Tag: ಐಸಿಸಿ ಏಕದಿನ ವಿಶ್ವಕಪ್

  • 69 ರನ್‌ಗಳ ಭರ್ಜರಿ ಜಯ – ಇಂಗ್ಲೆಂಡ್ ಶಾಕ್, ಅಫ್ಘಾನ್ ರಾಕ್

    69 ರನ್‌ಗಳ ಭರ್ಜರಿ ಜಯ – ಇಂಗ್ಲೆಂಡ್ ಶಾಕ್, ಅಫ್ಘಾನ್ ರಾಕ್

    ನವದೆಹಲಿ: ರಹ್ಮನುಲ್ಲಾ ಗುರ್ಬಾಝ್‌ ಬೆಂಕಿ ಬ್ಯಾಟಿಂಗ್‌ ಹಾಗೂ ಮುಜೀಬ್ ಉರ್ ರೆಹಮಾನ್, ರಶೀದ್ ಖಾನ್ ಮಾರಕ ಬೌಲಿಂಗ್‌ ದಾಳಿಯಿಂದಾಗಿ ಇಂಗ್ಲೆಂಡ್‌ ವಿರುದ್ಧ ಆಫ್ಘಾನಿಸ್ತಾನ (England vs Afghanistan) 69 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಆ ಮೂಲಕ ಐತಿಹಾಸಿಕ ಗೆಲುವು ದಾಖಲಿಸಿದೆ.

    ಇಲ್ಲಿನ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ (Cricket World Cup 2023) 13ನೇ ಪಂದ್ಯದಲ್ಲಿ ಟಾಸ್‌ ಗೆದ್ದಿದ್ದ ಇಂಗ್ಲೆಂಡ್‌ (England) ಫೀಲ್ಡಿಂಗ್‌ ಆಯ್ದುಕೊಂಡಿತ್ತು. ಉತ್ತಮ ಬ್ಯಾಟಿಂಗ್‌ ಪ್ರದರ್ಶನದೊಂದಿಗೆ ಆಂಗ್ಲ ಬೌಲರ್‌ಗಳನ್ನು ಚೆಂಡಾಡಿದ ಆಫ್ಘಾನಿಸ್ತಾನ (Afghanistan) ತಂಡ ಆಲೌಟ್‌ ಆಗಿ ಇಂಗ್ಲೆಂಡ್‌ಗೆ 285 ರನ್‌ಗಳ ಗುರಿ ನೀಡಿತ್ತು. ಗುರಿ ಬೆನ್ನತ್ತಿದ ಇಂಗ್ಲೆಂಡ್‌ 40.3 ಓವರ್‌ಗಳಲ್ಲೇ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 215 ರನ್‌ಗಳನ್ನಷ್ಟೇ ಗಳಿಸಿ ಸೋಲನುಭವಿಸಿತು. ಇದನ್ನೂ ಓದಿ: ಹೈವೋಲ್ಟೇಜ್ ಪಂದ್ಯದ ಬಳಿಕ ಪಾಕ್ ನಾಯಕನಿಗೆ ಜೆರ್ಸಿ ಗಿಫ್ಟ್ ಮಾಡಿದ ಕೊಹ್ಲಿ: ವಾಸಿಂ ಅಕ್ರಮ್ ಗರಂ

    ಆರಂಭಿಕರಾಗಿ ಕಣಕ್ಕಿಳಿದಿದ್ದ ಜಾನಿ ಬೈರ್‌ಸ್ಟೋವ್‌ ಕೇವಲ 2 ರನ್‌ ಗಳಿಸಿ ಎಲ್‌ಬಿಡಬ್ಲ್ಯೂ ಆಗಿ ಇಂಗ್ಲೆಂಡ್‌ಗೆ ಆರಂಭಿಕ ಆಘಾತ ನೀಡಿದರು. ನಂತರ ಜೊತೆಯಾದ ಡೇವಿಡ್ ಮಲನ್ ಮತ್ತು ಜೋ ರೂಟ್‌ ಜೊತೆಯಾಗಿ ತಂಡಕ್ಕೆ ಚೇತರಿಕೆ ನೀಡಲು ಯತ್ನಿಸಿದರು. ಡೇವಿಡ್ ಮಲನ್ 32 ರನ್‌ ಗಳಿಸಿ (39 ಬಾಲ್‌, 4 ಫೋರ್‌) ಕ್ಲೀನ್‌ ಬೌಲ್ಡ್‌ ಆದರು. ಜೋ ರೂಟ್‌ ಕೇವಲ 11 ರನ್‌ ಗಳಿಸಿ ಪೆವಿಲಿಯನ್‌ ಸೇರಿದರು. ಈ ವೇಳೆ ತಂಡಕ್ಕೆ ಗೆಲುವಿನ ಭರವಸೆ ಮೂಡಿಸಿದ್ದ ಹ್ಯಾರಿ ಬ್ರೂಕ್‌ ಮೈದಾನದಲ್ಲಿ 61 ಬಾಲ್‌ಗಳಿಗೆ 66 ರನ್‌ ಗಳಿಸಿ (7 ಫೋರ್‌, 1 ಸಿಕ್ಸ್‌) ಉತ್ತಮ ಪ್ರದರ್ಶನ ನೀಡಿದರು. ಆದರೆ ಅವರಿಗೆ ಜೊತೆಯಾಗಿ ಸಾಥ್‌ ಕೊಡುವಲ್ಲಿ ಇತರೆ ಆಟಗಾರರು ವಿಫಲರಾದರು. ಆಫ್ಘನ್ನರ ಸ್ಪಿನ್‌ ದಾಳಿಗೆ ಆಂಗ್ಲ ಬ್ಯಾಟರ್‌ಗಳು ತರಗೆಲೆಯಂತೆ ಉದುರಿ ಹೋದರು.

    ಪರಿಣಾಮವಾಗಿ ಇಂಗ್ಲೆಂಡ್‌ ತಂಡದ ನಾಯಕ ಜೋಸ್‌ ಬಟ್ಲರ್‌ ಕೇವಲ 9 ರನ್‌ ಗಳಿಸಿ ಔಟಾದರು. ಲಿಯಾಮ್ ಲಿವಿಂಗ್ಸ್ಟೋನ್ 10 ರನ್‌ ಗಳಿಸಿ ಪೆವಿಲಿಯನ್‌ ಸೇರಿದರು. ಸ್ಯಾಮ್ ಕರ್ರನ್ ಕೂಡ ಕೇವಲ 10 ರನ್‌ ಗಳಿಸಲಷ್ಟೇ ಶಕ್ತರಾದರು. ಕ್ರಿಸ್ ವೋಕ್ಸ್ 9 ರನ್‌ಗಳಿಸಿ ಔಟಾದರು. ಆದಿಲ್ ರಶೀದ್ 20 ರನ್‌, ಮಾರ್ಕ್ ವುಡ್ 18 ರನ್‌ ಗಳಿಸಿ ಪೆವಿಲಿಯನ್‌ನತ್ತ ನಡೆದರು. ಇದನ್ನೂ ಓದಿ: ಸಿಕ್ಸ್‌ ಸಿಡಿಸಿ ದಾಖಲೆ ಬರೆದ ರೋಹಿತ್‌ ಶರ್ಮಾ

    ಇಂಗ್ಲೆಂಡ್‌ ವಿರುದ್ಧ ಆಫ್ಘನ್‌ ಬೌಲರ್‌ಗಳು ಅಮೋಘ ಪ್ರದರ್ಶನ ತೋರಿದರು. ಮುಜೀಬ್ ಉರ್ ರೆಹಮಾನ್ ಹಾಗೂ ರಶೀದ್ ಖಾನ್ 3 ವಿಕೆಟ್‌ ಕಿತ್ತು ಗಮನ ಸೆಳೆದರು. ಮೊಹಮ್ಮದ್ ನಬಿ 2, ಫಜಲ್ಹಕ್ ಫಾರೂಕಿ ಹಾಗೂ ನವೀನ್-ಉಲ್-ಹಕ್ ತಲಾ 1 ಕಿತ್ತು ತಂಡದ ಗೆಲುವಿಗೆ ಸಹಕಾರಿಯಾದರು.

