Tag: ಐಪಿಎಲ್

  • ಇಂದಿನಿಂದ ಮೂರು ದಿನಗಳ ಕಾಲ ಭಾರೀ ಮಳೆ ಮುನ್ಸೂಚನೆ – RCB ಪಂದ್ಯಕ್ಕೂ ಅಡ್ಡಿ ಸಾಧ್ಯತೆ

    ಇಂದಿನಿಂದ ಮೂರು ದಿನಗಳ ಕಾಲ ಭಾರೀ ಮಳೆ ಮುನ್ಸೂಚನೆ – RCB ಪಂದ್ಯಕ್ಕೂ ಅಡ್ಡಿ ಸಾಧ್ಯತೆ

    – ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

    ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಪೂರ್ವ ಮತ್ತಷ್ಟು ಚುರುಕುಗೊಂಡಿದ್ದು, ಇಂದಿನಿಂದ ಮೂರು ದಿನಗಳ ಕಾಲ ರಾಜ್ಯಕ್ಕೆ ಭಾರೀ ಮಳೆ ಅಲರ್ಟ್ ಘೋಷಿಸಲಾಗಿದೆ. ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

    ಇಂದು ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಐಪಿಎಲ್ ಪುನರಾರಂಭದ ಮೊದಲ ಪಂದ್ಯ ಆರ್‌ಸಿಬಿ ವರ್ಸಸ್ ಕೆಕೆಆರ್ ತಂಡದ ನಡುವೆ ನಡೆಯಲಿದೆ. ಮಳೆ ಅಲರ್ಟ್ (Rain Alert) ಹಿನ್ನೆಲೆ ಐಪಿಎಲ್‌ಗೂ (IPL 2025) ಅಡ್ಡಿಪಡಿಸುವ ಸಾಧ್ಯತೆ ಇದೆ. ಭಾನುವಾರ ಹಾಗೂ ಸೋಮವಾರ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇದನ್ನೂ ಓದಿ: ಬಳ್ಳಾರಿ | ಕೃಷಿಹೊಂಡದಲ್ಲಿ ಬಿದ್ದು ಬಾಲಕ ಸಾವು

    ಮೇ 17 ಹಾಗೂ ಮೇ 18ರಂದು ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು, ಬಾಗಲಕೋಟೆ, ಕೊಪ್ಪಳ, ಗದಗ, ಬೆಳಗಾವಿ, ಧಾರವಾಡ, ಹಾವೇರಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ಕೊಡಗು, ಬಳ್ಳಾರಿ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಹಾಸನ, ತುಮಕೂರು, ಮೈಸೂರು, ಮಂಡ್ಯ, ಚಾಮರಾಜನಗರ, ಚಿಕ್ಕಬಳ್ಳಾಪುರ, ರಾಮನಗರ, ಕೋಲಾರ, ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಮುಂದಿನ ಎರಡು ದಿನಗಳ ಕಾಲ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇದನ್ನೂ ಓದಿ: ಪುಣೆಯ ಐಸಿಸ್‌ ಮಾಡ್ಯೂಲ್‌ ಕೇಸ್‌ – ಇಬ್ಬರು ಉಗ್ರರ ಬಂಧನ

  • ನಾಳೆ ಚಿನ್ನಸ್ವಾಮಿ ಸುತ್ತಮುತ್ತ ನೋ ಪಾರ್ಕಿಂಗ್ – ಎಲ್ಲಿ ಪಾರ್ಕ್ ಮಾಡಬಹುದು?

    ನಾಳೆ ಚಿನ್ನಸ್ವಾಮಿ ಸುತ್ತಮುತ್ತ ನೋ ಪಾರ್ಕಿಂಗ್ – ಎಲ್ಲಿ ಪಾರ್ಕ್ ಮಾಡಬಹುದು?

    ಬೆಂಗಳೂರು: ಭಾರತ-ಪಾಕಿಸ್ತಾನ ಕದನ ವಿರಾಮದ ಬಳಿಕ ನಾಳೆಯಿಂದ ಐಪಿಎಲ್ ಮತ್ತೆ ಆರಂಭವಾಗುತ್ತಿದೆ. ಎಂ.ಚಿನ್ನಸ್ವಾಮಿ ಸ್ಟೇಡಿಯಂ (M Chinnaswamy Stadium) ಸುತ್ತಮುತ್ತ ನೋ ಪಾರ್ಕಿಂಗ್ ಇರಲಿದೆ.

    ಭಾರತ-ಪಾಕ್ ಉದ್ವಿಗ್ನತೆಯಿಂದಾಗಿ ಮೇ 8ರಂದು ಐಪಿಎಲ್ (IPL) ಸ್ಥಗಿತಗೊಂಡಿತ್ತು. ಕದನ ವಿರಾಮ ಘೋಷಣೆಯಾದ ಬಳಿಕ ಮತ್ತೆ ಆರಂಭವಾಗುತ್ತಿದ್ದು, ಮೇ 17ರಂದು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ (RCB) ಹಾಗೂ ಕೆಕೆಆರ್ (KKR) ತಂಡಗಳು ಮುಖಾಮುಖಿಯಾಗಲಿವೆ.ಇದನ್ನೂ ಓದಿ: ಹಿಂದೂ ಯುವಕ, ಮುಸ್ಲಿಂ ಯುವತಿಯ ಪ್ರೇಮವಿವಾಹ – ರಕ್ಷಣೆ ಕೋರಿ ಪೊಲೀಸ್ ಮೊರೆ ಹೋದ ನವಜೋಡಿ

    ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ಸಂಚಾರಿ ಪೊಲೀಸರು ಅಲರ್ಟ್ ಘೋಷಿಸಿದ್ದು, ಟ್ರಾಫಿಕ್ ತಡೆಗಟ್ಟಲು ಹಲವು ಕ್ರಮ ಕೈಗೊಂಡಿದ್ದಾರೆ. ಜೊತೆಗೆ ಸುಗಮ ಸಂಚಾರಕ್ಕಾಗಿ ವ್ಯವಸ್ಥೆ ಮಾಡಿದ್ದು, ಮಧ್ಯಾಹ್ನ 3ರಿಂದ ರಾತ್ರಿ 11ರವರೆಗೂ ಸ್ಟೇಡಿಯಂ ಸುತ್ತಮುತ್ತ ನೋ ಪಾರ್ಕಿಂಗ್ ಇರಲಿದೆ.

    ಪಂದ್ಯ ವೀಕ್ಷಿಸಲು ಬರುವವರಿಗೆ ಪಾರ್ಕಿಂಗ್‌ಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದು, ಓಲಾ, ಉಬರ್, ಆಟೋ ಇತ್ಯಾದಿ ಕ್ಯಾಬ್‌ಗಳು ಪಿಕ್‌ಪ್ ಮತ್ತು ಡ್ರಾಪ್ ಮಾಡಲು ಪ್ರತ್ಯೇಕ ಸ್ಥಳ ನಿಗದಿ ಮಾಡಲಾಗಿದೆ. ಸ್ಟೇಡಿಯಂ ಸುತ್ತಮುತ್ತ ಪಾರ್ಕಿಂಗ್ ಕೊರತೆಯಿರುವುದರಿಂದ ಬಿಎಂಟಿಸಿ, ಮೆಟ್ರೋ ಬಳಸಲು ಮನವಿ ಮಾಡಲಾಗಿದೆ.

