Tag: ಐಪಿಒ

  • 2026 ರ ಮೊದಲ ಆರು ತಿಂಗಳಲ್ಲಿ ಜಿಯೋ ಐಪಿಒ ಬಿಡುಗಡೆ: ಮುಕೇಶ್ ಅಂಬಾನಿ

    2026 ರ ಮೊದಲ ಆರು ತಿಂಗಳಲ್ಲಿ ಜಿಯೋ ಐಪಿಒ ಬಿಡುಗಡೆ: ಮುಕೇಶ್ ಅಂಬಾನಿ

    – ಜಿಯೋ ಐಪಿಒ; ಇದು ಹೂಡಿಕೆದಾರರಿಗೆ ದೊಡ್ಡ ಅವಕಾಶ
    – ರಿಲಯನ್ಸ್ ಜಿಯೋ ಗ್ರಾಹಕರ ಸಂಖ್ಯೆ ತಲುಪಿದೆ 50 ಕೋಟಿ
    – ಜಿಯೋ ಟ್ರೂ 5ಜಿ ಬಳಕೆದಾರರ ಸಂಖ್ಯೆ 22 ಕೋಟಿ

    ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಷೇರುದಾರರ ಕಾಯುವಿಕೆ ಅಂತೂ ಕೊನೆಗೊಳ್ಳಲಿದೆ. ಜಿಯೋದ ಐಪಿಒ ಮುಂದಿನ ವರ್ಷದ ಮೊದಲಾರ್ಧದಲ್ಲಿ, ಅಂದರೆ 2026ನೇ ಇಸವಿಯಲ್ಲಿ ಬಿಡುಗಡೆಯಾಗಲಿದೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ 48ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ (ಎಜಿಎಂ) ಶುಕ್ರವಾರದಂದು ಷೇರುದಾರರನ್ನು ಉದ್ದೇಶಿಸಿ ಮಾತನಾಡಿದ ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ಈ ಮಾಹಿತಿಯನ್ನು ಹಂಚಿಕೊಂಡರು.

    ಜಿಯೋ (Reliance Jio) ತನ್ನ ಐಪಿಒಗೆ (IPO) ಅರ್ಜಿ ಸಲ್ಲಿಸುವುದಕ್ಕೆ ತಯಾರಿ ನಡೆಸುತ್ತಿದೆ ಎಂದು ಘೋಷಿಸಲು ನನಗೆ ಹೆಮ್ಮೆಯಾಗುತ್ತಿದೆ. 2026ನೇ ಇಸವಿಯ ಮೊದಲಾರ್ಧದ ವೇಳೆಗೆ ಜಿಯೋವನ್ನು ಷೇರು ಮಾರುಕಟ್ಟೆಯಲ್ಲಿ ಲಿಸ್ಟಿಂಗ್ ಮಾಡುವುದು ನಮ್ಮ ಗುರಿಯಾಗಿದೆ. ಜಿಯೋ ನಮ್ಮ ಜಾಗತಿಕ ಸಹವರ್ತಿಗಳಂತೆಯೇ ಅದೇ ಮೌಲ್ಯವನ್ನು ಸೃಷ್ಟಿಸುತ್ತದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ಇದು ಎಲ್ಲ ಹೂಡಿಕೆದಾರರಿಗೆ ಬಹಳ ಆಕರ್ಷಕ ಅವಕಾಶವಾಗಲಿದೆ ಎಂದು ನಾನು ನಂಬುತ್ತೇನೆ ಎಂದು ಮುಕೇಶ್ ಅಂಬಾನಿ ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಕರ್ನಾಟಕದ ಹಳ್ಳಿಹಳ್ಳಿಗಳಲ್ಲೂ ಜಿಯೋ – ಗಾಜನೂರು, ಪೆದ್ದನಪಾಳ್ಯ, ಹುಗ್ಯಂನಂಥ ಗ್ರಾಮಗಳಲ್ಲೂ ಟವರ್‌

    ರಿಲಯನ್ಸ್ ಜಿಯೋ ಇಂದು ಮತ್ತೊಂದು ಮೈಲುಗಲ್ಲು ಸಾಧಿಸಿದ್ದು, ಕಂಪನಿಯ ಗ್ರಾಹಕರ ಸಂಖ್ಯೆ 50 ಕೋಟಿಯನ್ನು ದಾಟಿದೆ. ಷೇರುದಾರರು ಮತ್ತು ಗ್ರಾಹಕರಿಗೆ ಕೃತಜ್ಞತೆ ಸಲ್ಲಿಸುತ್ತಾ, ಮುಕೇಶ್ ಅಂಬಾನಿ ಜಿಯೋವನ್ನು ಜೀವನ ಬದಲಾಯಿಸುವಂಥದ್ದು ಎಂದು ಕರೆದರು. ಜಿಯೋದ ಸಾಧನೆಗಳನ್ನು ಪಟ್ಟಿ ಮಾಡುತ್ತಾ, ಧ್ವನಿ ಕರೆಗಳನ್ನು (ವಾಯ್ಸ್ ಕಾಲ್) ಉಚಿತಗೊಳಿಸುವುದು, ಡಿಜಿಟಲ್ ಪಾವತಿಯ ವಿಧಾನಗಳನ್ನು ಬದಲಾಯಿಸುವುದು, ಆಧಾರ್, ಯುಪಿಐ, ಜನ್ ಧನ್‌ನಂತಹ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಗೆ ಜೀವ ತುಂಬುವುದು ಮತ್ತು ವಿಶ್ವದ ಮೂರನೇ ಅತಿದೊಡ್ಡ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯ (ಎಕೋಸಿಸ್ಟಮ್) ಬೆನ್ನೆಲುಬಾಗಿ ಕಾರ್ಯನಿರ್ವಹಿಸುವುದು ಹೀಗೆ ಜಿಯೋ ಕೆಲವು ಊಹಿಸಲು ಸಹ ಆಗದ ಕಾರ್ಯಗಳನ್ನು ಮಾಡಿದೆ ಎಂದು ಅವರು ಹೇಳಿದರು.

    ದೇಶದಲ್ಲಿ 5ಜಿ ವೇಗವಾಗಿ ಕಾರ್ಯಾಚರಣೆಯನ್ನು ಆರಂಭಿಸಿದ ನಂತರ, ಜಿಯೋದ 5ಜಿ ಗ್ರಾಹಕರ ಸಂಖ್ಯೆಯೂ ವೇಗವಾಗಿ ಹೆಚ್ಚಾಗಿದೆ ಎಂದು ರಿಲಯನ್ಸ್ ಜಿಯೋ ಅಧ್ಯಕ್ಷ ಆಕಾಶ್ ಅಂಬಾನಿ ಹೇಳಿದರು. 22 ಕೋಟಿಗೂ ಹೆಚ್ಚು ಬಳಕೆದಾರರು ಜಿಯೋ ಟ್ರೂ 5ಜಿ ನೆಟ್‌ವರ್ಕ್‌ಗೆ ಸಂಪರ್ಕ ಹೊಂದಿದ್ದಾರೆ. ಜಿಯೋ ಶೀಘ್ರದಲ್ಲೇ ಅಂತರರಾಷ್ಟ್ರೀಯ ಕಾರ್ಯಾಚರಣೆಗಳನ್ನು ಪ್ರಾರಂಭಿಸಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು. ಇದನ್ನೂ ಓದಿ: ಮಸ್ಕ್‌ನ ಸ್ಟಾರ್‌ಲಿಂಕ್‌ಗೆ ಅನುಮತಿ ನೀಡುವ ಮುನ್ನ ನಿರ್ಧಾರ ಪರಿಶೀಲಿಸಿ: ಕೇಂದ್ರಕ್ಕೆ ಜಿಯೋ ಪತ್ರ

    ಜಿಯೋ ಟ್ರೂ 5ಜಿ ಡಿಜಿಟಲ್ ಸಂಪರ್ಕದ ವೇಗ, ವಿಶ್ವಾಸಾರ್ಹತೆ ಮತ್ತು ಸಂಪರ್ಕ ವ್ಯಾಪ್ತಿಯನ್ನು ಮರು ವ್ಯಾಖ್ಯಾನಿಸಿದೆ. ಜಿಯೋ ನನ್ನ ಜೀವನವನ್ನು ಬದಲಾಯಿಸಿದೆ ಅಥವಾ ನನಗೆ ಜಿಯೋ ಇಷ್ಟ ಎಂದು ಜನರು ಹೇಳುವುದನ್ನು ನಾನು ಕೇಳಿದ್ದೇನೆ. ಆದರೆ, ನನ್ನ ಹೃದಯದಿಂದ ಹೇಳುತ್ತೇನೆ. ವಾಸ್ತವವಾಗಿ, ಪ್ರತಿ ಭಾರತೀಯ ಜಿಯೋವನ್ನು ತಮ್ಮ ಜೀವನದ ಭಾಗವನ್ನಾಗಿ ಮಾಡಿಕೊಳ್ಳುವ ಮೂಲಕ ಇದನ್ನು ರೂಪಿಸಿದ್ದಾರೆ ಎಂದು ಹೇಳಿದರು.

  • ಷೇರು ಮಾರುಕಟ್ಟೆಯಲ್ಲಿ ಸದ್ದು ಮಾಡಲಿದೆ ಪತಂಜಲಿ – 5 ವರ್ಷದಲ್ಲಿ 4 IPO ಲಿಸ್ಟ್‌

    ಷೇರು ಮಾರುಕಟ್ಟೆಯಲ್ಲಿ ಸದ್ದು ಮಾಡಲಿದೆ ಪತಂಜಲಿ – 5 ವರ್ಷದಲ್ಲಿ 4 IPO ಲಿಸ್ಟ್‌

    ಮುಂಬೈ : ಪಂತಜಲಿ(Patanjali) ಸಂಸ್ಥೆಯೂ ಪತಂಜಲಿ ಸಮೂಹ ಸಂಸ್ಥೆಗಳನ್ನು ಆರಂಭಿಸಲು ಸನ್ನದ್ಧವಾಗಿದ್ದು, ಮುಂದಿನ ಐದು ವರ್ಷಗಳಲ್ಲಿ ನಾಲ್ಕು ಹೊಸ ಆರಂಭಿಕ ಸಾರ್ವಜನಿಕ ಕೊಡುಗೆ(IPO) ಬಿಡುಗಡೆ ಮಾಡುವ ತಯಾರಿಯಲ್ಲಿದೆ ಎಂದು ಯೋಗ ಗುರು ಬಾಬಾ ರಾಮದೇವ್(Baba Ramdev) ಹೇಳಿದ್ದಾರೆ.

    ಮುಂಬರುವ ಐದು ವರ್ಷದಲ್ಲಿ ಪತಂಜಲಿ ಆಯುರ್ವೇದ್, ಪತಂಜಲಿ ವೆಲ್ನೆಸ್, ಪತಂಜಲಿ ಮೆಡಿಸಿನ್ ಮತ್ತು ಪತಂಜಲಿ ಲೈಫ್‌ಸೈಲ್ ಐಪಿಒಗಳನ್ನು ಕಂಪನಿ ಶೇರು ಮಾರುಕಟ್ಟೆಯಲ್ಲಿ(Share Market) ಪಟ್ಟಿ ಮಾಡಲಿದೆ. ಕನಿಷ್ಠ 5-7 ಕಂಪನಿಗಳನ್ನು ಹೊಂದುವ ಚಿಂತನೆ ಇದ್ದು ಸದ್ಯ ನಾಲ್ಕು ಪಟ್ಟಿ ಮಾಡಲು ತಯಾರಿ ಆರಂಭಗೊಂಡಿದೆ.

    ಪ್ರಸ್ತುತ ಪತಂಜಲಿಯ ಸಮೂಹದ ವಹಿವಾಟು 40,000 ಕೋಟಿ ರೂ ಇದ್ದು, ಮುಂದಿನ ಐದು ವರ್ಷಗಳಲ್ಲಿ ಇದು 1 ಲಕ್ಷ ಕೋಟಿ ಆಗಲಿದೆ ಎಂಬ ವಿಶ್ವಾಸ ನಮಗಿದೆ ಎಂದು ರಾಮದೇವ್ ಹೇಳಿದ್ದಾರೆ. ಅಲ್ಲದೇ ಈ ಐಪಿಒಗಳೊಂದಿಗೆ 5 ಲಕ್ಷ ಕೋಟಿ ರೂ.ಗಳ ಮಾರುಕಟ್ಟೆ ಮೌಲ್ಯ ತಲುಪುವ ಗುರಿಯನ್ನು ಕಂಪನಿ ಹೊಂದಿದೆ ಎಂದು ಹೇಳಿದರು‌. ಇದನ್ನೂ ಓದಿ: ಪ್ರತಿಷ್ಠಿತ ಟೂರ್ನಿಗಳಲ್ಲಿ ಟೀಂ ಇಂಡಿಯಾಗೆ ನಿರಾಸೆ – ಕಾಡುತ್ತಿದೆ ಕೂಲ್ ಕ್ಯಾಪ್ಟನ್ ಕೊರತೆ