    ಗುರ್ಬಾಝ್‌ ಬೆಂಕಿ ಬ್ಯಾಟಿಂಗ್‌
    ಟಾಸ್ ಗೆದ್ದ ಇಂಗ್ಲೆಂಡ್‌ ತಂಡ ಅಫ್ಘಾನಿಸ್ತಾನಕ್ಕೆ ಬ್ಯಾಟಿಂಗ್ ಆಹ್ವಾನ ನೀಡಿತು. ಬ್ಯಾಟಿಂಗ್‌ಗೆ ಇಳಿದ ಅಫ್ಘಾನ್ ಭರ್ಜರಿ ಆರಂಭ ಪಡೆಯಿತು. ರಹ್ಮನುಲ್ಲಾ ಗುರ್ಬಾಝ್ ಮತ್ತು ಇಬ್ರಾಹಿಂ ಝರ್ದಾನ್ ತಂಡಕ್ಕೆ 114 ರನ್‌ಗಳ ಉತ್ತಮ ಜೊತೆಯಾಟ ನೀಡಿದರು. 16.4 ಓವರ್‌ನಲ್ಲಿ ಸ್ಪಿನ್ನರ್ ಆದಿಲ್ ರಶೀದ್ ಬೌಲಿಂಗ್‌ನಲ್ಲಿ ಇಬ್ರಾಹಿಂ ಝರ್ದಾನ್ (28) ಔಟ್ ಆಗುವುದರೊಂದಿಗೆ ಅಫ್ಘಾನ್ ತನ್ನ ಮೊದಲ ವಿಕೆಟ್ ಕಳೆದುಕೊಂಡಿತು. ರಹ್ಮನುಲ್ಲಾ ಗುರ್ಬಾಝ್ 57 ಎಸೆತಗಳಲ್ಲಿ 80 ರನ್ ಸಿಡಿಸಿ (8 ಬೌಂಡರಿ, 4 ಸಿಕ್ಸರ್) ಸಿಡಿಸಿ ಆಂಗ್ಲರನ್ನು ಚೆಂಡಾಡಿದರು. ನಂತರ ಗುರ್ಬಾಝ್‌ ರನ್‌ಔಟ್‌ ಆದರು. ಇದನ್ನೂ ಓದಿ: Record… Record… Record: ಇಂಡೋ-ಪಾಕ್‌ ಕದನದಲ್ಲಿ ಎಲ್ಲಾ ದಾಖಲೆ ಉಡೀಸ್‌!

    ಬಳಿಕ ಬಂದ ಯಾವೊಬ್ಬ ಬ್ಯಾಟರ್ ಕೂಡ ಇಂಗ್ಲೆಂಡ್‌ ಬಲಿಷ್ಟ ಬೌಲಿಂಗ್ ಎದುರು ಹೆಚ್ಚು ಸಮಯ ಕ್ರೀಸಿನಲ್ಲಿ ನಿಲ್ಲಲು ಸಾಧ್ಯವಾಗದೇ ದಿಢೀರ್ ಕುಸಿತ ಕಂಡಿತು. ರಹಮತ್ ಶಾ 3 ರನ್ ಗಳಿಸಿ ಆದಿಲ್ ರಶೀದ್ ಬೌಲಿಂಗ್‌ನಲ್ಲಿ ಸ್ಟಂಪ್ ಔಟ್ ಆದರೆ, ನಾಯಕ ಹಶ್ಮತುಲ್ಲಾ ಶಾಹಿದಿ 14 ರನ್ ಗಳಿಸಿ ಜೊ ರೂಟ್ ಬೌಲಿಂಗ್‌ನಲ್ಲಿ ಬೌಲ್ಡ್ ಆಗಿ ನಿರಾಸೆ ಮೂಡಿಸಿದರು. ಅಝ್ಮತುಲ್ಲಾ ಓಮರ್ಝೈ, ಮೊಹಮ್ಮದ್ ನಬಿ ಕ್ರಮವಾಗಿ 19, 9 ಗಳಿಸಿ ಪೆವಿಲಿಯನ್ ಪರೇಡ್‌ ನಡೆಸಿದರು. ಬಳಿಕ ಕೊಂಚ ಚೇತರಿಸಿಕೊಂಡ ಅಫ್ಘಾನ್ ಇಕ್ರಂ ಅಲಿಖಿಲ್ ಮತ್ತು ರಶೀದ್ ಖಾನ್ ಜೋಡಿ 43 ರನ್‌ಗಳ ಜೊತೆಯಾಟ ನೀಡಿ ಮೊತ್ತ ಹೆಚ್ಚಿಸುವ ಯೋಜನೆಯಲ್ಲಿ ಇದ್ದರು. ಆದರೆ ರಶೀದ್ ಖಾನ್ 23 ರನ್ ಗಳಸಿ ಕ್ಯಾಚ್ ನೀಡಿ ಔಟಾದರು. ಇಕ್ರಂ ಅಲಿಖಿಲ್ 58 ಗಳಿಸಿ ಅರ್ಧಶತಕ ಬಾರಿಸಿ (3 ಬೌಂಡರಿ, 2 ಸಿಕ್ಸರ್) ಮಿಂಚಿದರು. ಮುಜೀಬ್ ಉರ್ ರಹ್ಮಾನ್ 28 ರನ್ ಗಳ ಉಪಯುಕ್ತ ಕೊಡುಗೆ ನೀಡಿದರು. ಅಂತಿಮ ಜೋಡಿಯಾದ ನವೀನ್ 5 ರನ್‌ಗೆ ರನೌಟ್ ಆದರು. ಫಝಲ್ ಹಕ್ ಫಾರೂಕಿ 2 ರನ್ ಗಳಿಸಿದರು.

    ಇಂಗ್ಲೆಂಡ್‌ ಪರ ಆದಿಲ್ ರಶೀದ್ 3 ವಿಕೆಟ್ ಪಡೆದರೆ, ಮಾರ್ಕ್ ವುಡ್ 2, ಲಿಯಾಮ್ ಲಿವಿಂಗ್‌ಸ್ಟೋನ್‌, ಜೋ ರೂಟ್, ರೀಸ್ ಟೋಪ್ಲಿ ತಲಾ ಒಂದೊಂದು ವಿಕೆಟ್ ಕಬಳಿಸಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಟೀಂ ಇಂಡಿಯಾ ವಿನಾಶದತ್ತ ಸಾಗುತ್ತಿದೆ – ನಾಲಿಗೆ ಹರಿಬಿಟ್ಟ ಪಾಕ್‌ ಮಾಜಿ ಕ್ರಿಕೆಟಿಗ, ಅಭಿಮಾನಿಗಳು ಕೆಂಡ

    ಟೀಂ ಇಂಡಿಯಾ ವಿನಾಶದತ್ತ ಸಾಗುತ್ತಿದೆ – ನಾಲಿಗೆ ಹರಿಬಿಟ್ಟ ಪಾಕ್‌ ಮಾಜಿ ಕ್ರಿಕೆಟಿಗ, ಅಭಿಮಾನಿಗಳು ಕೆಂಡ

    ಇಸ್ಲಾಮಾಬಾದ್‌: ಪ್ರತಿಷ್ಠಿತ ಏಕದಿನ ಏಷ್ಯಾಕಪ್‌ (AsiaCup 2023) ಟೂರ್ನಿಗೆ ಇನ್ನೂ ಮೂರು ವಾರಗಳಷ್ಟೇ ಬಾಕಿಯಿದ್ದು, ಸೆ.2ರಂದು ನಡೆಯಲಿರುವ ಇಂಡೋಪಾಕ್‌ ರೋಚಕ ಕದನಕ್ಕಾಗಿ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಈ ನಡುವೆ ಪಾಕ್‌ ತಂಡದ ಮಾಜಿ ವೇಗಿ ಸರ್ಫರಾಜ್‌ ನವಾಜ್‌, ಟೀಂ ಇಂಡಿಯಾ (Team India) ವಿನಾಶದತ್ತ ಸಾಗುತ್ತಿದೆ ಎಂದು ಹೇಳುವ ಮೂಲಕ ನಾಲಿಗೆ ಹರಿಬಿಟ್ಟಿದ್ದಾರೆ. ಟೀಂ ಇಂಡಿಯಾ ಕ್ರಿಕೆಟ್‌ ಅಭಿಮಾನಿಗಳಿಂದಲೂ ಟೀಕೆಗೆ ಗುರಿಯಾಗಿದ್ದಾರೆ.

