Tag: ಐರ್ಲೆಂಡ್

  • ಚೊಚ್ಚಲ ಶತಕದೊಂದಿಗೆ ಮಿಂಚಿದ ದೀಪಕ್‌ ಹೂಡಾ – ಐರ್ಲೆಂಡ್‌ ವಿರುದ್ಧ ಭಾರತಕ್ಕೆ 4 ರನ್‌ಗಳ ರೋಚಕ‌ ಜಯ

    ಚೊಚ್ಚಲ ಶತಕದೊಂದಿಗೆ ಮಿಂಚಿದ ದೀಪಕ್‌ ಹೂಡಾ – ಐರ್ಲೆಂಡ್‌ ವಿರುದ್ಧ ಭಾರತಕ್ಕೆ 4 ರನ್‌ಗಳ ರೋಚಕ‌ ಜಯ

    ಡಬ್ಲಿನ್: ಆರಂಭಿಕ ಆಟಗಾರ ದೀಪಕ್ ಹೂಡಾರ ಚೊಚ್ಚಲ ಶತಕದೊಂದಿಗೆ ಟೀಂ ಇಂಡಿಯಾವು ಐರ್ಲೆಂಡ್ ವಿರುದ್ಧ 4 ರನ್‌ಗಳ ರೋಚಕ‌ ಜಯ ಸಾಧಿಸಿದೆ.

    2 ಪಂದ್ಯಗಳ ಸರಣಿಯನ್ನು ಹಾರ್ದಿಕ್‌ ಪಾಂಡ್ಯ ಬಳಗ 2-0 ಅಂತರದಲ್ಲಿ ವಶಪಡಿಸಿಕೊಂಡಿದೆ. ಗೆಲುವಿನ ಮೂಲಕ ಸರಣಿಯನ್ನು ಕೈವಶಪಡಿಸಿಕೊಂಡ ಟೀಂ ಇಂಡಿಯಾ ಐರ್ಲೆಂಡ್ ತಂಡಕ್ಕೆ ತವರು ನೆಲದಲ್ಲಿಯೇ ವೈಟ್ ವಾಶ್ ಬಳಿದಿದೆ. ಇದನ್ನೂ ಓದಿ: ಐರ್ಲೆಂಡ್ ವಿರುದ್ಧ ಶುಭಾರಂಭ ಕಂಡ ಭಾರತ – ಆರಂಭಿಕನಾಗಿ ಕಣಕ್ಕಿಳಿದು ಮಿಂಚಿದ ದೀಪಕ್ ಹೂಡಾ

    ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ದೀಪಕ್‌ ಹೂಡಾ ಹಾಗೂ ಸಂಜು ಸ್ಯಾಮ್ಸನ್‌ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 20 ಓವರಲ್ಲಿ 7 ವಿಕೆಟ್‌ಗೆ 225 ರನ್‌ ಕಲೆ ಹಾಕಿತು. ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ಐರ್ಲೆಂಡ್‌ ದಿಟ್ಟಪ್ರದರ್ಶನ ನೀಡಿದ ಹೊರತಾಗಿಯೂ 5 ವಿಕೆಟ್‌ಗೆ 221 ರನ್‌ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು. ಇದನ್ನೂ ಓದಿ: ರೋಹಿತ್ ಶರ್ಮಾಗೆ ಕೊರೊನಾ ಪಾಸಿಟಿವ್ – ಕ್ಯಾನ್ಸಲ್ ಆಗುತ್ತಾ ಟೆಸ್ಟ್ ಪಂದ್ಯ?

    ಐರ್ಲೆಂಡ್‌ ಸ್ಫೋಟಕ ಆಟ: ಬೃಹತ್ ಮೊತ್ತದ ಗುರಿ ನೀಡಲಾಗಿ ಐರ್ಲೆಂಡ್ ಆಟಗಾರರು ಮೊದಲ ಓವರ್‌ನಿಂದರೆ ಟೀಂ ಇಂಡಿಯಾ ಬೌಲರ್‌ಗಳನ್ನು ಬೆಂಡೆತ್ತಿದರು. ಸ್ಟಿರ್ಲಿಂಗ್‌-ನಾಯಕ ಬಾಲ್ಬಿರ್ನೀ ಜೋಡಿ ಮೊದಲ ವಿಕೆಟ್‌ಗೆ 5.4 ಓವರಲ್ಲಿ 72 ರನ್‌ ಜೊತೆಯಾಟವಾಡಿತು. ಸ್ಟಿರ್ಲಿಂಗ್‌ 18 ಎಸೆತಗಳಲ್ಲಿ 40 ರನ್‌ ಚಚ್ಚಿದರೆ, ಬಾಲ್ಬಿರ್ನಿ 37 ಎಸೆತಗಳಲ್ಲಿ 3 ಬೌಂಡರಿ, 7 ಸಿಕ್ಸರ್‌ ಒಳಗೊಂಡ 60 ರನ್‌ ಸಿಡಿಸಿದರು. ಕೊನೆ 4 ಓವರಲ್ಲಿ 52 ರನ್‌ ಬೇಕಿದ್ದಾಗ ಡೊಕ್ರೆಲ್‌(16 ಎಸೆತಗಳಲ್ಲಿ 34) ಮತ್ತು ಅಡೈರ್‌(23) ಅಬ್ಬರಿಸಿದರೂ ಗೆಲುವು ತಂದುಕೊಡಲು ಆಗಲಿಲ್ಲ. 221 ರನ್‌ಗಳ ವರೆಗೆ ಹೋರಾಡಿ ಭಾರತಕ್ಕೆ ಮಂಡಿಯೂರಿತು.

    ಹೂಡಾ ಚೊಚ್ಚಲ ಶತಕ: ಸ್ಫೋಟಕ ಬ್ಯಾಟಿಂಗ್‌ ಆರಂಭಿಸಿದ ಭಾರತ ಆರಂಭದಲ್ಲೇ ಐರ್ಲೆಂಡ್‌ ವಿರುದ್ಧ ಪ್ರಾಬಲ್ಯ ಸಾಧಿಸಿತು. 2ನೇ ವಿಕೆಟ್‌ಗೆ ಜೊತೆಯಾದ ಹೂಡಾ ಮತ್ತು ಸ್ಯಾಮ್ಸನ್‌ ಬರೋಬ್ಬರಿ 176 ರನ್‌ ಜೊತೆಯಾಟವಾಡಿದರು. ಇದು ಟಿ20ಯಲ್ಲಿ ಯಾವುದೇ ವಿಕೆಟ್‌ಗೆ ಭಾರತೀಯ ಬ್ಯಾಟರ್‌ಗಳ ಗರಿಷ್ಠ ಜೊತೆಯಾಟ. ಹೂಡಾ 57 ಎಸೆತಗಳಲ್ಲಿ 9 ಬೌಂಡರಿ, 6 ಸಿಕ್ಸರ್‌ ಒಳಗೊಂಡ 104 ರನ್‌ ಬಾರಿಸಿದರು. ಈ ಮೂಲಕ ಭಾರತೀಯರ ಪೈಕಿ ಟಿ20ಯಲ್ಲಿ ಶತಕ ಬಾರಿಸಿದ 4ನೇ ಬ್ಯಾಟರ್‌ ಎನಿಸಿಕೊಂಡರು. ಇನ್ನು, ಸ್ಯಾಮ್ಸನ್‌ 42 ಎಸೆತಗಳಲ್ಲಿ 77 ರನ್‌ ಸಿಡಿಸಿ ತಮ್ಮ ಆಯ್ಕೆಯನ್ನು ಸಮರ್ಥಿಸಿದರು. ಸೂರ್ಯಕುಮಾರ್‌ 15, ಹಾರ್ದಿಕ್‌ 13 ರನ್‌ ಗಳಿಸಿದರೆ, ಮೂವರು ಶೂನ್ಯ ಸುತ್ತಿದರು.

    ಭುವನೇಶ್ವರ್‌, ಉಮ್ರಾನ್‌, ಹರ್ಷಲ್‌, ಬಿಷ್ಣೋಯಿ ತಲಾ 1 ವಿಕೆಟ್‌ ಪಡೆದು ಭಾರತವನ್ನು ಗೆಲುವಿನ ದಡಕ್ಕೆ ಸೇರಿಸಿದರು.

    Live Tv

  • ಐರ್ಲೆಂಡ್ ವಿರುದ್ಧ ಶುಭಾರಂಭ ಕಂಡ ಭಾರತ – ಆರಂಭಿಕನಾಗಿ ಕಣಕ್ಕಿಳಿದು ಮಿಂಚಿದ ದೀಪಕ್ ಹೂಡಾ

    ಐರ್ಲೆಂಡ್ ವಿರುದ್ಧ ಶುಭಾರಂಭ ಕಂಡ ಭಾರತ – ಆರಂಭಿಕನಾಗಿ ಕಣಕ್ಕಿಳಿದು ಮಿಂಚಿದ ದೀಪಕ್ ಹೂಡಾ

    ಡಬ್ಲಿನ್: ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಮಳೆಯಾಟದ ನಡುವೆ ಭಾರತ ತಂಡ 7 ವಿಕೆಟ್‍ಗಳ ಭರ್ಜರಿ ಜಯದೊಂದಿಗೆ ಸರಣಿಯಲ್ಲಿ ಶುಭಾರಂಭ ಕಂಡಿದೆ.

