ಬೆಂಗಳೂರು: ಜಾತಿ ಗಣತಿ (Caste Census) ವರದಿ ಬಗ್ಗೆ ಸಂಪುಟ ಸಭೆಯಲ್ಲಿ ಕೋಲಾಹಲವೇ ಎದ್ದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ನೇತೃತ್ವದ ವಿಶೇಷ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಯಿತಾದರೂ ಯಾವುದೇ ನಿರ್ಧಾರ ಕೈಗೊಂಡಿಲ್ಲ.
ಸಂಪುಟ ಸಭೆಯಲ್ಲಿ ಲಿಂಗಾಯತ (Lingayat) ಹಾಗೂ ಒಕ್ಕಲಿಗ (Vokkaliga) ಸಚಿವರ ತೀವ್ರ ಆಕ್ಷೇಪದಿಂದಾಗಿ, ಮೇ 2ಕ್ಕೆ ವಿಶೇಷ ಸಂಪುಟ ಸಭೆಯಲ್ಲಿ ಚರ್ಚಿಸಲು ತೀರ್ಮಾನಿಸಲಾಗಿದೆ. ಎಲ್ಲ ಸಚಿವರ ಅಭಿಪ್ರಾಯವನ್ನು ಅತ್ಯಂತ ತಾಳ್ಮೆಯಿಂದ ಆಲಿಸಿದ ಸಿಎಂ ಸಿದ್ದರಾಮಯ್ಯ ಬರವಣಿಗೆ ರೂಪದಲ್ಲಿ ತಮ್ಮ ಅಭಿಪ್ರಾಯವನ್ನು ತಿಳಿಸಲು ಸೂಚಿಸಿದ್ದಾರೆ.
ಸಂಪುಟ ಸಭೆಯಲ್ಲಿ ಏರುಧ್ವನಿಯಲ್ಲೇ ಜಾತಿಗಣತಿ ವರದಿಯನ್ನು ಸಚಿವ ಎಸ್.ಎಸ್. ಮಲ್ಲಿಕಾರ್ಜುನ (Mallikarjun) ವಿರೋಧಿಸಿದ್ದರು ಎಂದು ಮೂಲಗಳು ತಿಳಿಸಿವೆ. ಮುಸ್ಲಿಮರಲ್ಲೂ ನೂರಾರು ಉಪ ಪಂಗಡಗಳಿವೆ ಎಲ್ಲವನ್ನೂ ಯಾಕೆ ಒಂದರಲ್ಲೇ ಸೇರಿಸಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಕೂಡ ಗಟ್ಟಿಧ್ವನಿಯಲ್ಲೇ ಆಕ್ಷೇಪ ವ್ಯಕ್ತಪಡಿಸಿದ್ರು. ಇದನ್ನೂ ಓದಿ: ಜಡ್ಜ್ ಮನೆಯಲ್ಲಿ ಪತ್ತೆಯಾದ ಕಂತೆ ಕಂತೆ ಹಣದ ಬಗ್ಗೆ ಎಫ್‌ಐಆರ್ ಆಗಿಲ್ಲ ಯಾಕೆ: ಧನಕರ್ ಪ್ರಶ್ನೆ
ಸಂಪುಟ ಸಭೆ ಆರಂಭಕ್ಕೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಕೆಶಿ ಹಾಗೂ ಒಕ್ಕಲಿಗ ಸಚಿವರು ಪ್ರತ್ಯೇಕವಾಗಿ ಚರ್ಚೆ ನಡೆಸಿದರು. ಈ ಮಧ್ಯೆ ಸಂಪುಟ ಸಭೆಗೆ 11 ಪುಟಗಳ ಟಿಪ್ಪಣಿ ಸಲ್ಲಿಸಿದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಜಾರ್ಖಂಡ್‌ನಲ್ಲಿ ಒಬಿಸಿ ಮೀಸಲಾತಿ 77%, ತಮಿಳುನಾಡಲ್ಲಿ 69% ಇದ್ದು, ಇಲ್ಲೂ ಕೂಡ ಮೀಸಲಾತಿ (Reservation) ಪ್ರಮಾಣವನ್ನು 32%ರಿಂದ 51%ಕ್ಕೆ ಏರಿಸುವಂತೆ ಟಿಪ್ಪಣಿ ಸಲ್ಲಿಸಿದೆ.ಇವತ್ತಿನ ಸಂಪುಟ ಸಭೆಗೆ ಪೂರ್ವಾನುಮತಿ ಪಡೆದು ಸಚಿವರಾದ ದಿನೇಶ್‌ಗುಂಡೂರಾವ್ ಹಾಗೂ ವೆಂಕಟೇಶ್ ಗೈರಾಗಿದ್ದರು. ಇದನ್ನೂ ಓದಿ: ರಾಷ್ಟ್ರಪತಿಗಳಿಗೆ ನಿರ್ದೇಶನ ನೀಡಲು ಸಾಧ್ಯವಿಲ್ಲ,ಕೋರ್ಟ್‌ಗಳು ಸೂಪರ್ ಪಾರ್ಲಿಮೆಂಟ್ ಆಗಬಾರದು: ಧನಕರ್ ಅಸಮಾಧಾನ
ಸಂಪುಟ ಸಭೆಯಲ್ಲಿ ಲಿಂಗಾಯತರ ವಾದವೇನು?
ಜಾತಿಗಣತಿ ವರದಿಯಲ್ಲಿ ನಮ್ಮ ಸಮುದಾಯ 11% ಅಂತಿದೆ. 1990ರಲ್ಲೇ ಚಿನ್ನಪ್ಪರೆಡ್ಡಿ ಆಯೋಗ 17% ಅಂತ ವರದಿ ಕೊಟ್ಟಿದೆ. ಎಲ್ಲಾ ಉಪಜಾತಿಗಳು ಸೇರಿದ್ರೆ ನಮ್ಮ ಸಮುದಾಯದ ಸಂಖ್ಯೆ 22% ರಷ್ಟಿದೆ. ನಮ್ಮ ಜನಸಂಖ್ಯೆ 11% ಎಂಬ ವರದಿಯನ್ನು ಒಪ್ಪಲು ಸಾಧ್ಯವಿಲ್ಲ. ಮೊದಲು ಈ ದೋಷವನ್ನು ಸರಿಪಡಿಸಿ. ಆಮೇಲೆ ವರದಿ ಬಿಡುಗಡೆ ಮಾಡಿ.
ಒಕ್ಕಲಿಗ ಸಚಿವರ ವಾದವೇನು?
