Tag: ಐಪಿಎಲ್

  • ಚಿನ್ನಸ್ವಾಮಿ ಕಾಲ್ತುಳಿತ | ಕತ್ತು, ಬೆನ್ನು ತುಳ್ಕೊಂಡು ಹೋಗ್ತಿದ್ರು, ಉಸಿರಾಡೋಕೂ ಆಗ್ತಿರಲಿಲ್ಲ – ಗಾಯಾಳು ಪ್ರಶಾಂತ್

    ಚಿನ್ನಸ್ವಾಮಿ ಕಾಲ್ತುಳಿತ | ಕತ್ತು, ಬೆನ್ನು ತುಳ್ಕೊಂಡು ಹೋಗ್ತಿದ್ರು, ಉಸಿರಾಡೋಕೂ ಆಗ್ತಿರಲಿಲ್ಲ – ಗಾಯಾಳು ಪ್ರಶಾಂತ್

    – ಕಾಲ್ತುಳಿತದಲ್ಲಿ ನರಕಯಾತನೆಯ ಅನುಭವ ಬಿಚ್ಚಿಟ್ಟ ಪ್ರಶಾಂತ್

    ಬೆಂಗಳೂರು: ಕಾಲ್ತುಳಿತದ (Chinnaswamy Stampede) ವೇಳೆ ಕತ್ತು, ಬೆನ್ನು ತುಳಿದುಕೊಂಡು ಹೋಗುತ್ತಿದ್ದರು. ಉಸಿರಾಡೋಕೆ ತುಂಬಾ ಕಷ್ಟ ಆಗ್ತಿತ್ತು ಎಂದು ಗಾಯಾಳು ಪ್ರಶಾಂತ್ ತಮ್ಮ ನೋವನ್ನು ಬಿಚ್ಚಿಟ್ಟಿದ್ದಾರೆ.

    `ಪಬ್ಲಿಕ್ ಟಿವಿ’ (PUBLiC TV) ಜೊತೆ ಮಾತನಾಡಿದ ಅವರು, ನಾನು ನನ್ನ ತಾಯಿ ಜೊತೆ ಕೋರ್ಟ್ ಕೆಲಸಕ್ಕೆಂದು ಹೋಗಿದ್ದೆ, ಆ ವೇಳೆ ಅಲ್ಲಿ ತುಂಬಾ ಜನ ಸೇರಿದ್ದರು. ಹೀಗಾಗಿ ನಾನು ನನ್ನ ತಾಯಿಯನ್ನು ಮನೆಗೆ ಕಳುಹಿಸಿದೆ. ಜನರ ಸಂಖ್ಯೆ ಹೆಚ್ಚಾಗುತ್ತಲೇ ಇತ್ತು, ನಾನಿರುವ ಜಾಗದಲ್ಲಿಯೇ ಇಬ್ಬರು ಸಾವನ್ನಪ್ಪಿದರು. ನಾನು ನಮ್ಮ ಮನೆಯವರಿಗೆ ಕಾಲ್ ಮಾಡಿ, ನಂಗೆ ಬರೋಕೆ ಆಗಲ್ಲ ಕ್ಷಮಿಸಿ ಬಿಡಿ ಎಂದು ಹೇಳಿದೆ.ಇದನ್ನೂ ಓದಿ: ಜೈಲಾಧಿಕಾರಿಗಳ ಜೊತೆ ಕಿರಿಕ್‌ – ಹರ್ಷ ಕೊಲೆ ಆರೋಪಿಗಳಿಗೆ ಜೈಲಿನಲ್ಲಿ ಕ್ಲಾಸ್‌

    ನಾನು ಕೆಳಗೆ ಬಿದ್ದಾಗ ನನ್ನನ್ನು ತುಳಿದುಕೊಂಡು ಹೋಗುತ್ತಿದ್ದರು. ನಾನು ಎಷ್ಟೇ ಒದ್ದಾಡುತ್ತಿದ್ದರೂ ಯಾರೂ ಸಹಾಯಕ್ಕೆ ಬರಲಿಲ್ಲ. ಕತ್ತು, ಬೆನ್ನು ತುಳಿದುಕೊಂಡು ಹೋಗುತ್ತಿದ್ದರು. ಆಕ್ಸಿಜನ್ ಕೂಡ ಸಿಗುತ್ತಿರಲಿಲ್ಲ. ಉಸಿರಾಡೋಕೆ ತುಂಬಾ ಕಷ್ಟ ಆಗುತ್ತಿತ್ತು. ಎಲ್ಲರೂ ತುಳಿದುಕೊಂಡು ಹೋಗುತ್ತಿರುವಾಗ ಓರ್ವ ವ್ಯಕ್ತಿ ಬಂದು ನನ್ನನ್ನು ಖಾಲಿ ಜಾಗಕ್ಕೆ ಬಿಟ್ಟರು. ಆಗ ಸ್ವಲ್ಪ ಉಸಿರಾಡೋಕೆ ಆಯ್ತು. ಆದರೆ ಅಲ್ಲಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಯಾರೂ ಬರಲಿಲ್ಲ. ಬಳಿಕ ನಮ್ಮ ಮನೆಯವರೇ ನನ್ನನ್ನು ಹುಡುಕಿಕೊಂಡು ಬಂದು ಪೊಲೀಸರಿಗೆ ಮಾಹಿತಿ ನೀಡಿದರು. ಆಗ ನನ್ನನ್ನ ಬೌರಿಂಗ್ ಆಸ್ಪತ್ರೆಗೆ (Bowring Hospital) ದಾಖಲಿಸಿದರು. ಅಲ್ಲಿ ಸರಿಯಾಗಿ ಚಿಕಿತ್ಸೆ ಸಿಗಲಿಲ್ಲ. ಇವರೆಗೂ ಯಾರೂ ನನ್ನ ಸಹಾಯಕ್ಕೆ ಬರಲಿಲ್ಲ ಎಂದು ತಮ್ಮ ಕರಾಳ ಅನುಭವ ಹಂಚಿಕೊಂಡರು.

    ಕಾಲ್ತುಳಿತದ ವೇಳೆ ನಿಧಿ ಎಂಬ ಯುವತಿಯ ಮೇಲೆ ಬ್ಯಾರಿಕೇಡ್ ಬಿದ್ದಿತ್ತು. ಆದರೂ ಕೂಡ ಜನರು ಬ್ಯಾರಿಕೇಡ್‌ನ್ನು ತುಳಿದುಕೊಂಡು ಓಡಾಡುತ್ತಿದ್ದರು. ಯುವತಿ ಎಡಗೈ ಮತ್ತು ಎಡಗಾಲಿಗೆ ಗಾಯವಾಗಿದ್ದು, ರಕ್ತಸ್ರಾವವಾಗಿದೆ. ಸದ್ಯ ಟ್ರೀಟ್‌ಮೆಂಟ್ ಪಡೆದು ಡಿಸ್ಚಾರ್ಜ್ ಆಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.ಇದನ್ನೂ ಓದಿ: ಗೋವಿಂದರಾಜ್‌ ಎಸಗಿದ ತಪ್ಪನ್ನು ಜನರ ಮುಂದೆ ಹೇಳಿ – ಗಾಢ ಮೌನಕ್ಕೆ ಜಾರಿದ್ದು ಯಾಕೆ: ಸಿಎಂಗೆ ಸುನಿಲ್‌ ಕುಮಾರ್‌ ಪ್ರಶ್ನೆ

    ಏನಿದು ಪ್ರಕರಣ?
    ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) 18 ವರ್ಷಗಳ ಬಳಿಕ ಐಪಿಎಲ್ (IPL) ಚಾಂಪಿಯನ್ ಪಟ್ಟವನ್ನೇನೋ ಅಲಂಕರಿಸಿದೆ. ಪಂಜಾಬ್ (PBKS) ವಿರುದ್ಧ ಬೆಂಗಳೂರು 6 ರನ್‌ಗಳ ಭರ್ಜರಿ ಜಯ ಸಾಧಿಸ್ತಿದ್ದಂತೆಯೇ ಸಿಲಿಕಾನ್ ಸಿಟಿಯಲ್ಲಿ ಮಂಗಳವಾರ (ಜೂ.3) ರಾತ್ರಿಯೇ ದೀಪಾವಳಿಯಂತಹ ಸಂಭ್ರಮ ಇತ್ತು. ಬುಧವಾರ (ಜೂ.4) ಇಡೀ ದಿನ ಹೆಚ್‌ಎಎಲ್ ಏರ್‌ಪೋರ್ಟ್ ರೋಡ್, ತಾಜ್ ವೆಸ್ಟ್ ಎಂಡ್ ಹೊಟೇಲ್ ರೋಡ್, ವಿಧಾನಸೌಧ, ಚಿನ್ನಸ್ವಾಮಿ ಸ್ಟೇಡಿಯಂ ರಸ್ತೆ ಸುತ್ತ ಮುತ್ತ ರೆಡ್ ಆರ್ಮಿ ಎಲ್ಲಾ ಕಡೆ ಆರ್‌ಸಿಬಿ ತಂಡಕ್ಕೆ ತಮ್ಮ ಅಭಿಮಾನ ತೋರಿದರು.

