Tag: ಐಪಿಸಿ

  • ಸೆಕ್ಷನ್‌ 498 ಎ ಅತ್ಯಂತ ಕಠಿಣ ಸೆಕ್ಷನ್‌, ಹಲವು ಸುಳ್ಳು ಕೇಸ್‌ಗಳನ್ನು ರದ್ದು ಮಾಡಿದ್ದೇವೆ: ಸುಪ್ರೀಂ

    ಸೆಕ್ಷನ್‌ 498 ಎ ಅತ್ಯಂತ ಕಠಿಣ ಸೆಕ್ಷನ್‌, ಹಲವು ಸುಳ್ಳು ಕೇಸ್‌ಗಳನ್ನು ರದ್ದು ಮಾಡಿದ್ದೇವೆ: ಸುಪ್ರೀಂ

    – ವರದಕ್ಷಿಣೆ ಕೇಸ್‌ ದುರುಪಯೋಗ ಆಗುತ್ತಿರುವ ಬೆನ್ನಲ್ಲೇ ಕೇಸ್‌ಗಳು ರದ್ದು

    ನವದೆಹಲಿ: ಭಾರತೀಯ ದಂಡ ಸಂಹಿತೆ(IPC) ಸೆಕ್ಷನ್‌ 498 ಎ ಅತ್ಯಂತ ಕಠಿಣ ಸೆಕ್ಷನ್‌ ಎಂದು ಸುಪ್ರೀಂ ಕೋರ್ಟ್‌ (Supreme Court) ಅಭಿಪ್ರಾಯಪಟ್ಟಿದೆ.

    ಮದುವೆಯಾದ 1.5 ತಿಂಗಳೊಳಗೆ ಮಹಿಳೆಯೊಬ್ಬರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸುವ ವೇಳೆ ನ್ಯಾ. ಬಿ. ನಾಗರತ್ನ ಅವರು ನಾವು ಎಲ್ಲಾ ಪ್ರಕರಣಗಳನ್ನು ಸುಳ್ಳು ಎಂದು ಹೇಳುತ್ತಿಲ್ಲ. ಆದರೆ ನಾವು ಹಲವಾರು 498A ಪ್ರಕರಣಗಳನ್ನು ರದ್ದುಗೊಳಿಸಿದ್ದೇವೆ ಎಂದು ಹೇಳಿದರು.

    ಐಪಿಸಿ ಜಾರಿಯಲ್ಲಿದ್ದಾಗ ಮಹಿಳೆ ವರದಕ್ಷಿಣೆ ಕಿರುಕುಳ (Dowry Harassment) ದೂರು ನೀಡಿದಾಗ ಸೆಕ್ಷನ್‌ 498 ಎ ಅಡಿ ಎಫ್‌ಐಆರ್‌ ದಾಖಲಾಗುತ್ತಿತ್ತು. ವರದಕ್ಷಿಣೆ ಪಿಡುಗನ್ನು ತೊಡೆದು ಹಾಕುವುದು ಈ ಸೆಕ್ಷನ್‌ನ ಮೂಲ ಉದ್ದೇಶವಾಗಿತ್ತು. ಆದರೆ ಈ ಸೆಕ್ಷನ್‌ ದುರುಪಯೋಗ ಆಗುತ್ತಿರುವ ಹಿನ್ನೆಲೆಯಲ್ಲಿ ಕೋರ್ಟ್‌ಗಳು ಹಲವು ಪ್ರಕರಣಗಳು ರದ್ದು ಮಾಡುತ್ತಿವೆ.  ಇದನ್ನೂ ಓದಿ:  ಧರ್ಮಸ್ಥಳ ಕೇಸ್‌ | ರಾಜ್ಯ ಸರ್ಕಾರವನ್ನೇ ಯಾಮಾರಿಸಿದ ʻಬುರುಡೆʼ ಗ್ಯಾಂಗ್ – ಸುಪ್ರೀಂ ಆದೇಶ ಮುಚ್ಚಿಟ್ಟು ಮಹಾ ಮೋಸ

     

    ಐಪಿಸಿ ಸೆಕ್ಷನ್‌ 498 ಎ ಏನು ಹೇಳುತ್ತೆ?
    ಪತಿ ಅಥವಾ ಅತನ  ಸಂಬಂಧಿಗಳು  ಪತ್ನಿಗೆ ಹಿಂಸೆ ನೀಡಿದರೆ ಈ ಸೆಕ್ಷನ್‌ ಅಡಿ ಕೇಸ್‌ ದಾಖಲಿಸಬಹುದು. ಜಾಮೀನು ರಹಿತ ಕೇಸ್‌ ಇದಾಗಿದ್ದು ಆರೋಪ ಸಾಬೀತಾದರೆ 3 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದು.

    ಈ ಸೆಕ್ಷನ್‌ ಅಡಿ ಕೌರ್ಯ ಎಂದರೆ ಏನು?
    ಮಹಿಳೆಯನ್ನು ಆತ್ಮಹತ್ಯೆಗೆ ಪ್ರೇರೇಪಿಸುವ ಅಥವಾ ಮಹಿಳೆಯ ಜೀವ, ಅಂಗ ಅಥವಾ ಆರೋಗ್ಯಕ್ಕೆ (ಮಾನಸಿಕ ಅಥವಾ ದೈಹಿಕ) ಗಂಭೀರ ಗಾಯ ಅಥವಾ ಅಪಾಯವನ್ನುಂಟುಮಾಡುವ ಸ್ವಭಾವದ ಯಾವುದೇ ಉದ್ದೇಶಪೂರ್ವಕ ನಡವಳಿಕೆ. ಇದನ್ನೂ ಓದಿದತ್ತಾಂಶವನ್ನು ಸಂಪೂರ್ಣವಾಗಿ ರಕ್ಷಿಸಿ – ಜಾತಿ ಸಮೀಕ್ಷೆಗೆ ಷರತ್ತು, ಸರ್ಕಾರಕ್ಕೆ ಬಿಗ್‌ ರಿಲೀಫ್‌

    ಯಾವುದೇ ಆಸ್ತಿ ಅಥವಾ ಬೆಲೆಬಾಳುವ ವಸ್ತುಗಳಿಗಾಗಿ ಕಾನೂನುಬಾಹಿರ ಬೇಡಿಕೆಯನ್ನು ಇಡುವುದು, ಬೇಡಿಕೆಯನ್ನು ಪೂರೈಸಲು ಮಹಿಳೆ ಅಥವಾ ಆಕೆಯ ಸಂಬಂಧಿಗಳು ವಿಫಲವಾದರೆ ಆಕೆಯನ್ನು ಒತ್ತಾಯಿಸುವ ಉದ್ದೇಶದಿಂದ ನೀಡುವ ಕಿರುಕುಳ.

    ಅಪರಾಧದಿಂದ ಸಂತ್ರಸ್ತರಾದ ಮಹಿಳೆಯರು ಅಥವಾ ರಕ್ತಸಂಬಂಧ, ವಿವಾಹ ಅಥವಾ ದತ್ತು ಸ್ವೀಕಾರದ ಮೂಲಕ ಅವರಿಗೆ ಸಂಬಂಧಿಸಿದ ಯಾವುದೇ ವ್ಯಕ್ತಿ ಸೆಕ್ಷನ್ 498A ಅಡಿಯಲ್ಲಿ ದೂರು ಸಲ್ಲಿಸಬಹುದು. ಒಂದು ವೇಳೆ ಯಾವುದೇ ಸಂಬಂಧಿಗಳು ಇಲ್ಲದೇ ಇದ್ದರೆ ಆಕೆಯ ಪರವಾಗಿ ರಾಜ್ಯ ಸರ್ಕಾರವು ಸೂಚಿಸಬಹುದಾದ ಯಾವುದೇ ಸಾರ್ವಜನಿಕ ಸೇವಕರು ದೂರು ನೀಡಬಹುದು.

