Tag: ಒಂಟಿ ಸಲಗ

  • ಕೋಲಾರ| ಒಂಟಿ ಸಲಗ ದಾಳಿಗೆ ರೈತ ಮಹಿಳೆ ಬಲಿ

    ಕೋಲಾರ| ಒಂಟಿ ಸಲಗ ದಾಳಿಗೆ ರೈತ ಮಹಿಳೆ ಬಲಿ

    ಕೋಲಾರ: ಒಂಟಿ ಆನೆ  ದಾಳಿಗೆ (Elephant Attack) ರೈತ ಮಹಿಳೆಯೊಬ್ಬರು ಬಲಿಯಾದ ಘಟನೆ ಕೋಲಾರ (Kolar) ಜಿಲ್ಲೆಯ ಬಂಗಾರಪೇಟೆ (Bangarpet) ತಾಲೂಕಿನ ಸಾಕರಸನಹಳ್ಳಿ ಬಳಿ ನಡೆದಿದೆ.

    ಮಂಜುಳ (44) ಆನೆ ದಾಳಿಯಿಂದ ಮೃತಪಟ್ಟ ಮಹಿಳೆ. ಸಾಕರಸನಹಳ್ಳಿ ಗ್ರಾಮದ ಹೊರ ವಲಯದ ತೋಟದ ಮನೆ ಬಳಿ ಘಟನೆ ನಡೆದಿದೆ. ಮಂಜುಳ ಮೂತ್ರ ವಿಸರ್ಜನೆಗೆಂದು ಮುಂಜಾನೆ 4 ಗಂಟೆ ಸುಮಾರಿಗೆ ಮನೆಯಿಂದ ಹೊರಹೋದ ವೇಳೆ ಒಂಟಿ ಸಲಗ ದಾಳಿ ನಡೆಸಿದೆ. ಇದನ್ನೂ ಓದಿ: ಅಭಿವೃದ್ಧಿಯಲ್ಲಿ ಭಾರತವನ್ನು ಪಾಕಿಸ್ತಾನ ಸೋಲಿಸದಿದ್ದರೆ ನನ್ನ ಹೆಸರು ಶೆಹಬಾಜ್‌ ಷರೀಫ್‌ ಅಲ್ಲ: ಪಾಕ್‌ ಪ್ರಧಾನಿ ಸವಾಲು

    ಘಟನೆಯಿಂದ ಸಾಕರಸನಹಳ್ಳಿ ಸೇರಿದಂತೆ ಕಾಡಂಚಿನ ಗ್ರಾಮಗಳ ರೈತರಲ್ಲಿ ಆತಂಕ ಮನೆಮಾಡಿದೆ. ಸುತ್ತಮುತ್ತಲಿನ ಗ್ರಾಮಸ್ಥರು ಒಂಟಿ ಸಲಗ ದಾಳಿಯ ಭೀತಿಯಲ್ಲಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಮಸಮುದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಇದನ್ನೂ ಓದಿ: ಶಿರೂರು ಗುಡ್ಡ ಕುಸಿತ ದುರಂತ: ಐಆರ್‌ಬಿ ಕಂಪನಿ ವಿರುದ್ಧ ಪ್ರಕರಣ ದಾಖಲಿಸಲು ನ್ಯಾಯಾಲಯ ಆದೇಶ

