Tag: ಐವಾನ್ ಡಿಸೋಜಾ

  • 24 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ಹಾಳಾಗಿದೆ, ರಾಜ್ಯದಲ್ಲಿ NEET ಪರೀಕ್ಷೆ ರದ್ದು ಮಾಡಿ: ಐವಾನ್ ಡಿಸೋಜಾ

    24 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ಹಾಳಾಗಿದೆ, ರಾಜ್ಯದಲ್ಲಿ NEET ಪರೀಕ್ಷೆ ರದ್ದು ಮಾಡಿ: ಐವಾನ್ ಡಿಸೋಜಾ

    ಬೆಂಗಳೂರು: ರಾಜ್ಯದಲ್ಲಿ ನೀಟ್ ಪರೀಕ್ಷೆ (NEET Exam) ರದ್ದು ಮಾಡಬೇಕು ಅಂತ ಕಾಂಗ್ರೆಸ್ ‌ಸದಸ್ಯ ಐವಾನ್ ಡಿಸೋಜಾ (Ivan D’Souza) ಆಗ್ರಹಿಸಿದ್ದಾರೆ. ವಿಧಾನ ಪರಿಷತ್ ಪ್ರಶ್ನೋತ್ತರ ಅವಧಿಯಲ್ಲಿ ನೀಟ್ ರದ್ದು ಮಾಡಲು ಒತ್ತಾಯ ಮಾಡಿದ್ರು.

    ನೀಟ್ ಪರೀಕ್ಷೆಯಲ್ಲಿ ದೊಡ್ಡ ಅವ್ಯವಹಾರವಾಗಿದೆ. ಪೇಪರ್ ಲೀಕ್ ಆಗಿ 24 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ಹಾಳಾಗಿದೆ. ಹಿಂದೆ ಸಿಇಟಿ ಪರೀಕ್ಷೆ (CET Exam) ಇದ್ದಾಗ ನಮ್ಮ ಮಕ್ಕಳಿಗೆ ಹೆಚ್ಚು ಅನುಕೂಲ ಆಗ್ತಿತ್ತು. ನೀಟ್ ವ್ಯವಸ್ಥೆ ಫೆಲ್ಯೂರ್ ಸಿಸ್ಟಮ್. ಇದರಿಂದ ಮಕ್ಕಳಿಗೆ ಅನಾನುಕೂಲ. ಈ ಪರೀಕ್ಷೆಯಲ್ಲಿ ಸಾಮಾಜಿಕ ನ್ಯಾಯ ಇಲ್ಲ. ಹೀಗಾಗಿ ರಾಜ್ಯ ಸರ್ಕಾರ (Karnataka Government) ನೀಟ್ ರದ್ದು ಮಾಡಬೇಕು. ತಮ್ಮದೇ ಪರೀಕ್ಷಾ ವ್ಯವಸ್ಥೆ ಜಾರಿ ಮಾಡಬೇಕು ಅಂತ ಆಗ್ರಹಿಸಿದರು.

    ಇದಕ್ಕೆ ಸಚಿವ ಶರಣ ಪ್ರಕಾಶ್ ಪಾಟೀಲ್ ಉತ್ತರ ನೀಡಿ, ನೀಟ್‌ ಪರೀಕ್ಷೆಯಲ್ಲಿ ಅಕ್ರಮವಾಗಿದೆ. ಕೇಂದ್ರ ಸರ್ಕಾರ ಇದರಲ್ಲಿ ಎಡವಟ್ಟು ಮಾಡಿದೆ. ನೀಟ್ ಪರೀಕ್ಷೆ ಮಾಡೋದ್ರಲ್ಲಿ ಕೇಂದ್ರ ಎಡವಿದೆ. ಪೇಪರ್ ಲೀಕ್ ಆದಾಗ ನಾವು ತನಿಖೆ ಮಾಡಿ ಅಂತ ಆಗ್ರಹ ಮಾಡಿದ್ವಿ, ಕೇಂದ್ರ ಒಪ್ಪಲಿಲ್ಲ. ಬಳಿಕ ತಪ್ಪೊಪ್ಪಿಕೊಂಡು ಸಿಬಿಐ ತನಿಖೆಗೆ ಒಪ್ಪಿಸಿದೆ. ಸುಪ್ರೀಂ ಕೋರ್ಟ್‌ನಲ್ಲಿ (Supreme Court) ಕೇಸ್ ಇದೇ 18ಕ್ಕೆ ವಿಚಾರಣೆಯಿದೆ. ಏನು ತೀರ್ಮಾನ ಆಗುತ್ತದೆಯೋ ನೋಡೋಣ ಎಂದರು‌. ಇದನ್ನೂ ಓದಿ: ಕಾವೇರಿ ನೀರು ಬಿಡುಗಡೆ ವಿಚಾರ; ರಾಜ್ಯ ಸರ್ಕಾರ ನಿರ್ಧಾರದ ಬೆನ್ನಲ್ಲೇ ಸರ್ವಪಕ್ಷಗಳ ಸಭೆ ಕರೆದ ತ.ನಾಡು ಸರ್ಕಾರ