    ಪಾಕಿಸ್ತಾನ (Pakistan) ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸರ್ಫರಾಜ್‌ ನವಾಜ್‌, ಟೀಂ ಇಂಡಿಯಾ ಇತ್ತೀಚೆಗೆ ವಿಂಡೀಸ್‌ (West Indies) ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ನಡೆಸಿದ ಪ್ರಯೋಗಗಳ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಭಾರತ ತಂಡಕ್ಕೆ ಹೋಲಿಸಿದ್ರೆ ಪಾಕಿಸ್ತಾನ ತಂಡ 100% ಸ್ಥಿರವಾಗಿದೆ. ಏಷ್ಯಾಕಪ್ ಮತ್ತು ಏಕದಿನ ವಿಶ್ವಕಪ್​ ಟೂರ್ನಿಗಳಿಗೆ ಅತ್ಯಂತ ಸ್ಥಿರವಾದ ತಂಡವನ್ನ ಹೊಂದಿದೆ. ಆದ್ರೆ ಭಾರತ ಇನ್ನೂ ಅಂತಿಮ ತಂಡವನ್ನ ಸಂಯೋಜನೆ ಮಾಡೋದಕ್ಕೆ ಹೆಣಗಾಡುತ್ತಿದೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಇನ್ಸ್ಟಾದಿಂದ ಅತಿ ಹೆಚ್ಚು ಹಣ – ಜಸ್ಟ್ 1 ಪೋಸ್ಟ್‌ಗೆ ಕೊಹ್ಲಿಗೆ ಸಿಗುತ್ತೆ ಕೋಟಿ ಕೋಟಿ

    ವೆಸ್ಟ್​ ಇಂಡೀಸ್​ ಸರಣಿಯಲ್ಲಿ ಭಾರತ ತಂಡದ ಪರಿಸ್ಥಿತಿ ಅರ್ಥವಾಗುತ್ತಿದೆ. ಏಷ್ಯಾಕಪ್ ಮತ್ತು ಏಕದಿನ ವಿಶ್ವಕಪ್​ಗೆ ತಮ್ಮ ತಂಡವನ್ನು ಸಂಯೋಜಿಸಲು ಪರದಾಡುತ್ತಿದೆ. ಯಾರನ್ನ ಯಾವ ಜಾಗದಲ್ಲಿ ಆಡಿಸಿದ್ರೆ ಉತ್ತಮ ಅನ್ನೋದೇ ಗೊಂದಲವಾಗಿ ಕಾಡುತ್ತಿದೆ. ಪದೆ ಪದೇ ನಾಯಕರು ಬದಲಾಗುತ್ತಿದ್ದಾರೆ. ಹೊಸ ಆಟಗಾರರನ್ನ ಕರೆ ತರುತ್ತಿದ್ದಾರೆ. ಮತ್ತೊಂದೆಡೆ ಆಟಗಾರರಿಗೆ ಗಾಯದ ಸಮಸ್ಯೆಗಳು. ಇದೆಲ್ಲಾ ನೋಡುತ್ತಿದ್ದರೆ, ಸರಿಯಾದ ಸಂಯೋಜನೆಗೆ ಸಿದ್ಧವಾಗಲು ಕಷ್ಟವಾಗುತ್ತಿದೆ ಎಂದೆನಿಸುತ್ತದೆ ಎಂದಿದ್ದಾರೆ.

    ಇದೇ ವೇಳೆ ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್ ಕಂಬ್ಯಾಕ್‌ ಕುರಿತು ಕಳವಳ ವ್ಯಕ್ತಪಡಿಸಿದ ನವಾಜ್‌, ಟೀಂ ಇಂಡಿಯಾ ತನ್ನ ಅಭಿವೃದ್ಧಿಗೆ ಯಾವುದೇ ಪ್ರಯತ್ನ ನಡೆಸುತ್ತಿಲ್ಲ. ಬೆಂಚ್​ ಬಲವನ್ನ ಹೆಚ್ಚಿಸುವಲ್ಲಿ ವಿಫಲವಾಗುತ್ತಿದ್ದು, ವಿನಾಶದತ್ತ ಸಾಗುತ್ತಿದೆ. ಪ್ರಮುಖ ಟೂರ್ನಿಗಳು ಹತ್ತಿರದಲ್ಲಿರುವಾಗ ಯಾವ ರೀತಿ ಸಂಯೋಜನೆ ಮಾಡಬೇಕು ಎಂಬುದೇ ತಿಳಿದಿಲ್ಲ. ಈ ಅವಧಿಯಲ್ಲೂ ಪ್ರಯೋಗಗಳು ಅಗತ್ಯವೇ? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ICC WorldCup 2023: ಭಾರತ-ಪಾಕ್‌ ಸೇರಿದಂತೆ ಪ್ರಮುಖ ಪಂದ್ಯಗಳ ವೇಳಾಪಟ್ಟಿ ಬದಲು

    ಐಸಿಸಿ ಟ್ರೋಫಿ ಗೆಲ್ಲುವ ಒತ್ತಡಕ್ಕೂ ಭಾರತ ಸಿಲುಕಿದೆ. ಏಕೆಂದರೆ ಕಳೆದ 10 ವರ್ಷಗಳಲ್ಲಿ ಟೀಂ ಇಂಡಿಯಾ ಐಸಿಸಿಯ ಯಾವುದೇ ಟ್ರೋಫಿ ಗೆದ್ದಿಲ್ಲ ಎಂದು ನವಾಜ್ ವಿವರಿಸಿದ್ದಾರೆ.

    ಇದೇ ಆಗಸ್ಟ್‌ 30 ರಿಂದ ಪಾಕಿಸ್ತಾನ ಮತ್ತು ಶ್ರೀಲಂಕಾ ಆತಿಥ್ಯದಲ್ಲಿ ಏಕದಿನ ಏಷ್ಯಾಕಪ್‌ ಟೂರ್ನಿ ಆಯೋಜನೆಗೊಂಡಿದೆ. ಆ ನಂತರ ಅಕ್ಟೋಬರ್‌ 5 ರಿಂದ ನವೆಂಬರ್‌ 19ರ ವರೆಗೆ ಭಾರತದಲ್ಲಿ ವಿಶ್ವಕಪ್‌ ಟೂರ್ನಿ ನಡೆಯಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ICC WorldCup 2023: ಪಾಕಿಸ್ತಾನ ತಂಡ ಭಾರತಕ್ಕೆ ಬರೋದು ಫಿಕ್ಸ್

    ICC WorldCup 2023: ಪಾಕಿಸ್ತಾನ ತಂಡ ಭಾರತಕ್ಕೆ ಬರೋದು ಫಿಕ್ಸ್

    ಇಸ್ಲಾಮಾಬಾದ್: ಪಾಕಿಸ್ತಾನ ಪುರುಷರ ಕ್ರಿಕೆಟ್ ತಂಡವು (Pakistan Cricket Team) 2023ರ ವಿಶ್ವಕಪ್ ಟೂರ್ನಿಗೆ ಭಾರತಕ್ಕೆ ಪ್ರಯಾಣಿಸಲಿದೆ ಎಂದು ಪಾಕಿಸ್ತಾನ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಭಾನುವಾರ ಖಚಿತಪಡಿಸಿದೆ.

