Tag: ಒಂಟೆ

  • ಬಕ್ರೀದ್ ಹಬ್ಬಕ್ಕೆ ತರಲಾಗಿದ್ದ 18 ಒಂಟೆಗಳ ರಕ್ಷಣೆ

    ಬಕ್ರೀದ್ ಹಬ್ಬಕ್ಕೆ ತರಲಾಗಿದ್ದ 18 ಒಂಟೆಗಳ ರಕ್ಷಣೆ

    ಆನೇಕಲ್: ಬಕ್ರೀದ್ ಹಬ್ಬಕ್ಕೆಂದು ರಾಜಸ್ಥಾನದಿಂದ ಅಕ್ರಮವಾಗಿ ತರಲಾಗಿದ್ದ 18 ಒಂಟೆಗಳನ್ನು ರಕ್ಷಿಸಿದ ಘಟನೆ ರಾಜ್ಯ ಗಡಿಭಾಗ ಹೊಸೂರಿನಲ್ಲಿ ನಡೆದಿದೆ.

    ಕೆಲ ದುಷ್ಕರ್ಮಿಗಳು ಬಕ್ರೀದ್ ಹಬ್ಬಕ್ಕೆಂದು 18 ಒಂಟೆಗಳನ್ನು ರಾಜ್ಯಕ್ಕೆ ಅಕ್ರಮವಾಗಿ ಸಾಗಿಸುವ ಪ್ರಯತ್ನದಲ್ಲಿದ್ದರು. ಆದರೆ ಕರ್ನಾಟಕದಲ್ಲಿ ಒಂಟೆಗಳ ಬಲಿ ನಿಷೇಧವಿದ್ದರಿಂದ ಗಡಿ ಭಾಗದಲ್ಲಿ ಪೊಲೀಸರು 24*7ಗಳ ಕಾಲ ಬಿಗಿ ಭದ್ರತೆ ಕೈಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ತರಲು ಸಾಧ್ಯವಾಗದೇ ಆ 18 ಒಂಟೆಗಳನ್ನು ತಮಿಳುನಾಡಿನ ಹೊಸೂರಿನಲ್ಲಿ ಅಕ್ರಮವಾಗಿ ಇರಿಸಲಾಗಿತ್ತು. ಅವೆಲ್ಲವನ್ನು ನಂತರ ದಿನಗಳಲ್ಲಿ ಅಕ್ರಮವಾಗಿ ಬೆಂಗಳೂರು ಸೇರಿದಂತೆ ಹಲವು ಕಡೆ ಸಾಗಿಸಲು ಹೊಂಚು ಹಾಕಲಾಗಿತ್ತು. ಇದನ್ನೂ ಓದಿ: ಭಾಗಮಂಡಲದ ತ್ರಿವೇಣಿ ಸಂಗಮ ಭರ್ತಿ – ರಸ್ತೆಯ ಮೇಲೆ ಹರಿಯುತ್ತಿದೆ ನೀರು

    ಅಕ್ರಮವಾಗಿ ಒಂಟೆಗಳ ಸಾಗಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಆಧರಿಸಿ ಹೊಸೂರು ನಗರಪಾಲಿಕೆ ಅಧಿಕಾರಿಗಳ ಮತ್ತು ಪೊಲೀಸರು ದಾಳಿ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ 18 ಒಂಟೆಗಳನ್ನು ರಕ್ಷಿಸಿ ಕೋರಮಂಗಲ ಬಳಿಯ ಗೋಶಾಲೆಗೆ ರವಾನೆ ಮಾಡಲಾಗಿದೆ. ಘಟನೆ ಸಂಬಂಧಿಸಿ ಹೊಸೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಹೂಡಿಕೆ ಉತ್ತೇಜನಕ್ಕೆ ಭಾರತೀಯ ಹೂಡಿಕೆದಾರರಿಗೆ ವೀಸಾ ನೀಡಿದ ಶ್ರೀಲಂಕಾ

    Live Tv

  • 14.23 ಕೋಟಿ ರೂಪಾಯಿಗೆ ಹರಾಜಾದ ಒಂಟೆ

    14.23 ಕೋಟಿ ರೂಪಾಯಿಗೆ ಹರಾಜಾದ ಒಂಟೆ

    ರಿಯಾದ್: ವ್ಯಕ್ತಿಯೊಬ್ಬರು ವಿಶ್ವದ ಅತ್ಯಂತ ದುಬಾರಿ ಬೆಲೆಯ ಒಂಟೆಯನ್ನು ಖರೀದಿ ಮಾಡಿದ್ದಾರೆ. ಈ ಒಂಟೆಯೂ 7 ಮಿಲಿಯನ್ ಅಂದರೆ ಸುಮಾರು 14.23 ಕೋಟಿ ರೂಪಾಯಿಗೆ ಮಾರಾಟವಾಗಿದೆ.

