Tag: ಐಬ್ರೋಸ್

  • ಐಬ್ರೋಸ್ ಮಾಡಿಸಿದ ಪತ್ನಿಗೆ ತ್ರಿವಳಿ ತಲಾಖ್ ನೀಡಿದ ಪತಿ

    ಐಬ್ರೋಸ್ ಮಾಡಿಸಿದ ಪತ್ನಿಗೆ ತ್ರಿವಳಿ ತಲಾಖ್ ನೀಡಿದ ಪತಿ

    ಲಕ್ನೋ: ತನ್ನ ಇಚ್ಛೆಗೆ ವಿರುದ್ಧವಾಗಿ ಕಣ್ಣಿನ ಹುಬ್ಬುಗಳಿಗೆ ಆಕಾರ (Eyebrows) ನೀಡಿದ್ದಕ್ಕಾಗಿ ಪತಿ ತನ್ನ ಪತ್ನಿಗೆ ತ್ರಿವಳಿ ತಲಾಖ್ (Triple Talaq) ನೀಡಿದ ಘಟನೆ ಉತ್ತರಪ್ರದೇಶದ (Uttar Pradesh) ಕಾನ್ಪುರದಲ್ಲಿ (Kanpur) ನಡೆದಿದೆ.

    ಸೌದಿ ಅರೇಬಿಯಾದಿಂದ (Saudi Arabia) ವಿಡಿಯೋ ಕಾಲ್ ಮಾಡಿ ಪತಿ ತನ್ನ ಪತ್ನಿಗೆ ತ್ರಿವಳಿ ತಲಾಖ್ ನೀಡಿದ್ದಾನೆ. ಅಕ್ಟೋಬರ್ 4 ರಂದು ಈ ಘಟನೆ ನಡೆದಿದ್ದು, ಪತ್ನಿ ಗುಲ್ಸಾಬ ಪೊಲೀಸರಿಗೆ ದೂರು ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಅತ್ತೆಯಂದಿರಿಂದ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಪತ್ನಿ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ. ಈ ಕುರಿತು ಮುಸ್ಲಿಂ ವಿವಾಹ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಟ್ರ್ಯಾಕ್ಟರ್‌ಗೆ ಹಿಂಬದಿಯಿಂದ ಲಾರಿ ಡಿಕ್ಕಿ – ಓರ್ವ ಸಾವು, 8 ಮಂದಿ ಗಂಭೀರ

    2022ರ ಜನವರಿಯಲ್ಲಿ ಪ್ರಯಾಗರಾಜ್‌ನ ಮೊಹಮ್ಮದ್ ಸಲೀಂ ಅವರನ್ನು ಗುಲ್ಸಾಬಾ ವಿವಾಹವಾಗಿದ್ದರು. ಸೌದಿ ಅರೇಬಿಯಾದಲ್ಲಿ ನೆಲೆಸಿರುವ ಸಲೀಂ, ಗುಲ್ಸಾಬಾ ಅವರೊಂದಿಗೆ ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಿದ್ದಾಗ ಆಕೆಯ ಹುಬ್ಬುಗಳನ್ನು ಗಮನಿಸಿ ತನ್ನ ಅನುಮತಿ ಪಡೆಯದೇ ಯಾಕೆ ಹುಬ್ಬುಗಳಿಗೆ ಆಕಾರ ನೀಡಿದ್ದೀಯಾ ಎಂದು ಕೇಳಿದ್ದಾನೆ. ನಂತರ ಕೋಪಗೊಂಡ ಆತ ಪತ್ನಿಗೆ ತ್ರಿವಳಿ ತಲಾಖ್ ಅನ್ನು ನೀಡಿ, ಅವಳು ಏನು ಬೇಕಾದರೂ ಮಾಡಲು ಸ್ವತಂತ್ರಳು ಎಂದು ಹೇಳಿದ್ದಾನೆ. ಇದನ್ನೂ ಓದಿ: ಅಮ್ಮನನ್ನು ನಿಂದಿಸ್ತಿದ್ದ ಮಾವನನ್ನೇ ಕೊಂದ ಅಳಿಯ!

    ನಂತರ ಗುಲ್ಸಾಬ ಸಲೀಂ, ಆಕೆಯ ಅತ್ತೆ ಮತ್ತು ಇತರರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪತಿ ವಿರುದ್ಧ ಕ್ರೌರ್ಯ ಮತ್ತು ವರದಕ್ಷಿಣೆ ಆರೋಪ ಹೊರಿಸಲಾಗಿದೆ. ತ್ರಿವಳಿ ತಲಾಖ್ ಪದ್ಧತಿಯನ್ನು 2019ರಲ್ಲಿ ದೇಶದಲ್ಲಿ ಕಾನೂನುಬಾಹಿರ ಮತ್ತು ಅಸಂವಿಧಾನಿಕ ಎಂದು ಘೋಷಿಸಲಾಯಿತು. ಇದನ್ನೂ ಓದಿ: ಸರ್ಯು ನದಿಯಲ್ಲಿ ದೋಣಿ ಮುಳುಗಿ ಇಬ್ಬರ ದುರ್ಮರಣ, 7 ಮಂದಿ ನಾಪತ್ತೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]