Tag: ಐಪಿಎಸ್ ರೂಪಾ

  • ಕೈಯಲ್ಲಿ ಖಡ್ಗ ಹಿಡಿದು ರಾಣಿಯಂತೆ ಕಂಗೊಳಿಸಿ ಅಚ್ಚರಿ ಮೂಡಿಸಿದ IPS ರೂಪಾ

    ಕೈಯಲ್ಲಿ ಖಡ್ಗ ಹಿಡಿದು ರಾಣಿಯಂತೆ ಕಂಗೊಳಿಸಿ ಅಚ್ಚರಿ ಮೂಡಿಸಿದ IPS ರೂಪಾ

    ಬೆಂಗಳೂರು: ಐಪಿಎಸ್ ಅಧಿಕಾರಿ ಡಿ. ರೂಪಾ (IPS Officer Roopa) ಅವರು ಎಲ್ಲರಿಗೂ ಚಿರಪರಿಚಿತ. ಖಡಕ್ ಪೊಲೀಸ್ ಅಧಿಕಾರಿಯಾಗಿರುವ ರೂಪಾ ಅವರು ಒಂದು ಫೋಟೋಶೂಟ್ ಮೂಲಕ ಇದೀಗ ಭಾರೀ ಸುದ್ದಿಯಾಗಿದ್ದಾರೆ.

    ಹೌದು. ನಾಡಿನೆಲ್ಲೆಡೆ ದಸರಾ ಹಬ್ಬದ ಸಂಭ್ರಮ ಮನೆ ಮಾಡಿದೆ. ಅಂತೆಯೇ ಹಬ್ಬದ ಪ್ರಯುಕ್ತ ಕೆಲವರು ಫೋಟೋಶೂಟ್ (D Roopa Photoshoot) ಮಾಡಿಸಿಕೊಳ್ಳುತ್ತಿದ್ದಾರೆ. ಅಂತೆಯೇ ಇಂದು ಖಡಕ್ ಅಧಿಕಾರಿ ಕೂಡ ಲಾಠಿ ಹಿಡಿಯುವ ಕೈಯಲ್ಲಿ ಖಡ್ಗ ಹಿಡಿದು ವಿಭಿನ್ನವಾಗಿ ಫೋಟೋಶೂಟ್ ಮಾಡಿಸಿಕೊಂಡಿದ್ದು, ಇದೀಗ ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

    ಪೊಲೀಸ್ ಯೂನಿಫಾರ್ಮ್‍ನಲ್ಲಿ ಇರುತ್ತಿದ್ದ ರೂಪಾ ಅವರು ಇದೀಗ ಕೈಯಲ್ಲಿ ಖಡ್ಗ ಹಿಡಿದು, ಕೆಂಪು ಸೀರೆ, ಹಸಿರು ಬಣ್ಣ ಬ್ಲೌಸ್, ಮೈತುಂಬಾ ಆಭರಣ ತೊಟ್ಟು ಸಿಂಹಾಸನದಲ್ಲಿ ಥೇಟ್ ರಾಣಿಯಂತೆ ಕಂಗೊಳಿಸುತ್ತಿದ್ದಾರೆ. ಹೆಣ್ಣು ನಾಲ್ಕು ಗೋಡೆಯೊಳಗೆ ಬಂಧಿಯಲ್ಲ, ಆಕೆಯೊಳಗೊಂದು ಶಕ್ತಿ ಇದೆ. ಸಮಾಜದಲ್ಲಿ ಸವಾಲುಗಳನ್ನು ಎದುರಿಸಿ ನಿಲ್ಲುವುದರ ಜೊತೆಗೆ ಯಾವುದೇ ಕ್ಷೇತ್ರದಲ್ಲೂ ತನ್ನನ್ನು ತಾನು ತೊಡಗಿಸಿಕೊಂಡು ಸಮಾಜಕ್ಕೆ ಮಾದರಿಯಾಗುತ್ತಾಳೆ ಎಂಬುದಕ್ಕೆ ಡಿ ರೂಪಾ ಉತ್ತಮ ನಿದರ್ಶನ ಎಂದು ಫೋಟೋ ಅಪ್ಲೋಡ್ ಮಾಡಿರುವ ಭಾರ್ಗವಿ ಕೆ. ಆರ್ ಎಂಬವರು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ದಸರಾ ಹಬ್ಬದ ಸಂಭ್ರಮದಲ್ಲಿ ಯಶ್- ರಾಧಿಕಾ ದಂಪತಿ

