Tag: ಐಸಿಸ್

  • ಹುಬ್ಬಳ್ಳಿ, ಉತ್ತರ ಕನ್ನಡ, ಬೆಳಗಾವಿ ಅರಣ್ಯದಲ್ಲಿ ತರಬೇತಿ: ಉಗ್ರರಿಂದ ಸ್ಫೋಟಕ ಮಾಹಿತಿ

    ಹುಬ್ಬಳ್ಳಿ, ಉತ್ತರ ಕನ್ನಡ, ಬೆಳಗಾವಿ ಅರಣ್ಯದಲ್ಲಿ ತರಬೇತಿ: ಉಗ್ರರಿಂದ ಸ್ಫೋಟಕ ಮಾಹಿತಿ

    ನವದೆಹಲಿ/ ಧಾರವಾಡ: ಅರೆ ಮಲೆನಾಡು, ಒಂದೆಡೆ ಬಯಲುಸೀಮೆ ಮತ್ತೊಂದೆಡೆ ದಟ್ಟವಾದ ಪಶ್ಚಿಮ ಘಟ್ಟಗಳನ್ನು ಹೊಂದಿರುವ ಧಾರವಾಡ (Dharawada) ಈಗ ಉಗ್ರರ ಅಡಗುತಾಣವಾಗುತ್ತಿದೆಯಾ ಎಂಬ ಗಂಭೀರ ಪ್ರಶ್ನೆ ಎದ್ದಿದೆ.

    ದೆಹಲಿ ವಿಶೇಷ ಪೊಲೀಸ್ ದಳ ನಡೆಸಿದ ಮಹತ್ವದ ಕಾರ್ಯಾಚರಣೆ ನಡೆಸಿ ಶಂಕಿತ ಉಗ್ರರಾದ ಶಹನವಾಜ್, ಮೊಹಮ್ಮದ್ ರಿಜ್ವಾನ್ ಮತ್ತು ಮೊಹಮ್ಮದ್ ಅರ್ಷದ್ ವಾರ್ಸಿಯನ್ನು ಬಂಧಿಸಿದೆ. ಈ ಮೂವರ ಪೈಕಿ ಶಹನವಾಜ್ ಧಾರವಾಡ ಬೆಳಗಾವಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ‌ ಹಾದು ಹೋಗುವ ಪಶ್ಚಿಮ ಘಟ್ಟದ ಕಾಡಿನಲ್ಲಿ ತರಬೇತಿ ಪಡೆದಿರುವ ಬಗ್ಗೆ ಸ್ಪೋಟಕ ಹೇಳಿಕೆ ಕೊಟ್ಟಿದ್ದಾನೆ.

    ಬಂಧನಕ್ಕೆ ಒಳಗಾಗಿದ್ದ ಶಹನವಾಜ್ (Shahnawaz) ಸುಳಿವು ನೀಡಿದವರಿಗೆ 3 ಲಕ್ಷ ರೂ. ಬಹುಮಾನ ಘೋಷಣೆಯಾಗಿತ್ತು. ಈ ಸಂಬಂಧ ಹುಬ್ಬಳ್ಳಿ, ಧಾರವಾಡ ಕಮೀಷನರೇಟ್ ವ್ಯಾಪ್ತಿಯ ಪೊಲೀಸರು ಹಾಗೂ ಜಿಲ್ಲಾ ಪೊಲೀಸರು ಈಗ ನಿರಂತರವಾಗಿ ದೆಹಲಿ ಪೊಲೀಸರ ಸಂಪರ್ಕದಲ್ಲಿದ್ದಾರೆ. ಇದನ್ನೂ ಓದಿ: ಡಿಕೆಶಿ, ಶಾಮನೂರ್‌ಗೆ ಹೆದರಬೇಡಿ- ಸಿದ್ದರಾಮಯ್ಯ ಪರ ಯತ್ನಾಳ್ ಬ್ಯಾಟಿಂಗ್

    ಹುಬ್ಬಳ್ಳಿ, ಧಾರವಾಡದ ಯಾವ ಅರಣ್ಯ ಪ್ರದೇಶದಲ್ಲಿ ಉಗ್ರರ ಅಡಗುತಾಣವಿದೆ ಎಂಬ ಮಾಹಿತಿ ಕಲೆ ಹಾಕುತ್ತಿದ್ದಾರೆ. ಆದರೆ ಇದುವರೆಗೂ ಉಗ್ರರು ಧಾರವಾಡ ಭಾಗದ ಯಾವ ಅರಣ್ಯದಲ್ಲಿ ಅಡಗಿದ್ದಾರೆ ಅಥವಾ ತರಬೇತಿ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿಲ್ಲ.

    ಹುಬ್ಬಳ್ಳಿ, ಧಾರವಾಡ ಪೊಲೀಸರು ಈ ಬಗ್ಗೆ ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ. ಧಾರವಾಡ ದಾಟುತ್ತಿದ್ದಂತೆ ಅನೇಕ ಕಾಡುಗಳಿವೆ. ಶಹನವಾಜ್ ಹೇಳಿದ ಹೇಳಿಕೆಯ ಜಾಡು ಹಿಡಿದು ಎಲ್ಲ ಆಯಾಮಗಳಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಈ‌ ಹಿಂದೆ 2014-15 ರಲ್ಲಿ ಧಾರವಾಡ ಆರೋಗ್ಯನಗರದಲ್ಲಿ ಮೂವರು ಶಂಕಿತ ಉಗ್ರರು ಬಂದು ಬಾಡಿಗೆ ಮನೆ ಮಾಡಿ ಇದ್ದರು. ಇವರ ಬೆನ್ನತ್ತಿ ಮುಂಬೈ ಎಟಿಎಸ್‌ನವರು ಬಂದು ಹೋಗಿದ್ದರು.

    ಪಾಕ್‌ನಲ್ಲಿ ಹ್ಯಾಂಡ್ಲರ್‌: ಬಂಧಿತರಾಗಿರುವ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಶಹನವಾಜ್ ಸೇರಿದಂತೆ ಮೂವರು ಅಯೋಧ್ಯೆಯಲ್ಲಿ ಲೋಕಾರ್ಪಣೆಗೆ ಸಜ್ಜಾಗುತ್ತಿರುವ ರಾಮಮಂದಿರದ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದರು. ಈ ಶಂಕಿತರ ಹ್ಯಾಂಡ್ಲರ್ ಪಾಕಿಸ್ತಾನದಲ್ಲಿರುವ ಭಾರತೀಯ ಮೂಲದ ಭಯೋತ್ಪಾದಕ ಫರ್ಹಾತುಲ್ಲಾ ಗೋರಿ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಭಾರತದಿಂದ ಪಾಕಿಸ್ತಾನಕ್ಕೆ ಪರಾರಿಯಾಗಿರುವ ಫರ್ಹಾತುಲ್ಲಾ ಗೋರಿ ಭಾರತದಲ್ಲಿ ಐಸಿಸ್ ಹೆಸರಿನಲ್ಲಿ ಯುವಕರನ್ನು ತಲೆಕೆಡಿಸಿ ಆನ್‌ಲೈನ್‌ ಜಿಹಾದ್‌ಗೆ ತಯಾರು ಮಾಡುತ್ತಿರುವ ವಿಚಾರ ಈಗ ಬೆಳಕಿಗೆ ಬಂದಿದೆ.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೋಸ್ಟ್ ವಾಂಟೆಡ್ ಲಿಸ್ಟ್‌ನಲ್ಲಿದ್ದ ಶಂಕಿತ ಐಸಿಸ್ ಉಗ್ರನ ಬಂಧನ

    ಮೋಸ್ಟ್ ವಾಂಟೆಡ್ ಲಿಸ್ಟ್‌ನಲ್ಲಿದ್ದ ಶಂಕಿತ ಐಸಿಸ್ ಉಗ್ರನ ಬಂಧನ

    ನವದೆಹಲಿ: ರಾಷ್ಟ್ರೀಯ ತನಿಖಾ ಸಂಸ್ಥೆಯ (NIA) ಮೋಸ್ಟ್ ವಾಂಟೆಡ್ ಲಿಸ್ಟ್‌ನಲ್ಲಿರುವ ಶಂಕಿತ ಐಸಿಸ್ (ISIS) ಉಗ್ರನನ್ನು (Suspected Terrorist) ಭಯೋತ್ಪಾದನಾ ನಿಗ್ರಹ ದಳ ಕಾರ್ಯಾಚರಣೆ ನಡೆಸಿ ದೆಹಲಿಯಲ್ಲಿ (New Delhi) ಬಂಧಿಸಿದೆ ಎಂದು ವರದಿಗಳು ತಿಳಿಸಿವೆ.

