Tag: ಐಸಿಸಿ ಶ್ರೇಯಾಂಕ ಪಟ್ಟಿ

  • ವೃತ್ತಿ ಜೀವನದ ಶ್ರೇಷ್ಠ ಟೆಸ್ಟ್ ರ‍್ಯಾಂಕಿಂಗ್‌ ಸ್ಥಾನಕ್ಕೇರಿದ ರೋಹಿತ್

    ವೃತ್ತಿ ಜೀವನದ ಶ್ರೇಷ್ಠ ಟೆಸ್ಟ್ ರ‍್ಯಾಂಕಿಂಗ್‌ ಸ್ಥಾನಕ್ಕೇರಿದ ರೋಹಿತ್

    ದುಬೈ: ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕೆ ಇಳಿದು ಎರಡೂ ಇನ್ನಿಂಗ್ಸ್ ಗಳಲ್ಲಿ ಶತಕ ಸಿಡಿಸಿದ್ದ ಟೀ ಇಂಡಿಯಾ ಆಟಗಾರ ರೋಹಿತ್ ಶರ್ಮಾ, ಐಸಿಸಿ ಬಿಡುಗಡೆ ಮಾಡಿರುವ ಶ್ರೇಯಾಂಕ ಪಟ್ಟಿಯಲ್ಲಿ ಭಾರೀ ಜಿಗಿತ ಕಂಡಿದ್ದಾರೆ. ಅಲ್ಲದೇ ವೃತ್ತಿ ಜೀವನದ ಶ್ರೇಷ್ಠ ಟೆಸ್ಟ್ ರ‍್ಯಾಂಕಿಂಗ್‌ ಸ್ಥಾನ ಪಡೆದ ಸಾಧನೆಯನ್ನು ಮಾಡಿದ್ದಾರೆ.

    ಐಸಿಸಿ ಬಿಡುಗಡೆ ಮಾಡಿರುವ ಶ್ರೇಯಾಂಕ ಪಟ್ಟಿಯಲ್ಲಿ 36 ಸ್ಥಾನಗಳ ಜಿಗಿತ ಕಂಡ ರೋಹಿತ್ ಶರ್ಮಾ 17ನೇ ಸ್ಥಾನವನ್ನು ಪಡೆದಿದ್ದಾರೆ. ವಿಶಾಖಪಟ್ಟಣಂನದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ 176 ಮತ್ತು 127 ರನ್ ಗಳೊಂದಿಗೆ ಶತಕ ಸಿಡಿಸಿದ್ದ ರೋಹಿತ್ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದರು. ಟೀಂ ಇಂಡಿಯಾ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0ಯೊಂದಿಗೆ ಮುನ್ನಡೆ ಪಡೆಯಿತು.

    ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ದ್ವಿಶತಕ ಸಾಧನೆ ಮಾಡಿದ್ದ ಕನ್ನಡಿಗ ಮಯಾಂಕ್ ಅಗರ್ವಾಲ್ 25ನೇ ಸ್ಥಾನವನ್ನು ಪಡೆದಿದ್ದಾರೆ. ಆದರೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಶ್ರೇಯಾಂಕ ಪಟ್ಟಿಯ ಅಂಕಗಳಲ್ಲಿ ಇಳಿಮುಖ ಕಂಡಿದ್ದಾರೆ. 2018 ರ ಬಳಿಕ ಕೊಹ್ಲಿ ಮೊದಲ ಬಾರಿಗೆ 900 ಅಂಕಗಳಿಗಿಂತ ಕಡಿಮೆ ಪಡೆದಿದ್ದು, 899 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. 38 ಅಂಕಗಳು ಹೆಚ್ಚು ಹೊಂದಿರುವ ಆಸೀಸ್ ಆಟಗಾರ ಸ್ಮಿತ್ ಮೊದಲ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಉಳಿದಂತೆ ಟೆಸ್ಟ್ ಬೌಲಿಂಗ್ ನಲ್ಲಿ ಟೀಂ ಇಂಡಿಯಾ ಅನುಭವಿ ಸ್ಪಿನ್ನರ್ ಆರ್.ಅಶ್ವಿನ್ 10ನೇ ಸ್ಥಾನ ಪಡೆದಿದ್ದಾರೆ.

  • ಐಸಿಸಿ ಶ್ರೇಯಾಂಕ ಪಟ್ಟಿ ಜೀವಮಾನ ಶ್ರೇಷ್ಠ ಸಾಧನೆ ಮಾಡಿದ ಕೊಹ್ಲಿ, ಕುಲ್‍ದೀಪ್

    ಐಸಿಸಿ ಶ್ರೇಯಾಂಕ ಪಟ್ಟಿ ಜೀವಮಾನ ಶ್ರೇಷ್ಠ ಸಾಧನೆ ಮಾಡಿದ ಕೊಹ್ಲಿ, ಕುಲ್‍ದೀಪ್

    ದುಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದು, 911 ಅಂಕಗಳೊಂದಿಗೆ ಜೀವಮಾನ ಶ್ರೇಷ್ಠ ಸಾಧನೆ ಮಾಡಿದ್ದಾರೆ.

    ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯಲ್ಲಿ 75, 45, 71 ರನ್ ಗಳಿಸುವ ಮೂಲಕ ಕೊಹ್ಲಿ 2 ಅಂಕಗಳು ಮಾತ್ರ ಪಡೆಯಲು ಸಾಧ್ಯವಾಗಿದೆ. ಇನ್ನು ಬೌಲಿಂಗ್ ನಲ್ಲಿ ಟೀಂ ಇಂಡಿಯಾ ಬೌಲರ್ ಕುಲ್‍ದೀಪ್ ಯಾದವ್ ಮೊದಲ ಬಾರಿಗೆ ಟಾಪ್ 10 ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇಂಗ್ಲೆಂಡ್ ವಿರುದ್ಧ ಮೊದಲ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ತೋರಿದ್ದ ಯಾದವ್ 6 ವಿಕೆಟ್ ಮಿಂಚಿದ್ದರು. ಅಲ್ಲದೇ ಸರಣಿಯಲ್ಲಿ ಒಟ್ಟಾರೆ 9 ವಿಕೆಟ್ ಪಡೆಯುವ ಮೂಲಕ ಶ್ರೇಯಾಂಕ ಪಟ್ಟಿಯಲ್ಲಿ 6ನೇ ಸ್ಥಾನ ಪಡೆದಿದ್ದಾರೆ. ಇಂಗ್ಲೆಂಡ್ ವಿರುದ್ಧ ಸರಣಿ ಮುಕ್ತಾಯದ ಬೆನ್ನಲ್ಲೇ ಐಸಿಸಿ ಶ್ರೇಯಾಂಕ ಪಟ್ಟಿ ಪ್ರಕಟವಾಗಿದೆ.

    ಬೌಲಿಂಗ್ ಪಟ್ಟಿಯಲ್ಲಿ ಟೀಂ ಇಂಡಿಯಾ ಆಟಗಾರ ಜಸ್ಪ್ರೀತ್ ಬುಮ್ರಾ ನಂ.01 ಸ್ಥಾನದಲ್ಲಿದ್ದು, ವಿಶೇಷವಾಗಿ ಟಾಪ್ 10 ಬೌಲರ್ ಗಳಲ್ಲಿ ಐವರು ಸ್ಪೀನ್ ಬೌಲರ್ ಗಳಿದ್ದಾರೆ. ರಶೀದ್ ಖಾನ್ (2ನೇ ಸ್ಥಾನ), ಇಮ್ರಾನ್ ತಹೀರ್ (7ನೇ ಸ್ಥಾನ), ಅದಿಲ್ ರಶೀದ್ (8ನೇ ಸ್ಥಾನ) ಹಾಗೂ ಯಜುವೇಂದ್ರ ಚಹಲ್ (10ನೇ ಸ್ಥಾನ) ಪಟ್ಟಿಯಲ್ಲಿರುವ ಸ್ಪಿನ್ನರ್ ಗಳಾಗಿದ್ದಾರೆ.

    ಇಂಗ್ಲೆಂಡ್ ಬ್ಯಾಟ್ಸ್ ಮನ್ ಸತತ ಎರಡು ಶತಕ ಗಳಿಸಿ ಬ್ಯಾಟಿಂಗ್ ನಲ್ಲಿ 2ನೇ ಸ್ಥಾನಕ್ಕೆ ಜಿಗಿದ್ದು, ಪಾಕಿಸ್ತಾನದ ಬಾಬರ್ ಅಜಮ್ 3ನೇ ಸ್ಥಾನಕ್ಕೆ ಕುಸಿದಿದ್ದಾರೆ. ಇನ್ನು ಐಸಿಸಿ ಆಲ್ ರೌಂಡರ್ ಪಟ್ಟಿಯಲ್ಲಿ ಯಾವುದೇ ಬದಲಾವಣೆ ಆಗದೆ ಶಕೀಬ್ ಹಲ್ ಹಸನ್ ಮೊದಲ ಸ್ಥಾನದಲ್ಲಿ ಮುಂದುವರೆದಿದ್ದಾರೆ.