    2023ರ ಏಕದಿನ ವಿಶ್ವಕಪ್ (ICC World Cup 2023) ಟೂರ್ನಿಗಾಗಿ ಪಾಕಿಸ್ತಾನ ತಂಡವು ಭಾರತಕ್ಕೆ ಪ್ರಯಾಣಿಸಲಿದೆ. ಭಾರತದೊಂದಿಗಿನ ದ್ವಿಪಕ್ಷೀಯ ಸಂಬಂಧಗಳು ಕ್ರೀಡೆಗೆ ಅಡ್ಡಿಯಾಗುವುದಿಲ್ಲ ಎಂದು ಸಚಿವಾಲಯ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 15ರಂದು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಿಗದಿಯಾಗಿರುವ ಪಂದ್ಯದಲ್ಲಿ ಪಾಕ್ ತಂಡ ಭಾರತದ ವಿರುದ್ಧ ಕಣಕ್ಕಿಳಿಯುವುದು ಪಕ್ಕಾ ಆಗಿದೆ. ಆದ್ರೆ ಅಕ್ಟೋಬರ್ 15 ರಂದು ನವರಾತ್ರಿ ಉತ್ಸವದ ಆರಂಭದ ದಿನ ಆಗಿರುವುದರಿಂದ ದಿನಾಂಕ ಬದಲಾಯಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಕಾರು ಅಪಘಾತ – ಇಬ್ಬರು ಮಕ್ಕಳು ಸೇರಿ 6 ಮಂದಿ ನೇಪಾಳಿ ಪ್ರಜೆಗಳು ದುರ್ಮರಣ

    ಕ್ರೀಡೆಯನ್ನು (Sports) ರಾಜಕೀಯದಿಂದೊಗೆ ಬೆರಸಬಾರದು ಎಂಬುದನ್ನ ಪಾಕಿಸ್ತಾನ ನಿರಂತರವಾಗಿ ಸಮರ್ಥಿಸಿಕೊಂಡಿದೆ. ಆದ್ದರಿಂದ ಮುಂಬರುವ ಐಸಿಸಿ ಟೂರ್ನಿಯಲ್ಲಿ ಕ್ರಿಕೆಟ್ ತಂಡವನ್ನು ಭಾರತಕ್ಕೆ ಕಳುಹಿಸಲು ನಿರ್ಧರಿಸಿದೆ ಎಂದು ಹೇಳಿದೆ.

    ಏಕದಿನ ಏಷ್ಯಾಕಪ್ (ODI AsiaCup) ಟೂರ್ನಿಯನ್ನು ಪಾಕಿಸ್ತಾನದಲ್ಲಿ ಆಯೋಜಿಸಲು ನಿರ್ಧರಿಸಲಾಗಿತ್ತು. ಆದ್ರೆ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಬಿಸಿಸಿಐ ನಿರಾಕರಿಸಿತು. ಆದ್ದರಿಂದ ಶ್ರೀಲಂಕಾದಲ್ಲಿ ನಿಗದಿಯಾಗಿದೆ. ಭಾರತ ಕಠಿಣ ನಿರ್ಧಾರ ತೋರಿದ ಹೊರತಾಗಿಯೂ ಪಾಕಿಸ್ತಾನದ ಈ ನಿರ್ಧಾರ ತನ್ನ ಜವಾಬ್ದಾರಿಯನ್ನ ತೋರಿಸಿದೆ ಎಂದು ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಎನ್‌ಕೌಂಟರ್ – ಒಬ್ಬ ಭಯೋತ್ಪಾದಕನನ್ನು ಹೊಡೆದುರುಳಿಸಿದ ಭದ್ರತಾ ಪಡೆ

    ಕಳೆದ ಕೆಲವು ದಿನಗಳಲ್ಲಿ ಪಾಕಿಸ್ತಾನದ ಅಧಿಕಾರಿಗಳ ಸಮಿತಿ ಭಾರತಕ್ಕೆ ಭೇಟಿ ನೀಡಿತ್ತು. ಇಲ್ಲಿ ಪಾಕ್ ತಂಡಕ್ಕೆ ನೀಯೋಜಿಸಲಾದ ಭದ್ರತಾ ವ್ಯವಸ್ಥೆಯ ಬಗ್ಗೆ ಪರಿಶೀಲಿಸಲು ವಿವಿಧ ಸ್ಥಳಗಳಿಗೆ ಅಧಿಕಾರಿಗಳ ತಂಡ ಪ್ರಯಾಣಿಸಿತ್ತು. 2016ರಲ್ಲಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಭಾರತದ ವಿರುದ್ಧ ಈಡನ್ ಗಾರ್ಡನ್‌ನಲ್ಲಿ ಸೆಣಸಾಟ ನಡೆಸಿತ್ತು. ಆ ನಂತರ ಇದೇ ಮೊದಲಿಗೆ ಭಾರತಕ್ಕೆ ಪಾಕ್ ತಂಡ ಪ್ರಯಾಣಿಸುತ್ತಿದೆ.


    ಭಾರತದಲ್ಲಿ ಪಾಕ್‌ ತಂಡದ ವೇಳಾಪಟ್ಟಿ ಹೀಗಿದೆ…

    ಪಾಕಿಸ್ತಾನ vs ಕ್ವಾಲಿಫೈಯರ್ 1, ಅಕ್ಟೋಬರ್ 6 – ಹೈದರಾಬಾದ್
    ಪಾಕಿಸ್ತಾನ vs ಕ್ವಾಲಿಫೈಯರ್ 2, ಅಕ್ಟೋಬರ್ 12 – ಹೈದರಾಬಾದ್
    ಪಾಕಿಸ್ತಾನ vs ಭಾರತ, ಅಕ್ಟೋಬರ್ 15 – ಅಹಮದಾಬಾದ್
    ಪಾಕಿಸ್ತಾನ vs ಆಸ್ಟ್ರೇಲಿಯಾ, ಅಕ್ಟೋಬರ್ 20 – ಬೆಂಗಳೂರು
    ಪಾಕಿಸ್ತಾನ vs ಅಫ್ಘಾನಿಸ್ತಾನ, ಅಕ್ಟೋಬರ್ 23- ಚೆನ್ನೈ
    ಪಾಕಿಸ್ತಾನ vs ದಕ್ಷಿಣ ಆಫ್ರಿಕಾ, ಅಕ್ಟೋಬರ್ 27- ಚೆನ್ನೈ
    ಪಾಕಿಸ್ತಾನ vs ಬಾಂಗ್ಲಾದೇಶ, ಅಕ್ಟೋಬರ್ 31 – ಕೋಲ್ಕತ್ತಾ
    ಪಾಕಿಸ್ತಾನ vs ನ್ಯೂಜಿಲೆಂಡ್, ನವೆಂಬರ್ 4 – ಬೆಂಗಳೂರು
    ಪಾಕಿಸ್ತಾನ vs ಇಂಗ್ಲೆಂಡ್, ನವೆಂಬರ್ 12- ಕೋಲ್ಕತ್ತಾ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಯಾರ ಜೊತೆ, ಎಲ್ಲಿ ಬೇಕಾದ್ರೂ ಆಡೋಕೆ ನಾವ್‌ ರೆಡಿ – ಪಾಕ್‌ ತಂಡ ಭಾರತಕ್ಕೆ ಬರೋದು ಖಚಿತ; ಬಾಬರ್‌ ಆಜಂ