    ಶಹನವಾಜ್ ಅಲಿಯಾಸ್ ಶಫಿ ಉಜ್ಜಮಾ ಸೇರಿ ಮತ್ತಿಬ್ಬರು ಶಂಕಿತ ಭಯೋತ್ಪಾದಕರನ್ನು ದೆಹಲಿ ಪೊಲೀಸ್ ವಿಶೇಷ ದಳ ಸೋಮವಾರ ಬಂಧಿಸಿದೆ. ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ಶಹನವಾಜ್ ಪುಣೆ ಮಾಡ್ಯೂಲ್ ಪ್ರಕರಣದ ಆರೋಪಿಯಾಗಿದ್ದ. ಈತ ಮೂಲತಃ ದೆಹಲಿಯವನು ಎಂದು ಮೂಲಗಳು ತಿಳಿಸಿವೆ. ಈ ಹಿಂದೆ ಈತನನ್ನು ಪುಣೆಯಲ್ಲಿ ಬಂದಿಸಲಾಗಿತ್ತು. ಆದರೆ ಈತ ಪೊಲೀಸರಿಂದ ತಪ್ಪಿಸಿಕೊಂಡು ದೆಹಲಿಯ ಅಡಗುತಾಣವೊಂದರಲ್ಲಿ ತಲೆಮರೆಸಿಕೊಂಡಿದ್ದ. ಇದೀಗ ಆತನನ್ನು ಬಂಧಿಸಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಮಣಿಪುರದಲ್ಲಿ ಇಬ್ಬರು ವಿದ್ಯಾರ್ಥಿಗಳ ಭೀಕರ ಹತ್ಯೆ ಪ್ರಕರಣ – ಇಬ್ಬರು ಮಹಿಳೆಯರು ಸೇರಿ ನಾಲ್ವರ ಬಂಧನ

    ದೆಹಲಿಯಲ್ಲಿ ಐಸಿಸ್ ಮಾಡ್ಯೂಲ್‌ನ ಸುಳಿವು ಸಿಕ್ಕಿದ ಬಳಿಕ ಈ ಶಂಕಿತ ಭಯೋತ್ಪಾದಕರನ್ನು ಬಂಧಿಸಲಾಗಿದೆ. ಈ ಶಂಕಿತರು ವಿದೇಶಿ ಮೂಲದ ಹ್ಯಾಂಡ್ಲರ್‌ಗಳ ಸೂಚನೆಗಳ ಆಧಾರದ ಮೇಲೆ ದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸಲು ಮಾಡ್ಯೂಲ್ ಯೋಜಿಸಿದ್ದರು. ಇದನ್ನೂ ಓದಿ: ಗಡಿಯಲ್ಲಿ ಚೀನಾ, ಪಾಕ್ ತಂಟೆಗೆ ಬ್ರೇಕ್ ಹಾಕಲು ಸೇನೆಗೆ `ಪ್ರಚಂಡ’ ಬಲ

    ಈ ಹಿಂದೆ ಶಹನವಾಜ್ ಮತ್ತು ಇತರ ಮೂವರು ಶಂಕಿತ ಉಗ್ರರಾದ ರಿಜ್ವಾನ್ ಅಬ್ದುಲ್ ಹಾಜಿ ಅಲಿ, ಅಬ್ದುಲ್ಲಾ ಫಯಾಜ್ ಶೇಖ್ ಅಲಿಯಾಸ್ ಡಯಾಪರ್ವಾಲ ಮತ್ತು ತಲ್ಹಾ ಲಿಯಾಕತ್ ಖಾನ್ ಬಗ್ಗೆ ಮಾಹಿತಿ ನೀಡಿದವರಿಗೆ ತಲಾ 3 ಲಕ್ಷ ರೂ. ನಗದು ಬಹುಮಾನ ಕೊಡುವುದಾಗಿ ಎನ್‌ಐಎ ಘೋಷಿಸಿತ್ತು. ಇದನ್ನೂ ಓದಿ: ವಿಮಾನದಲ್ಲಿ ಮಗುವಿಗೆ ದಿಢೀರ್ ಉಸಿರಾಟ ಸ್ಥಗಿತ – ಮರುಜೀವ ನೀಡಿದ ವೈದ್ಯ, ಐಎಎಸ್ ಅಧಿಕಾರಿ

    ಈ ನಾಲ್ವರೂ ಮಹಾರಾಷ್ಟ್ರದ ಪುಣೆಯಲ್ಲಿರುವ ಭಯೋತ್ಪಾದಕ ಸಂಘಟನೆ ಐಸಿಸ್‌ನ ಮಾಡ್ಯೂಲ್‌ನೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಪುಣೆಯಲ್ಲಿ ಐಸಿಸ್ ಸಂಬಂಧಿತ ಚಟುವಟಿಕೆಗಳನ್ನು ಉತ್ತೇಜಿಸಿದ ಆರೋಪದ ಮೇಲೆ ಎನ್‌ಐಎ ಕಳೆದ ತಿಂಗಳು ಹಲವರನ್ನು ಬಂಧಿಸಿತ್ತು. ಐಸಿಸ್‌ನ ಪುಣೆ ಘಟಕವು ದೇಶದಲ್ಲಿ ಶಾಂತಿ ಮತ್ತು ಕೋಮು ಸೌಹಾರ್ದತೆಯನ್ನು ಕದಡುವ ಯೋಜನೆಗಳನ್ನು ಹೊಂದಿತ್ತು ಎಂದು ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: 350 ವರ್ಷಗಳ ಬಳಿಕ ಭಾರತಕ್ಕೆ ಮರಳಲಿದೆ ಶಿವಾಜಿ ಮಹಾರಾಜರ `ವ್ಯಾಘ್ರ ನಖ’

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದೆಹಲಿಯಲ್ಲಿ ಶಿವಮೊಗ್ಗ ಮೂಲದ ಐಸಿಸ್ ಉಗ್ರನ ಬಂಧನ

    ದೆಹಲಿಯಲ್ಲಿ ಶಿವಮೊಗ್ಗ ಮೂಲದ ಐಸಿಸ್ ಉಗ್ರನ ಬಂಧನ

    ನವದೆಹಲಿ : ಶಿವಮೊಗ್ಗದಲ್ಲಿ (Shivamogga) ಭಯೋತ್ಪಾದನಾ ಚಟುವಟಿಕೆಗೆ ಸಂಚು, 2020 ರ ಮಂಗಳೂರು ಗೀಚುಬರಹ ಪ್ರಕರಣಗಳಿಗೆ ಸಂಬಂಧಿಸಿದ ಪ್ರಮುಖ ಆರೋಪಿ, ಐಸಿಸ್ ಭಯೋತ್ಪಾದಕ ಅರಾಫತ್ ಅಲಿಯನ್ನು (Arafath Ali)  ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಅಧಿಕಾರಿಗಳು ಬಂಧಿಸಿದ್ದಾರೆ. ಕಿನ್ಯಾದ ನೈರೋಬಿಯಿಂದ ದೆಹಲಿಯ‌ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Indira Gandhi Airport) ಆಗಮಿಸಿದ್ದ ವೇಳೆ ಅಧಿಕಾರಿಗಳು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

    ಶಿವಮೊಗ್ಗ (Shivamogga) ಜಿಲ್ಲೆಯ ನಿವಾಸಿ ಅರಾಫತ್ ಅಲಿ 2020 ರಿಂದ ತಲೆಮರೆಸಿಕೊಂಡಿದ್ದ, ವಿದೇಶಗಳಲ್ಲಿ ಕೂತು ಭಯೋತ್ಪಾದಕ ಚಟುವಟಿಕೆಗಳಿಗೆ ಪ್ರೇರಣೆ ನೀಡುವುದು ಮತ್ತು ಹಣಕಾಸಿನ‌ ನೆರವು ನೀಡುವ ಕೆಲಸ ಮಾಡುತ್ತಿದ್ದ, ಈತನ ಮೇಲೆ ನಿಗಾ ವಹಿಸಿದ್ದ ಎನ್‌ಐಎ ಅಧಿಕಾರಿಗಳು ದೆಹಲಿಗೆ ಆಗಮಿಸುತ್ತಿರುವ ಖಚಿತ ಮಾಹಿತಿ ಮೇಲೆ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಪಾಕ್‌ ಜೊತೆ ಭಾರತೀಯ ಸೇನೆಯ ಮಾಹಿತಿ ಹಂಚಿಕೊಳ್ಳುತ್ತಿದ್ದ ಯೋಧ ಅರೆಸ್ಟ್‌