    ಒಂಟೆಯ ವಿಶೇಷತೆ: ಸೌದಿ ಅರೇಬಿಯಾದಲ್ಲಿ ಇಷ್ಟು ದುಬಾರಿ ಬೆಲೆಗೆ ಹರಾಜಾದ ವಿಶ್ವದ ಅಪರೂಪದ ಒಂಟೆಗಳಲ್ಲಿ ಒಂದಾಗಿದೆ. ಈ ಒಂಟೆ ವಿಶೇಷ ಸೌಂದರ್ಯವನ್ನು ಹೊಂದಿದೆ. ಜಗತ್ತಿನಲ್ಲಿ ಈ ಜಾತಿಯ ಒಂಟೆಗಳು ಬಹಳ ಕಡಿಮೆ. ಸೌದಿ ಅರೇಬಿಯಾದಲ್ಲಿ ಜಗತ್ತಿನ ಅತಿ ದೊಡ್ಡ ಒಂಟೆ ಮೇಳವೂ ನಡೆಯುತ್ತದೆ.

    ಸೌದಿ ಅರೇಬಿಯಾದಲ್ಲಿ ಈ ಒಂಟೆಗಾಗಿ ಸಾರ್ವಜನಿಕ ಹರಾಜು ಆಯೋಜಿಸಲಾಗಿತ್ತು. ಹರಾಜಿನ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ, ಒಂಟೆಯನ್ನು ಚೌಕಾಕಾರದ ಕಬ್ಬಿಣದ ಮಧ್ಯೆ ಇರಿಸಿರುವುದನ್ನು ನೀವು ನೋಡಬಹುದು. ಇದನ್ನೂ ಓದಿ: ನಾವು ಪರಿಶುದ್ಧವಾಗಿದ್ದಾಗ ಯಾರು ಏನು ಮಾಡೋದಕ್ಕೆ ಆಗೋದಿಲ್ಲ: ಹೆಚ್‍ಡಿಕೆ

    ಒಂಟೆಯ ಆರಂಭಿಕ ಬಿಡ್ (5 ಮಿಲಿಯನ್ ರಿಯಾದ್) ಸುಮಾರು 10.16 ಕೋಟಿ ರೂಪಾಯಿ ಆಗಿದೆ. ನಂತರ ಒಂಟೆ 14.23 ಕೋಟಿ (7 ಮಿಲಿಯನ್ ಸೌದಿ ರಿಯಾಲ್‍ಗಳಲ್ಲಿ)ಗೆ ಹರಾಜು ಹಾಕಲಾಗಿದೆ. ಇಷ್ಟು ಹೆಚ್ಚು ಬಿಡ್ ಮಾಡಿ ಒಂಟೆ ಖರೀದಿಸಿದವರ ಗುರುತು ಬಹಿರಂಗವಾಗಿಲ್ಲ. ಆದರೆ ಈ ದುಬಾರಿ ಬೆಲೆಯ ಒಂಟೆ ಮಾತ್ರ ಸಖತ್ ಸುದ್ದಿಯಾಗುತ್ತಲಿದೆ.

  • ಅಕ್ರಮವಾಗಿ ಸಾಗಿಸ್ತಿದ್ದ ಒಂಟೆಗಳ ರಕ್ಷಣೆ

    ಅಕ್ರಮವಾಗಿ ಸಾಗಿಸ್ತಿದ್ದ ಒಂಟೆಗಳ ರಕ್ಷಣೆ

    ತುಮಕೂರು: ಮಹಾರಾಷ್ಟ್ರದಿಂದ ತಮಿಳುನಾಡಿನ ಸೇಲಂಗೆ ಅಕ್ರಮವಾಗಿ ಸಾಗಿಸುತ್ತಿದ್ದ ಒಂಟೆಗಳನ್ನು ರಕ್ಷಣೆ ಮಾಡಲಾಗಿದೆ.

    ಖಚಿತ ಮಾಹಿತಿ ಪಡೆದ ತುಮಕೂರಿನ ಭಗತ್ ಕ್ರಾಂತಿ ಸೇನೆ ಯುವಕರ ತಂಡ ಶಿರಾ ತಾಲೂಕು ಕಳ್ಳಂಬೆಳ್ಳ ಬಳಿಯ ಕರೇಜವನಹಳ್ಳಿ ಟೋಲ್ ನಿಂದ ಲಾರಿಯನ್ನು ಹಿಂಬಾಲಿಸಿ ಕೊನೆಗೆ ತುಮಕೂರಿನ ಕ್ಯಾತ್ಸಂದ್ರ ಬಳಿ ಲಾರಿಯನ್ನು ತಡೆದಿದ್ದಾರೆ. ಭಗತ್ ಕ್ರಾಂತಿ ಸೇನೆಯ ಯುವಕರು ಒಟ್ಟು ಒಂಬತ್ತು ಒಂಟೆಗಳನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

