ಮಂಗಳೂರು: ಒಂದೇ ಕುಟುಂಬದ ನಾಲ್ಕು ಮಂದಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರಿನ ಕೆ.ಎಸ್.ರಾವ್ ರೋಡ್ (K S Rao Road Mangaluru) ಬಳಿ ನಡೆದಿದೆ.
ಮೃತರನ್ನು ದೇವೇಂದ್ರ(48), ನಿರ್ಮಲಾ(48), ಚೈತ್ರಾ(09) ಹಗೂ ಚೈತನ್ಯ (09) ಎಂದು ಗುರುತಿಸಲಾಗಿದೆ. ಕೆ.ಎಸ್.ರಾವ್ ರೋಡಿನ ಕರುಣಾ ಲಾಡ್ಜ್ ನಲ್ಲಿ ನಾಲ್ವರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೃತರು ಮೈಸೂರು ಮೂಲದ ವಾಣಿವಿಲಾಸ ಬಡಾವಣೆ ನಿವಾಸಿಗಳಾಗಿದ್ದು, ಮಾ. 27ರಂದು ಮಂಗಳೂರಿನಲ್ಲಿ ಒಂದು ದಿನಕ್ಕಾಗಿ ರೂಂ ಬುಕ್ ಮಾಡಿದ್ದರು. ಬಳಿಕ ಅದನ್ನು ಎರಡು ದಿನಕ್ಕಾಗಿ ವಿಸ್ತರಣೆ ಮಾಡಿದ್ದರು. ಗುರುವಾರ ಸಂಜೆ ರೂಂ ಚೆಕ್ ಔಟ್ ಮಾಡಬೇಕಾಗಿತ್ತು. ಆದರೆ ಬಾಗಿಲು ತೆರೆಯದ ಕಾರಣ ಅನುಮಾನಗೊಂಡು ಇಂದು ತಪಾಸಣೆ ನಡೆಸಿದಾಗ ಬೆಳಕಿಗೆ ಬಂದಿದೆ.
ಚಿಕ್ಕಮಗಳೂರು: ಒಂದೇ ಕುಟುಂಬದ ಮೂವರು ಮನೆಯಲ್ಲೇ ಆತ್ಮಹತ್ಯೆಗೆ ಶರಣಾಗಿರೋ ಘಟನೆ ಜಿಲ್ಲೆಯ ಶೃಂಗೇರಿ ತಾಲೂಕಿನ ಮಕ್ಕಿಮನೆ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಶಾರದಮ್ಮ(70), ವೀಣಾ(49) ಹಾಗೂ ಶ್ರಾವ್ಯ(16) ಎಂದು ಗುರುತಿಸಲಾಗಿದೆ. ಮೃತ ವೀಣಾ ಶೃಂಗೇರಿಯ ಹೊನ್ನವಳ್ಳಿ ಗ್ರಾಮದ ಅಂಗನವಾಡಿಯಲ್ಲಿ ಕೆಲಸ ಮಾಡುತ್ತಿದ್ದರು. ಇಂದು ಅಂಗನವಾಡಿಗೆ ತೆರಳದ ಹಿನ್ನೆಲೆಯಲ್ಲಿ ಅಂಗನವಾಡಿ ಸಹಾಯಕಿ ಪೂರ್ಣಿಮಾ, ವೀಣಾಗೆ ಕರೆ ಮಾಡಿದ್ದಾರೆ. ಅವರು ಫೋನ್ ಸ್ವೀಕರಿಸಿಲ್ಲ. ಆಗ ಪೂರ್ಣಿಮಾ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಿಯರು ಅವರ ಮನೆ ಬಳಿ ಹೋದಾಗ ಬಾಗಿಲು ಹಾಕಿತ್ತು. ಬಾಗಿಲು ಬಡಿದರೂ ಯಾರೂ ತೆಗೆಯದ ಹಿನ್ನೆಲೆ ಮನೆಯ ಹಂಚು ತೆಗೆದು ನೋಡಿದಾಗ ಮೂವರು ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ದಲಿತ ಯುವಕನಿಗೆ ಮೂತ್ರ ಕುಡಿಸಿದ ಆರೋಪ – PSIಗೆ 14 ದಿನ ನ್ಯಾಯಾಂಗ ಬಂಧನ
