Tag: ಒಂದಂಕಿ ಲಾಟರಿ

  • ಸಂಚು ಮಾಡಿ ಖೆಡ್ಡಾಕ್ಕೆ ಬೀಳಿಸಿದವ್ರ ವಿರುದ್ಧ ಸಮರಕ್ಕೆ ಅಲೋಕ್ ಕುಮಾರ್ ಚಿಂತನೆ

    ಸಂಚು ಮಾಡಿ ಖೆಡ್ಡಾಕ್ಕೆ ಬೀಳಿಸಿದವ್ರ ವಿರುದ್ಧ ಸಮರಕ್ಕೆ ಅಲೋಕ್ ಕುಮಾರ್ ಚಿಂತನೆ

    ಬೆಂಗಳೂರು: ಒಂದಂಕಿ ಲಾಟರಿ ಪ್ರಕರಣದಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ ಖೆಡ್ಡಾಕ್ಕೆ ಭೀಳಿಸಿ ಅಮಾನತು ಶಿಕ್ಷೆ ಅನುಭವಿಸುವಂತೆ ಮಾಡಿದವರ ವಿರುದ್ಧ ತೊಡೆ ತಟ್ಟಲು ಕೆ.ಎಸ್.ಆರ್.ಪಿ ಎಡಿಜಿಪಿ ಅಲೋಕ್ ಕುಮಾರ್ ಚಿಂತನೆ ನಡೆಸಿದ್ದಾರೆ.

    ಈ ಬಗ್ಗೆ ನಗರದರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅಲೋಕ್ ಕುಮಾರ್, ಬಹುಕೋಟಿ ಹಗರಣ ಒಂದಂಕಿ ಲಾಟರಿ ಪ್ರಕಣರದ ತನಿಖೆಯನ್ನು ಮೊದಲು ಸಿಐಡಿ ಅಧಿಕಾರಿಗಳು ತನಿಖೆ ಮಾಡಿದ್ದರು. ತನಿಖೆಯ ವೇಳೆ ಒಂದಂಕಿ ಲಾಟರಿ ಪ್ರಕರಣದಲ್ಲಿ ಅಲೋಕ್ ಕುಮಾರ್ ಪಾತ್ರ ಇರುವ ಬಗ್ಗೆ ಸುಳ್ಳು ದಾಖಲೆ ಸೃಷ್ಟಿಸಿ ಸರ್ಕಾರಕ್ಕೆ ಕೊಟ್ಟಿದ್ದರು ಎಂದು ಹೇಳಿದರು.

    ನನ್ನ ಮತ್ತು ಒಂದಂಕಿ ಲಾಟರಿ ಕಿಂಗ್ ಪಿನ್ ಪಾರಿರಾಜ್‍ನ ಕೆಲವೊಂದು ದಾಖಲೆ ಸೃಷ್ಟಿ ಮಾಡಿ ಸಿಐಡಿ ಅಧಿಕಾರಿಗಳು ಸರ್ಕಾರಕ್ಕೆ ತಪ್ಪು ಸಂದೇಶವನ್ನು ನೀಡಿದ್ದೆ ನನ್ನನ್ನು ಅಮಾನತು ಮಾಡುವುದಕ್ಕೆ ಕಾರಣವಾಯಿತು. ಒಂದಂಕಿ ಲಾಟರಿ ಪ್ರಕರಣದಲ್ಲಿ ನನ್ನ ಪಾತ್ರ ಇರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನು ಓದಿ: ಒಂದಂಕಿ ಲಾಟರಿ ಪ್ರಕರಣ – ಅಲೋಕ್ ಕುಮಾರ್‌ಗೆ ಕ್ಲೀನ್ ಚಿಟ್

    ಇನ್ನೊಂದು ಪ್ರಕರಣದ ದೂರಿನಲ್ಲಿ ಎಲ್ಲಿಯೂ ಕೂಡ ನನ್ನ ಹೆಸರು ಇರಲಿಲ್ಲ. ಅದರು ಕೂಡ ಕೆಲ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ನನ್ನ ಮುಗಿಸಲು ಪ್ರಯತ್ನಿಸಿದರು. ದೇವರ ದಯೇ ನಾನು ಪ್ರಕರಣದಲ್ಲಿ ದೋಷ ಮುಕ್ತನಾಗಿದ್ದೇನೆ. ಪ್ರಕರಣದಲ್ಲಿ ಕ್ಲೀನ್ ಚಿಟ್ ಸಿಕ್ಕಿದ್ದರಿಂದ ಒಂದಂಕಿ ಲಾಟರಿ ಪ್ರಕಣರದಲ್ಲಿ ನನ್ನ ಪಾತ್ರ ಏನೂ ಇಲ್ಲ ಎಂಬುದು ಜಗತ್ತಿಗೆ ತಿಳಿದಿದ್ದು ಖುಷಿಯಾಗಿದೆ ಎಂದು ಅಲೋಕ್ ಕುಮಾರ್ ಹೇಳಿದ್ದಾರೆ.

