Tag: ಐರಾವನ್

  • ಕನ್ನಡ ಚಿತ್ರರಂಗಕ್ಕೆ ಜೆಕೆ ಗುಡ್‌ ಬೈ- ಅಷ್ಟಕ್ಕೂ ಆಗಿದ್ದೇನು.?

    ಕನ್ನಡ ಚಿತ್ರರಂಗಕ್ಕೆ ಜೆಕೆ ಗುಡ್‌ ಬೈ- ಅಷ್ಟಕ್ಕೂ ಆಗಿದ್ದೇನು.?

    ಶ್ವಿನಿ ನಕ್ಷತ್ರ, ಬಿಗ್ ಬಾಸ್ (Bigg Boss) ಮೂಲಕ ಮನೆ ಮಾತಾದ ಕಿರುತೆರೆಯ ಸೂಪರ್ ಸ್ಟಾರ್ ಜೆಕೆ (Jk) ಅವರು ಚಿತ್ರರಂಗ ಬಿಡುವ ಬಗ್ಗೆ ಮಾತನಾಡಿದ್ದಾರೆ. ಸಿನಿಮಾರಂಗದಿಂದ ದೂರ ಉಳಿಯುವ ಬಗ್ಗೆ ಮಾತನಾಡಿದ್ದಾರೆ. ಜೆಕೆ, ನಟನೆಗೆ ಗುಡ್ ಬೈ ಹೇಳಲು ಕಾರಣವೇನು.? ಅಷ್ಟಕ್ಕೂ ಆಗಿದ್ದಾರೂ ಏನು.? ಇಲ್ಲಿದೆ ಡಿಟೈಲ್ಸ್.

    ನಟ ಜೆಕೆಗೆ, ಕನ್ನಡ- ಹಿಂದಿ ಕಿರುತೆರೆಯಲ್ಲಿ ಸಕ್ಸಸ್ ಸಿಕ್ಕ ಹಾಗೇ ಸಿನಿಮಾದಲ್ಲಿ ಸಕ್ಸಸ್ ಸಿಗಲಿಲ್. ಆದರೆ, ಜೆಕೆ ಅವರು ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ. ಆದರೆ ಈಗ ಹಠಾತ್ತನೇ ಚಿತ್ರರಂಗ ಬಿಡುವ ನಿರ್ಧಾರಕ್ಕೆ ಬಂದಿದ್ದಾರೆ. ಈ ವೇಳೆ ಕನ್ನಡ ಚಿತ್ರರಂಗದಲ್ಲಿ ಕೆಲವರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ತಮ್ಮನ್ನು ತುಳಿಯುತ್ತಿದ್ದಾರೆ ಅಂತಾ ಆರೋಪ ಮಾಡಿದ್ದಾರೆ. ಅಲ್ಲದೆ ಎರಡು ಸಿನಿಮಾಗಳ ಬಳಿಕ ಕನ್ನಡ ಚಿತ್ರರಂಗಕ್ಕೆ ಗುಡ್ ಬೈ ಹೇಳುವುದಕ್ಕೆ ನಿರ್ಧಾರ ಮಾಡಿದ್ದಾರೆ. ಅಷ್ಟಕ್ಕೂ ಕನ್ನಡ ಚಿತ್ರರಂಗದಲ್ಲಿ ಜೆಕೆಗೆ ಅಂತಹದ್ದೇನಾಯ್ತು?

