Tag: ಐಶ್ವರ್ಯಾ ರೈ ಬಚ್ಚನ್

  • ಡಿವೋರ್ಸ್ ವದಂತಿ ನಡುವೆ ಮಗಳ ಜೊತೆ ನ್ಯೂಯಾರ್ಕ್ ವೆಕೇಷನ್ ಮುಗಿಸಿ ಬಂದ ಐಶ್ವರ್ಯಾ ರೈ

    ಡಿವೋರ್ಸ್ ವದಂತಿ ನಡುವೆ ಮಗಳ ಜೊತೆ ನ್ಯೂಯಾರ್ಕ್ ವೆಕೇಷನ್ ಮುಗಿಸಿ ಬಂದ ಐಶ್ವರ್ಯಾ ರೈ

    ಬಾಲಿವುಡ್ ನಟಿ ಐಶ್ವರ್ಯಾ ರೈ(Aishwarya Rai) ಆಗಾಗ ವೈಯಕ್ತಿಕ ಜೀವನದ ವಿಚಾರವಾಗಿ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ಡಿವೋರ್ಸ್ (Divorce) ವದಂತಿ ನಡುವೆ ಮಗಳ ಜೊತೆ ನಟಿ ನ್ಯೂಯಾರ್ಕ್ ವೆಕೇಷನ್ ಮುಗಿಸಿ ಬಂದಿದ್ದಾರೆ. ವಿಮಾನ ನಿಲ್ದಾಣದಲ್ಲಿ ಪುತ್ರಿ ಆರಾಧ್ಯಾ ಜೊತೆ ನಟಿ ಎಂಟ್ರಿ ಕೊಟ್ಟಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

    ನ್ಯೂಯಾರ್ಕ್ ವೆಕೇಷನ್‌ಗೆ ಮಗಳ ಜೊತೆ ಐಶ್ವರ್ಯಾ ರೈ ತೆರಳಿದ್ದರು. ಇಂದು (ಆ.1) ಪುತ್ರಿಯೊಂದಿಗೆ ಭಾರತಕ್ಕೆ ಮರಳಿದ್ದಾರೆ. ನಟಿ ಬ್ಲ್ಯಾಕ್ ಕಲರ್ ಡ್ರೆಸ್‌ನಲ್ಲಿ ಮಿಂಚಿದ್ದಾರೆ. ಆರಾಧ್ಯಾ ನೇರಳೆ ಬಣ್ಣದ ಟೀ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿದ್ದಾರೆ. ಇಬ್ಬರೂ ನಗು ನಗುತ್ತಲೇ ಕ್ಯಾಮೆರಾಗೆ ಸ್ಮೈಲ್ ಮಾಡಿದ್ದಾರೆ. ಈ ವೇಳೆ, ಇವರ ಜೊತೆ ಅಭಿಷೇಕ್ ಬಚ್ಚನ್ (Abhishek Bachchan) ಇಲ್ಲದೇ ಇರೋದು ಡಿವೋರ್ಸ್ ಸುದ್ದಿಗೆ ಮತ್ತಷ್ಟು ಪುಷ್ಠಿ ನೀಡಿದೆ.

    ಇತ್ತೀಚೆಗೆ ಅಂಬಾನಿ ಮನೆ ಮಗನ ಮದುವೆಯಲ್ಲಿ ಅಭಿಷೇಕ್ ಬಚ್ಚನ್ ಕುಟುಂಬದ ಜೊತೆ ನಟಿ ಕಾಣಿಸಿಕೊಳ್ಳದೆ ಮಗಳ ಜೊತೆ ಬಂದು ಕ್ಯಾಮೆರಾ ಪೋಸ್ ನೀಡಿದ್ದರು. ಅಂದಿನಿಂದಲೇ ಇಬ್ಬರ ಡಿವೋರ್ಸ್ ಬಗ್ಗೆ ಗುಸು ಗುಸು ಶುರುವಾಗಿತ್ತು. ಇದುವರೆಗೂ ಈ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ. ಇದನ್ನೂ ಓದಿ:ಬೆಡ್‌ರೂಮ್ ಫೋಟೋ ಹಂಚಿಕೊಂಡ ನಮ್ರತಾ ಗೌಡ