ಮೂವರು ಆತ್ಮಹತ್ಯೆಗೆ ಶರಣಾಗಲು ಕೌಟುಂಬಿಕ ಕಲಹವೇ ಕಾರಣ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ, ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಮೂವರು ಸಾವಿಗೆ ಶರಣಾದಾಗ ಮನೆಯಲ್ಲಿ ಯಾರೂ ಇರಲಿಲ್ಲ. ಮೃತ ವೀಣಾ ಗಂಡ ಕೆಲಸಕ್ಕೆ ಹೋದಾಗ ಮನೆಯಲ್ಲಿ ಮೂವರೇ ಇದ್ದರು. ಗಂಡ ಕೆಲಸಕ್ಕೆ ಹೋಗುತ್ತಿದ್ದಂತೆ ಒಬ್ಬರ ಪಕ್ಕದಲ್ಲಿ ಒಬ್ಬರು ಮೂವರು ನೇಣಿಗೆ ಶರಣಾಗಿದ್ದಾರೆ. ಮೃತ ಶ್ರಾವ್ಯ 10ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದಳು. ಸ್ಥಳಕ್ಕೆ ಶೃಂಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಐದು ರೂಪಾಯಿ ನಾಣ್ಯ ನುಂಗಿದ ಬಾಲಕಿ ಸಾವು
ಜೈಪುರ: ಕಾಮುಕನೊಬ್ಬ ಅಪ್ರಾಪ್ತೆ ಸೇರಿದಂತೆ ಒಂದೇ ಮನೆಯ ನಾಲ್ವರನ್ನು ಅತ್ಯಾಚಾರವೆಸಗಿದ ಘಟನೆ ರಾಜಸ್ಥಾನದ ಜಿಲ್ಲೆಯೊಂದರಲ್ಲಿ ನಡೆದಿದೆ.
ಕಾಮುಕನನ್ನು ವಿಷ್ಣು ಗುರ್ಜರ್ ಎಂದು ಗುರುತಿಸಲಾಗಿದೆ. ಈತ ಅಂತ್ರಸ್ತ ಕುಟುಂಬದ ಮನೆಯ ಹತ್ತಿರವೇ ದಾಭಾ ಇಟ್ಟುಕೊಂಡಿದ್ದ.
ವಿಷ್ಣು ಗುರ್ಜರ್ ಕುಟುಂಬದ ಮಹಿಳೆಯ ಮೇಲೆ ಒಂದು ವರ್ಷದ ಹಿಂದೆ ಅತ್ಯಾಚಾರ ಎಸಗಿದ್ದನು. ಇದೀಗ ಆರೋಪಿ ಮಹಿಳೆಯ ತಂಗಿಯರು ಮತ್ತು ಮಗಳ ಮೇಲೆ ಅತ್ಯಾಚಾರ ಎಸಗಲು ಪ್ರಯತ್ನಿಸಿದ್ದಾನೆ. ಈ ವಿಚಾರ ಮಹಿಳೆಯ ಗಮನಕ್ಕೆ ಬಂದ ಕೂಡಲೇ ಆಕೆ ಪೊಲೀಸರನ್ನು ಸಂಪರ್ಕಿಸಿ ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾಳೆ.
ಗುರ್ಜರ್ ವಿರುದ್ಧ ಮಹಿಳೆ ಅತ್ಯಾಚಾರ ಪ್ರಕರಣ ದಾಖಲಿಸುತ್ತಿದ್ದಂತೆಯೇ ಕುಟುಂಬದ ಇತರ ಮಹಿಳೆಯರು ಕೂಡ ಪೊಲೀಸ್ ಠಾಣೆಗೆ ತೆರಳಿ ಆತನ ವಿರುದ್ಧ ದೂರು ದಾಖಲಿಸಿದ್ದಾರೆ.
