Tag: ಐಸ್ ಕ್ರೀಂ

  • ಮಕ್ಕಳಿಗೆ ಐಸ್ ಕ್ರೀಂ ನೀಡದ್ದಕ್ಕೆ ಅಂಗಡಿ ಮೇಲೆ ದಾಳಿ ಮಾಡಿದ ತಂದೆ

    ಮಕ್ಕಳಿಗೆ ಐಸ್ ಕ್ರೀಂ ನೀಡದ್ದಕ್ಕೆ ಅಂಗಡಿ ಮೇಲೆ ದಾಳಿ ಮಾಡಿದ ತಂದೆ

    ಮುಂಬೈ: ಅಂಗಡಿಯವರು ಐಸ್ ಕ್ರೀಂ ಕೊಡಲು ನಿರಾಕರಿಸಿದರೆ ಜನರು ಏನು ಮಾಡಬಹುದು? ಸುಮ್ಮನೆ ಹೋಗುತ್ತಾರೆ ಅಥವಾ ಬೇರೆ ಅಂಗಡಿಯನ್ನು ಹುಡುಕುತ್ತಾರೆ. ಆದರೆ ಇಲ್ಲೊಬ್ಬ ತಂದೆ ತನ್ನ ಮಕ್ಕಳಿಗೆ ಐಸ್ ಕ್ರೀಂ ಕೊಡಲಿಲ್ಲ ಎಂದು ಅಂಗಡಿ ಮೇಲೆ ದಾಳಿ ಮಾಡಿರುವ ಆಫಾತಕಾರಿ ಘಟನೆ ಮುಂಬೈನಲ್ಲಿ ನಡೆದಿದೆ.

    ಮುಂಬೈ ಉಪನಗರ ವಸಾಯಿಯಲ್ಲಿ ವ್ಯಕ್ತಿಯೊಬ್ಬರು ಮಧ್ಯರಾತ್ರಿ ಎರಡು ಗಂಟೆಗೆ ಐಸ್‍ಕ್ರೀಂ ನೀಡುವಂತೆ ಮಾರಾಟ ಮಾಡುವ ಮಾಲೀಕನನ್ನು ಕೇಳಿದ್ದಾನೆ. ಆದರೆ ಈ ವೇಳೆ ಅವರು ಕೊಡಲು ನಿರಾಕರಿಸಿದ್ದು, ಪರಿಣಾಮ ಆ ವ್ಯಕ್ತಿ ಅಂಗಡಿಯ ಸಂಪೂರ್ಣ ಐಸ್ ಕ್ರೀಮ್ ಸ್ಟಾಕ್‍ನ ಫ್ರೀಜರ್ ಅನ್ನು ಒಡೆದು ಹಾನಿಗೊಳಿಸಿರುವ ಆಫಾತಕಾರಿ ಘಟನೆ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಇದನ್ನೂ ಓದಿ: ಕೊರೊನಾ ವಾರಿಯರ್ಸ್‍ಗೆ 4 ತಿಂಗಳಿನಿಂದ ಸಿಕ್ಕಿಲ್ಲ ಸಂಬಳ

    ಡಿಸೆಂಬರ್ 19 ರಂದು ನಸುಕಿನ ಜಾವ 2:11 ರ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವ್ಯಕ್ತಿಯೊಬ್ಬ ಐಸ್ ಕ್ರೀಂ ಅಂಗಡಿ ಮಾಲೀಕರೊಂದಿಗೆ ಮಾತನಾಡುತ್ತಿರುವುದು ಕಂಡುಬರುತ್ತೆ. ಆ ವ್ಯಕ್ತಿಯ ಹಿಂದೆ ಹುಡುಗಿ ಮತ್ತು ಚಿಕ್ಕ ಮಗು ನಿಂತಿರುರುವುದನ್ನು ದೃಶ್ಯದಲ್ಲಿ ನೋಡಬಹುದು.

    ಆ ವ್ಯಕ್ತಿ ನಂತರ ಮಕ್ಕಳನ್ನು ಪಕ್ಕಕ್ಕೆ ಹೋಗುವಂತೆ ಸೂಚಿಸಿ ವೆಲ್‍ನೆಸ್ ಮೆಡಿಕಲ್ ಸ್ಟೋರ್‍ನ ಹೊರಗೆ ಇರಿಸಲಾಗಿರುವ ಮೂರು ಐಸ್‍ಕ್ರೀಂ ಫ್ರೀಜರ್‍ಗಳನ್ನು ಸಮೀಪಿಸುತ್ತಾನೆ. ಇದರಿಂದ ಮಕ್ಕಳು ಏನು ತಿಳಿಯದೆ ಅಲ್ಲಿಂದ ಸುಮ್ಮನೆ ಹೋಗುತ್ತಾರೆ. ಕೊನೆಯದಾಗಿ ಆ ವ್ಯಕ್ತಿ ಅಂಗಡಿಯವರಿಗೆ ಎಚ್ಚರಿಕೆಯನ್ನು ನೀಡುತ್ತಾನೆ. ಅಲ್ಲೇ ಇದ್ದ ರಾಡ್ ಅನ್ನು ತೆಗೆದುಕೊಂಡು ಮೂರು ಫ್ರೀಜರ್‍ನ ಗಾಜನ್ನು ಆ ರಾಡಿನಿಂದ ಒಡೆದು ಹಾಕುತ್ತಾನೆ. ನಂತರ ಅಲ್ಲಿಂದ ಆ ರಾಡ್ ಅನ್ನು ಎಸೆದು ಕೋಪದಿಂದ ಹೊರಟು ಹೋಗುತ್ತಾನೆ. ಇದನ್ನೂ ಓದಿ: ನಮ್ಮ ಭೂಮಿ ಹೋದರೂ ಪರವಾಗಿಲ್ಲ, ಮೇಕೆದಾಟು ಯೋಜನೆ ಬೇಗ ಆರಂಭವಾಗಬೇಕು: ಡಿಕೆಶಿ