    ಅಂದಹಾಗೆ, ಕಡೆಯದಾಗಿ ನಟಿ, ಪೊನ್ನಿಯನ್ ಸೆಲ್ವನ್ 1, ಪೊನ್ನಿಯನ್ ಸೆಲ್ವನ್ 2 ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಈ ಎರಡು ಪಾರ್ಟ್ ಸೂಪರ್ ಹಿಟ್ ಆಗಿತ್ತು. ಈಗ ಮತ್ತೆ ಹೊಸ ಕಥೆಗಳನ್ನು ನಟಿ ಕೇಳ್ತಿದ್ದಾರೆ. ಸದ್ಯದಲ್ಲೇ ಸಿನಿಮಾ ಬಗ್ಗೆ ಐಶ್ವರ್ಯಾ ಅಪ್‌ಡೇಟ್ ಕೊಡ್ತಾರಾ ಕಾದುನೋಡಬೇಕಿದೆ.

  • ಐಶ್ವರ್ಯಾ ರೈಗೆ ಹುಟ್ಟುಹಬ್ಬದ ಸಂಭ್ರಮ- ಬಾಕ್ಸ್ ಆಫೀಸಿನಲ್ಲಿ ಧೂಳೆಬ್ಬಿಸಿದ ಸಿನಿಮಾಗಳು

    ಐಶ್ವರ್ಯಾ ರೈಗೆ ಹುಟ್ಟುಹಬ್ಬದ ಸಂಭ್ರಮ- ಬಾಕ್ಸ್ ಆಫೀಸಿನಲ್ಲಿ ಧೂಳೆಬ್ಬಿಸಿದ ಸಿನಿಮಾಗಳು

    ಮುಂಬೈ: ಐಶ್ವರ್ಯಾ ರೈ ಬಚ್ಚನ್ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಬಾಲಿವುಡ್ ಮಾತ್ರವಲ್ಲ ಹಲವು ಹಾಲಿವುಡ್ ಸಿನಿಮಾಗಳಲ್ಲಿ ಸಹ ಅವರು ಮಿಂಚಿದ್ದಾರೆ. 1994ರಲ್ಲಿ ಪ್ರತಿಷ್ಠಿತ ವಿಶ್ವ ಸುಂದರಿ ಕಿರೀಟ ಗೆದ್ದ ಬಳಿಕ ಅವರು ಹಿಂದಿರುಗಿ ನೋಡಲೇ ಇಲ್ಲ. ಸಾಲು ಸಾಲು ಸಿನಿಮಾಗಳ ಆಫರ್ ಬರಲು ತೊಡಗಿದವರು. ಹೀಗಾಗಿ ವಿಶ್ವ ಮಟ್ಟದ ನಟಿಯಾಗಿ ಗುರುತಿಸಿಕೊಂಡರು.

    ಐಶ್ವರ್ಯಾ ರೈ ಬಚ್ಚನ್ ಕೇವಲ ಬಾಲಿವುಡ್ ಮಾತ್ರವಲ್ಲ, ಹಲವು ಹಾಲಿವುಡ್ ಸಿನಿಮಾಗಳಲ್ಲಿ ಸಹ ನಟಿಸಿದ್ದಾರೆ. ಅಲ್ಲದೆ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಸಹ ನಟಿಸಿದ್ದಾರೆ. ಅವರ ಹುಟ್ಟುಹಬ್ಬವಾದ ಇಂದು ಅಭಿಮಾನಿಗಳು ಸಂಭ್ರಮಿಸುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಈ ಖುಷಿಯ ಸಂದರ್ಭದಲ್ಲಿ ಬಾಕ್ಸ್ ಆಫೀಸ್‍ನಲ್ಲಿ ಸದ್ದು ಮಾಡಿದ ಅವರ ಸಿನಿಮಾಗಳ ಕುರಿತು ಮಾಹಿತಿಯನ್ನು ಹೊತ್ತು ತಂದಿದ್ದೇವೆ.

