Tag: ಐಸಿಸ್ ಉಗ್ರರು

  • ರಾಮೇಶ್ವರಂ ಕೆಫೆಯಲ್ಲಿನ ಬಾಂಬ್ ಬ್ಲಾಸ್ಟ್ ಹಿಂದಿದ್ಯಾ ಐಸಿಸ್ ಕೈವಾಡ?

    ರಾಮೇಶ್ವರಂ ಕೆಫೆಯಲ್ಲಿನ ಬಾಂಬ್ ಬ್ಲಾಸ್ಟ್ ಹಿಂದಿದ್ಯಾ ಐಸಿಸ್ ಕೈವಾಡ?

    – ಸ್ಫೋಟಕ್ಕೆ ಪ್ಲಾಸ್ಟಿಕ್ ಕವರ್ ಬಳಕೆ

    ಬೆಂಗಳೂರು: ಇಡೀ ಸಿಲಿಕಾನ್‌ ಸಿಟಿಯನ್ನೇ ಬೆಚ್ಚಿಬೀಳಿಸಿದ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ನಡೆದ ಬಾಂಬ್‌ ಸ್ಫೋಟದ ಹಿಂದೆ ಐಸಿಸ್‌ ಉಗ್ರರ ಕೈವಾಡ ಇದೆಯಾ ಎಂಬ ಪ್ರಶ್ನೆ ಎದ್ದಿದೆ.

    ಬಾಂಬ್ ಬ್ಲಾಸ್ಟ್ (Bengaluru Bomb Blast) ಆದ ಸ್ಥಳದಲ್ಲಿ ಸಿಕ್ಕ ವಸ್ತುಗಳ ಪರಿಶೀಲನೆ ನಡೆಸಿದಾಗ ಈ ಅನುಮಾನ ಮೂಡಿದೆ. ಮಂಗಳೂರು ಕುಕ್ಕರ್ ಬ್ಲಾಸ್ಟ್, ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಮಾಡಿದ್ದು ಇದೇ ಐಸಿಸ್ ಉಗ್ರರು ಎಂಬುದು ಬಯಲಾಗಿತ್ತು.

    ಬೆಂಗಳೂರಿನ ಚರ್ಚ್ ಸ್ಟ್ರೀಟ್ ನಲ್ಲಿ ಈ ಹಿಂದೆ ನಡೆದಿದ್ದ ಸ್ಪೋಟದ ಮಾದರಿಯಲ್ಲೇ ರಾಮೇಶ್ವರಂ ಕೆಫೆಯಲ್ಲಿ ಸ್ಪೋಟ ಸಂಭವಿಸಿದೆ. ಈ ಸ್ಪೋಟದಲ್ಲಿ ಬಳಕೆಯಾಗಿರುವ ಡಿಟೋನೇಟರ್, ಬ್ಯಾಟರಿ ಸೇರಿ ಹಲವು ವಸ್ತುಗಳು ಕುಕ್ಕರ್ ಬ್ಲಾಸ್ಟ್ ನಂತೆಯೇ ಪತ್ತೆಯಾಗಿದೆ. ಹೀಗಾಗಿ ಐಸಿಸ್ ಸಂಘಟನೆ ಈ ಕೃತ್ಯದ ಹಿಂದೆ ಇರುವ ಶಂಕೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟ ಕೇಸ್‌ – ಓರ್ವ ವಶಕ್ಕೆ

    ಪ್ಲಾಸ್ಟಿಕ್ ಕವರ್ ಬಳಕೆ: ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಟಿಫನ್ಸ್ ಬಾಕ್ಸ್ ಬದಲಿಗೆ ಪ್ಲಾಸ್ಟಿಕ್ ಕವರ್ ಬಳಕೆ ಮಾಡಲಾಗಿದೆ. ಗಟ್ಟಿಯಾದ ಪ್ಲಾಸ್ಟಿಕ್ ಕವರ್ ನಲ್ಲಿ ಶಂಕಿತ ಎರಡು ಕಂಟೇನರ್ ಮಾಡಿದ್ದ. ಈ ಎರಡೂ ಕಂಟೇನರ್ ಬ್ಯಾಗ್ ನ ಒಳಗೆಯೇ ಇತ್ತು. ಒಂದಾದ ಬಳಿಕ ಮತ್ತೊಂದು ಸ್ಫೋಟವಾಗುವಂತೆ ಟೈಂ ಸೆಟ್ಟಿಂಗ್ ಮಾಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.  ಇದನ್ನೂ ಓದಿ: Public TV Exclusive: ಬೆಂಗ್ಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟ ಶಂಕಿತನ ಫೋಟೋ ‌ಲಭ್ಯ