    ಕೇಂದ್ರ ನಿರ್ಧಾರ ಮಾಡಬೇಕು:
    ನೀಟ್‌ ರದ್ದು ಮಾಡೋದು ಸಾಧ್ಯವಿಲ್ಲ. ನೀಟ್ ವ್ಯವಸ್ಥೆ ಸುಪ್ರೀಂ ಕೋರ್ಟ್ ಆದೇಶದಿಂದ ಆಗಿದೆ. ಕೇಂದ್ರ ಸರ್ಕಾರ ಇದನ್ನ ಕಾಯ್ದೆ ತಂದು ಮಾಡಿದೆ. ಇದನ್ನ ರದ್ದು ಮಾಡಲು ಸುಪ್ರೀಂ ಕೋರ್ಟ್ ಆದೇಶ ಮಾಡಬೇಕು. ಅಥವಾ ಕೇಂದ್ರ ಸರ್ಕಾರ ನಿರ್ಧಾರ ಮಾಡಬೇಕು ಎನ್ನುವ ಮೂಲಕ ನೀಟ್ ವ್ಯವಸ್ಥೆ ರದ್ದು ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. ಇದನ್ನೂ ಓದಿ: Assembly Session: ಪರಿಷತ್‌ನಲ್ಲಿ ವಾಲ್ಮೀಕಿ ನಿಗಮ ಹಗರಣದ ಗದ್ದಲ; ಚರ್ಚೆಗೆ ಅವಕಾಶ ಕೊಡುವಂತೆ ಬಿಜೆಪಿ ಬಿಗಿಪಟ್ಟು!

    ಉತ್ತರ ನೀಡುವ ವೇಳೆ, ಕೇಂದ್ರದ ಮೇಲೆ ಸಚಿವ ಶರಣು ಪ್ರಕಾಶ್ ಪಾಟೀಲ್ ಆರೋಪ ಮಾಡಿದ್ರು. ಕೇಂದ್ರದ ಮೇಲೆ ಆರೋಪ ಮಾಡಿದ್ದಕ್ಕೆ ಬಿಜೆಪಿ ಸದಸ್ಯ ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಸದನದಲ್ಲಿ ಗದ್ದಲ ಗಲಾಟೆ ಆಯ್ತು. ನೀಟ್ ಪರೀಕ್ಷೆಯಲ್ಲಿ ಮಕ್ಕಳ ಭವಿಷ್ಯ ಹಾಳು ಮಾಡಿದ್ದು ಕೇಂದ್ರ ಸರ್ಕಾರ ಎಂದ ಕಾಂಗ್ರೆಸ್ ಸದಸ್ಯರು‌. ಇದಕ್ಕೆ ಸಿಇಟಿಯಲ್ಲಿ ಔಟ್ ಆಫ್ ಸಿಲಬಸ್ ಪ್ರಶ್ನೆ ಕೊಟ್ಟು ನೀವು ಹಾಳು ಮಾಡಿದ್ದು ಅಂತ ಬಿಜೆಪಿ ಸದಸ್ಯರು ಕಿಡಿಕಾರಿದರು. ಸದನದಲ್ಲಿ ಗದ್ದಲ ಗಲಾಟೆ ಉಂಟಾಯ್ತು. ಬಳಿಕ ಮಧ್ಯೆ ‌ಪ್ರವೇಶ ಮಾಡಿ ಅರ್ಧ ಗಂಟೆ ಚರ್ಚೆಗೆ ಅವಕಾಶ ನೀಡಿದ ಉಪ ಸಭಾಪತಿಗಳು ಗದ್ದಲಕ್ಕೆ ಬ್ರೇಕ್ ಹಾಕಿದ್ರು. ಇದನ್ನೂ ಓದಿ: ಆದಾಯ ಮೀರಿ ಆಸ್ತಿ ಗಳಿಕೆ ಕೇಸ್ | ಸಿಬಿಐ ಪ್ರಕರಣ ರದ್ದಿಲ್ಲ – ಸುಪ್ರೀಂನಲ್ಲಿ ಡಿಕೆಶಿ ಅರ್ಜಿ ವಜಾ

  • ಕ್ರೈಸ್ತ ಅಭಿವೃದ್ಧಿ ಪ್ರಾಧಿಕಾರ ರಚಿಸಿ – ಸಿಎಂಗೆ ಐವಾನ್ ಡಿಸೋಜಾ ಒತ್ತಾಯ

    ಕ್ರೈಸ್ತ ಅಭಿವೃದ್ಧಿ ಪ್ರಾಧಿಕಾರ ರಚಿಸಿ – ಸಿಎಂಗೆ ಐವಾನ್ ಡಿಸೋಜಾ ಒತ್ತಾಯ

    ಮಂಗಳೂರು: ರಾಜ್ಯದಲ್ಲಿರುವ ಕ್ರೈಸ್ತರಲ್ಲೂ ಬಹಳಷ್ಟು ಮಂದಿ ಬಡವರಿದ್ದಾರೆ. ಹೀಗಾಗಿ ಕ್ರೈಸ್ತ ಅಭಿವೃದ್ಧಿ ಪ್ರಾಧಿಕಾರವನ್ನು ತಕ್ಷಣ ರಚನೆ ಮಾಡಬೇಕು ಎಂದು ಮಾಜಿ ಎಂಎಲ್‌ಸಿ, ಕೆಪಿಸಿಸಿ ವಕ್ತಾರ ಐವಾನ್ ಡಿಸೋಜಾ ಆಗ್ರಹಿಸಿದ್ದಾರೆ.