    ಆ ವ್ಯಕ್ತಿ ಏಕೆ ಈ ರೀತಿ ಮಾಡಿದ್ದಾನೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಪ್ರಕರಣ ಕುರಿತು ತಡವಾಗಿ ಬೆಳಕಿಗೆ ಬಂದಿದ್ದು, ಪೂರ್ತಿಯಾಗಿ ತನಿಖೆಯಾಗಿಲ್ಲ. ಪ್ರಸ್ತುತ ವ್ಯಕ್ತಿ ವಿರುದ್ಧ ಮಾಣಿಕಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

  • ಐಸ್ ಕ್ರೀಂ ತಣ್ಣಗಾಗಿದೆ, ಹಣ ವಾಪಸ್ ಕೊಡಿ: ಗ್ರಾಹಕ

    ಐಸ್ ಕ್ರೀಂ ತಣ್ಣಗಾಗಿದೆ, ಹಣ ವಾಪಸ್ ಕೊಡಿ: ಗ್ರಾಹಕ

    ವಾಷಿಂಗ್ಟನ್: ತಣ್ಣಗಾದ ಐಸ್ ಕ್ರೀಂ ಕೊಟ್ಟಿದ್ದಕ್ಕೆ ರೆಸ್ಟೋರೆಂಟ್‍ನಿಂದ ಗ್ರಾಹಕ ಹಣ ವಾಪಾಸ್ ಕೇಳಿರುವ ವಿಚಿತ್ರ ಘಟನೆಯೊಂದು ಸುದ್ದಿಯಾಗಿದೆ.

    ಚೀಸ್, ಐಸ್​ ಕ್ರೀಂ, ಮಿಲ್ಕ್​ಶೇಕ್  ಸೇರಿದಂತೆ ಗ್ರಾಹಕನೊಬ್ಬ ಆರ್ಡರ್ ಮಾಡಿದ್ದನು. ಈ ತಿನಿಸುಗಳು ತಣ್ಣಗಾಗಿದೆ, ಹಣ ಮರು ಪಾವತಿಸಿ ಎಂದು ಗ್ರಾಹಕನನ್ನ ಬಳಿ  ಕ್ಯಾತೆ ತೆಗೆದಿದ್ದನು ಎಂದು ರೆಸ್ಟೋರೆಂಟ್‍ ಮಾಲೀಕ ಹಸನ್ ಹಬೀಬ್ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ‘ಬೀಸ್ಟ್’ ಸಿನಿಮಾ ವಿಶೇಷ ಫೋಟೋ ಶೇರ್ ಮಾಡಿದ ಚಿತ್ರತಂಡ

    ಇತ್ತೀಚೆಗೆ ಡೆಲಿವರಿ ಸೇವೆ ಬಗ್ಗೆ ಗ್ರಾಹಕರಿಂದ ಅತಿ ಹೆಚ್ಚು ದೂರುಗಳು ಬರುತ್ತಿದ್ದು, ಅವುಗಳಲ್ಲಿ ಕೆಲವು ವಿಚಿತ್ರವಾದ ಪ್ರಕರಣಗಳಾಗಿವೆ. ನಾಲ್ಕು ಮಿಲ್ಕ್​ಶೇಕ್, ಚೀಸ್‍ಕೇಕ್ ಮತ್ತು ಐಸ್​ಕ್ರೀಂ ಅನ್ನು ಆರ್ಡರ್ ಮಾಡಿದ ವ್ಯಕ್ತಿಯೊಬ್ಬರು ಅದಾದ 45 ನಿಮಿಷಗಳ ನಂತರ ಅವರು ಆಹಾರ ತಣ್ಣಗಿರುವ ಕಾರಣ ತಾವು ನೀಡಿದ ಹಣವನ್ನು ಮರುಪಾವತಿ ಮಾಡಬೇಕೆಂದು ದೂರು ನೀಡಿದರು. ಐಸ್‍ಕ್ರೀಂ, ಮಿಲ್ಕ್‍ಶೇಕ್, ಚೀಸ್ ಕೇಕ್ ಎಲ್ಲಾದರೂ ಬಿಸಿಯಾಗಿರುತ್ತದೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.  ಇದನ್ನೂ ಓದಿ: ಯುವಕನ ಜೊತೆಗೆ ವಾಸವಿದ್ದ ಅಪ್ರಾಪ್ತ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು

    ಕೆಲವೊಮ್ಮೆ ನಾವು ತಪ್ಪುಗಳನ್ನು ಮಾಡುತ್ತೇವೆ. ಟ್ರಾಫಿಕ್‍ನಿಂದಾಗಿ ಅಥವಾ ಇನ್ನಿತರ ಕಾರಣಗಳಿಂದ ಸರಿಯಾದ ಸಮಯದಲ್ಲಿ ಆಹಾರವನ್ನು ಡೆಲಿವರಿ ನೀಡಲು ಆಗುವುದಿಲ್ಲ. ಕೆಲವೊಮ್ಮೆ ನಾವು ಐಟಂಗಳನ್ನು ಕಳೆದುಕೊಳ್ಳುತ್ತೇವೆ ಅಥವಾ ತಪ್ಪು ಐಟಂ ಅನ್ನು ಕಳುಹಿಸುತ್ತೇವೆ. ಆದರೆ ಬದಲಿ ಐಟಂ ಅಥವಾ ಸಂಪೂರ್ಣ ಅರ್ಹ ಮರುಪಾವತಿಯೊಂದಿಗೆ ನಾವು ಅದನ್ನು ಗ್ರಾಹಕರಿಗೆ ಒಪ್ಪಿಸುತ್ತೇವೆ. ಆದರೆ cರು ಹೀಗೆ ವಿಚಿತ್ರವಾದ ಕಾರಣಗಳನ್ನು ನೀಡಿ ಹಣವನ್ನು ಮರುಪಾವತಿ ಮಾಡಲು ದೂರು ನೀಡುವುದು ಇತ್ತೀಚೆಗೆ ಹೆಚ್ಚಾಗಿದೆ. ಐಸ್‌ಕ್ರೀಂ ತಣ್ಣಗಿದೆ ಹಣ ವಾಪಸ್‌ ಕೊಡಿ ಎಂದು ಹೇಳಿದ್ದು,  ಆಶ್ಚರ್ಯವಾಗಿದೆ ಎಂದಿದ್ದಾರೆ.

  • ಹಸುವಿನ ಹೊಟ್ಟೆಯಲ್ಲಿ ಸಿಕ್ತು ಐಸ್‍ಕ್ರೀಂ ಕಪ್, ಸ್ಪೂನ್ ಸೇರಿ 77 ಕೆ.ಜಿ ಪ್ಲಾಸ್ಟಿಕ್ ತ್ಯಾಜ್ಯ!

    ಹಸುವಿನ ಹೊಟ್ಟೆಯಲ್ಲಿ ಸಿಕ್ತು ಐಸ್‍ಕ್ರೀಂ ಕಪ್, ಸ್ಪೂನ್ ಸೇರಿ 77 ಕೆ.ಜಿ ಪ್ಲಾಸ್ಟಿಕ್ ತ್ಯಾಜ್ಯ!

    ಗಾಂಧಿನಗರ: ದೇಶಾದ್ಯಂತ ಪ್ಲಾಸ್ಟಿಕ್ ಬ್ಯಾನ್ ಮಾಡಿದ್ದರೂ ಅದರ ಬಳಕೆ ಮಾತ್ರ ಇನ್ನೂ ನಿಂತಿಲ್ಲ.

    ಭೂಮಿಯಲ್ಲಿ ಕರಗದೆ ಅನೇಕ ಸಮಸ್ಯೆಗಳಿಗೆ ಕಾರಣವಾಗುವ ಈ ಪ್ಲಾಸ್ಟಿಕ್ ಅನ್ನು ಜನ ಈಗಲೂ ಬಳಕೆ ಮಾಡುತ್ತಾರೆ. ಇದು ಪ್ರಾಣಿಗಳ ಮೇಲೆ ತೀವ್ರ ರೀತಿಯ ಪರಿಣಾಮ ಬೀರುತ್ತದೆ. ಇದಕ್ಕೆ ಈ ಹಸುವೇ ಸ್ಪಷ್ಟ ನಿದರ್ಶನ.

    ಹೌದು. ಹಸುವೊಂದರ ಹೊಟ್ಟೆಯಿಂದ ಶಶ್ಸತ್ರಚಿಕಿತ್ಸೆಯ ಮೂಲಕ ಬರೋಬ್ಬರಿ 77 ಕೆ.ಜಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಹೊರಕ್ಕೆ ತೆಗೆಯಲಾಗಿದೆ. ಐಸ್ ಕ್ರೀಂ ಕಪ್, ಚಮಚಗಳು ಮತ್ತು ಪ್ಲಾಸ್ಟಿಕ್ ಚೀಲಗಳು ಹಸುವಿನ ಹೊಟ್ಟೆಯೊಳಗೆ ಸಿಕ್ಕಿದೆ. ಇದನ್ನು ಗುಜರಾತ್ ನ ಆನಂದ್ ಜಿಲ್ಲೆಯ ಪಶುವೈದ್ಯರು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಮೈಸೂರಿನ ಗೀತಾ ಗೋಪಿನಾಥ್‌ಗೆ ಐಎಂಎಫ್‌ನ ಉನ್ನತ ಹುದ್ದೆಗೆ ಬಡ್ತಿ