    ಕೆಲಸಕ್ಕೆಂದು ವಿದೇಶಕ್ಕೆ ತೆರಳಿದ್ದ ಅರಾಫತ್ ಅಲಿ ಐಸಿಸ್ ಸಂಘಟನೆ ಸೇರಿಕೊಂಡಿದ್ದ, ಶಿವಮೊಗ್ಗದಲ್ಲಿ ನಡೆದ ಭಯೋತ್ಪಾದನೆ ಸಂಚು ಪ್ರಕರಣದ ಭಾಗವಾಗಿದ್ದ, ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಪ್ರೆಶರ್ ಕುಕ್ಕರ್ ಐಇಡಿ ಅಳವಡಿಸಲು ಹೋಗುತ್ತಿದ್ದಾಗ ಆಟೋ ರಿಕ್ಷಾದಲ್ಲಿ ಆಕಸ್ಮಿಕವಾಗಿ ಐಇಡಿ ಸ್ಫೋಟಗೊಂಡಿತ್ತು‌ ಇದರ ಪ್ರಮುಖ ಆರೋಪಿ ಮೊಹಮ್ಮದ್ ಶಾರಿಕ್ ಜೊತೆಗೂ ಅರಾಫತ್ ಅಲಿ ಸಂಪರ್ಕದಲ್ಲಿದ್ದ, ಈ ಪಿತೂರಿಯ ಯೋಜನೆಯನ್ನ ಕಾರ್ಯಗತಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ.

    ಇಷ್ಟೇ ಅಲ್ಲದೇ ಎನ್ಐಎ ತನಿಖೆಯ ಪ್ರಕಾರ 2020 ರ ಎರಡು ಮಂಗಳೂರು ಗೀಚುಬರಹ ಪ್ರಕರಣಗಳಿಗೆ ಅರಾಫತ್ ಅಲಿ ಜವಾಬ್ದಾರನಾಗಿದ್ದಾನೆ, ಈತನ ನಿರ್ದೇಶನದ ಮೇಲೇಯೇ ಮೊಹಮ್ಮದ್ ಶಾರಿಕ್ ಮತ್ತು ಮಾಜ್ ಮುನೀರ್ ಅಹ್ಮದ್ DON’T FORCE US TO INVITE LASHKAR- E-TAIBA, TALIBAN TO DEAL WITH SANGHIS AND MANVEDIS LASHKAR ZINDABAD ಎಂದು ಬರೆದಿದ್ದರು ಎಂದು ಎನ್‌ಐಎ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಿರಿಯಾ ಘರ್ಷಣೆಯಲ್ಲಿ ಐಸಿಸ್ ನಾಯಕ ಸಾವು

    ಸಿರಿಯಾ ಘರ್ಷಣೆಯಲ್ಲಿ ಐಸಿಸ್ ನಾಯಕ ಸಾವು

    ನವದೆಹಲಿ: ಇಸ್ಲಾಮಿಕ್ ಸ್ಟೇಟ್ ಗ್ರೂಪ್ ಗುರುವಾರ ತನ್ನ ನಾಯಕ ಅಬು ಹುಸೇನಿ ಅಲ್ ಖುರೇಶಿ (Abu al-Hussein al-Husseini al-Qurashi) ಸಾವನ್ನಪ್ಪಿರುವುದಾಗಿ ದೃಢಪಡಿಸಿದೆ. ವಾಯುವ್ಯ ಸಿರಿಯಾದಲ್ಲಿ (Syria) ನಡೆದ ಘರ್ಷಣೆಯಲ್ಲಿ ಐಸಿಸ್ ನಾಯಕ (ISIS Leader) ಸಾವನ್ನಪ್ಪಿರುವುದಾಗಿ ತಿಳಿಸಿದೆ.

    ಟೆಲಿಗ್ರಾಮ್ ಮೆಸೇಜಿಂಗ್ ಅಪ್ಲಿಕೇಶನ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಸಂಘಟನೆ ವಕ್ತಾರರು, ಇಡ್ಲಿಬ್ ಪ್ರಾಂತ್ಯದಲ್ಲಿ ಜಿಹಾದಿ ಗುಂಪು ಹಯಾತ್ ತಹ್ರೀರ್ ಅಲ್ ಶಾಮ್‌ನೊಂದಿಗೆ ನಾಯಕ ನೇರ ಸಂರ್ಘರ್ಷ ನಡೆಸುತ್ತಿದ್ದ ವೇಳೆ ಗುಂಡಿನ ದಾಳಿಗೆ ಕೊಲ್ಲಲ್ಪಟ್ಟಿರುವುದಾಗಿ ತಿಳಿಸಿದ್ದಾರೆ.

    ನಾಯಕನ ಸಾವಿನ ಬಳಿಕ ಉಗ್ರ ಸಂಘಟನೆ ಹೊಸ ನಾಯಕನನ್ನು ಘೋಷಿಸಿದೆ. ಅಬು ಹಫ್ಸನ್ ಅಲ್ ಹಶಿಮಿ ಅಲ್ ಖುರೇಶಿ ಸಂಘಟನೆಯ 5ನೇ ನಾಯಕನಾಗಿ ಮುಂದುವರಿಯಲಿದ್ದಾನೆ ಎಂದು ಹೇಳಿದೆ. ಇದನ್ನೂ ಓದಿ: Expressway ರೂಲ್ಸ್ ಬ್ರೇಕ್ – ಚಾಲಕರಿಂದ 7 ಲಕ್ಷ ರೂ. ದಂಡ ವಸೂಲಿ

    ಅಬು ಹುಸೇನಿ ಅಲ್ ಖುರೇಶಿ ಸಾವಿಗೂ ಮುನ್ನ ಇನ್ನೂ ಮೂವರು ಐಸಿಸ್ ನಾಯಕರು ಸಾವನ್ನಪ್ಪಿದ್ದಾರೆ. ಅಬು ಹಸನ್ ಅಲ್ ಹಶಿಮಿ ಅಲ್ ಖುರೇಶಿ ಕಳೆದ ನವೆಂಬರ್‌ನಲ್ಲಿ, ಅಬು ಇಬ್ರಾಹಿಂ ಅಲ್ ಖುರೇಶಿಯನ್ನು 2022ರ ಏಪ್ರಿಲ್‌ನಲ್ಲಿ ಹಾಗೂ ಅಬು ಬಕರ್ ಅಲ್ ಬಗ್ದಾದಿ 2019ರ ಅಕ್ಟೋಬರ್‌ನಲ್ಲಿ ಕೊಲ್ಲಲಾಗಿತ್ತು. ಇದನ್ನೂ ಓದಿ: ಪೊಲೀಸ್‌ ವರ್ಗಾವಣೆ ಸಭೆಯಲ್ಲಿ ವೈಎಸ್‌ಟಿ ಟ್ಯಾಕ್ಸ್‌ನವರಿಗೆ ಏನು ಕೆಲಸ? – ಹೆಚ್‌ಡಿಕೆಯಿಂದ ಮಿಡ್‌ನೈಟ್‌ ಬಾಂಬ್‌

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶಿವಮೊಗ್ಗ ಬ್ಲಾಸ್ಟ್ ಕೇಸ್‌ – ರೊಬೊಟ್‌ ಬಳಸಿ‌ ಭಾರತದಲ್ಲಿ ದಾಳಿಗೆ ಮುಂದಾಗಿದ್ದ ಐಸಿಸ್

    ಶಿವಮೊಗ್ಗ ಬ್ಲಾಸ್ಟ್ ಕೇಸ್‌ – ರೊಬೊಟ್‌ ಬಳಸಿ‌ ಭಾರತದಲ್ಲಿ ದಾಳಿಗೆ ಮುಂದಾಗಿದ್ದ ಐಸಿಸ್

    ನವದೆಹಲಿ: ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಐಸಿಸ್ (ISIS) ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) 9 ಜನರ ವಿರುದ್ಧ ಶುಕ್ರವಾರ ಮೊದಲ ಪೂರಕ ಚಾರ್ಜ್‌ಶೀಟ್ (Supplymentary ChargeSheet) ಸಲ್ಲಿಸಿದೆ.

