Tag: ಒಡನಾಡಿ ಸಂಸ್ಥೆ

  • ತನಿಖಾಧಿಕಾರಿಗಳ ತಪ್ಪಿನಿಂದ ಮುರುಘಾ ಶ್ರೀಗೆ ಜಾಮೀನು: ಒಡನಾಡಿ ಸ್ಟ್ಯಾನ್ಲಿ ಪರಶು

    ತನಿಖಾಧಿಕಾರಿಗಳ ತಪ್ಪಿನಿಂದ ಮುರುಘಾ ಶ್ರೀಗೆ ಜಾಮೀನು: ಒಡನಾಡಿ ಸ್ಟ್ಯಾನ್ಲಿ ಪರಶು

    ಮೈಸೂರು: ತನಿಖಾಧಿಕಾರಿಗಳ ತಪ್ಪಿನಿಂದ ಮುರುಘಾ ಶ್ರೀಗೆ (Murugha shree) ಜಾಮೀನು ಸಿಕ್ಕಿದೆ ಎಂದು ಒಡನಾಡಿ (Odanadi) ಸಂಸ್ಥೆಯ ಮುಖ್ಯಸ್ಥ ಪರಶು ಅವರು ಆರೋಪಿಸಿದ್ದಾರೆ.

    ಮೈಸೂರಿನಲ್ಲಿ `ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಉನ್ನತ ಮಟ್ಟದ ತನಿಖಾ ಸಂಸ್ಥೆಯಿಂದ ತನಿಖೆ ಆಗಿದ್ದರೆ ಇಷ್ಟು ಬೇಗ ಜಾಮೀನು ಸಿಗುತ್ತಿರಲಿಲ್ಲ. ಇವತ್ತು ಸ್ವಾಮೀಜಿ ಪರ ಅವರ ಭಕ್ತರು ಜಯ ಘೋಷ ಮೊಳಗಿಸಿರುವುದು ಸಂತ್ರಸ್ತ ಮಕ್ಕಳಲ್ಲಿ ಭಯ ಹುಟ್ಟಿಸುವಂತಿದೆ ಎಂದಿದ್ದಾರೆ. ಇದನ್ನೂ ಓದಿ: ಪೋಕ್ಸೋ ಕೇಸ್‌ – ಜೈಲಿನಿಂದ ಮುರುಘಾ ಶ್ರೀ ಬಿಡುಗಡೆ

    ಸಂಸ್ಥೆಯ ಸ್ಟ್ಯಾನ್ಲಿಯವರು ಮಾತನಾಡಿ, ಮುರುಘಾ ಶ್ರೀ ಜಾಮೀನು ರದ್ದಿಗೆ ಕಾನೂನು ಹೋರಾಟ ಮಾಡುತ್ತೇವೆ. ಸ್ವಾಮೀಜಿ ಬಿಡುಗಡೆ ವಿಚಾರ ಕೇಳಿ ಸಂತ್ರಸ್ತ ಮಕ್ಕಳು ಭಯಕ್ಕೆ ಒಳಗಾಗಿದ್ದಾರೆ. ಅವರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದೇವೆ ಎಂದಿದ್ದಾರೆ.

    ಕಳೆದ 13 ತಿಂಗಳಿನಿಂದ ನ್ಯಾಯಾಂಗ ಬಂಧನದಲ್ಲಿದ್ದ ಮುರುಘಾ ಮಠದ ಶಿವಮೂರ್ತಿ ಶರಣರು ಚಿತ್ರದುರ್ಗ ಜೈಲಿನಿಂದ ಇಂದು ಬಿಡುಗಡೆಯಾಗಿದ್ದಾರೆ. ಪೋಕ್ಸೋ (Pocso Case) ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಮುರುಘಾ ಶ್ರೀಗಳಿಗೆ ಜಾಮೀನು ಮಂಜೂರು ಮಾಡಿದ ಹಿನ್ನೆಲೆಯಲ್ಲಿ ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಇದನ್ನೂ ಓದಿ: ಹೋಟೆಲಿನಲ್ಲಿ ಸ್ಕ್ರೂಡ್ರೈವರ್‌ನಿಂದ 41 ಬಾರಿ ಇರಿದು ಪತ್ನಿಯ ಹತ್ಯೆಗೈದ ಪತಿ