    ಅದೇ ದಿನ ದಿಢೀರನೇ ಆರ್‌ಸಿಬಿ (RCB) ವಿಜಯೋತ್ಸವ ಕಾರ್ಯಕ್ರಮವನ್ನು ಆಯೋಜಿಸಿತ್ತು. ಉಚಿತ ಪ್ರವೇಶ ಆಗಿದ್ದರಿಂದ ಕ್ರೀಡಾಂಗಣಕ್ಕೆ ಅಭಿಮಾನಿ ಸಾಗರವೇ ಹರಿದುಬಂದಿತ್ತು. ಗೇಟ್ ನಂಬರ್ 18, 19, 20ರ ಬಳಿ ಅಭಿಮಾನಿಗಳನ್ನು ತಡೆಯಲು ಪೊಲೀಸರು ಹೈರಾಣಾಗಿ ಹೋಗಿದ್ದರು. ಒಂದು ಹಂತದಲ್ಲಿ ಲಾಠಿಯನ್ನೂ ಬೀಸಿದರು. ಕ್ಷಣ ಕ್ಷಣಕ್ಕೂ ಆರ್‌ಸಿಬಿ ಅಭಿಮಾನಿಗಳ ಸಂಖ್ಯೆ ಹೆಚ್ಚುತ್ತಲೇ ಇತ್ತು. ಆದರೆ, ಗೇಟ್ ನಂ.12ರ ಬಳಿ ಗೇಟ್ ತೆಗೆಯುತ್ತಿದ್ದಂತೆಯೇ ಭಾರೀ ಪ್ರಮಾಣದಲ್ಲಿ ನೂಕು ನುಗ್ಗಲು ಉಂಟಾಯಿತು. ಒಬ್ಬರ ಮೇಲೋಬ್ಬರು ಬಿದ್ದು, ಉಸಿರಾಟದ ಸಮಸ್ಯೆ ಉಂಟಾಗಿ ಒಟ್ಟು 11 ಜನ ಸಾವನ್ನಪ್ಪಿದ್ದರು.ಇದನ್ನೂ ಓದಿ: ನಾಳೆ ರಾಯಚೂರಿನಲ್ಲಿ ನಡೆಯಬೇಕಿದ್ದ ಸಿಎಂ ಕಾರ್ಯಕ್ರಮ ದಿಢೀರ್ ರದ್ದು

  • ದಯಾನಂದ್ ಮೇಲೆ ಕೋಪ ಬಂದಿದ್ದರೆ ಕಡ್ಡಾಯ ರಜೆ ಮೇಲೆ ಕಳುಹಿಸಬಹುದಿತ್ತು: ಭಾಸ್ಕರ್ ರಾವ್

    ದಯಾನಂದ್ ಮೇಲೆ ಕೋಪ ಬಂದಿದ್ದರೆ ಕಡ್ಡಾಯ ರಜೆ ಮೇಲೆ ಕಳುಹಿಸಬಹುದಿತ್ತು: ಭಾಸ್ಕರ್ ರಾವ್

    ಸಿದ್ದರಾಮಯ್ಯ ವೀಕ್ ಮುಖ್ಯಮಂತ್ರಿ: ನಿವೃತ್ತ ಪೊಲೀಸ್ ಅಧಿಕಾರಿ ವಾಗ್ದಾಳಿ

    ಮೈಸೂರು: ದಯಾನಂದ್ (B.Dayananda) ಮೇಲೆ ಕೋಪ ಬಂದಿದ್ದರೆ ವರ್ಗಾವಣೆ ಮಾಡಬಹುದಿತ್ತು. ಕಡ್ಡಾಯ ರಜೆ ಮೇಲೆ ಕಳುಹಿಸಬಹುದಿತ್ತು ಎಂದು ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ (Bhaskar Rao) ಸರ್ಕಾರದ ವಿರುದ್ಧ ಗುಡುಗಿದರು.

    ಸಿದ್ದರಾಮಯ್ಯ ವೀಕ್, ಅಸಹಾಯಕ ಮುಖ್ಯಮಂತ್ರಿ. ಸಿದ್ದರಾಮಯ್ಯ ಮೊದಲ ಅವಧಿಯಲ್ಲಿ ಬಹಳ ಸ್ಟ್ರಾಂಗ್ ಇದ್ರು. ಈಗ ಸಂಪೂರ್ಣವಾಗಿ ಕಳೆದು ಹೋಗಿದ್ದಾರೆ. ಇಡೀ ಪ್ರಕರಣದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮತ್ತು ಪರಮೇಶ್ವರ್ ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕಿದೆ. ತಪ್ಪು ಮಾಡಿರುವವರೇ ಇವರು. ಕೇಂದ್ರ ಸರ್ಕಾರ ಕೊಟ್ಟ ಕಾನೂನನ್ನು ದುರುಪಯೋಗಪಡಿಸಿಕೊಂಡು ಐಎಎಸ್ ಅಧಿಕಾರಿಗಳ ಅಮಾನತು ಮಾಡಿದ್ದಾರೆ ಎಂದು ಟೀಕಿಸಿದರು. ಇದನ್ನೂ ಓದಿ: ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ ಘಟನೆ ಸರ್ಕಾರದ ಪ್ರಾಯೋಜಿತ ಕೊಲೆ: ಅರಗ ಜ್ಞಾನೇಂದ್ರ

    ಇದು ದಯಾನಂದ್‌ಗೆ ಸೀಮಿತವಾದ ವಿಚಾರವಲ್ಲ. ಇಡೀ ಪೊಲೀಸ್ ಇಲಾಖೆ ಮಾಡಿದ ಕಗ್ಗೊಲೆ. ಪೊಲೀಸರ ನೈತಿಕ ಸ್ಥೈರ್ಯವನ್ನೇ ಸಿದ್ದರಾಮಯ್ಯ ಕುಗ್ಗಿಸಿದ್ದಾರೆ. ಹೀಗೆ ಎಷ್ಟು ಜನರ ಮೇಲೆ ಕ್ರಮ ತೆಗೆದುಕೊಳ್ಳುತ್ತಾ ಹೋಗುತ್ತೀರಾ? ತೀರಾ ಅವಮಾನಕರ ರೀತಿಯಲ್ಲಿ ದಯಾನಂದ್ ಅವರನ್ನ ನಡೆಸಿಕೊಂಡಿದ್ದೀರಾ. ಅವರ ಮೇಲೆ ನಿಮಗೆ ಕೋಪ ಬಂದಿದ್ದರೆ ವರ್ಗಾವಣೆ ಮಾಡಬಹುದಿತ್ತು, ಕಡ್ಡಾಯ ರಜೆ ಮೇಲೆ ಕಳುಹಿಸಬಹುದಿತ್ತು. ಅದನ್ನ ಬಿಟ್ಟು ಅಮಾನತು ಮಾಡಿದ್ದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಐಪಿಎಲ್ ಏನು ರಾಜ್ಯ ಮತ್ತು ದೇಶದ ಪಂದ್ಯಾವಳಿನಾ? ಅದೊಂದು ಕ್ಲಬ್ ಪಂದ್ಯ ಅಷ್ಟೇ. ಅದಕ್ಕೆ ಡಿ.ಕೆ.ಶಿವಕುಮಾರ್ ಹೋಗಿದ್ದೇನು, ಮುತ್ತಿಕಿದ್ದೇನು, ಬಾವುಟ ಹಿಡಿದಿದ್ದೇನು. ಇದೆಲ್ಲಾ ಮುಖ್ಯಮಂತ್ರಿಗೆ ಗೊತ್ತಾಗಲಿಲ್ವಾ? ಕಾಂಗ್ರೆಸ್ ಹೈಕಮಾಂಡ್ ಬಿಗಿಯಾಗಿದ್ರೆ ಈ ಸಿಎಂ, ಡಿಸಿಎಂ, ಗೃಹ ಸಚಿವರನ್ನ ಅಧಿಕಾರದಿಂದ ಕೆಳಗಿಳಿಸಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಗೋವಿಂದರಾಜ್ ವಿರುದ್ಧ ಕ್ರಮ – ಅಷ್ಟಾದ್ರೂ ಜ್ಞಾನೋದಯ ಆಗಿದ್ದಕ್ಕೆ ಸರ್ಕಾರಕ್ಕೆ ಅಭಿನಂದನೆ: ಹೆಚ್‍ಡಿಕೆ ವ್ಯಂಗ್ಯ

    ಯಾವುದೊ ಆಫ್ರಿಕಾ ದೇಶದಲ್ಲಿ ಹೆಣಗಳನ್ನ ಹೊತ್ತುಕೊಂಡು ಹೋದ ರೀತಿಯಲ್ಲಿ ಬೆಂಗಳೂರಿನಲ್ಲಿ ಹೊತ್ತಿಕೊಂಡು ಹೋಗಲಾಗಿದೆ ಎಂದು ಟೀಕಿಸಿದರು.