  • ಒಂದಂಕಿ ಲಾಟರಿ ಪ್ರಕರಣ – ಅಲೋಕ್ ಕುಮಾರ್‌ಗೆ ಕ್ಲೀನ್ ಚಿಟ್

    ಒಂದಂಕಿ ಲಾಟರಿ ಪ್ರಕರಣ – ಅಲೋಕ್ ಕುಮಾರ್‌ಗೆ ಕ್ಲೀನ್ ಚಿಟ್

    ಬೆಂಗಳೂರು: ಒಂದಂಕಿ ಲಾಟರಿ ಪ್ರಕರಣ ದೊಡ್ಡ ಮಟ್ಟದ ಸುದ್ದಿಯಾಗಿತ್ತು. ಸಿಬಿಐ ಅಧಿಕಾರಿಗಳಿಂದಲೂ ತನಿಖೆ ನಡೆದಿತ್ತು, ಐಪಿಎಸ್ ಅಧಿಕಾರಿಗಳೇ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದರು. ಈಗ ಇಡೀ ಪ್ರಕರಣಕ್ಕೆ ಸಿಬಿಐ ಅಧಿಕಾರಿಗಳೇ ಟ್ವಿಸ್ಟ್ ನೀಡಿದ್ದು, ಪ್ರಮುಖ ಆರೋಪಿ ಅನ್ನಿಸಿಕೊಂಡಿದ್ದ ಪಾರಿರಾಜನ್ ಮೇಲಿನ ಪ್ರಕರಣ ಹಿಂಪಡೆದರೆ, ಇಬ್ಬರು ಐಪಿಎಸ್ ಅಧಿಕಾರಿಗಳಿಗೆ ಕ್ಲೀನ್ ಚಿಟ್ ನೀಡಿದ್ದಾರೆ.

    ಎಡಿಜಿಪಿ ಆಗಿರುವ ಅಲೋಕ್‍ಕುಮಾರ್ ಮತ್ತು ನಿವೃತ್ತ ಎಸ್ಪಿ ಧರಣೇಂದ್ರಗೆ ಸಿಬಿಐ ಕ್ಲೀನ್ ಚಿಟ್ ನೀಡಿದೆ. ಅಷ್ಟೇ ಅಲ್ಲದೆ ಪಾರಿರಾಜನ್ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧವೇ ಪ್ರಕರಣ ದಾಖಲು ಮಾಡಿದ್ದಾರೆ. ಜೊತೆಗೆ ನಿವೃತ್ತ ಐಜಿಪಿ ಪದ್ಮನಯನ ಮತ್ತು ಪಿಐ ಕನಕಲಕ್ಷ್ಮಿ ಸೇರಿದಂತೆ 10 ಜನರ ವಿರುದ್ಧ ದೋಷಾರೋಪಪಟ್ಟಿಯನ್ನು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದಾರೆ.

    ಒಂದಂಕಿ ಲಾಟರಿಯಲ್ಲಿ ಬಹುಕೋಟಿ ಹಗರಣ ನಡೆದಿದೆ. ಆಗ ಐಜಿಪಿಯಾಗಿದ್ದ ಅಲೋಕ್ ಕುಮಾರ್ ಪಾರಿರಾಜನ್ ಜೊತೆಯಲ್ಲಿ ಸೇರಿಕೊಂಡು ಕೋಟ್ಯಂತರ ರೂ. ಹಗರಣ ಮಾಡಿದ್ದಾರೆ. ಅಷ್ಟೇ ಅಲ್ಲದೇ ಪಾರಿರಾಜನ್ ಮನೆಗೆ ಅಲೋಕ್ ಕುಮಾರ್ ಹೋಗಿ ಬರುತ್ತಿದ್ದರು ಎಂದು ಆರೋಪ ಮಾಡಿ ಸಿಬಿಐ ತನಿಖೆ ನಡೆಸಿತ್ತು. ಈ ಪ್ರಕರಣದಿಂದ ಅಲೋಕ್ ಕುಮಾರ್ ಒಮ್ಮೆ ಅಮಾನತು ಕೂಡ ಆಗಿದ್ದರು.