    ಮಳೆಯಿಂದಾಗಿ 12 ಓವರ್‍ಗಳಿಗೆ ಸೀಮಿತಗೊಂಡ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್ 4 ವಿಕೆಟ್ ನಷ್ಟಕ್ಕೆ 108 ಬಾರಿಸಿತು. 109 ರನ್‍ಗಳ ಗುರಿ ಬೆನ್ನಟ್ಟಿದ ಭಾರತ 9.2 ಓವರ್‌ಗಳ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 111 ರನ್ ಬಾರಿಸಿ ಇನ್ನೂ 16 ಎಸೆತ ಬಾಕಿ ಇರುವಂತೆ 7 ವಿಕೆಟ್‍ಗಳ ಅಂತರದ ಜಯ ದಾಖಲಿಸಿ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ಇದನ್ನೂ ಓದಿ: ರೋಹಿತ್ ಶರ್ಮಾಗೆ ಕೊರೊನಾ ಪಾಸಿಟಿವ್ – ಕ್ಯಾನ್ಸಲ್ ಆಗುತ್ತಾ ಟೆಸ್ಟ್ ಪಂದ್ಯ?

    111 ರನ್‍ಗಳ ಟಾರ್ಗೆಟ್ ಬೆನ್ನಟ್ಟಿದ ಭಾರತದ ಪರ ದೀಪಕ್ ಹೂಡಾ ಆರಂಭಿಕರಾಗಿ ಕಣಕ್ಕಿಳಿದು ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನಸೆಳೆದರು. ಇಶಾನ್ ಕಿಶನ್ 26 ರನ್ (11 ಎಸೆತ, 3 ಬೌಂಡರಿ, 2 ಸಿಕ್ಸ್), ಹಾರ್ದಿಕ್ ಪಾಂಡ್ಯ 24 ರನ್ (12 ಎಸೆತ, 1 ಬೌಂಡರಿ, 3 ಸಿಕ್ಸ್) ಸಿಡಿಸಿ ತಂಡಕ್ಕೆ ನೆರವಾದರು. ಇತ್ತ ಆರಂಭಿಕರಾಗಿ ಕಣಕ್ಕಿಳಿದು ಕಡೆಯ ವರೆಗೆ ಹೋರಾಡಿದ ದೀಪಕ್ ಹೂಡಾ ಅಜೇಯ 47 ರನ್ (29 ಎಸೆತ, 6 ಬೌಂಡರಿ, 2 ಸಿಕ್ಸ್) ಚಚ್ಚಿ ತಂಡಕ್ಕೆ ಜಯ ತಂದುಕೊಟ್ಟರು. ಇದನ್ನೂ ಓದಿ: ಔಟ್ ಮಾಡಿದ ಬೌಲರ್‌ಗೆ ಮಧ್ಯದ ಬೆರಳು ತೋರಿಸಿದ CSK ಆಟಗಾರ – ಟಿಎನ್‍ಪಿಎಲ್‍ನಲ್ಲಿ ಕಿರಿಕ್

    ಈ ಮೊದಲು ಐರ್ಲೆಂಡ್ ತಂಡದ ಆರಂಭಿಕರು ಬ್ಯಾಟಿಂಗ್‍ನಲ್ಲಿ ಮಿಂಚಲು ವಿಫಲರಾದರು. ಆ ಬಳಿಕ ಮಧ್ಯಮ ಕ್ರಮಾಂಕದಲ್ಲಿ ಹ್ಯಾರಿ ಟೆಕ್ಟರ್ ಸಿಡಿಲ್ಲಬ್ಬರ ಬ್ಯಾಟಿಂಗ್ ಮೂಲಕ ಐರ್ಲೆಂಡ್‍ಗೆ ನೆರವಾದರು. ಹ್ಯಾರಿ ಟೆಕ್ಟರ್ ಅಜೇಯ 64 ರನ್ (33 ಎಸೆತ, 6 ಬೌಂಡರಿ, 3 ಸಿಕ್ಸ್) ಬಾರಿಸಿದ ಪರಿಣಾಮ ಐರ್ಲೆಂಡ್ ತಂಡ 12 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 108 ರನ್ ಪೇರಿಸುವಂತಾಯಿತು.

    Live Tv

  • ಐರ್ಲೆಂಡ್ ವಿರುದ್ಧದ ಸರಣಿಗೆ ಟೀಂ ಇಂಡಿಯಾ ಪ್ರಕಟ – ಹಾರ್ದಿಕ್ ಪಾಂಡ್ಯ ನಾಯಕ, ತ್ರಿಪಾಠಿಗೆ ಕರೆ

    ಐರ್ಲೆಂಡ್ ವಿರುದ್ಧದ ಸರಣಿಗೆ ಟೀಂ ಇಂಡಿಯಾ ಪ್ರಕಟ – ಹಾರ್ದಿಕ್ ಪಾಂಡ್ಯ ನಾಯಕ, ತ್ರಿಪಾಠಿಗೆ ಕರೆ

    ಮುಂಬೈ: ಐರ್ಲೆಂಡ್ ವಿರುದ್ಧ ನಡೆಯಲಿರುವ ಟಿ20 ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಹಾರ್ದಿಕ್ ಪಾಂಡ್ಯ ತಂಡವನ್ನು ಮುನ್ನಡೆಸಲಿದ್ದಾರೆ.

    ಭುವನೇಶ್ವರ್ ಕುಮಾರ್ ತಂಡದ ಉಪನಾಯಕರಾಗಿ ಆಯ್ಕೆಯಾಗಿದ್ದಾರೆ. ಜೊತೆಗೆ ಐಪಿಎಲ್‍ನಲ್ಲಿ ಬ್ಯಾಟಿಂಗ್‍ನಲ್ಲಿ ಮಿಂಚುಹರಿಸಿದ ರಾಹುಲ್ ತ್ರಿಪಾಠಿಗೆ ರಾಷ್ಟ್ರೀಯ ತಂಡದ ಪರ ಆಡಲು ಕರೆ ಬಂದಿದೆ. ಜೊತೆಗೆ ಆಫ್ರಿಕಾ ಸರಣಿಯಿಂದ ಅವಕಾಶ ವಂಚಿತರಾಗಿದ್ದ ಸಂಜು ಸ್ಯಾಮ್ಸನ್‍ಗೆ ತಂಡದಲ್ಲಿ ಸ್ಥಾನ ಕಲ್ಪಿಸಿಕೊಡಲಾಗಿದೆ. ಇನ್ನುಳಿದಂತೆ ಬಹುತೇಕ ಯುವ ಪಡೆಯನ್ನು ಆಯ್ಕೆ ಮಾಡಲಾಗಿದೆ. ಇದನ್ನೂ ಓದಿ: ಸರಣಿ ಗೆದ್ದ ಇಂಗ್ಲೆಂಡ್‍ಗೆ ಶಾಕ್ – ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಪಾಯಿಂಟ್ ಕಡಿತ

    ಗಾಯಳುವಾಗಿ ತಂಡದಿಂದ ಹೊರಗುಳಿದಿರುವ ಸೂರ್ಯಕುಮಾರ್ ಯಾದವ್ ತಂಡಕ್ಕೆ ವಾಪಸ್ಸಾಗಿದ್ದು, ತಂಡದ ಹಿರಿಯ ಆಟಗಾರನಾಗಿ ದಿನೇಶ್ ಕಾರ್ತಿಕ್ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: IPL ಈಗ ವಿಶ್ವದ ದುಬಾರಿ ಲೀಗ್ – ಆದರೂ ಒಲಿಂಪಿಕ್ಸ್‌ನಲ್ಲಿ ಯಾಕಿಲ್ಲ?

    ತಂಡ ಹೀಗಿದೆ:
    ಹಾರ್ದಿಕ್ ಪಾಂಡ್ಯ (C), ಭುವನೇಶ್ವರ್ ಕುಮಾರ್ (VC), ಇಶಾನ್ ಕಿಶನ್, ಋತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ದಿನೇಶ್ ಕಾರ್ತಿಕ್ (WK), ಯಜುವೇಂದ್ರ ಚಹಲ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಹರ್ಷಲ್ ಪಟೇಲ್, ಅವೇಶ್ ಖಾನ್, ಹರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್

    Live Tv

  • ಮಹಿಳಾ ಕ್ರಿಕೆಟ್ ಚಾಂಪಿಯನ್‍ಷಿಪ್‍ಗೆ ಮಾನ್ಯತೆ ಪಡೆದ ಐರ್ಲೆಂಡ್, ಬಾಂಗ್ಲಾದೇಶ

    ಮಹಿಳಾ ಕ್ರಿಕೆಟ್ ಚಾಂಪಿಯನ್‍ಷಿಪ್‍ಗೆ ಮಾನ್ಯತೆ ಪಡೆದ ಐರ್ಲೆಂಡ್, ಬಾಂಗ್ಲಾದೇಶ

    ದುಬೈ: ಐಸಿಸಿ ಮಹಿಳಾ ಚಾಂಪಿಯನ್‍ಶಿಪ್‍ನ ಮುಂದಿನ ಆವೃತ್ತಿಯಲ್ಲಿ ಎರಡು ಹೊಸ ತಂಡಗಳು ಕಾಣಿಸಿಕೊಳ್ಳಲಿದ್ದು, ಇದು 10-ತಂಡಗಳ ಲೀಗ್ ಆಗಲಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಬುಧವಾರ ತಿಳಿಸಿದೆ.