    ರಸ್ತೆ ಬದಿ ಅಸ್ವಸ್ಥಗೊಂಡಿದ್ದ ಹಸುವನ್ನು ಆನಂದ್‍ನಲ್ಲಿರುವ ಪಶು ಆಸ್ಪತ್ರೆಗೆ ಸ್ಥಳೀಯ ಸರ್ಕಾರೇತರ ಸಂಸ್ಥೆಯೊಂದು ಕರೆದೊಯ್ದಿತ್ತು. ಈ ವೇಳೆ ಹಸುವನ್ನು ಪರೀಕ್ಷಿಸಿದ ವೈದ್ಯರು, ಹಸು ಪ್ಲಾಸ್ಟಿಕ್ ತ್ಯಾಜ್ಯ ತಿಂದಿರುವುದಾಗಿ ಹೇಳಿದ್ದಾರೆ. ಅಲ್ಲದೆ ಈ ಕೂಡಲೇ ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆಯುವಂತೆಯೂ ತಿಳಿಸಿದ್ದಾರೆ. ಅಂತೆಯೇ ಬರೋಬ್ಬರಿ ಎರಡೂವರೆ ಗಂಟೆಗಳ ಸುದೀರ್ಘ ಶಸ್ತ್ರಚಿಕಿತ್ಸೆಯ ಬಳಿಕ ಪ್ಲಾಸ್ಟಿಕ್ ತ್ಯಾಜ್ಯವನ್ನು ಹೊರತೆಗೆಯಲಾಗಿದೆ.

  • ಫ್ರೀಯಾಗಿ ಐಸ್ ಕ್ರೀಂ ಕೊಡದಕ್ಕೆ ಗಾಡಿ ತೊಗೊಂಡು ಹೋದ ಪೊಲೀಸರು

    ಫ್ರೀಯಾಗಿ ಐಸ್ ಕ್ರೀಂ ಕೊಡದಕ್ಕೆ ಗಾಡಿ ತೊಗೊಂಡು ಹೋದ ಪೊಲೀಸರು

    – ವಿಡಿಯೋ ವೈರಲ್ ಬಳಿಕ ಎಸ್‍ಪಿ ಸ್ಪಷ್ಟನೆ

    ಲಕ್ನೋ/ಕಾನ್ಪುರ: ಉಚಿತವಾಗಿ ಐಸ್ ಕ್ರೀಂ ನೀಡದಕ್ಕೆ ಕೋಪಗೊಂಡ ಪೊಲೀಸರಿಬ್ಬರು ಗಾಡಿಯನ್ನು ತೆಗೆದುಕೊಂಡು ಹೋದ ಘಟನೆ ಉತ್ತರ ಪ್ರದೇಶದ ಬರ್ರಾದಲ್ಲಿ ನಡೆದಿದೆ. ಕರ್ತವ್ಯ ನಿರತ ಪೊಲೀಸ್ ಗಾಡಿಯನ್ನು ತೆಗೆದುಕೊಂಡು ಹೋಗುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ವಿಡಿಯೋದಲ್ಲಿ ಏನಿದೆ?: ಓರ್ವ ಪೊಲೀಸ್ ಐಸ್ ಕ್ರೀಂ ಗಾಡಿಯನ್ನು ತೆಗೆದುಕೊಂಡು ಹೋಗ್ತಿದ್ದರೆ, ಮತ್ತೋರ್ವ ಪೊಲೀಸ್ ಬೈಕಿನಲ್ಲಿ ಹೋಗ್ತಿರೋದನ್ನ ಕಾಣಬಹುದು. ಐಸ್ ಕ್ರೀಂ ಗಾಡಿಯ ಹಿಂದೆ ಅದರ ಮಾಲೀಕ ಓಡುತ್ತಿದ್ದಾನೆ.

    ಈ ವಿಡಿಯೋ ವೈರಲ್ ಬಳಿಕ ಸ್ಪಷ್ಟನೆ ನೀಡಿರುವ ಎಸ್.ಪಿ. ಅಪರ್ಣಾ ಗುಪ್ತಾ, ನೈಟ್ ಕರ್ಫ್ಯೂ ಜಾರಿಯಲ್ಲಿದ್ದರೂ ಐಸ್ ಕ್ರೀಂ ಮಾರಾಲಾಗುತ್ತಿತ್ತು. ಹಾಗಾಗಿ ಗಸ್ತಿನಲ್ಲಿದ್ದ ಪೊಲೀಸರು ಗಾಡಿಯನ್ನು ತೆಗೆದುಕೊಂಡು ಹೋಗುವಂತೆ ನಾಟಕ ಮಾಡಿದ್ದಾರೆ. ಕೊನೆಗೆ ಐಸ್ ಕ್ರೀಂ ಮಾರುವ ವ್ಯಕ್ತಿಗೆ ಬುದ್ಧಿ ಹೇಳಿ ಕಳುಹಿಸಿದ್ದಾರೆ ಎಂದು ತಿಳಿಸಿದ್ದಾರೆ.

  • ಜೀವ ತೆಗೆಯುತ್ತವೆ ವೆರೈಟಿ ಐಸ್ ಕ್ರೀಂ

    ಜೀವ ತೆಗೆಯುತ್ತವೆ ವೆರೈಟಿ ಐಸ್ ಕ್ರೀಂ

    ಬೆಂಗಳೂರು: ಬಾಯಿ ರುಚಿ ತಣಿಸೋ ಈ ಐಸ್ ಕ್ರೀಂ ಜೀವ ತೆಗೆಯುತ್ತದೆ. ಕಲರ್ ಫುಲ್ ಕ್ರೀಂ ವೆರೈಟಿ ಚೆರ್ರಿಗಳನ್ನು ಹಾಕಿರುವ ಐಸ್ ಕ್ರೀಂ ಗಳನ್ನು ಬಾಯಿ ಚಪ್ಪರಿಸಿ ತಿನ್ನುವ ಮುನ್ನ ಈ ಸ್ಟೋರಿ ಓದಿ.

    ಸಿಲಿಕಾನ್ ಸಿಟಿಯಲ್ಲಿ ಐಸ್ ಕ್ರೀಂಪಾರ್ಲರಿಗೆ ಹೋಗಿ ತಿನ್ನುವ ಟ್ರೆಂಡ್ ನಷ್ಟೇ ಜೋರಾಗಿ ಗಾಡಿಯಲ್ಲಿ ಬರುವ ಐಸ್ ಕ್ರೀಂ ತಿನ್ನುವ ಟ್ರೆಂಡ್ ಸಹ ಪ್ರಾರಂಭವಾಗಿದೆ. ಆದರೆ ಇದು ಅಪಾಯಕಾರಿ ಎಂಬುದು ಪಬ್ಲಿಕ್ ಟಿವಿ ಸ್ಟಿಂಗ್ ಆಪರೇಷನ್‍ನಲ್ಲಿ ಬಹಿರಂಗವಾಗಿದೆ.

    ಶಾಲಾ ಕಾಲೇಜು, ಪಾರ್ಕ್, ಶಾಪಿಂಗ್ ಮಾಲ್ ಹಾಗೂ ಸೆಂಟರ್ ಗಳ ಮುಂದೆ ಹೀಗೆ ಎಲ್ಲ ಕಡೆ ಐಸ್ ಕ್ರೀಂ ಗಾಡಿಯವರು ಕಾಣಸಿಗುತ್ತಾರೆ. ಕಂಡ ತಕ್ಷಣ ವಿವಿಧ ಬಗೆಯ ಐಸ್ ಕ್ರೀಂಗಳನ್ನು ತಿನ್ನಲು ಬಯಸುತ್ತೇವೆ. ಆದರೆ ಟೇಸ್ಟಿ ಎಂದು ತಿನ್ನುವ ಐಸ್ ಕ್ರೀಂ ಗಾಡಿಗಳತ್ತ ಅಥವಾ ಗಾಡಿಗಳಲ್ಲಿನ ಕ್ರೀಂ, ಅದಕ್ಕೆ ಬಳಸುವ ನೀರು, ಪಾಚಿ ಕಟ್ಟಿರುವ ಬಾಕ್ಸ್ ನೋಡಿದರೆ ಖಂಡಿತಾ ಐಸ್ ಕ್ರೀಂ ತಿನ್ನುವ ಗೋಜಿಗೆ ಹೋಗಲ್ಲ.

    ಗಲೀಜು, ಪಾಚಿ ತುಂಬಿರುವ ನೀರು, ತೊಳೆಯದೇ ವರ್ಷ ಆಯಿತೇನೋ ಅನ್ನುವಷ್ಟೂ ಹಳೆಯ, ತುಕ್ಕು ಹಿಡಿದಿರುವ, ಅಲ್ಲಲ್ಲಿ ಕಪ್ಪು ಕಪ್ಪಾಗಿ ಗಲೀಜು ತುಂಬಿರುವ ಐಸ್ ಕ್ರೀಂ ಪೆಟ್ಟಿಗೆಯನ್ನು ಕಂಡರೆ ಗಾಬರಿಯಾಗುತ್ತದೆ. ಐಸ್ ಕ್ರೀಂ ನೋಡಿದರೇನೆ ವಾಕರಿಕೆ ಬರುವಂತೆ ಅನ್ನಿಸುತ್ತದೆ. ಈ ಐಸ್ ಕ್ರೀಂಗೆ ಬಳಸುವ ನೀರಿನಿಂದಲೇ ನಿಮಗೆ ರೋಗ ಬರುತ್ತದೆ. ಐಸ್ ಕ್ರೀಂನ್ನು ಕೋನ್‍ಗೆ ಹಾಕುವ ಚಮಚದೊಳಗೆ ಕೂಡ ಗಲೀಜು ತುಂಬಿರುತ್ತದೆ.

    ಬೆಂಗಳೂರಿನ ಎಂಜಿ ರಸ್ತೆ, ಜಯನಗರದ ಸೇರಿದಂತೆ ವಿವಿಧ ಪ್ರತಿಷ್ಠಿತ ಪ್ರದೇಶಗಳಲ್ಲಿ ಈ ದೃಶ್ಯಗಳು ಕಂಡುಬಂದಿವೆ. ಇಂತಹ ಏರಿಯಾದಲ್ಲೇ ಈ ರೀತಿಯಾದರೆ ಇನ್ನು ಗಲ್ಲಿಗಳಲ್ಲಿ ಇನ್ಯಾವ ರೀತಿಯ ಐಸ್ ಕ್ರೀಂ ಸಿಗುತ್ತವೆ ಎಂಬುದನ್ನು ನೀವೇ ಊಹಿಸಿಕೊಳ್ಳಿ.