  • ಆರ್‌ಸಿಬಿ ಗೆಲುವಿನ ನಶೆಯಲ್ಲಿ ತೇಲಿದ ಫ್ಯಾನ್ಸ್‌ – ಒಂದೇ ದಿನ 157 ಕೋಟಿ ಎಣ್ಣೆ ಸೇಲ್

    ಆರ್‌ಸಿಬಿ ಗೆಲುವಿನ ನಶೆಯಲ್ಲಿ ತೇಲಿದ ಫ್ಯಾನ್ಸ್‌ – ಒಂದೇ ದಿನ 157 ಕೋಟಿ ಎಣ್ಣೆ ಸೇಲ್

    ಬೆಂಗಳೂರು: ಐಪಿಎಲ್‌ 2025ರ (IPL 2025) ಟ್ರೋಫಿಗಾಗಿ ನಡೆದ ಮಂಗಳವಾರ ನಡೆದ ಪಂಜಾಬ್‌ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ (RCB) ಗೆಲುವಿನ ನಶೆಯಲ್ಲಿ ಫ್ಯಾನ್ಸ್‌ ತೇಲಾಡಿದ್ದಾರೆ. ಫೈನಲ್‌ ಮ್ಯಾಚ್‌ ದಿನ ರಾಜ್ಯದಲ್ಲಿ ದಾಖಲೆಯ ಮದ್ಯ ಮಾರಾಟವಾಗಿದೆ.

    ಜೂನ್ 3 ರಂದು, 1.48 ಲಕ್ಷ ಬಾಟಲ್ ಬಿಯರ್ ಬಾಕ್ಸ್‌ಗಳು ಮಾರಾಟವಾಗಿದ್ದು, 30.66 ಕೋಟಿ ರೂ. ವಹಿವಾಟು ನಡೆದಿದೆ. ಕಳೆದ ವರ್ಷ ಇದೇ ದಿನಾಂಕದಂದು ಕೇವಲ 0.36 ಲಕ್ಷ ಬಾಕ್ಸ್‌ಗಳು ಮಾರಾಟವಾಗಿ, 6.29 ಕೋಟಿ ರೂ. ಆದಾಯ ಬಂದಿತ್ತು. ಈ ಬಾರಿ ಆರ್‌ಸಿಬಿ ಫೈನಲ್‌ಗೆ ತಲುಪಿದ ಖುಷಿಯಲ್ಲಿದ್ದ ಫ್ಯಾನ್ಸ್‌ ಎಣ್ಣೆ ಕಿಕ್‌ನಲ್ಲಿ ಮಿಂದೆದ್ದಿದ್ದಾರೆ. ಇದನ್ನೂ ಓದಿ: ಐಪಿಎಲ್‌ ಟ್ರೋಫಿ ಒಳಗಡೆ ಏನಿದೆ – ಚೆಕ್‌ ಮಾಡಿ ನೋಡಿದ ಕೊಹ್ಲಿ

    ಬಿಯರ್‌ ಅಷ್ಟೇ ಅಲ್ಲ, ಇತರ ಆಲ್ಕೋಹಾಲ್‌ಯುಕ್ತ ಮದ್ಯಗಳು ಕೂಡ ಭರ್ಜರಿಯಾಗಿ ಸೇಲ್‌ ಆಗಿವೆ. 127.88 ಕೋಟಿ ರೂ. ಮೌಲ್ಯದ 1.28 ಲಕ್ಷ ಬಾಕ್ಸ್‌ಗಳು ಮಾರಾಟವಾಗಿವೆ. ಕಳೆದ ವರ್ಷ ಇದೇ ದಿನ ಮದ್ಯ ಮಾರಾಟದಿಂದ ಕೇವಲ 19.41 ಕೋಟಿ ರೂ.ಬಂದಿತ್ತು.

    ಒಟ್ಟಾರೆಯಾಗಿ, ಮಂಗಳವಾರ ಒಂದು ದಿನದಲ್ಲಿ ರಾಜ್ಯವು ಮದ್ಯ ಮಾರಾಟದಿಂದ 157.94 ಕೋಟಿ ರೂ. ಗಳಿಸಿದೆ. ಹಿಂದಿನ ವರ್ಷದ ಜೂನ್‌ 3 ರಂದು ಒಟ್ಟು 25 ಕೋಟಿ ರೂ. ಮಾತ್ರ ಬಂದಿತ್ತು. 132.24 ಕೋಟಿ ರೂ.ಗಳ ಹೆಚ್ಚಳವಾಗಿದೆ. ಇದನ್ನೂ ಓದಿ: ಆರ್‌ಸಿಬಿ ಫ್ಯಾನ್ಸ್‌ಗೆ ಚಾಂಪಿಯನ್ ಟ್ರೋಫಿ ತೋರಿಸಿ ಖುಷಿಪಟ್ಟ ಕಿಂಗ್ ಕೊಹ್ಲಿ

    ಐಪಿಎಲ್‌ ಪ್ರಾರಂಭವಾದ 18 ವರ್ಷಗಳ ನಂತರ ಇದು ಆರ್‌ಸಿಬಿಯ ಮೊದಲ ಐಪಿಎಲ್ ಗೆಲುವು. ಆರ್‌ಸಿಬಿ ಅಂತಿಮವಾಗಿ ಐಪಿಎಲ್ 2025 ಅನ್ನು ಗೆದ್ದಂತೆ, ಬೆಂಗಳೂರು ರೆಡ್‌ ಕಾರ್ಪೆಟ್‌ನಲ್ಲಿ ಮಿಂಚಿತು. ಅಭಿಮಾನಿಗಳು ಬೀದಿಗಿಳಿದು ‘ಆರ್‌ಸಿಬಿ.. ಕೊಹ್ಲಿ’, ‘ಈ ಸಲ ಕಪ್ ನಮ್ದು’ ಎಂದು ಘೋಷಣೆ ಕೂಗಿ ಸಂಭ್ರಮಿಸುತ್ತಿದ್ದಾರೆ. ರಜತ್ ಪಾಟಿದಾರ್ ನೇತೃತ್ವದ ಆರ್‌ಸಿಬಿ ಇಂದು ಬೆಂಗಳೂರಿಗೆ ಬಂದಿಳಿದಿದ್ದು, ವಿಜಯೋತ್ಸವ ಆಚರಿಸಲು ಮುಂದಾಗಿದೆ.

  • ಐಪಿಎಲ್‌ ಟ್ರೋಫಿ ಒಳಗಡೆ ಏನಿದೆ – ಚೆಕ್‌ ಮಾಡಿ ನೋಡಿದ ಕೊಹ್ಲಿ

    ಐಪಿಎಲ್‌ ಟ್ರೋಫಿ ಒಳಗಡೆ ಏನಿದೆ – ಚೆಕ್‌ ಮಾಡಿ ನೋಡಿದ ಕೊಹ್ಲಿ

    ಬೆಂಗಳೂರು: ಆರ್‌ಸಿಬಿ (RCB) ಐಪಿಎಲ್‌ (IPL) ಚಾಂಪಿಯನ್‌ ಆದ ಬಳಿಕ ವಿರಾಟ್‌ ಕೊಹ್ಲಿ (Virat Kohli) ಟ್ರೋಫಿ ಒಳಗಡೆ ನೋಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

    ಪ್ರಶಸ್ತಿ ವಿತರಣೆ ಕಾರ್ಯಕ್ರಮದ ಬಳಿಕ ಆಟಗಾರರು ಕಪ್‌ ಹಿಡಿದು ಮೈದಾನದಲ್ಲಿ ಸಂಭ್ರಮಿಸುತ್ತಿದ್ದರು. ಈ ಸಂದರ್ಭದಲ್ಲಿ ಕೊಹ್ಲಿ ಟ್ರೋಫಿಯ ಮುಚ್ಚಳವನ್ನು ತೆಗೆದು ಒಳಗಡೆ ಏನಿದೆ ಅಂತ ಚೆಕ್‌ ಮಾಡಿ ನಗುವನ್ನು ಹೊರಹಾಕಿದ್ದಾರೆ.

