Tag: ಒಂಟಿ ಮಹಿಳೆ

  • ಮಗಳ ಲಿವಿಂಗ್ ಟುಗೆದರ್ ಸಂಬಂಧಕ್ಕೆ ತಾಯಿ ವಿರೋಧ – ಪ್ರಿಯಕರನಿಂದ ತಾಯಿ ಹತ್ಯೆ

    ಮಗಳ ಲಿವಿಂಗ್ ಟುಗೆದರ್ ಸಂಬಂಧಕ್ಕೆ ತಾಯಿ ವಿರೋಧ – ಪ್ರಿಯಕರನಿಂದ ತಾಯಿ ಹತ್ಯೆ

    ಬೆಂಗಳೂರು: ಒಂಟಿಯಾಗಿ ವಾಸವಿದ್ದ ಮಹಿಳೆಯ ಕತ್ತು ಸೀಳಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಗೋವಿಂದರಾಜ ನಗರದಲ್ಲಿ ನಡೆದಿದೆ.

    ನಂಜಮ್ಮ (52) ಕೊಲೆಗೀಡಾದ ಮಹಿಳೆ. ಮೃತ ನಂಜಮ್ಮನ ಮಗಳು ಮದುವೆಯಾಗಿ ಗಂಡನಿಗೆ ವಿಚ್ಛೇದನ ನೀಡಿ ಬೇರೋಬ್ಬ ಯುವಕನ ಜೊತೆ ಲಿವಿಂಗ್ ಟುಗೆದರ್‌ನಲ್ಲಿ ಇದ್ದಳು. ತಾಯಿಗೆ ಅದನ್ನು ಸಹಿಸಲಾಗುತ್ತಿರಲಿಲ್ಲ. ಈ ಕಾರಣಕ್ಕೆ ಮಗಳಿಗೆ ಮದುವೆ ಆಗದೇ ಅವನ ಜೊತೆ ಇರಬೇಡ ಅಂತ ಆಗಾಗ ಬುದ್ಧಿವಾದ ಹೇಳುತ್ತಿದ್ದರು.

    ಪ್ರೀತಿಯ ಅಮಲಿನಲ್ಲಿದ್ದ ಮಗಳು ತಾಯಿಯ ಬುದ್ಧಿ ಮಾತನ್ನು ನಿರಾಕರಿಸಿದ್ದಾಳೆ. ನಂಜಮ್ಮ ನಮ್ಮನ್ನು ದೂರ ಮಾಡುವ ಪ್ರಯತ್ನ ಮಾಡ್ತಾಳೆ ಅಂತ ಆರೋಪಿ ರಾಘು, ಮನೆಗೆ ಹೋಗಿ ವೈರ್‌ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ.

    ಪಕ್ಕದ ಮನೆಯವರು ಬಂದು ನೋಡಿದಾಗ ನಂಜಮ್ಮ ಕೊಲೆಯಾಗಿದ್ದರು. ಕೂಡಲೇ ಗೋವಿಂದರಾಜ ನಗರ ಪೊಲೀಸರಿಗೆ ನೆರೆ ಹೊರೆಯವರು ವಿಷಯ ತಿಳಿಸಿದ್ದಾರೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸುತ್ತಿದ್ದಾಗ ಯಾರು ಮಹಿಳೆಯ ಕೊಲೆ ಮಾಡಿದ್ದಾರೆಂದು ಮಾಹಿತಿ ಕಲೆಹಾಕಿದ್ದಾರೆ. ಮಗಳ ಪ್ರೀತಿಯ ವಿಚಾರ ತಿಳಿದು ತನಿಖೆ ಮಾಡಿದಾಗ ಆರೋಪಿ ರಾಘು ಸಿಕ್ಕಿ ಬಿದ್ದಿದ್ದಾನೆ.

    ಘಟನೆ ಸಂಬಂಧ ಕೇಸ್ ದಾಖಲಿಸಿಕೊಂಡಿರುವ ಗೋವಿಂದರಾಜ ನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ಒಂಟಿ ಮಹಿಳೆಯ ಎದೆಗೆ ಚಾಕು ಇರಿತ – ಮಾಂಗಲ್ಯ ಸರ ಕದ್ದು ಎಸ್ಕೇಪ್

    ಒಂಟಿ ಮಹಿಳೆಯ ಎದೆಗೆ ಚಾಕು ಇರಿತ – ಮಾಂಗಲ್ಯ ಸರ ಕದ್ದು ಎಸ್ಕೇಪ್

    ಬೆಂಗಳೂರು: ಒಂಟಿ ಮಹಿಳೆಯ ಎದೆಗೆ ಚೂರಿ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಸಿಂಗೇನ ಅಗ್ರಹಾರದಲ್ಲಿ ನಡೆದಿದೆ.

