Tag: ಒಡೆಯರ್

  • ಮಗನೊಂದಿಗೆ ನಿಖಿಲ್ ಕುಮಾರಸ್ವಾಮಿ ಜಾಲಿ ಟ್ರಿಪ್‌

    ಮಗನೊಂದಿಗೆ ನಿಖಿಲ್ ಕುಮಾರಸ್ವಾಮಿ ಜಾಲಿ ಟ್ರಿಪ್‌

    ಸಿನಿಮಾ ಮತ್ತು ರಾಜಕಾರಣದ ಮಧ್ಯೆ ಕೊಂಚ ಬಿಡುವು ತಗೆದುಕೊಂಡು ಮಗನೊಂದಿಗೆ ಟ್ರೀಪ್ ಗೆ ಹೋಗಿದ್ದಾರೆ ನಟ, ಜೆಡಿಎಸ್ ಯುವ ಮೋರ್ಚಾ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ. ಬೀಚ್ ವೊಂದರಲ್ಲಿ ಮಗನನ್ನು ಮೇಲಕ್ಕೆ ಹಿಡಿದುಕೊಂಡಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ನಿಖಿಲ್, ಆ ಫೋಟೋಗೆ ‘ಲವ್ ಯೂ ಮಗನೆ’ ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ಇದನ್ನೂ ಓದಿ : ಜೇಮ್ಸ್ ಟೀಮ್ ಮೊದಲೇ ಈ ಕೆಲಸ ಮಾಡಬೇಕಿತ್ತು : ನಟ ಶಿವರಾಜ್ ಕುಮಾರ್

    ಸದ್ಯ ನಿಖಿಲ್ ಕುಮಾರ್ ಸ್ವಾಮಿ ಎರಡು ದೋಣಿಯ ಮೇಲೆ ಪಯಣ ಮಾಡುತ್ತಿದ್ದಾರೆ. ಒಂದು ಕಡೆ ಅವರ ಹೊಸ ಸಿನಿಮಾ ಒಡೆಯರ್ ಘೋಷಣೆಯಾಗಿದೆ. ಈ ಕಡೆ ಪಕ್ಷ ಸಂಘಟಿಸುವ ಹೊಣೆಯನ್ನು ಹೊತ್ತಿದ್ದಾರೆ. ಹಾಗಾಗಿ ಎರಡನ್ನೂ ಬ್ಯಾಲೆನ್ಸ್ ಮಾಡಿಕೊಂಡು ಹೋಗುತ್ತಿದ್ದಾರೆ. ಒಂದೂವರೆ ವರ್ಷದಲ್ಲಿ ಕರ್ನಾಟಕದಲ್ಲಿ ಚುನಾವಣೆ ನಡೆಯಲಿದೆ. ಹಾಗಾಗಿ ನಿಖಿಲ್ ಗುರುತರ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಇದನ್ನೂ ಓದಿ : ಜೋಗಿ ಪ್ರೇಮ್ ಹೊಸ ಸಿನಿಮಾ ಘೋಷಣೆ : ಧ್ರುವ ಸರ್ಜಾ ಹೀರೋ, ಏ.24 ಮುಹೂರ್ತ

    ನಿಖಿಲ್ ಅವರ ಹುಟ್ಟು ಹಬ್ಬದ ದಿನದಂದು ಹೊಸ ಸಿನಿಮಾ ಘೋಷಣೆಯಾಗಿದೆ. ಫಸ್ಟ್ ಲುಕ್ ಕೂಡ ಬಿಡುಗಡೆ ಮಾಡಿದೆ ಚಿತ್ರತಂಡ. ಈ ಸಿನಿಮಾ ಕೂಡ ಅದ್ದೂರಿಯಾಗಿ ಮೂಡಿ ಬರುವುದರಿಂದ, ಚಿತ್ರಕ್ಕೂ ಅವರು ಟೈಮ್ ಕೊಡಬೇಕಿದೆ. ಈ ಎಲ್ಲದರ ಮಧ್ಯೆ ಕುಟುಂಬವನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದಾರೆ ನಿಖಿಲ್. ಇದನ್ನೂ ಓದಿ : ಭಾವಿ ಪತಿಯ ತಂದೆ ನಿಧನ: ನಟಿ ಕಾವ್ಯ ಶಾ ಮದುವೆ ಮುಂದೂಡಿಕೆ

