Tag: ಐಶ್ವರ್ಯಾ ರೈ

  • ಪ್ಯಾರಿಸ್‌ನಲ್ಲಿ ಸ್ಟೈಲೀಶ್ ಲುಕ್‌ನಲ್ಲಿ ಕಾಣಿಸಿಕೊಂಡ ಐಶ್ವರ್ಯಾ ರೈ- ನೆಟ್ಟಿಗರ ಕಾಮೆಂಟ್‌ಗಳ ಸುರಿಮಳೆ

    ಪ್ಯಾರಿಸ್‌ನಲ್ಲಿ ಸ್ಟೈಲೀಶ್ ಲುಕ್‌ನಲ್ಲಿ ಕಾಣಿಸಿಕೊಂಡ ಐಶ್ವರ್ಯಾ ರೈ- ನೆಟ್ಟಿಗರ ಕಾಮೆಂಟ್‌ಗಳ ಸುರಿಮಳೆ

    ಕುಡ್ಲದ ಸುಂದರಿ ಐಶ್ವರ್ಯಾ ರೈ (Aishwarya Rai) ಹೊಸ ಲುಕ್‌ನಲ್ಲಿ ಕಾಣಿಸಿಕೊಳ್ಳುವ ಮೂಲಕ ಫ್ಯಾನ್ಸ್ಗೆ ಚಮಕ್ ಕೊಟ್ಟಿದ್ದಾರೆ. ಮಗಳ ಜೊತೆ ಪ್ಯಾರಿಸ್‌ನಲ್ಲಿರುವ (Paris) ನಟಿ, ಇದೀಗ ಹೊಸ ಸ್ಟೈಲ್‌ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. ಇದನ್ನೂ ಓದಿ:ಬಾಲಿವುಡ್‌ಗೆ ಸಮರ್ಜಿತ್: ಕರಣ್ ಜೋಹರ್ ಸಿನಿಮಾದಲ್ಲಿ ಇಂದ್ರಜಿತ್ ಪುತ್ರ

    ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿ ನಟಿ ಭಾಗವಹಿಸಿದ್ದಾರೆ. ಅದಕ್ಕಾಗಿ ಹೊಸ ಸ್ಟೈಲ್‌ ಕಾಣಿಸಿಕೊಂಡಿದ್ದು, ಯೂನಿಕ್ ಆಗಿ ಕಾಣಿಸಿಕೊಂಡಿದ್ದಾರೆ. ಕೆಲವರು ನಟಿಯ ಲುಕ್ ನೋಡಿ ಖುಷಿಪಟ್ಟರೆ, ಇನ್ನೂ ಕೆಲವರು ನಿಮ್ಮ ಸ್ಟೈಲೀಶ್ ಅನ್ನು ಬದಲಿಸಿ ಎಂದು ಕಾಲೆಳೆದಿದ್ದಾರೆ. ಇದನ್ನೂ ಓದಿ:‘ದೇವರ’ ರಿಲೀಸ್‌ಗೂ ಮುನ್ನವೇ ಟಿಕೆಟ್ ಸೋಲ್ಡ್ ಔಟ್- ಜ್ಯೂ.ಎನ್‌ಟಿಆರ್ ಚಿತ್ರಕ್ಕೆ ಭಾರೀ ಬೇಡಿಕೆ

    ಅಂದಹಾಗೆ, ಕಳೆದ ಕೆಲವು ತಿಂಗಳುಗಳಿಂದ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ದಾಂಪತ್ಯದ ಕುರಿತು ಗುಸು ಗುಸು ಶುರುವಾಗಿದೆ. ಇಬ್ಬರೂ ಡಿವೋರ್ಸ್ ಪಡೆದುಕೊಳ್ಳುವ ಹಂತದಲ್ಲಿದ್ದಾರೆ ಎಂದೇ ಹೇಳಲಾಗಿತ್ತು. ಆದರೆ ನಟಿ ಪ್ಯಾರಿಸ್‌ನಲ್ಲಿ ಮದುವೆಯ ಉಂಗುರ ಧರಿಸುವ ಮೂಲಕ ಟ್ರೋಲಿಗರ ಬಾಯಿ ಮುಚ್ಚಿಸಿದ್ದರು.

    ಇನ್ನೂ ಮದುವೆ ಬಳಿಕ ಮಗಳ ಆರೈಕೆ ಅಂತ ಬ್ಯುಸಿಯಿದ್ದ ನಟಿ ಮತ್ತೆ ಸಕ್ರಿಯರಾಗಿದ್ದಾರೆ. ಕಳೆದ ವರ್ಷ ಮಣಿರತ್ನಂ ನಿರ್ದೇಶನದ ಸಿನಿಮಾ ‘ಪೊನ್ನಿಯನ್ ಸೆಲ್ವನ್ 2’ (Ponniyin Selvan 2) ಮೂಲಕ ಐಶ್ವರ್ಯಾಗೆ ಸಕ್ಸಸ್ ಸಿಕ್ಕಿದೆ. ಮತ್ತೆ ಸಿನಿಮಾಗಳಲ್ಲಿ ನಟಿಸುವ ಮನಸ್ಸು ಮಾಡಿದ್ದಾರೆ ನಟಿ.