    ಮಂಗಳೂರಿನಲ್ಲಿ ಮಾತನಾಡಿದ ಅವರು ಬಸವಕಲ್ಯಾಣ ಕ್ಷೇತ್ರದ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿಎಸ್‍ವೈ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಮುಂದಾಗಿದ್ದಾರೆ. ಅವರಲ್ಲಿರುವ ಬಡವರಿಗೆ ಸಹಕಾರಿಯಾಗುತ್ತೆ ಎಂದಿದ್ದಾರೆ. ನಮ್ಮ ಕ್ರೈಸ್ತರಲ್ಲೂ ಬಡವರಿದ್ದಾರೆ. ಹೀಗಾಗಿ ಪ್ರಾಧಿಕಾರ ರಚಿಸಿ ಎಂದು ಹೇಳಿದ್ದಾರೆ.

    ಈ ಹಿಂದೆಯೇ ಪ್ರಾಧಿಕಾರ ರಚನೆಗೆ ನಮ್ಮ ಒತ್ತಾಯವಿತ್ತು. ಆದರೆ ಸರ್ಕಾರ ನಮ್ಮ ಮನವಿಗೆ ಸ್ಪಂದಿಸಿಲ್ಲ. ಕ್ರೈಸ್ತ ಸಮುದಾಯದ ಮೌನ, ವೀಕ್ನೇಸ್ ಅಲ್ಲ. ಕ್ರೈಸ್ತರು ಮಂಗಗಳು ಎಂದು ಸಿಎಂ ಭಾವಿಸಿಕೊಂಡಿದ್ದಾರೆ. ಈ ಹಿಂದೆ ಇದ್ದ ಕ್ರೈಸ್ತ ಪ್ರಾಧಿಕಾರಕ್ಕೆ ಅನುಮೋದನೆ ನೀಡುತ್ತೇನೆ. 55 ಕೋಟಿ ಮೀಸಲಿಟ್ಟಿದ್ದೇನೆ ಎಂದಿದ್ದ ಸಿಎಂ ಬಳಿಕ ಯಾಕೆ ಮೌನವಾಗಿದ್ದಾರೆ ಎಂದು ತಕ್ಷಣವೇ ಉತ್ತರ ಕೊಡಬೇಕೆಂದು ಒತ್ತಾಯ ಮಾಡಿದ್ದಾರೆ.

    ಸರ್ಕಾರ ನಮ್ಮ ಮನವಿಗೆ ಸರಿಯಾಗಿ ಸ್ಪಂದಿಸದೇ ಇದ್ದಲ್ಲಿ ರಾಜ್ಯದ ಕ್ರೈಸ್ತರು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ. ಜನ ಬೀದಿಗೆ ಬಂದು ಹೋರಾಟ ಮಾಡಿದರೆ ಅದಕ್ಕೆ ಸರ್ಕಾರವೇ ನೇರ ಹೊಣೆ, ನಮ್ಮ ತಾಳ್ಮೆಯನ್ನು ಪರೀಕ್ಷಿಸಬೇಡಿ ಎಂದು ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

  • ಐವಾನ್ ಡಿಸೋಜಾ ಜೊತೆ ಸುತ್ತಾಡಿದ ಡಿಕೆಶಿಗೆ ಯಾಕಿಲ್ಲ ಕ್ವಾರಂಟೈನ್?

    ಐವಾನ್ ಡಿಸೋಜಾ ಜೊತೆ ಸುತ್ತಾಡಿದ ಡಿಕೆಶಿಗೆ ಯಾಕಿಲ್ಲ ಕ್ವಾರಂಟೈನ್?

    -ಸುದ್ದಿಗೋಷ್ಠಿಯಲ್ಲಿದ್ದ 40 ಪತ್ರಕರ್ತರಿಗೆ ಕಡ್ಡಾಯ ಕ್ವಾರಂಟೈನ್
    -ಜನಪ್ರತಿನಿಧಿಗಳಿಗೆ ಅನ್ವಯ ಆಗಲ್ವಾ ನಿಯಮ?

    ಮಂಗಳೂರು: ಮಾಜಿ ಎಂಎಲ್‍ಸಿ ಐವಾನ್ ಡಿಸೋಜಾಗೆ ಕೊರೊನಾ ಪಾಸಿಟಿವ್ ಆಗಿದ್ರೂ ಅವರ ಜೊತೆ ದಿನವಿಡೀ ಸುತ್ತಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಇಂದು ಕೂಡಾ ಜನರ ಮಧ್ಯೆ ಸುತ್ತಾಡುತ್ತಿದ್ದಾರೆ. ಕಾನೂನು, ನಿಯಮಗಳು ಜನಪ್ರತಿನಿಧಿಗಳಿಗೆ ಅನ್ವಯ ಆಗಲ್ವಾ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.

    ಡಿ.ಕೆ.ಶಿವಕುಮಾರ್ ಜುಲೈ 31 ರಂದು ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದಾಗ ಸ್ವಾಗತಿಸಲು ಐವಾನ್ ಡಿಸೋಜಾ ಅವರು ಹೋಗಿದ್ದರು. ಯಾವುದೇ ಸಾಮಾಜಿಕ ಅಂತರವಿಲ್ಲದೆ ಜೊತೆಯಲ್ಲಿದ್ದು ಬಳಿಕ ಕಾಂಗ್ರೇಸ್ ಕಚೇರಿಯಲ್ಲಿ ಕಾರ್ಯಕರ್ತರ ಭೇಟಿ ಮಾಡಿದಾಗ ನೂರಾರು ಜನ ಸ್ಥಳದಲ್ಲಿದ್ದರು. ಬಳಿಕ ಸುದ್ದಿಗೋಷ್ಟಿಯನ್ನು ಎಸಿ ರೂಂನಲ್ಲಿ ನಡೆಸಿದ್ದು ಐವಾನ್ ತಮ್ಮ ಮಾಸ್ಕ್ ತೆಗೆದು ಡಿಕೆ ಶಿವಕುಮಾರ್ ಪಕ್ಕದಲ್ಲಿಯೇ ಕುಳಿತಿದ್ದರು.