ಜನವರಿ 21ರಂದು ಗುರ್ಜರ್ ವಿರುದ್ಧ ಮೊದಲ ಪ್ರಕರಣ ದಾಖಲಾಗಿದೆ. ಅದೇ ದಿನ ಮಹಿಳೆಯ ಸಹೋದರಿಯರು ಕೂಡ ಆತನ ವಿರುದ್ಧ ದೂರು ದಾಖಲಿಸಿದ್ದಾರೆ. ಈ ವಿಚಾರ ಕುಟುಂಬದ ಇತರ ಸದಸ್ಯರ ಗಮನಕ್ಕೆ ಬಂದಿದ್ದು, ಅವರು ಕೂಡ ಗುರ್ಜರ್ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಸದ್ಯ ಆರೋಪಿ ವಿರುದ್ಧ ಜನವರಿ 23 ಮತ್ತು 24ರಂದು ಎರಡು ಅತ್ಯಾಚಾರ ಪ್ರಕರಣ ದಾಖಲಾಗಿದೆ.
ಮಂಡ್ಯ: ಆಸ್ತಿ ಹಂಚಿಕೆ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಇಂದು ಜಗಳ ಆರಂಭವಾಗಿತ್ತು. ಜಗಳ ವಿಕೋಪಕ್ಕೆ ಹೋಗುತ್ತಿದ್ದಂತೆ ಒಂದು ಕುಟುಂಬದ ಇಬ್ಬರು ಮಹಿಳೆಯರು ವಿಷ ಸೇವಿದಿದ್ದಾರೆ. ಇದ್ರಿಂದ ಹೆದರಿದ ಮತ್ತೊಂದು ಕುಟುಂಬ ಸೀಮೆ ಎಣ್ಣೆ ಕುಡಿದು ಆತ್ಮಹತ್ಯೆಗೆ ಯತ್ನಿಸಿದೆ. ಈ ಘಟನೆಯಲ್ಲಿ ಓರ್ವ ಮಹಿಳೆ ಪ್ರಾಣ ಕಳೆದುಕೊಂಡಿದ್ರೆ ನಾಲ್ವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಕೇವಲ ಮೂರು ಗುಂಟೆ ಭೂಮಿ ವಿಚಾರಕ್ಕೆ ವಿಷ ಸೇವಿಸಿ ಓರ್ವ ಮಹಿಳೆ ಪ್ರಾಣ ಕೆಳೆದುಕೊಂಡು, ನಾಲ್ವರು ಆಸ್ಪತ್ರೆ ಪಾಲಾಗಿರುವ ಘಟನೆ ಮಂಡ್ಯ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾಗಿರೊ ಕೊಕ್ಕರೆ ಬೆಳ್ಳೂರು ಗ್ರಾಮದಲ್ಲಿ ಜರುಗಿದೆ.