    ಈ ಸಂಬಂಧ ತುಮಕೂರಿನ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಒಂಟೆಗಳ ರಕ್ಷಣೆ ಕಾರ್ಯಾಚರಣೆಯಲ್ಲಿ ಭಗತ್ ಕ್ರಾಂತಿ ಸೇನೆ ಕಾರ್ಯಕರ್ತರಾದ ಆರಾಧ್ಯ ಮಂಚಲದೊರೆ, ರಾಧಾಕೃಷ್ಣ ನವಚೇತನ್ ನಾಗೇಶ್ ರಾಕೇಶ್ ರಾಜು ಮುಂತಾದವರು ಭಾಗಿಯಾಗಿದ್ದರು. ಇದನ್ನೂ ಓದಿ: ಅಕ್ರಮವಾಗಿ ಬೆಳೆದಿದ್ದ 50 ಕೆ.ಜಿ.ಗಾಂಜಾ ವಶ- ಜಮೀನು ಮಾಲೀಕನ ಬಂಧನ

  • ಲಾಕ್‍ಡೌನ್ ವೇಳೆ ಜೀವನ ಸಾಗಿಸಲು ಯುವಕನ  ಪ್ಲ್ಯಾನ್- ಮನೆಯಂಗಳದಲ್ಲಿ ಒಂಟೆ ಸವಾರಿ

    ಲಾಕ್‍ಡೌನ್ ವೇಳೆ ಜೀವನ ಸಾಗಿಸಲು ಯುವಕನ ಪ್ಲ್ಯಾನ್- ಮನೆಯಂಗಳದಲ್ಲಿ ಒಂಟೆ ಸವಾರಿ

    ಉಡುಪಿ: ಮಹಾಮಾರಿ ಕೊರೊನಾ ಉಡುಪಿ ಜಿಲ್ಲೆಯ ಎಲ್ಲಾ ಪ್ರವಾಸಿ ತಾಣಗಳನ್ನು ಸ್ಥಬ್ದ ಮಾಡಿದೆ. ಮಲ್ಪೆ ಬೀಚ್ ಪ್ರವಾಸಿಗರು ಇಲ್ಲದೆ ಬಿಕೋ ಅನ್ನುತ್ತಿದೆ. ಸಂಕಷ್ಟದ ಕಾಲದಲ್ಲಿ ರಾಜಸ್ಥಾನದಿಂದ ಉಡುಪಿಗೆ ಬಂದ ಯುವಕನೊಬ್ಬ ಡೋರ್ ಟು ಡೋರ್ ಒಂಟೆ ತಂದು ಜೀವನ ನಡೆಸುತ್ತಿದ್ದಾನೆ.

    ಕೊರೊನಾ ಕಾಲದಲ್ಲಿ ಸರಕಾರ ಬಡ ಮತ್ತು ಶ್ರಮಿಕ ವರ್ಗಕ್ಕೆ ಪ್ರೋತ್ಸಾಹಧನ ನೀಡಿದೆ. ಪ್ರವಾಸಿಗರನ್ನು ನಂಬಿ ರಾಜಸ್ಥಾನದಿಂದ ಒಂಟೆ ಖರೀದಿಸಿ ಉಡುಪಿಗೆ ಬಂದು ಜೀವನ ಸಾಗಿಸುತ್ತಿದ್ದ ಸುಂದರ್ ಲಾಲ್ ಈ ಸಂದರ್ಭದಲ್ಲಿ ಹೊಸ ಪ್ಲಾನ್ ಮಾಡಿದ್ದಾನೆ. ಪ್ರವಾಸಿ ತಾಣಕ್ಕೆ ಜನ ಬಾರದ ಕಾರಣ ಒಂಟೆ ಸಾಕುವುದು ತನ್ನ ಜೀವನದ ಸಾಗಿಸುವುದು ಬಹಳ ಕಷ್ಟವಾಗಿತ್ತು. ಇದನ್ನೂ ಓದಿ: ಸೋಕಿನಿಂದ ಹಲವು ಕುಟುಂಬಗಳು ವಿನಾಶದ ಅಂಚಿನಲ್ಲಿವೆ – ಸಂಸದ ಎ.ನಾರಾಯಣ ಸ್ವಾಮಿ

     