  • ಡಿವೋರ್ಸ್ ಸುದ್ದಿಗೆ ಫುಲ್ ಸ್ಟಾಪ್- ದುಬೈನಲ್ಲಿ ಪತ್ನಿಯೊಂದಿಗೆ ಅಭಿಷೇಕ್ ಬಚ್ಚನ್ ಸುತ್ತಾಟ

    ಡಿವೋರ್ಸ್ ಸುದ್ದಿಗೆ ಫುಲ್ ಸ್ಟಾಪ್- ದುಬೈನಲ್ಲಿ ಪತ್ನಿಯೊಂದಿಗೆ ಅಭಿಷೇಕ್ ಬಚ್ಚನ್ ಸುತ್ತಾಟ

    ಬಾಲಿವುಡ್‌ನಲ್ಲಿ ಐಶ್ವರ್ಯಾ ರೈ ಸಂಸಾರದ ಬಗ್ಗೆ ನಾನಾ ವದಂತಿಗಳು ಹಬ್ಬಿದೆ. ಅಭಿಷೇಕ್ ಬಚ್ಚನ್ (Abhishek Bachchan) ಜೊತೆ ಐಶ್ವರ್ಯಾ ರೈ (Aishwarya Rai) ದಾಂಪತ್ಯ ಸರಿಯಿಲ್ಲ ಎನ್ನಲಾದ ಸುದ್ದಿಯೊಂದು ಆಗಾಗ ಚರ್ಚೆಗೆ ಗ್ರಾಸವಾಗುತ್ತಲೇ ಇರುತ್ತದೆ. ಇದೀಗ ಪತ್ನಿ ಐಶ್ವರ್ಯಾ ಮತ್ತು ಪುತ್ರಿ ಜೊತೆ ಅಭಿಷೇಕ್ ದುಬೈನಲ್ಲಿ ವೆಕೇಷನ್‌ನಲ್ಲಿರುವ ವಿಡಿಯೋ ವೈರಲ್ ಆಗುವ ಮೂಲಕ ಡಿವೋರ್ಸ್ ಸುದ್ದಿಗೆ ಬ್ರೇಕ್ ಹಾಕಿದ್ದಾರೆ.

    ಪ್ರತಿ ಬಾರಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ದಾಂಪತ್ಯದಲ್ಲಿ ಬಿರುಕಾಗಿದೆ ಎಂಬ ಸುದ್ದಿ ಗಾಸಿಪ್ ಮಂದಿಯ ಬಾಯಿಗೆ ಆಹಾರವಾಗುತ್ತಲೇ ಇರುತ್ತದೆ. ಆದರೆ ಇದುವರೆಗೂ ಈ ಬಗ್ಗೆ ಇಬ್ಬರೂ ಸ್ಪಷ್ಟನೆ ನೀಡುವ ಕೆಲಸ ಮಾಡಿರಲಿಲ್ಲ. ಇದೀಗ ದುಬೈನಲ್ಲಿ ಮಗಳು ಮತ್ತು ಪತ್ನಿಯೊಡನೆ ಅಭಿಷೇಕ್ ವೆಕೇಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಮೂವರು ಜೊತೆಯಾಗಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

    ಇತ್ತೀಚೆಗೆ ಅಂಬಾನಿ ಮನೆ ಮಗನ ಮದುವೆಯಲ್ಲಿ ಅಭಿಷೇಕ್ ಬಚ್ಚನ್ ಕುಟುಂಬದ ಜೊತೆ ನಟಿ ಕಾಣಿಸಿಕೊಳ್ಳದೆ ಮಗಳ ಜೊತೆ ಬಂದು ಕ್ಯಾಮೆರಾ ಪೋಸ್ ನೀಡಿದ್ದರು. ಈ ಮದುವೆಯ ನಂತರ ಮಗಳು ಆರಾಧ್ಯಾ ಜೊತೆ ನ್ಯೂಯಾರ್ಕ್ ವೆಕೇಷನ್‌ಗೆ ನಟಿ ತೆರಳಿದ್ದರು. ಆಗ ಅಭಿಷೇಕ್ ಇವರ ಜೊತೆ ಇಲ್ಲದೇ ಇರೋದು ಡಿವೋರ್ಸ್ ವದಂತಿಗೆ ಪುಷ್ಠಿ ನೀಡಿತ್ತು.

    ಇನ್ನೂ ‘ಪೊನ್ನಿಯನ್ ಸೆಲ್ವನ್ 2’ ಸಿನಿಮಾದ ಸಕ್ಸಸ್ ಬಳಿಕ ಮತ್ತೆ ವೈಯಕ್ತಿಕ ಬದುಕಿನಲ್ಲಿ ಐಶ್ವರ್ಯಾ ಬ್ಯುಸಿಯಾಗಿದ್ದಾರೆ. ಉತ್ತಮ ಕಥೆ ಸಿಕ್ಕರೆ ನಟಿಸೋದಾಗಿ ತಿಳಿಸಿದ್ದಾರೆ. ಅಭಿಷೇಕ್ ಬಚ್ಚನ್ ಅವರು ‘ಕಿಂಗ್’ (King) ಸಿನಿಮಾದಲ್ಲಿ ಶಾರುಖ್‌ಗೆ ವಿಲನ್ ಆಗಿ ಅಬ್ಬರಿಸಲಿದ್ದಾರೆ.

  • ನಾನಿನ್ನೂ ವಿವಾಹಿತ ಎಂದು ಡಿವೋರ್ಸ್ ವದಂತಿ ಬಗ್ಗೆ ಪ್ರತಿಕ್ರಿಯಿಸಿದ ಅಭಿಷೇಕ್ ಬಚ್ಚನ್

    ನಾನಿನ್ನೂ ವಿವಾಹಿತ ಎಂದು ಡಿವೋರ್ಸ್ ವದಂತಿ ಬಗ್ಗೆ ಪ್ರತಿಕ್ರಿಯಿಸಿದ ಅಭಿಷೇಕ್ ಬಚ್ಚನ್

    ಬಾಲಿವುಡ್ ನಟ ಅಭಿಷೇಕ್ ಬಚ್ಚನ್ (Abhikshek bacchchan) ಮತ್ತು ಐಶ್ವರ್ಯಾ ರೈ (Aishwarya Rai) ಡಿವೋರ್ಸ್ ಕುರಿತು ಈಗಾಗಲೇ ನಾನಾ ರೀತಿಯ ವಿಚಾರಗಳು ಚರ್ಚೆಯಾಗುತ್ತಿವೆ. ಆದರೆ ಡಿವೋರ್ಸ್ (Divorce) ಪಡೆದುಕೊಳ್ಳುತ್ತಿರುವ ವಿಚಾರ ನಿಜನಾ? ಎಂಬುಕ್ಕೆ ಸ್ಪಷ್ಟನೆ ಸಿಕ್ಕಿರಲಿಲ್ಲ. ಈ ಕುರಿತು ಮೊದಲ ಬಾರಿಗೆ ಅಭಿಷೇಕ್ ಬಚ್ಚನ್ ಪ್ರತಿಕ್ರಿಯೆ ನೀಡಿದ್ದಾರೆ. ನಾನಿನ್ನೂ ವಿವಾಹಿತ ಎಂದು ಮಾತನಾಡಿದ್ದಾರೆ.

