Tag: ಐಸಿಸಿ ಅಂಡರ್ 19

  • ಟೀಂ ಇಂಡಿಯಾ ಪರ ಅಂತಾರಾಷ್ಟ್ರೀಯ ಪಂದ್ಯವಾಡಿದ ಶಿಫಾಲಿ ಇದೀಗ U19 ಕ್ಯಾಪ್ಟನ್!

    ಟೀಂ ಇಂಡಿಯಾ ಪರ ಅಂತಾರಾಷ್ಟ್ರೀಯ ಪಂದ್ಯವಾಡಿದ ಶಿಫಾಲಿ ಇದೀಗ U19 ಕ್ಯಾಪ್ಟನ್!

    ಮುಂಬೈ: ಮಹಿಳಾ ಕ್ರಿಕೆಟ್‍ನಲ್ಲಿ (Women’s Cricket) ಕಿರಿಯ ವಯಸ್ಸಿಗೆ ಟೀಂ ಇಂಡಿಯಾಗೆ (Team India) ಎಂಟ್ರಿಕೊಟ್ಟು ಅಬ್ಬರಿಸಿದ ಹುಡುಗಿ ಶಿಫಾಲಿ ವರ್ಮಾ (Shafali Verma) ಇದೀಗ ಅಂಡರ್-19 ಆಡಲು ಸಿದ್ಧರಾಗಿದ್ದಾರೆ.

    ಸ್ಫೋಟಕ ಬ್ಯಾಟರ್ ಆಗಿ ಟೀಂ ಇಂಡಿಯಾ ಪರ ಹವಾ ಸೃಷ್ಟಿಸಿರುವ ಶಿಫಾಲಿ 18ರ ಪೋರಿ. ತನ್ನ ಹೊಡಿಬಡಿ ಆಟದ ಮೂಲಕ ಕಿರಿಯ ವಯಸ್ಸಿಗೆ ಟೀಂ ಇಂಡಿಯಾಗೆ ಎಂಟ್ರಿ ಕೊಟ್ಟಿದ್ದರು. ಅಲ್ಲದೇ ಈಗಾಗಲೇ ಹಲವು ಅಂತಾರಾಷ್ಟ್ರೀಯ ಪಂದ್ಯಗಳನ್ನು ಕೂಡ ಆಡಿದ್ದಾರೆ. ಈ ನಡುವೆ ಶಿಫಾಲಿ ಇದೀಗ ಮುಂದಿನ ಜನವರಿಯಲ್ಲಿ ನಡೆಯಲಿರುವ ಅಂಡರ್-19 (U19) ಮಹಿಳಾ ಟಿ20 ವಿಶ್ವಕಪ್‍ನಲ್ಲಿ ಭಾರತ ತಂಡದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇದನ್ನೂ ಓದಿ: ಕ್ಯಾಚ್ ಕೈಚೆಲ್ಲಿದ ಸುಂದರ್‌ಗೆ ಕೆಟ್ಟದಾಗಿ ಬೈದ ರೋಹಿತ್ – ನೆಟ್ಟಿಗರ ಆಕ್ರೋಶ

    ಹೌದು ಶಿಫಾಲಿಗೆ ಇದೀಗ 18 ವರ್ಷ ವಯಸ್ಸು ಹಾಗಾಗಿ ಮೊಟ್ಟ ಮೊದಲ ಬಾರಿಗೆ ಆರಂಭವಾಗುತ್ತಿರುವ ಮಹಿಳಾ ಅಂಡರ್-19 ಟಿ20 ವಿಶ್ವಕಪ್‍ನಲ್ಲಿ ಆಡಲು ಆಯ್ಕೆಯಾಗಿದ್ದಾರೆ. ಇದೀಗ ಶಿಫಾಲಿ ವರ್ಮಾ ನೇತೃತ್ವದಲ್ಲಿ ಅಂಡರ್-19 ತಂಡವನ್ನು ಬಿಸಿಸಿಐ ಆಯ್ಕೆ ಸಮಿತಿ ಆಯ್ಕೆ ಮಾಡಿದೆ. ಇದನ್ನೂ ಓದಿ: ಕ್ರಿಕೆಟ್‌ನಲ್ಲೂ ಮೀಸಲಾತಿ ತರಬೇಕು – ನಟ ಚೇತನ್