  • ಹೊಸ ಕಾನೂನಿನಡಿ ಮೊದಲ ದಿನವೇ ರಾಜ್ಯಾದ್ಯಂತ 63 FIR ದಾಖಲು

    ಹೊಸ ಕಾನೂನಿನಡಿ ಮೊದಲ ದಿನವೇ ರಾಜ್ಯಾದ್ಯಂತ 63 FIR ದಾಖಲು

    ಬೆಂಗಳೂರು: ಜುಲೈ 1 ರಿಂದ ದೇಶದಲ್ಲಿ ಹೊಸ ಕ್ರಿಮಿನಲ್‌ ಕಾನೂನುಗಳು (New Criminal Laws) ಜಾರಿಯಾಗಿದೆ. ಭಾರತೀಯ ದಂಡ ಸಂಹಿತೆಯು (IPC) ಭಾರತೀಯ ನ್ಯಾಯ ಸಂಹಿತೆಯಾಗಿ (BSN), ಅಪರಾಧ ಪ್ರಕ್ರಿಯಾ ಸಂಹಿತೆಯು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯಾಗಿ ಮತ್ತು ಸಾಕ್ಷ್ಯ ಕಾಯ್ದೆಯು ಭಾರತೀಯ ಸಾಕ್ಷ್ಯ ಕಾಯ್ದೆಯಾಗಿ ಜಾರಿಗೆ ಬಂದಿದೆ. ಹೊಸ ಕಾನೂನು ಜಾರಿಯಾದ ಮೊದಲ ದಿನವೇ ರಾಜ್ಯಾದ್ಯಂತ 63 ಎಫ್‌ಐಆರ್ ದಾಖಲಾಗಿವೆ ಎಂದು ಪೊಲೀಸ್‌ ಇಲಾಖೆ (Police department) ಮಾಹಿತಿ ನೀಡಿದೆ.

    ಭಾರತೀಯ ನ್ಯಾಯ ಸಂಹಿತೆ ಕಾನೂನು ಅಡಿಯಲ್ಲಿ ಸೋಮವಾರ (ಜು.1) ಒಂದೇ ದಿನ ರಾತ್ರಿ 8 ಗಂಟೆ ವರೆಗೆ 63 ಎಫ್‌ಐಆರ್ (FIR) ದಾಖಲಾಗಿದೆ ಎಂದು ಮಾಹಿತಿ ನೀಡಿದೆ.

    ಬ್ರಿಟಿಷ್ ಕಾಲದ ಕಾನೂನಿಗೆ ಗುಡ್‌ಬೈ:
    ಹೊಸ ಕ್ರಿಮಿನಲ್ ಕಾನೂನುಗಳು ದೇಶದ ಅಪರಾಧ ನ್ಯಾಯ ವ್ಯವಸ್ಥೆಯನ್ನು ವಸಾಹತು ಕಾಲದ ಜಡತ್ವದಿಂದ ಹೊರತರುತ್ತದೆ ಎಂಬುದು ಕೇಂದ್ರ ಸರ್ಕಾರದ ಪ್ರತಿಪಾದನೆ. ಹೊಸ ಕಾನೂನು ಪ್ರಯೋಗಕ್ಕೆ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಇನ್ಪೆಕ್ಟರ್‌ಗಳಿಗೆ ತರಬೇತಿ ನೀಡಲಾಗಿದೆ. ಕಾನೂನು ತಜ್ಞರು, ಹಿರಿಯ ಅಧಿಕಾರಿಗಳು, ಪಬ್ಲಿಕ್ ಪ್ರಾಸಿಕ್ಯೂಟರ್‌ಗಳು ಹಾಗೂ ಹಿರಿಯ ವಕೀಲರಿಂದ ತರಬೇತಿ ಕೊಡಿಸಲಾಗಿದೆ. ಸಿವಿಲ್ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಆದ್ಯತೆ ಮೇರೆಗೆ ತರಬೇತಿ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    163 ವರ್ಷಗಳ ಹಿಂದೆ ರೂಪುಗೊಂಡ ಭಾರತೀಯ ದಂಡ ಸಂಹಿತೆ 126 ವರ್ಷಗಳ ಹಿಂದಿನ ಅಪರಾಧ ಪ್ರಕ್ರಿಯಾ ಸಂಹಿತೆ ಮತ್ತು 151 ವರ್ಷಗಳ ಹಿಂದೆ ರೂಪುಗೊಂಡ ಭಾರತೀಯ ಸಾಕ್ಷ್ಯ ಕಾಯ್ದೆಯ ಬದಲಿಗೆ ಈ ಮೂರು ಕಾನೂನುಗಳನ್ನು ಜಾರಿಗೆ ತರಲಾಗಿದೆ. ಈ ಕಾನೂನುಗಳಲ್ಲಿ 20 ಹೊಸ ಅಪರಾಧಗಳ ಸೇರ್ಪಡೆಯಾಗಿದೆ. 33 ಅಪರಾಧಗಳಿಗೆ ಶಿಕ್ಷೆ ಪ್ರಮಾಣ ಹೆಚ್ಚಿಸಲಾಗಿದೆ. 83 ಅಪರಾಧಗಳಿಗೆ ಅಧಿಕ ದಂಡ ವಿಧಿಸುವ ಜೊತೆಗೆ 23 ಅಪರಾಧಗಳಿಗೆ ಕಠಿಣ ಶಿಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ.

    ಪ್ರಮುಖ ಸೆಕ್ಷನ್‌ಗಳು ಯಾವುವು?
    420 – ಹಣಕಾಸು ಅಥವಾ ಬೇರೆ ಯಾವುದೇ ಆಮಿಷ ಒಡ್ಡಿ ವಂಚಿಸಿದ ಆರೋಪದ ಅಡಿ ಐಪಿಸಿ ಸೆಕ್ಷನ್ 420ರ ಅಡಿ ಕೇಸ್ ದಾಖಲಾಗುತ್ತಿತ್ತು. ಇದೀಗ ಬಿಎನ್‌ಎಸ್‌ನಲ್ಲಿ ಸೆಕ್ಷನ್ 318 ಆಗಿದೆ.
    302 – ಭಾರತೀಯ ದಂಡ ಸಂಹಿತೆಯಲ್ಲಿ ಕೊಲೆ ಪ್ರಕರಣಕ್ಕೆ ಈ ಸೆಕ್ಷನ್ ಬಳಸಲಾಗುತ್ತಿತ್ತು. ಇದೀಗ ಭಾರತೀಯ ನ್ಯಾಯ ಸಂಹಿತೆಯಲ್ಲಿ 103 ಆಗಿದೆ.
    307 – ಭಾರತೀಯ ದಂಡ ಸಂಹಿತೆಯಲ್ಲಿ ಕೊಲೆ ಯತ್ನಕ್ಕೆ ಬಳಸಲಾಗುತ್ತಿತ್ತು. ಇದೀಗ ಸೆಕ್ಷನ್ 103 ಆಗಿದೆ.
    376 – ಭಾರತೀಯ ದಂಡ ಸಂಹಿತೆಯಲ್ಲಿ ಅತ್ಯಾಚಾರ ಪ್ರಕಣಗಳಿಗೆ ಈ ಸೆಕ್ಷನ್ ಬಲಸಲಾಗುತ್ತಿತ್ತು. ಇದೀಗ 64 ಆಗಿದೆ.
    304(ಬಿ) – ಐಪಿಸಿ ನಲ್ಲಿ ವರದಕ್ಷಿಣೆ ಕಿರುಕುಳ ಪ್ರಕರಣಕ್ಕೆ ಬಳಸುತ್ತಿದ್ದ ಸೆಕ್ಷನ್ ಈಗ ಬಿಎನ್‌ಎಸ್‌ನಲ್ಲಿ 80 ಆಗಿದೆ.
    304(ಎ) – ಐಪಿಸಿ ನಲ್ಲಿ ನಿರ್ಲಕ್ಷ್ಯದಿಂದ ಮರಣ (ರಸ್ತೆ ಅಪಘಾತ ಅಥವಾ ಇತರೇ ಸಂದರ್ಭ) ವೇಳೆ ಬಳಸಲಾಗುತ್ತಿತ್ತು. ಇದೀಗ ಬಿಎನ್‌ಎಸ್‌ನಲ್ಲಿ 106 ಆಗಿದೆ.
    359 – ವ್ಯಕ್ತಿ ಅಪಹರಣ ಪ್ರಕರಣದಲ್ಲಿ ಐಪಿಸಿ ನಲ್ಲಿ ಈ ಸೆಕ್ಷನ್ ಬಳಕೆಯಾಗುತ್ತಿತ್ತು. ಈಗ ಸೆಕ್ಷನ್ 137 ಆಗಿದೆ.
    309 – ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿದರೆ ಆತನ ವಿರುದ್ಧ ಐಪಿಸಿ ಅಡಿ ಈ ಸೆಕ್ಷನ್ ವಿಧಿಸಲಾಗುತ್ತಿತ್ತು. ಈಗ ಬಿಎನ್‌ಎಸ್ ಅಡಿ 226 ಆಗಿದೆ.

