Tag: ಐರಾವತ

  • ಟ್ರೋಲ್‌ಗಳಿಗೆ ಕೇರ್ ಮಾಡಲ್ಲ- ಊರ್ವಶಿ ರೌಟೇಲಾ ಖಡಕ್ ರಿಯಾಕ್ಷನ್

    ಟ್ರೋಲ್‌ಗಳಿಗೆ ಕೇರ್ ಮಾಡಲ್ಲ- ಊರ್ವಶಿ ರೌಟೇಲಾ ಖಡಕ್ ರಿಯಾಕ್ಷನ್

    ನ್ನಡದ ‘ಐರಾವತ’ ನಟಿ ಊರ್ವಶಿ ರೌಟೇಲಾ (Urvashi Rautela) ಸದಾ ಒಂದಲ್ಲಾ ಒಂದು ವಿಚಾರವಾಗಿ ಟ್ರೋಲ್ (Troll) ಆಗುತ್ತಲೇ ಇರುತ್ತಾರೆ. ಇತ್ತೀಚೆಗೆ ಕಾನ್ಸ್ ಫೆಸ್ಟಿವಲ್‌ನಲ್ಲಿ ದೀಪಿಕಾ ಪಡುಕೋಣೆ (Deepika Padukone) ಸ್ಟೈಲ್ ಅನ್ನು ಕಾಪಿ ಮಾಡಿದ್ದಾರೆ ಊರ್ವಶಿ ಎಂದು ಟ್ರೋಲ್ ಆಗಿದ್ದರು. ಹಾಗಾಗಿ ಟ್ರೋಲ್ ಮಾಡುವವರಿಗೆ ನಟಿ ಈಗ ಖಡಕ್ ಉತ್ತರ ನೀಡಿದ್ದಾರೆ.

    ಇತ್ತೀಚಿನ ಸಂದರ್ಶನವೊಂದರಲ್ಲಿ ಟ್ರೋಲ್ ಅನ್ನು ನಟಿ ಎದುರಿಸುತ್ತಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಮೊದಲು ಟ್ರೋಲ್ ಅನ್ನು ನಿಭಾಯಿಸುವುದನ್ನು ಅರಿತಿರಬೇಕು ಎಂದಿದ್ದಾರೆ. ಅಲ್ಲದೇ ನನ್ನ ಬಿಡುವಿಲ್ಲದ ಶೆಡ್ಯೂಲ್‌ನಲ್ಲಿ ಇದರ ಬಗ್ಗೆ ಯೋಚನೆ ಮಾಡಲು ಕೂಡ ಸಮಯ ಇಲ್ಲ ಎಂದಿದ್ದಾರೆ.

    ನೀವು ಟ್ರೋಲ್ ಬಗ್ಗೆ ಗಮನ ಕೊಡದೇ ಇದ್ದಾಗ, ಟ್ರೋಲ್ ಆಗುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಈ ಮೂಲಕ ತಾವು ಟ್ರೋಲ್ ಬಗ್ಗೆ ಚಿಂತೆ ಮಾಡಲ್ಲ ಎಂದು ನಟಿ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ:ಬರೋಬ್ಬರಿ 90 ಕೆಜಿಯಿಂದ ಕೆಲವೇ ತಿಂಗಳಲ್ಲಿ 30 ಕೆಜಿ ದೇಹದ ತೂಕ ಇಳಿಸಿಕೊಂಡ ಸೋನಾಕ್ಷಿ

    ಊರ್ವಶಿ ರೌಟೇಲಾ ಸದ್ಯ ಬಹುಭಾಷಾ ನಟಿಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಕನ್ನಡದ ಜೊತೆ ಪರಭಾಷೆಗಳಲ್ಲಿಯೂ ನಟಿಗೆ ಡಿಮ್ಯಾಂಡ್ ಇದೆ.

  • ಅಬ್ಬಬ್ಬಾ! ಗೋಲ್ಡ್ ಕೇಕ್ ಕಟ್ ಮಾಡಿ ಸಂಭ್ರಮಿಸಿದ ‘ಐರಾವತ’ ನಟಿ

    ಅಬ್ಬಬ್ಬಾ! ಗೋಲ್ಡ್ ಕೇಕ್ ಕಟ್ ಮಾಡಿ ಸಂಭ್ರಮಿಸಿದ ‘ಐರಾವತ’ ನಟಿ

    ನ್ನಡದ ‘ಐರಾವತ’ ನಟಿ ಊರ್ವಶಿ (Urvashi Rautela) ಇಂದು (ಫೆ.25) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಸಿಂಗರ್ ಹನಿ ಸಿಂಗ್ ಉಪಸ್ಥಿತಿಯಲ್ಲಿ ಗೋಲ್ಡ್ ಕೇಕ್ ಕಟ್ ಮಾಡಿ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ನಟಿ ಆಚರಿಸಿದ್ದಾರೆ. ಬರ್ತ್‌ಡೇಯ (Birthday) ಸುಂದರ ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ.