  • ಬೆಳ್ಳಂಬೆಳಿಗ್ಗೆ ಮನೆಯ ಅಂಗಳಕ್ಕೆ ಎಂಟ್ರಿ ಕೊಟ್ಟ ಗಜ

    ಬೆಳ್ಳಂಬೆಳಿಗ್ಗೆ ಮನೆಯ ಅಂಗಳಕ್ಕೆ ಎಂಟ್ರಿ ಕೊಟ್ಟ ಗಜ

    ಹಾಸನ: ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಮುಂದುವರೆದಿದೆ. ಬೆಳ್ಳಂಬೆಳಿಗ್ಗೆ ಒಂಟಿ ಸಲಗವೊಂದು (Wild Elephant) ಮನೆಯ ಅಂಗಳಕ್ಕೆ ಎಂಟ್ರಿ ಕೊಟ್ಟಿರುವ ಘಟನೆ ಸಕಲೇಶಪುರ (Sakleshpura) ತಾಲೂಕಿನ ಕೊಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಸಂತೋಷ್ ಶೆಟ್ಟಿ ಎಂಬುವವರ ಮನೆಯ ಕಾಂಪೌಂಡ್ ಒಳಗೆಲ್ಲಾ ಮನಸ್ಸೋ ಇಚ್ಛೆ ಓಡಾಡಿದೆ. ಕಾಡಾನೆ ಕಂಡ ಕೂಡಲೇ ಸತೀಶ್ ಶೆಟ್ಟಿ ಮನೆಯವರು ಗಾಬರಿಯಿಂದ ಮನೆಯೊಳಗೆ ಓಡಿ ಹೋಗಿದ್ದಾರೆ. ಇದನ್ನೂ ಓದಿ: ಬ್ಯುಸಿ ನಡುವೆಯೂ ‘ಉಸಿರೇ ಉಸಿರೇ’ ಚಿತ್ರದ ಡಬ್ಬಿಂಗ್ ಮುಗಿಸಿದ ಕಿಚ್ಚ

    ಮನೆಯ ಸಮೀಪ ಓಡಾಡಿದ ನಂತರ ಒಂಟಿಸಲಗ ರಸ್ತೆಗೆ ಬಂದಿದೆ. ಅರಣ್ಯ ಇಲಾಖೆ (Forest Department) ಸಿಬ್ಬಂದಿ ಒಂಟಿಸಲಗಕ್ಕೆ ಸೈರನ್ ಓಡಿಸಿದಾಗ ರಸ್ತೆ ದಾಟಿ ಕಾಫಿ ತೋಟದೊಳಗೆ ಹೋಗಿದೆ. ಕೊಲ್ಲಹಳ್ಳಿ ಗ್ರಾಮದ ಸುತ್ತಮುತ್ತ ಕಾಡಾನೆ ಸಂಚರಿಸುತ್ತಿದ್ದು ಎಚ್ಚರಿಕೆಯಿಂದ ಓಡಾಡುವಂತೆ ಸ್ಥಳೀಯರಿಗೆ ಅರಣ್ಯ ಇಲಾಖೆ ಸಿಬ್ಬಂದಿ ಮಾಹಿತಿ ನೀಡುತ್ತಿದ್ದಾರೆ.

    ಕಾಡಾನೆ ಹಾವಳಿಯಿಂದ ಗ್ರಾಮಸ್ಥರು ಆತಂಕಗೊಂಡಿದ್ದು, ಕಾಫಿ ತೋಟದ ಕೆಲಸಕ್ಕೆ ಬರಲು ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೆಂಗಳೂರು-ಮಂಗಳೂರು ಹೈವೇಯಲ್ಲಿ ಕಾಡಾನೆ ಪ್ರತ್ಯಕ್ಷ

    ಬೆಂಗಳೂರು-ಮಂಗಳೂರು ಹೈವೇಯಲ್ಲಿ ಕಾಡಾನೆ ಪ್ರತ್ಯಕ್ಷ

    ಹಾಸನ: ಗ್ರಾಮದಲ್ಲಿ ಭಯ ಉಂಟು ಮಾಡುತ್ತಿರುವ ಕಾಡಾನೆಗಳು ಈಗ ರಾಷ್ಟ್ರೀಯ ಹೆದ್ದಾರಿಗೂ ಎಂಟ್ರಿ ಕೊಡಲು ಆರಂಭಿಸಿವೆ. ಸಕಲೇಶಪುರ ತಾಲ್ಲೂಕಿನ ಕೊಲ್ಲಹಳ್ಳಿ ಗ್ರಾಮದಲ್ಲಿ ಹೈವೇಯನ್ನು ಒಂಟಿ ಸಲಗ ದಾಟಿದೆ.