    ನಿಖಿಲ್ ರಾಜಕಾರಣ ಮತ್ತು ಸಿನಿಮಾ ರಂಗ ಎರಡರಲ್ಲೂ ಸೆಣಸಬೇಕಿದೆ. ಈ ಬಾರಿಯೂ ಅವರು ರಾಜಕೀಯ ಅಖಾಡಕ್ಕೆ ಇಳಿಯಲಿದ್ದಾರೆ ಎನ್ನುವ ಸುದ್ದಿಯಿದೆ. ವಿಧಾನ ಸಭೆ ಚುನಾವಣೆಗೆ ಅವರು ಸ್ಪರ್ಧಿಸುತ್ತಿದ್ದಾರೆ. ಜೊತೆಗೆ ಸಿನಿಮಾ ರಂಗದಲ್ಲೂ ಸಾಕಷ್ಟು ಪೈಪೋಟಿ ಇದೆ. ಎರಡರಲ್ಲೂ ಅವರು ಸಖತ್ ಫೈಟ್ ಮಾಡಬೇಕು. ಈ ಎಲ್ಲ ಟೆನ್ಷನ್ ಮಧ್ಯೆ ಜಾಲಿಯಾಗಿ ಮಗನೊಂದಿಗೆ ಸಮಯ ಕಳೆಯುತ್ತಿದ್ದಾರೆ ನಿಖಿಲ್ ಕುಮಾರಸ್ವಾಮಿ.

  • ದಸರಾ ದಿನವೇ ಮೈಸೂರು ಒಡೆಯರ್ ಕುಟುಂಬದಲ್ಲಿ ಮತ್ತೊಂದು ಸಾವು

    ದಸರಾ ದಿನವೇ ಮೈಸೂರು ಒಡೆಯರ್ ಕುಟುಂಬದಲ್ಲಿ ಮತ್ತೊಂದು ಸಾವು

    ಬೆಂಗಳೂರು: ದಸರಾ ದಿನವೇ ಮೈಸೂರು ಒಡೆಯರ್ ಕುಟುಂಬದಲ್ಲಿ ಮತ್ತೊಂದು ಸಾವು ಸಂಭವಸಿದ್ದು, ದಿ.ಶ್ರೀಕಂಠದತ್ತ ಒಡೆಯರ್ ಸಹೋದರಿ ವಿಶಾಲಾಕ್ಷಿ ಅವರು ವಿಧಿವಶರಾಗಿದ್ದಾರೆ.

    ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿಶಾಲಾಕ್ಷಿ (58) ಅವರು ಇಂದು ಸಂಜೆ ವೇಳೆಗೆ ಕೊನೆಯುಸಿರೆಳೆದಿದ್ದಾರೆ. ಅನಾರೋಗ್ಯದಿಂದ ವಿಶಾಲಾಕ್ಷಿ ಅವರು ಬಳಲುತ್ತಿದ್ದರು ಎನ್ನಲಾಗಿದ್ದು, ಕಳೆದ 15 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂಬ ಮಾಹಿತಿ ಲಭಿಸಿದೆ.

    ಕಳೆದ ಎರಡು ದಿನಗಳ ಹಿಂದೆಯೇ ವಿಶಾಲಾಕ್ಷಿ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ತೀವ್ರ ನೀಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.

    ಇಂದು ಬೆಳಗ್ಗೆಯಷ್ಟೇ ಸಮಸ್ತ ನಾಡಿನ ಜನತೆಯೂ ಜಂಬೂಸವಾರಿಗೆ ಕಾತುರದಿಂದ ಕಾಯುತ್ತಿದ ವೇಳೆ ಪ್ರಮೋದಾ ದೇವಿ ಅವರ ತಾಯಿ ವಿಧಿವಶರಾಗಿದ್ದರು. ರಾಜವಂಶಸ್ಥೆ ಪ್ರಮೋದಾ ದೇವಿ ಅವರ ತಾಯಿ ಪುಟ್ಟಚಿನ್ನಮ್ಮಣಿ(98) ಅವರು ಅನೇಕ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು.

