC)ಗಳಿಗೆ ಮೀಸಲಾತಿಯೊಂದಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಸುಪ್ರೀಂಕೋರ್ಟ್ ಮಧ್ಯಪ್ರದೇಶಕ್ಕೆ ಅನುಮತಿ ನೀಡಿದೆ.

    ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಒಂದು ವಾರದಲ್ಲಿ ಅಧಿಸೂಚನೆ ಹೊರಡಿಸುವಂತೆಯೂ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಆಯೋಗವು ತನ್ನ ವರದಿಯನ್ನು ಮಂಡಿಸಿದ್ದು, ಅದರಲ್ಲಿ ‘ತ್ರಿವಳಿ ಪರೀಕ್ಷೆ’ ಅನುಸರಿಸಲಾಗಿದೆ ಎಂದು ಹೇಳಿದೆ.

    ನಿಖರ ಅಂಕಿ ಅಂಶಗಳ ಆಧಾರದ ಮೇಲೆ ಪರಿಶೀಲನೆ ನಡೆಸಬೇಕು. ಆ ಬಳಿಕವೇ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಹಿಂದುಳಿದ ವರ್ಗದ ಜನರಿಗೆ ಶೇ. 27ರಷ್ಟು ಮೀಸಲಾತಿ ನೀಡಬೇಕು ಎಂದು ಕೋರ್ಟ್ ಹೇಳಿತ್ತು. ಇದನ್ನೂ ಓದಿ: ಮೋದಿ ಎಂದಿಗೂ ನಾನೇ ನೀಡಿದ್ದು ಎಂದು ಹೇಳಿರಲಿಲ್ಲ: ಸಿದ್ದುಗೆ ಟಾಂಗ್ ನೀಡಿದ ಸಿಟಿ ರವಿ

    ಮಧ್ಯಪ್ರದೇಶದಲ್ಲಿ 2 ವರ್ಷಗಳಿಂದ 23,000 ಕ್ಕೂ ಹೆಚ್ಚು ಸ್ಥಳೀಯ ಸಂಸ್ಥೆ ಸ್ಥಾನಗಳು ಖಾಲಿ ಇದ್ದು ಚುನಾವಣೆಗಾಗಿ ಕಾಯುತ್ತಿವೆ.

  • ಒಬಿಸಿ ಪಟ್ಟಿಗೆ ಪಂಚಮಸಾಲಿ ಸೇರಿಸುವಂತೆ ಬ್ಲ್ಯಾಕ್ ಮೇಲ್ ಮಾಡಬಾರದು: ಪರಮೇಶ್ವರ್

    ಒಬಿಸಿ ಪಟ್ಟಿಗೆ ಪಂಚಮಸಾಲಿ ಸೇರಿಸುವಂತೆ ಬ್ಲ್ಯಾಕ್ ಮೇಲ್ ಮಾಡಬಾರದು: ಪರಮೇಶ್ವರ್

    ತುಮಕೂರು: ಪಂಚಮಸಾಲಿ ಸಮುದಾಯವನ್ನು ಒಬಿಸಿ ಪಟ್ಟಿಗೆ ಸೇರಿಸುವಂತೆ ಬ್ಲ್ಯಾಕ್ ಮೇಲ್ ಮಾಡಬಾರದು ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅಭಿಪ್ರಾಯಪಟ್ಟಿದ್ದಾರೆ.

    ಒಬಿಸಿ ಪಟ್ಟಿ ಸಿದ್ಧತೆ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ ರಾಜ್ಯಗಳಿಗೆ ಕೊಟ್ಟಿರುವುದನ್ನು ಸ್ವಾಗತಿಸಿ ನಗರದಲ್ಲಿ ಮಾತನಾಡಿದ ಅವರು, ಪಂಚಮಸಾಲಿಗಳು ಸೆಪ್ಟೆಂಬರ್ ಒಳಗಡೆ ತಮ್ಮನ್ನು ಒಬಿಸಿ ಪಟ್ಟಿಗೆ ಸೇರಿಸಿ ಅನ್ನೋದು ಬ್ಲ್ಯಾಕ್ ಮೇಲ್ ಆಗುತ್ತದೆ. ಹಾಗೇ ಎಲ್ಲರೂ ಬ್ಲ್ಯಾಕ್ ಮೇಲ್ ಮಾಡಲು ಹೋದರೆ ಸಂವಿಧಾನಕ್ಕೆ ಬೆಲೆ ಇರುವುದಿಲ್ಲ. ಕಾನೂನಿಗೂ ಬೆಲೆ ಇರುವುದಿಲ್ಲ. ಅದೇ ರೀತಿ ಜನರ ಒತ್ತಾಯ ತಡೆದುಕೊಳ್ಳುವ ಶಕ್ತಿ ಸರ್ಕಾರಕ್ಕೆ ಇರಬೇಕು ಎಂದರು.

    ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಆಯುಷ್ಮಾನ್ ಭಾರತ್, ಆರೋಗ್ಯ ಕರ್ನಾಟಕ ಯೋಜನೆಯ ಕೋಟ್ಯಂತರ ರೂ.ಗಳನ್ನು ಸರ್ಕಾರ ಖಾಸಗಿ ಆಸ್ಪತ್ರೆಗಳಿಗೆ ಕೊಡದೆ ಬಾಕಿ ಉಳಿಸಿಕೊಂಡಿದೆ. ಜನರಿಗೆ ಉಪಕಾರ ಮಾಡಲು ಹೋಗಿ ಖಾಸಗಿ ಆಸ್ಪತ್ರೆಗಳು ಮುಚ್ಚುವ ಹಂತಕ್ಕೆ ತಲುಪಿವೆ. ಕಳೆದ 7-8 ತಿಂಗಳಿಂದ ಆರೋಗ್ಯ ಕಾರ್ಡ್ ಹಣ ಸರ್ಕಾರ ಬಿಡುಗಡೆ ಮಾಡಿಲ್ಲ. ಸಿದ್ದಾರ್ಥ ಮೆಡಿಕಲ್ ಕಾಲೇಜಿಗೆ ಸರ್ಕಾರದಿಂದ 4.5 ಕೋಟಿ ರೂ. ಬಾಕಿ ಇದೆ ಎಂದು ವಾಗ್ದಾಳಿ ನಡೆಸಿದರು.

    ಸಿಎಂ ಬೊಮ್ಮಾಯಿ ದೇವೇಗೌಡರ ಮನೆಗೆ ಭೇಟಿ ಕೊಟ್ಟಿರೋದು ಸಹಜ, ಅದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ. ದೇವೇಗೌಡರು ಹಲವು ಸಂದರ್ಭಗಳಲ್ಲಿ ಬೊಮ್ಮಾಯಿಯವರಿಗೆ ಮಾರ್ಗದರ್ಶನ ಮಾಡುತ್ತಾರೆ. ನಾವು ಉನ್ನತ ಹುದ್ದೆಗೆ ಹೋದಾಗ ಆ ಕ್ಷೇತ್ರದ ಹಿರಿಯರನ್ನು ಭೇಟಿ ಮಾಡೋದು ಒಂದು ಸಂಪ್ರದಾಯ ಎಂದರು.

  • ಆಗಸ್ಟ್ 16 ರಿಂದ ಕೇಂದ್ರ ಸಚಿವರ ಆಶೀರ್ವಾದ ಯಾತ್ರೆ: ಕೆ.ಲಕ್ಷ್ಮಣ್

    ಆಗಸ್ಟ್ 16 ರಿಂದ ಕೇಂದ್ರ ಸಚಿವರ ಆಶೀರ್ವಾದ ಯಾತ್ರೆ: ಕೆ.ಲಕ್ಷ್ಮಣ್

    ಬೆಂಗಳೂರು: ಕೇಂದ್ರ ಸರ್ಕಾರದ ನೂತನ ಸಚಿವರು ತಮ್ಮ ರಾಜ್ಯಗಳಿಗೆ ತೆರಳಿ ಜನರ ಆಶೀರ್ವಾದ ಪಡೆಯುವಂತೆ ಬಿಜೆಪಿ ಸೂಚಿಸಿದೆ. ಅದರನ್ವಯ ಆಗಸ್ಟ್ 16ರಿಂದ 19ರ ನಡುವಿನ ಅವಧಿಯಲ್ಲಿ ಸಚಿವರು ಆಶೀರ್ವಾದ ಯಾತ್ರೆ ನಡೆಸಲಿದ್ದಾರೆ.

