Tag: ಐರಾ ಯಶ್

  • ಅಪ್ಪನ ಸ್ಟೈಲ್ ಕಾಪಿ ಮಾಡಿದ ಮಗ: ಜೂನಿಯರ್ ಯಶ್ ಫೋಟೋ ವೈರಲ್

    ಅಪ್ಪನ ಸ್ಟೈಲ್ ಕಾಪಿ ಮಾಡಿದ ಮಗ: ಜೂನಿಯರ್ ಯಶ್ ಫೋಟೋ ವೈರಲ್

    ನ್ಯಾಷನಲ್ ಸ್ಟಾರ್ ಯಶ್‌ಗೆ ಅಪಾರ ಅಭಿಮಾನಿಗಳ ಬಳಗವಿದೆ. ಅದರಲ್ಲೂ `ಕೆಜಿಎಫ್ 2′ ಸಿನಿಮಾ ಬಿಡುಗಡೆಯಾದ ನಂತರ ಯಶ್ ಹವಾ ಹೆಚ್ಚಾಗಿದೆ. ಯಶ್‌ನಂತೆ ಅವರ ಮಕ್ಕಳು ಐರಾ ಹಾಗೂ ಯಥರ್ವ್ನನ್ನು ಫ್ಯಾನ್ಸ್ ಇಷ್ಟಪಡುತ್ತಾರೆ. ಸದ್ಯ ರಾಧಿಕಾ ಶೇರ್‌ ಮಾಡಿರುವ ಮಗನ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಅಭಿಮಾನಿಗಳು ಅಪ್ಪನಂತೆ ಮಗ ಎನ್ನುತ್ತಿದ್ದಾರೆ.

    ಯಶ್ ಪತ್ನಿ ನಟಿ ರಾಧಿಕಾ ಪಂಡಿತ್ ಒಂದು ಸ್ಟೋರಿ ಹಾಕಿಕೊಂಡಿದ್ದಾರೆ. ಅದರಲ್ಲಿ ಯಥರ್ವ್ ಬೀಚ್‌ನ ದಡದಲ್ಲಿ ಕಡಲಿಗೆ ಮುಖ ಮಾಡಿ ನಿಂತಿದ್ದು, ಅದಕ್ಕೆ ರಾಧಿಕಾ ಎಲ್ಲೋ ನೋಡಿದ ಹಾಗಿದೆ ಅಲ್ಲವಾ ಎಂದು ಕ್ಯಾಪ್ಷನ್ ಮಾಡಿದ್ದಾರೆ. ಸದ್ಯ ಈ ಫೋಟೋ ವೈರಲ್ ಆಗುತ್ತಿದೆ. ಈ ಫೋಟೋದಾ ವಿಶೇಷತೆ ಎಂದರೆ, ಯಥರ್ವ್ ಯಶ್ ರೀತಿಯಲ್ಲಿ ಪೋಸ್ ಕೊಟ್ಟಿರೋದು ಈ ಫೋಟೋ ನೋಡಿದರೆ ನಮಗೆ ಕೆಜಿಎಫ್ ಸಿನಿಮಾ ನೆನಪಾಗುತ್ತದೆ. `ಕೆಜಿಎಫ್’ ಅಭಿಮಾನಿಗಳಿಗೆ ತಕ್ಷಣ ರಾಕಿಭಾಯ್ ಪೋಸ್ ಕಣ್ಣು ಮುಂದೆ ಬರುತ್ತದೆ. ಇದನ್ನೂ ಓದಿ: ವೈಟ್ ಡ್ರೆಸ್‌ನಲ್ಲಿ ಮಿಂಚಿದ ಬಹುಭಾಷಾ ನಟಿ ಪ್ರಿಯಾಮಣಿ