    ವಿಜಯದಶಮಿ ದಿನವಾದ ಶುಕ್ರವಾರ ಬೆಳಗ್ಗೆ ಪುಟ್ಟಚಿನ್ನಮ್ಮಣಿ ಅವರ ಸಾವು ಮೈಸೂರು ರಾಜ ವಂಶಸ್ಥರ ಕುಟುಂಬಸ್ಥರನ್ನು ದುಃಖ ಸಾಗರದಲ್ಲಿ ಮುಳುಗಿಸಿತ್ತು. ಈಗ ಸಂಜೆ ವಿಶಾಲಾಕ್ಷಿ ಅವರು ವಿಧಿವಶರಾಗಿದ್ದಾರೆ. ಇದನ್ನು ಓದಿ: ರಾಜಮಾತೆಗೆ ಮಾತೃವಿಯೋಗ- ಇದು ಯಾವುದರ ಸಂಕೇತ…? ಶ್ರೀ ರೇಣುಕಾರಾಧ್ಯ ಗುರೂಜಿ ಸ್ಪಷ್ಟನೆ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅದ್ದೂರಿಯಾಗಿ ನಡೆಯಿತು ಯದುವೀರ್ ಖಾಸಗಿ ದರ್ಬಾರ್!

    ಅದ್ದೂರಿಯಾಗಿ ನಡೆಯಿತು ಯದುವೀರ್ ಖಾಸಗಿ ದರ್ಬಾರ್!

    ಮೈಸೂರು: ದಸರಾ ಪ್ರಮುಖ ಆಕರ್ಷಣೆಯಾದ ಖಾಸಗಿ ದರ್ಬಾರ್ ಅದ್ದೂರಿಯಾಗಿ ನಡೆದಿದೆ. ಗತಕಾಲದ ರಾಜರ ಆಡಳಿತವನ್ನು ಮತ್ತೆ ನೆನಪಿಸಿದ್ದು, ಇಂದು ಯದುವೀರ್ ಮಹರಾಜರ ಖಾಸಗಿ ದರ್ಬಾರ್ ನಡೆಸಿದರು.

    ಅರಮನೆಯ ಅಂಬಾ ವಿಲಾಸ ಅರಮನೆಯ ದರ್ಬಾರ್ ಹಾಲ್ ನಲ್ಲಿ ಸಾಂಪ್ರದಾಯಿಕವಾಗಿ ಸಕಲ ವಿಧಿ ವಿಧಾನದಲ್ಲಿ ಖಾಸಗಿ ದರ್ಬಾರ್ ನಡೆಯಿತು. ಒಡೆಯರ್ ಮನೆತನದ ರಾಜ ಯದುವೀರ್ ಕೃಷ್ಣದತ್ತ ಜಯಚಾಮರಾಜ ಒಡೆಯರ್ ದರ್ಬಾರ್ ನಡೆಸಿದರು.

    ಖಾಸಗಿ ದರ್ಬಾರ್‌ಗೂಮೊದಲು ಅನೇಕ ವಿಧಿವಿಧಾನಗಳು ನಡೆಯಿತು. ಒಡೆಯರ್ ಚಾಮುಂಡಿ ತೊಟ್ಟಿಯಲ್ಲಿ ಗಣಪತಿ ಪೂಜೆ ಮಾಡಿದ ಬಳಿಕ ಕಲಶಪೂಜೆ, ಕಂಕಣಪೂಜೆ ನಡೆಸಿದರು. ಶಿವಸನ್ನಿಧಿ, ಕೃಷ್ಟಸನ್ನಿಧಿ, ಚಾಮುಂಡಿಸನ್ನಿಧಿ ಮುಂತಾದ ದೇವ ದೇವತೆಗಳ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದರು. ನಂತರ ದೇವಿ ಭಾಗವತ ಪಾರಾಯಣ, ರಾಮಾಯಣ ಪಾರಾಯಣ ನಡೆಯಿತು. ಗಣಪತಿ ಪೂಜೆ, ಅಷ್ಟದಿಕ್ಪಾಲಕರ ಪೂಜೆ, ನವಗ್ರಹ ಪೂಜೆ, ಬ್ರಹ್ಮ, ವಿಷ್ಣು, ಮಹೇಶ್ವರ, ಮಹಾಕಾಳಿ, ಮಹಾಸರಸ್ವತಿ, ಮಹಾಲಕ್ಷ್ಮಿ ಪೂಜೆಗಳೆಲ್ಲ ನಡೆಯಿತು.

    ಪ್ರಮುಖವಾಗಿ ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಕುದುರೆಗಳನ್ನು ಅಲಂಕಾರ ಮಾಡಿ ಅರಮನೆ ಅವರಣದಲ್ಲಿರುವ ಕೋಟೆ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಲಾಗುತ್ತದೆ. ಅರಮನೆಯೊಳಗೆ ಇವುಗಳ ಪ್ರವೇಶವಾದ ನಂತರ ಖಾಸಗಿ ದರ್ಬಾರ್ ಪ್ರಾರಂಭವಾಯಿತು.

    ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಕಲಶಗಳಿಗೆ ಬೆಳ್ಳಿ ಖುರ್ಚಿಯ ಮೇಲೆ ಕುಳಿತು ಪೂಜೆ ನೆರವೇರಿಸಿದರು. ಈ ವೇಳೆ ವಿದ್ವಾಂಸರಿಂದ ವೇದ-ಘೋಷಗಳು ಮೊಳಗಿದವು. ಖಾಸಗಿ ದರ್ಬಾರ್ ಅನ್ನು ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ವಿಕ್ಷಣೆ ಮಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸೆಟ್ಟೇರುವ ಮುನ್ನವೇ ದರ್ಶನ್ ಅಭಿನಯದ `ಒಡೆಯರ್’ ಚಿತ್ರಕ್ಕೆ ಮತ್ತೆ ವಿಘ್ನ

    ಸೆಟ್ಟೇರುವ ಮುನ್ನವೇ ದರ್ಶನ್ ಅಭಿನಯದ `ಒಡೆಯರ್’ ಚಿತ್ರಕ್ಕೆ ಮತ್ತೆ ವಿಘ್ನ

    ವಿಜಯಪುರ: ಸೆಟ್ಟೇರುವ ಮುನ್ನವೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯರ್ ಚಿತ್ರಕ್ಕೆ ಮತ್ತೆ ವಿಘ್ನ ಉಂಟಾಗಿದೆ. `ಒಡೆಯರ್’ ಚಿತ್ರದ ಹೆಸರು ಬದಲಿಸಲು ಕರ್ನಾಟಕ ಯುವಘರ್ಜನೆ ಸಂಘಟನೆ ದೂರು ದಾಖಲಿಸಿದೆ.

    ವಿಜಯಪುರದ ಗಾಂಧಿಚೌಕ ಪೊಲೀಸ್ ಠಾಣೆಯಲ್ಲಿ ಚಿತ್ರ ನಿರ್ಮಾಪಕ ಮತ್ತು ಚಿತ್ರ ತಂಡದ ವಿರುದ್ಧ ದೂರು ದಾಖಲಾಗಿದೆ. ಒಡೆಯರ್ ಎಂಬ ಹೆಸರಿಗೆ ನೂರಾರು ವರ್ಷಗಳ ಇತಿಹಾಸವಿದ್ದು, ಅವರು ನಾಡು ನುಡಿ, ನೆಲ, ಜಲ, ಕಲೆ ಸಂಸ್ಕೃತಿ ವೈಭವಗಳಿಗೆ ಕೊಟ್ಟಿರುವ ಕೊಡುಗೆ ಅನೇಕ ಇವೆ. ಅಲ್ಲದೆ ರಾಜ್ಯದ ಜನತೆ ಮೈಸೂರು ಅರಸರ ಬಗ್ಗೆ ಈಗಲೂ ಅಪಾರವಾದ ಗೌರವ ಹೊಂದಿದ್ದಾರೆ. ಹೀಗಿದ್ದಾಗ ವ್ಯಾಪಾರಿ ಚಿತ್ರಕ್ಕಾಗಲಿ, ಹಾಸ್ಯ ಅಥವಾ ರೌಡಿಸಂ ಚಿತ್ರಕ್ಕಾಗಲಿ ಆ ಹೆಸರು ಬಳಸಿದರೆ ಜನರ ಭಾವನೆಗೆ ಧಕ್ಕೆ ಉಂಟಾಗುತ್ತೆ. ಹೀಗಾಗಿ ಹೆಸರು ಬದಲಿಸಲಿ ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.

    ಹೆಸರು ಬದಲಾಯಿಸದಿದ್ದರೆ ಮೈಸೂರು ಅರಸರ ಚರಿತ್ರೆ ಕುರಿತು ಚಿತ್ರ ತೆಗೆಯಲಿ ಎಂದು ಒತ್ತಾಯಿಸಲಾಗಿದೆ. ಅಲ್ಲದೇ ಹೆಸರು ಬದಲಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ಯುವಘರ್ಜನೆ ಸಂಘಟನೆಯ ಜಿಲ್ಲಾಧ್ಯಕ್ಷ ಆಸೀಫ್ ಒತ್ತಾಯಿಸಿದ್ದಾರೆ.