  • ಬ್ರಿಟಿಷರ ಕಾಲದ ಕ್ರಿಮಿನಲ್‌ ಕಾನೂನುಗಳಿಗೆ ಗುಡ್‌ಬೈ – ಇಂದಿನಿಂದ 3 ದೇಶಿ ಕಾನೂನು ಜಾರಿ

    ಬ್ರಿಟಿಷರ ಕಾಲದ ಕ್ರಿಮಿನಲ್‌ ಕಾನೂನುಗಳಿಗೆ ಗುಡ್‌ಬೈ – ಇಂದಿನಿಂದ 3 ದೇಶಿ ಕಾನೂನು ಜಾರಿ

    – ಎಸ್‌ಎಂಎಸ್‌, ವಾಟ್ಸಪ್‌ ಮೂಲಕವೂ ಸಮನ್ಸ್‌
    – ತ್ವರಿತ ನ್ಯಾಯದಾನಕ್ಕೆ ಹೊಸ ಕಾನೂನು ಜಾರಿ

    ನವದೆಹಲಿ: ದೇಶದಲ್ಲಿ ಇಂದಿನಿಂದ ಕಾನೂನು (Law) ಬದಲಾಗಲಿದ್ದು, ಬ್ರಿಟೀಷರ ಕಾಲದಿಂದ ಜಾರಿಯಲ್ಲಿದ್ದ ಐಪಿಸಿ (Indian Penal Code), ಸಿಆರ್‌ಪಿಸಿ (Code of Criminal Procedure), ಇಂಡಿಯನ್ ಎವಿಡೆನ್ಸ್ ಆಕ್ಟ್‌ಗೆ (Indian Evidence Act) ಗುಡ್‌ಬೈ ಹೇಳಲಾಗುತ್ತದೆ.

    ಐಪಿಸಿ ಜಾಗದಲ್ಲಿ ಭಾರತೀಯ ನ್ಯಾಯ ಸಂಹಿತೆ (Bharatiya Nyaya Sanhita), ಸಿಆರ್‌ಪಿಸಿ ಜಾಗದಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (Bharatiya Nagarik Suraksha Sanhita), ಇಂಡಿಯನ್ ಎವಿಡೆನ್ಸ್ ಆಕ್ಟ್ ಜಾಗದಲ್ಲಿ ಭಾರತೀಯ ಸಾಕ್ಷ್ಯ ಅಧಿನಿಯಮ (Bharatiya Sakshya Adhiniyam) ಜಾರಿಗೆ ಬರುತ್ತಿದೆ.

    ಭಾರತೀಯ ನ್ಯಾಯ ಸಂಹಿತೆಯು 358 ಸೆಕ್ಷನ್ ಒಳಗೊಂಡಿದೆ. 20 ಹೊಸ ಅಪರಾಧಗಳು ಸೇರಿಸಲ್ಪಟ್ಟಿವೆ, 33 ಅಪರಾಧಗಳ ಶಿಕ್ಷೆ ಅವಧಿ ಹೆಚ್ಚಿಸಲಾಗಿದೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 531 ಸೆಕ್ಷನ್ ಒಳಗೊಂಡಿದೆ. 177 ಕಲಂಗಳನ್ನು ಬದಲಿಸಲಾಗಿದೆ. ಭಾರತೀಯ ಸಾಕ್ಷ್ಯ ಅಧಿನಿಯಮ 170 ಸೆಕ್ಷನ್ ಒಳಗೊಂಡಿದೆ. ಇದನ್ನೂ ಓದಿ: T20 ವಿಶ್ವಕಪ್‌ ಗೆದ್ದ ಟೀಂ ಇಂಡಿಯಾ ಆಟಗಾರರಿಗೆ ಬಂಪರ್‌ – ಬರೋಬ್ಬರಿ 125 ಕೋಟಿ ಬಹುಮಾನ ಘೋಷಿಸಿದ ಬಿಸಿಸಿಐ

    ಹಿಂದೆ ಎಷ್ಟಿತ್ತು? ಈಗ ಎಷ್ಟು ಸೆಕ್ಷನ್‌ಗಳು ಇದೆ?
    ಭಾರತೀಯ ದಂಡ ಸಂಹಿತೆ (IPC) 511 ಸೆಕ್ಷನ್‌ ಇದ್ದರೆ ಭಾರತೀಯ ನ್ಯಾಯ ಸಂಹಿತಾ(BNS)-358 ಸೆಕ್ಷನ್‌ಗಳು ಇದೆ.
    ಕ್ರಿಮಿನಲ್ ಪ್ರೊಸೀಜರ್ ಕೋಡ್ (CrPC) 484 ಸೆಕ್ಷನ್‌ಗಳು ಇದ್ದರೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ(BNSS) – 531 ಸೆಕ್ಷನ್‌ಗಳು ಇದೆ.
    ಭಾರತೀಯ ಸಾಕ್ಷ್ಯ ಕಾಯ್ದೆ (IEA) 167 ಸೆಕ್ಷನ್‌ಗಳು ಇದ್ದರೆ ಭಾರತೀಯ ಸಾಕ್ಷ್ಯ ಅಧಿನಿಯಮ (BSA) 170 ಸೆಕ್ಷನ್‌ಗಳು ಇದೆ.

    ಹೊಸ ಕಾನೂನಿನಲ್ಲಿ ಏನು ಬದಲಾವಣೆ?
    * ಪೊಲೀಸ್ ಕಸ್ಟಡಿ ಗರಿಷ್ಠ ಅವಧಿ 14ದಿನದಿಂದ 60 ದಿನಗಳವರೆಗೂ ಹೆಚ್ಚಳ
    * 3-7 ವರ್ಷ ಶಿಕ್ಷೆಯಾಗುವ ಕೇಸ್‌ಗಳಲ್ಲಿ ದೂರು ನೀಡಿದ 24 ಗಂಟೆಯೊಳಗೆ ಎಫ್‌ಐಆರ್
    * 3-7 ವರ್ಷ ಶಿಕ್ಷೆಯಾಗುವ ಕೇಸ್‌ಗಳ ತನಿಖೆಯನ್ನು 14 ದಿನದಲ್ಲಿ ಒಂದು ಹಂತಕ್ಕೆ ತರಬೇಕು
    * ಏಳು ವರ್ಷಕ್ಕಿಂತ ಹೆಚ್ಚು ಶಿಕ್ಷೆ ಆಗುವ ಪ್ರಕರಣಗಳಲ್ಲಿ ಫೊರೆನ್ಸಿಕ್ ತನಿಖೆ ಕಡ್ಡಾಯ

    * ಆರ್ಥಿಕ ಅಪರಾಧ ಕೇಸ್‌ಗಳಲ್ಲಿ ಪೊಲೀಸರಿಗೆ ಸ್ಥಿರಾಸ್ತಿ-ಚರಾಸ್ತಿ ಜಪ್ತಿ ಮಾಡುವ ಅಧಿಕಾರ
    * ಮಹಿಳೆ, ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು 2 ತಿಂಗಳಲ್ಲಿ ತನಿಖೆ ಮುಗಿಸಬೇಕು
    * ರೇಪ್ ಕೇಸ್‌ಗಳಲ್ಲಿ ಸಂತ್ರಸ್ತೆ ಹೇಳಿಕೆಯನ್ನು ಆಕೆಯ ಸಂಬಂಧಿಕರ ಸಮ್ಮುಖದಲ್ಲಿ ಮಹಿಳಾ ಅಧಿಕಾರಿಯ ಮುಂದೆ ಹೇಳಬೇಕು.

    * ಪೋಕ್ಸೋ ಕೇಸ್‌ಗಳಲ್ಲಿ ಸಂತ್ರಸ್ತರ ಹೇಳಿಕೆಯನ್ನು ಮಹಿಳಾ ಅಧಿಕಾರಿ ಕೂಡ ದಾಖಲಿಸಿಕೊಳ್ಳಬಹುದು
    * ಕ್ರಿಮಿನಲ್ ಕೇಸ್ ವಿಚಾರಣೆ. ಕೋರ್ಟ್ ಗರಿಷ್ಠ 2-3 ವಾಯಿದೆಗಳನ್ನು ಮಾತ್ರ ನೀಡಬೇಕು.
    * ತನಿಖೆ, ಕೋರ್ಟ್ ಸಮನ್ಸ್‌ಗಳನ್ನು ಮಸೇಜ್‌, ವಾಟ್ಸಪ್ ಸೇರಿ ಡಿಜಿಟಲ್ ರೂಪದಲ್ಲಿಯೇ ಕಳಿಸಬಹುದು
    * ಕೇಸ್ ನಮೂದು-ಕೋರ್ಟ್ ವಿಚಾರಣೆವರೆಗೂ ಸಂತ್ರಸ್ತರಿಗೆ ವಾಟ್ಸಪ್ ಮೂಲಕ ಪ್ರತಿಹಂತದ ಮಾಹಿತಿ

    * ರಾಷ್ಟ್ರಮಟ್ಟದ ಡಿಜಿ ಲಾಕರ್‌ನಲ್ಲಿ ಸಾಕ್ಷಿಗಳ ಹೇಳಿಕೆ, ಆಡಿಯೋ, ವೀಡಿಯೋ ಸಾಕ್ಷ್ಯ ಭದ್ರ
    * ರೇಡ್ ಪ್ರಕ್ರಿಯೆಯ ಕಡ್ಡಾಯ ಚಿತ್ರೀಕರಣ. 48 ಗಂಟೆಯಲ್ಲಿ ನ್ಯಾಯಾಲಯಕ್ಕೆ ವರದಿ
    * ಸಂತ್ರಸ್ತರು ಠಾಣೆಗೆ ಹೋಗದೆಯೂ ಆನ್‌ಲೈನ್ ಮೂಲಕ ದೂರು ನೀಡಬಹುದು. ಮಹಿಳೆಯರು, ವಿಕಲಚೇತನರು, ರೋಗಿಗಳು, ಮಕ್ಕಳು, ಹಿರಿಯರು ಠಾಣೆಗೆ ಹೋಗುವ ಅಗತ್ಯವಿಲ್ಲ. ಈ ಐದು ವರ್ಗದ ಮಂದಿ ತಾವಿರುವ ಕಡೆಯೇ ಪೊಲೀಸರನ್ನು ಕರೆಸಬಹುದು.