    ರೂಪ ಅವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಿದ್ದಂತೆಯೇ ಹಲವಾರು ಕಾಮೆಂಟ್‍ಗಳು ಬರತೊಡಗಿದವು. ಕೆಲವರು ಹ್ಯಾಟ್ಸಾಫ್ ತುಂಬಾ ಚೆನ್ನಾಗಿ ಕಾಣಿಸುತ್ತಿದ್ದೀರಿ ಅಂದ್ರೆ ಇನ್ನೂ ಕೆಲವರು ಕಿತ್ತೂರು ರಾಣಿ ಚೆನ್ನಮ್ಮ, ಅಬ್ಬಕ್ಕ ಹಾಗೂ ಜೈ ದುರ್ಗಿ ಅಂತೆಲ್ಲ ಕಾಮೆಂಟ್ ಮಾಡಿದ್ದಾರೆ. ಈ ಫೋಟೋ ಕೇವಲ ಫ್ಯಾಷನ್ ಮಾತ್ರ ಅಲ್ಲ, ಬದಲಾಗಿ ಮಹಿಳಾ ಶಕ್ತಿ ಹಾಗೂ ಸಬಲೀಕರಣದ ಪ್ರತೀಕ ಎಂದು ಫೋಟೋಗೆ ಶೀರ್ಷಿಕೆ ನೀಡಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗುರುರಾಜ ಕರ್ಜಗಿ, ರೂಪಾ ಸೇರಿದಂತೆ 100 ಮಂದಿಗೆ ಕೆಂಪೇಗೌಡ ಪ್ರಶಸ್ತಿ

    ಗುರುರಾಜ ಕರ್ಜಗಿ, ರೂಪಾ ಸೇರಿದಂತೆ 100 ಮಂದಿಗೆ ಕೆಂಪೇಗೌಡ ಪ್ರಶಸ್ತಿ

    ಬೆಂಗಳೂರು: ಶಿಕ್ಷಣ ತಜ್ಞ ಗುರುರಾಜ ಕರ್ಜಗಿ, ಐಪಿಎಸ್ ಅಧಿಕಾರಿ ರೂಪಾ ಸೇರಿದಂತೆ 100 ಮಂದಿ ಸಾಧಕರಿಗೆ ಕೆಂಪೇಗೌಡ ಪ್ರಶಸ್ತಿಯನ್ನು ನೀಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಂದಾಗಿದೆ.

    ಪಬ್ಲಿಕ್ ಟಿವಿಯ ಕಾರ್ಯನಿರ್ವಾಹಕ ಸಂಪಾದಕ ದಿವಾಕರ್ ಕೆ, ಚಲನ ಚಿತ್ರ ನಟ ಮುಖ್ಯಮಂತ್ರಿ ಚಂದ್ರು, ಸಾಹಿತಿ ಚಂದ್ರಶೇಖರ್ ಪಾಟೀಲ್ ಸೇರಿದಂತೆ 100 ಮಂದಿ ಗಣ್ಯರಿಗೆ ಈ ಬಾರಿ ಕೆಂಪೇಗೌಡ ಪ್ರಶಸ್ತಿ ಲಭಿಸಿದೆ.

    ಈ ಬಾರಿ ಶಿವೈಕ್ಯರಾದ ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಯವರ ಹೆಸರಿನಲ್ಲಿ ನೀಡಲಾಗುವ ಪ್ರಶಸ್ತಿಗೆ 5 ಸಂಸ್ಥೆಗಳು ಆಯ್ಕೆಯಾಗಿವೆ. ಕೆಂಪೇಗೌಡರ ಸೊಸೆ ಮಹಾತ್ಯಾಗಿ ಲಕ್ಷ್ಮೀದೇವಿ ಪ್ರಶಸ್ತಿಗೆ 10 ಮಂದಿ ಸಾಧಕಿಯರು ಆಯ್ಕೆಯಾಗಿದ್ದಾರೆ.