    ಕಳೆದ ಕೆಲ ಚಿತ್ರಕ್ಕೆ ಒಡೆಯರ್ ಶೀರ್ಷಿಕೆ ನೀಡಿರುವ ವಿಚಾರವಾಗಿ ಕನ್ನಡ ಕ್ರಾಂತಿದಳ ಸಂಘಟನೆ ಮೈಸೂರಿನ ಕೆ.ಆರ್. ಠಾಣೆಯಲ್ಲಿ ಚಿತ್ರತಂಡದ ವಿರುದ್ಧ ದೂರು ದಾಖಲಿಸಿತ್ತು. ಅಲ್ಲದೇ ಅರಸು ಯುವಜನ ವೇದಿಕೆ ಜೂಡ ಒಡೆಯರ್ ಹೆಸರನ್ನು ಬದಲಾವಣೆ ಮಾಡಬೇಕೆಂದು ಆಗ್ರಹಿಸಿ ದೂರು ದಾಖಲಿಸಿತ್ತು. ಆದರೆ ಚಿತ್ರಕ್ಕೆ ಒಡೆಯರ್ ಹೆಸರಿಡುವ ಕುರಿತು ಪ್ರತಿಕ್ರಿಯೆ ನೀಡಿದ್ದ ರಾಜಮಾತೆ ಪ್ರಮೋದದೇವಿ ಒಡೆಯರ್ ಅವರು ಸಿನಿಮಾ ಒಡೆಯರ್ ಹೆಸರಿಡಲು ಯಾವುದೇ ಅಕ್ಷೇಪವಿಲ್ಲ. ಆದರೆ ಮೈಸೂರು ರಾಜವಂಶಕ್ಕೆ ಸಂಬಂಧಪಟ್ಟ ಅಂಶಗಳು ಚಿತ್ರದಲ್ಲಿ ಇದ್ದರೆ ನನ್ನ ಆಕ್ಷೇಪವಿದೆ ಎಂದು ಹೇಳಿದ್ದರು.

    ದರ್ಶನ್ ಹುಟ್ಟುಹಬ್ಬದ ದಿನ ಅವರ ಮುಂದಿನ ಚಿತ್ರ ಒಡೆಯರ್ ಶೀರ್ಷಿಕೆ ಬಹಿರಂಗವಾಗಿತ್ತು. ಸಂದೇಶ್ ನಾಗರಾಜ್ ನಿರ್ಮಿಸುತ್ತಿರುವ ಒಡೆಯರ್ ಚಿತ್ರವನ್ನ ಎಂ.ಡಿ ಶ್ರೀಧರ್ ನಿರ್ದೇಶಿಸಲಿದ್ದಾರೆ.

  • ದರ್ಶನ್ ಚಿತ್ರದ ಟೈಟಲ್‍ಗೆ ನಮಗೆ ಯಾವುದೇ ಆಕ್ಷೇಪವಿಲ್ಲ: ರಾಜಮಾತೆ ಪ್ರಮೋದಾದೇವಿ

    ದರ್ಶನ್ ಚಿತ್ರದ ಟೈಟಲ್‍ಗೆ ನಮಗೆ ಯಾವುದೇ ಆಕ್ಷೇಪವಿಲ್ಲ: ರಾಜಮಾತೆ ಪ್ರಮೋದಾದೇವಿ

    ಮೈಸೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸುತ್ತಿರುವ ‘ಒಡೆಯರ್’ ಚಿತ್ರದ ಟೈಟಲ್ ವಿವಾದಕ್ಕೆ ರಾಜಮಾತೆ ಪ್ರಮೋದಾದೇವಿ ಪ್ರತಿಕ್ರಿಯಿಸಿದ್ದಾರೆ.

    ಒಡೆಯರ್ ಹೆಸರಿನ ಸಿನಿಮಾ ಬಗ್ಗೆ ಮಾತನಾಡಿದ ಪ್ರಮೋದಾ ದೇವಿ ಒಡೆಯರ್, ಚಿತ್ರಕ್ಕೆ ಒಡೆಯರ್ ಎಂದು ಹೆಸರಿಟ್ಟಿರಿವುದಕ್ಕೆ ನಮಗೆ ಯಾವುದೇ ಆಕ್ಷೇಪವಿಲ್ಲ. ಆದರೆ ಈ ಚಿತ್ರದಲ್ಲಿ ನಮ್ಮ ಮನೆತನದ ಬಗ್ಗೆ ಚಿತ್ರೀಕರಿಸಿದರೆ ನನ್ನ ಆಕ್ಷೇಪವಿದೆ ಎಂದು ಹೇಳಿದ್ದಾರೆ.