    ಸುದ್ದಿಗೋಷ್ಠಿಯ ಬಳಿಕ ಐವಾನ್ ಡಿಸೋಜಾ ಡಿ.ಕೆ.ಶಿವಕುಮಾರ್ ಅವರನ್ನು ಮುಟ್ಟಿಕೊಂಡೇ ಇದ್ರು. ಅಂದು ಜ್ವರವಿದ್ರೂ ಎಲ್ಲಾ ಕಾರ್ಯಕ್ರಮಕ್ಕೆ ಭಾಗಿಯಾಗಿದ್ದ ಐವಾನ್ ಅವರಿಗೆ ಮಾರನೇ ದಿನ ಕೊರೊನಾ ಸೋಂಕು ಕಾಣಿಸಿಕೊಂಡಿರುವುದು ದೃಢವಾಗಿತ್ತು.

    ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದ ಎಲ್ಲಾ 40 ಪತ್ರಕರ್ತರಿಗೂ ಆರೋಗ್ಯ ಇಲಾಖೆ ಕಡ್ಡಾಯ ಕ್ವಾರಂಟೈನ್ ಗೆ ಸೂಚಿಸಿದೆ. ಆದರೆ ಐವಾನ್ ಅವರ ಪ್ರಾಥಮಿಕ ಸಂಪರ್ಕ ಹೊಂದಿದ ಡಿಕೆ ಶಿವಕುಮಾರ್ ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಇಂದೂ ಕೂಡಾ ಕಲಬುರಗಿ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಕಾನೂನು ಬಡ ಜನರಿಗೆ ಮಾತ್ರ ಜನಪ್ರತಿನಿಧಿಗಳಿಗೆ ಇಲ್ವಾ ಅನ್ನೋ ಪ್ರಶ್ನೆ ಮೂಡಿದೆ.

  • ಮಾಜಿ ಸಚಿವ ರಮಾನಾಥ ರೈ, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಕ್ವಾರಂಟೈನ್

    ಮಾಜಿ ಸಚಿವ ರಮಾನಾಥ ರೈ, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಕ್ವಾರಂಟೈನ್

    ಮಂಗಳೂರು: ವಿಧಾನ ಪರಿಷತ್ ಮಾಜಿ ಸದಸ್ಯ ಐವಾನ್ ಡಿಸೋಜಾ ಅವರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅವರ ಜೊತೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಮಾಜಿ ಸಚಿವ ಬಿ. ರಮಾನಾಥ ರೈ ಸ್ವಯಂ ಕ್ವಾರಂಟೈನ್ ಗೆ ಒಳಗಾಗಿದ್ದಾರೆ.

    ನಾನು ಎರಡು ದಿನಗಳಿಂದ ಸ್ವಯಂ ಕ್ವಾರಂಟೈನ್ ಗೆ ಒಳಗಾಗಿದ್ದೇನೆ. ಆದ್ದರಿಂದ ಈಗಾಗಲೇ ನಿಗದಿಯಾಗಿರುವ ಜನ ಸಾಮಾನ್ಯರ ಭೇಟಿ, ಕ್ಷೇತ್ರದಲ್ಲಿ ನಿಗದಿಯಾಗಿದ್ದ ವಿವಿಧ ಕಾರ್ಯಕ್ರಮಗಳನ್ನು ರದ್ದುಗೊಳಿಸಿರುವುದಾಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕ್ಷೇತ್ರದ ಜನರು ಯಾವುದೇ ಸಮಸ್ಯೆಗಳಿದ್ದರೆ ದೂರವಾಣಿ ಮೂಲಕ ನನ್ನನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

    ಇದೇ ವೇಳೆ ಐವನ್ ಡಿಸೋಜಾ ಅವರ ಜೊತೆ ಪ್ರಾಥಮಿಕ ಸಂಪರ್ಕದಲ್ಲಿದ್ದವರಿಗೆ ಕೆಮ್ಮು, ಜ್ವರ ಮುಂತಾದ ಸೋಂಕಿನ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ಪರೀಕ್ಷೆಗೆ ಒಳಗಾಗುವಂತೆ ಮನವಿ ಮಾಡಿದ್ದಾರೆ. ಜೊತೆಗೆ ಐವಾನ್ ಡಿಸೋಜಾ ಹಾಗೂ ಕೋವಿಡ್ ಸೋಂಕಿತರೆಲ್ಲರೂ ಶೀಘ್ರದಲ್ಲಿ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

    ಅದೇ ರೀತಿ ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶಕುಂತಲಾ ಟಿ. ಶೆಟ್ಟಿಯವರು ಕೂಡ ಸ್ವಯಂ ಕ್ವಾರಂಟೈನ್ ಗೆ ಒಳಗಾಗಿದ್ದಾರೆ.