ನಮ್ಮ ಸಮುದಾಯವನ್ನು ಬೇರೆ ಬೇರೆ ಕ್ಲಾಸ್‌ಗಳಲ್ಲಿ ಗುರುತಿಸಲಾಗಿದೆ. ಈಗಿರುವ ಅಂಕಿ ಅಂಶ ಒಪ್ಪಲು ಸಾಧ್ಯವಿಲ್ಲ. ಎಲ್ಲಾ ವರ್ಗಗಳಲ್ಲಿರೋ ಸಮುದಾಯವನ್ನು ಒಟ್ಟಿಗೆ ಸೇರಿಸಿ. ದೋಷ ಸರಿಪಡಿಸಿ ಘೋಷಣೆ ಮಾಡುವುದಾದರೆ ಮಾಡಿ. ಇಲ್ಲದಿದ್ದರೆ ಮರು ಸಮೀಕ್ಷೆ ಮಾಡಿ.
ದಲಿತ, ಅಲ್ಪಸಂಖ್ಯಾತ ಸಚಿವರುಗಳ ವಾದವೇನು?
ಜಾತಿಗಣತಿಯಿಂದ ಹಿಂದೆ ಸರಿಯೋದು ಬೇಡ. ಹೈಕಮಾಂಡ್ ಆಜ್ಞೆಯಂತೆ ನಡೆದುಕೊಂಡು ಜಾತಿಗಣತಿ ವರದಿ ಜಾರಿಯಾಗಲೇಬೇಕು. ನಮ್ಮ ಪ್ರಣಾಳಿಕೆಯಲ್ಲೇ ಜಾತಿಗಣತಿ ಪ್ರಸ್ತಾಪವಿದೆ. ಯಾವುದೇ ಒತ್ತಡಕ್ಕೆ ಮಣಿಯಬೇಡಿ. ಅಗತ್ಯವಿದ್ರೆ ಅಧ್ಯಯನ ಸಮಿತಿ ರಚಿಸಿ, ಪರಾಮರ್ಶಿಸಿ.
– ಕರ್ನಾಟಕ ಬಂದ್ ಮಾದರಿ ಹೋರಾಟಕ್ಕೂ ನಿರ್ಧಾರ – ರಾಜ್ಯದಲ್ಲಿ ಒಕ್ಕಲಿಗರ ಒಟ್ಟು ಜನಸಂಖ್ಯೆ 61,58,352
ಬೆಂಗಳೂರು: ಜಾತಿ ಜೇನುಗೂಡಿಗೆ ಕೈ ಹಾಕಿರುವ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಈಗ ಜಾತಿ ಗಣತಿ (Caste Census) ವರದಿ ಬಿಸಿತುಪ್ಪವಾಗಿ ಪರಿಣಮಿಸಿದೆ. ಸರ್ಕಾರಕ್ಕೆ ಸಲ್ಲಿಸಿರುವ ವರದಿ ಬಹಿರಂಗವಾಗುತ್ತಿದ್ದಂತೆ ಎಲ್ಲೆಲ್ಲೂ ಕೋಲಾಹಲ ಎದ್ದಿದೆ.
ಪ್ರಭಾವಿ ಸಮುದಾಯಗಳ ವಿರೋಧಕ್ಕೆ ಈಗ ಸಿಎಂ ಸಿದ್ದರಾಮಯ್ಯ (CM Siddaramaiah) ಗುರಿಯಾಗಿದ್ದಾರೆ. ಅದರಲ್ಲೂ ರಾಜ್ಯದ ಪ್ರಬಲ ಒಕ್ಕಲಿಗ ಸಮುದಾಯ (Vokkaliga community) ಸರ್ಕಾರದ ವಿರುದ್ಧ ಸಿಡಿದೆದ್ದಿದೆ. ಒಕ್ಕಲಿಗರು ಜಾತಿ ಗಣತಿ ವಿರುದ್ಧ ದಂಗೆ ಏಳುವ ಸೂಚನೆ ಕೊಟ್ಟಿದ್ದಾರೆ. ಇದನ್ನೂ ಓದಿ: ಜಾತಿಗಣತಿ | ಮನೆ ಮನೆಗೆ ಹೋಗಿ ಮತ್ತೆ ಸಮೀಕ್ಷೆ ಮಾಡ್ಬೇಕು – ಶಾಸಕ ಬಾಲಕೃಷ್ಣ ಆಗ್ರಹ
ಇವತ್ತು ಸಭೆ ಸೇರಿದ ಒಕ್ಕಲಿಗ ಸಂಘದ ಪದಾಧಿಕಾರಿಗಳು, ಕರ್ನಾಟಕ ಬಂದ್ (Karnataka B ರೀತಿಯ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಜಾತಿ ಗಣತಿ ವರದಿ ಜಾರಿಯಾದರೆ ಸರ್ಕಾರವೇ ಪತನವಾಗಲಿದೆ. ಹೊಸದಾಗಿ ಸರ್ವೆ ಮಾಡದಿದ್ದರೆ, ನಾವೇ 100 ಕೋಟಿ ರೂ. ಖರ್ಚು ಮಾಡಿ ಜನಗಣತಿ ಮಾಡುತ್ತೇವೆ ಎಂದು ಸವಾಲು ಎಸೆದಿದ್ದಾರೆ. ಅಷ್ಟೇ ಅಲ್ಲದೇ ಶೀಘ್ರವೇ ನಿರ್ಮಲಾನಂದ ಸ್ವಾಮೀಜಿ, ನಂಜಾವಧೂತ ಶ್ರೀಗಳ ಜೊತೆ ಚರ್ಚಿಸಿ ಮುಂದಿನ ಹೋರಾಟ ನಡೆಸಲು ತೀರ್ಮಾನಿಸಿದ್ಧಾರೆ. ಇದನ್ನೂ ಓದಿ: National Herald Case| ಫಸ್ಟ್ ಟೈಂ ರಾಹುಲ್, ಸೋನಿಯಾ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ
ಜಾತಿಗಣತಿಯನ್ನು ವಿರೋಧಿಸಿರೋ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಇದೇನೂ ಜಾತಿಗಣತಿಯೋ, ದ್ವೇಷಗಣತಿಯೋ..? ದರ ಏರಿಕೆ, ಭ್ರಷ್ಟಾಚಾರ ಮುಜುಗರದಿಂದ ಮುಖ ಮುಚ್ಚಿಕೊಳ್ಳೋಕೆ ರೂಪಿಸಿದ ಸಂಚಿದು ಅಂತ ಕಿಡಿಕಾರಿದ್ದಾರೆ.
