Tag: ಒಂದು ವರ್ಷ

  • ‘ಒಂದು ವರ್ಷದ ಬಿಎಸ್‍ವೈ ಆಟ’- ತಮ್ಮದೇ ಶೈಲಿಯಲ್ಲಿ ಡಿಕೆಶಿ ವಿವರಣೆ

    ‘ಒಂದು ವರ್ಷದ ಬಿಎಸ್‍ವೈ ಆಟ’- ತಮ್ಮದೇ ಶೈಲಿಯಲ್ಲಿ ಡಿಕೆಶಿ ವಿವರಣೆ

    ಬೆಂಗಳೂರು: ಅಧಿಕಾರಕ್ಕೆ ಬಂದು ಬಿಜೆಪಿ ಸರ್ಕಾರಕ್ಕೆ ಇಂದು 1 ವರ್ಷದ ಸಂಭ್ರಮ. ಇತ್ತ ವಿರೋಧ ಪಕ್ಷಗಳು ಸರ್ಕಾರವನ್ನು ಟೀಕಿಸುತ್ತಿದ್ದು, ಇದೀಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಒಂದು ವರ್ಷದ ಬಿ.ಎಸ್ ಯಡಿಯೂರಪ್ಪನ ಆಟವೆಂದು ತಿಂಗಳಲ್ಲಿ ವಿವರಿಸಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರಕ್ಕೆ ಒಂದು ವರ್ಷ ಮುಗಿದಿದೆ. ಯಡಿಯೂರಪ್ಪ ಅವರ ಸಾಧನೆ ಬಿಚ್ಚಿಟ್ಟಿದ್ದಾರೆ. ಇದು ಬಹಳ ಸಂತೋಷದ ವಿಚಾರವಾಗಿದೆ. ಆದರೆ ಅವರು ಮಾಧ್ಯಮ ಮುಂದೆ ಏನೇನು ಹೇಳಿದ್ದಾರೆ ಅಂತ ನಾನು ಬಿಡಿಸಿ ಹೇಳಲ್ಲ ಎಂದು ಟಾಂಗ್ ನೀಡಿದರು. ಇದನ್ನೂ ಓದಿ: ನಮ್ಮ ಸಾಧನೆ ಬಗ್ಗೆ ಪ್ರಧಾನಿ ಸಂಸದರಿಂದ ಚಪ್ಪಾಳೆ ಹೊಡೆಸಿದ್ರು – ಸಿಎಂ

    ಇದೇ ವೇಳೆ ಬಿ.ಎಸ್ ಯಡಿಯೂರಪ್ಪ ಅವರ ಒಂದು ವರ್ಷದ ಆಟ ಹೀಗಿದೆ ಎಂದ ಅವರು, ಒಂದನೇ ತಿಂಗಳು- ಮಂತ್ರಿಮಂಡಲ ಇಲ್ಲದೆ ತಿರುಗಾಟ, ಎರಡನೇ ತಿಂಗಳು- ನೆರೆ ಪರಿಹಾರ ಕೊಡದೆ ನರಳಾಟ, ಮೂರನೇ ತಿಂಗಳು- ಉಪಚುನಾವಣೆ ಎಂಬ ಬಯಲಾಟ, ನಾಲ್ಕನೇ ತಿಂಗಳು- ಮಂತ್ರಿ ಮಂಡಲ ಎಂಬ ದೊಂಬರಾಟ, ಐದು ಮತ್ತು ಆರನೇ ತಿಂಗಳಲ್ಲಿ ಮಂತ್ರಿಗಿರಿಗಾಗಿ ಕಿತ್ತಾಟ, ಏಳು ಹಾಗೂ ಎಂಟನೇ ತಿಂಗಳಲ್ಲಿ ಕೊರೊನಾ ಲಾಕ್‍ಡೌನ್ ಎಂಬ ಹೊರಳಾಟ, ಒಂಬತ್ತು ಮತ್ತು ಹತ್ತನೇ ತಿಂಗಳಲ್ಲಿ ಕೊರೊನಾ ಕೊರೊನಾ ಎಂಬ ಕಿರುಚಾಟ, ಹನ್ನೊಂದು-ಹನ್ನೆರಡನೇ ತಿಂಗಳಲ್ಲಿ ಜನ ಸಾಮಾನ್ಯರಿಗೆ ಮಾತ್ರ ಸಾವು ಬದುಕಿನ ಆಟ ಎಂದು ತಮ್ಮದೇ ಶೈಲಿಯಲ್ಲಿ ವಿವರಿಸಿದ್ದಾರೆ. ಇದನ್ನೂ ಓದಿ: 24 ಬಿಜೆಪಿ ಶಾಸಕರಿಗೆ ಒನ್ ಇಯರ್ ಗಿಫ್ಟ್ ನೀಡಿದ ಸಿಎಂ

    ಒಟ್ಟಿನಲ್ಲಿ ಒಂದು ವರ್ಷದಲ್ಲಿ ಯಡಿಯೂರಪ್ಪನವರದು ಸುಳ್ಳಿನ ಸರಮಾಲೆ ಎಂದು ಬಣ್ಣಿಸಿದ್ದಾರೆ. ಒಂದು ವರ್ಷದಲ್ಲಿ ಸಾಧನೆ ಮಾಡಿದ್ದೇವೆ ಎಂದು ಹೇಳುತ್ತಿರೋ ಸರ್ಕಾರ ಬರೀ ಸುಳ್ಳುಗಳನ್ನೇ ಹೇಳಿದೆ ಎಂದು ಡಿಕೆಶಿ ಆರೋಪಿಸಿದ್ದಾರೆ. ಇದನ್ನೂ ಓದಿ: ಕಳೆದ 5 ತಿಂಗ್ಳಿಂದ ವೃದ್ಧಾಪ್ಯ, ವಿಧವಾ, ಅಂಗವಿಕಲರನ್ನು ಸರ್ಕಾರ ಅಲೆದಾಡಿಸ್ತಿದೆ: ಹೆಚ್‍ಡಿಕೆ