Tag: ಒಟಿಟಿ ಪ್ಲಾಟ್‌ಫಾರ್ಮ್

  • ಪಾಕ್‌ನ ಸಿನಿಮಾ, ಹಾಡು, ಪಾಡ್‌ಕಾಸ್ಟ್ ಸ್ಟ್ರೀಮಿಂಗ್ ನಿಲ್ಲಿಸಿ: ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಸರ್ಕಾರ ಆದೇಶ

    ಪಾಕ್‌ನ ಸಿನಿಮಾ, ಹಾಡು, ಪಾಡ್‌ಕಾಸ್ಟ್ ಸ್ಟ್ರೀಮಿಂಗ್ ನಿಲ್ಲಿಸಿ: ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಸರ್ಕಾರ ಆದೇಶ

    ನವದೆಹಲಿ: ಪಾಕಿಸ್ತಾನದ (Pakistan) ಎಲ್ಲಾ ಹಾಡು, ಸಿನಿಮಾ, ಪಾಡ್‌ಕಾಸ್ಟ್, ವೆಬ್ ಸೀರಿಸ್ ಹಾಗೂ ಸ್ಟ್ರೀಮಿಂಗ್ ಅನ್ನು ತಕ್ಷಣವೇ ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ (OTT Platform) ನಿಲ್ಲಿಸುವಂತೆ ಭಾರತ ಸರ್ಕಾರ ಆದೇಶಿಸಿದೆ.

    ಪಹಲ್ಗಾಮ್ ದಾಳಿಗೆ ಭಾರತ ಆಪರೇಷನ್ ಸಿಂಧೂರ ಮೂಲಕ ಪ್ರತೀಕಾರ ತೀರಿಸಿಕೊಂಡಿದೆ. ಈ ಹಿನ್ನೆಲೆ ಪಾಕಿಸ್ತಾನ ಹಾಗೂ ಭಾರತದ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ಈ ಬೆನ್ನಲ್ಲೇ ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ಪಾಕಿಸ್ತಾನದ ಎಲ್ಲಾ ಕಂಟೆಂಟ್‌ಗಳನ್ನು ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಸಾರ ಮಾಡದಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸೂಚನೆ ನೀಡಿದೆ. ಈ ಆದೇಶ ಚಂದಾದಾರಿಕೆ ಆಧಾರಿತ ಮತ್ತು ಉಚಿತ ಪ್ರವೇಶ ವೇದಿಕೆಗಳಲ್ಲಿ ಅನ್ವಯಿಸುತ್ತದೆ. ಇದನ್ನೂ ಓದಿ: ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ – ರಾಜನಾಥ್ ಸಿಂಗ್ ಮಹತ್ವದ ಸುಳಿವು

    ಇದಕ್ಕೂ ಮುನ್ನ ಭಾರತೀಯ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಹಲವಾರು ಪಾಕಿಸ್ತಾನಿ ಸೆಲೆಬ್ರಿಟಿಗಳ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಿಗೆ ಪ್ರವೇಶವನ್ನು ನಿರ್ಬಂಧಿಸಿವೆ. ಪಾಕಿಸ್ತಾನದ ನಟರು, ಗಾಯಕರು ಹಾಗೂ ಸ್ಟಾರ್‌ಗಳ ಪ್ರೊಫೈಲ್‌ಗಳನ್ನು ಇನ್ಸ್ಟಾ, ಎಕ್ಸ್ ಹಾಗೂ ಯೂಟ್ಯೂಬ್ ಸೇರಿದಂತೆ ಅನೇಕ ಪ್ಲಾಟ್‌ಫಾರ್ಮ್‌ಗಳಲ್ಲಿ ನಿರ್ಬಂಧಿಸಲಾಗಿದೆ. ಇದನ್ನೂ ಓದಿ: ಭಾರತ ಡ್ರೋನ್‌ ದಾಳಿ – ನೂರಾರು ಕೋಟಿ ವೆಚ್ಚದಲ್ಲಿ ನವೀಕರಿಸಿದ್ದ ರಾವಲ್ಪಿಂಡಿ ಸ್ಟೇಡಿಯಂಗೆ ಭಾರಿ ಹಾನಿ

  • ಒಟಿಟಿಯಲ್ಲಿ ಇನ್ನು ತಂಬಾಕು ವಿರೋಧಿ ಎಚ್ಚರಿಕೆ ಕಡ್ಡಾಯ: ಆರೋಗ್ಯ ಸಚಿವಾಲಯ ವಾರ್ನಿಂಗ್

    ಒಟಿಟಿಯಲ್ಲಿ ಇನ್ನು ತಂಬಾಕು ವಿರೋಧಿ ಎಚ್ಚರಿಕೆ ಕಡ್ಡಾಯ: ಆರೋಗ್ಯ ಸಚಿವಾಲಯ ವಾರ್ನಿಂಗ್

    ನವದೆಹಲಿ: ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲೂ (OTT Platform) ತಂಬಾಕು ವಿರೋಧಿ ಎಚ್ಚರಿಕೆ (Anti Tobacco Warning) ನೀಡುವುದನ್ನು ಕೇಂದ್ರ ಆರೋಗ್ಯ ಸಚಿವಾಲಯ (Health ministry) ಕಡ್ಡಾಯಗೊಳಿಸಿದೆ.