    ರಾಕಿಭಾಯ್ ಕೂಡ ಕೆಜಿಎಫ್ ಸಿನಿಮಾದಲ್ಲಿ ಕಡಲ ತೀರದಲ್ಲಿ ನಿಂತಿರುವ ಪೋಸ್ ಇದೆ. ಸಿನಿಮಾದಲ್ಲಿ ಬಾಲ್ಯದಲ್ಲಿ ಒಮ್ಮೆ ನಂತರ ಮೊದಲ ಪಾರ್ಟ್ ಹಾಗೂ ಚಾಪ್ಟರ್ 2ನಲ್ಲಿ ಸಹ ಇದೇ ಪೋಸ್ ಇದೆ. ತಂದೆಯಂತೆ ಮಗ ಯಥರ್ವ್ ಪೋಸ್ ಕೊಟ್ಟಿದ್ದಾನೆ. ಅವರಿಗೆ ಭಾರತ ಮಾತ್ರವಲ್ಲದೇ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ. ದಿನದಿಂದ ದಿನಕ್ಕೆ ಅವರ ಹೆಸರು ಬೆಳೆಯುತ್ತಲೇ ಇದೆ. ಇನ್ನು `ಕೆಜಿಎಫ್ 2′ ಸಕ್ಸಸ್ ನಂತರ ಯಶ್ ಮಕ್ಕಳು ಹಾಗೂ ಕುಟುಂಬ ಅಂತ ಫುಲ್ ಬ್ಯುಸಿ ಇದ್ದಾರೆ.

    Live Tv

  • ಕ್ಯಾಮೆರಾ ಕಣ್ಣಿಗೆ ಮುದ್ದಾದ ನಗು ಬೀರಿದ ಯಶ್ ಮಗಳು ಐರಾ

    ಕ್ಯಾಮೆರಾ ಕಣ್ಣಿಗೆ ಮುದ್ದಾದ ನಗು ಬೀರಿದ ಯಶ್ ಮಗಳು ಐರಾ

    ಸ್ಯಾಂಡಲ್‌ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಸಿನಿಮಾಗಳಿಂದ ಬ್ರೇಕ್ ಪಡೆದು, ಮಕ್ಕಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಇರುವ ರಾಧಿಕಾ ಈಗ ಐರಾ ಮತ್ತು ಯಥರ್ವ್ನ ಮುದ್ದಾದ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋ ಈಗ ಸಖತ್ ವೈರಲ್ ಆಗುತ್ತಿದೆ.

    ಯಶ್ ಮತ್ತು ರಾಧಿಕಾ ದಂಪತಿಗೆ ಐರಾ ಮತ್ತು ಯಥರ್ವ್ ಎಂಬ ಮುದ್ದಾದ ಮಕ್ಕಳಿದ್ದಾರೆ. ಸಮಯ ಸಿಕ್ಕಾಗಲೆಲ್ಲಾ ಮಕ್ಕಳ ಜೊತೆ ಸಮಯ ಕಳೆಯೋಕೆ ಮೀಸಲಿಡುತ್ತಾರೆ. ಮಕ್ಕಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಮಕ್ಕಳು ಮಾಡುವ ಕೀಟಲೆಯನ್ನು ಆಗಾಗ ಶೇರ್ ಮಾಡುವ ಮೂಲಕ ಅಭಿಮಾನಿಗಳಿಗೆ ಖುಷಿ ನೀಡುತ್ತಿರುತ್ತಾರೆ. ಇದೀಗ ಮುದ್ದು ಮಕ್ಕಳ ಮುದ್ದಾದ ಫೋಟೋವನ್ನು ನಟಿ ರಾಧಿಕಾ ಹಂಚಿಕೊಂಡಿದ್ದಾರೆ. ಕೆಜಿಎಫ್ 2 ಚಿತ್ರದ 50ನೇ ದಿನಕ್ಕೆ ಯಶ್ ನಟನೆಯ ಹೊಸ ಸಿನಿಮಾ ಅನೌನ್ಸ್?