    ಸದ್ಯ ನಟಿ ‘ಲವ್ ಡೋಸ್ 2’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಸೆಟ್‌ನಲ್ಲಿ ಊರ್ವಶಿ ಬರ್ತ್‌ಡೇ ಸೆಲೆಬ್ರೇಶನ್ ನಡೆದಿದೆ. ಗೋಲ್ಡ್ ಪ್ಲೇಟೆಡ್ ಕೇಕ್ ಕತ್ತರಿಸಿ ನಟಿ ಸಂಭ್ರಮಿಸಿದ್ದಾರೆ. ಖ್ಯಾತ ಸಿಂಗರ್ ಹನಿ ಸಿಂಗ್ (Yo Yo Honey Singh) ಈ ಸಂಭ್ರಮದಲ್ಲಿ ಭಾಗಿಯಾಗಿದ್ದು ವಿಶೇಷ. ಹನಿ ಸಿಂಗ್‌ರನ್ನು ನಟಿ ತಬ್ಬಿಕೊಂಡಿರುವ ಫೋಟೋ ನೋಡಿ, ಹೊಸ ಬಾಯ್‌ಫ್ರೆಂಡ್‌ ಅಂತ ಸೋಷಿಯಲ್‌ ಮೀಡಿಯಾದಲ್ಲಿ ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.

    ನನ್ನ ಬಗ್ಗೆ ನಿಜವಾದ ಕಾಳಜಿ ನನ್ನ ವೃತ್ತಿಜೀವನದಲ್ಲಿ ಅದ್ಭುತ ಅಧ್ಯಾಯವನ್ನು ರಚಿಸಿದೆ. ನನ್ನ ಭಾವನೆಗಳ ಆಳವನ್ನು ನಿಮಗಾಗಿ ಹಿಡಿದಿರುತ್ತೇನೆ. ನಿಮ್ಮ ಸಮಯಕ್ಕಾಗಿ ಧನ್ಯವಾಗಳು ಎಂದು ಹನಿ ಸಿಂಗ್‌ಗೆ ಬರೆದಿದ್ದಾರೆ ಊರ್ವಶಿ. ಇದನ್ನೂ ಓದಿ:ಸಮರ್ಜಿತ್ ಲಂಕೇಶ್ ಜೊತೆ ತಾನ್ಯ ಡಾನ್ಸ್ : ಇದು ಪುನೀತ್ ಹುಟ್ಟುಹಬ್ಬಕ್ಕೆ ಗಿಫ್ಟ್

    ಈ ಹಿಂದೆ ಓವರ್ ಮೇಕಪ್ ಮಾಡಿರುವ ಫೋಟೋ ಶೇರ್ ಮಾಡ್ತಿದ್ದಂತೆ ಐರಾವತ ನಟಿಗೆ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ. ಓವರ್ ಮೇಕಪ್ ಮಾಡಿಕೊಳ್ಳಬೇಡಿ. ಮಲಗುವಾಗಲೂ ಮೇಕಪ್ ತೆಗೆಯಲ್ಲ ಅನಿಸುತ್ತೆ ಎಂದೆಲ್ಲಾ ನೆಟ್ಟಿಗರು ಬಗೆ ಬಗೆಯ ಕಾಮೆಂಟ್ ಮಾಡಿದ್ದರು. ಒಟ್ನಲ್ಲಿ ಊರ್ವಶಿ ಹೊಸ ಲುಕ್ ಟ್ರೋಲಿಗರ ಬಾಯಿಗೆ ಆಹಾರವಾಗಿತ್ತು.