    ಆರೋಪಿಗಳು ಭವಿಷ್ಯದಲ್ಲಿ ಭಾರತದಲ್ಲಿಯೇ ಭಯೋತ್ಪಾದಕ ದಾಳಿಯನ್ನು ನಡೆಸುವ ಸಲುವಾಗಿ ರೋಬೊಟಿಕ್ಸ್ (Robotics) ಕೋರ್ಸ್‌ಗಳನ್ನು  ಕಲಿಯಲು ಮುಂದಾಗಿದ್ದಾರೆ ಎಂದು ಎನ್‌ಐಎ ತಾನು ಸಲ್ಲಿಸಿರುವ ಪೂರಕ ಚಾರ್ಜ್‌ಶೀಟ್‌ನಲ್ಲಿ  ಹೇಳಿದೆ. ಎನ್‌ಐಎ ಪ್ರಕಾರ, ಆರೋಪಿಗಳು ಐಸಿಸ್ ಜೊತೆಗೂಡಿ ಶಿವಮೊಗ್ಗದಲ್ಲಿ (Shivamogga) ಐಇಡಿ ಟ್ರಯಲ್ ಬ್ಲಾಸ್ಟ್ (Trial Blast) ಮಾಡಿದ್ದರು. ಅಲ್ಲದೇ ಜನರಲ್ಲಿ ಭಯ ಮೂಡಿಸುವ ಸಲುವಾಗಿ ವಾಹನಗಳಿಗೆ ಬೆಂಕಿ ಹಚ್ಚಿದ್ದರು. ಇದನ್ನೂ ಓದಿ: ಚಲಿಸುತ್ತಿದ್ದ ಬಸ್ಸಿನಲ್ಲೇ ಮಹಿಳೆ ಜೊತೆ ಕಂಡಕ್ಟರ್ ಸೆಕ್ಸ್- ವೀಡಿಯೋ ವೈರಲ್

    ಆರೋಪಿಗಳನ್ನು ಮೊಹಮ್ಮದ್ ಶಾರಿಖ್ (25), ಮಾಜ್ ಮುನೀರ್ ಅಹಮದ್ (23), ಸೈಯದ್ ಯಾಸಿನ್ (22), ರೀಶಾನ್ ತಾಜುದ್ದೀನ್ ಶೇಖ್ (22), ಹುಜೈರ್ ಫರ್ಹಾನ್ ಬೇಗ್ (22), ಮಜಿನ್ ಅಬ್ದುಲ್ ರಹಮಾನ್ (22), ನದೀಮ್ ಅಹಮದ್ ಕೆಎ (22), ಜಬೀವುಲ್ಲಾ (32) ಮತ್ತು ನದೀಮ್ ಫೈಝಲ್ ಎನ್ (27) ಎಂದು ಗುರುತಿಸಲಾಗಿದ್ದು, ಎಲ್ಲರೂ ಕರ್ನಾಟಕಕ್ಕೆ ಸೇರಿದವರಾಗಿದ್ದಾರೆ. ಇದನ್ನೂ ಓದಿ: ಆನ್‍ಲೈನ್ ಶಾಪಿಂಗ್‍ನಲ್ಲಿ ಬೆಂಗಳೂರಿಗರೇ ಮುಂದು – ಸರಾಸರಿ ಖರೀದಿಯಲ್ಲಿ ಮುಂಬೈ ಫಸ್ಟ್

    ಆರೋಪಿಗಳ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ಕಾಯ್ದೆ, ಭಾರತೀಯ ದಂಡ ಸಂಹಿತೆ ಮತ್ತು ವಿನಾಶ ಮತ್ತು ಆಸ್ತಿ ನಷ್ಟ ತಡೆ 1981ರ‌ ಕಾಯ್ದೆಯ ಅಡಿಯಲ್ಲಿ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ ಎಂದು ಎನ್‌ಐಎ ತಿಳಿಸಿದೆ. ಆರೋಪಿಗಳ ಪೈಕಿ ಮಾಜ್ ಮುನೀರ್ ಅಹಮದ್ ಮತ್ತು ಸೈಯದ್ ಯಾಸಿನ್ ವಿರುದ್ಧ ಈ ವರ್ಷ ಮಾರ್ಚ್‌ನಲ್ಲಿ ಆರೋಪ ಪಟ್ಟಿ ಸಲ್ಲಿಸಿದ್ದು, ಈಗ ಇತರ ಆರೋಪಿಗಳ ಕುರಿತು ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. ಇದನ್ನೂ ಓದಿ: ಒಡಿಶಾ ರೈಲು ದುರಂತ – ಸಿಗ್ನಲಿಂಗ್, ಟ್ರಾಫಿಕ್ ಕಂಟ್ರೋಲ್ ವಿಭಾಗಗಳೇ ಹೊಣೆ

    9 ಆರೋಪಿಗಳ ಪೈಕಿ ಮಾಜ್ ಮುನೀರ್ ಅಹಮದ್, ಸೈಯದ್ ಯಾಸಿನ್, ರೀಶಾನ್ ತಾಜುದ್ದೀನ್ ಶೇಖ್, ಮಜಿನ್ ಅಬ್ದುಲ್ ರಹಮಾನ್ ಮತ್ತು ನದೀಮ್ ಅಹಮದ್ ಕೆಎ ಮೆಕ್ಯಾನಿಕಲ್ (Mechanical) ಮತ್ತು ಎಲೆಕ್ಟ್ರಿಕಲ್ (Electrical) ಎಂಜಿನಿಯರಿಂಗ್ ಅಧ್ಯಯನ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಭೀಕರ ಬಸ್‌ ದುರಂತ – 25 ಮಂದಿ ಸಜೀವ ದಹನ

    ಆರೋಪಿಗಳು ರೋಬೊಟಿಕ್ಸ್ ಕಲಿತು ಭವಿಷ್ಯದಲ್ಲಿ ಭಾರತದಲ್ಲಿ ಐಸಿಸ್ ಅಜೆಂಡಾವನ್ನು ಮುಂದುವರಿಸುವ ಸಲುವಾಗಿ ಭಯೋತ್ಪಾದಕ ದಾಳಿಗಳನ್ನು ಮತ್ತು ಅದರ ಕೌಶಲ್ಯವನ್ನು ಕಲಿಯುವಂತೆ ವಿದೇಶಿ ಮೂಲದ ಐಸಿಸ್ ಹ್ಯಾಂಡ್ಲರ್‌ನಿಂದ ಟಾಸ್ಕ್ ನೀಡಲಾಗಿತ್ತು. ಅಲ್ಲದೇ ಮೊಹಮ್ಮದ್ ಶಾರಿಖ್, ಮಾಜ್ ಮುನೀರ್ ಅಹಮದ್ ಮತ್ತು ಸೈಯದ್ ಯಾಸಿನ್ ಭಯೋತ್ಪಾದಕ ಸಂಘಟನೆಯಾದ ಐಎಸ್ ನಿರ್ದೇಶನದ ಮೇರೆಗೆ ಭಯೋತ್ಪಾದನೆ ಮತ್ತು ಹಿಂಸಾಚಾರವನ್ನು ಉತ್ತೇಜಿಸಲು ವಿದೇಶದಲ್ಲಿರುವ ಐಎಸ್ ಕಾರ್ಯಕರ್ತರೊಂದಿಗೆ ಶಾಮೀಲಾಗಿ ಕ್ರಿಮಿನಲ್ ಸಂಚುಗಳನ್ನು ರೂಪಿಸಿದ್ದರು ಎಂದು ಎನ್‌ಐಎ ತನಿಖೆಯಿಂದ ತಿಳಿದು ಬಂದಿದೆ. ಇದನ್ನೂ ಓದಿ: ಮಣಿಪುರ ಸಿಎಂ ಬಿರೇನ್ ಸಿಂಗ್ ರಾಜೀನಾಮೆ ಪತ್ರವನ್ನು ಹರಿದು ಹಾಕಿದ ಮಹಿಳೆ

