Tag: ಐಸಿಸಿ

  • Shreyas Iyer In ICU | ಪಕ್ಕೆಲುಬು ಗಾಯದಿಂದ ರಕ್ತಸ್ರಾವ – ಐಸಿಯುನಲ್ಲಿ ಶ್ರೇಯಸ್‌ ಅಯ್ಯರ್‌ಗೆ ಚಿಕಿತ್ಸೆ

    Shreyas Iyer In ICU | ಪಕ್ಕೆಲುಬು ಗಾಯದಿಂದ ರಕ್ತಸ್ರಾವ – ಐಸಿಯುನಲ್ಲಿ ಶ್ರೇಯಸ್‌ ಅಯ್ಯರ್‌ಗೆ ಚಿಕಿತ್ಸೆ

    ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಕೊನೇ ಪಂದ್ಯದಲ್ಲಿ ಕ್ಯಾಚ್‌ ಹಿಡಿಯವ ವೇಳೆ ಎಡ ಪಕ್ಕೆಲುಬು ಗಾಯಕ್ಕೆ ತುತ್ತಾಗಿ ಟೀಂ ಇಂಡಿಯಾ ಉಪನಾಯಕ ಶ್ರೇಯಸ್‌ ಅಯ್ಯರ್‌ (Shreyas Iyer) ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಂತರಿಕ ರಕ್ತಸ್ರಾವದಿಂದ ಬಳಲುತ್ತಿರುವ ಅಯ್ಯರ್ ಅವರನ್ನ ಸಿಡ್ನಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ICU) ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    34ನೇ ಓವರ್‌ನಲ್ಲಿ ಆಸ್ಟ್ರೇಲಿಯಾದ ಅಲೆಕ್ಸ್‌ ಕ್ಯಾರಿ (Alex Carey) ಬಾರಿಸಿದ ಚೆಂಡನ್ನು ಹಿಡಿಯಲು ಹಿಂದಕ್ಕೆ ಓಡಿ ಅದ್ಭುತ ಕ್ಯಾಚ್ ಪಡೆದುಕೊಂಡಿದ್ದರು. ಆ ಸಂದರ್ಭದಲ್ಲಿ ಅಯ್ಯರ್ ಪಕ್ಕೆಲುಬಿನ ಗಾಯಕ್ಕೆ ಒಳಗಾಗಿ ಮೈದಾನ ತೊರಿದಿದ್ದರು. ಅಲ್ಲದೇ ಡ್ರೆಸ್ಸಿಂಗ್‌ ರೂಮ್‌ಗೆ ಬರ್ತಿದ್ದಂತೆ ಅಯ್ಯರ್‌ ಅವರನ್ನ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವರದಿಯಲ್ಲಿ ಆಂತರಿಕ ರಕ್ತಸ್ರಾವವಾಗಿರುವುದು ಪತ್ತೆಯಾಗಿದ್ದು, ಕಳೆದ ಎರಡು ದಿನಗಳಿಂದ ಐಸಿಯುನಲ್ಲೇ ಚಿಕಿತ್ಸೆ ಕೊಡಲಾಗುತ್ತಿದೆ ಎಂದು ತಿಳಿದುಬಂದಿದೆ.

    ರಕ್ತಸ್ರಾವದಿಂದ ಸೋಂಕು ಹರಡುವುದನ್ನ ತಪ್ಪಿಸುವ ಉದ್ದೇಶದಿಂದ ಚೇತರಿಕೆಯ ಆಧಾರದಲ್ಲಿ ಅವರನ್ನು ಎರಡರಿಂದ ಏಳು ದಿನಗಳ ಕಾಲ ವೈದ್ಯರ ಮೇಲ್ವಿಚಾರಣೆಯಲ್ಲಿಡಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.

    ಬಿಸಿಸಿಐ ಹೇಳೋದೇನು?
    ಸ್ಕ್ಯಾನ್‌ ವರದಿಯಲ್ಲಿ ಪಕ್ಕೆಲುಬು ಗಾಯವಾಗಿರುವುದು ಕಂಡುಬಂದಿದೆ. ಆದ್ರೆ ವೈದ್ಯಕೀಯವಾಗಿ ಸ್ಥಿರವಾಗಿದ್ದು, ಶೀಘ್ರದಲ್ಲೇ ಚೇತರಿಸಿಕೊಳ್ಳುತ್ತಿದ್ದಾರೆ. ಸಿಡ್ನಿ ಮತ್ತು ಭಾರತದ ತಜ್ಞರ ಸಮನ್ವಯದೊಂದಿಗೆ ಬಿಸಿಸಿಐ ವೈದ್ಯಕೀಯ ತಂಡವು ಅಯ್ಯರ್‌ ಆರೋಗ್ಯ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಅದಕ್ಕಾಗಿ ವೈದ್ಯಕೀಯ ತಂಡವನ್ನ ಸಿಡ್ನಿಯಲ್ಲೇ ಇರಿಸಲಾಗಿದೆ ಎಂದು ಬಿಸಿಸಿಐ (BCCI) ಹೇಳಿದೆ.

    ಆರಂಭದಲ್ಲಿ ಅಯ್ಯ‌ರ್ ಸುಮಾರು 3 ವಾರಗಳ ಕಾಲ ಆಟದಿಂದ ಹೊರಗುಳಿಯಬೇಕಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದ್ರೆ ಪರಿಸ್ಥಿತಿ ಗಮನಿಸಿದರೆ ಅವರ ಚೇತರಿಕೆಯ ಅವಧಿ ಇನ್ನಷ್ಟು ವಿಸ್ತರಣೆಯಾಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

  • 1 ಪಂದ್ಯದ ಆಟದಿಂದ ಕೊಹ್ಲಿ, ಸಾಲ್ಟ್‌ ಹಿಂದಿಕ್ಕಿ ಟಿ20ಯಲ್ಲಿ ಅಭಿಷೇಕ್‌ ಶರ್ಮಾ ವಿಶ್ವದಾಖಲೆ

    1 ಪಂದ್ಯದ ಆಟದಿಂದ ಕೊಹ್ಲಿ, ಸಾಲ್ಟ್‌ ಹಿಂದಿಕ್ಕಿ ಟಿ20ಯಲ್ಲಿ ಅಭಿಷೇಕ್‌ ಶರ್ಮಾ ವಿಶ್ವದಾಖಲೆ

    ದುಬೈ: ಏಷ್ಯಾ ಕಪ್‌ನಲ್ಲಿ (Asia Cup) ಸಿಕ್ಸ್‌, ಬೌಂಡರಿ ಸಿಡಿಸಿ ಸದ್ದು ಮಾಡಿದ ಅಭಿಷೇಕ್‌ ಶರ್ಮಾ (Abhishek Sharma) ಐಸಿಸಿ ಟಿ20 (ICC T20) ರ‍್ಯಾಕ್‌ ಪಟ್ಟಿಯಲ್ಲಿ ವಿಶ್ವದಾಖಲೆ (World Record) ಮಾಡಿದ್ದಾರೆ.

    25 ವರ್ಷದ ಅಭಿಷೇಕ್‌ ಶರ್ಮಾ ಮೊದಲ ಸ್ಥಾನ ಪಡೆದಿದ್ದು ಅಲ್ಲದೇ 926 ರೇಟಿಂಗ್‌ ಪಾಯಿಂಟ್‌ ಪಡೆಯುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.