    ಈ ಐಸ್ ಕ್ರೀಂ ತಿಂದರೆ ನಿಮ್ಮ ಹೊಟ್ಟೆ ಕೆಡುವುದು, ಆರೋಗ್ಯ ಹದಗೆಡುವುದು ಮಾತ್ರವಲ್ಲ, ಕ್ರೀಂಗಳಿಗೆ ಕಲರ್ ಬರಲು ವಿವಿಧ ರೀತಿಯ ಕೆಮಿಕಲ್ ಸುರಿಯುತ್ತಾರೆ. ಹೀಗಾಗಿ ನೀವು ಇಷ್ಟಪಟ್ಟು ತಿನ್ನುವ ಐಸ್ ಕ್ರೀಂ ನಿಮ್ಮ ಆರೋಗ್ಯ ಕೆಡಿಸಬಹುದು. ಕಂಡ ಕಂಡಲ್ಲಿ ಐಸ್ ಕ್ರೀಂ ತಿನ್ನುವ ಮುನ್ನ ಎಚ್ಚರ ವಹಿಸಿ. ಇಲ್ಲದಿದ್ದಲ್ಲಿ ನಿಮ್ಮ ಆರೋಗ್ಯ ಹದಗೆಡುವುದು ಪಕ್ಕಾ.

  • ಮ್ಯಾಂಗೋ ಐಸ್ ಕ್ರೀಂ ಮಾಡುವ ವಿಧಾನ

    ಮ್ಯಾಂಗೋ ಐಸ್ ಕ್ರೀಂ ಮಾಡುವ ವಿಧಾನ

    ಐಸ್ ಕ್ರಿಂ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅದರಲ್ಲೂ ಸೀಸನ್ ನಲ್ಲಿ ಬರುವ ಮ್ಯಾಂಗೋ ಐಸ್ ಕ್ರೀಂ ಅಂತೂ ಎಲ್ಲರಿಗೂ ಅಚ್ಚುಮೆಚ್ಚು. ಹೀಗಾಗಿ ಮ್ಯಾಂಗೋ ಐಸ್ ಕ್ರೀಂ ಮಾಡುವ ಸರಳ ಹಾಗೂ ಸುಲಭ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು
    1. ಮಾವಿನ ಹಣ್ಣು -2-3
    2. ಸಕ್ಕರೆ – ಚಮಚ ( ನಿಮ್ಮ ರುಚಿಗೆ ತಕ್ಕಷ್ಟು)
    3. ಫ್ರೆಶ್ ಕ್ರೀಮ್ – 100 ಗ್ರಾಂ

    ಮಾಡುವ ವಿಧಾನ
    * ಒಂದು ಮಿಕ್ಸರ್ ಜಾರ್ ಗೆ ಸಿಪ್ಪೆ ತೆಗೆದ ಮಾವಿನಹಣ್ಣಿನ ಪಲ್ಫ್ ಹಾಗೂ ಸಕ್ಕರೆ ಸೇರಿಸಿ ರುಬ್ಬಿಕೊಳ್ಳಿ.
    * ಈಗ ಒಂದು ಮಿಕ್ಸಿಂಗ್ ಬೌಲ್ ಗೆ ಫ್ರಿಜ್ಡ್ ನಲ್ಲಿಟ್ಟಿದ್ದ ಫ್ರೆಶ್ ಕ್ರೀಮ್ ಅನ್ನು ಹಾಕಿ ಚೆನ್ನಾಗಿ ಬ್ಲೆಂಡ್ ಮಾಡಿ.
    * ಬ್ಲೆಂಡ್ ಮಾಡಿದ ಫ್ರೆಶ್ ಕ್ರೀಮ್ ಗೆ ರುಬ್ಬಿದ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಬ್ಲೆಂಡ್ ಮಾಡಿ.
    * ಈಗ ಒಂದು ಫ್ರೀಜರ್ ಬೌಲ್ ಗೆ ಮಿಶ್ರಣವನ್ನು ಹಾಕಿ 6-7 ಗಂಟೆ ಕಾಲ ಫ್ರೀಜ್ ಮಾಡಿ.
    * ಬಳಿಕ ಸರ್ವ್ ಮಾಡಿ. ಎಂಜಾಯ್ ಮಾಡಿ
    * ಜೊತೆಗೆ ಐಸ್ ಕ್ರೀಂ ಗೆ ಟುಟಿ, ಫ್ರೂಟಿ, ಸಣ್ಣಗೆ ಕಟ್ ಮಾಡಿದ ಡ್ರೈ ಫ್ರೂಟ್ಸ್, ಕ್ಯಾರಮಲ್ ಪೀಸಸ್ ಸೇರಿಸಬಹುದು.

  • ಐಸ್ ಕ್ರೀಂ ಪ್ರಿಯರೆ ಎಚ್ಚರ: ಪ್ರತಿಷ್ಠಿತ ಕಂಪೆನಿಯ ಐಸ್ ಕ್ರೀಂನಲ್ಲಿ ಹುಳುಗಳು ಪ್ರತ್ಯಕ್ಷ!

    ಐಸ್ ಕ್ರೀಂ ಪ್ರಿಯರೆ ಎಚ್ಚರ: ಪ್ರತಿಷ್ಠಿತ ಕಂಪೆನಿಯ ಐಸ್ ಕ್ರೀಂನಲ್ಲಿ ಹುಳುಗಳು ಪ್ರತ್ಯಕ್ಷ!

    ಬೆಂಗಳೂರು: ಪ್ರತಿಷ್ಠಿತ ಕಂಪನಿಯೊಂದರ ಐಸ್ ಕ್ರೀಂನಲ್ಲಿ ಹುಳುಗಳು ಕಾಣಿಸಿಕೊಂಡಿವೆ. ಈ ಘಟನೆ ಐಸ್ ಕ್ರೀಂ ಪ್ರಿಯರಿಗೆ ಎಚ್ಚರ ನೀಡಿದ್ದು, ಹುಳು ಇದೇ ಇಲ್ಲವೋ ಅಂತಾ ನೋಡಿ ತಿನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಶನಿವಾರ ನೆಲಮಂಗಲ ತಾಲೂಕಿನ ಸೋಪುರ ಕೈಗಾರಿಕಾ ಪ್ರದೇಶದಲ್ಲಿ ಆಟೋದಲ್ಲಿ ಮಾರುತ್ತಿದ್ದ ಐಸ್ ಕ್ರೀಂನಲ್ಲಿ ಹುಳುಗಳು ಇರುವುದನ್ನು ಕಂಡು, ಐಸ್ ಕ್ರೀಂ ಪ್ರಿಯರು ಬೆಚ್ಚಿ ಬಿದ್ದಿದ್ದಾರೆ.

    ಆಟೋದಲ್ಲಿ ಐಸ್ ಕ್ರೀಂ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದಾಗ, ಸ್ಥಳೀಯ ನಿವಾಸಿ ಮಂಗಳ ಎಂಬವರು, ತಮ್ಮ ಮಗಳಿಗಾಗಿ ಐಸ್‍ಕ್ರೀಂ ಖರೀದಿಸಿದ್ದರು. ನಂತರ ಐಸ್ ಕ್ರೀಂ ಮುಚ್ಚಳ ತೆರೆದು ನೋಡಿದಾಗ ಹುಳುಗಳಿರುವುದು ಬೆಳಕಿಗೆ ಬಂದಿದೆ. ಕೂಡಲೇ ಸ್ಥಳೀಯರು ಆಟೋದಲ್ಲಿ ಐಸ್‍ಕ್ರೀಂ ಮಾರಾಟ ಮಾಡುತ್ತಿದ್ದವರನ್ನು ತಡೆದು, ತರಾಟೆಗೆ ತೆಗೆದುಕೊಂಡಿದ್ದಾರೆ.

    ತುಮಕೂರು ಮೂಲದ ಕಂಪೆನಿಯ ಐಸ್‍ಕ್ರೀಂ ಇದಾಗಿದ್ದು, ಪ್ರತಿಷ್ಠಿತ ಕಂಪೆನಿಯ ಐಸ್‍ಕ್ರೀಂನಲ್ಲಿಯೇ ಹುಳುಗಳಿರುವುದು ಸ್ಥಳೀಯರಲ್ಲಿ ಬೇಸರ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.

  • ಯುಪಿ ಮೂಲದ ವ್ಯಕ್ತಿ ಸಾವು- ಸ್ವಗ್ರಾಮಕ್ಕೆ ಶವ ರವಾನಿಸಲು 73 ಸಾವಿರ ರೂ. ಸಂಗ್ರಹಿಸಿ ನೆರವು ನೀಡಿದ ದಾವಣಗೆರೆಯ ಮುಸ್ಲಿಮರು

    ಯುಪಿ ಮೂಲದ ವ್ಯಕ್ತಿ ಸಾವು- ಸ್ವಗ್ರಾಮಕ್ಕೆ ಶವ ರವಾನಿಸಲು 73 ಸಾವಿರ ರೂ. ಸಂಗ್ರಹಿಸಿ ನೆರವು ನೀಡಿದ ದಾವಣಗೆರೆಯ ಮುಸ್ಲಿಮರು

    ದಾವಣಗೆರೆ: ಐಸ್ ಕ್ರೀಂ ಮಾಡುತ್ತಾ ದಾವಣಗೆರೆಯಲ್ಲಿ ನೆಲೆಸಿದ್ದ ಉತ್ತರ ಪ್ರದೇಶದ ಮೂಲದ ಶಕ್ತಿ ರಾಮ್ ಎಂಬ ವ್ಯಕ್ತಿ ಮೃತಪಟ್ಟಿದ್ದು, ಮೃತನ ಶವವನ್ನು ಸ್ವಗ್ರಾಮಕ್ಕೆ ರವಾನಿಸಲು ಅವರ ಕುಟುಂಬಕ್ಕೆ ಮಸ್ಲಿಮರು ಸಹಾಯ ಹಸ್ತ ಚಾಚಿ ಮಾನವೀಯತೆ ಮೆರೆದಿದ್ದಾರೆ.