    ಊರ್ವಶಿ ಸುಂದರವಾಗಿ ರೆಡಿಯಾಗಿದ್ದರು. ಅವರ ಓವರ್ ಮೇಕಪ್‌ಗೆ ಟ್ರೋಲ್ ಆಗ್ತಿದ್ದರು. ಅವರಿಗೆ ಟ್ರೋಲ್ ಆಗೋದು ಇದೇ ಮೊದಲ ಬಾರಿ ಏನೇನಲ್ಲ. ಸಿನಿಮಾಗಿಂತ ಊರ್ವಶಿ ಅವರು ಕಾಂಟ್ರವರ್ಸಿ, ಟ್ರೋಲ್‌ನಿಂದಲೇ ಹೆಚ್ಚೆಚ್ಚು ಸುದ್ದಿಯಾಗಿದ್ದಾರೆ.

    ಡಿಬಾಸ್ (Darshan) ನಾಯಕಿ, ‘ಐರಾವತ’ ನಟಿ ಊರ್ವಶಿ ಅವರು ಕನ್ನಡ, ತೆಲುಗು, ಹಿಂದಿ ಸೇರಿದಂತೆ ಬಹುಭಾಷಾ ನಟಿಯಾಗಿ ಬ್ಯುಸಿಯಾಗಿದ್ದಾರೆ. ಸಾಕಷ್ಟು ಜಾಹೀರಾತುಗಳಿಗೆ ರೂಪದರ್ಶಿಯಾಗಿ ಕೂಡ ಕಾಣಿಸಿಕೊಂಡಿದ್ದಾರೆ.

  • ಹರಿದ ಜೀನ್ಸ್‌ನಲ್ಲಿ ಫ್ಲೈಟ್‌ ಏರಿದ `ಐರಾವತ’ ಬ್ಯೂಟಿ ಊರ್ವಶಿ

    ಹರಿದ ಜೀನ್ಸ್‌ನಲ್ಲಿ ಫ್ಲೈಟ್‌ ಏರಿದ `ಐರಾವತ’ ಬ್ಯೂಟಿ ಊರ್ವಶಿ

    ಹುಭಾಷಾ ನಟಿ ಊರ್ವಶಿ ಸಿನಿಮಾ ಜೊತೆ ಆಗಾಗ ತಮ್ಮ ಕಾಸ್ಟ್ಯೂಮ್ ವಿಚಾರವಾಗಿ ಕೂಡ ಸದ್ದು ಮಾಡುತ್ತಿರುತ್ತಾರೆ. ದುಬಾರಿ ಬಟ್ಟೆ ತೊಟ್ಟು ಸದಾ ಸುದ್ದಿ ಮಾಡುತ್ತಿದ್ದ ನಟಿ ಈಗ ಹಿಂದೆ ಮುಂದೆ ಎಲ್ಲಾ ಕಡೆ ಹರಿದ ಜೀನ್ಸ್ ಧರಿಸಿ ನಟಿ ಊರ್ವಶಿ ವಿಮಾನವೇರಿದ್ದಾರೆ. ಈಗ ಫೋಟೋ ಕುರಿತು ಸಖತ್ ಚರ್ಚೆ ಕೂಡ ಆಗುತ್ತಿದೆ.

     

    View this post on Instagram

     

    A post shared by Urvashi Rautela (@urvashirautela)

    ಊರ್ವಶಿ ಸದ್ಯ `ದಿ ಲೆಜೆಂಡ್’ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ಏರ್‌ಪೋರ್ಟ್ಗೆ ಹರಿದ ಜೀನ್ಸ್ನಲ್ಲಿ ನಟಿ ಎಂಟ್ರಿ ಕೊಟ್ಟಿದ್ದಾರೆ. ಸಾಮಾನ್ಯವಾಗಿ ಟೋರ್ನ್ ಜೀನ್ಸ್ ಮುಂದೆ ಹರಿದಿರೋದನ್ನ ನೋಡಿರುತ್ತೇವೆ. ಆದರೆ ಊರ್ವಶಿ ಹಿಂದೆಯೂ ಹರಿದಂತೆ ಸ್ಪೆಷಲ್ ಆಗಿ ಡಿಸೈನ್ ಮಾಡಿಸಿದ್ದಾರೆ.ನಟಿಯ ಲುಕ್ ಈಗ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸುತ್ತಿದೆ. ಇದನ್ನೂ ಓದಿ:ವಿದೇಶದಲ್ಲಿ ಜಾಲಿ ಮೂಡ್‌ನಲ್ಲಿದ್ದಾರೆ ಯಶ್- ರಾಧಿಕಾ ಪಂಡಿತ್

     

    View this post on Instagram

     

    A post shared by Urvashi Rautela (@urvashirautela)

    ಸಾಲು ಸಾಲು ಸಿನಿಮಾಗಳಲ್ಲಿ ಊರ್ವಶಿ ಬ್ಯುಸಿಯಾಗಿದ್ದಾರೆ. ಕೈತುಂಬಾ ಸಂಭಾವನೆಯೂ ಪಡೆಯುತ್ತಾರೆ ಹೀಗಿರುವಾಗ ತುಂಬಾ ಬಟ್ಟೆ ಧರಿಸಿ ಓಡಾಡಿ ಅಂತಾ ನಟಿಗೆ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನು ಕೆಲವರು ತುತ್ತು ಅನ್ನ ತಿನ್ನೋಕೆ ಹಾಡು ನೆನಪಾಯಿತು ಅಂತಾ ಕಾಮೆಂಟ್ ಮಾಡಿದ್ದಾರೆ. ಒಟ್ನಲ್ಲಿ ಊರ್ವಶಿ ಹರಿದ ಜೀನ್ಸ್ ಎಂಟ್ರಿಗೆ ಫ್ಯಾನ್ಸ್ ಖಡಕ್ ರಿಯಾಕ್ಷನ್ ಕೊಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಗೆ ಪರಿಹಾರ ನೀಡದ ಸಾರಿಗೆ ಸಂಸ್ಥೆ – ಐರಾವತ ಬಸ್‍ನ್ನು ಜಪ್ತಿ ಮಾಡಿದ ನ್ಯಾಯಾಲಯ

    ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಗೆ ಪರಿಹಾರ ನೀಡದ ಸಾರಿಗೆ ಸಂಸ್ಥೆ – ಐರಾವತ ಬಸ್‍ನ್ನು ಜಪ್ತಿ ಮಾಡಿದ ನ್ಯಾಯಾಲಯ

    ಹುಬ್ಬಳ್ಳಿ: ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಗೆ ಪರಿಹಾರ ನೀಡದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿರುದ್ಧ ನ್ಯಾಯಾಲಯ ಗುಡುಗಿದ್ದು, ಸಾರಿಗೆ ಬಸ್‍ನ್ನು ಹುಬ್ಬಳ್ಳಿಯ ಕೋರ್ಟ್ ಜಪ್ತಿ ಮಾಡಿದೆ.

    2019ರಲ್ಲಿ ಹುಬ್ಬಳ್ಳಿಯ ನವಲಗುಂದಲ್ಲಿ ಸಂಭವಿಸಿದ ಅಪಘಾತದಲ್ಲಿ ದೇವಪ್ಪ ಕುಲಕರ್ಣಿ ಎಂಬವರು ಮೃತಪಟ್ಟಿದ್ದರು. ಬಳಿಕ ಅವರ ಕುಟುಂಬಕ್ಕೆ ಸಾರಿಗೆ ಇಲಾಖೆ ನೀಡುವುದಾಗಿ ತಿಳಿಸಿದ್ದ ಪರಿಹಾರ ನೀಡಿರಲಿಲ್ಲ. ಹಾಗಾಗಿ ಕುಟುಂಬಸ್ಥರು ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯ 28 ಲಕ್ಷ ಪರಿಹಾರ ಜೊತೆಗೆ ಅದಕ್ಕೆ ಶೇ.6 ಬಡ್ಡಿ ಹಾಕಿ ಮೃತ ವ್ಯಕ್ತಿಯ ಕುಟುಂಬಕ್ಕೆ ನೀಡುವಂತೆ ಸೂಚಿಸಿತ್ತು. ಆದ್ರೆ ಕೋರ್ಟ್ ಆದೇಶಕ್ಕೆ ಕ್ಯಾರೆ ಎನ್ನದ ಸಾರಿಗೆ ಸಂಸ್ಥೆ ನಿರ್ಲಕ್ಷ್ಯ ಧೋರಣೆಯನ್ನು ತಾಳಿತ್ತು. ಹೀಗಾಗಿ ಕೋರ್ಟ್ ವಾರೆಂಟ್ ಜಾರಿ ಮಾಡಿತ್ತು. ಇದಕ್ಕೂ ಸಹ ಸಾರಿಗೆ ಸಂಸ್ಥೆ ತಲೆಕೆಡಿಸಿಕೊಂಡಿರಲಿಲ್ಲ. ಇದನ್ನೂ ಓದಿ: ಮುಂದಿನ 5 ದಿನವೂ ಕರಾವಳಿ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