     

    View this post on Instagram

     

    A post shared by Radhika Pandit (@iamradhikapandit)

    ಸಹೋದರ ಯಥರ್ವ್‌ ಜೊತೆಯಿರೋ ಐರಾ ಕ್ಯಾಮೆರಾ ಕಣ್ಣಿಗೆ ಮುದ್ದಾದ ನಗು ಬೀರಿದ್ದಾಳೆ. ಈ ಫೋಟೋ ಜೊತೆ ಮಂಡೇ ಬ್ಲ್ಯೂಸ್ ಎನ್ನುವ ಕ್ಯಾಪ್ಷನ್ ನೀಡಿದ್ದಾರೆ. ಒಟ್ನಲ್ಲಿ ಐರಾ ಕ್ಯೂಟ್‌ನೆಸ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. 2016ರಲ್ಲಿ ಯಶ್ ಜೊತೆ ರಾಧಿಕಾ ಹಸೆಮಣೆ ಏರಿದ್ದರು. ಬಳಿಕ 2019ರಲ್ಲಿ `ಆದಿ ಲಕ್ಷ್ಮಿ ಪುರಾಣ’ ಚಿತ್ರದಲ್ಲಿ ರಾಧಿಕಾ ನಾಯಕಿಯಾಗಿ ಮಿಂಚಿದ್ದರು. ಆ ನಂತರ ಮಕ್ಕಳ ಆರೈಕೆಯಲ್ಲಿರುವ ರಾಧಿಕಾ, ಈಗ ಮತ್ತೆ ಸಿನಿಮಾಗೆ ವಾಪಸ್ ಆಗುತ್ತಾರೆ ಎಂಬ ಮಾಹಿತಿ ಸಿಕ್ಕಿದೆ. ಸೂಕ್ತ ಕಥೆ ಜೊತೆ ರಾಧಿಕಾ ಬೆಳ್ಳಿಪರದೆಯಲ್ಲಿ ಮಿಂಚೋದು ಗ್ಯಾರೆಂಟಿ.

  • `ಸಲಾಂ ರಾಕಿಭಾಯ್’ ಎಂದ ಯಶ್ ಪುತ್ರಿ ಐರಾ

    `ಸಲಾಂ ರಾಕಿಭಾಯ್’ ಎಂದ ಯಶ್ ಪುತ್ರಿ ಐರಾ

    ನ್ನಡದ ಹೆಮ್ಮೆ `ಕೆಜಿಎಫ್ 2′ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಬಾಕ್ಸ್ಆಫೀಸ್‌ನಲ್ಲಿ ಬಂಗಾರದ ಬೆಳೆ ತೆಗೆಯುತ್ತಿದೆ. ದೇಶದ ಮೂಲೆ ಮೂಲೆಯಲ್ಲೂ ಯಶ್ ಖಡಕ್ ಆಕ್ಟಿಂಗ್ ನೋಡಿ ಅಭಿಮಾನಿ ದೇವರುಗಳು ಅಪ್ಪಿ ಒಪ್ಪಿಕೊಂಡಿದಾಯ್ತು. ಈಗ ರಾಕಿಭಾಯ್ ಮಗಳು ಐರಾ ಸಲಾಮ್ ರಾಕಿಭಾಯ್ ಅಂತಾ ಹೇಳಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.

    kgf 2

    ಪ್ರಶಾಂತ್ ನೀಲ್ ಮತ್ತು ಯಶ್ ಕಾಂಬಿನೇಶನ್‌ನ ಯಶಸ್ವಿ ಚಿತ್ರ `ಕೆಜಿಎಫ್ 2′ ಬಾಕ್ಸ್ಆಫೀಸ್‌ನಲ್ಲಿ ಕೋಟಿ ಕೋಟಿ ಲೂಟಿ ಮಾಡುತ್ತಿದೆ. ಬಾಲಿವುಡ್‌ನಲ್ಲಿ ಯಶ್‌ದೇ ಕಾರುಬಾರು ಹೀಗೆಲ್ಲಾ ಇರುವಾಗ ಇದೀಗ ಮಾಸ್ಟರ್‌ಪೀಸ್ ಯಶ್ ಮಗಳು ಐರಾ ಸಲಾಂ ರಾಕಿಭಾಯ್ ರಾ.. ರಾ..ರಾಕಿ ಅಂತಾ ಮುದ್ದು ಮುದ್ದಾಗಿ ಹೇಳಿದ್ದಾರೆ.

     

    View this post on Instagram

     

    A post shared by Yash (@thenameisyash)

    ನ್ಯಾಷನಲ್ ಯಶ್ ಇನ್ಸ್ಟಾಗ್ರಾಂ ಖಾತೆಯಲ್ಲಿ ಬೆಳಗಿನ ಆಚರಣೆ ರಾಕಿಭಾಯ್ ಜತೆ ತಮಾಷೆಯೊಂದಿಗೆ ಶುರುವಾಗಬೇಕು ಎಂದು ಪುತ್ರಿ ಐರಾ ಸಲಾಂ ರಾಕಿಭಾಯ್ ರಾ.. ರಾ..ರಾಕಿ ಅಂತಾ ವಿಡಿಯೋ ಯಶ್ ಸೋಷಿಯಲ್ ಮೀಡಿಯಾ ಖಾತೆ ಸಖತ್ ವಿವ್ಸ್ ಗಿಟ್ಟಿಸಿಕೊಳ್ಳುವುದರ ಜತೆಗೆ ಸಲಾಂ ರಾಕಿಭಾಯ್ ಎಂದ ಐರಾ ಕ್ಯೂಟ್‌ನೆಸ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.‌ ಇದನ್ನೂ ಓದಿ: `ಪುಷ್ಪ’ ಬೆಡಗಿ ರಶ್ಮಿಕಾ ಒಂದೇ ದಿನ ಏನೆಲ್ಲಾ ತಿಂತಾರೆ ಗೊತ್ತಾ? ರಶ್ಮು ವಿಡಿಯೋ ವೈರಲ್

    ಕೆಜಿಎಫ್ ಚಾಪ್ಟರ್ 1 ಮತ್ತು ಚಾಪ್ಟರ್ 2 ಯಶಸ್ಸಿನಿಂದ ಮಿರ ಮಿರ ಅಂತಾ ಮಿಂಚ್ತಿರೋ ಯಶ್ ಮುಂದಿನ ಚಿತ್ರದ ಬಗ್ಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಜತೆಗೆ `ಕೆಜಿಎಫ್ 2′ ಅಪ್‌ಡೇಟ್ ಕುರಿತು ಕ್ಯೂರಿಯಸ್ ಆಗಿದ್ದಾರೆ.

  • ಐರಾಗೆ ಹುಟ್ಟುಹಬ್ಬದ ಸಂಭ್ರಮ – ನಿನ್ನ ಕೈ ಹಿಡಿಯಲು ಯಾವಾಗಲೂ ಇರುತ್ತೇನೆ ಅಂದ ರಾಧಿಕಾ

    ಐರಾಗೆ ಹುಟ್ಟುಹಬ್ಬದ ಸಂಭ್ರಮ – ನಿನ್ನ ಕೈ ಹಿಡಿಯಲು ಯಾವಾಗಲೂ ಇರುತ್ತೇನೆ ಅಂದ ರಾಧಿಕಾ

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ದಂಪತಿಯ ಪ್ರೀತಿಯ ಪುತ್ರಿ ಐರಾ ಯಶ್‍ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 3ನೇ ಜನುಮದಿನ ಸಂತಸದಲ್ಲಿರುವ ಐರಾಗೆ ರಾಧಿಕಾ ಪಂಡಿತ್ ಭಾವನಾತ್ಮಕವಾಗಿ ಶುಭಾಶಯ ತಿಳಿಸಿದ್ದಾರೆ.

    ಯಶ್ ಹಾಗೂ ರಾಧಿಕಾ ಪಂಡಿತ್ ಎಷ್ಟೇ ಬ್ಯುಸಿಯಾಗಿದ್ದರು ಮಕ್ಕಳ ಜೊತೆ ಕಾಲ ಕಳೆಯುವುದನ್ನು ಮಾತ್ರ ಎಂದಿಗೂ ಮಿಸ್ ಮಾಡುವುದಿಲ್ಲ. ಪ್ರವಾಸ, ವಾಕಿಂಗ್, ಡಿನ್ನರ್ ಹೀಗೆ ಆಗಾಗಾ ಮಕ್ಕಳನ್ನು ಔಟಿಂಗ್ ಕರೆದುಕೊಂಡು ಹೋಗುತ್ತಿರುತ್ತಾರೆ. ಇದನ್ನೂ ಓದಿ: ಕಡಲೆಕಾಯಿ ಪರಿಷೆಯಲ್ಲಿ ನಕ್ಕುನಲಿದ ವೈಷ್ಣವಿಗೌಡ

    ಸದ್ಯ ಚಿತ್ರರಂಗದಿಂದ ಕೊಂಚ ಬ್ರೇಕ್ ಪಡೆದುಕೊಂಡಿರುವ ರಾಧಿಕಾ ಪಂಡಿತ್ ಇದೀಗ ಮಕ್ಕಳ ಆರೈಕೆಯಲ್ಲಿ ಫುಲ್ ಬ್ಯೂಸಿಯಾಗಿದ್ದಾರೆ. ಐರಾ ಮತ್ತು ಯಥರ್ವ್ ತರ್ಲೆ, ಚೇಷ್ಟೆ ವೀಡಿಯೋ ಹಾಗೂ ಫೋಟೋಗಳನ್ನು ಆಗಾಗ ಹಂಚಿಕೊಳ್ಳುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಇದೀಗ ಮಗಳೊಂದಿಗಿರುವ ಕ್ಯೂಟ್ ಫೋಟೋವೊಂದನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ರಾಧಿಕಾ ಪಂಡಿತ್ ಐರಾಗೆ ವಿಶ್ ಮಾಡಿದ್ದಾರೆ. ಇದನ್ನೂ ಓದಿ:  ತಾಯಿಯಾಗ್ತಿದ್ದಾರೆ ನಟಿ ಅಮೂಲ್ಯ ಜಗದೀಶ್

     

    View this post on Instagram

     

    A post shared by Radhika Pandit (@iamradhikapandit)

    ಫೋಟೋದಲ್ಲಿ ರಾಧಿಕಾ ಪಂಡಿತ್ ಮಗಳ ಕೈ ಹಿಡಿದುಕೊಂಡು ಹೋಗುತ್ತಿರುವುದನ್ನು ಕಾಣಬಹುದಾಗಿದೆ. ಫೋಟೋ ಜೊತೆಗೆ ನಿನ್ನ ಕೈ ಹಿಡಿಯಲು ಸದಾ ಯಾವಾಗಲೂ ನಿನ್ನೊಂದಿಗೆ ಇರುತ್ತೇನೆ. ಹುಟ್ಟುಹಬ್ಬದ ಶುಭಾಶಯಗಳು ಎಂಜೆಲ್ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಳ್ಳುಯವ ಮೂಲಕ ವಿಶ್ ಮಾಡಿದ್ದಾರೆ.

  • ರಾಮಾಚಾರಿಗೆ ಐರಾಳ ಗೂಗ್ಲಿ- ಶೇರಿಂಗ್, ಕೇರಿಂಗ್ ವೀಡಿಯೋ ವೈರಲ್

    ರಾಮಾಚಾರಿಗೆ ಐರಾಳ ಗೂಗ್ಲಿ- ಶೇರಿಂಗ್, ಕೇರಿಂಗ್ ವೀಡಿಯೋ ವೈರಲ್

    ಬೆಂಗಳೂರು: ಸ್ಯಾಂಡಲ್‍ವುಡ್ ರಾಜಾಹುಲಿ, ರಾಕಿಂಗ್ ಸ್ಟಾರ್ ಯಶ್ ಗೆ ಪುತ್ರಿ ಐರಾ ಚಮಕ್ ನೀಡಿದ್ದಾಳೆ. ಮಗಳ ಜೊತೆಗಿನ ಮುದ್ದಾದ ವಿಡಿಯೋ ಹಂಚಿಕೊಂಡಿರುವ ಗಜಕೇಸರಿ, ಶೇರಿಂಗ್ ಮತ್ತು ಕೇರಿಂಗ್ ಎಂದು ಬರೆದುಕೊಂಡಿದ್ದಾರೆ.