    ಬೆಂಗಳೂರು-ಮಂಗಳೂರು ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ‌ 75ರಲ್ಲಿ ಆನೆ ನೋಡಿ ಸವಾರರು ವಾಹನವನ್ನು ನಿಲ್ಲಿಸಿದ್ದಾರೆ. ಎರಡು ಬದಿ ಸಂಚಾರ ಸ್ಥಗಿತಗೊಳಿಸಿ ಕಾಡಾನೆ ದಾಟಲು ಅವಕಾಶ ಮಾಡಿಕೊಟ್ಟಿದ್ದಾರೆ. ಇದನ್ನೂ ಓದಿ: ಯುಪಿಐ ಪಾವತಿಗಳಿಗೆ ಯಾವುದೇ ಶುಲ್ಕ ವಿಧಿಸಲ್ಲ: ಕೇಂದ್ರ ಸರ್ಕಾರ

    ಇನ್ನೊಂದೆಡೆ ಸಕಲೇಶಪುರ ಪಟ್ಟಣದ ಸಮೀಪವೇ ಕಾಡಾನೆ ಬಂದಿದೆ. ಭತ್ತದ ಗದ್ದೆಯಲ್ಲಿ ಓಡಾಡಿ ಬೆಳೆಯನ್ನು ನಾಶ ಮಾಡಿದೆ. ಕಾಡಾನೆ ನೋಡಿ ಗ್ರಾಮಸ್ಥರು ಭಯಗೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬೆಳ್ಳಂಬೆಳಗ್ಗೆ ಮನೆಮುಂದೆ ಬಂದು ನಿಂತ ಒಂಟಿ ಸಲಗ

    ಬೆಳ್ಳಂಬೆಳಗ್ಗೆ ಮನೆಮುಂದೆ ಬಂದು ನಿಂತ ಒಂಟಿ ಸಲಗ

    ಹಾಸನ: ಮಲೆನಾಡು ಭಾಗದಲ್ಲಿ ಒಂಟಿ ಸಲಗದ ಉಪಟಳ ಹೆಚ್ಚಾಗಿದ್ದು, ಬೆಳ್ಳಂಬೆಳಗ್ಗೆ ಮನೆ ಮುಂದೆ ಬಂದು ನಿಂತ ಒಂಟಿ ಸಲಗ ಕಂಡು ಗ್ರಾಮಸ್ಥರು ಬೆಚ್ಚಿಬಿದ್ದಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.

    ಸಕಲೇಶಪುರ ತಾಲೂಕಿನ ಹೊಸಗದ್ದೆ ಗ್ರಾಮದಲ್ಲಿ ಇಂದು ಬೆಳಗ್ಗೆ ಗ್ರಾಮದೊಳಗೆ ಕಾಡಾನೆ ಬಂದು ಮನೆಯೊಂದರ ಬಾಗಿಲ ಮುಂದೆಯೇ ನಿಂತಿದೆ. ಕಾಡಾನೆ ಕಂಡು ಮನೆಯವರು ಮತ್ತು ಗ್ರಾಮಸ್ಥರು ಆತಂಕಕ್ಕೀಡಾಗಿ ಮನೆಯೊಳಗೆ ಕೆಲ ಕಾಲ ಉಳಿದಿದ್ದರು. ಇದನ್ನೂ ಓದಿ: ಮೊದಲ ಬಾರಿಗೆ ಬೋನಿ ಕಪೂರ್ ನಿರ್ಮಾಣದಲ್ಲಿ ಜಾನ್ವಿ ನಟನೆ