     

     

    ಕೋಟ್ಯಂತರ ಅಭಿಮಾನಿಗಳ ಪ್ರಾರ್ಥನೆ ಕೊನೆಗೂ ಈಡೇರಿದೆ. ಒಂದು ಬಾರಿಯಾದರೂ ಕಪ್‌ ಗೆಲ್ಲಬೇಕೆಂಬ 18 ವರ್ಷಗಳ ಕನಸು ಈ ಬಾರಿ ನನಸಾಗಿದೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ ಮೊದಲ ಬಾರಿಗೆ ಚಾಂಪಿಯನ್‌ ಪಟ್ಟ ಅಲಂಕರಿಸುವ ಮೂಲಕ ʻಈ ಸಲ ಕಪ್‌ ನಮ್ದೇʼ ಎಂದು ಹುರಿದುಂಬಿಸುತ್ತಿದ್ದ ಅಭಿಮಾನಿಗಳಿಗೆ ಗಿಫ್ಟ್‌ ನೀಡಿದೆ.

    2009, 2011, 2016ರ ಫೈನಲ್‌ ಪಂದ್ಯಗಳಲ್ಲಿ ಸೋತು ಭಾರೀ ನಿರಾಸೆ ಅನುಭವಿಸಿದ್ದ ಆರ್‌ಸಿಬಿ 4ನೇ ಬಾರಿ ಫೈನಲ್ ಕಂಟಕದಿಂದ ಮುಕ್ತಿ ಪಡೆದಿದೆ. ಅಹಮದಾಬಾದ್‌ನಲ್ಲಿ ನಡೆದ ಐಪಿಎಲ್‌ ಫೈನಲ್‌ನಲ್ಲಿ ಆರ್‌ಸಿಬಿ ಸಂಘಟಿತ ಪ್ರದರ್ಶನ ನೀಡಿ, ಪಂಜಾಬ್‌ ಕಿಂಗ್ಸ್ ತಂಡವನ್ನು ಮಣಿಸಿ, ಚೊಚ್ಚಲ ಬಾರಿಗೆ ಟ್ರೋಫಿಗೆ ಮುತ್ತಿಟ್ಟಿದೆ.

  • ಮಾರ್ಚ್‌ನಲ್ಲಿ ಸ್ಕ್ರಿಪ್ಟ್‌ ಬರೆದು ಜೂನ್‌ನಲ್ಲಿ ‘ಪಿಕ್ಚರ್‌’ ತೆಗೆದ ಜಿತೇಶ್‌ ಶರ್ಮಾ!

    ಮಾರ್ಚ್‌ನಲ್ಲಿ ಸ್ಕ್ರಿಪ್ಟ್‌ ಬರೆದು ಜೂನ್‌ನಲ್ಲಿ ‘ಪಿಕ್ಚರ್‌’ ತೆಗೆದ ಜಿತೇಶ್‌ ಶರ್ಮಾ!

    ಅಹಮದಾಬಾದ್‌: ಐಪಿಎಲ್‌ (IPL) ಆರಂಭವಾಗುವಾಗ ಡ್ರೆಸ್ಸಿಂಗ್‌ ರೂಮ್‌ನಲ್ಲಿ ಬರೆದ ಸ್ಕ್ರಿಪ್ಟ್‌ನಂತೆ ಜಿತೇಶ್‌ ಶರ್ಮಾ (Jitesh Sharma) ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

    ಮಾರ್ಚ್‌ನಲ್ಲಿ ಐಪಿಎಲ್‌ ಆರಂಭಗೊಂಡಿತ್ತು. ಈ ಸಂದರ್ಭದಲ್ಲಿ ಜಿತೇಶ್‌ ಶರ್ಮಾ ಡ್ರೆಸ್ಸಿಂಗ್‌ ಕೊಠಡಿಯಲ್ಲಿ, ಫೈನಲ್‌ನಲ್ಲಿ ಕೊನೆಯ 2 ಎಸೆತಗಳಲ್ಲಿ ಗೆಲುವಿಗೆ 6 ರನ್‌ ಬೇಕಿದ್ದಾಗ ನಾನು ಸಿಕ್ಸ್‌ ಹೊಡೆದು ಜಯ ತಂದುಕೊಡಬೇಕು. ನಾನು ಕಪ್‌ ಹಿಡಿದುಕೊಂಡಿರಬೇಕು. ನನ್ನ ಎಡ ಭಾಗದಲ್ಲಿ ವಿರಾಟ್‌ ಕೊಹ್ಲಿ (Virat Kohli) ಇದ್ದರೆ ಪಕ್ಕದಲ್ಲಿ ದಿನೇಶ್‌ ಕಾರ್ತಿಕ್‌ (Dinesh Karthik) ಇರಬೇಕು. 2025-26ರ ಋತುವಿನಲ್ಲಿ ಇದು ನಿಜವಾಗಲಿ ಎಂದು ಆಶಿಸಿದ್ದರು.

    ಜಿತೇಶ್‌ ಶರ್ಮಾ ಸಿಕ್ಸ್‌ ಹೊಡೆಯದಿದ್ದರೂ ಆರ್‌ಸಿಬಿ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದೆ. ಕನಸು ನನಸಾದ ಕಾರಣ ಈಗ ಕೊಹ್ಲಿ, ದಿನೇಶ್‌ ಕಾರ್ತಿಕ್‌ ಜೊತೆ ಕಪ್‌ ಹಿಡಿದುಕೊಂಡು ಜಿತೇಶ್‌ ಶರ್ಮಾ ಫೋಟೋ ತೆಗೆದುಕೊಂಡಿದ್ದಾರೆ.

    ವಿಕೆಟ್‌ ಕೀಪರ್‌ ಆಗಿರುವ ಜಿತೇಶ್‌ ಶರ್ಮಾ ಈ ಐಪಿಎಲ್‌ನ 15 ಪಂದ್ಯಗಳಿಂದ 261 ರನ್‌ ಹೊಡೆದಿದ್ದಾರೆ. ಫೈನಲ್‌ನಲ್ಲಿ 10 ಎಸೆತಗಳಲ್ಲಿ 24 ರನ್‌ ಹೊಡೆದಿದ್ದರು. ಅದರಲ್ಲೂ ಲಕ್ನೋ ವಿರುದ್ಧದ ಪಂದ್ಯದಲ್ಲಿ 33 ಎಸೆತಗಳಲ್ಲಿ 85 ರನ್‌(8 ಬೌಂಡರಿ, 6 ಸಿಕ್ಸ್‌) ಚಚ್ಚಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು.

  • ಆರ್‌ಸಿಬಿ ಹುಡುಗರು ಕರ್ನಾಟಕಕ್ಕೆ ಗೌರವ, ಹೆಮ್ಮೆ ತಂದಿದ್ದಾರೆ: ಡಿಕೆಶಿ

    ಆರ್‌ಸಿಬಿ ಹುಡುಗರು ಕರ್ನಾಟಕಕ್ಕೆ ಗೌರವ, ಹೆಮ್ಮೆ ತಂದಿದ್ದಾರೆ: ಡಿಕೆಶಿ

    ಬೆಂಗಳೂರು: ಆರ್‌ಸಿಬಿ (RCB) ಹುಡುಗರು ನಮ್ಮ ಕರ್ನಾಟಕಕ್ಕೆ ಗೌರವ ಹಾಗೂ ಹೆಮ್ಮೆ ತಂದಿದ್ದಾರೆ. ಅವರನ್ನು ಅಭಿನಂದಿಸುತ್ತೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಆರ್‌ಸಿಬಿ ತಂಡಕ್ಕೆ ಶುಭಾಶಯ ಕೋರಿದ್ದಾರೆ.

    ಐಪಿಎಲ್ ಫೈನಲ್ ಪಂದ್ಯದಲ್ಲಿ ಪಂಜಾಬ್ ಮಣಿಸಿ ಕಪ್ ಗೆದ್ದ ಆರ್‌ಸಿಬಿ ತಂಡದ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆರ್‌ಸಿಬಿ ತಂಡವನ್ನು ನಾವು ಗೌರವಿಸಬೇಕು. ಯಾವ ರೀತಿ ಅವರನ್ನು ಗೌರವಿಸಬೇಕು ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಟ್ರಾಫಿಕ್‌ಗೂ ಸಮಸ್ಯೆ ಆಗಬಾರದು, ಸಾಕಷ್ಟು ಯುವಕರು ಭಾಗವಹಿಸುತ್ತಾರೆ ಎಂದರು. ಇದನ್ನೂ ಓದಿ: ಮಧ್ಯಾಹ್ನ ಬೆಂಗಳೂರಿಗೆ ಚಾಂಪಿಯನ್ಸ್ – ಸಂಜೆ ವಿಜಯೋತ್ಸವ ಮೆರವಣಿಗೆ | ಎಷ್ಟು ಗಂಟೆಗೆ ಏನು?