    ಗುರುವಾರ ರಾತ್ರಿ 9 ಗಂಟೆಗೆ ಘಟನೆ ನಡೆದಿದ್ದು, ಕೊಲೆಯಾದ ಮಹಿಳೆಯನ್ನು ಶ್ವೇತಾ ಎಂದು ಗುರುತಿಸಲಾಗಿದೆ. ಮನೆಯಲ್ಲಿ ಒಬ್ಬಳೆ ಮಹಿಳೆ ಇದ್ದಿದ್ದನ್ನು ಗಮನಿಸಿ ಕೃತ್ಯ ಎಸೆಗಲಾಗಿದೆ. ಮಹಿಳೆಯ ಎದೆಗೆ ಚಾಕು ಇರಿದು ಹತ್ಯೆ ಮಾಡಿ ಮನೆಯಲ್ಲಿದ್ದ ಸಾಮಾನು ಮತ್ತು ಮಹಿಳೆಯ ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಕಳ್ಳರು ಪರಾರಿಯಾಗಿದ್ದಾರೆ.

    ಶ್ವೇತಾ ಮತ್ತು ಮುರಳಿ ದಂಪತಿ ಸಿಂಗೇನ ಅಗ್ರಹಾರದಲ್ಲಿ ವಾಸವಿದ್ದು, ಮುರಳಿ ಆನೇಕಲ್ ತಾಲೂಕಿನ ಚಂದಾಪುದಲ್ಲಿ ಮೆಡಿಕಲ್ ಶಾಪ್ ಹೊಂದಿದ್ದಾರೆ. ಹೀಗಾಗಿ ಮುರುಳಿ ರಾತ್ರಿ ಬರುವುದು ತಡವಾಗುತ್ತದೆ. ಇದರ ಜೊತೆಗೆ ಮನೆಯಲ್ಲಿದ್ದ ಶ್ವೇತಾಳ ಮಗು ಮತ್ತು ಅತ್ತೆ ಊರಿಗೆ ತೆರಳಿದ್ದರು. ಹೀಗಾಗಿ ರಾತ್ರಿ ವೇಳೆಯಲ್ಲಿ ಮನೆಯಲ್ಲಿ ಶ್ವೇತಾ ಒಂಟಿಯಾಗಿ ಇರುತ್ತಿದ್ದಳು. ಇದನ್ನು ಗಮನಿಸಿದ ಯಾರೋ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ.

    ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್‍ಪಿ ರವಿ.ಡಿ.ಚನ್ನಣ್ಣನವರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳದಿಂದಲೂ ಕೂಡ ಸ್ಥಳ ವೀಕ್ಷಣೆ ನಡೆದಿದ್ದು, ಆರೋಪಿಗಳ ಬಂಧನಕ್ಕೆ ಹೆಬ್ಬಗೋಡಿ ಇನ್ಸ್ ಪೆಕ್ಟರ್ ಶೇಖರ್ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದೆ.