    ಪರಮಪೂಜ್ಯ ಶ್ರೀ ಡಾ.ಶಿವಕುಮಾರ ಸ್ವಾಮೀಜಿ ಪ್ರಶಸ್ತಿ ಪುರಸ್ಕೃತ ಸಂಸ್ಥೆಗಳು: ಶ್ರೀರಮಣಮಹರ್ಷಿ ಅಕಾಡೆಮಿ ಫಾರ್ ಬ್ಲೈಂಡ್ಸ್, ಬಾಸ್ಕೋ ಮನೆ, ಸುಮಂಗಲಿ ಸೇವಾಶ್ರಮ ಟ್ರಸ್ಟ್, ಮುಸ್ಲಿಂ ಅನಾಥಾಶ್ರಮ, ಮನೋನಂದನ ಬುದ್ಧಿಮಾಂದ್ಯ ಮಕ್ಕಳ ಶಾಲೆ.

    ನಾಡಪ್ರಭು ಕೆಂಪೇಗೌಡರ ಸೊಸೆ ಮಹಾತ್ಯಾಗಿ ಲಕ್ಷ್ಮೀದೇವಿ ಪ್ರಶಸ್ತಿ ಪುರಸ್ಕೃತ: ಲೀಲಾದೇವಿ.ಆರ್. ಪ್ರಸಾದ್(ಸಮಾಜ ಸೇವೆ), ಧನಭಾಗ್ಯಮ್ಮ(ಕನ್ನಡ ಸೇವೆ), ಕವನ ಬಸವಕುಮಾರ್(ಸಮಾಜ ಸೇವೆ), ಅನುಸೂಯ.ಎ(ಕ್ರೀಡೆ), ಡಾ.ಲಕ್ಷ್ಮಿ.ಬಿ.ಆರ್.(ನೃತ್ಯ), ಕು.ಪ್ರಾಚಿಗೌಡ(ಸಮಾಜ ಸೇವೆ), ಭಾರತಿ.ವಿ(ಸಮಾಜ ಸೇವೆ), ನಾರಂಗಿ ಭಾಯಿ(ಸಮಾಜ ಸೇವೆ), ಡಾ.ಗೌರಿಶ್ರೀ(ರಂಗಭೂಮಿ), ಕು.ಸೌಜನ್ಯ ವಸಿಷ್ಠ(ಸಮಾಜ ಸೇವೆ).

    ಕೆಂಪೇಗೌಡ ಪ್ರಶಸ್ತಿ:
    ಚಂದ್ರಶೇಖರ್ ಪಾಟೀಲ್ (ಕನ್ನಡ ಸೇವೆ), ಲೀಲಾವತಿ (ಚಲನಚಿತ್ರ), ಅಲ್ಮಿತ್ರಾ ಪಟೇಲ್ (ಸಮಾಜ ಸೇವೆ), ಮುಖ್ಯಮಂತ್ರಿ ಚಂದ್ರು (ಚಲನಚಿತ್ರ), ಪ್ರೋ.ಶಿವರಾಮಯ್ಯ (ಸಾಹಿತ್ಯ), ಕೇಶವರೆಡ್ಡಿ ಹಂದ್ರಾಳ (ಸಾಹಿತ್ಯ), ಪ್ರೊ.ಅಬ್ದುಲ್ ಬಷೀರ್ ಜಿ. (ಸಾಹಿತ್ಯ), ರವಿವರ್ಮ ಕುಮಾರ್ (ಸಮಾಜ ಸೇವೆ), ಮಾವಳ್ಳಿ ಶಂಕರ್ (ಸಾಮಾಜ ಸೇವೆ), ವೀರಸಂಗಯ್ಯ (ಸಮಾಜ ಸೇವೆ), ಸುಮಾ ಸುಧೀಂದ್ರ (ಸಂಗೀತ), ಕನಕಮೂರ್ತಿ (ಶಿಲ್ಪಕಲೆ), ಪ್ರೋ.ಡಿ.ಮಂಚೇಔಡ (ಸಮಾಜ ಸೇವೆ), ಅನಿಲ್ ಕುಮಾರ್ (ಚಿತ್ರಕಲೆ), ಆಂಜಿನಪ್ಪ ಶಂಖನಾದ (ರಂಗಭೂಮಿ), ರೂಪಾ ಡಿ, ಐಪಿಎಸ್ (ಸರ್ಕಾರಿ ಸೇವೆ), ಅನುಚೇತ್ ಎಂಎಸ್,, ಐಪಿಎಸ್ ಹಾಗೂ 6 ಸದಸ್ಯರನ್ನೊಳಗೊಂಡ ಗೌರಿ ಲಂಕೇಶ್ ಪ್ರಕರಣ ಬೇಧಿಸಿದ ತಂಡ (ಸಮಾಜ ಸೇವೆ), ಬಿಂದುರಾಣಿ. ಜಿ (ಕ್ರೀಡೆ), ಭೈರೇಗೌಡ ಎಸ್ (ಶಿಕ್ಷಣ), ಚಂದ್ರಕಲಾ ಗಂ.ಸಂಗಪ್ಪ ಹಾರಕೂಡ (ಸಾಂಸ್ಕೃತಿಕ), ಚಿದಂಬರ ಎನ್.ಎ (ಸಮಾಜ ಸೇವೆ).