    ಸಂಸ್ಥೆ ವಿರುದ್ಧ ಅಸಮಾಧಾನಗೊಂಡ ನ್ಯಾಯಾಲಯ ಜಪ್ತಿ ವಾರಂಟ್ ಅನ್ವಯ ಇಂದು ಕೆ.ಎ 17 ಎಫ್ 1945 ನೋಂದಾಯಿತ ಸಂಖ್ಯೆಯ ಬಸ್‍ನ್ನು ಜಪ್ತಿಗೆ ಆದೇಶ ನೀಡಿತು. ಇದರ ಅನ್ವಯ ಕೋರ್ಟ್ ಸಿಬ್ಬಂದಿ ಐರಾವತ ಬಸ್ ಜಪ್ತಿ ಮಾಡಿ ಬಸ್‍ನ್ನು ಹುಬ್ಬಳ್ಳಿ ಕೋರ್ಟ್ ಎದುರು ತಂದು ನಿಲ್ಲಿಸಿದ್ದಾರೆ. ಇದನ್ನೂ ಓದಿ: ದ್ವಿತೀಯ PUC ಪೂರಕ ಪರೀಕ್ಷೆ ವೇಳಾಪಟ್ಟಿ ಪ್ರಕಟ

    Live Tv
    [brid partner=56869869 player=32851 video=960834 autoplay=true]

  • ಸೇತುವೆಯಿಂದ ಕೆಳಕ್ಕೆ ಉರುಳಿದ ಐರಾವತ ಬಸ್ಸು

    ಸೇತುವೆಯಿಂದ ಕೆಳಕ್ಕೆ ಉರುಳಿದ ಐರಾವತ ಬಸ್ಸು

    ಮಡಿಕೇರಿ: ಕೇರಳಕ್ಕೆ ತೆರಳುತ್ತಿದ್ದ ಐರಾವತ ಬಸ್ ಚಾಲಕನ ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಗೆ ಉರುಳಿದ ಘಟನೆ ವಿರಾಜಪೇಟೆ ತಾಲೂಕಿನ ಮಾಪಿಳ್ಳೆತೋಡಿನಲ್ಲಿ ನಡೆದಿದೆ.

    ಇಂದು ನಸುಕಿನ ಜಾವ ಸುಮಾರು 2 ಗಂಟೆಗೆ ವಿರಾಜಪೇಟೆ ಮಾರ್ಗವಾಗಿ ಕೇರಳಕ್ಕೆ ಪ್ರಯಾಣ ಮಾಡುತ್ತಿದ್ದ ಬೆಂಗಳೂರು ಕೇಂದ್ರಿಯ ವಿಭಾಗದ 4ನೇ ಘಟಕದ ಮಲ್ಟಿ ಆಕ್ಸೆಲ್ ವೋಲ್ಟೋ ಐರಾವತ ಬಸ್ಸು ಸೇತುವೆಯಿಂದ ಉರುಳಿದೆ.

    ಬಸ್ಸಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಇಲ್ಲದ ಕಾರಣ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮೊನ್ನೆಯಷ್ಟೇ ಇದೇ ಸೇತುವೆ ಬಳಿ ಕೇರಳದ ರಾಜ್ಯ ನೋಂದಣಿಯ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಸೇತುವೆ ಕೆಳಗೆ ಬಿದ್ದಿತ್ತು. ಕಾರಿನೊಳಗಿದ್ದ ಮೂವರು ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದರು.

    ಈಗ ಮತ್ತೆ ಅದೇ ಸ್ಥಳದಲ್ಲಿ ಐರಾವತ ಬಸ್ಸು ಉರುಳಿಬಿದ್ದಿದೆ. ನದಿಯಲ್ಲಿ ನೀರಿಲ್ಲದ ಕಾರಣದಿಂದ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ. ಈ ಕುರಿತು ಪೊನ್ನಂಪೇಟೆ  ಪೊಲಿಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

  • ನಟಿ ಊರ್ವಶಿ ವಿರುದ್ಧ ಅಸಮಾಧಾನ ಹೊರಹಾಕಿದ ದರ್ಶನ್

    ನಟಿ ಊರ್ವಶಿ ವಿರುದ್ಧ ಅಸಮಾಧಾನ ಹೊರಹಾಕಿದ ದರ್ಶನ್

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬಾಲಿವುಡ್ ನಟಿ ಊರ್ವಶಿ ರೌಟೇಲಾ ಅವರ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