  • ಬಾಯಿಗೆ ಬಟ್ಟೆ ತುರುಕಿ ಒಂಟಿ ಮಹಿಳೆಯ ಭೀಕರ ಕೊಲೆ

    ಬಾಯಿಗೆ ಬಟ್ಟೆ ತುರುಕಿ ಒಂಟಿ ಮಹಿಳೆಯ ಭೀಕರ ಕೊಲೆ

    ಚಿಕ್ಕಬಳ್ಳಾಪುರ: ಮನೆಯಲ್ಲಿ ಒಂಟಿಯಾಗಿದ್ದ ಮಹಿಳೆಯ ಬಾಯಿಗೆ ಬಟ್ಟೆ ತುರುಕಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರೋ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕಗ್ಗಲಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ 50 ವರ್ಷದ ರತ್ನಮ್ಮ ಮೃತ ಮಹಿಳೆ. ಪತಿಯ ಅಕಾಲಿಕ ಮರಣದ ನಂತರ ಮಕ್ಕಳೆಲ್ಲ ತಾತನ ಮನೆ ಸೇರಿಕೊಂಡಿದ್ರೆ, ಈಕೆ ಮಾತ್ರ ಗಂಡನ ಮನೆ ಮತ್ತು ಊರು ಬಿಟ್ಟು ಬರಲ್ಲ ಎಂದು ಗಂಡನ ಹಳೆ ಮನೆಯಲ್ಲಿ ಸ್ವಾವಲಂಬಿಯಾಗಿ ಒಬ್ಬರೆ ವಾಸವಾಗಿದ್ದರು.

    ಒಂಟಿಯಾಗಿದ್ದ ರತ್ನಮ್ಮ ಕಳೆದ ಎರಡು ದಿನಗಳಿಂದ ಮಕ್ಕಳ ಸಂಪರ್ಕಕ್ಕೆ ಸಿಗದೆ ಫೋನ್ ಮಾಡಿದ್ರು ರಿಸೀವ್ ಮಾಡದಿದ್ದ ಕಾರಣ ಅನುಮಾನಗೊಂಡ ಮಕ್ಕಳು ಮನೆಗೆ ಬಂದು ನೋಡಿದ್ದಾರೆ. ಈ ವೇಳೆ ಮನೆಯಲ್ಲಿ ಎರಡು ದಿನಗಳಿಂದ ರತ್ನಮ್ಮ ಬಾಯಿಗೆ ಬಟ್ಟೆ ಕಟ್ಟಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಸ್ಥಿತಿಯಲ್ಲಿ ಕಂಡು ಬಂದಿದ್ದು, ಕುಟುಂಬಸ್ಥರು ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾರೆ.

    ಆಸ್ತಿಗಾಗಿ ದಾಯಾದಿಗಳಿಂದಲೇ ಕೊಲೆ?
    20 ವರ್ಷಗಳಿಂದೆ ರತ್ನಮ್ಮಳ ಗಂಡನನ್ನು ಯಾರು ದುಷ್ಕರ್ಮಿಗಳು ಕೊಲೆ ಮಾಡಿದ್ದರಂತೆ. ಇದಾದ ನಂತರ ಮಕ್ಕಳು ತಾತನ ಮನೆಗೆ ಹೋಗಿ ನೆಲೆಸಿದ್ದು, ರತ್ನಮ್ಮ ಮಾತ್ರ ಒಬ್ಬರೇ ಇದ್ದರು. ಅಲ್ಲದೆ ಕೊಲೆಯಾದ ರತ್ನಮ್ಮ ಹಾಗೂ ಆಕೆಯ ಮೈದನರ ಜೊತೆ ಕಳೆದ ಹಲವು ವರ್ಷಗಳಿಂದ ಜಮೀನು ವಿಚಾರದಲ್ಲಿ ವ್ಯಾಜ್ಯ ನಡೆಯುತ್ತಿದ್ದು, ಕೋರ್ಟಿನಲ್ಲಿ ಕೇಸ್ ಹಾಕಿ ಎಲ್ಲರು ಬೇರೆ ಬೇರೆಯಾಗಿದ್ದರಂತೆ. ಇದರ ಜೊತೆಗೆ ರತ್ಮಮ್ಮಳ ದೊಡ್ಡ ಮಗನ ಮದುವೆಗೆ ಒಂದು ತಿಂಗಳು ಬಾಕಿಯಿದ್ದು, ಮದುವೆ ಕೆಲಸಗಳಿಗಾಗಿ ಓಡಾಡುತ್ತಿದ್ದರು.

    ಈ ನಡುವೆ ರತ್ನಮ್ಮ ಮನೆಯಲ್ಲಿ ಬರ್ಬರವಾಗಿ ಕೊಲೆಯಾಗಿ ಹೋಗಿದ್ದು, ಆಸ್ತಿ ವಿಚಾರವಾಗಿಯೇ ರತ್ನಮ್ಮಳನ್ನು ಕೊಲೆ ಮಾಡಿರುವುದಾಗಿ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಗ್ರಾಮದಲ್ಲಿ ಒಂಟಿ ಮಹಿಳೆಯ ಕೊಲೆ ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದ್ದು, ಈ ಸಂಬಂಧ ಚನ್ನರಾಯಪಟ್ಟಣ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