    ಅವರು ಶೆಡ್ಯೂಲ್ ಹಾಕಿಕೊಳ್ಳುತ್ತಾರೆ. ಆದರೆ ಕಂಟ್ರೋಲ್ ಮಾಡೋದು ನಾವು. ಗೃಹ ಸಚಿವರು, ಪೊಲೀಸ್ ಕಮೀಷನರ್ ಎಲ್ಲಾ ಕೂತು ಮಾತನಾಡಿ ಈ ಬಗ್ಗೆ ನಿರ್ಧಾರ ಮಾಡುತ್ತಾರೆ. ನಾನು ಕೂಡ ಸಂಪೂರ್ಣ ಮ್ಯಾಚ್ ನೋಡಿದ್ದೇನೆ. ಆರ್‌ಸಿಬಿ ಟೀಂ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಅವರಿಗೆ ಸನ್ಮಾನ ಮಾಡುವ ಬಗ್ಗೆ ಮಾತನಾಡುತ್ತಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಇಂದು ಸಂಜೆ ಬೆಂಗಳೂರಿನಲ್ಲಿ ಆರ್‌ಸಿಬಿ ವಿಕ್ಟರಿ ಪರೇಡ್

  • ಕೊಹ್ಲಿಗೆ ಎಚ್ಚರಿಕೆ ನೀಡದ ಅಂಪೈರ್‌ಗಳ ವಿರುದ್ಧ ಗವಾಸ್ಕರ್ ಗರಂ

    ಕೊಹ್ಲಿಗೆ ಎಚ್ಚರಿಕೆ ನೀಡದ ಅಂಪೈರ್‌ಗಳ ವಿರುದ್ಧ ಗವಾಸ್ಕರ್ ಗರಂ

    ಅಹಮದಾಬಾದ್‌: ಪಂಜಾಬ್‌ (Punjab Kings) ವಿರುದ್ಧ ನಡೆದ ಫೈನಲ್‌ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ (Virat Kohli) ಅವರಿಗೆ ಎಚ್ಚರಿಕೆ ನೀಡದ್ದಕ್ಕೆ ಮಾಜಿ ಕ್ರಿಕೆಟಿಗ, ವೀಕ್ಷಕ ವಿವರಣೆಗಾರ ಸುನಿಲ್‌ ಗವಾಸ್ಕರ್ (Sunil Gavaskar) ಅವರು ಅಂಪೈರ್‌ಗಳನ್ನು ಟೀಕಿಸಿದ್ದಾರೆ.

    ವಿರಾಟ್‌ ಕೊಹ್ಲಿ ಹೆಚ್ಚು ಬೌಂಡರಿ, ಸಿಕ್ಸ್‌ ಹೊಡೆಯಲು ಹೋಗದೇ ವಿಕೆಟ್‌ ಉಳಿಸುವ ಮೂಲಕ ಸಿಂಗಲ್‌, ಡಬಲ್‌ ರನ್‌ ಓಡುತ್ತಿದ್ದರು. 12ನೇ ಓವರ್‌ನಲ್ಲಿ ಚಹಲ್‌ ಎಸೆದ ಎಸೆತವನ್ನು ಕೊಹ್ಲಿ ಲಾಂಗ್‌ ಅನ್‌ ಕಡೆಗೆ ತಳ್ಳಿದರು. ಕೊಹ್ಲಿ ಮತ್ತು ಲಿವಿಂಗ್‌ಸ್ಟೋನ್ ಎರಡು ರನ್‌ ಓಡಿದರು. ರನ್‌ ಓಡುವಾಗ ಕೊಹ್ಲಿ ಪಿಚ್‌ ಮೇಲೆ ನೇರವಾಗಿ ಓಡಿದ್ದರು.

    ಈ ವಿಚಾರವನ್ನು ಪ್ರಸ್ತಾಪ ಮಾಡಿದ ಗವಸ್ಕಾರ್‌, ಕೊಹ್ಲಿ ವಿಕೆಟ್‌ಗಳ ಮಧ್ಯೆ ವೇಗವಾಗಿ ಓಡುತ್ತಾರೆ. ಚೆಂಡನ್ನು ಹೊಡೆದ ತಕ್ಷಣವೇ ಇದರಲ್ಲಿ 2 ರನ್‌ ಬರುತ್ತದೆ ಎನ್ನುವುದು ಅವರಿಗೆ ತಿಳಿದಿತ್ತು ಎಂದು ಹೇಳಿದರು. ಮತ್ತೆ ತಮ್ಮ ವಿವರಣೆಯನ್ನು ಮುಂದುವರಿಸಿ, ಯಾವೊಬ್ಬ ಅಂಪೈರ್‌ ಕೊಹ್ಲಿಗೆ ಏನು ಹೇಳುವುದಿಲ್ಲ. ಅವರು ಮತ್ತೆ ಪಿಚ್‌ ಮೇಲೆ ನೇರವಾಗಿ ಓಡುತ್ತಿದ್ದಾರೆ. ಪಂಜಾಬ್ ಕಿಂಗ್ಸ್ ಮತ್ತೆ ಬ್ಯಾಟಿಂಗ್‌ ಮಾಡಬೇಕಿದೆ ಎಂದು ಎಂದು ಹೇಳುವ ಮೂಲಕ ಎಚ್ಚರಿಕೆ ನೀಡದ ಅಂಪೈರ್‌ಗಳನ್ನು ಟೀಕಿಸಿದರು. ಇದನ್ನೂ ಓದಿ: IPL Champions | ಟ್ರೋಫಿ ಗೆದ್ದ ಬೆನ್ನಲ್ಲೇ ಐಪಿಎಲ್‌ ನಿವೃತ್ತಿ ಬಗ್ಗೆ ಕೊಹ್ಲಿ ಹೇಳಿದ್ದೇನು?

    ಕ್ರಿಕೆಟ್‌ನಲ್ಲಿ ರನ್‌ ಓಡುವಾಗ ಬ್ಯಾಟರ್‌ಗಳು ಪಿಚ್‌ ಮೇಲೆ ಓಡುವಂತಿಲ್ಲ. ಪಿಚ್‌ ಮೇಲೆ ಓಡಿದ್ದರೆ ಅದು ಹಾಳಾಗಿ ಬೌಲಿಂಗ್‌ಗೆ ಸಮಸ್ಯೆ ಆಗುತ್ತದೆ. ಒಂದು ವೇಳೆ ಬ್ಯಾಟರ್‌ಗಳು ಪಿಚ್‌ ಮೇಲೆ ಓಡಿದ್ದರೆ ಅಂಪೈರ್‌ಗಳು ಎಚ್ಚರಿಕೆ ನೀಡುತ್ತಾರೆ. ಇದನ್ನೂ ಓದಿ: UnSold ಪ್ಲೇಯರ್‌, ಟೂರ್ನಿ ಅರ್ಧದಲ್ಲೇ ಸೇರ್ಪಡೆ, ಸ್ಫೋಟಕ ಶತಕ ಸಿಡಿಸಿ ದಾಖಲೆ – ಈಗ ಆರ್‌ಸಿಬಿಯ ಯಶಸ್ವಿ ನಾಯಕ

    ಫೈನಲ್‌ ಪಂದ್ಯದಲ್ಲಿ ಕೊಹ್ಲಿ 43 ರನ್‌(35 ಎಸೆತ, 3 ಬೌಂಡರಿ) ಹೊಡೆದಿದ್ದರು. ಈ ಟೂರ್ನಿಯಲ್ಲಿ ಕೊಹ್ಲಿ 15 ಪಂದ್ಯಗಳಿಂದ 657 ರನ್‌ ಹೊಡೆಯುವ ಮೂಲಕ ಅತಿ ಹೆಚ್ಚು ರನ್‌ ಹೊಡೆದ ಬ್ಯಾಟರ್‌ಗಳ ಪೈಕಿ 3ನೇ ಸ್ಥಾನ ಪಡೆದಿದ್ದು ಒಟ್ಟು 8 ಅರ್ಧಶತಕ ಹೊಡೆದಿದ್ದಾರೆ.

    2008 ರಿಂದ ಆರ್‌ಸಿಬಿ ತಂಡದಲ್ಲೇ ಆಡುತ್ತಿರುವ ಕೊಹ್ಲಿ 267 ಪಂದ್ಯಗಳಿಂದ 8,661 ರನ್‌ ಹೊಡೆದಿದ್ದಾರೆ. 8 ಶತಕ, 63 ಬಾರಿ ಅರ್ಧಶತಕ ಬಾರಿಸಿದ್ದಾರೆ.