    ಈ ರೀತಿಯಾಗುತ್ತಿರುವುದು ಮೊದಲಲ್ಲ. ಕಳೆದ ಒಂದು ವಾರದಿಂದ ಈ ಒಂಟಿ ಸಲಗ ಜನನಿಬಿಡ ಪ್ರದೇಶದಲ್ಲಿಯೇ ಸಂಚರಿಸುತ್ತಿರುವುದಾಗಿ ಸ್ಥಳೀಯರು ಹೇಳುತ್ತಿದ್ದಾರೆ. ಅದು ಅಲ್ಲದೇ ಈ ಭಾಗದಲ್ಲಿ ಪ್ರತಿದಿನ ಒಂದಿಲ್ಲ ಒಂದು ರೀತಿಯಲ್ಲಿ ಕಾಡಾನೆ ಉಪಟಳ ಹೆಚ್ಚಾಗಿದೆ. ಕೆಲವೊಮ್ಮೆ 20ಕ್ಕೂ ಹೆಚ್ಚು ಆನೆಗಳು ಜಮೀನಿಗೆ ದಾಳಿ ಮಾಡಿ ಕಾಫಿ, ಭತ್ತ, ಜೋಳ ಸೇರಿದಂತೆ ಇನ್ನಿತರ ಬೆಳೆ ನಾಶ ಮಾಡುತ್ತಿವೆ.

    ಆನೆ ದಾಳಿಯಿಂದ ಕಷ್ಟಪಟ್ಟು ಬೆಳೆದ ಫಸಲು ಕೈ ಸೇರುತ್ತಿಲ್ಲ. ಮತ್ತೊಂದೆಡೆ ಜೀವ ಭಯದಲ್ಲೇ ದಿನದೂಡಬೇಕಾಗಿದೆ. ಅಧಿಕಾರಿಗಳಾಗಲಿ, ಸರ್ಕಾರವಾಗಲಿ, ಜನಪ್ರತಿನಿಧಿಗಳಾಗಲಿ ನಮ್ಮ ಸಮಸ್ಯೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ಹೊರಹಾಕುತ್ತಿದ್ದಾರೆ.

  • ಚಾರ್ಮಾಡಿ ರಸ್ತೆ ಮಧ್ಯೆ ಅರ್ಧ ಗಂಟೆ ಠಿಕಾಣಿ ಹೂಡಿದ ಒಂಟಿ ಸಲಗ – ಪ್ರಯಾಣಿಕರು ಕಂಗಾಲು

    ಚಾರ್ಮಾಡಿ ರಸ್ತೆ ಮಧ್ಯೆ ಅರ್ಧ ಗಂಟೆ ಠಿಕಾಣಿ ಹೂಡಿದ ಒಂಟಿ ಸಲಗ – ಪ್ರಯಾಣಿಕರು ಕಂಗಾಲು

    ಚಿಕ್ಕಮಗಳೂರು: ಜಿಲ್ಲೆಯಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟ್ ರಸ್ತೆ ಮಧ್ಯೆ ಒಂಟಿ ಸಲಗ ಪ್ರತ್ಯಕ್ಷವಾಗಿದ್ದು ಪ್ರಯಾಣಿಕರು ಗಾಬರಿಗೊಂಡಿದ್ದಾರೆ.

    ಬುಧವಾರ ರಾತ್ರಿ ಚಾರ್ಮಾಡಿ ಘಾಟಿಯ ರಸ್ತೆಯ 11ನೇ ತಿರುವಿನಲ್ಲಿ ರಸ್ತೆ ಮಧ್ಯೆ ಸುಮಾರು ಅರ್ಧ ಗಂಟೆಗಳ ಕಾಲ ಒಂಟಿ ಸಲಗ ಠಿಕಾಣಿ ಹೂಡಿತ್ತು. ಆ ಕಡೆಯೂ ಹೋಗದೇ ಈ ಕಡೆಯೂ ಬರದೇ ಸುಮಾರು ಅರ್ಧ ಗಂಟೆಗಳ ನಿಂತಿದ್ದ ಒಂಟಿ ಸಲಗ ಕಂಡು ರಸ್ತೆ ಮಧ್ಯೆ ವಾಹನಗಳನ್ನ ನಿಲ್ಲಿಸಿಕೊಂಡಿದ್ದ ಪ್ರಯಾಣಿಕರು ಆತಂಕಕ್ಕೀಡಾಗಿದ್ದರು.