    ಸಿನಿಮಾ ಥಿಯೇಟರ್‌ಗಳಲ್ಲಿ ಹಾಗೂ ದೂರದರ್ಶನ ಕಾರ್ಯಕ್ರಮಗಳಲ್ಲಿ ತಂಬಾಕು ವಿರೋಧಿ ಎಚ್ಚರಿಕೆಯನ್ನು ಈ ಹಿಂದೆಯಿಂದಲೂ ಪ್ರದರ್ಶಿಸಲಾಗುತ್ತಿದೆ. ಆದರೆ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಇದನ್ನು ಕಡ್ಡಾಯಗೊಳಿಸಲಾಗಿರಲಿಲ್ಲ. ಇದೀಗ ಆರೋಗ್ಯ ಸಚಿವಾಲಯ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲೂ ಇದನ್ನು ಕಡ್ಡಾಯಗೊಳಿಸಿದೆ. ಈ ಹೊಸ ನಿಯಮವನ್ನು ಪ್ಲಾಟ್‌ಫಾರ್ಮ್‌ಗಳು ಅನುಸರಿಸದೇ ಹೋದರೆ ಕಠಿಣ ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

    ಕಾರ್ಯಕ್ರಮದ ಸಮಯದಲ್ಲಿ ತಂಬಾಕು ಉತ್ಪನ್ನಗಳು ಅಥವಾ ಅವುಗಳ ಬಳಕೆಯನ್ನು ಪ್ರದರ್ಶಿಸುವಾಗ ಒಟಿಟಿ ಪ್ಲಾಟ್‌ಫಾರ್ಮ್‌ಗಳು ತಂಬಾಕು ವಿರೋಧಿ ಆರೋಗ್ಯದ ಎಚ್ಚರಿಕೆಯನ್ನು ಪರದೆಯ ಕೆಳಭಾಗದಲ್ಲಿ ಪ್ರದರ್ಶಿಸಬೇಕು. ಅಲ್ಲದೇ ತಂಬಾಕು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಕನಿಷ್ಟ 20 ಸೆಕೆಂಡುಗಳ ವರೆಗೆ ಆಡಿಯೋ ಅಥವಾ ದೃಶ್ಯದ ರೂಪದಲ್ಲಿ ಕಾರ್ಯಕ್ರಮದ ಪ್ರಾರಂಭದಲ್ಲಿ ಇಲ್ಲವೇ ನಡುವೆ ಪ್ರದರ್ಶಿಸಬೇಕೆಂದು ಆರೋಗ್ಯ ಸಚಿವಾಲಯ ಹೇಳಿದೆ. ಇದನ್ನೂ ಓದಿ: ಗೃಹಲಕ್ಷ್ಮಿ ಹಣ ಯಾರಿಗೆ ಅಂತ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತೆ: ಹೆಬ್ಬಾಳ್ಕರ್ ಹೇಳಿಕೆ ಒಪ್ಪದ ಡಿಕೆಶಿ

    ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಸಾರವಾಗುವ ವೆಬ್‌ಸೀರೀಸ್, ಚಲನಚಿತ್ರಗಳಲ್ಲಿ ತಂಬಾಕು ಉತ್ಪನ್ನಗಳ ಬಳಕೆ ಹಾಗೂ ಧೂಮಪಾನವನ್ನು ವ್ಯಾಪಕವಾಗಿ ಪ್ರದರ್ಶಿಸಲಾಗುತ್ತಿದೆ. ಇದು ಸಿಗರೇಟ್ ಹಾಗೂ ಇತರ ತಂಬಾಕು ಉತ್ಪನ್ನಗಳ ಕಾಯಿದೆ 2003ರ ಉಲ್ಲಂಘನೆಯಾಗಿದೆ. ಇದೀಗ ಒಟಿಟಿ ಪ್ಲಾಟ್‌ಫಾರ್ಮ್‌ಗಳು ಹೆಚ್ಚು ಜನಪ್ರಿಯವಾಗಿದ್ದು, ದೇಶದಲ್ಲಿ ಯುವಕರು ಹಾಗೂ ಮಕ್ಕಳಿಗೆ ತಂಬಾಕು ಬಳಕೆಯನ್ನು ಉತ್ತೇಜಿಸುವಲ್ಲಿ ಇದು ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ರಾಗಾ ಭಾಷಣದ ಮಧ್ಯೆ ಮೊಳಗಿತು ಖಲಿಸ್ತಾನ್ ಜಿಂದಾಬಾದ್ ಘೋಷಣೆ