    ಇಲ್ಲಿಯವರೆಗೆ 2020 ರಲ್ಲಿ ಇಂಗ್ಲೆಂಡಿನ ಡೇವಿಡ್‌ ಮಲಾನ್‌ 919 ರೇಟಿಂಗ್‌ ಪಾಯಿಂಟ್‌ ಪಡೆದಿದ್ದು ಇದೂವರೆಗಿನ ದಾಖಲೆಯಾಗಿತ್ತು. ಆದರೆ ಏಷ್ಯಾ ಕಪ್‌ನ 7 ಪಂದ್ಯಗಳಿಂದ 314 ರನ್‌ ಸಿಡಿಸಿದ್ದರಿಂದ ವಿಶ್ವದಾಖಲೆ ನಿರ್ಮಾಣವಾಗಿದೆ.  ಇದನ್ನೂ ಓದಿಬಿಸಿಸಿಐ ಮುಂದೆ ಮಂಡಿಯೂರಿದ ಪಾಕ್‌ ಸಚಿವ – ಕದ್ದೊಯ್ದಿದ್ದ ಏಷ್ಯಾ ಕಪ್‌ ವಾಪಸ್‌

    ವಿರಾಟ್‌ ಕೊಹ್ಲಿ ಈ ಹಿಂದೆ 909 ರೇಟಿಂಗ್‌ ಪಾಯಿಂಟ್‌ ಪಡೆದಿದ್ದರು. ಇದು ಈವರೆಗಿನ ಭಾರತೀಯ ಬ್ಯಾಟರ್‌ನ ಅತ್ಯುತ್ತಮ ರೇಟಿಂಗ್‌ ಪಾಯಿಂಟ್‌ ಆಗಿತ್ತು. ಆದರೆ ಈಗ ಕೊಹ್ಲಿ ಹೆಸರಿನಲ್ಲಿದ್ದ ದಾಖಲೆಯನ್ನು ಅಭಿಷೇಕ್‌ ಶರ್ಮಾ ಮುರಿದಿದ್ದಾರೆ.

    ಸೂಪರ್‌ 4 ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಶರ್ಮಾ 31 ಎಸೆತಗಳಲ್ಲಿ 61 ರನ್‌ (8 ಬೌಂಡರಿ, 2 ಸಿಕ್ಸ್‌) ಸಿಡಿಸಿದ್ದರು. ಈ ಸ್ಫೋಟಕ ಆಟದಿಂದಾಗಿ ಅಭಿಷೇಕ್‌ ಶರ್ಮಾ ಅವರ ರೇಟಿಂಗ್‌ ಪಾಯಿಂಟ್‌ ರಾಕೆಟ್‌ನಂತೆ ಮೇಲಕ್ಕೆ ಹೋಗಿದೆ.

    ಅಂಕಪಟ್ಟಿಯಲ್ಲಿ ಫಿಲ್‌ ಸಾಲ್ಟ್‌ 2ನೇ ರ‍್ಯಾಕ್‌ ಪಡೆದರೆ ತಿಲಕ್‌ ವರ್ಮಾ ಮೂರನೇ ಸ್ಥಾನ ಪಡೆದಿದ್ದಾರೆ. 2 ಸ್ಥಾನ ಕುಸಿದಿದ್ದರಿಂದ ಸೂರ್ಯಕುಮಾರ್‌ ಯಾದವ್‌ 8ನೇ ಸ್ಥಾನಕ್ಕೆ ಜಾರಿದ್ದಾರೆ.

  • ಪಹಲ್ಗಾಮ್‌ ಸಂತ್ರಸ್ತರಿಗೆ ಗೆಲುವು ಅರ್ಪಿಸಿದ ಸೂರ್ಯ, ಪ್ಲೇನ್‌ ಕ್ರ್ಯಾಶ್‌ ಸನ್ನೆ ಮಾಡಿದ ರೌಫ್‌ಗೆ ಬಿತ್ತು ದಂಡ

    ಪಹಲ್ಗಾಮ್‌ ಸಂತ್ರಸ್ತರಿಗೆ ಗೆಲುವು ಅರ್ಪಿಸಿದ ಸೂರ್ಯ, ಪ್ಲೇನ್‌ ಕ್ರ್ಯಾಶ್‌ ಸನ್ನೆ ಮಾಡಿದ ರೌಫ್‌ಗೆ ಬಿತ್ತು ದಂಡ

    – ಗನ್‌ ಸೆಲೆಬ್ರೇಷನ್‌ ಮಾಡಿದ ಫರ್ಹಾನ್‌ಗೆ ಬಿಗ್‌ ವಾರ್ನಿಂಗ್‌

    ದುಬೈ: ಯುಎಇನಲ್ಲಿ ನಡೆಯುತ್ತಿರುವ ಏಷ್ಯಾಕಪ್‌ (Asia Cup 2025) ಟೂರ್ನಿಯಲ್ಲಿ ಐಸಿಸಿ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಟೀಂ ಇಂಡಿಯಾ ಕ್ಯಾಪ್ಟನ್‌ ಸೂರ್ಯಕುಮಾರ್‌ ಯಾದವ್‌ (Suryakumar Yadav) ಹಾಗೂ ಪಾಕ್‌ ವೇಗಿ ಹ್ಯಾರಿಸ್‌ ರೌಫ್‌ಗೆ ಪಂದ್ಯ ಶುಲ್ಕದ ತಲಾ 30% ದಂಡ ವಿಧಿಸಲಾಗಿದೆ.

    ಶುಕ್ರವಾರ ವಿಚಾರಣೆ ಮುಗಿದ ಬಳಿಕ ಮ್ಯಾಚ್‌ ರೆಫರಿ ರಿಚಿ ರಿಚರ್ಡ್‌ಸನ್‌ ಇಬ್ಬರೂ ಆಟಗಾರರಿಗೆ ಪಂದ್ಯ ಶುಲ್ಕದ 30% ದಂಡ ವಿಧಿಸಿದ್ದಾರೆ. ಆದ್ರೆ ಗನ್‌ ಸೆಲೆಬ್ರೇಷನ್‌ ಮಾಡಿದ್ದ ಸಾಹಿಬ್‌ಜಾದಾ ಫರ್ಹಾನ್‌ಗೆ (Sahibzada Farhan) ಎಚ್ಚರಿಕೆ ನೀಡಿ ಕಳುಹಿಸಲಾಗಿದೆ. ಇದನ್ನೂ ಓದಿ: ಫಸ್ಟ್‌ ಟೈಮ್‌ – ಏಷ್ಯಾ ಕಪ್‌ ಇತಿಹಾಸದಲ್ಲಿ ಇಂಡೋ- ಪಾಕ್ ಫೈನಲ್

    ಸೂರ್ಯನಿಗೇಕೆ ದಂಡ?
    ‌ಏಷ್ಯಾಕಪ್‌ ಟೂರ್ನಿಯ ಗುಂಪುಹಂತದ ಪಂದ್ಯದಲ್ಲಿ ಪಾಕ್‌ ವಿರುದ್ಧ ಭಾರತ ಗೆದ್ದಾಗ ನಾಯಕ ಸೂರ್ಯಕುಮಾರ್‌ ಯಾದವ್‌ ಪಂದ್ಯದ ಗೆಲುವು ಪಹಲ್ಗಾಮ್‌ ಸಂತ್ರಸ್ತರು ಹಾಗೂ ಭಾರತೀಯ ಸೇನೆಗೆ ಅರ್ಪಣೆ ಎಂದಿದ್ದರು. ಈ ಹೇಳಿಕೆ ರಾಜಕೀಯ ಪ್ರೇರಿತವಾಗಿದೆ ಎಂದು ಪಿಸಿಬಿ ಐಸಿಸಿಗೆ ದೂರು ಸಲ್ಲಿಸಿತ್ತು. ಈ ಬಗ್ಗೆ ಸೂರ್ಯರನ್ನ ವಿಚಾರಣೆ ನಡೆಸಿದಾಗ ತನ್ನದೇನು ತಪ್ಪಿಲ್ಲವೆಂದು ಒಪ್ಪಿಕೊಂಡರು. ಬಳಿಕ ಐಸಿಸಿ 30% ದಂಡ ವಿಧಿಸಿ ಆದೇಶಿಸಿತು. ಏಷ್ಯಾ ಕಪ್ ಮುಗಿದ ನಂತರವೇ ಐಸಿಸಿಯಿಂದ ಅಧಿಕೃತ ದೃಢೀಕರಣ ಸಿಗಲಿದೆ ಎಂದು ರಿಚರ್ಡ್‌ಸನ್‌ ತಿಳಿಸಿದ್ದಾರೆ.