    ದೇವನಾಥ್.ಎಸ್. (ಮಾಧ್ಯಮ), ಗೋವಿಂದರಾಜು (ಸಾಂಸ್ಕೃತಿಕ), ಪ್ರತಿಭಾ ನಂದಕುಮಾರ್ (ಸಾಹಿತ್ಯ), ಕುಶಲ ಡಿಮೊಲೊ (ಮಾಧ್ಯಮ), ಲಕ್ಷ್ಮಣ್ ಎಂ (ಸಂಗೀತ), ಮಧುಲಿತ ಮೊಹಪಾತ್ರ (ನೃತ್ಯ), ಮಣಿ ಎನ್.ವಿ. (ಶಿಕ್ಷಣ), ಮಂಜುಳಾ ಶಿವಾನಂದ್ (ಕನ್ನಡ ಸೇವೆ), ಮಂಜುಳಮ್ಮ (ರಂಗಭೂಮಿ), ಮಯಾ ಬ್ರಹ್ಮಚಾರ್ (ರಂಗಭೂಮಿ), ಪೂರ್ಣಿಮಾ ಗುರುರಾಜ್ (ನೃತ್ಯ), ಪ್ರಕಾಶ್ ಅರಸ್ (ವಿವಿಧ), ಪ್ರಮೀಳಾ ಶಂಕರ್ (ವಿವಿಧ), ಪ್ರತ್ಯಕ್ಷ (ಬಾಲ ಪ್ರತಿಭೆ), ರಾ.ನಂ.ಚಂದ್ರಶೇಖರ್ (ಕನ್ನಡ ಸೇವೆ), ರಾಜಲಕ್ಷ್ಮಿ.ಜಿ.ಎಸ್. (ನೃತ್ಯ), ರತ್ನಂ.ಆರ್ (ಚಲನಚಿತ್ರ), ಸದಾಶಿವಪ್ಪ.ಎಂ (ಸಮಾಜ ಸೇವೆ), ಸಂಜಯ್ ಶಾಂತಾರಾಮ್ (ನೃತ್ಯ), ಶಾಂತ ರಾಮಮೂರ್ತಿ (ಕ್ರೀಡೆ), ಶಿವಾನಂದ (ವೈದ್ಯಕೀಯ), ಸಿದ್ಧರಾಮರಾವ್.ಎಸ್.ಪಿ (ವಿವಿಧ), ಮೀನಾಕ್ಷಿ (ರಂಗಭೂಮಿ), ಸುಬ್ರಮಣ್ಯ .ಬಿ.ಎನ್ (ಚಲನಚಿತ್ರ), ರಾಮಚಂದ್ರಪ್ಪ ಎಸ್.ಟಿ. (ವಿವಿಧ), ಶಿವರಾಜು ಬಿ.ಬಿ. (ಸಮಾಜ ಸೇವೆ), ವಿದುಷಿ ರಮಾ.ಪಿ (ಸಂಗೀತ).