    BABA RAMDEV

    ಮುಂದಿನ ದಿನಗಳಲ್ಲಿ ಪತಂಜಲಿ 5 ಲಕ್ಷ ಉದ್ಯೋಗಾವಕಾಶಗಳನ್ನು ಒದಗಿಸಲಿದೆ. ಕಂಪನಿಯು 1 ಲಕ್ಷ ಪತಂಜಲಿ ವೆಲ್ನೆಸ್ ಸ್ಟೋರ್‌ಗಳನ್ನು ತೆರೆಯಲು ಯೋಜಿಸಿದೆ. ಪ್ರಸ್ತುತ, ಪತಂಜಲಿ ಫುಡ್ಸ್ ಮಾತ್ರ ಷೇರು ಮಾರುಕಟ್ಟೆಯಲ್ಲಿ ಪಟ್ಟಿ ಮಾಡಲಾದ ಏಕೈಕ ಸಮೂಹ ಕಂಪನಿಯಾಗಿದೆ. ರುಚಿ ಸೋಯಾ(Ruchi Soya) ಎಂದು ಪಟ್ಟಿ ಮಾಡಲಾದ ಈ ಕಂಪನಿಯನ್ನು ಪತಂಜಲಿ ಆಯುರ್ವೇದ್ 2019 ರಲ್ಲಿ ರೆಸಲ್ಯೂಶನ್ ಪ್ರಕ್ರಿಯೆಯ ಅಡಿಯಲ್ಲಿ 4,350 ಕೋಟಿ ರೂ.ಗೆ ಖರೀದಿಸಿತು. ಈ ಕಂಪನಿಯ ನಿವ್ವಳ ಮೌಲ್ಯ ಸುಮಾರು 50,000 ಕೋಟಿ ರೂ. ಆಗಿದ್ದು ಕಂಪನಿಯು ಈಗಾಗಲೇ ಷೇರು ವಿನಿಮಯ ಕೇಂದ್ರಗಳಾದ ಬಿಎಸ್‌ಇ(BSE) ಮತ್ತು ಎನ್‌ಎಸ್‌ಇಯಲ್ಲಿ(NSE) ಪಟ್ಟಿಮಾಡಿದೆ.

    ಜೂನ್‌ನಲ್ಲಿ, ಖಾದ್ಯ ತೈಲ ಉತ್ಪಾದಕ ರುಚಿ ಸೋಯಾವನ್ನು ಪತಂಜಲಿ ಫುಡ್ಸ್ ಲಿಮಿಟೆಡ್ ಎಂದು ಮರುನಾಮಕರಣ ಮಾಡಲಾಯಿತು‌. ಪತಂಜಲಿ ಫುಡ್ಸ್ ಷೇರು ಬೆಲೆ ಗುರುವಾರ ಬಿಎಸ್‌ಇಯಲ್ಲಿ ಶೇ.0.5 ಏರಿಕೆಯಾಗಿ 1,349 ರೂ. ತಲುಪಿದೆ. ಕಳೆದ ಒಂದು ತಿಂಗಳಲ್ಲಿ ಈ ಸ್ಟಾಕ್ ಬೆಲೆಯು ಶೇ.20 ಮತ್ತು ಕಳೆದ ಆರು ತಿಂಗಳಲ್ಲಿ ಶೇ. 30 ರಷ್ಟು ಏರಿಕೆಯಾಗಿದೆ.

    Live Tv
    [brid partner=56869869 player=32851 video=960834 autoplay=true]