  • ಐವಾನ್ ಡಿಸೋಜಾಗೆ ಕೊರೊನಾ – ಯು.ಟಿ.ಖಾದರ್ ಹೋಂ ಕ್ವಾರಂಟೈನ್

    ಐವಾನ್ ಡಿಸೋಜಾಗೆ ಕೊರೊನಾ – ಯು.ಟಿ.ಖಾದರ್ ಹೋಂ ಕ್ವಾರಂಟೈನ್

    ಮಂಗಳೂರು: ಮಾಜಿ ವಿಧಾನ ಪರಿಷತ್ ಸದಸ್ಯ, ಕಾಂಗ್ರೆಸ್ ಮುಖಂಡ ಐವಾನ್ ಡಿಸೋಜಾಗೆ ಕೊರೊನಾ ಪಾಸಿಟಿವ್ ಆದ ಹಿನ್ನೆಲೆಯಲ್ಲಿ ಅವರ ಪ್ರಾರ್ಥಮಿಕ ಸಂಪರ್ಕ ಹೊಂದಿದ್ದ ಮಾಜಿ ಆರೋಗ್ಯ ಸಚಿವ ಯು.ಟಿ.ಖಾದರ್ ಸ್ವಯಂ ಕ್ವಾರಂಟೈನ್ ಆಗಿದ್ದಾರೆ.

    ಶಮಿವಾರ ಐವಾನ್ ಡಿಸೋಜಾ ಹಾಗೂ ಅವರ ಪತ್ನಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದರಿಂದ ಅವರೊಂದಿಗೆ ನೇರ ಸಂಪರ್ಕದಲ್ಲಿದ್ದ ಖಾದರ್ ಇಂದಿನಿಂದ ತನ್ನ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಮನೆಯಲ್ಲೇ ಕ್ವಾರಂಟೈನ್ ಆಗಿದ್ದಾರೆ.

    ಕಳೆದ ಶುಕ್ರವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಂಗಳೂರಿಗೆ ಭೇಟಿ ನೀಡಿದ್ದಾಗ, ಐವಾನ್ ಡಿಸೋಜಾ ಸೇರಿದಂತೆ ಜಿಲ್ಲೆಯ ಎಲ್ಲ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಜೊತೆಗಿದ್ದರು. ಇದೀಗ ಐವಾನ್ ಡಿಸೋಜಾಗೆ ಕೊರೊನಾ ಪಾಸಿಟಿವ್ ಬಂದಿರುವ ಹಿನ್ನಲೆಯಲ್ಲಿ ಅವರ ಜೊತೆಗೆ ಸಂಪರ್ಕದಲ್ಲಿದ್ದವರು ಕೊರೊನಾ ಲಕ್ಷಣ ಕಂಡು ಬಂದರೆ ತಕ್ಷಣ ಪರೀಕ್ಷಿಸಲು ಯು.ಟಿ ಖಾದರ್ ಮನವಿ ಮಾಡಿದ್ದಾರೆ.

  • ಐವಾನ್ ಡಿಸೋಜಾಗೆ ಕೊರೊನಾ ಸೋಂಕು- ಡಿಕೆಶಿ, ಖಾದರ್‌ಗೂ ಆತಂಕ

    ಐವಾನ್ ಡಿಸೋಜಾಗೆ ಕೊರೊನಾ ಸೋಂಕು- ಡಿಕೆಶಿ, ಖಾದರ್‌ಗೂ ಆತಂಕ

    – ಶುಕ್ರವಾರ ಡಿಕೆಶಿ, ಖಾದರ್ ಜೊತೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಐವಾನ್

    ಮಂಗಳೂರು: ವಿಧಾನ ಪರಿಷತ್ ಮಾಜಿ ಸದಸ್ಯ ಐವಾನ್ ಡಿಸೋಜಾ ಹಾಗೂ ಅವರ ಪತ್ನಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

    ಈ ಕುರಿತು ಅವರು ಫೇಸ್ಬುಕ್‍ನಲ್ಲಿ ಪೋಸ್ಟ್ ಮಾಡಿದ್ದು, ನನಗೆ ಹಾಗೂ ನನ್ನ ಪತ್ನಿ ಡಾ.ಕವಿತಾ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ನಮಗೆ ಯಾವುದೇ ಲಕ್ಷಣಗಳು ಇರಲಿಲ್ಲ. ಆದರೂ ಸ್ವಯಂಪ್ರೇರಿತರಾಗಿ ಗಂಟಲು ದ್ರವದ ಪರೀಕ್ಷೆ ಮಾಡಿಸಿಕೊಂಡೆವು. ಈ ವೇಳೆ ಪಾಸಿಟಿವ್ ಇರುವುದು ಪತ್ತೆಯಾಗಿದೆ. ಯಾರೂ ಆತಂಕಪಡುವ ಅಗತ್ಯವಿಲ್ಲ. ಸ್ನೇಹಿತರು ಹಾಗೂ ಬೆಂಬಲಿಗರು ನಮ್ಮನ್ನು ಭೇಟಿಯಾಗಲು ಬರಬಾರದು ಎಂದು ಮನವಿ ಮಾಡುತ್ತೇನೆ. ನಿಮ್ಮ ಪ್ರಾರ್ಥನೆ, ಹಾರೈಕೆಯೇ ನಮಗೆ ಶಕ್ತಿ ಎಂದು ಬರೆದುಕೊಂಡಿದ್ದಾರೆ.