    ಚಾರ್ಮಾಡಿ ಘಾಟಿಯಲ್ಲಿ ಹೀಗೆ ಒಂಟಿ ಸಲದ ರಸ್ತೆ ಮಧ್ಯೆ ಬಂದು ನಿಲ್ಲುವುದು ಇದೇ ಮೊದಲಲ್ಲ. ಈ ಹಿಂದೆಯೂ ಹಲವು ಬಾರಿ ಆನೆ ಹೀಗೆ ರಸ್ತೆ ಮಧ್ಯೆ ನಿಂತಿದೆ. ಅದೃಷ್ಟವಶಾತ್ ಅನಾಹುತವೇನೂ ಸಂಭವಿಸಿಲ್ಲ. ಪ್ರಯಾಣಿಕರು ಹಾಗೂ ಸ್ಥಳೀಯರು ಆನೆಯನ್ನು ಸ್ಥಳಾಂತರಿಸುವಂತೆ ಅರಣ್ಯ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದಾರೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ.

    ರಸ್ತೆ ಮಧ್ಯೆ ಆನೆಯನ್ನ ಕಂಡಿದ್ದೇ ತಡ ವಾಹನ ಸವಾರರು ಗಾಬರಿಯಿಂದ ವಾಹನಗಳ ಲೈಟ್ ಆಫ್ ಮಾಡಿ ಮೊಬೈಲ್ ಟಾರ್ಚ್ ಮೂಲಕ ಆನೆಯ ಚಲನವಲನಗಳನ್ನು ಗಮನಿಸಿದ್ದಾರೆ. ಸುಮಾರು ಅರ್ಧ ಗಂಟೆಯ ಬಳಿಕ ಆನೆ ಬಂದ ದಾರಿಯಲ್ಲೇ ವಾಪಸ್ ಹೋಗಿದೆ.

    ಹಲವು ಬಾರಿ ಒಂಟಿ ಸಲಗ ರಸ್ತೆ ಮಧ್ಯೆ ನಿಂತಿದ್ದರೂ ಪ್ರಯಾಣಿಕರಿಗೆ ಯಾವುದೇ ತೊಂದರೆ ಮಾಡಿಲ್ಲ. ನಾಳೆಯೂ ಮಾಡೋದಿಲ್ಲ ಎಂದು ಹೇಳಲಾಗದು. ಮುಂದಿನ ದಿನಗಳಲ್ಲಿ ಆನೆಯ ಆರ್ಭಟದಿಂದ ಎನಾದರೂ ತೊಂದರೆಯಾದರೆ ಮತ್ತದೇ ಸರ್ಕಾರದ ಜವಾಬ್ದಾರಿಯಾಗಿರುತ್ತೆ. ಏನಾದರೂ ಅನಾಹುತವಾಗುವ ಮುನ್ನ ಅರಣ್ಯ ಇಲಾಖೆ ಆನೆಯನ್ನ ಸ್ಥಳಾಂತರಿಸಬೇಕೆಂದು ಸ್ಥಳೀಯರು ಹಾಗೂ ಪ್ರವಾಸಿ ಪ್ರಯಾಣಿಕರು ಮತ್ತೊಮ್ಮೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

  • ಬೆಳಗ್ಗೆ ಜಮೀನಲ್ಲಿ ಆನೆ ಹಿಂಡು ದಾಳಿ – ಸಂಜೆ ಗ್ರಾಮಕ್ಕೆ ನುಗ್ಗಿದ ಒಂಟಿ ಸಲಗದ ಗಜಗಾಂಭೀರ್ಯದ ನಡಿಗೆ