    ‘ಅಶ್ವಿನಿ ನಕ್ಷತ್ರ’ (Ashwini Nakshatra) ಸೀರಿಯಲ್ ಸಮಯದಲ್ಲೇ ಬಳಿಕ ಎರಡು ದೋಣೆಯ ಮೇಲೆ ಕಾಲಿಡುವುದು ಸೂಕ್ತವಲ್ಲ ಎನಿಸಿ ಕೆಲಸ ಬಿಟ್ಟು ನಟನೆಯನ್ನು ಪೂರ್ಣ ವೃತ್ತಿಯನ್ನಾಗಿ ಮಾಡಿಕೊಂಡೆ. ನನ್ನ ಮೊದಲ ಸೀರಿಯಲ್‌ನಿಂದಲೇ ಜನ ಪ್ರೀತಿಸಲು ಶುರು ಮಾಡಿದ್ದರು. ನನ್ನ ನಟನೆಯನ್ನ ಒಪ್ಪಿಕೊಂಡರು. ನಾನು ಕನ್ನಡ ಭಾಷೆಯನ್ನು ಬಹುವಾಗಿ ಪ್ರೀತಿಸುತ್ತೇನೆ, ಆದರೆ ಕೆಲವರಿಗೆ ನಾನಿಲ್ಲಿ ಇರುವುದು ಇಷ್ಟವಿಲ್ಲ ಹಾಗಾಗಿ ನಾನು ಹೋಗುತ್ತಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ:‘ಘೋಸ್ಟ್’ ಚಿತ್ರದ ಸೆಟ್ ಗೆ ಭೇಟಿ ನೀಡಿದ ಸಚಿವ ಮಧು ಬಂಗಾರಪ್ಪ

    ಹಿಂದಿ ಧಾರಾವಾಹಿ ಮಾಡುತ್ತಿದ್ದೆ ಒಳ್ಳೆಯ ಹೆಸರು ಗಳಿಸಿದ್ದೆ. ಹಿಂದಿ ಸಿನಿಮಾ ಒಂದರ ಹಿಂದೆ ಮತ್ತೊಂದು ಅವಕಾಶ ಸಹ ನನಗೆ ದೊರಕಿತ್ತು ಇನ್ನೇನು ಚಿತ್ರೀಕರಣ ಪ್ರಾರಂಭವಾಗಬೇಕು ಎಂಬ ಅನ್ನೋವಷ್ಟರಲ್ಲಿ ಆ ಅವಕಾಶವನ್ನ ತಪ್ಪಿದ್ದರು. ನನಗೇ ನೇರವಾಗಿ ಸವಾಲು ಹಾಕಿ 2022ರ ವೇಳೆಗೆ ಇಂಡಸ್ಟ್ರಿ ಬಿಡುಸುತ್ತೇವೆ ಎಂದರು ಅವಾಜ್ ಹಾಕಿದ್ದಾರೆ ಎಂದು ಜೆಕೆ ಮಾತನಾಡಿದ್ದಾರೆ. ಯಾರು ಹಾಗೆ ಮಾಡಿದವರು? ಯಾರಿಗೆ ನಿಮ್ಮ ಮೇಲೆ ದ್ವೇಷ ಎಂಬ ಪ್ರಶ್ನೆಗೆ ಉತ್ತರಿಸಿರುವ ಜೆಕೆ, ಯಾರಿಗೆ ಎಂದು ಹೇಳಿದರೆ ವಿವಾದವಾಗುತ್ತದೆ, ಅದಕ್ಕೆ ಪೂರಕವಾದ ವಿಡಿಯೋ ಸಾಕ್ಷಿಗಳನ್ನೆಲ್ಲ ಒದಗಿಸಬೇಕಾಗುತ್ತದೆ ಅವೆಲ್ಲವೂ ನನ್ನ ಬಳಿ ಇಲ್ಲ. ಆದರೆ ಚಿತ್ರರಂಗದಿಂದ ದೂರ ಹೋಗುವ ವಿಚಾರವನ್ನಂತೂ ಮಾಡಿದ್ದೇನೆ ಎಂದಿದ್ದಾರೆ.