    ಯಾರ ಜೊತೆ, ಎಲ್ಲಿ ಬೇಕಾದ್ರೂ ಆಡೋಕೆ ನಾವ್‌ ರೆಡಿ – ಪಾಕ್‌ ತಂಡ ಭಾರತಕ್ಕೆ ಬರೋದು ಖಚಿತ; ಬಾಬರ್‌ ಆಜಂ

    ಇಸ್ಲಾಮಾಬಾದ್:‌ ಪ್ರಸಕ್ತ ಸಾಲಿನ ಐಸಿಸಿ ವಿಶ್ವಕಪ್‌ (ICC World Cup 2023) ಟೂರ್ನಿಯಲ್ಲಿ ಭಾರತದ ಯಾವುದೇ ಮೈದಾನದಲ್ಲಿ ಯಾವ ತಂಡವನ್ನ ಬೇಕಾದ್ರೂ ಎದುರಿಸಲು ಪಾಕಿಸ್ತಾನ ತಂಡ ಸಿದ್ಧವಾಗಿದೆ ಎಂದು ಪಾಕ್‌ ಕ್ರಿಕೆಟ್‌ ತಂಡದ ನಾಯಕ ಬಾಬರ್‌ ಆಜಂ (Babar Azam) ಹೇಳಿದ್ದಾರೆ. ಈ ಮೂಲಕ ಪಾಕ್‌ ತಂಡ ಭಾರತಕ್ಕೆ ಎಂಟ್ರಿ ಕೊಡುವುದನ್ನ ಖಚಿತಪಡಿಸಿದ್ದಾರೆ.

    ಹೌದು. ಟೀಂ ಇಂಡಿಯಾ (Team India) ಆತಿಥ್ಯದಲ್ಲಿ ನಡೆಯುತ್ತಿರುವ ವಿಶ್ವಕಪ್‌ ಟೂರ್ನಿಯ ವೇಳಾಪಟ್ಟಿ ಈಗಾಗಲೇ ನಿಗದಿಯಾಗಿದ್ದು, ಅಕ್ಟೋಬರ್‌ 15 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ, ಪಾಕ್‌ ತಂಡವನ್ನ ಎದುರಿಸಲಿದೆ. 1.32 ಲಕ್ಷ ಪ್ರೇಕ್ಷಕರನ್ನ ಒಳಗೊಳ್ಳುವ ಸಾಮರ್ಥ್ಯ ಹೊಂದಿರುವ ಮೋದಿ ಕ್ರೀಡಾಂಗಣದಲ್ಲಿ ಬದ್ಧವೈರಿಗಳ ಹೈವೋಲ್ಟೇಜ್‌ ಕದನ ನಡೆಯಲಿದೆ. ಇದನ್ನೂ ಓದಿ: ICC World Cup 2023: ಟೀಂ ಇಂಡಿಯಾ ಪರಿಷ್ಕೃತ ವೇಳಾಪಟ್ಟಿ ರಿಲೀಸ್‌ – ಇಲ್ಲಿದೆ ಡಿಟೇಲ್ಸ್‌

    ಕಳೆದ ವರ್ಷ T20 ಏಷ್ಯಾಕಪ್‌ (Asia Cup )ಹಾಗೂ ಆಸ್ಟ್ರೇಲಿಯಾದಲ್ಲಿ ನಡೆದ T20 ವಿಶ್ವಕಪ್‌ ಟೂರ್ನಿಗಳಲ್ಲಿ ಕಾಣಿಸಿಕೊಂಡಿದ್ದ ಸಾಂಪ್ರದಾಯಿಕ ಎದುರಾಳಿಗಳು ಮತ್ತೊಮ್ಮೆ ಮುಖಾಮುಖಿಯಾಗುತ್ತಿರುವುದು ಕ್ರಿಕೆಟ್‌ ಅಭಿಮಾನಿಗಳ ಕಣ್ಣಿಗೆ ಹಬ್ಬವನ್ನುಂಟುಮಾಡಲಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯು (PCB) ಪ್ರಧಾನಿ ಶೆಹಬಾಜ್ ಷರೀಫ್, ಆಂತರಿಕ ಮತ್ತು ವಿದೇಶಾಂಗ ಸಚಿವಾಲಯಗಳಿಗೆ ಪತ್ರ ಬರೆದು ಟೂರ್ನಿಯಲ್ಲಿ ಪಾಲ್ಗೊಳ್ಳಲು ಅನುಮತಿ ಕೇಳಿದೆ. ಈ ನಡುವೆ ಬಾಬರ್‌ ಆಜಂ ಭಾರತಕ್ಕೆ ಬರುವುದನ್ನ ಖಚಿತಪಡಿಸಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಾಬರ್‌ ಆಜಂ, ಯಾರು ಎಲ್ಲಿ ಆಡ್ತಾರೆ ಅನ್ನೋದರ ಬಗ್ಗೆ ನಾವು ತಲೆ ಕೆಡಿಸಿಕೊಳ್ಳಲ್ಲ. ಆದ್ರೆ ನಾವು ವಿಶ್ವಕಪ್‌ ಟೂರ್ನಿಯನ್ನು ಆಡಲಿದ್ದೇವೆ. ಭಾರತದ ವಿರುದ್ಧ ಮಾತ್ರವಲ್ಲ. ಒಂದು ತಂಡವನ್ನು ಕೇಂದ್ರೀಕರಿಸೋದಿಲ್ಲ. ಇನ್ನೂ 9 ತಂಡಗಳಿವೆ, ಎಲ್ಲಾ ತಂಡಗಳನ್ನ ಸೋಲಿಸಿದ್ರೆ ಮಾತ್ರ ನಾವು ಫೈನಲ್‌ ತಲುಪುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: Justice For Rinku Singh – ಟೀಂ ಇಂಡಿಯಾದಲ್ಲಿ ಸ್ಥಾನ ನೀಡುವಂತೆ ಫ್ಯಾನ್ಸ್ ಆಗ್ರಹ

    ವೃತ್ತಿಪರರಾಗಿ ನಾವು ಎಲ್ಲದಕ್ಕೂ ಸಿದ್ಧರಾಗಿರಬೇಕು. ಎಲ್ಲೆಲ್ಲೆ ಕ್ರಿಕೆಟ್‌ ಟೂರ್ನಿ ನಡೆಯುತ್ತೆ, ನಾವು ಅಲ್ಲೇ ಹೋಗಿ ಆಡ್ತೀವಿ. ಪ್ರತಿ ದೇಶದಲ್ಲೂ ನಾವು ಪ್ರದರ್ಶನ ನೀಡಲು ಬಯಸುತ್ತೇವೆ. ಅಹಮದಾಬಾದ್‌ ಮಾತ್ರವಲ್ಲ ಹೈದರಾಬಾದ್ ಡೆಕ್ಕನ್, ಚೆನ್ನೈ, ಬೆಂಗಳೂರು ಮತ್ತು ಕೋಲ್ಕತ್ತಾದಲ್ಲಿ ಪಾಕಿಸ್ತಾನ ತಂಡ ತನ್ನ ಪಂದ್ಯಗಳನ್ನಾಡಲು ನಿರ್ಧರಿಸಿದೆ ಎಂದು ಖಡಕ್ಕಾಗಿ ಹೇಳಿದ್ದಾರೆ.