    ಒಂಟೆಯ ಜೊತೆ ಯುವಕ ದಿನಕ್ಕೊಂದು ರೆಸಿಡೆನ್ಸಿಯಲ್ ಏರಿಯಾಕ್ಕೆ ಬರುತ್ತಾನೆ. ಮಕ್ಕಳನ್ನು ಮನೆಯ ಮುಂದಿನ ರಸ್ತೆಯಲ್ಲೇ ಒಂಟೆಯ ಮೇಲೆ ಕೂರಿಸಿ ಒಂದು ಸುತ್ತು ಹೊಡೆಸುತ್ತಾನೆ. ಹತ್ತಿಪ್ಪತ್ತು ರೂಪಾಯಿಗೆ ಒಂದು ಸುತ್ತು ಒಂಟೆ ಸವಾರಿ ಮಾಡಿಸುತ್ತಾನೆ. ಸರಕಾರದ ಸಹಾಯ ಸಿಗದ, ಪ್ರವಾಸೋದ್ಯಮ ಆರಂಭವಾಗಿದ್ದರಿಂದ ಈ ರೀತಿ ಜೀವನ ಮಾಡುತ್ತಿದ್ದಾನೆ. ಇದನ್ನೂ ಓದಿ: ಚೊಚ್ಚಲ ಬಾರಿಗೆ ಟೀಂ ಇಂಡಿಯಾ ಪರ ಆಡಲು ಐವರು ಆಟಗಾರರಿಗೆ ಕರೆ

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸುಂದರ್ ಲಾಲ್, ಪ್ರವಾಸಿಗರು ಉಡುಪಿಗೆ ಬರುವ ಸೀಸನ್‍ನಲ್ಲಿ ಕೊರೊನಾ ಲಾಕ್‍ಡೌನ್ ಆಗಿದೆ. ಹೋದ ವರ್ಷ ಕೂಡ ಇದೇ ರೀತಿಯ ಸಂಕಷ್ಟ ಇತ್ತು. ಒಂಟೆಯನ್ನು ಸಾಕುವುದು, ನಾನು ಜೀವನವನ್ನು ಸಾಗಿಸುವುದು ಕಷ್ಟವಾಗಿದೆ. ಹೀಗಾಗಿ ದಿನದ ಖರ್ಚನ್ನು ನಾನು ದುಡಿಯಲೇಬೇಕು. ಬಹಳಷ್ಟು ಜಾಗ್ರತೆವಹಿಸಿ ಒಂಟೆ ಸವಾರಿ ಮಾಡಿಸುತ್ತೇನೆ ಎಂದು ಹೇಳಿದ್ದಾರೆ.

  • ಕೊರೊನಾ ಎಫೆಕ್ಟ್ – ಕುದುರೆ ಬದಲಾಗಿ ಒಂಟೆ ಏರಿದ ವರ

    ಕೊರೊನಾ ಎಫೆಕ್ಟ್ – ಕುದುರೆ ಬದಲಾಗಿ ಒಂಟೆ ಏರಿದ ವರ

    ಮುಂಬೈ: ಕೊರೊನಾ ಎರಡನೇ ಅಲೆಯ ಆತಂಕದ ನಡುವೆಯೂ ದೇಶದಲ್ಲಿ ಮದುವೆ, ಸಮಾರಂಭ, ರಾಜಕೀಯ ಸಮಾವೇಶಗಳು ನಡೆಯುತ್ತಿವೆ. ಇದೀಗ ಕೊರೊನಾ ಭಯದಿಂದಾಗಿ ಯುವಕ ಮದುವೆಯಲ್ಲಿ ಕುದುರೆ ಬದಲಾಗಿ ಒಂಟೆ ಏರಿ ವಧುವಿನ ಮನೆ ತಲುಪಿರುವ ಫೋಟೋಗಳು ವೈರಲ್ ಆಗಿವೆ.

    ಮಹಾರಾಷ್ಟ್ರದ ಸಾಲೇಗಾಂವ್ ಜಿಲ್ಲೆ ಯ ಮಾಜಿ ಸೈನಿಕ ಮಹಾದೇವ್ ವರ್ಪೆ ಪುತ್ರ ಅಕ್ಷಯ್ ಮದುವೆ ಬೀಡ್ ಜಿಲ್ಲೆಯ ರಣ್‍ದೀವ್ ಪುತ್ರಿ ಐಶ್ವರ್ಯಾ ಜೊತೆ ನಿಗದಿಯಾಗಿತ್ತು. ಅಕ್ಷಯ್ ಪತ್ರಕರ್ತನಾಗಿದ್ದು, ಐಶ್ವರ್ಯಾ ಬಿ.ಎಡ್ ಪದವಿಧರೆ. ಸಾಲೆಗಾಂವ್ ನಲ್ಲಿ ಸದ್ಯ ಕೊರೊನಾ ಸಕ್ರಿಯ ಪ್ರಕರಣಗಳಿಲ್ಲ. ಹಾಗಾಗಿ ಮಹಾದೇವ್ ತಮ್ಮ ಕಾರ್ಯಕ್ರಮದಿಂದಾಗಿ ಸೋಂಕು ಹರಡದಂತೆ ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದರು. ಮದುವೆಗೆ ಆಪ್ತ 50 ಜನರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು.