ದೇಶ, ವಿದೇಶಗಳಿಂದ ಸಂತಾನೋತ್ಪತ್ತಿಗಾಗಿ ಬರುವ ವಿವಿಧ ಪ್ರಬೇಧಗಳ ಪಕ್ಷಿಗಳ ಕಲರವ ಕೇಳುತ್ತಿದ್ದ ಕೊಕ್ಕರೆ ಬೆಳ್ಳೂರು ಗ್ರಾಮದಲ್ಲಿ ಕೇವಲ ಮೂರು ಗುಂಟೆ ಜಮೀನು ವಿಚಾರದಲ್ಲಿ ಆರಂಭವಾದ ಗಲಾಟೆ ಒಂದು ಪ್ರಾಣ ಕಸಿದುಕೊಂಡಿದೆ. ಅಂದಹಾಗೆ ಹತ್ತಿರದ ಸಂಬಂಧಿಗಳಾದ ಸಿದ್ದೇಶ್ ಹಾಗೂ ನಾರಾಯಣ್ ಕುಟುಂಬದ ನಡುವೆ ಜಮೀನು ವಿವಾದ ವಿತ್ತು. ನಾರಾಯಣ್ ಎಂಬುವರ ತಾಯಿ, ಸಿದ್ದೇಶ್ ತಂದೆಯಿಂದ 26 ಗುಂಟೆ ಜಮೀನನ್ನು 1986ನೇ ಇಸಿವಿಯಲ್ಲಿ ಖರೀದಿಸಿದ್ರಂತೆ. ಅದ್ರಲ್ಲಿ 10 ಗುಂಟೆ ಜಮೀನಿನ ದಾಖಲೆ ಸಿದ್ದೇಶ್ ಅಜ್ಜಿ ಹೆಸರಿನಲ್ಲೇ ಇದೆ. ಇದ್ರಿಂದ 10 ಗುಂಟೆ ಜಮೀನು ತಮ್ಮದೆಂದು ಕೆಲವು ತಿಂಗಗಳಿಂದ ಸಿದ್ದೇಶ್ ಕ್ಯಾತೆ ತೆಗೆದಿದ್ರಂತೆ. ಆ ವಿಚಾರಕ್ಕೆ ಎರಡು ಕುಟುಂಬದ ನಡುವೆ ಜಗಳ ನಡೆಯುತ್ತಲೇ ಇತ್ತು.
ಇಂದು ಬೆಳಿಗ್ಗೆ ಆ ಜಾಗದಲ್ಲಿ ಸಿದ್ದೇಶ್ ಕುಟುಂಬ ಶೆಟ್ ಹಾಕಿಕೊಳ್ಳಲು ಮುಂದಾಗಿತ್ತು. ಈ ವೇಳೆ ವೆಂಕಟೇಶ್ ಕುಟುಂಬದವರು ತಡೆದಿದ್ದಾರೆ. ಜಗಳ ನಿಲ್ಲೋ ಲಕ್ಷಣಗಳು ಕಾಣದಿದ್ದಾಗ ಬೇಸರಗೊಂಡು ವೆಂಕಟೇಶ್ ಪತ್ನಿ ಶೈಲಾ ಹಾಗೂ ಅಕ್ಕ ವಿಷ ಸೇವಿಸಿದ್ದಾರೆ. ಇದ್ರಿಂದ ಹೆದರಿದ ಸಿದ್ದೇಶ್ ಸೇರಿ ಆತನ ಕುಟುಂಬದ ಮೂವರು ಸಿಮೆ ಎಣ್ಣೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಇನ್ನು ತಕ್ಷಣ ಎಲ್ಲರನ್ನೂ ಆಸ್ಪತ್ರೆಗೆ ಮದ್ದೂರು ತಾಲ್ಲೂಕು ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ಆದ್ರೆ ವಿಷ ಸೇವಿಸಿ ತೀವ್ರ ಅಶ್ವಸ್ಥಗೊಂಡಿದ್ದ ವೆಂಕಟೇಶ್ ಪತ್ನಿ ಶೈಲಾ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈ ಕುರಿತು ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಳ್ಳಾರಿ: ಜಿಲ್ಲೆಯ ಹೊಸಪೇಟೆಯ ಎಸ್.ಆರ್ ನಗರದ ಒಂದೇ ಕುಟುಂಬದ ಮೂವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.