    ಐಶ್ವರ್ಯಾ ಅವರ ಹಲವು ಸಿನಿಮಾಗಳು ಬಾಕ್ಸ್ ಆಫೀಸ್‍ನಲ್ಲಿ ಸದ್ದು ಮಾಡಿವೆ. ಈ ಪೈಕಿ ಟಾಪ್ 5 ಸಿನಿಮಾಗಳು ಇಲ್ಲಿವೆ. ಐಶ್ವರ್ಯಾ ನಟನೆಯ ಹೆಚ್ಚು ಹಣ ಗಳಿಸಿದ ಸಿನಿಮಾದ ಪಟ್ಟಿಯಲ್ಲಿ ‘ಏ ದಿಲ್ ಹೈ ಮುಷ್ಕಿಲ್’ ಸಿನಿಮಾ ಮೊದಲ ಸ್ಥಾನದಲ್ಲಿದ್ದು, ಬರೋಬ್ಬರಿ 106.48 ಕೋಟಿ ರೂ.ಗಳನ್ನು ಗಳಿಸಿದೆ. ಈ ಸಿನಿಮಾದಲ್ಲಿ ರಣಬೀರ್ ಕಪೂರ್ ಜೊತೆ ಐಶ್ವರ್ಯಾ ರೋಮ್ಯಾನ್ಸ್ ಮಾಡಿದ್ದಾರೆ ಈ ಸಿನಿಮಾದಲ್ಲಿ ಅನುಷ್ಕಾ ಶರ್ಮಾ ಸಹ ಕಾಣಿಸಿಕೊಂಡಿದ್ದಾರೆ. ಸಿನಿಮಾ ಕುರಿತು ಆರಂಭದಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾದರೂ 106.48 ಕೋಟಿ ರೂ. ಗಳಿಸಿತು. ಈ ಸಿನಿಮಾದಲ್ಲಿ ಸಣ್ಣ ಪಾತ್ರವನ್ನು ನಿರ್ವಹಿಸಿದರೂ ಐಶ್ವರ್ಯಾ ಹೆಚ್ಚು ಜನರನ್ನು ಆಕರ್ಷಿಸಿದ್ದರು.

    ಬಳಿಕ ಐಶ್ ಅಭಿನಯದ ‘ಧೂಮ್ 2’ ಸಿನಿಮಾ ಭಾರೀ ಯಶಸ್ಸು ಕಂಡಿತ್ತು. 2006ರಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಈ ಹೃತಿಕ್ ರೋಷನ್ ಅಭಿನಯದ ಸಿನಿಮಾ ಬರೋಬ್ಬರಿ 81 ಕೋಟಿ ರೂ.ಗಳನ್ನು ಬಾಚಿತ್ತು. ಅಭಿಷೇಕ್ ಬಚ್ಚನ್ ಉದಯ್ ಚೋಪ್ರಾ ಸಹ ಈ ಸಿನಿಮಾದಲ್ಲಿ ನಟಿಸಿದ್ದರು. ಸುಂದರ ಸ್ಥಳಲ್ಲಿನ ಚಿತ್ರೀಕರಣ ಹಾಗೂ ಆ್ಯಕ್ಷನ್‍ನಿಂದಾಗಿ ಈ ಸಿನಿಮಾ ಸದ್ದು ಮಾಡಿತ್ತು.

    ಇದಾದ ಬಳಿಕ ಮತ್ತೆ ಹೃತಿಕ್ ರೋಷನ್ ಜೊತೆ ಐಶ್ವರ್ಯಾ ಅಭಿನಯಿಸಿದ ‘ಜೋಧಾ ಅಕ್ಬರ್’ ಸಾಕಷ್ಟು ಪ್ರಶಸ್ತಿಗಳನ್ನು ಬಾಚಿಕೊಂಡಿತು. ಮಾತ್ರವಲ್ಲದೇ ಅಷ್ಟೇ ವಿವಾದವನ್ನು ಸಹ ಹುಟ್ಟು ಹಾಕಿತ್ತು. 2008ರಲ್ಲಿ ತೆರೆ ಕಂಡ ಈ ಸಿನಿಮಾದಲ್ಲಿನ ಹೃತಿಕ್ ರೋಷನ್ ಹಾಗೂ ಐಶ್ ಕೆಮಿಸ್ಟ್ರಿ ಕಂಡು ಪ್ರೇಕ್ಷಕರು ಮೂಕ ವಿಸ್ಮಿತರಾಗಿದ್ದರು. ಹೀಗಾಗಿ ಈ ಸಿನಿಮಾ 56.04 ಕೋಟಿ ರೂ.ಗಳಿಕೆ ಕಂಡಿತ್ತು.

