Tag: ಐಸಿಸಿ ಮಹಿಳಾ ಏಕದಿನ ವಿಶ್ವಕಪ್ 2022

  • ಏಕದಿನ ಕ್ರಿಕೆಟ್‍ನಲ್ಲಿ 250 ವಿಕೆಟ್ ಪಡೆದು ದಾಖಲೆ ಬರೆದ ಜೂಲನ್ ಗೋಸ್ವಾಮಿ

    ಏಕದಿನ ಕ್ರಿಕೆಟ್‍ನಲ್ಲಿ 250 ವಿಕೆಟ್ ಪಡೆದು ದಾಖಲೆ ಬರೆದ ಜೂಲನ್ ಗೋಸ್ವಾಮಿ

    ವೆಲ್ಲಿಂಗಟನ್: ಟೀಂ ಇಂಡಿಯಾದ ಅನುಭವಿ ವೇಗದ ಬೌಲರ್ ಜೂಲನ್ ಗೋಸ್ವಾಮಿ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ 2022ರ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಏಕದಿನ ಕ್ರಿಕೆಟ್‍ನಲ್ಲಿ 250 ವಿಕೆಟ್‍ಗಳನ್ನು ಪಡೆದು ದಾಖಲೆ ನಿರ್ಮಿಸಿದ್ದಾರೆ.

    ಜೂಲನ್, ಇಂಗ್ಲೆಂಡ್‍ನ ಆರಂಭಿಕ ಆಟಗಾರ್ತಿ ಟಮ್ಮಿ ಬ್ಯೂಮಾಂಟ್ ಅವರನ್ನು ಎಲ್‍ಬಿಡಬ್ಲ್ಯೂ ಮಾಡುವ ಮೂಲಕ ಈ ಮೈಲಿಗಲ್ಲನ್ನು ನೆಟ್ಟರು. ಏಕದಿನ ಮಾದರಿ ಪಂದ್ಯದಲ್ಲಿ ಜೂಲನ್ 250 ವಿಕೆಟ್ ಪಡೆದರೆ, ಈ ಪಟ್ಟಿಯಲ್ಲಿ ಜೂಲನ್ ನಂತರ ಆಸ್ಟ್ರೇಲಿಯಾದ ಕ್ಯಾಥರಿನ್ ಫಿಟ್ಜ್‍ಪ್ಯಾಟ್ರಿಕ್ 180 ವಿಕೆಟ್ ಮತ್ತು ವೆಸ್ಟ್ ಇಂಡೀಸ್‍ನ ಅನಿಸಾ ಮೊಹಮ್ಮದ್ 180 ವಿಕೆಟ್‍ಗಳೊಂದಿಗೆ ಜಂಟಿ ಎರಡನೇ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ಶಬ್ನಿಮ್ ಇಸ್ಮಾಯಿಲ್ ಮತ್ತು ಇಂಗ್ಲೆಂಡ್‍ನ ಕ್ಯಾಥರೀನ್ ಬ್ರಂಟ್ ಕ್ರಮವಾಗಿ 168 ಮತ್ತು 164 ವಿಕೆಟ್‍ಗಳನ್ನು ಪಡೆದು ನಂತರದ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ಭದ್ರತಾ ಲೋಪ – ದೆಹಲಿ ಕ್ಯಾಪಿಟಲ್ಸ್ ತಂಡದ ಬಸ್ ಮೇಲೆ ದಾಳಿ

    ಜೂಲನ್, ಆಸ್ಟ್ರೇಲಿಯಾದ ಲಿನ್ ಫುಲ್‍ಸ್ಟನ್ ಅವರನ್ನು ಹಿಂದಿಕ್ಕಿ ಮಹಿಳಾ ವಿಶ್ವಕಪ್‍ನಲ್ಲಿ 40 ವಿಕೆಟ್‍ಗಳನ್ನು ಪಡೆದ ಮೊದಲ ಕ್ರಿಕೆಟ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಆದಾಗ್ಯೂ, ಇಂಗ್ಲೆಂಡ್ ವಿರುದ್ಧ ಭಾರತ ತಂಡದ ಮೊದಲು ಬ್ಯಾಟಿಂಗ್ ಮಾಡಿದ ನಂತರ ಕೇವಲ 134 ರನ್‍ಗಳಿಗೆ ಆಲೌಟ್ ಆಗುವುದರೊಂದಿಗೆ ನಿರಾಸೆ ಮೂಡಿಸಿತು. ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ ವನಿತೆಯರು ಇನ್ನೂ 112 ಎಸೆತಗಳು ಬಾಕಿ ಇರುವಂತೆಯೇ ನಾಲ್ಕು ವಿಕೆಟ್‍ಗಳ ಜಯ ಸಾಧಿಸಿದರು. ಇದನ್ನೂ ಓದಿ: IPL 2022 – ಡೆಲ್ಲಿ ತಂಡ ಸೇರಿಕೊಂಡ ಶೇನ್ ವಾಟ್ಸನ್