    ಮತ್ತೊಂದು ಕಡೆ ಪ್ಲೇನ್‌ ಕ್ರ್ಯಾಶ್‌ ರೀತಿ ಸಂಭ್ರಮಿಸಿದ್ದಕ್ಕೆ ರೌಫ್‌ ವಿರುದ್ಧ ಬಿಸಿಸಿಐ ಐಸಿಸಿಗೆ ದೂರು ನೀಡಿತ್ತು. ವಿಚಾರಣೆ ಬಳಿಕ ಐಸಿಸಿ ರೌಫ್‌ಗೂ ದಂಡ ವಿಧಿಸಿತು. ಇನ್ನೂ ಸೂಪರ್‌ ಫೋರ್‌ನ ಮೊದಲ ಪಂದ್ಯದಲ್ಲಿ ಫಿಫ್ಟಿ ಬಾರಿಸಿ ಗನ್‌ ಸೆಲೆಬ್ರೇಷನ್‌ ಮಾಡಿದ ಫರ್ಹಾನ್‌ಗೆ ಎಚ್ಚರಿಕೆ ನೀಡಿತು. ಇದನ್ನೂ ಓದಿ: ಪಹಲ್ಗಾಮ್‌ ಸಂತ್ರಸ್ತರು, ಭಾರತೀಯ ಸೇನೆಗೆ ಗೆಲುವು ಅರ್ಪಣೆ ಎಂದ ಸೂರ್ಯಗೆ ಐಸಿಸಿ ವಾರ್ನಿಂಗ್‌

    ಈಗಾಗಲೇ ಎರಡು ಪಂದ್ಯಗಳನ್ನಾಡಿರುವ ಭಾರತ ಮತ್ತು ಪಾಕಿಸ್ತಾನ ತಂಡಗಳು 3ನೇ ಬಾರಿಗೆ ಮುಖಾಮುಖಿಯಾಗುತ್ತಿವೆ. ಏಷ್ಯಾಕಪ್‌ನ 41 ವರ್ಷಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತ ಮತ್ತು ಪಾಕಿಸ್ತಾನ ನಡುವೆ ಫೈನಲ್ ಪಂದ್ಯ ನಡೆಯಲಿದೆ.

  • ಪಹಲ್ಗಾಮ್‌ ಸಂತ್ರಸ್ತರು, ಭಾರತೀಯ ಸೇನೆಗೆ ಗೆಲುವು ಅರ್ಪಣೆ ಎಂದ ಸೂರ್ಯಗೆ ದಂಡ ವಿಧಿಸಿದ ಐಸಿಸಿ

    ಪಹಲ್ಗಾಮ್‌ ಸಂತ್ರಸ್ತರು, ಭಾರತೀಯ ಸೇನೆಗೆ ಗೆಲುವು ಅರ್ಪಣೆ ಎಂದ ಸೂರ್ಯಗೆ ದಂಡ ವಿಧಿಸಿದ ಐಸಿಸಿ

    ದುಬೈ: ಪಹಲ್ಗಾಮ್‌ ದಾಳಿಗೆ ಸಂಬಂಧಿಸಿದಂತೆ ಹೇಳಿಕೆ ನೀಡಿದ ಟೀಂ ಇಂಡಿಯಾ (Team India) ನಾಯಕ ಸೂರ್ಯಕುಮಾರ್‌ ಯಾದವ್‌ (Suryakumar Yadav) ವಿರುದ್ಧ ಐಸಿಸಿ ಶಿಸ್ತು ಕ್ರಮಕೈಗೊಂಡಿದೆ.

    ಪಾಕಿಸ್ತಾನ ಕ್ರಿಕೆಟ್‌ ಬೋರ್ಡ್‌ ನೀಡಿದ ದೂರನ್ನು ಸ್ವೀಕರಿಸಿದ ಐಸಿಸಿ (ICC) ಸೂರ್ಯಕುಮಾರ್‌ ಯಾದವ್‌ ಅವರ ವಿಚಾರಣೆ ನಡೆಸಿ ಪಂದ್ಯ ಶುಲ್ಕದ ಶೇ.30 ರಷ್ಟು ದಂಡ ವಿಧಿಸಿದೆ.

    ವಿಚಾರಣೆ ಸಂದರ್ಭದಲ್ಲಿ ಸೂರ್ಯ ತನ್ನ ಮೇಲೆ ಬಂದ ಆರೋಪಕ್ಕೆ ತಪ್ಪೊಪ್ಪಿಕೊಂಡಿಲ್ಲ. ಮುಂದೆ ನಡೆಯವ ಫೈನಲ್‌ ಪಂದ್ಯದಲ್ಲಿ ರಾಜಕೀಯ ಎಂದು ಅರ್ಥೈಸಬಹುದಾದ ಯಾವುದೇ ಹೇಳಿಕೆ ನೀಡದಂತೆ ಸೂಚಿಸಲಾಗಿದೆ ಎಂದು ವರದಿಯಾಗಿದೆ.  ಇದನ್ನೂ ಓದಿ:  ಭಾರತ-ಪಾಕ್ ಪಂದ್ಯದ ವೇಳೆ ದುವರ್ತನೆ – ಫರ್ಹಾನ್, ರೌಫ್‌ ವಿರುದ್ಧ ಐಸಿಸಿಗೆ ಬಿಸಿಸಿಐ ದೂರು

    ಪಾಕಿಸ್ತಾನ ಕ್ರಿಕೆಟ್‌ ಬೋರ್ಡ್‌ ನೀಡಿದ ದೂರನ್ನು ಸ್ವೀಕರಿಸಿದ ಐಸಿಸಿ (ICC) ಸೂರ್ಯಕುಮಾರ್‌ ಯಾದವ್‌ ಅವರ ವಿಚಾರಣೆ ನಡೆಸಿತ್ತು. ಪಿಸಿಬಿ ಸಲ್ಲಿಸಿದ ಎಲ್ಲಾ ಪುರಾವೆಗಳು ಮತ್ತು ಹೇಳಿಕೆಗಳನ್ನು ಪರಿಶೀಲಿಸಿದ ನಂತರ ಸೂರ್ಯಕುಮಾರ್ ಅವರ ಹೇಳಿಕೆಗಳು ಕ್ರೀಡಾ ಸ್ಪೂರ್ತಿಗೆ ವಿರುದ್ಧವಾಗಿದೆ. ಹೀಗಾಗಿ ಸೂರ್ಯಕುಮಾರ್‌ ವಿರುದ್ಧ ಆರೋಪ ಹೊರಿಸುವಂತೆ ಮ್ಯಾಚ್‌ ರೆಫ್ರೀ ರಿಚಿ ರಿಚರ್ಡ್ಸನ್ ತೀರ್ಮಾನಿಸಿದ್ದರು. ಇದನ್ನೂ ಓದಿ:  ಸಿಕ್ಸ್‌ ಮೇಲೆ ಸಿಕ್ಸ್‌ – ಏಷ್ಯಾಕಪ್‌ನಲ್ಲಿ ದಾಖಲೆ ಬರೆದ ಅಭಿಷೇಕ್‌ ಶರ್ಮಾ

    ಸೂರ್ಯ ಹೇಳಿದ್ದೇನು?
    ಸೆಪ್ಟೆಂಬರ್ 14 ರಂದು ಪಾಕಿಸ್ತಾನದ ವಿರುದ್ಧ ಭಾರತ ಜಯಗಳಿಸಿದ ನಂತರ ಮಾತನಾಡಿದ ಸೂರ್ಯ, ಪಹಲ್ಗಾಮ್ ಸಂತ್ರಸ್ತರ ಕುಟುಂಬಗಳೊಂದಿಗೆ ನಾವು‌ ನಿಲ್ಲುತ್ತೇವೆ, ನಮ್ಮ ಒಗ್ಗಟ್ಟನ್ನು ಪ್ರದರ್ಶಿಸುತ್ತೇವೆ. ಶೌರ್ಯವನ್ನು ಪ್ರದರ್ಶಿಸಿದ ನಮ್ಮ ಎಲ್ಲಾ ಸಶಸ್ತ್ರ ಪಡೆಗಳಿಗೆ ಈ ಗೆಲುವನ್ನು ಅರ್ಪಿಸಲು ಬಯಸುತ್ತೇವೆ. ಅವರು ನಮಗೆಲ್ಲರಿಗೂ ಸ್ಫೂರ್ತಿ ಎಂದು ಹೇಳಿದ್ದರು.