    2024ರ ಒಲಿಂಪಿಕ್ಸ್ ವೀಕ್ಷಿಸುವುದಕ್ಕೆ ಅಭಿಷೇಕ್ ಪ್ಯಾರಿಸ್‌ಗೆ ತೆರಳಿದ್ದರು. ಈ ವೇಳೆ ನಟ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿ, ಮದುವೆಯ ಉಂಗುರ ತೋರಿಸಿ ‘ನಾನಿನ್ನೂ ವಿವಾಹಿತ’ ಎಂದು ಮಾತನಾಡಿದ್ದಾರೆ. I Am Still Married ಎನ್ನುವ ಮೂಲಕ ಡಿವೋರ್ಸ್ ವದಂತಿಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ. ಇದನ್ನೂ ಓದಿ:‘ಓ ಏ ಲಡ್ಕಿ’ ಆಲ್ಬಮ್ ಸಾಂಗ್ ರಿಲೀಸ್ ಮಾಡಿದ ನಟಿ ರಾಗಿಣಿ

    ಇತ್ತೀಚೆಗೆ ಅಂಬಾನಿ ಮನೆ ಮಗನ ಮದುವೆಯಲ್ಲಿ ಅಭಿಷೇಕ್ ಬಚ್ಚನ್ ಕುಟುಂಬದ ಜೊತೆ ನಟಿ ಕಾಣಿಸಿಕೊಳ್ಳದೆ ಮಗಳ ಜೊತೆ ಬಂದು ಕ್ಯಾಮೆರಾ ಪೋಸ್ ನೀಡಿದ್ದರು. ಈ ಮದುವೆಯ ನಂತರ ಮಗಳು ಆರಾಧ್ಯಾ ಜೊತೆ ನ್ಯೂಯಾರ್ಕ್ ವೆಕೇಷನ್‌ಗೆ ನಟಿ ತೆರಳಿದ್ದರು. ಆಗ ಅಭಿಷೇಕ್ ಇವರ ಜೊತೆ ಇಲ್ಲದೇ ಇರೋದು ಡಿವೋರ್ಸ್ ವದಂತಿ ಮತ್ತೆ ಮುನ್ನೆಲೆಗೆ ಬಂದಿತ್ತು.

    ಅಂದಹಾಗೆ, ಕಡೆಯದಾಗಿ ನಟಿ, ಪೊನ್ನಿಯನ್ ಸೆಲ್ವನ್ 1, ಪೊನ್ನಿಯನ್ ಸೆಲ್ವನ್ 2 ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಈ ಎರಡು ಪಾರ್ಟ್ ಸೂಪರ್ ಹಿಟ್ ಆಗಿತ್ತು. ಈಗ ಮತ್ತೆ ಹೊಸ ಕಥೆಗಳನ್ನು ನಟಿ ಕೇಳ್ತಿದ್ದಾರೆ. ಸದ್ಯದಲ್ಲೇ ಸಿನಿಮಾ ಬಗ್ಗೆ ಐಶ್ವರ್ಯಾ ಅಪ್‌ಡೇಟ್ ಕೊಡ್ತಾರಾ ಕಾದುನೋಡಬೇಕಿದೆ.

  • AR Wedding: ಕುಟುಂಬದ ಜೊತೆ ನಿಲ್ಲದೆ ಮಗಳೊಂದಿಗೆ ಪೋಸ್ ಕೊಟ್ಟ ಐಶ್ವರ್ಯಾ ರೈ

    AR Wedding: ಕುಟುಂಬದ ಜೊತೆ ನಿಲ್ಲದೆ ಮಗಳೊಂದಿಗೆ ಪೋಸ್ ಕೊಟ್ಟ ಐಶ್ವರ್ಯಾ ರೈ

    ರಾವಳಿ ಬ್ಯೂಟಿ ಐಶ್ವರ್ಯಾ ರೈ (Aishwary Rai) ದಾಂಪತ್ಯ ಬಗ್ಗೆ ಮತ್ತೆ ಗುಸು ಗುಸು ಶುರುವಾಗಿದೆ. ಬಚ್ಚನ್ ಪರಿವಾರದ ಜೊತೆ ಐಶ್ವರ್ಯಾ ಸಂಬಂಧ ಸರಿಯಿಲ್ಲ ಎಂದು ಮತ್ತೆ ಚರ್ಚೆಯಾಗುತ್ತಿದೆ. ಅಂಬಾನಿ ಮನೆ ಮಗನ ಮದುವೆಯಲ್ಲಿ ಫ್ಯಾಮಿಲಿ ಜೊತೆ ಅಭಿಷೇಕ್‌ ಬಚ್ಚನ್‌ ಹಾಜರಿ ಹಾಕಿದ್ದರು. ಕುಟುಂಬದ ಜೊತೆ ಕಾಣಿಸಿಕೊಳ್ಳದೇ ಪ್ರತ್ಯೇಕವಾಗಿ ಮಗಳೊಂದಿಗೆ ಕ್ಯಾಮೆರಾಗೆ ನಟಿ ಪೋಸ್ ಕೊಟ್ಟಿದ್ದಾರೆ. ಇದು ನೆಟ್ಟಿಗರ ಡಿವೋರ್ಸ್ ಅನುಮಾನಕ್ಕೆ ತುಪ್ಪ ಸುರಿದಂತೆ ಆಗಿದೆ.