  • UnSold ಪ್ಲೇಯರ್‌, ಟೂರ್ನಿ ಅರ್ಧದಲ್ಲೇ ಸೇರ್ಪಡೆ, ಸ್ಫೋಟಕ ಶತಕ ಸಿಡಿಸಿ ದಾಖಲೆ – ಈಗ ಆರ್‌ಸಿಬಿಯ ಯಶಸ್ವಿ ನಾಯಕ

    UnSold ಪ್ಲೇಯರ್‌, ಟೂರ್ನಿ ಅರ್ಧದಲ್ಲೇ ಸೇರ್ಪಡೆ, ಸ್ಫೋಟಕ ಶತಕ ಸಿಡಿಸಿ ದಾಖಲೆ – ಈಗ ಆರ್‌ಸಿಬಿಯ ಯಶಸ್ವಿ ನಾಯಕ

    ಬೆಂಗಳೂರು: ಅನ್‌ಸೋಲ್ಡ್‌ ಪ್ಲೇಯರ್‌, ಟೂರ್ನಿ ಅರ್ಧದಲ್ಲೇ ಆರ್‌ಸಿಬಿ ಸೇರ್ಪಡೆ, ಸ್ಫೋಟಕ ಶತಕ ಸಿಡಿಸಿ ನಾಯಕ ಪಟ್ಟ ಅಲಂಕರಿಸಿದ್ದ ರಜತ್‌ ಪಾಟಿದಾರ್‌ ಆರ್‌ಸಿಬಿಯ ಯಶಸ್ವಿ ನಾಯಕನಾಗಿ ಹೊರಹೊಮ್ಮಿದ್ದಾರೆ.

    ಸಾಧನೆಯ ಜೊತೆ ಅದೃಷ್ಟ ಇದ್ದರೆ ವ್ಯಕ್ತಿಯ ಹುದ್ದೆ ಹೇಗೆ ಬೇಕಾದರೂ ಬದಲಾಗಬಹುದು ಎನ್ನುವುದಕ್ಕೆ ರಜತ್‌ ಪಾಟಿದಾರ್‌ ಸಾಕ್ಷಿ.ಟೂರ್ನಿಯ ಅರ್ಧದಲ್ಲೇ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡವನ್ನು ಸೇರಿದ್ದ ರಜತ್‌ ಪಾಟಿದಾರ್‌ (Rajat Patidar) ಮೊದಲ ಬಾರಿ ತಂಡವನ್ನು ಮುನ್ನಡೆಸಿ ಚಾಂಪಿಯನ್‌ ಆಗಿ ಮಾಡಿದ್ದಾರೆ.

    2021 ರಲ್ಲಿ ಆರ್‌ಸಿಬಿ ತಂಡವನ್ನು ಸೇರಿದ್ದ ರಜತ್‌ ಕೇವಲ 4 ಪಂದ್ಯದಲ್ಲಿ 71 ರನ್‌ ಹೊಡೆದಿದ್ದರು. ಕಳಪೆ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ಆರ್‌ಸಿಬಿ ಅವರನ್ನು ಕೈಬಿಟ್ಟಿತ್ತು. 2022ರ ಹರಾಜಿನಲ್ಲಿ ಯಾವುದೇ ತಂಡ ರಜತ್‌ ಅವರನ್ನು ಖರೀದಿಸದ ಕಾರಣ ಅಲ್‌ಸೋಲ್ಡ್‌ ಆಗಿದ್ದರು. ಇದನ್ನೂ ಓದಿ: ನನ್ನ ಹೃದಯ, ಆತ್ಮ ಬೆಂಗಳೂರಿಗಾಗಿ… ಐಪಿಎಲ್‌ ಆಡುವ ಕೊನೇ ದಿನದವರೆಗೂ ಇದೇ ತಂಡಕ್ಕಾಗಿ ಆಡ್ತೀನಿ – ಕೊಹ್ಲಿ ಭಾವುಕ

    2022ರ ಆವೃತ್ತಿಯಲ್ಲಿ ಕರ್ನಾಟಕದ ಲುವ್ನಿತ್ ಸಿಸೋಡಿಯಾ (Luvnith Sisodia) ಗಂಭೀರವಾಗಿ ಗಾಯಗೊಳ್ಳುತ್ತಾರೆ. ಇವರ ಜಾಗಕ್ಕೆ ಯಾರನ್ನು ಖರೀದಿಸಬೇಕು ಎಂದು ಯೋಚನೆಯಲ್ಲಿದ್ದಾಗ ಆರ್‌ಸಿಬಿಗೆ ಹೊಳೆದದ್ದೇ ರಜತ್‌ ಪಾಟಿದಾರ್‌ ಹೆಸರು. ಹೀಗಾಗಿ ಟೂರ್ನಿಯ ಅರ್ಧದಲ್ಲಿ ರಜತ್‌ ಮತ್ತೆ ಆರ್‌ಸಿಬಿ ತಂಡವನ್ನು ಸೇರುತ್ತಾರೆ.

    20 ಲಕ್ಷ ರೂ. ಮೂಲ ಬೆಲೆಯೊಂದಿಗೆ ಆರ್‌ಸಿಬಿಗೆ ಮರಳಿ ಬಂದ ನಂತರ ರಜತ್‌ ಸ್ಫೋಟಕ ಆಟವನ್ನು ಪ್ರದರ್ಶಿಸುತ್ತಾರೆ. ಅದರಲ್ಲೂ ಎಲಿಮಿನೇಟರ್‌ ಪಂದ್ಯದಲ್ಲಿ ರಜತ್‌ ಲಕ್ನೋ ವಿರುದ್ಧ ಕೇವಲ 54 ಎಸೆತಗಳಲ್ಲಿ 112 ರನ್‌ ( 12 ಬೌಂಡರಿ,7 ಸಿಕ್ಸ್‌) ಹೊಡೆದು ದಾಖಲೆ ನಿರ್ಮಿಸಿದ್ದರು. ಈ ಪಂದ್ಯವನ್ನು ಆರ್‌ಸಿಬಿ ರೋಚಕ 14 ರನ್‌ಗಳಿಂದ ಗೆದ್ದುಕೊಳ್ಳುತ್ತದೆ. ಈ ಮೂಲಕ ಭಾರತ ತಂಡ ಸೇರದೇ ಶತಕ ಹೊಡೆದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ರಜತ್‌ ಪಾತ್ರವಾಗುತ್ತಾರೆ.

    2024 ರಲ್ಲಿ ಆರ್‌ಸಿಬಿ ವಿರಾಟ್‌ ಕೊಹ್ಲಿ, ರಜತ್‌ ಪಾಟಿದಾರ್‌, ಯಶ್‌ ದಯಾಳ್‌ ಅವರನ್ನು ಉಳಿಸಿಕೊಂಡಿತ್ತು. ನಾಯಕನಾಗಿದ್ದ ಡುಪ್ಲೆಸಿಸ್‌ ಅವರನ್ನು ಕೈ ಬಿಟ್ಟು ರಜತ್‌ ಪಾಟಿದರ್‌ ಅವರನ್ನು 11 ಕೋಟಿ ರೂ. ನೀಡಿ ಉಳಿಸಿಕೊಂಡಾಗ ಈ ಬಾರಿ ಆರ್‌ಸಿಬಿ ನಾಯಕನಾಗುತ್ತಾರಾ ಎಂಬ ಪ್ರಶ್ನೆ ಆಗಲೇ ಎದ್ದಿತ್ತು. ಆದರೆ ವಿರಾಟ್‌ ಕೊಹ್ಲಿ ಅವರನ್ನು ಉಳಿಸಿಕೊಂಡಿರುವಾಗ ಯಾರು ನಾಯಕನಾಗಬಹುದು ಎಂಬ ಕುತೂಹಲ ಮೂಡಿತ್ತು. ಕೊನೆಗೆ ಆರ್‌ಸಿಬಿ ತಂಡ ರಜತ್‌ಗೆ ಕ್ಯಾಪ್ಟನ್‌ ಪಟ್ಟ ನೀಡಿತ್ತು.