    ಎಲ್ಲೆಲ್ಲಿ ವಾಹನಗಳ ನಿಲುಗಡೆ ನಿಷೇಧ?
    1. ಕ್ವೀನ್ಸ್ ರಸ್ತೆ- ಬಾಳೇಕುಂದ್ರಿ ವೃತ್ತದಿಂದ ಕ್ವೀನ್ಸ್ ವೃತ್ತದವರೆಗೆ ರಸ್ತೆಯ ಎರಡೂ ಕಡೆ
    2. ಎಂ.ಜಿ ರಸ್ತೆ- ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ವೃತ್ತದವರೆಗೆ ರಸ್ತೆಯ ಎರಡೂ ಕಡೆ
    3. ಲಿಂಕ್ ರಸ್ತೆ- ಎಂ.ಜಿ ರಸ್ತೆಯಿಂದ ಕಬ್ಬನ್ ಪಾರ್ಕ್ ರಸ್ತೆವರೆಗೆ
    4. ರಾಜಭವನ ರಸ್ತೆ- ಟಿ.ಚೌಡಯ್ಯ ರಸ್ತೆ ಮತ್ತು ರೇಸ್ ಕೋರ್ಸ್ ರಸ್ತೆಗಳಲ್ಲಿ
    5. ಸೆಂಟ್ರಲ್ ಸ್ಟ್ರಿಟ್ ರಸ್ತೆಯ ಎರಡೂ ಕಡೆ
    6. ಕಬ್ಬನ್ ರಸ್ತೆ- ಸಿ.ಟಿ.ಓ. ವೃತ್ತದಿಂದ ಡಿಕೆನ್ ಸನ್ ರಸ್ತೆ ಜಂಕ್ಷನ್‌ನ ರಸ್ತೆಯ ಎರಡೂ ಕಡೆ
    7. ಸೆಂಟ್ ಮಾರ್ಕ್ಸ್ ರಸ್ತೆ- ಕ್ಯಾಶ್ ಫಾರ್ಮಸಿ ಜಂಕ್ಷನ್‌ನಿಂದ ಅನಿಲ್ ಕುಂಬ್ಳೆ ವೃತ್ತದವರೆಗೆ
    8. ಮ್ಯೂಸಿಯಂ ರಸ್ತೆ-,ಎಂ.ಜಿ ರಸ್ತೆಯಿಂದ ಸೆಂಟ್ ಮಾರ್ಕ್ಸ್ ರಸ್ತೆ ವರೆಗೆ ಹಾಗೂ ಆಶಿರ್ವಾದಂ ವೃತ್ತದವರೆಗೆ
    9. ಕಸ್ತೂರಬಾ ರಸ್ತೆ- ಕ್ವೀನ್ಸ್ ವೃತ್ತದಿಂದ ಹಡ್ಸನ್ ವೃತ್ತದವರೆಗೆ
    10. ಮಲ್ಯ ಆಸ್ಪತ್ರೆ ರಸ್ತೆ- ಸಿದ್ದಲಿಂಗಯ್ಯ ವೃತ್ತದಿಂದ ಆರ್.ಆರ್.ಎಂ.ಆರ್ ವೃತ್ತದವರೆಗೆ.
    11. ಕಬ್ಬನ್‌ಪಾರ್ಕ್ ಒಳಭಾಗ- ಕಿಂಗ್ ರಸ್ತೆ, ಪ್ರೆಸ್ ಕ್ಲಬ್ ಮುಂಭಾಗ, ಬಾಲಭವನ ಮುಂಭಾಗ
    11. ಲ್ಯಾವೆಲ್ಲಿ ರಸ್ತೆ- ಕ್ವೀನ್ಸ್ ವೃತ್ತದಿಂದ ವಿಠಲ್ ಮಲ್ಯ ರಸ್ತೆ ಜಂಕ್ಷನ್‌ವರೆಗೆ
    12. ವಿಠಲ್ ಮಲ್ಯ ರಸ್ತೆ- ಸಿದ್ದಲಿಂಗಯ್ಯ ವೃತ್ತದಿಂದ ಸೆಂಟ್ ಮಾರ್ಕ್ಸ್ ರಸ್ತೆಯ ಬಿಷಪ್‌ಕಾಟನ್ ಬಾಲಕಿಯರ ಶಾಲೆಯವರೆಗೆ

    ಪಾರ್ಕಿಂಗ್ ವ್ಯವಸ್ಥೆ:
    1. ಪಂದ್ಯ ವೀಕ್ಷಣೆ ಮಾಡಲು ಬರೋರಿಗೆ ಸೆಂಟ್ ಜೋಸೆಫ್ ಹೈಸ್ಕೂಲ್ ಗ್ರೌಂಡ್, ಯು.ಬಿ.ಸಿಟಿ ನಿಲುಗಡೆ ಸ್ಥಳದಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆ
    2. ಶಿವಾಜಿನಗರ ಬಸ್ ನಿಲ್ದಾಣದ 1ನೇ ಮಹಡಿಯಲ್ಲಿ ಪಾರ್ಕಿಂಗ್
    3. ಕೆ.ಎಸ್.ಸಿ.ಎ. ಸದಸ್ಯರ ವಾಹನಗಳಿಗೆ ಸೆಂಟ್ ಜೋಸೆಫ್ ಬಾಲಕರ ಶಾಲೆ ಮೈದಾನ.ಇದನ್ನೂ ಓದಿ: ಕಾಂಗ್ರೆಸ್‌ನವ್ರಿಗೆ ಪಾಕ್‌ ಫ್ರೀ ವೀಸಾ ಕೊಡುತ್ತೆ, ಮಂಜುನಾಥ್ ನೋಡ್ಕೊಂಡು ಬರಲಿ: ಯತ್ನಾಳ್ ಕಿಡಿ

  • ಚಿನ್ನಸ್ವಾಮಿ ಮೈದಾನದಲ್ಲಿ ಮಕ್ಕಳಂತೆ ಈಜಾಡಿದ ಡೇವಿಡ್‌!

    ಚಿನ್ನಸ್ವಾಮಿ ಮೈದಾನದಲ್ಲಿ ಮಕ್ಕಳಂತೆ ಈಜಾಡಿದ ಡೇವಿಡ್‌!