ಕೊರೊನಾ ಗುಣಲಕ್ಷಣಗಳು ಕಂಡ ಬಂದ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದೆಯಷ್ಟೇ ಮೂವರನ್ನು ಬಳ್ಳಾರಿಯ ವಿಮ್ಸ್ ಗೆ ಪರೀಕ್ಷೆಗೆ ಕರೆದೊಯ್ಯಲಾಗಿತ್ತು. ಇಂದು ಮೂವರ ವರದಿ ಬಂದಿದ್ದು, ಮೂವರಲ್ಲೂ ಸೋಂಕು ಇರುವುದು ದೃಢವಾಗಿದೆ ಎಂದು ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಸ್ಪಷ್ಟಪಡಿಸಿದ್ದಾರೆ.
ಸೋಂಕಿತರು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತಿದ್ದು, ಈ ಮೂವರು ಇತ್ತೀಚೆಗೆ ಬೆಂಗಳೂರಿನಿಂದ ವಾಪಸ್ಸಾಗಿದ್ದರು. ಬಳಿಕ ತೀವ್ರ ಜ್ವರದಿಂದ ಬಳಲುತ್ತಿದ್ದ ಕಾರಣ ಈ ಮೂವರಿಗೆ ವೈದ್ಯಕೀಯ ಪರೀಕ್ಷೆ ನಡೆಸಿ, ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಇಂದು ರಕ್ತ ಪರೀಕ್ಷೆ ವರದಿ ಕೊರೊನಾ ಪಾಸಿಟಿವ್ ಬಂದಿದೆ. ಇತ್ತ ವಿಷಯ ಗೊತ್ತಾದ ನಂತರ ಇಡೀ ಬಡಾವಣೆಗೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳಿಗೂ ಬ್ಯಾರಿಕೇಡ್ ಅಳವಡಿಸಿ, ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಸೋಂಕು ಇರುವುದು ದೃಢಪಟ್ಟಿದ್ದರಿಂದ ಹೊಸಪೇಟೆ ನಗರಸಭೆ ವ್ಯಾಪ್ತಿಯಲ್ಲಿ ಸೋಮವಾರ ಸಂಜೆಯಿಂದಲೇ ನಿಯಮ ಜಾರಿಗೆ ಬರುವಂತೆ, ಒಳ ಹಾಗೂ ಹೊರಹೋಗುವ ಎಲ್ಲಾ ರೀತಿಯ ವಾಹನ ಸಂಚಾರದ ಮೇಲೆ ನಿರ್ಬಂಧ ಹೇರಲಾಗಿದೆ. ಬೆಳಿಗ್ಗೆ 9ರಿಂದ ಹತ್ತು ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದ್ದು, ಕುಟುಂಬದ ಒಬ್ಬ ಸದಸ್ಯರು ಹೊರಬರಲು ಅವಕಾಶವಿದೆ.
ಇಡೀ ನಗರದಾದ್ಯಂತ ಔಷಧ ಸಿಂಪಡಿಸಲಾಗುವುದು. ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಜನರ ಆರೋಗ್ಯ ತಪಾಸಣೆ ಮಾಡುವರು. ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಮನವಿ ಮಾಡಿದ್ದಾರೆ.
ಕಾರವಾರ: ಒಂದೇ ಕುಟುಂಬದ ನಾಲ್ವರಿಗೆ ಸೋಂಕು ಹರಡಿದ್ದು ಕರ್ನಾಟಕದಲ್ಲಿ ಕೊರೊನಾ ಪೀಡಿತರ ಸಂಖ್ಯೆ 74ಕ್ಕೆ ಏರಿಕೆಯಾಗಿದೆ.
ಉತ್ತರ ಕನ್ನಡದಲ್ಲಿ ರೋಗಿ ನಂಬರ್ 36ರ ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ ಕೊರೊನಾ ಸೋಂಕು ತಗುಲಿದೆ. ಈ ಮೂಲಕ ಒಂದೇ ರೋಗಿಯಿಂದ ಮೂವರಿಗೆ ಕೊರೊನಾ ಹರಡಿದೆ. ಚಿಕ್ಕಬಳ್ಳಾಪುರದ ರೋಗಿಯಿಂದ ಐವರಿಗೆ ಕೊರೊನಾ ಸೋಂಕು ಬಂದಿದೆ.