    ಒಂಟೆ ಪ್ಲಾನ್: ಕುದುರೆ ಮೇಲೆ ವಧುವಿನ ಮನೆಗೆ ಹೋದ್ರೆ ಮಾರ್ಗಮಧ್ಯೆ ಗೆಳೆಯರು, ಕುಟುಂಬಸ್ಥರು ಹಲವರು ಸುತ್ತುವರೆದು ಡ್ಯಾನ್ಸ್ ಮಾಡ್ತಾರೆ. ಕುದುರೆ ಮೆರವಣಿಗೆ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅಕ್ಷಯ್ ಒಂಟೆ ಮೇಲೆ ಹೋಗುವ ಪ್ಲಾನ್ ಮಾಡಿದ್ದರು. ಒಂಟೆ ಮೇಲೆ ಕುಳಿತರೆ ಸೋಂಕು ಹರಡುವಿಕೆ ಪ್ರಮಾಣ ಕಡಿಮೆ ಆಗಲಿದೆ ಎಂದು ತಿಳಿದು 12 ಸಾವಿರ ರೂ. ನೀಡಿ ಬಾಡಿಗೆ ಒಂಟೆ ತರಿಸಿದ್ದರು.

    ಮದುವೆಯಲ್ಲಿ ಆಪ್ತರಿಗೆ ಆಹ್ವಾನ ನೀಡಿದ್ದರಿಂದ ಎರಡೂ ಕುಟುಂಬಗಳು ಕೊರೊನಾ ನಿಯಮಗಳನ್ನ ಪಾಲಿಸಿದ್ದಾರೆ. ಕೊನೆಗೆ ಕಾರಿನಲ್ಲಿ ವಧು ಕರೆದುಕೊಂಡು ಹೋಗುವಾಗಲೂ ಚಾಲಕನ ಬದಲಾಗಿ ಸ್ವತಃ ಅಕ್ಷಯ್ ಚಲಾಯಿಸಿದ್ದು ಮತ್ತೊಂದು ಮದುವೆ ವಿಶೇಷವಾಗಿತ್ತು.

  • ಪ್ರಿಯತಮೆಗಾಗಿ ಒಂಟೆ ಕದ್ದು ಜೈಲು ಸೇರಿದ ಪ್ರೇಮಿ

    ಪ್ರಿಯತಮೆಗಾಗಿ ಒಂಟೆ ಕದ್ದು ಜೈಲು ಸೇರಿದ ಪ್ರೇಮಿ

    ದುಬೈ: ಪ್ರಿಯತಮೆಗೆ ಊಡುಗೊರೆ ನೀಡಲು ಒಂಟೆ ಮರಿ ಕದ್ದ ಪ್ರೇಮಿ ಇದೀಗ ಪೊಲೀಸರ ಅತಿಥಿಯಾಗಿರುವ ಘಟನೆ ನಡೆದಿದೆ.

    ದುಬೈ ಕಾನೂನಿನ ಪ್ರಕಾರ ಒಂಟೆಯನ್ನು ಕದ್ದರೆ ಅಪರಾಧವಾಗಿದೆ. ಈ ತಪ್ಪಿಗೆ ಜೈಲು ಶಿಕ್ಷೆಯನ್ನು ನೀಡಲಾಗುತ್ತದೆ. ಹೀಗಿರುವಾಗ ಒಂಟೆ ಕದ್ದು ಊಡುಗೊರೆ ನೀಡಲು ಮುಂದಾದ ಪ್ರೇಮಿಯೊಬ್ಬ ಜೈಲು ಸೇರಿದ್ದಾನೆ.