    ಕಪ್ಪು ಕಲರ್ ಬ್ಯಾಗ್ ಅಲ್ಲಿಯೇ ಎರಡು ಕಂಟೇನರ್ ಇಟ್ಟಿದ್ದ. ಇದು ಸ್ಫೋಟಗೊಂಡು ಸಂಪೂರ್ಣವಾಗಿ ಮೇಲ್ಛಾವಣಿಯ ಕಡೆಗೆ ಚದುರಿತ್ತು. ಮೇಲ್ಛಾವಣಿಗೆ ನಟ್, ಬೋಲ್ಟ್ ಗಳೆಲ್ಲ ಹೊಡೆದಿದ್ದವು. ಸುತ್ತಮುತ್ತ ಚದುರದೇ ಇದ್ದ ಕಾರಣ ಭಾರೀ ಅಪಾಯ ತಪ್ಪಿದೆ. ಟಿಫನ್ ಬಾಕ್ಸ್ ನ ಯಾವುದೇ ಮಾದರಿಯೂ ಪತ್ತೆಯಾಗಿಲ್ಲ. ಶಂಕಿತ ಹೊರನಡೆದ ಒಂದು ಗಂಟೆ ಅವಧಿಯಲ್ಲೇ ಬ್ಲಾಸ್ಟ್‌ ಆಗಿದೆ.

  • ಉದಯಪುರ ಕೊಲೆಗಡುಕರಿಂದ ಸರಣಿ ಸ್ಫೋಟಕ್ಕೆ ಸ್ಕೆಚ್!

    ಉದಯಪುರ ಕೊಲೆಗಡುಕರಿಂದ ಸರಣಿ ಸ್ಫೋಟಕ್ಕೆ ಸ್ಕೆಚ್!

    ಜೈಪುರ: ಉದಯಪುರ ಟೈಲರ್ ಕೊಲೆ ಪ್ರಕರಣದ ತನಿಖೆಯ ಆಳಕ್ಕೆ ಇಳಿದಂತೆಲ್ಲಾ ಸ್ಫೋಟಕ ಮತ್ತು ಆತಂಕಕಾರಿ ವಿಚಾರಗಳು ಬಯಲಾಗಿವೆ. ಈ ಕೊಲೆಗಡುಕರು ಮುಂದಿನ ವರ್ಷದ ಮಾರ್ಚ್ ಒಳಗಾಗಿ ಜೈಪುರದಲ್ಲಿ ಸರಣಿ ಬಾಂಬ್ ಸ್ಫೋಟಕ್ಕೆ ಸ್ಕೆಚ್ ಹಾಕಿದ್ದರು ಎಂಬ ಆತಂಕಕಾರಿ ವಿಚಾರ ಬಯಲಾಗಿದೆ.

    ರಾಜಸ್ಥಾನದ ಉದಯಪುರದಲ್ಲಿ ಹಿಂದೂ ಟೈಲರ್ ಕನ್ಹಯ್ಯ ಲಾಲ್‌ನನ್ನು ಹತ್ಯೆ ಮಾಡಿದ್ದ ಪಾತಕಿಗಳು ಅರೆಸ್ಟ್ ಆಗದೇ ಹೋಗಿದ್ದಲ್ಲಿ ಇನ್ನೊಬ್ಬ ವ್ಯಾಪಾರಿಯ ಶಿರಚ್ಛೆದವಾಗುತ್ತಿತ್ತೇನೋ ಎಂಬ ಭೀತಿ ವ್ಯಕ್ತವಾಗಿದೆ. ಈ ಪಾತಕಿಗಳಿಗೆ ಐಸಿಸ್ ಪ್ರೇರಿತ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಸ್ಥೆ ದಾವತ್ ಇ ಇಸ್ಲಾಮಿಯ ಅಂಗಸಂಸ್ಥೆ ಅಲ್ ಸುಫಾ ಸಂಘಟನೆಯ ಜೊತೆ ಈ ಸಂಬಂಧ ಇತ್ತು ಎಂದು ವರದಿಯಾಗಿದೆ. ಇದನ್ನೂ ಓದಿ: ದೇಶೀಯ ಭಯೋತ್ಪಾದನೆಗೆ ಮದರಸಾಗಳೇ ಕಾರಣ – ಹಿಂದೂ ಜಾಗರಣಾ ವೇದಿಕೆ ಕಿಡಿ

    ಕೋಮು ದ್ವೇಷ ಹಬ್ಬಿಸುವುದರಲ್ಲಿ ಮಹ್ಮದ್ ಗೌಸ್ ಎಕ್ಸ್‌ಪರ್ಟ್ ಆಗಿದ್ದ ಎನ್ನಲಾಗಿದ್ದು, ಅವನೊಂದಿಗೆ ಜೊತೆಗೂಡಿ ಇನ್ನಷ್ಟು ಕ್ರೌರ್ಯ ಎಸಗಲು ರಿಯಾಜ್ ಸ್ಕೆಚ್ ಹಾಕಿದ್ದ ಎಂಬುದು ತಿಳಿದುಬಂದಿದೆ. ಮಹ್ಮದ್ ಗೌಸ್ ಪಾಕಿಸ್ತಾನದ ದಾವತ್ ಎ ಇಸ್ಲಾಮಿಯಲ್ಲಿ ಭಯೋತ್ಪಾದನೆಗೆ ಟ್ರೈನಿಂಗ್ ಪಡೆದಿದ್ದು, 2014ರಲ್ಲಿ ಜೋಧ್‌ಪುರದಿಂದ ರಾಂಚಿಗೆ 30 ಮಂದಿ ತೆರಳಿದ್ದರು ಎಂಬುದು ತಿಳಿದುಬಂದಿದೆ.

    ಇವರಿಬ್ಬರೂ ಪಾಕಿಸ್ತಾನದ ಸಂಘಟನೆ ಜೊತೆ ನಿರಂತರ ಸಂಪರ್ಕ ಹೊಂದಿದ್ದು, ಪಾಕಿಸ್ತಾನದ 8 ಫೋನ್ ನಂಬರ್‌ಗಳ ಜೊತೆ ಲಿಂಕ್ ಹೊಂದಿದ್ದರು. ರಿಯಾಜ್ ಸ್ಲೀಪರ್ ಸೆಲ್ ಅಲ್‌ಸುಫಾ ಮುಖ್ಯಸ್ಥನೂ ಆಗಿದ್ದು, ಟೋಂಕ್‌ನಲ್ಲಿ ಸಿಕ್ಕಿಬಿದ್ದ ಐಸಿಸ್ ಉಗ್ರ ಮುಜೀಬ್ ಜೊತೆಯೂ ಸಂಪರ್ಕ ಹೊಂದಿದ್ದರು. ಕನ್ಹಯ್ಯಾ ಹತ್ಯೆಗೆ ಐಸಿಸ್ ಉಗ್ರರ ಪ್ರೇರಣೆ ಇದ್ದು, ಪದೇ ಪದೇ ಐಸಿಸ್ ವೀಡಿಯೋಗಳನ್ನು ನೋಡುತ್ತಿದ್ದರು ಎನ್ನಲಾಗಿದೆ. ಇದೀಗ ಪಾತಕಿಗಳನ್ನು ದೆಹಲಿಗೆ ಕರೆತಂದು ಇನ್ನಷ್ಟು ಮಾಹಿತಿಯನ್ನು ಬಾಯಿಬಿಡಿಸಲು ಎನ್‌ಐಎ ಸಿದ್ಧತೆ ನಡೆಸಿದೆ. ಇದನ್ನೂ ಓದಿ: ಕನ್ಹಯ್ಯ ಲಾಲ್ ಕುಟುಂಬಕ್ಕೆ ನೆರವು – 24 ಗಂಟೆಯಲ್ಲಿ ಬಂತು 1 ಕೋಟಿ

    ಉದಯಪುರ ಘಟನೆಯನ್ನು ಪಾಕಿಸ್ತಾನದ ತೆಹ್ರೀಕ್ ಇ ಲಬ್ದೇಕ್ ಸೇರಿದಂತೆ ಹಲವು ಮತಾಂಧ ಸಂಸ್ಥೆಗಳು ಶ್ಲಾಘಿಸಿವೆ. ಧರ್ಮಾಂಧ ಹಂತಕರನ್ನು ಅಭಿನಂದಿಸಿವೆ. ಸರಣಿ ಟ್ವೀಟ್ ಮೂಲಕ ಖುಷಿ ಹಂಚಿಕೊಂಡಿವೆ. ಇದಕ್ಕೆ ಭಾರತದ ಹಿಂದೂ ಸಂಘಟನೆಗಳು ಭಾರೀ ಆಕ್ರೋಶ ವ್ಯಕ್ತಪಡಿಸಿವೆ.

    ಇಂದು ಕನ್ಹಯ್ಯ ಲಾಲ್ ನಿವಾಸಕ್ಕೆ ಭೇಟಿ ನೀಡಿದ ರಾಜಸ್ಥಾನದ ಸಿಎಂ ಅಶೋಕ್ ಗೆಹ್ಲೋಟ್, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ, 50 ಲಕ್ಷ ರೂ. ಪರಿಹಾರ ನೀಡಿದ್ದಾರೆ. ಇತ್ತ ಬಿಜೆಪಿ ಕರೆಗೆ ಓಗೊಟ್ಟ ದೇಶದ ಜನತೆ 1 ಕೊಟಿ ರೂ.ಗೂ ಹೆಚ್ಚು ನೆರವನ್ನು ಸಂಗ್ರಹಿಸಿ, ಕನ್ಹಯ್ಯ ಕುಟುಂಬಕ್ಕೆ ನೀಡಿದೆ. ಜೈಪುರ, ಉದಯಪುರದಲ್ಲಿ ಭಾರೀ ಪ್ರತಿಭಟನೆಗಳು ಮುಂದುವರೆದಿವೆ.

    Live Tv