ಬೆಂಗಳೂರು: ಕಾಂಗ್ರೆಸ್ (Congress) ಜಾತಿ ಗಣತಿ (Caste Survey) ದಂಗಲ್ ಜೋರಾಗಿದೆ. ಕಾಂಗ್ರೆಸ್‌ನಲ್ಲಿ ಜಾತಿ ಗಣತಿಗೆ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ನಾಳೆ ಸಂಜೆ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಸಭೆ ಕರೆದಿದ್ದಾರೆ.
ಜಾತಿ ಗಣತಿ ಸಂಬಂಧ ಏ.17 ರಂದು ಸಿಎಂ ಸಿದ್ದರಾಮಯ್ಯ ವಿಶೇಷ ಕ್ಯಾಬಿನೆಟ್ ಸಭೆಯನ್ನು ಕರೆದಿದ್ದಾರೆ. ಈ ಸಭೆಗೂ ಮುನ್ನ ಒಕ್ಕಲಿಗ ನಾಯಕರ ನಿಲುವು ಏನಿರಬೇಕೆಂದು ಡಿಕೆಶಿ ಅಭಿಪ್ರಾಯ ಸಂಗ್ರಹ ಮಾಡಲು ಈ ಸಭೆಯನ್ನು ಕರೆದಿದ್ದಾರೆ. ಇದನ್ನೂ ಓದಿ: ಇದು ಜಾತ್ಯಾತೀತ ರಾಷ್ಟ್ರ, ಜಾತಿಗಣತಿಗೆ ಯಾವುದೇ ಮಹತ್ವ ಇಲ್ಲ: ಡಾ.ಮಂಜುನಾಥ್
– ವಕ್ಫ್ ಬ್ಯಾನ್ ಮಾಡಿ ಅಂದೇ ಇಲ್ಲ
– ಸ್ವಾಮೀಜಿ ಬೆನ್ನಿಗೆ ನಿಂತ ಬಿಜೆಪಿ
ಬೆಂಗಳೂರು: ಭಾರತ ಸರ್ವಧರ್ಮಗಳ ದೇಶ. ನಮ್ಮ ಮಠಕ್ಕೂ ಮುಸ್ಲಿಂ ಭಕ್ತರಿದ್ದಾರೆ, ನಾನೂ ಮುಸ್ಲಿಂ ಸಮುದಾಯದ ಮದುವೆಗಳಿಗೆ ಹೋಗ್ತಿನಿ ಎಂದು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ (Chandrashekar Swamiji) ಯೂಟರ್ನ್ ಹೊಡೆದಿದ್ದಾರೆ.
ಮುಸ್ಲಿಮರಿಗೆ (Muslims) ಮತದಾನದ ಹಕ್ಕು ಇಲ್ಲದಂತೆ ಮಾಡಬೇಕು ಎಂದು ಕರೆ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಂದ್ರಶೇಖರ ಸ್ವಾಮೀಜಿಗೆ ಉಪ್ಪಾರಪೇಟೆ ಪೊಲೀಸರಿಂದ ನೊಟೀಸ್ ಹೊರಡಿಸಿದ್ದಾರೆ. ಡಿಸೆಂಬರ್ 2 ರಂದು ಬೆಳಗ್ಗೆ 11 ಗಂಟೆಗೆ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ಜಾರಿಗೊಳಿಸಿದ್ದಾರೆ. ಈ ಕುರಿತು ʻಪಬ್ಲಿಕ್ ಟಿವಿʼ ಜೊತೆಗೆ ಸ್ವಾಮೀಜಿ ಮಾತನಾಡಿದ್ದಾರೆ. ಇದನ್ನೂ ಓದಿ: Cyclone Fengal | ಚೆನ್ನೈ ಏರ್‌ಪೋರ್ಟ್‌ನಿಂದ 13 ವಿಮಾನಗಳ ಯಾನ ರದ್ದು
ಜೈಲಿಗೆ ಹಾಕ್ತರಾ? ಹಾಕ್ಲಿ ಬಿಡಿ, ಅಲ್ಲೇ ಇರ್ತಿನಿ. ದೇವರ ಮೇಲೆ ಬರ ಹಾಕಿದ್ದೀನಿ, ರೈತರ ಪರ ಹೋರಾಟದಲ್ಲಿ ಭಾಗಿಯಾಗಿದ್ದೆ. ರೈತರು ಭೂಮಿ ಕಳೆದುಕೊಳ್ಳದಕ್ಕೆ ವಿರೋಧಿಸಿ ಮಾತಾನಾಡಿದ್ದೆ. ಮಾತಿನ ಭರಾಟೆಯಲ್ಲಿ ಮುಸ್ಲಿಮರ ಮತದಾನದ ಬಗ್ಗೆ ಹೇಳಿದ್ದೆ. ಅದು ಉದ್ದೇಶ ಪೂರ್ವಕವಾಗಿ ಹೇಳಿದ ಮಾತಲ್ಲ. ಆ ಬಗ್ಗೆ ಮರುದಿನವೇ ಪತ್ರಿಕಾ ಹೇಳಿಕೆ ನೀಡಿದ್ದೆ. ಇದನ್ನ ಇಲ್ಲಿಗೆ ಬಿಟ್ಟು ಬಿಡಿ, ಭಾರತ ಎಲ್ಲ ಧರ್ಮದವರ ದೇಶ. ನಮ್ಮ ಮಠಕ್ಕೂ ಮುಸ್ಲಿಂ ಭಕ್ತರಿದ್ದಾರೆ, ನಾನು ಸಹ ಮುಸ್ಲಿಂ ಸಮುದಾಯದ ಮದುವೆಗಳಿಗೆ ಹೋಗ್ತಿನಿ. ಇದಾದ್ಮೇಲೆ ಯಾಕೇ ದೂರು ದಾಖಲಿಸಿಕೊಂಡಿದ್ದಾರೋ ಗೊತ್ತಿಲ್ಲ ಎಂದು ಯೂಟರ್ನ್ ಹೊಡೆದಿದ್ದಾರೆ.