    ಪ್ರಿಯತಮೆಯ ಜನ್ಮದಿನಕ್ಕೆ ಏನಾದರೂ ವಿಶೇಷವಾದ ಊಡುಗೊರೆಯನ್ನು ನೀಡಬೇಕು ಎಂದು ಯೋಚಿಸಿದ ಪ್ರೇಮಿ ಕಣ್ಣಿಗೆ ಕಂಡಿದ್ದು ಒಂಟೆ ಮರಿ. ಸರಿಸುಮಾರು 3 ಕಿಮೀ ದೂರದ ಊರಿನಲ್ಲಿ ಕೆಲವು ದಿನಗಳ ಹಿಂದೆ ಒಂಟೆ ಮರಿ ಹುಟ್ಟಿರುವ ವಿಚಾರ ತಿಳಿದಿದೆ. ಇದನ್ನು ಕದ್ದು ಪ್ರಿಯತಮೆಗೆ ನೀಡಿದ್ದಾನೆ. ಇತ್ತ ಒಂಟೆ ಮರಿ ಕಳೆದುಕೊಂಡಿರುವ ಮಾಲೀಕರು ಹುಡುಕಲು ಪ್ರಾರಂಭಿಸಿದ್ದಾರೆ. ಒಂಟೆ ಮರಿ ಸಿಗದೆ ಇದ್ದಾಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಈ ವಿಚಾರವಾಗಿ ಭಯಗೊಂಡ ಪ್ರೇಮಿ ಪೊಲೀಸರ ಕೈಗೆ ಸಿಕ್ಕಿ ಬಿಳುತ್ತೇನೆ ಎಂಬ ಭಯದಿಂದ ನನ್ನ ಜಮೀನಿಗೆ ಒಂದು ಒಂಟೆ ಮರಿ ಬಂದಿದೆ, ಕಟ್ಟಿ ಹಾಕಿದ್ದೇನೆ ಎಂದು ಸುಳ್ಳು ಹೇಳಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಆದರೆ ಪೊಲೀಸರು ಅನುಮಾನಗೊಂಡು ವಿಚಾರಿಸಿದಾಗ ಒಂಟೆ ಕದ್ದಿರುವುದಾಗಿ ಒಪ್ಪಿಕೊಂಡಿದ್ದಾನೆ. ಪ್ರಿಯತಮೆಗೆ ನೆನೆಪಿನ ಕಾಣಿಕೆ ಕೊಡಲು ಹೊಗಿ ಜೈಲು ಸೇರಿದ್ದಾನೆ.

  • ಬಕ್ರೀದ್ ಹಬ್ಬಕ್ಕೆ ಬಲಿ ಕೊಡಲು ತಂದಿದ್ದ ಒಂಟೆಗಳ ರಕ್ಷಣೆ

    ಬಕ್ರೀದ್ ಹಬ್ಬಕ್ಕೆ ಬಲಿ ಕೊಡಲು ತಂದಿದ್ದ ಒಂಟೆಗಳ ರಕ್ಷಣೆ

    ಕೋಲಾರ: ಬಕ್ರೀದ್ ಹಬ್ಬಕ್ಕೆ ಬಲಿ ಕೊಡಲು ತರಲಾಗಿದ್ದ ಎರಡು ಒಂಟೆಗಳ ರಕ್ಷಣೆ ಮಾಡಿರುವ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ನಗರದ ಬಾಲಕೃಷ್ಣ ಬಡಾವಣೆಯಲ್ಲಿ ನಡೆದಿದೆ.

    ಫಾಸಿಲ್ ಎಂಬಾತನಿಗೆ ಸೇರಿದ ಎರಡು ಒಂಟೆಗಳನ್ನು ಮದೀನ ಮಸೀದಿಯಲ್ಲಿ ಇರಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಒಂಟೆಗಳನ್ನು ರಕ್ಷಿಸಿ, ಮಾಲೂರಿನ ಗೋ ಶಾಲೆಗೆ ರವಾನೆ ಮಾಡಿದೆ. ಬಕ್ರೀದ್ ಹಬ್ಬದಲ್ಲಿ ಒಂಟೆ ಮಾಂಸ ದಾನ ಮಾಡುವುದು ಬಕ್ರೀದ್ ಹಬ್ಬದ ಪ್ರತೀತಿ. ಆದ್ರೆ ಈ ಬಾರಿ ಜಿಲ್ಲಾಡಳಿತ ಒಂಟೆ, ಹಸು ಬಲಿ ಕೊಡುವುದಕ್ಕೆ ಸಂಪೂರ್ಣ ನಿಷೇಧ ಹೇರಿದೆ.

    ಈ ಹಿನ್ನೆಲೆ ಮಸೀದಿಯಲ್ಲಿದ್ದ ಒಂಟೆಗಳನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಈ ಸಂಬಂಧ ರಾಬರ್ಟ್ ಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬರದ ನಾಡಿನಲ್ಲಿ ಪೊಲೀಸರಿಂದ ಒಂಟೆಗಳ ರಕ್ಷಣೆ

    ಬರದ ನಾಡಿನಲ್ಲಿ ಪೊಲೀಸರಿಂದ ಒಂಟೆಗಳ ರಕ್ಷಣೆ

    ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ತಾಲೂಕಿನ ಚಿನ್ನಸಂದ್ರ ಗ್ರಾಮದ ಬಳಿ 7 ಒಂಟೆಗಳನ್ನು ಚಿಂತಾಮಣಿ ಗ್ರಾಮಾಂತರ ಪೊಲೀಸರು ರಕ್ಷಣೆ ಮಾಡಿದ್ದಾರೆ.