    ನಾವು ಕನ್ನಡ ಭಾಷೆಯಲ್ಲಿ ಸಿನಿಮಾ ಮಾಡುತ್ತಿದ್ದೇವೆ. ಕನ್ನಡ ಅಭಿಮಾನವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು ಎಂಬುದು ನನ್ನ ಆಸೆ. ಕೆಲವರು ಕನ್ನಡ ಕಲಿಯುತ್ತಾರೆ. ಹೊಸಬರು ಎಂದಾಕ್ಷಣ ಎಲ್ಲವೂ ಆಗುತ್ತೆ ಎಂಬ ಅರ್ಥ ಅಲ್ಲ. ಒಂದು ಹೊಸ ಪ್ರಯತ್ನ ಮಾಡಬೇಕು ಎಂದರು.

    ನಮ್ಮ ಭಾಷೆಯವರನ್ನೇ ಸಿನಿಮಾದಲ್ಲಿ ಅವಕಾಶ ಕೊಟ್ಟಾಗ ಲಿಪ್ ಮೂಮೆಂಟ್ ತಿಳಿಯುತ್ತದೆ. ‘ಐರಾವತ’ ಚಿತ್ರದಲ್ಲಿ ಹೀಗೆ ಆಗಿತ್ತು. ನಟಿ ಊರ್ವಶಿ ನೋಡಲು ಚೆನ್ನಾಗಿದ್ದರು. ಆದರೆ ಅವರು ಕನ್ನಡ ಭಾಷೆ ಕಲಿಯಲಿಲ್ಲ. ಇದು ಐರಾವತ ಚಿತ್ರಕ್ಕೆ ಮೈನಸ್ ಪಾಯಿಂಟ್ ಆಯಿತು. ಮುಂಬೈಯಿಂದ ಬಂದವರು ತಮಿಳು ಹಾಗೂ ತೆಲುಗು ಚಿತ್ರರಂಗಕ್ಕೆ ಹೋದಾಗ ಅಲ್ಲಿನ ಭಾಷೆ ಕಲಿಯುತ್ತಾರೆ. ಆದರೆ ನಮ್ಮ ಭಾಷೆಯನ್ನು ನಿರ್ಲಕ್ಷ್ಯಿಸುತ್ತಾರೆ ಎಂದು ದರ್ಶನ್ ಅಸಮಾಧಾನ ವ್ಯಕ್ತಪಡಿಸಿದರು.

    ನಾನು ಹೈದರಾಬಾದ್‍ನ ರಾಮೋಜಿ ಫಿಲಂ ಸಿಟಿಯಲ್ಲಿ ಶೂಟಿಂಗ್ ಮಾಡಿದ್ದೇನೆ. ಬೇರೆ ಭಾಷೆಗಳ ಸಿನಿಮಾ ಸೆಟ್ ನೋಡಿದ್ದೇವೆ. ಅವರ ಸಿನಿಮಾ ಸೆಟ್ ನೋಡಿದಾಗ ನಮ್ಮ ಕನ್ನಡ ಸಿನಿಮಾ ಸೆಟ್ ಚೆನ್ನಾಗಿದೆ ಎಂದು ಎನಿಸುತ್ತೆ. ನಿರ್ಮಾಪಕರು ಹೊರಗಿನಿಂದ ನಟಿಯನ್ನು ಕರೆದುಕೊಂಡು ಬರುತ್ತಾರೆ ಎಂದು ಹೇಳಿದಾಗ ನಾನು ಅವರಿಗೆ ಟಾಪ್ ಹೀರೋಯಿನ್ ಕರೆದುಕೊಂಡು ಬಾ ಎಂದು ಹೇಳುತ್ತೇನೆ. ಮುಂಬೈಯಿಂದ ನಟಿಯನ್ನು ಕರೆದುಕೊಂಡು ಬರುತ್ತೇನೆ ಎಂದರೆ ನಮ್ಮವರನ್ನೇ ನಟಿಯಾಗಿ ಮಾಡು ಎಂದು ಹೇಳುತ್ತೇನೆ ಎಂದರು.

    ದರ್ಶನ್ ಜೊತೆಗೆ ನಟಿ ಊರ್ವಶಿ ‘ಐರಾವತ’ ಸಿನಿಮಾದಲ್ಲಿ ನಟಿಯಾಗಿ ನಟಿಸಿದ್ದರು.