    ನಾಗೇಶ್ ಬೆಟ್ಟಕೋಟೆ (ರಂಗಭೂಮಿ), ರೇಣುಕಾರಾಧ್ಯ ಆರ್ (ಸಾಂಸ್ಕøತಿಕ), ಸುಧಾಕರ ದರ್ಬೆ (ಚಿತ್ರಕಲೆ), ರಾಜಯೋಗೀಂದ್ರ ಶ್ರೀ ವೀರಯ್ಯಸ್ವಾಮಿ ಬಿ.ಶಾಸ್ತ್ರಿಮಠ್ (ವಿವಿಧ), ಮಹೇಂದ್ರನಾಥ್ ಕೆ.ಎನ್. (ವೈದ್ಯಕೀಯ), ವಿಕ್ರಂ ಸೂರಿ (ವಿವಿಧ), ಶಾಂತಿ ತುಮ್ಮಲ (ವೈದ್ಯಕೀಯ), ಮುನಿತಿಮ್ಮಯ್ಯ (ಕ್ರೀಡೆ), ಉಸ್ಮಾನ್ (ಸಂಗೀತ), ಶಂಕರ್ ಟಿ.ಜಿ. (ಕ್ರೀಡೆ), ನಿಸರ್ಗ ಜಗದೀಶ್ (ಸಮಾಜ ಸೇವೆ), ಶಿವಕುಮಾರ್.ಡಿ. (ಸಮಾಜ ಸೇವೆ), ಯೋಗೇಂದ್ರ.ಎಂ (ಕ್ರೀಡೆ), ಹರ್ಷಿಣಿ.ಪಿ (ಕ್ರೀಡೆ), ನವೀನ್ ತಿವಾರಿ (ವಿವಿಧ), ಶರದ್ ಶರ್ಮಾ (ವಿವಿಧ), ತಮ್ಮಣ್ಣ ಗೌಡ (ಸಮಾಜ ಸೇವೆ), ಚಿಕ್ಕಂ (ಶಿಕ್ಷಣ), ಕೇಶವ್ ಕುಮಾರ್ (ಸಮಾಜ ಸೇವೆ), ಕಿರಣ್ ಹೆಚ್.ವಿ (ಮಾಧ್ಯಮ), ದಿವಾಕರ್ (ಮಾಧ್ಯಮ), ರಜನಿ ಎಂ.ಜಿ. (ಮಾಧ್ಯಮ), ಸುಭಾಸ್ ಹೂಗಾರ್ (ಮಾಧ್ಯಮ), ಗಣೇಶ್ ಕೆ.ಎಸ್ (ಮಾಧ್ಯಮ)

    ಅರುಣ್.ಬಿ.ಎ.(ಮಾಧ್ಯಮ), ಸೂರಜ್ ಮಹಾವೀರ್ ಉತ್ರೆ(ಮಾಧ್ಯಮ), ಶ್ರೀನಾಥ್ ಜೋಷಿ (ಮಾಧ್ಯಮ), ಚಂದನ್ ಶರ್ಮಾ(ಮಾಧ್ಯಮ), ಸಿದ್ದು ಕಾಳೋಜಿ(ಮಾಧ್ಯಮ), ಶ್ರೀನಿವಾಸ ಪ್ರಸಾದ್.ಎಚ್.ಎನ್(ಮಾಧ್ಯಮ), ಅಶೋಕ್ ರಾಮ್(ಮಾಧ್ಯಮ), ನಾಗರಾಜ್ ಭಟ್(ಮಾಧ್ಯಮ), ಪ್ರವೀಣ್ ಹಕ್ಕಿ(ಮಾಧ್ಯಮ), ವಿಜಯಲಕ್ಷ್ಮಿ(ಸಮಾಜ ಸೇವೆ), ಕೇಶವ್ ಮೂರ್ತಿ(ಸಮಾಜ ಸೇವೆ), ಶಿವಣ್ಣ.ಟಿ.(ಶಿಕ್ಷಣ), ಪೈಲ್ವಾನ್ ನಾಗರಾಜ್(ಕ್ರೀಡೆ), ಸುನೀಲ್ ರಾಜು(ಕ್ರೀಡೆ), ಹೇಮಾ ಭಾರತ್(ನೃತ್ಯ), ಅರ್ಜುನಪ್ಪ.ಜಿ.ಎನ್.(ಕ್ರೀಡೆ), ಭರತ್ ಕುಮಾರ್(ಕ್ರೀಡೆ), ಸಂಪತ್.ಡಿ.ಎನ್.(ಸ್ವಾತಂತ್ರ್ಯ ಹೋರಾಟಗಾರರು), ವಿನೋದ್.ಬಿ.ಆರ್.(ಶಿಕ್ಷಣ), ಡಾ.ಸುರೇಂದ್ರ.ವಿ.ಎಸ್.(ಶಿಕ್ಷಣ), ಕುಮಾರ್.ಎನ್(ಕ್ರೀಡೆ), ಹೆಗ್ಡೆ.ಜಿ.ಎಸ್.(ಸಂಗೀತ), ಡಾ.ಆಶು ಶಾ(ಸಮಾಜ ಸೇವೆ), ಹೇಮಲತಾ ಚಿದಾನಂದ್(ಸಮಾಜ ಸೇವೆ), ಸೈಯದ್ ಗುಲಾಬ್(ಸಮಾಜ ಸೇವೆ).