    ಬೆಂಗಳೂರು: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡದ ಸ್ಟಾರ್‌ ಬ್ಯಾಟರ್‌ ಟಿಮ್‌ ಡೇವಿಡ್‌ (Tim David) ಚಿನ್ನಸ್ವಾಮಿ ಮೈದಾನದ (Chinnaswamy Stadium) ನೀರಿನಲ್ಲಿ ಈಜಾಡಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಈಗ ರಾತ್ರಿ ಭಾರೀ ಮಳೆ ಸುರಿಯುತ್ತಿದೆ. ಆರ್‌ಸಿಬಿ ತಂಡ ಮೈದಾನದಲ್ಲಿ ಅಭ್ಯಾಸ ನಡೆಸುತ್ತಿದ್ದಾಗ ಜೋರಾಗಿ ಸುರಿದಿದೆ.

    ಮಳೆದ ಸುರಿದ ಹಿನ್ನೆಲೆಯಲ್ಲಿ ಆಟಗಾರರು ಡ್ರೆಸ್ಸಿಂಗ್‌ ಕೊಠಡಿ ಸೇರಿದ್ದರೆ ಟಿಮ್‌ ಡೇವಿಡ್‌ ಮೈದಾನದಲ್ಲಿ ನಿಂತಿದ್ದ ನೀರಿನಲ್ಲ ಈಜಾಡಿದ್ದಾರೆ. ಡೇವಿಡ್‌ ಈಜಾಡುತ್ತಿರುವ ವಿಡಿಯೋವನ್ನು ಆರ್‌ಸಿಬಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್‌ ಮಾಡಿದೆ. ಇದನ್ನೂ ಓದಿ: ಮತ್ತೆ ಆರಂಭವಾಗಲಿದೆ IPL – ಬೆಂಗಳೂರಲ್ಲಿ ಪಂದ್ಯದ ದಿನ ಮೆಟ್ರೋ ಸಮಯ ವಿಸ್ತರಣೆ


    ಆಸ್ಟ್ರೇಲಿಯಾದ ಟಿಮ್‌ ಡೇವಿಡ್‌ ಅವರನ್ನು ಆರ್‌ಸಿಬಿ ಹರಾಜಿನಲ್ಲಿ 3 ಕೋಟಿ ರೂ. ನೀಡಿ ಖರೀದಿಸಿತ್ತು. ಮೊದಲ ಬಾರಿಗೆ ಐಪಿಎಲ್‌ ಪ್ರತಿನಿಧಿಸುತ್ತಿರುವ ಡೇವಿಟ್‌ 11 ಪಂದ್ಯಗಳಿಂದ 186 ರನ್‌ ಹೊಡೆದಿದ್ದಾರೆ.

    ಆಪರೇಷನ್‌ ಸಿಂಧೂರ ಕಾರ್ಯಾಚರಣೆಯ ನಂತರ ಸ್ಥಗಿತಗೊಂಡಿದ್ದ ಐಪಿಎಲ್‌ ಪಂದ್ಯಗಳು ಮೇ 17 ರಿಂದ ಆರಂಭವಾಗಲಿದೆ. ಶನಿವಾರ ಬೆಂಗಳೂರಿನಲ್ಲಿ ಆರ್‌ಸಿಬಿ ಮತ್ತು ಕೋಲ್ಕತ್ತಾ ಮಧ್ಯೆ ಪಂದ್ಯ ನಡೆಯಲಿದೆ. ಈಗಾಗಲೇ 16 ಅಂಕ ಗಳಿಸಿರುವ ಆರ್‌ಸಿಬಿ ನಾಳಿನ ಪಂದ್ಯ ಗೆದ್ದರೆ ಪ್ಲೇ ಆಫ್‌ ಪ್ರವೇಶಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

  • ಮತ್ತೆ ಆರಂಭವಾಗಲಿದೆ IPL – ಬೆಂಗಳೂರಲ್ಲಿ ಪಂದ್ಯದ ದಿನ ಮೆಟ್ರೋ ಸಮಯ ವಿಸ್ತರಣೆ

    ಮತ್ತೆ ಆರಂಭವಾಗಲಿದೆ IPL – ಬೆಂಗಳೂರಲ್ಲಿ ಪಂದ್ಯದ ದಿನ ಮೆಟ್ರೋ ಸಮಯ ವಿಸ್ತರಣೆ

    ಬೆಂಗಳೂರು: ಭಾರತ-ಪಾಕಿಸ್ತಾನ ನಡುವೆ ಕದನ ವಿರಾಮದ ಬಳಿಕ ಮೇ 17ರಿಂದ ಐಪಿಎಲ್‌ನ (IPL 2025) ಕೊನೆಯ ಹಂತದ ಪಂದ್ಯಗಳು ಮತ್ತೆ ಆರಂಭಗೊಳ್ಳಲಿದೆ. ಈ ಹಿನ್ನೆಲೆ ಬೆಂಗಳೂರಿನ ಪಂದ್ಯಗಳ ಸಂದರ್ಭದಲ್ಲಿ ಸಾರ್ವಜನಿಕರ ಅನೂಕೂಲಕ್ಕಾಗಿ ನಮ್ಮ ಮೆಟ್ರೋ (Namma Metro) ಪಂದ್ಯಗಳ ದಿನ ಸಮಯಾವಧಿ ವಿಸ್ತರಣೆ ಮಾಡಿದೆ.

    ಮೇ 17 ಮತ್ತು ಮೇ 23ರಂದು ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯ ನಡೆಯಲಿದೆ. ಈ ದಿನಗಳಲ್ಲಿ ನಮ್ಮ ಮೆಟ್ರೋ ಎಲ್ಲಾ ಟರ್ಮಿನಲ್ ಅಂದರೆ ವೈಟ್ ಫೀಲ್ಡ್ (ಕಾಡುಗೋಡಿ), ಚಲ್ಲಘಟ್ಟ, ರೇಷ್ಮೆ ಸಂಸ್ಥೆ ಮತ್ತು ಮಾದವರ ಮಟ್ರೋ ನಿಲ್ದಾಣಗಳಿಂದ ಕೊನೆಯ ರೈಲು ಸೇವೆಯನ್ನು ಮಧ್ಯರಾತ್ರಿ 1ರ ವರೆಗೆ ವಿಸ್ತರಿಸಿದೆ. ಇದನ್ನೂ ಓದಿ: ನಕ್ಸಲರ ವಿರುದ್ಧ ಕಾರ್ಯಾಚರಣೆ ವೇಳೆ ಜೇನು ದಾಳಿ – ಬೆಂಗ್ಳೂರಲ್ಲಿ ಪಳಗಿದ್ದ ಸ್ನಿಫರ್ ಡಾಗ್‌ ಸಾವು