    ರಾಜ್ಯದಲ್ಲಿನ ನೂತನ ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಭಗವಂತ ಖೂಬಾ, ನಾರಾಯಣಸ್ವಾಮಿ ಮತ್ತು ರಾಜೀವ್ ಚಂದ್ರಶೇಖರ್ ಅವರು ಈ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಒಬಿಸಿ ಮೋರ್ಚಾದ ಅಧ್ಯಕ್ಷರು ಮತ್ತು ರಾಜ್ಯಸಭಾ ಸದಸ್ಯರೂ ಆದ ಕೆ.ಲಕ್ಷ್ಮಣ್ ಅವರು ತಿಳಿಸಿದರು.

    ನಂದಿ ಹಿಲ್ಸ್ ನಲ್ಲಿ ವೃಕ್ಷಾರೋಹಣ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಇಂದು ದೇವನಹಳ್ಳಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಬಿಸಿ ಮೋರ್ಚಾದ ರಾಜ್ಯ ಘಟಕಕ್ಕೆ 60 ಸಾವಿರ ಸಸಿ ನೆಡುವ ಗುರಿ ನೀಡಿದ್ದು, ಒಂದು ಲಕ್ಷಕ್ಕೂ ಹೆಚ್ಚು ಸಸಿ ನೆಟ್ಟು ಅದು ಜಾಗತಿಕ ತಾಪಮಾನ ನಿಯಂತ್ರಣದ ನಿಟ್ಟಿನಲ್ಲಿ ಮಹತ್ವದ ಕಾರ್ಯ ಮಾಡಿದೆ. ಇದಕ್ಕಾಗಿ ರಾಜ್ಯ ಒಬಿಸಿ ಮೋರ್ಚಾ ಅಧ್ಯಕ್ಷರಾದ ನೆ.ಲ.ನರೇಂದ್ರಬಾಬು ಮತ್ತು ಅವರ ತಂಡವನ್ನು ಅಭಿನಂದಿಸುವುದಾಗಿ ತಿಳಿಸಿದರು.

    ದೇಶದ ಒಟ್ಟು ಜನಸಂಖ್ಯೆಯ ಶೇ.50ಕ್ಕೂ ಹೆಚ್ಚು ಜನರು ಒಬಿಸಿ ಸಮುದಾಯಕ್ಕೆ ಸೇರಿದ್ದಾರೆ. ಮೊದಲ ಬಾರಿಗೆ ಒಬಿಸಿ ಸಮುದಾಯದ ವ್ಯಕ್ತಿಯೊಬ್ಬರು ಪ್ರಧಾನಿಯಾಗಲು ಬಿಜೆಪಿ ಕಾರಣವಾಗಿದೆ. ಇದು ಕೇವಲ ಬಿಜೆಪಿಯಲ್ಲಿ ಮಾತ್ರ ಸಾಧ್ಯ ಎಂದರು.

    ದೇಶವನ್ನು ಸುಮಾರು 60 ವರ್ಷಗಳ ಕಾಲ ಆಳಿದ ಕಾಂಗ್ರೆಸ್ ಪಕ್ಷವು ಕೇವಲ ನೆಹರೂ ವಂಶದ ಆಡಳಿತಕ್ಕೆ ತನ್ನನ್ನು ಸೀಮಿತಗೊಳಿಸಿತ್ತು. ಒಬಿಸಿ ಸಮುದಾಯವನ್ನು ಮತಬ್ಯಾಂಕ್ ಆಗಿ ಕಾಂಗ್ರೆಸ್ ಪಕ್ಷ ಬಳಸಿಕೊಂಡಿತ್ತು. ಬಿಜೆಪಿ ಸರಕಾರದಲ್ಲಿ ಒಬಿಸಿ ಸಮುದಾಯಕ್ಕೆ ಗರಿಷ್ಠ ಆದ್ಯತೆ ಕೊಡಲಾಗಿದೆ ಎಂದು ಅವರು ಮೆಚ್ಚುಗೆ ಸೂಚಿಸಿದರು. ಸಂಸತ್ತಿನಲ್ಲಿ ಒಬಿಸಿ, ಅಲ್ಪಸಂಖ್ಯಾತರಿಗೆ ಸಂಬಂಧಿಸಿದ ಮಸೂದೆಗಳನ್ನು ಮಂಡಿಸದಂತೆ ಕಾಂಗ್ರೆಸ್ ಪಕ್ಷ ಅಡ್ಡಿಪಡಿಸಿದೆ ಎಂದು ಅವರು ಆಕ್ಷೇಪಿಸಿದರು.