  • ಪಹಲ್ಗಾಮ್‌ ಸಂತ್ರಸ್ತರು, ಭಾರತೀಯ ಸೇನೆಗೆ ಗೆಲುವು ಅರ್ಪಣೆ ಎಂದ ಸೂರ್ಯಗೆ ಐಸಿಸಿ ವಾರ್ನಿಂಗ್‌

    ಪಹಲ್ಗಾಮ್‌ ಸಂತ್ರಸ್ತರು, ಭಾರತೀಯ ಸೇನೆಗೆ ಗೆಲುವು ಅರ್ಪಣೆ ಎಂದ ಸೂರ್ಯಗೆ ಐಸಿಸಿ ವಾರ್ನಿಂಗ್‌

    ದುಬೈ: ಪಹಲ್ಗಾಮ್‌ ದಾಳಿಗೆ ಸಂಬಂಧಿಸಿದಂತೆ ಹೇಳಿಕೆ ನೀಡಿದ ಟೀಂ ಇಂಡಿಯಾ (Team India) ನಾಯಕ ಸೂರ್ಯಕುಮಾರ್‌ ಯಾದವ್‌ಗೆ (Suryakumar Yadav) ಐಸಿಸಿ ಎಚ್ಚರಿಕೆ ನೀಡಿದೆ ಎಂದು ವರದಿಯಾಗಿದೆ.

    ಪಾಕಿಸ್ತಾನ ಕ್ರಿಕೆಟ್‌ ಬೋರ್ಡ್‌ ನೀಡಿದ ದೂರನ್ನು ಸ್ವೀಕರಿಸಿದ ಐಸಿಸಿ (ICC) ಸೂರ್ಯಕುಮಾರ್‌ ಯಾದವ್‌ ಅವರ ವಿಚಾರಣೆ ನಡೆಸಿದೆ.

    ಪಿಸಿಬಿ ಸಲ್ಲಿಸಿದ ಎಲ್ಲಾ ಪುರಾವೆಗಳು ಮತ್ತು ಹೇಳಿಕೆಗಳನ್ನು ಪರಿಶೀಲಿಸಿದ ನಂತರ ಸೂರ್ಯಕುಮಾರ್ ಅವರ ಹೇಳಿಕೆಗಳು ಕ್ರೀಡಾ ಸ್ಪೂರ್ತಿಗೆ ವಿರುದ್ಧವಾಗಿದೆ. ಹೀಗಾಗಿ ಸೂರ್ಯಕುಮಾರ್‌ ವಿರುದ್ಧ ಆರೋಪ ಹೊರಿಸುವಂತೆ ಮ್ಯಾಚ್‌ ರೆಫ್ರೀ ರಿಚಿ ರಿಚರ್ಡ್ಸನ್ ತೀರ್ಮಾನಿಸಿದ್ದಾರೆ ಎಂದು ವರದಿಯಾಗಿದೆ.  ಇದನ್ನೂ ಓದಿ:  ಫಿಫ್ಟಿ ಬಾರಿಸಿ ಫರ್ಹಾನ್‌ ಗನ್‌ ಸೆಲೆಬ್ರೇಷನ್ – ಪೆಹಲ್ಗಾಮ್ ದಾಳಿಯ ಉಗ್ರರಿಗೆ ಹೋಲಿಸಿದ ನೆಟ್ಟಿಗರು

    ಪಾಕಿಸ್ತಾನದ ಬ್ಯಾಟರ್‌ ಫರ್ಹಾನ್ ಸಾಹಿಬ್‌ಜಾದಾ ಮತ್ತು ಹ್ಯಾರಿಸ್ ರೌಫ್ ಮೈದಾನದಲ್ಲಿ ತೋರಿದ ವರ್ತನೆಗೆ ಸಂಬಂಧಿಸಿಂತೆ ಬಿಸಿಸಿಐ ನೀಡಿದ ದೂರಿನ ಬಗ್ಗೆ ನಾಳೆ ಇಬ್ಬರ ವಿಚಾರಣೆ ನಡೆಯಲಿದೆ.  ಎರಡೂ ತಂಡಗಳ ಆಟಗಾರರ ವಿರುದ್ಧ ಐಸಿಸಿ ಶಿಸ್ತುಕ್ರಮವನ್ನು ಕೈಗೊಂಡು ದಂಡ ವಿಧಿಸುವ ಸಾಧ್ಯತೆಯಿದೆ. ಇದನ್ನೂ ಓದಿ:  ವಿಮಾನ ಕ್ರ್ಯಾಶ್‌ ರೀತಿ ಸನ್ನೆ ಮಾಡಿದ ರೌಫ್‌ಗೆ ರುಬ್ಬಿದ ನೆಟ್ಟಿಗರು – ಆಪರೇಷನ್‌ ಸಿಂಧೂರಕ್ಕೆ ಹೋಲಿಸಿ ಕಿಡಿ

    ಸೂರ್ಯ ಹೇಳಿದ್ದೇನು?
    ಸೆಪ್ಟೆಂಬರ್ 14 ರಂದು ಪಾಕಿಸ್ತಾನದ ವಿರುದ್ಧ ಭಾರತ ಜಯಗಳಿಸಿದ ನಂತರ ಮಾತನಾಡಿದ ಸೂರ್ಯ, ಪಹಲ್ಗಾಮ್ ಸಂತ್ರಸ್ತರ ಕುಟುಂಬಗಳೊಂದಿಗೆ ನಾವು‌ ನಿಲ್ಲುತ್ತೇವೆ, ನಮ್ಮ ಒಗ್ಗಟ್ಟನ್ನು ಪ್ರದರ್ಶಿಸುತ್ತೇವೆ. ಶೌರ್ಯವನ್ನು ಪ್ರದರ್ಶಿಸಿದ ನಮ್ಮ ಎಲ್ಲಾ ಸಶಸ್ತ್ರ ಪಡೆಗಳಿಗೆ ಈ ಗೆಲುವನ್ನು ಅರ್ಪಿಸಲು ಬಯಸುತ್ತೇವೆ. ಅವರು ನಮಗೆಲ್ಲರಿಗೂ ಸ್ಫೂರ್ತಿ ಎಂದು ಹೇಳಿದ್ದರು.

  • ಭಾರತ-ಪಾಕ್ ಪಂದ್ಯದ ವೇಳೆ ದುವರ್ತನೆ – ಫರ್ಹಾನ್, ರೌಫ್‌ ವಿರುದ್ಧ ಐಸಿಸಿಗೆ ಬಿಸಿಸಿಐ ದೂರು

    ಭಾರತ-ಪಾಕ್ ಪಂದ್ಯದ ವೇಳೆ ದುವರ್ತನೆ – ಫರ್ಹಾನ್, ರೌಫ್‌ ವಿರುದ್ಧ ಐಸಿಸಿಗೆ ಬಿಸಿಸಿಐ ದೂರು

    – ಪಹಲ್ಗಾಮ್‌ ಸಂತ್ರಸ್ತರಿಗೆ ಗೆಲುವು ಅರ್ಪಿಸಿದ್ದಕ್ಕೆ ಸೂರ್ಯ ವಿರುದ್ಧ ಪಿಸಿಬಿ ಕಂಪ್ಲೆಂಟ್‌

    ದುಬೈ: ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಬಳಿಕ ಭಾರತ-ಪಾಕ್‌ (Ind vs Pak) ಮುಖಾಮುಖಿಯಾಗಿರುವ ಮೊದಲ ಟೂರ್ನಿ ವಿವಾದದ ಕಣವಾಗಿ ಮಾರ್ಪಟ್ಟಿದೆ. ಕಳೆದ ಭಾನುವಾರ ಭಾರತ ಮತ್ತು ಪಾಕ್‌ ನಡುವಿನ ಮೊದಲ ಸೂಪರ್‌ ಫೋರ್‌ ಪಂದ್ಯ ಕೂಡ ಸ್ಲೆಡ್ಜಿಂಗ್‌ಗೆ (ಕೆಣಕುವುದು) ವೇದಿಕೆಯಾಗಿತ್ತು.