    ನಾಡಪ್ರಭು ಕೆಂಪೇಗೌಡ ನಿಲ್ದಾಣ ಮಜೆಸ್ಟಿಕ್‌ನಿಂದ ಎಲ್ಲಾ ನಾಲ್ಕು ದಿಕ್ಕುಗಳ ಕಡೆಗೆ ಕೊನೆಯ ರೈಲು ಮಧ್ಯರಾತ್ರಿ 1:35ಕ್ಕೆ ಹೊರಡಲಿದೆ. ಪ್ರಯಾಣಿಕರು ಈ ಸೌಲಭ್ಯವನ್ನು ಬಳಸಿಕೊಳ್ಳಬೇಕು ಎಂದು ನಮ್ಮ ಮೆಟ್ರೋ ಕೋರಿದೆ. ಮೇ 17ರಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ಮತ್ತು ಕೋಲ್ಕತ್ತಾ ಮುಖಾಮುಖಿಯಾಗಲಿದೆ. ಇದನ್ನೂ ಓದಿ: ಯುದ್ಧ ಅಥವಾ ಶಾಂತಿ ಬಗ್ಗೆ ಕಾಂಗ್ರೆಸ್ ಸರಿಯಾದ ನಿಲುವು ಪ್ರಕಟಿಸಲಿ: ಆರ್.ಅಶೋಕ್

  • ಮೇ 17 ರಿಂದ ಮತ್ತೆ ಐಪಿಎಲ್‌ ಆರಂಭ

    ಮೇ 17 ರಿಂದ ಮತ್ತೆ ಐಪಿಎಲ್‌ ಆರಂಭ

    ಮುಂಬೈ: ಒಂದು ವಾರ ಮುಂದೂಡಿಕೆಯಾಗಿದ್ದ ಐಪಿಎಲ್‌ ಪಂದ್ಯಗಳು (IPL Match) ಮೇ 17 ರಿಂದ ಮತ್ತೆ ಆರಂಭವಾಗಲಿದೆ.

    ಮೇ 29ಕ್ಕೆ ಮೊದಲ ಕ್ವಾಲಿಫೈಯರ್‌ ಪಂದ್ಯ ನಡೆದರೆ ಮೇ 30 ಎಲಿಮಿನೇಟರ್‌ ಪಂದ್ಯ ನಡೆಯಲಿದೆ. ಜೂನ್‌ 1 ರಂದು ಎರಡನೇ ಕ್ವಾಲಿಫೈಯರ್‌ ಪಂದ್ಯ ನಡೆದರೆ ಜೂನ್‌ 3 ರಂದು ಫೈನಲ್‌ ಪಂದ್ಯ ನಡೆಯಲಿದೆ.

    ಬೆಂಗಳೂರು, ಜೈಪುರ, ದೆಹಲಿ, ಮುಂಬೈ, ಅಹಮದಾಬಾದ್‌, ಲಕ್ನೋದಲ್ಲಿ ಉಳಿದ ಪಂದ್ಯಗಳು ನಡೆಯಲಿದೆ. ಕ್ವಾಲಿಫೈಯರ್‌, ಎಲಿಮಿನೇಟರ್‌ ಮತ್ತು ಫೈನಲ್‌ ಪಂದ್ಯದ ಸ್ಥಳಗಳು ನಿಗದಿಯಾಗಿಲ್ಲ. ಇದನ್ನೂ ಓದಿ: ಪಾಕ್‌ ಜೊತೆ ಮಾತುಕತೆ ನಡೆದ್ರೆ ಭಯೋತ್ಪಾದನೆ, POK ಬಗ್ಗೆ ಮಾತ್ರ: ಮೋದಿ ಖಡಕ್‌ ಮಾತು

    ಆರ್‌ಸಿಬಿ (RCB) ಮತ್ತು ಕೆಕೆಆರ್‌ (KKR) ಮಧ್ಯೆ ಮೇ 17 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ಮೊದಲ ಪಂದ್ಯ ನಡೆಯಲಿದೆ.

  • ಮುಂದಿನ ವಾರದಿಂದ ಐಪಿಎಲ್‌ 2025 ಟೂರ್ನಿ ಪುನರಾರಂಭ?

    ಮುಂದಿನ ವಾರದಿಂದ ಐಪಿಎಲ್‌ 2025 ಟೂರ್ನಿ ಪುನರಾರಂಭ?

    ಮುಂಬೈ: ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ನಂತರ 18ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಪಂದ್ಯಗಳನ್ನು ಪುನರಾರಂಭಿಸಲು BCCI ತೀರ್ಮಾನಿಸಿದೆ ಎಂದು ವರದಿಯಾಗಿದೆ.

    ಮುಂದಿನ ಟೂರ್ನಿಗಳಿಗೆ ಸಮಯ ಹೊಂದಿಸಬೇಕೆಂಬ ಉದ್ದೇಶದಿಂದ ಮೇ 25 ರಿಂದ 30ರೊಳಗೆ IPL ಟೂರ್ನಿ ಮುಗಿಸಲು BCCI ನಿರ್ಧರಿಸಿದೆ. ಹೀಗಾಗಿ ಮೇ 16ರಿಂದ ಐಪಿಎಲ್‌ ಪಂದ್ಯಗಳನ್ನ ಪುನರಾರಂಭಿಸಲು ಚಿತ್ತ ಹರಿಸಿದೆ.

    ಸ್ಥಗಿತಗೊಂಡಿದ್ದ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯ ಮುಂದುವರಿಯಲಿದೆ. ಭಾರತ ಮತ್ತು ಪಾಕ್‌ ನಡುವಿನ ಪ್ರತೀಕಾರ ಸಮರ ಜೋರಾಗುತ್ತಿದ್ದಂತೆ ಭದ್ರತಾ ಕಾರಣಗಳಿಂದ IPL ಟೂರ್ನಿಯನ್ನು ಬಿಸಿಸಿಐ ಒಂದು ವಾರಗಳ ಕಾಲ ಸ್ಥಗಿತಗೊಳಿಸಿತ್ತು. ಪ್ರಸ್ತುತ ಗುರುವಾರ ಸ್ಥಗಿತಗೊಂಡ ಪಂಜಾಬ್ ಕಿಂಗ್ಸ್ (Punjab Kings) ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯ ಸೇರಿ 58 ಪಂದ್ಯಗಳು ನಡೆದಿವೆ. ಇನ್ನೂ ನಾಲ್ಕು ಪ್ಲೇ ಆಫ್ಸ್ ಪಂದ್ಯಗಳೂ ಸೇರಿ 16 ಪಂದ್ಯಗಳು ಬಾಕಿ ಇವೆ.

    ಆಟಗಾರರು ಮತ್ತು ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಿ ಪಂದ್ಯಗಳನ್ನು ಸ್ಥಗಿತಗೊಳಿಸಲಾಗಿತ್ತು. ಉದ್ವಿಗ್ನತೆ ಶಮನವಾದ ಬಳಿಕ ಹೊಸ ದಿನಾಂಕಗಳನ್ನು ಬಿಸಿಸಿಐ ಪ್ರಕಟಿಸಲಿದೆ ಎಂದು ವರದಿಯಾಗಿದೆ.