    ಚೊಚ್ಚಲ ಬಾರಿಗೆ ಅಂಡರ್-19 ಮಹಿಳಾ ಟಿ20 ವಿಶ್ವಕಪ್ ಆಯೋಜನೆ ಮಾಡಲಾಗಿದ್ದು, ಸೌತ್ ಆಫ್ರಿಕಾದಲ್ಲಿ ಟೂರ್ನಿ ನಡೆಯಲಿದೆ. ಒಟ್ಟು 16 ತಂಡಗಳು ಭಾಗವಹಿಸುತ್ತಿದ್ದು, 2023ರ ಜನವರಿ 14 ರಿಂದ 29ರ ವರೆಗೆ ನಡೆಯಲಿದೆ.

    ಮಹಿಳಾ ತಂಡ:
    ಶಫಾಲಿ ವರ್ಮಾ (ಕ್ಯಾಪ್ಟನ್), ಶ್ವೇತಾ ಸೆಹ್ರಾವತ್ (ಉಪನಾಯಕಿ), ರಿಚಾ ಘೋಷ್ (WK), ಜಿ ತ್ರಿಶಾ, ಸೌಮ್ಯ ತಿವಾರಿ, ಸೋನಿಯಾ ಮೆಹದಿಯಾ, ಹರ್ಲಿ ಗಾಲಾ, ಹೃಷಿತಾ ಬಸು (WK), ಸೋನಮ್ ಯಾದವ್, ಮನ್ನತ್ ಕಶ್ಯಪ್, ಅರ್ಚನಾ ದೇವಿ, ಪಾರ್ಶವಿ ಚೋಪ್ರಾ, ಟಿಟಾಸ್ ಸಾಧು, ಫಲಕ್ ನಾಜ್, ಶಬ್ನಮ್ ಎಂ.ಡಿ.

    Live Tv
    [brid partner=56869869 player=32851 video=960834 autoplay=true]

  • ಕನ್ನಡಿಗ ರಾಹುಲ್ ದ್ರಾವಿಡ್‍ ಬಗ್ಗೆ ಮೋದಿ ಪ್ರಶಂಸೆ

    ಕನ್ನಡಿಗ ರಾಹುಲ್ ದ್ರಾವಿಡ್‍ ಬಗ್ಗೆ ಮೋದಿ ಪ್ರಶಂಸೆ

    ಬೆಂಗಳೂರು: ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಐಸಿಸಿ ಅಂಡರ್ 19 ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ ಕನ್ನಡಿಗ ರಾಹುಲ್ ದ್ರಾವಿಡ್‍ ರನ್ನು ಹೆಸರು ಪ್ರಸ್ತಾಪಿಸಿ ಹಾಡಿ ಹೊಳಿಸಿದ್ದಾರೆ.

    ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ ಮೋದಿ ತಮ್ಮ ಮೊದಲ ಐದು ನಿಮಿಷದ ಭಾಷಣವನ್ನು ಕನ್ನಡದಲ್ಲೇ ಮಾಡಿದರು. ಈ ವೇಳೆ ಕನ್ನಡ ನಾಡಿನ ಹೆಮ್ಮೆಯ ನಾಡಪ್ರಭೂ ಕೆಂಪೇಗೌಡ, ಬಸವೇಶ್ವರ, ಮಾದರ ಚನ್ನಯ್ಯ, ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ರನ್ನು ನೆನೆದರು. ಕರ್ನಾಟಕ ಮಹಾಪುರುಷರ ನಾಡು ನವ ಕರ್ನಾಟಕ ನಿರ್ಮಾಣಕ್ಕೆ ಬಿಜೆಪಿ ಯನ್ನು ಗೆಲ್ಲಿಸಿ ಕಾರ್ಯಕರ್ತರಿಗೆ ಕರೆ ನೀಡಿದರು.