  • ಪತ್ನಿ, 3 ಕಂದಮ್ಮಗಳಿಗೆ ವಿಷವಿಕ್ಕಿ ನರಳಾಡುತ್ತಿರುವ ವಿಡಿಯೋ ಮಾಡಿ ಆತ್ಮಹತ್ಯೆ ಮಾಡ್ಕೊಂಡ

    ಪತ್ನಿ, 3 ಕಂದಮ್ಮಗಳಿಗೆ ವಿಷವಿಕ್ಕಿ ನರಳಾಡುತ್ತಿರುವ ವಿಡಿಯೋ ಮಾಡಿ ಆತ್ಮಹತ್ಯೆ ಮಾಡ್ಕೊಂಡ

    ಬೆಂಗಳೂರು: ಒಂದಕ್ಕಿ ನಂಬರ್ ಲಾಟರಿಯಿಂದ ಮೈತುಂಬಾ ಸಾಲ ಮಾಡಿಕೊಂಡು ಸಾಲ ತೀರಿಸಲಾಗದೆ ತನ್ನ ಪತ್ನಿ ಹಾಗೂ 3 ಜನ ಮಕ್ಕಳಿಗೆ ವಿಷ ಉಣಿಸಿ ಪತಿಯೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ವಿಲ್ಲುಪುರಂ ಬಳಿ ನಡೆದಿದೆ.

    ವಿಲ್ಲುಪುರಂನ ನಿವಾಸಿ ಅರುಲ್, ಪತ್ನಿ ಹಾಗೂ ಮಕ್ಕಳಿಗೆ ವಿಷವುಣಿಸಿದ್ದು, ಮಕ್ಕಳಿಗೆ ವಿಷ ನೀಡಿ ಬಳಿಕ ತಾನು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಕೇರಳ ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಸಿಂಗಲ್ ನಂಬರ್ ಲಾಟರಿಯನ್ನು ಅಕ್ರಮವಾಗಿ ತಮಿಳುನಾಡಿನಲ್ಲಿ ಮಾರಾಟ ಮಾಡಲಾಗುತ್ತಿದೆ. ಮಾಹಾಮಾರಿ ಸಿಂಗಲ್ ನಂಬರ್ ಲಾಟರಿ ಆಡುವ ಹುಚ್ಚನ್ನು ಅರುಲ್ ಬೆಳೆಸಿಕೊಂಡಿದ್ದ. ಅಲ್ಲದೇ ಲಾಟರಿ ಆಡಲು ಮೈತುಂಬಾ ಸಾಲ ಮಾಡಿ ಸಿಂಗಲ್ ನಂಬರ್ ಲಾಟರಿ ಆಡುತ್ತಿದ್ದ. ಈ ಹಂತದಲ್ಲಿ ಸಾಲ ಹೆಚ್ಚಾಗಿ ಸಾಲ ಮರುಪಾವತಿಸಲು ಇದ್ದ ಒಂದು ಮನೆಯನ್ನು ಮಾರಿದರೂ ಸಾಲ ತೀರಿಸಲಾಗದಷ್ಟು ಬೆಳೆದಿತ್ತು. ಇದರಿಂದ ಸಾಲ ಮರುಪಾವತಿ ಮಾಡಲಾಗದೆ ಜಿಗುಪ್ಸೆಗೊಂಡ ಅರುಲ್ ತನ್ನ ಪತ್ನಿಯ ಜೊತೆ ಸೇರಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದ.

    ಪತ್ನಿ ಜೊತೆ ಸೇರಿ ಮೊದಲು ತನ್ನ ಮೂರು 3 ಹೆಣ್ಣುಮಕ್ಕಳಿಗೆ ಸೈನೈಡ್ ಕೊಟ್ಟು, ಅದನ್ನು ವಿಡಿಯೋ ಮಾಡಿ ತನ್ನ ಸ್ನೇಹಿತರಿಗೆ ಕಳುಹಿಸಿ ನಂತರ ಅವರು ಸೈನೈಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇರಳದಲ್ಲಿ ಚಾಲ್ತಿಯಲ್ಲಿರುವ ಒಂದಂಕಿ ಲಾಟರಿ ತಮಿಳುನಾಡಿಗೂ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ. ಬಹುಬೇಗ ಹಣ ಸಂಪಾದನೆ ಮಾಡುವ ಆಸೆಗೆ ಬೀಳುವ ಅದೆಷ್ಟೋ ಮಂದಿ ಇದಕ್ಕೆ ಬಲಿಯಾಗುತ್ತಿದ್ದಾರೆ. ಈ ಅಕ್ರಮ ದಂಧೆಗೆ ಕಡಿವಾಣ ಹಾಕದೇ ಇದ್ದರೆ ಮತ್ತಷ್ಟು ಕುಟುಂಬಗಳು ಬಲಿಯಾಗುವ ಸಾಧ್ಯತೆಯಿದೆ.