Tag: ಐಶ್ವರ್ಯ ಭಾಸ್ಕರನ್‌

  • ರಾತ್ರಿ ಮೆಸೇಜ್ ಮಾಡಿ, ಮನೆಗೆ ಬಾ ಅಂತಾನೆ : ಜ್ಯೂಲಿ ಲಕ್ಷ್ಮೀ ಮಗಳ ಕಣ್ಣೀರು

    ರಾತ್ರಿ ಮೆಸೇಜ್ ಮಾಡಿ, ಮನೆಗೆ ಬಾ ಅಂತಾನೆ : ಜ್ಯೂಲಿ ಲಕ್ಷ್ಮೀ ಮಗಳ ಕಣ್ಣೀರು

    ನ್ನಡವೂ ಸೇರಿದಂತೆ ದಕ್ಷಿಣದ ಅಷ್ಟೂ ಭಾಷೆಗಳಲ್ಲಿ ನಟಿಸಿರುವ, ಖ್ಯಾತ ನಟಿ ಜ್ಯೂಲಿ ಲಕ್ಷ್ಮಿ (Julie Lakshmi) ಪುತ್ರಿ ಐಶ್ವರ್ಯ ಭಾಸ್ಕರನ್ (Aishwarya Bhaskaran) ಕಷ್ಟದ ದಿನಗಳನ್ನು ದೂಡುತ್ತಿದ್ದಾರೆ. ಆದರೂ, ತಾಯಿ ಹತ್ತಿರ ಸಹಾಯ ಕೇಳದರೆ ಸೋಪು ಮಾರಿಕೊಂಡು ಬದುಕುತ್ತಿದ್ದಾರಂತೆ. ಈ ವಿಷಯವನ್ನು ಅವರೇ ತಮ್ಮದೇ ಯೂಟ್ಯೂಬ್ ಚಾನೆಲ್ ನಲ್ಲಿ ಹೇಳಿಕೊಂಡಿದ್ದಾರೆ. ಕೈಯಲ್ಲಿ ಸಿನಿಮಾಗಳು ಇಲ್ಲ, ಕೆಲಸವೂ ಸಿಗುತ್ತಿಲ್ಲ. ಹಾಗಾಗಿ ಸೋಪು ಮಾರಿಕೊಂಡು ಜೀವನ ನಡೆಸುತ್ತಿದ್ದೇನೆ ಎಂದಿದ್ದಾರೆ.

    ಈ ಹಿಂದೆ ಐಶ್ವರ್ಯ ಭಾಸ್ಕರನ್ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಿರುತೆರೆಯಲ್ಲೂ ಕೆಲಸ ಮಾಡಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಅವರಿಗೆ ಅವಕಾಶ ಸಿಗುತ್ತಿಲ್ಲವಂತೆ. ಹಾಗಾಗಿ ತಮ್ಮದೇ ಯುಟ್ಯೂಬ್ ಕೂಡ ಮಾಡಿಕೊಂಡಿದ್ದು, ಅಲ್ಲಿ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಹೊಸ ಹೊಸ ಅಡುಗೆಗಳ ವಿಡಿಯೋ ಕೂಡ ಹಾಕಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ತಮಗೆ ಕೆಟ್ಟದಾಗಿ ಕಾಮೆಂಟ್ ಮಾಡುವವರ ವಿರುದ್ಧ ನಟಿ ಗರಂ ಆಗಿದ್ದಾರೆ. ಇದನ್ನೂ ಓದಿ:ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವದಲ್ಲಿ ‘ಬ್ರಹ್ಮಕಮಲ’ ಚಿತ್ರ

    ತಾವು ಸಿಂಗಲ್ ಇರುವ ಕಾರಣದಿಂದಾಗಿಯೇ ಕೆಲವರು ಕೆಟ್ಟ ಕೆಟ್ಟ ಮೆಸೇಜ್ (Massage) ಗಳನ್ನು ಕಳುಹಿಸುತ್ತಾರಂತೆ. ಇನ್ನೂ ನೋಡೋಕೆ ಚೆನ್ನಾಗಿ ಇದ್ದೀಯಾ, ರಾತ್ರಿ ಸಿಗ್ತೀಯಾ ಎಂದು ಒಬ್ಬರು ಕಾಮೆಂಟ್ ಮಾಡಿದರೆ, ಒಬ್ಬ ವ್ಯಕ್ತಿಯು ಮಧ್ಯೆ ರಾತ್ರಿ ಮೆಸೇಜ್ ಮಾಡಿ, ಇಬ್ಬರೂ ಸೋಪು ಮಾಡೋಣ ಬಾ ಎಂದು ಕರೆದಿದ್ದಾನಂತೆ. ಇಂತಹ ಘಟನೆಗಳ ಬಗ್ಗೆ ಬಹಿರಂಗವಾಗಿ ಅವರು ಹೇಳಿಕೊಂಡರೂ, ಪುಂಡರ ಕಾಟ ನಿಂತಿಲ್ಲ ಎನ್ನುವುದು ಅವರ ಅಳಲು.

    ಕೆಟ್ಟದ್ದಾಗಿ ಮೆಸೇಜ್ ಮಾಡಿರುವ ವ್ಯಕ್ತಿಗೆ ಉತ್ತರವಾಗಿ, ‘ಸೋಪು ಮಾರಿಕೊಂಡು ಬದುಕುತ್ತೇನೆ ಹೊರತು ನನ್ನನ್ನು ನಾನು ಮಾರಿಕೊಳ್ಳುವುದಿಲ್ಲ’ ಎಂದು ಖಡಕ್ ಸಂದೇಶವನ್ನು ಅವರು ನೀಡಿದ್ದಾರೆ. ಅಂದಹಾಗೆ ಜ್ಯೂಲಿ ಲಕ್ಷ್ಮಿ ಅವರ ಮೊದಲ ಪತಿಯ ಮಗಳು ಇವರಾಗಿದ್ದು, ಡಿವೋರ್ಸ್ ನಂತರ ತಾಯಿಯಿಂದ ದೂರ ಇರುವುದಾಗಿ ತಿಳಿಸಿದ್ದಾರೆ.

  • ಜೀವನ ನಿರ್ವಹಣೆಗೆ ಸಾಬೂನು ಮಾರಾಟಕ್ಕಿಳಿದ ಮೋಹನ್‌ಲಾಲ್ ಸಹನಟಿ

    ಜೀವನ ನಿರ್ವಹಣೆಗೆ ಸಾಬೂನು ಮಾರಾಟಕ್ಕಿಳಿದ ಮೋಹನ್‌ಲಾಲ್ ಸಹನಟಿ

    ಚಿತ್ರರಂಗದಲ್ಲಿ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡ ನಟಿ ಐಶ್ವರ್ಯ ಭಾಸ್ಕರನ್ ಹೊಸ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಸೌತ್ ಸಿನಿಮಾಗಳಲ್ಲಿ ನಟಿಯಾಗಿ ಗಮನ ಸೆಳೆದಿದ್ದ ಐಶ್ವರ್ಯ ತಮ್ಮ ಜೀವನ ನಿರ್ವಹಣೆಗೆ ಸಾಬೂನುಗಳನ್ನು ಮಾರಾಟ ಮಾಡ್ತಿದ್ದಾರೆ.

    ನರಸಿಂಹಂ, ಸತ್ಯಮೇವ ಜಯತೇ, ಪ್ರಜಾ, ದಿ ಫೈರ್, ನೋಟ್ ಬುಕ್‌ನಂತಹ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ ನಟಿ ಐಶ್ವರ್ಯ ಹೊಟ್ಟೆಪಾಡಿಗಾಗಿ ಸಾಬೂನು ಮಾರಾಟ ಮಾಡುತ್ತಿದ್ದಾರೆ. ಅವಕಾಶಗಳ ಕೊರತೆಯಿಂದ ಜೀವನ ನಿರ್ವಹಣೆಗೆ ಸಾಬೂನು ಮಾರಾಟಕ್ಕಿಳಿದಿದ್ದಾರೆ. ಇದನ್ನೂ ಓದಿ:ಬುದ್ದಿಜೀವಿ ವಲಯಕ್ಕೆ ನಟ ಚೇತನ್ ‘ಚಮಚ’ ಅಂದಿದ್ದು ಯಾಕೆ ಮತ್ತು ಯಾರಿಗೆ?

    ಇತ್ತೀಚೆಗಷ್ಟೇ ನೀಡಿದ ಸಂದರ್ಶನವೊಂದರಲ್ಲಿ ಐಶ್ವರ್ಯ ತಮ್ಮ ಖಾಸಗಿ ಜೀವನದ ನಿರ್ವಹಣೆಯ ಕುರಿತು ಮಾತನಾಡಿದ್ದಾರೆ. ನನಗೆ ಈಗ ಕೆಲಸವಿಲ್ಲ ಜತೆಗೆ ಜೀವನ ನಿರ್ವಹಣೆಗೆ ಹಣವಿಲ್ಲ ಮತ್ತು ಸಾಬೂನು ಮಾರುತ್ತಾ ಬೀದಿಗಳಲ್ಲಿ ವಾಸಿಸುತ್ತಿದ್ದೇನೆ. ನನಗೆ ಸಿನಿಮಾ ಮಾಡಲು ಆಸಕ್ತಿಯಿದೆ ಯಾರಾದರೂ ಸಿನಿಮಾಗಾಗಿ ಕರೆ ಮಾಡುತ್ತಾರೆ ಎಂಬ ಭರವಸೆಯಿದೆ ಎಂದು ನಟಿ ಐಶ್ವರ್ಯ ಮುಕ್ತವಾಗಿ ಮಾತನಾಡಿದ್ದಾರೆ. ಒಟ್ನಲ್ಲಿ ಎಷ್ಟೇ ಇದ್ರೂ ಮಾದರಿಯಾಗಿ ಬದುಕುತ್ತಿರುವ ನಟಿ ನಡೆಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.

    Live Tv