    ಇದೇ ವೇಳೆ ರಾಹುಲ್ ದ್ರಾವಿಡ್ ರನ್ನು ನೆನಪಿಸಿಕೊಂಡ ಪ್ರಧಾನಿ ಮೋದಿ ಐಸಿಸಿ ಅಂಡರ್ 19 ವಿಶ್ವಕಪ್ ಗೆಲ್ಲವು ಹಿಂದೆ ದ್ರಾವಿಡ್ ಅವರ ಶ್ರಮ ಹೆಚ್ಚು. ಟೀ ಇಂಡಿಯಾ ವಿಶ್ವಕಪ್ ಗೆಲುವಿನ ಹಿಂದೆ ಕನ್ನಡ ಮಣ್ಣಿನ ದ್ರಾವಿಡ್ ಇದ್ದಾರೆ ಎಂದರು.

    ಕನ್ನಡಿಗ ರಾಹುಲ್ ದ್ರಾವಿಡ್‍ ಅವರ ಮಾರ್ಗರ್ದಶನದಲ್ಲಿ ಐಸಿಸಿ ವಿಶ್ವಕಪ್ ಟೂರ್ನಿ ಎದುರಿಸಿದ್ದ ಅಂಡರ್ 19 ತಂಡ ಅದ್ಭುತ ಪ್ರದರ್ಶನ ನೀಡಿ ವಿಶ್ವಕಪ್ ಮುಡಿಗೆರಿಸಿಕೊಂಡಿತ್ತು. ಫೈನಲ್ ನಲ್ಲಿ ಆಸ್ಟ್ರೇಲಿಯಾವನ್ನು 8 ವಿಕೆಟ್ ಗಳಿಂದ ಬಗ್ಗು ಬಡಿದು ಭಾರತ ನಾಲ್ಕನೇಯ ಬಾರಿ ಅಂಡರ್ 19 ವಿಶ್ವಕಪ್ ಜಯಿಸಿತ್ತು. ಟೀಂ ಇಂಡಿಯಾ ಯುವ ಪಡೆಯ ಕೋಚ್ ಹಾಗೂ ಮಾರ್ಗದರ್ಶರಾಗಿದ್ದ ರಾಹುಲ್ ದ್ರಾವಿಡ್ ಆಟಗಾರರಿಗೆ ಉತ್ತಮ ತರಬೇತಿ ನೀಡಿದ್ದರು. ಅಲ್ಲದೇ ಆಟಗಾರರ ಮನಸ್ಸು ಕೇವಲ ಪಂದ್ಯದ ಕಡೆ ಗಮನ ಹರಿಸುವಂತೆ ಐಪಿಎಲ್ ಹರಾಜಿನ ಬಗ್ಗೆ ತಲೆ ಕೆಡಿಸಿಕೊಡದಂತೆ ಸಲಹೆ ನೀಡಿದ್ದರು. ಟೀ ಇಂಡಿಯಾ ಸೆಮಿ ಫೈನಲ್ ಪ್ರವೇಶಿಸುತ್ತಿದಂತೆ ಆಟಗಾರರ ಮೊಬೈಲ್ ಫೋನ್ ಆಫ್ ಮಾಡುವಂತೆಯೂ ಖಡಕ್ ಸೂಚನೆ ನೀಡಿದ್ದರು. ದ್ರಾವಿಡ್ ರ ಮಾತನ್ನು ಚಾಚು ತಪ್ಪದೆ ಪಾಲಿಸಿದ್ದ ಟೀಂ ಇಂಡಿಯಾ ಆಟಗಾರರು ವಿಶ್ವಕಪ್ ಗೆದ್ದು ವಿಜಯಪತಾಕೆಯನ್ನು ಹಾರಿಸಿದ್ದರು.