    ಇದರ ಮಧ್ಯೆ ಮಣಿ ರತ್ನಂ ಅವರ ‘ಗುರು’ ಸಿನಿಮಾದಲ್ಲಿ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಜೋಡಿಯೇ ಒಂದಾಯಿತು. ತೆರೆ ಮೇಲೆ ಸಹ ಇವರ ಅದ್ಭುತ ಕೆಮಿಸ್ಟ್ರಿ ಸಿನಿ ರಸಿಕರನ್ನು ಸೆಳೆಯಿತು. ಹೀಗಾಗಿ 2007ರ ಅತಿ ದೊಡ್ಡ ಹಿಟ್ ಸಿನಿಮಾ ಆಯಿತು. ಪ್ರೇಕ್ಷರನ್ನು ಮೋಡಿ ಮಾಡಿದ್ದ ಸಿನಿಮಾ, 45.49 ಕೋಟಿ ರೂ.ಗಳಿಸುವ ಮೂಲಕ ಬಾಕ್ಸ್ ಆಫೀಸಿನಲ್ಲಿ ಸದ್ದು ಮಾಡಿತ್ತು. ಮಾತ್ರವಲ್ಲದೆ ಐಶ್-ಅಭಿಷೇಕ್ ಅದ್ಭುತ ನಟನೆ ಪ್ರೇಕ್ಷಕರನ್ನು ಮರಳು ಮಾಡಿತ್ತು.

    ಶಾರುಖ್ ಖಾನ್ ಹಾಗೂ ಐಶ್ವರ್ಯ ರೈ ಕಾಂಬಿನೇಷನ್‍ನಲ್ಲಿ 2000ರಲ್ಲಿ ಮೂಡಿ ಬಂದ ‘ಮೊಹಬ್ಬತೀನ್’ ಸಿನಿಮಾ ಸಹ ಭಾರೀ ಸದ್ದು ಮಾಡಿತ್ತು. ಬಹು ತಾರಾಗಣದ ಈ ಸಿನಿಮಾ 2000ರಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಚಿತ್ರಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಈ ಸಿನಿಮಾ ಬಿಡುಗಡೆಯಾಗಿ ಇತ್ತೀಚೆಗೆ 20 ವರ್ಷಗಳನ್ನು ಪೂರೈಸಿದೆ. 41.88 ಕೋಟಿ ರೂ.ಗಳನ್ನು ಬಾಚಿಕೊಳ್ಳುವ ಮೂಲಕ ಶಾರುಖ್-ಐಶ್ ಜೋಡಿ ಮೋಡಿ ಮಾಡಿತ್ತು.

  • ಡಿಸ್ಚಾರ್ಜ್ ಬಳಿಕ ಐಶ್ವರ್ಯಾ ರೈ ಮೊದಲ ಪ್ರತಿಕ್ರಿಯೆ

    ಡಿಸ್ಚಾರ್ಜ್ ಬಳಿಕ ಐಶ್ವರ್ಯಾ ರೈ ಮೊದಲ ಪ್ರತಿಕ್ರಿಯೆ

    -ಅಭಿಮಾನಿಗಳಿಗೆ ಕೈ ಮುಗಿದು ಧನ್ಯವಾದ

    ಮುಂಬೈ: ಕೋವಿಡ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಬಳಿಕ ನಟಿ ಐಶ್ವರ್ಯಾ ರೈ ಬಚ್ಚನ್ ಇನ್‍ಸ್ಟಾಗ್ರಾಂ ಪೋಸ್ಟ್ ಮೂಲಕ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

    ಆರಾಧ್ಯ, ಅಪ್ಪಾಜಿ, ಅಭಿಷೇಕ್ ಮತ್ತು ನನಗೆ ನೀವು ತೋರಿಸಿದ ಪ್ರೀತಿ, ಪ್ರಾರ್ಥನೆ ಮತ್ತು ಕಾಳಜಿಗೆ ಆಭಾರಿಯಾಗಿದ್ದೇನೆ. ನಿಜವಾಗಲು ನಾನು ನಿಮಗೆ ಜೀವನದುದ್ದಕ್ಕೂ ಋಣಿಯಾಗಿರುತ್ತೇನೆ. ನಮಗಾಗಿ ಪ್ರಾರ್ಥನೆ ಮಾಡಿದ ಎಲ್ಲರಿಗೂ ಪ್ರೀತಿಯ ಧನ್ಯವಾದಗಳು ಎಂದು ಬರೆದುಕೊಂಡು ನಮಸ್ತೆ ಮತ್ತು ಪ್ರೀತಿಯ ಸಂಕೇತದ ಫೋಟೋ ಶೇರ್ ಮಾಡಿಕೊಂಡಿದ್ದಾರೆ.