    ರಾಷ್ಟ್ರೀಯ ಭದ್ರತೆ, ಏಕತೆ ಮತ್ತು ದೇಶದ ಸಾರ್ವಭೌಮತೆಗೆ ಧಕ್ಕೆ ತರುವ ಉದ್ದೇಶದಿಂದ ಮೂವರು ಆರೋಪಿಗಳು ಇತರೆ ಆರೋಪಿಗಳನ್ನು ನೇಮಕ ಮಾಡಿಕೊಂಡಿದ್ದರು. ಅವರ ಆನ್‌ಲೈನ್ ಹ್ಯಾಂಡ್ಲರ್ ಆರೋಪಿಗಳಿಗೆ ಕ್ರಿಪ್ಟೋ ಕರೆನ್ಸಿಗಳ (Crypto Currency) ಮೂಲಕ ಹಣವನ್ನು ನೀಡಲಾಗುತ್ತಿತ್ತು. ಈ ಟ್ರಯಲ್ ಬ್ಲಾಸ್ಟ್ ಕುರಿತು ಸೆಪ್ಟೆಂಬರ್ 19 2023ರಲ್ಲಿ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ನವೆಂಬರ್ 15ರಂದು ಈ ಪ್ರಕರಣವನ್ನು ಎನ್‌ಐಎ ತೆಗೆದುಕೊಂಡು ಕೇಸ್ ಅನ್ನು ಮರುದಾಖಲಿಸಿತ್ತು. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಎನ್‌ಐಎ ಮಾಹಿತಿ ನೀಡಿದೆ. ಇದನ್ನೂ ಓದಿ: ಗ್ಯಾಂಗ್‌ಸ್ಟರ್ ಅತೀಕ್ ಜಮೀನಿನಲ್ಲಿ ಮನೆಗಳನ್ನು ನಿರ್ಮಿಸಿ ಬಡವರಿಗೆ ಹಂಚಿದ ಯೋಗಿ ಆದಿತ್ಯನಾಥ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಐಸಿಸ್ ಸೇರಲು ಕೇರಳ ತೊರೆದಿದ್ದ ವ್ಯಕ್ತಿ ಪಾಕ್ ಜೈಲಿನಲ್ಲಿ ಸಾವು

    ಐಸಿಸ್ ಸೇರಲು ಕೇರಳ ತೊರೆದಿದ್ದ ವ್ಯಕ್ತಿ ಪಾಕ್ ಜೈಲಿನಲ್ಲಿ ಸಾವು

    ತಿರುವನಂತಪುರಂ: ಐಸಿಸ್ (ISIS) ಸೇರಲು ಭಾರತ ತೊರೆದಿದ್ದ ಕೇರಳದ (Kerala) ವ್ಯಕ್ತಿಯೊಬ್ಬ ಪಾಕ್ ಜೈಲಿನಲ್ಲಿ ಮೃತಪಟ್ಟಿದ್ದಾನೆ. ಆತನ ಮೃತ ದೇಹವನ್ನು ಅಟ್ಟಾರಿ ಗಡಿಯಲ್ಲಿ ಹಸ್ತಾಂತರಿಸಲಾಗುವುದು ಎಂದು ಪಾಕಿಸ್ತಾನ (Pakistan) ಸರ್ಕಾರ ಕೇಂದ್ರ ಗೃಹ ಸಚಿವಾಲಯಕ್ಕೆ (Union Home Ministry) ತಿಳಿಸಿದೆ.

    ಮೃತನನ್ನು ಪಾಲಕ್ಕಾಡ್ (Palakkad) ಜಿಲ್ಲೆಯ ಕಪೂರ್‌ನ ಜುಲ್ಫಿಕರ್ (48) ಎಂದು ಗುರುತಿಸಲಾಗಿದೆ. ಜುಲ್ಫಿಕರ್ 2018ರಲ್ಲಿ ಕೇರಳ ತೊರೆದಿದ್ದ. ನಂತರ ಐಸಿಸ್ ಸೇರಲು ಅಬುಧಾಬಿ (Abu Dhabi) ತೊರೆದಿದ್ದನ್ನು ಗುಪ್ತಚರ ಸಂಸ್ಥೆಗಳು ಪತ್ತೆ ಹಚ್ಚಿದ್ದವು. ಅಲ್ಲಿಂದ ಇರಾನ್‍ಗೆ (Iran) ತೆರಳಿದ್ದ ನಂತರ ಪಾಕಿಸ್ತಾನಕ್ಕೆ ತಲುಪಿದ್ದ ಮಾಹಿತಿ ಸಿಕ್ಕಿತ್ತು. ಇದನ್ನೂ ಓದಿ: ಶೀಘ್ರವೇ ಮುಂಬೈ ಬ್ಲಾಸ್ಟ್ ಮಾಡ್ತೀನಿ – ಬೆದರಿಕೆ ಹಾಕಿದಾತ ಅರೆಸ್ಟ್

    ಆತ ಅಬುಧಾಬಿಯಿಂದ ನಾಪತ್ತೆಯಾಗಿದ್ದಾಗಿನಿಂದ ಗುಪ್ತಚರ ಸಂಸ್ಥೆಗಳು ಆತನ ಮೇಲೆ ನಿಗಾ ಇರಿಸಿದ್ದವು. ಈಗ ಪಾಕ್‍ನಲ್ಲಿ ಮೃತಪಟ್ಟಿರುವುದು ದೃಢಪಟ್ಟಿದೆ. ಪ್ರಕರಣದಲ್ಲಿ ನಿಗೂಢತೆ ಇದೆ, ಹೆಚ್ಚಿನ ವಿವರಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ ಎಂದು ಮಧ್ಯಮಗಳು ತಿಳಿಸಿವೆ.

    ಪಾಕಿಸ್ತಾನ ಪೊಲೀಸರಿಂದ ಜುಲ್ಫಿಕರ್ ಸಾವಿನ ಬಗ್ಗೆ ಭಾರತಕ್ಕೆ ಮಾಹಿತಿ ಲಭಿಸಿದೆ. ಮೃತದೇಹವನ್ನು ಅಮೃತಸರದ (Amritsar) ಎಫ್‌ಆರ್‌ಒ ಮೂಲಕ ಭಾರತ ಸರ್ಕಾರಕ್ಕೆ ಅಟ್ಟಾರಿ ಗಡಿಯಲ್ಲಿ ಹಸ್ತಾಂತರಿಸುವುದಾಗಿ ತಿಳಿಸಿದೆ. ಬಳಿಕ ಪಾಲಕ್ಕಾಡ್‍ಗೆ ಕೊಂಡೊಯ್ಯುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಈಗ ಜುಲ್ಫಿಕರ್ ಐಸಿಸ್ ಸೇರಲು ದೇಶ ತೊರೆದಿದ್ದ ಎಂಬ ಸುದ್ದಿ ಹೊರಬೀಳುತ್ತಿದ್ದಂತೆ ಕುಟುಂಬಸ್ಥರು ಮೃತದೇಹ ಸ್ವೀಕರಿಸಲು ಹಿಂದೇಟು ಹಾಕಿದ್ದಾರೆ. ಇದನ್ನೂ ಓದಿ: ಟ್ರಕ್‍ಗೆ ಬಸ್ ಡಿಕ್ಕಿ – ಏಳು ಸಾವು, 13 ಮಂದಿಗೆ ಗಾಯ

  • ತಾಲಿಬಾನ್‌ನಿಂದ ISIS ಉಗ್ರನ ಹತ್ಯೆ

    ತಾಲಿಬಾನ್‌ನಿಂದ ISIS ಉಗ್ರನ ಹತ್ಯೆ

    ಕಾಬೂಲ್: ಅಫ್ಘಾನಿಸ್ತಾನದ (Afghanistan) ರಾಜಧಾನಿಯಲ್ಲಿ ರಾಜತಾಂತ್ರಿಕರ ಹತ್ಯೆಗೆ ಮುಂದಾಗಿದ್ದ ಐಸಿಸ್‌ ಉಗ್ರನನ್ನು (ISIS Terrorist) ತಾಲಿಬಾನ್‌ (Taliban) ಪಡೆ ಹತ್ಯೆ ಮಾಡಿದೆ.

    ತಾಲಿಬಾನ್‌ ಪಡೆಗಳು ಕಾರ್ಯಾಚರಣೆ ನಡೆಸಿ ಐಸಿಸ್‌ನ ಗುಪ್ತಚರ ಮತ್ತು ಕಾರ್ಯಾಚರಣೆ ಮುಖ್ಯಸ್ಥ ಕ್ವಾರಿ ಫತೇಹ್‌ನನ್ನು ಹತ್ಯೆ ಮಾಡಿದೆ ಎಂದು ತಾಲಿಬಾನ್‌ ಸರ್ಕಾರದ ವಕ್ತಾರ ಜಬಿವುಲ್ಲಾ ಮುಜಾಹಿದ್‌ ತಿಳಿಸಿದ್ದಾರೆ. ಇದನ್ನೂ ಓದಿ: ಬಸ್ ನಿಲ್ದಾಣಕ್ಕೆ ಕಾರು ಡಿಕ್ಕಿ – ಭಾರತೀಯ ಮೂಲದ ವಿದ್ಯಾರ್ಥಿನಿ ಸಾವು

    ರಾಜತಾಂತ್ರಿಕರು, ಮಸೀದಿಗಳ ಮೇಲಿನ ದಾಳಿಗೆ ಕಾಬೂಲ್‌ನಲ್ಲಿ ಫತೇಹ್ ಸಂಚು ರೂಪಿಸಿದ್ದ. ಈ ಸಂಬಂಧದ ಕಾರ್ಯಾಚರಣೆಗಳ ಮಾಸ್ಟರ್‌ ಮೈಂಡ್‌ ಈತನೇ ಆಗಿದ್ದ ಎಂದು ಮುಜಾಹಿದ್‌ ಹೇಳಿದ್ದಾರೆ.

    ತಾಲಿಬಾನ್ ಆಡಳಿತಕ್ಕೆ ಐಸಿಎಸ್‌ ಅತಿದೊಡ್ಡ ಭದ್ರತಾ ಸವಾಲಾಗಿದೆ. ವಿದೇಶಿಯರು, ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಸರ್ಕಾರಿ ಸಂಸ್ಥೆಗಳ ಮೇಲೆ ದಾಳಿ ನಡೆಸುತ್ತಿದೆ. ಎರಡೂ ಗುಂಪುಗಳು ಕಠಿಣವಾದ ಸುನ್ನಿ ಇಸ್ಲಾಮಿಸ್ಟ್ ಸಿದ್ಧಾಂತವನ್ನು ಪ್ರತಿಪಾದಿಸುತ್ತವೆ. ಇದನ್ನೂ ಓದಿ: ಹೆಚ್ಚುತ್ತಿರುವ ತಾಪಮಾನ, ಮಾರ್ಚ್‌ನಿಂದ ಮೇವರೆಗೂ ಹೈ ಅಲರ್ಟ್ 

    ಈ ಹಿಂದೆ ಕಾಬೂಲ್‌ನ ಅನೇಕ ಕಡೆಗಳಲ್ಲಿ ಐಸಿಸ್‌ ದಾಳಿಗಳನ್ನು ನಡೆಸಿದೆ. ದಾಳಿಯಲ್ಲಿ ನೂರಾರು ಮಂದಿ ಸಾವಿಗೀಡಾಗಿದ್ದಾರೆ. ಆತ್ಮಾಹುತಿ ದಾಳಿಗಳ ವಿಚಾರವಾಗಿ ಐಸಿಸ್‌ ವಿರುದ್ಧ ತಾಲಿಬಾನ್‌ ನಿರಂತರವಾಗಿ ಆರೋಪಗಳನ್ನು ಮಾಡುತ್ತಿದೆ.

  • ಐಸಿಸ್‌ ಜೊತೆ ಲಿಂಕ್‌ – ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ನಾಯಕನ ಮಗ ಅರೆಸ್ಟ್‌

    ಐಸಿಸ್‌ ಜೊತೆ ಲಿಂಕ್‌ – ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ನಾಯಕನ ಮಗ ಅರೆಸ್ಟ್‌

    – ರಾಜ್ಯ ನಾಯಕರ ಸ್ಪಷ್ಟನೆ ಕೇಳಿದ ಶಾಸಕ ರಘುಪತಿ ಭಟ್

    ಉಡುಪಿ: ಶಿವಮೊಗ್ಗದಲ್ಲಿ ನಡೆಸಿದ ಟ್ರಯಲ್‌ ಬಾಂಬ್ ಬ್ಲಾಸ್ಟ್ (Shivamogga Trial Blast Case),  ಮಂಗಳೂರಿನ ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣ (Cooker Bomb Blast Case) ಮತ್ತು ಐಸಿಸ್‌ ಜೊತೆ ಸಂಪರ್ಕ ಆರೋಪಕ್ಕೆ ಸಂಬಂಧಪಟ್ಟಂತೆ ರಾಷ್ಟ್ರೀಯ ತನಿಖಾ ದಳ(NIA) ತನಿಖೆಯನ್ನು ಮುಂದುವರಿಸಿದ್ದು, ಇಬ್ಬರು ಆರೋಪಿಗಳ ಹೇಳಿಕೆಯ ಆಧಾರದ ಮೇಲೆ ಉಡುಪಿ ಮೂಲದ ಎಂಜಿನಿಯರಿಂಗ್ ವಿದ್ಯಾರ್ಥಿ ರೇಶಾನ್‌ನನ್ನು(Reshaan) ಬಂಧಿಸಿದೆ.

    ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಮುಖಂಡ(Brahmavara Block Congress Leader) ತಾಜುದ್ದೀನ್ ಶೇಖ್ (Thajuddin Sheikh) ಅವರ ಮಗನನ್ನು ಎನ್‌ಐಎ ಪೊಲೀಸರು ಗುರುವಾರ ಬಂಧಿಸಿದ್ದಾರೆ.  ತಾಜುದ್ದೀನ್ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾಗಿದ್ದು, ಮಸೀದಿಯ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದರು.

    ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌, ಶಾಸಕ ಯುಟಿ ಖಾದರ್ ಜೊತೆಗಿರುವ ಫೋಟೋಗಳು ಸಮಾಜಿಕ ಜಾಲತಾಣದಲ್ಲಿ ವೈರಲಾಗುತ್ತಿದೆ. ಶಿವಮೊಗ್ಗದ ಶಂಕಿತ ಉಗ್ರ ಮಾಝ್ ಮುನೀರ್ ಮತ್ತು ರಿಶಾನ್ ಒಂದೇ ಬ್ಯಾಚ್ ಮತ್ತು ರೂಮ್ ಮೇಟ್ ಆಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕರ್ನಾಟಕ-ಕೇರಳ ಗಡಿಯಲ್ಲಿ ರಿಂಗಣಿಸಿ ಆತಂಕ ಸೃಷ್ಟಿಸಿದ ಸ್ಯಾಟಲೈಟ್ ಫೋನ್

    ಈ ಕುರಿತಂತೆ ಉಡುಪಿಯಲ್ಲಿ ಶಾಸಕ ರಘುಪತಿ ಭಟ್ ಪ್ರತಿಕ್ರಿಯೆ ನೀಡಿದ್ದು, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಗನ ಬಂಧನವಾಗಿದೆ. ಒಂದೊಂದೇ ಆತಂಕಕಾರಿ ವಿಚಾರಗಳು ತನಿಖೆಯಲ್ಲಿ ಹೊರಗೆ ಬರುತ್ತಿದೆ. ತನಿಖೆಯನ್ನು ಇನ್ನಷ್ಟು ತೀವ್ರಗೊಳಿಸಬೇಕು. ಕರಾವಳಿಯಲ್ಲಿ ಇಂತಹ ನಿಗೂಢ ಚಟುವಟಿಕೆಗಳ ಬಗ್ಗೆ ತನಿಖೆ ಆಗಬೇಕು ಎಂದು ಆಗ್ರಹಿಸಿದರು.

    ಹಿಜಬ್‌ (Hijab) ವಿವಾದ ಆದಾಗಲೇ ನಾನು ಇಂತಹ ಆತಂಕ ವ್ಯಕ್ತಪಡಿಸಿದ್ದೆ. ಕರಾವಳಿ ಭಾಗದ ಮೇಲೆ ಎನ್‌ಐಎ ಹೆಚ್ಚಿನ ನಿಗಾ ಇರಿಸಬೇಕು‌. ಬ್ಲಾಕ್ ಕಾಂಗ್ರೆಸ್‌ನಲ್ಲಿ ತಾಜುದ್ದೀನ್ ಸಕ್ರಿಯ ಕಾರ್ಯಕರ್ತ. ಸಿದ್ದರಾಮಯ್ಯ, ಡಿಕೆಶಿ, ಯು ಟಿ ಖಾದರ್ ಪರಮಾಪ್ತ. ರಾಜ್ಯ ಕಾಂಗ್ರೆಸ್ ಈ ಬಗ್ಗೆ ಸ್ಪಷ್ಟನೆ ಕೊಡಬೇಕು. ಕಾಂಗ್ರೆಸ್ ಪಕ್ಷ ಇದರ ಜವಾಬ್ದಾರಿಯನ್ನು ಹೊರಬೇಕು. ಕಾಂಗ್ರೆಸ್ ಪ್ರಮೋಷನ್ ಕೊಟ್ಟು ಬ್ಲಾಕ್ ಅಧ್ಯಕ್ಷನನ್ನಾಗಿ ಮಾಡುತ್ತಾ? ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಉಚ್ಛಾಟನೆ ಮಾಡುತ್ತಾರಾ ಎಂದು ಪ್ರಶ್ನೆ ಮಾಡಿದರು.

    ಕುಟುಂಬದ ಬಗ್ಗೆ ತನಿಖೆ ನಡೆಸಬೇಕು:
    ಕಾಂಗ್ರೆಸ್ ನಾಯಕರ ಜೊತೆಗಿರುವ ಫೋಟೋವನ್ನು ಬಿಡುಗಡೆ ಮಾಡಿದ್ದೇನೆ. ರೇಶಾನ್ ಕುಟುಂಬದ ಬಗ್ಗೆ ಕೂಡಾ ತನಿಖೆ ಮಾಡಬೇಕು. ರೀಶಾನ್‌ ತಾಯಿ ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕಿ. ಆಕೆಯ ಮೇಲೆ ಲಿಖಿತ ದೂರನ್ನು ಕೆಲ ತಿಂಗಳ ಹಿಂದೆಯೇ ಶಿಕ್ಷಣ ಸಚಿವ ನಾಗೇಶ್ ಗೆ ನೀಡಲಾಗಿದೆ. ರಾಷ್ಟ್ರೀಯತೆ, ಪ್ರಧಾನಿ ಮೋದಿ ವಿರುದ್ಧ ಕೆಲಸ ಮಾಡುತ್ತಿದ್ದರು. ಕಾಲೇಜು ವಿರುದ್ಧವಾಗಿ ಹೇಳಿಕೆ ಕೊಡುವ ಆಡಿಯೋಗಳನ್ನು ಸಚಿವರಿಗೆ ಕೊಡಲಾಗಿದೆ. ತಾಜುದ್ದೀನ್ ಆರ್ಥಿಕ ಪರಿಸ್ಥಿತಿ ಈ ಹಿಂದೆ ಹದಗೆಟ್ಟಿತ್ತು. ಏಕಾಏಕಿ ಇತ್ತೀಚೆಗೆ ಶ್ರೀಮಂತನಾದ ಬಗ್ಗೆ ಸ್ಥಳೀಯರು ಗುಮಾನಿ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಕೂಡಾ ತನಿಖೆ ಆಗಬೇಕು ಎಂದು ಶಾಸಕ ರಘುಪತಿ ಭಟ್ ಆಗ್ರಹಿಸಿದ್ದಾರೆ.

    ಆರೋಪ ಏನು?
    ಐಸಿಸ್ ಸಂಪರ್ಕಿತರಿಂದ ಕ್ರಿಪ್ಟೋ ವ್ಯಾಲೆಟ್‌ ಹಣ ಪಡೆದು ದೊಡ್ಡ ಮಟ್ಟದ ದುಷ್ಕೃತ್ಯ ಮತ್ತು ಚಟುವಟಿಕೆ ನಡೆಸುವವರಿಗೆ ಹಣ ಒದಗಿಸಿದ ಆರೋಪ ರೇಶಾನ್‌ ಮೇಲಿದೆ. ದಾಳಿ ವೇಳೆ ಡಿಜಿಟಲ್ ಸಾಧನ ಮತ್ತು ಹಲವು ದಾಖಲೆಗಳು ಸಿಕ್ಕಿದ್ದು, ದೊಡ್ಡ ದೊಡ್ಡ ಲಿಕ್ಕರ್ ಶಾಪ್, ಗೋಡಾನ್ ಹಾಗೂ ಟ್ರಾನ್ಸ್ ಫರ್ಮರ್‌ಗಳಿಗೆ ಬೆಂಕಿ ಹಚ್ಚಲು ಟಾರ್ಗೆಟ್ ಮಾಡಿದ್ದ ವಿಚಾರ ಬೆಳಕಿಗೆ ಬಂದಿದೆ. ದೇಶದ ಏಕತೆ, ಸಾರ್ವಭೌಮತೆ ಮತ್ತು ಭದ್ರತೆಗೆ ದಕ್ಕೆ ಉಂಟು ಮಾಡಲು ಸಂಚು ರೂಪಿಸಿದ ಆರೋಪಿಗಳನ್ನ ಸದ್ಯ ಎನ್‌ಐಎ ಬಂಧಿಸಿ ವಿಚಾರಣೆ ನಡೆಸುತ್ತಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ತುಂಗಾ ತೀರದಲ್ಲಿ ಟ್ರಯಲ್‌ ಬ್ಲಾಸ್ಟ್‌ ಕೇಸ್‌ – ಐಸಿಸ್‌ ಸಂಪರ್ಕಿತರಿಂದ ಹಣ, ಇಬ್ಬರು ಅರೆಸ್ಟ್‌

    ತುಂಗಾ ತೀರದಲ್ಲಿ ಟ್ರಯಲ್‌ ಬ್ಲಾಸ್ಟ್‌ ಕೇಸ್‌ – ಐಸಿಸ್‌ ಸಂಪರ್ಕಿತರಿಂದ ಹಣ, ಇಬ್ಬರು ಅರೆಸ್ಟ್‌

    ಬೆಂಗಳೂರು: ಶಿವಮೊಗ್ಗದ ತುಂಗಾ ತೀರದಲ್ಲಿ ನಡೆದಿದ್ದ ಬಾಂಬ್ ಟ್ರಯಲ್ ಬ್ಲ್ಯಾಸ್ಟ್‌ ಪ್ರಕರಣಕ್ಕೆ (Shivamogga Trial Blast Case) ರೋಚಕ ಟ್ವಿಸ್ಟ್ ಸಿಕ್ಕಿದೆ. ಮತ್ತಿಬ್ಬರು ಶಂಕಿತ ಉಗ್ರರನ್ನು ರಾಷ್ಟ್ರೀತ ತಿನಿಖಾ ದಳ(NIA) ಬಂಧಿಸಿದೆ.

    ಟ್ರಯಲ್ ಬ್ಲಾಸ್ಟ್ ಸಂಬಂಧ ರಾಜ್ಯದ ಶಿವಮೊಗ್ಗ, ದಾವಣಗೆರೆ, ದಕ್ಷಿಣ ಕನ್ನಡ ಮತ್ತು ಬೆಂಗಳೂರು ಸೇರಿದಂತೆ 6 ಕಡೆ ಎನ್ಐಎ ದಾಳಿ ನಡೆಸಿದೆ. ದಾಳಿ ವೇಳೆ ಇಬ್ಬರು ಐಸಿಸ್ ಸಕ್ರಿಯ ಸದಸ್ಯರಾದ ಉಡುಪಿ ಬ್ರಹ್ಮಾವರದ ವರಂಬಳ್ಳಿ ರೇಶಾನ್ ತಾಜೂದ್ದೀನ್ ಶೇಕ್ ಮತ್ತು ಶಿವಮೊಗ್ಗದ ಟಿಪ್ಪು ಸುಲ್ತಾನ್ ನಗರದ ಹುಝೇರ್ ಪಾರ್ಹನ್ ಬೇಗ್‌ನನ್ನು ಬಂಧನ ಮಾಡಲಾಗಿದೆ. ಇದನ್ನೂ ಓದಿ: ಮಂಗಳೂರಿನ ಎಂಜಿನಿಯರಿಂಗ್ ಕಾಲೇಜ್ ಮೇಲೆ NIA ದಾಳಿ

    ಪ್ರಕರಣದ ಎ2 ಆರೋಪಿಯಾಗಿದ್ದ ಮಾಜ್ ವಿಚಾರಣೆ ವೇಳೆ ಇಬ್ಬರ ಹೆಸರು ಬೆಳಕಿಗೆ ಬಂದಿತ್ತು. ಆರೋಪಿ ಮಾಜ್ ಗೆ ರೇಶಾನ್ ತಾಜೂದ್ದೀನ್ ಸಹಪಾಠಿಯಾಗಿದ್ದ. ಇಬ್ಬರು ಆರೋಪಿಗಳು ಐಸಿಸ್ ಸಂಪರ್ಕಿತರಿಂದ ಕ್ರಿಪ್ಟೋ ವ್ಯಾಲೆಟ್‌ ಹಣ ಪಡೆದು ದೊಡ್ಡ ಮಟ್ಟದ ದುಷ್ಕೃತ್ಯ ಮತ್ತು ಚಟುವಟಿಕೆ ನಡೆಸುವವರಿಗೆ ಹಣ ಒದಗಿಸಿದ ಆರೋಪ ಕೇಳಿ ಬಂದಿದೆ.

