Tag: ಐಪಿಎಲ್

  • ರೈಸ್‌ ಆಗಿದ್ದ ಸನ್‌ ತಾಪ ಇಳಿಸಿದ ಚೆನ್ನೈ; ಸಿಎಸ್‌ಕೆಗೆ 78 ರನ್‌ಗಳ ಭರ್ಜರಿ ಜಯ – 3ನೇ ಸ್ಥಾನಕ್ಕೆ ಜಿಗಿದ ಹಾಲಿ ಚಾಂಪಿಯನ್ಸ್‌!

    ರೈಸ್‌ ಆಗಿದ್ದ ಸನ್‌ ತಾಪ ಇಳಿಸಿದ ಚೆನ್ನೈ; ಸಿಎಸ್‌ಕೆಗೆ 78 ರನ್‌ಗಳ ಭರ್ಜರಿ ಜಯ – 3ನೇ ಸ್ಥಾನಕ್ಕೆ ಜಿಗಿದ ಹಾಲಿ ಚಾಂಪಿಯನ್ಸ್‌!

    ಚೆನ್ನೈ: ನಾಯಕ ರುತುರಾಜ್‌ ಗಾಯಕ್ವಾಡ್‌ (Ruturaj Gaikwad), ಡೇರಿಲ್‌ ಮಿಚೆಲ್‌ ಅವರ ಸ್ಫೋಟಕ ಬ್ಯಾಟಿಂಗ್‌, ಸಂಘಟಿತ ಬೌಲಿಂಗ್‌ ಪ್ರದರ್ಶನದಿಂದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು ಸನ್‌ ರೈಸರ್ಸ್‌ ಹೈದರಾಬಾದ್‌ (CSK vs SRH) ವಿರುದ್ಧ 78 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ 9 ಪಂದ್ಯಗಳಲ್ಲಿ 5ರಲ್ಲಿ ಗೆಲುವು ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಜಿಗಿದಿದೆ.

    ಇಲ್ಲಿನ ಚೆಪಾಕ್‌ ಕ್ರೀಡಾಂಗಣದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಸಿಎಸ್‌ಕೆ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 212 ರನ್‌ ಬಾರಿಸಿತ್ತು. ಈ ಗುರಿ ಬೆನ್ನತ್ತಿದ ಸನ್‌ ರೈಸರ್ಸ್‌ ಹೈದರಾಬಾದ್‌ (SRH) ತಂಡ 18.5 ಓವರ್‌ಗಳಲ್ಲೇ 134 ರನ್‌ಗಳಿಗೆ ಆಲೌಟ್‌ ಆಗಿ ಸೋಲೊಪ್ಪಿಕೊಂಡಿತು. ಇದನ್ನೂ ಓದಿ: T20 ವಿಶ್ವಕಪ್‌ಗೆ ಶೀಘ್ರದಲ್ಲೇ ಭಾರತ ತಂಡ ಪ್ರಕಟ; ರೋಹಿತ್‌ ಜೊತೆಗೆ ಆರಂಭಿಕ ಯಾರಾಗ್ತಾರೆ ಅನ್ನೋದೇ ಸಸ್ಪೆನ್ಸ್‌!

    ಚೇಸಿಂಗ್‌ ಆರಂಭಿಸಿದ ಸನ್‌ ರೈಸರ್ಸ್‌ ತಂಡ ಆರಂಭದಿಂದಲೇ ವಿಕೆಟ್‌ ಕಳೆದುಕೊಂಡಿತು. ಸಿಕ್ಸರ್‌-ಬೌಂಡರಿ ಸಿಡಿಸುತ್ತಿದ್ದ ಅಗ್ರ ಕ್ರಮಾಂಕದ ಟಾಪ್‌ ಬ್ಯಾಟರ್ಸ್‌ಗಳು ಅಲ್ಪ ಮೊತ್ತಕ್ಕೆ ನೆಲ ಕಚ್ಚಿದರು. ಇದು ಚೆನ್ನೈ ತಂಡಕ್ಕೆ ಲಾಭವಾಯಿತು. ಟ್ರಾವಿಸ್‌ ಹೆಡ್‌, ಅಭಿಷೇಕ್‌ ಶರ್ಮಾ, ಏಡನ್‌ ಮಾರ್ಕ್ರಮ್‌ ಬ್ಯಾಕ್‌ ಟು ಬ್ಯಾಕ್‌ ಪೆವಿಲಿಯನ್‌ ಪರೇಡ್‌ ನಡೆಸಿದರು. ಹಾಗಾಗಿ ಸಹಜವಾಗಿಯೇ ಗೆಲುವು ಚೆನ್ನೈ ತಂಡದ ಪಾಲಾಯಿತು.

    ಸನ್‌ ರೈಸರ್ಸ್‌ ತಂಡದ ಪರ ಟ್ರಾವಿಸ್‌ ಹೆಡ್‌ (Travis Head) 13 ರನ್‌, ಅಭಿಷೇಕ್‌ ಶರ್ಮಾ 15 ರನ್‌, ಏಡನ್‌ ಮಾರ್ಕ್ರಮ್‌ 32 ರನ್‌, ನಿತೀಶ್‌ ಕುಮಾರ್‌ ರೆಡ್ಡಿ 15 ರನ್‌, ಹೆನ್ರಿಕ್‌ ಕ್ಲಾಸೆನ್‌ 20 ರನ್‌, ಅಬ್ದುಲ್‌ ಸಮದ್‌ 19 ರನ್‌, ಪ್ಯಾಟ್‌ ಕಮ್ಮಿನ್ಸ್‌ 5 ರನ್‌, ಶಹಬಾಜ್‌ 7 ರನ್‌, ಜಯದೇವ್‌ ಉನದ್ಕಟ್‌ 1 ರನ್‌ ಗಳಿಸಿದ್ರೆ, ಭುವನೇಶ್ವರ್‌ ಕುಮಾರ್‌ 4 ರನ್‌ ಗಳಿಸಿ ಕ್ರೀಸ್‌ನಲ್ಲಿ ಉಳಿದರು.

    ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ್ದ ಸಿಎಸ್‌ಕೆ ಮತ್ತೊಬ್ಬೆ ಬೌಲಿಂಗ್‌ ಪಿಚ್‌ನಲ್ಲಿ ರನ್‌ ಹೊಳೆ ಹರಿಸಿತ್ತು. 20 ಓವರ್‌ಗಳಲ್ಲಿ ಕೇವಲ 3 ವಿಕೆಟ್‌ ನಷ್ಟಕ್ಕೆ 212 ರನ್‌ ಗಳಿಸಿತ್ತು. ಆರಂಭಿಕ ಅಜಿಂಕ್ಯಾ ರಹಾನೆ 9 ರನ್‌ಗಳಿಗೆ ವಿಕೆಟ್‌ ಕೈ ಚೆಲ್ಲಿದರೂ ಇತರ ಅಗ್ರ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ಸಹಾಯದಿಂದ ಬೃಹತ್‌ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಯಿತು. ಇದನ್ನೂ ಓದಿ: 10 ಸಿಕ್ಸರ್‌ನೊಂದಿಗೆ ಸ್ಫೋಟಕ ಶತಕ – ಆರ್‌ಸಿಬಿಗೆ ವಿಲ್‌ ಪವರ್‌; ಟೈಟಾನ್ಸ್‌ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ

    ಕೊನೇ ಓವರ್‌ನಲ್ಲಿ ಕೈತಪ್ಪಿದ ಶತಕ:
    ಆರಂಭಿಕನಾಗಿ ಕಣಕ್ಕಿಳಿದಿದ್ದ ರುತುರಾಜ್‌ ಗಾಯಕ್ವಾಡ್‌ 54 ಎಸೆತಗಳಲ್ಲಿ 98 ರನ್‌ ಗಳಿಸಿದ್ದರು. ಇಂದು ತಮ್ಮ 2ನೇ ಐಪಿಎಲ್‌ ಶತಕ ದಾಖಲಿಸುವ ಉತ್ಸಾಹದಲ್ಲಿದ್ದರು. ಆದ್ರೆ 20ನೇ ಓವರ್‌ನ 2ನೇ ಎಸೆತದಲ್ಲೇ ಸಿಕ್ಸರ್‌ ಸಿಡಿಸಲು ಯತ್ನಿಸಿ ಬೌಂಡರಿ ಲೈನ್‌ ಬಳಿಕ ಕ್ಯಾಚ್‌ಗೆ ತುತ್ತಾದರು.

    ಸಿಎಸ್‌ಕೆ ಪರ ರುತುರಾಜ್‌ ಗಾಯಕ್ವಾಡ್‌ 54 ಎಸೆತಗಳಲ್ಲಿ 98 ರನ್‌ (3 ಸಿಕ್ಸರ್‌, 10 ಬೌಂಡರಿ), ಡೇರಿಲ್‌ ಮಿಚೆಲ್‌ 52 ರನ್‌ (32 ಎಸೆತ, 7 ಬೌಂಡರಿ, 1 ಸಿಕ್ಸರ್‌), ಶಿವಂ ದುಬೆ 39 ರನ್‌ (20 ಎಸೆತ, 4 ಸಿಕ್ಸರ್‌, 1 ಬೌಂಡರಿ), ಅಜಿಂಕ್ಯಾ ರಹಾನೆ 9 ರನ್‌, ಎಂ.ಎಸ್‌ ಧೋನಿ 5 ರನ್‌ ಗಳಿಸಿದರು.

    ಸನ್‌ ರೈಸರ್ಸ್‌ ಹೈದರಾಬಾದ್‌ ಪರ ಭುವನೇಶ್ವರ್‌ ಕುಮಾರ್‌, ಟಿ ನಟರಾಜನ್‌ ಹಾಗೂ ಜಯದೇವ್‌ ಉನಾದ್ಕಟ್‌ ತಲಾ ಒಂದೊಂದು ವಿಕೆಟ್‌ ಕಿತ್ತರು.

  • ಮತ್ತೆ ಕಳಪೆ ಸ್ಟ್ರೈಕ್‌ರೇಟ್‌ ಮುಂದುವರಿಸಿದ ಕೊಹ್ಲಿ – ಹಿರಿಯ ಕ್ರಿಕೆಟಿಗರಿಂದ ವ್ಯಾಪಕ ಟೀಕೆ

    ಮತ್ತೆ ಕಳಪೆ ಸ್ಟ್ರೈಕ್‌ರೇಟ್‌ ಮುಂದುವರಿಸಿದ ಕೊಹ್ಲಿ – ಹಿರಿಯ ಕ್ರಿಕೆಟಿಗರಿಂದ ವ್ಯಾಪಕ ಟೀಕೆ

    – ವಿರಾಟ್‌ ಪರ ಬ್ಯಾಟ್‌ ಬೀಸಿದ ಫಾಫ್‌ ಡು ಪ್ಲೆಸಿಸ್‌

    ಹೈದರಾಬಾದ್‌: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡದ ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ (Virat kohli) ಐಪಿಎಲ್‌ನಲ್ಲಿ ಮತ್ತೆ ಕಳಪೆ ಸ್ಟ್ರೈಕ್‌ರೇಟ್‌ ಮುಂದುವರಿಸಿದ್ದಾರೆ. ಇದರಿಂದ ಹಿರಿಯ ಕ್ರಿಕೆಟಿಗರೂ ವಿರಾಟ್‌ ವಿರುದ್ಧ ಅಸಮಾಧಾನ ಹೊರಹಾಕಿದ್ದು, ಕೊಹ್ಲಿಯನ್ನು ಟಿ20 ವಿಶ್ವಕಪ್‌ನಿಂದ ಕೈಬಿಡುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ.

    ಹೌದು. ಇತ್ತೀಚೆಗೆ ರಾಜಸ್ಥಾನ್‌ ರಾಯಲ್ಸ್‌ (RR) ವಿರುದ್ಧದ ಪಂದ್ಯದಲ್ಲಿ ಕೊಹ್ಲಿ 67 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಇದು ಐಪಿಎಲ್‌ ಇತಿಹಾಸದಲ್ಲೇ ಅತ್ಯಂತ ನಿಧಾನಗತಿಯ ಶತಕವಾಗಿತ್ತು. ಗುರುವಾರ ಹೈದರಾಬಾದ್‌ (SRH) ವಿರುದ್ಧ ನಡೆದ ಪಂದ್ಯದಲ್ಲೂ 118.60 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಕೊಹ್ಲಿ 43 ಎಸೆತಗಳಲ್ಲಿ ಕೇವಲ 51 ರನ್‌ ಸಿಡಿಸಿದ್ದಾರೆ. ಇದರಲ್ಲಿ 4 ಬೌಂಡರಿ, ಒಂದೇ ಒಂದು ಸಿಕ್ಸರ್‌ ದಾಖಲಾಗಿದೆ. ಇದು ಕೆಲ ಅಭಿಮಾನಿಗಳ ಅಸಮಾಧಾನಕ್ಕೂ ಕಾರಣವಾಗಿದೆ.

    ಹೈದರಾಬಾದ್‌ ವಿರುದ್ಧ ಕೊಹ್ಲಿಯೊಂದಿಗೆ ಕಣಕ್ಕಿಳಿದಿದ್ದ ರಜತ್‌ ಪಾಟಿದಾರ್‌ ಕೇವಲ 20 ಎಸೆತಗಳಲ್ಲಿ ಸ್ಫೋಟಕ ಫಿಫ್ಟಿ ಸಿಡಿಸಿದ್ದರು. ನಂತರ ಬಂದ ಕ್ಯಾಮರೂನ್‌ ಗ್ರೀನ್‌ 185 ಸ್ಟ್ರೈಕ್‌ರೇಟ್‌ನಲ್ಲಿ 37 ರನ್‌ ಚಚ್ಚಿದ್ದರು. ಆದ್ರೆ ಆರಂಭಿಕನಾಗಿ ಕಣಕ್ಕಿಳಿದ ಕೊಹ್ಲಿ 51 ರನ್‌ ಗಳಿಸಲು 43 ಎಸೆತಗಳನ್ನು ತೆಗೆದುಕೊಂಡರು. ಹಾಗಾಗಿ ಕೊಹ್ಲಿ ಕಳಪೆ ಸ್ಟ್ರೈಕ್‌ರೇಟ್‌ ವಿರುದ್ಧ ಸುನೀಲ್‌ ಗವಾಸ್ಕರ್‌, ಇರ್ಫಾನ್‌ ಪಠಾಣ್‌ ಅಸಮಾಧಾನ ಹೊರಹಾಕಿದ್ದಾರೆ.

    ಕೊಹ್ಲಿ ಬೆನ್ನಿಗೆ ನಿಂತ ಕ್ಯಾಪ್ಟನ್‌:
    ವಿರಾಟ್‌ ಕೊಹ್ಲಿ ಸದ್ಯ ಅಗ್ರ ಸ್ಕೋರರ್‌ ಆಗಿದ್ದಾರೆ. ಇತರ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್‌ ಪರೇಡ್‌ ನಡೆಸುತ್ತಿದ್ದರೂ ಕೊಹ್ಲಿ ರನ್‌ ಕಲೆಹಾಕುತ್ತಿದ್ದಾರೆ. ಕಳೆದ ಎರಡು ಪಂದ್ಯಗಳಲ್ಲಿ ನಮ್ಮ ಹೋರಾಟ ಉತ್ತಮವಾಗಿತ್ತು. ಕೆಕೆಆರ್‌ ವಿರುದ್ಧ ತೀವ್ರ ಪೈಪೋಟಿ ನೀಡಿದ ಹೊರತಾಗಿಯೂ 1 ರನ್‌ನಿಂದ ಸೋಲಬೇಕಾಯಿತು. ಆರಂಭಿಕ ಪಂದ್ಯಗಳಲ್ಲಿ ಕೊಹ್ಲಿ ಮಾತ್ರ ರನ್‌ ಗಳಿಸುತ್ತಿದ್ದರು. ಈಗ ಇತರ ಆಟಗಾರರು ರನ್‌ ಗಳಿಸುತ್ತಿದ್ದಾರೆ. ಕ್ಯಾಮರೂನ್‌ ಗ್ರೀನ್‌ ಸಹ ಫಾರ್ಮ್‌ಗೆ ಮರಳಿದ್ದಾರೆ ಎಂದು ಶ್ಲಾಘಿಸಿದ್ದಾರೆ.

    ತವರಿನಲ್ಲಿ ನಡೆದ ಪಂದ್ಯದಲ್ಲಿ ಹೈದರಾಬಾದ್‌ 287 ರನ್‌ ಗಳಿಸಿದ್ದಾಗ ನಮ್ಮ ತಂಡ 262 ರನ್‌ ಗಳಿಸಿತ್ತು. ಇದು ಸಹ ಉತ್ತಮ ಪೈಪೋಟಿ ಆಗಿತ್ತು. ಏಕೆಂದರೆ ಆ ಸಮಯದಲ್ಲಿ ಪ್ರಮುಖ ವಿಕೆಟ್‌ ಕಳೆದುಕೊಂಡಿದ್ದ ಕಾರಣ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಹೇಳಿಕೊಂಡಿದ್ದಾರೆ.

    ಹೈದರಾಬಾದ್‌ನ ರಾಜೀವ್‌ಗಾಂಧಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ತಂಡ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 206 ರನ್‌ ಬಾರಿಸಿತ್ತು. 207 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ಸನ್‌ ರೈಸರ್ಸ್‌ ಹೈದರಾಬಾದ್‌ 8 ವಿಕೆಟ್‌ ನಷ್ಟಕ್ಕೆ 171 ರನ್‌ ಗಳಿಸಲಷ್ಟೇ ಸಾಧ್ಯವಾಗಿ ಸೋಲೊಪ್ಪಿಕೊಂಡಿತು.

  • IPL 2024: ತವರಿನಲ್ಲೇ ಸನ್‌ ರೈಸರ್ಸ್‌ಗೆ ಚೊಂಬು – ಅಬ್ಬರಿಸಿ ಬೊಬ್ಬರಿದ ಆರ್‌ಸಿಬಿಗೆ 35 ರನ್‌ಗಳ ಭರ್ಜರಿ ಜಯ

    IPL 2024: ತವರಿನಲ್ಲೇ ಸನ್‌ ರೈಸರ್ಸ್‌ಗೆ ಚೊಂಬು – ಅಬ್ಬರಿಸಿ ಬೊಬ್ಬರಿದ ಆರ್‌ಸಿಬಿಗೆ 35 ರನ್‌ಗಳ ಭರ್ಜರಿ ಜಯ

    ಹೈದರಾಬಾದ್‌: ಕೊನೆಗೂ ತವರಿನಲ್ಲಿ ಅನುಭವಿಸಿದ ವಿರೋಚಿತ ಸೋಲಿಗೆ ಆರ್‌ಸಿಬಿ, ಸನ್‌ ರೈಸರ್ಸ್‌ ಹೈದರಾಬಾದ್‌ (SRH) ವಿರುದ್ಧ ಸೇಡು ತೀರಿಸಿಕೊಂಡಿದೆ. ಇಲ್ಲಿನ ರಾಜೀವ್‌ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ ಹೈದರಾಬಾದ್‌ ವಿರುದ್ಧ 35 ರನ್‌ಗಳ ಭರ್ಜರಿ ಜಯ ಸಾಧಿಸಿದೆ.

    ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ತಂಡ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 206 ರನ್‌ ಬಾರಿಸಿತ್ತು. 207 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ಸನ್‌ ರೈಸರ್ಸ್‌ ಹೈದರಾಬಾದ್‌ 8 ವಿಕೆಟ್‌ ನಷ್ಟಕ್ಕೆ 171 ರನ್‌ ಗಳಿಸಲಷ್ಟೇ ಸಾಧ್ಯವಾಗಿ ಸೋಲೊಪ್ಪಿಕೊಂಡಿತು.

    ಬೃಹತ್‌ ಮೊತ್ತದ ಚೇಸಿಂಗ್‌ ಆರಂಭಿಸಿದ್ದ ಸನ್‌ ರೈಸರ್ಸ್‌ ತಂಡ ಆರಂಭದಿಂದಲೇ ಪ್ರಮುಖ ವಿಕೆಟ್‌ಗಳನ್ನ ಕಳೆದುಕೊಂಡಿತು. ಆರ್‌ಸಿಬಿ ತವರು ಕ್ರೀಡಾಂಗಣದಲ್ಲಿ ಅಬ್ಬರಿಸಿ ಬೊಬ್ಬರಿದಿದ್ದ ಸನ್‌ ರೈಸರ್ಸ್‌ ಬ್ಯಾಟರ್‌ಗಳು ಪೆವಿಲಿಯನ್‌ ಪರೇಡ್‌ ನಡೆಸಿದರು. 5 ಓವರ್‌ಗಳಲ್ಲಿ 56 ರನ್‌ಗಳಿಗೆ ಹೈದರಾಬಾದ್‌ ತಂಡ ಪ್ರಮುಖ ನಾಲ್ಕು ವಿಕೆಟ್‌ ಕಳೆದುಕೊಂಡಿತ್ತು. ನಂತರ ಕ್ರೀಸ್‌ಗಿಳಿದ ಬ್ಯಾಟರ್ಸ್‌ಗಳು ಆರ್‌ಸಿಬಿ ಎದುರು ನೆಲಕಚ್ಚಿದ್ದರಿಂದ ಸನ್‌ರೈಸರ್ಸ್‌ ತಂಡ ಸೋಲು ಎದುರಿಸಬೇಕಾಯಿತು.

    ಹೈದರಾಬಾದ್‌ ಪರ ಅಭಿಷೇಕ್‌ ಶರ್ಮಾ (Abhishek Sharma) 31 ರನ್‌, ನಾಯಕ ಪ್ಯಾಟ್‌ ಕಮ್ಮಿನ್ಸ್‌ (Pat Cummins) 31 ರನ್‌, ನಿತೀಶ್‌ ಕುಮಾರ್‌ ರೆಡ್ಡಿ 13 ರನ್‌, ಟ್ರಾವಿಸ್‌ ಹೆಡ್‌ 1 ರನ್‌, ಹೆನ್ರಿಕ್‌ ಕ್ಲಾಸೆನ್‌, ಏಡನ್‌ ಮಾರ್ಕ್ರಮ್‌ ತಲಾ 7 ರನ್‌, ಅಬ್ದುಲ್‌ ಸಮದ್‌ 10 ರನ್‌, ಭುವನೇಶ್ವರ್‌ ಕುಮಾರ್‌ 13 ರನ್‌, ಶಹಬಾಜ್‌ ಅಹ್ಮದ್‌ 40 ರನ್‌, ಜಯದೇವ್‌ ಉನಡ್ಕಟ್‌ 8 ರನ್‌ ಗಳಿಸಿದರು.

    ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ್ದ ಆರ್‌ಸಿಬಿ ಪರ ನಾಯಕ ಫಾಫ್‌ ಡು ಪ್ಲೆಸಿಸ್‌ ಹಾಗೂ ವಿರಾಟ್‌ ಕೊಹ್ಲಿ (Virat Kohli) ಸ್ಪೋಟಕ ಆರಂಭ ತಂದುಕೊಟ್ಟಿದ್ದರು. ಮೊದಲ ವಿಕೆಟ್‌ಗೆ ಈ ಜೋಡಿ 3.5 ಓವರ್‌ಗಳಲ್ಲೇ ಬರೋಬ್ಬರಿ 48 ರನ್‌ಗಳ ಜೊತೆಯಾಟ ನೀಡಿತ್ತು. ಡುಪ್ಲೆಸಿಸ್‌ (Faf du Plessis) 12 ಎಸೆತಗಳಲ್ಲಿ 25 ರನ್‌ ಚಚ್ಚಿ ಔಟಾದರು. ಈ ಬೆನ್ನಲ್ಲೇ ವಿಲ್‌ ಜಾಕ್ಸ್‌ ಕೇವಲ 6 ರನ್‌ ಗಳಿಸಿ ಪೆವಿಲಿಯನ್‌ ಸೇರಿಕೊಂಡರು. ನಂತರ ಕ್ರೀಸ್‌ಗೆ ಬಂದ ರಜತ್‌ ಪಾಟೀದಾರ್‌ ಆರೆಂಜ್‌ ಆರ್ಮಿ ಬೌಲರ್‌ಗಳನ್ನು ಹಿಗ್ಗಾಮುಗ್ಗಾ ಬೆಂಡೆತ್ತಿದರು. ಬ್ಯಾಕ್‌ ಟು ಬ್ಯಾಕ್‌ ಸಿಕ್ಸಸ್‌ ಸಿಡಿಸುವ ಮೂಲಕ ಕೇವಲ 20 ಎಸೆತಗಳಲ್ಲೇ ಅರ್ಧಶತಕ ಪೂರೈಸಿದರು. ಇದರೊಂದಿಗೆ ಪವರ್‌ ಪ್ಲೇನಲ್ಲಿ ಸ್ಫೋಟಕ ಇನ್ನಿಂಗ್ಸ್‌ ಕಟ್ಟಿದ್ದ ಕೊಹ್ಲಿ ನಿಧಾಗತಿಯ ಅರ್ಧಶತಕ ಪೂರೈಸಿದರು. ಕೊನೆಯಲ್ಲಿ ಗ್ರೀನ್‌ ಮತ್ತಿತರ ಬ್ಯಾಟರ್‌ಗಳ ಸಂಘಟಿತ ಪ್ರದರ್ಶನದಿಂದ ಆರ್‌ಸಿಬಿ 200 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು.

    ಆರ್‌ಸಿಬಿ ಪರ ರಜತ್‌ ಪಾಟೀದಾರ್‌ 20 ಎಸೆತಗಳಲ್ಲಿ 50 ರನ್‌ (5 ಸಿಕ್ಸರ್‌, 2 ಬೌಂಡರಿ), ವಿರಾಟ್‌ ಕೊಹ್ಲಿ 51 ರನ್‌ (43 ಎಸೆತ, 4 ಬೌಂಡರಿ, 1 ಸಿಕ್ಸರ್‌), ಡುಪ್ಲೆಸಿಸ್‌ 25 ರನ್‌, ಕ್ಯಾಮರೂನ್‌ ಗ್ರೀನ್‌ 37 ರನ್‌, ಮಹಿಪಾಲ್‌ ಲೋಮ್ರೋರ್‌ 7ರನ್‌, ದಿನೇಶ್‌ ಕಾರ್ತಿಕ್‌ 11 ರನ್‌, ಸ್ವಪ್ನಿಲ್ ಸಿಂಗ್‌ 12 ರನ್‌ ಗಳಿಸಿದರು.

  • ಮುಂಬೈ ಪೊಲೀಸರಿಂದ ನಟಿ ತಮನ್ನಾಗೆ ಸಮನ್ಸ್

    ಮುಂಬೈ ಪೊಲೀಸರಿಂದ ನಟಿ ತಮನ್ನಾಗೆ ಸಮನ್ಸ್

    ಕ್ರಮವಾಗಿ ಐಪಿಎಲ್ (IPL) ಪಂದ್ಯವನ್ನು ಪ್ರಸಾರ ಮಾಡಿದ್ದಕ್ಕಾಗಿ ದಕ್ಷಿಣದ ಹೆಸರಾಂತ ತಾರೆ ತಮನ್ನಾ ಭಾಟಿಯಾಗೆ (Tamannaah Bhatia) ಮುಂಬೈ ಸೈಬರ್ ಪೊಲೀಸ್ ಸಮನ್ಸ್ (Summons) ಜಾರಿ ಮಾಡಿದ್ದಾರೆ. ಏಪ್ರಿಲ್ 29ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿದೆ.

    2023ರಲ್ಲಿ ಅಕ್ರಮವಾಗಿ ಐಪಿಎಲ್ ಪಂದ್ಯ ಪ್ರಸಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮನ್ಸ್ ನೀಡಲಾಗಿದ್ದು, ವಯಾಕಾಮ್‌ಗೆ ಕೋಟ್ಯಂತರ ರೂಪಾಯಿಗಳ ನಷ್ಟವನ್ನು ಉಂಟುಮಾಡಿದ ಪ್ರಕರಣ ಇದಾಗಿದೆ. ಈ ಹಿಂದೆ ಇದೇ ಪ್ರಕರಣದಲ್ಲಿ ನಟ ಸಂಜಯ್ ದತ್ ಅವರಿಗೆ ಸಮನ್ಸ್ ನೀಡಲಾಗಿತ್ತು. ವಿದೇಶ ಪ್ರವಾಸ ಹಿನ್ನಲೆ ವಿಚಾರಣೆಯಿಂದ ವಿನಾಯಿತಿ ಕೇಳಿದ್ದರು ಸಂಜಯ್ ದತ್.

     

    ಐಪಿಎಲ್ ಪಂದ್ಯ ಪ್ರಸಾರದ ಹಕ್ಕನ್ನು ಹೊಂದಿರುವ ವಯಾಕಾಮ್, ಈ ನಟ ನಟಿಯರ ವಿರುದ್ಧ ದೂರು ನೀಡಿತ್ತು. ದೂರಿಗೆ ಸಂಬಂಧಿಸಿದಂತೆ ಈ ಹಿಂದೆ ಸಂಜಯ್ ದತ್ ಅವರಿಗೆ, ಈಗ ತಮನ್ನಾಗೆ ನೋಟಿಸ್ ಜಾರಿ ಮಾಡಿದೆ.

  • ಆ ಕಡೆ ಐಪಿಎಲ್, ಈ ಕಡೆ ಸಿನಿಮಾ: ಬ್ಯುಸಿಯಾದ ಪ್ರೀತಿ ಜಿಂಟಾ

    ಆ ಕಡೆ ಐಪಿಎಲ್, ಈ ಕಡೆ ಸಿನಿಮಾ: ಬ್ಯುಸಿಯಾದ ಪ್ರೀತಿ ಜಿಂಟಾ

    ರೋಬ್ಬರಿ ಆರು ವರ್ಷಗಳ ನಂತರ ಪ್ರೀತಿ ಜಿಂಟಾ (Preity Zinta) ಮುಖಕ್ಕೆ ಬಣ್ಣ ಹಚ್ಚಿದ್ದಾರೆ. ಹಲವು ವರ್ಷಗಳಿಂದ ವಿದೇಶದಲ್ಲೇ ಬೀಡು ಬಿಟ್ಟಿರುವ ಪ್ರೀತಿ, ಈಗ ಐಪಿಎಲ್ (IPL) ಪಂದ್ಯಕ್ಕಾಗಿ ಭಾರತಕ್ಕೆ ಬಂದಿದ್ದಾರೆ. ಒಂದು ಕಡೆ ಐಪಿಎಲ್ ನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರೆ, ಮತ್ತೊಂದು ಕಡೆ ಹೊಸ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.

    ಪ್ರೀತಿ ಜಿಂಟಾ ಮದುವೆಯಾಗಿ ವಿದೇಶದಲ್ಲಿ ಸೆಟಲ್ ಆದ ನಂತರ ಸಿನಿಮಾ ರಂಗವನ್ನೇ ಮರೆತಿದ್ದರು. ಇದೀಗ ಸನ್ನಿ ಡಿಯೋಲ್ ಜೊತೆ ಡ್ಯುಯೇಟ್ ಹಾಡೋಕೆ ನಟಿ ಹೊರಟಿದ್ದಾರೆ. ಹಾಗಾಗಿ ಸಹಜವಾಗಿಯೇ ಅವರ ಅಭಿಮಾನಿಗಳಲ್ಲಿ ಹುಮ್ಮಸ್ಸು ಡಬಲ್ ಆಗಿದೆ.

    ‘ಗದರ್ 2’ (Gadar 2) ಮೂಲಕ ಸಕ್ಸಸ್ ಕಂಡಿರುವ ಸನ್ನಿ ಡಿಯೋಲ್ (Sunny Deol) ಜೊತೆ ಪ್ರೀತಿ ಜಿಂಟಾ ಜೊತೆಯಾಗಿ ನಟಿಸುತ್ತಿದ್ದಾರೆ. ಹೊಸ ಸಿನಿಮಾಗೆ ‘ಲಾಹೋರ್ 1947’ ಎಂದು ಟೈಟಲ್ ಇಡಲಾಗಿದೆ. ಚಿತ್ರಕ್ಕೆ ರಾಜ್‌ಕುಮಾರ್ ಸಂತೋಷಿ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರವನ್ನು ಸ್ಟಾರ್ ನಟ ಆಮೀರ್ ಖಾನ್ ನಿರ್ಮಾಣ ಮಾಡುತ್ತಿದ್ದಾರೆ.

     

    ಸನ್ನಿ ಡಿಯೋಲ್ ಜೊತೆ ಪ್ರೀತಿ ಜಿಂಟಾಗೆ ಉತ್ತಮ ಬಾಂಧವ್ಯವಿದೆ. ಈ ಹಿಂದೆ ಇಬ್ಬರೂ ಜೊತೆಯಾಗಿ ಎರಡ್ಮೂರು ಚಿತ್ರಗಳಲ್ಲಿ ಜೋಡಿಯಾಗಿ ನಟಿಸಿದ್ದಾರೆ. ಈಗ ‘ಲಾಹೋರ್ 1947’ (Lahore 1947) ಚಿತ್ರದ ಮೂಲಕ ಮತ್ತೆ ಈ ಜೋಡಿ ಜೊತೆಯಾಗುತ್ತಿದ್ದಾರೆ. ‘ಗದರ್ 2’ ಚಿತ್ರದ ಸಕ್ಸಸ್ ಸನ್ನಿ ಡಿಯೋಲ್ ಕೆರಿಯರ್ ಮರುಜೀವ ನೀಡಿದೆ. ಹಾಗಾಗಿ ಅವರ ಮುಂದಿನ ಚಿತ್ರದ ಬಗ್ಗೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ.

  • ಸಂಪತ್ತಿನ ಮರು ಹಂಚಿಕೆ: ಆರ್‌ಆರ್‌, ಕೆಕೆಆರ್‌ನಿಂದ 4 ಅಂಕ ತೆಗೆದು ಉಳಿದ ತಂಡಗಳಿಗೆ ಹಂಚಿದಂತೆ – ವೆಂಕಟೇಶ್‌ ಪ್ರಸಾದ್‌

    ಸಂಪತ್ತಿನ ಮರು ಹಂಚಿಕೆ: ಆರ್‌ಆರ್‌, ಕೆಕೆಆರ್‌ನಿಂದ 4 ಅಂಕ ತೆಗೆದು ಉಳಿದ ತಂಡಗಳಿಗೆ ಹಂಚಿದಂತೆ – ವೆಂಕಟೇಶ್‌ ಪ್ರಸಾದ್‌

    ಬೆಂಗಳೂರು: ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ (Congress Manifesto) ಘೋಷಣೆ ಮಾಡಿದ ಸಂಪತ್ತಿನ ಮರು ಹಂಚಿಕೆಯನ್ನು (Wealth Redistribution) ಟೀಂ ಇಂಡಿಯಾದ (Team India) ಮಾಜಿ ವೇಗದ ಬೌಲರ್‌ ವೆಂಕಟೇಶ್‌ ಪ್ರಸಾದ್‌ (Venkatesh Prasad) ಐಪಿಎಲ್‌ ಅಂಕಪಟ್ಟಿಗೆ ಹೋಲಿಸಿ ವ್ಯಂಗ್ಯವಾಡಿದ್ದಾರೆ.

    ಶ್ರೀಮಂತರ ಸಂಪತ್ತನ್ನು ಬಡವರಿಗೆ (Poor) ಮರುಹಂಚಿಕೆ ಮಾಡುವುದಾಗಿ ರಾಜಕೀಯ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದೆ. ಬಡವರನ್ನು ನಿಜವಾಗಿಯೂ ಮೇಲಕ್ಕೆ ಎತ್ತಬೇಕು. ಆದರೆ ಈ ಚಿಂತನೆಯ ಪ್ರಕ್ರಿಯೆಯು ತುಂಬಾ ಕರುಣಾಜನಕವಾಗಿದೆ. ನಾವು ರಾಜಸ್ಥಾನ ರಾಯಲ್ಸ್‌ನಿಂದ 4 ಅಂಕ, ಕೋಲ್ಕತ್ತಾ ನೈಟ್‌ ರೈಡರ್ಸ್‌, ಸನ್‌ ರೈಸರ್ಸಸ್‌ ಹೈದಾಬಾದ್‌ನಿಂದ 4 ಅಂಕಗಳನ್ನ ತೆಗೆದು ಕೆಳಗಿನ 3 ತಂಡಗಳಿಗೆ ಮರು-ಹಂಚಿಕೆ ಮಾಡಿದರೆ ಅವರು ಪ್ಲೇ ಆಫ್‌ಗೆ ಬರಬಹುದು ಎಂದು ಟ್ವೀಟ್‌ ಮಾಡಿ ಕಾಲೆಳೆದಿದ್ದಾರೆ.  ಇದನ್ನೂ ಓದಿ: ಲೋಕಸಭೆ ಚುನಾವಣೆಗೂ ಮುನ್ನವೇ ಗೆಲುವಿನ ಖಾತೆ ತೆರೆದ ಬಿಜೆಪಿ!

    ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ಸಂಪತ್ತನ್ನು ನುಸುಳುಕೋರರು ಮತ್ತು ಹೆಚ್ಚು ಮಕ್ಕಳಿರುವವರಿಗೆ ಮರುಹಂಚಿಕೆ ಮಾಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಆರೋಪಿಸಿದ ಒಂದು ದಿನದ ನಂತರ ವೆಂಕಟೇಶ್ ಪ್ರಸಾದ್ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಬಿಜೆಪಿ ಅಧಿಕಾರಕ್ಕೆ ಬಂದ್ರೆ ಎಲ್ಲ ಧರ್ಮದ ತಾಯಂದಿರು ಗಂಡ-ಮಕ್ಕಳನ್ನ ಕಳೆದುಕೊಳ್ತಾರೆ: ಯತೀಂದ್ರ

    ಏಪ್ರಿಲ್ 6 ರಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಚುನಾವಣಾ ಪ್ರಚಾರ ಭಾಷಣದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ, ದೇಶದಲ್ಲಿನ ಜನರ ನಡುವೆ ಸಂಪತ್ತಿನ ಹಂಚಿಕೆಯನ್ನು ಖಚಿತಪಡಿಸಿಕೊಳ್ಳಲು ಹಣಕಾಸು ಮತ್ತು ಸಾಂಸ್ಥಿಕ ಸಮೀಕ್ಷೆಯನ್ನು ನಡೆಸಲಿದೆ ಎಂದು ಹೇಳಿದ ನಂತರ ಪ್ರಧಾನಿಯವರ ಈ ಹೇಳಿಕೆಯು ಹೊರಬಿದ್ದಿದೆ.

     

    ಇತರ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಅಲ್ಪಸಂಖ್ಯಾತರಿಗೆ ಎಷ್ಟು ಜನರು ಸೇರಿದ್ದಾರೆ ಎಂಬುದನ್ನು ನಿರ್ಧರಿಸಲು ನಾವು ಮೊದಲು ರಾಷ್ಟ್ರವ್ಯಾಪಿ ಜಾತಿ ಗಣತಿಯನ್ನು ನಡೆಸುತ್ತೇವೆ. ನಂತರ ನಾವು ಆರ್ಥಿಕ ಮತ್ತು ಸಾಂಸ್ಥಿಕ ಸಮೀಕ್ಷೆಯನ್ನು ನಡೆಸುತ್ತೇವೆ. ಸಂಪತ್ತಿನ ಹಂಚಿಕೆಯನ್ನು ಖಚಿತಪಡಿಸಿಕೊಳ್ಳಲು ಇದೊಂದು ಐತಿಹಾಸಿಕ ಹೆಜ್ಜೆಯಾಗಿದೆ. ಸಮೀಕ್ಷೆಯ ನಂತರ ಜನರಿಗೆ ಸರಿಯಾದ ಪಾಲು ನೀಡುವುದನ್ನು ಕಾಂಗ್ರೆಸ್ ಖಚಿತಪಡಿಸುತ್ತದೆ ಎಂದು ರಾಹುಲ್‌ ಗಾಂಧಿ (Rahul Gandhi) ಹೈದರಾಬಾದ್‌ನಲ್ಲಿ ನಡೆದ ಪಕ್ಷದ ಸಮಾವೇಶದಲ್ಲಿ ತಿಳಿಸಿದ್ದರು.

     

  • ಪಂಜಾಬ್‌ ವಿರುದ್ಧ 3 ವಿಕೆಟ್‌ ಜಯ – 6ನೇ ಸ್ಥಾನಕ್ಕೆ ಜಿಗಿತ ಗುಜರಾತ್‌

    ಪಂಜಾಬ್‌ ವಿರುದ್ಧ 3 ವಿಕೆಟ್‌ ಜಯ – 6ನೇ ಸ್ಥಾನಕ್ಕೆ ಜಿಗಿತ ಗುಜರಾತ್‌

    ಮುಲ್ಲನಪುರ: ಬೌಲಿಂಗ್‌ ಮತ್ತು ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ ಗುಜರಾತ್‌ ಟೈಟಾನ್ಸ್‌ (Gujarat Titans) ಪಂಜಾಬ್‌ ಕಿಂಗ್ಸ್‌(Punjab Kings) ವಿರುದ್ಧ 3 ವಿಕೆಟ್‌ಗಳ ಜಯ ಸಾಧಿಸಿದೆ.

    ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿ ಪಂಜಾಬ್‌ 20 ಓವರ್‌ಗಳಲ್ಲಿ 142 ರನ್‌ಗಳಿಗೆ ಆಲೌಟ್‌ ಆಯ್ತು. ಸುಲಭ ಸವಾಲನ್ನು ಬೆನ್ನಟ್ಟಿದ ಗುಜರಾತ್‌ 19.1 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 146 ರನ್‌ ಹೊಡೆದು ಜಯಗಳಿಸಿತು.

    ಈ ಪಂದ್ಯವನ್ನು ಗೆಲ್ಲುವ ಮೂಲಕ 8ನೇ ಸ್ಥಾನದಲ್ಲಿದ್ದ ಗುಜರಾತ್‌ 6ನೇ ಸ್ಥಾನಕ್ಕೆ ಜಿಗಿದಿದೆ.

    ಗುಜರಾತ್‌ ಪರ ನಾಯಕ ಶುಭಮನ್‌ ಗಿಲ್‌ 35 ರನ್‌ (29 ಎಸೆತ, 5 ಬೌಂಡರಿ), ಸಾಯಿ ಸುದರ್ಶನ್‌ 31 ರನ್‌(34 ಎಸೆತ, 3 ಬೌಂಡರಿ) ಕೊನೆಯಲ್ಲಿ ರಾಹುಲ್‌ ತೆವಾಟಿಯ ಔಟಾಗದೇ 36 ರನ್‌(18 ಎಸೆತ, 7 ಬೌಂಡರಿ) ಹೊಡೆದು ತಂಡಕ್ಕೆ ಜಯ ತಂದುಕೊಟ್ಟರು. ಪಂಜಾಬ್‌ ಪರ ಹರ್ಷಲ್‌ ಪಟೇಲ್‌ 3 ವಿಕೆಟ್‌, ಲಿವಿಂಗ್‌ಸ್ಟೋನ್‌ 2 ವಿಕೆಟ್‌ ಕಿತ್ತರು.

    ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಪಂಜಾಬ್‌ ಉತ್ತಮ ಆರಂಭ ಪಡೆದಿತ್ತು. ಮೊದಲ ವಿಕೆಟಿಗೆ 52 ರನ್‌ ಜೊತೆಯಾಟ ಬಂದಿತ್ತು. ನಂತರ ನಿರಂತರ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿತು. ಇದನ್ನೂ ಓದಿ: IPL 2024: ಹೆಚ್ಚುವರಿ 20 ರನ್‌ ಕೊಟ್ಟಿದ್ದೇ ಆರ್‌ಸಿಬಿಗೆ ಮುಳುವಾಯ್ತಾ? – ಗ್ರೀನ್‌ ಬಾಯ್ಸ್‌ ಎಡವಿದ್ದೆಲ್ಲಿ?

    ಪಂಜಬ್‌ ಪರ ಪ್ರಭ್‌ಸಿಮ್ರಾನ್‌ ಸಿಂಗ್‌ 35 ರನ್‌ ( 21 ಎಸೆತ, 3 ಬೌಂಡರಿ, 3 ಸಿಕ್ಸರ್‌), ಹರ್‌ಪ್ರೀತ್‌ ಬ್ರಾರ್‌ 29 ರನ್‌ (12 ಎಸೆತ, 4 ಬೌಂಡರಿ, 1 ಸಿಕ್ಸರ್‌) ಸಿಡಿಸಿದ ಪರಿಣಾಮ ತಂಡದ ಮೊತ್ತ 140 ರನ್‌ಗಳ ಗಡಿ ದಾಟಿತು. ಗುಜರಾತಿನ ಸಾಯ್‌ ಕಿಶೋರ್‌ 4 ವಿಕೆಟ್‌ ಕಿತ್ತರೆ ನೂರ್‌ ಅಹ್ಮದ್‌ ಮತ್ತು ಮೋಹಿತ್‌ ಶರ್ಮಾ ತಲಾ 2 ವಿಕೆಟ್‌ ಪಡೆದರು.

  • IPL 2024: ಆರ್‌ಸಿಬಿಗೆ ಕೂಡಿ ಬಾರದ ಗ್ರೀನ್ ಜೆರ್ಸಿ – ಗೆಲುವಿಗಿಂತ ಸೋಲೇ ಹೆಚ್ಚು; ಇಂದಿನ ಲಕ್‌ ಹೇಗಿದೆ?

    IPL 2024: ಆರ್‌ಸಿಬಿಗೆ ಕೂಡಿ ಬಾರದ ಗ್ರೀನ್ ಜೆರ್ಸಿ – ಗೆಲುವಿಗಿಂತ ಸೋಲೇ ಹೆಚ್ಚು; ಇಂದಿನ ಲಕ್‌ ಹೇಗಿದೆ?

    ಕೋಲ್ಕತ್ತಾ: ಫಾಫ್ ಡು ಪ್ಲೆಸಿಸ್ (Faf du Plessis) ನಾಯಕತ್ವದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಇಂದು (ಏ.21) ಕೋಲ್ಕತ್ತಾ ನೈಟ್‌ರೈಡರ್ಸ್‌ ವಿರುದ್ಧ ಸೆಣಸಲಿದೆ.

    ಕೋಲ್ಕತ್ತಾದ ಈಡನ್‌ ಗಾರ್ಡನ್‌ (Eden Gardens) ಮೈದಾನದಲ್ಲಿ ಪಂದ್ಯ ನಡೆಯಲಿದ್ದು, ಮಧ್ಯಾಹ್ನ 3:30 ಗಂಟೆಗೆ ಆರಂಭವಾಗಲಿದೆ. ಆರ್​ಸಿಬಿ ಆಟಗಾರರು ತಮ್ಮ ಕೆಂಪು ಮತ್ತು ನೀಲಿ ಮಿಶ್ರಿತ ಜೆರ್ಸಿ ಬದಲಿಗೆ ಹಸಿರು ಜೆರ್ಸಿಯಲ್ಲಿ (Green Jersey) ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ: ಇಂಪ್ಯಾಕ್ಟ್‌ ಪ್ಲೇಯರ್‌ ನಿಯಮಕ್ಕೆ ರೋಹಿತ್‌ ವಿರೋಧ; ಬಿಸಿಸಿಐ ಹೇಳಿದ್ದೇನು? – ಏನಿದು ಇಂಪ್ಯಾಕ್ಟ್‌ ಪ್ಲೇಯರ್‌ ರೂಲ್ಸ್‌?

    2011ರ ಐಪಿಎಲ್​ನಿಂದಲೂ ಪ್ರತಿ ಆವೃತ್ತಿಯ ಒಂದು ಪಂದ್ಯದಲ್ಲಿ ಆರ್‌ಸಿಬಿ ಗ್ರೀನ್ ಜೆರ್ಸಿ (Green Jersey) ತೊಟ್ಟು ಪಂದ್ಯವನ್ನಾಡಲು ಆರಂಭಿಸಿತು. ಅಂದಿನಿಂದ ಆರ್​ಸಿಬಿ ಪ್ರತಿ ವರ್ಷ ಐಪಿಎಲ್‌ನಲ್ಲಿ (IPL 2023) ಒಂದು ಪಂದ್ಯದಲ್ಲಿ ಹಸಿರು ಜೆರ್ಸಿ ತೊಟ್ಟು ಆಡುತ್ತಿದೆ. ನಮ್ಮ ಸುತ್ತಲಿನ ಹಸಿರು ಪರಿಸರವನ್ನು ಸಂರಕ್ಷಿಸುವಂತೆ ಜಾಗೃತಿಗೊಳಿಸುವ ಉದ್ದೇಶವೂ ಇದ್ದಾಗಿದೆ. ಇದನ್ನೂ ಓದಿ: ಟಿ20 ವಿಶ್ವಕಪ್‌: ಐರ್ಲೆಂಡ್‌, ಸ್ಕಾಟ್ಲೆಂಡ್‌ ತಂಡಗಳಿಗೆ ಕರ್ನಾಟಕದ ‘ನಂದಿನಿ’ ಪ್ರಯೋಜಕತ್ವ

    ABD

    ಗೆಲುವಿಗಿಂತ ಸೋಲೇ ಹೆಚ್ಚು:
    2011ರಲ್ಲಿ ಗೆಲುವು ಸಾಧಿಸಿದ್ದ ಆರ್‌ಸಿಬಿ 2012, 2013, 2014ರಲ್ಲಿ ಸೋಲು ಕಂಡಿತು. 2015ರಲ್ಲಿ ಯಾವುದೇ ಫಲಿತಾಂಶವಿಲ್ಲದೇ ಪಂದ್ಯ ರದ್ದಾಯಿತು. 2016ರಲ್ಲಿ ಗೆಲುವು ಸಾಧಿಸಿತ್ತು. ನಂತರ 2017, 2018, 2019, 2020ರಲ್ಲಿ ಸೋತಿತ್ತು. 2021 ನೀಲಿ ಜೆರ್ಸಿ ಧರಿಸಿ ಕಣಕ್ಕಿಳಿದಿದ್ದರೂ ಸೋಲು ಕಂಡಿತ್ತು. 2023ರಲ್ಲಿ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ತವರು ಕ್ರೀಡಾಂಗಣದಲ್ಲೇ ಗೆಲುವು ಸಾಧಿಸಿತ್ತು. 2024ರ ಫಲಿತಾಂಶ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: IPL 2024: ರನ್ ಹೊಳೆ, ದಾಖಲೆಗಳ ಸುರಿಮಳೆ – ಐಪಿಎಲ್‌ನಲ್ಲಿ ಮತ್ತೊಂದು ಐತಿಹಾಸಿಕ ದಾಖಲೆ ಬರೆದ ಸನ್‌ ರೈಸರ್ಸ್‌

    ಪುಟಿದೇಳುತ್ತಾ ಆರ್‌ಸಿಬಿ?
    ಕಳೆದ 7 ಪಂದ್ಯಗಳಲ್ಲಿ ಕೇವಲ ಒಂದೇ ಒಂದು ಪಂದ್ಯದಲ್ಲಿ ಗೆಲುವು ಸಾಧಿಸಿರುವ ಆರ್‌ಸಿಬಿ ಅಂಕಪಟ್ಟಿಯಲ್ಲಿ ಕೊನೇ ಸ್ಥಾನಕ್ಕೆ ಕುಸಿದಿದೆ. ಇದರಿಂದ ಆರ್‌ಸಿಬಿ ಪ್ಲೇ ಆಫ್‌ ಹಾದಿ ಕಠಿಣವಾಗಿದೆ. ಇನ್ನುಳಿದ ಪಂದ್ಯಗಳಲ್ಲಿ ಆರ್‌ಸಿಬಿ ಉತ್ತಮ ರನ್‌ರೇಟ್‌ನೊಂದಿಗೆ ಗೆಲುವು ಸಾಧಿಸಿದರೆ, ಪ್ಲೇ ಆಫ್‌ ಹಾದಿ ತಲುಪುವ ಸಾಧ್ಯತೆಯಿದೆ. ಹಾಗಾಗಿ ಸತತ ಸೋಲಿನಿಂದ ಕಂಗೆಟ್ಟಿರುವ ಆರ್‌ಸಿಬಿ ಇಂದಾದರೂ ಪುಟಿದೇಳುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.

  • ರನ್‌ ಹೊಳೆಯಲ್ಲಿ ತೇಲಾಡಿದ ಸನ್‌ ರೈಸರ್ಸ್‌ – ಒಂದೇ ಇನ್ನಿಂಗ್ಸ್‌ನಲ್ಲಿ 4 ದಾಖಲೆ ಉಡೀಸ್‌!

    ರನ್‌ ಹೊಳೆಯಲ್ಲಿ ತೇಲಾಡಿದ ಸನ್‌ ರೈಸರ್ಸ್‌ – ಒಂದೇ ಇನ್ನಿಂಗ್ಸ್‌ನಲ್ಲಿ 4 ದಾಖಲೆ ಉಡೀಸ್‌!

    ನವದೆಹಲಿ: ಸಿಕ್ಸರ್‌, ಬೌಂಡರಿಗಳ ಭರ್ಜರಿ ಬ್ಯಾಟಿಂಗ್‌ನೊಂದಿಗೆ ಕ್ರಿಕೆಟ್‌ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡುತ್ತಿರುವ ಸನ್‌ ರೈಸರ್ಸ್‌ ಹೈದರಾಬಾದ್‌ (Sunrisers Hyderabad) ತಂಡ ಒಂದೇ ಇನ್ನಿಂಗ್ಸ್‌ನಲ್ಲಿ ನಾಲ್ಕು ದಾಖಲೆಗಳನ್ನ ಉಡೀಸ್‌ ಮಾಡಿದೆ.

    ಶನಿವಾರ ದೆಹಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ್ದ ಹೈದರಾಬಾದ್‌ ತಂಡ ಹಲವು ದಾಖಲೆಗಳನ್ನ ತನ್ನ ಮುಡಿಗೇರಿಸಿಕೊಂಡಿದೆ.

    ಮೊದಲ 6 ಓವರ್‌ಗಳಲ್ಲೇ 125 ರನ್‌ ಸಿಡಿಸುವ ಮೂಲಕ ಪವರ್‌ ಪ್ಲೇನಲ್ಲಿ ಗರಿಷ್ಠ ರನ್‌ ಸಿಡಿಸುವ ಮೂಲಕ ಐತಿಹಾಸಿಕ ದಾಖಲೆ ತನ್ನದಾಗಿಸಿಕೊಂಡಿತು. ಈ ವೇಳೆ ಬರೋಬ್ಬರಿ 13 ಬೌಂಡರಿ 11 ಸಿಕ್ಸರ್‌ಗಗಳನ್ನು ಸಿಡಿಸುವ ಮೂಲಕ ಪವರ್‌ ಪ್ಲೇನಲ್ಲಿ ಅತಿಹೆಚ್ಚು ಸಿಕ್ಸರ್‌ ಸಿಡಿಸಿದ ದಾಖಲೆ ಹಾಗೂ ಮೊದಲ 10 ಓವರ್‌ಗಳಲ್ಲಿ ಗರಿಷ್ಠ ರನ್‌ ಸಿಡಿಸಿದ ಮೊದಲ ತಂಡ ಎಂಬ ದಾಖಲೆಯನ್ನೂ ಬರೆಯಿತು. ಅಲ್ಲದೇ ತನ್ನದೇ ದಾಖಲೆ ಮುರಿದು ಸತತ ಮೂರು ಬಾರಿ ಐಪಿಎಲ್‌ ಇತಿಹಾಸದಲ್ಲಿ ಅತಿ ವೇಗವಾಗಿ 200 ರನ್‌ ಸಿಡಿಸಿದ ಬಲಿಷ್ಠ ತಂಡ ಎಂಬ ಹೆಗ್ಗಳಿಕೆಯನ್ನೂ ಪಡೆದುಕೊಂಡಿತು.

    ಐಪಿಎಲ್‌ನಲ್ಲಿ ವೇಗವಾಗಿ 200 ರನ್‌ ಪೂರೈಸಿದ ಬಲಿಷ್ಠ ತಂಡಗಳು:
    ಆರ್‌ಸಿಬಿ – 14.1 ಓವರ್‌ಗಳಲ್ಲಿ – ಕಿಂಗ್ಸ್‌ ಪಂಜಾಬ್‌ ವಿರುದ್ಧ – 2016
    ಹೈದರಾಬಾದ್‌ – 14.4 ಓವರ್‌ಗಳಲ್ಲಿ – ಮುಂಬೈ ಇಂಡಿಯನ್ಸ್‌ ವಿರುದ್ಧ – 2024
    ಹೈದರಾಬಾದ್‌ – 14.5 ಓವರ್‌ಗಳಲ್ಲಿ – ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ – 2024
    ಹೈದರಾಬಾದ್‌ – 15 ಓವರ್‌ಗಳಲ್ಲಿ – ಆರ್‌ಸಿಬಿ ವಿರುದ್ಧ – 2024

    ಪವರ್‌ ಪ್ಲೇನಲ್ಲಿ ದಾಖಲೆ ರನ್‌ ಸಿಡಿಸಿದ ಟಾಪ್‌-5 ತಂಡಗಳು
    ಸನ್‌ ರೈಸರ್ಸ್‌ ಹೈದರಾಬಾದ್‌ – 125 ರನ್‌- 2024ರಲ್ಲಿ
    ಕೋಲ್ಕತ್ತಾ ನೈಟ್‌ರೈಡರ್ಸ್‌ – 105 – 2017ರಲ್ಲಿ
    ಚೆನ್ನೈ ಸೂಪರ್‌ ಕಿಂಗ್ಸ್‌ – 100 ರನ್‌ – 2014ರಲ್ಲಿ
    ಚೆನ್ನೈ ಸೂಪರ್‌ ಕಿಂಗ್ಸ್‌ – 90 ರನ್‌ – 2015ರಲ್ಲಿ
    ಕೊಚ್ಚಿ ಟಸ್ಕರ್ಸ್‌ ಕೇರಳ – 87 ರನ್‌ – 2011ರಲ್ಲಿ

    ತಂಡವೊಂದರ ಗರಿಷ್ಠ ಸ್ಕೋರರ್‌ನಲ್ಲೂ ಸನ್‌ರೈಸರ್ಸ್‌ ಟಾಪ್‌
    ಸನ್ ರೈಸರ್ಸ್ ಹೈದರಾಬಾದ್ – 287 ರನ್
    ಸನ್‌ ರೈಸರ್ಸ್‌ ಹೈದರಾಬಾದ್‌ – 277 ರನ್‌
    ಕೋಲ್ಕತ್ತಾ ನೈಟ್‌ ರೈಡರ್ಸ್‌ – 272 ರನ್‌
    ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು – 263 ರನ್‌
    ಲಕ್ನೋ ಸೂಪರ್‌ ಜೈಂಟ್ಸ್‌ – 257 ರನ್‌

  • IPL 2024: ರನ್ ಹೊಳೆ, ದಾಖಲೆಗಳ ಸುರಿಮಳೆ – ಐಪಿಎಲ್‌ನಲ್ಲಿ ಮತ್ತೊಂದು ಐತಿಹಾಸಿಕ ದಾಖಲೆ ಬರೆದ ಸನ್‌ ರೈಸರ್ಸ್‌

    IPL 2024: ರನ್ ಹೊಳೆ, ದಾಖಲೆಗಳ ಸುರಿಮಳೆ – ಐಪಿಎಲ್‌ನಲ್ಲಿ ಮತ್ತೊಂದು ಐತಿಹಾಸಿಕ ದಾಖಲೆ ಬರೆದ ಸನ್‌ ರೈಸರ್ಸ್‌

    ನವದೆಹಲಿ: ಪ್ರತಿ ಇನ್ನಿಂಗ್ಸ್‌ನಲ್ಲೂ ಅಭಿಮಾನಿಗಳಿಗೆ ರಸದೌತಣ ನೀಡುತ್ತಿರುವ ಸನ್‌ ರೈಸರ್ಸ್‌ ಹೈದರಾಬಾದ್‌ (Sunrisers Hyderabad )ತಂಡವು ಐಪಿಎಲ್‌ನಲ್ಲಿ (IPL 2024) ಮತ್ತೊಂದು ಐತಿಹಾಸಿಕ ದಾಖಲೆ ಬರೆದಿದೆ.

    ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ವಿರುದ್ಧ ಇಲ್ಲಿನ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಕ್ರೀಸ್‌ಗಿಳಿದ ಹೈದರಾಬಾದ್‌ ತಂಡದ ಬ್ಯಾಟರ್‌ಗಳು ಆರಂಭದಿಂದಲೇ ಅಬ್ಬರಿದರು. ಸಿಕ್ಸರ್‌, ಬೌಂಡರಿ ಸಿಡಿಸುತ್ತಾ ಡೆಲ್ಲಿ ಬೌಲರ್‌ಗಳನ್ನ ಬೆಂಡೆತ್ತಲು ಶುರು ಮಾಡಿದ್ದಾರೆ. ಮೊದಲ 6 ಓವರ್‌ಗಳಲ್ಲೇ 125 ರನ್‌ ಬಾರಿಸುವ ಮೂಲಕ ಐಪಿಎಲ್‌ ಇತಿಹಾಸದಲ್ಲೇ ಪವರ್‌ ಪ್ಲೇನಲ್ಲಿ ಅತಿಹೆಚ್ಚು ರನ್‌ ಸಿಡಿಸಿದ ಮೊದಲ ತಂಡವಾಗಿ ಹೊರಹೊಮ್ಮಿದೆ. ಈ ಹಿಂದೆ 6 ಓವರ್‌ಗಳಲ್ಲಿ 105 ರನ್‌ ಸಿಡಿಸಿದ್ದ ಕೋಲ್ಕತ್ತಾ ನೈಟ್‌ರೈಡರ್ಸ್‌ (KKR) ಅಗ್ರ ಸ್ಥಾನದಲ್ಲಿತ್ತು.

    ಆರಂಭಿಕರಾಗಿ ಕಣಕ್ಕಿಳಿದಿದ್ದ ಟ್ರಾವಿಸ್‌ ಹೆಡ್‌ (Travis Head) ಹಾಗೂ ಅಭಿಷೇಕ್‌ ಶರ್ಮಾ (Abhishek Sharma) ಜೋಡಿ ಜೊತೆಯಾಗಿ ಅಬ್ಬರಿಸಲು ಶುರು ಮಾಡಿದರು. ಮೊದಲ ಓವರ್‌ನಲ್ಲೇ 19 ರನ್‌ ಸಿಡಿಸಿದ್ದ ಈ ಜೋಡಿ 2,3,4,5,6ನೇ ಓವರ್‌ಗಳಲ್ಲಿ ಕ್ರಮವಾಗಿ 21, 22, 21, 20, 22 ರನ್‌ ಚಚ್ಚಿ ಹೊಸ ದಾಖಲೆ ಬರೆಯಿತು. ಈ ವೇಳೆ ಟ್ರಾವಿಸ್‌ ಹೆಡ್‌ ಕೇವಲ 26 ಎಸೆತಗಳಲ್ಲಿ ಭರ್ಜರಿ 84 ರನ್‌ ಗಳಿಸಿದ್ದರೆ, ಅಭಿಷೇಕ್‌ ಶರ್ಮಾ 10 ಎಸೆತಗಳಲ್ಲಿ ಸ್ಫೋಟಕ 40 ರನ್‌ ಚಚ್ಚಿದ್ದರು. ಮೊದಲ 6 ಓವರ್‌ಗಳಲ್ಲಿ ಯಾವುದೇ ವಿಕೆಟ್‌ ನಷ್ಟವಿಲ್ಲದೇ ಈ ಜೋಡಿ 125 ರನ್‌ ಬಾರಿಸುವ ಮೂಲಕ ಮತ್ತೊಂದು ದಾಖಲೆ ತನ್ನ ಹೆಸರಿಗೆ ಸೇರಿಸಿಕೊಂಡಿತು. ಇದರಲ್ಲಿ ಬರೋಬ್ಬರಿ 13 ಬೌಂಡರಿ 11 ಸಿಕ್ಸರ್‌ಗಳು ಸೇರಿದ್ದವು. ನಂತರ ಅಭಿಷೇಕ್‌ ಶರ್ಮಾ 12 ಎಸೆತಗಳಲ್ಲಿ 46 ರನ್‌ ಸಿಡಿಸಿ ಔಟಾದರು.

    ಪವರ್‌ ಪ್ಲೇನಲ್ಲಿ ದಾಖಲೆ ರನ್‌ ಸಿಡಿಸಿದ ಟಾಪ್‌-5 ತಂಡಗಳು
    ಸನ್‌ ರೈಸರ್ಸ್‌ ಹೈದರಾಬಾದ್‌ – 125 ರನ್‌- 2024ರಲ್ಲಿ
    ಕೋಲ್ಕತ್ತಾ ನೈಟ್‌ರೈಡರ್ಸ್‌ – 105 – 2017ರಲ್ಲಿ
    ಚೆನ್ನೈ ಸೂಪರ್‌ ಕಿಂಗ್ಸ್‌ – 100 ರನ್‌ – 2014ರಲ್ಲಿ
    ಚೆನ್ನೈ ಸೂಪರ್‌ ಕಿಂಗ್ಸ್‌ – 90 ರನ್‌ – 2015ರಲ್ಲಿ
    ಕೊಚ್ಚಿ ಟಸ್ಕರ್ಸ್‌ ಕೇರಳ – 87 ರನ್‌ – 2011ರಲ್ಲಿ

    ತಂಡವೊಂದರ ಗರಿಷ್ಠ ಸ್ಕೋರರ್‌ನಲ್ಲೂ ಸನ್‌ರೈಸರ್ಸ್‌ ಟಾಪ್‌
    ಸನ್ ರೈಸರ್ಸ್ ಹೈದರಾಬಾದ್ – 287 ರನ್
    ಸನ್‌ ರೈಸರ್ಸ್‌ ಹೈದರಾಬಾದ್‌ – 277 ರನ್‌
    ಕೋಲ್ಕತ್ತಾ ನೈಟ್‌ ರೈಡರ್ಸ್‌ – 272 ರನ್‌
    ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು – 263 ರನ್‌
    ಲಕ್ನೋ ಸೂಪರ್‌ ಜೈಂಟ್ಸ್‌ – 257 ರನ್‌