    ಈಗ ಸದ್ಯಕ್ಕೆ ನನ್ನ ಮುಂದಿರುವ ಸವಾಲೆಂದರೆ ‘ಐರಾವನ್’ ಸಿನಿಮಾದ ಬಿಡಗುಡೆ ಮತ್ತು ‘ಕಾಡ’ ಸಿನಿಮಾದ ಬಿಡುಗಡೆ ಇದೆರಡನ್ನೂ ಮುಗಿಸಿ ನಾನು ಮುಂದಿನ ಹೆಜ್ಜೆ ಇಡುತ್ತೇನೆ. ಈ ನಿರ್ಧಾರ ನನ್ನ ಪಾಲಿಗೆ ಬಹಳ ಕಠಿಣವಾದ ನಿರ್ಧಾರ ಆದರೆ ಈ ನಿರ್ಧಾರವನ್ನು ನಾನು ತೆಗೆದುಕೊಳ್ಳಲೇ ಬೇಕಿದೆ ಎಂದಿದ್ದಾರೆ ಜೆಕೆ. ಅವರ ನಟನೆಯ ‘ಐರಾವನ್’ ಸಿನಿಮಾ ಸದ್ಯದಲ್ಲೇ ತೆರೆಗೆ ಬರಲಿದೆ. ಜೆಕೆ ತಮ್ಮ ನಿರ್ಧಾರದ ಬಗ್ಗೆ ಬಾಯ್ಬಿಟ್ಟ ಬೆನ್ನಲ್ಲೇ ನಟನಿಗೆ ಬೆದರಿಕೆ ಹಾಕಿದ್ಯಾರು ಎಂಬುದರರ ಬಗ್ಗೆ ಗುಸು ಗುಸು ಶುರುವಾಗಿದೆ. ಮುಂದಿನ ದಿನಗಳಲ್ಲಿ ತೆರೆ ಮರೆಯಲ್ಲಿರುವ ಆ ವಿಲನ್ ಯಾರು.? ಎಂಬುದಕ್ಕೆ ಉತ್ತರ ಸಿಗುತ್ತಾ ಕಾದುನೋಡಬೇಕಿದೆ.

  • ಜೆಕೆ, ಐರಾವನ್ ಚಿತ್ರತಂಡದಿಂದ 10,000 ಮೆಡಿಕಲ್ ಕಿಟ್, ಆಕ್ಸಿಜನ್ ಅಂಬುಲೆನ್ಸ್ ನೆರವು

    ಜೆಕೆ, ಐರಾವನ್ ಚಿತ್ರತಂಡದಿಂದ 10,000 ಮೆಡಿಕಲ್ ಕಿಟ್, ಆಕ್ಸಿಜನ್ ಅಂಬುಲೆನ್ಸ್ ನೆರವು

    ಬೆಂಗಳೂರು: ಕೊರೊನಾ ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವ ಜನರಿಗೆ ಅನೇಕ ಸೆಲೆಬ್ರಿಟಿಗಳು ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. ಸದ್ಯ ಸ್ಯಾಂಡಲ್‍ವುಡ್ ನಟ ಜಯರಾಮ್ ಕಾರ್ತಿಕ್ ಕೂಡ ಇದೀಗ ಕೊರೊನಾ ಸಂಕಷ್ಟದಲ್ಲಿರುವವರಿಗೆ ನೆರವು ನೀಡುತ್ತಿದ್ದಾರೆ.

    ಹೌದು, ನಟ ಜೆಕೆ ಹಾಗೂ ಅದ್ವಿತಿ ಶೆಟ್ಟಿ ಅಭಿನಯಿಸುತ್ತಿರುವ ‘ಐರಾವನ್’ ಚಿತ್ರತಂಡ ಆಕ್ಸಿಜನ್ ವ್ಯವಸ್ಥೆಯುಳ್ಳ ಅಂಬುಲೆನ್ಸ್ ನೀಡಿದ್ದಾರೆ. ಚಿತ್ರ ನಿರ್ಮಾಪಕ ಡಾ. ನಿರಂತರ್ ಗಣೇಶ್, ನಟ ಕಾರ್ತಿಕ್, ಮತ್ತು ನಟ ವಿವೇಕ್ ಭಾನುವಾರ ಬ್ಯಾಟರಾಯಪುರದಲ್ಲಿ 10 ಸಾವಿರ ಕೋವಿಡ್ ಮೆಡಿಕಲ್ ಕಿಟ್ ಮತ್ತು ಔಷಧಿಯನ್ನು ವಿತರಣೆ ಮಾಡಿದ್ದಾರೆ.

    ಈ ಕುರಿರತಂತೆ ಜೆಕೆ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋವನ್ನು ಹಂಚಿಕೊಂಡಿದ್ದು, ಆರೋಗ್ಯ ಭಾರತಿ ಮತ್ತು ಸೇವಾ ಭಾರತಿ ಪರವಾಗಿ ಐರಾವನ್ ಚಿತ್ರ ನಿರ್ಮಾಪಕ ಡಾ. ನಿರಂತರಾ ಗಣೇಶ್ ಅವರೊಂದಿಗೆ ಬ್ಯಾಟರಾಯನಪುರದ ಗ್ರಾಮೀಣ ಜನರ ಸೇವೆಗಾಗಿ ಆಕ್ಸಿಜನ್ ಸಹಿತ ಅಂಬ್ಯುಲೆನ್ಸ್ ದಾನ ಮಾಡಲಾಗಿದೆ. ಹಾಗೂ 10,000 ಕೋವಿಡ್ ಮೆಡಿಕಲ್ ಕಿಟ್‍ನನ್ನು, ಕೋವಿಡ್-19 ಚಿಕಿತ್ಸೆ ನೀಡಲು ಅಗತ್ಯವಿರುವ ಎಲ್ಲಾ ಔಷಧಿಗಳನ್ನು ನೀಡಲಾಗಿದೆ. ಈ ಸಂದರ್ಭದಲ್ಲಿ ಆರ್‍ಎಸ್‍ಎಸ್ ದಕ್ಷಿಣ ವಲಯದ ಪ್ರಧಾನ ಕಾರ್ಯದರ್ಶಿ ಎನ್. ತಿಪ್ಪೇಸ್ವಾಮಿ, ಆರೋಗ್ಯ ಭಾರತಿ ಕರ್ನಾಟಕ ರಾಜ್ಯ ಜೆ.ಟಿ ಕಾರ್ಯದರ್ಶಿ ಗಂಗಾಧರನ್, ಐರಾವನ್ ಚಲನಚಿತ್ರ ನಟ ವಿವೇಕ್ ಧ್ವಜಾರೋಹಣ ಮಾಡಿದ ನಂತರ ಕೋವಿಡ್-19 ವೈದ್ಯಕೀಯ ಕಿಟ್‍ಗಳನ್ನು ಸಾರ್ವಜನಿಕರಿಗೆ ವಿತರಿಸಿದರು ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

     

    View this post on Instagram

     

    A post shared by Karthik Jayaram (@karthik.jayaram)

    ಇತ್ತೀಚೆಗಷ್ಟೇ ನಟ ರಿಯಲ್ ಸ್ಟಾರ್ ಉಪೇಂದ್ರ ಸಿನಿ ಕಾರ್ಮಿಕರಿಗೆ ಅಗತ್ಯ ವಸ್ತು ಹಾಗೂ ಆಹಾರ ಕಿಟ್ ವಿತರಿಸಿದರು. ನಟ ಶ್ರೀಮುರುಳಿ ಆಸ್ಪತ್ರೆಯಲ್ಲಿರುವ ಕೊರೊನಾ ವಾರಿಯರ್ಸ್‍ಗೆ ಊಟವನ್ನು ಕಳುಹಿಸಿಕೊಟ್ಟಿದ್ದರು. ಬಿಗ್‍ಬಾಸ್ ಕಾರ್ಯಕ್ರಮ ಮುಕ್ತಾಯದ ನಂತರ ನಟಿ ಶುಭಾ ಪೂಂಜಾ ಕೂಡ ಆಹಾರದ ಕಿಟ್ ವಿತರಿಸಿದರು.

    ಹಿರಿಯ ನಟಿ ಲೀಲಾವತಿ, ಪುತ್ರ ವಿನೋದ್ ರಾಜ್ ಸೇರಿದಂತೆ ನಟ ಜಗ್ಗೇಶ್, ಸುದೀಪ್, ಭುವನ್ ಪೊನ್ನಣ್ಣ, ಹರ್ಷಿಕಾ ಪೂಣಚ್ಛ ಹೀಗೆ ಹಲವಾರು ಸೆಲೆಬ್ರಿಟಿಗಳು ಕಷ್ಟದಲ್ಲಿರುವವರಿಗೆ ನೆರವು ನೀಡುತ್ತಿದ್ದಾರೆ.