    ನಾಯಕ ಸ್ಥಾನಕ್ಕೆ ನ್ಯಾಯ ನೀಡಿದ ಪಾಟಿದಾರ್‌ ಈ ಬಾರಿಯ 15 ಪಂದ್ಯಗಳಿಂದ 312 ರನ್‌ ಹೊಡೆದಿದ್ದಾರೆ. 143.78 ಸ್ಟ್ರೈಕ್‌ ರೇಟ್‌ನಲ್ಲಿ2 ಬಾರಿ ಅರ್ಧಶತಕ ಹೊಡೆದಿದ್ದಾರೆ. ರಜತ್‌ ಪಾಟಿದಾರ್‌ ಒಟ್ಟು 42 ಐಪಿಎಲ್‌ ಪಂದ್ಯ ಆಡಿದ್ದು ಒಟ್ಟು 1111 ರನ್‌ ಹೊಡೆದಿದ್ದಾರೆ.

    ಯಾವ ವರ್ಷ ಎಷ್ಟು ರನ್‌?
    2021 – 4 ಪಂದ್ಯ, 71 ರನ್‌
    2022 – 8 ಪಂದ್ಯ, 333 ರನ್‌
    2024 – 15 ಪಂದ್ಯ, 395 ರನ್‌
    2025 – 15 ಪಂದ್ಯ, 312 ರನ್‌

  • IPL Champions | ಟ್ರೋಫಿ ಗೆದ್ದ ಬೆನ್ನಲ್ಲೇ ಐಪಿಎಲ್‌ ನಿವೃತ್ತಿ ಬಗ್ಗೆ ಕೊಹ್ಲಿ ಹೇಳಿದ್ದೇನು?

    IPL Champions | ಟ್ರೋಫಿ ಗೆದ್ದ ಬೆನ್ನಲ್ಲೇ ಐಪಿಎಲ್‌ ನಿವೃತ್ತಿ ಬಗ್ಗೆ ಕೊಹ್ಲಿ ಹೇಳಿದ್ದೇನು?

    ಅಹಮದಾಬಾದ್‌: ಇಡೀ ದೇಶಾದ್ಯಂತ ಕೋಟ್ಯಂತರ ಅಭಿಮಾನಿಗಳು ಆರ್‌ಸಿಬಿ (RCB) ಟ್ರೋಫಿ ಗೆದ್ದ ಖುಷಿಯಲ್ಲಿದ್ದಾರೆ. ಪಟಾಕಿ ಸಿಡಿಸಿ, ಸಿಹಿ ಹಂಚಿ, ಬೇಡಿಕೆ ಈಡೇರಿಸಿದ ದೇವರುಗಳಿಗೆ ಪೂಜೆ ಸಲ್ಲಿಸಿದ್ದಾರೆ. ಅಲ್ಲದೇ ಆರ್‌ಸಿಬಿ ಅಭಿಮಾನಿಗಳ ಸಾಮ್ರಾಜ್ಯ ಕಟ್ಟಿದ ಕೊಹ್ಲಿಗೂ ಧನ್ಯವಾದ ಹೇಳ್ತಿದ್ದಾರೆ. ಈ ನಡುವೆ ನಿವೃತ್ತಿ ಬಗ್ಗೆ ಕೇಳಿದ ಪ್ರಶ್ನೆಯೊಂದಕ್ಕೆ ಕೊಹ್ಲಿ (Virat Kohli) ಉತ್ತರಿಸಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಸದ್ಯಕ್ಕೆ ನಿವೃತ್ತಿ ಇಲ್ಲ ಎನ್ನುವ ಗುಡ್‌ನ್ಯೂಸನ್ನೂ ಕೊಟ್ಟಿದ್ದಾರೆ.

    ನಿವೃತ್ತಿಯ ಕುರಿತು ಸಂದರ್ಶಕರೊಬ್ಬರು ಕೇಳಿದ ಪ್ರಶ್ನೆಗೆ, ನನಗೆ ಈ ಆಟ ಆಡಲು ಇನ್ನೂ ಕೆಲ ವರ್ಷಗಳ ಅವಕಾಶವಿದೆ. ನಿವೃತ್ತಿಗೆ ಇನ್ನೂ ಸಮಯವಿದೆ. ಅದಕ್ಕೂ ಮೊದಲು ನನ್ನಲ್ಲಿರುವ ಸಂಪೂರ್ಣ ಆಟ ಆಡಲು ಭಯಸುತ್ತೇನೆ. ಕೊನೆಗೂ ನನ್ನ ಮಡಿಲಿಗೆ ಕಪ್ ಕೊಟ್ಟಿದ್ದಕ್ಕೆ ಆ ದೇವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: IPL Champions | ಚುಟುಕು ಕದನದಲ್ಲಿ ಈವರೆಗೆ ಚಾಂಪಿಯನ್ಸ್‌ ಪಟ್ಟ ಗೆದ್ದವರ ಕಂಪ್ಲೀಟ್‌ ಲಿಸ್ಟ್‌ ಇಲ್ಲಿದೆ…

    ಅಲ್ಲದೇ… ನಾನು ಈ ರಾತ್ರಿ ಮಗುವಿನಂತೆ ಮಲಗುತ್ತೇನೆ ಎಂದು ಹೇಳಿದ್ದರಲಲ್ದೇ… ನನ್ನ ಹೃದಯ, ಆತ್ಮ ಎರಡೂ ಬೆಂಗಳೂರಿಗಾಗಿಯೇ.. ಐಪಿಎಲ್‌ ಆಡುವ ಕೊನೇ ದಿನದವರೆಗೂ ಇದೇ ತಂಡಕ್ಕಾಗಿ ಆಡುತ್ತೇನೆ ಎಂದು ಭಾವುಕವಾಗಿ ನುಡಿದರು. ಇದನ್ನೂ ಓದಿ: ನಮ್ಮ ಬೆಂಗಳೂರು ಕಾಯುತ್ತಿದೆ… ಕಪ್‌ ಗೆದ್ದ ಸಂಭ್ರಮವನ್ನ ಅಭಿಮಾನಿಗಳೊಟ್ಟಿಗೆ ಆನಂದಿಸಬೇಕು – ಬೆಂಗ್ಳೂರು ಮರೆಯದ ಕೊಹ್ಲಿ

    ನಾನು ಪ್ರಭಾವಿ ಆಟಗಾರನಾಗಿ ಆಡಲು ಬಯಸುವುದಿಲ್ಲ, ನಾನು ಫೀಲ್ಡಿಂಗ್ ಮಾಡಿ ಪ್ರಭಾವ ಬೀರಲು ಬಯಸುತ್ತೇನೆ ಎಂದರಲ್ಲದೇ, ಈ ಗೆಲುವು ತಂಡಕ್ಕೆ ಎಷ್ಟು ಮುಖ್ಯವೋ ಅಭಿಮಾನಿಗಳಿಗೂ ಅಷ್ಟೇ ಮುಖ್ಯವಾಗಿತ್ತು. 18 ವರ್ಷಗಳು ಕಳೆದಿವೆ. ಈ ಬಾರಿ ನಾನು ನನ್ನ ಯೌವನವನ್ನು ಮರೆತು ನನ್ನ ಅತ್ಯುನ್ನತೆಯ ಆಟವನ್ನು ನೀಡಿದ್ದೇನೆ. ನನ್ನಲ್ಲಿರುವ ಎಲ್ಲವನ್ನೂ ನಾನು ಅದಕ್ಕೆ ನೀಡಿದ್ದೇನೆ. ಈ ದಿನ ಬರುತ್ತದೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ. ಕೊನೆಯ ಚೆಂಡು ಎಸೆದ ತಕ್ಷಣ ಭಾವುಕನಾಗಿದ್ದೆ. ಈ ಫ್ರಾಂಚೈಸಿಗಾಗಿ ಅವರು (ಎಬಿ ಡಿವಿಲಿಯರ್ಸ್) ತುಂಬಾ ಮಾಡಿದ್ದಾರೆ. ಇದನ್ನೂ ಓದಿ:  ನನ್ನ ಹೃದಯ, ಆತ್ಮ ಬೆಂಗಳೂರಿಗಾಗಿ… ಐಪಿಎಲ್‌ ಆಡುವ ಕೊನೇ ದಿನದವರೆಗೂ ಇದೇ ತಂಡಕ್ಕಾಗಿ ಆಡ್ತೀನಿ – ಕೊಹ್ಲಿ ಭಾವುಕ

    ನಮ್ಮ ನಗರ ಸಂಭ್ರಮಿಸಲು ಕಾಯುತ್ತಿದೆ
    ಬಳಿಕ ಕಪ್‌ ಗೆದ್ದ ಸಂಭ್ರಮದಲ್ಲೂ ಬೆಂಗಳೂರನ್ನು ಮರೆಯದ ಕೊಹ್ಲಿ… ಕಪ್‌ ಗೆದ್ದ ಸಂಭ್ರಮವನ್ನ ಅಭಿಮಾನಿಗಳ ಜೊತೆಗೆ ಆನಂದಿಸಬೇಕು. ನಮ್ಮ ನಗರ ಸಂಭ್ರಮಿಸಲು ಕಾಯುತ್ತಿದೆ ಅಂತ ನೆನಪಿಸಿಕೊಂಡರು. ಯಾರೋ ಒಬ್ಬರು ಬೆಂಗಳೂರಿನ ಒಂದು ವಿಡಿಯೋ ಕಳಿಸಿದ್ರು, ಇಡೀ ನಗರ ಪಟಾಕಿ ಸಿಡಿಸಿ ಸಂಭ್ರಮಿಸುತ್ತು. ಆ ಅನುಭವವೇ ಬೇರೆ ಅದನ್ನು ಹೇಳಲು ಆಗುವುದಿಲ್ಲ, ಅನುಭವಿಸಬೇಕು ಅಂತ ಹೇಳಿದ್ರು. ಈ ಮೂಲಕ ಬೆಂಗಳೂರಿನಲ್ಲಿ ಸಂಭ್ರಮಾಚಣೆ ನಡೆಸುವ ಸುಳಿವುಕೊಟ್ಟರು.