ವಿಚಾರಣೆಗೆ ಹೋಗಲ್ಲ, ಅವ್ರೇ ಇಲ್ಲಿಗೆ ಬರಲಿ:
ನೋಟಿಸ್ ನೀಡಿರೋದು ಗೊತ್ತಿಲ್ಲ, ನನಗೆ ಆರೋಗ್ಯ ಸರಿಯಿಲ್ಲ, ನಾನು ವಿಶ್ರಾಂತಿಯಲ್ಲಿದ್ದೆ. ನಿನ್ನೆ ಕೆಲ ನಾಯಕರು ಬಂದು ನಾವಿದ್ದೇವೆ ಅಂತಾ ಹೇಳಿದ್ರು. ನಾನು ಯಾವುದರ ಬಗ್ಗೆಯೂ ಚಿಂತೆ ಮಾಡ್ತಿಲ್ಲ. ವಕ್ಫ್ ಬ್ಯಾನ್ ಮಾಡಿ ಅಂತ ನಾನು ಹೇಳೇ ಇಲ್ಲ. ರೈತರ ಭೂಮಿ ರೈತರಿಗೆ ನೀಡಿ ಅಂತಾ ಹೇಳಿದ್ದೇನೆ. ಸರ್ಕಾರ ಯಾಕೇ ಹೀಗೆ ಮಾಡ್ತಿದೆ? ಒಂದು ಸಮುದಾಯದವರನ್ನ ಓಲೈಕೆ ಮಾಡೋದು ಸರಿಯಲ್ಲ. ವಿಚಾರಣೆಗೆ ಹೋಗಲು ಆಗೋಲ್ಲ, ಅವ್ರೇ ಇಲ್ಲೇ ಬಂದ್ರೇ ನನ್ನ ಹೇಳಿಕೆಗೆ ಸ್ಪಷ್ಟನೆ ನೀಡ್ತೇನೆ ಎಂದಿದ್ದಾರೆ. ಇದನ್ನೂ ಓದಿ: ವಾರಣಾಸಿ ರೈಲ್ವೆ ನಿಲ್ದಾಣದ ಪಾರ್ಕಿಂಗ್ ಬಳಿ ಆಕಸ್ಮಿಕ ಬೆಂಕಿ – 200 ದ್ವಿಚಕ್ರ ವಾಹನಗಳು ಭಸ್ಮ
ನನಗಿಂತ ಮೊದಲು ಇತಂಹ ಅನೇಕ ಹೇಳಿಕೆಗಳು ಬಂದಿದೆ. ನಾನು ಹೇಳಿದ ಕೂಡ್ಲೇ ಮತದಾನದಿಂದ ಹಿಂದೆ ಸರಿಸೋಕೆ ಆಗುತ್ತಾ? ಅದಕ್ಕೆ ಅಂತಾ ಸಂವಿಧಾನವಿದೆ. ರೈತರಿಗೆ ಒಳ್ಳೆಯದು ಆಗಬೇಕು ಅನ್ನೋದಷ್ಟೇ ನನ್ನ ಉದ್ದೇಶ. ನನ್ನ ಆರೋಗ್ಯ ಸರಿಯಿಲ್ಲ. ಆರ್. ಅಶೋಕ್, ಅಶ್ವಥ್ ನಾರಾಯಣ್ ಬಂದಿದ್ರು, ನಿಮ್ಮ ಪರವಾಗಿ ಇದ್ದೇವೆ ಅಂತ ಹೇಳಿದ್ರು. ಕಾನೂನಿನಲ್ಲಿ ಏನ್ ಆಗಿತ್ತೋ ನೋಡೋಣ. ಯಾಕ್ ಹೀಗೆ ಮಾಡ್ತಿದ್ದಾರೆ ಗೊತ್ತಿಲ್ಲ. ಮುಂದೇನಾಗುತ್ತೋ, ಆ ದೇವರು ನಡೆಸಿದಂತೆ ಆಗುತ್ತೆ ಎಂದು ನುಡಿದಿದ್ದಾರೆ.
ಬೆಂಗಳೂರು: ಮುಸ್ಲಿಮರಿಗೆ (Muslims) ಮತದಾನದ ಹಕ್ಕು ಇಲ್ಲದಂತೆ ಮಾಡಬೇಕು ಎಂದು ಕರೆ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿಗೆ (Chandrashekar Swamiji) ಉಪ್ಪಾರಪೇಟೆ ಪೊಲೀಸರಿಂದ ನೊಟೀಸ್ ಹೊರಡಿಸಿದ್ದಾರೆ. ಡಿಸೆಂಬರ್ 2 ರಂದು ಬೆಳಗ್ಗೆ 11 ಗಂಟೆಗೆ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ಜಾರಿಗೊಳಿಸಿದ್ದಾರೆ.
ಸೈಯ್ಯದ್ ಅಬ್ಬಾಸ್ ಎಂಬವರು ಸ್ವಾಮೀಜಿ ಹೇಳಿಕೆಯನ್ನು ಖಂಡಿಸಿ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಬಿಎನ್‌ಎಸ್ ಸೆಕ್ಷನ್ 299 (ಯಾವುದೇ ಧರ್ಮವನ್ನು ಅಪಮಾನಗೊಳಿಸಿ ಅವರ ಧಾರ್ಮಿಕ ಭಾವನೆಗಳಿಗೆ ಆಘಾತ ಉಂಟುಮಾಡುವ ಉದ್ದೇಶದಿಂದ ಬುದ್ಧಿಪೂರ್ವಕವಾಗಿ ಮತ್ತು ದ್ವೇಷ ಭಾವನೆಯಿಂದ ಮಾಡಿದ ಕೃತ್ಯ) ಅಡಿ ಉಪ್ಪಾರಪೇಟೆ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಇದನ್ನೂ ಓದಿ: Cyclone Fengal | ತಮಿಳುನಾಡಿಗೆ ಇಂದು ಅಪ್ಪಳಿಸಲಿದೆ ಫೆಂಗಲ್ ಚಂಡಮಾರುತ – ಭೂಕುಸಿತ ಸಾಧ್ಯತೆ
ದೂರಿನಲ್ಲಿ ಏನಿದೆ?
ಭಾರತ ದೇಶದ ಪ್ರಜೆಗಳಾದ ನಾವು, ಸಂವಿಧಾನ ಬದ್ದರಾಗಿ ಈ ದೇಶದಲ್ಲಿ ಜೀವನ ಮಾಡುತ್ತಿದ್ದೇವೆ. ಆದರೆ ಚಂದ್ರಶೇಖರ ಸ್ವಾಮೀಜಿ ಅವರು ಮುಸ್ಲಿಂ ಧರ್ಮದವರನ್ನು ಗುರಿಯಾಗಿಸಿಕೊಂಡು ಅವರ ಭಾವನೆಗಳಿಗೆ ನೋವುಂಟಾಗುವಂತೆ ಮತ್ತು ಎಲ್ಲಾ ಮುಸ್ಲಿಂ ಜನಾಂಗದವರನ್ನು ಶತ್ರು ದೇಶದವರಿಗೆ ಹೋಲಿಸಿ ಮಾತನಾಡುವ ಮೂಲಕ ಜನರಿಗೆ ಅವಮಾನ ಮಾಡಿರುತ್ತಾರೆ. ಜಾತಿ ಜಾತಿಗಳ ನಡುವೆ ಮತೀಯ ದ್ವೇಷ, ವೈರತ್ವ, ವೈಮನಸ್ಸು ಹುಟ್ಟುವಂತೆ ಪ್ರಚೋದಿಸಿ, ಪ್ರಚೋದನಕಾರಿ ಭಾಷಣ ಮಾಡಿರುವ ಶ್ರೀ ಚಂದ್ರಶೇಖರ ಸ್ವಾಮೀಜಿ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಮನವಿ ಮಾಡಿದ್ದರು. ಇದನ್ನೂ ಓದಿ: ಮುಸ್ಲಿಮರಿಗೆ ಮತದಾನದ ಹಕ್ಕಿಲ್ಲದಂತೆ ಮಾಡಬೇಕು ಎಂದಿದ್ದ ಚಂದ್ರಶೇಖರ ಸ್ವಾಮೀಜಿ ವಿರುದ್ಧ ಎಫ್‌ಐಆರ್
ಚಂದ್ರಶೇಖರ ಸ್ವಾಮೀಜಿ ಹೇಳಿದ್ದು ಏನು?