    ತಂದೆ ಯಶ್ ಮುಂದೆ ಟೇಬಲ್ ಮೇಲೆ ಕುಳಿತ ಐರಾ ಐಸ್ ಕ್ರೀಂ ತಿನ್ನುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಪುತ್ರಿ ಐರಾ ಐಸ್ ಕ್ರೀಂ ತಿನ್ನುವಾಗ ತಮಗೂ ನೀಡುವಂತೆ ಯಶ್ ಕೇಳಿದ್ದಾರೆ. ಆದ್ರೆ ಐರಾ ಮಾತ್ರ ಜಾಣತನದಿಂದ ಐಸ್ ಕ್ರೀಂ ತುಂಬಿದ ಸ್ಪೂನ್ ತಂದೆ ಬಳಿ ತೆಗೆದುಕೊಂಡಿ ತಾನೇ ತಿನ್ನುವ ಮೂಲಕ ಗೂಗ್ಲಿಗೆ ಗೂಗ್ಲಿ ಹಾಕಿದ್ದಾರೆ.

     

    View this post on Instagram

     

    Sharing is caring… not when it comes to ICE CREAM ???? (Getting a dose of my own medicine here ????)

    A post shared by Yash (@thenameisyash) on

    ಪ್ಲೀಸ್ ಅಮ್ಮಾ, ಸ್ವಲ್ಪ ನೀಡು ಎಂದು ಯಶ್ ಕೇಳಿಕೊಂಡರೂ ಐರಾ ಮಾತ್ರ ಸ್ಪೂನ್ ಹತ್ತಿರ ತೆಗೆದುಕೊಂಡು ಹೋಗಿ ತಾನೇ ತಿಂದು ಚಮಕ್ ಕೊಟ್ಟಿದ್ದಾಳೆ. ಕೊನೆಗೆ ಮುಂದೆ ವಿಡಿಯೋ ಮಾಡುತ್ತಿದ್ದ ಮಾವನನ್ನ ಕರೆದ ಐರಾ, ಐಸ್ ಕ್ರೀಂ ತಿನ್ನಿಸುವಂತೆ ನಟಿಸಿ ಮಾಂಜಾ ಕೊಟ್ಟಿದ್ದಾಳೆ. ಕೆಲ ದಿನಗಳ ಹಿಂದೆ ಐರಾ ಲಾಲಿ ಹಾಡು ಸಹ ವೈರಲ್ ಆಗಿತ್ತು.

  • ವೈಜಿಎಫ್ 2- ಎರಡನೇ ಮಗುವಿನ ತಂದೆಯಾಗ್ತಿದ್ದಾರೆ ಯಶ್

    ವೈಜಿಎಫ್ 2- ಎರಡನೇ ಮಗುವಿನ ತಂದೆಯಾಗ್ತಿದ್ದಾರೆ ಯಶ್

    ಬೆಂಗಳೂರು: ಸ್ಯಾಂಡಲ್‍ವುಡ್‍ನ ರಾಕಿಂಗ್ ದಂಪತಿ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಅವರು ಮಗಳ ಮುದ್ದಾದ ವಿಡಿಯೋದೊಂದಿಗೆ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ.

    ಯಶ್ ಈಗ ಎರಡನೇ ಮಗುವಿಗೆ ತಂದೆಯಾಗುತ್ತಿದ್ದಾರೆ. ರಾಧಿಕಾ ಪಂಡಿತ್ ಅವರು 4 ತಿಂಗಳ ಗರ್ಭಿಣಿಯಾಗಿದ್ದು, ಈ ಬಗ್ಗೆ ಸ್ವತಃ ಯಶ್ ಅವರೇ ತಮ್ಮ ಮಗಳ ವಿಡಿಯೋ ಮೂಲಕ ಈ ಖುಷಿಯನ್ನು ಹಂಚಿಕೊಂಡಿದ್ದಾರೆ.