    ಸೂಪರ್‌-4 ಪಂದ್ಯದ ವೇಳೆ ದುವರ್ತನೆ ತೋರಿದ ಪಾಕಿಸ್ತಾನಿ ಕ್ರಿಕೆಟಿಗರಾದ ಹ್ಯಾರಿಸ್ ರೌಫ್ (Haris Rauf) ಮತ್ತು ಸಾಹಿಬ್‌ಝಾದಾ ಫರ್ಹಾನ್ (Sahibzada Farhan) ವಿರುದ್ಧ ಐಸಿಸಿಗೆ ಬಿಸಿಸಿಐ (BCCI) ದೂರು ನೀಡಿದೆ. ಐಸಿಸಿಗೆ ಇ-ಮೇಲ್ ಮೂಲಕ ದೂರು ನೀಡಿದೆ. ಸಾಹಿಬ್‌ಝಾದಾ ಫರ್ಹಾನ್ ಮತ್ತು ರೌಫ್ ಈ ಆರೋಪಗಳನ್ನು ಲಿಖಿತವಾಗಿ ನಿರಾಕರಿಸಿದ್ರೆ ಐಸಿಸಿ ವಿಚಾರಣೆ ನಡೆಸುವ ನಿರೀಕ್ಷೆಯಿದೆ. ಅವರು ಐಸಿಸಿ ಎಲೈಟ್ ಪ್ಯಾನಲ್ ರೆಫರಿ ರಿಚಿ ರಿಚರ್ಡ್ಸನ್ ಅವರ ಮುಂದೆ ವಿಚಾರಣೆಗೆ ಹಾಜರಾಗಬೇಕಾಗಬಹುದು ಎಂದು ವಿಶ್ವಾಸಾರ್ಹ ಮೂಲಗಳಿಂದ ತಿಳಿದುಬಂದಿದೆ.

    Abhishek Sharma 3

    ವಿವಾದ ಆಗಿದ್ದೇನು?
    ಸೂಪರ್‌-4 ಪಂದ್ಯದ ವೇಳೆ ಸಾಹಿಬ್‌ಝಾದಾ ಫರ್ಹಾನ್ ಫಿಫ್ಟಿ ಬಾರಿಸಿದ ಬಳಿಕ ಗನ್‌ ಸೆಲಬ್ರೇಷನ್‌ ಮಾಡಿದ್ದರು. ರೈಫಲ್‌ ರೀತಿ ಶೋ ಮಾಡಿ ಮೂರು ಸುತ್ತು ಗುಂಡು ಹಾರಿಸಿದ ರೀತಿ ಆಕ್ಷನ್‌ ಮಾಡಿದ್ದರು. ಇನ್ನೂ ಫೀಲ್ಡಿಂಗ್‌ ವೇಳೆ ಹ್ಯಾರಿಸ್‌ ರೌಫ್‌ಗೆ ಕೊಹ್ಲಿ ಅಭಿಮಾನಿಗಳು ಕಾಡಿಸಿದರು. 2022ರ ಟಿ20 ವಿಶ್ವಕಪ್‌ ಪಂದ್ಯದಲ್ಲಿ ಹ್ಯಾರಿಸ್‌ ರೌಫ್‌ಗೆ ಬಾರಿಸಿದ್ದ ಸಿಕ್ಸ್‌ ಅನ್ನು ಉಲ್ಲೇಖಿಸುತ್ತಾ ಕೊಹ್ಲಿ ಕ್ಲೊಹ್ಲಿ ಅಂತ ಕೂಗುತ್ತಿದ್ದರು. ಈ ವೇಳೆ ರೌಫ್‌ ವಿಮಾನ ಕ್ರ್ಯಾಶ್‌ ರೀತಿ ಸನ್ನೆ ಮಾಡಿ ಅಣುಕಿಸಿದ್ದರು. ಇದು ವ್ಯಾಪಕ ಟೀಕೆಗೆ ಗುರಿಯಾಗಿದೆ. ಹೀಗಾಗಿ ರೌಫ್ ಮತ್ತು ಫರ್ಹಾನ್‌ ಇಬ್ಬರೂ ಐಸಿಸಿ ವಿಚಾರಣೆಯಲ್ಲಿ ತಮ್ಮ ಸನ್ನೆಗಳನ್ನು ವಿವರಿಸಬೇಕಾಗುತ್ತದೆ. ಒಂದು ವೇಳೆ ಅವರು ಮನವೊಲಿಸಲು ಸಾಧ್ಯವಾಗದಿದ್ದರೇ ನೀತಿ ಸಂಹಿತೆಯ ಉಲ್ಲಂಘನೆ ಪ್ರಕಾರ ನಿರ್ಬಂಧ ಎದುರಿಸಬೇಕಾಗುತ್ತೆ ಎಂದು ತಿಳಿದುಬಂದಿದೆ.

    ಸೂರ್ಯ ವಿರುದ್ಧ ದೂರು
    ಇನ್ನೂ ಲೀಗ್‌ ಸುತ್ತಿನಲ್ಲಿ ಪಾಕ್‌ ವಿರುದ್ಧದ ಪಂದ್ಯದಲ್ಲಿ ಗೆದ್ದ ಬಳಿಕ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್‌ ಯಾದವ್‌ (Suryakumar Yadav), ಪಂದ್ಯದ ಗೆಲುವುನ್ನು ಪಹಲ್ಗಾಮ್‌ ದಾಳಿಯ ಸಂತ್ರಸ್ತರು ಹಾಗೂ ಭಾರತೀಯ ಸಶಸ್ತ್ರಪಡೆಗಳಿಗೆ ಅರ್ಪಿಸಿದ್ದರು. ಇದಕ್ಕಾಗಿ ಸೂರ್ಯಕುಮಾರ್‌ ಯಾದವ್‌ ವಿರುದ್ಧ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (PCB) ಐಸಿಸಿಗೆ ದೂರು ನೀಡಿದೆ.

    ಸೂರ್ಯಕುಮಾರ್‌ ಹೇಳಿಕೆಗಳು ರಾಜಕೀಯ ಪ್ರೇರಿತವಾಗಿದ್ದು, ಕ್ರೀಡಾ ಪ್ರತಿಷ್ಠೆಗೆ ಹಾನಿಯಾಗಿದೆ. ಹೀಗಾಗಿ ಕ್ರಮಕ್ಕೆ ಆಗ್ರಹಿಸಿ ದೂರು ನೀಡಿದ್ದಾರೆ. ಸೂರ್ಯ ಈ ಆರೋಪಗಳನ್ನು ನಿರಾಕರಿಸಿದ್ರೆ, ಅಧಿಕೃತ ವಿಚಾರಣೆಗೆ ಐಸಿಸಿ ಮುಂದೆ ಹಾಜರಾಗಬೇಕಾಗುತ್ತೆ ಎಂದು ತಿಳಿದುಬಂದಿದೆ.

  • CSK ಮುಖ್ಯಸ್ಥರಾಗಿ ಬಿಸಿಸಿಐ ಮಾಜಿ ಅಧ್ಯಕ್ಷ ಎನ್.ಶ್ರೀನಿವಾಸನ್ ನೇಮಕ

    CSK ಮುಖ್ಯಸ್ಥರಾಗಿ ಬಿಸಿಸಿಐ ಮಾಜಿ ಅಧ್ಯಕ್ಷ ಎನ್.ಶ್ರೀನಿವಾಸನ್ ನೇಮಕ

    ನವದೆಹಲಿ: ಬಿಸಿಸಿಐ, ಐಸಿಸಿ ಮಾಜಿ ಮುಖ್ಯಸ್ಥರಾಗಿದ್ದ ಎನ್.ಶ್ರೀನಿವಾಸನ್ (N. Srinivasan) ಇದೀಗ ತಮ್ಮ 80ನೇ ವಯಸ್ಸಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನ (Chennai Super Kings) ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ.

    ಈ ಮೊದಲು ಬಿಸಿಸಿಐ (BCCI) ಹಾಗೂ ಐಸಿಸಿ (ICC) ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು. ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್‌ನ ಚೆನ್ನೈ ಸೂಪರ್ ಕಿಂಗ್ಸ್ ಕ್ರಿಕೆಟ್ ಲಿಮಿಟೆಡ್‌ನ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ.ಇದನ್ನೂ  ಓದಿ:ಜಿಎಸ್‌ಟಿ ಪರಿಷ್ಕರಣೆ ಬೆನ್ನಲ್ಲೇ ದುಬಾರಿಯಾಗಲಿದೆ ಆರ್‌ಸಿಬಿ ಟಿಕೆಟ್‌ ದರ

    ಸಿಎಸ್‌ಕೆ ಮಾಹಿತಿ ಪ್ರಕಾರ, ಶ್ರೀನಿವಾಸನ್ ಅವರು 2025ರ ಫೆಬ್ರವರಿಯಲ್ಲಿಯೇ ಅಧಿಕೃತವಾಗಿ ಸಿಎಸ್‌ಕೆ ನಿರ್ದೇಶಕರಾಗಿ ನೇಮಕಗೊಂಡಿದ್ದರು. ಬಳಿಕ ಮೇ.10ರಂದು ಮುಖ್ಯಸ್ಥರಾಗಿ ಬಡ್ತಿ ನೀಡಲಾಯಿತು ಎಂದು ತಿಳಿದುಬಂದಿದೆ.