    ಬೇ ಓವಲ್‍ನಲ್ಲಿ 2022ರ ಐಸಿಸಿ ಮಹಿಳಾ ವಿಶ್ವಕಪ್‍ನ ಗೆಲ್ಲಲೇಬೇಕಾದ ಲೀಗ್ ಪಂದ್ಯದಲ್ಲಿ ಭಾರತವು ಸೋಲನ್ನು ಅನುಭವಿಸಿದೆ. ಭಾರತದ ಬ್ಯಾಟರ್‌ಗಳಿಗೆ ಇಂಗ್ಲೆಂಡ್ ತಂಡದ ಬೌಲರ್ ಚಾರ್ಲಿ ಡಿನ್ ಕಂಟಕವಾದರು. 8.2 ಓವರ್‌ಗಳನ್ನು ಎಸೆದ ಚಾರ್ಲಿ ಡಿನ್, ಕೇವಲ 23 ರನ್ ನೀಡಿ 4 ವಿಕೆಟ್‍ಗಳನ್ನು ಪಡೆದು ಮಿಂಚಿದರು.

  • ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ಅನುಷ್ಕಾ ಶರ್ಮಾ ಶುಭ ಹಾರೈಕೆ

    ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ಅನುಷ್ಕಾ ಶರ್ಮಾ ಶುಭ ಹಾರೈಕೆ

    ಮುಂಬೈ: ಇಂದು ಬೆಳಗ್ಗೆ ನಡೆದ ಮೊದಲ ಭಾರತ-ಪಾಕಿಸ್ತಾನ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಭಾರತ ತಂಡವು ಪಾಕಿಸ್ತಾನ ವಿರುದ್ಧ ಜಯಭೇರಿ ಬಾರಿಸಿದೆ. ಈ ಹಿನ್ನೆಲೆ ಮಹಿಳಾ ಕ್ರಿಕೆಟ್ ತಂಡಕ್ಕೆ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ಶುಭ ಹಾರೈಸಿದ್ದಾರೆ.

    ನೀಲಿ ಬಣ್ಣದ ಜೆರ್ಸಿ ಹೊಂದಿರುವ ಮಹಿಳಾ ಆಟಗಾರ್ತಿಯರೇ ಇಡೀ ರಾಷ್ಟ್ರವೇ ನಿಮ್ಮೊಂದಿಗಿದೆ. ವಿಶ್ವಕಪ್‍ಗಾಗಿ ನಿಮಗೆ ಶುಭ ಹಾರೈಸುತ್ತೇನೆ ಎಂದು ಬರೆದ ಪೋಸ್ಟ್‌ವೊಂದನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಮಹಿಳಾ ವಿಶ್ವಕಪ್ 2022- ಪಾಕ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ

    ಈಗಾಗಲೇ ಅನುಷ್ಕಾ ಚಕ್ದಾ ಎಕ್ಸ್‌ಪ್ರೇಸ್‌ ಚಿತ್ರಕ್ಕಾಗಿ ಕ್ರಿಕೆಟರ್ ಆಗಲು ತಯಾರಿ ನಡೆಸಿದ್ದಾರೆ. ಕೆಲವು ದಿನಗಳ ಹಿಂದೆ, ಅವರು ನೆಟ್ಸ್‌ನಲ್ಲಿ ಬೌಲಿಂಗ್ ಅಭ್ಯಾಸ ಮಾಡುತ್ತಿದ್ದ ಒಂದು ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದನ್ನೂ ಓದಿ:  ಐಸಿಸಿ ಮಹಿಳಾ ಏಕದಿನ ವಿಶ್ವಕಪ್ 2022: ತೆಂಡೂಲ್ಕರ್, ಜಾವೇದ್ ಪಟ್ಟಿಗೆ ಸೇರಿದ ಮಿಥಾಲಿ ರಾಜ್

    ಈ ಚಿತ್ರದ ಮೂಲಕ ಅನುಷ್ಕಾ ತಮ್ಮ ಗರ್ಭಾವಸ್ಥೆಯ ನಂತರ ಮತ್ತೆ ಚಲನಚಿತ್ರಗಳಲ್ಲಿ ನಟಿಸಲು ಮರಳುತ್ತಿದ್ದಾರೆ. ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ಜೂಲನ್ ಅವರು ಅತಿ ಹೆಚ್ಚು ವಿಕೆಟ್ ಪಡೆದ ವಿಶ್ವದಾಖಲೆಯನ್ನು ಹೊಂದಿದ್ದಾರೆ.

     

    View this post on Instagram

     

    A post shared by AnushkaSharma1588 (@anushkasharma)

    ಭಾರತಕ್ಕಾಗಿ ಕ್ರಿಕೆಟ್ ಆಡುವ ತನ್ನ ಕನಸನ್ನು ನನಸಾಗಿಸಲು ಸ್ತ್ರೀ ದ್ವೇಷದ ರಾಜಕೀಯವು ಒಡ್ಡಿದ ಅಡೆತಡೆಗಳ ಮಧ್ಯೆಯೂ ಅವರು ತಮ್ಮ ಗುರಿಯನ್ನು ತಲುಪಲು ಯಶ್ವಸಿಯಾಗಿದ್ದರು. ಕೊನೆಗೆ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿಯಾಗಿ ಆಯ್ಕೆಯಾಗಿ, ದೇಶದ ಎಷ್ಟೋ ಮಹತ್ವಾಕಾಂಕ್ಷಿ ಕ್ರಿಕೆಟಿಗರಿಗೆ ಮಾದರಿಯಾಗಿದ್ದರು.