ನಗರದ ಫ್ರೀಡಂ ಪಾರ್ಕ್‌ನಲ್ಲಿ ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ್ದ ಅವರು ಪಾಕಿಸ್ತಾನದಲ್ಲಿ ಬೇರೆಯವರಿಗೆ ಮತ (Vote) ಹಾಕುವ ಅಧಿಕಾರವಿಲ್ಲ. ಅದೇ ರೀತಿ ನಮ್ಮ ಭಾರತದಲ್ಲಿಯೂ ಮುಸ್ಲಿಮರಿಗೆ ಮತದಾನ ಮಾಡುವ ಹಕ್ಕಿಲ್ಲದಂತೆ ಮಾಡಿದರೆ ಅವರು ಅವರ ಪಾಡಿಗಿರುತ್ತಾರೆ. ಖಂಡಿತವಾಗಿಯೂ ಎಲ್ಲರೂ ನೆಮ್ಮದಿಯಾಗಿ ಇರಲು ಸಾಧ್ಯ. ದೇಶದಲ್ಲಿ ವಕ್ಫ್ ಮಂಡಳಿಯೇ ಇಲ್ಲದಂತೆ ಮಾಡಬೇಕು.
ವಕ್ಫ್ ಮಂಡಳಿಯೇ ಇಲ್ಲದಂತೆ ಮಾಡಿದರೆ ಆಗ ಭಾರತೀಯರೆಲ್ಲರೂ ನೆಮ್ಮದಿಯಿಂದ ಇರಲು ಸಾಧ್ಯವಾಗಲಿದೆ. ರೈತರ ಜಮೀನು ಉಳಿಸಲು ಎಲ್ಲರೂ ಒಂದಾಗಿ ಹೋರಾಟ ನಡೆಸುವ ತುರ್ತು ಸಂದರ್ಭ ಎದುರಾಗಿದೆ. ಸರ್ಕಾರ ಹೋದರೂ ತೊಂದರೆ ಇಲ್ಲ. ವಕ್ಫ್ ಮಂಡಳಿ ರದ್ದು ಮಾಡುವ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳಿದ್ದರು.
ಬೆಂಗಳೂರು: ಮುಸ್ಲಿಮರಿಗೆ (Muslims) ಮತದಾನದ ಹಕ್ಕು ಇಲ್ಲದಂತೆ ಮಾಡಬೇಕು ಕರೆ ನೀಡಿದ್ದ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ (Vokkaliga seer Chandrashekar Swamiji ) ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಸೈಯ್ಯದ್ ಅಬ್ಬಾಸ್ ಎಂಬವರು ಸ್ವಾಮೀಜಿ ವಿರುದ್ಧ ದೂರು ನೀಡಿದ್ದು ಬಿಎನ್‌ಎಸ್ ಸೆಕ್ಷನ್ 299 (ಯಾವುದೇ ಧರ್ಮವನ್ನು ಅಪಮಾನಗೊಳಿಸಿ ಅವರ ಧಾರ್ಮಿಕ ಭಾವನೆಗಳಿಗೆ ಆಘಾತ ಉಂಟುಮಾಡುವ ಉದ್ದೇಶದಿಂದ ಬುದ್ಧಿಪೂರ್ವಕವಾಗಿ ಮತ್ತು ದ್ವೇಷ ಭಾವನೆಯಿಂದ ಮಾಡಿದ ಕೃತ್ಯ) ಅಡಿ ಉಪ್ಪಾರಪೇಟೆ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ದೂರಿನಲ್ಲಿ ಏನಿದೆ?
ಭಾರತ ದೇಶದ ಪ್ರಜೆಗಳಾದ ನಾವು, ಸಂವಿಧಾನ ಬದ್ದರಾಗಿ ಈ ದೇಶದಲ್ಲಿ ಜೀವನ ಮಾಡುತ್ತಿದ್ದೇವೆ. ಆದರೆ ಚಂದ್ರಶೇಖರ ಸ್ವಾಮೀಜಿ ಅವರು ಮುಸ್ಲಿಂ ಧರ್ಮದವರನ್ನು ಗುರಿಯಾಗಿಸಿಕೊಂಡು ಅವರ ಭಾವನೆಗಳಿಗೆ ನೋವುಂಟಾಗುವಂತೆ ಮತ್ತು ಎಲ್ಲಾ ಮುಸ್ಲಿಂ ಜನಾಂಗದವರನ್ನು ಶತ್ರು ದೇಶದವರಿಗೆ ಹೋಲಿಸಿ ಮಾತನಾಡುವ ಮೂಲಕ ಜನರಿಗೆ ಅವಮಾನ ಮಾಡಿರುತ್ತಾರೆ. ಜಾತಿ ಜಾತಿಗಳ ನಡುವೆ ಮತೀಯ ದ್ವೇಷ, ವೈರತ್ವ, ವೈಮನಸ್ಸು ಹುಟ್ಟುವಂತೆ ಪ್ರಚೋದಿಸಿ, ಪ್ರಚೋದನಕಾರಿ ಭಾಷಣ ಮಾಡಿರುವ ಶ್ರೀ ಚಂದ್ರಶೇಖರ ಸ್ವಾಮೀಜಿ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಬಿಎಸ್‌ವೈಗೆ ಮತ್ತೊಂದು ಸಂಕಷ್ಟ- 2020ರ ಕೇಸ್‌ಗೆ ಮತ್ತೆ ಜೀವ
ಚಂದ್ರಶೇಖರ ಸ್ವಾಮೀಜಿ ಹೇಳಿದ್ದು ಏನು?