    ಪ್ರಾಣಿ ದಯಾ ಸಂಘದ ಸದಸ್ಯರು ನೀಡಿದ ದೂರಿನ ಮೇರೆಗೆ ಚಿನ್ನಸಂದ್ರ ಗ್ರಾಮ ಹೊರವಲಯದ ಬೆಟ್ಟ ಗುಡ್ಡಗಳಲ್ಲಿ ಇದ್ದ 7 ಒಂಟೆಗಳನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಮಾಂಸಹಾರಕ್ಕಾಗಿ ಚಿನ್ನಸಂದ್ರ ಗ್ರಾಮದ ಕೆಲವರು ಈ ಒಂಟೆಗಳನ್ನು ಸಾಕುತ್ತಿದ್ದರು ಎನ್ನಲಾಗಿದೆ.

    ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ. ಸದ್ಯ ರಕ್ಷಣೆ ಮಾಡಲಾಗಿರುವ ಒಂಟೆಗಳನ್ನು ಮಂಡ್ಯ ಜಿಲ್ಲೆಯ ಪಾಂಡವಪುರದ ಬಳಿಯ ಗೋಶಾಲೆಗೆ ರವಾನಿಸಲಾಗಿದೆ.

    ಒಂಟೆಗಳನ್ನು ರಕ್ಷಣೆ ಮಾಡಿದ್ದ ಪೊಲೀಸರು ರಸ್ತೆಯುದ್ದಕ್ಕೂ ಅದನ್ನು ಹಿಡಿದು ನಡೆದುಕೊಂಡೇ ಕೈವಾರ ಪೊಲೀಸ್ ಹೊರ ಠಾಣೆಗೆ ಹೆಜ್ಜೆ ಹಾಕಿದ್ದಾರೆ. ಇನ್ನು ಸ್ಥಳೀಯ ಸಾರ್ವಜನಿಕರು ಒಂಟೆಗಳನ್ನು ನೋಡಲು ಮುಗಿಬಿದ್ದಿದ್ದರು.

  • ಆಸ್ಟ್ರೇಲಿಯಾದ 10 ಸಾವಿರ ಒಂಟೆಗಳ ಸಂಹಾರಕ್ಕೆ ಸಿದ್ಧತೆ

    ಆಸ್ಟ್ರೇಲಿಯಾದ 10 ಸಾವಿರ ಒಂಟೆಗಳ ಸಂಹಾರಕ್ಕೆ ಸಿದ್ಧತೆ

    -ನೀರು ಉಳಿಸಲು ಸರ್ಕಾರ ಚಿಂತನೆ

    ಸಿಡ್ನಿ: ಆಸ್ಟ್ರೇಲಿಯಾದಲ್ಲಿ ಉಂಟಾಗಿರುವ ಕಾಡ್ಗಿಚ್ಚಿನ ಕಾರಣದಿಂದ ಅಪಾರ ಪರಿಸರ ನಾಶವಾಗಿದ್ದು, ಸದ್ಯ ಆಸ್ಟ್ರೇಲಿಯಾದ 10 ಸಾವಿರ ಒಂಟೆಗಳನ್ನು ಹತ್ಯೆ ಮಾಡಲು ಅಲ್ಲಿನ ಸರ್ಕಾರ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.

    ಐದು ದಿನಗಳ ಅವಧಿಯಲ್ಲಿ 10 ಸಾವಿರ ಒಂಟೆಗಳನ್ನು ಹತ್ಯೆ ಮಾಡಲು ಅಧಿಕಾರಿಗಳು ನಿರ್ಧರಿಸಿದ್ದು, ಬುಧವಾರದಿಂದಲೇ ಈ ಕಾರ್ಯಾಚರಣೆ ಬೇಕಾದ ಸಿದ್ಧತೆಗಳನ್ನು ಆರಂಭಿಸಲಾಗಿದೆ. ಕಾಡ್ಗಿಚ್ಚಿನ ಪ್ರಭಾವ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಒಂಟೆಗಳು ಬೆಂಕಿಯ ತೀವ್ರತೆಗೆ ಹೆಚ್ಚಿನ ಪ್ರಮಾಣದ ನೀರನ್ನು ಸೇವನೆ ಮಾಡುತ್ತಿರುವುದೇ ಅವುಗಳನ್ನು ಹತ್ಯೆ ಮಾಡಲು ಕಾರಣ ಎನ್ನಲಾಗಿದೆ. ಒಂಟೆಗಳನ್ನು ಹತ್ಯೆ ಮಾಡಲು ಅಲ್ಲಿನ ಸರ್ಕಾರ ಹೆಲಿಕಾಪ್ಟರ್ ಗಳನ್ನು ಒದಗಿಸುತ್ತಿದೆ.