    ಕೋಟ್ಯಂತರ ಅಭಿಮಾನಿಗಳ ಪ್ರಾರ್ಥನೆ ಕೊನೆಗೂ ಈಡೇರಿದೆ. ಒಂದು ಬಾರಿಯಾದರೂ ಕಪ್‌ ಗೆಲ್ಲಬೇಕೆಂಬ 18 ವರ್ಷಗಳ ಕನಸು ಈ ಬಾರಿ ನನಸಾಗಿದೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ ಮೊದಲ ಬಾರಿಗೆ ಚಾಂಪಿಯನ್‌ ಪಟ್ಟ ಅಲಂಕರಿಸುವ ಮೂಲಕ ʻಈ ಸಲ ಕಪ್‌ ನಮ್ದೇʼ ಎಂದು ಹುರಿದುಂಬಿಸುತ್ತಿದ್ದ ಅಭಿಮಾನಿಗಳಿಗೆ ಗಿಫ್ಟ್‌ ನೀಡಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಫೈನಲ್‌ ಪಂದ್ಯದಲ್ಲಿ ಆರ್‌ಸಿಬಿ 6 ರನ್‌ಗಳಿಂದ ಗೆಲುವು ಸಾಧಿಸಿತು. ಇದರೊಂದಿಗೆ ಮೊದಲ ಬಾರಿಗೆ ಟ್ರೋಫಿ ಮುಡಿಗೇರಿಸಿಕೊಂಡಿತು.

  • IPL 2025; ಆರ್‌ಸಿಬಿ ಗೆಲುವು ಸಾಧಿಸುತ್ತಿದ್ದಂತೆ ಎದ್ದು ಕುಣಿದು ಕುಪ್ಪಳಿಸಿದ ಬ್ರಿಟನ್‌ ಮಾಜಿ ಪ್ರಧಾನಿ

    IPL 2025; ಆರ್‌ಸಿಬಿ ಗೆಲುವು ಸಾಧಿಸುತ್ತಿದ್ದಂತೆ ಎದ್ದು ಕುಣಿದು ಕುಪ್ಪಳಿಸಿದ ಬ್ರಿಟನ್‌ ಮಾಜಿ ಪ್ರಧಾನಿ

    ಅಹಮದಾಬಾದ್: ಪಂಜಾಬ್‌ ವಿರುದ್ಧ ಐಪಿಎಲ್‌ ಫೈನಲ್‌ ಪಂದ್ಯ ವೀಕ್ಷಣೆಗೆ ಅಹಮದಾಬಾದ್‌ಗೆ ಆಗಮಿಸಿದ್ದ ಬ್ರಿಟನ್‌ ಮಾಜಿ ಪ್ರಧಾನಿ ಹಾಗೂ ಬೆಂಗಳೂರಿನ ಅಳಿಯ ರಿಷಿ ಸುನಕ್‌ (Rishi Sunak) ಅವರು ಆರ್‌ಸಿಬಿ (RCB) ಗೆಲುವು ದಾಖಲಿಸುತ್ತಿದ್ದಂತೆ ಕುಣಿದು ಕುಪ್ಪಳಿಸಿದರು.

    ಪತ್ನಿ ಅಕ್ಷತಾ ಮೂರ್ತಿ ಅವರೊಂದಿಗೆ ರಿಷಿ ಸುನಕ್‌ ಅವರು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಐಪಿಎಲ್‌ ಫೈನಲ್‌ ಪಂದ್ಯ ವೀಕ್ಷಿಸಿದರು. ಮ್ಯಾಚ್‌ನ ಆರಂಭದಿಂದಲೂ ಕೊನೆಯ ವರೆಗೂ ಹುರುಪಿನಿಂದಲೇ ಪಾಲ್ಗೊಂಡಿದ್ದರು. ಇದನ್ನೂ ಓದಿ: ಲಾಯಲ್‌ ಫ್ಯಾನ್ಸ್‌ಗಾಗಿ ರಾಯಲ್‌ ಗೆಲುವು – ಎಲ್ಲೆಡೆ ಆರ್‌ಸಿಬಿ ಗೆಲುವನ್ನು ಸಂಭ್ರಮಿಸಿ ಮೆರೆದಾಡಿದ ಫ್ಯಾನ್ಸ್‌

    ಆರ್‌ಸಿಬಿ ಬ್ಯಾಟರ್‌ಗಳು ಸಿಕ್ಸ್‌, ಫೋರ್‌ ಹೊಡೆದಾಗಲೆಲ್ಲ ರಿಷಿ ಸುನಕ್‌ ಅವರು ಎದ್ದು ಜೋಶ್‌ನಲ್ಲಿ ಸಂಭ್ರಮಿಸುತ್ತಿದ್ದರು. ಹಾಗೆಯೇ ಬೌಲಿಂಗ್‌ ವೇಳೆ ಪಂಜಾಬ್‌ ವಿಕೆಟ್‌ ಬೀಳುತ್ತಿದ್ದಾಗಲೂ ಖುಷಿ ವ್ಯಕ್ತಪಡಿಸುತ್ತಿದ್ದರು. ಅವರ ಜೊತೆ ಐಸಿಸಿ ಅಧ್ಯಕ್ಷ ಜಯ್‌ ಶಾ ಕೂಡ ಇದ್ದರು.

    ನಾನು ಬೆಂಗಳೂರಿನ ಅಳಿಯ. ಆರ್‌ಸಿಬಿಗೂ ನನಗೂ ಬಿಡಿಸಲಾಗದ ನಂಟಿದೆ. ವಿರಾಟ್‌ ಕೊಹ್ಲಿ ನನ್ನ ಫೇವರಿಟ್‌ ಎಂದು ಈ ಹಿಂದೆ ರಿಷಿ ಸುನಕ್‌ ಹೇಳಿಕೊಂಡಿದ್ದರು. ಇನ್ಫೋಸಿಸ್‌ನ ನಾರಾಯಣ ಮೂರ್ತಿ ಮತ್ತು ಸುಧಾಮೂರ್ತಿ ಅವರ ಪುತ್ರಿಯನ್ನು ವಿವಾಹವಾದಾಗಿನಿಂದಲೂ ರಿಷಿ ಸುನಕ್‌ ಅವರಿಗೆ ಆರ್‌ಸಿಬಿ ಮೇಲೆ ವಿಶೇಷ ಆಸಕ್ತಿ. ಅಲ್ಲಿಂದಲೇ ಅವರಿಗೆ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಒಲವು ಹೆಚ್ಚಾಗಿದ್ದು. ಇದನ್ನೂ ಓದಿ: ಚೊಚ್ಚಲ ಟ್ರೋಫಿ ಗೆದ್ದ ಆರ್‌ಸಿಬಿಗೆ ಸಿಕ್ಕ ಬಹುಮಾನ ಎಷ್ಟು..? – ಇಲ್ಲಿದೆ ಕಂಪ್ಲೀಟ್‌ ಲಿಸ್ಟ್‌…

    ಫೈನಲ್‌ ಪಂದ್ಯ ಆರಂಭಕ್ಕೂ ಮುನ್ನ ಆರ್‌ಸಿಬಿಗೆ ಬ್ರಿಟನ್‌ ಮಾಜಿ ಪ್ರಧಾನಿ ವಿಶ್‌ ಮಾಡಿದ್ದರು. ಅಷ್ಟೇ ಅಲ್ಲದೇ, ಭಾರತಕ್ಕೆ ಆಗಮಿಸಿ ಸ್ಟೇಡಿಯಂನಲ್ಲಿ ಪಂದ್ಯ ವೀಕ್ಷಿಸಿದ್ದು ವಿಶೇಷವಾಗಿತ್ತು.