    ಅಕ್ಟೋಬರ್‌ 5 ರಿಂದ ನವೆಂಬರ್‌ 19ರ ವರೆಗೆ ವಿಶ್ವಕಪ್‌ ಟೂರ್ನಿ ನಡೆಯಲಿದೆ. ಪಾಕಿಸ್ತಾನ ವಿಶ್ವಕಪ್‌ ಟೂರ್ನಿಯಲ್ಲಿ ಪಾಲ್ಗೊಳ್ಳುವುದಕ್ಕೂ ಮುನ್ನ ಶ್ರೀಲಂಕಾದೊಂದಿಗೆ 2 ಪಂದ್ಯಗಳ ಟೆಸ್ಟ್‌ ಸರಣಿಯನ್ನಾಡಲಿದೆ. ಇದು 2023-2025ರ ನಡುವಿನ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನ ಭಾಗವೂ ಆಗಿದೆ. ಜುಲೈ 16 ರಿಂದ ರಂದು ಗಾಲೆಯಲ್ಲಿ ಮೊದಲ ಟೆಸ್ಟ್ ಮತ್ತು ಜುಲೈ 24 ರಿಂದ 2ನೇ ಟೆಸ್ಟ್‌ ಕೊಲಂಬೊದಲ್ಲಿ ಪ್ರಾರಂಭವಾಗಲಿದೆ. ಅಲ್ಲದೇ ಮುಂದಿನ ಆಗಸ್ಟ್‌ 31 ರಿಂದ ಸೆಪ್ಟೆಂಬರ್ 17 ರವರೆಗೆ 6 ರಾಷ್ಟ್ರಗಳ ಏಷ್ಯಾ ಕಪ್‌ ಟೂರ್ನಿಯಲ್ಲೂ ಪಾಕಿಸ್ತಾನ ಆಡಲಿದೆ.

    ಮೊದಲ ನಾಲ್ಕು ಪಂದ್ಯಗಳು ಪಾಕಿಸ್ತಾನದಲ್ಲಿ ನಡೆಯಲಿದ್ದು, ಅಂತಿಮ ಪಂದ್ಯ ಸೇರಿದಂತೆ ಉಳಿದ 9 ಪಂದ್ಯಗಳಿಗೆ ಶ್ರೀಲಂಕಾ ಆತಿಥ್ಯ ವಹಿಸಲಿದೆ. ಇದನ್ನೂ ಓದಿ: ಟೀಂ ಇಂಡಿಯಾ ಬೌಲಿಂಗ್‌ ಯಾವಾಗ್ಲೂ ಕಳಪೆ, ನಾವ್‌ ತಲೆ ಕೆಡಿಸಿಕೊಳ್ಳಲ್ಲ – ಪಾಕ್‌ ಮಾಜಿ ಕ್ರಿಕೆಟಿಗ ವ್ಯಂಗ್ಯ

    ಟೀಂ ಇಂಡಿಯಾ ವಿಶ್ವಕಪ್‌ ಪರಿಷ್ಕೃತ ವೇಳಾಪಟ್ಟಿ:

    ಭಾರತ vs ಆಸ್ಟ್ರೇಲಿಯಾ, ಅಕ್ಟೋಬರ್ 8, ಚೆನ್ನೈ
    ಭಾರತ vs ಅಫ್ಘಾನಿಸ್ತಾನ, ಅಕ್ಟೋಬರ್ 11, ದೆಹಲಿ
    ಭಾರತ vs ಪಾಕಿಸ್ತಾನ, ಅಕ್ಟೋಬರ್ 15, ಅಹಮದಾಬಾದ್
    ಭಾರತ vs ಬಾಂಗ್ಲಾದೇಶ, ಅಕ್ಟೋಬರ್ 19, ಪುಣೆ
    ಭಾರತ vs ನ್ಯೂಜಿಲೆಂಡ್, ಅಕ್ಟೋಬರ್ 22, ಧರ್ಮಶಾಲಾ
    ಭಾರತ vs ಇಂಗ್ಲೆಂಡ್, ಅಕ್ಟೋಬರ್ 29, ಲಕ್ನೋ
    ಭಾರತ vs ಶ್ರೀಲಂಕಾ, ನವೆಂಬರ್ 2, ಮುಂಬೈ
    ಭಾರತ vs ದಕ್ಷಿಣ ಆಫ್ರಿಕಾ, ನವೆಂಬರ್ 5, ಕೋಲ್ಕತ್ತಾ
    ಭಾರತ vs ನೆದರ್ಲೆಂಡ್‌, ನವೆಂಬರ್ 11, ಬೆಂಗಳೂರು

    ಭಾರತದಲ್ಲಿ ಪಾಕ್ ತಂಡದ ವೇಳಾಪಟ್ಟಿ:

    ಪಾಕಿಸ್ತಾನ vs ಕ್ವಾಲಿಫೈಯರ್ 1, ಅಕ್ಟೋಬರ್ 6 – ಹೈದರಾಬಾದ್
    ಪಾಕಿಸ್ತಾನ vs ಕ್ವಾಲಿಫೈಯರ್ 2, ಅಕ್ಟೋಬರ್ 12 – ಹೈದರಾಬಾದ್
    ಪಾಕಿಸ್ತಾನ vs ಭಾರತ, ಅಕ್ಟೋಬರ್ 15 – ಅಹಮದಾಬಾದ್
    ಪಾಕಿಸ್ತಾನ vs ಆಸ್ಟ್ರೇಲಿಯಾ, ಅಕ್ಟೋಬರ್ 20 – ಬೆಂಗಳೂರು
    ಪಾಕಿಸ್ತಾನ vs ಅಫ್ಘಾನಿಸ್ತಾನ, ಅಕ್ಟೋಬರ್ 23- ಚೆನ್ನೈ
    ಪಾಕಿಸ್ತಾನ vs ದಕ್ಷಿಣ ಆಫ್ರಿಕಾ, ಅಕ್ಟೋಬರ್ 27- ಚೆನ್ನೈ
    ಪಾಕಿಸ್ತಾನ vs ಬಾಂಗ್ಲಾದೇಶ, ಅಕ್ಟೋಬರ್ 31 – ಕೋಲ್ಕತ್ತಾ
    ಪಾಕಿಸ್ತಾನ vs ನ್ಯೂಜಿಲೆಂಡ್, ನವೆಂಬರ್ 4 – ಬೆಂಗಳೂರು
    ಪಾಕಿಸ್ತಾನ vs ಇಂಗ್ಲೆಂಡ್, ನವೆಂಬರ್ 12- ಕೋಲ್ಕತ್ತಾ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ICC World Cup 2023: ಟೀಂ ಇಂಡಿಯಾ ಪರಿಷ್ಕೃತ ವೇಳಾಪಟ್ಟಿ ರಿಲೀಸ್‌ – ಇಲ್ಲಿದೆ ಡಿಟೇಲ್ಸ್‌

    ICC World Cup 2023: ಟೀಂ ಇಂಡಿಯಾ ಪರಿಷ್ಕೃತ ವೇಳಾಪಟ್ಟಿ ರಿಲೀಸ್‌ – ಇಲ್ಲಿದೆ ಡಿಟೇಲ್ಸ್‌

    ಮುಂಬೈ: ಏಕದಿನ ವಿಶ್ವಕಪ್‌ (ICC World Cup 2023) ಟೂರ್ನಿಯ ಅರ್ಹತಾ ಸುತ್ತಿನ ಬಳಿಕ ವಿಶ್ವಕಪ್‌ ಆಡುವ 10 ತಂಡಗಳನ್ನ‌ ಫೈನಲ್‌ ಮಾಡಿದ್ದು, BCCI ಟೀಂ ಇಂಡಿಯಾದ ಪರಿಷ್ಕೃತ ವೇಳಾಪಟ್ಟಿಯನ್ನ ಪ್ರಕಟಿಸಿದೆ.