    ಸದ್ಯ ಆರ್ ಶ್ರೀನಿವಾಸನ್, ರಾಕೇಶ್ ಸಿಂಗ್, ಪಿಎಲ್ ಸುಬ್ರಮಣಿಯನ್, ಸಂಜಯ್ ಪಟೇಲ್, ವಿ ಮಾಣಿಕ್ಕಂ ಮತ್ತು ರೂಪಾ ಗುರುನಾಥ್ ಸಿಎಸ್‌ಕೆ ಕ್ರಿಕೆಟ್ ಲಿಮಿಟೆಡ್‌ನ ಸದಸ್ಯರ ಪಟ್ಟಿಯಲ್ಲಿದ್ದಾರೆ. ಮುಂಬರುವ 2026ರ ಐಪಿಎಲ್‌ಗೂ ಮುನ್ನ ಸಿಎಸ್‌ಕೆ ಕ್ರಿಕೆಟ್ ಲಿಮಿಟೆಡ್ ಎನ್.ಶ್ರೀನಿವಾಸನ್ ಅವರನ್ನು ಮುಖ್ಯಸ್ಥರಾಗಿ ನೇಮಿಸಿದೆ.

    ಈ ಮೊದಲು ಬಿಸಿಸಿಐನ ಅಧ್ಯಕ್ಷರಾಗಿ ಹಾಗೂ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಜೊತೆಗೆ ಐಸಿಸಿಯ ಅಧ್ಯಕ್ಷರಾಗಿದ್ದರು. ಅಷ್ಟೇ ಅಲ್ಲದೇ 15 ವರ್ಷಗಳ ಕಾಲ ತಮಿಳುನಾಡು ಕ್ರಿಕೆಟ್ ಅಸೋಸಿಯೇಷನ್‌ನ ಅಧ್ಯಕ್ಷರಾಗಿದ್ದರು.ಇದನ್ನೂ ಓದಿ: ಅಕ್ರಮ ಬೆಟ್ಟಿಂಗ್‌ ಆ್ಯಪ್ ಪ್ರಕರಣ – ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಶಿಖರ್‌ ಧವನ್‌ಗೆ ಇಡಿ ಸಮನ್ಸ್‌

  • WTC Final | 2031ರ ವರೆಗೆ ಇಂಗ್ಲೆಂಡ್‌ನಲ್ಲೇ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯ

    WTC Final | 2031ರ ವರೆಗೆ ಇಂಗ್ಲೆಂಡ್‌ನಲ್ಲೇ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯ

    ಲಂಡನ್‌: ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ನ ಫೈನಲ್‌ (WTC Finals) ಪಂದ್ಯಗಳನ್ನು 2031ರ ವರೆಗೆ ಇಂಗ್ಲೆಂಡ್‌ನಲ್ಲೇ ನಡೆಸಲು ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ICC) ನಿರ್ಧರಿಸಿದೆ. ಈ ಕುರಿತು ಐಸಿಸಿ ಭಾನುವಾರ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ.

    ಹೌದು. ಸಿಂಗಾಪುರದಲ್ಲಿ ನಡೆದ ಮಹತ್ವದ ಸಭೆಯ ನಂತರ ಐಸಿಸಿ ಪತ್ರಿಕಾ ಪ್ರಕಟಣೆಯ ಮೂಲಕ ಮಾಹಿತಿ ಹಂಚಿಕೊಂಡಿದೆ. ಈ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಮುಂದಿನ ಮೂರು ಆವೃತ್ತಿಗಳ ಫೈನಲ್‌ಗಳನ್ನು ಇಂಗ್ಲೆಂಡ್‌ನಲ್ಲೇ (England) ನಡೆಸಲು ತೀರ್ಮಾನಿಸಿದ್ದು, ಅನುಮೋದನೆಯನ್ನೂ ನೀಡಲಾಗಿದೆ. ಕಳೆದ ಮೂರು ಆವೃತ್ತಿಯ WTC ಫೈನಲ್‌ ಪಂದ್ಯಗಳು ಇಂಗ್ಲೆಂಡ್‌ನಲ್ಲೇ ನಡೆದಿದೆ ಅನ್ನೋದು ವಿಶೇಷ.

    ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (England Cricket Board)ಯೇ ಮೊದಲ ಆವೃತ್ತಿಯಿಂದಲೂ WTC ಫೈನಲ್‌ ಪಂದ್ಯಗಳಿಗೆ ಆತಿಥ್ಯ ವಹಿಸುತ್ತಿದೆ. ಈಗ ಮುಂದೆ 2027, 2029, 2031ರ ಆವೃತ್ತಿಗಳೂ ಇಂಗ್ಲೆಂಡ್‌ನಲ್ಲೇ ನಡೆಸಲು ಅನುಮತಿ ಪಡೆದಿದೆ. ಇಂಗ್ಲೆಂಡ್‌ನಲ್ಲಿ ವ್ಯವಸ್ಥೆಗಳ ಅನುಕೂಲ ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಐಸಿಸಿ ಹೇಳಿದೆ. ಆದ್ರೆ ಇನ್ನೂ ಸ್ಥಳಗಳನ್ನ ನಿಗದಿಪಡಿಸಿಲ್ಲ.

    2021ರಲ್ಲಿ ಚೊಚ್ಚಲ ಆವೃತ್ತಿಯ ಫೈನಲ್‌ ಪಂದ್ಯವನ್ನು ಇಂಗ್ಲೆಂಡ್‌ನ ಸೌತಾಂಪ್ಟನ್, 2023ರಲ್ಲಿ ದಿ ಓವಲ್ ಹಾಗೂ ಪ್ರಸಕ್ತ ವರ್ಷ ಲಾರ್ಡ್ಸ್ ನಲ್ಲಿ WTC ಫೈನಲ್‌ ಪಂದ್ಯ ನಡೆದಿತ್ತು. ಮೊದಲೆರಡು ಆವೃತ್ತಿಗಳಲ್ಲಿ ಕ್ರಮವಾಗಿ ನ್ಯೂಜಿಲೆಂಡ್‌, ಆಸ್ಟ್ರೇಲಿಯಾ ಚಾಂಪಿಯನ್‌ ಆಗಿದ್ದರೆ, ಭಾರತ ರನ್ನರ್‌ ಅಪ್‌ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತ್ತು. 3ನೇ ಆವೃತ್ತಿಯಲ್ಲಿ ಭಾರತ ನಾಕೌಟ್‌ನಿಂದ ಹೊರಗುಳಿದ ಕಾರಣ ದಕ್ಷಿಣ ಆಫ್ರಿಕಾ ಹಾಗೂ ಆಸೀಸ್‌ ನಡುವೆ ಫೈನಲ್‌ ಪಂದ್ಯ ನಡೆದಿತ್ತು. ಲಾರ್ಡ್‌ ಅಂಗಳದಲ್ಲಿ ಚಾಂಪಿಯನ್‌ ಆದ ದಕ್ಷಿಣ ಆಫ್ರಿಕಾ ಚಾಂಪಿಯನ್‌ ಆಗಿ ಚೋಕರ್ಸ್‌ ಹಣೆಪಟ್ಟಿಯನ್ನೂ ಕಳಚಿತು.