ಉತ್ತರ ಕನ್ನಡ ಮೂಲದ ವ್ಯಕ್ತಿ ಮಾರ್ಚ್ 21 ರಂದು ದುಬೈಯಿಂದ ಮಂಗಳೂರಿಗೆ ಆಗಮಿಸಿ ಭಟ್ಕಳಕ್ಕೆ ತೆರಳಿದ್ದರು. ಇವರ ಸಂಪರ್ಕಕ್ಕೆ ಬಂದಿದ್ದರಿಂದ 54 ವರ್ಷದ ಪತ್ನಿ(ರೋಗಿ 65), 28 ವರ್ಷದ ಮಗಳು(ರೋಗಿ 28), 23 ವರ್ಷದ ಮಗಳು(ರೋಗಿ) ಕೊರೊನಾ ಪೀಡಿತರಾಗಿದ್ದು ಕುಟುಂಬದ ಎಲ್ಲ ಸದಸ್ಯರನ್ನು ಉತ್ತರ ಕನ್ನಡದ ಆಸ್ಪತ್ರೆಗೆ ದಾಖಲಿಸಲಾಗಿದೆ.
ರೋಗಿ 68: 21 ವರ್ಷದ ಪುರುಷರೊಬ್ಬರು, ಬೆಂಗಳೂರಿನ ನಿವಾಸಿಯಾಗಿದ್ದು, ಲಂಡನ್ ದೇಶಕ್ಕೆ ಪ್ರಯಾಣ ಬೆಳೆಸಿ ಮಾರ್ಚ್ 17ರಂದು ಭಾರತಕ್ಕೆ ಹಿಂದಿರುಗಿರುವ ಪ್ರಯಾಣ ಹಿನ್ನೆಲೆಯಿರುತ್ತದೆ ಮತ್ತು ರೋಗಿ-25ರ(ಮಗ) ಸಂಪರ್ಕ ಹೊಂದಿರುತ್ತಾರೆ. ಈ ವ್ಯಕ್ತಿಯನ್ನು ಉತ್ತರ ಕನ್ನಡದ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿರುತ್ತದೆ.
ರೋಗಿ 69: 23 ವರ್ಷದ ಪುರುಷರೊಬ್ಬರು ಹಿಂದುಪುರ, ಆಂಧ್ರಪ್ರದೇಶದ ನಿವಾಸಿಯಾಗಿದ್ದು, ರೋಗಿ-19ರ ಸಂಪರ್ಕ ಹೊಂದಿರುತ್ತಾರೆ. ಈ ವ್ಯಕ್ತಿಯನ್ನು ಚಿಕ್ಕಬಳ್ಳಾಪುರದ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿರುತ್ತದೆ.
ರೋಗಿ 70: 70 ವರ್ಷದ ಪುರುಷರೊಬ್ಬರು ಚಿಕ್ಕಬಳ್ಳಾಪುರದ ನಿವಾಸಿಯಾಗಿದ್ದು, ರೋಗಿ-19ರ ಸಂಪರ್ಕ ಹೊಂದಿರುತ್ತಾರೆ. ಈ ವ್ಯಕ್ತಿಯನ್ನು ಚಿಕ್ಕಬಳ್ಳಾಪುರದ ನಿಗದಿತ ಆಸ್ಪತ್ರೆಗೆ ದಾಖಲಿಸಲಾಗಿದೆ.