    ದಕ್ಷಿಣ ಭಾರತದ ನಗರಗಳಾದ ಬೆಂಗಳೂರು, ಚೆನ್ನೈ ಮತ್ತು ಹೈದರಾಬಾದ್ ನಲ್ಲಿ ಐಪಿಎಲ್ ಪಂದ್ಯಾವಳಿ ಮುಂದುವರಿಸಲು ಯೋಜನೆ ರೂಪಿಸಲಾಗುತ್ತಿದೆ. ಒಂದು ವೇಳೆ ಕೇಂದ್ರ ಸರ್ಕಾರ ಈ ಯೋಜನೆ ಸಮ್ಮತಿ ನೀಡಿದರೆ ಐಪಿಎಲ್ ಇನ್ನು ಕೆಲವೇ ದಿನಗಳಲ್ಲಿ ಪುನರಾರಂಭ ಆಗಲಿದೆ.

  • IPL 2025 ಟೂರ್ನಿ 1 ವಾರ ಸ್ಥಗಿತ – ಶೀಘ್ರವೇ ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ

    IPL 2025 ಟೂರ್ನಿ 1 ವಾರ ಸ್ಥಗಿತ – ಶೀಘ್ರವೇ ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ

    – ಆರ್‌ಸಿಬಿ vs ಲಕ್ನೋ ಪಂದ್ಯದ ಟಿಕೆಟ್‌ ಶುಲ್ಕ ಶೀಘ್ರದಲ್ಲೇ ವಾಪಸ್‌

    ನವದೆಹಲಿ: ಭಾರತ ಮತ್ತು ಪಾಕ್‌ ನಡುವಿನ ಪ್ರತೀಕಾರ ಸಮರ ಜೋರಾಗುತ್ತಿದ್ದಂತೆ ಭದ್ರತಾ ಕಾರಣಗಳಿಂದ 18ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯನ್ನು ಬಿಸಿಸಿಐ ಒಂದು ವಾರಗಳ ಕಾಲ ಸ್ಥಗಿತಗೊಳಿಸಿದೆ.

    ಇಂದು ನಡೆದ ಮಹತ್ವದ ಸಭೆಯಲ್ಲಿ ಭಾರತೀಯ ಕ್ರಿಕೆಟ್‌ ಮಂಡಳಿ (BCCI) ಈ ನಿರ್ಧಾರ ಕೈಗೊಂಡಿದೆ. ಅದರಂತೆ ಇಂದಿನಿಂದ ನಿಗದಿಯಾಗಿದ್ದ ಎಲ್ಲಾ ಪಂದ್ಯಗಳ ಒಂದು ವಾರಗಳ ಕಾಲ ಅಮಾನತುಗೊಳಿಸಿದೆ. ಸಂಬಂಧಪಟ್ಟವರೊಂದಿಗೆ ಸಮಾಲೋಚಿಸಿ ಪರಿಸ್ಥಿತಿ ನೋಡಿಕೊಂಡು ಪರಿಷ್ಕೃತ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸುವುದಾಗಿ ಬಿಸಿಸಿಐ ಹೇಳಿದೆ. ಆದ್ರೆ ಕೆಲ ವರದಿಗಳು ಭಾರತ ಮತ್ತು ಇಂಗ್ಲೆಂಡ್‌ ಟೆಸ್ಟ್‌ ಸರಣಿ ಬಳಿಕ ಪಂದ್ಯ ಮುಂದುವರಿಯುವ ಸಾಧ್ಯತೆಯಿದೆ ಎಂದು ತಿಳಿಸಿವೆ.

    ಪ್ರಸ್ತುತ 18ನೇ ಆವೃತ್ತಿಯ ಐಪಿಎಲ್ ಗುರುವಾರದ ಸ್ಥಗಿತಗೊಂಡ ಪಂಜಾಬ್ ಕಿಂಗ್ಸ್ (Punjab Kings) ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯ ಸೇರಿ 58 ಪಂದ್ಯಗಳು ನಡೆದಿವೆ. ಇನ್ನೂ ನಾಲ್ಕು ಪ್ಲೇ ಆಫ್ಸ್ ಪಂದ್ಯಗಳೂ ಸೇರಿ 16 ಪಂದ್ಯಗಳು ಬಾಕಿ ಇವೆ. ಸದ್ಯ ಬಿಸಿಸಿಐ ಆಟಗಾರರು ಮತ್ತು ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಿದೆ. ಆಟಗಾರರನ್ನು ಮನೆಗಳಿಗೆ ಸುರಕ್ಷಿತವಾಗಿ ಕಳುಹಿಸುವ ವ್ಯವಸ್ಥೆಗಳ ಬಗ್ಗೆ ಗಮನಹರಿಸಲಿದೆ. ಉದ್ವಿಗ್ನತೆ ಶಮನವಾದ ಬಳಿಕ ಹೊಸ ದಿನಾಂಕಗಳನ್ನು ಪ್ರಕಟಿಸಲಿದೆ ಎಂದು ಬಿಸಿಸಿಐ, ಐಪಿಎಲ್‌ ಮಂಡಳಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

    RCB vs LSG ಪಂದ್ಯ ಟಿಕೆಟ್‌ ವಾಪಸ್‌:
    ಇಂದು ಲಕ್ನೋದ ಏಕನಾ ಕ್ರೀಡಾಂಗಣದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ಮತ್ತು ಲಕ್ನೋ ಸೂಪರ್‌ ಜೈಂಟ್ಸ್‌ (LSG) ತಂಡಗಳ ನಡುವೆ ಹಣಾಹಣಿ ನಡೆಯಬೇಕಿತ್ತು. ಪ್ಲೇ ಆಫ್‌ ಅಧಿಕೃತ ಪ್ರವೇಶಕ್ಕೆ ಇಂದಿನ ಪಂದ್ಯದ ಗೆಲುವು ಅನಿವಾರ್ಯವಾಗಿತ್ತು. ಪಂದ್ಯ ಸ್ಥಗಿತಗೊಳಿಸಿದ್ದರಿಂದ ಟಿಕೆಟ್‌ ಖರೀದಿ ಮಾಡಿರುವ ಎಲ್ಲಾ ಗ್ರಾಹಕರಿಗೂ ಶೀಘ್ರದಲ್ಲೇ ಹಣ ವಾಪಸ್‌ ನೀಡುವುದಾಗಿ ಐಪಿಎಲ್‌ ಮಂಡಳಿ ತಿಳಿಸಿದೆ.

    ಜಮ್ಮು ಮತ್ತು ಪಠಾಣ್‌ಕೋಟ್ ನಗರಗಳಲ್ಲಿ ದಾಳಿಯ ಎಚ್ಚರಿಕೆಗಳು ಬಂದಿದ್ದರಿಂದ ಗುರುವಾರ (ಮೇ 8) ಧರ್ಮಶಾಲಾದಲ್ಲಿ ನಡೆಯಬೇಕಿದ್ದ ಪಂದ್ಯವನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿತ್ತು. ಈ ವಿಚಾರವಾಗಿ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರು ಖಾಸಗಿ ವಾಹಿನಿಯಲ್ಲಿ ಮಾತನಾಡಿದ್ದರು.