    * ಯಾವುದೇ ಘಟನೆಯ ಮಾಹಿತಿಯನ್ನು ಆನ್‌ಲೈನ್ ಮೂಲಕ ಯಾವ ಠಾಣೆಗಾದ್ರೂ ತಿಳಿಸಬಹುದು.
    * ಝೀರೋ ಎಫ್‌ಐಆರ್; ಠಾಣಾ ವ್ಯಾಪ್ತಿ ಲೆಕ್ಕಿಸದೇ ಯಾವ ಠಾಣೆಗಾದ್ರೂ ದೂರು ಸಲ್ಲಿಸಬಹುದು.
    * ಆರೋಪಿಗಳ ಬಂಧನದ ಬಗ್ಗೆ ಅವರ ಸ್ನೇಹಿತರು, ಕುಟುಂಬ ಸದಸ್ಯರಿಗೆ ಪೊಲೀಸರು ತಿಳಿಸಬೇಕು.
    * ಆರೋಪಿಗಳಿಗೆ, ಸಂತ್ರಸ್ತರಿಗೆ ಎಫ್‌ಐಆರ್ ಕಾಪಿ ಉಚಿತವಾಗಿ ನೀಡಬೇಕು.
    * ಮದುವೆ ಭರವಸೆ ನೀಡಿ ಲೈಂಗಿಕ ದೌರ್ಜನ್ಯ ಎಸಗುವವರಿಗೆ 10 ವರ್ಷಗಳವರೆಗೆ ಶಿಕ್ಷೆ.

     

  • ಮನೆ ಕ್ಲೀನ್‌ ಮಾಡು ಅಂತ ಹೇಳಿದ್ದಕ್ಕೆ ಜಗಳ – ಗಂಡನ ಕಿವಿ ಕಚ್ಚಿ ತುಂಡು ಮಾಡಿದ ಹೆಂಡ್ತಿ ವಿರುದ್ಧ ಕೇಸ್‌!

    ಮನೆ ಕ್ಲೀನ್‌ ಮಾಡು ಅಂತ ಹೇಳಿದ್ದಕ್ಕೆ ಜಗಳ – ಗಂಡನ ಕಿವಿ ಕಚ್ಚಿ ತುಂಡು ಮಾಡಿದ ಹೆಂಡ್ತಿ ವಿರುದ್ಧ ಕೇಸ್‌!

    ನವದೆಹಲಿ: ಮನೆ ಸ್ವಚ್ಛ ಮಾಡು ಅಂತ ಹೇಳಿದ್ದಕ್ಕೆ ಗಂಡ-ಹೆಂಡತಿ (Husband And Wife) ನಡುವೆ ಜಗಳವಾಗಿದೆ. ಈ ವೇಳೆ ಆಕ್ರೋಶದಿಂದ ಹೆಂಡತಿ ತನ್ನ ಬಲ ಕಿವಿಯನ್ನು ಕಚ್ಚಿ ತುಂಡುಮಾಡಿರುವುದಾಗಿ ಪತಿ ಪೊಲೀಸ್‌ ಕೇಸ್‌ ದಾಖಲಿಸಿರುವ ಘಟನೆ ದೆಹಲಿ ಸುಲ್ತಾನ್‌ಪುರಿ (Sultanpuri) ಪ್ರದೇಶದಲ್ಲಿ ನಡೆದಿದೆ.

    ಹೆಂಡತಿ ಕಿವಿ ಕಚ್ಚಿ ಎರಡು ತುಂಡಾಗಿದ್ದರಿಂದ 45 ವರ್ಷದ ಬಲಿಪಶು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ಸ್ಥಳೀಯ ಪೊಲೀಸರು. ಸಂತ್ರಸ್ತ ಪತಿ ನೀಡಿದ ದೂರಿನ ಆಧಾರದ ಮೇಲೆ ಪತ್ನಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಗುಜರಾತ್‌ನಲ್ಲಿ ಸಿಡಿಲು ಬಡಿದು 20 ಮಂದಿ ದುರ್ಮರಣ – ಅಮಿತ್‌ ಶಾ ಸಂತಾಪ

    ಪತ್ನಿ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 324 (ಸ್ವಯಂಪ್ರೇರಿತವಾಗಿ ಅಪಾಯಕಾರಿ ಶಸ್ತ್ರಾಸ್ತ್ರಗಳು ಅಥವಾ ವಿಧಾನಗಳಿಂದ ಗಾಯ ಉಂಟುಮಾಡುವುದು) ಅಡಿಯಲ್ಲಿ FIR ದಾಖಲಿಸಲಾಗಿದೆ. ಈ ಬಗ್ಗೆ ತನಿಖೆ ಮುಂದುವರಿದಿದೆ.

    ಅಷ್ಟಕ್ಕೂ ನಡೆದಿದ್ದೇನು?
    ಇದೇ ತಿಂಗಳ ನವೆಂಬರ್‌ 20 ರಂದು ಬೆಳಗ್ಗೆ 9:20ರ ಸುಮಾರಿಗೆ ನನ್ನ ಹೆಂಡತಿಗೆ ಮನೆ ಸ್ವಚ್ಛಗೊಳಿಸುವಂತೆ ಹೇಳಿ, ಮನೆಯ ಹೊರಗೆ ಕಸ ಎಸೆಯಲು ಹೋಗಿದ್ದೆ. ನಾನು ಮನೆಗೆ ವಾಪಸ್‌ ಬಂದ ಕೂಡಲೇ ನನ್ನ ಹೆಂಡತಿ ಜಗಳ ತೆಗೆದಿದ್ದಾಳೆ. ಜಗಳದ ಮಧ್ಯೆ ಮಕ್ಕಳೊಂದಿಗೆ ಪ್ರತ್ಯೇಕವಾಗಿರಲು ಮನೆ ಮಾರಾಟ ಮಾಡಿ, ತನಗೂ ಪಾಲು ನೀಡುವಂತೆ ಪತ್ನಿ ಕೇಳಿದ್ದಾಳೆ. ಈ ವೇಳೆ ಪತಿ ಸಮಾಧಾನಪಡಿಸಿದರೂ ಬಗ್ಗದೇ ಮಾತಿನ ಚಕಮಕಿ ಮುಂದುವರಿದಿದೆ.

    ಇದರಿಂದ ಆಕೆಯ ಕೋಪ ಮಿತಿಮೀರಿ ನನ್ನನ್ನೇ ಹೊಡೆಯಲು ಬಂದಿದ್ದಳು. ಆಕೆಯನ್ನು ತಳ್ಳಿ, ನಾನು ಮನೆಯಿಂದ ಹೊರಹೋಗುತ್ತಿದೆ. ಆಗ ಹಿಂಬದಿಯಿಂದ ನನ್ನನ್ನ ಹಿಡಿದುಕೊಂಡು ಬಲ ಕಿವಿಯನ್ನು ಕಚ್ಚಿದಳು. ನನ್ನ ಕಿವಿ ಮೇಲಿನ ಭಾಗ ತುಂಡಾಗಿ ರಕ್ತಸ್ರಾವವಾಯಿತು ಎಂದು ದೂರಿನಲ್ಲಿ ಹೇಳಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ತಿರುಪತಿ ವೆಂಕಟೇಶ್ವರ ಸ್ವಾಮಿ ದೇವಾಲಯಕ್ಕೆ ಪ್ರಧಾನಿ ಮೋದಿ ಭೇಟಿ

    ಸದ್ಯ ಸಂತ್ರಸ್ತ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಆದ್ರೆ ಇನ್ನೂ ಹೇಳಿಕೆ ನೀಡುವ ಸ್ಥಿತಿಯಲ್ಲಿಲ್ಲ. ನವೆಂಬರ್‌ 22ರಂದು ಪೊಲೀಸರಿಗೆ ಲಿಖಿತ ದೂರು ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಲು ಪ್ರತ್ಯೇಕ ತಂಡ ಕಳುಹಿಸಲಾಗಿದೆ. ಇದನ್ನೂ ಓದಿ: ಚೀನಾದಲ್ಲಿ ಮತ್ತೊಂದು ವೈರಸ್; ಆಸ್ಪತ್ರೆಗಳಲ್ಲಿ ತುರ್ತುಕ್ರಮ ಪರಿಶೀಲಿಸುವಂತೆ ರಾಜ್ಯಗಳಿಗೆ ಖಡಕ್‌ ವಾರ್ನಿಂಗ್‌

  • ಭಾರತದ ಕಾನೂನು ಬದಲಿಸುವ ಮೂರು ಮಸೂದೆಗಳು ಶೀಘ್ರದಲ್ಲಿ ಅಂಗೀಕಾರ: ಅಮಿತ್ ಶಾ

    ಭಾರತದ ಕಾನೂನು ಬದಲಿಸುವ ಮೂರು ಮಸೂದೆಗಳು ಶೀಘ್ರದಲ್ಲಿ ಅಂಗೀಕಾರ: ಅಮಿತ್ ಶಾ

    ನವದೆಹಲಿ: ಭಾರತೀಯ ದಂಡ ಸಂಹಿತೆ (IPC), ಸಿಆರ್‌ಪಿಸಿ (CrPC) ಹಾಗೂ ಇಂಡಿಯನ್ ಎವಿಡೆನ್ಸ್ ಕಾಯಿದೆಯನ್ನು ಬದಲಿಸುವ ಮೂರು ಹೊಸ ಮಸೂದೆಗಳನ್ನು ಶೀಘ್ರದಲ್ಲೇ ಸಂಸತ್ತಿನಲ್ಲಿ ಅಂಗೀಕರಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಹೇಳಿದ್ದಾರೆ.

    ಹೈದರಾಬಾದ್‍ನ ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ನಡೆದ ಐಪಿಎಸ್ ಕೆಡೆಟ್‍ಗಳ ಪಾಸಿಂಗ್ ಔಟ್ ಪರೇಡ್‍ನಲ್ಲಿ ಅವರು ಮಾತನಾಡಿದ್ದಾರೆ. ಈ ವೇಳೆ ಭಾರತವು ಬ್ರಿಟಿಷರ ಆಳ್ವಿಕೆಯಲ್ಲಿ ಮಾಡಿದ ಕಾನೂನುಗಳನ್ನು ತ್ಯಜಿಸುತ್ತಿದೆ. ಈಗ ಹೊಸ ಆತ್ಮವಿಶ್ವಾಸ ಮತ್ತು ಹೊಸ ಭರವಸೆಗಳೊಂದಿಗೆ ಹೊಸ ಯುಗವನ್ನು ಪ್ರವೇಶಿಸುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಹೈಕಮಾಂಡ್ ನಾಯಕರ ಭೇಟಿಗೆ ಆಗಮಿಸಿದ್ದ DVSಗೆ ತೀವ್ರ ನಿರಾಸೆ

    ಗೃಹ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯು ಮೂರು ಹೊಸ ಮಸೂದೆಗಳನ್ನು ಪರಿಶೀಲಿಸುತ್ತಿದೆ. ಪರಿಶೀಲನೆ ಬಳಿಕ ಅಂಗೀಕರಿಸಲಾಗುತ್ತದೆ. ಹೊಸ ಕಾನೂನುಗಳು ಜನರ ಹಕ್ಕುಗಳನ್ನು ರಕ್ಷಿಸುವ ಗುರಿಯನ್ನು ಹೊಂದಿವೆ ಎಂದು ಅವರು ತಿಳಿಸಿದ್ದಾರೆ.

    ಮಹಿಳಾ ಐಪಿಎಸ್ ಕೆಡೆಟ್‍ಗಳ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ, ಪ್ರಧಾನಿ ನರೇಂದ್ರ ಮೋದಿ (Narendra Modi )ಅವರ ನಾಯಕತ್ವದಲ್ಲಿ ದೇಶವು ಮಹಿಳಾ ನೇತೃತ್ವದ ಅಭಿವೃದ್ಧಿಯಲ್ಲಿ ಪ್ರಗತಿಯಲ್ಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನಮ್ಮ ನಾಯಕ ಡಿಕೆಶಿ ಸಿಎಂ ಆಗ್ತಾರೆ, 70 ಶಾಸಕರ ಬೆಂಬಲವಿದೆ: ಶಿವಗಂಗಾ ಬಸವರಾಜ್ ಬಾಂಬ್‌

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚಲಿಸುತ್ತಿದ್ದ ಬೈಕ್‌ ಮೇಲೆ ಕುಳಿತು ಪ್ರಿಯಕರನೊಂದಿಗೆ ಲಿಪ್‌ ಲಾಕ್‌ – ಪೊಲೀಸರು ಕೊಟ್ರು ಶಾಕ್

    ಚಲಿಸುತ್ತಿದ್ದ ಬೈಕ್‌ ಮೇಲೆ ಕುಳಿತು ಪ್ರಿಯಕರನೊಂದಿಗೆ ಲಿಪ್‌ ಲಾಕ್‌ – ಪೊಲೀಸರು ಕೊಟ್ರು ಶಾಕ್

    ಜೈಪುರ: ಪ್ರೇಮಿಗಳಿಗೆ (Lovers) ಜಗತ್ತೇ ಕುರುಡಾಗಿರುತ್ತದೆ. ಕೆಲ ಪ್ರೇಮಿಗಳಂತೂ ಅಕ್ಕ-ಪಕ್ಕ ಯಾರಿರುತ್ತಾರೆ ಎಂಬ ಅರಿವೇ ಇಲ್ಲದೇ ಸಾರ್ವಜನಿಕ ಪ್ರದೇಶಗಳಲ್ಲೂ ಹುಚ್ಚಾಟ ಮರೆಯುವುದನ್ನು ನೋಡಿರುತ್ತೇವೆ. ಅದೇ ರೀತಿ ಪ್ರೇಮಿಗಳಿಬ್ಬರು ಹಾಡಹಗಲೇ ನಡುರಸ್ತೆಯಲ್ಲಿ ಬೈಕ್ ಮೇಲೆ ಕುಳಿತು ರೊಮ್ಯಾನ್ಸ್ ಮಾಡಿಕೊಂಡು ಚಲಿಸುತ್ತಿರುವ ವೀಡಿಯೋ ಜಾಲತಾಣದಲ್ಲಿ ಭಾರೀ ಸದ್ದು ಮಾಡ್ತಿದೆ.

    ರಾಜಸ್ಥಾನದ (Rajasthan) ಜೈಪುರದಲ್ಲಿ ಯುವ ಪ್ರೇಮಿಗಳಿಬ್ಬರು ಹಾಡಹಗಲೇ ಬೈಕ್ ಮೇಲೆ ರಾಜಾರೋಷವಾಗಿ ತಬ್ಬಿಕೊಂಡು ಹೋಗುತ್ತಿದ್ದಾರೆ, ಈ ವೇಳೆ ಯುವಕ ಹಿಂಬದಿಗೆ ತಿರುಗಿ ಪರಸ್ಪರ ಲಿಪ್‌ಲಾಕ್‌ ಮಾಡಿ ಚುಂಬಿಸಿದ್ದಾರೆ. ಈ ವೀಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವೀಡಿಯೋ ಜಾಲತಾಣದಲ್ಲಿ (Social Media) ಹರಿದಾಡುತ್ತಿದ್ದಂತೆ ಜೈಪುರದ ಸಂಚಾರ ಪೊಲೀಸರು ದಂಡದ ಬಿಸಿ ಮುಟ್ಟಿಸಿದ್ದಾರೆ. ಇದನ್ನೂ ಓದಿ: ಗುಡ್ಡೆಯಂಗಡಿಯಲ್ಲಿ ಗೌಪ್ಯವಾಗಿ ನಿರ್ಮಾಣವಾಗುತ್ತಿದ್ದ ಮನೆ ಯಾರದ್ದು? ಚೈತ್ರಾ ಪ್ರಕರಣಕ್ಕೆ ಇದೆಯಂತೆ ಲಿಂಕ್

    ಬೈಕ್‌ ಸವಾರರು ಹೆಲ್ಮೆಟ್‌ ಧರಿಸಿರಲಿಲ್ಲ, ಜೊತೆಗೆ ಸಂಚಾರ ನಿಯಮ ಉಲ್ಲಂಘಿಸಿದ್ದಾರೆ ಎಂದು ಸಂಚಾರ ಪೊಲೀಸರು ದಂಡ ವಿಧಿಸಿದ್ದಾರೆ. ಮೋಟಾರು ವಾಹನ ಕಾಯ್ದೆ (ಎಂವಿ)-1988 (Motor Vehicle Act-1988) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಯುವಕನಿಗೆ ದಂಡ ವಿಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದನ್ನೂ ಓದಿ: SIIMA 2023: ರಾರಾ ರಕ್ಕಮ್ಮ ಸೇರಿ ವಿಕ್ರಾಂತ್ ರೋಣಕ್ಕೆ ಎರಡು ಪ್ರಶಸ್ತಿ

    ಬೈಕ್‌ ಮೇಲೆ ಕುಳಿತು ಪ್ರೇಮಿಗಳು ಹುಚ್ಚಾಟ ಮೆರೆದಿರುವುದು ಇದೇ ಮೊದಲೇನಲ್ಲ. ಈ ಹಿಂದೆ ದೆಹಲಿಯಲ್ಲಿ ರಾತ್ರಿ ವೇಳೆ ಪ್ರೇಮಿಗಳಿಬ್ಬರು ನಡು ರಸ್ತೆಯಲ್ಲಿ ರೊಮ್ಯಾನ್ಸ್ ಮಾಡಿಕೊಂಡು ಹೋಗುತ್ತಿದ್ದದ್ದು, ರಾಜ್ಯಾದ್ಯಂತ ಭಾರೀ ಸದ್ದು ಮಾಡಿತ್ತು. ಕರ್ನಾಟಕದ ಚಾಮರಾಜನಗರ ಜಿಲ್ಲೆಯಲ್ಲೂ ಇಂತಹದ್ದೇ ಕೇಸ್ ಬೆಳಕಿಗೆ ಬಂದಿತ್ತು. ಹೋಳಿ ಹಬ್ಬದಂದು ಜೈಪುರದಲ್ಲೇ ಇದೇ ರೀತಿ ಘಟನೆ ವರದಿಯಾಗಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ – ಪತಿ ಕುಟುಂಬದ ಮೇಲೆ ಪ್ರಕರಣ ದಾಖಲು

    ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ – ಪತಿ ಕುಟುಂಬದ ಮೇಲೆ ಪ್ರಕರಣ ದಾಖಲು

    ಕೋಲಾರ: ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಪತಿ ಸೇರಿ 6 ಜನರ ವಿರುದ್ಧ ಅತ್ಮಹತ್ಯೆಗೆ ಪ್ರಚೋದನೆ ಕೇಸ್ ದಾಖಲಾಗಿದೆ.

    ಮೃತ ಮಹಿಳೆಯನ್ನು ಸುಗುಣ ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೂ ಮುನ್ನ ತನ್ನ ಗಂಡ ಮುರಳಿ, ಅತ್ತೆ ಹಾಗೂ ಆತನ ಕುಟುಂಬಸ್ಥರ ಕಿರುಕುಳ ಕಾರಣ ಎಂದು ಡೆತ್‍ನೋಟ್‍ನಲ್ಲಿ ಉಲ್ಲೇಖಿಸಿದ್ದಾಳೆ. ಡೆತ್‍ನೋಟ್‍ನ್ನು ಮೊಬೈಲ್ ಮೂಲಕ ತನ್ನ ಸಹೋದರ ನಿಖಿತ್‍ಗೆ ಕಳುಹಿಸಿದ್ದಾಳೆ. ಅದರಂತೆ ಮೃತ ಸುಗುಣ ಡೆತ್‍ನೋಟ್ ಹಾಗೂ ಆಕೆಯ ಅಣ್ಣ ಸತೀಶ್ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಜು.3ರಿಂದ 10 ದಿನಗಳ ಕಾಲ ಅಧಿವೇಶನ – ಜೂನ್ 26ರಿಂದ ಮೂರು ದಿನಗಳ ಕಾಲ ನೂತನ ಶಾಸಕರಿಗೆ ತರಬೇತಿ

    ಇಬ್ಬರು ಮಕ್ಕಳನ್ನ ಕೊಂದ ಹಿನ್ನೆಲೆ ಸುಗುಣ ವಿರುದ್ಧ ಐಪಿಸಿ (IPC) ಸೆಕ್ಷನ್ 302 ರಡಿ ಪ್ರಕರಣ ದಾಖಲಾಗಿದೆ. ಡೆತ್‍ನೋಟ್ ಆಧರಿಸಿ 6 ಜನರ ವಿರುದ್ಧ ಐಪಿಸಿ ಸೆಕ್ಷನ್ 306 ಅಡಿಯಲ್ಲಿ ದೂರು ದಾಖಲಾಗಿದೆ. 6 ಜನರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು ಎಂದು ಕೋಲಾರದ (Kolar) ಎಸ್ಪಿ ನಾರಾಯಣ ತಿಳಿಸಿದ್ದಾರೆ.

    ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದ್ದು, ಮೃತಳ ಹುಟ್ಟೂರು ಗಿರ್ನಹಳ್ಳಿಯಲ್ಲಿ ಮೂರು ಜನರ ಅಂತ್ಯಸಂಸ್ಕಾರವನ್ನು ನೆರವೇರಿಸಲಾಗಿದೆ. ಇದನ್ನೂ ಓದಿ: ಬ್ರ‍್ಯಾಂಡ್ ಬೆಂಗಳೂರು ಕಟ್ಟಲು ನೀವೂ ಕೊಡಿ ಸಲಹೆ: ಸಾರ್ವಜನಿಕರಲ್ಲಿ ಡಿಕೆಶಿ ಮನವಿ

  • ಸೆಕ್ಸ್ ನಡೆಸದಿರುವುದು ಹಿಂದೂ ವಿವಾಹ ಕಾಯ್ದೆ ಅಡಿ ಕ್ರೌರ್ಯ – IPC ಸೆಕ್ಷನ್ 498A ಅಡಿ ಅಲ್ಲ

    ಸೆಕ್ಸ್ ನಡೆಸದಿರುವುದು ಹಿಂದೂ ವಿವಾಹ ಕಾಯ್ದೆ ಅಡಿ ಕ್ರೌರ್ಯ – IPC ಸೆಕ್ಷನ್ 498A ಅಡಿ ಅಲ್ಲ

    ಬೆಂಗಳೂರು: ಪತಿಯಿಂದ ದೈಹಿಕ ಸಂಪರ್ಕ ನಿರಾಕರಿಸುವುದು ಹಿಂದೂ ವಿವಾಹ ಕಾಯ್ದೆ 1955ರ (Hindu Marriage Act 1955) ಅಡಿಯಲ್ಲಿ ಕ್ರೌರ್ಯವಾಗಿದೆ. ಆದ್ರೆ ಐಪಿಸಿ ಸೆಕ್ಷನ್ 498A (IPC Section) ಅಡಿಯಲ್ಲಿ ಇದು ಕ್ರೌರ್ಯವಲ್ಲ ಎಂದು ಕರ್ನಾಟಕ ಹೈಕೋರ್ಟ್ (Karnataka Highcourt) ಮಹತ್ವದ ತೀರ್ಪು ಪ್ರಕಟಿಸಿದೆ. ಈ ಮೂಲಕ ಪತಿ ಹಾಗೂ ಪೋಷಕರ ವಿರುದ್ಧ ಪತ್ನಿ ದಾಖಲಿಸಿದ ಕ್ರಿಮಿನಲ್ ಮೊಕದ್ದಮೆಯನ್ನ ವಜಾಗೊಳಿಸಿದೆ.

    ಐಪಿಸಿ ಸೆಕ್ಷನ್ 498ಎ ಮತ್ತು ವರದಕ್ಷಿಣೆ ನಿಷೇಧ ಕಾಯ್ದೆ-1961ರ (Dowry Prohibition Act) ಸೆಕ್ಷನ್ 4ರ ಅಡಿಯಲ್ಲಿ ಪತಿ ಹಾಗೂ ಪೋಷಕರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿತ್ತು. ಈ ಆರೋಪಪಟ್ಟಿಯನ್ನು ಪ್ರಶ್ನಿಸಿ ಪತಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಪೂರ್ಣಗೊಳಿಸಿದ ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಪತ್ನಿ ಸಲ್ಲಿಸಿದ ದೂರನ್ನೇ ವಜಾಗೊಳಿಸಿದೆ.

    ಪತಿ ಆಧ್ಯಾತ್ಮಿಕ ಸಾಧನೆಯತ್ತ ಮುಖ ಮಾಡಿದ್ದರು, ದೈಹಿಕ ಪ್ರೀತಿಗಿಂತ ಆತ್ಮಗಳ ಪ್ರೀತಿ ಮುಖ್ಯ ಎಂದು ನಂಬಿದ್ದರು. ಪತಿ ತನ್ನ ಹೆಂಡತಿಯೊಂದಿಗೆ ದೈಹಿಕ ಸಂಬಂಧ ಹೊಂದಲು ಎಂದಿಗೂ ಉದ್ದೇಶಿಸಿರಲಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಇದನ್ನೂ ಓದಿ: ಛತ್ತೀಸ್‌ಗಢದ ಮಾವಿನ ಮೇಳದಲ್ಲಿ ವಿಶ್ವದ ದುಬಾರಿ ಮಾವಿನ ಪ್ರದರ್ಶನ- ಕೆ.ಜಿಗೆ 2.70 ಲಕ್ಷ ರೂ.

    ಮಹಿಳೆಯೊಬ್ಬರು (Women) 2019ರ ಡಿ.18 ರಂದು ವ್ಯಕ್ತಿಯೊಬ್ಬರನ್ನ ವಿವಾಹವಾಗಿದ್ದರು. ವಿವಾಹವಾಗಿ 28 ದಿನ ಜೊತೆಯಲ್ಲಿದ್ದರು. ಇದಾದ ನಂತರ ಪತಿ ಆಧ್ಯಾತ್ಮಿಕ ಸಾಧನೆಯ ಕಡೆ ಮುಖ ಮಾಡಿದ್ದಾರೆ. ಅಲ್ಲದೇ ದೈಹಿಕ ಪ್ರೀತಿಗಿಂತ, ಆತ್ಮಗಳ ಪ್ರೀತಿ ಮುಖ್ಯವೆನ್ನುತ್ತಿದ್ದ ಪತಿ, ಅಧ್ಯಾತ್ಮಿಕ ಸಾಧಕಿಯೊಬ್ಬರ ಉಪನ್ಯಾಸ ವೀಕ್ಷಿಸುವಂತೆ ತನ್ನ ಪತ್ನಿಗೆ ಹೇಳುತ್ತಿದ್ದರು. ಪತಿಯ ನಡೆಯಿಂದ ಮನನೊಂದ ಪತ್ನಿ ದೈಹಿಕ ಸಂಬಂಧದಿಂದ ನಿರಾಸೆ ಹೊಂದಿ ಪತಿ ವಿರುದ್ಧ ದೂರು ದಾಖಲಿಸಿದ್ದಾರೆ.

    2020ರ ಫೆಬ್ರವರಿ 5ರಂದು ಸೆಕ್ಷನ್ 498A ಮತ್ತು ವರದಕ್ಷಿಣೆ ಕಾಯ್ದೆಯ ಅಡಿಯಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಹಿಂದೂ ವಿವಾಹ ಕಾಯ್ದೆ ಸೆಕ್ಷನ್-12(1)(A) ಅಡಿಯಲ್ಲಿ ಆಕೆ ಕೌಟುಂಬಿಕ ನ್ಯಾಯಾಲಯದಲ್ಲೂ ದಾವೆ ಹೂಡಿದ್ದರು. ಈ ಮದುವೆಯನ್ನು ರದ್ದುಗೊಳಿಸುವಂತೆ ಕೋರಿದ್ದರು. 2022ರ ನವೆಂಬರ್ 16 ರಂದು ಮದುವೆ ರದ್ದಾದ ನಂತರ ಪತಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ನಿರ್ಧರಿಸಿದರು. ಇದನ್ನೂ ಓದಿ: Odisha Train Tragedy – ವಿಚಾರಣೆ ಎದುರಿಸಿದ್ದ ಜ್ಯೂನಿಯರ್‌ ಎಂಜಿನಿಯರ್‌ ನಾಪತ್ತೆ

    ಈ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಈ ಕೇಸ್‌ನಲ್ಲಿ ಕ್ರಿಮಿನಲ್ ಪ್ರಕ್ರಿಯೆಗಳನ್ನು ಮುಂದುವರಿಸಲು ಅನುಮತಿಸಲಾಗುವುದಿಲ್ಲ. ಹಾಗೆ ಮಾಡಿದರೆ ಅದು ಕಾನೂನಿನ ಪ್ರಕ್ರಿಯೆಯ ದುರುಪಯೋಗವಾಗಿತ್ತದೆ ಎಂದು ಅಭಿಪ್ರಾಯಪಟ್ಟು ಪತಿ ವಿರುದ್ಧದ ಕಾನೂನು ಪ್ರಕ್ರಿಯೆಯನ್ನೇ ರದ್ದುಗೊಳಿಸಿದೆ.

  • ಸಂದರ್ಶನ ಮಾಡುವ ನೆಪದಲ್ಲಿ ಕರೆಸಿ ಟೆಕ್ಕಿ ಯುವತಿ ಮೇಲೆ ಅತ್ಯಾಚಾರ

    ಸಂದರ್ಶನ ಮಾಡುವ ನೆಪದಲ್ಲಿ ಕರೆಸಿ ಟೆಕ್ಕಿ ಯುವತಿ ಮೇಲೆ ಅತ್ಯಾಚಾರ

    ಲಕ್ನೋ: ಕೆಲಸಕ್ಕಾಗಿ ಸಂದರ್ಶನ (Interview) ಮಾಡುವ ನೆಪದಲ್ಲಿ ಕರೆಸಿ, ಮಾದಕ ದ್ರವ್ಯ ನೀಡಿ ಎಂಜಿನಿಯರಿಂಗ್ ಪದವೀಧರೆಯ ಮೇಲೆ ಕಾರಿನಲ್ಲೇ ಅತ್ಯಾಚಾರ ಎಸಗಿರುವ ಘಟನೆ ಉತ್ತರಪ್ರದೇಶದಲ್ಲಿ (Uttar Pradesh) ನಡೆದಿದೆ.

    ಗುರುಗ್ರಾಮ್‌ನ ಮಾಲ್‌ವೊಂದರ (Sahara Ganj Mall) ನೆಲಮಾಳಿಗೆಯಲ್ಲಿ ಕಾರಿನಲ್ಲಿ 27 ವರ್ಷದ ಎಂಜಿನಿಯರಿಂಗ್ ಪದವೀಧರ ಯುವತಿಯ ಮೇಲೆ ಕಾಮುಕ ತುಷಾರ್ ಶರ್ಮಾ ಅತ್ಯಾಚಾರ ಎಸಗಿದ್ದಾನೆ. ಆಕೆಗೆ ಕುಡಿಯುವ ನೀರಿನಲ್ಲಿ ನಿದ್ರೆ ಔಷಧಿ ಬೆರಸಿ, ಪ್ರಜ್ಞೆ ತಪ್ಪಿದ ನಂತರ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು (UP Police) ತಿಳಿಸಿದ್ದಾರೆ. ಇದನ್ನೂ ಓದಿ: ಕೆನಡಾ ವಾಯುನೆಲೆಯಲ್ಲಿ ಅಪರಿಚಿತ ವಸ್ತುವನ್ನು ಹೊಡೆದುರುಳಿಸಿದ US ಫೈಟರ್ ಜೆಟ್

    ಗುರುಗ್ರಾಮ್‌ನ (Gurugram) ಸೆಕ್ಟರ್-51ರ ಮಹಿಳಾ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ದೂರು ದಾಖಲಿಸಿದ್ದು, ತುಷಾರ್ ಶರ್ಮಾ ಎಂಬ ವ್ಯಕ್ತಿ ತನ್ನೊಂದಿಗೆ ಸಂಪರ್ಕ ಹೊಂದಿದ್ದನು. ಕೆಲಸ ಕೊಡಿಸುವುದಾಗಿ ಭರವಸೆಯನ್ನೂ ನೀಡಿದ್ದ ಎಂದು ಹೇಳಿದ್ದಾರೆ. ಇದನ್ನೂ ಓದಿ: ಎಲ್‌ಟಿಟಿಇ ಮುಖ್ಯಸ್ಥ ಜೀವಂತವಾಗಿದ್ದಾನಾ? – ಇದು ತಮಾಷೆ ಎಂದ ಶ್ರೀಲಂಕಾ