  • ಸ್ಯಾಂಟ್ರೋ ರವಿ ವಿರುದ್ಧ 6 ತಿಂಗಳ ಹಿಂದೆಯೇ ಡಿಜಿ -ಐಜಿಪಿಗೆ ದೂರು ನೀಡಲು ಮುಂದಾಗಿದ್ದ ಒಡನಾಡಿ ಸಂಸ್ಥೆ

    ಸ್ಯಾಂಟ್ರೋ ರವಿ ವಿರುದ್ಧ 6 ತಿಂಗಳ ಹಿಂದೆಯೇ ಡಿಜಿ -ಐಜಿಪಿಗೆ ದೂರು ನೀಡಲು ಮುಂದಾಗಿದ್ದ ಒಡನಾಡಿ ಸಂಸ್ಥೆ

    ಬೆಂಗಳೂರು: ಸದ್ಯ ರಾಜ್ಯದಲ್ಲಿ ಭಾರೀ ಸುದ್ದಿಯಲ್ಲಿರುವ ಸ್ಯಾಂಟ್ರೋ ರವಿ(Santro Ravi) ಸಂಬಂಧ ಒಂದೊಂದೇ ಸ್ಫೋಟಕ ವಿಚಾರಗಳು ಬೆಳಕಿಗೆ ಬರುತ್ತಿವೆ.

    ಸ್ಯಾಂಟ್ರೋ ರವಿ ವಿಚಾರ ಸಾರ್ವಜನಿಕವಾಗಿ ಬೆಳಕಿಗೆ ಬರುವ ಮುನ್ನವೇ ಮೈಸೂರಿನ ಒಡನಾಡಿ ಸಂಸ್ಥೆ ರವಿಯ, ಅನೈತಿಕ ವ್ಯವಹಾರ ಗಳ ಬಗ್ಗೆ ಮಹತ್ವದ ಮಾಹಿತಿಗಳನ್ನು ಕಲೆಹಾಕಿತ್ತು. ಈ ಸಂಬಂಧ ಡಿಜಿ – ಐಜಿಪಿ ಪ್ರವೀಣ್ ಸೂದ್ (Praveen Sood) ಗೆ ಭೇಟಿಯಾಗಿ ನೇರವಾಗಿ ದೂರು ನೀಡಲು ಮುಂದಾಗಿತ್ತು.

    ಈ ಸಂಬಂಧ ಹಲವು ಬಾರಿ ಭೇಟಿಗೆ ಅವಕಾಶ ಕೇಳಿ ಮೇಲ್ ಮಾಡಿದ್ರು, ಯಾವುದೇ ಭೇಟಿಗೆ ಅವಕಾಶ ಸಿಕ್ಕಿರಲಿಲ್ಲ. ಡಿಜಿಯವರು ಫೋನ್ ಕರೆಗೂ ಸಿಕ್ಕಿರಲಿಲ್ಲ. ಭೇಟಿಗೆ ಅವಕಾಶ ಕೇಳಿ ಕಳೆದ ಜೂನ್ ನಲ್ಲೇ ಅನುಮತಿ ಕೇಳಿದ್ದ ಮೇಲ್ ವೊಂದು ವೈರಲ್ ಆಗ್ತಿದೆ. ಇದನ್ನೂ ಓದಿ: ಪತ್ನಿ ವಿರುದ್ಧ ಸುಳ್ಳು ಕೇಸ್‌ – ಸ್ಯಾಂಟ್ರೋ ರವಿಯ ಷಡ್ಯಂತ್ರಕ್ಕೆ ಇನ್‌ಸ್ಪೆಕ್ಟರ್‌ ಸಾಥ್‌

    ಸ್ಯಾಂಟ್ರೋ ರವಿ ಮಾನವ ಕಳ್ಳಸಾಗಣೆ, ಅಕ್ರಮ ಪೊಲೀಸ್ ಅಧಿಕಾರಿಗಳ ವರ್ಗಾವಣೆ ದಂಧೆ, ವೇಶ್ಯಾವಾಟಿಕೆ ನಡೆಸುತ್ತಿದ್ದ ಬಗ್ಗೆ ಒಡನಾಡಿ ಸಂಸ್ಥೆ ಮಾಹಿತಿ ಕಲೆಹಾಕಿತ್ತು. ಈ ಎಲ್ಲಾ ಮಾಹಿತಿಗಳ ಜೊತೆಗೆ ಸೂಕ್ತ ಸಾಕ್ಷಿಗಳನ್ನು ಕೂಡ ಒಡನಾಡಿ ಸಂಸ್ಥೆ ಕಲೆಹಾಕಿತ್ತು.