    ಬೆಳಗ್ಗೆ ಜಮೀನಲ್ಲಿ ಆನೆ ಹಿಂಡು ದಾಳಿ – ಸಂಜೆ ಗ್ರಾಮಕ್ಕೆ ನುಗ್ಗಿದ ಒಂಟಿ ಸಲಗದ ಗಜಗಾಂಭೀರ್ಯದ ನಡಿಗೆ

    ಹಾಸನ: ಬೆಳಂ ಬೆಳಗ್ಗೆ ರೈತರ ಜಮೀನುಗಳಿಗೆ ನುಗ್ಗಿ ಬೆಳೆ ಹಾಳು ಮಾಡಿದ್ದ ಆನೆಗಳ ದಾಳಿಗೆ ಕಂಗಾಲಾಗಿದ್ದ ಗ್ರಾಮಸ್ಥರು ಸಂಜೆ ಆಗುತ್ತಿದಂತೆ ಗ್ರಾಮಕ್ಕೆ ಭೇಟಿ ಕೊಟ್ಟ ಒಂಟಿ ಸಲಗ ನೋಡಿ ಆತಂಕ್ಕೆ ಒಳಗಾದ ಘಟನೆ ಜಿಲ್ಲೆಯ ಸಕಲೇಶಪುರದ ಚಿನ್ನಳ್ಳಿಯಲ್ಲಿ ನಡೆದಿದೆ.

    ಗ್ರಾಮಕ್ಕೆ ಏಕಾಏಕಿ ಎಂಟ್ರಿ ಕೊಟ್ಟಿದ್ದ ಒಂಟಿ ಸಲಗ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಜೋರಾಗಿ ಘೀಳಿಡುತ್ತಾ ರಾಜರೋಷವಾಗಿ ನಡೆದಾಟಿದೆ. ಒಂಟಿಸಲಗನನ್ನು ಕಂಡ ಕೂಡಲೇ ಗ್ರಾಮಸ್ಥರು ಮನೆಯೊಳಗೆ ಓಡಿ ಹೋಗಿ ಬಾಗಿಲು ಹಾಕಿಕೊಂಡಿದ್ದಾರೆ. ಈ ವೇಳೆ ಗ್ರಾಮದ ಯುವಕ ಆನೆ ನಡೆದುಕೊಂಡು ಹೋಗುತ್ತಿರುವ ದೃಶ್ಯವನ್ನು ಸೆರೆ ಹಿಡಿದಿದ್ದು, ಆನೆಯ ಗಾಂಭೀರ್ಯದ ನಡೆಯನ್ನು ದೃಶ್ಯಗಳಲ್ಲಿ ಕಾಣಬಹುದಾಗಿದೆ.