    ಒಡೆಯರ್ ಹೆಸರು ನಮಗೆ ಬಳುವಳಿಯಾಗಿ ಬಂದದ್ದು. ಒಡೆಯರ್ ಹೆಸರು ತುಂಬಾ ಜನ ಇಟ್ಟುಕೊಂಡಿದ್ದಾರೆ. ಆದರೆ ನಮ್ಮ ಮನೆತನಕ್ಕೆ ಸಂಬಂಧಪಟ್ಟಂತೆ ಬಂದರೆ ಅದಕ್ಕೆ ಆಕ್ಷೇಪವಿದೆ. ಈ ವಿಚಾರದಲ್ಲಿ ಒಡೆಯರ್ ಅಭಿಮಾನಿಗಳು ಕೊಟ್ಟಿರುವ ದೂರಿನ ವಿಚಾರ ನನ್ನ ಗಮನಕ್ಕೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.

    ಏನಿದು ವಿವಾದ?
    ನಟ ದರ್ಶನ ಅಭಿನಯದ `ಒಡೆಯರ್’ ಚಿತ್ರದ ಹೆಸರು ಬದಲಾವಣೆ ಮಾಡಬೇಕೆಂದು ಎರಡು ಸಂಘಟನೆಯ ಸದಸ್ಯರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

    ಒಡೆಯರ್ ಎಂಬ ಪದ ಮೈಸೂರು ಅರಸರ ಸ್ವತ್ತು. ನಮಗೆ ಅವರ ಮೇಲೆ ಅಪಾರ ಗೌರವ ಅಭಿಮಾನವಿದೆ. ನಮ್ಮ ನಾಡಿನ ನೆಲ ಜಲ ವಿಚಾರದಲ್ಲಿ ಅವರ ಕೊಡುಗೆ ಅಪಾರವಿದೆ. ಮೈಸೂರು ಜನತೆ ಅರಸರನ್ನ ಭಗವಂತನ ರೀತಿ ಕಾಣುತ್ತೇವೆ. ಚಿತ್ರದಲ್ಲಿ ರೌಡಿಸಂ, ಹಾಸ್ಯ, ವ್ಯಾಪಾರಿ ಚಿತ್ರಗಳಿಗೆ ಒಡೆಯರ್ ಹೆಸರು ಇಡಲು ಬಿಡುವುದಿಲ್ಲ. ಟೈಟಲ್ ಬದಲಾಯಿಸದಿದ್ದರೆ ಚಿತ್ರಿಕರಣಕ್ಕೆ ಅಡ್ಡಿ ಪಡಿಸುವುದಾಗಿ ಎಚ್ಚರಿಸುತ್ತಿದ್ದೇವೆ ಎಂದು ಕನ್ನಡ ಕ್ರಾಂತಿದಳ ಸಂಘಟನೆ ಮೈಸೂರಿನ ಕೆ.ಆರ್. ಠಾಣೆಯಲ್ಲಿ ಚಿತ್ರತಂಡದ ವಿರುದ್ಧ ದೂರು ದಾಖಲಿಸಿತ್ತು.

    ಮೈಸೂರಿನ ಕೆ.ಆರ್.ಪೊಲೀಸ್ ಠಾಣೆಯಲ್ಲೇ ಅರಸು ಯುವಜನ ವೇದಿಕೆ ಒಡೆಯರ್ ಹೆಸರನ್ನು ಬದಲಾವಣೆ ಮಾಡಬೇಕೆಂದು ಆಗ್ರಹಿಸಿ ದೂರು ದಾಖಲಿಸಿತ್ತು. ಈ ಹಿಂದೆ ಮೈಸೂರಿನಲ್ಲಿ ಕನ್ನಡ ಕ್ರಾಂತಿ ದಳದಿಂದ `ಒಡೆಯರ್ ಟೈಟಲ್‍ಗೆ ವಿರೋಧ ವ್ಯಕ್ತಪಡಿಸಿ ಈ ಶೀರ್ಷಿಕೆಯನ್ನ ಹಿಂಪಡೆಯುವಂತೆ ಆಗ್ರಹಿಸಿತ್ತು.

  • ದರ್ಶನ್ ಅಭಿನಯದ ಒಡೆಯರ್ ಚಿತ್ರದ ವಿರುದ್ಧ ಸಂಘಟನೆಗಳಿಂದ ದೂರು

    ದರ್ಶನ್ ಅಭಿನಯದ ಒಡೆಯರ್ ಚಿತ್ರದ ವಿರುದ್ಧ ಸಂಘಟನೆಗಳಿಂದ ದೂರು

    ಮೈಸೂರು: ಸ್ಯಾಂಡಲ್‍ವುಡ್ ನಲ್ಲಿ ಮತ್ತೊಂದು ಟೈಟಲ್ ವಿವಾದ ಶುರುವಾಗಿದೆ. ನಟ ದರ್ಶನ ಅಭಿನಯದ ‘ಒಡೆಯರ್’ ಚಿತ್ರದ ಹೆಸರು ಬದಲಾವಣೆ ಮಾಡಬೇಕೆಂದು ಎರಡು ಸಂಘಟನೆಯ ಸದಸ್ಯರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಒಡೆಯರ್ ಎಂಬ ಪದ ಮೈಸೂರು ಅರಸರ ಸ್ವತ್ತು. ನಮಗೆ ಅವರ ಮೇಲೆ ಅಪಾರ ಗೌರವ ಅಭಿಮಾನವಿದೆ. ನಮ್ಮ ನಾಡಿನ ನೆಲ ಜಲ ವಿಚಾರದಲ್ಲಿ ಅವರ ಕೊಡುಗೆ ಅಪಾರವಿದೆ. ಮೈಸೂರು ಜನತೆ ಅರಸರನ್ನ ಭಗವಂತನ ರೀತಿ ಕಾಣುತ್ತೇವೆ. ಚಿತ್ರದಲ್ಲಿ ರೌಡಿಂ, ಹಾಸ್ಯ, ವ್ಯಾಪರಿ ಚಿತ್ರಗಳಿಗೆ ಒಡೆಯರ್ ಹೆಸರು ಇಡಲು ಬಿಡುವುದಿಲ್ಲ. ಟೈಟಲ್ ಬದಲಾಯಿಸದಿದ್ದರೆ ಚಿತ್ರಿಕರಣಕ್ಕೆ ಅಡ್ಡಿ ಪಡಿಸುವುದಾಗಿ ಎಚ್ಚರಿಸುತ್ತಿದ್ದೇವೆ ಎಂದು ಕನ್ನಡ ಕ್ರಾಂತಿದಳ ಸಂಘಟನೆ ಮೈಸೂರಿನ ಕೆ.ಆರ್. ಠಾಣೆಯಲ್ಲಿ ಚಿತ್ರತಂಡದ ವಿರುದ್ಧ ದೂರು ದಾಖಲಿಸಿದೆ.

    ಮೈಸೂರಿನ ಕೆ.ಆರ್.ಪೊಲೀಸ್ ಠಾಣೆಯಲ್ಲೇ ಅರಸು ಯುವಜನ ವೇದಿಕೆ ಒಡೆಯರ್ ಹೆಸರನ್ನು ಬದಲಾವಣೆ ಮಾಡಬೇಕೆಂದು ಆಗ್ರಹಿಸಿ ದೂರು ದಾಖಲಿಸಿದೆ. ಈ ಹಿಂದೆ ಮೈಸೂರಿನಲ್ಲಿ ಕನ್ನಡ ಕ್ರಾಂತಿ ದಳದಿಂದ `ಒಡೆಯರ್ ಟೈಟಲ್‍ಗೆ ವಿರೋಧ ವ್ಯಕ್ತಪಡಿಸಿ ಈ ಶೀರ್ಷಿಕೆಯನ್ನ ಹಿಂಪಡೆಯುವಂತೆ ಆಗ್ರಹಿಸಿತ್ತು.

    ನಾಡು ನುಡಿ ಸೇವೆಗಾಗಿ ಮೈಸೂರು ಒಡೆಯರ್ ವಂಶಸ್ಥರ ಸೇವೆ ಅಪಾರವಾಗಿದೆ. ಹೀಗಾಗಿ ಒಡೆಯರ್ ಹೆಸರಲ್ಲಿ ಕಮರ್ಷಿಯಲ್ ಸಿನಿಮಾ ಮಾಡೋದು ಖಂಡನೀಯ ಎಂದು ಹೇಳಿ ಸಂಘಟನೆಗಳು ಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿವೆ.

    ದರ್ಶನ್ ಹುಟ್ಟುಹಬ್ಬದ ದಿನ ಅವರ ಮುಂದಿನ ಚಿತ್ರ ಒಡೆಯರ್ ಶೀರ್ಷಿಕೆ ಬಹಿರಂಗವಾಗಿತ್ತು. ಸಂದೇಶ್ ನಾಗರಾಜ್ ನಿರ್ಮಿಸುತ್ತಿರುವ ಒಡೆಯರ್ ಚಿತ್ರವನ್ನ ಎಂ.ಡಿ ಶ್ರೀಧರ್ ನಿರ್ದೇಶಿಸಲಿದ್ದಾರೆ.

  • ಸೆಟ್ಟೇರುವ ಮೊದಲೇ ದರ್ಶನ್ ‘ಒಡೆಯರ್’ ಚಿತ್ರಕ್ಕೆ ವಿರೋಧ!

    ಸೆಟ್ಟೇರುವ ಮೊದಲೇ ದರ್ಶನ್ ‘ಒಡೆಯರ್’ ಚಿತ್ರಕ್ಕೆ ವಿರೋಧ!

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಂದಿನ ಚಿತ್ರ `ಒಡೆಯರ್’ಗೆ ಆರಂಭದಲ್ಲೇ ವಿಘ್ನ ಎದುರಾಗಿದೆ.

    ಮೈಸೂರಿನಲ್ಲಿ ಕನ್ನಡ ಕ್ರಾಂತಿ ದಳದಿಂದ ‘ಒಡೆಯರ್’ ಟೈಟಲ್‍ಗೆ ವಿರೋಧ ವ್ಯಕ್ತವಾಗಿದ್ದು ಈ ಶೀರ್ಷಿಕೆಯನ್ನ ಹಿಂಪಡೆಯುವಂತೆ ಆಗ್ರಹಿಸಿದೆ. ಈ ಕುರಿತು ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿರುವ ಸಂಘಟನೆ ಒಂದು ವೇಳೆ ಟೈಟಲ್ ಹಿಂಪಡೆಯದಿದ್ದಲ್ಲಿ ಬೆಂಗಳೂರಿನಲ್ಲಿ ದರ್ಶನ್ ಮನೆ ಮುಂದೆ ಧರಣಿ ನಡೆಸುವುದಾಗಿ ಹೇಳಿದೆ.

    ನಾಡು ನುಡಿ ಸೇವೆಗಾಗಿ ಮೈಸೂರು ಒಡೆಯರ್ ವಂಶಸ್ಥರ ಸೇವೆ ಅಪಾರವಾಗಿದೆ. ಹೀಗಾಗಿ ಒಡೆಯರ್ ಹೆಸರಲ್ಲಿ ಕಮರ್ಷಿಯಲ್ ಸಿನಿಮಾ ಮಾಡೋದು ಖಂಡನೀಯ ಎಂಬುದು ಸಂಘಟನೆಯ ವಿರೋಧಕ್ಕೆ ಕಾರಣವಾಗಿದೆ.

    ಸದ್ಯ ದರ್ಶನ್ `ಯಜಮಾನ’ ಚಿತ್ರದ ಶೂಟಿಂಗ್‍ನಲ್ಲಿ ಭಾಗಿಯಾಗಿದ್ದಾರೆ. ದರ್ಶನ್ ಹುಟ್ಟುಹಬ್ಬದ ದಿನ ಅವರ ಮುಂದಿನ ಚಿತ್ರ ಒಡೆಯರ್ ಶೀರ್ಷಿಕೆ ಬಹಿರಂಗವಾಗಿತ್ತು, ಸಂದೇಶ್ ನಾಗರಾಜ್ ನಿರ್ಮಿಸುತ್ತಿರುವ ಒಡೆಯರ್ ಚಿತ್ರವನ್ನ ಎಂ.ಡಿ ಶ್ರೀಧರ್ ನಿರ್ದೇಶಿಸಲಿದ್ದಾರೆ.

    ಈ ಚಿತ್ರ ಸೆಟ್ಟರಲು ಇನ್ನೂ ಕೆಲ ತಿಂಗಳಿದೆ. ಆದರೆ ಆರಂಭದಲ್ಲೇ ಶೀರ್ಷಿಕೆಗೆ ಕಂಟಕ ಎದುರಾಗಿದೆ. ಇದನ್ನೂ ಓದಿ: ಸಿನಿಮಾ ಸೆಟ್ ನ ಮೊದಲ ದಿನವೇ ಯಜಮಾನನಾಗಿ ಬಂದ ಚಾಲೆಂಜಿಂಗ್ ಸ್ಟಾರ್!