    ಒಬಿಸಿ ಸಮುದಾಯದ ಬಗ್ಗೆ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಮೀಸಲಾತಿ, ಒಬಿಸಿ ಸಮುದಾಯದ ಎಲ್ಲರಿಗೂ ಮೀಸಲಾತಿಯ ಲಾಭ ಸಿಗುವ ದೃಷ್ಟಿಯಿಂದ ಆಯೋಗವನ್ನೂ ರಚಿಸಿದ್ದಾರೆ. ಇದು ಶ್ಲಾಘನೀಯ ಎಂದು ತಿಳಿಸಿದರು. ಇದನ್ನೂ ಓದಿ : ದೇಶದ ಕೆಟ್ಟ ಕನಸುಗಾರ ಸಿದ್ದರಾಮಯ್ಯ: ಈಶ್ವರಪ್ಪ

    ಮೀನುಗಾರಿಕೆಗೆ ಸಂಬಂಧಿಸಿ ಪ್ರತ್ಯೇಕ ಸಚಿವಾಲಯ, ಪ್ರತ್ಯೇಕ ಬಜೆಟ್ ಹೊಂದಿರುವುದು ಕೂಡ ಮೆಚ್ಚತಕ್ಕ ವಿಚಾರ ಎಂದು ತಿಳಿಸಿದರು. ಮೀನುಗಾರರ ಬೋಟ್ ಗಳಿಗೆ ವಿಶೇಷ ಸಹಾಯಧನ ನೀಡಿದ್ದು, ಮೀನುಗಾರರ ಮಕ್ಕಳಿಗೆ ಸ್ಕಾಲರ್‍ಶಿಪ್ ಕೊಡಲಾಗುತ್ತಿದೆ ಎಂದು ವಿವರಿಸಿದರು.

    ಕೇಂದ್ರ ಸರ್ಕಾರದಲ್ಲಿ ಶೇ.35 ಸಚಿವ ಸ್ಥಾನಗಳನ್ನು ಒಬಿಸಿ ಸಮುದಾಯಕ್ಕೆ ನೀಡಿದ್ದು, ಇದರಿಂದ ಅವರ ಜನಪ್ರಿಯತೆ ಇನ್ನಷ್ಟು ಹೆಚ್ಚಾಗಿದೆ. ನರೇಂದ್ರ ಮೋದಿ ಅವರು ಕುಟುಂಬದ ಕುರಿತು ಚಿಂತಿಸುವ ವ್ಯಕ್ತಿಯಲ್ಲ. ವಿವಿಧ ಸಮುದಾಯಗಳ ಆರ್ಥಿಕವಾಗಿ ದುರ್ಬಲ ಕುಟುಂಬಗಳಿಗೆ (ಇಡಬ್ಲ್ಯುಎಸ್) ಶೇ.10 ಮೀಸಲಾತಿಯನ್ನೂ ಅವರು ನೀಡಿದ್ದಾರೆ. ಆದರೆ, ಕಾಂಗ್ರೆಸ್ ಪಕ್ಷ, ಜೆಡಿಎಸ್ ಮತ್ತು ಇತರ ವಿರೋಧ ಪಕ್ಷಗಳು ವಂಶಾಡಳಿತಕ್ಕೆ ಆದ್ಯತೆ ಕೊಡುತ್ತಿವೆ ಎಂದು ತಿಳಿಸಿದರು.