    ಒಂಟಿ ಸಲಗವಾದ ಕಾರಣ ಗ್ರಾಮದ ರಸ್ತೆಗಳಲ್ಲಿ ನಿಲ್ಲಿಸಿದ್ದ ಕಾರುಗಳ ಮೇಲೆ ದಾಳಿ ನಡೆಸಿವ ಸಾಧ್ಯತೆಗಳಿತ್ತು. ಆದರೆ ಈ ವೇಳೆ ಯಾರು ಆನೆಗೆ ಅಡ್ಡ ಪಡಿಸದ ಹಿನ್ನೆಲೆಯಲ್ಲಿ ಗ್ರಾಮದಿಂದ ಹೊರ ನಡೆದಿದೆ. ಅದೃಷ್ಟವಶಾತ್ ಗ್ರಾಮಸ್ಥರು ಬೇಗ ಎಚ್ಚರಗೊಂಡ ಕಾರಣ ಯಾವುದೇ ಹಾನಿ ಸಂಭವಿಸಿಲ್ಲ. ಪ್ರಮುಖವಾಗಿ ಈ ಭಾಗದಲ್ಲಿ ಆನೆ ಹಾವಳಿ ಹೆಚ್ಚಾಗಿದ್ದು, ಈಗಾಗಲೇ ರೈತರ ತೋಟಗಳಿಗೆ ನುಗ್ಗಿರುವ ಆನೆಗಳ ಹಿಂಡು ಬೆಳೆಗಳನ್ನು ನಾಶ ಪಡಿಸಿದೆ. ಒಂಟಿ ಸಲಗ ಗ್ರಾಮ ಪ್ರವೇಶಿಸುವ ಮುನ್ನ ರೈತರ ಹೊಲಗಳಿಗೆ ಸುಮಾರು 16 ಆನೆಗಳ ಹಿಂಡು ದಾಳಿ ನಡೆಸಿದ್ದವು. ಆನೆಗಳ ದಾಳಿಯಿಂದ ಗ್ರಾಮಸ್ಥರ ಬೆಳೆ ನಾಶವಾಗಿದ್ದು, ರೈತರು ಅಪಾರ ನಷ್ಟ ಅನುಭವಿಸಿದ್ದಾರೆ.

    ಇತ್ತ ಕಳೆದ ಒಂದು ವಾರದಿಂದ ಆನೆ ದಾಳಿಗೆ ಪರಿಹಾರ ನೀಡಿ ಶಾಶ್ವತ ಪರಿಹಾರ ನೀಡಬೇಕೆಂದು ಸಕಲೇಶಪುರ ತಾಲುಕಿನ ಬಾಳ್ಳುಪೇಟೆಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಇಂದು ಅಂತ್ಯಗೊಂಡಿದೆ. ಸಿಎಂ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಆನೆ ಹಾವಳಿಗೆ ನಿಯಂತ್ರಣಕ್ಕೆ ಶಾಶ್ವತ ಪರಿಹಾರದ ಭರವಸೆ ಲಭಿಸಿದ ಹಿನ್ನೆಲೆಯಲ್ಲಿ ರೈತರು ಪ್ರತಿಭಟನೆ ಕೈಬಿಟ್ಟಿದ್ದಾರೆ. ಸಿಎಂ ಸಭೆಯಲ್ಲಿನ ತೀರ್ಮಾನವನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಂ ಬಾಬು ಹೋರಾಟಗಾರರಿಗೆ ತಿಳಿಸಿದ್ದು, ಭರವಸೆ ಶೀಘ್ರ ಈಡೇರಿಸಲು ಗಡುವು ನೀಡಿದ ರೈತರು ಹೋರಾಟ ಅಂತ್ಯಗೊಳಿಸಿದರು.

    https://www.youtube.com/watch?v=bW_PRxClGpE

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹಿಮವದ್ ಗೋಪಾಲಸ್ವಾಮಿಯ ದರ್ಶನ ಪಡೆದು, ಪ್ರಸಾದ ತಿಂದು ಹೋಗುತ್ತಿದೆ ಒಂಟಿ ಸಲಗ – ಎಲ್ಲರಿಗೂ ಅಚ್ಚರಿಯೋ ಅಚ್ಚರಿ!

    ಹಿಮವದ್ ಗೋಪಾಲಸ್ವಾಮಿಯ ದರ್ಶನ ಪಡೆದು, ಪ್ರಸಾದ ತಿಂದು ಹೋಗುತ್ತಿದೆ ಒಂಟಿ ಸಲಗ – ಎಲ್ಲರಿಗೂ ಅಚ್ಚರಿಯೋ ಅಚ್ಚರಿ!

    ಚಾಮರಾಜನಗರ: ಒಂಟಿ ಸಲಗವೊಂದು ಕಳೆದ 5 ದಿನಗಳಿಂದ ದೇವರ ದರ್ಶನ ಮಾಡಿ ಪ್ರಸಾದ ಪಡೆದು ಹೋಗುತ್ತಿರುವ ಅಪರೂಪದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಜರುಗುತ್ತಿದೆ.

