Tag: ಐಪಿಎಲ್

  • ತವರಲ್ಲಿ RCBಗೆ ಹೀನಾಯ ಸೋಲು – SRHಗೆ 25 ರನ್‌ಗಳ ಗೆಲುವು

    ತವರಲ್ಲಿ RCBಗೆ ಹೀನಾಯ ಸೋಲು – SRHಗೆ 25 ರನ್‌ಗಳ ಗೆಲುವು

    – ಕೆಕೆಆರ್‌ ದಾಖಲೆ ಉಡೀಸ್‌ ಮಾಡಿದ ಹೈದರಾಬಾದ್ ತಂಡ

    ಬೆಂಗಳೂರು: ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ (RCB) ಹಾಗೂ ಎಸ್​​ಆರ್​ಹೆಚ್ (SRH) ತಂಡಗಳ ನಡುವಿನ ಐಪಿಎಲ್‌ (IPL 2024) ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ 25 ರನ್‌ಗಳ ಗೆಲುವು ಸಾಧಿಸಿದೆ.

    ಟಾಸ್‌ ಗೆದ್ದ ಆರ್‌ಸಿಬಿ ಬೌಲಿಂಗ್‌ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್‌ ಬೀಸಿದ ಎಸ್​​ಆರ್​ಹೆಚ್ ತಂಡ ನಿಗದಿತ 20 ಓವರ್‌ಗಳಲ್ಲಿ ಮೂರು ವಿಕೆಟ್‌ ನಷ್ಟಕ್ಕೆ 287 ರನ್‌ ಗಳಿಸಿತು.   ಈ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 262 ರನ್‌ಗಳನ್ನು ಮಾತ್ರ ಕಲೆ ಹಾಕಿತು. ಇದನ್ನೂ ಓದಿ: RCBಗೆ ‘ಹೆಡ್ಡೇಕ್’- ತನ್ನದೇ ದಾಖಲೆ ಮುರಿದು IPLನಲ್ಲಿ ಮತ್ತೆ ಇತಿಹಾಸ ನಿರ್ಮಿಸಿದ ಹೈದರಾಬಾದ್

    ಆರ್‌ಸಿಬಿ ಪರ ಬ್ಯಾಟ್‌ ಬೀಸಿದ ಕೊಹ್ಲಿ 20 ಎಸೆತಗಳಲ್ಲಿ 42 ರನ್‌ ಗಳಿಸಿ ಔಟಾದರು. 4 ಎಸೆತಗಳಲ್ಲಿ 7 ರನ್‌ ಗಳಿಸಿದ ವಿಲ್‌ ಜಾಕ್ವೆಸ್ ಮತ್ತೊಂದು ರನ್‌ ಗಳಿಸುವ ಯತ್ನದಲ್ಲಿ ರನ್‌ ಔಟ್‌ ಆದರು. . ರಜತ್ ಪಾಟಿದಾರ್ 5 ಎಸೆತಗಳಲ್ಲಿ 9 ರನ್‌ ಕಲೆ ಹಾಕಿ ಪೆವಿಲಿಯನ್‌ಗೆ ಮರಳಿದರು. ನಾಯಕ ಫಾಫ್ ಡುಪ್ಲೆಸಿಸ್ 28 ಎಸೆತಗಳಲ್ಲಿ 7 ಬೌಂಡರಿ 4 ಸಿಕ್ಸ್‌ ಸಿಡಿಸಿ 62 ರನ್‌ಗಳನ್ನು ಕಲೆ ಹಾಕಿ ವಿಕೆಟ್‌ ಒಪ್ಪಿಸಿದರು. ಮಹಿಪಾಲ್ ಲೊಮ್ರೋರ್ 11 ಎಸೆತಗಳಿಗೆ 19 ರನ್‌ ಗಳಿಸಿ ಔಟಾದರು. 35 ಎಸೆತಗಳಲ್ಲಿ 7 ಸಿಕ್ಸ್‌ ಹಾಗೂ 5 ಬೌಂಡರಿ ಸಿಡಿಸಿದ ದಿನೇಶ್‌ ಕಾರ್ತಿಕ್‌ 83 ರನ್‌ ಗಳಿಸಿ ಶತಕ ವಂಚಿತರಾದರು. ಅರ್ಜುನ್‌ ರಾವತ್‌ 14 ಎಸೆತಗಳಲ್ಲಿ 25 ಹಾಗೂ ವಿಜಯಕುಮಾರ್‌ ವೈಶಾಕ್‌ 2 ಎಸೆತಗಳಲ್ಲಿ ಒಂದು ರನ್‌ ಕಲೆಹಾಕಿದರು.

    ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರ ಆರಂಭಿಕ ಆಟಗಾರ ಅಭಿಷೇಕ್ 22 ಎಸೆತಗಳಲ್ಲಿ ತಲಾ 2 ಬೌಂಡರಿ ಹಾಗೂ ಸಿಕ್ಸ್‌ ನೆರವಿನಿಂದ 34 ರನ್ ಗಳಿಸಿ ಔಟಾದರು. ಟ್ರಾವಿಸ್ ಹೆಡ್ 39 ಎಸೆತಗಳಲ್ಲಿ ಶತಕ ಸಿಡಿಸಿದರು. ಇದು ಐಪಿಎಲ್ ಇತಿಹಾಸದಲ್ಲಿ ನಾಲ್ಕನೇ ವೇಗದ ಶತಕವಾಗಿದೆ. ಅಂತಿಮವಾಗಿ ಟ್ರಾವಿಸ್ 41 ಎಸೆತಗಳಲ್ಲಿ 9 ಬೌಂಡರಿ ಹಾಗೂ 8 ಸಿಕ್ಸ್‌ ನೆರವಿನಿಂದ 102 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಮತ್ತೋರ್ವ ಆಟಗಾರ ಹೆನ್ರಿಚ್ ಕ್ಲಾಸೆನ್, 31 ಎಸೆತಗಳಲ್ಲಿ 67 ರನ್ ಗಳಿಸಿ ವೇಗಿ ಫರ್ಗುಸನ್ ಎಸೆತದಲ್ಲಿ ಕ್ಯಾಚಿತ್ತು ಪೆವಿಲಿಯನ್​ಗೆ ಮರಳಿದರು. ಅಬ್ದುಲ್ ಸಮದ್ 10 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸ್‌ ಸಿಡಿಸಿ 37 ರನ್‌ ಕಲೆ ಹಾಕಿದರು. ಏಡೆನ್ ಮಾರ್ಕ್‌ರಾಮ್ 17 ಎಸೆತಗಳಲ್ಲಿ ತಲಾ 2 ಬೌಂಡರಿ ಹಾಗೂ ಸಿಕ್ಸ್‌ ಸಿಡಿಸಿ 32 ರನ್‌ ಗಳಿಸಿದರು. ಇದನ್ನೂ ಓದಿ: ಕೊನೇ ಓವರ್‌ನಲ್ಲಿ 26 ರನ್‌ ಚಚ್ಚಿಸಿಕೊಂಡ ಪಾಂಡ್ಯ – ಹಾರ್ದಿಕ್‌ ಕಳಪೆ ಬೌಲಿಂಗ್‌ಗೆ ಫುಲ್‌ ಕ್ಲಾಸ್‌

  • ಕೊನೆಯ ಓವರ್‌ನಲ್ಲಿ 2 ಸಿಕ್ಸ್‌ – ರಾಯಲ್ಸ್‌ಗೆ ರೋಚಕ 3 ವಿಕೆಟ್‌ಗಳ ಜಯ

    ಕೊನೆಯ ಓವರ್‌ನಲ್ಲಿ 2 ಸಿಕ್ಸ್‌ – ರಾಯಲ್ಸ್‌ಗೆ ರೋಚಕ 3 ವಿಕೆಟ್‌ಗಳ ಜಯ

    ಮುಲ್ಲನಪುರ: ಬೌಲಿಂಗ್‌, ಬ್ಯಾಟಿಂಗ್‌ ಪಡೆ ಉತ್ತಮವಾಗಿದ್ದರೆ ತಂಡ ನಿರಂತರ ಜಯ ಸಾಧಿಸುತ್ತದೆ ಎನ್ನುವುದಕ್ಕೆ ರಾಜಸ್ಥಾನ ತಂಡವೇ ಸಾಕ್ಷಿ. ಪಂಜಾಬ್‌ ಕಿಂಗ್ಸ್‌ ಭಾರೀ ಪೈಪೋಟಿ ನೀಡಿದ್ದರೂ ರಾಜಸ್ಥಾನ ರೋಚಕ 3 ವಿಕೆಟ್‌ಗಳ ಜಯ ಸಾಧಿಸಿದೆ.

    ಗೆಲ್ಲಲು 148 ರನ್‌ಗಳ ಸವಾಲನ್ನು ಪಡೆದ ರಾಜಸ್ಥಾನ ಇನ್ನೂ 1 ಬಾಲ್‌ ಇರುವಂತೆಯೂ 7 ವಿಕೆಟ್‌ ನಷ್ಟಕ್ಕೆ 152 ರನ್‌ ಹೊಡೆದು ಜಯ ಸಾಧಿಸಿತು. 6 ಪಂದ್ಯಗಳಲ್ಲಿ 5 ಪಂದ್ಯ ಗೆಲ್ಲುವ ಮೂಲಕ 10 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲೇ ಮುಂದುವರಿಯಿತು.  ಇದನ್ನೂ ಓದಿ: ಅಂಬೇಡ್ಕರ್‌ ಜನ್ಮದಿನದಂದೇ ಸಂಕಲ್ಪ ಪತ್ರ – ಭಾನುವಾರ ಬಿಜೆಪಿ ಪ್ರಣಾಳಿಕೆ ಬಿಡುಗಡೆ

    ಕೊನೆಯ 3 ಓವರ್‌ಗಳಲ್ಲಿ ರಾಜಸ್ಥಾನ ಗೆಲ್ಲು 34 ರನ್‌ ಬೇಕಿತ್ತು. ಹರ್ಷಲ್‌ ಪಟೇಲ್‌ ಎಸೆದ 18ನೇ ಓವರ್‌ನಲ್ಲಿ 14 ರನ್‌ ಬಂದರೆ ಕರ್ರನ್‌ ಎಸೆತ 19ನೇ ಓವರ್‌ನಲ್ಲಿ 10 ರನ್‌ ಬಂದರೂ 2 ವಿಕೆಟ್‌ ಕಳೆದುಕೊಂಡಿತ್ತು.

    ಕೊನೆಯ ಓವರ್‌ನಲ್ಲಿ 10 ರನ್‌ ಬೇಕಿತ್ತು. ಅರ್ಶ್‌ದೀಪ್‌ ಎಸೆದ ಮೊದಲ 2 ಎಸೆತದಲ್ಲಿ ಯಾವುದೇ ರನ್‌ ಬಂದಿರಲಿಲ್ಲ. ಮೂರನೇ ಎಸೆತದಲ್ಲಿ ಹೇಟ್ಮೇಯರ್‌ ಸಿಕ್ಸ್‌ ಸಿಡಿಸಿ ಪಂದ್ಯಕ್ಕೆ ರೋಚಕ ತಿರುವು ನೀಡಿದರು. ನಾಲ್ಕನೇ ಎಸೆತದಲ್ಲಿ ಕರ್ರನ್‌ ಮಿಸ್‌ ಫಿಲ್ಡ್‌ ಮಾಡಿದ ಕಾರಣ 2 ರನ್‌ ಬಂತು. ಐದನೇ ಎಸೆತದಲ್ಲಿ ಹೇಟ್ಮೇಯರ್‌ ಸಿಕ್ಸ್‌ ಸಿಡಿಸಿ ತಂಡಕ್ಕೆ ಐದನೇ ಗೆಲುವು ತಂದುಕೊಟ್ಟರು.  ಇದನ್ನೂ ಓದಿ: ಈ ಬಾರಿ ಮೋದಿ ಗರಿಷ್ಠ 214-240 ಸ್ಥಾನ ಗೆಲ್ಲಬಹುದು: ತೆಲಂಗಾಣ ಸಿಎಂ ರೇವಂತ್‌ ರೆಡ್ಡಿ

     

    ಹೇಟ್ಮೇಯರ್‌ ಔಟಾಗದೇ 27 ರನ್‌(10 ಎಸೆತ,1 ಬೌಂಡರಿ, 3 ಸಿಕ್ಸ್‌), ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್‌ 39 ರನ್‌, ತನುಶ್‌ ಕೋಟ್ಯಾನ್‌ 24 ರನ್‌, ನಾಯಕ ಸಂಜು ಸ್ಯಾಮ್ಸನ್‌ 23 ರನ್‌ ಹೊಡೆದು ಔಟಾದರು.

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಪಂಜಾಬ್‌ 52 ರನ್‌ಗಳಿಸುವಷ್ಟರಲ್ಲಿ ಪ್ರಮುಖ 4 ವಿಕೆಟ್‌ ಕಳೆದುಕೊಂಡಿತ್ತು. ವಿಕೇಟ್‌ ಉರುಳುತ್ತಿದ್ದರೂ ಜಿತೇಶ್‌ ಶರ್ಮಾ 29 ರನ್‌(24 ಎಸೆತ, 1 ಬೌಂಡರಿ, 2 ಸಿಕ್ಸರ್)‌, ಕೊನೆಯಲ್ಲಿ ಅಶುತೋಶ್‌ ಶರ್ಮಾ ಸ್ಫೋಟಕ 31 ರನ್‌ (16 ಎಸೆತ, 1 ಬೌಂಡರಿ, 3 ಸಿಕ್ಸ್‌) ಸಿಡಿಸಿದ ಪರಿಣಾಮ ತಂಡ 140 ರನ್‌ಗಳ ಗಡಿ ದಾಟಿತು.

  • ಡೆಲ್ಲಿಗೆ 6 ವಿಕೆಟ್‌ಗಳ ಭರ್ಜರಿ ಜಯ – ಕೊನೆಯ ಸ್ಥಾನಕ್ಕೆ ಜಾರಿದ ಆರ್‌ಸಿಬಿ

    ಡೆಲ್ಲಿಗೆ 6 ವಿಕೆಟ್‌ಗಳ ಭರ್ಜರಿ ಜಯ – ಕೊನೆಯ ಸ್ಥಾನಕ್ಕೆ ಜಾರಿದ ಆರ್‌ಸಿಬಿ

    ಲಕ್ನೋ: ಬ್ಯಾಟಿಂಗ್‌, ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ಲಕ್ನೋ ಸೂಪರ್‌ ಜೈಂಟ್ಸ್‌ (Lucknow Super Giants) ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

    ಗೆಲ್ಲಲು 168 ರನ್‌ಗಳ ಸವಾಲು ಪಡೆದ ಡೆಲ್ಲಿ ಇನ್ನೂ 11 ಎಸೆತ ಬಾಕಿ ಇರುವಂತೆಯೇ 4 ವಿಕೆಟ್‌ ನಷ್ಟಕ್ಕೆ 170 ರನ್‌ ಹೊಡೆದು ಟೂರ್ನಿಯಲ್ಲಿ ಎರಡನೇ ಜಯ ಸಾಧಿಸಿತು. ಈ ಮೂಲಕ ಅಂಕಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಜಿಗಿದಿದೆ.

    ಡೇವಿಡ್‌ ವಾರ್ನರ್‌ (David Warner) ಬೇಗನೇ ಔಟಾದರೂ ಪೃಥ್ವಿ ಶಾ 32 ರನ್‌ (22 ಎಸೆತ, 4 ಬೌಂಡರಿ), ಜೇಕ್ ಫ್ರೇಸರ್ 55 ರನ್(35‌ ಎಸೆತ, 2 ಬೌಂಡರಿ, 5 ಸಿಕ್ಸರ್‌), ರಿಷಭ್‌ ಪಂತ್‌ (Rishab Pant) 41 ರನ್‌(24 ಎಸೆತ, 4 ಬೌಂಡರಿ, 2 ಸಿಕ್ಸ್‌) ಸಿಡಿಸಿದ ಪರಿಣಾಮ ಡೆಲ್ಲಿ ಜಯಗಳಿಸಿತು.

    ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಲಕ್ನೋಗೆ ಕ್ವಿಂಟನ್‌ ಡಿ ಕಾಕ್‌ 19 ರನ್‌, ನಾಯಕ ಕೆಎಲ್‌ ರಾಹುಲ್‌ (KL Rahul) 39 ರನ್‌(22 ಎಸೆತ, 5 ಬೌಂಡರಿ, 1 ಸಿಕ್ಸರ್‌), ಕೊನೆಯಲ್ಲಿ ಆಯುಷ್ ಬದೋನಿ ಅವರ ಸ್ಫೋಟಕ ಔಟಾಗದೇ 55 ರನ್‌(35 ಎಸೆತ, 5 ಬೌಂಡರಿ, 1 ಸಿಕ್ಸರ್‌) ನೆರವಿನಿಂದ ಲಕ್ನೋ 7 ವಿಕೆಟ್‌ ನಷ್ಟಕ್ಕೆ 167 ರನ್‌ ಹೊಡೆಯಿತು.  ಕುಲದೀಪ್‌ ಯಾದವ್‌ 20 ರನ್‌ ನೀಡಿ 3 ವಿಕೆಟ್‌ ಕಿತ್ತರು.

    ಕೊನೆಯಲ್ಲಿ ಆರ್‌ಸಿಬಿ:
    ಇಂದಿನ ಪಂದ್ಯವನ್ನು ಡೆಲ್ಲಿ ಗೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಏರಿದರೆ ಆರ್‌ಸಿಬಿ (RCB) ಕೊನೆಯ ಸ್ಥಾನಕ್ಕೆ ಜಾರಿದೆ. ಡೆಲ್ಲಿ 6 ಪಂದ್ಯಗಳ ಪೈಕಿ 2 ರಲ್ಲಿ ಜಯ ಸಾಧಿಸಿದ್ದರೆ ಆರ್‌ಸಿಬಿ 6 ಪಂದ್ಯಗಳ ಪೈಕಿ 5 ರಲ್ಲಿ ಸೋಲುವ ಮೂಲಕ 2 ಅಂಕ ಸಂಪಾದಿಸಿ 10ನೇ ಸ್ಥಾನಕ್ಕೆ ಕುಸಿದಿದೆ.

  • ಕಳಪೆ ಬೌಲಿಂಗ್‌, ಫೀಲ್ಡಿಂಗ್‌ – ಬುಮ್ರಾ, ಕಿಶನ್‌, ಸೂರ್ಯ ಆಟಕ್ಕೆ ಆರ್‌ಸಿಬಿ ಬರ್ನ್‌

    ಕಳಪೆ ಬೌಲಿಂಗ್‌, ಫೀಲ್ಡಿಂಗ್‌ – ಬುಮ್ರಾ, ಕಿಶನ್‌, ಸೂರ್ಯ ಆಟಕ್ಕೆ ಆರ್‌ಸಿಬಿ ಬರ್ನ್‌

    ಮುಂಬೈ: ಕಳಪೆ ಬೌಲಿಂಗ್‌ಗೆ, ಕಳಪೆ ಫೀಲ್ಡಿಂಗ್‌ಗೆ ಮತ್ತೆ ಆರ್‌ಸಿಬಿ (RCB) ಬೆಲೆ ತೆತ್ತಿದೆ. ಆರಂಭಿಕ ಆಟಗಾರ ಇಶನ್‌ ಕಿಶನ್‌, ನಂತರ ಸೂರ್ಯಕುಮಾರ್‌ ಯಾದವ್‌ ಅವರ ಸ್ಫೋಟಕ ಅರ್ಧಶತಕದ ಆಟದಿಂದ ಮುಂಬೈ ಇಂಡಿಯನ್ಸ್‌ (Mumbai Indians) 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

    ಗೆಲ್ಲಲು 197 ರನ್‌ಗಳ ಗುರಿಯನ್ನು ಪಡೆದ ಮುಂಬೈ 15.3 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 199 ರನ್‌ ಹೊಡೆಯಿತು. ಈ ಮೂಲಕ ಮೂರು ಸೋಲಿನಿಂದ ಕಂಗೆಟ್ಟಿದ್ದ ಮುಂಬೈ ಎರಡನೇ ಜಯ ಸಾಧಿಸಿತು. 6 ಪಂದ್ಯಗಳಲ್ಲಿ 5 ಪಂದ್ಯಗಳನ್ನು ಆರ್‌ಸಿಬಿ ಸೋತಿದ್ದು ಡೆಲ್ಲಿ 2 ಅಂಕ ಗಳಿಸಿ ಕೊನೆಯ ಸ್ಥಾನದಲ್ಲಿದೆ.

    ಈಶನ್‌ ಕಿಶನ್‌ (Ishan Kishan) ಮತ್ತು ರೋಹಿತ್‌ ಶರ್ಮಾ (Rohit Sharma) ಸ್ಫೋಟಕ ಆರಂಭ ನೀಡಿದರು. ಇವರಿಬ್ಬರು ಮೊದಲ ವಿಕೆಟಿಗೆ 101 ರನ್‌ ಜೊತೆಯಾಟವಾಡಿದರು. ಇಶನ್‌ ಕಿಶನ್‌ 69 ರನ್‌(34 ಎಸೆತ, 7 ಬೌಂಡರಿ, 5 ಸಿಕ್ಸ್‌), ರೋಹಿತ್‌ ಶರ್ಮಾ 38 ರನ್‌(24 ಎಸೆತ, 3 ಬೌಂಡರಿ, 3 ಸಿಕ್ಸರ್‌) ಹೊಡೆದು ಔಟಾದರು.

     

    ಗಾಯಗೊಂಡು ತಂಡದಿಂದ ಹೊರಗೆ ಇದ್ದ ಸೂರ್ಯಕುಮಾರ್‌ ಯಾದವ್‌ (Surya Kumar Yadav) ತಮ್ಮ ಎಂದಿನ ಲಯದಲ್ಲಿ ಬ್ಯಾಟ್‌ ಬೀಸಿದರು. ಪರಿಣಾಮ ಕೇವಲ 19 ಎಸೆತದಲ್ಲಿ 52 ರನ್‌ (5 ಬೌಂಡರಿ, 4 ಸಿಕ್ಸರ್‌) ಸಿಡಿಸಿ ವಿಕೆಟ್‌ ಒಪ್ಪಿಸಿದರು. ಕೊನೆಯಲ್ಲಿ ನಾಯಕ ಹಾರ್ದಿಕ್‌ ಪಾಂಡ್ಯ ಔಟಾಗದೇ 21 ರನ್‌(6 ಎಸೆತ, 3 ಬೌಂಡರಿ) ತಿಲಕ್‌ ವರ್ಮಾ ಔಟಾಗದೇ 16 ರನ್‌ ಹೊಡೆದರು.

    ಟಾಸ್‌ ಸೋತು ಬ್ಯಾಟಿಂಗ್‌ ಇಳಿದ ಆರ್‌ಸಿಬಿ ಪರ ಮೂವರು ಆಟಗಾರರು ಮಾತ್ರ ಎರಡಂಕಿ ದಾಟಿದ್ದರು. ನಾಯಕ ಫಾ ಡುಪ್ಲೆಸಿಸ್‌ 61 ರನ್‌(40 ಎಸೆತ, 4 ಬೌಂಡರಿ, 3 ಸಿಕ್ಸರ್‌), ರಜತ್‌ ಪಟೀದಾರ್‌ 50 ರನ್‌ (26 ಎಸೆತ, 3 ಬೌಂಡರಿ, 4 ಸಿಕ್ಸರ್‌), ಕೊನೆಯಲ್ಲಿ ದಿನೇಶ್‌ ಕಾರ್ತಿಕ್‌ (Dinesh Karthik) ಸ್ಫೋಟಕ 53 ರನ್‌(23 ಎಸೆತ, 5 ಬೌಂಡರಿ, 4 ಸಿಕ್ಸರ್‌) ಆಟದಿಂದ 8 ವಿಕೆಟ್‌ ನಷ್ಟಕ್ಕೆ 196 ರನ್‌ ಹೊಡೆಯಿತು.

    ಜಸ್‌ಪ್ರೀತ್‌ ಬುಮ್ರಾ 21 ರನ್‌ ನೀಡಿ 5 ವಿಕೆಟ್‌ ಕೀಳುವ ಮೂಲಕ ಆರ್‌ಸಿಬಿ ಬೆನ್ನೆಲುಬನ್ನು ಮುರಿದರು. 4 ಎಸೆತ ಎದುರಿಸಿದ ಮ್ಯಾಕ್ಸ್‌ ವೆಲ್‌ ಶೂನ್ಯ ಸುತ್ತಿ ಮತ್ತೆ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು.

  • ಕೊನೆಯ ಎಸೆತದಲ್ಲಿ ಬೌಂಡರಿ – ಗುಜರಾತಿಗೆ ರೋಚಕ ಜಯ: ಕೊನೆಯ ಓವರ್‌ ಹೀಗಿತ್ತು

    ಕೊನೆಯ ಎಸೆತದಲ್ಲಿ ಬೌಂಡರಿ – ಗುಜರಾತಿಗೆ ರೋಚಕ ಜಯ: ಕೊನೆಯ ಓವರ್‌ ಹೀಗಿತ್ತು

    ಜೈಪುರ: ನಾಯಕ ಶುಭಮನ್‌ ಗಿಲ್‌ (Shubman Gill)‌ ಅರ್ಧಶತಕ ಕೊನೆಗೆ ರಶೀದ್‌ ಖಾನ್‌ (Rashid Khan) ಮತ್ತು ರಾಹುಲ್‌ ತೆವಾಟಿಯ ಅವರ ಸ್ಫೋಟಕ ಆಟದಿಂದ ರಾಜಸ್ಥಾನ ರಾಯಲ್ಸ್‌ (Rajasthan Royals) ವಿರುದ್ಧ ಗುಜರಾತ್‌ ಟೈಟಾನ್ಸ್‌ (Gujarat Titans) ರೋಚಕ 3 ವಿಕೆಟ್‌ ಜಯ ಸಾಧಿಸಿದೆ.

    ಗೆಲ್ಲಲು 196 ರನ್‌ಗಳ ಕಠಿಣ ಗುರಿಯನ್ನು ಪಡೆದ ಗುಜರಾತ್‌ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 199 ರನ್‌ ಹೊಡೆಯಿತು. ರಶೀದ್‌ ಖಾನ್‌ ಕೊನೆಯ ಎಸೆತವನ್ನು ಬೌಂಡರಿಗೆ ಅಟ್ಟುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು. ಸತತ 4 ಪಂದ್ಯಗಳನ್ನು ಗೆದ್ದಿದ್ದ ರಾಜಸ್ಥಾನಕ್ಕೆ 5 ಪಂದ್ಯದಲಿ ಸೋಲಾಗಿದೆ.

    ರಾಜಸ್ಥಾನಕ್ಕೆ ಕೊನೆಯ 24 ಎಸೆತದಲ್ಲಿ 59 ರನ್‌ ಬೇಕಿತ್ತು. ಅಶ್ವಿನ್‌ ಎಸೆದ 17ನೇ ಓವರ್‌ನಲ್ಲಿ 17 ರನ್‌ ಬಂದರೆ 18ನೇ ಓವರ್‌ನಲ್ಲಿ 7 ರನ್‌ ಬಂತು. ಕುಲದೀಪ್‌ ಸೇನ್‌ 19ನೇ ಓವರ್‌ನಲ್ಲಿ 20 ರನ್‌ ನೀಡಿದರು. ಈ ಓವರ್‌ನಲ್ಲಿ 4ನೇ ಎಸೆತ ನೋಬಾಲ್‌ ಆಗಿತ್ತು. ಆ ಎಸೆತವನ್ನು ರಶೀದ್‌ ಖಾನ್‌ ಬೌಂಡರಿಗೆ ಅಟ್ಟಿದ್ದರು.

    ಕೊನೆಯ ಓವರ್‌ನಲ್ಲಿ 15 ರನ್‌ ಬೇಕಿತ್ತು. ಈ ವೇಳೆ ನಿಧಾನಗತಿಯ ಬೌಲಿಂಗ್‌ ಮಾಡಿದ್ದಕ್ಕೆ 4 ಆಟಗಾರರು ಮಾತ್ರ ಬೌಂಡರಿ ಬಳಿ ಫೀಲ್ಡಿಂಗ್‌ ಮಾಡಲು ಅವಕಾಶವಿತ್ತು. ಇದರ ಲಾಭವನ್ನು ರಶೀದ್‌ ಖಾನ್‌ ಮತ್ತು ತೆವಾಟಿಯ ಪಡೆದರು. ಅವೇಶ್‌ ಖಾನ್‌ ಎಸೆದ ಮೊದಲ ಎಸೆತವನ್ನು ರಶೀದ್‌ ಖಾನ್‌ ಬೌಂಡರಿಗೆ ಅಟ್ಟಿದರೆ ಎರಡನೇ ಎಸೆತದಲ್ಲಿ 2 ರನ್‌, ಮೂರನೇ ಎಸೆತದಲ್ಲಿ ಬೌಂಡರಿ ಹೊಡೆದರು. 4ನೇ ಎಸೆತದಲ್ಲಿ ಒಂದು ರನ್‌ ತೆಗೆದರೆ 5ನೇ ಎಸೆತದಲ್ಲಿ ಮೂರು ರನ್‌ ತೆಗೆಯುವಾಗ ತವಾಟಿಯಾ ರನೌಟ್‌ ಆದರು. ಕೊನೆಯ ಒಂದು ಎಸೆತದಲ್ಲಿ 2 ರನ್‌ ಬೇಕಿದ್ದಾಗ ರಶೀದ್‌ ಖಾನ್‌ ಬೌಂಡರಿ ಚಚ್ಚಿ ತಂಡಕ್ಕೆ ಗೆಲುವು ತಂದುಕೊಟ್ಟರು.

    ಗುಜರಾತ್‌ ಪರ ನಾಯಕ ಶುಭಮನ್‌ ಗಿಲ್‌ 72 ರನ್‌(44 ಎಸೆತ, 6 ಬೌಂಡರಿ, 2 ಸಿಕ್ಸರ್‌) ಹೊಡೆದು ಔಟಾದರೆ ಸಾಯಿ ಸುದರ್ಶನ್‌ 35 ರನ್‌ (29 ಎಸೆತ, 3 ಬೌಂಡರಿ, 1 ಸಿಕ್ಸರ್) ಹೊಡೆದು ಔಟಾದರು.

    ಮಧ್ಯಮ ಕ್ರಮಾಂಕದ ಆಟಗಾರರು ಬೇಗನೇ ಔಟಾದ ಪರಿಣಾಮ ಗುಜರಾತ್‌ ಸೋಲಿನ ಕಡೆ ಜಾರಿತ್ತು. ಆದರೆ ರಶೀದ್‌ ಖಾನ್‌ ಮತ್ತು ತೆವಾಟಿಯಾ 14 ಎಸೆತದಲ್ಲಿ 36 ರನ್‌ ಜೊತೆಯಾಟವಾಡಿ ತಂಡವನ್ನು ಗೆಲುವಿನ ದಡತ್ತ ತಂದರು. ರಶೀದ್‌ ಖಾನ್‌ ಔಟಾಗದೇ 24 ರನ್‌(11 ಎಸೆತ, 4 ಬೌಂಡರಿ) ತವಾಟಿಯಾ 22 ರನ್‌ (11 ಎಸೆತ, 3 ಬೌಂಡರಿ) ಹೊಡೆದರು.

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ರಾಜಸ್ಥಾನ 42 ರನ್‌ ಗಳಿಸುವಷ್ಟರಲ್ಲಿ ಯಶಸ್ವಿ ಜೈಸ್ವಾಲ್‌ 24 ರನ್‌(19 ಎಸೆತ, 5 ಬೌಂಡರ), ಜೋಸ್‌ ಬಟ್ಲರ್‌ ಅವರ ವಿಕೆಟ್‌ ಕಳೆದುಕೊಂಡಿತ್ತು. ಆರಂಭದಲ್ಲೇ ವಿಕೆಟ್‌ ಕಳೆದುಕೊಂಡರೂ ಸಂಜು ಸ್ಯಾಮ್ಸನ್‌ ಮತ್ತು ರಿಯಾನ್‌ ಪರಾಗ್‌ ನಿಧಾನವಾಗಿ ಇನ್ನಿಂಗ್ಸ್‌ ಕಟ್ಟಿದರು. ಇವರಿಬ್ಬರು ಮೂರನೇ ವಿಕೆಟಿಗೆ 78 ಎಸೆತಗಳಲ್ಲಿ 130 ರನ್‌ ಹೊಡೆದರು.

    ರಿಯಾನ್‌ ಪರಾಗ್‌ 76 ರನ್‌(48 ಎಸೆತ, 3 ಬೌಂಡರಿ, 5 ಸಿಕ್ಸರ್‌) ಹೊಡೆದು ಔಟಾದರೆ ನಾಯಕ ಸಾಮ್ಸನ್‌ ಔಟಾಗದೇ 68 ರನ್‌ (38 ಎಸೆತ, 7 ಬೌಂಡರಿ, 2 ಸಿಕ್ಸರ್‌), ಹೆಟ್ಮೇಯರ್‌ 13 ರನ್‌ (5 ಎಸೆತ, 1 ಬೌಂಡರಿ, 1 ಸಿಕ್ಸರ್‌) ಹೊಡೆದ ಪರಿಣಾಮ ರಾಜಸ್ಥಾನ 3 ವಿಕೆಟ್‌ ನಷ್ಟಕ್ಕೆ 196 ರನ್‌ ಹೊಡೆಯಿತು.

     

  • ಕೊನೆಯ ಓವರ್‌ನಲ್ಲಿ 26 ರನ್‌ ಬಿಟ್ಟುಕೊಟ್ಟರೂ ಹೈದರಾಬಾದ್‌ಗೆ ರೋಚಕ 2 ರನ್‌ ಗೆಲುವು

    ಕೊನೆಯ ಓವರ್‌ನಲ್ಲಿ 26 ರನ್‌ ಬಿಟ್ಟುಕೊಟ್ಟರೂ ಹೈದರಾಬಾದ್‌ಗೆ ರೋಚಕ 2 ರನ್‌ ಗೆಲುವು

    ಮುಲ್ಲನಪುರ್‌: ಕೊನೆಯ ಓವರ್‌ನಲ್ಲಿ ಸಿಕ್ಸರ್‌ಗಳ ಸುರಿಮಳೆ, ಇತರ ರನ್‌ಗಳು, ಕೈ ಚೆಲ್ಲಿದ ಕ್ಯಾಚ್‌ಗಳು.. ಸೋಲಿನತ್ತ ವಾಲಿದ್ದ ಸನ್‌ರೈಸರ್ಸ್‌ ಹೈದರಾಬಾದ್ (Sunrisers Hyderabad) ಕೊನೆಗೂ ಗೆಲುವಿನ ನಗೆ ಬೀರಿದೆ. ಪಂಜಾಬ್‌ ಕಿಂಗ್ಸ್‌ (Panjab Kings) ವಿರುದ್ಧ ಹೈದರಾಬಾದ್‌ 2 ರನ್‌ಗಳ ರೋಚಕ ಜಯ ಸಾಧಿಸಿದೆ.

    183 ರನ್‌ಗಳ ಗುರಿಯನ್ನು ಪಡೆದ ಪಂಜಾಬ್‌ಗೆ ಕೊನೆಯ ಓವರ್‌ನಲ್ಲಿ 29 ರನ್‌ ಬೇಕಿತ್ತು. ಜಯದೇವ್ ಉನದ್ಕತ್ (Jaydev Unadkat) ಎಸೆದ ಮೊದಲ ಎಸೆತವನ್ನು ಅಶುತೋಶ್‌ ಶರ್ಮಾ (Ashutosh Sharma) ಸಿಕ್ಸರ್‌ಗೆ ಅಟ್ಟಿದರು. ನಂತರ ಎರಡು ವೈಡ್‌ ರನ್‌ ಬಂತು.

    ಎರಡನೇ ಎಸೆತವನ್ನು ಅಶುತೋಶ್‌ ಸಿಕ್ಸರ್‌ಗೆ ಅಟ್ಟುವ ಮೂಲಕ ಪಂದ್ಯಕ್ಕೆ ರೋಚಕ ತಿರುವು ನೀಡಿದರು. ನಂತರ ಎರಡು ಎಸೆತಗಳಲ್ಲಿ 2 ರನ್‌ ಬಂದರೆ 5ನೇ ಎಸೆತ ವೈಡ್‌ ಆಯ್ತು. ನಂತರದ ಎಸೆತದಲ್ಲಿ ಅಶುತೋಶ್‌ ಸಿಕ್ಸರ್‌ ಅಟ್ಟುವ ಪ್ರಯತ್ನ ಮಾಡಿದರು. ಆದರೆ ಡಿಪ್‌ ಮಿಡ್‌ ವಿಕೆಟ್‌ ಬಳಿ ತ್ರಿಪಾಠಿ ಕ್ಯಾಚ್‌ ಕೆಚೆಲ್ಲಿದರು. ಈ ಎಸೆತದಲ್ಲಿ 1 ರನ್‌ ಬಂತು. ಕೊನೆಯ ಎಸೆತವನ್ನು ಶಶಾಂಕ್‌ ಸಿಂಗ್‌ (Shashank Singh) ಸಿಕ್ಸರ್‌ಗೆ ಅಟ್ಟಿದರು. ಈ ಮೂಲಕ ಕೊನೆಯ ಓವರ್‌ನಲ್ಲಿ 26 ರನ್‌ ಬಂತು.

    ಕೊನೆಯ 18 ಎಸೆತಗಳಲ್ಲಿ ಪಂಜಾಬ್‌ ಗೆಲ್ಲಲು 50 ರನ್‌ಗಳು ಬೇಕಿತ್ತು. 18 ಓವರ್‌ನಲ್ಲಿ ಪ್ಯಾಟ್‌ ಕಮ್ಮಿನ್ಸ್‌ 11 ರನ್‌ ಕೊಟ್ಟರೆ 19ನೇ ಓವರ್‌ನಲ್ಲಿ ನಟರಾಜನ್‌ ಕೇವಲ 10 ರನ್‌ ನೀಡಿದ್ದುಹೈದರಬಾದ್‌ ಗೆಲುವಿಗೆ ಕಾರಣವಾಯಿತು. ಉನದ್ಕತ್‌ ಒತ್ತಡಕ್ಕೆ ಒಳಗಾದ ಸಮಯದಲ್ಲಿ ಪ್ಯಾಟ್‌ ಕಮ್ಮಿನ್ಸ್‌ (Pat Cummins) ನಗು ಮುಖದಿಂದ ಅವರನ್ನು ಮಾತನಾಡಿಸಿ ಆತ್ಮಸ್ಥೈರ್ಯ ತುಂಬಿದ್ದು ಪ್ರೇಕ್ಷಕರ ಮೆಚ್ಚುಗೆಗೆ ಕಾರಣವಾಯಿತು.

    ಪಂಜಾಬ್‌ ಪರ ಶಶಾಂಕ್‌ ಸಿಂಗ್‌ ಔಟಾಗದೇ 46 ರನ್‌ (25 ಎಸೆತ, 6 ಬೌಂಡರಿ,1 ಸಿಕ್ಸರ್‌), ಅಶುತೋಶ್‌ ಶರ್ಮಾ ಔಟಾಗದೇ 33 ರನ್‌ (15 ಎಸೆತ, 3 ಬೌಂಡರಿ, 2 ಸಿಕ್ಸರ್)‌ ಹೊಡೆದರು. ಶಶಾಂಕ್‌ ಸಿಂಗ್‌ ಮತ್ತು ಅಶುತೋಶ್‌ ಮುರಿಯದ 7ನೇ ವಿಕೆಟಿಗೆ 27 ಎಸೆತಗಳಲ್ಲಿ 66 ರನ್‌ ಜೊತೆಯಾಟವಾಡುವ ಮೂಲಕ ತಂಡವನ್ನು ಗೆಲುವಿನ ದಡದ ಹತ್ತಿರ ತಂದಿದ್ದರು. ಜಿತೇಶ್‌ ಶರ್ಮಾ 19 ರನ್‌, ಸಿಕಂದರ್‌ ರಾಜಾ 28 ರನ್‌, ಸ್ಯಾಮ್‌ ಕರ್ರನ್‌ 29 ರನ್‌ ಹೊಡೆದು ಔಟಾದರು.

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಹೈದರಾಬಾದ್‌ ಆರಂಭದಲ್ಲೇ ವಿಕೆಟ್‌ ಕಳೆದುಕೊಂಡಿತ್ತು. 39 ರನ್‌ಗಳಿಸುವಷ್ಟರಲ್ಲಿ ಪ್ರಮುಖ ಮೂರು ವಿಕೆಟ್‌ ಕಳೆದುಕೊಂಡಿತ್ತು. ಹೀಗಿದ್ದರೂ 20 ವರ್ಷದ ಕಿರಿಯ ಆಟಗಾರ ನಿತೀಶ್‌ ಕುಮಾರ್‌ ರೆಡ್ಡಿ 64 ರನ್‌ (37 ಎಸೆತ, 4 ಬೌಂಡರಿ,5 ಸಿಕ್ಸ್‌) ಸಿಡಿಸಿ ತಂಡಕ್ಕೆ ನೆರವಾದರು. ಅಬ್ದುಲ್‌ ಸಮಾದ್‌ 25 ರನ್‌ (12 ಎಸೆತ, 5 ಬೌಂಡರಿ) ಹೊಡೆದರು. ಕೊನೆಯಲ್ಲಿ ವಿಕೆಟ್‌ ಕಳೆದುಕೊಂಡ ಪರಿಣಾಮ ಹೈದರಾಬಾದ್‌ 9 ವಿಕೆಟ್‌ ನಷ್ಟಕ್ಕೆ 182 ರನ್‌ ಹೊಡೆಯಿತು.

  • ಫಿಫ್ಟಿ ಬಳಿಕ ಕೊಹ್ಲಿ ಸ್ಟ್ರೈಕ್‌ರೇಟ್‌ ಹೆಚ್ಚಾಗ್ಬೇಕಿತ್ತು – ಮ್ಯಾಕ್ಸಿ ತರ ಆದ್ರೆ ಏನ್‌ ಮಾಡೋಕಾಗುತ್ತೆ: ಸೆಹ್ವಾಗ್‌

    ಫಿಫ್ಟಿ ಬಳಿಕ ಕೊಹ್ಲಿ ಸ್ಟ್ರೈಕ್‌ರೇಟ್‌ ಹೆಚ್ಚಾಗ್ಬೇಕಿತ್ತು – ಮ್ಯಾಕ್ಸಿ ತರ ಆದ್ರೆ ಏನ್‌ ಮಾಡೋಕಾಗುತ್ತೆ: ಸೆಹ್ವಾಗ್‌

    – ಒಬ್ಬರಾದ್ರೂ ವಿಕೆಟ್‌ ತೆಗೆಯೋರಿಲ್ಲ – ಆರ್‌ಸಿಬಿ ಹೇಗೆ ತಾನೆ ಗೆಲ್ಲುತ್ತೆ? – ಇರ್ಫಾನ್‌ ಪಠಾಣ್‌ ಗರಂ

    ಜೈಪುರ: ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RR vs RCB) ತಂಡದ ಸೋಲು ಕ್ರಿಕೆಟ್‌ ಲೋಕದಲ್ಲಿ ಭಾರೀ ಸದ್ದು ಮಾಡುತ್ತಿದೆ. ತಂಡದಲ್ಲಿ ನಿಧಾನಗತಿಯ ಬ್ಯಾಟಿಂಗ್‌ ನಡೆಸಿದ ವಿರಾಟ್‌ ಕೊಹ್ಲಿ (Virat Kohli), ಪ್ರಮುಖ ವಿಕೆಟ್‌ ಕೀಳುವಲ್ಲಿ ವಿಫಲರಾದ ಬೌಲರ್‌ಗಳು ಹಾಗೂ ಕೈಗೊಟ್ಟ ಗ್ಲೆನ್‌ ಮಾಕ್ಸ್‌ವೆಲ್‌ ವಿರುದ್ಧ ಹಿರಿಯ ಕ್ರಿಕೆಟಿಗರು ಹರಿಹಾಯ್ದಿದ್ದಾರೆ.

    ಆರ್‌ಸಿಬಿ ಸೋಲಿನ ಕುರಿತು ಮಾತನಾಡಿರುವ ಮಾಜಿ ಕ್ರಿಕೆಟಿಗ ವಿರಾಟ್‌ ಕೊಹ್ಲಿ, ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ಇನ್ನೂ 20 ರನ್‌ ಹೆಚ್ಚುವರಿ ಗಳಿಸಬೇಕಿತ್ತು. ವಿರಾಟ್‌ ಕೊಹ್ಲಿ ಇನ್ನಿಂಗ್ಸ್‌ ಚೆನ್ನಾಗಿತ್ತು. ಆದ್ರೆ ಅವರೊಂದಿಗೆ ಸಾಥ್‌ ನೀಡಬೇಕಿದ್ದ ಮ್ಯಾಕ್ಸ್‌ವೆಲ್‌, ಕ್ಯಾಮರೂನ್‌ ಗ್ರೀನ್‌ ಸರಿಯಾಗಿ ಬ್ಯಾಟಿಂಗ್‌ ಮಾಡಲಿಲ್ಲ. ಮಹಿಪಾಲ್‌ ಲೊಮ್ರೋರ್‌ ಸಹ ತಂಡದಲ್ಲಿ ಇಲ್ಲದೇ ಇದ್ದದ್ದು ದೊಡ್ಡ ನಷ್ಟವಾಯಿತು. ವಿರಾಟ್‌ ಕೊಹ್ಲಿ 39 ಬಾಲ್‌ಗೆ 50 ರನ್‌ ಗಳಿಸಿದಾಗ, ಅವರ ಸ್ಟ್ರೈಕ್‌ ರೇಟ್‌ 200ರ ಗಡಿ ದಾಟಬೇಕಿತ್ತು. ಆದ್ರೆ ಇತರ ಬ್ಯಾಟರ್‌ಗಳು ಸಾಥ್‌ ನೀಡದ ಪರಿಣಾಮ ಸಂಪೂರ್ಣ ಒತ್ತಡ ಕೊಹ್ಲಿ ಮೇಲೆ ಇತ್ತು ಎಂದು ಹೇಳಿದ್ದಾರೆ.

    ಕೊಹ್ಲಿ ಒಳ್ಳೆ ಫಾರ್ಮ್‌ನಲ್ಲಿದ್ದಾರೆ, ಕೊನೇವರೆಗೂ ಕ್ರೀಸ್‌ನಲ್ಲಿ ಉಳಿಯೋದು ಅವರ ಪಾತ್ರ. ಆದ್ರೆ ಅಷ್ಟೊಂದು ಹಣಕ್ಕೆ ಆಯ್ಕೆಯಾದ ಇತರ ಬ್ಯಾಟರ್‌ಗಳು ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಬೇಕು. ಮ್ಯಾಕ್ಸ್‌ವೆಲ್‌ (Glenn maxwell) ತರ ಆದ್ರೆ ಯಾರು ಏನ್‌ ಮಾಡೋದಕ್ಕೆ ಆಗುತ್ತೆ ಎಂದು ಬೇಸರ ಹೊರಹಾಕಿದ್ದಾರೆ. ಇದನ್ನೂ ಓದಿ: ಬಟ್ಲರ್‌ ಬೊಂಬಾಟ್‌ ಶತಕ – ರಾಜಸ್ಥಾನ್‌ಗೆ 6 ವಿಕೆಟ್‌ಗಳ ಜಯ; ಆರ್‌ಸಿಬಿಗೆ ಹೀನಾಯ ಸೋಲು!

    ಆರ್‌ಸಿಬಿ ವಿರುದ್ಧ ಪಠಾಣ್‌ ಗರಂ:
    ಇಬ್ಬರು ಬ್ಯಾಟರ್‌ಗಳು (ಸಂಜು ಸ್ಯಾಮ್ಸನ್‌, ಜೋಸ್‌ ಬಟ್ಲರ್‌) 170+ ಸ್ಟ್ರೈಕ್ ರೇಟ್‌ನೊಂದಿಗೆ ಆಡುತ್ತಿದ್ದಾರೆ. ಇನ್ನೊಂದು ತುದಿಯಲ್ಲಿ ಒಬ್ಬನೇ ಒಬ್ಬ ವಿಕೆಟ್ ಪಡೆಯುವ ಬೌಲರ್‌ ಇಲ್ಲ. ಆರ್‌ಸಿಬಿ ಬೌಲರ್‌ಗಳ ಮೊರೆ ಹೋಗಲಿಲ್ಲ. ಹೀಗಿರುವಾಗ ನೀವು ಹೇಗೆ ಗೆಲ್ಲುತ್ತೀರಿ? ಎಂದು ತಿವಿದಿದ್ದಾರೆ. ಇದನ್ನೂ ಓದಿ: ಟಿ20 ವಿಶ್ವಕಪ್‌ಗೆ ಭರ್ಜರಿ ತಯಾರಿ – ಪಾಕಿಸ್ತಾನ ತಂಡಕ್ಕೆ ಸೇನೆಯಿಂದ ತರಬೇತಿ!

    ಮಹಿಪಾಲ್‌ ಲೋಮ್ರೋರ್‌ ದೇಶೀಯ ಕ್ರಿಕೆಟ್‌ನಲ್ಲಿ ಈ ಪಿಚ್‌ನಲ್ಲಿ ಆಡುತ್ತಾರೆ. ಆರ್‌ಸಿಬಿ ತಂಡದಲ್ಲಿ ತಮ್ಮ ಫಾರ್ಮ್‌ ಸಾಬೀತು ಮಾಡಿದ್ದಾರೆ. ಆದ್ರೆ ಅವರು ಪ್ಲೇಯಿಂಗ್‌-11 ಭಾಗವಾಗಿರಲಿಲ್ಲ. ಆದ್ದರಿಂದ ಫ್ರಾಂಚೈಸಿಯಲ್ಲಿ ಭಾರತೀಯ ಕೋಚ್‌ಗಳು ಇದ್ದರೆ, ಇಂತಹ ಮೂಲಭೂತ ತಪ್ಪುಗಳು ಆಗುವುದಿಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ ಜೋಸ್‌ ಬಟ್ಲರ್‌ ಅವರ ಶತಕವನ್ನು ಹಾಡಿ ಹೊಗಳಿದ್ದಾರೆ. ಇದನ್ನೂ ಓದಿ: ಶ್ರೀಕೃಷ್ಣನ ಮೇಲಿನ ನಂಬಿಕೆಯಿಂದ ಮಾಂಸಾಹಾರ ತ್ಯಜಿಸಿದ್ರಾ ವೇಗಿ? – ಮಯಾಂಕ್‌ ತಾಯಿ ಹೇಳಿದ್ದೇನು?

    ಶನಿವಾರ ಸವಾಯ್‌ ಮಾನ್ಸಿಂಗ್‌ ಕ್ರೀಡಾಂಗಣದಲ್ಲಿ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ 10 ಓವರ್‌ಗಳಲ್ಲಿ 183 ರನ್‌ ಗಳಿಸಿತ್ತು. ರಾಜಸ್ಥಾನ್‌ ರಾಯಲ್ಸ್‌ 19.1 ಓವರ್‌ಗಳಲ್ಲೇ 189 ರನ್‌ ಗಳಿಸಿ ಗೆಲುವು ಸಾಧಿಸಿತ್ತು. ಹೌದು. ಆರ್‌ಸಿಬಿ ಪರ ಏಕಾಂಗಿ ಹೋರಾಟ ನಡೆಸಿದ್ದ ವಿರಾಟ್ ಕೊಹ್ಲಿ 67 ಎಸೆತಗಳಲ್ಲಿ ಶತಕ ಸಿಡಿಸಿದರೆ, ಒಟ್ಟಾರೆ 72 ಎಸೆತಗಳಿಂದ 12 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ ಅಜೇಯ 113 ರನ್ ದಾಖಲಿಸಿದರು.

    ಐಪಿಎಲ್‌ನಲ್ಲಿ ನಿಧಾನಗತಿಯ ಶತಕ ಸಿಡಿಸಿದ ಪ್ಲೇಯರ್ಸ್‌:
    * ವಿರಾಟ್ ಕೊಹ್ಲಿ: 67 ಎಸೆತಗಳು Vs ರಾಜಸ್ಥಾನ್ ರಾಯಲ್ಸ್, 2024
    * ಮನೀಶ್ ಪಾಂಡೆ: 67 ಎಸೆತಗಳು Vs ಡೆಕ್ಕನ್ ಚಾರ್ಜರ್ಸ್, 2009
    * ಸಚಿನ್ ತೆಂಡೂಲ್ಕರ್: 66 ಎಸೆತಗಳು Vs ವಿರುದ್ಧ ಕೊಚ್ಚಿ ಟಸ್ಕರ್ಸ್ ಕೇರಳ, 2011
    * ಡೇವಿಡ್ ವಾರ್ನರ್: 66 ಎಸೆತಗಳು Vs ಕೆಕೆಆರ್‌, 2010
    * ಜೋಸ್ ಬಟ್ಲರ್: 66 ಎಸೆತಗಳು Vs ಮುಂಬೈ ಇಂಡಿಯನ್ಸ್‌, 2022
    * ಕೆವಿನ್ ಪೀಟರ್ಸನ್: 64 ಎಸೆತಗಳು Vs ಡೆಕ್ಕನ್ ಚಾರ್ಜರ್ಸ್, 2012

  • ಐಪಿಎಲ್‌ ಇತಿಹಾಸದಲ್ಲೇ ನಿಧಾನಗತಿ ಶತಕ – ಆರ್‌ಸಿಬಿಗೆ ಕೊಹ್ಲಿನೇ ವಿಲನ್‌ ಆದ್ರಾ?

    ಐಪಿಎಲ್‌ ಇತಿಹಾಸದಲ್ಲೇ ನಿಧಾನಗತಿ ಶತಕ – ಆರ್‌ಸಿಬಿಗೆ ಕೊಹ್ಲಿನೇ ವಿಲನ್‌ ಆದ್ರಾ?

    ಜೈಪುರ: 2024ರ ಐಪಿಎಲ್ ಟೂರ್ನಿಯ ರಾಜಸ್ಥಾನ್ ರಾಯಲ್ಸ್ (Rajasthan Royals) ವಿರುದ್ಧದ ಪಂದ್ಯದಲ್ಲಿ ರಾಯಲ್‌ ಚಾಜೆಂಜರ್ಸ್‌ ಬೆಂಗಳೂರು ತಂಡದ ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ (Virat Kohli) ಅವರು ದಾಖಲೆಯ 8ನೇ ಶತಕ ಸಿಡಿಸಿದರು. ಅಲ್ಲದೇ ಐಪಿಎಲ್‌ನಲ್ಲಿ 7,500 ರನ್‌ ಪೂರೈಸಿದ ಮೊದಲ ಆಟಗಾರ ಮೈಲುಗಲ್ಲನ್ನೂ ಸ್ಥಾಪಿಸಿದರು. ಆದ್ರೆ ಈಗ ಆರ್‌ಸಿಬಿ ತಂಡದ ಸೋಲಿಗೆ ಕೊಹ್ಲಿ ಅವರನ್ನು ಹೊಣೆ ಮಾಡಲಾಗಿದೆ.

    ಶನಿವಾರ ಸವಾಯ್‌ ಮಾನ್ಸಿಂಗ್‌ ಕ್ರೀಂಡಾಗಣದಲ್ಲಿ ನಡೆದ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಅವರು ಗಳಿಸಿದ ನಿಧಾನಗತಿಯ ಶತಕವೇ ಆರ್‌ಸಿಬಿ (RCB) ತಂಡದ ಸೋಲಿಗೆ ಕಾರಣ ಎಂದು ನೆಟ್ಟಿಗರು ದೂಷಿಸಿದ್ದಾರೆ.

    ಹೌದು. ಆರ್‌ಸಿಬಿ ಪರ ಅಂತಿಮ ಎಸೆತದವರೆಗೂ ಏಕಾಂಗಿ ಹೋರಾಟ ನಡೆಸಿದ್ದ ವಿರಾಟ್ ಕೊಹ್ಲಿ 67 ಎಸೆತಗಳಲ್ಲಿ ಶತಕ ಸಿಡಿಸಿದರೆ, ಒಟ್ಟಾರೆ 72 ಎಸೆತಗಳಿಂದ 12 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ ಅಜೇಯ 113 ರನ್ ದಾಖಲಿಸಿದರು. ಆದ್ರೆ ಕೊಹ್ಲಿ ಅವರ ಈ ಶತಕವು ಐಪಿಎಲ್ ಇತಿಹಾಸದಲ್ಲೇ ಅತ್ಯಂತ ನಿಧಾನಗತಿಯ ಶತಕವಾಗಿತ್ತು. ಅಲ್ಲದೇ 20 ಓವರ್‌ಗಳ ಇನ್ನಿಂಗ್ಸ್‌ನಲ್ಲಿ ಬರೋಬ್ಬರಿ 12 ಓವರ್‌ಗಳನ್ನು ಒಬ್ಬರೇ ಎದುರಿಸಿದರು. ಹಿಂದಿನ ಕೆಕೆಆರ್‌ ವಿರುದ್ಧ ನಡೆದ ಪಂದ್ಯದಲ್ಲೂ ಕೊಹ್ಲಿ 59 ಎಸೆತಗಳನ್ನ ಎದುರಿಸಿ ಕೇವಲ 83 ರನ್‌ (4 ಬೌಂಡರಿ, 4 ಸಿಕ್ಸರ್‌) ಕಲೆಹಾಕಿದ್ದರು. ಕೊಹ್ಲಿ ಅವರ ನಿಧಾನಗತಿಯ ಬ್ಯಾಟಿಂಗ್‌ನಿಂದಲೇ ತಂಡ ಸೋಲಿಗೆ ತುತ್ತಾಯಿತು ಎಂದು ನೆಟ್ಟಿಗರು ಅಸಮಾಧಾನ ಹೊರಹಾಕಿದ್ದಾರೆ.

    ಆರ್‌ಸಿಬಿ ಮೊದಲ ವಿಕೆಟ್‌ಗೆ 14 ಓವರ್‌ಗಳಲ್ಲಿ 125 ರನ್‌ ಗಳಿಸಿತ್ತು. ದಿನೇಶ್‌ ಕಾರ್ತಿಕ್‌, ಮಹಿಪಾಲ್‌ ಲೊಮ್ರೋರ್‌, ಅನೂಜ್‌ ರಾವತ್‌ ನಂತಹ ಸ್ಪೋಟಕ ಆಟಗಾರರ ವಿಕೆಟ್‌ಗಳಿದ್ದವು. ಆದ್ರೆ ಕ್ರೀಸ್‌ ಬಿಟ್ಟುಕೊಡದ ಕೊಹ್ಲಿ ನಿಧಾನಗತಿಯ ಬ್ಯಾಟಿಂಗ್‌ ಅನ್ನೇ ಮುಂದುವರಿಸಿದರು. ಇದು ತಂಡದ ಬೃಹತ್‌ ಮೊತ್ತದ ಮೇಲೆ ಭಾರೀ ಪರಿಣಾಮ ಬೀರಿತು. ಇದರಿಂದಾಗಿ ಕೊಹ್ಲಿ ಅವರ ನಿಧಾನಗತಿಯ ಬ್ಯಾಟಿಂಗ್‌ ಸೋಲಿಗೆ ಕಾರಣ ಎಂದು ನೆಟ್ಟಿಗರು ದೂಷಿಸಿದ್ದಾರೆ. ಆದ್ರೆ ನಾಯಕ ಡುಪ್ಲೆಸಿಸ್‌ ಹೊರತುಪಡಿಸಿ ಉಳಿದ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಕೊಹ್ಲಿ ಅವರೇ ಏಕಾಂಗಿ ಹೋರಾಟ ನಡೆಸಿದ್ದಾರೆ ಎಂದು ಕೊಹ್ಲಿಯನ್ನ ಕೆಲವರು ಬೆಂಬಲಿಸಿದ್ದಾರೆ.

    ಐಪಿಎಲ್‌ನಲ್ಲಿ ನಿಧಾನಗತಿಯ ಶತಕ ಸಿಡಿಸಿದ ಪ್ಲೇಯರ್ಸ್‌:
    * ವಿರಾಟ್ ಕೊಹ್ಲಿ: 67 ಎಸೆತಗಳು Vs ರಾಜಸ್ಥಾನ್ ರಾಯಲ್ಸ್, 2024
    * ಮನೀಶ್ ಪಾಂಡೆ: 67 ಎಸೆತಗಳು Vs ಡೆಕ್ಕನ್ ಚಾರ್ಜರ್ಸ್, 2009
    * ಸಚಿನ್ ತೆಂಡೂಲ್ಕರ್: 66 ಎಸೆತಗಳು Vs ವಿರುದ್ಧ ಕೊಚ್ಚಿ ಟಸ್ಕರ್ಸ್ ಕೇರಳ, 2011
    * ಡೇವಿಡ್ ವಾರ್ನರ್: 66 ಎಸೆತಗಳು Vs ಕೆಕೆಆರ್‌, 2010
    * ಜೋಸ್ ಬಟ್ಲರ್: 66 ಎಸೆತಗಳು Vs ಮುಂಬೈ ಇಂಡಿಯನ್ಸ್‌, 2022
    * ಕೆವಿನ್ ಪೀಟರ್ಸನ್: 64 ಎಸೆತಗಳು Vs ಡೆಕ್ಕನ್ ಚಾರ್ಜರ್ಸ್, 2012

    ಐಪಿಎಲ್‌ನಲ್ಲಿ ಹೆಚ್ಚು ಶತಕ ಸಿಡಿಸಿದ ಟಾಪ್‌-5 ಪ್ಲೇಯರ್ಸ್‌
    * ವಿರಾಟ್‌ ಕೊಹ್ಲಿ – 8
    * ಕ್ರಿಸ್‌ ಗೇಲ್‌ – 6
    * ಜೋಸ್‌ ಬಟ್ಲರ್‌ – 6
    * ಕೆ.ಎಲ್‌ ರಾಹುಲ್‌ – 4
    * ಶೇನ್‌ ವಾಟ್ಸನ್‌ – 4

  • 17ನೇ ಆವೃತ್ತಿ ಐಪಿಎಲ್‌ನ ಚೊಚ್ಚಲ ಶತಕ – ರನ್‌ ಮಿಷಿನ್‌ ಕೊಹ್ಲಿಯ ಹೊಸ ಮೈಲುಗಲ್ಲು!

    17ನೇ ಆವೃತ್ತಿ ಐಪಿಎಲ್‌ನ ಚೊಚ್ಚಲ ಶತಕ – ರನ್‌ ಮಿಷಿನ್‌ ಕೊಹ್ಲಿಯ ಹೊಸ ಮೈಲುಗಲ್ಲು!

    ಜೈಪುರ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ (Virat Kohli) ಅಮೋಘ ಶತಕ ಸಿಡಿಸುವ ಮೂಲಕ ಐಪಿಎಲ್‌ನಲ್ಲಿ (IPL 2024) ಮತ್ತೊಂದು ಮೈಲುಗಲ್ಲು ಸಾಧಿಸಿದ್ದಾರೆ.

    ಇಲ್ಲಿನ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ರಾಜಸ್ಥಾನ್‌ ರಾಯಲ್ಸ್‌ (Rajasthan Royals) ವಿರುದ್ಧ ನಡೆದ ಪಂದ್ಯದಲ್ಲಿ ಕೊಹ್ಲಿ, ಐಪಿಎಲ್‌ನಲ್ಲಿ ತಮ್ಮ 8ನೇ ಶತಕ ಸಿಡಿಸಿದ್ದಾರೆ. ಅಲ್ಲದೇ 17ನೇ ಆವೃತ್ತಿಯಲ್ಲಿ ದಾಖಲಾದ ಚೊಚ್ಚಲ ಶತಕವೂ ಇದಾಗಿದೆ. ಪ್ರಸ್ತುತ ಟೂರ್ನಿಯ ಆರೆಂಜ್‌ ಕ್ಯಾಪ್‌ ರೇಸ್‌ನಲ್ಲಿ ಮೊದಲ ಸ್ಥಾನದಲ್ಲಿರುವ ಕೊಹ್ಲಿ, ಐಪಿಎಲ್‌ನಲ್ಲಿ ಒಟ್ಟು 7579 ರನ್‌ ಪೂರೈಸಿದ್ದಾರೆ. ಈ ಮೂಲಕ ಇಡೀ ಐಪಿಎಲ್‌ ಆವೃತ್ತಿಯಲ್ಲೇ ಅತಿಹೆಚ್ಚು ರನ್‌ ಸಿಡಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

    ಆರೆಂಜೆ ಕ್ಯಾಪ್‌ ರೇಸ್‌ನಲ್ಲಿರುವ ಟಾಪ್‌-5 ಆಟಗಾರರು:
    * ವಿರಾಟ್‌ ಕೊಹ್ಲಿ – 316 ರನ್‌ – 5 ಪಂದ್ಯ
    * ರಿಯಾನ್‌ ಪರಾಗ್‌ – 181 ರನ್‌ – 4 ಪಂದ್ಯ
    * ಹೆನ್ರಿಕ್‌ ಕ್ಲಾಸೆನ್‌ – 177 ರನ್‌ – 4 ಪಂದ್ಯ
    * ಶುಭಮನ್‌ ಗಿಲ್‌ – 164 ರನ್‌ – 4 ಪಂದ್ಯ
    * ಅಭಿಷೇಕ್‌ ಶರ್ಮಾ – 161 ರನ್‌ – 4 ಪಂದ್ಯ

    ಐಪಿಎಲ್‌ನಲ್ಲಿ ಹೆಚ್ಚು ಶತಕ ಸಿಡಿಸಿದ ಟಾಪ್‌-5 ಪ್ಲೇಯರ್ಸ್‌
    * ವಿರಾಟ್‌ ಕೊಹ್ಲಿ – 8
    * ಕ್ರಿಸ್‌ ಗೇಲ್‌ – 6
    * ಜೋಸ್‌ ಬಟ್ಲರ್‌ – 5
    * ಕೆ.ಎಲ್‌ ರಾಹುಲ್‌ – 4
    * ಶೇನ್‌ ವಾಟ್ಸನ್‌ – 4

    ಐಪಿಎಲ್‌ನ ಟಾಪ್‌-5 ಸ್ಕೋರರ್‌
    * ವಿರಾಟ್‌ ಕೊಹ್ಲಿ – 7,579 ರನ್‌
    * ಶಿಖರ್‌ ಧವನ್‌ – 6,755 ರನ್‌
    * ಡೇವಿಡ್‌ ವಾರ್ನರ್‌ – 6,545 ರನ್‌
    * ರೋಹಿತ್‌ ಶರ್ಮಾ – 6,280 ರನ್‌
    * ಸುರೇಶ್‌ ರೈನಾ – 5,528 ರನ್‌

  • ಮಹಿಳಾ ಸಬಲೀಕರಣಕ್ಕೆ ʻಪಿಂಕ್‌ ಪ್ರಾಮಿಸ್‌ʼ – ಇಂದಿನ ಪಂದ್ಯದ ಪ್ರತಿ ಸಿಕ್ಸರ್‌ನಿಂದ ಸಿಗಲಿದೆ 6 ಮನೆಗಳಿಗೆ ಸೌರಶಕ್ತಿ

    ಮಹಿಳಾ ಸಬಲೀಕರಣಕ್ಕೆ ʻಪಿಂಕ್‌ ಪ್ರಾಮಿಸ್‌ʼ – ಇಂದಿನ ಪಂದ್ಯದ ಪ್ರತಿ ಸಿಕ್ಸರ್‌ನಿಂದ ಸಿಗಲಿದೆ 6 ಮನೆಗಳಿಗೆ ಸೌರಶಕ್ತಿ

    ಜೈಪುರ: ರಾಜಸ್ಥಾನ್‌ ರಾಯಲ್ಸ್ (Rajasthan Royals) ತಂಡವು ಶನಿವಾರ (ಇಂದು) ಆರ್‌ಸಿಬಿ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಪಿಂಕ್‌ ಬಣ್ಣದ ವಿಶೇಷ ಜೆರ್ಸಿ ಧರಿಸಿ ಕಣಕ್ಕಿಳಿಯಲಿದೆ. ರಾಜಸ್ಥಾನದ ಮಹಿಳೆಯರ (Rajasthan Women) ಸಬಲೀಕರಣಕ್ಕೆ ನೆರವಾಗುವ ಉದ್ದೇಶವೂ ಇದಾಗಿದೆ.

    ರಾಜಸ್ಥಾನ್‌ ರಾಯಲ್ಸ್‌ ಮತ್ತು ಆರ್‌ಸಿಬಿ (RR vs RCB) ನಡುವಿನ ಪಂದ್ಯ ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆಯಲಿದೆ. ಸಂಜೆ 7:30ಕ್ಕೆ ಪಂದ್ಯ ಆರಂಭವಾಗಲಿದೆ. ಮಹಿಳೆಯರಿಗೆ ನೆರವಾಗುವ ಉದ್ದೇಶದಿಂದ #PinkPromise ಅಭಿಯಾನ ಆರಂಭಿಸಿದೆ.

    ಏನಿದು ʻಪಿಂಕ್‌ ಪ್ರಾಮಿಸ್‌ʼಅಭಿಯಾನ?
    ರಾಜಸ್ಥಾನ್‌ ರಾಯಲ್ಸ್‌ ತಂಡವು ಮಹಿಳಾ ಸಬಲೀಕರಣ ಉದ್ದೇಶದಿಂದ ಈ ಅಭಿಮಾನ ಆರಂಭಿಸಿದೆ. ಅದಕ್ಕಾಗಿ ವಿಶೇಷ ಪಿಂಕ್‌ ಜೆರ್ಸಿ ಧರಿಸಿ ಆರ್‌ಸಿಬಿ ವಿರುದ್ಧ ಕಣಕ್ಕಿಳಿಯಲಿದೆ. ಈ ಪಂದ್ಯದ ಪ್ರತಿ ಟಿಕೆಟ್‌ ಬೆಲೆಯಲ್ಲಿ 100 ರೂ.ಗಳನ್ನ ಮಹಿಳಾ ಸಬಲೀಕರಣ ಕಾರ್ಯಕ್ಕೆ ಸಮರ್ಪಿಸಲಿದೆ. ಜೊತೆಗೆ ʻಆಲ್ ಪಿಂಕ್ ರಾಯಲ್ಸ್ʼ ಜೆರ್ಸಿ ಮಾರಾಟದ ಮೊತ್ತವನ್ನೂ ಇದಕ್ಕೆ ವಿನಿಯೋಗಿಸಲಿದೆ. ಅಷ್ಟೇ ಅಲ್ಲದೇ ರಾಜಸ್ಥಾನ-ಆರ್‌ಸಿಬಿ ತಂಡಗಳು ಈ ಪಂದ್ಯದಲ್ಲಿ ಸಿಡಿಸುವ ಪ್ರತಿ ಸಿಕ್ಸರ್‌ಗೆ ಜೈಪುರ ಜಿಲ್ಲೆಯ ಸಂಭರ್ ಗ್ರಾಮದ ಪ್ರತಿ 6 ಮನೆಗಳಿಗೆ ಸೌರಶಕ್ತಿಯನ್ನು ಫ್ರಾಂಚೈಸಿ ವತಿಯಿಂದ ಒದಗಿಸಲಾಗುತ್ತದೆ.

    ಐಪಿಎಲ್‌ನಲ್ಲಿ ಕಂಡ ವಿಶೇಷ ಅಭಿಯಾನಗಳು?
    ಬಿಸಿಸಿಐ ಸೇರಿದಂತೆ ಹಲವು ಫ್ರಾಂಚೈಸಿಗಳು ಐಪಿಎಲ್‌ ಟೂರ್ನಿಯನ್ನ ಕೇವಲ ಹಣದ ಉದ್ದೇಶಕ್ಕಾಗಿ ನಡೆಸದೇ ವಿಶಿಷ್ಟ ಜಾಗೃತಿ ಅಭಿಯಾನಗಳನ್ನೂ ಹಮ್ಮಿಕೊಳ್ಳಲಾಗುತ್ತದೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಪ್ರತಿ ಆವೃತ್ತಿಯ ಒಂದು ಪಂದ್ಯದಲ್ಲಿ ಹಸಿರು ಪರಿಸರ ಜಾಗೃತಿ ದೃಷ್ಟಿಯಿಂದ ಹಸಿರು ಜೆರ್ಸಿಯಲ್ಲಿ ಕಣಕ್ಕಿಳಿಯುತ್ತದೆ. ಕಳೆದ ವರ್ಷ ಗುಜರಾತ್‌ ಟೈಟಾನ್ಸ್‌ ತಂಡವು ಅನ್ನನಾಳದ ಕ್ಯಾನ್ಸರ್‌ ಕುರಿತು ಜಾಗೃತಿಗಾಗಿ ಲ್ಯಾವೆಂಡರ್ ಬಣ್ಣದ ಜೆರ್ಸಿಯಲ್ಲಿ ಕಣಕ್ಕಿಳಿದಿತ್ತು. ಅಲ್ಲದೇ 2023ರ ಐಪಿಎಲ್‌ ಆವೃತ್ತಿಯ ಪ್ಲೇಆಫ್‌ ಮತ್ತು ಫೈನಲ್ ‌ಪಂದ್ಯಗಳಲ್ಲಿ ಪ್ರತಿ ಡಾಟ್‌ ಬಾಲ್‌ಗೆ 500 ಗಿಡಗಳನ್ನು ನೆಡುವ ಅಭಿಯಾನವನ್ನೂ ಹಮ್ಮಿಕೊಂಡಿತ್ತು.