Tag: ಐಶ್ವರ್ಯಗೌಡ

  • 2 ಕೋಟಿಗೂ ಅಧಿಕ ಮೌಲ್ಯದ ಫ್ಲ್ಯಾಟ್‌ ಸೇರಿ ʻಬಂಗಾರಿʼಗೌಡಳ 3.98 ಕೋಟಿ ಆಸ್ತಿ ಜಪ್ತಿ

    2 ಕೋಟಿಗೂ ಅಧಿಕ ಮೌಲ್ಯದ ಫ್ಲ್ಯಾಟ್‌ ಸೇರಿ ʻಬಂಗಾರಿʼಗೌಡಳ 3.98 ಕೋಟಿ ಆಸ್ತಿ ಜಪ್ತಿ

    ಬೆಂಗಳೂರು: ಐಶ್ವರ್ಯಗೌಡ ವಂಚನೆ ಪ್ರಕರಣದಲ್ಲಿ (Fraud Case) ಮಾಜಿ ಸಂಸದ, ಕಾಂಗ್ರೆಸ್ ಮುಖಂಡ ಡಿ.ಕೆ.ಸುರೇಶ್ (DK Suresh) ಇಂದು ಇಡಿ ತನಿಖೆ ಎದುರಿಸಿದ್ದಾರೆ. ಬೆಳಗ್ಗೆ 11 ಗಂಟೆಯಿಂದ ಸಂಜೆ 6 ಗಂಟೆವರೆಗೆ ಸುದೀರ್ಘ 7 ಗಂಟೆಗಳ ವಿಚಾರಣೆ ಎದುರಿಸಿದ್ದಾರೆ. ಜುಲೈ 8ಕ್ಕೆ ಮತ್ತೆ ವಿಚಾರಣೆಗೆ ಬರುವಂತೆ ಇಡಿ ಸೂಚಿಸಿದೆ.

    ಈ ನಡುವೆ ಐಶ್ವರ್ಯಗೌಡಗೆ (Aishwarya Gowda) ಸೇರಿದ್ದ 3.98 ಕೋಟಿ ಆಸ್ತಿಯನ್ನು ಇಡಿ ಜಪ್ತಿ ಮಾಡಿದೆ. ಇದರಲ್ಲಿ 2.01 ಕೋಟಿ ಮೌಲ್ಯದ ಫ್ಲ್ಯಾಟ್, 1.97 ಕೋಟಿ ಮೌಲ್ಯದ ನಗದು, ಚಿನ್ನಾಭರಣ ಸೇರಿದೆ. ಆಸ್ತಿ ಸೀಜ್ ಆಗಿರೊ ಬಗ್ಗೆ ಇಡಿ ಅಧಿಕೃತ ಮಾಹಿತಿ ಹಂಚಿಕೊಂಡಿದೆ.ಇದನ್ನೂ ಓದಿ: ಮದ್ವೆಯಾದ ಒಂದೇ ತಿಂಗಳಿಗೆ ಪತಿ ಶವವಾಗಿ ಪತ್ತೆ – ಬ್ಯಾಂಕ್ ಉದ್ಯೋಗಿ ಜೊತೆಗಿನ ಅಫೇರ್ ಕಾರಣ; ರಹಸ್ಯ ಬಯಲು

    ಐಶ್ವರ್ಯಗೌಡಳ ಮೇಲೆ ರಾಜ್ಯದಲ್ಲಿ ವಂಚನೆ ಸಂಬಂಧ ಹಲವು ಎಫ್‌ಐಆರ್‌ಗಳಾಗಿದ್ವು. ಅಕ್ರಮ ಹಣ ವರ್ಗಾವಣೆ ಹಿನ್ನೆಲೆ ಇದೀಗ ಇಡಿ ಐಶ್ವರ್ಯಳ ಆಸ್ತಿ ಮುಟ್ಟುಗೋಲು ಹಾಕಿಕೊಂಡಿದೆ.

    ಇನ್ನೂ ವಿಚಾರಣೆ ಬಳಿಕ ಮಾತನಾಡಿದ ಡಿ.ಕೆ ಸುರೇಶ್, ಇಡಿ ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದೇನೆ. ಜುಲೈ 8ಕ್ಕೆ ವಿಚಾರಣೆಗೆ ಕರೆದಿದ್ದಾರೆ. ಸಹಕಾರ ಕೊಡ್ತೇನೆ ಅಂದಿದ್ದಾರೆ. ಇದನ್ನೂ ಓದಿ: ಉಪಚುನಾವಣೆ ಫಲಿತಾಂಶ ಪ್ರಕಟ – ಎಎಪಿ 2, ಬಿಜೆಪಿ, ಕಾಂಗ್ರೆಸ್, ಟಿಎಂಸಿ ತಲಾ ಒಂದೊಂದು ಕ್ಷೇತ್ರಗಳಲ್ಲಿ ಗೆಲುವು

  • ಐಶ್ವರ್ಯ ಕೇಸಲ್ಲೀಗ ಪೊಲೀಸರಿಗೆ ಸಿಡಿಆರ್‌ ಸಂಕಷ್ಟ – ಎಸಿಪಿ ಚಂದನ್‌ಗೆ ಹೆಗಲಿಗೆ ತನಿಖೆ ಹೊಣೆ

    ಐಶ್ವರ್ಯ ಕೇಸಲ್ಲೀಗ ಪೊಲೀಸರಿಗೆ ಸಿಡಿಆರ್‌ ಸಂಕಷ್ಟ – ಎಸಿಪಿ ಚಂದನ್‌ಗೆ ಹೆಗಲಿಗೆ ತನಿಖೆ ಹೊಣೆ

    ಬೆಂಗಳೂರು: ಡಿಕೆ ಸುರೇಶ್ (DK Suresh) ಸಹೋದರಿ ಅಂತಾ ಕೋಟಿ ಕೋಟಿ ವಂಚನೆ ಮಾಡಿದ ಪ್ರಕರಣದ ಸಂಬಂಧ ಆರೋಪಿಯಾಗಿರುವ ಐಶ್ವರ್ಯಗೌಡ (Aishwarya Gowda) ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ.

    ನಾಲ್ವರ ಸಿಡಿಆರ್ ಪಡೆದುಕೊಂಡ ಸಂಬಂಧ ಎಫ್‌ಐಆರ್ ದಾಖಲಾದ ಬೆನ್ನಲ್ಲೇ, ಸಿಡಿಆರ್ ಪಡೆದ ಪ್ರಕರಣದ ತನಿಖೆಗಾಗಿಯೇ ಹೊಸ ತನಿಖಾಧಿಕಾರಿಯನ್ನು ನೇಮಕ ಮಾಡಲಾಗಿದೆ. ಎಸಿಪಿ ಚಂದನ್ ಕುಮಾರ್ (ACP Chandan) ನೇತೃತ್ವದಲ್ಲಿ ತನಿಖೆ ನಡೆಯಲಿದ್ದು, ಪ್ರಾಥಮಿಕ ತನಿಖೆಯಲ್ಲಿ ಐಶ್ವರ್ಯಗೌಡ ರಾಮನಗರದ ಹಲವು ರಾಜಕೀಯ ಮುಖಂಡರ ಸಿಡಿಆರ್ ಕಲೆಕ್ಟ್ ಮಾಡಿರೋದು ಗೊತ್ತಾಗಿದೆ. ಇದನ್ನೂ ಓದಿ: ಶಾರ್ಟ್‌ಕಟ್‌ ರಾಜಕೀಯಕ್ಕೆ ಜನರು ಶಾರ್ಟ್ ಸರ್ಕ್ಯೂಟ್ ನೀಡಿದ್ದಾರೆ – ಇದು ವಿಕಾಸದ ಗೆಲುವು ಎಂದ ಮೋದಿ

    ಇದಕ್ಕೆ ಕೆಲ ಪೊಲೀಸ್ ಅಧಿಕಾರಿಗಳನ್ನು ಕೂಡ ಬಳಸಿಕೊಂಡು ಅವರ ಜೊತೆಗೆ ಹಣದ ವ್ಯವಹಾರ ನಡೆಸಿದ್ದಾಳೆ. ಯಾವುದೇ ಪ್ರಕರಣದ ತನಿಖಾಧಿಕಾರಿಗೆ ಮಾತ್ರ ಸಿಡಿಆರ್ ಪಡೆಯುವ ಅಧಿಕಾರವಿದ್ದು, ಐಶ್ವರ್ಯಗೌಡ ಹೇಗೆ ರಾಜಕೀಯ ಮುಖಂಡರ ಸಿಡಿಆರ್ ಪಡೆದುಕೊಂಡಿದ್ದಾಳೆ. ಅದನ್ನು ಹೇಗೆ ಯಾವ ಕಾರಣಕ್ಕೆ ಬಳಸಿಕೊಳ್ತದ್ಲು ಅನ್ನೋ ಅನುಮಾನ ಪೊಲೀಸರನ್ನ ಕಾಡಿದೆ. ಇದೇ ಕಾರಣಕ್ಕೆ ಎಸಿಪಿ ಚಂದನ್ ಕುಮಾರ್ ನೇತೃತ್ವದಲ್ಲಿ ಸಿಡಿಆರ್ ಪ್ರಕರಣವನ್ನೇ ಪ್ರತ್ಯಕವಾಗಿ ತನಿಖೆಗೆ ಆದೇಶ ನೀಡಲಾಗಿದೆ.  ಇದನ್ನೂ ಓದಿ: ಕೇಜ್ರಿ`ವಾಲ್’ ಛಿದ್ರಗೊಳಿಸಿದ ಮೋದಿ-ಶಾ ಜೋಡಿಯ ಸಾಮ, ದಾನ, ಬೇಧ, ದಂಡ ತಂತ್ರ?

    ಎಸಿಪಿ ಚಂದನ್‌ಗೆ ತನಿಖೆ ಹೊಣೆ:
    ಅಕ್ರಮವಾಗಿ ಸಿಡಿಆರ್‌ ಪಡೆದ ಪ್ರಕರಣದ ತನಿಖೆಯನ್ನು ವಿಜಯನಗರ ಉಪ ವಿಭಾಗದ ಎಸಿಪಿ ಚಂದನ್‌ ಕುಮಾರ್‌ ಅವರಿಗೆ ಪಶ್ಚಿಮ ವಿಭಾಗದ ಡಿಸಿಪಿ ಎಸ್‌. ಗಿರೀಶ್‌ ವಹಿಸಿದ್ದಾರೆ. ಬ್ಯಾಟರಾಯನಪುರ ಉಪ ವಿಭಾಗದ ಎಸಿಪಿ ದೂರುದಾರರಾಗುರುವ ಕಾರಣ ತನಿಖೆ ಹೊಣೆ ಚಂದನ್‌ ಅವರ ಹೆಗಲಿಗೆ ಬಿದ್ದಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್‌ ಹಾಗೂ ಅವರ ತಂಡದ ವಿರುದ್ಧ ಎಸಿಪಿ ಚಂದನ್‌ ತನಿಖೆ ನಡೆಸಿದ್ದರು.  ಇದನ್ನೂ ಓದಿ: ಲೋಕಸಭೆಯಲ್ಲಿ ಅಯೋಧ್ಯೆ ಸೋಲಿನ ಸೇಡನ್ನು ತೀರಿಸಿದ ಬಿಜೆಪಿ

  • ಮಂಡ್ಯದಲ್ಲಿ ಮಹಿಳೆಗೆ 33 ಲಕ್ಷ ಪಂಗನಾಮ – ಐಶ್ವರ್ಯಗೌಡ ವಿರುದ್ಧ ಮತ್ತೊಂದು ಎಫ್‌ಐಆರ್‌

    ಮಂಡ್ಯದಲ್ಲಿ ಮಹಿಳೆಗೆ 33 ಲಕ್ಷ ಪಂಗನಾಮ – ಐಶ್ವರ್ಯಗೌಡ ವಿರುದ್ಧ ಮತ್ತೊಂದು ಎಫ್‌ಐಆರ್‌

    ಮಂಡ್ಯ: ವಂಚಕಿ ಐಶ್ವರ್ಯಗೌಡ (Aishwarya Gowda) ವಿರುದ್ಧ ಮೇಲಿಂದ ಮೇಲೆ ಎಫ್‌ಐಆರ್‌ ದಾಖಲಾಗುತ್ತಲೇ ಇವೆ. 2 ದಿನಗಳ ಹಿಂದೆಯಷ್ಟೇ ಬೆಂಗಳೂರಿನ ಆರ್‌.ಆರ್‌ ನಗರ ಪೊಲೀಸ್‌ ಠಾಣೆಯಲ್ಲಿ ವಂಚನೆ ಪ್ರಕರಣದಲ್ಲಿ ಐಶ್ವರ್ಯ ವಿರುದ್ಧ ಎಫ್‌ಐಆರ್‌ ದಾಖಲಾಗಿತ್ತು. ಇದೀಗ ಮಂಡ್ಯದಲ್ಲಿ (Mandya) ಮತ್ತೊಂದು ಎಫ್‌ಐಆರ್‌ (FIR) ದಾಖಲಾಗಿದೆ.

    ಇಲ್ಲಿನ ಚಾಮುಂಡೇಶ್ವರಿನಗರದ ನಿವಾಸಿ ಭಾಗ್ಯಮ್ಮ ಎಂಬುವವರು ತಮಗೂ ವಂಚನೆ ಮಾಡಿರುವುದಾಗಿ ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಮೇರೆಗೆ ಐಶ್ವರ್ಯಗೌಡ ವಿರುದ್ಧ ಐಪಿಸಿ ಸೆಕ್ಷನ್ 406, 420, 417, 120ಬಿ, 540, 34ರ ಅಡಿ ಕೇಸ್ ದಾಖಲಾಗಿದೆ. ನವ್ಯಶ್ರೀ ಅಲಿಯಾಸ್ ಐಶ್ವರ್ಯಗೌಡ, ಪತಿ ಹರೀಶ್, ಸಹೋದರ ಮಂಜುನಾಥ್ ಹಾಗೂ ಯಶವಂತ್ ಎಂಬುವರ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: 1 ಕೋಟಿಗೂ ಅಧಿಕ ವಂಚನೆ – ಐಶ್ವರ್ಯಗೌಡ, ಪತಿ ಸೇರಿ 7 ಮಂದಿ ವಿರುದ್ಧ ಕೇಸ್‌ ದಾಖಲು

    ದೂರಿನಲ್ಲಿ ಏನಿದೆ?
    2017ರ ಜನವರಿಯಿಂದ ಜೂನ್‌ ತಿಂಗಳ ಅವಧಿಯಲ್ಲಿ ರಿಯಲ್ ಎಸ್ಟೇಟ್ ಹಾಗೂ ಚೀಟಿ ವ್ಯವಹಾರ ಮಾಡುವುದಾಗಿ ಐಶ್ವರ್ಯ ನಂಬಿಸಿದ್ದಾಳೆ. ಒಟ್ಟು 33 ಲಕ್ಷ ರೂ. ನಗದು ಹಾಗೂ 366 ಗ್ರಾಂ ಚಿನ್ನದ ಒಡವೆಗಳನ್ನ ಪಡೆದುಕೊಂಡಿದ್ದಾಳೆ. ಇದು ತನ್ನ ಮೃತ ಗಂಡನ ನಿವೃತ್ತಿಯ ಹಣ ಅಂತ ಭಾಗ್ಯಮ್ಮ ಹೇಳಿಕೊಂಡಿದ್ದಾಳೆ. 1 ಲಕ್ಷಕ್ಕೆ 10 ಪರ್ಸೆಂಟ್‌ ಬಡ್ಡಿ ಹಣ ನೀಡುವುದಾಗಿ ಆಮಿಷ ಒಡ್ಡಿ ಹಣ ಪಡೆದ ಐಶ್ವರ್ಯ ವಂಚನೆ ಎಸಗಿದ್ದಾಳೆ ಎಂದು ದೂರಿನಲ್ಲಿ ಭಾಗ್ಯಮ್ಮ ತಿಳಿಸಿದ್ದಾರೆ. ಇದನ್ನೂ ಓದಿ: ರಸ್ತೆಯಲ್ಲಿ ಸಂಚರಿಸೋದಕ್ಕೂ ಸುಂಕ ಕಟ್ಟಬೇಕೆ? – ಟ್ರಾಫಿಕ್‌ ನಿಯಂತ್ರಣಕ್ಕೆ ಹೊಸ ಸೂತ್ರ – ಏನಿದು ದೆಹಲಿ ಸರ್ಕಾರದ ಪ್ಲ್ಯಾನ್‌?

    ಈಗಾಗಲೇ ಮಂಡ್ಯದ ಪೂರ್ವ ಪೊಲೀಸ್ ಠಾಣೆಯಲ್ಲಿ ರವಿಕುಮಾರ್ ಹಾಗೂ ಪೂರ್ಣಿಮಾ ಎಂಬುವವರು ನೀಡಿದ ದೂರಿನ ಮೇರೆಗೆ ಕೇಸ್‌ ದಾಖಲಾಗಿದೆ. 55 ಲಕ್ಷ ನಗದು ಹಾಗೂ ಚಿನ್ನಾಭರಣ ಪಡೆದು ವಂಚನೆ ಮಾಡಿರುವುದಾಗಿ ಕೇಸ್ ದಾಖಲಾಗಿದೆ.

    ಈ ಮಧ್ಯೆ ಸೋಮವಾರ ಪೊಲೀಸರು ನೋಟೀಸ್ ನೀಡಿದ್ರೂ ವಂಚಕಿ ಐಶ್ವರ್ಯಗೌಡ ವಿಚಾರಣೆಗೆ ಹಾಜರಾಗಿಲ್ಲ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಬೆಂಬಲ ತೊಗರಿ ಖರೀದಿ ಶುರು – ಜಿಲ್ಲೆಯಾದ್ಯಂತ 177 ಖರೀದಿ ಕೇಂದ್ರ ಸ್ಥಾಪನೆ

  • 1 ಕೋಟಿಗೂ ಅಧಿಕ ವಂಚನೆ – ಐಶ್ವರ್ಯಗೌಡ, ಪತಿ ಸೇರಿ 7 ಮಂದಿ ವಿರುದ್ಧ ಕೇಸ್‌ ದಾಖಲು

    1 ಕೋಟಿಗೂ ಅಧಿಕ ವಂಚನೆ – ಐಶ್ವರ್ಯಗೌಡ, ಪತಿ ಸೇರಿ 7 ಮಂದಿ ವಿರುದ್ಧ ಕೇಸ್‌ ದಾಖಲು

    ಬೆಂಗಳೂರು: ಡಿ.ಕೆ ಸುರೇಶ್ ( DK Suresh) ತಂಗಿ ಹೆಸರೇಳಿ 1 ಕೋಟಿ ರೂ.ಗಿಂತಲೂ ಅಧಿಕ ಹಣ ವಂಚನೆ ಮಾಡಿರುವ ಆರೋಪದ ಮೇಲೆ ಐಶ್ವರ್ಯಗೌಡ (Aishwarya Gowda) ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಾಗಿದೆ.

    ಮೂಲತಃ ವೈದ್ಯರಾದ ಡಾ.ದಯಾನಂದ ಲಿಂಗೇಗೌಡ ಅವರಿಗೆ ವಂಚನೆ ಮಾಡಿರುವುದಾಗಿ ಆರ್‌.ಆರ್‌ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಐಶ್ವರ್ಯಗೌಡ, ಪತಿ ಹರೀಶ್‌ ಸೇರಿ 7 ಜನರ ವಿರುದ್ಧ ಕೇಸ್‌ ದಾಖಲಾಗಿದೆ. ಇದನ್ನೂ ಓದು: ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಬರೀ ಊಹಾಪೋಹ, ಯಾವುದೇ ಚರ್ಚೆ ನಡೆದಿಲ್ಲ – ಶರಣಪ್ರಕಾಶ್ ಪಾಟೀಲ್

    ದೂರಿನಲ್ಲಿ ಏನಿದೆ?
    ಸ್ನೇಹಿತ ಟಿ.ಪಿ ರಮೇಶ್‌ ಮೂಲಕ ಐಶ್ವರ್ಯಗೌಡ ಪರಿಚಯವಾಗಿದ್ದರು, ಈ ವೇಳೆ ತಾನು ಡಿ.ಕೆ ಸುರೇಶ್‌ ತಂಗಿ ಅಂತ ಹೇಳಿ ವಂಚನೆ ಮಾಡಿದ್ದಾರೆ ಎಂಬುದಾಗಿ ಆರ್.ಆರ್‌ ನಗರ ಪೊಲೀಸ್‌ ಠಾಣೆಗೆ ದಯಾನಂದ ಲಿಂಗೇಗೌಡ ದೂರು ನೀಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ರಾಜ್ಯದಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ಮಾಡಿದ ಸಿಎಂ – ಜನಾರ್ದನ ರೆಡ್ಡಿ ಲೇವಡಿ

    ಹೊಸದಾಗಿ ಕಂಪನಿ ತೆರೆದಿದ್ದೇವೆ. ಅದಕ್ಕೆ ಡಿ.ಕೆ ಸುರೇಶ್‌ ಅವರೇ ಪಾಲುದಾರರು ಅಂತ ನಂಬಿಸಿದ್ದಾರೆ. ನಮ್ಮ ಕಂಪನಿಯಲ್ಲಿ ಠೇವಣಿ ಹೂಡಿದ್ರೆ ಒಳ್ಳೆ ಲಾಭ ಬರುತ್ತೆ. ಜೊತೆಗೆ ಸಿನಿಮಾ, ಸಿರೀಯಲ್‌ಗಳಿಗೂ ಹಣ ಹೂಡಿಕೆ ಮಾಡ್ತೀವಿ ಅಂತ ಆಮಿಷ ಒಡ್ಡಿದ್ದಾರೆ. ತಾನು ಡಿ.ಕೆ ಸುರೇಶ್‌ ತಂಗಿ ಅಂತ ಹೇಳಿ, 1 ಕೋಟಿಗೂ ಅಧಿಕ ಹಣ ವಂಚನೆ ಮಾಡಿದ್ದಾರೆ. ಹಣ ಕೇಳಲು ಹೋದಾಗಲೆಲ್ಲ ಬೆದರಿಕೆ ಹಾಕುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

  • ವೈದ್ಯೆಯಿಂದ 2.52 ಕೋಟಿ ರೂ., 2.350 ಕೆಜಿ ಚಿನ್ನ ಪಡೆದು ವಂಚನೆ – ಐಶ್ವರ್ಯಗೌಡ ಮೇಲೆ ಮತ್ತೊಂದು ಎಫ್‌ಐಆರ್

    ವೈದ್ಯೆಯಿಂದ 2.52 ಕೋಟಿ ರೂ., 2.350 ಕೆಜಿ ಚಿನ್ನ ಪಡೆದು ವಂಚನೆ – ಐಶ್ವರ್ಯಗೌಡ ಮೇಲೆ ಮತ್ತೊಂದು ಎಫ್‌ಐಆರ್

    ಬೆಂಗಳೂರು: ಡಿ.ಕೆ ಸುರೇಶ್ ( DK Suresh) ತಂಗಿ ಹೆಸರೇಳಿ ವಂಚನೆ ಮಾಡಿದ್ದ ಐಶ್ವರ್ಯಗೌಡ ಮೇಲೆ ಇದೀಗ ಮತ್ತೊಂದು ಎಫ್‌ಐಆರ್ ದಾಖಲಾಗಿದೆ.

    ಸ್ತ್ರೀ ರೋಗ ತಜ್ಞೆ ಮಂಜುಳ ಪಾಟೀಲ್ ಅವರಿಗೂ ಕೂಡ ಐಶ್ವರ್ಯಗೌಡ ವಂಚನೆ ಮಾಡಿರುವುದಾಗಿ ಆರ್‌ಆರ್ ನಗರ (RR Nagar) ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಇದನ್ನೂ ಓದಿ:ಬೆಂಗ್ಳೂರಿಂದ ಕುಂಭಮೇಳಕ್ಕೆ ಹೋಗ್ಬೇಕಾ? – ನಿಮಗಾಗಿಯೇ ಹೊರಡಲಿದೆ ವಿಶೇಷ ರೈಲು

    ವೈದ್ಯೆ ಮಂಜುಳ ಪಾಟೀಲ್ ಅವರ ಕ್ಲಿನಿಕ್‌ಗೆ ಬಂದು ಐಶ್ವರ್ಯಗೌಡ ತಾನು ಡಿಕೆ ಸುರೇಶ್ ತಂಗಿ ಎಂದು ಹೇಳಿ ವೈದ್ಯೆಯನ್ನು ಪರಿಚಯ ಮಾಡಿಕೊಂಡಿದ್ದರು. ಜೊತೆಗೆ ಗೋಲ್ಡ್ ಬಿಸಿನೆಸ್, ಕೆಸಿನೊ, ಹಾಗೂ ದೊಡ್ಡ ಮಟ್ಟದಲ್ಲಿ ಬಿಸಿನೆಸ್ ಮಾಡುತ್ತಿರುವುದಾಗಿ ತಿಳಿಸಿದ್ದಳು. 2022ರಿಂದ ಹಂತ ಹಂತವಾಗಿ ಹೂಡಿಕೆ ನೆಪದಲ್ಲಿ ಐಶ್ವರ್ಯಾಗೌಡ ಹಣ ಪಡೆದಿರುತ್ತಾಳೆ. ಒಟ್ಟು 2.52 ಕೋಟಿ ಹಣ ಹಾಗೂ 2.350 ಕೆಜಿ ಚಿನ್ನಾಭರಣ ಪಡೆದು ವಂಚನೆ ಮಾಡಿದ್ದಾಳೆ ಎಂದು ವೈದ್ಯೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಚಂದ್ರಲೇಔಟ್‌ನಲ್ಲಿ (Chandralayout) ಎಫ್‌ಐಆರ್ ದಾಖಲಾಗಿದ್ದ ಬಗ್ಗೆ ತಿಳಿದು ವೈದ್ಯೆ ಶಾಕ್‌ಗೆ ಒಳಗಾಗಿದ್ದರು. ಬಳಿಕ ವೈದ್ಯೆ ಮನೆ ಬಳಿ ಹೋಗಿ ಐಶ್ವರ್ಯ ಡ್ರೈವರ್ ಧನಂಜಯ್ಯ ಐಶ್ವರ್ಯಾಗೆ ಕಾಲ್ ಮಾಡಿ ಕೊಟ್ಟಿದ್ದ. ಕೊಟ್ಟಿರುವ ಹಣದ ಬಗ್ಗೆ ದೂರು ಕೊಟ್ಟರೆ ಸರಿ ಇರಲ್ಲ ಎಂದು ಫೋನ್‌ನಲ್ಲಿ ಐಶ್ವರ್ಯಾ ಬೆದರಿಕೆ ಹಾಕಿದ್ದರು. ಜೊತೆಗೆ ಹಣ ಕೇಳಲು ಮನೆ ಬಳಿ ಹೋದಾಗಲೂ ಕೂಡ ಐಶ್ವರ್ಯ ಡ್ರೈವರ್‌ಗಳಾದ ಅಶ್ವಥ್ ಹಾಗೂ ಧನಂಜಯ್ಯ ಬೆದರಿಕೆ ಹಾಕಿದ್ದರು.

    ಸದ್ಯ ಈ ಸಂಬಂಧ ಆರ್‌ಆರ್‌ನಗರ ಪೊಲೀಸ್ ಠಾಣೆಯಲ್ಲಿ ಐಶ್ವರ್ಯಗೌಡ ಹಾಗು ಇಬ್ಬರು ಡ್ರೈವರ್‌ಗಳಾದ ಅಶ್ವಥ್ ಗೌಡ ಹಾಗೂ ಧನಂಜಯ್ಯನ ವಿರುದ್ಧ ಎಫ್‌ಐಆಆರ್ ದಾಖಲಾಗಿದೆ.ಇದನ್ನೂ ಓದಿ: ಸಂಬಳ ಬೇಕೇ, ಹಾಗಾದ್ರೆ ಕಮೀಷನ್‌ ಕೊಡಿ – ಇಂಧನ ಇಲಾಖೆಯ ಹೊರಗುತ್ತಿಗೆ ಸಿಬ್ಬಂದಿಗೆ ಗುತ್ತಿಗೆದಾರರ ಕಾಟ

  • ಗೋಲ್ಡ್‌ ವಂಚಕಿ ಐಶೂಗೆ ಡಿಕೆಸು ಮಾತ್ರವಲ್ಲ ಜೆಡಿಎಸ್‌ ನಾಯಕರೂ ಪರಿಚಯ?

    ಗೋಲ್ಡ್‌ ವಂಚಕಿ ಐಶೂಗೆ ಡಿಕೆಸು ಮಾತ್ರವಲ್ಲ ಜೆಡಿಎಸ್‌ ನಾಯಕರೂ ಪರಿಚಯ?

    ಮಂಡ್ಯ: ಮಾಜಿ ಸಂಸದ ಡಿ.ಕೆ.ಸುರೇಶ್ ತಂಗಿ ಎಂದು ಹೇಳಿಕೊಂಡು 9 ಕೋಟಿ ರೂ. ಮೌಲ್ಯದ ಚಿನ್ನ ಪಡೆದು ವಂಚಿಸಿದ ಆರೋಪ ಎದುರಿಸುತ್ತಿರುವ ಐಶ್ವರ್ಯಗೌಡ, ತನಗೆ ಮಾಜಿ ಸಿಎಂ ಕುಮಾರಸ್ವಾಮಿಯ  (H.D Kumaraswamy) ಪತ್ನಿ ಅನಿತಾ ಕುಮಾರಸ್ವಾಮಿ ಹಾಗೂ ಪುತ್ರ ನಿಖಿಲ್ ಕುಮಾರಸ್ವಾಮಿಯೂ (Nikhil Kumaraswamy) ಬಹಳಷ್ಟು ಪರಿಚಿತರು ಎಂದು ಹೇಳಿಕೊಂಡಿರುವುದು ಬೆಳಿಕಿಗೆ ಬಂದಿದೆ.

    ಪೂರ್ಣಿಮಾ ಎಂಬವರಿಂದ 100 ಗ್ರಾಂ ಚಿನ್ನದ ಜೊತೆ 15 ಲಕ್ಷ ರೂ. ಹಣ ಪಡೆದು ವಂಚಿಸಿದ ಆರೋಪ ಐಶ್ವರ್ಯ ಮೇಲಿದೆ. ಇಂದು ನಾಳೆ ವಾಪಸ್ಸು ಕೊಡ್ತೀನಿ ಎಂದು ಸತಾಯಿಸಿದ್ದಾಳೆ.‌ ಅಲ್ಲದೇ ಹಣ ಪಡೆಯುವ ಮುನ್ನ ನಾನು‌ ಡಿ.ಕೆ.ಸುರೇಶ್ ತಂಗಿ ಎಂದು ಐಶ್ವರ್ಯ ಪರಿಚಯ ಮಾಡಿಕೊಂಡ ಬಗ್ಗೆಯೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅಷ್ಟೇ ಅಲ್ಲದೇ ತನಗೆ ಹೆಚ್‌ಡಿಕೆ ಪತ್ನಿ ಅನಿತಾ ಕುಮಾರಸ್ವಾಮಿ ಹಾಗೂ ಪುತ್ರ ನಿಖಿಲ್ ಕುಮಾರಸ್ವಾಮಿಯೂ ಬಹಳಷ್ಟು ಪರಿಚಿತರು ಎಂದು ಬಿಲ್ಡಪ್ ಕೂಡ ಕೊಟ್ಟಿದ್ದಾಳೆ. ಈ ಕುರಿತು ಐಶ್ವರ್ಯಗೌಡ ವಿರುದ್ಧ ಮಂಡ್ಯ ಪೂರ್ವ ಠಾಣೆಯಲ್ಲಿ ರವಿಕುಮಾರ್ ಹಾಗೂ ಪೂರ್ಣಿಮಾ ಸಲ್ಲಿಸಿರುವ ದೂರಿನಲ್ಲಿ ಉಲ್ಲೇಖವಾಗಿದೆ.

    ಅನಿತಾ ಕುಮಾರಸ್ವಾಮಿ, ನಿಖಿಲ್ ಇಬ್ಬರೂ ಬಹಳಷ್ಟು ಪರಿಚಿತರು. ನಿಮಗೆ ಅವರ ಕಡೆಯಿಂದ ಸಹಾಯ ಬೇಕಿದ್ರೆ ನನಗೆ ಹೇಳಿ. ನಾನು ನಿಮಗೆ ಸಹಾಯ ಮಾಡ್ತೇನೆ ಎಂದು ಐಶ್ವರ್ಯಗೌಡ ಹೇಳಿದ್ದಳಂತೆ. ಆ ರೀತಿ ಹೇಳಿಯೆ ನಮ್ಮನ್ನ ನಂಬಿಸಿ ನಮ್ಮ ಬಳಿ ಹಂತ ಹಂತವಾಗಿ 40 ಲಕ್ಷ ರೂ. ಹಾಗೂ ಪೂರ್ಣಿಮಾ ಬಳಿಯೂ ಹಣ, ಚಿನ್ನ ಪಡೆದಿದ್ದಳು. ಈಗ ಹಣ ವಾಪಸ್ಸು ನೀಡದೇ ಮೋಸ ಮಾಡಿದ್ದಾಳೆ ಎಂದು ದೂರಿನಲ್ಲಿ ತಿಳಿಸಿದ್ದಾರೆ‌.

    ಐಶ್ವರ್ಯ ಕಾಂಗ್ರೆಸ್ ನಾಯಕರ ಹೆಸರನ್ನಷ್ಟೇ ಅಲ್ಲ ಜೆಡಿಎಸ್ ಹೆಸರನ್ನೂ ದುರುಪಯೋಗ ಪಡಿಸಿಕೊಂಡಿದ್ದಾಳೆ ಎಂಬುದು ಈಗ ತಿಳಿದು ಬರುತ್ತಿದೆ.

  • ಚುನಾವಣೆಯಲ್ಲಿ ʻಕೈʼ ಶಾಸಕ ನರೇಂದ್ರಸ್ವಾಮಿಗೆ ಐಶ್ವರ್ಯಗೌಡ ಹಣ ನೀಡಿದ್ದಾರೆ: ಅನ್ನದಾನಿ ಬಾಂಬ್‌

    ಚುನಾವಣೆಯಲ್ಲಿ ʻಕೈʼ ಶಾಸಕ ನರೇಂದ್ರಸ್ವಾಮಿಗೆ ಐಶ್ವರ್ಯಗೌಡ ಹಣ ನೀಡಿದ್ದಾರೆ: ಅನ್ನದಾನಿ ಬಾಂಬ್‌

    – ಐಶ್ವರ್ಯಗೌಡರನ್ನ ಮಂಪರು ಪರೀಕ್ಷೆಗೆ ಒಳಪಡಿಸುವಂತೆ ಆಗ್ರಹ

    ಮಂಡ್ಯ: ವಂಚನೆ ಪ್ರಕರಣದಲ್ಲಿ ಜೈಲು ಸೇರಿದ್ದ ಐಶ್ವರ್ಯಗೌಡ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ ಮಳವಳ್ಳಿಯ ಶಾಸಕ ನರೇಂದ್ರಸ್ವಾಮಿ (Narendra Swamy) ಅವರಿಗೆ ಹಣ ನೀಡಿದ್ದಾರೆ ಎಂದು ಮಾಜಿ ಶಾಸಕ ಅನ್ನದಾನಿ (K Annadani) ಗಂಭೀರ ಆರೋಪ ಮಾಡಿದ್ದಾರೆ.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಐಶ್ವರ್ಯಗೌಡ (Aishwarya Gowda) ಮೂಲತಃ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದವರು. ಈಕೆ ಮಂಡ್ಯ ಜಿಲ್ಲೆಯಲ್ಲೂ ಹಲವರಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ್ದಾರೆ. ಅಮಾಯಕರನ್ನ ನಂಬಿಸಿ ಅವರಿಗೆ ಮೋಸ ಮಾಡಿದ್ದಾರೆ. ಈಕೆಯ ಈ ಮೋಸದ ಜಾಲಕ್ಕೆ ಕಾಂಗ್ರೆಸ್‌ನ ಒಂದಷ್ಟು ಮುಖಂಡರು ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ದೂರಿದ್ದಾರೆ. ಇದನ್ನೂ ಓದಿ: ದಾವಣಗೆರೆ| ನ್ಯೂ ಇಯರ್ ಸಂಭ್ರಮದ ದಿನವೇ ಬೈಕ್ ಅಪಘಾತಕ್ಕೆ ಯುವಕ ಬಲಿ – ಮತ್ತೋರ್ವ ಗಂಭೀರ

    ಈ ಹಿಂದೆ ಸಾಕಷ್ಟು ಜನ ಐಶ್ವರ್ಯಗೌಡ ವಿರುದ್ಧ ವಂಚನೆಯ ಸಂಬಂಧ ದೂರು‌ ನೀಡಲು ಪೊಲೀಸ್ ಠಾಣೆಗೆ ಹೋಗಿದ್ದರು. ಆದ್ರೆ ಪೊಲೀಸರು ದೂರನ್ನು ಸ್ವೀಕಾರ ಮಾಡಿಯೇ ಇಲ್ಲ. ಇದಕ್ಕೆ ಐಶ್ವರ್ಯಗೌಡ ಹಿಂದಿರುವ ಕಾಂಗ್ರೆಸ್ ನಾಯಕರು ಕಾರಣ ಎಂದಿದ್ದಾರೆ. ಇದನ್ನೂ ಓದಿ: ದೇಗುಲದಲ್ಲಿ ಪುರುಷರು ಶರ್ಟ್ ತೆಗೆಯುವ ಪದ್ಧತಿ ಅನಿಷ್ಟ – ಶಿವಗಿರಿ ಶ್ರೀ

    ಸದ್ಯ ಮಳವಳ್ಳಿ ಶಾಸಕರಾಗಿರುವ ನರೇಂದ್ರಸ್ವಾಮಿಗೆ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಐಶ್ವರ್ಯಗೌಡ ಫಂಡಿಂಗ್‌ ಮಾಡಿದ್ದಾರೆ. ಐಶ್ವರ್ಯಗೌಡರನ್ನ ಮಂಪರು ಪರೀಕ್ಷೆಗೆ ಒಳಪಡಿಸಿದರೆ, ಎಲ್ಲಾ ವಿಚಾರಗಳು ಬೆಳಕಿಗೆ ಬರುತ್ತವೆ. ಐಶ್ವರ್ಯಗೌಡರ ವಂಚನೆ ಪ್ರಕರಣವನ್ನ ಸಿಬಿಐಗೆ ನೀಡಬೇಕೆಂದು ಮಾಜಿ ಶಾಸಕ ಅನ್ನದಾನಿ ಆಗ್ರಹಿಸಿದ್ದಾರೆ.  ಇದನ್ನೂ ಓದಿ: ವಂಚನೆ ಕೇಸಲ್ಲಿ ಐಶ್ವರ್ಯಗೌಡಗೆ ಜಾಮೀನು – ರಾತ್ರಿಯೇ ಜೈಲಿಂದ ರಿಲೀಸ್

  • ಡಿ.ಕೆ.ಸುರೇಶ್ ತಂಗಿ ಹೆಸರಲ್ಲಿ ವಂಚನೆ – ಐಶ್ವರ್ಯಗೌಡ, ಪತಿಗೆ 14 ದಿನ ಜೈಲು

    ಡಿ.ಕೆ.ಸುರೇಶ್ ತಂಗಿ ಹೆಸರಲ್ಲಿ ವಂಚನೆ – ಐಶ್ವರ್ಯಗೌಡ, ಪತಿಗೆ 14 ದಿನ ಜೈಲು

    ಬೆಂಗಳೂರು: ಕಾಂಗ್ರೆಸ್ ಮಾಜಿ ಸಂಸದ ಡಿ.ಕೆ ಸುರೇಶ್ (DK Suresh) ಸಹೋದರಿ ಅಂತ ಹೇಳಿಕೊಂಡು 14.600 ಕೆಜಿಯಷ್ಟು ಚಿನ್ನಾಭರಣ ಖರೀದಿಸಿ ವಂಚನೆ ಮಾಡಿರುವ ಪ್ರಕರಣದಲ್ಲಿ ಇಬ್ಬರು ಆರೋಪಿಗಳಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ 9ನೇ ಎಸಿಎಂಎಂ ಕೋರ್ಟ್ ಆದೇಶಿಸಿದೆ.

    ಇಂದು (ಡಿ.28) ಚಂದ್ರಲೇಔಟ್ ಪೊಲೀಸರು ಆರೋಪಿ ಐಶ್ವರ್ಯ ಗೌಡ, ಪತಿ ಹರೀಶ್ ಇಬ್ಬರನ್ನೂ ಬಂಧಿಸಿದ್ದರು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ಬಳಿಕ ಆರೋಪಿಗಳನ್ನು ಕೋರಮಂಗಲದ ಜಡ್ಜ್ ಮನೆಯಲ್ಲಿ ಹಾಜರುಪಡಿಸಿದ್ದರು.ಇದನ್ನೂ ಓದಿ: ಕುರಿಗಳ ಜೀವ ಉಳಿಸಲು ಕಂದಕಕ್ಕೆ ಬಸ್ ಇಳಿಸಿದ ಚಾಲಕ

    ಪ್ರಕರಣದ ಐಓ ಎಸಿಪಿ ಭರತ್ ರೆಡ್ಡಿ ಒಂದು ವಾರ ಕಸ್ಟಡಿಗೆ ಪಡೆಯಲು ಸೋಮವಾರ ಬಾಡಿ ವಾರೆಂಟ್ ಅರ್ಜಿ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಇತ್ತ ಆರೋಪಿ ಐಶ್ವರ್ಯ ಗೌಡ ಪರ ವಕೀಲರು ಜಾಮೀನು ಕೂಡ ಅರ್ಜಿ ಸಲ್ಲಿಸಿದ್ದಾರೆ.

    ಆರೋಪಿಗಳು ಜನವರಿ 10ರ ವರೆಗೆ ನ್ಯಾಯಾಂಗ ಬಂಧನದಲ್ಲಿರಲಿದ್ದಾರೆ. ಆದೇಶದ ಹಿನ್ನೆಲೆ ಸದ್ಯ ಪರಪ್ಪನ ಅಗ್ರಹಾರ ಜೈಲಿನತ್ತ ಐಶ್ವರ್ಯ ಗೌಡನ್ನು ಕರೆದೊಯ್ಯುತ್ತಿದ್ದಾರೆ.

    ಏನಿದು ಪ್ರಕರಣ?
    ಐಶ್ವರ್ಯ ಗೌಡ ಕಳೆದ ಜನವರಿಯಿಂದ ಇಲ್ಲಿಯವರೆಗೂ ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಶಾಪ್‌ನಲ್ಲಿ 14 ಕೆಜಿ 600 ಗ್ರಾಂನಷ್ಟು ಚಿನ್ನಾಭರಣ ಖರೀದಿಸಿದ್ದಳು. ಹಣ ಕೊಡದೇ ಇದ್ದಾಗ, ಡಿಕೆ ಸುರೇಶ್ ಕಡೆಯಿಂದ ಮಾಲೀಕರಿಗೆ ಕರೆ ಮಾಡಿಸೋದಾಗಿ ಬೆದರಿಕೆ ಹಾಕಿದ್ದರು. ಈ ವೇಳೆ ಸಿನಿಮಾ ನಟ ಧರ್ಮೇಂದ್ರ ಎಂಬುವವರಿಂದ ಐಶ್ವರ್ಯಗೌಡ ಕರೆ ಮಾಡಿಸಿ, ಬೆದರಿಕೆ ಹಾಕಿದ್ದಾರೆ ಅನ್ನೋ ಆರೋಪವೂ ಕೇಳಿಬಂದಿದೆ.

    ಧಮೇಂದ್ರ ಡಿ.ಕೆ ಸುರೇಶ್ ವಾಯ್ಸ್‌ನಲ್ಲಿ ಕರೆ ಮಾಡಿದ್ದ ಧರ್ಮೇಂದ್ರ ಮಾಲೀಕರಾದ ವನಿತಾ ಐತಾಳ್‌ಗೆ ಕರೆ ಮಾಡಿ ಸಮಯ ಕೇಳಿದ್ದರು. ಕೊನೆಗೆ ತಾನೇ ಧರ್ಮೇಂದ್ರನನ್ನ ಕಳುಹಿಸಿ ಕೊಲೆ ಮಾಡಿಸುವುದಾಗಿಯೂ ಬೆದರಿಕೆ ಹಾಕಿದ್ದರು. ಅವಾಚ್ಯ ಶಬ್ಧಗಳಿಂದ ಬೈದು, ಜೀವ ಬೆದರಿಕೆ ಹಾಕಿದ್ದರು ಎಂದು ಆರೋಪಿಸಲಾಗಿದೆ. ಈ ಕುರಿತು ಜ್ಯುವೆಲರಿ ಮಾಲೀಕಾರದ ವನಿತಾ ಆರ್.ಆರ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು, ವನಿತಾ ಐತಾಳ್ ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು ಇಂದು ಆರೋಪಿಗಳಿಬ್ಬರನ್ನ ಬಂಧಿಸಿದ್ದಾರೆ. ಅಲ್ಲದೇ ನಟ ಧಮೇಂದ್ರ ಅವರಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.

    ಎಷ್ಟೆಷ್ಟು ಪ್ರಮಾಣದ ಚಿನ್ನಾಭರಣ ಖರೀದಿ?

    * ಅಕ್ಟೋಬರ್ 12 – 2023 – 62,03,590 ರೂ.
    * ಅಕ್ಟೋಬರ್ 13 – 2023 9,65,320 ರೂ.
    * ಅಕ್ಟೋಬರ್ 18 – 2023 – 95,42,500 ರೂ.
    * ಅಕ್ಟೋಬರ್ 27 – 2023 – 5.2.1,37,42,700 ರೂ.
    * ನವೆಂಬರ್ 29 – 2023 – 5.2.87,71,630 ರೂ.
    * ಡಿಸೆಂಬರ್ 1 – 2023 – 57,25,650 ರೂ.
    * ಜನವರಿ 1 – 2024 – 1,45,51,070 ರೂ.
    * ಅಕ್ಟೋಬರ್ 13 – 2023 – 75,10,200 ರೂ.
    * ನವೆಂಬರ್ 10 – 2023 – 57,22,120 ರೂ.
    * ನವೆಂಬರ್ 12 – 2023 – 57,02,050 ರೂ.
    * ನವೆಂಬರ್ 12 – 2023 – 56,88,600 ರೂ.
    ಒಟ್ಟು 14,659.940 ಗ್ರಾಂ – 8,41,25,430 ರೂ.ಇದನ್ನೂ ಓದಿ: ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಕೇಸ್ – ಭಾನುವಾರ ಮೃತ ಸಚಿನ್ ನಿವಾಸಕ್ಕೆ ಬಿಜೆಪಿ ನಿಯೋಗ ಭೇಟಿ

  • ಡಿ.ಕೆ ಸುರೇಶ್ ತಂಗಿ ಅಂತ ಹೇಳ್ಕೊಂಡು ವಂಚನೆ ಕೇಸ್ -ಆರೋಪಿ ಐಶ್ವರ್ಯ ಗೌಡ, ಪತಿ ಹರೀಶ್‌ ಅರೆಸ್ಟ್

    ಡಿ.ಕೆ ಸುರೇಶ್ ತಂಗಿ ಅಂತ ಹೇಳ್ಕೊಂಡು ವಂಚನೆ ಕೇಸ್ -ಆರೋಪಿ ಐಶ್ವರ್ಯ ಗೌಡ, ಪತಿ ಹರೀಶ್‌ ಅರೆಸ್ಟ್

    – ಸುಮಾರು 15 ಕೆಜಿ ಚಿನ್ನ ಖರೀದಿಸಿ ವಂಚನೆ ಆರೋಪ

    ಬೆಂಗಳೂರು: ಕಾಂಗ್ರೆಸ್ ಮಾಜಿ ಸಂಸದ ಡಿ.ಕೆ ಸುರೇಶ್ (DK Suresh) ಸಹೋದರಿ ಅಂತ ಹೇಳಿಕೊಂಡು 14.600 ಕೆಜಿಯಷ್ಟು ಚಿನ್ನಾಭರಣ ಖರೀದಿಸಿ ವಂಚನೆ ಮಾಡಿರುವ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನ ಚಂದ್ರಲೇಔಟ್ ಪೊಲೀಸರು (Chandralayout Police) ಬಂಧಿಸಿದ್ದಾರೆ.

    ಆರ್.ಆರ್ ನಗರದ (RR Ranagara) ನಿವಾಸಿ ಐಶ್ವರ್ಯಗೌಡ ಹಾಗೂ ಪತಿ ಹರೀಶ್ ಬಂಧಿತ ಆರೋಪಿಗಳು. ಅಲ್ಲದೇ ನಟ ಧಮೇಂದ್ರ ಅವರಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.

    ಸದ್ಯ ಬಂಧಿತ ಐಶ್ವರ್ಯ ಗೌಡ, ಪತಿ ಹರೀಶ್‌ ಇಬ್ಬರನ್ನೂ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್‌ಗೆ ಕರೆದೊಯ್ಯಲಾಗಿದೆ. ವೈದ್ಯಕೀಯ ಪರೀಕ್ಷೆ ಮುಕ್ತಾಯಗೊಂಡ ಬಳಿಕ 4ನೇ ಎಸಿಎಂಎಂ ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ. ಐಶ್ವರ್ಯಗೌಡರನ್ನ ಕಸ್ಟಡಿಗೆ ನೀಡುವಂತೆ ಕೇಳಲು ರಿಮಾಂಡ್ ಅಪ್ಲಿಕೇಷನ್ ಸಹ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಏನಿದು ಪ್ರಕರಣ?
    ಐಶ್ವರ್ಯ ಗೌಡ ಕಳೆದ ಜನವರಿಯಿಂದ ಇಲ್ಲಿಯವರೆಗೂ ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಶಾಪ್‌ನಲ್ಲಿ 14 ಕೆಜಿ 600 ಗ್ರಾಂನಷ್ಟು ಚಿನ್ನಾಭರಣ ಖರೀದಿಸಿದ್ದಳು. ಹಣ ಕೊಡದೇ ಇದ್ದಾಗ, ಡಿಕೆ ಸುರೇಶ್ ಕಡೆಯಿಂದ ಮಾಲೀಕರಿಗೆ ಕರೆ ಮಾಡಿಸೋದಾಗಿ ಬೆದರಿಕೆ ಹಾಕಿದ್ದರು. ಈ ವೇಳೆ ಸಿನಿಮಾ ನಟ ಧರ್ಮೇಂದ್ರ ಎಂಬುವವರಿಂದ ಐಶ್ವರ್ಯಗೌಡ ಕರೆ ಮಾಡಿಸಿ, ಬೆದರಿಕೆ ಹಾಕಿದ್ದಾರೆ ಅನ್ನೋ ಆರೋಪವೂ ಕೇಳಿಬಂದಿದೆ.

    ಧರ್ಮೇಂದ್ರ ಡಿ.ಕೆ ಸುರೇಶ್ ವಾಯ್ಸ್ನಲ್ಲಿ ಕರೆ ಮಾಡಿದ್ದ ಧರ್ಮೇಂದ್ರ ಮಾಲೀಕರಾದ ವನಿತಾ ಐತಾಳ್‌ಗೆ ಕರೆ ಮಾಡಿ ಸಮಯ ಕೇಳಿದ್ದರು. ಕೊನೆಗೆ ತಾನೇ ಧರ್ಮೇಂದ್ರನನ್ನ ಕಳುಹಿಸಿ ಕೊಲೆ ಮಾಡಿಸುವುದಾಗಿಯೂ ಬೆದರಿಕೆ ಹಾಕಿದ್ದರು. ಅವಾಚ್ಯ ಶಬ್ಧಗಳಿಂದ ಬೈದು, ಜೀವ ಬೆದರಿಕೆ ಹಾಕಿದ್ದರು ಎಂದು ಆರೋಪಿಸಲಾಗಿದೆ. ಈ ಕುರಿತು ಜ್ಯುವೆಲರಿ ಮಾಲೀಕಾರದ ವನಿತಾ ಆರ್.ಆರ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು, ವನಿತಾ ಐತಾಳ್ ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು ಇಂದು ಆರೋಪಿಗಳಿಬ್ಬರನ್ನ ಬಂಧಿಸಿದ್ದಾರೆ.

    ಎಷ್ಟೆಷ್ಟು ಪ್ರಮಾಣದ ಚಿನ್ನಾಭರಣ ಖರೀದಿ?

    * ಅಕ್ಟೋಬರ್ 12 – 2023 – 62,03,590 ರೂ.
    * ಅಕ್ಟೋಬರ್ 13 – 2023 9,65,320 ರೂ.
    * ಅಕ್ಟೋಬರ್ 18 – 2023 – 95,42,500 ರೂ.
    * ಅಕ್ಟೋಬರ್ 27 – 2023 – 5.2.1,37,42,700 ರೂ.
    * ನವೆಂಬರ್ 29 – 2023 – 5.2.87,71,630 ರೂ.
    * ಡಿಸೆಂಬರ್ 1 – 2023 – 57,25,650 ರೂ.
    * ಜನವರಿ 1 – 2024 – 1,45,51,070 ರೂ.
    * ಅಕ್ಟೋಬರ್ 13 – 2023 – 75,10,200 ರೂ.
    * ನವೆಂಬರ್ 10 – 2023 – 57,22,120 ರೂ.
    * ನವೆಂಬರ್ 12 – 2023 – 57,02,050 ರೂ.
    * ನವೆಂಬರ್ 12 – 2023 – 56,88,600 ರೂ.
    ಒಟ್ಟು 14,659.940 ಗ್ರಾಂ – 8,41,25,430 ರೂ.