    ಬೆಟ್ಟದಲ್ಲಿರುವ ಗೋಪಾಲಸ್ವಾಮಿ ದರ್ಶನ ಮಾಡಲು ಬಂಡಿಪುರ ರಾಷ್ಟ್ರೀಯ ಉದ್ಯಾನವನದಿಂದ 5 ದಿನಗಳಿಂದ ಪ್ರತಿ ದಿನ ಸಂಜೆ ಈ ಒಂಟಿ ಸಲಗ ಬೆಟ್ಟಕ್ಕೆ ಆಗಮಿಸುತ್ತಿದೆ. ದೇವರ ದರ್ಶನ ಪಡೆದ ನಂತರ ಒಂಟಿ ಸಲಗ ದೇವಸ್ಥಾನದ ಅಡುಗೆ ಮನೆಗೆ ಹೋಗಿ ಸೊಂಡಿಲಿನಿಂದ ಪ್ರಸಾದ ಸ್ವೀಕರಿಸಿ ಕಾಡಿಗೆ ತೆರಳುತ್ತಿದೆ. ಈ ದೃಶ್ಯವನ್ನು ಕಂಡ ಇಲ್ಲಿನ ಭಕ್ತರು ಹಾಗೂ ಜನರು ಗಣಪತಿಯೇ ಈ ಒಂಟಿ ಸಲಗ ರೂಪದಲ್ಲಿ ಬರುತ್ತಿದ್ದಾನೆ ಎನ್ನುತ್ತಿದ್ದಾರೆ.

    ಸಾಮಾನ್ಯವಾಗಿ ದೊಡ್ಡ ದೇವಾಲಯಗಳಲ್ಲಿ ಸಾಕಾನೆಗಳಿರುತ್ತವೆ. ಈ ಆನೆಗಳು ದೇವರಿಗೆ ನಮಿಸುವುದು ರೂಢಿ. ಆ ಆನೆ ದೇವರ ದರ್ಶನ ಪಡೆಯುವ ಸಲುವಾಗಿ ಬರುತ್ತಿದೆ ಎನ್ನುವುದು ಕೆಲವರ ನಂಬಿಕೆ. ಆದರೆ, ಈ ಕಾಡಾನೆಗೆ ದೇವಾಲಯದಲ್ಲಿ ಸಿಗುತ್ತಿರುವ ಬಾಳೆಹಣ್ಣು, ತೆಂಗಿನಕಾಯಿ ರುಚಿ ಸಿಕ್ಕಿದೆ.

    ಹೀಗಾಗಿ ನಿತ್ಯ ಆ ಆನೆ ಇಲ್ಲಿಗೆ ಬರುತ್ತಿದೆ ಎನ್ನುವುದು ಕೆಲವರ ವಾದ. ಆದರೆ ಈ ಭಾರೀ ಗಾತ್ರದ ಒಂಟಿ ಸಲಗ ದೇವಾಲಯದ ಬಳಿಗೆ ಬಂದರೂ ಯಾರಿಗೂ ತೊಂದರೆ ಕೊಟ್ಟಿಲ್ಲ. ಹೀಗಾಗಿ ಇದು ಗೋಪಾಲಸ್ವಾಮಿ ಅನುಗ್ರಹದಿಂದಲೇ ಆನೆ ಬರುತ್ತಿದೆ ಎನ್ನುವುದು ದೇವಸ್ಥಾನದ ಅರ್ಚಕರ ನಂಬಿಕೆ. ಏನೇ ಇರಲಿ ಆನೆ ನಿತ್ಯ ದರ್ಶನ ಪಡೆದು ಹೋಗುತ್ತಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿರುವುದಂತೂ ಸುಳ್ಳಲ್ಲ.