Tag: ಐಶ್ವಯಾ ರೈ

  • ರಜನಿಕಾಂತ್ 169ನೇ ಸಿನಿಮಾಗೆ ಐಶ್ವರ್ಯ ರೈ ನಾಯಕಿ

    ರಜನಿಕಾಂತ್ 169ನೇ ಸಿನಿಮಾಗೆ ಐಶ್ವರ್ಯ ರೈ ನಾಯಕಿ

    ಕಾಲಿವುಡ್ ರಜನಿಕಾಂತ್ ನಟನೆಯ 169ನೇ ಚಿತ್ರಕ್ಕೆ ಕೊನೆಗೂ ನಾಯಕಿ ಯಾರು ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಈ ಹಿಂದೆ `ರೋಬೋ’ ಚಿತ್ರದಲ್ಲಿ ರಜನಿಕಾಂತ್‌ಗೆ ಜೋಡಿಯಾಗಿ ನಟಿಸಿದ್ದ ಐಶ್ವರ್ಯ ರೈ ಮತ್ತೆ ಈ ಚಿತ್ರದ ಮೂಲಕ ದಕ್ಷಿಣದ ಸಿನಿಮಾದತ್ತ ಮುಖ ಮಾಡಿದ್ದಾರೆ.

    ರಜನೀಕಾಂತ್ ಮತ್ತೆ ಸಿನಿಮಾಗಳಲ್ಲಿ ಆಕ್ಟೀವ್ ಆಗಿದ್ದಾರೆ. ತಮ್ಮ 169ನೇ ಸಿನಿಮಾಗೆ ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದಲ್ಲಿ ನಟಿಸುತ್ತಿದ್ದು, ಈ ಚಿತ್ರಕ್ಕೆ ರಜನಿಕಾಂತ್ ನಾಯಕಿಯಾಗಿ ವಿಶ್ವ ಸುಂದರಿ ಐಶ್ವರ್ಯ ರೈ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಮೂಲಕ ಮತ್ತೆ ಸೌತ್ ಸಿನಿಮಾಗೆ ಬರುತ್ತಿದ್ದಾರೆ. ಇದನ್ನೂ ಓದಿ: ರೆಡ್ ಕಲರ್ ಡ್ರೆಸ್‌ನಲ್ಲಿ ಸಮಂತಾ ಮಿಂಚಿಂಗ್

    ಐಶ್ವರ್ಯ ರೈ ಮದುವೆ, ಸಂಸಾರ ಅಂತಾ ಬ್ಯುಸಿಯಿದ್ದ ನಟಿ ಈಗ ಬಾಲಿವುಡ್ ಮತ್ತು ಸೌತ್ ಸಿನಿಮಾಗಳತ್ತ ಮುಖ ಮಾಡಿದ್ದಾರೆ. ರಜನಿಕಾಂತ್ ಅವರ ಬಹುನಿರೀಕ್ಷಿತ ಸಿನಿಮಾ, 169ನೇ ಚಿತ್ರಕ್ಕೆ ನಾಯಕಿಯಾಗಿ ಐಶ್ವರ್ಯ ರೈ ನಟಿಸುತ್ತಿದ್ದಾರೆ.

    ನೆಲ್ಸನ್ ನಿರ್ದೇಶನದ ಡಾಕ್ಟರ್ ಚಿತ್ರ ಒಳ್ಳೆಯ ಪ್ರತಿಕ್ರಿಯೆ ಪಡೆದಿತ್ತು. ಬಳಿಕ ಬೀಸ್ಟ್ `ಕೆಜಿಎಫ್ 2′ ಎದುರು ಮಕಾಡೆ ಮಲಗಿತ್ತು. ಈಗ ರಜನೀಕಾಂತ್‌ಗೆ ನಿರ್ದೇಶನ ಮಾಡುವುದಕ್ಕೆ ದಿಲೀಪ್ ಕುಮಾರ್ ಸಜ್ಜಾಗಿದ್ದಾರೆ. ಈ ಚಿತ್ರ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಾ ಅಂತಾ ಕಾದು ನೋಡಬೇಕಿದೆ.

  • ರಣ್‌ಬೀರ್ -ಆಲಿಯಾ ರಿಸೆಪ್ಷನ್‌ಗೆ ಬಚ್ಚನ್ ಕುಟುಂಬಕ್ಕೆ ಆಹ್ವಾನವಿರಲಿಲ್ಲವೇಕೆ?

    ರಣ್‌ಬೀರ್ -ಆಲಿಯಾ ರಿಸೆಪ್ಷನ್‌ಗೆ ಬಚ್ಚನ್ ಕುಟುಂಬಕ್ಕೆ ಆಹ್ವಾನವಿರಲಿಲ್ಲವೇಕೆ?

    ಬಾಲಿವುಡ್ ಗಲ್ಲಿ ಗಲ್ಲಿಯಲ್ಲೂ ಈಗ ಒಂದೇ ಸುದ್ದಿ, ರಣ್‌ಬೀರ್ ಆಲಿಯಾ ಮದುವೆ ವಿಚಾರ. ಏಪ್ರಿಲ್ 14ಕ್ಕೆ ರಣ್‌ಬೀರ್ ಮತ್ತು ಆಲಿಯಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈಗ ಇಬ್ಬರು ಸ್ಟಾರ್‌ಗಳು ಮದುವೆಯ ಬಳಿಕ ಒಪ್ಪಿಕೊಂಡಿದ್ದ ಚಿತ್ರಗಳತ್ತ ಬ್ಯುಸಿಯಾಗಿದ್ದಾರೆ. ಆದರೆ ಈಗ ಬಿಟೌನ್‌ನಲ್ಲಿ ಹೊಸ ವಿಚಾರವೊಂದು ಸಿಕ್ಕಾಪಟ್ಟೆ ಚರ್ಚೆಯಾಗ್ತಿದೆ. ರಣ್‌ಬೀರ್ ಮತ್ತು ಆಲಿಯಾ ರಿಸೆಪ್ಷನ್‌ನಲ್ಲಿ ಬಚ್ಚನ್ ಕುಟುಂಬಕ್ಕೆ ಯಾಕೆ ಆಹ್ವಾನವಿರಲಿಲ್ಲ ಅಂತಾ ಭಾರೀ ಚರ್ಚೆ ಆಗುತ್ತಿದೆ.

    ರಣ್‌ಬೀರ್ ಮತ್ತು ಆಲಿಯಾ ಪ್ರೀತಿಸಿ, ಹಿರಿಯರ ಸಮ್ಮತಿಯ ಮೇರೆಗೆ ಕಳೆದ ವಾರವಷ್ಟೇ ಹಸೆಮಣೆ ಏರಿದ್ದರು. ಮದುವೆಯಲ್ಲಿ ಕುಟುಂಬಸ್ಥರು ಆಪ್ತರಿಗಷ್ಟೇ ಆಹ್ವಾನವಿತ್ತು. ನಂತರ ಏಪ್ರಿಲ್ 16ರಂದು ನಡೆದ ರಿಸೆಪಕ್ಷನ್‌ನಲ್ಲಿ ಹಿಂದಿ ಚಿತ್ರರಂಗದ ಗಣ್ಯರಿಗೆ, ಸೆಲೆಬ್ರೆಟಿಗಳಿಗೆ ಆಹ್ವಾನ ನೀಡಲಾಗಿತ್ತು. ಆದರೆ ಬಚ್ಚನ್ ಕುಟುಂಬಕ್ಕೆಯೇಕೆ ಆಹ್ವಾನವಿರಲಿಲ್ಲ. ಬಿಗ್‌ಬಿ ಮಗಳು ಶ್ವೇತಾ ಬಚ್ಚನ್ ರಣ್‌ಬೀರ್ ಕಪೂರ್ ಅವರ ಸಂಬಂಧಿಯಾಗಿದ್ದು, ಅವರಿಗೆ ಇನ್‌ವೈಟ್ ಮಾಡಿದ್ದರೆ, ಉಳಿದ ಕುಟುಂಬದ ಸದಸ್ಯರಿಗೆ ಕರೆಯದೇ ಇರೋದು ಅಚ್ಚರಿ ಮೂಡಿಸಿದೆ.

    ಬಚ್ಚನ್ ಕುಟುಂಬಕ್ಕೆ ಕರೆಯದೇ ಇರುವುದು ಅಚ್ಚರಿ ಮೂಡಿಸಿದ್ದರೆ, ಇನ್ನೊಂದ್ ಕಡೆ `ಸಾವರಿಯಾ’ ಚಿತ್ರದ ಮೂಲಕ ರಣ್‌ಬೀರ್‌ ಕಪೂರ್ ಜರ್ನಿ ಶುರು ಮಾಡಿದ್ದರು. ಈ ಚಿತ್ರದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರು ಕೂಡ ರಿಸೆಪ್ಷನ್‌ನಲ್ಲಿ ಗೈರಾಗಿದ್ದರು. ಇತ್ತೀಚಿಗೆ ನಟಿ ಆಲಿಯಾ ಕೂಡ `ಗಂಗೂಬಾಯಿ ಕಾಠಿಯಾವಾಡಿ’ ಚಿತ್ರದಲ್ಲಿ ನಟಿಸಿದ್ದರು. ಇದನ್ನೂ ಓದಿ:ಪಟಾಕ ಪೋರಿ ನಭಾ ಮಸ್ತ್ ಮಸ್ತ್ ಫೋಟೋಶೂಟ್

    ಒಟ್ನಲ್ಲಿ ಅಮಿತಾಭ್‌ ಬಚ್ಚನ್ ಕುಟುಂಬ ಮತ್ತು ನಿರ್ದೇಶಕ ಬನ್ಸಾಲಿ ಅವರಿಗೆ ರಣ್‌ಬೀರ್ ಮತ್ತು ಆಲಿಯಾ ರಿಸೆಪಕ್ಷನ್‌ಗೆ ಆಹ್ವಾನ ಇಲ್ಲದೇ ಇರುವುದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಇವರಿಬ್ಬರ ನಡುವಿನ ಸ್ನೇಹ ಸಂಬಂಧದ ಬಗ್ಗೆ ಸಾಕಷ್ಟು ಕುತೂಹಲ ಹುಟ್ಟು ಹಾಕಿದೆ.‌

  • ಖ್ಯಾತ ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್‍ಗೆ ಪಿತೃವಿಯೋಗ

    ಖ್ಯಾತ ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್‍ಗೆ ಪಿತೃವಿಯೋಗ

    ನವದೆಹಲಿ: ಖ್ಯಾತ ಬಾಲಿವುಡ್ ನಟಿ ಐಶ್ಚರ್ಯ ರೈ ಬಚ್ಚನ್‍ಗೆ ಪಿತೃವಿಯೋಗವಾಗಿದೆ. ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಐಶ್ವರ್ಯರೈ ತಂದೆ ಕೃಷ್ಣರಾಜ್ ರೈ ಶನಿವಾರ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಅಸುನೀಗಿದರು.

    ಕೃಷ್ಣರಾಜ್ ರೈ ಅವರಿಗೆ 78 ವರ್ಷ ವಯಸ್ಸಾಗಿತ್ತು. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಇವರು ಕಳೆದ ಎರಡು ವಾರಗಳಿಂದ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದ ಅವರ ಅಂತ್ಯಕ್ರಿಯೆ ನಿನ್ನೆ ಸಂಜೆಯೇ ಮುಂಬೈನಲ್ಲಿ ನೆರವೇರಿತು.

    ಕೃಷ್ಣರಾಜ್ ಅವರು ಮೂಲತಃ ಮಂಗಳೂರಿನ ಕೌಡೂರು ಮೂಲದವರಾಗಿದ್ದು, ಮುಂಬೈನಲ್ಲಿ ನೆಲೆಸಿದ್ದರು. ಮೃತರು ಪತ್ನಿ, ಮಗಳು, ಮಗ ಮತ್ತು ಮೊಮ್ಮಗಳನ್ನು ಅಗಲಿದ್ದಾರೆ.