    ಬಾಲಿವುಡ್‌ನ ಬೆಸ್ಟ್ ಜೋಡಿಗಳಲ್ಲಿ ಒಂದಾಗಿರುವ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ವೈವಾಹಿಕ ಜೀವನದಲ್ಲಿ ಬಿರುಕಾಗಿದೆ ಎಂದು ಕೆಲ ತಿಂಗಳುಗಳಿಂದ ಹರಿದಾಡುತ್ತಿದೆ. ಇದೀಗ ನಡೆದಿರುವ ಘಟನೆ ಡಿವೋರ್ಸ್ ವಿಚಾರಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ. ಇದನ್ನೂ ಓದಿ:ತಮಿಳು ನಟ ಧನುಷ್‌ಗೆ ಹಾಟ್ ಬೆಡಗಿ ತೃಪ್ತಿ ದಿಮ್ರಿ ನಾಯಕಿ

    ಅಂಬಾನಿ ಮಗನ ಮದುವೆಯಲ್ಲಿ ಅಮಿತಾಭ್, ಜಯಾ ಬಚ್ಚನ್, ಮಗಳು ಶ್ವೇತಾ ಮತ್ತು ಅವರ ಮಕ್ಕಳ ಜೊತೆ ಅಭಿಷೇಕ್ ಬಚ್ಚನ್ ಪಾಪರಾಜಿಗಳ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಆದರೆ ನಟಿ ಐಶ್ವರ್ಯಾ ರೈ ಕುಟುಂಬದ ಜೊತೆ ಕಾಣಿಸಿಕೊಳ್ಳದೇ ಪ್ರತ್ಯೇಕವಾಗಿ ಮಗಳು ಆರಾಧ್ಯ ಜೊತೆ ಕ್ಯಾಮೆರಾ ಪೋಸ್ ನೀಡಿದ್ದಾರೆ.

    ಈ ಫೋಟೋಗೆ ನೆಗೆಟಿವ್ ಕಾಮೆಂಟ್‌ಗಳು ಹರಿದು ಬರುತ್ತಿದೆ. ಸದ್ಯ ಹರಿದಾಡುತ್ತಿರುವ ಈ ಸುದ್ದಿಗೆ ಐಶ್ವರ್ಯಾ ದಂಪತಿ ಸ್ಪಷ್ಟನೆ ಕೊಡುತ್ತಾರಾ? ಕಾಯಬೇಕಿದೆ.

  • ಕಾನ್ಸ್ ಚಿತ್ರೋತ್ಸವ ಮುಗಿದ ನಂತರ ಐಶ್ವರ್ಯಾ ರೈ ಕೈಗೆ ಶಸ್ತ್ರ ಚಿಕಿತ್ಸೆ

    ಕಾನ್ಸ್ ಚಿತ್ರೋತ್ಸವ ಮುಗಿದ ನಂತರ ಐಶ್ವರ್ಯಾ ರೈ ಕೈಗೆ ಶಸ್ತ್ರ ಚಿಕಿತ್ಸೆ

    ಕಾನ್ಸ್ ಫಿಲ್ಮ್ ಫೆಸ್ಟಿವಲ್ (Cannes Film Festival) ಈವೆಂಟ್ ಅದ್ಧೂರಿಯಾಗಿ ನಡೆಯುತ್ತಿದೆ. ವಿವಿಧ ದೇಶದ ಕಲಾವಿದರು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕುತ್ತಿದ್ದಾರೆ. ಈ ಬಾರಿ ಐಶ್ವರ್ಯಾ ರೈ ಕೈಗೆ ಬ್ಯಾಂಡೇಜ್ ಕಟ್ಟಿಕೊಂಡೆ ಕಾನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಕಾಣಿಸಿಕೊಂಡಿದ್ದರು. ಆದರೆ ಇದೀಗ ಸಿಕ್ಕಿರುವ ಮಾಹಿತಿ ಏನೆಂದರೆ, ಕಾನ್ಸ್ ಫೆಸ್ಟಿವಲ್ ಮುಗಿದ ನಂತರ ಭಾರತಕ್ಕೆ ವಾಪಸ್ ಆಗುತ್ತಿದ್ದಂತೆ ನಟಿ ಸರ್ಜರಿಗೆ ಒಳಗಾಗಲಿದ್ದಾರೆ. ಇದನ್ನೂ ಓದಿ:ಪ್ರಭಾಸ್‌ ಜೀವನದ ಸ್ಪೆಷಲ್‌ ವ್ಯಕ್ತಿ ಕೀರ್ತಿ ಸುರೇಶ್?‌

    ಕೆಲ ದಿನಗಳ ಹಿಂದೆ ಐಶ್ವರ್ಯಾಗೆ ಅವರ ಮಣಿಕಟ್ಟಿಗೆ ಪೆಟ್ಟಾಗಿತ್ತು. ನೋವು ಇರುವುದರಿಂದ ಯಾವುದೇ ಕಾರ್ಯಕ್ರಮಕ್ಕೂ ತೆರಳುವುದು ಬೇಡ ಎಂದು ಆಪ್ತರು ಸಲಹೆ ನೀಡಿದ್ದರು. ಆದರೆ ಅದಕ್ಕೆ ನಟಿ ಒಪ್ಪಲಿಲ್ಲ. ಎಂದಿನಂತೆ ಈ ವರ್ಷವು ಕೂಡ ನಟಿ ಆಗಮಿಸಿದ್ದಾರೆ. ಸದ್ಯ ಕಾನ್ಸ್ ಚಿತ್ರೋತ್ಸವಕ್ಕೆ ಮಗಳ ಜೊತೆ ನಟಿ ಹಾಜರಿ ಹಾಕಿದ್ದಾರೆ. ಹಾಗಾಗಿ ಮುಂದಿನ ವಾರ ಅವರು ಶಸ್ತ್ರಚಿಕಿತ್ಸೆಗೆ ನಟಿ ಒಳಗಾಗಲಿದ್ದಾರೆ ಎನ್ನಲಾಗಿದೆ.