  • ನಾನು ಮಹಿಳಾ ಕ್ರಿಕೆಟ್‌ಗೆ ಅರ್ಹಳು: ಟ್ರಾನ್ಸ್‌ಜೆಂಡರ್‌ ಕ್ರೀಡಾಪಟುಗಳನ್ನು ಸೇರಿಸಿಕೊಳ್ಳುವಂತೆ ICC, BCCIಗೆ ಅನಯಾ ಮನವಿ

    ನಾನು ಮಹಿಳಾ ಕ್ರಿಕೆಟ್‌ಗೆ ಅರ್ಹಳು: ಟ್ರಾನ್ಸ್‌ಜೆಂಡರ್‌ ಕ್ರೀಡಾಪಟುಗಳನ್ನು ಸೇರಿಸಿಕೊಳ್ಳುವಂತೆ ICC, BCCIಗೆ ಅನಯಾ ಮನವಿ

    – ಭಾರತೀಯ ಕ್ರಿಕೆಟ್ ವೀಕ್ಷಕ ವಿವರಣೆಕಾರ ಸಂಜಯ್‌ ಬಂಗಾರ್‌ ಪುತ್ರಿ ಅನಯಾ

    ಮುಂಬೈ: ನಾನು ಮಹಿಳಾ ಕ್ರಿಕೆಟ್‌ಗೆ ಅರ್ಹಳು. ಟ್ರಾನ್ಸ್‌ಜೆಂಡರ್ ಕ್ರೀಡಾಪಟುಗಳನ್ನು ಸೇರಿಸಿಕೊಳ್ಳಿ ಎಂದು ಐಸಿಸಿ ಮತ್ತು ಬಿಸಿಸಿಐಗೆ ಅನಯಾ ಬಂಗಾರ್ ಮನವಿ ಮಾಡಿದ್ದಾರೆ.

    ಭಾರತೀಯ ಕ್ರಿಕೆಟ್ ವೀಕ್ಷಕ ವಿವರಣೆಕಾರ ಸಂಜಯ್ ಬಂಗಾರ್ ಅವರ ಪುತ್ರಿ ಅನಯಾ ಬಂಗಾರ್, ಟ್ರಾನ್ಸ್‌ಜೆಂಡರ್ ಕ್ರಿಕೆಟಿಗರನ್ನು ಬೆಂಬಲಿಸುವಂತೆ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯನ್ನು ಒತ್ತಾಯಿಸಿದ್ದಾರೆ.‌ ಇದನ್ನೂ ಓದಿ: ಆರ್‌ಸಿಬಿ ಮ್ಯಾಚ್‌ ಫಿಕ್ಸಿಂಗ್‌ ಮಾಡಿಕೊಂಡಿದೆ – ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಹಾಂ ಬಾಂಬ್

    ಆರ್ಯನ್‌ ಕಾಲಾನಂತರದಲ್ಲಿ ಅನಯಾ ಆಗಿ ಬದಲಾದರು. ಹಾರ್ಮೋನ್ ರಿಪ್ಲೇಸ್‌ಮೆಂಟ್ ಥೆರಪಿ (ಎಚ್‌ಆರ್‌ಟಿ) ನಂತರ ಕ್ರೀಡಾಪಟುವಾಗಿ ತಮ್ಮ ಪ್ರಯಾಣ ಆರಂಭಿಸಿದರು. ಇದಕ್ಕೆ ಸಂಬಂಧಿಸಿದ ಎಂಟು ಪುಟಗಳ ಕ್ರೀಡಾಪಟು ಪರೀಕ್ಷಾ ವರದಿಯನ್ನು ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಅನಯಾ ವೀಡಿಯೊವೊಂದನ್ನು ಹಂಚಿಕೊಂಡಿದ್ದು, ಮಹಿಳಾ ಕ್ರಿಕೆಟ್‌ನಲ್ಲಿ ಭಾಗವಹಿಸಲು ತಾನು ಅರ್ಹಳಾಗಿದ್ದೇನೆ ಎಂದು ಬಹಿರಂಗಪಡಿಸಿದ್ದಾರೆ.

    23 ವರ್ಷದ ಅನಯಾ ಬಂಗಾರ್‌ ಅವರು ಸ್ನಾಯು ಶಕ್ತಿ, ಗ್ಲೂಕೋಸ್‌, ಆಮ್ಲಜನಕದ ಮಟ್ಟ ಮೊದಲಾದ ಪರೀಕ್ಷೆಗೆ ಒಳಗಾಗಿದ್ದರು. ಪರೀಕ್ಷೆಯ ದತ್ತಾಂಶಗಳನ್ನು ಸಿಸ್ಜೆಂಡರ್‌ ಮಹಿಳಾ ಕ್ರೀಡಾಪಟುಗಳೊಂದಿಗೆ ಹೋಲಿಸಿ ನೋಡಿದ್ದಾರೆ. ಪರೀಕ್ಷಾ ವರದಿ ಪ್ರಕಾರ, ಸಿಸ್ಜೆಂಡರ್‌ ಮಹಿಳಾ ಕ್ರೀಡಾಪಟುಗಳ ಮಾನದಂಡಕ್ಕೆ ಹೋಲಿಕೆಯಾಗಿದೆ ಎಂದು ಅನಯಾ ತಿಳಿಸಿದ್ದಾರೆ. ಇದನ್ನೂ ಓದಿ: 5 ಎಸೆತಗಳಲ್ಲಿ 5 ವಿಕೆಟ್‌ – ಮತ್ತೆ ದಿಗ್ವೇಶ್‌ ರಾಥಿ ಕಮಾಲ್‌

     

    View this post on Instagram

     

    A post shared by Anaya Bangar (@anayabangar)

    ಮೊದಲ ಬಾರಿಗೆ, ಟ್ರಾನ್ಸ್ ಮಹಿಳಾ ಕ್ರೀಡಾಪಟುವಾಗಿ ನನ್ನ ಪ್ರಯಾಣವನ್ನು ದಾಖಲಿಸುವ ವೈಜ್ಞಾನಿಕ ವರದಿಯನ್ನು ನಾನು ಹಂಚಿಕೊಳ್ಳುತ್ತಿದ್ದೇನೆ. ಕಳೆದ ವರ್ಷದಲ್ಲಿ, ಹಾರ್ಮೋನ್ ಚಿಕಿತ್ಸೆಯನ್ನು ಪ್ರಾರಂಭಿಸಿದ ನಂತರ ನಾನು ರಚನಾತ್ಮಕ ಶಾರೀರಿಕ ಮೌಲ್ಯಮಾಪನಗಳಿಗೆ ಒಳಗಾಗಿದ್ದೇನೆ. ಪರೀಕ್ಷೆಯ ವರದಿಗಳನ್ನು ನಾನು ಇದನ್ನು ಬಿಸಿಸಿಐ ಮತ್ತು ಐಸಿಸಿಗೆ ಸಲ್ಲಿಸುತ್ತಿದ್ದೇನೆ ಎಂದು ಅನಯಾ ಹೇಳಿಕೊಂಡಿದ್ದಾರೆ.

    ವಿಜ್ಞಾನವು ನಾನು ಮಹಿಳಾ ಕ್ರಿಕೆಟ್‌ಗೆ ಅರ್ಹಳಾಗಿದ್ದೇನೆ ಎಂದು ಹೇಳುತ್ತದೆ. ಈಗ, ಜಗತ್ತು ಸತ್ಯವನ್ನು ಒಪ್ಪಿಕೊಳ್ಳಲು ಸಿದ್ಧವಾಗಿದೆಯೇ? ಎಂದು ಅನಾಯಾ ವೀಡಿಯೊಗೆ ಕ್ಯಾಪ್ಷನ್‌ ನೀಡಿದ್ದಾರೆ. ಇದನ್ನೂ ಓದಿ: ಆಸೀಸ್‌ ಲಕ್ಕಿ ಚಾರ್ಮ್‌ಗಳಿಗೆ ಸೋಲಿನ ರುಚಿ ತೋರಿಸಿದ ಹರಿಣರು – ಹೇಜಲ್ವುಡ್‌ ಗೆಲುವಿನ ನಾಗಾಲೋಟಕ್ಕೆ ಬ್ರೇಕ್‌

  • `ಬನ್ನಿ ಹಾಪ್ ಕ್ಯಾಚ್’ ರೂಲ್ಸ್‌ಗೆ ಐಸಿಸಿ ಬ್ರೇಕ್ – ಶೀಘ್ರವೇ ಹೊಸ ರೂಲ್ಸ್

    `ಬನ್ನಿ ಹಾಪ್ ಕ್ಯಾಚ್’ ರೂಲ್ಸ್‌ಗೆ ಐಸಿಸಿ ಬ್ರೇಕ್ – ಶೀಘ್ರವೇ ಹೊಸ ರೂಲ್ಸ್

    ಸಿಸಿ ಆಗಿಂದಾಗೇ ಕ್ರಿಕೆಟ್‌ನಲ್ಲಿ ಕೆಲ ನಿಯಮಗಳ ಬದಲಾವಣೆ ಮಾಡುತ್ತಲೇ ಇರುತ್ತದೆ. ಈಗ ಮತ್ತೆ ಅಂತಹದೇ ಮಹತ್ವದ ಬದಲಾವಣೆ ಒಂದಕ್ಕೆ ಐಸಿಸಿ (International Cricket Council) ಮುಂದಾಗಿದೆ. ಈ ಹಿಂದೆ ವಿವಾದಕ್ಕೂ ಕಾರಣವಾಗಿದ್ದ ಈ ನಿಯಮವನ್ನು ಐಸಿಸಿ ಕೈಬಿಡಲು ಮುಂದಾಗಿರುವುದು ಕ್ರಿಕೆಟ್ ಪ್ರಿಯರಿಗೆ ಕೊಂಚ ನಿರಾಸೆಗೆ ಕಾರಣವಾಗಿದೆ.