    https://www.instagram.com/p/CDMoXuwJErg/

    ಜುಲೈ 27ರಂದು ಗುಣಮುಖರಾಗಿ ಐಶ್ವರ್ಯಾ ರೈ ಪುತ್ರಿ ಆರಾಧ್ಯ ಬಚ್ಚನ್ ಕೋವಿಡ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಪತ್ನಿ ಮತ್ತು ಮಗಳು ಗುಣಮುಖರಾಗಿರುವ ವಿಷಯವನ್ನು ನಟ ಅಭಿಷೇಕ್ ಬಚ್ಚನ್ ಟ್ವಿಟ್ಟರ್ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದರು. ಅಮಿತಾಬ್ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಇನ್ನೂ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಜುಲೈ 11ರಂದು ಅಮಿತಾಬ್ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಗೆ ಕೊರೊನಾ ಸೋಂಕು ತಗುಲಿರೋದು ದೃಢವಾಗಿತ್ತು. ಮರುದಿನ ಜುಲೈ 12ರಂದು ಬಂದ ವರದಿಯಲ್ಲಿ ಐಶ್ವರ್ಯಾ ಮತ್ತು ಆರಾಧ್ಯ ಸಹ ಕೊರೊನಾ ಪಾಸಿಟಿವ್ ಎಂದು ತಿಳಿದು ಬಂದಿತ್ತು.

     

    ಸೊಸೆ ಮತ್ತು ಮೊಮ್ಮಗಳು ಗುಣಮುಖರಾಗಿರುವ ವಿಷಯ ಕೇಳಿ ಅಮಿತಾಬ್ ಬಚ್ಚನ್ ಖುಷಿಯಿಂದ ಕಣ್ಣೀರು ಹಾಕಿದ್ದರು. ಜಯಾ ಬಚ್ಚನ್ ವರದಿ ಮೊದಲ ದಿನವೇ ನೆಗೆಟಿವ್ ಬಂದಿದ್ದು, ಕ್ವಾರಂಟೈನ್ ನಲ್ಲಿದ್ದಾರೆ.

  • ಐಶ್ವರ್ಯಾ ರೈ, ಪುತ್ರಿಗೆ ಕೊರೊನಾ ನೆಗೆಟಿವ್- ಆಸ್ಪತ್ರೆಯಿಂದ ಡಿಸ್ಚಾರ್ಜ್

    ಐಶ್ವರ್ಯಾ ರೈ, ಪುತ್ರಿಗೆ ಕೊರೊನಾ ನೆಗೆಟಿವ್- ಆಸ್ಪತ್ರೆಯಿಂದ ಡಿಸ್ಚಾರ್ಜ್

    ಮುಂಬೈ: ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಮತ್ತು ಪುತ್ರಿ ಆರಾಧ್ಯ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    ಇತ್ತೀಚೆಗಷ್ಟೆ ನಟಿ ಐಶ್ವರ್ಯಾ ರೈ ಮತ್ತು ಆರಾಧ್ಯ ಇಬ್ಬರಿಗೂ ಕೊರೊನಾ ಪಾಸಿಟಿವ್ ಬಂದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಇದೀಗ ಅವರು ಕೋವಿಡ್ ಡೆಸ್ಟ್ ಮಾಡಿಸಿದ್ದು, ವರದಿಯಲ್ಲಿ ನೆಗೆಟಿವ್ ಬಂದಿದೆ. ಅಲ್ಲದೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಕೂಡ ಆಗಿದ್ದಾರೆ. ಈ ಬಗ್ಗೆ ಅಭಿಷೇಕ್ ಬಚ್ಚನ್ ಟ್ವಿಟ್ಟರ್ ಮೂಲಕ ಸ್ಪಷ್ಟಪಡಿಸಿದ್ದಾರೆ.