    ವಿಶ್ವಕಪ್‌ ಟೂರ್ನಿಗೆ 8 ತಂಡಗಳು ನೇರ ಪ್ರವೇಶ ಪಡೆದುಕೊಂಡಿದ್ದರಿಂದ ಉಳಿದ ಎರಡು ತಂಡಗಳ ಆಯ್ಕೆಗೆ ಹಣಾಹಣಿ ನಡೆದಿತ್ತು. ಅದರಂತೆ ವಿಶ್ವಕಪ್‌ ಟೂರ್ನಿಯ ಅರ್ಹತಾ ಸುತ್ತಿನ ಬಳಿಕ ಶ್ರೀಲಂಕಾ (SriLanka) ಹಾಗೂ ನೆದರ್ಲೆಂಡ್‌ (Netherlands) ತಂಡಗಳು ವಿಶ್ವಕಪ್‌ ಟೂರ್ನಿಗೆ ಆಯ್ಕೆಯಾಗಿವೆ. ಹಾಗಾಗಿ ಬಿಸಿಸಿಐ (BCCI) ಪರಿಷ್ಕೃತ ವೇಳಾಪಟ್ಟಿಯನ್ನ ಬಿಡುಗಡೆ ಮಾಡಿದೆ.

    ಅಕ್ಟೋಬರ್‌ 5 ರಿಂದ ನವೆಂಬರ್‌ 19 ರವರೆಗೆ ಟೂರ್ನಿ ನಡೆಯಲಿದೆ. ದೇಶದ 10 ನಗರಗಳಲ್ಲಿ ಟೂರ್ನಿ ನಡೆಯಲಿದ್ದು, ಟೂರ್ನಿಯ ಉದ್ಘಾಟನಾ ಮ್ಯಾಚ್‌ ಹಾಗೂ ಫೈನಲ್‌ ಪಂದ್ಯವು ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ (Narendra Modi Stadium) ಆಯೋಜನೆಗೊಳ್ಳಲಿದೆ.

    ನವೆಂಬರ್ 2 ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಆತಿಥೇಯ ಭಾರತ, ಶ್ರೀಲಂಕಾ ತಂಡವನ್ನ ಎದುರಿಸಲಿದ್ದು, ನವೆಂಬರ್‌ 11 ರಂದು ಬೆಂಗಳೂರಿನ ನಡೆಯಲಿರುವ ಗ್ರೂಪ್‌ ಲೀಗ್‌ ಹಂತದ ಪಂದ್ಯದಲ್ಲಿ ಟೀಂ ಇಂಡಿಯಾ ನೆದರ್ಲೆಂಡ್‌ ತಂಡದ ಎದುರು ಕಣಕ್ಕಿಳಿಯಲಿದೆ. 1983ರಲ್ಲಿ ಮೊದಲ ಬಾರಿಗೆ ಏಕದಿನ ವಿಶ್ವಕಪ್‌ ಟೂರ್ನಿ ಗೆದ್ದುಕೊಂಡಿದ್ದ ಟೀಂ ಇಂಡಿಯಾ 2011ರಲ್ಲಿ ಎಂ.ಎಸ್‌ ಧೋನಿ ನಾಯಕತ್ವದಲ್ಲಿ ಕೊನೆಯದ್ದಾಗಿ ವಿಶ್ವಚಾಂಪಿಯನ್‌ ಆಗಿತ್ತು. ಆದ್ರೆ ಇದೇ ಮೊದಲಬಾರಿಗೆ ಟೀಂ ಇಂಡಿಯಾ ಪೂರ್ಣ ಆತಿಥ್ಯದೊಂದಿಗೆ ವಿಶ್ವಕಪ್‌ ಟೂರ್ನಿ ಆಯೋಜಿಸಿದ್ದು, ದಶಕಗಳ ಬಳಿಕ ಪ್ರಶಸ್ತಿ ಗೆಲ್ಲುವ ಉತ್ಸಾಹದಲ್ಲಿದೆ.

    ಗುರುವಾರ ಸ್ಕಾಟ್‌ಲೆಂಡ್‌ ವಿರುದ್ಧ ನಡೆದ ಪಂದ್ಯದಲ್ಲಿ ನೆದರ್ಲೆಂಡ್‌ 4 ವಿಕೆಟ್‌ಗಳ ಜಯ ಸಾಧಿಸಿತು. ಮೊದಲು ಬ್ಯಾಟಿಂಗ್‌ ಮಾಡಿದ ನೆದರ್ಲೆಂಡ್‌ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 277 ರನ್‌ ಗಳಿಸಿತ್ತು. ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ನೆದರ್ಲೆಂಡ್‌ 42.5 ಓವರ್‌ಗಳಲ್ಲೇ 278 ರನ್‌ಗಳಿಸಿ ಜಯ ಸಾಧಿಸಿತು. ಈ ಮೂಲಕ ನೆದರ್ಲೆಂಡ್‌ ವಿಶ್ವಕಪ್‌ ಟೂರ್ನಿಗೆ ಅರ್ಹತೆ ಪಡೆದುಕೊಂಡರೆ, ವಿಶ್ವಕಪ್‌ ಟೂರ್ನಿ ಪ್ರವೇಶಿಸಿ ಇತಿಹಾಸ ಸೃಷ್ಟಿಸುವ ಕನಸುಕಂಡಿದ್ದ ಸ್ಕಾಟ್‌ಲೆಂಡ್‌ ಸೋತು ನಿರಾಸೆ ಅನುಭವಿಸಿದೆ.

    ಟೀಂ ಇಂಡಿಯಾ ವಿಶ್ವಕಪ್‌ ಪರಿಷ್ಕೃತ ವೇಳಾಪಟ್ಟಿ:

    ಭಾರತ vs ಆಸ್ಟ್ರೇಲಿಯಾ, ಅಕ್ಟೋಬರ್ 8, ಚೆನ್ನೈ
    ಭಾರತ vs ಅಫ್ಘಾನಿಸ್ತಾನ, ಅಕ್ಟೋಬರ್ 11, ದೆಹಲಿ
    ಭಾರತ vs ಪಾಕಿಸ್ತಾನ, ಅಕ್ಟೋಬರ್ 15, ಅಹಮದಾಬಾದ್
    ಭಾರತ vs ಬಾಂಗ್ಲಾದೇಶ, ಅಕ್ಟೋಬರ್ 19, ಪುಣೆ
    ಭಾರತ vs ನ್ಯೂಜಿಲೆಂಡ್, ಅಕ್ಟೋಬರ್ 22, ಧರ್ಮಶಾಲಾ
    ಭಾರತ vs ಇಂಗ್ಲೆಂಡ್, ಅಕ್ಟೋಬರ್ 29, ಲಕ್ನೋ
    ಭಾರತ vs ಶ್ರೀಲಂಕಾ, ನವೆಂಬರ್ 2, ಮುಂಬೈ
    ಭಾರತ vs ದಕ್ಷಿಣ ಆಫ್ರಿಕಾ, ನವೆಂಬರ್ 5, ಕೋಲ್ಕತ್ತಾ
    ಭಾರತ vs ನೆದರ್ಲೆಂಡ್‌, ನವೆಂಬರ್ 11, ಬೆಂಗಳೂರು

  • ICC ODI World Cup: ಪಾಕ್ ಪಂದ್ಯಗಳಿಗೆ ಬಿಗಿ ಭದ್ರತೆ ನೀಡ್ತೇವೆ – ಬಂಗಾಳ ಕ್ರಿಕೆಟ್‌

    ICC ODI World Cup: ಪಾಕ್ ಪಂದ್ಯಗಳಿಗೆ ಬಿಗಿ ಭದ್ರತೆ ನೀಡ್ತೇವೆ – ಬಂಗಾಳ ಕ್ರಿಕೆಟ್‌

    ಕೋಲ್ಕತ್ತಾ: ಐಸಿಸಿ ಏಕದಿನ ವಿಶ್ವಕಪ್ (ICC World Cup 2023) ಟೂರ್ನಿಯ ವೇಳಾಪಟ್ಟಿ ಪ್ರಕಟವಾದ ಬೆನ್ನಲ್ಲೇ ಕೋಲ್ಕತ್ತಾದಲ್ಲಿ ನಡೆಯುವ ಪಾಕಿಸ್ತಾನ (Pakistan) ಪಂದ್ಯಗಳಿಗೆ ಭಾರೀ ಬಿಗಿ ಭದ್ರತೆ ಒದಗಿಸುವುದಾಗಿ ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಸ್ನೇಹಶಿಶ್ (Snehasish Ganguly) ತಿಳಿಸಿದ್ದಾರೆ.