ನಗರದ ಫ್ರೀಡಂ ಪಾರ್ಕ್‌ನಲ್ಲಿ ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ್ದ ಅವರು ಪಾಕಿಸ್ತಾನದಲ್ಲಿ ಬೇರೆಯವರಿಗೆ ಮತ(Vote) ಹಾಕುವ ಅಧಿಕಾರವಿಲ್ಲ. ಅದೇ ರೀತಿ ನಮ್ಮ ಭಾರತದಲ್ಲಿಯೂ ಮುಸ್ಲಿಮರಿಗೆ ಮತದಾನ ಮಾಡುವ ಹಕ್ಕಿಲ್ಲದಂತೆ ಮಾಡಿದರೆ ಅವರು ಅವರ ಪಾಡಿಗಿರುತ್ತಾರೆ. ಖಂಡಿತವಾಗಿಯೂ ಎಲ್ಲರೂ ನೆಮ್ಮದಿಯಾಗಿ ಇರಲು ಸಾಧ್ಯ.
ದೇಶದಲ್ಲಿ ವಕ್ಫ್ ಮಂಡಳಿಯೇ ಇಲ್ಲದಂತೆ ಮಾಡಬೇಕು. ವಕ್ಫ್ ಮಂಡಳಿಯೇ ಇಲ್ಲದಂತೆ ಮಾಡಿದರೆ ಆಗ ಭಾರತೀಯರೆಲ್ಲರೂ ನೆಮ್ಮದಿಯಿಂದ ಇರಲು ಸಾಧ್ಯವಾಗಲಿದೆ. ರೈತರ ಜಮೀನು ಉಳಿಸಲು ಎಲ್ಲರೂ ಒಂದಾಗಿ ಹೋರಾಟ ನಡೆಸುವ ತುರ್ತು ಸಂದರ್ಭ ಎದುರಾಗಿದೆ. ಸರ್ಕಾರ ಹೋದರೂ ತೊಂದರೆ ಇಲ್ಲ. ವಕ್ಫ್ ಮಂಡಳಿ ರದ್ದು ಮಾಡುವ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳಿದ್ದರು.
ಬೆಂಗಳೂರು: ಲೋಕಸಭೆ ಚುನಾವಣೆ (Lok Sabha Election) ಅಖಾಡದಲ್ಲೀಗ ಒಕ್ಕಲಿಗ ಜಟಾಪಟಿ ಜೋರಾಗಿದೆ. ಒಕ್ಕಲಿಗ ಸಮುದಾಯದ (Okkaliga Community) ಓಲೈಕೆಗಾಗಿ ಕಾಂಗ್ರೆಸ್-ಜೆಡಿಎಸ್ (Congress-JDS) ನಡುವೆ ದೊಡ್ಡ ಸಂಘರ್ಷವೇ ನಡೆದಿದೆ.
ಆದಿಚುಂಚನಗಿರಿ ಶ್ರೀಗಳನ್ನು (Adichunchanagiri) ದೋಸ್ತಿ ನಾಯಕರು ಭೇಟಿ ಮಾಡಿದ ಬೆನ್ನಲ್ಲೇ, ಜೆಡಿಎಸ್-ಬಿಜೆಪಿ ಒಕ್ಕಲಿಗರ ವಿರೋಧಿ ಎಂದು ಬಿಂಬಿಸಲು ಕಾಂಗ್ರೆಸ್ ಹೊಸ ಹೊಸ ದಾಳ ಉರುಳಿಸ್ತಿದೆ. ಇದರ ಭಾಗವಾಗಿ ಹಳೆಯ ಘಟನೆಗಳನ್ನು ಕೆದಕಿ ದೇವೇಗೌಡರು ಮತ್ತು ಕುಮಾರಸ್ವಾಮಿ (Kumaraswamy) ಅವರನ್ನು ಇಕ್ಕಟ್ಟಿಗೆ ಸಿಲುಕಿಸಲು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಮತ್ತು ಸಚಿವ ಚಲುವರಾಯಸ್ವಾಮಿ (Chaluvaraya Swamy) ಮುಂದಾಗಿದ್ದಾರೆ. ಇದನ್ನೂ ಓದಿ: ಕೇರಳದಲ್ಲಿ ಟಿಪ್ಪು ಸದ್ದು – ಸುಲ್ತಾನ್ ಬತ್ತೇರಿ ಹೆಸರನ್ನು ಬದಲಾಯಿಸುತ್ತೇನೆ ಎಂದ ಬಿಜೆಪಿ ಅಧ್ಯಕ್ಷ ಸುರೇಂದ್ರನ್
ನಿರ್ಮಲಾನಂದನಾಥ ಸ್ವಾಮೀಜಿ ಫೋನ್ ಟ್ಯಾಪ್ ಮಾಡಿಸಿದರು. ಬಾಲಗಂಗಾಧರನಾಥ ಸ್ವಾಮೀಜಿಗೆ ಇನ್ನಿಲ್ಲದ ಕಿರುಕುಳ ಕೊಟ್ಟರು. ಆದಿಚುಂಚನಗಿರಿಗೆ ಪರ್ಯಾಯವಾಗಿ ಎರಡನೇ ಮಠ ಮಾಡಿದರು ಅಂತೆಲ್ಲಾ ದೂರಿದ್ದಾರೆ. 2004ರಲ್ಲಿ ಎಸ್‌ಎಂ ಕೃಷ್ಣ ಎರಡನೇ ಬಾರಿ ಸಿಎಂ ಆಗುವುದನ್ನು ದೇವೇಗೌಡರು ತಪ್ಪಿಸಿದ್ರು ಎಂದು ಚಲುವರಾಯಸ್ವಾಮಿ ಆರೋಪಿಸಿದ್ದಾರೆ. ಇದನ್ನೂ ಓದಿ: ಯಾವುದೇ ಕಾರಣಕ್ಕೂ ಆರ್ಟಿಕಲ್ 370 ಸಹವಾಸ ಬೇಡ: ಕಾಂಗ್ರೆಸ್‍ಗೆ ಅಮಿತ್ ಶಾ ಎಚ್ಚರಿಕೆ
ಈ ಆರೋಪಕ್ಕೆ ಅಹುದಹುದು. ಅದೆಲ್ಲಾ ಡಾಕ್ಯೂಮೆಂಟ್. ನೆನಪಿಸಿಕೊಂಡ್ರೆ ನೋವಾಗುತ್ತೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಇದೀಗ ರಾಜ್ಯ ರಾಜಕೀಯದಲ್ಲಿ ಮತ್ತೊಮ್ಮೆ ಸಂಚಲನಕ್ಕೆ ಕಾರಣವಾಗಿದೆ. ಅಂದ ಹಾಗೇ, 2019ರ ಲೋಕಸಭೆ ಚುನಾವಣೆಯಲ್ಲೂ ಫೋನ್ ಟ್ಯಾಪಿಂಗ್ ವಿಚಾರ ಸದ್ದು ಮಾಡಿತ್ತು.