  • ರಾಜಕೀಯಕ್ಕೆ ಧುಮುಕಲು ಅಣ್ಣಾಮಲೈ ನಿವೃತ್ತಿ – ಐಪಿಎಸ್ ರೂಪಾ ಶುಭಾಶಯ

    ರಾಜಕೀಯಕ್ಕೆ ಧುಮುಕಲು ಅಣ್ಣಾಮಲೈ ನಿವೃತ್ತಿ – ಐಪಿಎಸ್ ರೂಪಾ ಶುಭಾಶಯ

    ಬೆಂಗಳೂರು: ಖಡಕ್ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು ಇಂದು ತಮ್ಮ ಐಪಿಎಸ್ ಹುದ್ದೆಗೆ ರಾಜೀನಾಮೆ ಕೊಟ್ಟಿದ್ದಾರೆ. ಈ ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿದ್ದು, ಇದೀಗ ಐಪಿಎಸ್ ಅಧಿಕಾರಿ ಡಿ. ರೂಪಾ ಅವರು ಪ್ರತಿಕ್ರಿಯಿಸಿದ್ದಾರೆ.

    ರೂಪಾ ಅವರು ಟ್ವೀಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. “ನಾನು ಅಣ್ಣಾಮಲೈ ಜೊತೆ ಮಾತನಾಡಿದ್ದೇನೆ. ಇಂದು ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಅವರು ರಾಜೀನಾಮೆ ಸಲ್ಲಿಸಿದ್ದಾರೆ. ಈ ಮೂಲಕ ಅವರ ರಾಜಕೀಯಕ್ಕೆ ಹೋಗಲು ಸಿದ್ಧರಾಗಿದ್ದಾರೆ. ಐಪಿಎಸ್ ಅಧಿಕಾರಿಯಾಗಲೂ ಕಠಿಣ ಶ್ರಮ ಪಡಬೇಕಾಗುತ್ತದೆ. ಅದೇ ರೀತಿ ಆ ಕೆಲಸಕ್ಕೆ ರಾಜೀನಾಮೆ ನೀಡಲು ತುಂಬಾ ಧೈರ್ಯ ಬೇಕು. ಇಂತಹ ಸಾಧಕರು ರಾಜಕೀಯಕ್ಕೆ ಹೋಗುವುದನ್ನು ನೋಡಲು ಚೆನ್ನಾಗಿರುತ್ತದೆ” ಬರೆದು ಶುಭ ಕೋರಿದ್ದಾರೆ. ಇದನ್ನೂ ಓದಿ: ನಾನು ನನ್ನ ಖಾಕಿಯಲ್ಲಿ ಪ್ರತಿ ಕ್ಷಣವನ್ನು ಜೀವಿಸಿದ್ದೇನೆ: ಅಭಿಮಾನಿಗಳಿಗೆ ಅಣ್ಣಾಮಲೈ ಭಾವನಾತ್ಮಕ ಪತ್ರ