    ಹೌದು, ಐಸಿಸಿ ಕ್ಯಾಚ್ ನಿಯಮದಲ್ಲಿ ಮಹತ್ವದ ಬದಲಾವಣೆ ತರಲು ಮುಂದಾಗಿದೆ. ಈಗಾಗಲೇ ಹೊಸ ಕ್ಯಾಚ್ ನಿಯಮವನ್ನು ಮೇರಿಲೆಬೋನ್ ಕ್ರಿಕೆಟ್ ಕ್ಲಬ್ (MCC) ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಮುಂದಿಟ್ಟಿದ್ದು, ಈ ನಿಯಮ 2025-2027ರ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಸರಣಿಯೊಂದಿಗೆ ಆರಂಭವಾಗಿದೆ. ಇದನ್ನೂ ಓದಿ: NEET-UG 2025 ಫಲಿತಾಂಶ ಪ್ರಕಟ; ರಾಜಸ್ಥಾನದ ಅಭ್ಯರ್ಥಿ ಟಾಪರ್‌, ಕರ್ನಾಟಕದ ನಿಖಿಲ್‌ಗೆ 17ನೇ ರ‍್ಯಾಂಕ್‌

    ಹೊಸ ನಿಯಮದ ಪ್ರಕಾರ, ಇನ್ನು ಮುಂದೆ ಫೀಲ್ಡರ್ `ಬನ್ನಿ ಹಾಪ್ ಕ್ಯಾಚ್’ಗಳನ್ನ (Bunny hop) ಹಿಡಿದರೆ ಔಟ್ ಎಂದು ಪರಿಗಣಿಸುವುದಿಲ್ಲ. ಅಂದರೆ ಬೌಂಡರಿ ಲೈನ್ ದಾಟಿ ಚೆಂಡನ್ನು ತಡೆದು ಕ್ಯಾಚ್ ಹಿಡಿಯಲು ಪ್ರಯತ್ನಿಸಿದಾಗ, ಫೀಲ್ಡರ್‌ನ ಮೊದಲ ಸ್ಪರ್ಶವು ಬೌಂಡರಿ ಗೆರೆಯಿಂದ ಒಳಗಿದ್ದು, ಅವರ ಎರಡನೇ ಸ್ಪರ್ಶವು ಅವರನ್ನು ಮತ್ತೆ ಮೈದಾನದ ಒಳಗೆ ಕೊಂಡೊಯ್ಯಬೇಕು. ಇದರ ಹೊರತಾಗಿ ಬೌಂಡರಿ ಲೈನ್‌ನ ಹೊರಗೆ ಗಾಳಿಯಲ್ಲಿ ಚೆಂಡನ್ನು ಮೈದಾನದ ಒಳಕ್ಕೆ ಎಸೆಯುವಂತಿಲ್ಲ. ಇದನ್ನೂ ಓದಿ: ಏರ್‌ ಇಂಡಿಯಾ ವಿಮಾನ ದುರಂತ ತನಿಖೆಗೆ ಉನ್ನತ ಮಟ್ಟದ ಸಮಿತಿ – 3 ತಿಂಗಳ ಡೆಡ್‌ಲೈನ್: ಸಚಿವ ರಾಮಮೋಹನ್ ನಾಯ್ಡು

    ಇತ್ತೀಚೆಗೆ ಐಪಿಎಲ್ ಫೈನಲ್ ಪಂದ್ಯದಲ್ಲಿ ಫಿಲ್ ಸಾಲ್ಟ್ ಅವರು ಇದೇ ರೀತಿ ಹಿಡಿದ ಪ್ರಯಾಂಶ್ ಆರ್ಯ ಅವರ ಕ್ಯಾಚ್‌ವೊಂದು ಟ್ರೋಫಿ ಗೆಲ್ಲುವಲ್ಲಿ ನಿರ್ಣಾಯಕವಾಗಿತ್ತು. 2023ರಲ್ಲಿ ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್‌ನಲ್ಲಿ ಈ ರೀತಿಯ ಕ್ಯಾಚ್ ವಿವಾದಕ್ಕೆ ಕಾರಣವಾಗಿತ್ತು. ಸಿಡ್ನಿ ಸಿಕ್ಸರ್ಸ್ ವಿರುದ್ಧದ ಪಂದ್ಯದಲ್ಲಿ ಬ್ರಿಸ್ಬೇನ್ ಹೀಟ್ ತಂಡದ ಮೈಕೆಲ್ ನೆಸರ್ ಬೌಂಡರಿ ಲೈನ್ ಹೊರಗೆ ಹೋಗಿ ಗಾಳಿಯಲ್ಲಿ ಹಾರಿ ಚೆಂಡನ್ನು ಹಿಡಿದು, ಮತ್ತೆ ಮೈದಾನಕ್ಕೆ ಎಸೆದು ಕ್ಯಾಚ್ ಹಿಡಿದಿದ್ದರು. ಅದನ್ನು ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದರು. ಇದನ್ನೂ ಓದಿ: ಅತ್ತೆ ಮನೆ ಮುಂದೆ ಅಳಿಯನ ಟೀ ಅಂಗಡಿ – ಕೈಗೆ ಕೋಳ ಧರಿಸಿ ಚಹಾ ಮಾರಾಟ

    ಹೀಗೆ ಕ್ಯಾಚ್ ಹಿಡಿಯಲು ಅವಕಾಶವಿದ್ದ ಕಾರಣ, ಹಲವು ಲೀಗ್‌ಗಳಲ್ಲಿ ಬನ್ನಿ ಹಾಪ್ ಕ್ಯಾಚ್‌ಗಳ ಪ್ರಯತ್ನಗಳು ಸಹ ನಡೆದಿದ್ದವು. ಇದರ ಬೆನ್ನಲ್ಲೇ ಐಸಿಸಿಯ ಈ ನಿಯಮದ ಬಗ್ಗೆ ಅಪಸ್ವರಗಳು ಕೇಳಿ ಬಂದಿತ್ತು. ಹೀಗಾಗಿ ಇದೀಗ ಬನ್ನಿ ಹಾಪ್ ಕ್ಯಾಚ್‌ಗಳಿಗೆ ಬ್ರೇಕ್ ಹಾಕಲು ಐಸಿಸಿ ನಿರ್ಧರಿಸಿದೆ. ಅದರಂತೆ ಮುಂದಿನ ದಿನಗಳಲ್ಲಿ ಫೀಲ್ಡರ್‌ಗಳು ಮೈದಾನದ ಹೊರಗೆ ನಿಂತು ಗಾಳಿಯಲ್ಲಿ ಚೆಂಡನ್ನು ಹೊರಕ್ಕೆ ಎಸೆಯುವಂತಿಲ್ಲ. ಇದನ್ನೂ ಓದಿ: ಏರ್‌ ಇಂಡಿಯಾ ಪತನ – ಮದುವೆಯಾಗಿದ್ದ Gay Couple ದುರಂತ ಸಾವು

    ಹೊಸ ಕ್ಯಾಚ್ ನಿಯಮವನ್ನು ಜೂನ್ 17ರಂದು ಗಾಲೆಯಲ್ಲಿ ನಡೆಯಲಿರುವ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಪರಿಚಯಿಸಲು ಐಸಿಸಿ ನಿರ್ಧರಿಸಿದೆ. ಅಲ್ಲದೇ ಅಕ್ಟೋಬರ್ 2026ರಲ್ಲಿ ಈ ನಿಯಮ ಅಧಿಕೃತವಾಗಿ ಜಾರಿಗೊಳ್ಳಲಿದೆ.