ಏನಿದು ಫೋನ್ ಟ್ಯಾಪಿಂಗ್ ಕೇಸ್?
ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗಈ ಪ್ರಕರಣ ನಡೆದಿತ್ತು. ಸರ್ಕಾರ ಪತನ ವೇಳೆ ಶ್ರೀಗಂಧ ಚೋರರ ಕೇಸಲ್ಲಿ ಸ್ವಾಮೀಜಿ ಫೋನ್ ಕದ್ದಾಲಿಕೆ ಮಾಡಲಾಗಿದೆ ಆರೋಪ ಕೇಳಿ ಬಂದಿತ್ತು.
ಕುಮಾರಸ್ವಾಮಿ ವಿರುದ್ಧ ಯಾವುದೇ ಕೇಸ್, ತನಿಖೆ ಆಗಿರಲಿಲ್ಲ. ಆದರೆ ಅಲೋಕ್ ಕುಮಾರ್ ವಿರುದ್ಧ ಭಾಸ್ಕರ್‌ರಾವ್ ಕೇಸ್ ದಾಖಲಿಸಿದ್ದರು. ಕೊನೆಗೆ ಈ ಪ್ರಕರಣದ ಬಗ್ಗೆ ಸಿಬಿಐ ತನಿಖೆ, ಬಿ-ರಿಪೋರ್ಟ್ ಸಲ್ಲಿಕೆಯಾಗಿತ್ತು. ಆದರೆ ಭಾಸ್ಕರ್ ರಾವ್ ಬಿ ರಿಪೋರ್ಟ್ ಅನ್ನು ಪ್ರಶ್ನಿಸಿದ್ದರು. ಹೀಗಾಗಿ ಪ್ರಕರಣದ ಮರು ತನಿಖೆ ನಡೆಸುವಂತೆ ಕೋರ್ಟ್ ಸಿಬಿಐಗೆ ನಿರ್ದೇಶನ ನೀಡಿತ್ತು. ಸಿಬಿಐನಿಂದ ಮರುತನಿಖೆ ನಡೆದಿದ್ದು ಇನ್ನೂ ಅಂತಿಮ ವರದಿ ಸಲ್ಲಿಸಿಲ್ಲ.
ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ (Lok Sabha Election) ಕನಿಷ್ಠ 7 ಕ್ಷೇತ್ರಗಳನ್ನು ಒಕ್ಕಲಿಗರಿಗೆ (Vokkaliga) ನೀಡಬೇಕೆಂಬ ಬೇಡಿಕೆ ಕಾಂಗ್ರೆಸ್‌ನಲ್ಲಿ ವ್ಯಕ್ತವಾಗಿದೆ.
ನಾನಾ ಹುದ್ದೆಗಳಿಗೆ, ಸ್ಥಾನಗಳಿಗೆ ಮತ್ತು ನಿಗಮ, ಮಂಡಳಿಗಳಿಗೆ ಆಯ್ಕೆಯಾದ, ನೇಮಕಗೊಂಡ ಒಕ್ಕಲಿಗ ಸಮುದಾಯದ ನಾಯಕರು ಮತ್ತು ಪ್ರತಿನಿಧಿಗಳನ್ನು ಬೆಂಗಳೂರು ನಗರದ ಖಾಸಗಿ ಹೋಟೆಲ್‌ನಲ್ಲಿ ಸನ್ಮಾನಿಸಲಾಯಿತು. ಈ ವೇಳೆ ಕಾಂಗ್ರೆಸ್ ಒಕ್ಕಲಿಗ ನಾಯಕರು ಲೋಕಸಭೆ ಚುನಾವಣೆ ಹಾಗೂ ರಾಜ್ಯಸಭಾ ಚುನಾವಣೆ ಸಂಬಂಧ ಸಾಕಷ್ಟು ಚರ್ಚೆ ಮಾಡಿದ್ದಾರೆ. ಇದನ್ನೂ ಓದಿ: ‘ತಿರುವನಂತಪುರಂ-ಕಾಸರಗೋಡು’ ವಂದೇ ಭಾರತ್ ಎಕ್ಸ್‌ಪ್ರೆಸ್ ಮಂಗಳೂರಿಗೂ ವಿಸ್ತರಣೆ
ನಾನಾ ಹುದ್ದೆಗಳಿಗೆ, ಸ್ಥಾನಗಳಿಗೆ ಮತ್ತು ನಿಗಮ, ಮಂಡಳಿಗಳಿಗೆ ಆಯ್ಕೆಯಾದ, ನೇಮಕಗೊಂಡ ಒಕ್ಕಲಿಗ ಸಮುದಾಯದ ನಾಯಕರು ಮತ್ತು ಪ್ರತಿನಿಧಿಗಳು ಇಂದು ನನಗೆ ಅಭಿನಂದಿಸಿ, ಸನ್ಮಾನಿಸಿದರು.