    ಯಾವಾಗ ಸ್ಯಾಂಟ್ರೋ ರವಿ ವಿಚಾರ ದೊಡ್ಡ ಮಟ್ಟದಲ್ಲಿ ಬೆಳಕಿಗೆ ಬಂತೋ, ಈಗ ಆತನ ವಿರುದ್ಧ ಪೊಲೀಸ್ ಇಲಾಖೆ ಸಿರಿಯಸ್ ಆಗಿ ಹುಡುಕಾಟ ನಡೆಸುತ್ತಿದೆ. ಆದರೆ ಈ ಹಿಂದೆ ರವಿ ಸಂಬಂಧ ದೂರು ನೀಡಿದ್ರೆ ಯಾರು ಕೂಡ ಸಿರಿಯಸ್ ಆಗಿ ಪರಿಗಣಿಸದೇ ಇರೋದು ಬೇಸರದ ಸಂಗತಿ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮುರುಘಾಶ್ರೀಗಳಿಗೆ ಮಕ್ಕಳ ಅಶ್ಲೀಲ ವೀಡಿಯೋ ನೋಡೋ ಚಟವಿತ್ತು – ಒಡನಾಡಿ ಆರೋಪ

    ಮುರುಘಾಶ್ರೀಗಳಿಗೆ ಮಕ್ಕಳ ಅಶ್ಲೀಲ ವೀಡಿಯೋ ನೋಡೋ ಚಟವಿತ್ತು – ಒಡನಾಡಿ ಆರೋಪ

    ಮೈಸೂರು: ಚಿತ್ರದುರ್ಗ ಮುರುಘಾಮಠದ (Murugha Mutt) ಶಿವಮೂರ್ತಿ ಶರಣರ (Shivamurthy Murugha Sharanaru) ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮತ್ತೊಂದು ಸ್ಫೋಟಕ ಸತ್ಯ ಹೊರ ಬಿದ್ದಿದೆ.

    ಮುರುಘಾ ಮಠದ ವಸತಿ ಶಾಲೆಯಲ್ಲಿದ್ದ (Murugha Mutt Residential School) ಕೆಲ ಹೆಣ್ಣು ಮಕ್ಕಳ ಅಶ್ಲೀಲ ವೀಡಿಯೋ (Video) ಸಹ ಮಾಡಲಾಗಿದ್ದು ಅದನ್ನು ಸ್ವಾಮೀಜಿಗಳಿಗೆ ಮಾರಾಟ ಮಾಡಲಾಗಿದೆ ಅನ್ನೋ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ಆಸ್ತಿ ವಿಚಾರಕ್ಕೆ ಗಲಾಟೆ – ಸೊಸೆಯಿಂದಲೇ ಅತ್ತೆಯ ಕೊಲೆ

    ಈ ಕುರಿತು ಮಾತನಾಡಿರುವ ಒಡನಾಡಿ ಸಂಸ್ಥೆಯ (Odanadi Seva Samsthe) ಮುಖ್ಯಸ್ಥ ಪರಶುರಾಮ್, ಮರುಘಾ ಮಠದ ವಸತಿ ಶಾಲೆಯಲ್ಲಿದ್ದ ಕೆಲ ಮಕ್ಕಳ ಬೆತ್ತಲೆ ವೀಡಿಯೋ ಮಾಡಿ ಸ್ವಾಮೀಜಿಗೆ ಮಾರಾಟ ಮಾಡಿದ್ದಾರೆ. ವೀಡಿಯೋ ಮಾಡುವ ವಿಚಾರದಲ್ಲಿ ಸ್ವಾಮೀಜಿಯ ಪಾತ್ರವೂ ಇದೆ. ಮಠದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೇ ಈ ವಿಚಾರ ಹೇಳಿಕೊಂಡಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಪೊಲೀಸ್ ಠಾಣೆಯಲ್ಲೇ ಬಿಜೆಪಿ ಕಾರ್ಪೊರೇಟರ್ ಪತಿ ಮೇಲೆ ಪೌರಕಾರ್ಮಿಕರಿಂದ ಹಲ್ಲೆ

    ವೀಡಿಯೋ ಮಾಡಿದವರು, ವೀಡಿಯೋ ಮಾರಾಟ ಮಾಡಿದವರ ಬಂಧನವೂ ಆಗಬೇಕು. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಕ್ಕಳ ದೊಡ್ಡ ಪಟ್ಟಿಯೇ ಇದೆ. ಇನ್ನೂ ಅನೇಕರು ಈ ಬಗ್ಗೆ ದೂರು ಕೊಡುವುದು ನಿಶ್ಚಿತ. ಮಠದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಇಬ್ಬರು ಅಪ್ರಾಪ್ತ ಮಕ್ಕಳ ಮೇಲೆ ನಿರಂತರವಾಗಿ ಲೈಂಗಿಕ ಶೋಷಣೆ ಆಗಿದೆ ಎಂದು ಆರೋಪಿಸಿದ್ದಾರೆ.