    ಕೇಂದ್ರ ಸರಕಾರದ ಕ್ರಮಗಳಿಂದ ವೈದ್ಯಕೀಯ ಕ್ಷೇತ್ರದಲ್ಲಿ ಒಬಿಸಿ ಸಮುದಾಯಕ್ಕೆ 4 ಸಾವಿರ ಮತ್ತು ಇಡಬ್ಲ್ಯುಎಸ್ ವಿದ್ಯಾರ್ಥಿಗಳಿಗೆ 1,500 ಸೀಟುಗಳು ಲಭಿಸಲಿವೆ. ಕಾಲೇಜುಗಳ ಸಂಖ್ಯೆ ಹೆಚ್ಚಾದರೆ ಸೀಟುಗಳ ಸಂಖ್ಯೆಯೂ ಹೆಚ್ಚಾಗಲಿದೆ. ಈ ಎಲ್ಲ ಕ್ರಾಂತಿಕಾರಿ ಕ್ರಮಗಳು ಕೇವಲ ಏಳು ವರ್ಷಗಳಲ್ಲಿ ಆಗಿವೆ. ಹಿಂದೆ ಕಾಂಗ್ರೆಸ್ ಪಕ್ಷವು ಒಬಿಸಿ ಸಮುದಾಯವನ್ನು ಮತ ಬ್ಯಾಂಕ್ ಆಗಿ ನೋಡುತ್ತಿತ್ತು. ಅವರನ್ನು ಮನುಷ್ಯರೆಂದೇ ಪರಿಗಣಿಸಲು ಸಿದ್ಧ ಇರಲಿಲ್ಲ ಎಂದು ಅವರು ವಿವರಿಸಿದರು.

    ಎಸ್‍ಸಿ, ಎಸ್‍ಟಿ ಒಬಿಸಿ, ಮಹಿಳೆಯರು ಮತ್ತು ಶೋಷಿತರ ಸಶಕ್ತೀಕರಣಕ್ಕೆ ನರೇಂದ್ರ ಮೋದಿ ಅವರು ತಮ್ಮ ಅಧಿಕಾರದ ಮೊದಲ ದಿನದಿಂದಲೇ ಶ್ರಮಿಸುತ್ತ ಬಂದಿದ್ದಾರೆ. ಕೆಲವು ದಿನಗಳ ಹಿಂದೆ ನಡೆದ ಕೇಂದ್ರ ಸರಕಾರದ ಸಚಿವ ಸಂಪುಟದ ಪುನಾರಚನೆ ವೇಳೆ ಎಸ್‍ಸಿ ಸಮುದಾಯದ 12, ಎಸ್‍ಟಿ 8, ಒಬಿಸಿ 27, ಮಹಿಳೆಯರು 11 ಹಾಗೂ ಅಲ್ಪಸಂಖ್ಯಾತ ಸಮುದಾಯದ 5 ಜನರಿಗೆ ಸೇರಿದಂತೆ ಒಟ್ಟು ಶೇ.70 ಪ್ರಾತಿನಿಧ್ಯತೆಯನ್ನು ದುರ್ಬಲ ವರ್ಗಕ್ಕೆ ನೀಡಿದ್ದಾರೆ. ಇದು ಶ್ಲಾಘನೀಯ. ಇದರಿಂದ ಒಬಿಸಿ ಸಮುದಾಯವು ಬಿಜೆಪಿಯತ್ತ ಆಕರ್ಷಿತವಾಗುತ್ತಿದ್ದು, ಭವಿಷ್ಯದಲ್ಲಿ ಹೆಚ್ಚು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಸಂಘಟನೆಯನ್ನು ಬಲಪಡಿಸಲು ಒಬಿಸಿ ವತಿಯಿಂದ ಮೀನುಗಾರರ ಸಮ್ಮೇಳನ, ನೇಕಾರರ ಸಮ್ಮೇಳನ ಸೇರಿದಂತೆ ವಿವಿಧ ಸಮ್ಮೇಳನಗಳ ಮೂಲಕ ಶ್ರೀ ನರೇಂದ್ರ ಮೋದಿ ಅವರ ಕಾರ್ಯಕ್ರಮಗಳ ಬಗ್ಗೆ, ಭ್ರಷ್ಟಾಚಾರ ರಹಿತವಾಗಿ ಕೆಲಸ ನಿರ್ವಹಿಸುತ್ತಿರುವುದರ ಕುರಿತು ಹಾಗೂ ನೇರ ಸೌಲಭ್ಯ ವರ್ಗಾವಣೆ (ಡಿಬಿಟಿ) ವಿಚಾರದಲ್ಲಿ ಜಾಗೃತಿ ಮೂಡಿಸಲಿದೆ ಎಂದು ತಿಳಿಸಿದರು.