    “ನಿಮ್ಮ ನಿರಂತರ ಪ್ರಾರ್ಥನೆ ಮತ್ತು ಶುಭಾಶಯಗಳಿಗೆ ಧನ್ಯವಾದಗಳು. ಐಶ್ವರ್ಯ ಮತ್ತು ಆರಾಧ್ಯ ಇಬ್ಬರಿಗೂ ಕೋವಿಡ್ ನೆಗೆಟಿವ್ ಬಂದಿದೆ. ಅವರು ಆಸ್ಪತ್ರೆಯಿಂದ ಡಿಸ್ಚಾಜ್ ಆಗಿದ್ದು, ಈಗ ಮನೆಯಲ್ಲಿದ್ದಾರೆ. ನಾನು ಮತ್ತು ನನ್ನ ತಂದೆ ವೈದ್ಯಕೀಯ ಸಿಬ್ಬಂದಿಯ ಆರೈಕೆಯಲ್ಲಿ ಆಸ್ಪತ್ರೆಯಲ್ಲಿದ್ದೇನೆ” ಎಂದು ಟ್ವೀಟ್ ಮಾಡುವ ಮೂಲಕ ಅಭಿಷೇಕ್ ಬಚ್ಚನ್ ತಿಳಿಸಿದ್ದಾರೆ.

    ಜು. 11 ರಂದು ಹಿರಿಯ ನಟ ಅಮಿತಾಬ್ ಬಚ್ಚನ್ ಮತ್ತು ಅವರ ಪುತ್ರ ಅಭಿಷೇಕ್ ಬಚ್ಚನ್‍ಗೆ ಮೊದಲು ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಇದಾದ ನಂತರ ನಟಿ ಐಶ್ವರ್ಯಾ ರೈ ಅವರಿಗೂ ಮತ್ತು ಪುತ್ರಿ ಆರಾಧ್ಯ ಬಚ್ಚನ್ ಅವರಿಗೂ ಕೊರೊನಾ ಪಾಸಿಟಿವ್ ಬಂದಿತ್ತು. ಹೀಗಾಗಿ ಎಲ್ಲರೂ ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು.

  • ನಟಿ ಐಶ್ವರ್ಯಾ ರೈ, ಪುತ್ರಿ ಆರಾಧ್ಯಗೂ ಕೊರೊನಾ ಸೋಂಕು

    ನಟಿ ಐಶ್ವರ್ಯಾ ರೈ, ಪುತ್ರಿ ಆರಾಧ್ಯಗೂ ಕೊರೊನಾ ಸೋಂಕು

    ಮುಂಬೈ: ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಮತ್ತು ಪುತ್ರಿ ಆರಾಧ್ಯಗೂ ಕೊರೊನಾ ಸೋಂಕು ತಗುಲಿದೆ.

    ಶನಿವಾರ ರಾತ್ರಿ ಬಿಗ್ ಬಿ ಅಮಿತಾಬ್ ಬಚ್ಚನ್ ತಮಗೆ ಸೋಂಕು ತಗುಲಿರುವ ಬಗ್ಗೆ ಟ್ವಿಟ್ಟರ್ ಮೂಲಕ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದರು. ತಂದೆ ಅಮಿತಾಬ್ ಬಚ್ಚನ್ ಬಳಿಕ ಟ್ವೀಟ್ ಮಾಡಿದ್ದ ಅಭಿಷೇಕ್ ತಮ್ಮ ವರದಿಯೂ ಪಾಸಿಟಿವ್ ಬಂದಿದೆ ಎಂದು ತಿಳಿಸಿದ್ದರು. ಇದೀಗ ಐಶ್ವರ್ಯಾ ಮತ್ತು ಆರಾಧ್ಯಗೂ ಸೋಂಕು ತಗುಲಿರುವುದು ಖಚಿತವಾಗಿದೆ.

    ಅಭಿಷೇಕ್ ಮತ್ತು ಅಮಿತಾಬ್ ಬಚ್ಚನ್ ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅಭಿಮಾನಿಗಳು ಆತಂಕಕ್ಕೆ ಒಳಗಾಗೋದು ಬೇಡ. ನಾವು ಆದಷ್ಟು ಬೇಗ ಗುಣಮುಖರಾಗಿ ಬರುತ್ತೇವೆ ಎಂದು ಬಚ್ಚನ್ ಕುಟುಂಬ ಹೇಳಿದೆ. ಇನ್ನು ಬಿಗ್ ಬಿ ಪತ್ನಿ ಜಯಾ ಬಚ್ಚನ್ ವರದಿ ನೆಗೆಟಿವ್ ಬಂದಿದೆ.