    Myself and my wife Dr.Kavitha have been tested Corana positive.There are no symptoms but we have voluntarily gone and…

    Posted by Dr.Ivan D’Souza on Saturday, August 1, 2020

    ಐವಾನ್ ಡಿಸೋಜಾ ಪತ್ನಿ ಖಾಸಗಿ ಆಸ್ಪತ್ರೆಯ ವೈದ್ಯೆಯಾಗಿದ್ದು, ಅವರಿಗೂ ಸೋಂಕು ತಗುಲಿದೆ. ಇಷ್ಟೇ ಅಲ್ಲದೆ ಇನ್ನೂ ಭಯಾನಕ ವಿಚಾರವೆಂದರೆ ನಿನ್ನೆಯಷ್ಟೇ ನಡೆದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಚಿವ ಯು.ಟಿ.ಖಾದರ್ ಜೊತೆಗೆ ಐವಾನ್ ಡಿಸೋಜಾ ಸಹ ಭಾಗವಹಿಸಿದ್ದರು. ಹೀಗಾಗಿ ಇದೀಗ ಹಲವು ಕಾಂಗ್ರೆಸ್ ನಾಯಕರಿಗೆ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಲವರಿಗೆ ಕೊರೊನಾ ಸೋಂಕು ತಗುಲುವ ಆತಂಕ ಎದುರಾಗಿದೆ.

    ಕಾರ್ಯಕ್ರಮದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಸಹ ಐವಾನ್ ಡಿಸೋಜಾ ಅವರು ಡಿಕೆಶಿ ಜೊತೆಗಿದ್ದರು. ಅಲ್ಲದೆ ಯು.ಟಿ.ಖಾದರ್ ಪಕ್ಕದಲ್ಲಿಯೇ ನಿಂತಿದ್ದರು. ಹೀಗಾಗಿ ಐವಾನ್ ಜೊತೆಗಿದ್ದ ಕಾಂಗ್ರೆಸ್ ನಾಯಕರಿಗೆ ಕ್ವಾರಂಟೈನ್ ಟೆನ್ಷನ್ ಕಾಡುತ್ತಿದೆ. ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಚಿವರಾದ ಯು.ಟಿ.ಖಾದರ್, ರಮಾನಾಥ್ ರೈ ಸೇರಿದಂತೆ ಹಲವು ಮುಖಂಡರಿಗೆ ಆತಂಕ ಎದುರಾಗಿದೆ.

  • ಮತ್ತೆ ವಕೀಲ ವೃತ್ತಿ ಆರಂಭಿಸಿದ ಐವಾನ್ ಡಿಸೋಜಾ

    ಮತ್ತೆ ವಕೀಲ ವೃತ್ತಿ ಆರಂಭಿಸಿದ ಐವಾನ್ ಡಿಸೋಜಾ

    ಮಂಗಳೂರು: ಆರು ವರ್ಷಗಳ ಕಾಲ ವಿಧಾನಪರಿಷತ್ ಸದಸ್ಯರಾಗಿದ್ದ ಕಾಂಗ್ರೆಸ್ ಮುಖಂಡ ಐವನ್ ಡಿಸೋಜಾ ಅವರ ಸದಸ್ಯತ್ವದ ಅವಧಿ ಮುಕ್ತಾಯಗೊಂಡಿದ್ದು, ಇದೀಗ ವಕೀಲ ವೃತ್ತಿಯನ್ನು ಮತ್ತೆ ಆರಂಭಿಸಿದ್ದಾರೆ.

    ಬಹಳ ಚುರುಕಿನ ವಿಧಾನಪರಿಷತ್ ಸದಸ್ಯರಾಗಿ ಐವನ್ ಡಿಸೋಜಾ ಗುರುತಿಸಿಕೊಂಡಿದ್ದರು. ಹೀಗಾಗಿ ಪರಿಷತ್ ಸದಸ್ಯರಾದ ಎರಡನೇ ವರ್ಷದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಸರ್ಕಾರಿ ಮುಖ್ಯ ಸಚೇತಕರಾಗಿ ಕಾರ್ಯನಿರ್ವಹಿಸಿದ್ದರು. ನಂತರ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಸಮಿಶ್ರ ಸರ್ಕಾರದಲ್ಲಿ ಕಂದಾಯ ಇಲಾಖೆಯ ಸಂಸದೀಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು.

    ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 6 ವರ್ಷದ ಅವಧಿಯಲ್ಲಿ ಅತೀ ಹೆಚ್ಚು ಅಂದ್ರೆ 1,600 ಜನರಿಗೆ 6.63 ಕೋಟಿ ರೂ. ಪರಿಹಾರ ನಿಧಿ ಕೊಡಿಸಿದ ಕೀರ್ತಿ ಐವನ್ ಅವರದ್ದು. ಸದ್ಯ ಮಂಗಳೂರಿನಲ್ಲಿ ವಕೀಲ ವೃತ್ತಿ ಮತ್ತೆ ಆರಂಭಿಸಿದ್ದು, ಇದರ ಜೊತೆಗೆ ಪಕ್ಷದ ಬಲವರ್ಧನೆ ತೊಡಗಿಸಿಕೊಳ್ಳಲಿದ್ದೇನೆ ಎಂದು ಐವನ್ ಡಿಸೋಜಾ ಹೇಳಿದ್ದಾರೆ.

  • 100 ಇದ್ದ ಸದಸ್ಯರನ್ನು 104 ಮಾಡ್ಲಿಕ್ಕೆ ಆಗಿಲ್ಲ, 15 ಜನ ಶಾಸಕರನ್ನು ಆಪರೇಷನ್ ಮಾಡ್ತಾರಾ – ಐವಾನ್

    100 ಇದ್ದ ಸದಸ್ಯರನ್ನು 104 ಮಾಡ್ಲಿಕ್ಕೆ ಆಗಿಲ್ಲ, 15 ಜನ ಶಾಸಕರನ್ನು ಆಪರೇಷನ್ ಮಾಡ್ತಾರಾ – ಐವಾನ್

    ಬೀದರ್: ಬಿಬಿಎಂಪಿಯ 100 ಮಂದಿ ಬಿಜೆಪಿ ಸದಸ್ಯರ ಬಲವನ್ನು 104 ಮಾಡಲಿಕ್ಕೆ ಆಗಿಲ್ಲ. ಇನ್ನು 15 ಜನ ಶಾಸಕರನ್ನು ಬಿಜೆಪಿಯವರು ಆಪರೇಷನ್ ಮಾಡತ್ತಾರಾ ಎಂದು ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ಪ್ರಶ್ನೆ ಮಾಡಿದ್ದಾರೆ.