ಇದೇ ಸಂದರ್ಭದಲ್ಲಿ ಸರ್ಕಾರದ ಯೋಜನೆಗಳು, ಕಾರ್ಯಕ್ರಮಗಳು ಮತ್ತು ಗ್ಯಾರಂಟಿಗಳನ್ನು ಒಕ್ಕಲಿಗ ಸಮುದಾಯದ ಪ್ರತಿಯೊಬ್ಬರಿಗೂ ತಲುಪಿಸುವಂತೆ ಸಮುದಾಯದ ನಾಯಕರುಗಳಿಗೆ… pic.twitter.com/D01ZNOwbKx
ಹಳೆ ಮೈಸೂರು (Old Mysuru) ಭಾಗದಲ್ಲಿ 11 ಕ್ಷೇತ್ರಗಳಲ್ಲಿ ಒಕ್ಕಲಿಗರ ಪ್ರಾಬಲ್ಯವಿದೆ. ಅಷ್ಟೇ ಅಲ್ಲದೆ ಕರಾವಳಿ ಹಾಗೂ ಮಲೆನಾಡಿನ ಮೂರು ಕ್ಷೇತ್ರಗಳಲ್ಲೂ ಒಕ್ಕಲಿಗರ ಸಂಖ್ಯೆ ಹೆಚ್ಚಿದೆ. ಹೀಗಾಗಿ ಕನಿಷ್ಠ 7 ರಿಂದ 9 ಕ್ಷೇತ್ರದಲ್ಲಿ ಒಕ್ಕಲಿಗರು ಟಿಕೆಟ್ ಕೇಳಿದರೆ ತಪ್ಪೇನು? ಕನಿಷ್ಠ 7 ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯಕ್ಕೆ ಟಿಕೆಟ್ ನೀಡಬೇಕೆಂದು ಶಾಸಕರು ಒತ್ತಾಯ ಮಾಡಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ಯುಪಿ ಬಗ್ಗೆ ರಾಗಾ ವಿವಾದಾತ್ಮಕ ಮಾತು- ಮಗನಿಗೆ ಬುದ್ಧಿ ಹೇಳುವಂತೆ ಸೋನಿಯಾಗೆ ಸ್ಮೃತಿ ಸಲಹೆ
ಒಕ್ಕಲಿಗ ಸಮುದಾಯದಿಂದ ನೂತನವಾಗಿ ಆಯ್ಕೆಯಾಗಿರುವ ನಿಗಮ ಮಂಡಳಿ ಅಧ್ಯಕ್ಷರು, ವಿಧಾನ ಪರಿಷತ್ ಸದಸ್ಯರು, ರಾಜ್ಯಸಭೆ ಅಭ್ಯರ್ಥಿಗಳಿಗೆ ಇಂದು ಖಾಸಗಿ ಹೋಟೆಲ್'ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳೊಂದಿಗೆ ಅಭಿನಂದನೆ ಸಲ್ಲಿಸಿ, ಶುಭ ಹಾರೈಸಿದೆ. pic.twitter.com/YxEhmjI120
ವಿಧಾನಸಭೆ ಚುನಾವಣೆಯಲ್ಲಿ ಡಿಕೆ ಶಿವಕುಮಾರ್ (DK Shivakumar) ಸಿಎಂ ಆಗಬಹುದು ಎಂಬ ಕಾರಣಕ್ಕೆ ಸಮುದಾಯ ಕೈ ಹಿಡಿದಿತ್ತು. ಈ ಬಾರಿ ಹೆಚ್ಚಿನ ಸ್ಥಾನ ಗೆಲುವುದು ಹೇಗೆ ಎಂಬುದರ ಬಗ್ಗೆಯೂ ಗಂಭೀರ ಚರ್ಚೆ ನಡೆದಿದೆ.
ಬಿಜೆಪಿ – ಜೆಡಿಎಸ್ (BJP-JDS) ಮೈತ್ರಿ ಆಗಿದ್ದರೂ ಒಕ್ಕಲಿಗ ಸಮುದಾಯ ದೊಡ್ಡ ಮಟ್ಟದಲ್ಲಿ ಕಾಂಗ್ರೆಸ್ ಕೈ ಬಿಟ್ಟಂತೆ ಕಾಣುತ್ತಿಲ್ಲ. ರಾಜ್ಯ ಮಟ್ಟದಲ್ಲಿ ಮುಂದಿರುವ ದೊಡ್ಡ ಅವಕಾಶವನ್ನು ಸಮುದಾಯದ ಗಮನಕ್ಕೆ ತಂದು ಮನವೊಲಿಸಲು ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಪರೋಕ್ಷವಾಗಿ ಎರೆಡೂವರೆ ವರ್ಷದ ನಂತರ ಡಿಕೆಶಿ ಸಿಎಂ ಆಗೇ ಆಗುತ್ತಾರೆ ಎಂಬ ಕಾರ್ಡ್ ಪ್ಲೇ ಮಾಡುವ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ.
ಬೆಂಗಳೂರು: ಸಹಿ ಯಾಕೆ ಮಾಡಬಾರದು? ಮಾಡಿದರೆ ತಪ್ಪೇನು? ಅದು ನಮ್ಮ ಸಮಾಜದ ನಿರ್ಣಯ ಎಂದು ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಹೇಳಿದ್ದಾರೆ.
ಕಾಂತರಾಜು ಅವರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (Kantharaju Caste Census and Socio-Economic Survey) ವರದಿಯನ್ನು ಸರ್ಕಾರ ಸ್ವೀಕಾರ ಮಾಡದಂತೆ ಸಹಿ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಡಿಕೆಶಿ ಪ್ರತಿಕ್ರಿಯಿಸಿ ಸಹಿ ಹಾಕಿದ್ದನ್ನು ಒಪ್ಪಿಕೊಂಡರು.
ನಮ್ಮ ಸಮಾಜದ ನಿರ್ಣಯ ಬೇರೆ ರಾಜಕೀಯ ಬೇರೆ. ನಾನು ಮತ್ತು ಸಚಿವರು ಸಭೆಯಲ್ಲಿ ಭಾಗವಹಿಸಿದ್ದೇವೆ. ಸಮಾಜದ ಮುಖಂಡರು ವೈಜ್ಞಾನಿಕವಾಗಿ ಆಗಬೇಕು ಎಂದು ಹೇಳಿದ್ದಾರೆ ಎಂದರು.
ನವೆಂಬರ್ 24ಕ್ಕೆ ಸರ್ಕಾರಕ್ಕೆ ಹಿಂದುಳಿದ ವರ್ಗಗಳ ಆಯೋಗ ವರದಿ ಸಲ್ಲಿಸಲು ನಿರ್ಧರಿಸಿರುವ ಈ ಹೊತ್ತಲೇ ನಿರೀಕ್ಷೆಯಂತೆ ಸರ್ಕಾರದ ಒಳಗೆ-ಹೊರಗಿನಿಂದ ಜಾತಿಗಣತಿ ವರದಿ ಕಿಚ್ಚು ಹಬ್ಬತೊಡಗಿದೆ.
ಒಕ್ಕಲಿಗ ಸಂಘದ ಪತ್ರಕ್ಕೆ ಸಹಿ ಹಾಕಿದ ಕಾಂಗ್ರೆಸ್ ನಾಯಕರು ಯಾರು?
* ಡಿ.ಕೆ. ಶಿವಕುಮಾರ್, ಉಪ ಮುಖ್ಯಮಂತ್ರಿ
* ಚಲುವರಾಯಸ್ವಾಮಿ, ಸಚಿವ
* ರಾಮಲಿಂಗಾರೆಡ್ಡಿ, ಸಚಿವ
* ಎಂ.ಸಿ. ಸುಧಾಕರ್, ಸಚಿವ
* ಟಿ.ಬಿ. ಜಯಚಂದ್ರ, ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ
* ಶಿವಲಿಂಗೇಗೌಡ, ಶಾಸಕ
* ಎಂ. ಕೃಷ್ಣಪ್ಪ, ಶಾಸಕ
* ಶರತ್ ಬಚ್ಚೇಗೌಡ, ಶಾಸಕ