    ಈ ಕುರಿತು ಮಾತನಾಡಿರುವ ಮಾರಿಟಾ ಬೇಕರ್ ಎಂಬ ಅಧಿಕಾರಿ, ಕಾಡ್ಗಿಚ್ಚಿನ ಪರಿಣಾಮದಿಂದ ಇಡೀ ದೇಶವೇ ಸುಟ್ಟು ಹೋಗಿದೆ. ಅಲ್ಲದೇ ಬೆಂಕಿಯಿಂದ ಬಿಸಿಯ ಪ್ರಮಾಣ ಹೆಚ್ಚಾಗಿದ್ದು, ಕನಿಷ್ಠ ದಿನನಿತ್ಯದ ಅವಶ್ಯಕತೆಗಳನ್ನು ಪೂರೈಕೆ ಮಾಡಲು ಪರದಾಡುತ್ತಿದ್ದೇವೆ. ಇದೇ ವೇಳೆ ಒಂಟೆಗಳು ವಸತಿ ಪ್ರದೇಶಗಳಿಗೆ ನುಗ್ಗಿ ಸಂಗ್ರಹಿಸಿದ್ದ ನೀರನ್ನು ಕುಡಿಯುತ್ತಿವೆ. ಅಲ್ಲದೇ ಈ ವೇಳೆ ಒಂಟೆಗಳ ವ್ಯರ್ಥದಿಂದಲೂ ಸಮಸ್ಯೆ ಎದುರಿಸುತ್ತಿದ್ದೇವೆ ಎಂದು ಸಮಸ್ಯೆಯನ್ನು ವಿವರಿಸಿದ್ದಾರೆ.

    ಕಳೆದ ನವೆಂಬರ್ ನಲ್ಲಿ ಆರಂಭವಾದ ಕಾಡ್ಗಿಚ್ಚು ಆಸ್ಟ್ರೇಲಿಯಾ ಜನರ ಪರಿಸ್ಥಿತಿಯನ್ನೇ ಬದಲಿಸಿದೆ. ಇದರಿಂದ ದೇಶದ ಜನರ ನೀರಿನ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರ ಹರಸಾಹಸ ಪಡುತ್ತಿದೆ. ಆದ್ದರಿಂದಲೇ ಕಾನೂನಿನ ನಿಯಮಗಳ ಅನ್ವಯವೇ ಒಂಟೆಗಳ ಹತ್ಯೆಗೆ ಅನುಮತಿ ಪಡೆಯಲಾಗಿದೆ. ಆಸ್ಟ್ರೇಲಿಯಾದಲ್ಲಿ ಉಂಟಾದ ಕಾಡ್ಗಿಚ್ಚಿನಲ್ಲಿ ಇದುವರೆಗೂ 480 ಮಿಲಿಯನ್ ಪ್ರಾನಿಗಳು ಸಾವನ್ನಪ್ಪಿರುವುದಾಗಿ ಸರ್ಕಾರ ಅಂದಾಜು ಮಾಹಿತಿ ನೀಡಿದೆ.

    ಆಸ್ಟ್ರೇಲಿಯಾದ ಕಾಡ್ಗಿಚ್ಚು ವಿಶ್ವವನ್ನೇ ಆತಂಕಗೊಳಿಸಿದೆ. ಕಾಡ್ಗಿಚ್ಚಿನ ಪರಿಣಾಮ ಹಲವು ಪ್ರಾಣಿಗಳು ಬೆಂಕಿಗೆ ಸುಲಿಕಿ ಸಾವನ್ನಪ್ಪಿದ್ದರೆ ಒಂಟೆಗಳಿಗೆ ಉಸಿರುಗಟ್ಟಿದ ಪರಿಸ್ಥಿತಿ ನಿರ್ಮಾಣವಾಗಿದೆ. ಮೊದಲೇ ಒಂಟೆಗಳು ನೀರು ಕುಡಿಯುತ್ತದೆ, ಸದ್ಯದ ಪರಿಸ್ಥಿತಿಯಲ್ಲಿ ಒಂಟೆಗಳು ಮತ್ತಷ್ಟು ಪ್ರಮಾಣದಲ್ಲಿ ನೀರು ಕುಡಿಯುತ್ತಿದೆ. ಇದು ಕಾಡಂಚಿನ ಭಾಗದಲ್ಲಿ ಇರುವ ಜನರಿಗೆ ಮತ್ತಷ್ಟು ಸಮಸ್ಯೆ ಉಂಟು ಮಾಡಿದೆ. ಆದರೆ ಸರ್ಕಾರದ ಈ ಕ್ರಮಕ್ಕೆ ವಿಶ್ವದ ಪ್ರಾಣಿ ಪ್ರಿಯ ಸಂಘಗಳಿಂದ ಆಕ್ಷೇಪ ವ್ಯಕ್ತವಾಗುತ್ತಿದ್ದು, ಈ ಸಮಸ್ಯೆಗೆ ಬೇರೊಂದು ಉಪಾಯ ಕಂಡು ಹಿಡಿಯುವಂತೆ ಸಲಹೆ ನೀಡಿದ್ದಾರೆ.