    ಇಲ್ಲಿನ ಬಾಷಾ ನಗರದಲ್ಲಿ ಕಳೆದ ಹಲವು ವರ್ಷಗಳಿಂದ ಐಸ್ ಕ್ರೀಂ ಮಾಡಿಕೊಂಡು ಜೀವನ ನಡೆಸುತ್ತಿದ್ದ ಶಕ್ತಿರಾಮ್ ಸೋಮವಾರ ತಡರಾತ್ರಿ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಆದ್ರೆ ಸ್ವಗ್ರಾಮಕ್ಕೆ ತೆರಳಲು ಹಣವಿಲ್ಲದೆ ಕುಟುಂಬಸ್ಥರು ಪರದಾಡುತ್ತಿದ್ದರು. ಇದನ್ನು ನೋಡಿದ ಅಲ್ಲಿನ ಸ್ಥಳೀಯ ಮುಸ್ಲಿಮರು ಹಣ ಹೊಂದಿಸಿ ಶವವನ್ನು ಉತ್ತರ ಪ್ರದೇಶಕ್ಕೆ ರವಾನಿಸುವುದರ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ಸ್ಥಳೀಯರು ಶಕ್ತಿರಾಮ್ ಕುಟುಂಬಕ್ಕೆ 73 ಸಾವಿರ ರೂಪಾಯಿ ಸಂಗ್ರಹಿಸಿದ್ದು, ಮೃತನ ಸ್ವಗೃಹ ಉತ್ತರ ಪ್ರದೇಶದ ಹರದೋಯಿ ಜಿಲ್ಲೆ ರಸೂಲ್ ಬ್ರಹ್ಮ ಗ್ರಾಮಕ್ಕೆ ಮೃತ ದೇಹವನ್ನು ಸಾಗಿಸಲು ಆಂಬುಲೆನ್ಸ್ ವೆಚ್ಚ ಹೊಂದಿಸಿ ಸಹಾಯ ಮಾಡಿದ್ದಾರೆ.

  • ಐಸ್ ಕ್ರೀಂ ಕೊಡಿಸೋ ನೆಪದಲ್ಲಿ 5ರ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಕತ್ತು ಕೊಯ್ದ!

    ಐಸ್ ಕ್ರೀಂ ಕೊಡಿಸೋ ನೆಪದಲ್ಲಿ 5ರ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಕತ್ತು ಕೊಯ್ದ!

    ಹುಬ್ಬಳ್ಳಿ: ವ್ಯಕ್ತಿಯೊಬ್ಬ ಐಸಕ್ರೀಮ್ ಕೊಡಿಸುವ ನೆಪದಲ್ಲಿ ಐದು ವರುಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿ ಕುತ್ತಿಗೆಯನ್ನು ಚಾಕುವಿನಿಂದ ಕೊಯ್ದ ಅಮಾನವೀಯ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

    ಹಳೇ ಹುಬ್ಬಳ್ಳಿಯ ಆನಂದನಗರದ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. 56 ವರ್ಷದ ನಾಗಪ್ಪ ಪೂಜಾರ್ ಮನೆಯ ಮುಂದೆ ನಿಂತಿದ್ದ ಬಾಲಕಿಯನ್ನು ನೋಡಿ ಅವಳಿಗೆ ಐಸ್ ಕ್ರೀಮ್ ಕೋಡಿಸುವುದಾಗಿ ಹೇಳಿದ್ದಾನೆ. ಇದನ್ನು ನಂಬಿದ ಬಾಲಕಿ ಅವನೊಂದಿಗೆ ಹೋಗಿದ್ದಾಳೆ. ಬಳಿಕ ಮಗುವನ್ನು ಗೋಕುಲ ರಸ್ತೆಯ ಬಂಜಾರ ಕಾಲೋನಿಯ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋದ ನಾಗಪ್ಪ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.

    ಬಲಾತ್ಕಾರ ಯತ್ನದ ನಂತರ ಬಾಲಕಿಯ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ. ನಂತರ ಬಾಲಕಿಯನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾನೆ. ರಕ್ತದ ಮಡುವಿನಲ್ಲಿ ಅಳುತ್ತಾ ಬಿದ್ದಿರುವುದನ್ನು ನೋಡಿದ ಸಾರ್ವಜನಿಕರು ಕೂಡಲೇ ಬಾಲಕಿಯನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಇತ್ತ ಮಗು ಕಾಣೆಯಾದ ಬಗ್ಗೆ ಪೋಷಕರಿಂದ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಐಸ್ ಕ್ರೀಮ್ ಕೊಡಿಸುವುದಾಗಿ ಅಮಾಯಕ ಬಾಲಕಿಗೆ ಆಮಿಷ ಒಡ್ಡಿ ಹೀನ ಕೃತ್ಯವೆಸಗಿದ ನಾಗಪ್ಪ ಪೂಜಾರ್‍ನನ್ನು ಹಳೇ ಹುಬ್ಬಳ್ಳಿಯ ಪೊಲೀಸರು ಬಂಧಿಸಿದ್ದಾರೆ.