    ಐರ್ಲೆಂಡ್ ಮತ್ತು ಬಾಂಗ್ಲಾದೇಶ ತಂಡವೂ ಏಕದಿನ ಕ್ರಿಕೆಟ್ ರ‍್ಯಾಕಿಂಗ್‌ನಲ್ಲಿ ಕ್ರಮವಾಗಿ 9 ಮತ್ತು 10 ಸ್ಥಾನದಲ್ಲಿವೆ. 2022-2025ನೇ ಸಾಲಿನ ವೇಳಾಪಟ್ಟಿಯಲ್ಲಿ ಈ ಎರಡು ತಂಡಗಳಿಗೆ ಅವಕಾಶ ನೀಡಲಾಗಿದೆ. ಇದನ್ನೂ ಓದಿ: ಪಾಟಿದರ್ ಸ್ಫೋಟಕ ಶತಕ, ಡಿ.ಕೆ ಅಬ್ಬರ – ಅಹಮದಾಬಾದ್‌ಗೆ ಹಾರಿದ ಬೆಂಗ್ಳೂರು

    ಇದರೊಂದಿಗೆ ಆಸ್ಟೇಲಿಯಾ, ಇಂಗ್ಲೆಂಡ್, ಇಂಡಿಯಾ, ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ವೆಸ್ಟ್ ಇಂಡಿಸ್ ತಂಡಗಳೊಂದಿಗೆ 2025ರ ಐಸಿಸಿ ಮಹಿಳಾ ವಿಶ್ವಕಪ್ ಆಡಲು ಅರ್ಹತೆ ಪಡೆದುಕೊಂಡಿವೆ.

    ಮುಂಬರುವ 2025ರ ಐಸಿಸಿ ಮಹಿಳಾ ವಿಶ್ವಕಪ್‍ನಲ್ಲಿ ಪ್ರತಿ ತಂಡವೂ ಎಂಟು ತ್ರಿಕೋನ ಸರಣಿಗಳನ್ನು ಆಡಲಿವೆ. ಅದರಲ್ಲಿ ನಾಲ್ಕು ತವರು ಮತ್ತು ನಾಲ್ಕು ವಿದೇಶಗಳಲ್ಲಿ ನಡೆಯಲಿವೆ. ಇದರಲ್ಲಿ ಮೊದಲ ಐದು ಸ್ಥಾನ ಪಡೆದ ತಂಡಗಳು ಮತ್ತು ಆತಿಥೇಯ ಬಳಗವು 2025ರ ವಿಶ್ವಕಪ್ ಟೂರ್ನಿಗೆ ನೇರ ಅರ್ಹತೆ ಗಿಟ್ಟಿಸಿಕೊಳ್ಳಲಿವೆ. ಉಳಿದ ತಂಡಗಳು ಐಸಿಸಿ ಮಹಿಳಾ ವಿಶ್ವಕಪ್ ಕ್ವಾಲಿಫೈಯರ್‌ನಲ್ಲಿ ಸೆಣಸಿ ಅರ್ಹತೆ ಪಡೆಯಬೇಕು ಎಂದು ಆಡಳಿತ ಸಮಿತಿಯು ತಿಳಿಸಿದೆ. ಇದನ್ನೂ ಓದಿ: ಮತ್ತೆ ವಿಷ ಚಿಮ್ಮಿದ ಶಾಹಿದ್ ಅಫ್ರಿದಿ

    ಐಸಿಸಿ ಮಹಿಳಾ ಚಾಂಪಿಯನ್‍ಶಿಪ್ ಲೀಗ್ ಇದೇ ಜೂನ್ 2022 ರಂದು ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವಿನ ಸರಣಿಯೊಂದಿಗೆ ಕರಾಚಿಯಲ್ಲಿ ಪ್ರಾರಂಭವಾಗಲಿದೆ.

  • ಪತಿಯನ್ನು ಹರಾಜಿಗಿಟ್ಟು, ಯಾವುದೇ ಕಾರಣಕ್ಕೂ Exchange  ಇಲ್ಲವೆಂದ ಪತ್ನಿ..!

    ಪತಿಯನ್ನು ಹರಾಜಿಗಿಟ್ಟು, ಯಾವುದೇ ಕಾರಣಕ್ಕೂ Exchange ಇಲ್ಲವೆಂದ ಪತ್ನಿ..!

    ವೆಲ್ಲಿಂಗ್ಟನ್: ಐರಿಶ್ ಮಹಿಳೆಯೊಬ್ಬರು ಗಂಡನನ್ನು ಮಾರಾಟಕ್ಕಿಟ್ಟು, ಎಕ್ಸ್​ಚೇಂಜ್ ಇಲ್ಲ ಎಂದು ಬರೆದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಂಡಿದ್ದಾಳೆ. ವಿಷಯ ತಿಳಿದ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

    ಐರಿಶ್ ಮಹಿಳೆಯೊಬ್ಬರು ತನ್ನ ಪತಿಯನ್ನು ಹರಾಜು ವೆಬ್‍ನಲ್ಲಿ ‘ಮಾರಾಟ’ ಮಾಡುತ್ತಿದ್ದು, ಇವರನ್ನು ಖರೀದಿಸಿದ ನಂತರ ಯಾವುದೇ ರೀತಿಯಲ್ಲಿ ಎಕ್ಸ್​ಚೇಂಜ್ ಇಲ್ಲ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ನಲ್ಲಿ ಪತಿಯ ಸಂಪೂರ್ಣ ವಿವರವಿದ್ದು, ನನ್ನ ಪತಿಯ ಹೆಸರು ಜಾನ್, ಎತ್ತರ 6.1, 37 ವರ್ಷ, ಕೃಷಿಕ, ಶೂಟಿಂಗ್ ಮತ್ತು ಮೀನುಗಾರಿಕೆ ಸಹವರ್ತಿ ಎಂದು ಬರೆದಿದ್ದಾರೆ. ಪೋಸ್ಟ್ ನೋಡಿದ ನೆಟ್ಟಿಗರು ಏನಿದು ವಿಚಿತ್ರ ಎಂದು ಕಮೆಂಟ್ ಮಾಡುತ್ತಿದ್ದಾರೆ. ಮತ್ತೆ ಕೆಲವರು ಜಾನ್‍ನನ್ನು ಖರೀದಿಸಲು ಆಸಕ್ತಿಯನ್ನು ತೋರಿಸಿದ್ದಾರೆ. ಇದನ್ನೂ ಓದಿ: ಕರಡಿ ಬಾಯಿಗೆ 3 ವರ್ಷದ ಮಗಳನ್ನೇ ನೂಕಿದ ತಾಯಿ!

    ಕಾರಣವೇನು?
    ಐರಿಶ್ ಮಹಿಳೆ ಲಿಂಡಾ ಮ್ಯಾಕ್‍ಅಲಿಸ್ಟರ್ ಟ್ರೇಡ್ ಮಿ ಎಂಬ ವೆಬ್ ನಲ್ಲಿ ಪತಿಯನ್ನು ಮಾರಾಟ ಮಾಡಲು ಹೊರಟಿದ್ದಾರೆ. ಜಾನ್ ಮ್ಯಾಕ್‍ಅಲಿಸ್ಟರ್, ನನ್ನನ್ನು ಮತ್ತು ಮಕ್ಕಳನ್ನು ಮನೆಯಲ್ಲೇ ಬಿಟ್ಟು, ಮೀನುಗಾರಿಕೆ ಮಾಡಿ ಎಂದು ಹೇಳಿ ಹೊರಟು ಹೋಗಿದ್ದಾರೆ ಎಂದು ಬರೆದುಕೊಂಡು ಜಾಹೀರಾತು ಕೊಟ್ಟಿದ್ದಾರೆ.

    ಈ ಪಟ್ಟಿಯಲ್ಲಿ ಲಿಂಡಾ, ಜಾನ್ ಬಗ್ಗೆ ಪೂರ್ಣ ವಿವರವನ್ನು ಕೊಟ್ಟಿದ್ದಾರೆ. ಇವರಿಗೆ ಶೂಟಿಂಗ್ ಮತ್ತು ಮೀನುಗಾರಿಕೆಯ ಹಲವು ಮಾಲೀಕರ ಪರಿಚಯವಿದೆ. ಆದರೆ ನೀವು ಇವರನ್ನು ಚೆನ್ನಾಗಿ ನೋಡಿಕೊಂಡರೆ ನಿಮಗೆ ನಿಷ್ಠರಾಗಿರುತ್ತಾರೆ ಎಂದು ಬರೆದುಕೊಂಡಿದ್ದಾರೆ. ಜಾನ್ ಅವರನ್ನು ಖರೀದಿಸಿದ ಮೇಲೆ ಯಾವುದೇ ರಿಟನ್ರ್ಸ್ ಅಥವಾ ವಿನಿಮಯವಿಲ್ಲ ಎಂದು ಜಾಹೀರಾತಿನಲ್ಲಿ ತಿಳಿಸಿದ್ದಾರೆ.

    ಜಾನ್ ಹೆಚ್ಚು ಕೆಲಸದ ಕಡೆಯೇ ಗಮನ ಕೊಡುವುದು ನನ್ನನ್ನು ಕಾಡುತ್ತಿದೆ. ಮಕ್ಕಳಿಗೆ ರಜೆ ಇದ್ದಾಗಲೂ, ಮನೆಯಲ್ಲಿ ಮಲಗಿದ್ದಾಗಲೂ ಅವರು ಕೆಲಸದ ಬಗ್ಗೆಯೇ ಯೋಚಿಸುತ್ತಿರುತ್ತಾರೆ ಎಂದು ಜಾಹೀರಾತಿನಲ್ಲಿ ವಿವರಿಸಿದ್ದಾರೆ. ದಂಪತಿ 2019 ರಲ್ಲಿ ಐರ್ಲೆಂಡ್‍ನಲ್ಲಿ ವಿವಾಹವಾದ್ದು, ಇವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.

    ಜಾನ್ ಅವರಿಗೆ ವಿಷಯ ಕುರಿತು ಯಾವುದೇ ಮಾಹಿತಿ ಇರಲಿಲ್ಲ. ಆದರೆ ಜಾನ್ ಸ್ನೇಹಿತರು, ನಿನ್ನನ್ನು ಲಂಡಾ ಹರಾಜಿಗೆ ಇಟ್ಟಿದ್ದಾಳೆ ಎಂದು ಜಾನ್‍ಗೆ ತಿಳಿಸಿದ್ದಾರೆ. ವಿಷಯ ತಿಳಿದ ಜಾನ್, ಏನಿಂದು ತಮಾಷೆ ಎಂದು ನಕ್ಕಿದ್ದಾರೆ ಎಂದು ವರದಿಗಳ ಪ್ರಕಾರ ತಿಳಿದುಬಂದಿದೆ.

    ಲಿಂಡಾ ಅವರ ಪಟ್ಟಿಯಲ್ಲಿ ಜಾನ್ ಬಗ್ಗೆ ಪೂರ್ಣ ವಿವರವಿದ್ದು, ಬಿಡ್ಡಿಂಗ್ ಕೆಲವೇ ಗಂಟೆಗಳಲ್ಲಿ 5,000 ರೂ. ಗೆ ಏರಿತು. ಖರೀದಿದಾರರು ತಮ್ಮ ಗಂಡನಾಗಬಹುದಾದ ಜಾನ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಕುತೂಹಲ ವ್ಯಕ್ತಪಡಿಸಿದರು. ಜಾನ್ ಅವರಿಗೆ ಯಾವುದದರೂ ದುರ್ಗುಣಗಳಿದೆಯಾ ಎಂದು ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಇದಕ್ಕೆಲ್ಲ ಲಿಂಡಾ ತಾಳ್ಮೆಯಿಂದ ಉತ್ತರ ಕೊಟ್ಟಿದ್ದಾರೆ. ಇದನ್ನೂ ಓದಿ: ಮುಂದಿನ ವಾರ ಕನ್ನಡಪರ ಸಂಘಟನೆಗಳ ಸಭೆ ಕರೆದ ಹೆಚ್.ಡಿ.ಕುಮಾರಸ್ವಾಮಿ

    ಲಿಂಡಾ ಅವರು ಹರಾಜು ವೆಬ್‍ನ ಕೆಲವು ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಟ್ರೇಡ್ ಮಿ ಪೋಸ್ಟ್ ತೆಗೆದುಹಾಕಿದೆ. ಈ ಕುರಿತು ಪ್ರತಿಕ್ರಿಯಿಸಿದ ಟ್ರೇಡ್ ಮಿ ಸಿಬ್ಬಂದಿ, ಸಂಗಾತಿಯನ್ನೆ ಮಾರಾಟಕ್ಕೆ ಇಟ್ಟಿದ್ದು ಇದೇ ಮೊದಲಬಾರಿ. ನಮಗೂ ಇದು ವಿಚಿತ್ರ ಎನ್ನಿಸಿದೆ. ನಾವು ಜನರ ಮಸ್ತಿ-ಮೋಜನ್ನು ಇಷ್ಟಪಡುತ್ತೇವೆ. ಟ್ರೇಡ್ ಮಿ ಮೂಲಕ ಜನರು ಉತ್ತಮ ಅನುಭವವನ್ನು ಪಡೆದುಕೊಂಡಿದ್ದಾರೆ ಎಂದಿದ್ದಾರೆ

  • ಪಿಂಚಣಿ ಪಡೆಯಲು ಚಿಕ್ಕಪ್ಪನ ಶವವನ್ನ ಪೋಸ್ಟ್ ಆಫೀಸ್‍ಗೇ ತಂದ!

    ಪಿಂಚಣಿ ಪಡೆಯಲು ಚಿಕ್ಕಪ್ಪನ ಶವವನ್ನ ಪೋಸ್ಟ್ ಆಫೀಸ್‍ಗೇ ತಂದ!

    ಡಬ್ಲಿನ್: ವ್ಯಕ್ತಿಯೊಬ್ಬ ತನ್ನ ಚಿಕ್ಕಪ್ಪನ ಶವವನ್ನು ಅಂಚೆ ಕಛೇರಿಗೆ ತೆಗೆದುಕೊಂಡು ಬಂದು ಪಿಂಚಣಿಯನ್ನು ಕೇಳಿರುವ ಘಟನೆ ಐರ್ಲೆಂಡ್‍ನಲ್ಲಿ ನಡೆದಿದೆ.

    ಪಿಂಚಣಿ ಹಣ ಪಡೆಯಬೇಕಾದರೆ ಅವರೇ ಕಛೇರಿಗೆ ಬರಬೇಕು ಎಂದು ಸಿಬ್ಬಂದಿ ತಿಳಿಸಿದ್ದರಿಂದ ವ್ಯಕ್ತಿಯೊಬ್ಬ ತನ್ನ ಚಿಕ್ಕಪ್ಪನನ್ನು ಕರೆದುಕೊಂಡು ಅಂಚೆ ಕಛೇರಿಗೆ ಬಂದಿದ್ದಾನೆ. ಆದರೆ ಸಿಬ್ಬಂದಿಗೆ ಆ ವ್ಯಕ್ತಿ ಬದುಕಿಲ್ಲ ಎಂದು ತಿಳಿದು, ಇವರು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಆಗ ಆ ವ್ಯಕ್ತಿ, ‘ಅವರು ಮೃತಪಟ್ಟಿದ್ದರೆಂದು ನನಗೆ ತಿಳಿದಿರಲಿಲ್ಲ’ ಎಂದು ಶಾಕ್ ಆಗಿದ್ದಾರೆ. ಇದನ್ನೂ ಓದಿ: ಜೂಹಿ ಚಾವ್ಲಾ ದಂಡವನ್ನು 20 ಲಕ್ಷ ರೂ.ದಿಂದ 2 ಲಕ್ಷಕ್ಕೆ ಇಳಿಸಿದ ಹೈಕೋರ್ಟ್!

    Carlow body: Inquiry after 'dead man' taken into post office - BBC News

    ಯಾರಿದು?
    ಶುಕ್ರವಾರ ಬೆಳಗ್ಗೆ ಐರ್ಲೆಂಡ್‍ನ ಕೌಂಟಿ ಕಾರ್ಲೋದಲ್ಲಿನ ಅಂಚೆ ಕಚೇರಿಗೆ 40 ವರ್ಷ ವಯಸ್ಸಿ ಡೆಕ್ಲಾನ್ ಹಾಘ್ನಿ ಅವರು 66 ವರ್ಷದ ಪೀಡರ್ ಡಾಯ್ಲ್ ಅವರನ್ನು ಪಿಂಚಣಿ ಪಡೆಯಲು ಕರೆದುಕೊಂಡು ಹೋಗಿದ್ದರು. ಈ ವೇಳೆ ಪೀಡರ್ ಡಾಯ್ಲ್ ಮೃತಪಟ್ಟಿದ್ದಾರೆ ಎಂದು ಸಿಬ್ಬಂದಿ ಕಂಡುಹಿಡಿದಿದ್ದಾನೆ. ನಂತರ ಈ ವಿಚಾರವನ್ನು ಕಛೇರಿಗೆ ತಿಳಿಸಿದ್ದಾನೆ. ಆಗ ಡೆಕ್ಲಾನ್ ಹಾಘ್ನಿ ನನಗೆ ಈ ವಿಚಾರ ಗೊತ್ತೇ ಇಲ್ಲ ಎಂದು ಶಾಕ್ ಆಗಿದ್ದಾರೆ.

    Irishman who brought his dead uncle into a post office to collect his  pension insists he was alive | Daily Mail Online

    ಸಿಬ್ಬಂದಿ ಇವರು ಹಣಕ್ಕೆ ಬೇಕೆಂದು ಈ ರೀತಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಆಗ ಹಾಘ್ನಿ ಅವರು, ನನಗೆ ನನ್ನ ಚಿಕ್ಕಪ್ಪ ಮೃತಪಟ್ಟಿರುವುದು ತಿಳಿದಿರಲಿಲ್ಲ. ಈ ರೀತಿ ಮಾಡಲು ನಾನು ಮೂರ್ಖ ಅಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ನನ್ನ ಚಿಕ್ಕಪ್ಪ ದಾರಿಯಲ್ಲಿ ನನ್ನ ತೋಳುಗಳಲ್ಲಿ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದು, ಈ ವಿಷಯವನ್ನು ಹಾಘ್ನಿ ಅವರೇ ಪೊಲೀಸರಿಗೆ ತಿಳಿಸಿದ್ದಾರೆ. ಈ ಹಿನ್ನೆಲೆ ಐರಿಶ್ ಪೊಲೀಸರಿಗೆ ಹಾಘ್ನಿ ಅವರನ್ನು ಬಂಧಿಸಿಲ್ಲ.

    ಆದರೆ ಗ್ರಾಮದ ಜನರೆಲ್ಲ ಹಾಘ್ನಿಯೇ ತನ್ನ ಚಿಕ್ಕಪ್ಪನನ್ನು ಕೊಲೆ ಮಾಡಿದ್ದಾನೆ ಎಂದು ನಂಬಿದ್ದು, ಎಲ್ಲರೂ ಅವರ ಬಗ್ಗೆಯೇ ಮಾತನಾಡಿಕೊಳ್ಳುತ್ತಿದ್ದಾರೆ. ಈ ವಿಚಾರವಾಗಿ ಮೌನ ಮುರಿದ ಹಾಘ್ನಿ, ನನ್ನ ಚಿಕ್ಕಪ್ಪನ ಬಳಿಯೇ ನಾನು ಏಕೆ ಕಳ್ಳತನ ಮಾಡಲಿ? ಮೃತ ವ್ಯಕ್ತಿಯ ಪಿಂಚಣಿ ಕೇಳಲು ನಾನೇನು ಮೂರ್ಖನಲ್ಲ ಎಂದು ತನ್ನ ನೋವನ್ನು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಸಾಲ ವಸೂಲಿಯಲ್ಲೂ ಗುರು ರಾಘವೇಂದ್ರ ಬ್ಯಾಂಕ್ ವಂಚನೆ: ಎಎಪಿ ಆರೋಪ

    Hunt for men who brought dead body into post office in bizarre bid to collect pension - World News - Mirror Online

    ಸ್ಟೇಪಲ್‍ಸ್ಟೌನ್ ರಸ್ತೆಯಲ್ಲಿರುವ ಪೋಸ್ಟ್ ಆಫೀಸ್‍ಗೆ ಹೋಗುವ ದಾರಿಯಲ್ಲಿ ನನ್ನ ಚಿಕ್ಕಪ್ಪ ಡಾಯ್ಲ್ ಹೃದಯಾಘಾತದಿಂದ ಸಾವನ್ನಪ್ಪಿರಬಹುದು. ಅವರು ಮನೆಯಿಂದ ಹೊರಡುವಾಗ ಸರಿಯಾಗಿಯೇ ಇದ್ದರು. ಆದರೆ ಹೇಗೆ ಮೃತಪಟ್ಟಿದ್ದಾರೆ ಎಂದು ನನಗೆ ತಿಳಿದಿಲ್ಲ. ಅವರು ಈ ಹಿಂದೆ ಹೃದಯಾಘಾತದಿಂದ ಬಳಲುತ್ತಿದ್ದರು. ಆದರೆ ಕಛೇರಿಗೆ ನಾವು ಅವರನ್ನು ಕರೆದುಕೊಂಡು ಹೋಗುವವರೆಗೂ ಅವರು ಮೃತಪಟ್ಟಿದ್ದಾರೆ ಎಂದು ನನಗೆ ತಿಳಿದಿರಲಿಲ್ಲ ಎಂದು ಹೇಳಿ ಶಾಕ್ ಆಗಿದ್ದಾರೆ.

  • ಜಾಹೀರಾತಿನಲ್ಲಿ ಸಹಾಯವಾಣಿ ನಂಬರ್ ತಪ್ಪಾಗಿದ್ದಕ್ಕೆ ಮಹಿಳೆಗೆ ಎಡಬಿಡದೇ ಬಂತು 4,500 ಫೋನ್‌ ಕಾಲ್‌!

    ಜಾಹೀರಾತಿನಲ್ಲಿ ಸಹಾಯವಾಣಿ ನಂಬರ್ ತಪ್ಪಾಗಿದ್ದಕ್ಕೆ ಮಹಿಳೆಗೆ ಎಡಬಿಡದೇ ಬಂತು 4,500 ಫೋನ್‌ ಕಾಲ್‌!

    ಡಬ್ಲಿನ್: ಉತ್ತರ ಐರ್ಲೆಂಡ್ (ಎನ್‌ಐ) ಸರ್ಕಾರಿ ಅಧಿಕಾರಿಗಳ ಯಡವಟ್ಟಿನಿಂದಾಗಿ ಮಹಿಳೆಯೊಬ್ಬರಿಗೆ ಎಡಬಿಡದೇ 4,500 ಕರೆಗಳು ಬಂದಿರುವ ಘಟನೆ ನಡೆದಿದೆ.

    ಸರ್ಕಾರಿ ಯೋಜನೆಯೊಂದರ ಪ್ರಚಾರಕ್ಕಾಗಿ ಜಾಹೀರಾತು ನೀಡಲಾಗಿತ್ತು. ಮಾಹಿತಿಗೆ ಸಹಾಯವಾಣಿ ನಂಬರ್ ಹಾಕುವಾಗ ಒಂದು ಸಂಖ್ಯೆ ತಪ್ಪಾಗಿದೆ. ಪರಿಣಾಮವಾಗಿ ಮಹಿಳೆಯೊಬ್ಬರ ಫೋನ್‌ಗೆ 4,500 ಕ್ಕೂ ಹೆಚ್ಚು ಕರೆಗಳು ಬಂದಿದ್ದು, ದಿಗ್ಭ್ರಮೆಗೊಳಗಾಗಿದ್ದಾರೆ. ಬಿಡುವಿಲ್ಲದೇ ಬಂದ ಕರೆಗಳು ಮಹಿಳೆಗೆ ತಲೆನೋವಾಗಿ ಪರಿಣಮಿಸಿದೆ. ಇದನ್ನೂ ಓದಿ: ಅಖಿಲೇಶ್ ಯಾದವ್‍ಗೆ ಕೊರೊನಾ ನೆಗೆಟಿವ್ – ಪತ್ನಿ, ಮಗಳಿಗೆ ಪಾಸಿಟಿವ್

    ಕೋವಿಡ್ ನಂತರ ಆರ್ಥಿಕ ಚೇತರಿಕೆ ಉದ್ದೇಶದಿಂದಾಗಿ ಸ್ಪೆಂಡ್ ಲೋಕಲ್ ಕಾರ್ಡ್ ಯೋಜನೆಯನ್ನು ಎನ್‌ಐ ರೂಪಿಸಿತ್ತು. ಸಣ್ಣಪುಟ್ಟ ವ್ಯಾಪಾರಗಳಿಗೆ ಹಣ ವಿನಿಯೋಗಿಸಲು ಅರ್ಹರಿಗೆ ಸ್ಪೆಂಡ್ ಲೋಕಲ್ ಪ್ರೀಪೇಯ್ಡ್ ಕಾರ್ಡ್ ನೀಡುವ ಯೋಜನೆ ಇದಾಗಿದೆ. ಈ ಯೋಜನೆ ಸದುಪಯೋಗಪಡಿಸಿಕೊಳ್ಳಲೆಂದು ಜಾಹೀರಾತು ನೀಡಿ ಸಹಾಯವಾಣಿ ನಂಬರ್ ಹಾಕಲಾಗಿತ್ತು. ಸಹಾಯವಾಣಿಯ ಒಂದು ಸಂಖ್ಯೆ ತಪ್ಪಾಗಿ ಮಹಿಳೆಯ ನಂಬರ್ ನಮೂದಾಗಿದೆ. ಸಹಾಯವಾಣಿ ಎಂದು ತಿಳಿದ ಸಾವಿರಾರು ಜನರು ಆ ನಂಬರ್‌ಗೆ ಕರೆ ಮಾಡಿದ್ದಾರೆ.

    ನಿರಂತರವಾಗಿ ಬಂದ ಕರೆಗಳಿಂದ ಮಹಿಳೆ ಆತಂಕಕ್ಕೆ ಒಳಗಾಗಿದ್ದಾರೆ. ಏನು ನಡಿಯುತ್ತಿದೆ ಎಂಬುದು ತಿಳಿಯದೇ ಮಹಿಳೆ, ಕೊನೆಗೆ ಕರೆ ಮಾಡಿದ ವ್ಯಕ್ತಿಯೊಬ್ಬರಲ್ಲಿ ವಿಚಾರಿಸಿದ್ದಾರೆ. ಆ ವ್ಯಕ್ತಿ ತಮಗೆ ಬಂದಿರುವ ಮೇಲ್ ಅನ್ನು ಮಹಿಳೆಗೆ ಫಾರ್‌ವರ್ಡ್ ಮಾಡಿದಾಗ ವಿಷಯ ಗೊತ್ತಾಗಿದೆ. ಇದನ್ನೂ ಓದಿ: ಓಮಿಕ್ರಾನ್‌ ಬಗ್ಗೆ ಸಿಕ್ತು ಗುಡ್‌ ನ್ಯೂಸ್‌ – ಪ್ರಾಥಮಿಕ ಅಧ್ಯಯನ ವರದಿಗಳು ಬಹಿರಂಗ

    ಅಧಿಕಾರಿಗಳ ಮಾಡಿದ ಯಡವಟ್ಟಿನಿಂದಾಗಿ ಮಹಿಳೆಗೆ ಕಿರಿಕಿರಿ ಎನಿಸಿದೆ. ಸಾಕಷ್ಟು ಕರೆಗಳನ್ನು ಸ್ವೀಕರಿಸಿದ ಮಹಿಳೆಗೆ ನಂತರದಲ್ಲಿ ಸ್ಪೆಂಡ್ ಲೋಕಲ್ ಸ್ಕೀಮ್‌ನ ನಂಬರ್ ಹಾಗೂ ತನ್ನ ಫೋನ್ ನಂಬರ್‌ನಲ್ಲಿ ಕೇವಲ ಒಂದು ಅಂಕಿ ಮಾತ್ರ ವ್ಯತ್ಯಾಸವಿರುವುದು ಗೊತ್ತಾಗಿದೆ.

    ತಾವು ಮಾಡಿದ ಪ್ರಮಾದಕ್ಕಾಗಿ ಅಧಿಕಾರಿಗಳು ಮಹಿಳೆ ಬಳಿ ಕ್ಷಮೆಯಾಚಿಸಿದ್ದಾರೆ.

  • ಐರ್ಲೆಂಡ್‍ನಲ್ಲಿದ್ದರೂ ಬಿಡದ ನಂಟು- ಮಕ್ಕಳಿಗೆ ನಿರಂತರ ಕನ್ನಡ ಪಾಠ

    ಐರ್ಲೆಂಡ್‍ನಲ್ಲಿದ್ದರೂ ಬಿಡದ ನಂಟು- ಮಕ್ಕಳಿಗೆ ನಿರಂತರ ಕನ್ನಡ ಪಾಠ

    ಬೆಂಗಳೂರು: ಇದು ಅನಿವಾಸಿ ಭಾರತೀಯರ ಕನ್ನಡ ನಾಡಿನ ಪ್ರೀತಿ. ತಮ್ಮ ಮಕ್ಕಳು ಕನ್ನಡ ಕಲಿಯಬೇಕು. ಹುಟ್ಟೂರಿನಲ್ಲಿರುವ ಅಜ್ಜಿ-ತಾತನ ಜೊತೆ ಚೆನ್ನಾಗಿ ಕನ್ನಡದಲ್ಲಿಯೇ ಮಾತನಾಡಬೇಕು. ನಾವಾಡಿದ ಆಟ, ಹಬ್ಬಗಳ ಬಗ್ಗೆ ಮಕ್ಕಳೂ ತಿಳಿದುಕೊಳ್ಳಬೇಕು ಎಂಬ ಉದ್ದೇಶದಿಂದ ಅಲ್ಲಿರುವ ಅನಿವಾಸಿ ಭಾರತೀಯರು ತಮ್ಮ ಮಕ್ಕಳಿಗೆ ನಿರಂತರ ಕನ್ನಡ ಪಾಠ ಜೊತೆಗೆ ಸ್ವಾತಂತ್ರ್ಯೋತ್ಸವದಂದು ವಿಶೇಷ ಪಾಠ ಹೇಳಿಕೊಟ್ಟಿದ್ದಾರೆ.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅನಿವಾಸಿ ಕನ್ನಡಿಗರು, ಐರ್ಲೆಂಡ್‍ನಲ್ಲಿದ್ದರು ಕೂಡ ನಮ್ಮ ಮಕ್ಕಳು ನಮ್ಮ ಜೊತೆ ಕನ್ನಡ ಸಿನಿಮಾ, ಹಾಡು ಕೇಳಿಸಿಕೊಳ್ಳಬೇಕು ತಮ್ಮ ಮಕ್ಕಳು ಕನ್ನಡದ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಬೇಕೆಂಬ ಹೆಬ್ಬಯಕೆಯಿಂದ “ಕನ್ನಡ ಕಲಿ” ಅಥವಾ “ಕನ್ನಡ ಕ್ರಿಯೇಟಿವ್ ಲರ್ನಿಂಗ್” ತರಗತಿ ಆರಂಭವಾಗಿದೆ ಎಂದು ಮಾಹಿತಿ ಹಂಚಿಕೊಂಡರು. ಇದನ್ನೂ ಓದಿ: ಅಕ್ಕೈ ಪದ್ಮಶಾಲಿ ಆಸೆ ನೆರವೇರಿಸಿದ ನಟ ಧನಂಜಯ್

    ಕಳೆದ ನಾಲ್ಕು ದಿನದ ಹಿಂದಷ್ಟೇ ನಡೆದ ಸ್ವಾತಂತ್ರ್ಯ ದಿನವನ್ನು ಐರ್ಲೆಂಡಿನಲ್ಲೂ ಕನ್ನಡದ ಮಕ್ಕಳು ಆಚರಿಸಿದರು. ಬಂಟ್ವಾಳದ ಚಿತ್ರ ಕಲಾವಿದರಾದ ಶಿವಾನಂದ ಡಿ. ಉಳಿಕಕ್ಕೆಪದವು ತಮ್ಮ ಚಿತ್ರಕಲೆಯ ಮೂಲಕವೇ ಸ್ವಾತಂತ್ರ್ಯ ದಿನದ ಕುರಿತು ಐರ್ಲೆಂಡ್‍ನ ಕನ್ನಡಿಗರ ಮಕ್ಕಳಿಗೆ ವರ್ಚುವಲ್ ಮೂಲಕ ಪಾಠ ಮಾಡಿದರು. 30 ವಿದ್ಯಾರ್ಥಿಗಳು ಅತ್ಯಂತ ಸಂತೋಷದಿಂದಲೇ ಸ್ವಾತಂತ್ರ್ಯದ ಹೋರಾಟ, ಬಲಿದಾನ, ಸಧ್ಯದ ಪರಿಸ್ಥಿತಿಯಲ್ಲೂ ಯೋಧರ ಹೋರಾಟ, ತಾಯಿ ನಾಡಿನ ಬಗ್ಗೆ ಇರಬೇಕಾದ ಗೌರವದ ಬಗ್ಗೆ ಹೆಮ್ಮೆಯಿಂದ ತಿಳಿದುಕೊಂಡರು.

    ಕಳೆದ ಮೂರು ವರ್ಷಗಳಿಂದ ಐರ್ಲೆಂಡ್ ಮಕ್ಕಳ ಕನ್ನಡ ಕಲಿಕೆ ಆರಂಭವಾಗಿದೆ. ಮೂರು ವರ್ಷಗಳಿಂದ ಇಂದಿಗೂ ನಿರಂತರವಾಗಿ ಯಶಸ್ಸು ಕಾಣುವಲ್ಲಿ ಶ್ರಮಿಸಿದವರು. ಐರ್ಲೆಂಡಿನಲ್ಲಿ ನೆಲೆಸಿರುವ ದಾವಣಗೆರೆಯ ಕಾಂತೇಶ್, ಬೆಂಗಳೂರಿನ ಪ್ರಕಾಶ್ ಹಾಗೂ ಗೆಳೆಯರು. ನಮ್ಮ ದೇಶ ಹಾಗೂ ಐರ್ಲೆಂಡ್ ದೇಶದಲ್ಲಿ ನಾಲ್ಕು ಗಂಟೆಗಳ ಸಮಯದ ವ್ಯತ್ಯಾಸವಿರುತ್ತದೆ. ಈ ಸಮಯ ತಿಳಿದುಕೊಂಡು, ಮಕ್ಕಳಿಗೆ ಇಂಗ್ಲೀಷ್ ಹಾಗೂ ಕನ್ನಡ ಎರಡೂ ಭಾಷೆ ಬಳಸಿ ಅರ್ಥವಾಗುವ ರೀತಿಯಲ್ಲಿ ಕಥೆ ಹಾಗೂ ಚಿತ್ರದ ಮೂಲಕ ಸ್ವಾತಂತ್ರ್ಯ ದಿನವನ್ನು ಅರ್ಥ ಮಾಡಿಸುವುದು ಬಹಳ ಖುಷಿ ಕೊಟ್ಟ ವಿಷಯ ಎಂದು ಶಿವಾನಂದ್ ತಿಳಿಸಿದರು. ಇದನ್ನೂ ಓದಿ: ಪಿಕ್ಚರ್ ಅಭೀ ಬಾಕಿ ಹೈ ಎಂದ ಆನಂದ್ ಸಿಂಗ್‍ಗೆ ಥಿಯೇಟರ್ ಬಂದ್ ಹೈ ಎಂದ ರಾಜೂ ಗೌಡ

    ಐರ್ಲೆಂಡಿನಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ ಕನ್ನಡಿಗ ಕಾಂತೇಶ್ ಮಾತನಾಡಿ, ಐರ್ಲೆಂಡಿನಲ್ಲಿ ಹುಟ್ಟಿದ ಕನ್ನಡಿಗರ ಮಕ್ಕಳಿಗೆ ಕನ್ನಡ ಬರುತ್ತಿರಲಿಲ್ಲ. ಅಜ್ಜಿ, ತಾತ ಹತ್ತಿರ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ. ಇದು ಅಂತರ ಸೃಷ್ಟಿಯಾಗುತ್ತದೆ. ಮನೆಯಲ್ಲಿ ತಂದೆ-ತಾಯಿ ಕನ್ನಡ ಕಲಿಸಿಕೊಟ್ಟರು, ಮಕ್ಕಳು ತಮ್ಮ ವಯಸ್ಸಿನವರ ಜೊತೆ ಹೆಚ್ಚು ಬೆರೆಯುವುದರಿಂದ ಇಂಗ್ಲೀಷ್‍ನ್ನು ಹೆಚ್ಚು ಕಲಿತಿರುತ್ತಾರೆ. ಹೀಗಾಗಿ ಕನ್ನಡ ಕಲಿಸಲು ಡಬ್ಲಿನ್ ಸಿಟಿ ಸೇರಿದಂತೆ ಮೂರು ಕಡೆ ಲೈಬ್ರೆರಿಗಳಲ್ಲಿ ಕನ್ನಡ ತರಗತಿ ಮೂರು ವರ್ಷದ ಹಿಂದೆ ಆರಂಭಿಸಲಾಯಿತು.

    ಇದೀಗ ಕೋವಿಡ್ ಹಿನ್ನೆಲೆ ಆನ್‍ಲೈನ್ ಮೂಲಕ ತಿಂಗಳಿಗೆ ನಾಲ್ಕು ತರಗತಿಗಳನ್ನು ಒಂದು ಗಂಟೆಯ ಕಾಲ ನಡೆಸಲಾಗುತ್ತಿದೆ. ಸುಮಾರು 20-30 ಸ್ವಯಂಸೇವಕರು ಮುಂದೆ ಬಂದು ಉಚಿತವಾಗಿ ಕನ್ನಡದ ವಿವಿಧ ತರಗತಿಗಳನ್ನು ಕಲಿಸುತ್ತಿದ್ದಾರೆ. ಯುಎಸ್ ನಲ್ಲಿ ಕನ್ನಡದ ಶಿವಗೌಡರು ಬರೆದಿರುವ ಪುಸ್ತಕದ ಪ್ರಕಾರ ಕಲಿಸಲಾಗುತ್ತಿದೆ. 4 ರಿಂದ 14 ವಯಸ್ಸಿನ ಸುಮಾರು 40 ಮಕ್ಕಳು ಕನ್ನಡ ಕಲಿಕೆಯಲ್ಲಿದ್ದಾರೆ. ಅವರಿಗಿರುವ ಕನ್ನಡ ಜ್ಞಾನಕ್ಕೆ ತಕ್ಕಂತೆ ಬೇರೆ ಬೇರೆ ತಂಡಗಳನ್ನು ಮಾಡಿ ಕಲಿಸಲಾಗುತ್ತಿದೆ ಎಂದರು.

    ಐರ್ಲೆಂಡ್ ನಿವಾಸಿಯಾಗಿರುವ ಬೆಂಗಳೂರಿನ ಪ್ರಕಾಶ್ ಮಾತನಾಡಿ, ಕನ್ನಡಿಗರ ಮಕ್ಕಳ ಕನ್ನಡ ಕಲಿಕೆಗೆ ಹೆತ್ತವರಿಂದಲೂ ಉತ್ತಮ ಸ್ಪಂದನೆ ಇದೆ. ಮಕ್ಕಳಿಗೂ ಒಂದು ಗಂಟೆ ಕ್ಲಾಸ್ ಆಗಿರುವುದರಿಂದ, ಪಠ್ಯಗಳನ್ನು ಹೊರತುಪಡಿಸಿ ಹೊಸ ವಿಷಯ ಕಲಿಯುವುದನ್ನು ಉತ್ಸಾಹದಿಂದ ಕಲಿಯುತ್ತಿದ್ದಾರೆ. ಮಕ್ಕಳಿಗೂ ಕನ್ನಡದವರೇ ಆದ ಹೊಸ ಗೆಳೆಯರ ಬಳಗ ಸಿಕ್ಕಿದೆ. ತರಗತಿಗಳು ಕೂಡ ಚಟುವಟಿಕೆಯಿಂದ ಕೂಡಿರುತ್ತವೆ. ಹೀಗಾಗಿ ಕಳೆದ ಮೂರು ವರ್ಷದಿಂದ ಯಶಸ್ವಿಯಾಗಿ ಮುನ್ನಡೆಯುತ್ತಾ ಬಂದಿದೆ. ಅನಿವಾಸಿ ಭಾರತೀಯರ, ಕನ್ನಡ ನೆಲದ ಪ್ರೀತಿ, ಭಾಷೆಯ ನಂಟು ಮಾದರಿಯಾಗಿದೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಇಡಿ ಕರೆ ಬಂದಿಲ್ಲ, ವೈಯಕ್ತಿಕ ಕೆಲಸದ ಮೇಲೆ ದೆಹಲಿ ಬಂದಿರೋದು: ಜಮೀರ್ ಅಹ್ಮದ್ ಖಾನ್

  • ಬೆಂಗಳೂರು ಮೂಲದ ಮಹಿಳೆ, ಮಕ್ಕಳು ಐರ್ಲೆಂಡ್‌ನಲ್ಲಿ ನಿಗೂಢ ಸಾವು

    ಬೆಂಗಳೂರು ಮೂಲದ ಮಹಿಳೆ, ಮಕ್ಕಳು ಐರ್ಲೆಂಡ್‌ನಲ್ಲಿ ನಿಗೂಢ ಸಾವು

    ಡಬ್ಲಿನ್‌: ಬೆಂಗಳೂರು ಮೂಲದ ಮಹಿಳೆ ಮತ್ತು ಇಬ್ಬರು ಮಕ್ಕಳು ನಿಗೂಢವಾಗಿ ಐರ್ಲೆಂಡಿನಲ್ಲಿ ಸಾವನ್ನಪ್ಪಿದ್ದಾರೆ.

    ಸೀಮಾ ಬಾನು(37), ಮಗಳು ಅಫ್ರಿಯಾ(11) ಮಗ ಫಜಾನ್‌(06) ದಕ್ಷಿಣ ಡಬ್ಲಿನ್‌ನಲ್ಲಿರುವ ಬ್ಯಾಲಿಂಟೀರ್ ಲೆವೆಲಿನ್ ಎಸ್ಟೇಟ್ ನಲ್ಲಿರುವ ನಿವಾಸದಲ್ಲಿ ಮೃತಪಟ್ಟಿದ್ದಾರೆ.

    ಹಲವು ವರ್ಷಗಳ ಹಿಂದೆ ಸೀಮಾ ಬಾನು ಬೆಂಗಳೂರು ಅಥವಾ ಮೈಸೂರಿನಿಂದ ಡಬ್ಲಿನ್‌ಗೆ ಆಗಮಿಸಿದ್ದರು ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

    ಇಬ್ಬರು ಮಕ್ಕಳು ಒಂದು ಕೊಠಡಿಯಲ್ಲಿ, ತಾಯಿಯ ಶವ ಮತ್ತೊಂದು ಕೊಠಡಿಯಲ್ಲಿ ಪತ್ತೆಯಾಗಿದೆ. ಇಬ್ಬರು ಮಕ್ಕಳನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ವರದಿಯಾಗಿದೆ. ಸೀಮಾ ಬಾನು ಸಾವನ್ನಪ್ಪಿದ್ದು ಹೇಗೆ ಎಂದು ತಿಳಿದು ಬಂದಿಲ್ಲ. ಮರಣೋತ್ತರ ಪರೀಕ್ಷೆಯ ವರದಿ ಪ್ರಕಟವಾಗಬೇಕಿದೆ.

    ಸಮೀಪದ ನಿವಾಸಿಗಳ ಜೊತೆ ಉತ್ತಮ ಸಂಬಂಧದಲ್ಲಿದ್ದ ಸೀಮಾ ಬುಧವಾರ ಯಾರಿಗೂ ಕಾಣಿಸಿರಲಿಲ್ಲ. ಹೀಗಾಗಿ ಅನುಮಾನ ಬಂದು ಸಮೀಪದ ನಿವಾಸಿಗಳು ಮನೆಗೆ ಬಂದು ವೀಕ್ಷಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಸಮೀಪದ ನಿವಾಸಿಗಳು ಬಳಿಕ ಸೀಮಾ ಪತಿಗೆ ವಿಚಾರ ತಿಳಿಸಿದ್ದಾರೆ.

    ಈ ವರ್ಷದ ಮೇ ತಿಂಗಳಿನಲ್ಲಿ ಸೀಮಾ ಮೇಲೆ ಹಲ್ಲೆ ನಡೆದಿತ್ತು. ವ್ಯಕ್ತಿಯೊಬ್ಬ ಇವರ ಮೇಲೆ ಹಲ್ಲೆ ಮಾಡಿದ್ದ. ಈ ಘಟನೆಯ ಬಳಿಕ ಸೀಮಾ ಅವರು ಕುಟುಂಬದ ಸುರಕ್ಷತೆಯ ಬಗ್ಗೆ ಭಯಗೊಂಡಿದ್ದರು ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ. ಆತನೇ ಈ ಕೃತ್ಯ ಎಸಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಪ್ರಕರಣ ಸಂಬಂಧ ತನಿಖೆ ಆರಂಭಗೊಂಡಿದ್ದು ಪತಿ ಸಹಕಾರ ನೀಡುತ್ತಿದ್ದಾರೆ.

    https://twitter.com/iamemmaallen/status/1321721036883267586

    ಸೀಮಾ ಬಾನು ಮೃತರಾದ ಹಿನ್ನೆಲೆಯಲ್ಲಿ ನಿವಾಸಿಗಳು ಮೊಂಬತ್ತಿ ಹೊತ್ತಿ ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

  • ಭರ್ಜರಿ ಸಿಕ್ಸರ್ ಚಚ್ಚಿ ತನ್ನ ಕಾರಿನ ಗ್ಲಾಸ್ ತಾನೇ ಒಡೆದ ಕೆವಿನ್ ಒಬ್ರಿಯಾನ್

    ಭರ್ಜರಿ ಸಿಕ್ಸರ್ ಚಚ್ಚಿ ತನ್ನ ಕಾರಿನ ಗ್ಲಾಸ್ ತಾನೇ ಒಡೆದ ಕೆವಿನ್ ಒಬ್ರಿಯಾನ್

    ಡಬ್ಲಿನ್: ಐರ್ಲೆಂಡ್‍ನ ದೈತ್ಯ ಬ್ಯಾಟ್ಸ್‍ಮ್ಯಾನ್ ಕೆವಿನ್ ಒಬ್ರಿಯಾನ್ ಸಿಕ್ಸ್ ಚಚ್ಚುವ ಮೂಲಕ ತನ್ನ ಕಾರಿನ ಗ್ಲಾಸನ್ನು ಒಡೆದು ಹಾಕಿದ್ದಾರೆ.

    ಐರ್ಲೆಂಡ್ ಸ್ಫೋಟಕ ಆಲ್‍ರೌಂಡರ್ ಕೆವಿನ್ ಒಬ್ರಿಯಾನ್, ಸಿಕ್ಸ್ ಚಚ್ಚುವುದರಲ್ಲಿ ಎತ್ತಿದ ಕೈ. ಕೆವಿನ್ ಹೊಡೆದ ಸಿಕ್ಸ್ ಗಳು ಮೈದಾನದ ಆಚೆಗೂ ಹೋಗುತ್ತವೆ. ಈಗ ಸದ್ಯ ಕೆವಿನ್ ಒಬ್ರಿಯಾನ್ ಐರ್ಲೆಂಡ್‍ಮಲ್ಲಿ ನಡೆಯುತ್ತಿರುವ ಅಂತರ ಪ್ರಾಂತೀಯ ಟಿ-20 ಟೂರ್ನಿಯನ್ನು ಆಡುತ್ತಿದ್ದಾರೆ.

    ಡಬ್ಲಿನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕೆವಿನ್ ಭರ್ಜರಿಯಾಗಿ ಬ್ಯಾಟ್ ಬೀಸಿದ್ದರು. ಈ ಪಂದ್ಯದಲ್ಲಿ ಅವರು ಕೇವಲ 37 ಬಾಲಿಗೆ ಬರೋಬ್ಬರಿ 82 ರನ್ ಗಳಿಸಿದ್ದರು. ಇದರಲ್ಲಿ ಎಂಟು ಭರ್ಜರಿ ಸಿಕ್ಸರ್ ಕೂಡ ಸೇರಿದ್ದವು. ಈ ಸಿಕ್ಸರ್ ಗಳಲ್ಲಿ ಒಂದು ಮೈದಾನದಿಂದ ಆಚೆಗೆ ಹೋಗಿತ್ತು. ಈ ಚೆಂಡು ನೇರವಾಗಿ ಹೋಗಿ ಪಾರ್ಕಿಂಗ್ ಏರಿಯಾದಲ್ಲಿ ನಿಂತಿದ್ದ ಕೆವಿನ್ ಒಬ್ರಿಯಾನ್ ಅವರ ಹಿಂಬದಿಯ ಗ್ಲಾಸ್ ಅನ್ನು ಒಡೆದು ಹಾಕಿದೆ.

    ಕಾರಿನ ಫೋಟೋವನ್ನು ಟ್ವೀಟ್ ಮಾಡಿರುವ ಐರ್ಲೆಂಡ್ ಕ್ರಿಕೆಟ್ ತಂಡ, ಕೆವಿನ್ ಒಬ್ರಿಯಾನ್ ಅವರು ಸಿಕ್ಸ್ ಹೊಡೆದ ಬಾಲು ಅವರ ಕಾರಿನ ಗ್ಲಾಸ್ ಅನ್ನು ಒಡೆಯಿತು ಎಂದು ಬರೆದುಕೊಂಡಿದೆ. ಇದನ್ನು ರೀಟ್ವೀಟ್ ಮಾಡಿರುವ ಕೆವಿನ್, ಈಗ ನನ್ನ ಕಾರಿಗೆ ಎಸಿಯೇ ಬೇಕಾಗಿಲ್ಲ. ಹಾಗೇ ಡ್ರೈವ್ ಮಾಡಬಹುದು. ನನಗೆ ಇದರಿಂದ ಬೇಜಾರಿಲ್ಲ. ಇನ್ನೊಮ್ಮೆ ಕಾರನ್ನು ಸರಿ ಮಾಡಿಸುತ್ತೇನೆ. ಮುಂದಿನ ದಿನದಲ್ಲಿ ಕಾರನ್ನು ಬೇರೆ ಕಡೆ ಪಾರ್ಕ್ ಮಾಡುತ್ತೇನೆ ಎಂದು ಬರೆದುಕೊಂಡಿದ್ದಾರೆ.

    ಕಿವಿನ್ ಒಬ್ರಿಯಾನ್ ಅವರನ್ನು ಭಾರತದ ಕ್ರೀಡಾಭಿಮಾನಿಗಳು ಮರೆಯುವಂತಿಲ್ಲ. ಏಕೆಂದರೆ 2011ರಲ್ಲಿ ನಡೆದ ವಿಶ್ವಕಪ್‍ನಲ್ಲಿ ಕೆವಿನ್ ವೇಗದ ಶತಕ ಸಿಡಿಸಿ ಸುದ್ದಿಯಾಗಿದ್ದರು. ಅಂದು ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಐರ್ಲೆಂಡ್‍ಗೆ 327 ರನ್‍ಗಳ ದೊಡ್ಡ ಟಾರ್ಗೆಟ್ ನೀಡಿತ್ತು. ಅಂದು ಐರ್ಲೆಂಡ್ ಗೆಲ್ಲುತ್ತದೆ ಎಂದು ಯಾರೂ ಊಸಿರಲಿಲ್ಲ. ಅಂದಿನ ಪಂದ್ಯದಲ್ಲಿ ಭರ್ಜರಿಯಾಗಿ ಬ್ಯಾಟ್ ಬೀಸಿದ್ದ ಕೆವಿನ್ 63 ಎಸೆತಗಳಲ್ಲಿ 113 ರನ್ ಗಳಿಸಿ ತಂಡಕ್ಕೆ 3 ವಿಕೆಟ್‍ಗಳ ಜಯವನ್ನು ತಂದುಕೊಟ್ಟಿದ್ದರು.