    ನಾವು ನಂಬಿದ್ದ ವ್ಯಕ್ತಿ ಇಷ್ಟು ಕ್ರೂರವಾಗಿ ವರ್ತಿಸಿದ್ದಾರಲ್ಲ ಅನ್ನೋದು ತುಂಬಾ ದುಃಖವಾಗಿದೆ. ಇಷ್ಟಾದರೂ ಸರ್ಕಾರ (Government Of Karnataka) ವಿಶೇಷ ತನಿಖಾ ದಳ (Speical Investigation Team) ನೇಮಿಸಿಲ್ಲ. ಈ ಪ್ರಕರಣದ ಹಿಂದಿರುವ ಎಲ್ಲ ಮುಖಗಳು ಆಚೆ ಬರಬೇಕಾದರೆ ರಾಷ್ಟ್ರಮಟ್ಟದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹಿಂದೂ ಧರ್ಮ ಒಡೆಯುವುದು, ಮತಾಂತರ ಮಾಡುವುದೇ ಒಡನಾಡಿಯ ಉದ್ದೇಶ: ಮಠದ ಸದಸ್ಯ ಕಿಡಿ

    ಹಿಂದೂ ಧರ್ಮ ಒಡೆಯುವುದು, ಮತಾಂತರ ಮಾಡುವುದೇ ಒಡನಾಡಿಯ ಉದ್ದೇಶ: ಮಠದ ಸದಸ್ಯ ಕಿಡಿ

    ಚಿತ್ರದುರ್ಗ: ಮತಾಂತರ ಮಾಡುವುದೇ ಒಡನಾಡಿ ಸಂಸ್ಥೆಯ ಮೂಲ ಉದ್ದೇಶವಾಗಿದೆ. ಹಿಂದೂ ಧರ್ಮವನ್ನು ಒಡೆಯುವ ಕೆಲಸವನ್ನು ಮಾಡುತ್ತಿದೆ ಎಂದು ಮುರುಘಾ ಮಠದ ಸಲಹಾ ಸಮಿತಿ ಸದಸ್ಯ ಜಿತೇಂದ್ರ ಎನ್ ಹುಲಿಕುಂಟೆ ಕಿಡಿಕಾರಿದ್ದಾರೆ.

    ಪೋಕ್ಸೋ ಪ್ರಕರಣದಲ್ಲಿ ಮುರುಘಾ ಶ್ರೀ ಬಂಧನ ಹಿನ್ನೆಲೆಯಲ್ಲಿ ಚಿತ್ರದುರ್ಗದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಒಡನಾಡಿ ಸಂಸ್ಥೆಯು ಶೋಷಿತ ಸಮುದಾಯಗಳನ್ನು ಬಳಸಿಕೊಂಡು ಮಿಸ್ ಯೂಸ್ ಮಾಡಿಕೊಳ್ಳುತ್ತಿದೆ. ಇದು ಕ್ರಿಶ್ಚಿಯನ್ ಮಿಷನರಿಗಳ ಷಡ್ಯಂತ್ರವಾಗಿದೆ. ಒಡನಾಡಿ ಸಂಸ್ಥೆಯವರು ಎಲ್ಲಾ ಕಡೆ ಏಜೆಂಟರನ್ನು ಬಿಟ್ಟಿದ್ದಾರೆ. ಈ ಎಲ್ಲಾ ಕಡೆ ಇರುವ ಏಜೆಂಟರು ಅವರಿಗೆ ಮಾಹಿತಿ ಕೊಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಕ್ರಿಶ್ಚಿಯನ್ ಮಿಷನರಿ ಸಂಸ್ಥೆಗಳ ಕೈಗೊಂಬೆ ಒಡನಾಡಿ ಸಂಸ್ಥೆಯಾಗಿದ್ದು, ಒಡನಾಡಿಯವರು ಹೆಚ್ಚಾಗಿ ಹಣವಂತರನ್ನು ಟಾರ್ಗೆಟ್ ಮಾಡುತ್ತಾರೆ. ಚಿತ್ರನಟ ಸಾಧು ಕೋಕಿಲ, ಮಂಡ್ಯ ರಮೇಶ್ ಸಹ ಒಡನಾಡಿ ಸಂಸ್ಥೆ ವಿರುದ್ಧ ಕೇಸ್ ಹಾಕಿದ್ದರು. ಅದು ಇನ್ನೂ ವಿಚಾರಣೆ ನಡೆಯುತ್ತಿದೆ. ಅಷ್ಟೇ ಅಲ್ಲದೇ ಇವರ ಮೇಲೆ ಅನೇಕ ದೌರ್ಜನ್ಯದ ಕೇಸುಗಳಿವೆ ಎಂದು ಆರೋಪಿಸಿದರು.