  • ದೀಪ್‍ವೀರ್ ಆರತಕ್ಷತೆಯಲ್ಲಿ ಮುಜುಗರಕ್ಕೊಳಗಾದ ಐಶ್ವರ್ಯಾ ರೈ

    ದೀಪ್‍ವೀರ್ ಆರತಕ್ಷತೆಯಲ್ಲಿ ಮುಜುಗರಕ್ಕೊಳಗಾದ ಐಶ್ವರ್ಯಾ ರೈ

    ಮುಂಬೈ: ಬಾಲಿವುಡ್ ಕ್ಯೂಟ್ ಕಪಲ್ ದೀಪಿಕಾ ಪಡುಕೋಣೆ ಹಾಗೂ ರಣ್‍ವೀರ್ ಸಿಂಗ್ ಆರತಕ್ಷತೆಗೆ ಆಗಮಿಸಿದ್ದ ನಟಿ ಐಶ್ವರ್ಯಾ ರೈ ಬಚ್ಚನ್ ಕೊಂಚ ಮುಜುಗರಕ್ಕೊಳಕ್ಕೆ ಒಳಗಾಗಿದ್ದಾರೆ.

    ದೀಪ್‍ವೀರ್ ಮುಂಬೈನಲ್ಲಿ ಸಿನಿಮಾ ರಂಗದ ಸ್ನೇಹಿತರಿಗಾಗಿ ಶನಿವಾರ ಆರತಕ್ಷತೆ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮಕ್ಕೆ ಐಶ್ವರ್ಯಾ ರೈ ಬಚ್ಚನ್ ಅವರು ಅಮಿತಾಬ್ ಬಚ್ಚನ್, ಜಯಾ ಬಚ್ಚನ್ ಹಾಗೂ ಶ್ವೇತಾ ಬಚ್ಚನ್ ಜೊತೆಗೂಡಿ ಆಗಮಿಸಿದ್ದರು. ಈ ವೇಳೆ ಆರತಕ್ಷತೆಯ ಮೊದಲು ಫೋಟೋಗೆ ಪೋಸ್ ಕೊಡಲು ಬಂದಾಗ ಕಾಲು ಎಡವಿ ಬೀಳುತ್ತಿದ್ದ ಐಶ್ವರ್ಯಾ ರೈ ಅವರನ್ನು ಶ್ವೇತಾ ಬಚ್ಚನ್ ಹಿಡಿದು ಬೀಳುವುದರಿಂದ ತಪ್ಪಿಸಿದ್ದಾರೆ. ಈ ಘಟನೆಯಿಂದ ಐಶ್ವರ್ಯಾ ಕೊಂಚ ಮುಜುಗರ ಪಡುವಂತಾಯಿತು.

    ಈ ಮುಜುಗರದ ನಡುವೆಯೂ ಮಾವ ಅಮಿತಾಬ್ ಬಚ್ಚನ್, ಅತ್ತೆ ಜಯಾ ಬಚ್ಚನ್ ಹಾಗೂ ನಾದಿನಿ ಶ್ವೇತಾ ಬಚ್ಚನ್ ಜೊತೆಗೆ ಕ್ಯಾಮೆರಾಗಳ ಮುಂದೆ ಫೋಟೋಗೆ ಐಶ್ವರ್ಯಾ ಖುಷಿಯಾಗಿ ಪೋಸ್ ನೀಡಿದ್ದಾರೆ.

    ದೀಪಿಕಾ ಮತ್ತು ರಣ್‍ವೀರ್ ನ.14 ಹಾಗೂ 15ರಂದು ಇಟಲಿಯಲ್ಲಿ ಮದುವೆಯಾಗಿದ್ದರು. ಬಳಿಕ ಮೊದಲು ಮುಂಬೈಗೆ ಆಗಮಿಸಿದ್ದ ನವದಂಪತಿ ಆತ್ಮೀಯರಿಗೆ ತಮ್ಮ ಆರತಕ್ಷತೆಯ ಆಹ್ವಾನವನ್ನು ನೀಡಿದ್ದರು. ಅದೇ ತಿಂಗಳು 21ರಂದು ಬೆಂಗಳೂರಿನ ಲೀಲಾ ಪ್ಯಾಲೇಸ್‍ನಲ್ಲಿ ಎರಡನೇ ಆರತಕ್ಷತೆಯನ್ನು ಮಾಡಿಕೊಂಡಿದ್ದರು. ಸಿನಿಮಾ ಸ್ನೇಹಿತರಿಗಾಗಿಯೇ ಮೂರನೇ ಬಾರಿಯೂ ಆರತಕ್ಷತೆಯನ್ನು ಮುಂಬೈನಲ್ಲಿಯೇ ಆಯೋಜಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv