Tag: ಐರ್ಲೆಂಡ್

  • ಟಿ20 ವಿಶ್ವಕಪ್‌ನಿಂದ ಪಾಕಿಸ್ತಾನ ಔಟ್‌

    ಟಿ20 ವಿಶ್ವಕಪ್‌ನಿಂದ ಪಾಕಿಸ್ತಾನ ಔಟ್‌

    – ಅಮೆರಿಕ, ಐರ್ಲೆಂಡ್‌ ಪಂದ್ಯ ಮಳೆಗೆ ಬಲಿ
    – ಸೂಪರ್‌  8ಕ್ಕೆ  ಪ್ರವೇಶ ಪಡೆದ ಅಮೆರಿಕ

    ಫ್ಲೋರಿಡಾ: ಈ ಬಾರಿ ಟಿ20 ವಿಶ್ವಕಪ್‌ (T20 World Cup) ಗೆಲ್ಲಲೇಬೇಕೆಂದು ಸೇನಾ ಕೇಂದ್ರಗಳಲ್ಲಿ ತರಬೇತಿ ಪಡೆದಿದ್ದ ಪಾಕಿಸ್ತಾನ (Pakistan) ಈಗ ಟೂರ್ನಿಯಿಂದಲೇ ಔಟ್‌ ಆಗಿದೆ.

    ಅಮೆರಿಕ, ಐರ್ಲೆಂಡ್‌ ಪಂದ್ಯ ಮಳೆಯಿಂದ (Rain) ರದ್ದಾಗಿದೆ. ಪರಿಣಾಮ ಅಮೆರಿಕ (USA) ಅಧಿಕೃತವಾಗಿ ಸೂಪರ್‌ 8 ಪ್ರವೇಶಿಸಿದ್ದು ಪಾಕ್‌ ಕನಸು ನುಚ್ಚು ನೂರಾಗಿದೆ. ಅಷ್ಟೇ ಅಲ್ಲದೇ ಮೊದಲ ಟಿ20 ವಿಶ್ವಕಪ್‌ನಲ್ಲೇ ಸೂಪರ್‌ 8 ಹಂತ ಪ್ರವೇಶಿಸಿದ ಸಾಧನೆ ಮಾಡಿದೆ.

    ಎ ಗುಂಪಿನಲ್ಲಿ ಹ್ಯಾಟ್ರಿಕ್‌ ಗೆಲುವು ಸಾಧಿಸಿ 6 ಅಂಕಗಳನ್ನು ಪಡೆದು ಭಾರತ (Team India) ಈಗಾಗಲೇ ಸೂಪರ್‌ 8 (Super 8) ಪ್ರವೇಶಿಸಿದ್ದರೆ ಅಮೆರಿಕ ಮತ್ತು ಪಾಕ್‌ ಮಧ್ಯೆ ತೀವ್ರ ಸ್ಪರ್ಧೆ ಇತ್ತು. ಅಮೆರಿಕ ಎರಡು ಪಂದ್ಯ ಗೆದ್ದಿದ್ದರೆ ಪಾಕ್‌ ಒಂದು ಪಂದ್ಯ ಗೆದ್ದಿತ್ತು.

    ಶುಕ್ರವಾರದ ಪಂದ್ಯ ರದ್ದಾದ ಕಾರಣ ಇತ್ತಡಗಳಿಗೆ ತಲಾ ಒಂದೊಂದು ಅಂಕವನ್ನು ನೀಡಲಾಗಿದೆ. ಇದರಿಂದಾಗಿ 5 ಅಂಕದೊಂದಿಗೆ ಅಮೆರಿಕ ಸೂಪರ್‌ 8 ಪ್ರವೇಶಿಸಿತು. ಒಂದು ವೇಳೆ ಅಮೆರಿಕ ಈ ಪಂದ್ಯವನ್ನು ಸೋತಿದ್ದರೆ ಪಾಕ್‌ಗೆ ಒಂದು ಅವಕಾಶವಿತ್ತು. ಇದನ್ನೂ ಓದಿ: ಪಾಕ್‌ ತಂಡದ ವಿರುದ್ಧ ದೇಶದ್ರೋಹದ ಕೇಸ್‌!

    ಪಾಕಿಸ್ತಾನ 3 ಪಂದ್ಯವಾಡಿ ಒಂದು ಪಂದ್ಯದಲ್ಲಿ ಮಾತ್ರ ಜಯಗಳಿಸಿದೆ. ಭಾನುವಾರ ಐರ್ಲೆಂಡ್‌ ವಿರುದ್ಧ ಪಂದ್ಯ ನಡೆಯಲಿದೆ. ಈ ಪಂದ್ಯವನ್ನು ಗೆದ್ದರೂ 4 ಅಂಕ ಮಾತ್ರ ಸಂಪಾದಿಸುವುದರಿಂದ ಪಾಕ್‌ ಸೂಪರ್‌ 8 ಪ್ರವೇಶಿಸಲು ವಿಫಲವಾಯಿತು. ಪಾಕ್‌ ಜೊತೆಗೆ ಎ ಗುಂಪಿನಲ್ಲಿದ್ದ ಕೆನಡಾ ಮತ್ತು ಐರ್ಲೆಂಡ್‌ ತಂಡಗಳು ಟೂರ್ನಿಯಿಂದ ಹೊರಬಿದ್ದಿದೆ.

    2026ರ ವಿಶ್ವಕಪ್‌ಗೂ ಅಮೆರಿಕ ನೇರ ಪ್ರವೇಶ ಪಡೆಯಿತು.  ಸೂಪರ್‌-8 ಹಂತಕ್ಕೇರುವ ಎಲ್ಲಾ 8 ತಂಡಗಳು 2026ರ  ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆಯಲಿದೆ.  ಈ ವಿಶ್ವಕಪ್‌ ಟೂರ್ನಿ ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿದೆ. ಶ್ರೀಲಂಕಾ ಸೂಪರ್‌ 8 ಹಂತಕ್ಕೆ ಅರ್ಹತೆ ಪಡೆಯದೇ ಇದ್ದರೂ ಆತಿಥ್ಯ ವಹಿಸಿದ ಕಾರಣ ಅರ್ಹತೆ ಪಡೆಯಲಿದೆ.

  • ಪಾಂಡ್ಯ ಪರಾಕ್ರಮ, ಹಿಟ್‌ಮ್ಯಾನ್‌ ಪವರ್‌ ಫುಲ್‌ ಬ್ಯಾಟಿಂಗ್‌ – T20 ವಿಶ್ವಕಪ್‌ನಲ್ಲಿ ಭಾರತ ಶುಭಾರಂಭ!

    ಪಾಂಡ್ಯ ಪರಾಕ್ರಮ, ಹಿಟ್‌ಮ್ಯಾನ್‌ ಪವರ್‌ ಫುಲ್‌ ಬ್ಯಾಟಿಂಗ್‌ – T20 ವಿಶ್ವಕಪ್‌ನಲ್ಲಿ ಭಾರತ ಶುಭಾರಂಭ!

    ನ್ಯೂಯಾರ್ಕ್‌: ಅಮೆರಿಕ ಮತ್ತು ವೆಸ್ಟ್‌ ಇಂಡೀಸ್‌ ಆತಿಥ್ಯದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ (T20 World Cup) ಟೂರ್ನಿಯಲ್ಲಿ ಭಾರತ (Team India) ಶುಭಾರಂಭ ಕಂಡಿದೆ. ಐರ್ಲೆಂಡ್‌ ವಿರುದ್ಧ ನಡೆದ ಆರಂಭಿಕ ಪಂದ್ಯದಲ್ಲೇ ಹಾರ್ದಿಕ್‌ ಪಾಂಡ್ಯ (Hardik Pandya) ಅವರ ಬೌಲಿಂಗ್‌ ಕಮಾಲ್‌, ರೋಹಿತ್‌ ಶರ್ಮಾ ಅವರ ಬ್ಯಾಟಿಂಗ್‌ ನೆರವಿನಿಂದ ಐರ್ಲೆಂಡ್‌ ವಿರುದ್ಧ ಟೀಂ ಇಂಡಿಯಾ 8 ವಿಕೆಟ್‌ ಗಳ ಭರ್ಜರಿ ಜಯ ಸಾಧಿಸಿದೆ.

    ಇಲ್ಲಿನ ನಸ್ಸೌ ಕೌಂಟಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಐರ್ಲೆಂಡ್‌ ತಂಡ 20 ಓವರ್‌ಗಳಲ್ಲಿ ಕೇವಲ 96 ರನ್‌ಗಳಿಗೆ ಸರ್ವಪತನ ಕಂಡಿತು. ಅಲ್ಪಮೊತ್ತದ ಗುರಿ ಬೆನ್ನತ್ತಿದ ಟೀಂ ಇಂಡಿಯಾ 12.2 ಓವರ್‌ಗಳಲ್ಲೇ 2 ವಿಕೆಟ್‌ ನಷ್ಟಕ್ಕೆ 97 ರನ್‌ ಗಳಿಸಿ ಗೆದ್ದು ಬೀಗಿತು.

    ಚೇಸಿಂಗ್‌ ಆರಂಭಿಸಿದ ಟೀಂ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್‌ ಶರ್ಮಾ (Rohit Sharma) ಹಾಗೂ ವಿರಾಟ್‌ ಕೊಹ್ಲಿ ಜೋಡಿ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ವಿರಾಟ್‌ ಕೇವಲ 1 ರನ್‌ ಗಳಿಸಿ ಔಟಾದರು. ಬಳಿಕ ಜೊತೆಗೂಡಿದ ರಿಷಭ್‌ ಪಂತ್‌ ಹಾಗೂ ಸೂರ್ಯಕುಮಾರ್‌ ಜೋಡಿ ತಾಳ್ಮೆಯ ಆಟವಾಡಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ನಾಯಕ ರೋಹಿತ್‌ ಶರ್ಮಾ 52 ರನ್‌ (37 ಎಸೆತ, 3 ಸಿಕ್ಸರ್‌, 4 ಬೌಂಡರಿ) ಚಚ್ಚಿದರೆ, ರಿಷಭ್‌ ಪಂತ್‌ 36 ರನ್‌, ಸೂರ್ಯಕುಮಾರ್‌ ಯಾದವ್‌ 2 ರನ್‌ ಗಳಿಸಿದರು.

    ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ್ದ ಐರ್ಲೆಂಡ್‌ ತಂಡ ಟೀಂ ಇಂಡಿಯಾ, ಬೌಲರ್‌ಗಳ ದಾಳಿಗೆ ರನ್‌ ಕಲೆಹಾಕಲು ತಿಣುಕಾಡಿತ್ತು. ಮಾರಕ ದಾಳಿಗೆ ತತ್ತರಿಸಿದ ಐರ್ಲೆಂಡ್‌ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಆರಂಭದಿಂದಲೇ ಪೆವಿಲಿಯನ್‌ ಪರೇಡ್‌ ನಡೆಸಿದರು. ಇದನ್ನೂ ಓದಿ: T20 World Cup: ಸ್ಕಾಟ್‌ಲೆಂಡ್‌ ಬಳಿಕ ಐರ್ಲೆಂಡ್‌ ಜೆರ್ಸಿಯಲ್ಲಿ ಮಿಂಚಿದ ಕರ್ನಾಟಕದ ‘ನಂದಿನಿ’ ಬ್ರ್ಯಾಂಡ್‌!

    ಗರೆಥ್ ಡೆಲಾನಿ 26 ರನ್‌, ಜೋಶ್ ಲಿಟಲ್ 14 ರನ್‌, ಕರ್ಟಿಸ್ ಕ್ಯಾಂಫರ್ 12 ರನ್‌, ಲೋರ್ಕನ್ ಟಕರ್ 10 ರನ್‌ ಗಳಿಸಿದ್ದು ಬಿಟ್ಟರೆ, ಉಳಿದ ಆಟಗಾರರು ಎರಡಂಕಿಯ ಮೊತ್ತವನ್ನೂ ಗಳಿಸರ ಪರಿಣಾಮ ಐರ್ಲೆಂಡ್‌ ಅಲ್ಪ ಮೊತ್ತಕ್ಕೆ ಆಲೌಟ್‌ ಆಗಿ ಸೋಲು ಎದುರಿಸಬೇಕಾಯಿತು. ಇದನ್ನೂ ಓದಿ: ವಿಶ್ವದ ನಂ.1 ಮ್ಯಾಗ್ನಸ್‌ ಕಾರ್ಲ್‌ಸನ್‌ಗೆ ಸೋಲುಣಿಸಿದ ಗ್ರ್ಯಾಂಡ್‌ಮಾಸ್ಟರ್‌ ಪ್ರಜ್ಞಾನಂದ!

    ಪಾಂಡ್ಯ ಭರ್ಜರಿ ಕಂಬ್ಯಾಕ್‌:
    2024ರ ಐಪಿಎಲ್‌ ಆವೃತ್ತಿಯಲ್ಲಿ ಕಳಪೆ ಬೌಲಿಂಗ್‌ ಪ್ರದರ್ಶನದಿಂದ ಟೀಕೆಗೆ ಗುರಿಯಾಗಿದ್ದ ಹಾರ್ದಿಕ್‌ ಪಾಂಡ್ಯ ಟಿ20 ವಿಶ್ವಕಪ್‌ ಆರಂಭಿಕ ಪಂದ್ಯದಲ್ಲೇ ಭರ್ಜರಿ ಕಂಬ್ಯಾಕ್‌ ಮಾಡಿದ್ದಾರೆ. 4 ಓವರ್‌ಗಳಲ್ಲಿ 27 ರನ್‌ ಬಿಟ್ಟುಕೊಟ್ಟ ಪಾಂಡ್ಯ 3 ಪ್ರಮುಖ ವಿಕೆಟ್‌ ಪಡೆದಿದ್ದಾರೆ. ಇನ್ನೂ ಜಸ್ಪ್ರೀತ್‌ ಬುಮ್ರಾ, ಹರ್ಷ್‌ದೀಪ್‌ ಸಿಂಗ್‌ ತಲಾ 2 ವಿಕೆಟ್‌ ಕಿತ್ತರೆ, ಮೊಹಮ್ಮದ್‌ ಸಿರಾಜ್‌ ಮತ್ತು ಅಕ್ಷರ್‌ ಪಟೇಲ್‌ ತಲಾ ಒಂದು ವಿಕೆಟ್‌ ಪಡೆದು ಮಿಂಚಿದರು. ಇದನ್ನೂ ಓದಿ: ಗೌತಮ್‌ ಗಂಭೀರ್‌ಗೆ ಬ್ಲ್ಯಾಂಕ್‌ ಚೆಕ್‌ ಆಫರ್‌ ಕೊಟ್ಟಿದ್ದೇಕೆ ಶಾರುಖ್‌?

  • T20 World Cup: ಸ್ಕಾಟ್‌ಲೆಂಡ್‌ ಬಳಿಕ ಐರ್ಲೆಂಡ್‌ ಜೆರ್ಸಿಯಲ್ಲಿ ಮಿಂಚಿದ ಕರ್ನಾಟಕದ ‘ನಂದಿನಿ’ ಬ್ರ್ಯಾಂಡ್‌!

    T20 World Cup: ಸ್ಕಾಟ್‌ಲೆಂಡ್‌ ಬಳಿಕ ಐರ್ಲೆಂಡ್‌ ಜೆರ್ಸಿಯಲ್ಲಿ ಮಿಂಚಿದ ಕರ್ನಾಟಕದ ‘ನಂದಿನಿ’ ಬ್ರ್ಯಾಂಡ್‌!

    – 5 ವಿದೇಶಿ ತಂಡಗಳಿಗೆ ಭಾರತದ ಹಾಲು ಉತ್ಪನ್ನ ಸಂಸ್ಥೆಗಳಿಂದ ಪ್ರಾಯೋಕತ್ವ

    ನವದೆಹಲಿ: ಸ್ಕಾಟ್‌ಲೆಂಡ್‌ ಬಳಿಕ ತನಗೆ ಪ್ರಾಯೋಜಕತ್ವ ವಹಿಸಿರುವ ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟ (KMF) ಬ್ರ್ಯಾಂಡ್‌ ಲೋಗೋ ಹೊಂದಿದ ಹೊಸ ಜೆರ್ಸಿಯನ್ನು (Ireland Jersey) ಐರ್ಲೆಂಡ್‌ ಕ್ರಿಕೆಟ್‌ ತಂಡ ಅನಾವರಣಗೊಳಿಸಿದೆ. ಈ ಮೂಲಕ ವಿದೇಶಗಳಲ್ಲೂ ಕರ್ನಾಟಕದ ನಂದಿನಿ ಬ್ರ್ಯಾಂಡ್‌ ರಾರಾಜಿಸುವಂತಾಗಿದೆ.

    ವೆಸ್ಟ್‌ ಇಂಡೀಸ್‌ ಹಾಗೂ ಯುಎಸ್‌ಎ ಆತಿಥ್ಯದಲ್ಲಿ ಆರಂಭಗೊಂಡಿರುವ 2024ರ ಟಿ20 ವಿಶ್ವಕಪ್‌ ಟೂರ್ನಿಗಾಗಿ ಐರ್ಲೆಂಡ್‌ ಮತ್ತು ಸ್ಕಾಟ್‌ಲೆಂಡ್‌ ತಂಡಗಳಿಗೆ ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟ ಪ್ರಾಯೋಜಕತ್ವ ವಹಿಸಿದೆ. ಐರ್ಲೆಂಡ್‌ ಬಿಡುಗಡೆಗೊಳಿಸಿದ ಕಡು ಹಸಿರು ಜೆರ್ಸಿಯ ತೋಳಿನ ಮೇಲ್ಭಾಗದಲ್ಲಿ ಕನ್ನಡ ಮತ್ತು ಇಂಗ್ಲಿಷ್‌ ಎರಡೂ ಭಾಷೆಗಳಲ್ಲೂ ʻನಂದಿನಿʼ ಬ್ರ್ಯಾಂಡ್‌ (Nandini Brand) ಲೋಗೋವನ್ನ ಮುದ್ರಿಸಲಾಗಿದೆ. ಜೊತೆಗೆ ಕೋಚ್‌ಗಳಿಗೆ ವಿತರಿಸಲಾದ ಜೆರ್ಸಿಯಲ್ಲಿ ಎದೆಯ ಭಾಗದ ಮೇಲ್ಭಾಗದಲ್ಲಿ ದೊಡ್ಡ ಪ್ರಮಾಣದ ಲೋಗೋಗಳನ್ನ ಮುದ್ರಿಸಿರುವುದು ಕಂಡುಬಂದಿದೆ. ಇದನ್ನೂ ಓದಿ: ಬಾಂಗ್ಲಾ ವಿರುದ್ಧ ಟೀಂ ಇಂಡಿಯಾಗೆ 60 ರನ್‌ಗಳ ಭರ್ಜರಿ ಜಯ

    ಒಟ್ಟಿನಲ್ಲಿ ಕರ್ನಾಟಕದ ಮನೆ-ಮನಗಳಲ್ಲಿ ಹೆಸರುವಾಸಿಯಾಗಿದ್ದ ನಂದಿನಿ ಬ್ರ್ಯಾಂಡ್‌ ಇದೀಗ ವಿದೇಶಗಳಲ್ಲಿ ತನ್ನ ಕೀರ್ತಿಪತಾಕೆ ಹಾರಿಸುವತ್ತ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಮೂಲಗಳ ಪ್ರಕಾರ, ಈ ಎರಡೂ ತಂಡಗಳ ಪ್ರಾಯೋಜಕತ್ವಕ್ಕೆ ಕೆಎಂಎಫ್‌ ತಲಾ 2.5 ಕೋಟಿ ರೂ. ವಿನಿಯೋಗಿಸಿದೆ ಎಂದು ತಿಳಿದುಬಂದಿದೆ. ಆದ್ರೆ ಈ ಬಗ್ಗೆ ಕೆಎಂಎಫ್‌ ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ. ಇದನ್ನೂ ಓದಿ: ಭಾರತ vs ಪಾಕಿಸ್ತಾನ T20 ವಿಶ್ವಕಪ್ ಪಂದ್ಯಕ್ಕೆ ಬೆದರಿಕೆ ಕರೆ – ಕ್ರೀಡಾಂಗಣದಲ್ಲಿ ಭದ್ರತೆ ಹೆಚ್ಚಳ

    5 ವಿದೇಶಿ ತಂಡಗಳಿಗೆ ಭಾರತೀಯ ಸಂಸ್ಥೆ ಪ್ರಾಯೋಜಕತ್ವ:
    ಭಾರತದ ಅಮುಲ್‌ ಪ್ರಸಕ್ತ ಟಿ20 ವಿಶ್ವಕಪ್‌ (T20 World Cup) ಟೂರ್ನಿಯಲ್ಲಿ ಶ್ರೀಲಂಕಾ, ದಕ್ಷಿಣ ಆಫ್ರಿಕಾ ಹಾಗೂ ಯುಎಸ್‌ಎ ತಂಡಗಳನ್ನ ಪ್ರಾಯೋಜಿಸುತ್ತಿದ್ದರೆ, ನಂದಿನಿ ಸ್ಕಾಟ್‌ಲೆಂಡ್‌ ಹಾಗೂ ಐರ್ಲೆಂಡ್‌ ತಂಡಗಳಿಗೆ ಪ್ರಾಯೋಜಕತ್ವ ವಹಿಸಿದೆ. ಒಟ್ಟಿನಲ್ಲಿ ಭಾರತೀಯ ಎರಡು ಹಾಲು ಉತ್ಪನ್ನ ಸಂಸ್ಥೆಗಳು 5 ತಂಡಗಳಿಗೆ ಪ್ರಾಯೋಜಕತ್ವ ವಹಿಸುತ್ತಿರುವುದು ದೇಶದ ಮತ್ತೊಂದು ಹೆಗ್ಗಳಿಕೆಯಾಗಿದೆ.

    ನಂದಿನಿ ‌ಪ್ರಾಯೋಜಕತ್ವದ ಕುರಿತು ಪ್ರತಿಕ್ರಿಯೆ ನೀಡಿರುವ ಕ್ರಿಕೆಟ್ ಐರ್ಲೆಂಡ್‌ (Cricket Ireland) ಸಂಸ್ಥೆ ಮುಖ್ಯ ಹಣಕಾಸು ಅಧಿಕಾರಿ ಆಂಡ್ರ್ಯೂ, ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟದ ಪ್ರಾಯೋಕತ್ವವು ಸಂತಸ ತಂದಿದೆ. ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಅಧಿಕೃತ ಪ್ರಾಯೋಜಕರಾಗಿ ನಂದಿನಿಯನ್ನು ಘೋಷಿಸಲು ಸಂತೋಷವಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವಿಶ್ವದ ನಂ.1 ಮ್ಯಾಗ್ನಸ್‌ ಕಾರ್ಲ್‌ಸನ್‌ಗೆ ಸೋಲುಣಿಸಿದ ಗ್ರ್ಯಾಂಡ್‌ಮಾಸ್ಟರ್‌ ಪ್ರಜ್ಞಾನಂದ!

    ಇನ್ನೂ ನಂದಿನಿಯ ಮಾತೃಸಂಸ್ಥೆಯಾದ ಕೆಎಂಎಫ್‌ನ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ ಜಗದೀಶ್ ಮಾತನಾಡಿ, ಟಿ20 ವಿಶ್ವಕಪ್ ಅಭಿಯಾನಕ್ಕಾಗಿ ಐರ್ಲೆಂಡ್ ಕ್ರಿಕೆಟ್ ತಂಡದೊಂದಿಗೆ ನಮ್ಮ ಪಾಲುದಾರಿಕೆಯನ್ನು ಘೋಷಿಸಲು ನಮಗೆ ತುಂಬಾ ಸಂತೋಷವಾಗಿದೆ. ನಂದಿನಿ, ಒಂದು ಬ್ರಾಂಡ್‌ನಂತೆ, ಶ್ರೇಷ್ಠತೆ ಮತ್ತು ಶುದ್ಧತೆಯನ್ನೂ ಪ್ರತಿನಿಧಿಸುತ್ತದೆ. ಕಳೆದ 40 ವರ್ಷಗಳಲ್ಲಿ, ನಾವು ಜಾಗತಿಕ ಉಪಸ್ಥಿತಿಗೆ ವಿಸ್ತರಿಸಿದ್ದೇವೆ. ಆದ್ರೆ ವಿಶ್ವಕಪ್‌ಗಾಗಿ ಐರ್ಲೆಂಡ್‌ ಕ್ರಿಕೆಟ್‌ ಸಂಸ್ಥೆಯೊಂದಿಗಿನ ನಮ್ಮ ಪ್ರಾಯೋಜಕತ್ವವು ಜಾಗತಿಕ ಕ್ರಿಕೆಟ್‌ ಅಭಿಮಾನಿಗಳೊಂದಿಗೆ ಸಂಪರ್ಕ ಸಾಧಿಸಲು ಅನುವು ಮಾಡಿಕೊಟ್ಟಿದೆ. ಈ ಮೂಲಕ ನಮ್ಮ ಬ್ರ್ಯಾಂಡ್ ಅನ್ನು ವಿಶ್ವದಾದ್ಯಂತ ಹೆಚ್ಚಿನ ದೇಶಗಳಿಗೆ ವಿಸ್ತರಿಸುವಲ್ಲಿ ಮಹತ್ವದ ಹೆಜ್ಜೆಯನ್ನಿಟ್ಟಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

  • ಟಿ20 ವಿಶ್ವಕಪ್‌: ಐರ್ಲೆಂಡ್‌, ಸ್ಕಾಟ್ಲೆಂಡ್‌ ತಂಡಗಳಿಗೆ ಕರ್ನಾಟಕದ ‘ನಂದಿನಿ’ ಪ್ರಯೋಜಕತ್ವ

    ಟಿ20 ವಿಶ್ವಕಪ್‌: ಐರ್ಲೆಂಡ್‌, ಸ್ಕಾಟ್ಲೆಂಡ್‌ ತಂಡಗಳಿಗೆ ಕರ್ನಾಟಕದ ‘ನಂದಿನಿ’ ಪ್ರಯೋಜಕತ್ವ

    ಬೆಂಗಳೂರು: ನಂದಿನಿ ಬ್ರಾಂಡ್‌ನಲ್ಲಿ (Nandini Milk) ತನ್ನ ಡೈರಿ ಉತ್ಪನ್ನಗಳನ್ನು ಮಾರಾಟ ಮಾಡುವ ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟ (KMF), ಟಿ20 ಕ್ರಿಕೆಟ್ ವಿಶ್ವಕಪ್‌ಗಾಗಿ (T20 World Cup 2024) ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ತಂಡಗಳಿಗೆ ಪ್ರಾಯೋಜಕತ್ವ ನೀಡಿದೆ.

    ಇದೇ ಮೊದಲ ಬಾರಿಗೆ ಕ್ರಿಕೆಟ್‌ ತಂಡಗಳಿಗೆ ಕೆಎಂಎಫ್‌ ಪ್ರಾಯೋಜಕತ್ವ ನೀಡುತ್ತಿದೆ. ಇದು ಕರ್ನಾಟಕದ ಜನತೆಗೆ ಹೆಮ್ಮೆಯ ಸಂಗತಿ ಎಂದು ಕೆಎಂಎಫ್‌ ಅಧಿಕಾರಿಗಳು ಹೇಳುತ್ತಿದ್ದಾರೆ. ಇದನ್ನೂ ಓದಿ: ಟ್ರಾವಿಸ್ ಸ್ಪೋಟಕ ಬ್ಯಾಟಿಂಗ್‌ – ಡೆಲ್ಲಿ ವಿರುದ್ಧ ಹೈದರಾಬಾದ್‌ಗೆ 67 ರನ್‌ಗಳ ಭರ್ಜರಿ ಜಯ

    ಈ ಕುರಿತು ಮಾತನಾಡಿರುವ ಕೆಎಂಎಫ್‌ನ ವ್ಯವಸ್ಥಾಪಕ ಎಂ.ಕೆ.ಜಗದೀಶ್‌, ಏ.20 ರಂದು ಒಪ್ಪಂದ ಅಧಿಕೃತಗೊಂಡಿದೆ. ಸ್ಕಾಟ್ಲೆಂಡ್‌ ಮತ್ತು ಐರ್ಲೆಂಡ್‌ (Scotland and Ireland) ತಂಡಗಳ ಆಟಗಾರರ ಜೆರ್ಸಿಯ ತೋಳಿನ ಭಾಗದ ಮೇಲೆ ಕೆಎಂಎಫ್‌ ಲೋಗೋ ಇರಲಿದೆ ಎಂದು ತಿಳಿಸಿದ್ದಾರೆ.

    ಎರಡೂ ತಂಡಗಳ ಆಟಗಾರರು ನಂದಿನಿ ಉತ್ಪನ್ನಗಳ ಜಾಹೀರಾತು, ಸಾಮಾಜಿಕ ಜಾಲತಾಣಗಳಲ್ಲಿ ನಡೆಸುವ ಅಭಿಯಾನ, ಫೋಟೋಶೂಟ್‌ಗಳಲ್ಲಿ ಭಾಗವಹಿಸಲಿದ್ದಾರೆ. ವಿಶ್ವಕಪ್‌ ವೇಳೆ ಜಾಹೀರಾತುಗಳು ಪ್ರಸಾರಗೊಳ್ಳಲಿವೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಆರ್‌ಸಿಬಿ ಹಸಿರು ಅಭಿಯಾನ; ಬೆಂಗ್ಳೂರು ಕೆರೆಗಳಿಗೆ ಕಾಯಕಲ್ಪ ನೀಡಲು ಮುಂದಾದ ಫ್ರಾಂಚೈಸಿಗೆ ಭೇಷ್‌ ಎಂದ ಫ್ಯಾನ್ಸ್‌

    ಮಧ್ಯಪ್ರಾಚ್ಯ, ಸಿಂಗಾಪುರ, ಭೂತಾನ್‌, ಮ್ಯಾನ್ಮಾರ್‌ ಸೇರಿದಂತೆ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕೆಎಂಎಫ್‌ ಅಸ್ತಿತ್ವ ಹೊಂದಿದೆ. ವಿಶ್ವಕಪ್‌ ವೇಳೆ ಕೆಎಂಎಫ್‌ನ ಉತ್ಪನ್ನಗಳು ಅಮೆರಿಕದಲ್ಲಿ ಲಭ್ಯವಿರಲಿದೆ ಎಂದು ತಿಳಿಸಿದ್ದಾರೆ.

    T20 ಕ್ರಿಕೆಟ್ ವಿಶ್ವಕಪ್ 2024 ಜೂನ್ 1 ರಿಂದ 29 ರವರೆಗೆ ವೆಸ್ಟ್ ಇಂಡೀಸ್ ಮತ್ತು ಯುನೈಟೆಡ್ ಸ್ಟೇಟ್ಸ್ ಆತಿಥ್ಯ ವಹಿಸಲಿವೆ. ಈ ವರ್ಷದ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ದಾಖಲೆಯ 20 ತಂಡಗಳಿವೆ. ಇದನ್ನೂ ಓದಿ: ರಾಹುಲ್‌ ಅಬ್ಬರದ ಆಟ – ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್‌ಗಳ ಭರ್ಜರಿ ಜಯ

  • ರಿಂಕು, ಸಂಜು ಸ್ಫೋಟಕ ಬ್ಯಾಟಿಂಗ್‌ – 33  ರನ್‌ಗಳ ಜಯ, ಸರಣಿ ಗೆದ್ದ ಟೀಂ ಇಂಡಿಯಾ

    ರಿಂಕು, ಸಂಜು ಸ್ಫೋಟಕ ಬ್ಯಾಟಿಂಗ್‌ – 33 ರನ್‌ಗಳ ಜಯ, ಸರಣಿ ಗೆದ್ದ ಟೀಂ ಇಂಡಿಯಾ

    ಡಬ್ಲಿನ್‌: ಐರ್ಲೆಂಡ್‌ (Ireland) ವಿರುದ್ಧದ ಎರಡನೇ ಟಿ20 ಪಂದ್ಯವನ್ನು ಟೀಂ ಇಂಡಿಯಾ (Team India) 33 ರನ್‌ಗಳಿಂದ ಜಯಗಳಿಸುವ  ಮೂಲಕ ಇನ್ನೂ ಒಂದು ಪಂದ್ಯ ಇರುವಂತೆಯೇ ಸರಣಿಯನ್ನು ಗೆದ್ದುಕೊಂಡಿದೆ.

    ಗೆಲ್ಲಲು 186 ರನ್‌ಗಳ ಗುರಿಯನ್ನು ಪಡೆದ ಐರ್ಲೆಂಡ್‌ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 152 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ಈ ಮೂಲಕ ತಮ್ಮ ಮೊದಲ ನಾಯಕತ್ವದಲ್ಲಿ ಬುಮ್ರಾ ವಿದೇಶಿ ನೆಲದಲ್ಲಿ ಸರಣಿ ಗೆದ್ದಿದ್ದಾರೆ.

    ಐರ್ಲೆಂಡ್‌ 63 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡಾಗ ಭಾರತ ಸುಲಭವಾಗಿ ಪಂದ್ಯವನ್ನು ಗೆಲ್ಲಬಹುದು ಎಂದು ಅಂದಾಜಿಸಲಾಗಿತ್ತು. ಆದರೆ 5ನೇ ವಿಕೆಟಿಗೆ ಆಂಡಿ ಬಾಲ್ಬಿರ್ನಿ ಮತ್ತು ಜಾರ್ಜ್ ಡಾಕ್ರೆಲ್ 30 ಎಸೆತಗಳಲ್ಲಿ 52 ರನ್‌ ಜೊತೆಯಾಟವಾಡಿ ಬಿಸಿ ಮುಟ್ಟಿಸಿದರು.

    ತಂಡದ ಮೊತ್ತ 115 ರನ್‌ ಆಗಿದ್ದಾಗ ಜಾರ್ಜ್ ಡಾಕ್ರೆಲ್ ಎರಡನೇ ರನ್‌ ಓಡಲು ಯತ್ನಿಸಿದಾಗ ರನೌಟ್‌ ಆದರು. ಜಾರ್ಜ್ ಡಾಕ್ರೆಲ್ 13 ರನ್‌ ಗಳಿಸಿ ಔಟಾದರು. ಕೇವಲ 39 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದ ಆಂಡಿ ಬಾಲ್ಬಿರ್ನಿ 72 ರನ್‌ (51 ಎಸೆತ, 5 ಬೌಂಡರಿ, 4 ಸಿಕ್ಸರ್‌) ಸಿಡಿಸಿ ಔಟಾದರು. ಇವರಿಬ್ಬರು ಔಟಾದ ಬೆನ್ನಲ್ಲೇ ತಂಡದ ರನ್‌ ವೇಗ ಇಳಿಕೆಯಾಯಿತು. ಬುಮ್ರಾ, ಪ್ರಸಿದ್ಧ್‌ ಕೃಷ್ಣ, ರವಿ ಬಿಷ್ಣೋಯಿ ತಲಾ ಎರಡು ವಿಕೆಟ್‌ ಪಡೆದರೆ ಅರ್ಶ್‌ದೀಪ್‌ ಸಿಂಗ್‌ 1 ವಿಕೆಟ್‌ ಪಡೆದರು.

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಭಾರತ 34 ರನ್‌ಗಳಿಸುವಷ್ಟರಲ್ಲಿ ಯಶಸ್ವಿ ಜೈಸ್ವಾಲ್‌ ಮತ್ತು ತಿಲಕ್‌ ವರ್ಮಾ ಅವರ ವಿಕೆಟ್‌ ಕಳೆದುಕೊಂಡಿತ್ತು. ಮೂರನೇ ವಿಕೆಟಿಗೆ ಸಂಜು ಸ್ಯಾಮ್ಸನ್‌ (Sanju Samson) ಮತ್ತು ಋತ್‌ರಾಜ್‌ ಗಾಯಕ್ವಾಡ್‌ (Ruturaj Gaikwad ) 49 ಎಸೆತಗಳಿಗೆ 71 ರನ್‌ ಜೊತೆಯಾಟವಾಡಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು.

    ಸ್ಯಾಮ್ಸನ್‌ 40 ರನ್‌ (26 ಎಸೆತ, 5 ಬೌಂಡರಿ, 1 ಸಿಕ್ಸರ್‌), ಗಾಯಕ್ವಾಡ್‌ 58 ರನ್‌ (43 ಎಸೆತ, 6 ಬೌಂಡರಿ 1 ಸಿಕ್ಸರ್‌) ಹೊಡೆದು ಔಟಾದರು. ನಂತರ ಶಿವಂ ದುಬೆ ಮತ್ತು ರಿಂಕು ಸಿಂಗ್‌ (Rinku Singh) 5ನೇ ವಿಕೆಟಿಗೆ 28 ಎಸೆತಗಳಲ್ಲಿ 55 ರನ್‌ ಜೊತೆಯಾಟವಾಡಿದರು. ರಿಂಕು ಸಿಂಗ್‌ 38 ರನ್‌ (21‌ ಎಸೆತ, 2 ಬೌಂಡರಿ, 3 ಸಿಕ್ಸರ್) ಶಿವಂ ದುಬೆ ಔಟಾಗದೇ 22 ರನ್‌(16 ಎಸೆತ, 2 ಸಿಕ್ಸರ್‌) ಹೊಡೆದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇಂದಿನಿಂದ IND vs IRE ಟಿ20 ಸರಣಿ ಆರಂಭ – 11 ತಿಂಗಳ ಬಳಿಕ ನಾಯಕನಾಗಿ ಕಣಕ್ಕಿಳಿಯಲಿದ್ದಾರೆ ಬುಮ್ರಾ

    ಇಂದಿನಿಂದ IND vs IRE ಟಿ20 ಸರಣಿ ಆರಂಭ – 11 ತಿಂಗಳ ಬಳಿಕ ನಾಯಕನಾಗಿ ಕಣಕ್ಕಿಳಿಯಲಿದ್ದಾರೆ ಬುಮ್ರಾ

    ಡಬ್ಲಿನ್: ಏಕದಿನ ಏಷ್ಯಾಕಪ್‌ (AsiaCup 2023) ಹಾಗೂ ವಿಶ್ವಕಪ್‌ (WorldCup 2023) ಟೂರ್ನಿಗೆ ಬಲಿಷ್ಠ ತಂಡ ಆಯ್ಕೆ ಮಾಡಲು ಕಸರತ್ತು ನಡೆಸುತ್ತಿರುವ ಬಿಸಿಸಿಐ ಶುಕ್ರವಾರದಿಂದ ಆರಂಭಗೊಳ್ಳಲಿರುವ ಐರ್ಲೆಂಡ್ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯನ್ನೂ ಲಘುವಾಗಿ ಪರಿಗಣಿಸುವಂತಿಲ್ಲ.

    ಯಾರ್ಕರ್‌ ಸ್ಪೆಷಲಿಸ್ಟ್‌ ಜಸ್ಪ್ರೀತ್‌ ಬುಮ್ರಾ (Jasprit Bumrah) ಬರೋಬ್ಬರಿ 11 ತಿಂಗಳ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ವಾಪಸಾಗುತ್ತಿದ್ದು, ಐರ್ಲೆಂಡ್‌ ಸರಣಿಯಲ್ಲಿ ಟೀಂ ಇಂಡಿಯಾವನ್ನ ಮುನ್ನಡೆಸಲಿದ್ದಾರೆ. ಈ ಸರಣಿಯು ಹಲವು ಯುವ ಆಟಗಾರರಿಗೆ 2024ರ ಟಿ20 ವಿಶ್ವಕಪ್‌ಗೆ ಭಾರತ ತಂಡದಲ್ಲಿ ಸ್ಥಾನಕ್ಕಾಗಿ ಆಯ್ಕೆಗಾರರ ಗಮನ ಸೆಳೆಯಲು ಅವಕಾಶ ನೀಡಲಿದೆ. ವಿಂಡೀಸ್‌ ಸರಣಿಯಲ್ಲಿ ಅನುಭವಿ ಆಟಗಾರರೊಂದಿಗೆ ಹೊಸಬರನ್ನ ಕಣಕ್ಕಿಳಿಸುವ ಪ್ರಯೋಗ ಮಾಡಿದ್ದ ಟೀಂ ಇಂಡಿಯಾ (Team India) ಸರಣಿ ಸೋತು ನಿರಾಸೆ ಅನುಭವಿಸಿತ್ತು. ಇದೀಗ ಐರ್ಲೆಂಡ್‌ ಸರಣಿಯಲ್ಲಿ ಬಹುತೇಕ ಹೊಸ ಮುಖಗಳಿಗೆ ಮಣೆಹಾಕಿರುವುದು ಕುತೂಹಲ. ಇದನ್ನೂ ಓದಿ: ಟೀಂ ಇಂಡಿಯಾ ವಿಶ್ವಕಪ್ ಗೆಲ್ಲುವುದು ಮುಖ್ಯ, ನನ್ನ ಆಯ್ಕೆಯಲ್ಲ: ಮೌನ ಮುರಿದ ಅಶ್ವಿನ್

    ಬೂಮ್ರಾ ಜೊತೆ ಮತ್ತೊಬ್ಬ ವೇಗಿ ಪ್ರಸಿದ್ಧ ಕೃಷ್ಣ ಸಹ ಹಲವು ತಿಂಗಳ ಬಳಿಕ ಕ್ರಿಕೆಟ್‌ಗೆ ವಾಪಾಸಾಗಿದ್ದು, ಕಣಕ್ಕಿಳಿಯಲು ಕಾತರಿಸುತ್ತಿದ್ದಾರೆ. ಏಷ್ಯಾಕಪ್ ಹಾಗೂ ವಿಶ್ವಕಪ್ ತಂಡಕ್ಕೆ ಆಯ್ಕೆ ನಿರೀಕ್ಷೆಯಲ್ಲಿರುವ ಈ ಇಬ್ಬರು, ಫಿಟ್‌ನೆಸ್‌ ಸಾಬೀತುಪಡಿಸಲು ಎದುರು ನೋಡುತ್ತಿದ್ದಾರೆ. 2024ರ ಟಿ20 ವಿಶ್ವಕಪ್‌ಗೂ ಯುವ ಆಟಗಾರರ ಮೇಲೆ ಕಣ್ಣಿಟ್ಟಿರುವ ಟೀಂ ಇಂಡಿಯಾ 2023ರ ಐಪಿಎಲ್‌ನಲ್ಲಿ ಮಿಂಚಿದ ಜಿತೇಶ್‌ ಶರ್ಮಾ, ರಿಂಕು ಸಿಂಗ್, ಋತುರಾಜ್ ಗಾಯಕ್ವಾಡ್ ಜೊತೆಗೆ ವಿಂಡೀಸ್‌ ವಿರುದ್ಧದ ಟೆಸ್ಟ್‌ ಸರಣಿ ಮೂಲಕ ಟೀಂ ಇಂಡಿಯಾಕ್ಕೆ ಆರಂಭಿಕನಾಗಿ ಎಂಟ್ರಿ ಕೊಟ್ಟ ಯಶಸ್ವಿ ಜೈಸ್ವಾಲ್‌ ಮೇಲೂ ನಿರೀಕ್ಷೆ ಇಡಲಾಗಿದೆ.

    ಟಿ20ಗೆ ಭಾರತ ತಂಡ ಹೀಗಿದೆ:
    ಜಸ್ಪ್ರೀತ್ ಬುಮ್ರಾ (ನಾಯಕ), ಋತುರಾಜ್ ಗಾಯಕ್ವಾಡ್ (ಉಪನಾಯಕ), ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ವಿಕೆಟ್‌ ಕೀಪರ್‌), ಜಿತೇಶ್ ಶರ್ಮಾ (ವಿಕೆಟ್‌ ಕೀಪರ್‌), ಶಿವಂ ದುಬೆ, ವಾಷಿಂಗ್ಟನ್‌ ಸುಂದರ್, ಶಹಬಾಜ್ ಅಹ್ಮದ್, ರವಿ ಬಿಷ್ಣೋಯ್, ಪ್ರಸಿದ್ಧ್ ಕೃಷ್ಣ, ಅರ್ಷ್‌ದೀಪ್ ಸಿಂಗ್, ಮುಖೇಶ್ ಕುಮಾರ್, ಅವೇಶ್ ಖಾನ್. ಇದನ್ನೂ ಓದಿ: ಸೋಲುವುದು ಕೂಡ ಒಳ್ಳೆಯದೇ, ಒಂದು ಸರಣಿ ಮ್ಯಾಟರ್‌ ಅಲ್ವೇ ಅಲ್ಲ – ಪಾಂಡ್ಯ ಸಮರ್ಥನೆ

    ಪಂದ್ಯ ಎಲ್ಲಿ ಯಾವಾಗ? 
    ಮೊದಲ ಟಿ20 – ಆಗಸ್ಟ್‌ 18
    2ನೇ ಟಿ20 – ಆಗಸ್ಟ್‌ 20
    3ನೇ ಟಿ20 – ಆಗಸ್ಟ್‌ 23

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಟೀಂ ಇಂಡಿಯಾಕ್ಕೆ ಭರ್ಜರಿ ಕಂಬ್ಯಾಕ್‌ – ಐರ್ಲೆಂಡ್‌ T20 ಸರಣಿಗೆ ಬುಮ್ರಾ ನಾಯಕ, ರಿಂಕು ಸಿಂಗ್‌ಗೆ ಚಾನ್ಸ್‌

    ಟೀಂ ಇಂಡಿಯಾಕ್ಕೆ ಭರ್ಜರಿ ಕಂಬ್ಯಾಕ್‌ – ಐರ್ಲೆಂಡ್‌ T20 ಸರಣಿಗೆ ಬುಮ್ರಾ ನಾಯಕ, ರಿಂಕು ಸಿಂಗ್‌ಗೆ ಚಾನ್ಸ್‌

    ಮುಂಬೈ: ಐರ್ಲೆಂಡ್‌ (Ireland) ವಿರುದ್ಧದ ಅಂತಾರಾಷ್ಟ್ರೀಯ ಟಿ20 ಸರಣಿಗೆ 15 ಸದಸ್ಯರ ಭಾರತ ತಂಡವನ್ನ ಬಿಸಿಸಿಐ ಸೋಮವಾರ ಪ್ರಕಟಿಸಿದ್ದು, ಗಾಯದಿಂದ ಸಂಪೂರ್ಣ ಗುಣಮುಖರಾಗಿರುವ ಸ್ಟಾರ್‌ ವೇಗಿ ಜಸ್ಪ್ರೀತ್‌ ಬುಮ್ರಾ (Jasprit Bumrah) ಅವರು ಸ್ಥಾನ ಪಡದಿದ್ದಾರೆ.

    ಹಾರ್ದಿಕ್‌ ಪಾಂಡ್ಯ (Hardik Pandya) ಅನುಪಸ್ಥಿತಿಯಿಂದಾಗಿ ಬುಮ್ರಾ ನಾಯಕನಾಗಿ ಕಣಕ್ಕಿಳಿಯಲಿದ್ದಾರೆ. ಆರಂಭಿಕ ಬ್ಯಾಟ್ಸ್‌ಮ್ಯಾನ್‌ ಋತುರಾಜ್‌ ಗಾಯಕ್ವಾಡ್‌ಗೆ (Ruturaj Gaikwad) ಉಪ ನಾಯಕನ ಜವಾಬ್ದಾರಿ ನೀಡಲಾಗಿದೆ. ಈ ಮೂಲಕ ಕಳೆದ ವರ್ಷ ಸೆಪ್ಟೆಂಬರ್‌ ತಿಂಗಳ ಬಳಿಕ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದ ಟೀಂ ಇಂಡಿಯಾ ವೇಗಿ ಜಸ್ಪ್ರೀತ್‌ ಬುಮ್ರಾ ಕೊನೆಗೂ ಟೀಂ ಇಂಡಿಯಾಕ್ಕೆ ಭರ್ಜರಿ ಕಂಬ್ಯಾಕ್‌ ಮಾಡಿದ್ದಾರೆ.

    ಆಗಸ್ಟ್‌ 18 ರಿಂದ 23ರ ವರೆಗೆ ನಡೆಯಲಿರುವ ಐರ್ಲೆಂಡ್‌ ಟಿ20 ಸರಣಿಗೆ (Ireland T20I Series) ಸೋಮವಾರ ಭಾರತ ತಂಡ ಪ್ರಕಟವಾಗಿದ್ದು ಬುಮ್ರಾಗೆ ನಾಯಕತ್ವದ ಹೊಣೆ ನೀಡಲಾಗಿದೆ. ಅಲ್ಲದೇ ಐರ್ಲೆಂಡ್‌ ಸರಣಿಗೆ ಬಹುತೇಕ ಹೊಸ ಯುವ ಆಟಗಾರರಿಗೆ ಟೀಂ ಇಂಡಿಯಾ ಮಣೆಹಾಕಿದೆ.

    2023ರ ಐಪಿಎಲ್‌ ಟೂರ್ನಿಯಲ್ಲಿ ಗುರುತಿಸಿಕೊಂಡ ರಿಂಕು ಸಿಂಗ್‌, ತಿಲಕ್‌ ವರ್ಮಾ, ಯಶಸ್ವಿ ಜೈಸ್ವಾಲ್‌, ಜಿತೇಶ್‌ ಶರ್ಮಾ ಮೊದಲಾದವರಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ನೀಡಲಾಗಿದೆ. ಪ್ರಸಿದ್ಧ್‌ ಕೃಷ್ಣ ಕೂಡ ಕಂಬ್ಯಾಕ್‌ ಮಾಡಿದ್ದಾರೆ. ಇದನ್ನೂ ಓದಿ: ಧೋನಿ ವಿಮಾನದಲ್ಲಿ ಮಲಗಿದ್ದಾಗ ಕದ್ದು ಫೋಟೋ ಕ್ಲಿಕ್ – ಗಗನಸಖಿ ನಿರ್ಧಾರ ಸರಿಯೇ?

    ಈ ಕುರಿತು ಮಾತನಾಡಿರುವ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ, ಬುಬ್ರಾ ಸಂಪೂರ್ಣ ಫಿಟ್‌ ಆಗಿದ್ದಾರೆ. ಅವರು ಮತ್ತೆ ಟೀಂ ಇಂಡಿಯಾಕ್ಕೆ ಮರಳುತ್ತಿರುವುದು ಖುಷಿ ತಂದಿದೆ. ಮುಂದಿನ ವಿಶ್ವಕಪ್‌ ತಂಡದಲ್ಲಿ ಖಂಡಿತ ಅವರಿಗೆ ಸ್ಥಾನವಿದೆ. ಏಕದಿನ ಏಷ್ಯಾಕಪ್‌ ಟೂರ್ನಿಯಲ್ಲೂ ಬುಮ್ರಾ ಪಾಲ್ಗೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.

    ಬೆನ್ನಿನ ಗಾಯದ ಸಮಸ್ಯೆಯಿಂದ ಜಸ್ಪ್ರೀತ್‌ ಬುಮ್ರಾ ಅವರು 2022ರ ಸೆಪ್ಟಂಬರ್‌ ತಿಂಗಳಿನಿಂದ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ. ಆಸ್ಟ್ರೇಲಿಯಾ ವಿರುದ್ದ ತವರು ಟಿ20 ಸರಣಿಯಲ್ಲಿ ಕೊನೆಯ ಬಾರಿ ಬುಮ್ರಾ ಭಾರತ ತಂಡದಲ್ಲಿ ಕಾಣಿಸಿಕೊಂಡಿದ್ದರು. ಶಸ್ತ್ರ ಚಿಕಿತ್ಸೆಗೂ ಒಳಗಾಗಿದ್ದ ಅವರು, ಬೆಂಗಳೂರಿನ ನ್ಯಾಷನಲ್‌ ಕ್ರಿಕೆಟ್‌ ಅಕಾಡೆಮಿಯಲ್ಲಿ ಪುನಶ್ಚೇತನ ಕಾರ್ಯದಲ್ಲಿ ತೊಡಗಿದ್ದರು. ಮುಂದಿನ ತಿಂಗಳಲ್ಲಿ ಏಷ್ಯಾಕಪ್‌ ಹಾಗೂ ಇದಾದ ಬಳಿಕ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿ ನಡೆಯುವ ಹಿನ್ನೆಲೆಯಲ್ಲಿ ಬುಮ್ರಾ ಅವರಿಗೆ ತಮ್ಮದೇ ಆಟದ ಸಮಯ ಕಲ್ಪಿಸಲು ಬಿಸಿಸಿಐ ಐರ್ಲೆಂಡ್‌ ಪ್ರವಾಸಕ್ಕೆ ಕಳುಹಿಸುತ್ತಿದೆ.

    ಟೀಂ ಇಂಡಿಯಾದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಕಳೆದ ವರ್ಷದ ಸಪ್ಟೆಂಬರ್ ತಿಂಗಳ ಬಳಿಕ ಗಾಯದ ಸಮಸ್ಯೆಯಿಂದಾಗಿ ಕ್ರಿಕೆಟ್‌ನಿಂದ ದೂರ ಉಳಿದಿದ್ದರು. 2022ರ T20 ಏಷ್ಯಾಕಪ್‌, T20 ವಿಶ್ವಕಪ್‌ ಹಾಗೂ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯ ಸೇರಿದಂತೆ ಪ್ರಮುಖ ಟೂರ್ನಿಗಳಲ್ಲಿ ಪಾಲ್ಗೊಳ್ಳುವ ಅವಕಾಶದಿಂದ ವಂಚಿತರಾಗಿದ್ದರು. ಇದನ್ನೂ ಓದಿ: 10 ಬೌಂಡರಿ, 13 ಸಿಕ್ಸರ್ – ನಿಕೋಲಸ್ ಪೂರನ್ ಸ್ಫೋಟಕ ಶತಕ; ವಿದೇಶದಲ್ಲೂ ಮುಂಬೈ ಚಾಂಪಿಯನ್

    ಟಿ20ಗೆ ಭಾರತ ತಂಡ:
    ಜಸ್ಪ್ರೀತ್ ಬುಮ್ರಾ (ನಾಯಕ), ಋತುರಾಜ್ ಗಾಯಕ್ವಾಡ್ (ಉಪನಾಯಕ), ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ವಿಕೆಟ್‌ ಕೀಪರ್‌), ಜಿತೇಶ್ ಶರ್ಮಾ (ವಿಕೆಟ್‌ ಕೀಪರ್‌), ಶಿವಂ ದುಬೆ, ವಾಷಿಂಗ್ಟನ್‌ ಸುಂದರ್, ಶಹಬಾಜ್ ಅಹ್ಮದ್, ರವಿ ಬಿಷ್ಣೋಯ್, ಪ್ರಸಿದ್ಧ್ ಕೃಷ್ಣ, ಅರ್ಷ್‌ದೀಪ್ ಸಿಂಗ್, ಮುಖೇಶ್ ಕುಮಾರ್, ಅವೇಶ್ ಖಾನ್.

    ಪಂದ್ಯ ಎಲ್ಲಿ ಯಾವಾಗ?
    ಮೊದಲ ಟಿ20 – ಆಗಸ್ಟ್‌ 18
    2ನೇ ಟಿ20 – ಆಗಸ್ಟ್‌ 20
    3ನೇ ಟಿ20 – ಆಗಸ್ಟ್‌ 23

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದ ಜೋಶುವಾ ಲಿಟಲ್

    ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದ ಜೋಶುವಾ ಲಿಟಲ್

    ಆಡಿಲೇಡ್: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ 2022ರ ಟಿ20 ವಿಶ್ವಕಪ್‍ನಲ್ಲಿ (T20 World Cup) ಐರ್ಲೆಂಡ್ (Ireland) ಬೌಲರ್ ಜೋಶುವಾ ಲಿಟಲ್ (Joshua Little) ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದ್ದಾರೆ.

    ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಜೋಶುವಾ ಲಿಟಲ್ ಹ್ಯಾಟ್ರಿಕ್ ವಿಕೆಟ್ ಪಡೆದು 2022ರ ಟಿ20 ವಿಶ್ವಕಪ್‍ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಈ ಮೊದಲು ಅರ್ಹತಾ ಸುತ್ತಿನಲ್ಲಿ ಯುಎಇಯ ಕಾರ್ತಿಕ್ ಮಯ್ಯಪ್ಪನ್ ಹ್ಯಾಟ್ರಿಕ್ ಪಡೆದಿದ್ದರು. ಇದನ್ನೂ ಓದಿ: ಆಫ್ರಿಕಾಗೆ ಸೋಲು – ಚಿಗುರಿಕೊಂಡ ಪಾಕಿಸ್ತಾನದ ಸೆಮಿಫೈನಲ್ ಕನಸು

    ಕಿವೀಸ್ ವಿರುದ್ಧ 19ನೇ ಎಸೆದ ಜೋಶುವಾ ಲಿಟಲ್ ಮೊದಲು ಕೇನ್ ವಿಲಿಯಮ್ಸನ್ ವಿಕೆಟ್ ಪಡೆದರೆ ಮುಂದಿನ ಎರಡು ಎಸೆತಗಳಲ್ಲಿ ಜೆಮ್ಮಿ ನಿಶಾಮ್ ಮತ್ತು ಮಿಚೆಲ್ ಸ್ಯಾಂಟ್ನರ್ ವಿಕೆಟ್ ಪಡೆದು ಹ್ಯಾಟ್ರಿಕ್ ಸಾಧನೆ ಮಾಡಿದರು. ಇದನ್ನೂ ಓದಿ: ಬಾಂಗ್ಲಾ ಸೋತ ಬಳಿಕ ಕೊಹ್ಲಿ ವಿರುದ್ಧ ಫೇಕ್ ಫೀಲ್ಡಿಂಗ್ ಆರೋಪ

     

    View this post on Instagram

     

    A post shared by ICC (@icc)

    ಈ ಪಂದ್ಯದಲ್ಲಿ ಐರ್ಲೆಂಡ್ ಸೋಲುನುಭವಿಸಿದೆ. ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 185 ರನ್ ಬಾರಿಸಿತು. 186 ರನ್‍ಗಳ ಟಾರ್ಗೆಟ್ ಬೆನ್ನಟ್ಟಿದ ಐರ್ಲೆಂಡ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 150 ರನ್ ಗಲಿಸಲಷ್ಟೇ ಶಕ್ತವಾಯಿತು. ಈ ಮೂಲಕ 35 ರನ್‍ಗಳ ಭರ್ಜರಿ ಜಯದೊಂದಿಗೆ ಕಿವೀಸ್ ಸೆಮಿಫೈನಲ್ ಹಾದಿ ಮತ್ತಷ್ಟು ಸುಗಮಗೊಂಡಿದೆ.

    Live Tv
    [brid partner=56869869 player=32851 video=960834 autoplay=true]

  • ಎರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್ ಟಿ20 ವಿಶ್ವಕಪ್ ಟೂರ್ನಿಯಿಂದಲೇ ಔಟ್

    ಎರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್ ಟಿ20 ವಿಶ್ವಕಪ್ ಟೂರ್ನಿಯಿಂದಲೇ ಔಟ್

    ಸಿಡ್ನಿ: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ (T20 World Cup) ಅರ್ಹತಾ ಸುತ್ತಿನಲ್ಲಿ ಐರ್ಲೆಂಡ್ (Ireland) ವಿರುದ್ಧ ಸೋತ ವೆಸ್ಟ್ ಇಂಡೀಸ್ (West Indies) ತಂಡ ಟೂರ್ನಿಯಿಂದ ಹೊರಬಿದ್ದಿದೆ.

    ಟಿ20 ಕ್ರಿಕೆಟ್‍ನಲ್ಲಿ ಅಪಾಯಕಾರಿ ಆಟಗಾರರನ್ನು ಹೊಂದಿದ್ದಂತ ತಂಡವಾಗಿ ಗುರುತಿಸಿಕೊಂಡಿದ್ದ ವೆಸ್ಟ್ ಇಂಡೀಸ್‍ಗೆ ಸೂಪರ್ 12 ಹಂತಕ್ಕೇರಲು ಐರ್ಲೆಂಡ್ ವಿರುದ್ಧದ ಪಂದ್ಯ ಮಹತ್ವದಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 146 ರನ್ ಗಳಿಸಿತು. 147 ರನ್‍ಗಳ ಟಾರ್ಗೆಟ್ ಪಡೆದ ಐರ್ಲೆಂಡ್ 17.3 ಓವರ್‌ಗಳಲ್ಲಿ ಕೇವಲ 1 ವಿಕೆಟ್ ನಷ್ಟಕ್ಕೆ 150 ರನ್ ಬಾರಿಸಿ 9 ವಿಕೆಟ್‍ಗಳ ಜಯ ಸಾಧಿಸಿ ಸೂಪರ್ 12 ಹಂತಕ್ಕೆ ಲಗ್ಗೆ ಇಟ್ಟಿದೆ. ಇದನ್ನೂ ಓದಿ: ಗ್ರೀನ್‍ಗೆ ಸಿಕ್ತು ಟಿ20 ವಿಶ್ವಕಪ್ ಗ್ರೀನ್ ಸಿಗ್ನಲ್

    ಐರ್ಲೆಂಡ್ ಪರ ಬ್ಯಾಟಿಂಗ್‍ನಲ್ಲಿ ಮಿಂಚಿದ ಪಾಲ್ ಸ್ಟಿರ್ಲಿಂಗ್ (Paul Stirling) ಅಜೇಯ 66 ರನ್ (48 ಎಸೆತ, 6 ಬೌಂಡರಿ, 2 ಸಿಕ್ಸ್) ಮತ್ತು ಲೋರ್ಕನ್ ಟಕರ್ 45 ರನ್ (35 ಎಸೆತ, 2 ಬೌಂಡರಿ, 2 ಸಿಕ್ಸ್) ಸಿಡಿಸಿ ಗೆಲುವಿನ ರೂವಾರಿಯಾದರು. ಇದನ್ನೂ ಓದಿ: ಬಿನ್ನಿ ಬಿಸಿಸಿಐ ಅಧ್ಯಕ್ಷರಾದ ಬಳಿಕ ತೆರವಾದ KSCA ಅಧ್ಯಕ್ಷ ಹುದ್ದೆ – ಮುಂದಿನ ಬಾಸ್ ಯಾರು?

    ಈ ಮೊದಲು ವಿಂಡೀಸ್ ಪರ ಬ್ರೆಂಡನ್ ಕಿಂಗ್ ಬ್ಯಾಟಿಂಗ್‍ನಲ್ಲಿ ಅಜೇಯ 62 ರನ್ (48 ಎಸೆತ, 6 ಬೌಂಡರಿ, 1 ಸಿಕ್ಸ್) ಸಿಡಿಸಿದ ನೆರವಿನಿಂದ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 146 ರನ್‍ಗಳ ಸಾಧಾರಣ ಮೊತ್ತ ಪೇರಿಸಿತು.

    ಈ ಪಂದ್ಯವನ್ನು ಜಯಿಸುವ ಮೂಲಕ ಐರ್ಲೆಂಡ್ ಸಂಭ್ರಮಿಸಿದೆ. ಇತ್ತ ಹೀನಾಯವಾಗಿ ಸೋತ ವೆಸ್ಟ್ ಇಂಡೀಸ್ ಮನೆ ದಾರಿ ಹಿಡಿದಿದೆ. ಈ ಹಿಂದೆ 2012 ಮತ್ತು 2016 ರಲ್ಲಿ ವೆಸ್ಟ್ ಇಂಡೀಸ್ ತಂಡ ಟಿ20 ವಿಶ್ವಕಪ್ ಗೆದ್ದಿತ್ತು. ಇದೀಗ ಅರ್ಹತಾ ಸುತ್ತಿನಲ್ಲೇ ಸೋತು ಮುಖಭಂಗ ಅನುಭವಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಮಹಿಳೆಯ ಹೊಟ್ಟೆಯಿಂದ ವೈದ್ಯರು ತೆಗೆದರು 55 ಬ್ಯಾಟರಿ

    ಮಹಿಳೆಯ ಹೊಟ್ಟೆಯಿಂದ ವೈದ್ಯರು ತೆಗೆದರು 55 ಬ್ಯಾಟರಿ

    ಡಬ್ಲಿನ್: 66 ವರ್ಷದ ಮಹಿಳೆಯ (Woman) ಹೊಟ್ಟೆ ಹಾಗೂ ಕರುಳಿನಿಂದ ಬರೋಬ್ಬರಿ 55 ಬ್ಯಾಟರಿಗಳನ್ನು (Battery) ವೈದ್ಯರು (Doctor) ಹೊರ ತೆಗೆದಿರುವ ವಿಚಿತ್ರ ಘಟನೆ ಐರ್ಲೆಂಡಿನಲ್ಲಿ (Ireland) ನಡೆದಿದೆ. ಮಹಿಳೆ ಉದ್ದೇಶಪೂರ್ವಕವಾಗಿಯೇ ತನ್ನನ್ನು ತಾನು ಘಾಸಿಗೊಳಿಸುವ ಉದ್ದೇಶದಿಂದ ಬ್ಯಾಟರಿಗಳನ್ನು ನುಂಗಿದ್ದಾಳೆ ಎಂದು ತಿಳಿದುಬಂದಿದೆ.

    ಮಹಿಳೆ ಕೈಗೆ ಸಿಕ್ಕ ಬ್ಯಾಟರಿಗಳನ್ನೆಲ್ಲಾ ನುಂಗಿರುವುದಾಗಿ ತಿಳಿಸಿದ್ದಾಳೆ. ಆದರೆ ಎಷ್ಟು ಬ್ಯಾಟರಿಗಳನ್ನು ನುಂಗಿದ್ದಾಳೆ ಎಂಬ ಲೆಕ್ಕ ಆಕೆಯೂ ಇಟ್ಟುಕೊಂಡಿರಲಿಲ್ಲ. ಆಕೆ ಆಸ್ಪತ್ರೆಗೆ ದಾಖಲಾದ ಬಳಿಕ ಆಕೆಯ ಹೊಟ್ಟೆಯ ಭಾಗದ ಎಕ್ಸ್-ರೇ ಪರೀಕ್ಷೆಯ ವೇಳೆ ಹೊಟ್ಟೆಯಲ್ಲಿ ಹಾಗೂ ಕರುಳಿನಲ್ಲಿ ಹಲವು ಬ್ಯಾಟರಿಗಳು ಇರುವುದನ್ನು ನೋಡಿ ದಂಗಾಗಿದ್ದಾರೆ.

    ಆರಂಭದಲ್ಲಿ ವೈದ್ಯರು ಮಹಿಳೆಯ ದೇಹದಿಂದ ಬ್ಯಾಟರಿಗಳನ್ನು ನೈಸರ್ಗಿಕವಾಗಿಯೇ ಹೊರ ಹಾಕಲು ಕಾದಿದ್ದಾರೆ. 1 ವಾರದ ಬಳಿಕ ಮತ್ತೆ ಸ್ಕ್ಯಾನ್ ಮಾಡಿ ನೋಡಿದಾಗ ಮತ್ತಷ್ಟು ಬ್ಯಾಟರಿಗಳು ಇದ್ದುದನ್ನು ನೋಡಿದ್ದಾರೆ. ಆಕೆ ತಾನಾಗಿಯೇ AA ಬ್ಯಾಟರಿಗಳನ್ನು ಮಾತ್ರವೇ ಹೊರ ಹಾಕಲು ಸಾಮರ್ಥ್ಯಳಾಗಿದ್ದು, AAA ಬ್ಯಾಟರಿಗಳನ್ನು ಹೊರ ಹಾಕಲು ಸಾಧ್ಯವಾಗಿರಲಿಲ್ಲ. ಇದನ್ನೂ ಓದಿ: ಸತತ ಎರಡೂವರೆ ಗಂಟೆಗಳ ಕಾಲ ಲಿಫ್ಟ್‌ನಲ್ಲಿ ಸಿಕ್ಕಿಬಿದ್ದ 6ರ ಬಾಲಕ

    ಬ್ಯಾಟರಿಗಳ ತೂಕದಿಂದಾಗಿ ಆಕೆಯ ಹೊಟ್ಟೆ ಹಿಗ್ಗಿದ್ದು ಮಾತ್ರವಲ್ಲದೇ ಅವು ಗುದದ್ವಾರದ ಮೂಳೆಗಳಲ್ಲೂ ನೇತಾಡಿಕೊಂಡಿದ್ದವು ಎಂದು ವೈದ್ಯರು ತಿಳಿಸಿದ್ದಾರೆ. ಬಳಿಕ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ, ಎಲ್ಲಾ ಬ್ಯಾಟರಿಗಳನ್ನೂ ತೆಗೆದುಹಾಕಿದ್ದಾರೆ.

    ವೈದ್ಯರು ಶಸ್ತ್ರಚಿಕಿತ್ಸೆಯಲ್ಲಿ ಒಟ್ಟು 55 ಬ್ಯಾಟರಿಗಳನ್ನು ತೆಗೆದಿದ್ದು, ಇದು ಇಲ್ಲಿಯವರೆಗೆ ಶಸ್ತ್ರಚಿಕಿತ್ಸೆಯಲ್ಲಿ ಮನಿಷ್ಯರ ಹೊಟ್ಟೆಯಿಂದ ತೆಗೆಯಲಾದ ಅತಿ ಹೆಚ್ಚು ಬ್ಯಾಟರಿಗಳು ಎಂದು ತಿಳಿಸಿದ್ದಾರೆ. ಮಾತ್ರವಲ್ಲದೇ ಆ ಬ್ಯಾಟರಿಗಳು ಆಕೆಯ ಜೀರ್ಣಕ್ರಿಯೆಗೆ ಯಾವುದೇ ರೀತಿಯ ತೊಂದರೆ ಕೊಟ್ಟಿಲ್ಲ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕೋವಿಡ್‌ ಟೈಂನಲ್ಲಿ ನಾಪತ್ತೆಯಾಗಿದ್ದ ಬೆಕ್ಕು 2 ವರ್ಷಗಳ ನಂತರ ತಾನೇ ಮನೆಗೆ ಬಂತು!

    Live Tv
    [brid partner=56869869 player=32851 video=960834 autoplay=true]