    ಸಾಮಾನ್ಯವಾಗಿ ಒಡನಾಡಿ ಸಂಸ್ಥೆಗಳು ಸಾಮಾಜಿಕ ಜವಾಬ್ದಾರಿ ಇರುವವರ ವಿರುದ್ಧ ಷಡ್ಯಂತ್ರ ಮಾಡುತ್ತಾರೆ. ಇವರಿಂದ ಹಿಂದೂ ಧರ್ಮವನ್ನು ಒಡೆಯುವಂತ ಕೆಲಸವಾಗಿದ್ದು, ಸಾಮರಸ್ಯ ಕೆಡಿಸುವಂತ ಕೆಲಸವನ್ನೂ ಮಾಡುತ್ತಿದ್ದಾರೆ. ಇದರ ಜೊತೆಗೆ ಹಿಂದೂಗಳ ಮಧ್ಯೆಯೇ ಮೇಲ್ಜಾತಿ, ಕೆಳಜಾತಿ ಎಂಬ ಭೇದ ಸೃಷ್ಟಿ ಮಾಡುತ್ತಿದ್ದು, ಶೋಷಿತ ಹೆಣ್ಣು ಮಕ್ಕಳನ್ನು ಮತಾಂತರ ಮಾಡುತ್ತಿದ್ದಾರೆ ಎಂದರು. ಇದನ್ನೂ ಓದಿ: ಸ್ವಚ್ಛ ಭಾರತ್ ಬೆಂಗಳೂರು ಎಲ್ಲಿಗೆ ಹೋಗಿದೆ? ಬೀದಿಯಲ್ಲಿ ಕಸ ಬಿದ್ದು ಕೊಳೆಯುತ್ತಿದೆ: ಡಿಕೆ ಸುರೇಶ್‌

    ಮತಾಂತರದ ಮೂಲಕ ದೇಶ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಈ ಒಡನಾಡಿ ಸಂಸ್ಥೆಗೆ ವಿದೇಶದ ಕ್ರಿಶ್ಚಿಯನ್ ಮಿಷಿನರಿಗಳಿಂದ ಹಣ ಬರುತ್ತದೆ. ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ – ಪರಶುರಾಮ್ ಅವರನ್ನು ತನಿಖೆಗೆ ಒಳಪಡಿಸಬೇಕು. ಇವರಿಗೆ ವಿದೇಶದಿಂದ ಹಣ ಬರುತ್ತದೆ. ಇವರ ಅಕೌಂಟನ್ನು ಸಂಪೂರ್ಣವಾಗಿ ತನಿಖೆ ಮಾಡಬೇಕು. ಒಡನಾಡಿ ಸಂಸ್ಥೆಯ ವಿರುದ್ಧ ನಮ್ಮ ಹೋರಾಟ ಸದಾ ನಡೆಯುತ್ತದೆ. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಅಡಿ ಸೂಕ್ತ ತನಿಖೆ ನಡೆಸಬೇಕು. ಈ ಬಗ್ಗೆ ಗೃಹಮಂತ್ರಿಯನ್ನು ಭೇಟಿಯಾಗಿ ವಿನಂತಿ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಜನ ಅವಕಾಶ ಕೊಟ್ಟಿದ್ದು, ಕೆಲಸ ಮಾಡಕ್ಕಾಗಿಲ್ಲ ಅಂದ್ರೆ ಚುನಾವಣೆಗೆ ಹೋಗೋಣ- ಸಿಎಂಗೆ ಡಿಕೆಶಿ ಸವಾಲು

    Live Tv
    [brid partner=56869869 player=32851 video=960834 autoplay=true]