    ಇದೇ 23ರಂದು ಯಶ್ ದಂಪತಿ ತಮ್ಮ ಮಗಳಿಗೆ ಐರಾ ಎಂದು ನಾಮಕರಣ ಮಾಡಿದ್ದಾರೆ. ಇದರ ಬೆನ್ನಲ್ಲೇ ಈಗ ತಮ್ಮ ಎರಡನೇ ಮಗುವಿನ ಆಗಮನದ ಬಗ್ಗೆ ಯಶ್ ಅವರು ಎಲ್ಲರಿಗೂ ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಸಿದ್ದಾರೆ.

    ಪೋಸ್ಟ್ ನಲ್ಲಿ ಏನಿದೆ?
    ವೈಜಿಎಫ್ ಚಾಪ್ಟರ್ 2, ಮತ್ತೊಂದು ಸಿಹಿ ಸುದ್ದಿ ನಿಮ್ಮ ಪ್ರೀತಿ ಹಾರೈಕೆ ನಮ್ಮ ಕುಟುಂಬದ ಮೇಲಿರಲಿ ಎಂದು ಬರೆದು ಮಗಳ ವಿಡಿಯೋ ಮೂಲಕ ಈ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

    ಭಾನುವಾರ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್‍ನಲ್ಲಿ ನಡೆದ ಅದ್ಧೂರಿ ನಾಮಕರಣ ಸಮಾರಂಭದಲ್ಲಿ ಯಶ್ ರಾಧಿಕಾ ದಂಪತಿ ತಮ್ಮ ಮುದ್ದಾದ ಮಗಳಿಗೆ `ಐರಾ’ ಎಂದು ಹೆಸರಿಟ್ಟಿದ್ದರು. ಯಶ್ ಹಾಗೂ ರಾಧಿಕಾ ಹೆಸರಿನ ಅಕ್ಷರಗಳನ್ನು ಜೋಡಿಸಿ ಈ ಹೆಸರಿಟ್ಟಿರುವುದು ಒಂದು ವಿಶೇಷವಾದರೆ ಇದರ ಅರ್ಥ ಇನ್ನೊಂದು ವಿಶೇಷತೆ ಹೊಂದಿದೆ.

    ಸೋಶಿಯಲ್ ಮಿಡಿಯಾದಲ್ಲಿ ಮಗಳ ಫೋಟೋ ಅಪ್ಲೋಡ್ ಮಾಡುತ್ತಿದ್ದಾಗ `Baby YR’ ಎಂದೇ ಕರೆಯುತ್ತಿದ್ದರು. ಈಗ ಮಗಳಿಗೆ AYRA ಎಂದು ಹೆಸರನ್ನಿಟ್ಟಿದ್ದಾರೆ. ನಡುವಿನಲ್ಲಿ YR ಎಂದಿದೆ. ಅಷ್ಟೇ ಅಲ್ಲ ರಾ (ರಾಧಿಕಾ) ಹಾಗೂ ಯ (ಯಶ್) ಅಕ್ಷರಗಳೂ ಇದೆ.

    ಅರೇಬಿಕ್‍ನಲ್ಲಿ ‘ಐರಾ’ ಎಂದರೆ `ಕಣ್ಣು ತೆರೆಸುವವರು’ ಅಥವಾ `ಗೌರವಾನ್ವಿತರು’ ಎನ್ನುವ ಅರ್ಥ ಬರುತ್ತದೆ. ಕನ್ನಡದಲ್ಲಿ ‘ಭೂದೇವಿಯಲ್ಲಿ ಸನ್ನಿಹಿತಳಾದ ಲಕ್ಷ್ಮೀ’ ಎನ್ನುವ ಅರ್ಥ ಬರುತ್ತದೆ.