    ಒಂದು ವರ್ಷದಿಂದ ಎಷ್ಟು ವಿಕೆಟ್ ಹೋಗಿದೆ ಎಂದು ಪ್ರಶ್ನಿಸಿದ ಅವರು ಸಿಎಂ ಗ್ರಾಮ ವಾಸ್ತವ್ಯದ ಬಗ್ಗೆ ಜನರಲ್ಲಿ ಒಳ್ಳೆಯ ಪ್ರತಿಕ್ರಿಯೆ ಇದೆ. ಆದರೆ ಬಿಜೆಪಿಯವರು ಹಣ ವ್ಯರ್ಥ ಎಂದು ಹೇಳುತ್ತಾರೆ. ಹಾಗಾದರೆ ಮೋದಿ ಪ್ರಪಂಚ ಸುತ್ತುವುದರಿಂದ ದೇಶಕ್ಕೆ ಒಳ್ಳೆಯು ಆಗಿದ್ಯಾ ಎಂದು ಪ್ರಶ್ನಿಸಿ ತಿರುಗೇಟು ನೀಡಿದರು

    ಈ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಸಮಯ ಬಂದಾಗ ಮುಖ್ಯಮಂತ್ರಿ ಆಗುತ್ತಾರೆ ಎಂದು ತಿಳಿಸಿದರು.

  • ಮೋಸದ ಪಗಡೆಯಾಟವಲ್ಲ, ಮಾಡುವುದಾದರೆ ಧರ್ಮ ಯುದ್ಧವನ್ನೇ ಮಾಡೋಣ: ಕಟೀಲ್

    ಮೋಸದ ಪಗಡೆಯಾಟವಲ್ಲ, ಮಾಡುವುದಾದರೆ ಧರ್ಮ ಯುದ್ಧವನ್ನೇ ಮಾಡೋಣ: ಕಟೀಲ್

    ಬೆಂಗಳೂರು: ಆಡುವುದು ಮೋಸದ ಪಗಡೆಯಾಟವಲ್ಲ, ಮಾಡುವುದಾದರೆ ಧರ್ಮ ಯುದ್ಧವನ್ನೇ ಮಾಡೋಣ ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ತನ್ನ ವಿರೋಧಿಗಳಿಗೆ ತಿರುಗೇಟು ನೀಡಿದ್ದಾರೆ.

    ಪಂಪ್‍ವೆಲ್, ಮಂಗಳೂರು-ಮೂಡಬಿದಿರೆ ರಸ್ತೆ ಕಾಮಗಾರಿ ವಿಳಂಬಕ್ಕೆ ಕಾರಣ ಯಾರು ಎಂದು ಚರ್ಚೆ ಮಾಡದೇ ತಮ್ಮ ರಾಜಕೀಯ ವಾಂಛೆಗಳಿಗೋಸ್ಕರ ವಿರೋಧಿಸುವುದನ್ನು ನಿಲ್ಲಿಸಿ. ಕಳೆದ 10 ವರ್ಷಗಳಲ್ಲಿ ನಾನು ದಕ್ಷಿಣ ಕನ್ನಡಕ್ಕೆ ತಂದ 15,000 ಕೋಟಿ ಅನುದಾನದ ಬಗ್ಗೆ ಚರ್ಚೆ ಮಾಡೋಣ ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

    ಐವನ್ ಡಿ’ಸೋಜಾ ಅವರೇ, ನಾನು ಬಕೆಟ್ ಹಿಡಿದು ಹಿಂಬಾಗಿಲ ಮೂಲಕ ಅಧಿಕಾರ ಹಿಡಿದವನಲ್ಲ, ತಾಕತ್ತಿದ್ದರೆ ಮುಂದಿನ ಚುನಾವಣೆಯಲ್ಲಿ ನನ್ನನ್ನು ಎದುರಿಸಿ. ಅದನ್ನು ಬಿಟ್ಟು ನೀಚ ರಾಜಕಾರಣಕ್ಕೆ ಇಳಿದು ಬಾಯಿಗೆ ಬಂದ ಹಾಗೆ ಮಾತನಾಡಿದರೆ ಸಿಕ್ಕ ಅಧಿಕಾರವನ್ನೂ ಕಳೆದುಕೊಳ್ಳಬೇಕಾದೀತು ಎಚ್ಚರಿಕೆ ಎಂದು ಕಟೀಲು ಹೇಳಿದ್ದಾರೆ.