    ಈಗಾಗಲೇ ನಿಗದಿಯಾಗಿರುವ ವೇಳಾಪಟ್ಟಿಯ ಪ್ರಕಾರ ಹೈದರಾಬಾದ್, ಅಹಮದಾಬಾದ್, ಬೆಂಗಳೂರು, ಚೆನ್ನೈ, ಕೋಲ್ಕತ್ತಾ ಸೇರಿ ಒಟ್ಟು 5 ಮಹಾನಗರಗಳಲ್ಲಿ ಪಾಕ್‌ನ 9 ಪಂದ್ಯಗಳು ನಡೆಯಲಿವೆ. ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ (Eden Gardens) ಪಾಕ್ ತಂಡವು ಅಕ್ಟೋಬರ್ 31ರಂದು ಬಾಂಗ್ಲಾದೇಶ ಹಾಗೂ ನವೆಂಬರ್ 12 ರಂದು ಇಂಗ್ಲೆಂಡ್ ವಿರುದ್ಧ ಸೆಣಸಲಿದೆ. ಇದರೊಂದಿಗೆ ನಿರ್ಣಾಯಕ ಪಂದ್ಯದಲ್ಲಿ ಟೀಂ ಇಂಡಿಯಾ (Team India), ದಕ್ಷಿಣ ಆಫ್ರಿಕಾ ವಿರುದ್ಧ ಇದೇ ಮೈದಾನದಲ್ಲಿ ಕಣಕ್ಕಿಳಿಯಲಿದೆ.

    ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರೂ ಆಗಿರುವ ಸೌರವ್ ಗಂಗೂಲಿ ಹಿರಿಯ ಸಹೋದರ ಸ್ನೇಹಶಿಶ್ ಗಂಗೂಲಿ, ಈಡನ್ ಗಾರ್ಡನ್‌ನಲ್ಲಿ ನಡೆಯುವ ಪಾಕ್ ಪಂದ್ಯಗಳಿಗೆ ಹೆಚ್ಚಿನ ಭದ್ರತೆ ಒದಗಿಸಲಾಗುವುದು ಎಂದು ಹೇಳಿದ್ದಾರೆ. ಇದನ್ನೂ ಓದಿ:  ನಮ್ಮ ತಂಡದಲ್ಲಿ ಬೆಸ್ಟ್‌ ಪ್ಲೇಯರ್‌ ಇದ್ದಾನೆ, ಯಾವುದಕ್ಕೂ ತಲೆ ಕೆಡಿಸಿಕೊಳ್ಳಲ್ಲ: ವಾಸಿಂ ಅಕ್ರಂ

    BCCI ಮತ್ತು ICC ತೆಗೆದುಕೊಂಡ ನಿರ್ಧಾರದಿಂದ ಸಂತೋಷವಾಗಿದ್ದು, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹಾಗೂ ಐಸಿಸಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಕಳೆದ ನಾಲ್ಕು ತಿಂಗಳಿಂದ ನಾನು ಉತ್ತಮ ಪಂದ್ಯಗಳಿಗಾಗಿ ಕೆಲಸ ಮಾಡುತ್ತಿದ್ದೇನೆ. ಜಯ್ ಶಾ ಅವರು ಈಡನ್ ಗಾರ್ಡನ್ ಬಗ್ಗೆ ಉತ್ತಮ ದೃಷ್ಟಿಕೋನ ಹೊದಿದ್ದು, ಅದರಂತೆ ಉತ್ತಮ ಪಂದ್ಯಗಳನ್ನೇ ಇಲ್ಲಿ ಆಯೋಜಿಸಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ವಿಶ್ವಕಪ್ ವೇಳಾಪಟ್ಟಿ ಹೊರಬಿದ್ದ ಬೆನ್ನಲ್ಲೇ ಭಾರತಕ್ಕೆ ಬರಲು ಪಾಕ್ ಆಕ್ಷೇಪ

    ಈ ಹಿಂದೆಯೂ ನಾವು ಭಾರತ ಮತ್ತು ಪಾಕ್ ಪಂದ್ಯಗಳಿಗೆ ಆತಿಥ್ಯ ವಹಿಸಿದ್ದೇವೆ. ಈ ಬಾರಿ ಪಾಕಿಸ್ತಾನ ತನ್ನ ಎರಡು ಪಂದ್ಯಗಳನ್ನ ಈಡನ್ ಗಾರ್ಡನ್‌ನಲ್ಲಿ ಆಡಲಿದೆ. ಈ ಪಂದ್ಯಗಳು ಅತ್ಯಂತ ಕಠಿಣವಾಗಿರಲಿವೆ. ಈಗಾಗಲೇ ಐಪಿಎಲ್‌ನಲ್ಲಿ ಅತಿಹೆಚ್ಚು ಪ್ರೇಕ್ಷಕರನ್ನ ಈ ಅಂಗಳದಲ್ಲಿ ಕಂಡಿರುವುದರಿಂದ ಯಾವುದೇ ರೀತಿಯ ಸವಾಲುಗಳನ್ನು ನಾವು ಎದುರಿಸಲು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.

    ಈ ಪಂದ್ಯಗಳನ್ನು ಆಯೋಜಿಸುವ ಬಗ್ಗೆ ನನಗೆ ತುಂಬಾ ವಿಶ್ವಾಸವಿದೆ. ಪಾಕಿಸ್ತಾನ ತಂಡಕ್ಕೆ ವಿಶೇಷ ಭದ್ರತಾ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಈ ಹಿಂದೆಯೂ ಪಾಕ್ ತಂಡ ಕೋಲ್ಕತ್ತಾದಲ್ಲಿ ಆಡಿದೆ. ಮೊದಲ ಆದ್ಯತೆ ಕೋಲ್ಕತ್ತಾಗೆ ನೀಡಲಿದ್ದು, ನಂತರದಲ್ಲಿ ಚೆನ್ನೈ ಹಾಗೂ ಬೆಂಗಳೂರು ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯಗಳಿಗೆ ಭದ್ರತೆ ಒದಗಿಸಲಾಗುತ್ತದೆ ಎಂದು ಅವರು ಭರವಸೆ ನೀಡಿದ್ದಾರೆ. ಇದನ್ನೂ ಓದಿ: ICC ODI World Cup 2023: ಏಕದಿನ ವಿಶ್ವಕಪ್‌ ವೇಳಾಪಟ್ಟಿ ಪ್ರಕಟ

    ಸಿಎಂ ಮಮತಾ ಬ್ಯಾನರ್ಜಿ ಹಾಗೂ ಕೋಲ್ಕತ್ತಾ ಪೊಲೀಸರ ಮೇಲೆ ನನಗೆ ನಂಬಿಕೆಯಿದೆ. ಸಾಮಾನ್ಯ ಪಂದ್ಯಗಳಿಗಿಂತ ಹೆಚ್ಚಿನ ಭದ್ರತಾ ವ್ಯವಸ್ಥೆಯನ್ನು ಈ ಪಂದ್ಯಗಳಿಗೆ ಒದಗಿಸಲಿದ್ದಾರೆ ಎಂದು ಶ್ಲಾಘಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]