    ದಾಳಿ ವೇಳೆ ಡಿಜಿಟಲ್ ಸಾಧನ ಮತ್ತು ಹಲವು ದಾಖಲೆಗಳು ಸಿಕ್ಕಿದ್ದು, ದೊಡ್ಡ ದೊಡ್ಡ ಲಿಕ್ಕರ್ ಶಾಪ್, ಗೋಡಾನ್ ಹಾಗೂ ಟ್ರಾನ್ಸ್ ಫರ್ಮರ್‌ಗಳಿಗೆ ಬೆಂಕಿ ಹಚ್ಚಲು ಟಾರ್ಗೆಟ್ ಮಾಡಿದ್ದ ವಿಚಾರ ಬೆಳಕಿಗೆ ಬಂದಿದೆ.

    ದೇಶದ ಏಕತೆ, ಸಾರ್ವಭೌಮತೆ ಮತ್ತು ಭದ್ರತೆಗೆ ದಕ್ಕೆ ಉಂಟು ಮಾಡಲು ಸಂಚು ರೂಪಿಸಿದ ಆರೋಪಿಗಳನ್ನ ಸದ್ಯ ಎನ್‌ಐಎ ಬಂಧಿಸಿ ವಿಚಾರಣೆ ನಡೆಸುತ್ತಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಝಾಕೀರ್‌ ನಾಯ್ಕ್‌ The Real Inspiration – ಐಸಿಸ್‌ ಉಗ್ರರಂತೆ ಪೋಸ್‌ ನೀಡಿ ಪ್ರತೀಕಾರದ ಪ್ರತಿಜ್ಞೆ

    ಝಾಕೀರ್‌ ನಾಯ್ಕ್‌ The Real Inspiration – ಐಸಿಸ್‌ ಉಗ್ರರಂತೆ ಪೋಸ್‌ ನೀಡಿ ಪ್ರತೀಕಾರದ ಪ್ರತಿಜ್ಞೆ

    ಮಂಗಳೂರು: ಬಾಂಬರ್‌ ಶಾರೀಕ್‌(Shariq) ಐಸಿಸ್ ಉಗ್ರರಂತೆ ಸೆಲ್ಫಿ ವಿಡಿಯೋ ಮಾಡಿ ಪ್ರತಿಕಾರದ ಪ್ರತಿಜ್ಞೆ ತೆಗೆದುಕೊಂಡಿದ್ದ ವಿಷಯ ಈಗ ಬೆಳಕಿಗೆ ಬಂದಿದೆ.

    ಮಂಗಳೂರು ಸ್ಫೋಟದ(Mangaluru Blast) ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗಳು ಶಾರೀಕ್‌ ಮೊಬೈಲ್‌ ನೋಡಿ ದಂಗಾಗಿದ್ದಾರೆ. ಐಸಿಸ್‌ ಉಗ್ರರಂತೆ ಸೆಲ್ಫಿ ವಿಡಿಯೋ ಮಾಡಿ ಪ್ರತಿಕಾರದ ಪ್ರತಿಜ್ಞೆ ತೆಗೆದುಕೊಂಡಿದ್ದ ಶಾರೀಕ್ ಮೊಬೈಲ್‌ನಲ್ಲಿ ಬಾಂಬ್ ತಯಾರಿಯ ವಿಡಿಯೋ ಲಭ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.

    ಮೂಲಭೂತವಾದಿ ಭಾಷಣಕಾರ ಝಾಕೀರ್ ನಾಯ್ಕ್‌(Zakir Naik) ಭಾಷಣದಿಂದ ಪ್ರಭಾವಿತನಾಗಿದ್ದ ಈತ ಝಾಕೀರ್‌ ನಾಯ್ಕ್‌ನನ್ನು ʼದಿ ರಿಯಲ್ ಇನ್ಸ್ಪಿರೇಶನ್ʼ ಎಂದು ಸಂಬೋಧಿಸಿದ್ದ. ಇದನ್ನೂ ಓದಿ: ಕದ್ರಿ ದೇಗುಲಕ್ಕೆ IRCಯಿಂದ ಬೆದರಿಕೆ ಪತ್ರ – ದೇಗುಲದ ಮಂಡಳಿಯಿಂದ ದೂರು

    ಯೂಟ್ಯೂಬ್‌ನಿಂದ ಝಾಕೀರ್ ನಾಯ್ಕ್ ವೀಡಿಯೋ ಡೌನ್‌ಲೋಡ್‌ ಮಾಡಿದ್ದು ಶಾರೀಕ್ ಮೊಬೈಲ್‌ನಲ್ಲಿ 50ಕ್ಕೂ ಹೆಚ್ಚು ಭಾಷಣಗಳು ಸಿಕ್ಕಿವೆ. ಟೋರ್ ಬ್ರೌಸರ್ ಮೂಲಕ ಡಾರ್ಕ್ ವೆಬ್ ಬಳಸುತಿದ್ದ ವಿಚಾರವೂ ಲಭ್ಯವಾಗಿದೆ.

    ದ್ವೇಷ ಭಾಷಣ, ಭಯೋತ್ಪಾದನೆಗೆ ಪ್ರೇರಣೆ, ಹಣಕಾಸು ನೆರವು ಆರೋಪ ಹಿನ್ನೆಲೆಯಲ್ಲಿ ವಿವಾದಿತ ಧರ್ಮ ಪ್ರಚಾರಕ ಝಾಕೀರ್ ನಾಯ್ಕ್‌ ಪೀಸ್‌ ಟಿವಿಗೆ ಭಾರತ ನಿರ್ಬಂಧ ಹೇರಿದೆ. ಝಾಕೀರ್ ಭಾಷಣದಿಂದ ಪ್ರಚೋದಿತನಾಗಿದ್ದ ಐಸಿಸ್ ಉಗ್ರನೋರ್ವ 2016ರಲ್ಲಿ ಢಾಕಾದ ಮೇಲೆ ದಾಳಿ ಮಾಡಿದ್ದನು. ಈ ಘಟನೆಯಿಂದಾಗಿ ತಕ್ಷಣವೇ ಬಳಿಕ ಝಾಕೀರ್ ಭಾರತ ಬಿಟ್ಟು ಮಲೇಷ್ಯಾಕ್ಕೆ ಹೋಗಿದ್ದ.

    ಯುವಕರನ್ನು ಇಸ್ಲಾಂಗೆ ಬಲವಂತವಾಗಿ ಮತಾಂತರ ಮಾಡುವುದಕ್ಕೆ ಪ್ರೋತ್ಸಾಹ, ಭಯೋತ್ಪಾದಕರನ್ನು ಹೊಗಳುವುದು, ಆತ್ಮಹತ್ಯಾ ಬಾಂಬ್ ದಾಳಿ ಸಮರ್ಥನೆ, ಹಿಂದೂಗಳು, ಹಿಂದೂ ದೇವರುಗಳು ಮತ್ತು ಇತರ ಧರ್ಮಗಳ ವಿರುದ್ಧ ಆಕ್ಷೇಪಾರ್ಹ ಕಾಮೆಂಟ್‌, ಇತರ ಧರ್ಮಗಳಿಗೆ ಅವಮಾನ ಈ ಎಲ್ಲಾ ಆರೋಪಗಳು ಝಾಕೀರ್‌ ನಾಯ್ಕ್‌ ಮೇಲಿದೆ.

    Live Tv
    [brid partner=56869869 player=32851 video=960834 autoplay=true]