    ಅಣ್ಣಾಮಲೈ ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ರಾಜು ಅವರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ನೀಲಮಣಿ ರಾಜು ಅವರು ರಾಜ್ಯ ಗೃಹ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ರವಾನಿಸಿ, ಬಳಿಕ ಅದು ಗೃಹ ಕಾರ್ಯದರ್ಶಿ ಹೋಗುತ್ತದೆ. ಅಂತಿಮವಾಗಿ ಕೇಂದ್ರ ಯುಪಿಎಸ್ಸಿಗೆ ತಲುಪಿದ ಬಳಿಕ ರಾಜೀನಾಮೆ ಅಂಗಿಕಾರವಾಗುತ್ತದೆ. ಇದನ್ನೂ ಓದಿ: ರಾಜೀನಾಮೆಯ ವಿಚಾರಕ್ಕೆ ಸ್ಪಷ್ಟನೆ ನೀಡಿದ ಡಿಸಿಪಿ ಅಣ್ಣಾಮಲೈ

    ಅಣ್ಣಾಮಲೈ ರಾಜೀನಾಮೆಗೆ ತಂದೆ- ತಾಯಿ, ವೈಯಕ್ತಿಕ ಜೀವನದ ಕಾರಣ ಕೊಟ್ಟಿದ್ದಾರೆ. ಕಳೆದ ಆರು ತಿಂಗಳ ಹಿಂದೆಯೇ ರಾಜೀನಾಮೆ ನೀಡಬೇಕೆಂದು ಪ್ಲಾನ್ ಮಾಡಿದ್ದೆ. ಚುನಾವಣೆ ಮುಗಿಸದೇ ಹೋದರೆ ಸರಿ ಹೋಗಲ್ಲ ಎಂದು ಎಲೆಕ್ಷನ್ ಬಂದೋಬಸ್ತ್ ಮುಗಿಸಿದ್ದೇನೆ. ಮಲೇಷ್ಯಾದಿಂದ ರಾತ್ರೋರಾತ್ರಿ ವಿಮಾನ ಹತ್ತಿ ಬಂದು ಯುಪಿಎಸ್‍ಸಿ ಪರೀಕ್ಷೆ ಬರೆದಿದ್ದೆ. ನನಗೆ ಇದೇ ಜೀವನ ಅಲ್ಲ, ಇನ್ನೂ ಬೇರೆ ಜೀವನ ಇದೆ. ಎಷ್ಟು ದಿನ ಕೊಲೆ, ಸುಲಿಗೆ, ದರೋಡೆ ಬಗ್ಗೆ ಕೆಲಸ ಮಾಡಲಿ. ಸದ್ಯ ನಾನು ಯಾವ ರಾಜಕೀಯಕ್ಕೂ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.

    ಮುಂದಿನ ಆರು ತಿಂಗಳು ವಿಶ್ರಾಂತಿ ಪಡೆಯುತ್ತೇನೆ. ರಾಜೀನಾಮೆ ಬಳಿಕ ಹಿಮಾಲಯಕ್ಕೆ ಟ್ರೆಕ್ಕಿಂಗ್ ಹೋಗುತ್ತೇನೆ. ಅಲ್ಲದೇ ನನ್ನ ಕುಟುಂಬಕ್ಕೆ ಟೈಂ ಸಹ ಕೋಡುತ್ತೇನೆ. ನನ್ನ ಮಗ ಓದುತ್ತಿದ್ದಾನೆ ಅವನ ಜೊತೆ ಇರುತ್ತೇನೆ. 33-34ನೇ ವಯಸ್ಸಿಗೆ ಯಾರು ಈ ನಿರ್ಧಾರ ತೆಗೆದುಕೊಳ್ಳಲ್ಲ. ಆದರೆ ನಾನು ತೆಗೆದುಕೊಂಡಿದ್ದೇನೆ. ಏಕೆಂದರೆ ನನಗೆ ಬೇರೆ ಜೀವನ ಇದೆ ಎಂದು ಅಣ್ಣಾಮಲೈ ತಿಳಿಸಿದ್ದಾರೆ.