    ಅತ್ತ ಪಾಕ್‌ನಲ್ಲಿ ನಡೆಯುತ್ತಿದ್ದ ಪಾಕಿಸ್ತಾನ್ ಸೂಪರ್ ಲೀಗ್‌ನ ಉಳಿದ ಎಲ್ಲಾ ಪಂದ್ಯಗಳನ್ನು ದುಬೈಗೆ ಸ್ಥಳಾಂತರಿಸುವಂತೆ ಪಾಕ್‌ ಸರ್ಕಾರ ಪಾಕಿಸ್ತಾನ ಕ್ರಿಕೆಟ್‌ ಬೋರ್ಡ್‌ಗೆ ಸೂಚನೆ ನೀಡಿದೆ.

  • Breaking | ಭಾರತ-ಪಾಕ್‌ ಉದ್ವಿಗ್ನತೆ – IPL 2025 ಟೂರ್ನಿ ಸಸ್ಪೆಂಡ್‌!

    Breaking | ಭಾರತ-ಪಾಕ್‌ ಉದ್ವಿಗ್ನತೆ – IPL 2025 ಟೂರ್ನಿ ಸಸ್ಪೆಂಡ್‌!

    ನವದೆಹಲಿ: ಭಾರತ ಮತ್ತು ಪಾಕಿಸ್ತಾನ (India Pakistan) ನಡುವೆ ಪ್ರತೀಕಾರ ಸಮರ ಜೋರಾಗುತ್ತಿದ್ದಂತೆ 18ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯನ್ನು ಬಿಸಿಸಿಐ (BCCI) ಅನಿರ್ದಿಷ್ಟಾವಧಿಗೆ ಮುಂದೂಡಿದೆ.

    ಇಂದು ನಡೆದ ಮಹತ್ವದ ಸಭೆಯಲ್ಲಿ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಈ ನಿರ್ಧಾರ ಕೈಗೊಂಡಿದೆ. ಅದರಂತೆ ಇಂದಿನಿಂದ ನಡೆಯುವ ಎಲ್ಲಾ ಪಂದ್ಯಗಳನ್ನು ಅನಿರ್ದಿಷ್ಟಾವಧಿವರೆಗೆ ಮುಂದೂಡಿದೆ. ಸದ್ಯ ಪ್ಲೇ ಆಫ್ಸ್‌ ಸೇರಿ 16 ಪಂದ್ಯಗಳು ಬಾಕಿ ಉಳಿದಿವೆ. ಸದ್ಯ ಬಿಸಿಸಿಐ ಆಟಗಾರರು ಮತ್ತು ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಿದೆ. ಆಟಗಾರರನ್ನು ಸದ್ಯಕ್ಕೆ ಮನೆಗಳಿಗೆ ಸುರಕ್ಷಿತವಾಗಿ ಕಳುಹಿಸುವ ವ್ಯವಸ್ಥೆಗಳ ಬಗ್ಗೆ ಗಮನಹರಿಸಲಿದೆ. ಉದ್ವಿಗ್ನತೆ ಶಮನವಾದ ಬಳಿಕ ಹೊಸ ದಿನಾಂಕಗಳನ್ನು ಪ್ರಕಟಿಸಲಿದೆ ಎಂದು ಬಿಸಿಸಿಐ ಉನ್ನತ ಮೂಲಗಳು ತಿಳಿಸಿವೆ.

    ಪ್ರಸ್ತುತ 18ನೇ ಆವೃತ್ತಿಯ ಐಪಿಎಲ್‌ ಗುರುವಾರದ ಸ್ಥಗಿತಗೊಂಡ ಪಂಜಾಬ್‌ ಕಿಂಗ್ಸ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ನಡುವಿನ ಪಂದ್ಯ ಸೇರಿ 58 ಪಂದ್ಯಗಳು ನಡೆದಿವೆ. ಇನ್ನೂ ನಾಲ್ಕು ಪ್ಲೇ ಆಫ್ಸ್‌ ಪಂದ್ಯಗಳೂ ಸೇರಿ 16 ಪಂದ್ಯಗಳು ಬಾಕಿ ಇವೆ.

    ಜಮ್ಮು ಮತ್ತು ಪಠಾಣ್‌ಕೋಟ್ ನಗರಗಳಲ್ಲಿ ದಾಳಿಯ ಎಚ್ಚರಿಕೆಗಳು ಬಂದಿದ್ದರಿಂದ ಗುರುವಾರ ಧರ್ಮಶಾಲಾದಲ್ಲಿ ನಡೆಯಬೇಕಿದ್ದ ಪಂದ್ಯವನ್ನು ರದ್ದುಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಈ ವಿಚಾರವಾಗಿ BCCI ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರು ಖಾಸಗಿ ವಾಹಿನಿಯಲ್ಲಿ ಮಾತನಾಡಿದ್ದರು.

    ಅಲ್ಲದೇ ಪಾಕ್‌ನಲ್ಲಿ ನಡೆಯುತ್ತಿದ್ದ ಪಾಕಿಸ್ತಾನ್‌ ಸೂಪರ್‌ ಲೀಗ್‌ನ ಉಳಿದ ಎಲ್ಲಾ ಪಂದ್ಯಗಳನ್ನು ದುಬೈಗೆ ಸ್ಥಳಾಂತರಿಸಲು ಪಿಸಿಬಿ ನಿರ್ಧಾರ ಕೈಗೊಂಡಿದೆ.

  • ಭಾರತ-ಪಾಕ್‌ ನಡುವೆ ಯುದ್ಧ ಛಾಯೆ – ರದ್ದಾಗುತ್ತಾ ಐಪಿಎಲ್‌?- ಅತ್ತ ಪಾಕ್‌ ಸೂಪರ್‌ ಲೀಗ್‌ ದುಬೈಗೆ ಶಿಫ್ಟ್‌

    ಭಾರತ-ಪಾಕ್‌ ನಡುವೆ ಯುದ್ಧ ಛಾಯೆ – ರದ್ದಾಗುತ್ತಾ ಐಪಿಎಲ್‌?- ಅತ್ತ ಪಾಕ್‌ ಸೂಪರ್‌ ಲೀಗ್‌ ದುಬೈಗೆ ಶಿಫ್ಟ್‌

    ನವದೆಹಲಿ: ಭಾರತ ಮತ್ತು ಪಾಕ್‌ ನಡುವೆ ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟ ಬೆನ್ನಲ್ಲೇ ಇದೀಗ ಐಪಿಎಲ್‌(IPL 2025) ರದ್ದಾಗುತ್ತಾ ಎಂಬ ಪ್ರಶ್ನೆ ಕಾಡುತ್ತಿದೆ.