    ಏನಿದು ಘಟನೆ?
    ಆರೋಪಿ ತುಷಾರ್ ಶರ್ಮಾ ಉದ್ಯೋಗಕ್ಕಾಗಿ ಸಂದರ್ಶನ ಇರುವುದಾಗಿ ಪದವೀಧರೆಯನ್ನ ಮಾಲ್‌ಗೆ ಕರೆಸಿದ್ದಾನೆ. ಆಕೆ ತನ್ನ ಎಲ್ಲ ದಾಖಲೆಗಳೊಂದಿಗೆ ಮಾಲ್‌ಗೆ ಬಂದಿದ್ದಾಳೆ. ನಂತರ ಆರೋಪಿ ಆಕೆಯನ್ನ ನೆಲಮಾಳಿಗೆ ಕಾರ್ ಪಾರ್ಕಿಂಗ್ ಸ್ಥಳಕ್ಕೆ ಕರೆದೊಯ್ದಿದ್ದಾನೆ. ಈ ವೇಳೆ ಆಕೆಗೆ ಕುಡಿಯುವ ನೀರಿನಲ್ಲಿ ನಿದ್ರೆ ಬರುವ ಔಷಧಿ ಬೆರೆಸಿಕೊಟ್ಟಿದ್ದಾನೆ. ಆಕೆ ನೀರು ಕುಡಿದ ಕೆಲವೇ ಕ್ಷಣಗಳಲ್ಲಿ ಪ್ರಜ್ಞೆ ಕಳೆದುಕೊಂಡಿದ್ದಾಳೆ. ನಂತರ ಆಕೆಯನ್ನು ಕಾರಿನೊಳಕ್ಕೆ ತಳ್ಳಿ ಆರೋಪಿ ಶರ್ಮಾ ಅತ್ಯಾಚಾರ ಎಸಗಿದ್ದಾನೆ. ಬಳಿಕ ಘಟನೆಯ ಬಗ್ಗೆ ಯಾರಿಗಾದರೂ ಹೇಳಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿ, ಆಕೆಯನ್ನು ಮಾಲ್ ಪಾರ್ಕಿಂಗ್‌ನಲ್ಲಿ ಬಿಟ್ಟು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸಂತ್ರಸ್ತೆಯಿಂದ ದೂರು ಸ್ವೀಕರಿಸಿದ ಬಳಿಕ ಆಕೆಯನ್ನ ವೈದ್ಯಕೀಯ ಪರೀಕ್ಷೆಗಾಗಿ ದಾಖಲಿಸಲಾಗಿದೆ. ಆರೋಪಿ ವಿರುದ್ಧ ಐಪಿಸಿ (IPC) ಸೆಕ್ಷನ್ 328, 376 (ಅತ್ಯಾಚಾರ), 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

    ಪೊಲೀಸರು ಮಾಲ್‌ನ ಸಿಸಿಟಿವಿ (CCTV) ದೃಶ್ಯಾವಳಿಗಳನ್ನ ಪರಿಶೀಲಿಸುತ್ತಿದ್ದು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • 55 ಸಾವಿರ ರೂ.ಗೆ ಖರೀದಿಸಿ, 13ರ ಬಾಲಕಿ ಮೇಲೆ ನಿರಂತರ ಅತ್ಯಾಚಾರ – ಓರ್ವ ಅರೆಸ್ಟ್

    ಜೈಪುರ: ಮಹಿಳೆಯೊಬ್ಬಳು (Women) 55 ಸಾವಿರ ರೂ.ಗೆ ಬಾಲಕಿಯನ್ನು ಖರೀದಿಸಿ ತನ್ನ ಮಗ ಹಾಗೂ ಪತಿಯಿಂದ ನಿರಂತರವಾಗಿ ಅತ್ಯಾಚಾರ ಮಾಡಿಸಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ (Jaipur) ನಡೆದಿದೆ.

    ಜಾರ್ಖಂಡ್‌ನ (Jharkhand) 13 ವರ್ಷದ ಬಾಲಕಿ ನಗರದ ಮನಕ್ ಚೌಕ್ ಪೊಲೀಸ್ ಠಾಣೆಗೆ (Manak Chowk Police Station) ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಓರ್ವ ಆರೋಪಿಯನ್ನ ಬಂಧಿಸಿದ್ದಾರೆ. ಆರೋಪಿ ವಿಕಾಸ್ ರಾಣಾ (27) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: Cyber Crimeː 1 ತಿಂಗಳಲ್ಲಿ 1,228 ಕೇಸ್ – ಪರಿಹರಿಸಲು ಪೊಲೀಸ್ ಸಿಬ್ಬಂದಿ ಕೊರತೆ

    ತನ್ನನ್ನು ಜೈಪುರದಿಂದ 55 ಸಾವಿರ ರೂ.ಗೆ ಖರೀದಿಸಿ ಕರೆತಂದು ತನ್ನ ಮೇಲೆ ನಿರಂತರವಾಗಿ ಅತ್ಯಾಚಾರ ಮಾಡಿಸಿದ್ದಾಳೆ ಎಂದು ಬಾಲಕಿ ಆರೋಪಿಸಿದ್ದಾರೆ.

    ಏನಿದು ಘಟನೆ?
    ಸುಮಾರು 2 ತಿಂಗಳಿನಿಂದ ಜಾರ್ಖಂಡ್ ನಗರದಲ್ಲಿ ತರಕಾರಿ ಮಾರಾಟ ಮಾಡಿಕೊಂಡಿದ್ದ ಮಹಿಳೆ ಬಾಲಕಿಯನ್ನ ನೋಡಿದ್ದಾಳೆ. ಈ ವೇಳೆ ಮದುವೆ ಪ್ರಸ್ತಾಪದೊಂದಿಗೆ ಬಾಲಕಿ ಕುಟುಂಬವನ್ನ ಸಂಪರ್ಕಿಸಿದ್ದಾಳೆ. ಬಾಲಕಿ ಮನೆಗೆ ಬಂದು ಜೈಪುರದ ಉತ್ತಮ ಕುಟುಂಬಕ್ಕೆ ನಿಮ್ಮ ಹುಡುಗಿಯನ್ನು ಮದುವೆ ಮಾಡಿಸಿಕೊಡುವುದಾಗಿ ಆಕೆಯ ತಾಯಿ ಹಾಗೂ ಅಜ್ಜಿಗೆ ಹೇಳಿದ್ದಾಳೆ. ಅಲ್ಲದೇ ಹುಡುಗಿಯನ್ನು ತನ್ನೊಂದಿಗೆ ಕಳುಹಿಸಿಕೊಟ್ಟರೆ 55 ಸಾವಿರ ರೂ. ನೀಡುವುದಾಗಿ ಆಸೆ ತೋರಿಸಿದ್ದಾಳೆ. ಇದರಿಂದ ಬಾಲಕಿಯ ಅಜ್ಜಿ ಮರುದಿನವೇ ರೈಲಿನಲ್ಲಿ ಜೈಪುರಕ್ಕೆ ಕರೆತಂದಿದ್ದಾರೆ.

    ನಂತರ ಬಾಲಕಿಯನ್ನು ಮಹಿಳೆಯ ಕುಟುಂಬದೊಂದಿಗೆ ಇರಲು ಬಿಡಲಾಗಿದೆ. ಈ ವೇಳೆ ಖರೀದಿಸಿದ ಮಹಿಳೆ ತನ್ನ ಮಗನಿಂದ ಅತ್ಯಾಚಾರ ಮಾಡಿಸಿದ್ದಾಳೆ. ಆಕೆಯ ಪತಿ ಎಂದು ಹೇಳಿಕೊಂಡ ವ್ಯಕ್ತಿ ಸಹ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: 58ರ ಮಹಿಳೆ ಮೇಲೆ ಅತ್ಯಾಚಾರ ಮಾಡಿ, ಹೊಡೆದು ಸಾಯಿಸಿದ 16ರ ಬಾಲಕ

    ಮನಕ್ ಚೌಕ್ ಪೊಲೀಸ್ ಠಾಣೆಯ ಬಳಿ ಬಾಲಕಿ ಅಳುತ್ತಾ ತಿರುಗಾಡುತ್ತಿರುವುದನ್ನು ಗಮನಿಸಿದ ಪೊಲೀಸರು ಆಕೆಯನ್ನ ಪ್ರಶ್ನಿಸಿದ್ದಾರೆ. ನಂತರ ಬಾಲಕಿ ವಿಷಯ ಬಾಯ್ಬಿಟ್ಟಿದ್ದಾಳೆ.

    ಬಾಲಕಿ ನೀಡಿದ ದೂರಿನ ಆಧಾರದ ಮೇರೆಗೆ ಐಪಿಸಿ (IPC) ಹಾಗೂ ಪೋಕ್ಸೊ ಕಾಯ್ದೆಯ (POCSO Act) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ವಿಕಾಸ್ ರಾಣಾ (27) ನನ್ನ ಬಂಧಿಸಲಾಗಿದೆ. ಉಳಿದವರಿಗಾಗಿ ಶೋಧ ಆರಂಭಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k