ರೋಗಿ 71: 32 ವರ್ಷದ ಮಹಿಳೆ ಚಿಕ್ಕಬಳ್ಳಾಪುರದ ನಿವಾಸಿಯಾಗಿದ್ದು, ರೋಗಿ-19ರ ಸಂಪರ್ಕ ಹೊಂದಿರುತ್ತಾರೆ. ಈ ವ್ಯಕ್ತಿಯನ್ನು ಚಿಕ್ಕಬಳ್ಳಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ರೋಗಿ 72: 38 ವರ್ಷದ ಪುರುಷರೊಬ್ಬರು ಚಿಕ್ಕಬಳ್ಳಾಪುರದ ನಿವಾಸಿಯಾಗಿದ್ದು, ರೋಗಿ-19ರ ಸಂಪರ್ಕ ಹೊಂದಿರುತ್ತಾರೆ. ಈ ವ್ಯಕ್ತಿಯನ್ನು ಚಿಕ್ಕಬಳ್ಳಾಪುರದ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿರುತ್ತದೆ.
ರೋಗಿ 73: 18 ವರ್ಷದ ಪುರುಷರೊಬ್ಬರು ಹಿಂದುಪುರ, ಆಂಧ್ರಪ್ರದೇಶದ ನಿವಾಸಿಯಾಗಿದ್ದು, ರೋಗಿ-19ರ ಸಂಪರ್ಕ ಹೊಂದಿರುತ್ತಾರೆ. ಈ ವ್ಯಕ್ತಿಯನ್ನು ಚಿಕ್ಕಬಳ್ಳಾಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ರೋಗಿ 74: 63 ವರ್ಷದ ಮಹಿಳೆ ಬೆಂಗಳೂರಿನ ನಿವಾಸಿಯಾಗಿದ್ದು, ಲಂಡನ್ ದೇಶಕ್ಕೆ ಪ್ರಯಾಣ ಮಾಡಿ ಮಾರ್ಚ್ 16ರಂದು ಭಾರತಕ್ಕೆ ಮರಳಿದ್ದು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಾಸನ: ಒಂದೇ ಕುಟುಂಬದ ಮೂವರು ವಿಷ ಸೇವಿಸಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಹಾಸನದ ಅರಕಲಗೂಡಿನ ದೊಡ್ಡನಾಯಕನಹಳ್ಳಿಯಲ್ಲಿ ನಡೆದಿದೆ.
ಗ್ರಾಮದ ಕೃಷ್ಣ(50), ಪತ್ನಿ ಮಂಜುಳಾ(40) ಮತ್ತು ಪುತ್ರಿ ಭೂಮಿಕಾ(21) ಮೃತ ದುರ್ದೈವಿಗಳು. ಆತ್ಮಹತ್ಯೆಗೂ ಮುನ್ನ ಕುಟುಂಬ ಡೆತ್ ನೋಟ್ ಬರೆದಿಟ್ಟಿದ್ದು, ಅದರಲ್ಲಿ ಮೂವರು ಸದಸ್ಯರು ಮನನೊಂದು ಆತ್ಮಹತ್ಯೆಗೆ ಶರಣಾಗಿರುವುದಾಗಿ ಹೇಳಿಕೊಂಡಿದ್ದಾರೆ.
ವೃತ್ತಿಯಲ್ಲಿ ಕೃಷಿಕರಾಗಿದ್ದ ಕೃಷ್ಣ, ತಮ್ಮ ಪುತ್ರಿಯ ಬಗ್ಗೆ ಅಪಪ್ರಚಾರ ಕುರಿತು ಬೇಸರದಿಂದ ಇದ್ದರು ಎನ್ನಲಾಗುತ್ತಿದೆ. ಕೆಲವು ದಿನಗಳ ಹಿಂದೆ ಕೃಷ್ಣರ ಮಗನನ್ನು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಇದರಿಂದ ಅಮಾನಿತರಾದ ಕುಟುಂಬಸ್ಥರು ವಿಷ ಸೇವಿಸಿದ್ದಾರೆ ಎಂದು ಮಾತುಗಳು ಕೂಡ ಕೇಳಿ ಬರುತ್ತಿವೆ.
ಆತ್ಮಹತ್ಯೆಯ ಕಾರಣ ಕುರಿತು ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. ಅರಕಲಗೂಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.