    ಬಾಲಿವುಡ್‍ನ ಎಷ್ಟೋ ಪ್ರಭಾವಿ ನಟರಲ್ಲಿ ಅನುಷ್ಕಾ ಕೂಡಾ ಒಬ್ಬರಾಗಿದ್ದಾರೆ. ಅವರು ಸುಲ್ತಾನ್, ಪಿಕೆ, ಮತ್ತು ಸಂಜು ಅಂತಹ ಖ್ಯಾತ ಚಿತ್ರಗಳಲ್ಲಿ ನಟಿಸಿದ್ದಾರೆ.

  • ಐಸಿಸಿ ಮಹಿಳಾ ಏಕದಿನ ವಿಶ್ವಕಪ್ 2022: ತೆಂಡೂಲ್ಕರ್, ಜಾವೇದ್ ಪಟ್ಟಿಗೆ ಸೇರಿದ ಮಿಥಾಲಿ ರಾಜ್

    ಐಸಿಸಿ ಮಹಿಳಾ ಏಕದಿನ ವಿಶ್ವಕಪ್ 2022: ತೆಂಡೂಲ್ಕರ್, ಜಾವೇದ್ ಪಟ್ಟಿಗೆ ಸೇರಿದ ಮಿಥಾಲಿ ರಾಜ್

    ನವದೆಹಲಿ: ಭಾರತದ ಏಕದಿನ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಭಾನುವಾರ 6 ಏಕದಿನ ವಿಶ್ವಕಪ್‍ಗಳಲ್ಲಿ ಆಡಿದ ಮೂರನೇ ಮಹಿಳಾ ಕ್ರಿಕೆಟಿಗರಾಗಿ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪ್ರಸ್ತುತ ನ್ಯೂಜಿಲ್ಯಾಂಡ್‍ನ ಮೌಂಟ್ ಮೌಂಗನುಯಿಯಲ್ಲಿ ನಡೆಯುತ್ತಿರುವ ಮಹಿಳಾ ವಿಶ್ವಕಪ್‍ನಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ ಮೈದಾನಕ್ಕಿಳಿದಾಗ ಅವರು ಈ ಸಾಧನೆ ಮಾಡಿದ್ದಾರೆ.

    ಮಿಥಾಲಿ ಅವರು ಸಚಿನ್ ತೆಂಡೂಲ್ಕರ್ ಮತ್ತು ಜಾವೇದ್ ಮಿಯಾಂದಾದ್ ನಂತರ ಆರು ಏಕದಿನ ವಿಶ್ವಕಪ್‍ಗಳಲ್ಲಿ ಆಡಿದ ಮೂರನೇ ಮಹಿಳಾ ಕ್ರಿಕೆಟಿಗರಾಗಿದ್ದಾರೆ. ಇದರೊಂದಿಗೆ ಆರು ಏಕದಿನ ವಿಶ್ವಕಪ್‍ಗಳಲ್ಲಿ ಆಡಿದ ಮೊದಲ ಮಹಿಳಾ ಕ್ರಿಕೆಟ್ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

    ಮಿಥಾಲಿ ಅವರು 2000ನೇ ಇಸವಿಯ ಏಕದಿನ ವಿಶ್ವಕಪ್ ಮೂಲಕ ಪಾದಾರ್ಪಣೆ ಮಾಡಿದರು. 2005, 2009, 2013, 2017, ಮತ್ತು 2022ನೇ ವಿಶ್ವಕಪ್‍ಗಳಲ್ಲಿ ಭಾರತ ತಂಡದ ಪರ ಆಡಿ ಈ ಸಾಧನೆ ಮಾಡಿದ್ದಾರೆ. ಇದರ ಮಧ್ಯೆ ನ್ಯೂಜಿಲ್ಯಾಂಡ್‍ನ ದೆಬ್ಬೀ ಹಾಕ್ಲೆ ಹಾಗೂ ಇಂಗ್ಲೆಂಡ್‍ನ ಚಾರ್ಲೋಟ್ ಎಡ್ವಡ್ರ್ಸ್ ಅವರ ದಾಖಲೆಯನ್ನು ಸಹ ಅವರು ಮುರಿದಿದ್ದಾರೆ.

    ಭಾರತದ ಕ್ರಿಕೆಟ್ ದೇವರಾದ ಸಚಿನ ತಂಡೂಲ್ಕರ್ ಅವರು, ಈ ಹಿಂದೆ 1992, 1996, 1999, 2003, 2007, ಮತ್ತು 2011ರ ವಿಶ್ವಕಪ್‍ನಲ್ಲಿ ಆಡಿ ಈ ಸಾಧನೆ ಮಾಡಿದ್ದರು.