    ಕ್ರಿಕೆಟ್‌ ಪ್ರಿಯರ ಹಬ್ಬವಾಗಿದ್ದ ಐಪಿಎಲ್‌ ಭಾರತ- ಪಾಕ್‌(India-Pakistan) ನಡುವಿನ ಯುದ್ಧ ಛಾಯೆಯಿಂದ ರದ್ದಾಗುತ್ತಾ ಎಂಬ ಪ್ರಶ್ನೆ ಮೂಡಿದೆ. ಅಲ್ಲದೇ ಗುರುವಾರ ಧರ್ಮಶಾಲಾದಲ್ಲಿ ಪಂಜಾಬ್‌ ಕಿಂಗ್ಸ್‌(Panjab Kings) ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌(Delhi Capitals) ನಡುವೆ ನಡೆಯುತ್ತಿದ್ದ ಪಂದ್ಯವನ್ನೂ ರದ್ದು ಮಾಡಲಾಗಿತ್ತು. ಇದನ್ನೂ ಓದಿ: ಜಮ್ಮುವಿನಲ್ಲಿ ಅಮಾಯಕರನ್ನ ಟಾರ್ಗೆಟ್‌ ಮಾಡಿದ ʻಪಾಪಿಸ್ತಾನʼ – 10,000 ಮಂದಿ ಸ್ಥಳಾಂತರ?

    ಜಮ್ಮು ಮತ್ತು ಪಠಾಣ್‌ಕೋಟ್ ನಗರಗಳಲ್ಲಿ ದಾಳಿಯ ಎಚ್ಚರಿಕೆಗಳು ಬಂದಿದ್ದರಿಂದ ಧರ್ಮಶಾಲಾದಲ್ಲಿ ನಡೆಯಬೇಕಿದ್ದ ಪಂದ್ಯವನ್ನು ರದ್ದುಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ವಿಚಾರವಾಗಿ BCCI ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರು ಖಾಸಗಿ ವಾಹಿನಿಯಲ್ಲಿ ಮಾತನಾಡಿದ್ದರು. ಐಪಿಎಲ್‌ 2025 ಸೀಸನ್‌ನ ಉಳಿದ ಪಂದ್ಯಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸಭೆ ಕರೆಯುಲಿದ್ದೇವೆ. ಸದ್ಯಕ್ಕೆ ಕೆಲವು ಪಂದ್ಯಗಳನ್ನು ರದ್ದು ಮಾಡಲಾಗಿದೆ. ಪರಿಸ್ಥಿತಿ ಅನುಗುಣವಾಗಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಭಾರತ- ಪಾಕ್‌ ನಡುವೆ ಹೆಚ್ಚಿದ ಉದ್ವಿಗ್ನತೆ – ಬಿಎಸ್‌ಎಫ್‌ ಮುಖ್ಯಸ್ಥರೊಂದಿಗೆ ಅಮಿತ್‌ ಶಾ ಚರ್ಚೆ

    ಆಟಗಾರರನ್ನು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ರೈಲಿನ ವ್ಯವಸ್ಥೆ ಮಾಡಲಾಗಿದೆ. ರೈಲ್ವೆ ಸಚಿವರೊಂದಿಗೆ ಮಾತನಾಡಿದ್ದೇವೆ. ಆಟಗಾರರು ರೈಲಿನ ಮೂಲಕ ಡೆಲ್ಲಿಗೆ ತೆರಳುವ ಸಾಧ್ಯತೆಯಿದೆ ಎಂದು ಮಾಹಿತಿ ನೀಡಿದ್ದಾರೆ.

    ಇನ್ನು ಧರ್ಮಶಾಲಾದಲ್ಲಿ ಮೇ 11ರಂದು ಮುಂಬಯಿ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವೆ ಪಂದ್ಯ ನಡೆಯಬೇಕಿತ್ತು. ಆದರೆ ಆಪರೇಷನ್ ಸಿಂಧೂರ ಹಿನ್ನೆಲೆಯಲ್ಲಿ ಭದ್ರತಾ ಕಾರಣಗಳಿಗಾಗಿ ಧರ್ಮಶಾಲಾ ಏರ್ ಪೋರ್ಟ್‌ನಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದಾರೆ. ಹೀಗಾಗಿ ಈ ಪಂದ್ಯ ಅಹ್ಮದಾಬಾದ್‌ಗೆ ಸ್ಥಳಾಂತರಿಸಿದ್ದಾರೆ. ಇದನ್ನೂ ಓದಿ: ಕ್ವೆಟ್ಟಾದಿಂದ ಪಾಕ್‌ ಸೇನೆ ಪಲಾಯನ – ಸೇನಾ ಠಾಣೆಗಳನ್ನ ವಶಕ್ಕೆ ಪಡೆದ ಬಲೂಚ್‌ ಹೋರಾಟಗಾರರು

    ಭಾರತದ ಹಾಗೂ ಪಾಕ್‌ ನಡುವಿನ ಸಂಘರ್ಷದ ಹಿನ್ನೆಲೆ ಐಪಿಎಲ್‌ ಲೀಗ್‌ ಮುಂದುವರಿಸಬೇಕೆ ಅಥವಾ ಬೇಡವೆ ಎಂದು ನಿರ್ಧರಿಸುವ ಮುನ್ನ ಸರ್ಕಾರದ ನಿರ್ದೇಶನಗಳಿಗೆ ಎದುರು ನೋಡುತ್ತಿದ್ದೇವೆ. ಶುಕ್ರವಾರ ಬೆಂಗಳೂರಿನಲ್ಲಿ ನಡೆಯುವ ಲಕ್ನೋ ಹಾಗೂ ಆರ್‌ಸಿಬಿ ನಡುವಿನ ಪಂದ್ಯದಲ್ಲಿ ಸದ್ಯಕ್ಕೆ ಯಾವುದೇ ಬದಲಾವಣೆ ಇಲ್ಲ ಎಂದು ಐಪಿಎಲ್‌ ಅಧ್ಯಕ್ಷ ಅರುಣ್‌ ಧುಮಾಲ್‌ ಎಂದು ಮಾಹಿತಿ ನೀಡಿದ್ದಾರೆ.

    ಅಲ್ಲದೇ ಪಾಕ್‌ನಲ್ಲಿ ನಡೆಯುತ್ತಿದ್ದ ಪಾಕಿಸ್ತಾನ್‌ ಸೂಪರ್‌ ಲೀಗ್‌ನ ಉಳಿದ ಎಲ್ಲಾ ಪಂದ್ಯಗಳನ್ನು ದುಬೈಗೆ ಸ್ಥಳಾಂತರಿಸಲು ಪಿಸಿಬಿ ನಿರ್ಧಾರ ಕೈಗೊಂಡಿದೆ. ಇದನ್ನೂ ಓದಿ: ಪಾಕ್‌ ಕ್ಷಿಪಣಿ ದಾಳಿ ಬೆನ್ನಲ್ಲೇ ಹೈಅಲರ್ಟ್‌ – ದೇಶಾದ್ಯಂತ 24 ಏರ್‌ಪೋರ್ಟ್‌ಗಳು ತಾತ್ಕಾಲಿಕ ಬಂದ್‌

    ಏ. 22 ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ದಾಳಿ ನಡೆಸಿದ್ದು, ಈ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತ ಪಾಕ್‌ ಉಗ್ರರ 9 ಅಡಗುತಾಣಗಳ ಮೇಲೆ ಕ್ಷಿಪಣಿ ದಾಳಿ ನಡೆಸುವ ಮೂಲಕ ತಕ್ಕ ಉತ್ತರ ನೀಡಿತ್ತು. ಗುರುವಾರ ತಡರಾತ್ರಿಯೂ ಭಾರತ ಪಾಕಿಸ್ತಾನದ ವಿವಿಧ ನಗರಗಳನ್ನು ಮೇಲೆ ದಾಳಿ ನಡೆಸಿದ್ದು, ಇದೀಗ ಎರಡೂ ರಾಷ್ಟ್ರಗಳ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಭಾರತ ಪಾಕ್‌ ನಡುವಿನ ಯುದ್ಧದ ಛಾಯೆಯು ಐಪಿಎಲ್‌ ಪಂದ್ಯಗಳ ಮೇಲೂ ಬಿಳಲಿದೆಯೇ ಎಂದು ಕಾದು ನೋಡಬೇಕಿದೆ.

  • ಸಿಎಸ್‌ಕೆ ವಿರುದ್ಧ ಅಬ್ಬರದ ಆಟ – ಆರ್‌ಸಿಬಿ ಪರ ಸಿಕ್ಸರ್‌ನಿಂದಲೇ ದಾಖಲೆ ಬರೆದ ಕಿಂಗ್‌ ಕೊಹ್ಲಿ

    ಸಿಎಸ್‌ಕೆ ವಿರುದ್ಧ ಅಬ್ಬರದ ಆಟ – ಆರ್‌ಸಿಬಿ ಪರ ಸಿಕ್ಸರ್‌ನಿಂದಲೇ ದಾಖಲೆ ಬರೆದ ಕಿಂಗ್‌ ಕೊಹ್ಲಿ

    ಬೆಂಗಳೂರು: ಸಾಂಪ್ರದಾಯಿಕ ಎದುರಾಳಿ ಸಿಎಸ್‌ಕೆ (CSK) ವಿರುದ್ಧ ನಡೆಯುತ್ತಿರುವ ಪಂದ್ಯವು ಅಭಿಮಾನಿಗಳ ಕಣ್ಣಿಗೆ ಹಬ್ಬವಾಗಿದೆ. ಬೆಂಕಿ – ಬಿರುಗಾಳಿಯ ಹಗ್ಗಜಗ್ಗಾಟವು ಸಖತ್‌ ಹೈಪ್‌ ಕ್ರಿಯೇಟ್‌ ಮಾಡಿದೆ. ಈ ಪಂದ್ಯದಲ್ಲಿ ಆರಂಭದಿಂದಲೇ ಅಬ್ಬರಿಸಿ ಬೊಬ್ಬಿರಿದ ವಿರಾಟ್‌ ಕೊಹ್ಲಿ (Virat Kohli) ಸಿಕ್ಸರ್‌ನಿಂದಲೇ ವಿಶೇಷ ದಾಖಲೆಯೊಂದನ್ನ ಬರೆದಿದ್ದಾರೆ.

    ಹೌದು. 18 ಆವೃತ್ತಿಗಳಿಂದಲೂ ಒಂದೇ ತಂಡದಲ್ಲಿ ಆಡುತ್ತಿರುವ ವಿರಾಟ್‌ ಕೊಹ್ಲಿ, ಆರ್‌ಸಿಬಿ ಪರ 304 ಸಿಕ್ಸರ್‌ಗಳನ್ನ ಸಿಡಿಸಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ ಟಿ20ಯಲ್ಲಿ ತಂಡವೊಂದರ ಪರ 300 ಸಿಕ್ಸರ್‌ ಬಾರಿಸಿದ ಮೊದಲ ಬ್ಯಾಟರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಸಿಎಸ್‌ಕೆ ವಿರುದ್ಧ ಪಂದ್ಯದಲ್ಲಿ ಖಲೀಲ್‌ ಅಹ್ಮದ್‌ ಅವರ ಬೌಲಿಂಗ್‌ಗೆ 85 ಮೀಟರ್‌ ಸಿಕ್ಸರ್‌ ಸಿಡಿಸುವ ಮೂಲಕ ಈ ಮೈಲುಗಲ್ಲು ತಲುಪಿದ್ದಾರೆ. ಇನ್ನೂ ಮಾಜಿ ಕ್ರಿಕೆಟಿಗ ಕ್ರಿಸ್‌ಗೇಲ್‌ 263 ಸಿಕ್ಸರ್‌ ಸಿಡಿಸಿ ಈ ಸಾಧನೆ ಮಾಡಿದ 2ನೇ ಆಟಗಾರನಾದ್ರೆ, ರೋಹಿತ್‌ ಶರ್ಮಾ (ಮುಂಬೈ ಇಂಡಿಯನ್ಸ್‌) 262 ಸಿಕ್ಸರ್‌, ಕೀರನ್‌ ಪೋಲಾರ್ಡ್‌ (ಮುಂಬೈ) 258 ಸಿಕ್ಸರ್‌, ಎಂ.ಎಸ್‌ ಧೋನಿ (ಸಿಎಸ್‌ಕೆ) 257 ಸಿಕ್ಸರ್‌ ಸಿಡಿಸಿ ಕ್ರಮವಾಗಿ 3, 4, 5ನೇ ಸ್ಥಾನಗಳಲ್ಲಿದ್ದಾರೆ.

    ಆರೆಂಜ್‌ ಕ್ಯಾಪ್‌ ರೇಸ್‌ನಲ್ಲಿ ಟಾಪ್‌:
    ಅಲ್ಲದೇ ಈ ಆವೃತ್ತಿಯಲ್ಲಿ ಸ್ಫೋಟಕ ಪ್ರದರ್ಶನ ನೀಡುತ್ತಿರುವ ಕಿಂಗ್‌ ಕೊಹ್ಲಿ 505 ರನ್‌ ಗಳಿಸಿ ಆರೆಂಜ್‌ ಕ್ಯಾಪ್‌ ರೇಸ್‌ನಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಜೊತೆಗೆ ಐಪಿಎಲ್‌ನಲ್ಲಿ 8ನೇ ಬಾರಿಗೆ 500ಕ್ಕೂ ಹೆಚ್ಚು ರನ್‌ ಗಳಿಸಿದ ಮೊದಲಿಗನಾಗಿದ್ದಾರೆ. 7 ಬಾರಿ 500ಕ್ಕೂ ಹೆಚ್ಚು ರನ್‌ ಗಳಿಸಿದ ಡೇವಿಡ್‌ ವಾರ್ನರ್‌ 2ನೇ ಸ್ಥಾನದಲ್ಲಿದ್ದಾರೆ.