    ರಾಜ್ಯ ಒಬಿಸಿ ಮೋರ್ಚಾ ಅಧ್ಯಕ್ಷರಾದ ನೆ.ಲ.ನರೇಂದ್ರಬಾಬು ಅವರು ಮಾತನಾಡಿ, ಸಾಮಾಜಿಕ ನ್ಯಾಯದ ಅಡಿಯಲ್ಲಿ ಬಿಜೆಪಿ ಮುನ್ನಡೆಯುತ್ತಿದೆ. ಒಂದು ಲಕ್ಷ ಸಸಿ ನೆಟ್ಟ ಮೋರ್ಚಾವು 5 ಲಕ್ಷ ಬೀಜ ದುಂಡೆಗಳನ್ನು ಮಳೆಗಾಲ ಮುಗಿಯುವುದರೊಳಗೆ ಬಿತ್ತುತ್ತಿದೆ. 310 ಮಂಡಲಗಳಲ್ಲಿ ಶ್ರಮದಾನವನ್ನೂ ಮಾಡಲಾಗಿದೆ ಎಂದರು. ನಂದಿ ಬೆಟ್ಟದ ಸ್ವಚ್ಛತೆಯೂ ನಡೆಯಲಿದೆ ಎಂದು ಹೇಳಿದರು. ಮೋರ್ಚಾದ ಪದಾಧಿಕಾರಿಗಳು ಹಾಜರಿದ್ದರು.

  • ವೈದ್ಯಕೀಯ ಸೀಟ್‍ನಲ್ಲಿ OBC ಶೇ.27, EWSಗೆ ಶೇ.10 ಮೀಸಲಾತಿ

    ವೈದ್ಯಕೀಯ ಸೀಟ್‍ನಲ್ಲಿ OBC ಶೇ.27, EWSಗೆ ಶೇ.10 ಮೀಸಲಾತಿ

    ನವದೆಹಲಿ: ಒಬಿಸಿ, ಇಡಬ್ಲ್ಯೂಎಸ್ (ಆರ್ಥಿಕ ಹಿಂದುಳಿದ ವರ್ಗ) ವರ್ಗಗಳಿಗೆ ಮೆಡಿಕಲ್ ಮತ್ತು ಡೆಂಟಲ್ ಕಾಲೇಜ್‍ಗಳಲ್ಲೂ ಮೀಸಲಾತಿ ನೀಡೋದಾಗಿ ಕೇಂದ್ರ ಪ್ರಕಟಿಸಿದೆ. ಒಬಿಸಿಗೆ ಶೇ.27, ಇಬಿಸಿಗೆ ಶೇ.10ರಷ್ಟು ಮೀಸಲಾತಿ ಕೋಟಾ ಪ್ರಸ್ತುತ ವರ್ಷದಿಂದಲೇ ಜಾರಿಗೆ ಬರುತ್ತೆ. ಸಾವಿರಾರು ಯುವಜನತೆಗೆ ಅನುಕೂಲತೆಯೊಂದಿಗೆ ಸಾಮಾಜಿಕ ನ್ಯಾಯ ಸಿಗಲಿದೆ ಅಂತ ಮೋದಿ ಟ್ವೀಟ್ ಮಾಡಿದ್ದಾರೆ.