    ಮೊದಲ ದಿನ ಐಶ್ವರ್ಯಾ ಫಲ್ಗುಣಿ ಶೇನ್ ಪೀಕಾಕ್ ಗೌನ್ ಧರಿಸಿದ್ದರು. ವಿಶೇಷ ಏನೆಂದರೆ, ಕೈಗೆ ಬ್ಯಾಂಡೇಜ್ ಸುತ್ತಿಕೊಂಡೇ ಅವರು ರೆಡ್ ಕಾರ್ಪೆಟ್‌ನಲ್ಲಿ ಪೋಸ್ ನೀಡಿದ್ದರು. ಐಶ್ವರ್ಯಾ ರೈ ಅವರು ಎರಡನೇ ಬಾರಿ ಬೆಳ್ಳಿ ಮತ್ತು ನೀಲಿ ಮಿಶ್ರಿತ ಗೌನ್ ಧರಿಸಿದ್ದರು. ಫಲ್ಗುಣಿ ಮತ್ತು ಶೇನ್ ಪೀಕಾಕ್ ವಿನ್ಯಾಸಗೊಳಿಸಿದ ಸ್ಕರ್ಟ್ ಇದಾಗಿತ್ತು.

  • ಕೈಗೆ ಬ್ಯಾಂಡೇಜ್ ಸುತ್ತಿಕೊಂಡೇ ಕಾನ್ಸ್ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ ಐಶ್ವರ್ಯಾ ರೈ

    ಕೈಗೆ ಬ್ಯಾಂಡೇಜ್ ಸುತ್ತಿಕೊಂಡೇ ಕಾನ್ಸ್ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ ಐಶ್ವರ್ಯಾ ರೈ

    ವಿಶ್ವದ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ಕಾನ್ಸ್ ಫಿಲ್ಮ್ ಫೆಸ್ಟಿವಲ್ (Cannes Film Festival) ಕೂಡ ಒಂದು. ಕಾನ್ಸ್ ಚಿತ್ರೋತ್ಸವ 14ರಿಂದ ಆರಂಭವಾಗಿದೆ. ಇದೀಗ ಕೈಗೆ ಬ್ಯಾಂಡೇಜ್ ಸುತ್ತಿಕೊಂಡೇ ಕಾನ್ಸ್ ರೆಡ್ ಕಾರ್ಪೆಟ್ ಮೇಲೆ ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ (Aishwarya Rai) ಹೆಜ್ಜೆ ಹಾಕಿದ್ದಾರೆ.

    ಪ್ರತಿವರ್ಷದಂತೆ ಈ ವರ್ಷವು ಕೂಡ ಕಾನ್ಸ್ ಚಿತ್ರೋತ್ಸವದಲ್ಲಿ ಕರಾವಳಿ ನಟಿ ಐಶ್ವರ್ಯಾ ರೈ ಭಾಗಿಯಾಗಿದ್ದಾರೆ. ಕೈಗೆ ಬ್ಯಾಂಡೇಜ್ ಸುತ್ತಿಕೊಂಡೇ ಕಾನ್ಸ್ ರೆಡ್ ಕಾರ್ಪೆಟ್ ಮೇಲೆ ನಟಿ ಹೆಜ್ಜೆ ಹಾಕಿದ್ದಾರೆ. ನಟಿಯ ಕೈಗೆ ಪೆಟ್ಟಾಗಿದ್ರೂ ನಗು ಮುಖದಿಂದ ನಟಿ ಕಾರ್ಯಕ್ರಮದಲ್ಲಿ ಮಿಂಚಿರೋದು ನೋಡಿ ನೆಟ್ಟಿಗರು ಅಚ್ಚರಿ ಮೂಡಿಸಿದ್ದಾರೆ. ಇದನ್ನೂ ಓದಿ:ಕೇಂದ್ರದ ಸಾಧನೆ ಹಾಡಿಹೊಗಳಿದ ರಶ್ಮಿಕಾ ಮಂದಣ್ಣಗೆ ಪ್ರಧಾನಿ ಮೋದಿ ಪ್ರತಿಕ್ರಿಯೆ

    ಕಾನ್ಸ್ ರೆಡ್ ಕಾರ್ಪೆಟ್‌ನಲ್ಲಿ ನಟಿ ಫಲ್ಗುಣಿ ಶೇನ್ ಪೀಕಾಕ್ ಗೌನ್‌ನಲ್ಲಿ ಮಿಂಚಿದ್ದಾರೆ. ಐಶ್ವರ್ಯಾ ರೈ ವಿವಿಧ ಭಂಗಿಯಲ್ಲಿ ನಿಂತು ಪೋಸ್ ಕೊಡ್ತಿರೋದನ್ನು ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. 50ನೇ ವರ್ಷದ ವಯಸ್ಸಿನಲ್ಲಿಯೂ ನಟಿ ಗ್ಲ್ಯಾಮರಸ್‌ ಆಗಿ ಕಾಣಿಸಿಕೊಂಡಿದ್ದಾರೆ.

    ಅಂದಹಾಗೆ, ಕಾನ್ಸ್ ಚಿತ್ರೋತ್ಸವಕ್ಕೆ ಬರಲು ಮುಂಬೈ ವಿಮಾನ ನಿಲ್ದಾಣದಿಂದ ಐಶ್ವರ್ಯಾ ರೈ ಹೊರಟಾಗಲೇ ಫ್ಯಾನ್ಸ್‌ಗೆ ಆತಂಕವಾಗಿತ್ತು. ಆದರೆ ಕೈಗೆ ಪೆಟ್ಟಾಗಿದ್ರೂ ನಗುಮುಖದಿಂದಲೇ ಹೊರಟ ಐಶ್ವರ್ಯಾರನ್ನು ನೋಡಿ ಅಭಿಮಾನಿಗಳು ಆರೋಗ್ಯ ವಿಚಾರಿಸಿದ್ದರು.