    9 ವರ್ಷ ಆದ್ರೂ ಪೂರ್ಣಗೊಂಡಿಲ್ಲ: ಕಾಸರಗೋಡು- ಉಡುಪಿ ಮಾರ್ಗದ ಪಂಪ್‍ವೆಲ್‍ನಲ್ಲಿ ಈ ಫ್ಲೈ ಓವರ್ 9 ವರ್ಷದಿಂದ ನಿರ್ಮಾಣವಾಗುತ್ತಿದ್ದು, 600 ಮೀ. ಉದ್ದ ಹಾಗೂ 20 ಮೀ. ಅಗಲವಿರಲಿದೆ. ನಂತೂರಿನಿಂದ ಬರುವಾಗ ಕರ್ಣಾಟಕ ಬ್ಯಾಂಕ್ ಪ್ರಧಾನ ಕಚೇರಿಯಿಂದ ಇಂಡಿಯಾನ ಆಸ್ಪತ್ರೆ ಮುಂಭಾಗದವರೆಗೆ ಫ್ಲೈ ಓವರ್ ನಿರ್ಮಾಣವಾಗಲಿದೆ.

    ಹಲವು ವರ್ಷಗಳಿಂದ ಕುಂಟುತ್ತಾ ಸಾಗುತ್ತಿರುವ ಮಂಗಳೂರಿನ ಪಂಪ್‍ವೆಲ್ ಫ್ಲೈ ಓವರ್ ಕಾಮಗಾರಿ ಬಗ್ಗೆ ಅಣಕಿಸಿರುವ ವೀಡಿಯೋ/ ಫೋಟೋಗಳು ಈಗ  ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬರುವ ಈ ಫ್ಲೈ ಓವರ್ ಕಾಮಗಾರಿ ಆರಂಭವಾಗಿ ಬರೋಬ್ಬರಿ 9 ವರ್ಷಗಳು ಸಂದಿವೆ. ಇನ್ನೂ ಕಾಮಗಾರಿ ಕುಂಟುತ್ತಾ ಸಾಗುತ್ತಿದ್ದು, ಪೂರ್ಣಗೊಳ್ಳಲು ಇನ್ನು ಎಷ್ಟು ವರ್ಷಗಳು ಬೇಕು ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಲೇ ಇದ್ದಾರೆ.

    https://twitter.com/VKrishnaTweets/status/1085817031167856640

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

     

     

  • ಸ್ಮಾರ್ಟ್ ಸಿಟಿ ಒಂದು ಡೋಂಗಿ ಕಾನ್ಸೆಪ್ಟ್- ಐವಾನ್ ಡಿಸೋಜಾ

    ಸ್ಮಾರ್ಟ್ ಸಿಟಿ ಒಂದು ಡೋಂಗಿ ಕಾನ್ಸೆಪ್ಟ್- ಐವಾನ್ ಡಿಸೋಜಾ

    ಉಡುಪಿ: ಸ್ಮಾರ್ಟ್ ಸಿಟಿ ಒಂದು ಡೋಂಗಿ ಕಾನ್ಸೆಪ್ಟ್. ಸ್ಮಾರ್ಟ್ ಸಿಟಿ ಯೋಜನೆಯಿಂದ ಯಾವುದೇ ಅಭಿವೃದ್ಧಿಯಾಗಿಲ್ಲ ಎಂದು ಕಾಂಗ್ರೆಸ್ ಮುಖಂಡ, ಪರಿಷತ್ ಸದಸ್ಯ ಐವಾನ್ ಆರೋಪಿಸಿದ್ದಾರೆ.

    ಕಾರ್ಕಳದಲ್ಲಿ ಮಾತನಾಡಿದ ಅವರು, ಸ್ಮಾರ್ಟ್ ಸಿಟಿ ಒಂದು ಕಂಪನಿ. ಜನರಿಗಾಗಿ ಇರುವ ಕಂಪನಿ ಅಲ್ಲ. ಕೇಂದ್ರ ಸರ್ಕಾರದ ನೀತಿ ಪ್ರಕಾರ ಹಣ ಮಂಜೂರು ಮಾಡಲಾಗಿದೆ ಎಂದರು. ಇದನ್ನು ಓದಿ: ಸಚಿವ ಖಾದರ್‌ಗೆ ಸ್ಮಾರ್ಟ್ ಸಿಟಿಗಿಂತ ಕಸಾಯಿಖಾನೆಯೇ ಮುಖ್ಯ: ಸುನೀಲ್ ಕುಮಾರ್

    ಸ್ಮಾರ್ಟ್ ಸಿಟಿ ಘೋಷಣೆ ಮಾಡಿದ್ದು ಕೇಂದ್ರ ಸರ್ಕಾರ. ಸ್ಮಾರ್ಟ್ ಸಿಟಿಯ ಬೋರ್ಡ್ ಡೈರೆಕ್ಟರ್ ಗಳು ಕೇಂದ್ರದವರು. ಸಂಸದ ನಳಿನ್ ಕುಮಾರ್ ಇದಕ್ಕೆ ಉತ್ತರ ಕೊಡಬೇಕು. ಮಂಗಳೂರು ಶಾಸಕ ವೇದವ್ಯಾಸ ಕಾಮತ್ ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದರು. ಇದನ್ನು ಓದಿ: ಸ್ಮಾರ್ಟ್ ಸಿಟಿಯ 15 ಕೋಟಿ ರೂ. ಕಸಾಯಿಖಾನೆಗೆ ನೀಡಿದ್ರು ಸಚಿವ ಖಾದರ್!

    ರಾಜ್ಯ ಸಕಾರದಿಂದ ಸ್ಮಾರ್ಟ್ ಸಿಟಿ ಯೋಜನೆಯಿಂದ ಯಾವುದೇ ಅಭಿವೃದ್ಧಿಯಾಗಿಲ್ಲ. ಕೇಂದ್ರ ಸರ್ಕಾರ ಜನರಿಗೆ ಮೋಸ ಮಾಡಲೆಂದು ಈ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಆರೋಪಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv