Tag: ಒಡಿಶಾ ರೈಲು ದುರಂತ

  • Pakistan Train Accident: ಭೀಕರ ರೈಲು ದುರಂತ – 20 ಮಂದಿ ಸಾವು, 80 ಮಂದಿಗೆ ಗಾಯ

    Pakistan Train Accident: ಭೀಕರ ರೈಲು ದುರಂತ – 20 ಮಂದಿ ಸಾವು, 80 ಮಂದಿಗೆ ಗಾಯ

    ಇಸ್ಲಾಮಾಬಾದ್‌: ಕರಾಚಿಯಿಂದ (Karachi) ರಾಲ್ಪಿಂಡಿಗೆ ತೆರಳುತ್ತಿದ್ದ ಹಜಾರಾ ಎಕ್ಸ್‌ಪ್ರೆಸ್‌ (Hazara Express) ರೈಲು ಭೀಕರ ದುರಂತಕ್ಕೀಡಾಗಿದೆ. ಘಟನೆಯಲ್ಲಿ ಕನಿಷ್ಠ 20 ಮಂದಿ ಸಾವನ್ನಪ್ಪಿದ್ದು, 80 ಮಂದಿ ಗಾಯಗೊಂಡಿರುವ ಘಟನೆ ಭಾನುವಾರ ಪಾಕಿಸ್ತಾನದ (Pakistan) ಸಿಂಧ್ ಪ್ರಾಂತ್ಯದಲ್ಲಿ ನಡೆದಿದೆ.

    ಕರಾಚಿಯಿಂದ 275 ಕಿಲೋ ಮೀಟರ್ ದೂರದಲ್ಲಿರುವ ರಾವಲ್ಪಿಂಡಿಗೆ (Rawalpindi) ತೆರಳುತ್ತಿದ್ದ ಹಜಾರಾ ಎಕ್ಸ್‌ಪ್ರೆಸ್‌ ರೈಲಿನ ಒಟ್ಟು 10 ಬೋಗಿಗಳು ಹಳಿ ತಪ್ಪಿದೆ. ಘಟನೆಯಲ್ಲಿ ಈವೆರೆಗೆ 20 ಮಂದಿ ಸಾವನ್ನಪ್ಪಿದ್ದು, 80 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡ ಪ್ರಯಾಣಿಕರನ್ನ ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಆದ್ರೆ ಘಟನೆಗೆ ಇನ್ನೂ ನಿಖರ ಕಾರಣ ತಿಳಿದುಬಂದಿಲ್ಲ. ಇದನ್ನೂ ಓದಿ: ಪಾಕಿಸ್ತಾನದ ಮಾಜಿ ಪ್ರಧಾನಿ ಅರೆಸ್ಟ್ – ಇಮ್ರಾನ್ ಖಾನ್‌ಗೆ 3 ವರ್ಷ ಜೈಲು, 5 ವರ್ಷ ರಾಜಕೀಯದಿಂದ ಬ್ಯಾನ್

    ರೈಲ್ವೆ ಆಡಳಿತ ಮಂಡಳಿ ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಪಾಕಿಸ್ತಾನ ಸೇನೆ ಕೂಡ ಕಾರ್ಯಾಚರಣೆಗೆ ಕೈಜೋಡಿಸಿದ್ದು, ಸಮೀಪದ ನೆಲೆಗಳಿಂದ ಹೆಚ್ಚಿನ ಸೈನಿಕರನ್ನ ಕರೆಸಿಕೊಳ್ಳಲಾಗಿದೆ. ಘಟನಾ ಸ್ಥಳಕ್ಕೆ ಸಮೀಪದಲ್ಲಿರುವ ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಇತರ ಪ್ರಯಾಣಿಕರನ್ನ ನಿಗದಿತ ಸ್ಥಳಕ್ಕೆ ತಲುಪಿಸಲು ಪರ್ಯಾಯ ರೈಲು ವ್ಯವಸ್ಥೆ ಮಾಡಲಾಗಿದೆ ಎಂದು ಸ್ಥಳೀಯ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ಒಡಿಶಾ ರೈಲು ದುರಂತವಾಗಿ 4 ದಿನ ಕಳೆದರೂ 101 ಮೃತದೇಹಗಳ ಗುರುತು ಇನ್ನೂ ಪತ್ತೆಯಾಗಿಲ್ಲ

    ಎರಡು ತಿಂಗಳ ಹಿಂದೆಯಷ್ಟೇ ಒಡಿಶಾ ರಾಜ್ಯದಲ್ಲಿ ನಡೆದ ಭೀಕರ ರೈಲು ದುರಂತ (Odisha Train Accident) ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿತ್ತು. ಕೋರಮಂಡಲ್ ಎಕ್ಸ್‌ಪ್ರೆಸ್‌ ರೈಲು ಜೂನ್ 2ರ ಸಂಜೆ ಸರಕುಗಳ ರೈಲಿಗೆ ಡಿಕ್ಕಿ ಹೊಡೆದು ಅದರ ಹೆಚ್ಚಿನ ಕೋಚ್‍ಗಳು ಹಳಿತಪ್ಪಿದ್ದವು. ಈ ಅಪಘಾತದಲ್ಲಿ ಸುಮಾರು 288 ಮಂದಿ ಸಾವನ್ನಪ್ಪಿದ್ದರು ಅಲ್ಲದೇ 1,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಪಾಕಿಸ್ತಾನದಲ್ಲಿ ಸಂಭವಿಸಿರುವ ದುರಂತದಲ್ಲಿ ಸಂತ್ರಸ್ತರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Odisha Train Accident – 2 ತಿಂಗಳಾದರೂ ಪತ್ತೆಯಾಗದ 29 ಶವಗಳ ಗುರುತು

    Odisha Train Accident – 2 ತಿಂಗಳಾದರೂ ಪತ್ತೆಯಾಗದ 29 ಶವಗಳ ಗುರುತು

    ಭುವನೇಶ್ವರ: ಒಡಿಶಾದ ರೈಲು ಅಪಘಾತ (Odisha Train Accident) ಸಂಭವಿಸಿ ಇಂದಿಗೆ 2 ತಿಂಗಳುಗಳು ಕಳೆದಿವೆ. ಆದರೂ ಭುವನೇಶ್ವರದ ಆಸ್ಪತ್ರೆಯಲ್ಲಿ ಇರಿಸಲಾದ 29 ಮೃತದೇಹಗಳ ಗರುತು ಇನ್ನೂ ಪತ್ತೆಯಾಗಿಲ್ಲ ಎಂದು ಎಐಐಎಂಎಸ್‍ನ‌ (All India Institute of Medical Sciences) ವೈದ್ಯಕೀಯ ಅಧೀಕ್ಷಕ ದಿಲೀಪ್ ಕುಮಾರ್ ಪರಿದಾ ಹೇಳಿದ್ದಾರೆ.

    ಆಸ್ಪತ್ರೆಯಲ್ಲಿ 162 ದೇಹಗಳನ್ನು ಇರಿಸಲಾಗಿತ್ತು. ಆದರಲ್ಲಿ 113 ಮೃತದೇಹಗಳ ಗುರುತು ಪತ್ತೆಯಾಗಿದ್ದು ಅವುಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಉಳಿದ ಮೃತ ದೇಹಗಳಿಗಾಗಿ ಡಿಎನ್‍ಎ ಪರೀಕ್ಷೆ ನಡೆಸಲಾಗಿದೆ. ಇನ್ನೂ ಹೆಚ್ಚಿನ ಮಾದರಿಗಳ ಪರೀಕ್ಷೆ ನಡೆಸಲಾಗುತ್ತಿದೆ. ಖಚಿತ ವರದಿಯ ಬಳಿಕವಷ್ಟೆ ಮೃತದೇಹಗಳನ್ನು ಹಸ್ತಾಂತರಿಸಲಾಗುವುದು. ಅಲ್ಲದೇ ಡಿಎನ್‍ಎ ಪರೀಕ್ಷೆ ಬಳಿಕವೂ ಗುರುತು ಪತ್ತೆಯಾಗದ ಮೃತದೇಹಗಳ ಸಂಸ್ಕಾರದ ಬಗ್ಗೆ ಸರ್ಕಾರವೇ ತೀರ್ಮಾನ ಕೈಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: Odisha Train Tragedy: ದುರಂತಕ್ಕೆ ಸಿಕ್ತು ಅಸಲಿ ಕಾರಣ – ಸುರಕ್ಷತೆಗೆ ಹೊಸ ಟೆಕ್ನಾಲಜಿ ಬಳಸುವ ಪ್ರಯತ್ನ

    ರೈಲು ಅಪಘಾತದ ಬಗ್ಗೆ ವಿಚಾರಣೆಯನ್ನು ಪೂರ್ಣಗೊಳಿಸಲಾಗಿದೆ. ಮೊದಲ ವರದಿಯಲ್ಲಿ ರೈಲು ದುರಂತಕ್ಕೆ ಸಿಗ್ನಲಿಂಗ್ ಮತ್ತು ಟ್ರಾಫಿಕ್ ಕಂಟ್ರೋಲ್ ವಿಭಾಗಗಳನ್ನು ಹೊಣೆ ಮಾಡಲಾಗಿದೆ. ಈ ಅಪಘಾತಕ್ಕೆ ಇದೇ ಕಾರಣ ಎಂದು ರೈಲ್ವೆ ಸಚಿವಾಲಯ ರಾಜ್ಯಸಭೆಯಲ್ಲಿ ವರದಿಯನ್ನು ಬಹಿರಂಗ ಪಡಿಸಿತ್ತು. ಸಿಗ್ನಲಿಂಗ್ ದೋಷಗಳ ಪರಿಣಾಮವಾಗಿ ರಾಂಗ್ ಲೈನ್‍ಗೆ ಹಸಿರು ಸಿಗ್ನಲ್ ಪ್ರದರ್ಶಿಸಲಾಯಿತು. ಇದು ನಿಂತಿದ್ದ ಸರಕು ರೈಲಿಗೆ ಪ್ಯಾಸೆಂಜರ್ ರೈಲು ಡಿಕ್ಕಿಯಾಗಲು ಕಾರಣವಾಯಿತು. ಬಳಿಕ ಡಿಕ್ಕಿಯಾಗಿ ಪಕ್ಕದ ಹಳಿಗಳ ಮೇಲೆ ಬಿದ್ದಿದ್ದ ಬೋಗಿಗಳಿಗೆ ಮತ್ತೊಂದು ರೈಲು ವೇಗವಾಗಿ ಬಂದು ಡಿಕ್ಕಿಯಾಗಿತ್ತು.

    ಜೂ.2 ರಂದು ಶಾಲಿಮಾರ್-ಚೆನ್ನೈ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿಯಾಗಿತ್ತು. ಬಳಿಕ ಕೆಲ ಬೋಗಿಗಳು ಪಕ್ಕದ ಹಳಿ ಮೇಲೆ ಬಿದ್ದಿವೆ. ಸ್ವಲ್ಪ ಸಮಯದ ನಂತರ ಅದೇ ಹಳಿಯಲ್ಲಿ ಬಂದ ಯಶವಂತಪುರದಿಂದ ಹೌರಾಕ್ಕೆ ತೆರಳುತ್ತಿದ್ದ ರೈಲು ಹಳಿತಪ್ಪಿದ ಬೋಗಿಗಳಿಗೆ ಡಿಕ್ಕಿ ಹೊಡೆದಿತ್ತು. ಈ ಘಟನೆಯಲ್ಲಿ 288 ಜನ ಸಾವಿಗೀಡಾಗಿದ್ದರು. ಇದನ್ನೂ ಓದಿ: ಒಡಿಶಾ ರೈಲು ದುರಂತ – ಮೊದಲ ಬಾರಿ ವರದಿ ಬಿಡುಗಡೆ ಮಾಡಿದ ರೈಲ್ವೆ ಇಲಾಖೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಒಡಿಶಾ ರೈಲು ದುರಂತ – ಮೊದಲ ಬಾರಿ ವರದಿ ಬಿಡುಗಡೆ ಮಾಡಿದ ರೈಲ್ವೆ ಇಲಾಖೆ

    ಒಡಿಶಾ ರೈಲು ದುರಂತ – ಮೊದಲ ಬಾರಿ ವರದಿ ಬಿಡುಗಡೆ ಮಾಡಿದ ರೈಲ್ವೆ ಇಲಾಖೆ

    ನವದೆಹಲಿ: ಕಳೆದ ತಿಂಗಳು ಜೂನ್ ಆರಂಭದಲ್ಲಿ ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ ಭೀಕರ ತ್ರಿವಳಿ ರೈಲು ಅಪಘಾತಕ್ಕೆ (Odisha Train Tragedy) ಸಿಗ್ನಲ್ ದೋಷವೇ ಕಾರಣ ಎಂದು ರೈಲ್ವೆ ಸಚಿವಾಲಯ ರಾಜ್ಯಸಭೆಯಲ್ಲಿ ವರದಿಯನ್ನು ಮೊದಲ ಬಾರಿಗೆ ಬಹಿರಂಗಪಡಿಸಿದೆ.

    ರಾಜ್ಯಸಭೆಯಲ್ಲಿ ಸಂಸದ ಡಾ. ಜಾನ್ ಬಿಟ್ರಾಸ್ ಅವರು ಕೇಳಿದ ಪ್ರಶ್ನೆಗೆ ಲಿಖಿತವಾಗಿ ಉತ್ತರ ನೀಡಿರುವ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ತ್ರಿವಳಿ ರೈಲು ಅಪಘಾತ ಸಿಗ್ನಲ್ ಸರ್ಕ್ಯೂಟ್ ಆಲ್ಟರೇಶನ್‌ನಲ್ಲಿ ತಪ್ಪಾಗಿದ್ದರಿಂದ ಸಂಭವಿಸಿದೆ. ಇದರಿಂದ ಸಿಗ್ನಲ್ ತಪ್ಪಾಗಿ ಪ್ರದರ್ಶನವಾಗಿದೆ ಎಂದು ತಿಳಿಸಿದ್ದಾರೆ.

    ಈ ಹಿಂದೆ ನಿಲ್ದಾಣದ ನಾರ್ತ್ ಸಿಗ್ನಲ್ ಗೂಮ್ಟಿಯಲ್ಲಿ ಸಿಗ್ನಲಿಂಗ್ ಸರ್ಕ್ಯೂಟ್ ಮಾರ್ಪಾಡು ಹಾಗೂ ನಿಲ್ದಾಣದ ಲೆವೆಲ್ ಕ್ರಾಸಿಂಗ್ ಗೇಟ್ ನಂ.94ಕ್ಕೆ ಎಲೆಕ್ಟ್ರಿಕ್ ಲಿಫ್ಟಿಂಗ್ ಬ್ಯಾರಿಯರ್ ಬದಲಾಯಿಸುವುದಕ್ಕೆ ಸಂಬಂಧಿಸಿದಂತೆ ಸಿಗ್ನಲಿಂಗ್ ಕಾರ್ಯದ ವೇಳೆ ಸಿಗ್ನಲಿಂಗ್-ಸರ್ಕ್ಯೂಟ್ ಬದಲಾವಣೆಯಲ್ಲಿನ ಲೋಪಗಳಿಂದ ರೈಲುಗಳು ಡಿಕ್ಕಿಯಾಗಿವೆ ಎಂದು ಉತ್ತರಿಸಿದ್ದಾರೆ.

    ಈ ದೋಷಗಳ ಪರಿಣಾಮವಾಗಿ ರಾಂಗ್ ಲೈನ್‌ಗೆ ಹಸಿರು ಸಿಗ್ನಲ್ ಪ್ರದರ್ಶಿಸಲಾಯಿತು. ಇದು ನಿಂತಿದ್ದ ಸರಕು ರೈಲಿಗೆ ಪ್ಯಾಸೆಂಜರ್ ರೈಲು ಡಿಕ್ಕಿಯಾಗಲು ಕಾರಣವಾಯಿತು. ಈ ತಪ್ಪುಗಳು ರೈಲ್ವೆ ಅಧಿಕಾರಿಗಳ ಲೋಪ ಹಾಗೂ ನಿರ್ಲಕ್ಷ್ಯದಿಂದ ಸಂಭವಿಸಿರುವುದು ಸ್ಪಷ್ಟವಾಗಿ ತಿಳಿಸುತ್ತದೆ ಎಂದು ಹೇಳಿದ್ದಾರೆ. ಮಾತ್ರವಲ್ಲದೆ ಅಪಘಾತದಲ್ಲಿ ಸಾವನ್ನಪ್ಪಿದ ಪ್ರಯಾಣಿಕರ ಪೈಕಿ 41 ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಸರ್ಕಾರ ಬಹಿರಂಗಪಡಿಸಿದೆ. ಇದನ್ನೂ ಓದಿ: ಜ್ಞಾನವಾಪಿ ಮಸೀದಿಯಲ್ಲಿ ಸರ್ವೇಗೆ ಕೋರ್ಟ್ ಅನುಮತಿ

    ಕಳೆದ ತಿಂಗಳು ಜೂನ್ 2ರಂದು ಒಡಿಶಾದಲ್ಲಿ ಸಂಭವಿಸಿದ ಭೀಕರ ರೈಲು ದುರಂತದಲ್ಲಿ 293 ಜನರು ಸಾವನ್ನಪ್ಪಿದ್ದಾರೆ. 1,000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಅಪಘಾತ ಕಳೆದ 3 ದಶಕಗಳಲ್ಲೇ ಭಾರತದಲ್ಲಿ ಸಂಭವಿಸಿದ ಅತ್ಯಂತ ಭೀಕರ ರೈಲು ದುರಂತವಾಗಿದೆ.

    ಭೀಕರ ಅಪಘಾತಕ್ಕೆ ಸಂಬಂಧಿಸಿದಂತೆ ಈ ತಿಂಗಳ ಆರಂಭದಲ್ಲಿ ಕೇಂದ್ರೀಯ ತನಿಖಾ ದಳ ಮೂವರು ಭಾರತೀಯ ರೈಲ್ವೆ ಉದ್ಯೋಗಿಳಾದ ಅರುಣ್ ಕುಮಾರ್ ಮಹಂತ, ಮೊಹಮ್ಮದ್ ಅಮೀರ್ ಖಾನ್ ಹಾಗೂ ಪಪ್ಪು ಕುಮಾರ್‌ರನ್ನು ಬಂಧಿಸಿದೆ. ಇದನ್ನೂ ಓದಿ: ಕುರುಡನ ಹೆಗಲ ಮೇಲೆ ಕುಂಟನ ಸವಾರಿಯಂತಿದೆ ಜೆಡಿಎಸ್‌-ಬಿಜೆಪಿ ಹೊಂದಾಣಿಕೆ: ಕಾಲೆಳೆದ ಕಾಂಗ್ರೆಸ್‌

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಒಡಿಶಾ ರೈಲು ದುರಂತ: ಸಿಬಿಐನಿಂದ ಮೂವರು ಅರೆಸ್ಟ್

    ಒಡಿಶಾ ರೈಲು ದುರಂತ: ಸಿಬಿಐನಿಂದ ಮೂವರು ಅರೆಸ್ಟ್

    ಭುವನೇಶ್ವರ್: ಒಡಿಶಾ (Odisha) ರೈಲು ದುರಂತ (Train Crash) ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ರೈಲ್ವೇ (Railway) ಸಿಬ್ಬಂದಿಗಳನ್ನು ಸಿಬಿಐ (CBI) ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದಾರೆ.

    ಬಂಧಿತರನ್ನು ಹಿರಿಯ ಸೆಕ್ಷನ್ ಇಂಜಿನಿಯರ್ ಅರುಣ್ ಕುಮಾರ್ ಮಹಂತ, ಸೆಕ್ಷನ್ ಇಂಜಿನಿಯರ್ ಮೊಹಮ್ಮದ್ ಅಮೀರ್ ಖಾನ್ ಮತ್ತು ಟೆಕ್ನಿಶಿಯಲ್ ಪಪ್ಪು ಕುಮಾರ್ ಎಂದು ಗುರುತಿಸಲಾಗಿದೆ. ಬಂಧಿತರ ವಿರುದ್ಧ ಐಪಿಸಿ ಸೆಕ್ಷನ್ 304 (ಅಪರಾಧಿಕ ಮಾನವ ಹತ್ಯೆ) ಮತ್ತು 201 (ಸಾಕ್ಷ್ಯ ನಾಶ) ಅಡಿಯಲ್ಲಿ ಆರೋಪ ಹೊರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಒಡಿಶಾ ರೈಲು ದುರಂತ – ಸಿಗ್ನಲಿಂಗ್, ಟ್ರಾಫಿಕ್ ಕಂಟ್ರೋಲ್ ವಿಭಾಗಗಳೇ ಹೊಣೆ

    ಒಂದು ತಿಂಗಳ ತನಿಖೆ ನಡೆಸಿರುವ ಸಿಬಿಐ ಬಂಧಿತರ ಮೇಲೆ ಕಠಿಣ ಸೆಕ್ಷನ್‍ಗಳನ್ನು ಹಾಕಿ ಬಂಧಿಸಿದೆ. ಒಡಿಶಾ ಪೊಲೀಸರು ಈ ಮೊದಲು ದಾಖಲಿಸಿದ್ದ ಎಫ್‍ಐಆರ್ ಇದರಲ್ಲಿ ಅನ್ವಯಿಸಿಲ್ಲ. ಮೂವರು ಆರೋಪಿಗಳು ಈ ಅಪಘಾತಕ್ಕೆ ಹೇಗೆ ಪಾತ್ರರು ಎಂಬುದನ್ನು ಅಧಿಕಾರಿಗಳು ತಿಳಿಸಿಲ್ಲ. ಆದರೆ ಘಟನೆಗೆ ಕಾರಣರಾದವರನ್ನು ಬಂಧಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

    ಕಳೆದ ವಾರ ಸಿಆರ್‍ಎಸ್ ವರದಿಯಲ್ಲಿ ತಾಂತ್ರಿಕ ಸಮಸ್ಯೆಯಿಂದ ಅಪಘಾತ ಸಂಭವಿಸಿದ್ದನ್ನು ತಳ್ಳಿ ಹಾಕಲಾಗಿತ್ತು. ಅಲ್ಲದೇ ಅಪಘಾತಕ್ಕೆ ಮಾನವ ದೋಷವೇ ಕಾರಣ ಎಂದು ಉಲ್ಲೇಖಿಸಲಾಗಿತ್ತು. ಈ ಘಟನೆಯ ಹಿಂದೆ ಏನಾದರೂ ಸಂಚು ಅಥವಾ ಪಿತೂರಿ ಇದೆಯೇ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

    ಒಡಿಶಾದ ಬಾಲಸೋರ್‍ನ ಬಹನಾಗ್ ರೈಲ್ವೇ ನಿಲ್ದಾಣದಲ್ಲಿ ಜೂನ್ 2 ರಂದು ಸಂಜೆ 6:56 ರ ಸುಮಾರಿಗೆ ಕೋರಮಂಡಲ್ ಎಕ್ಸ್‍ಪ್ರೆಸ್ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿತ್ತು. ಡಿಕ್ಕಿಯ ಪರಿಣಾಮ ಬೋಗಿಗಳು ಪಕ್ಕದ ಟ್ರ್ಯಾಕ್‍ನಲ್ಲಿ ಉರುಳಿ ಬಿದ್ದಿದ್ದವು. ಇದೇ ಸಮಯದಲ್ಲಿ ಆ ಮಾರ್ಗದಲ್ಲಿ ಹಾದು ಹೋಗುತ್ತಿದ್ದ ಹೌರಾದಿಂದ ಹೊರಟ ಯಶವಂತಪುರ ಎಕ್ಸ್‍ಪ್ರೆಸ್ ಬೋಗಿಗಳಿಗೆ ಡಿಕ್ಕಿಯಾಗಿತ್ತು. ಈ ಅಪಘಾತದಲ್ಲಿ 288 ಜನರು ಸಾವನ್ನಪ್ಪಿದ್ದರು. ಈ ಅಪಘಾತದ ನಂತರ ಕೆಲವು ಅಧಿಕಾರಿಗಳನ್ನು ಅಲ್ಲಿಂದ ವರ್ಗಾಯಿಸಲಾಗಿತ್ತು. ಇದನ್ನೂ ಓದಿ: ಸಿದ್ದರಾಮಯ್ಯ Vs ಬೊಮ್ಮಾಯಿ – ಯಾವ ಇಲಾಖೆಗೆ ಎಷ್ಟು ಕೋಟಿ ಅನುದಾನ ಸಿಕ್ಕಿದೆ?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Odisha Train Tragedy: ದುರಂತಕ್ಕೆ ಸಿಕ್ತು ಅಸಲಿ ಕಾರಣ – ಸುರಕ್ಷತೆಗೆ ಹೊಸ ಟೆಕ್ನಾಲಜಿ ಬಳಸುವ ಪ್ರಯತ್ನ

    Odisha Train Tragedy: ದುರಂತಕ್ಕೆ ಸಿಕ್ತು ಅಸಲಿ ಕಾರಣ – ಸುರಕ್ಷತೆಗೆ ಹೊಸ ಟೆಕ್ನಾಲಜಿ ಬಳಸುವ ಪ್ರಯತ್ನ

    ಭುನವೇಶ್ವರ: ಕೆಲ ದಿನಗಳ ಹಿಂದೆಯಷ್ಟೇ ಒಡಿಶಾದ (ODISHA) ಬಾಲಸೋರ್‌ನಲ್ಲಿ ನಡೆದ ತ್ರಿವಳಿ ರೈಲು ದುರಂತಕ್ಕೆ (Odisha Train Tragedy) ಅಸಲಿ ಕಾರಣ ಏನೆಂಬುದನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಸುಮಾರು 293 ಜೀವಗಳನ್ನು ಬಲಿಪಡೆದ ದುರಂತಕ್ಕೆ ಮಾನವ ದೋಷವೇ ಕಾರಣ ಎಂದು ರೈಲ್ವೆ ಸುರಕ್ಷತಾ ಆಯುಕ್ತರು ತಿಳಿಸಿದ್ದಾರೆ.

    ಕೇಂದ್ರೀಯ ತನಿಖಾ ದಳ (CBI) ಕ್ರಿಮಿನಲ್‌ ಅಪರಾಧ ಹಿನ್ನೆಲೆ ಕೇಂದ್ರೀಕರಿಸಿ ತನಿಖೆ ನಡೆಸುತ್ತಿದೆ. ರೈಲ್ವೆ ಇಲಾಖೆ ಅಧಿಕಾರಿ ಮೂಲಗಳ ಪ್ರಕಾರ 3‌ ವರ್ಷಗಳ ಹಿಂದೆ ಸುರಕ್ಷತೆಯ ಕಾರಣದಿಂದ ರೈಲ್ವೆ ಅಳಿ ವಿನ್ಯಾಸದಲ್ಲಿ ಬದಲಾವಣೆ ಮಾಡಲಾಗಿತ್ತು. ಆ ನಂತರ ಅಧಿಕಾರಿಗಳು ಅಳಿ ತಪಾಸಣೆ ನಡೆಸಿ ಸುರಕ್ಷತಾ ಕಾರ್ಯವಿಧಾನ ಅನುಸರಿಸೋದನ್ನ ಕಡೆಗಣಿಸಿದ್ದರು. ಹಾಗಾಗಿ ಅಧಿಕಾರಿಗಳ ನಿರ್ಲಕ್ಷ್ಯವೂ ಎದ್ದು ಕಾಣ್ತಿದೆ. ಸಿಗ್ನಲಿಂಗ್‌ (Railway Signalling) ವಿಭಾಗದವರೂ ಮಾತ್ರವಲ್ಲದೇ ಸುರಕ್ಷತೆಯ ಪ್ರಕ್ರಿಯೆಗಳ ಬಗ್ಗೆ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧವೂ ಸಚಿವಾಲಯ ಕ್ರಮ ತೆಗೆದುಕೊಳ್ಳುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಒಡಿಶಾ ರೈಲು ದುರಂತ – ಸಿಗ್ನಲಿಂಗ್, ಟ್ರಾಫಿಕ್ ಕಂಟ್ರೋಲ್ ವಿಭಾಗಗಳೇ ಹೊಣೆ

    CSR ವರದಿಯಲ್ಲಿ ವಿಧ್ವಂಸಕ ಕೃತ್ಯ ಎಂದೇ ಸೂಚಿಸಿದ್ದರೂ, ಸಿಬಿಐನ ನಂತರದ ವರದಿಗಳಿಂದ ರೈಲ್ವೆ ಇಲಾಖೆ ತನ್ನ ಸುರಕ್ಷತಾ ವ್ಯವಸ್ಥೆಯನ್ನ ಮರುಹೊಂದಿಸಲು ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ.

    ಈಗಾಗಲೇ ಉನ್ನತಮಟ್ಟದ ಸುರಕ್ಷತಾ ಕ್ರಮ ಕೈಗೊಳ್ಳಲು ರೈಲ್ವೆ ಇಲಾಖೆ ಮುಂದಾಗಿದೆ. ಅದಕ್ಕಾಗಿ ಉಕ್ಕಿನ ಉದ್ಯಮದಲ್ಲಿ ಬಳಸಲಾಗುವ ಉತ್ತಮ ತಂತ್ರಜ್ಞಾನಗಳು ಮತ್ತು ವಿಶ್ವದಾದ್ಯಂತ ಬೇರೆ ಬೇರೆ ದೇಶಗಳಲ್ಲಿ ಬಳಸುವ ರೈಲ್ವೆ ಸುರಕ್ಷತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಎಲೆಕ್ಟ್ರಾನಿಕ್ ರಿಲೇ ಸಿಸ್ಟಮ್‌ಗಳ ಬಳಕೆಯ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ. ಈ ವ್ಯವಸ್ಥೆ ಜಾರಿಗೆ ಬರಲು ಕನಿಷ್ಠ ಮೂರು ವರ್ಷಗಳ ಸಮಯ ಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: 20ರ ಯುವಕನಿಗೆ ಚಾಕು ಇರಿತ- ಪೊಲೀಸರ ಮುಂದೆ ಮೃತನ ತಾಯಿ ಹೇಳಿದ್ದೇನು?

    ಜೂ.2 ರಂದು ಶಾಲಿಮಾರ್-ಚೆನ್ನೈ ಕೋರಮಂಡಲ್ ಎಕ್ಸ್‍ಪ್ರೆಸ್ ರೈಲು ಹಳಿ ತಪ್ಪಿ ಕೆಲ ಬೋಗಿಗಳು ನಿಂತಿದ್ದ ಗೂಡ್ಸ್ ರೈಲಿನ ಮೇಲೆ ಬಿದ್ದಿವೆ. ಸ್ವಲ್ಪ ಸಮಯದ ನಂತರ ಅದೇ ಹಳಿಯಲ್ಲಿ ಬಂದ ಯಶವಂತಪುರದಿಂದ ಹೌರಾಕ್ಕೆ ತೆರಳುತ್ತಿದ್ದ ಮತ್ತೊಂದು ರೈಲು ಹಳಿತಪ್ಪಿದ ಬೋಗಿಗಳಿಗೆ ಡಿಕ್ಕಿ ಹೊಡೆದು ಅದರ 3-4 ಬೋಗಿಗಳು ಹಳಿತಪ್ಪಿತ್ತು ಈ ಘಟನೆಯಲ್ಲಿ 288 ಜನ ಸಾವಿಗೀಡಾಗಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಒಡಿಶಾ ರೈಲು ದುರಂತ – ಸಿಗ್ನಲಿಂಗ್, ಟ್ರಾಫಿಕ್ ಕಂಟ್ರೋಲ್ ವಿಭಾಗಗಳೇ ಹೊಣೆ

    ಒಡಿಶಾ ರೈಲು ದುರಂತ – ಸಿಗ್ನಲಿಂಗ್, ಟ್ರಾಫಿಕ್ ಕಂಟ್ರೋಲ್ ವಿಭಾಗಗಳೇ ಹೊಣೆ

    ಭುವನೇಶ್ವರ: 288 ಜನರನ್ನು ಬಲಿ ಪಡೆದಿದ್ದ ಒಡಿಶಾ ರೈಲು ದುರಂತಕ್ಕೆ (Odisha Train Accident) ಸಿಗ್ನಲಿಂಗ್ (Signalling) ಮತ್ತು ಟ್ರಾಫಿಕ್ ಕಂಟ್ರೋಲ್ (Traffic Operations) ವಿಭಾಗಗಳನ್ನು ಹೊಣೆ ಮಾಡಲಾಗಿದೆ.

    ರೈಲ್ವೇ (Railway) ಸಿಗ್ನಲ್ ಹಾಗೂ ಇಂಟರ್‌ಲಾಕ್‌ ರಿಪೇರಿ ಮಾಡಿಸುವಂತೆ ಸ್ಟೇಷನ್ ಮಾಸ್ಟರ್‌ಗೆ ಸೂಚಿಸಲಾಗಿತ್ತು. ಸಿಗ್ನಲ್ ರಿಪೇರಿಯ ಬಳಿಕ ರೈಲು ಸಂಚರಿಸುವ ಮುನ್ನ ಸಿಗ್ನಲಿಂಗ್ ವ್ಯವಸ್ಥೆಯನ್ನು ಪರೀಕ್ಷಿಸುವ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಅನುಸರಿಸಲಾಗಿಲ್ಲ. ಅಲ್ಲದೇ ರೈಲ್ವೇ ಮರುಸಂಪರ್ಕಕ್ಕೆ ಸೂಚನೆ ನೀಡಿದ ನಂತರವೂ ಸಿಗ್ನಲಿಂಗ್ ಸಿಬ್ಬಂದಿ ಕೆಲಸವನ್ನು ಮುಂದುವರೆಸಿದ್ದಾರೆ. ಇದರಿಂದಾಗಿ ಅಪಘಾತಕ್ಕೆ ಸಿಗ್ನಲ್ ನಿರ್ವಹಣೆ ಹಾಗೂ ಟ್ರಾಫಿಕ್ ಕಂಟ್ರೋಲ್ ಸಿಬ್ಬಂದಿ ಜವಾಬ್ದಾರರಾಗಿದ್ದಾರೆ ಎಂದು ಸಿಆರ್‍ಎಸ್ ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ತಡವಾಗಿ ಬಂದ ಬಸ್ ಅಡ್ಡಗಟ್ಟಿ ಡ್ರೈವರ್‌ಗೆ ಕ್ಲಾಸ್‌ ತೆಗೆದುಕೊಂಡ ಮಹಿಳೆಯರು

    ಸಿಗ್ನಲಿಂಗ್ ಸಿಬ್ಬಂದಿ ಮತ್ತು ಸ್ಟೇಷನ್ ಮಾಸ್ಟರ್ ಇಬ್ಬರೂ ಜವಾಬ್ದಾರರಾಗಿರುವ ಇಂಟರ್‌ಲಾಕಿಂಗ್ ಸಿಗ್ನಲಿಂಗ್ ಸಿಸ್ಟಮ್‍ನ ಕೇಂದ್ರ ಕೊಠಡಿಯಲ್ಲೂ ಲೋಪಗಳಾಗಿವೆ. ಇದಾದ ಬಳಿಕ ರೈಲ್ವೆ ಇಲಾಖೆ ಖರಗ್‍ಪುರ ವಿಭಾಗೀಯ ರೈಲ್ವೆ ವ್ಯವಸ್ಥಾಪಕ  ಶುಜತ್ ಹಶ್ಮಿ ಮತ್ತು ಆಗ್ನೇಯ ರೈಲ್ವೆ ಸುರಕ್ಷತಾ ಸಿಗ್ನಲ್ ಭದ್ರತಾ ಸಿಬ್ಬಂದಿಯನ್ನು ಬೇರೆಡೆಗೆ ವರ್ಗಾಯಿಸಿದೆ.

    ಆಗ್ನೇಯ ರೈಲ್ವೆ ಜನರಲ್ ಮ್ಯಾನೇಜರ್ ಅರ್ಚನಾ ಜೋಶಿ ಅವರನ್ನು ಬೆಂಗಳೂರಿನ ರೈಲ್ ವೀಲ್ ಪ್ಲಾಂಟ್‍ನ ಜನರಲ್ ಮ್ಯಾನೇಜರ್ ಆಗಿ ವರ್ಗಾವಣೆ ಮಾಡಲಾಗಿದೆ. ಈಶಾನ್ಯ ರೈಲ್ವೆಯ ಹೆಚ್ಚುವರಿ ಜನರಲ್ ಮ್ಯಾನೇಜರ್ ಎ.ಕೆ ಮಿಶ್ರಾ ಅವರನ್ನು ಆಗ್ನೇಯ ರೈಲ್ವೆಯ ಹೊಸ ಜಿಎಂ ಆಗಿ ನೇಮಿಸಿದೆ. ಈ ಸಂಬಂಧ ಆಗ್ನೇಯ ವಲಯದ ರೈಲ್ವೆ ಸುರಕ್ಷತಾ ಆಯುಕ್ತ ಎ.ಕೆ ಚೌಧರಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ತಿಳಿದು ಬಂದಿದೆ.

    ಜೂ.2 ರಂದು ಶಾಲಿಮಾರ್-ಚೆನ್ನೈ ಕೋರಮಂಡಲ್ ಎಕ್ಸ್‍ಪ್ರೆಸ್ ರೈಲು ಹಳಿ ತಪ್ಪಿ ಕೆಲ ಬೋಗಿಗಳು ನಿಂತಿದ್ದ ಗೂಡ್ಸ್ ರೈಲಿನ ಮೇಲೆ ಬಿದ್ದಿವೆ. ಸ್ವಲ್ಪ ಸಮಯದ ನಂತರ ಅದೇ ಹಳಿಯಲ್ಲಿ ಬಂದ ಯಶವಂತಪುರದಿಂದ ಹೌರಾಕ್ಕೆ ತೆರಳುತ್ತಿದ್ದ ಮತ್ತೊಂದು ರೈಲು ಹಳಿತಪ್ಪಿದ ಬೋಗಿಗಳಿಗೆ ಡಿಕ್ಕಿ ಹೊಡೆದು ಅದರ 3-4 ಬೋಗಿಗಳು ಹಳಿತಪ್ಪಿತ್ತು ಈ ಘಟನೆಯಲ್ಲಿ 288 ಜನ ಸಾವಿಗೀಡಾಗಿದ್ದರು. ಇದನ್ನೂ ಓದಿ: Lausanne Diamond League: ಚಿನ್ನಕ್ಕೆ ಮುತ್ತಿಟ್ಟ ನೀರಜ್‌ ಚೋಪ್ರಾ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಒಡಿಶಾ ರೈಲು ದುರಂತದಲ್ಲಿ ಮೃತರ ಕುಟುಂಬಕ್ಕೆ 20 ಲಕ್ಷ ದೇಣಿಗೆ ನೀಡಿದ ಭಾರತೀಯ ಫುಟ್ಬಾಲ್‌ ತಂಡ

    ಒಡಿಶಾ ರೈಲು ದುರಂತದಲ್ಲಿ ಮೃತರ ಕುಟುಂಬಕ್ಕೆ 20 ಲಕ್ಷ ದೇಣಿಗೆ ನೀಡಿದ ಭಾರತೀಯ ಫುಟ್ಬಾಲ್‌ ತಂಡ

    ಭುವನೇಶ್ವರ: ಭಾರತೀಯ ಫುಟ್ಬಾಲ್‌ ತಂಡವು (Indian Football Team) ಇಂಟರ್‌ಕಾಂಟಿನೆಂಟಲ್ ಕಪ್ ನಗದು ಬಹುಮಾನವಾಗಿ ಪಡೆದ ಹಣದಲ್ಲಿ 20 ಲಕ್ಷ ರೂ.ಗಳನ್ನ ಬಾಲಸೋರ್ ರೈಲು ದುರಂತದಲ್ಲಿ (Odisha Train Accident) ಮೃತಪಟ್ಟವರ ಕುಟುಂಬಗಳಿಗೆ ದೇಣಿಯಾಗಿ ನೀಡಿದೆ. ಈ ಮೂಲಕ ಕಪ್‌ ಗೆಲ್ಲುವ ಜೊತೆಗೆ ಭಾರತೀಯರ ಮನವನ್ನೂ ಗೆದ್ದಿದೆ.

    ಚಾಂಪಿಯನ್‌ ಪಟ್ಟ ಗೆದ್ದ ನಂತರ ಸಿಕ್ಕ ನಗದು ಪ್ರಶಸ್ತಿಯ ಒಂದು ಭಾಗವನ್ನ ಒಡಿಶಾ ರಾಜ್ಯದಲ್ಲಿ ಇತ್ತೀಚೆಗೆ ನಡೆದ ಭೀಕರ ರೈಲು ದುರಂತದಲ್ಲಿ ಮೃತಪಟ್ಟವರ ಕುಟುಂಬಗಳ ʻಪರಿಹಾರ ಮತ್ತು ಪುನರ್ವಸತಿʼ ಕಾರ್ಯಕ್ಕಾಗಿ ದಾನ ಮಾಡಲು ಭಾರತೀಯ ಫುಟ್ಬಾಲ್‌ ತಂಡ ನಿರ್ಧರಿಸಿದೆ. ಕ್ರೀಡಾಪಟುಗಳು ಹಾಗೂ ಕ್ರೀಡಾಭಿಮಾನಿಗಳಿಂದಲೂ ಇದಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಇದನ್ನೂ ಓದಿ: ಒಡಿಶಾ ರೈಲು ಅಪಘಾತ; ಸಂಚಾರ ರದ್ದಾಗಿ ಬೆಂಗ್ಳೂರಲ್ಲೇ ನಿಂತ ಬೆಂಗಳೂರು-ಗುವಾಹಟಿ ರೈಲು 

    ಭಾನುವಾರ ಒಡಿಶಾದಲ್ಲಿ ನಡೆದ ಇಂಟರ್‌ಕಾಂಟಿನೆಂಟಲ್ ಕಪ್ ಫೈನಲ್‌ ಪಂದ್ಯದಲ್ಲಿ ಆತಿಥೇಯ ಭಾರತ ತಂಡವು 2-0 ಗೋಲುಗಳಿಂದ ಎದುರಾಳಿ ಲೆಬನಾನ್ ತಂಡವನ್ನ ಮಣಿಸಿತು. ಈ ಮೂಲಕ 2ನೇ ಬಾರಿಗೆ ಟ್ರೋಫಿ ಎತ್ತಿ ಹಿಡಿಯಿತು. ಫೈನಲ್‌ ಪಂದ್ಯದಲ್ಲಿ ಗೆದ್ದ ಭಾರತ ತಂಡಕ್ಕೆ, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್‌ (Naveen Patnaik) 1 ಕೋಟಿ ರೂ. ನಗದು ಬಹುಮಾನ ಘೋಷಿಸಿದ್ದರು. ಈ ಮೊತ್ತದಲ್ಲಿ 20 ಲಕ್ಷ ರೂ.ಗಳನ್ನ ದೇಣಿಗೆ ನೀಡಲು ಫುಟ್ಬಾಲ್‌ ತಂಡ ಸಾಮೂಹಿಕ ನಿರ್ಧಾರ ಮಾಡಿತು.  

    ಗೆಲುವಿಗೆ ಬಹುಮಾನವಾಗಿ ನಗದು ಬೋನಸ್ ನೀಡುತ್ತಿರುವುದಕ್ಕೆ ಒಡಿಶಾ ಸರ್ಕಾರಕ್ಕೆ ನಾವು ಕೃತಜ್ಞರಾಗಿರುತ್ತೇವೆ. ಡ್ರೆಸ್ಸಿಂಗ್ ರೂಮ್‌ನಲ್ಲಿ ನಾವೆಲ್ಲರೂ ತ್ವರಿತ ಮತ್ತು ಸಾಮೂಹಿಕ ನಿರ್ಧಾರವೊಂದಕ್ಕೆ ಬಂದಿದ್ದೇವೆ. ಈ ಮೊತ್ತದಲ್ಲಿ 20 ಲಕ್ಷ ರೂ.ಗಳನ್ನ ದೇಣಿಗೆ ನೀಡಲು ನಿರ್ಧರಿಸಿದ್ದೇವೆ. ಈ ತಿಂಗಳ ಆರಂಭದಲ್ಲಿ ರಾಜ್ಯದಲ್ಲಿ ಸಂಭವಿಸಿದ ಭೀಕರ ರೈಲು ದುರಂತದಿಂದ ಸಂತ್ರಸ್ತರಾದ ಕುಟುಂಬಗಳಿಗೆ ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳಿಗೆ ಈ ಹಣವನ್ನು ನೀಡಲಾಗುತ್ತದೆ ಎಂದು ಭಾರತೀಯ ಫುಟ್ಬಾಲ್ ತಂಡ ಟ್ವೀಟ್ ಟ್ವೀಟ್‌ ಮೂಲಕ ತಿಳಿಸಿದೆ. ಇದನ್ನೂ ಓದಿ: ಒಡಿಶಾ ರೈಲು ಅಪಘಾತದ ಬಳಿಕ ಎಚ್ಚೆತ್ತ ರೈಲ್ವೆ ಇಲಾಖೆ- ಟ್ರ್ಯಾಕ್‌ಗಳ ಡೀಪ್ ಸ್ಕ್ರೀನಿಂಗ್‌ಗೆ ನಿರ್ಧಾರ

    ಅದೇ ರೀತಿ ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್‌ ಕೂಡಾ, ರೈಲು ದುರಂತದಿಂದ ಸಾವನ್ನಪ್ಪಿದವರ ಕುಟುಂಬಸ್ಥರ ನೆರವಿಗೆ ಬಂದಿದ್ದಾರೆ. ದುರಂತ ಅಪಘಾತದಲ್ಲಿ ಜೀವ ಕಳೆದುಕೊಂಡವರ ಮಕ್ಕಳ ಶಿಕ್ಷಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

    ಇದೇ ತಿಂಗಳ ಜೂನ್‌ 2ರ ರಾತ್ರಿ ಓಡಿಶಾದ ಬಾಲಸೋರ್‌ನಲ್ಲಿ ಭೀಕರ ರೈಲು ದುರಂತ ನಡೆದಿತ್ತು.

  • ಒಡಿಶಾ ದುರಂತ – AI ತಂತ್ರಜ್ಞಾನ ಬಳಸಿ ಛಿದ್ರಗೊಂಡ ಮೃತದೇಹಗಳನ್ನು ರೈಲ್ವೇ ಪತ್ತೆ ಹಚ್ಚಿದ್ದು ಹೇಗೆ?

    ಒಡಿಶಾ ದುರಂತ – AI ತಂತ್ರಜ್ಞಾನ ಬಳಸಿ ಛಿದ್ರಗೊಂಡ ಮೃತದೇಹಗಳನ್ನು ರೈಲ್ವೇ ಪತ್ತೆ ಹಚ್ಚಿದ್ದು ಹೇಗೆ?

    ನವದೆಹಲಿ: ಯಾವುದೇ ದುರಂತ ನಡೆದಾಗ ಮೃತಪಟ್ಟವರ ಗುರುತನ್ನು ಪತ್ತೆ ಹಚ್ಚುವುದು ಸವಾಲಿನ ಕೆಲಸ. ಅಂತಹದರಲ್ಲಿ ಒಡಿಶಾ ದುರಂತದಲ್ಲಿ (Odisha Train Crash) ಮೃತಪಟ್ಟ ವ್ಯಕ್ತಿಗಳ ಗುರುತನ್ನು ಪತ್ತೆ ಹಚ್ಚಲು ರೈಲ್ವೇ ಭಾರೀ ಸಾಹಸ ಮಾಡಿದೆ. ಕೇಂದ್ರದ ವಿವಿಧ ಸಂಸ್ಥೆಗಳ ನೆರವಿನಿಂದ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ (Artificial intelligence) ತಂತ್ರಜ್ಞಾನದ ಸಹಾಯ ಪಡೆದು ರೈಲ್ವೇ ಸಚಿವಾಲಯ ಮೃತರ ದೇಹಗಳನ್ನು ಪತ್ತೆ ಹಚ್ಚಿ ಕುಟುಂಬಸ್ಥರಿಗೆ ಹಸ್ತಾಂತರಿಸಿದೆ.

    ಒಡಿಶಾ ರೈಲು ದುರಂತದಲ್ಲಿ ಒಟ್ಟು 275 ಮಂದಿ ಮೃತಪಟ್ಟಿದ್ದರು. ಈ ಪೈಕಿ ಕೆಲವರ ದೇಹ ಗುರುತು ಸಿಗದಷ್ಟು ಛಿದ್ರವಾಗಿತ್ತು. ಈ ಸಮಸ್ಯೆ ಪರಿಹಾರಕ್ಕೆ ರೈಲ್ವೇ ಟೆಲಿಕಾಂ ಸಚಿವಾಲಯ, ಸೈಬರ್‌ ಸೆಲ್‌, ಸರ್ಕಾರಿ ಅಧಿಕಾರಿಗಳು, ಆಧಾರ್‌ ಅಧಿಕಾರಿಗಳ ಜೊತೆ ಚರ್ಚಿಸಿ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ನೆರವಿನ ಮೊರೆ ಹೋಯಿತು.  ಇದನ್ನೂ ಓದಿ: 1 ಫೋನ್‌ ಕರೆ.. 9 ಅಧಿಕಾರಿಗಳು..; ಒಡಿಶಾ ರೈಲು ದುರಂತದ ಬಳಿಕ ಏನೇನಾಯ್ತು? – ಇಲ್ಲಿದೆ ಪಿನ್‌ ಟು ಪಿನ್‌ ಮಾಹಿತಿ

    ಮೊದಲು ಆಧಾರ್‌ ತಜ್ಞರು (Aadhar Experts) ಮೃತ ವ್ಯಕ್ತಿಗಳ ಎಡಗೈಯಿಂದ ಬೆರಳಚ್ಚನ್ನು ಪಡೆದರು. ಫಿಂಗರ್‌ಪ್ರಿಂಟ್‌ನಿಂದಾಗಿ 65 ಮಂದಿಯ ದೇಹದ ಗುರುತು ಪತ್ತೆಯಾಯಿತು.

    ಮೃತದೇಹಗಳ ಪೈಕಿ ಕೆಲವರ ಕೈಗಳ ಚರ್ಮವೇ ಕಿತ್ತು ಹೋಗಿತ್ತು. ಹೀಗಾಗಿ ಫಿಂಗರ್‌ ಪ್ರಿಂಟ್‌ನಿಂದ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಈ ಕಾರಣಕ್ಕೆ ಸಂಚಾರ್‌ ಸಾಥಿ ತಂತ್ರಜ್ಞಾನ ಬಳಸಿ ಪ್ರಯಾಣಿಕರ ಗುರುತು ಪತ್ತೆ ಹಚ್ಚಲು ಅಧಿಕಾರಿಗಳು ಮುಂದಾದರು.

    ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್‌ (Ashwini Vaishnaw) ಅವರು ಕೆಲ ದಿನಗಳ ಹಿಂದೆ ಈ ಸಂಚಾರ್‌ ಸಾಥಿ (Sanchar Saathi) ವ್ಯವಸ್ಥೆಯನ್ನು ಲೋಕಾರ್ಪಣೆ ಮಾಡಿದ್ದರು. ಫೋನ್‌ ನಂಬರ್‌ (Phone Number) ಮೂಲಕ ಪ್ರಯಾಣಿಕರ ಮಾಹಿತಿಯನ್ನು ಸಂಚಾರ್‌ ಸಾಥಿ ಟೂಲ್‌ ಪತ್ತೆ ಹಚ್ಚುತ್ತದೆ.

    ಈ ಟೂಲ್‌ ಸಹಾಯದಿಂದ ಸಂತ್ರಸ್ತರ ಮುಖವನ್ನು ಸ್ಕ್ಯಾನ್‌ ಮಾಡಲಾಯಿತು. ಬಂದ ಫೋಟೋವನ್ನು  ಆಧಾರ್‌ ಕಾರ್ಡ್‌ ಭಾವಚಿತ್ರ ತಾಳೆ ಹಾಕಿ ಹೆಚ್ಚು ಸಾಮ್ಯತೆ ಕಂಡು ಬಂದ ಬಳಿಕ ಆಧಾರ್‌ ಲಿಂಕ್‌ ಮೊಬೈಲ್‌ ನಂಬರ್‌ ಪಡೆದು ವಿವರವನ್ನು ಪತ್ತೆ ಹಚ್ಚಲಾಯಿತು.

    ಹೀಗಿದ್ದರೂ ಇನ್ನೂ ಕೆಲವು ಮೃತದೇಹಗಳನ್ನು ಪತ್ತೆ ಮಾಡಲು ಸಾಧ್ಯವಾಗಲಿಲ್ಲ. ಈ ಕಾರಣಕ್ಕೆ ಅಪಘಾತ ನಡೆಯುವ ಕೆಲ ಕ್ಷಣಗಳ ಮೊದಲು ಸಕ್ರಿಯವಾಗಿ ನಂತರ ನಿಷ್ಕ್ರಿಯವಾದ ಫೋನ್‌ ನಂಬರ್‌ಗಳನ್ನು ಪತ್ತೆ ಹಚ್ಚಿ ಮೃತರ ಗುರುತುಗಳನ್ನು ಪತ್ತೆ ಮಾಡಲಾಯಿತು.

  • ಒಡಿಶಾ ರೈಲು ಅಪಘಾತದಲ್ಲಿ ಬದುಕುಳಿದ ಯಾತ್ರಿಕ ಹೃದಯಾಘಾತದಿಂದ ಸಾವು

    ಒಡಿಶಾ ರೈಲು ಅಪಘಾತದಲ್ಲಿ ಬದುಕುಳಿದ ಯಾತ್ರಿಕ ಹೃದಯಾಘಾತದಿಂದ ಸಾವು

    ಚಿಕ್ಕಮಗಳೂರು: ಒಡಿಶಾ ತ್ರಿವಳಿ ರೈಲು ದುರಂತದಲ್ಲಿ (Odisha Train Tragedy) ಸುಮೇದ್ ಸಿಖರ್ಜಿ ಯಾತ್ರೆಗೆಂದು ಹೊರಟಿದ್ದ 110 ಯಾತ್ರಿಕರು ಬದುಕುಳಿದಿದ್ದು, ಈ ಪೈಕಿ ಒಬ್ಬ ಯಾತ್ರಿಕ (Pilgrim) ಹೃದಯಾಘಾತದಿಂದ (Heart Attack) ಸಾವನ್ನಪ್ಪಿದ್ದಾರೆ.

    ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಕಳಸ (Kalasa) ತಾಲೂಕಿನ ಕಳಕೋಡು ನಿವಾಸಿ ಧರ್ಮಪಾಲಯ್ಯ (72) ಮೃತ ದುರ್ದೈವಿ. ಇವರು ಸೇರಿದಂತೆ 110 ಯಾತ್ರಿಕರು ಸುಮೇದ್ ಸಿಖರ್ಜಿ ಯಾತ್ರೆಗೆಂದು ಬೆಂಗಳೂರಿನಿಂದ ರೈಲಿನಲ್ಲಿ ಹೊರಟ್ಟಿದ್ದರು. ಒಡಿಶಾದಲ್ಲಿ ತ್ರಿವಳಿ ರೈಲು ದುರಂತ ನಡೆದ ಸಂದರ್ಭದಲ್ಲಿ ಯಾತ್ರೆಗೆ ತೆರಳುತ್ತಿದ್ದ ಈ 110 ಕನ್ನಡಿಗರೂ ಬದುಕುಳಿದಿದ್ದರು. ಇದನ್ನೂ ಓದಿ: ಇಲಿ ಕೊಲ್ಲಲೆಂದು ವಿಷ ಸವರಿ ಇಟ್ಟ ಹಣ್ಣು ತಿಂದು ಯುವತಿ ಸಾವು!

    ಬಳಿಕ ಸುಮೇದ್ ಸಿಖರ್ಜಿ ಯಾತ್ರೆಗೆ ತೆರಳಿದ ಅವರು, ಯಾತ್ರೆ ಮುಗಿಸಿ ಹಿಂದಿರುಗುವಾಗ ಉತ್ತರ ಪ್ರದೇಶದ (Uttar Pradesh) ಮಿರ್ಜಾಪುರ (Mirzapur) ರೈಲ್ವೇ ಸ್ಟೇಷನ್‌ನಲ್ಲಿ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಶವ ಪರೀಕ್ಷೆಗಾಗಿ ಅವರ ಸಂಬಂಧಿಕರು ಮಿರ್ಜಾಪುರ ಸರ್ಕಾರಿ ಆಸ್ಪತ್ರೆ ಬಳಿ ಕಾಯುತ್ತಿದ್ದಾರೆ. ಇದನ್ನೂ ಓದಿ: ಪ್ರೇಯಸಿಯನ್ನು ಕೊಂದು ಟ್ಯಾಂಕ್‌ನಲ್ಲಿ ಬಚ್ಚಿಟ್ಟ ಭೂಪ ಅಂಧರ್

  • 1 ಫೋನ್‌ ಕರೆ.. 9 ಅಧಿಕಾರಿಗಳು..; ಒಡಿಶಾ ರೈಲು ದುರಂತದ ಬಳಿಕ ಏನೇನಾಯ್ತು? – ಇಲ್ಲಿದೆ ಪಿನ್‌ ಟು ಪಿನ್‌ ಮಾಹಿತಿ

    1 ಫೋನ್‌ ಕರೆ.. 9 ಅಧಿಕಾರಿಗಳು..; ಒಡಿಶಾ ರೈಲು ದುರಂತದ ಬಳಿಕ ಏನೇನಾಯ್ತು? – ಇಲ್ಲಿದೆ ಪಿನ್‌ ಟು ಪಿನ್‌ ಮಾಹಿತಿ

    ಭುವನೇಶ್ವರ: ದೇಶದ ರೈಲು ದುರಂತದ ಇತಿಹಾಸದಲ್ಲೇ ಒಡಿಶಾ ರೈಲು ಅಪಘಾತ (Odisha Train Accident) ಒಂದು ಕಪ್ಪು ಚುಕ್ಕೆ. ಮೂರು ರೈಲುಗಳು ಅಪಘಾತಕ್ಕೀಡಾಗಿದ್ದು, ಅಪಾರ ಸಾವು-ನೋವಿನ ದೃಶ್ಯಗಳು ಈಗಲೂ ಬೆಚ್ಚಿಬೀಳುಸುತ್ತವೆ. ಇಂತಹ ಭೀಕರ ಅಪಘಾತವಾದ ಬಳಿಕ ಏನೇನಾಯಿತು ಎಂಬ ವಿವರವನ್ನು ಇಲ್ಲಿ ಎಳೆಎಳೆಯಾಗಿ ಬಿಚ್ಚಿಡಲಾಗಿದೆ.

    ಸಿಎಸ್‌ಗೆ ಮೊದಲ ಫೋನ್‌ ಕರೆ
    ಅಂದು ಜೂನ್ 2 ರ ಸಂಜೆ 7 ರಿಂದ 7:10 ರ ಸಂದರ್ಭ. ಒಡಿಶಾ ಮುಖ್ಯ ಕಾರ್ಯದರ್ಶಿ ಪ್ರದೀಪ್ ಜೆನಾ ಅವರು ಬಾಲಸೋರ್ ಜಿಲ್ಲಾಧಿಕಾರಿ ದತ್ತಾತ್ರೇಯ ಪಿ ಶಿಂಧೆ ಅವರಿಂದ ಕರೆ ಸ್ವೀಕರಿಸಿದರು. “ಸರ್, ಒಂದು ರೈಲು ಹಳಿತಪ್ಪಿದೆ ಮತ್ತು ನಾನು ಸ್ಥಳಕ್ಕೆ ಹೋಗುತ್ತಿದ್ದೇನೆ” ಎಂದು ಶಿಂಧೆ ಹೇಳಿದರು. ಏನಾದರೂ ಅಗತ್ಯವಿದೆಯೇ ಎಂದು ಕೇಳಿದಾಗ ಜಿಲ್ಲಾಧಿಕಾರಿ ಸರಿಯಾಗಿ ಪ್ರತಿಕ್ರಿಯಿಸಲಿಲ್ಲ. ಸರಕು ರೈಲು ಹಳಿತಪ್ಪಿದರೂ ಸಹ, ODRAF ಮತ್ತು ಅಗ್ನಿಶಾಮಕ ಸೇವೆಗಳ ತಂಡಗಳ ಅಗತ್ಯವಿರುತ್ತದೆ. ಲೂಪ್‌ ಲೈನ್‌ಗೆ ತಪ್ಪಾಗಿ ಪ್ರವೇಶಿಸಿದ ಕೋರಮಂಡಲ್‌ ಎಕ್ಸ್‌ಪ್ರೆಸ್‌ ಹಳಿತಪ್ಪಿ ಸ್ಟ್ಯಾಟಿಕ್‌ ಗೂಡ್ಸ್‌ ರೈಲಿಗೆ ಡಿಕ್ಕಿ ಹೊಡೆದಿದೆ. ಅಲ್ಲದೇ ಹೌರಾ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ನ ಕೊನೆಯ ಮೂರು ಕೋಚ್‌ಗಳಿಗೂ ಡಿಕ್ಕಿ ಹೊಡೆದಿತ್ತು. ಅಪಘಾತದ ಸ್ಥಳಕ್ಕೆ ಮುಖ್ಯ ಕಾರ್ಯದರ್ಶಿ ಅವರು ಜಿಲ್ಲೆಯ ಎರಡು ತಂಡಗಳನ್ನು ಸಜ್ಜುಗೊಳಿಸಿದರು. ಇದನ್ನೂ ಓದಿ: ಒಡಿಶಾ ರೈಲು ದುರಂತ – ಪರಿಹಾರದ ಹಣಕ್ಕಾಗಿ ಮೃತ ವ್ಯಕ್ತಿಯನ್ನು ಪತಿ ಎಂದ ಮಹಿಳೆ

    ಇದಾದ ಕೆಲವೇ ನಿಮಿಷಗಳಲ್ಲಿ ಬಾಲಸೋರ್ ಜಿಲ್ಲಾಧಿಕಾರಿಯಿಂದ ಮುಖ್ಯ ಕಾರ್ಯದರ್ಶಿಗೆ ಎರಡನೇ ಕರೆ ಬಂತು. “ಸರ್, ಇದು ರೈಲು ಅಪಘಾತ” ಎಂದರು. ಮರುನಿಮಿಷದಲ್ಲಿ ಅವರಿಗೆ ಮುಖ್ಯಮಂತ್ರಿ ಕಚೇರಿಯಿಂದ ಹಠಾತ್ ಕರೆ ಬಂತು. ಅಪಘಾತದ ವಿಚಾರ ಪ್ರಸ್ತಾಪಿಸಿದರು. “ಅಪಘಾತದ ಬಗ್ಗೆ ಮಾಹಿತಿ ಬಂದಿದೆ. ನಾನು ಹೇಳಿದ್ದೇನೆ. ಸ್ಥಳಕ್ಕೆ ODRAF ಮತ್ತು ಅಗ್ನಿಶಾಮಕ ಸೇವೆಗಳ ತಂಡಗಳನ್ನು ನಿಯೋಜಿಸಿದ್ದೇನೆ. ಡಿಸಿ ಅಲ್ಲಿಗೆ ತಲುಪಿದಾಗ, ಇನ್ನೂ ಏನು ಅಗತ್ಯವಿದೆ ಎಂದು ಅವರಿಗೆ ತಿಳಿಯುತ್ತೆ. ಯಾವುದೇ ಪರಿಸ್ಥಿತಿ ಇದ್ದರೂ, ನಿಭಾಯಿಸಲು ರಾಜ್ಯ ಮಟ್ಟದಲ್ಲಿ ತಯಾರಿ ನಡೆಸುತ್ತಿದ್ದೇನೆ” ಎಂದು ಸಿಎಸ್‌ ಪ್ರತಿಕ್ರಿಯಿಸಿದರು. ನಂತರ ಟಿವಿ ಆನ್‌ ಮಾಡಿ ಸುದ್ದಿ ವಾಹಿನಿಯಲ್ಲಿ ರಾತ್ರಿ 7:15ರ ಸುಮಾರಿಗೆ ಮೊದಲ ದೃಶ್ಯಾವಳಿಗಳನ್ನು ನೋಡಿದಾಗ, ಮೇಜರ್ ಇದೆ ಎಂಬುದು ನಮಗೆ ಸ್ಪಷ್ಟವಾಯಿತು ಎಂದು ಸಿಎಸ್‌ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: PublicTV Explainer: ರಕ್ಷಾ ‘ಕವಚ’ ಇದ್ದಿದ್ರೆ ಒಡಿಶಾ ರೈಲು ದುರಂತ ತಪ್ಪಿಸಬಹುದಿತ್ತೆ?

    ದುರಂತದ ತೀವ್ರತೆ ಮತ್ತು ಪ್ರಮಾಣವನ್ನು ಅರಿತ ಕೂಡಲೇ ರಾಜ್ಯ ಸರ್ಕಾರದ ಒಂಬತ್ತು ಹಿರಿಯ ಅಧಿಕಾರಿಗಳನ್ನು 45 ನಿಮಿಷಗಳಲ್ಲಿ ಬಾಲಸೋರ್‌ಗೆ ನಿಯೋಜಿಸಲಾಗಿದೆ. ಅವರಲ್ಲಿ ಎಸಿಎಸ್ ಸತ್ಯಬ್ರತ್ ಸಾಹು, ಕೈಗಾರಿಕಾ ಕಾರ್ಯದರ್ಶಿ ಹೇಮಂಡ್ ಶರ್ಮಾ, ಡಿಜಿ ಅಗ್ನಿಶಾಮಕ ಸೇವೆ ಸುಧಾಂಶು ಸಾರಂಗಿ, ಸಾರಿಗೆ ಆಯುಕ್ತ ಅಮಿತಾಭ್ ಠಾಕೂರ್ ಮತ್ತು ಡಿಜಿ ಜಿಆರ್‌ಪಿ ಇದ್ದರು. ಇದನ್ನೂ ಓದಿ: ಬಾಲಸೋರ್ ರೈಲು ಅಪಘಾತ – ತನಿಖೆ ಆರಂಭಿಸಿದ ಸಿಬಿಐ

    ಕಂಟ್ರೋಲ್ ರೂಂನಲ್ಲಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಮುಖ್ಯ ಕಾರ್ಯದರ್ಶಿ ಮತ್ತು ಇತರ ಅಧಿಕಾರಿಗಳ ತುರ್ತು ಸಭೆ ನಡೆಸಿದರು. “ಏನು ಬೇಕಾದರೂ ಮಾಡಿ. ಹಣದ ಬಗ್ಗೆ ಚಿಂತಿಸಬೇಡಿ. ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಹಣ ಡ್ರಾ ಮಾಡಿ” ಎಂದು ಸೂಚಿಸಿದರು. ಗಾಯಾಳುಗಳಿಗೆ ಚಿಕಿತ್ಸೆ, ಸಂತ್ರಸ್ತರಿಗೆ ಆಹಾರ ಎಲ್ಲವನ್ನೂ ಸೂಕ್ತ ರೀತಿಯಲ್ಲಿ ನಿರ್ವಹಿಸಿ ಎಂದು ಜೀವಗಳನ್ನು ಉಳಿಸುವ ಕುರಿತು ಸಭೆಯಲ್ಲಿ ಸಿಎಂ ಒತ್ತಿ ಹೇಳಿದರು.

    ಇತ್ತ ಒಡಿಶಾ ಆರೋಗ್ಯ ಕಾರ್ಯದರ್ಶಿ ಶಾಲಿನಿ ಪಂಡಿತ್, ಜಿಲ್ಲೆಗೆ ಅಂಬುಲೆನ್ಸ್‌ಗಳನ್ನು ಸಜ್ಜುಗೊಳಿಸಿದರು. ರೋಗಿಗಳನ್ನು ಸ್ವೀಕರಿಸಲು ಸಿದ್ಧರಾಗಿರುವ ಬಾಲಾಸೋರ್ ಬಳಿಯ ಆಸ್ಪತ್ರೆಗಳನ್ನು ಎಚ್ಚರಿಸಿದರು. ಮೂರು ಗಂಟೆಗಳಲ್ಲಿ, ಅವರು 250 ಅಂಬುಲೆನ್ಸ್‌ಗಳು, SCB ವೈದ್ಯಕೀಯ ಕಾಲೇಜಿನಿಂದ 50 ವೈದ್ಯರು, ಬರಿಪಾದ ವೈದ್ಯಕೀಯ ಕಾಲೇಜಿನಿಂದ 30-40 ವೈದ್ಯರು ಮತ್ತು ಕೇಂದ್ರಪಾರಾ ಮತ್ತು ನೆರೆಯ ಜಾಜ್‌ಪುರದಿಂದ ಕೆಲವು ವೈದ್ಯರನ್ನು ಸಜ್ಜುಗೊಳಿಸಿದರು. ಬಾಲಾಸೋರ್‌ನಲ್ಲಿರುವ ಗ್ರೌಂಡ್ ಝೀರೋಗೆ “ಸಾಧ್ಯವಾದಷ್ಟು ಅಂಬುಲೆನ್ಸ್‌ಗಳನ್ನು ಕಳುಹಿಸಲು” ನೆರೆಯ ಭದ್ರಕ್ ಮತ್ತು ಜಾಜ್‌ಪುರದ ಡಿಸಿಗಳಿಗೆ ಸೂಚಿಸಿದರು. ಇದನ್ನೂ ಓದಿ: ಸತ್ತಿದ್ದಾನೆಂದು ಹೆಣಗಳ ರಾಶಿಯಲ್ಲಿ ಇಟ್ಟಿದ್ದ ಮಗನನ್ನು ಜೀವಂತವಾಗಿ ಹೊರ ತೆಗೆದ ತಂದೆ!

    ಅಂಬುಲೆನ್ಸ್‌ ಜೊತೆಗೆ ಸ್ಥಳಕ್ಕೆ ಬಸ್‌ ವ್ಯವಸ್ಥೆ ಕಲ್ಪಿಸಲಾಯಿತು. ಸಿಎಸ್‌ ಜೆನಾ ಅವರು ಸಾರಿಗೆ ಆಯುಕ್ತ ಅಮಿತಾಬ್ ಠಾಕೂರ್ ಅವರೊಂದಿಗೆ ಮಾತನಾಡಿದರು. ಪ್ರತಿಯಾಗಿ, ಬಾಲಸೋರ್, ಭದ್ರಕ್, ಜಾಜ್‌ಪುರ್ ಮತ್ತು ಬರಿಪದ ಜಿಲ್ಲೆಗಳ ಆರ್‌ಟಿಒಗಳಿಗೆ “ಕನಿಷ್ಠ 40 ಬಸ್‌ಗಳನ್ನು ಕಳುಹಿಸಲು” ಕೇಳಿದರು. “ರೈಲು ಅಪಘಾತದ ಎರಡು ಗಂಟೆಗಳ ಅವಧಿಯಲ್ಲಿ 40 ಅಂಬುಲೆನ್ಸ್‌ಗಳು, 40 ಬಸ್‌ಗಳು ಮತ್ತು 80 ವೈದ್ಯರು ಜಿಲ್ಲೆಯನ್ನು ತಲುಪಿದ್ದಾರೆ” ಎಂದು ಜೆನಾ ಹೇಳಿದರು.

    9 ಅಧಿಕಾರಿಗಳ ನಿರಂತರ ಕೆಲಸ
    ಅಗ್ನಿಶಾಮಕ ಸೇವೆಗಳ ಡಿಜಿ ಸುಧಾಂಶು ಸಾರಂಗಿ ಅವರು ಭುವನೇಶ್ವರದಿಂದ ಮೊದಲು ತಲುಪಿದರು. ನಂತರ ಎಸಿಎಸ್ ಸತ್ಯಬ್ರತ್ ಸಾಹು ಮತ್ತು ಕೈಗಾರಿಕಾ ಪ್ರಧಾನ ಕಾರ್ಯದರ್ಶಿ ಹೇಮಂತ್ ಶರ್ಮಾ ಹೋದರು. ಆ ಹೊತ್ತಿಗೆ, ಅಗ್ನಿಶಾಮಕ ಇಲಾಖೆಯ 15 ತಂಡಗಳು ಮತ್ತು ಎರಡು ODRAF ತಂಡಗಳು ಸ್ಥಳಕ್ಕೆ ತಲುಪಿದ್ದವು. ಮಧ್ಯರಾತ್ರಿಯ ವೇಳೆಗೆ ರಕ್ಷಣಾ ಸಿಬ್ಬಂದಿಗಳ ಸಂಖ್ಯೆ 400 ಆಗಿತ್ತು. ದುರಂತ ಸ್ಥಳದಲ್ಲಿ ಸತ್ಯಬ್ರತ್ ಸಾಹು, ಹೇಮಂತ್ ಶರ್ಮಾ, ಬಲವಂತ್ ಸಿಂಗ್, ಅರವಿಂದ್ ಅಗರ್ವಾಲ್, ಭೂಪಿಂದರ್ ಸಿಂಗ್ ಪುನಿಯಾ, ಸುಧಾಂಶು ಸಾರಂಗಿ, ದಯಾಳ್ ಗಂಗ್ವಾರ್, ಅಮಿತಾಭ್ ಠಾಕೂರ್, ಹಿಮಾಂಶು ಕುಮಾರ್ ಲಾಲ್ ಒಂಬತ್ತು ಅಧಿಕಾರಿಗಳು ಹಾಗೂ ಬಾಲಸೋರ್ ಜಿಲ್ಲಾಧಿಕಾರಿ ಮತ್ತು ಎಸ್ಪಿ ಜೊತೆಯಲ್ಲಿ ನಿರಂತರವಾಗಿ ಕೆಲಸ ಮಾಡಿದರು. ಇದನ್ನೂ ಓದಿ: ಒಡಿಶಾ ರೈಲು ದುರಂತವಾಗಿ 4 ದಿನ ಕಳೆದರೂ 101 ಮೃತದೇಹಗಳ ಗುರುತು ಇನ್ನೂ ಪತ್ತೆಯಾಗಿಲ್ಲ

    3 ಹಂತಗಳಲ್ಲಿ ರಕ್ಷಣಾ ಕಾರ್ಯಾಚರಣೆ
    ತುರ್ತು ಪರಿಸ್ಥಿತಿಯಲ್ಲಿ ಯಾರು ಪರಿಹಾರದ ಉಸ್ತುವಾರಿ ವಹಿಸಬೇಕು, ಗಾಯಗೊಂಡವರನ್ನು ಯಾರು ಸ್ವೀಕರಿಸಬೇಕು, ಮೃತದೇಹಗಳನ್ನು ಯಾರು ನಿರ್ವಹಿಸಬೇಕು ಎಂದು ಅಧಿಕಾರಿಗಳು ಒಬ್ಬಬ್ಬರಾಗಿ ಒಂದೊಂದು ಜವಾಬ್ದಾರಿ ವಹಿಸಿಕೊಂಡರು. ಮೊದಲ ಹಂತದಲ್ಲಿ, ಇನ್ನೂ ಜೀವಂತವಾಗಿರುವ ಪ್ರಯಾಣಿಕರನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸಬೇಕು. ನಂತರ ಟ್ರ್ಯಾಕ್‌ನಲ್ಲಿ ಮೃತದೇಹಗಳನ್ನು ಪಕ್ಕಕ್ಕೆ ಇರಿಸುವ ಕೆಲಸ ಮಾಡಿದರು. ಮೊದಲ 45 ನಿಮಿಷಗಳ ಕಾಲ, ಪ್ರಾಥಮಿಕವಾಗಿ ಶಿಂಧೆ ನೇತೃತ್ವದ ಸ್ಥಳೀಯ ಆಡಳಿತ, ಎಸ್ಪಿ ಮತ್ತು ಬಹನಾಗಾ ಜನರು ಪರಿಸ್ಥಿತಿಯನ್ನು ನಿಭಾಯಿಸಿದರು. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವುದು, ಅಧಿಕಾರಿಗಳಿಗೆ ಅಗತ್ಯ ಸಹಾಯ ಒದಗಿಸುವುದು ಮತ್ತು ರಕ್ತದಾನ ಮಾಡುವ ಮೂಲಕ ಸ್ಥಳೀಯರು ಸಾಥ್‌ ನೀಡಿದರು.

    ಅಷ್ಟೊತ್ತಿಗಾಗಲೇ ಕತ್ತಲಾವರಿಸಿತ್ತು. ಕತ್ತಲಿನಲ್ಲಿ ರಕ್ಷಣೆ ಕಾರ್ಯಾಚರಣೆ ಮಾಡುವುದು ಕಷ್ಟ ಎಂಬುದು ಅಧಿಕಾರಿಗಳಿಗೆ ಅರಿವಾಗಿದ್ದರಿಂದ ಮುಂಚೆಯೇ ಒಂದಷ್ಟು ಸಿದ್ಧತೆ ಮಾಡಿಕೊಂಡಿದ್ದರು. ಇಡೀ ಪ್ರದೇಶವನ್ನು ಬೆಳಗಿಸುವುದು ಮೊದಲ ಕೆಲಸವಾಗಿತ್ತು. ನಾವು 53 ಲೈಟ್ ಟವರ್‌ಗಳನ್ನು ಮತ್ತು ಜನರೇಟರ್‌ಗಳನ್ನು ಸ್ಥಾಪಿಸಿದ್ದರು. ಇದರಿಂದ ರಕ್ಷಣಾ ಕಾರ್ಯಾಚರಣೆಗಳು ನಡೆಯಿತು. ಎರಡನೇ ಕೆಲಸ ಗಾಯಾಳುಗಳನ್ನು ಸ್ಥಳಾಂತರಿಸುವುದಾಗಿತ್ತು. ಸ್ಥಳೀಯ ಸಾರ್ವಜನಿಕರು ಮತ್ತು ಅಧಿಕಾರಿಗಳು ಒಟ್ಟಿಗೆ ಕೆಲಸ ಮಾಡಿದ್ದರಿಂದ ಗಾಯಾಳುಗಳ ಸ್ಥಳಾಂತರವು ತಕ್ಷಣವೇ ಪ್ರಾರಂಭವಾಯಿತು. ಹೊಸ ತಂಡಗಳು ಆಗಮಿಸುತ್ತಿದ್ದಂತೆ ಅಧಿಕಾರಿಗಳಿಗೆ ಮತ್ತಷ್ಟು ಬಲ ಹೆಚ್ಚಾದಂತಾಯಿತು. ಹೀಗೆ ನಿರಂತರ ಕಾರ್ಯಾಚರಣೆ ನಡೆಸಿ ಮಧ್ಯರಾತ್ರಿ 12 ಗಂಟೆ ಹೊತ್ತಿಗೆ ಬದುಕುಳಿದು ಗಾಯಗೊಂಡಿದ್ದ ಎಲ್ಲರನ್ನೂ ಹೊರತೆಗೆದು ಆಸ್ಪತ್ರೆಗೆ ಸಾಗಿಸುವ ಕೆಲಸವಾಗಿತ್ತು. ಸರಿಸುಮಾರು 1,200 ಗಾಯಾಳುಗಳನ್ನು ರಕ್ಷಿಸಲಾಯಿತು. ಗಂಭೀರವಾಗಿ ಗಾಯಗೊಂಡವರನ್ನು ಅಂಬುಲೆನ್ಸ್‌ ಮೂಲಕ ಹಾಗೂ ಸಣ್ಣಪುಟ್ಟ ಗಾಯಗಳಾಗಿದ್ದವರನ್ನು ಬಸ್‌ಗಳ ಮೂಲಕ ಆಸ್ಪತ್ರೆಗೆ ಸಾಗಿಸುವ ಕೆಲಸವಾಯಿತು. ಹೀಗೆ ಮೂರು ಹಂತಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯಿತು. ರಕ್ಷಣಾ ಕಾರ್ಯದಲ್ಲಿ ಹಂತಹಂತವಾಗಿ ಎನ್‌ಡಿಆರ್‌ಎಫ್‌, ಸೈನ್ಯದವರು ರಕ್ಷಣಾ ತಂಡಗಳನ್ನು ಸೇರಿ ಸಾಥ್‌ ಕೊಟ್ಟರು. ಇದನ್ನೂ ಓದಿ: ಒಡಿಶಾ ರೈಲು ದುರಂತ ವಿಧ್ವಂಸಕ ಕೃತ್ಯವೇ? – ಪ್ರಾಥಮಿಕ ತನಿಖೆಯ ಬೆನ್ನಲ್ಲೇ ಎದ್ದಿವೆ ಹಲವು ಪ್ರಶ್ನೆಗಳು

    ತಾಪಮಾನವು 39 ಮತ್ತು 40 ಡಿಗ್ರಿಗಳಿಗೆ ಏರುವುದರೊಂದಿಗೆ ಸುಡುವ ಬೇಸಿಗೆಯಲ್ಲಿ ಮೃತದೇಹಗಳನ್ನು ಸಂರಕ್ಷಿಸುವುದು ಮತ್ತೊಂದು ದೊಡ್ಡ ಸವಾಲಾಗಿತ್ತು. ಅಪಘಾತದ ಮರುದಿನವೂ ರಕ್ಷಣಾ ಕಾರ್ಯಾಚರಣೆ ಮುಂದುವರಿದಿತ್ತು. ನಂತರ ಸ್ಥಳಕ್ಕೆ ವಿಐಪಿಗಳ ಭೇಟಿ, ಪರಿಶೀಲನೆ ಕಾರ್ಯವೂ ನಡೆಯಿತು. ಪ್ರಧಾನಿ ಮೋದಿ ಜೂನ್ 3 ರಂದು ಮಧ್ಯಾಹ್ನ ದುರಂತದ ಸ್ಥಳಕ್ಕೆ ತಲುಪಿದಾಗ, ಅವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮೈದಾನದಲ್ಲಿದ್ದ ಅಧಿಕಾರಿಗಳನ್ನು ಕೇಳಿದರು. ಅದೇ ದಿನ ಬೆಳಿಗ್ಗೆ ಅಪಘಾತದ ಸ್ಥಳದಲ್ಲಿದ್ದ ಪಟ್ನಾಯಕ್, ಮೃತದೇಹಗಳನ್ನು ಸಂರಕ್ಷಿಸುವಲ್ಲಿ ರಾಜ್ಯಕ್ಕೆ ಬೆಂಬಲದ ಅಗತ್ಯವಿದೆ ಎಂದು ಪ್ರಧಾನಿ ಮೋದಿಯವರಿಗೆ ತಿಳಿಸಿದರು.

    ಪ್ರಧಾನಿ ಮೋದಿ ಅವರು ಕೇಂದ್ರದ ಆರೋಗ್ಯ ಮಂತ್ರಿಗಳು ಹಾಗೂ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಸೂಕ್ತ ವ್ಯವಸ್ಥೆ ಕಲ್ಪಿಸಲು ಸೂಚಿಸಿದರು. ನಂತರ ಒಂದೊಂದು ಅಂಬುಲೆನ್ಸ್‌ನಲ್ಲಿ 2 ಮೃತದೇಹಗಳನ್ನು ಭುವನೇಶ್ವರದ ಏಮ್ಸ್‌ಗೆ ಸಾಗಿಸಲಾಯಿತು. ಅಲ್ಲಿ ಶವಗಳಿಗಾಗಿ 150 ಹಾಸಿಗೆಗಳ ಶವಗಾರದ ವ್ಯವಸ್ಥೆ ಮಾಡಲಾಗಿತ್ತು. ಹೀಗೆ ನಿರಂತರವಾಗಿ ರಕ್ಷಣಾ ಕಾರ್ಯಾಚರಣೆ ನಡೆಯಿತು. ಇದನ್ನೂ ಓದಿ: Odisha Train Accident; ಕ್ಷಣ ಕ್ಷಣಕ್ಕೂ ಸಾವಿನ ಸಂಖ್ಯೆ ಏರಿಕೆ – 233 ಮಂದಿ ಬಲಿ, 900 ಮಂದಿಗೆ ಗಾಯ

    ಮೃತರು ಮತ್ತು ಗಾಯಾಳುಗಳ ಬಂಧುಗಳಿಗೆ ಪರಿಹಾರವನ್ನು ಘೋಷಿಸುವುದರಿಂದ ಹಿಡಿದು, ಸಿಕ್ಕಿಬಿದ್ದ ಪ್ರಯಾಣಿಕರಿಗೆ ಉಚಿತ ಸಾರಿಗೆ ವ್ಯವಸ್ಥೆ, ಗುರುತಿನ ನಂತರ ಮೃತದೇಹಗಳನ್ನು ಕುಟುಂಬಸ್ಥರು ಉಚಿತವಾಗಿ ಸಾಗಿಸುವುದು, ಮರಣ ಪ್ರಮಾಣಪತ್ರಗಳನ್ನು ಪಡೆಯುವ ಪ್ರಕ್ರಿಯೆ ಸುಲಭಗೊಳಿಸುವುದು, ಸಹಾಯ ಕೇಂದ್ರಗಳನ್ನು ಸ್ಥಾಪಿಸುವುದು ಮತ್ತು ಸಂತ್ರಸ್ತರಿಗೆ ಆಹಾರ ಒದಗಿಸುವುದು. ಹೀಗೆ ಅನೇಕ ಸವಾಲುಗಳು ಎದುರಾದವು. ಸಿಎಂ, ಅಧಿಕಾರಿಗಳು ಎಲ್ಲವನ್ನೂ ಯಶಸ್ವಿಯಾಗಿ ನಿಭಾಯಿಸಿದರು.