  • ಐಶ್ವರ್ಯಾ ರೈ ಕೈಗೆ ಪೆಟ್ಟು- ಕಾನ್ಸ್ ಚಿತ್ರೋತ್ಸವದತ್ತ ನಟಿ

    ಐಶ್ವರ್ಯಾ ರೈ ಕೈಗೆ ಪೆಟ್ಟು- ಕಾನ್ಸ್ ಚಿತ್ರೋತ್ಸವದತ್ತ ನಟಿ

    ವಿಶ್ವದ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ಕಾನ್ ಫಿಲ್ಮ್ ಫೆಸ್ಟಿವಲ್ (Cannes Film Festival) ಕೂಡ ಒಂದು. ಕಾನ್ ಫಿಲ್ಮ್ ಫೆಸ್ಟಿವಲ್ ಮೇ 14ರಿಂದ ಆರಂಭ ಆಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಐಶ್ವರ್ಯಾ ರೈ (Aishwarya Rai) ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಲು ರೆಡಿಯಾಗಿದ್ದಾರೆ. ಮೇ 15ರಂದು ಐಶ್ವರ್ಯಾ ಅವರು ಮಗಳು ಆರಾಧ್ಯ ಜೊತೆ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ, ಐಶ್ವರ್ಯಾ ಅವರ ಕೈಗೆ ಪೆಟ್ಟಾಗಿ ಬ್ಯಾಂಡೇಜ್ ಕೂಡ ಸುತ್ತಿಕೊಂಡಿದ್ದರು. ನಟಿಯ ಸ್ಥಿತಿ ನೋಡಿ ಫ್ಯಾನ್ಸ್ ಆತಂಕಕ್ಕೆ ಒಳಗಾಗಿ ಆರೋಗ್ಯ ವಿಚಾರಿಸಿದ್ದಾರೆ. ಇದನ್ನೂ ಓದಿ:ಆಸ್ಪತ್ರೆಯಲ್ಲಿ ಮಲಗಿ ಡ್ರಾಮಾ ಮಾಡ್ತಿದ್ದಾಳೆ ರಾಖಿ : ಆದಿಲ್ ಕಿಡಿ

     

    View this post on Instagram

     

    A post shared by Viral Bhayani (@viralbhayani)

    ಐಶ್ವರ್ಯಾ ಅವರು ಮಗಳ ಜೊತೆ ಕಾರಿನಿಂದ ಇಳಿದಿದ್ದಾರೆ. ಅವರ ಬಲಗೈಗೆ ಬ್ಯಾಂಡೇಜ್ ಹಾಕಲಾಗಿತ್ತು. ನಟಿ ಕಪ್ಪು ಉಡುಪಿನೊಂದಿಗೆ ನೀಲಿ ಕೋಟ್ ಧರಿಸಿದ್ದರು. ಆರಾಧ್ಯ ಅವರು ತಿಳಿ ನೀಲಿ ಹೂಡಿ ಮತ್ತು ಕಪ್ಪು ಪ್ಯಾಂಟ್‌ನಲ್ಲಿ ಕಾಣಿಸಿಕೊಂಡರು. ಕೆಲ ಸೆಕೆಂಡುಗಳ ಕಾಲ ಮಾಧ್ಯಮದವರತ್ತ ಕೈ ಬೀಸಿದ ಐಶ್ವರ್ಯಾ ನಂತರ ಮುಂಬೈ ವಿಮಾನ ನಿಲ್ದಾಣ ಪ್ರವೇಶಿಸಿದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಸಲಿಗೆ ಐಶ್ವರ್ಯಾ ಕೈಗೆ ಏನಾಗಿದೆ ಎಂಬುದು ತಿಳಿದು ಬಂದಿಲ್ಲ.

    ಬಲಗೈಗೆ ಬ್ಯಾಂಡೇಜ್ ಕಟ್ಟಿಕೊಂಡಿರುವ ಐಶ್ವರ್ಯಾ ರೈ ಕೈ ನೋವಿನ ನಡುವೆಯೂ ಕಾನ್ಸ್ ಫೆಸ್ಟಿವಲ್‌ನಲ್ಲಿ ಹೇಗೆ ಕಾಣಿಸಿಕೊಳ್ತಾರೆ ಎಂಬುದನ್ನು ನೋಡಲು ಫ್ಯಾನ್ಸ್ ಕಾಯ್ತಿದ್ದಾರೆ.

  • ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದಲ್ಲಿ ಐಶ್ವರ್ಯಾ ರೈ

    ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದಲ್ಲಿ ಐಶ್ವರ್ಯಾ ರೈ

    ನ್ಯಾಷನಲ್ ಸ್ಟಾರ್ ಯಶ್ (Yash) ಸದ್ಯ ‘ಟಾಕ್ಸಿಕ್’ (Toxic) ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಟಾಕ್ಸಿಕ್‌ ಟೀಮ್‌ನಿಂದ ಅಚ್ಚರಿಯ ಹೆಸರೊಂದು ಹೊರಬಿದ್ದಿದೆ. ಯಶ್ ಸಿನಿಮಾದಲ್ಲಿ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ (Aishwarya Rai) ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

    ತಡವಾದರೂ ಸರಿ ಅಂತ ಸಕಲ ಸಿದ್ಧತೆ ಮಾಡಿಕೊಂಡೆ ಯಶ್ ಅಖಾಡಕ್ಕೆ ಇಳಿಯುತ್ತಿದ್ದಾರೆ. ‘ಟಾಕ್ಸಿಕ್’ ಸಿನಿಮಾಗಾಗಿ ಬೆಂಗಳೂರಿನಲ್ಲಿ ಈಗಾಗಲೇ ಬೃಹತ್ ಸೆಟ್ ಹಾಕಿದ್ದಾರೆ. ಇನ್ನೇನು ಸದ್ಯದಲ್ಲೇ ಶೂಟಿಂಗ್ ಕೂಡ ಶುರುವಾಗಲಿದೆ. ಇದನ್ನೂ ಓದಿ:‘ಸಿಖಂದರ್‌’ ಸಲ್ಮಾನ್ ಖಾನ್‌ಗೆ ರಶ್ಮಿಕಾ ನಾಯಕಿ

    ಇತ್ತೀಚೆಗೆ ಯಶ್ ಸಿನಿಮಾದಲ್ಲಿ ಕರೀನಾ ಕಪೂರ್ (Kareena Kapoor) ನಟಿಸುವ ಸುದ್ದಿ ಭಾರೀ ಚರ್ಚೆಯಾಗಿತ್ತು. ಯಶ್ ಸಹೋದರಿ ಪಾತ್ರಕ್ಕೆ ಅವರನ್ನು ಸಂಪರ್ಕಿಸಿದೆ ಎನ್ನಲಾಗಿತ್ತು. ಆದರೆ ಡೇಟ್ಸ್ ಸಮಸ್ಯೆಯಿಂದ ಕರೀನಾ ಹೊರನಡೆದಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಈ ಬೆನ್ನಲ್ಲೇ ನಯನತಾರಾ (Nayanathara) ಹೆಸರು ಚಾಲ್ತಿಗೆ ಬಂತು. ಇದರ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳುವ ಮೊದಲೇ ಐಶ್ವರ್ಯಾ ರೈ ಹೆಸರು ಚರ್ಚೆಗೆ ಗ್ರಾಸವಾಗಿದೆ.

    ‘ಟಾಕ್ಸಿಕ್’ ಸಿನಿಮಾದಲ್ಲಿ ಯಶ್ ಸಹೋದರಿ ಪಾತ್ರಕ್ಕೆ ತುಂಬಾನೇ ಪ್ರಾಮುಖ್ಯತೆ ಇದೆ. ಹಾಗಾಗಿ ನಟನೆಯಲ್ಲಿ ಪಳಗಿರುವ ನಟಿಯರನ್ನೇ ಚಿತ್ರತಂಡ ಮಣೆ ಹಾಕ್ತಿದೆ. ಸದ್ಯ ಬಾಲಿವುಡ್ ಬೆಡಗಿ ಐಶ್ವರ್ಯಾ ರೈ ಅವರನ್ನು ಸಹೋದರಿ ಪಾತ್ರಕ್ಕೆ ಚಿತ್ರತಂಡ ಸಂಪರ್ಕಿಸಿದೆ. ನಯನತಾರಾ ಅಥವಾ ಐಶ್ವರ್ಯಾ ರೈ ಇಬ್ಬರಲ್ಲಿ ಒಬ್ಬರನ್ನು ಫೈನಲ್ ಮಾಡಲಿದೆ ಚಿತ್ರತಂಡ. ಹಾಗಾದ್ರೆ ಯಾರು ‘ಟಾಕ್ಸಿಕ್‌’ನಲ್ಲಿ ಕಾಣಿಸಿಕೊಳ್ತಾರೆ? ಎಂಬುದನ್ನು ಚಿತ್ರತಂಡ ಹೇಳುವವರೆಗೂ ಕಾದುನೋಡಬೇಕಿದೆ.

  • ಮೀನು ತಿನ್ನಿ, ನಿಮ್ಮ ಕಣ್ಣು ಐಶ್ವರ್ಯಾ ರೈ ರೀತಿ ಕಾಣುತ್ತದೆ- ಸಚಿವ ವಿಜಯ್ ಕುಮಾರ್ ಗವಿತ್

    ಮೀನು ತಿನ್ನಿ, ನಿಮ್ಮ ಕಣ್ಣು ಐಶ್ವರ್ಯಾ ರೈ ರೀತಿ ಕಾಣುತ್ತದೆ- ಸಚಿವ ವಿಜಯ್ ಕುಮಾರ್ ಗವಿತ್

    ಬುಡಕಟ್ಟು ಅಭಿವೃದ್ಧಿ ಸಚಿವ ವಿಜಯ್ ಕುಮಾರ್ ಗವಿತ್(Vijay Kumar Gavit), ಆಡಿರುವ ಮಾತು ಈಗ ಸಖತ್ ವೈರಲ್ ಆಗಿದೆ. ಮಂಗಳೂರಿನ ಚೆಲುವೆ, ಬಾಲಿವುಡ್ ನಟಿ ಐಶ್ವರ್ಯಾ ರೈ(Aishwarya Rai) ಬಗ್ಗೆ ಸಚಿವ ವಿಜಯ್ ಕುಮಾರ್ ನೀಡಿರುವ ಹೇಳಿಕೆ ಈಗ ಸಂಚಲನ ಸೃಷ್ಟಿಸಿದೆ. ಪ್ರತಿ ನಿತ್ಯ ನೀವು ಮೀನು(Fish) ತಿನ್ನಿ ನಿಮ್ಮ ಕಣ್ಣು ಐಶ್ವರ್ಯಾ ರೈ ರೀತಿ ಆಗುತ್ತದೆ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ:ತಮಿಳಿನ ‘ಜಂಟಲ್‌ಮ್ಯಾನ್ 2’ನಲ್ಲಿ ಸುಧಾರಾಣಿ

    ಕಾರ್ಯಕ್ರಮವೊಂದಲ್ಲಿ ಸಚಿವ ವಿಜಯ್ ಕುಮಾರ್ ಗವಿತ್ ಐಶ್ವರ್ಯಾ ರೈ ಬಗ್ಗೆ ಮಾತನಾಡಿದ್ದಾರೆ. ಐಶ್ವರ್ಯಾ ರೈ ಅವರು ಪ್ರತಿ ದಿನ ಮೀನು ತಿನ್ನುವುದರಿಂದ ಸುಂದರವಾದ ಕಣ್ಣುಗಳನ್ನು ಹೊಂದಿದ್ದಾರೆ. ನೀವೂ ಕೂಡ ಪ್ರತಿ ದಿನ ಮೀನು ತಿಂದರೆ ನಿಮ್ಮ ಕಣ್ಣುಗಳು (Eyes) ಕೂಡ ಸುಂದರವಾಗಿರುತ್ತದೆ ಎಂದು ವಿಜಯ್ ಕುಮಾರ್ ಗವಿತ್ ಹೇಳಿಕೆ ನೀಡಿದ್ದಾರೆ. ಅವರು ಈ ಹೇಳಿಕೆಯಿಂದ ಅಲ್ಲಿದ್ದವರ ಹುಬ್ಬೇರಿಸಿತು.

    ನೀವು ಐಶ್ವರ್ಯಾ ರೈ ಅವರನ್ನು ನೋಡಿದ್ದೀರಾ ಅವರು ಪ್ರತಿ ದಿನ ಮೀನು ತಿನ್ನುತ್ತಿದ್ದರು. ಅವರ ಕಣ್ಣುಗಳನ್ನು ನೋಡಿದ್ದೀರಾ ಮೀನು ತಿನ್ನುವುದರಿಂದ ಎರಡು ಪ್ರಯೋಜನಗಳಿವೆ. ಮಹಿಳೆಯರು ಸ್ಲಿಮ್ ಆಗುತ್ತಾರೆ ಮತ್ತು ಆಕರ್ಷಕವಾಗಿ ಕಾಣುತ್ತಾರೆ. ಮೀನಿನಲ್ಲಿ ಇರುವ ಒಂದು ತೈಲದಿಂದ ಇದು ಸಾಧ್ಯ. ನಿಮ್ಮ ಕಣ್ಣು ಮತ್ತು ತ್ವಚೆ ಕಾಂತಿಯುತವಾಗಿ ಕಾಣುತ್ತವೆ ಎಂದು ವಿಜಯ್ ಕುಮಾರ್ ಗವಿತ್ ಹೇಳಿದ್ದಾರೆ.

    ಒಟ್ನಲ್ಲಿ ಸಚಿವ ವಿಜಯ್ ಕುಮಾರ್ ಅವರು ಆಡಿರುವ ಮಾತು ಈಗ ಹಲವು ಚರ್ಚೆಗಳಿಗೆ ಗ್ರಾಸವಾಗಿದೆ. ಅವರ ಮಾತಿಗೆ ಅನೇಕರು ಕಾಲೆಳೆದಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Cannes 2023: ರೆಡ್‌ ಕಾರ್ಪೆಟ್‌ ಮೇಲೆ ಹೆಜ್ಜೆ ಹಾಕಿದ ಬಾಲಿವುಡ್‌ ಬ್ಯೂಟೀಸ್

    Cannes 2023: ರೆಡ್‌ ಕಾರ್ಪೆಟ್‌ ಮೇಲೆ ಹೆಜ್ಜೆ ಹಾಕಿದ ಬಾಲಿವುಡ್‌ ಬ್ಯೂಟೀಸ್

    2023ನೇ ಸಾಲಿನ ಕಾನ್ ಫೆಸ್ಟಿವಲ್ (Cannes Festival 2023) ಆರಂಭವಾಗಿದೆ. ದೇಶ-ವಿದೇಶದ ಸೆಲೆಬ್ರಿಟಿ ತಾರೆಯರು ಈ ಸಮಾರಂಭದಲ್ಲಿ ಭಾಗಿಯಾಗುತ್ತಾರೆ. ಸಿನಿ ತಾರೆಯರು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕೋದು ಒಂದು ವಿಶೇಷ ಆಕರ್ಷಣೆ. ಕ್ಯಾಮೆರಾ ಕಣ್ಣಿಗೆ ಚೆಂದದ ಪೋಸ್ ಕೊಡುತ್ತಾರೆ. ಸದ್ಯ ಬಾಲಿವುಡ್ ಸ್ಟಾರ್ ನಾಯಕಿಯರು ಕಾನ್ ಚಿತ್ರೋತ್ಸವದಲ್ಲಿ ಭಾಗಿಯಾಗಿದ್ದಾರೆ.

    76ನೇ ಕಾನ್ ಫೆಸ್ಟಿವಲ್ ಫ್ಯಾನ್ಸ್‌ನಲ್ಲಿ ಗ್ರ್ಯಾಂಡ್ ಆಗಿ ನಡೆಯುತ್ತಿದೆ. ಮೇ 16ರಿಂದ ಶುರುವಾಗಿರುವ ಈ ಕಾರ್ಯಕ್ರಮ ಮೇ 27ಕ್ಕೆ ಅಂತ್ಯವಾಗಲಿದೆ. ಕಾನ್ ಚಿತ್ರೋತ್ಸವದಲ್ಲಿ ಐಶ್ವರ್ಯ ರೈ, ಊರ್ವಶಿ ರೌಟೇಲಾ, ಮೃಣಾಲ್ ಠಾಕೂರ್ (Mrunal Thakur), ಪಾಲ್ಗೊಂಡಿದ್ದಾರೆ. ಇದನ್ನೂ ಓದಿ:‘ಸಿದ್ದರಾಮಯ್ಯ ಎಂಬ ನಾನು’: ಸಿದ್ದರಾಮಯ್ಯ ಕುರಿತು ಮತ್ತೊಂದು ಸಿನಿಮಾ ಘೋಷಣೆ

    ಕರಾವಳಿ ಬೆಡಗಿ ಐಶ್ವರ್ಯಾ ರೈ (Aishwarya Rai) ಅವರು ಗ್ರೀನ್ ಬಣ್ಣದ ಡ್ರೆಸ್ ಮತ್ತು ಕಪ್ಪು- ಸಿಲ್ವರ್ ಮಿಶ್ರಿತ ಕಲರ್ ಗೌನ್‌ನಲ್ಲಿ ಸ್ಟೈಲ್ ಆಗಿ ಕಾಣಿಸಿಕೊಂಡಿದ್ದಾರೆ. ನಟಿ ಲುಕ್ ಮತ್ತು ಕಣ್ಣಿನ ನೋಟಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ.

    ಊರ್ವಶಿ ರೌಟೇಲಾ (Urvashi Rautela) ಅವರು ಬಾದಮ್ ಮತ್ತು ನೀಲಿ ಕಲರ್ ಮಿಕ್ಸ್ ಡ್ರೆಸ್‌ನಲ್ಲಿ ಮಿಂಚಿದ್ದಾರೆ. ತುಟಿಗೆ ನೀಲಿ ಬಣ್ಣದ ಲಿಪ್‌ಸ್ಟಿಕ್ ಹಾಕಿದ್ದಾರೆ. ಕ್ಯಾಮೆರಾ ಕಣ್ಣಿಗೆ ಬೋಲ್ಡ್ ಆಗಿ ಪೋಸ್ ನೀಡಿದ್ದಾರೆ. ‘ಸೀತಾ ರಾಮಂ’ ಸುಂದರಿ ಮೃಣಾಲ್ ಠಾಕೂರ್ ಅವರು ಬಿಳಿ ಬಣ್ಣದ ಉಡುಗೆಯಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.