    ಪದವಿ ಪೂರ್ವ ಮತ್ತು ಸ್ನಾತಕೋತ್ತರ ಪದವಿಗಳಾದ ಎಂಬಿಬಿಎಸ್/ಎಂಡಿ/ಎಂಎಸ್/ಡಿಪ್ಲೋಮಾ/ಬಿಡಿಎಸ್/ಎಂಡಿಎಸ್ ಕೋರ್ಸ್ ಗೆ ಇದು ಅನ್ವಯ ಆಗಲಿದೆ. ಇದರಿಂದ 5,550 ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಅನುಕೂಲವಾಗಲಿದೆ ಅಂತ ಕೇಂದ್ರ ಆರೋಗ್ಯ ಸಚಿವ ಮನ್‍ಸುಖ್ ಮಾಂಡವೀಯ ಹೇಳಿದ್ದಾರೆ. ಎಂಬಿಬಿಎಸ್ ನಲ್ಲಿ 1,500 ಮತ್ತು ಸ್ನಾತಕೋತ್ತರ ಪದವಿಯಲ್ಲಿ 2,500 ಒಬಿಸಿ ವಿದ್ಯಾರ್ಥಿಗಳು ಸೀಟು ಪಡೆದುಕೊಳ್ಳಬಹುದಾಗಿದೆ. ಇಡಬ್ಲ್ಯೂಎಸ್ ವಿದ್ಯಾರ್ಥಿಗಳಿಗೆ ಎಂಬಿಬಿಎಸ್ ನಲ್ಲಿ ಸುಮಾರು 550 ಮತ್ತು ಸ್ನಾತಕೋತ್ತರ ಪದವಿಯಲ್ಲಿ ಸುಮಾರು 1,000 ಸೀಟುಗಳು ಲಭ್ಯವಾಗಲಿವೆ.

    ಈ ಮಧ್ಯೆ, ರಾಷ್ಟ್ರೀಯ ಶಿಕ್ಷಣ ನೀತಿಗೆ ವರ್ಷ ತುಂಬಿದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ನೀತಿ ನಿರೂಪಕರು, ವಿದ್ಯಾರ್ಥಿಗಳು, ಶಿಕ್ಷಕರನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ್ರು. ನವ ಭಾರತಕ್ಕೆ ಹೊಸ ಶಿಕ್ಷಣ ನೀತಿಯ ಅಗತ್ಯ ಇದೆ ಅಂತ ಹೇಳಿದದರು. ಇದನ್ನೂ ಓದಿ: 75 ವರ್ಷ, 75 ಗ್ರಾಮ, 75 ಗಂಟೆ – ಆಗಸ್ಟ್ 15ಕ್ಕೆ ಸಂಸದರಿಗೆ ಮೋದಿ ಟಾಸ್ಕ್

    ಇದೇ ವೇಳೆ ಶಿಕ್ಷಣ ನೀತಿಯ ಸಾಕ್ಷ್ಯಾಚಿತ್ರ ಬಿಡುಗಡೆ ಮಾಡಲಾಯಿತು. ಹೊಸ ಶಿಕ್ಷಣ ನೀತಿ ಜಾರಿಯಲ್ಲಿ ಇಲ್ಲಿಯವರೆಗೆ ಆಗಿರುವ ಪ್ರಗತಿ, ಮುಂದಿನ ಕಾರ್ಯಯೋಜನೆಗಳ ಬಗ್ಗೆ ಮಾಹಿತಿ ನೀಡಲಾಯ್ತು. ಉನ್ನತ ಶಿಕ್ಷಣ ಮಾಡುವ ವಿದ್ಯಾರ್ಥಿಗಳಿಗೆ ಬಹು ಹಂತದ ಪ್ರವೇಶ ನಿರ್ಗಮನದ ಆಯ್ಕೆಗಳನ್ನು ಒದಗಿಸುವ ಅಕ್ಯಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್‍ಗೆ ಚಾಲನೆ ನೀಡಿದ್ರು. ಮೊದಲ ವರ್ಷದ ಪ್ರಾದೇಶಿಕ ಭಾಷೆಯ ಎಂಜಿನಿಯರಿಂಗ್ ಕಾರ್ಯಕ್ರಮಗಳು, ಉನ್ನತ ಶಿಕ್ಷಣದಲ್ಲಿ ಅಂತಾರಾಷ್ಟ್ರೀಯ ಕ್ಷೇತ್ರದ ಮಾರ್ಗಸೂಚಿಗಳನ್ನು ಕೂಡ ಪ್ರಕಟಿಸಲಾಯ್ತು. ಇದನ್ನೂ ಓದಿ: ಗಡ್ಡ ಬಿಟ್ಟಾಗ ಶಿವಾಜಿ, ಈಗ ಬಸವಣ್ಣ: ಶಾಸಕ ಯತ್ನಾಳ್