  • ಕೋಲಾರದಲ್ಲಿ ಒಂಟಿ ಮಹಿಳೆಯ ಬರ್ಬರ ಹತ್ಯೆ

    ಕೋಲಾರದಲ್ಲಿ ಒಂಟಿ ಮಹಿಳೆಯ ಬರ್ಬರ ಹತ್ಯೆ

    ಕೋಲಾರ: ಒಂಟಿ ಮಹಿಳೆಯನ್ನು ಅನುಮಾನಸ್ಪದ ರೀತಿಯಲ್ಲಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕೋಲಾರ ಜಿಲ್ಲೆ ಶ್ರೀನಿವಾಸಪುರ ಪಟ್ಟಣದ ಡಿವಿಜಿ ರಸ್ತೆಯಲ್ಲಿ ನಡೆದಿದೆ.

    ಕೊಲೆಯಾದ ಒಂಟಿ ಮಹಿಳೆಯನ್ನು 55 ವರ್ಷದ ಉಮಾದೇವಿ ಎಂದು ಗುರುತಿಸಲಾಗಿದ್ದು, ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.

    ಹಲವಾರು ವರ್ಷಗಳಿಂದ ಪತಿಯನ್ನು ಬಿಟ್ಟು ಒಂಟಿಯಾಗಿ ಜೀವನ ಸಾಗಿಸುತ್ತಿದ್ದ ಉಮಾದೇವಿಯನ್ನು ಯಾರೋ ಕಿಡಿಗೇಡಿಗಳು ತಡರಾತ್ರಿ ಕೊಲೆ ಮಾಡಿದ್ದಾರೆ. ಅತ್ಯಾಚಾರವೆಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಶ್ರೀನಿವಾಸಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • 2ನೇ ಮದುವೆಯ ಖರ್ಚಿಗೆ ಒಂಟಿ ಮಹಿಳೆಯನ್ನ ಕೊಂದು ಚಿನ್ನಾಭರಣ ದೋಚಿದ್ದ ಆರೋಪಿ ಅರೆಸ್ಟ್

    2ನೇ ಮದುವೆಯ ಖರ್ಚಿಗೆ ಒಂಟಿ ಮಹಿಳೆಯನ್ನ ಕೊಂದು ಚಿನ್ನಾಭರಣ ದೋಚಿದ್ದ ಆರೋಪಿ ಅರೆಸ್ಟ್

    ರಾಮನಗರ: ಒಂಟಿ ಮನೆಯಲ್ಲಿ ವಾಸವಾಗಿದ್ದ ಮಹಿಳೆಯನ್ನು ಕೊಂದು ಚಿನ್ನಾಭರಣ ದೋಚಿದ್ದ ಆರೋಪಿಯನ್ನ ಚನ್ನಪಟ್ಟಣ ತಾಲೂಕಿನ ಎಂಕೆ ದೊಡ್ಡಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಬೇವೂರು ಮಂಡ್ಯ ಗ್ರಾಮದ ನಾಗೇಶ್ ಬಂಧಿತ ಆರೋಪಿ. ಇದೇ ತಿಂಗಳ 15 ರಂದು ಬೇವೂರು ಮಂಡ್ಯ ನಿವಾಸಿ ಸರೋಜಮ್ಮ ಎಂಬಾಕೆಯ ಕತ್ತು ಕೂಯ್ದು ಕೊಲೆ ಮಾಡಲಾಗಿತ್ತು. ಎರಡನೇ ಮದುವೆಯ ಖರ್ಚಿಗಾಗಿ ಆರೋಪಿ ನಾಗೇಶ್ ಸರೋಜಮ್ಮಳನ್ನು ಕೊಂದು ಚಿನ್ನಾಭರಣ ದೋಚಿದ್ದ.

    ಘಟನೆ ಸಂಬಂಧ ಎಂಕೆ ದೊಡ್ಡಿ ಪೊಲೀಸರು ಆರೋಪಿಯನ್ನು ಬಂಧಿಸಿ ಆತನಿಂದ 80 ಗ್ರಾಂ ಚಿನ್ನಾಭರಣ ಹಾಗೂ ಒಂದು ಬೈಕ್ ವಶಪಡಿಸಿಕೊಂಡಿದ್ದಾರೆ.